Tag: ಪತ್ನಿ

  • ಪ್ರಿಯಕರನ ಜೊತೆ ಸೇರಲು ಮದ್ವೆಯಾಗಿ 11ನೇ ದಿನಕ್ಕೆ ಪತಿಯನ್ನೇ ಕೊಂದ್ಳು!

    ಪ್ರಿಯಕರನ ಜೊತೆ ಸೇರಲು ಮದ್ವೆಯಾಗಿ 11ನೇ ದಿನಕ್ಕೆ ಪತಿಯನ್ನೇ ಕೊಂದ್ಳು!

    ಚಿಕ್ಕಮಗಳೂರು: ಮದುವೆಯಾದ 11ನೇ ದಿನಕ್ಕೆ ಪತ್ನಿಯೇ ಪತಿಗೆ ಮದ್ಯದಲ್ಲಿ ಇಲಿ ಪಾಶಾಣ (ಪೇಸ್ಟ್) ಹಾಕಿ ಗಂಡನನ್ನು ಕೊಲೆ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಹೆಮ್ಮಕ್ಕಿ ಗ್ರಾಮದಲ್ಲಿ ನಡೆದಿದೆ.

    ವಿನುತ ತನ್ನ ಪತಿ ಸುರೇಶ್‍ನನ್ನು ಕೊಲೆ ಮಾಡಿದ ಆರೋಪಿ. ಸುರೇಶ್ ಹಾಗೂ ವಿನುತಗೆ ಮೇ 7ರಂದು ಮದುವೆಯಾಗಿತ್ತು. ಆದರೆ ಮೂರು ದಿನಗಳ ಹಿಂದೆ ವಿನುತ ಪತಿ ಸುರೇಶ್‍ಗೆ ಮದ್ಯದಲ್ಲಿ ಇಲಿ ಪಾಶಾಣ ಹಾಕಿ ಕುಡಿಸಿದ್ದಾಳೆ. ಬಳಿಕ ತೀವ್ರ ಅಸ್ವಸ್ಥರಾಗಿದ್ದ ಸುರೇಶ್‍ನನ್ನ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 3 ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಸುರೇಶ್ ಕಳೆದ ರಾತ್ರಿ ಸಾವನ್ನಪ್ಪಿದ್ದಾನೆ.

    ಕೊಲೆ ಮಾಡಿದ್ದು ಯಾಕೆ?
    ವಿನುತಾಳದ್ದು ಮೊದಲೇ ಪ್ರೇಮ ಪ್ರಸಂಗವಿತ್ತು ಎಂದು ಮೃತ ಸುರೇಶ್ ಸಂಬಂಧಿಕರು ಆರೋಪಿಸಿದ್ದಾರೆ. ಎಂಗೇಜ್‍ಮೆಂಟ್ ಆದ ಮೇಲೂ ವಿನುತ ಆಕೆಯ ಪ್ರಿಯಕರನೊಂದಿಗೆ ಹೋಗಿದ್ದಳು. ಆಕೆಯ ಮನೆಯವರು ಆಕೆಯನ್ನು ವಾಪಸ್ ಕರೆತಂದು ಬಲವಂತವಾಗಿ ಸುರೇಶ್ ಜೊತೆ ಮದುವೆ ಮಾಡಿದ್ದರು ಎಂದು ಸುರೇಶ್ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.

    ಸದ್ಯ ಸುರೇಶ್ ಕುಟುಂಬದವರು ಕಳಸ ಠಾಣೆಯಲ್ಲಿ ವಿನುತ ವಿರುದ್ಧ ದೂರು ನೀಡಿದ್ದಾರೆ. ಇನ್ನೂ ವಿನುತ ಮನೆಯವರು ಕೂಡ ಸುರೇಶ್ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ದೂರಿಗೆ ಪ್ರತಿ ದೂರು ನೀಡಿದ್ದಾರೆ.

  • ಮದ್ವೆಯಾದ 6 ತಿಂಗ್ಳಿಗೇ ಪತಿಯ ಮರ್ಮಾಂಗವನ್ನೇ ಕತ್ತರಿಸಿದ್ಳು!

    ಮದ್ವೆಯಾದ 6 ತಿಂಗ್ಳಿಗೇ ಪತಿಯ ಮರ್ಮಾಂಗವನ್ನೇ ಕತ್ತರಿಸಿದ್ಳು!

    ಗುವಾಹಟಿ: ತನ್ನ ಜೊತೆ ಹೆಚ್ಚು ಸಮಯ ಕಳೆಯದ್ದಕ್ಕೆ ಎರಡನೇ ಪತ್ನಿ ರೊಚ್ಚಿಗೆದ್ದು ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ಅಸ್ಸಾಂನ ದುಬ್ರಿದಲ್ಲಿ ನಡೆದಿದೆ.

    ಮೋಮಿನಾ ಕತೌನ್ ತನ್ನ ಪತಿ ರೆಹಮಾನ್ ಮಾರ್ಮಾಂಗವನ್ನು ಕತ್ತಿರಿಸಿದ ಪತ್ನಿ. ಆರು ತಿಂಗಳ ಹಿಂದೆ ರೆಹಮಾನ್ ಮೋಮಿನಾಳನ್ನು ಮದುವೆಯಾಗಿದ್ದನು. ಮದುವೆ ಆಗಿ ರೆಹಮಾನ್ ಮೋಮಿನಾಳನ್ನು ಬೇರೆ ಮನೆಯಲ್ಲಿ ಇಟ್ಟಿದ್ದನು ಎಂದು ವರದಿಯಾಗಿದೆ.

    ರೆಹಮಾನ್ ತನ್ನ ಮೊದಲ ಪತ್ನಿ ಜೊತೆ ವಾಸಿಸುತ್ತಿದ್ದ. ಅಷ್ಟೇ ಅಲ್ಲದೇ ನನ್ನನ್ನು ನೋಡಲು ಅಪರೂಪಕ್ಕೆ ಬರುತ್ತಿದ್ದ. ಇದರಿಂದ ನನಗೆ ಬೇಸರವಾಗಿತ್ತು. ಅಲ್ಲದೇ ವ್ಯವಸಾಯ ಕೆಲಸ ಕೂಡ ಮಾಡಲು ಹೇಳುತ್ತಿದ್ದ. ನನ್ನನ್ನು ಸರಿಯಾಗಿ ನೋಡಿಕೊಳ್ಳದ್ದಕ್ಕೆ ಈ ಕೃತ್ಯವನ್ನು ಎಸಗಿರುವುದಾಗಿ ಮೋಮಿನಾ ಪೊಲೀಸರ ಬಳಿ ತಿಳಿಸಿದ್ದಾಳೆ.

    ಶುಕ್ರವಾರ ಮೋಮಿನಾ ತನ್ನ ಪತಿ ರೆಹಮಾನ್‍ನನ್ನು ತನ್ನ ಮನೆಯಲ್ಲೇ ರಾತ್ರಿ ಕಳೆಯಲು ಹೇಳಿದ್ದಳು. ಮೋಮಿನಾ ಮಾತನ್ನು ಒಪ್ಪಿದ ರೆಹಮಾನ್ ರಾತ್ರಿ ಆಕೆಯ ಮನೆಯಲ್ಲೇ ಇದ್ದನು. ರೆಹಮಾನ್ ರಾತ್ರಿ ಗಾಢ ನಿದ್ದೆಯಲ್ಲಿದ್ದಾಗ ಮೋಮಿನಾ ಆತನ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ.

    ಈ ಘಟನೆ ನಡೆದ ನಂತರ ಮೋಮಿನ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಳು. ಆದರೆ ರೆಹಮಾನ್ ಕಿರುಚಾಟದ ಧ್ವನಿ ಕೇಳಿ ಅಕ್ಕಪಕ್ಕದ ಮನೆಯವರು ಓಡಿಬಂದು ಆಕೆಯನ್ನು ಹಿಡಿದಿದ್ದಾರೆ. ನಂತರ ಮೋಮಿನಳನ್ನು ನಮಗೆ ಒಪ್ಪಿಸಿದ್ದರು ಎಂದು ಪೊಲೀಸ್ ಅಧಿಕಾರಿ ಅಜಿತ್ ಕುಮಾರ್ ರೈ ಹೇಳಿದ್ದಾರೆ. ಸದ್ಯ ರೆಹಮಾನ್ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

  • ಪತಿಯನ್ನ ಕೊಂದು, ದೇಹವನ್ನು ಕತ್ತರಿಸಿ ಕಾಡಿನಲ್ಲಿ ಎಸೆದ್ಳು!

    ಪತಿಯನ್ನ ಕೊಂದು, ದೇಹವನ್ನು ಕತ್ತರಿಸಿ ಕಾಡಿನಲ್ಲಿ ಎಸೆದ್ಳು!

    ಪಣಜಿ: ಪತಿಯನ್ನು ಕೊಲೆ ಮಾಡಿ ಬಳಿಕ ಸ್ನೇಹಿತರೊಂದಿಗೆ ಸೇರಿ ದೇಹವನ್ನು ಕತ್ತರಿಸಿ ಕಾಡಿನಲ್ಲಿ ಎಸೆದಿದ್ದ ಪತ್ನಿಯನ್ನು ಗೋವಾ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.

    ಬಸುರಾಜ್ ಬಾಸ್ಸೂ (38) ಕೊಲೆಯಾದ ವ್ಯಕ್ತಿ. ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿದ್ದು, ಕಲ್ಪನಾ ಬಾಸ್ಸೂ (31) ಕೊಲೆ ಮಾಡಿ ಪತ್ನಿ.

    ಏನಿದು ಪ್ರಕರಣ: ದಕ್ಷಿಣ ಗೋವಾ ಜಿಲ್ಲೆಯ ಕೊರ್ಕೊರೆಮ್ ನಿವಾಸಿಯಾಗಿದ್ದ ಬಸುರಾಜ್ ರಂಬವರನ್ನ ಕಳೆದ ಮೂರು ತಿಂಗಳ ಹಿಂದೆ ಕೊಲೆ ಮಾಡಲಾಗಿತ್ತು. ಅಲ್ಲದೇ ಅವರ ಮೃತ ದೇಹವನನ್ನು ತುಂಡು ಮಾಡಿ ನಗರದ ಹೊರ ವಲಯದ ಕಾಡಿನಲ್ಲಿ ಎಸೆಯಲಾಗಿತ್ತು. ಮೃತ ದೇಹದ ಭಾಗಗಳು ಪತ್ತೆಯಾದ ಬಳಿಕ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಬಸುರಾಜ್ ಪತ್ನಿಯನ್ನು ಅನುಮಾನದ ಮೇಲೆ ವಿಚಾರಣೆ ನಡೆಸಿದ್ದರು. ಆದ್ರೆ ಮೊದಲು ಕಲ್ಪನಾ ಈ ಕುರಿತು ನಿರಾಕರಿಸಿ ಪೊಲೀಸರ ದಿಕ್ಕು ತಪ್ಪಿಸಿದ್ದಳು.

    ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೇ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೊಲೆಯಲ್ಲಿ ಭಾಗಿಯಾದ ಆರೋಪಿಯ ಪತ್ನಿಯೊಬ್ಬಳು ಕಲ್ಪನಾ ಮೇಲೆಯೇ ಶಂಕೆ ವ್ಯಕ್ತಡಿಸಿದ್ದರು. ಈ ಮಾಹಿತಿ ಬೆನ್ನತ್ತಿದ್ದ ಪೊಲೀಸರು ಕೊಲೆ ಮಾಡಿದ್ದ ಪ್ರಮುಖ ಆರೋಪಿಗಳಾದ ಕಲ್ಪನಾ, ಆಕೆಯ ಪತಿಯ ಗೆಳೆಯರಾದ ಸುರೇಶ್ ಕುಮಾರ್, ಅಬ್ದುಲ್ ಕರೀಮ್ ಶೇಖ್ ಮತ್ತು ಪಂಕಜ್ ಪವಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಇನ್ ಸ್ಪೆಕ್ಟರ್ ರವೀಂದ್ರ ದೇಸಾಯಿ ತಿಳಿಸಿದ್ದಾರೆ.

    ಕಾರಣವೇನು? ಸದ್ಯ ಕೊಲೆಯಾದ ವ್ಯಕ್ತಿಗೆ ಇಬ್ಬರು ಮಕ್ಕಳಿದ್ದು, ಪತಿ ಬಸುರಾಜ್ ನಿತ್ಯ ಅನಗತ್ಯ ಕಾರಣಕ್ಕೆ ನನ್ನ ಜೊತೆಗೆ ಜಗಳವಾಡುತ್ತಿದ್ದ. ಹೀಗಾಗಿ ಮನನೊಂದ ನಾನು ಕೊಲೆ ಮಾಡಿದ್ದಾಗಿ ಕಲ್ಪನಾ ತಿಳಿಸಿದ್ದಾಳೆ.

    ಮೊದಲು ಪತಿಯನ್ನು ಕೊಲೆ ಮಾಡಿದ್ದ ಕಲ್ಪನಾ ಬಳಿಕ ತನ್ನ ಮೂವರು ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾಳೆ. ಈ ವೇಳೆ ನಾಲ್ವರು ಸೇರಿ ಬಸುರಾಜ್ ದೇಹವನ್ನು 3 ತುಂಡು ಮಾಡಿ, ಗೊಣಿ ಚೀಲದಲ್ಲಿ ಹಾಕಿ ಕಾಡಿನಲ್ಲಿ ಬಿಸಾಡಿದ್ದರು. ಸದ್ಯ ಮೃತ ದೇಹ ಎಸೆದ ಸ್ಥಳಕ್ಕೆ ಪೊಲೀಸರು ಆರೋಪಿಗಳನ್ನು ಕರೆ ತಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಇನ್ನು ಹೆಚ್ಚಿನ ಜನರು ಈ ಕೃತ್ಯಕ್ಕೆ ಸಾಥ್ ನೀಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

  • ಪತ್ನಿಯ ಕಿರುಕುಳಕ್ಕೆ ನೊಂದು 24 ಪೇಜ್ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಪತಿ

    ಪತ್ನಿಯ ಕಿರುಕುಳಕ್ಕೆ ನೊಂದು 24 ಪೇಜ್ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಪತಿ

    ಬೆಂಗಳೂರು: ಪತ್ನಿಯ ಕಿರುಕುಳಕ್ಕೆ ನೊಂದು ಪತಿ ಆತ್ಮಹತ್ಯೆ 24 ಪೇಜ್‍ಗಳ ಡೆತ್‍ನೋಟ್ ಬರೆದಿಟ್ಟು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ನಗರದ ಚೋಳೂರು ಪಾಳ್ಯದಲ್ಲಿ ನಡೆದಿದೆ.

    ಮೋಹನ್ (38) ಆತ್ಮಹತ್ಯೆ ಮಾಡಿಕೊಂಡ ಪತಿ. ಮೋಹನ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಎಸ್‍ಪಿ ರವಿ ಡಿ ಚೆನ್ನಣ್ಣವರ ಹೆಸರಿಗೆ 24 ಪುಟ ಡೆತ್‍ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ.

    ಏನಿದು ಘಟನೆ: ಮೋಹನ್ ನಗರದ ಖಾಸಗಿ ಸಂಸ್ಥೆಯಲ್ಲಿ ಲೆಕ್ಕಪರಿಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದು, 11 ವರ್ಷಗಳ ಹಿಂದೆ ಗಂಗಾಲಕ್ಷ್ಮೀ ಎಂಬವರನ್ನು ಮದುವೆಯಾಗಿದ್ದರು. ಆದರೆ ಕಳೆದ ಒಂದು ವರ್ಷದಿಂದ ಮೋಹನ್ ಕಾರ್ಯನಿರ್ವಹಿಸುವ ಸಂಸ್ಥೆ ಮಾಲೀಕರೊಂದಿಗೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಳು.

    ಈ ವಿಚಾರ ತಿಳಿದ ಮೋಹನ್ ಪತ್ನಿಗೆ ಬುದ್ಧಿವಾದವನ್ನು ಹೇಳಿದ್ದರು ಎನ್ನಲಾಗಿದೆ. ಆದರೆ ಮೋಹಾನ್ ಮಾತಿಗೆ ಬೆಲೆ ನೀಡದ ಆಕೆ ತನ್ನ ಕಾರ್ಯವನ್ನು ಮುಂದುವರೆಸಿದ್ದು, ಅಲ್ಲದೇ ಇಬ್ಬರು ಸೇರಿ ಪತಿಗೆ ಕಿರುಕುಳ ನೀಡುತ್ತಿದ್ದರು. ಇದೇ ಕಾರಣಕ್ಕೆ ಹಲವು ಬಾರಿ ಮನೆಯಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು. ಇದ್ದರಿಂದ ಮನನೊಂದ ಮೋಹನ್ ಡೆತ್‍ನೋಟ್ ಬರೆದಿಟ್ಟು ಆತ್ನಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಹಾಗೂ ಸಂಸ್ಥೆಯ ಮಾಲೀಕ ಕಿರುಕುಳ ನೀಡುತ್ತಿರುವ ಬಗ್ಗೆ ವಿಡಿಯೋದಲ್ಲಿ ಹೇಳಿಕೆ ನೀಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

  • ಪ್ರೀತಿಗಾಗಿ ಪತಿಯನ್ನ ಬಿಟ್ಟು ಬಂದ ಪ್ರಿಯತಮೆಯನ್ನು ಮದುವೆಯಾಗಿ 20 ದಿನದಲ್ಲೇ ಕೊಂದ!

    ಪ್ರೀತಿಗಾಗಿ ಪತಿಯನ್ನ ಬಿಟ್ಟು ಬಂದ ಪ್ರಿಯತಮೆಯನ್ನು ಮದುವೆಯಾಗಿ 20 ದಿನದಲ್ಲೇ ಕೊಂದ!

    ಬೆಂಗಳೂರು: ಪತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜೆ.ಸಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿರೆಡ್ಡಿಪಾಳ್ಯದಲ್ಲಿ ನಡೆದಿದೆ.

    ಶಭಾನ ಭಾನು ಪತಿಯಿಂದಲೇ ಕೊಲೆಯಾದ ದುರ್ದೈವಿ. ತಬ್ರೇಜ್ ಪತ್ನಿಯನ್ನು ಕೊಲೆ ಮಾಡಿದ ಆರೋಪಿ. ಕಳೆದ 20 ದಿನಗಳ ಹಿಂದೆ ಶಭಾನ ಹಾಗೂ ತಬ್ರೇಜ್ ಮದುವೆಯಾಗಿತ್ತು. ಆದ್ರೆ ಮದುವೆಯ ಬಳಿಕ ಪತ್ನಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪತಿ ತಬ್ರೇಜ್ ಮದುವೆಗೆ ಹಾಕಿದ್ದ ಮೆಹೆಂದಿ ಮಾಸುವ ಮುನ್ನವೇ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

    ಏನಿದು ಘಟನೆ: ಮೃತ ಶಭಾನ ಹಾಗೂ ತಬ್ರೇಜ್ 2013 ರಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಶಭಾನ ಮನೆಯವರು ಬೇರೊಬ್ಬ ಯುವಕನಿಗೆ ಮದುವೆ ಮಾಡಿದ್ದರು. ಆದರೆ ಪ್ರೀತಿಸಿದ ತಬ್ರೇಜ್ ಗಾಗಿ ಆಕೆ ಒಂದೇ ವಾರದಲ್ಲಿ ಪತಿಯನ್ನು ಬಿಟ್ಟು ಬಂದಿದ್ದಳು. ಬಳಿಕ 4 ವರ್ಷಗಳ ಕಾಲ ಇಬ್ಬರು ಒಂದೇ ಮನೆಯಲ್ಲಿ ಲಿವಿಂಗ್ ರಿಲಿಷೇನ್ ಸಂಬಂಧದಲ್ಲಿದ್ದರು. ಕಳೆದ 20 ದಿನಗಳ ಹಿಂದೆ ಶಭಾನ ತಬ್ರೇಜ್ ಮದುವೆಯಾಗಿದ್ದರು. ಆದರೆ ನಾಲ್ಕು ವರ್ಷದಿಂದ ಒಂದಾಗಿದ್ದ ಇಬ್ಬರ ಸಂಬಂಧ ಮದುವೆಯಾದ 20 ದಿನದಲ್ಲಿ ಮುರಿದು ಬಿದ್ದಿದೆ.

    ಮದುವೆಯ ಬಳಿಕ ಶಬೀನಾ ಆಕ್ರಮ ಸಂಬಂಧ ಆರೋಪ ಮಾಡಿದ್ದ ತಬ್ರೇಜ್ ಜಗಳ ನಡೆಸುತ್ತಿದ್ದ, ಬುಧವಾರ ರಾತ್ರಿಯೂ ಇದೇ ಕಾರಣ ಜಗಳ ಆರಂಭವಾಗಿದೆ ಎನ್ನಲಾಗಿದೆ. ಈ ವೇಳೆ ಪತ್ನಿಯ ಮೇಲೆ ಕೋಪಗೊಂಡ ತಬ್ರೇಜ್ ಚಾಕುವಿನಿಂದ ಶಬೀನಾಗಳನ್ನು ಕೊಲೆ ಮಾಡಿ ಪರಾರಿಯಾಗಿದ್ದ.

    ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರ ಪೊಲೀಸರು ಶಬೀನಾ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಆರೋಪಿ ಪತಿ ತಬ್ರೇಜ್ ನನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ಕುರಿತು ಜೆ ಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಮಟನ್ ಸಾಂಬಾರ್ ಮಾಡು ಎಂದಿದ್ದಕ್ಕೆ ಪತ್ನಿಯಿಂದಲೇ ಪತಿಯ ಕೊಲೆ!

    ಮಟನ್ ಸಾಂಬಾರ್ ಮಾಡು ಎಂದಿದ್ದಕ್ಕೆ ಪತ್ನಿಯಿಂದಲೇ ಪತಿಯ ಕೊಲೆ!

    ಬೆಂಗಳೂರು: ಮಟನ್ ಸಾಂಬಾರ್ ಮಾಡು ಎಂದಿದ್ದಕ್ಕೆ ಪತ್ನಿ ತನ್ನ ಪತಿಯನ್ನೇ ಕೊಲೆ ಮಾಡಿದ ಘಟನೆ ಬೆಂಗಳೂರಿನ ಕುಮಾರ್ ಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಗೋಪಾಲ್ (46) ಕೊಲೆಯಾದ ಪತಿ. ಪತಿ ಗೋಪಾಲ್ ಕಂಠಪೂರ್ತಿ ಕುಡಿದು ಮಟನ್ ಸಾಂಬಾರ್ ಮಾಡುವಂತೆ ಗಲಾಟೆ ಮಾಡುತ್ತಿದ್ದನು. ಇದ್ದರಿಂದ ರೊಚ್ಚಿಗೆದ್ದ ಪತ್ನಿ ರುದ್ರಮ್ಮ ಆತನನ್ನು ಕೊಲೆ ಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ.

    ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ನಿ ರುದ್ರಮ್ಮಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

  • ದುಬೈನಿಂದ ಹಾರಿಬಂದು ಎರಡನೇ ಮದ್ವೆಗೆ ಸ್ಕೆಚ್ – ಮೊದಲ ಪತ್ನಿಗೆ ಮದ್ವೆ ಮನೆಯಲ್ಲಿ ಸಿಕ್ಕಿಬಿದ್ದು ಬೆಪ್ಪಾದ ವರ

    ದುಬೈನಿಂದ ಹಾರಿಬಂದು ಎರಡನೇ ಮದ್ವೆಗೆ ಸ್ಕೆಚ್ – ಮೊದಲ ಪತ್ನಿಗೆ ಮದ್ವೆ ಮನೆಯಲ್ಲಿ ಸಿಕ್ಕಿಬಿದ್ದು ಬೆಪ್ಪಾದ ವರ

    ಮಂಗಳೂರು: ದುಬೈನಲ್ಲಿ ಉದ್ಯೋಗದಲ್ಲಿರುವ ಯುವಕನೊಬ್ಬ ಎರಡನೇ ಬಾರಿಗೆ ಮದುವೆಗೆ ಯತ್ನಿಸಿ, ಸಿಕ್ಕಿಬಿದ್ದ ಘಟನೆ ಘಟನೆ ಮಂಗಳೂರಿನ ಮೂಲ್ಕಿಯ ಬಪ್ಪನಾಡಿನಲ್ಲಿ ನಡೆದಿದೆ.

    ಸುರತ್ಕಲ್ ಮೂಲದ ಗುರುಪ್ರಸಾದ್ ಎಂಬ ಯುವಕ ದುಬೈಯಲ್ಲಿ ನೆಲೆಸಿದ್ದು 10 ವರ್ಷಗಳಿಂದ ಉಡುಪಿಯ ಮಿಶನ್ ಕಂಪೌಂಡ್ ನಿವಾಸಿ ಗೀತಾಂಜಲಿ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದನು. ಕಳೆದ ಜನವರಿಯಲ್ಲಿ ಗೀತಾಂಜಲಿ ಜೊತೆಗೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದ ಗುರುಪ್ರಸಾದ್, ಈ ಮಧ್ಯೆ ಮೂಲ್ಕಿ ಮೂಲದ ಮುಂಬೈ ನಿವಾಸಿ ದಿವ್ಯ ಎಂಬ ಯುವತಿಯೊಂದಿಗೆ ಕಳೆದ 4 ವರ್ಷಗಳಿಂದ ಸಂಬಂಧ ಇರಿಸಿಕೊಂಡಿದ್ದನು.

    ಗುರುಪ್ರಸಾದ್ ಮದುವೆ ಆದ ನಂತರ ಗೀತಾಂಜಲಿಯನ್ನು ದುಬೈಗೆ ಕರೆದುಕೊಂಡು ಹೋಗಿದ್ದನು. ಆದರೆ ಈ ಮಧ್ಯೆ ದಿವ್ಯಾ ಜೊತೆಗೆ ಗುರುಪ್ರಸಾದ್ ನಿರಂತರ ಸಂಪರ್ಕದಲ್ಲಿರುವುದು ಪತ್ನಿ ಗೀತಾಂಜಲಿಗೆ ಗೊತ್ತಾಗಿತ್ತು. ವಿಚಾರಿಸಿದಾಗ ತನ್ನ ಸಂಬಂಧಿ ಎಂದು ಗುರುಪ್ರಸಾದ್ ತಿಳಿಸುತ್ತಿದ್ದನಂತೆ. ಆದರೆ ಗೀತಾಂಜಲಿ ಸಂಶಯ ಬಂದು ಅನೇಕ ಬಾರಿ ಗಂಡ – ಹೆಂಡತಿಯರ ಮಧ್ಯೆ ಜಗಳ ಆಗಿತ್ತು ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಗುರುಪ್ರಸಾದ್ ದುಬೈಯ ಮನೆಯಿಂದ ದಿಢೀರ್ ನಾಪತ್ತೆಯಾಗಿದ್ದನು.

    ಪತ್ನಿ ಗೀತಾಂಜಲಿ ಗಂಡನಿಗೆ ಕರೆ ಮಾಡಿದಾಗ, ಕನ್ನಡದಲ್ಲಿ ಸಂದೇಶ ಬಂದಿದ್ದರಿಂದ ಉಡುಪಿಯ ಗೆಳೆಯರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಊರಿನಲ್ಲಿ ಗುರುಪ್ರಸಾದ್ ಬೇರೊಂದು ಮದುವೆಗೆ ರೆಡಿ ಮಾಡಿಕೊಂಡಿದ್ದನ್ನು ತಿಳಿದು, ಕೂಡಲೇ ಗೀತಾಂಜಲಿ ದುಬೈಯಿಂದ ವಾಪಾಸ್ಸಾಗಿ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೆ ಜಯಕರ್ನಾಟಕ ಸಂಘಟನೆಯವರಿಗೆ ಮಾಹಿತಿ ನೀಡಿದ್ದಾರೆ.

    ಸೋಮವಾರ ಬಪ್ಪನಾಡು ದೇವಸ್ಥಾನದ ಸಭಾಗೃಹದಲ್ಲಿ ಗುರುಪ್ರಸಾದ್ ಮತ್ತು ದಿವ್ಯಾ ಮದುವೆ ನಿಗದಿಯಾಗಿತ್ತು. ಗೀತಾಂಜಲಿ ಸಂಬಂಧಿಕರು ಮತ್ತು ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಸೇರಿ ಸ್ಥಳಕ್ಕಾಗಮಿಸಿ ಜಟಾಪಟಿ ನಡೆಸಿದ್ದಾರೆ. ಮೂಲ್ಕಿ ಪೊಲೀಸರು ಆರೋಪಿ ಗುರುಪ್ರಸಾದ್ ನನ್ನು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಿಸಿ ಉಡುಪಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

  • ತನ್ನ ಪತ್ನಿಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡಿದ ಪತಿ!

    ತನ್ನ ಪತ್ನಿಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡಿದ ಪತಿ!

    ಭುವನೇಶ್ವರ್: ವ್ಯಕ್ತಿಯೊಬ್ಬ ತನ್ನ ಪತ್ನಿಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡಿದ ಘಟನೆ ಒಡಿಶಾದಲ್ಲಿ ನಡೆದಿದೆ.

    ಸೀತಾಕಾಂತ್ ಮೋಹಪಾತ್ರ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಫೋಟೋಗಳನ್ನು ವೈರಲ್ ಮಾಡಿದ ಪತಿ. ಈತ ಭುವನೇಶ್ವರ್ ನ ಕಪಿಲ ಪ್ರಸಾದ್ ನ ನಿವಾಸಿಯಾಗಿದ್ದು, ಈತನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

    ಸೀತಾಕಾಂತ್ 2015ರಲ್ಲಿ ಯುವತಿ ಜೊತೆ ತನ್ನ ಕುಟುಂಬಕ್ಕೆ ತಿಳಿಸದಂತೆ ಗೌಪ್ಯವಾಗಿ ಮದುವೆಯಾಗಿದ್ದನು. ಮದುವೆಯಾದ ನಂತರ ಆತ ಕೆಲಸ ಹುಡುಕಿ ಹೈದರಾಬಾದ್‍ಗೆ ಬಂದಿದ್ದನು. ಹೈದರಾಬಾದ್‍ಗೆ ಹೋಗಿ ಮತ್ತೆ ಆತ ಹಿಂದುರುಗಲಿಲ್ಲ. ಆಗ ಯುವತಿ ಸೀತಾಕಾಂತ್ ಮನೆಗೆ ತೆರಳಿ ಆತನ ಕುಟುಂಬದವರಿಗೆ ತನ್ನ ಮದುವೆಯ ವಿಷಯ ತಿಳಿಸಿದ್ದಳು.

    ವಿಷಯ ಗೊತ್ತಾಗಿ ಸೀತಾಕಾಂತ್ ಕುಟುಂಬದವರು ಯುವತಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನಿಂದಿಸಿದ ವಿಷಯವನ್ನು ಆಕೆ ಸೀತಾಕಾಂತ್‍ಗೆ ತಿಳಿಸಿದಾಗ ಆತ ಕೂಡ ಯುವತಿಯನ್ನು ನಿಂದಿಸಿ, ತನ್ನ ಜೀವನದಿಂದ ಹೊರಟು ಹೋಗು ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ.

    ಈ ಘಟನೆ ನಡೆದು ಸ್ವಲ್ಪ ದಿನಗಳ ನಂತರ ಸೀತಾಕಾಂತ್ ಆಕೆಯ ಜೀವನ ಹಾಳು ಮಾಡಲೆಂದು ಹಾಗೂ ಸಮಾಜದಲ್ಲಿ ಆಕೆಯ ಹೆಸರನ್ನು ಹಾಳು ಮಾಡಲು ತನ್ನ ಪತ್ನಿ ಜೊತೆಗಿನ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

    ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋ ವೈರಲ್ ಆಗಿದ್ದನ್ನು ತಿಳಿದ ಯುವತಿ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ಸೀತಾಕಾಂತ್ ಮೇಲೆ ದೂರನ್ನು ದಾಖಲಿಸಿದ್ದಾಳೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  • ಪೆರೋಲ್ ಮೇಲೆ ಹೊರಬಂದವ 11 ವರ್ಷದ ನಂತ್ರ ಸೆರೆಸಿಕ್ಕ!

    ಪೆರೋಲ್ ಮೇಲೆ ಹೊರಬಂದವ 11 ವರ್ಷದ ನಂತ್ರ ಸೆರೆಸಿಕ್ಕ!

    ಚಿಕ್ಕಮಗಳೂರು: ಪೆರೋಲ್ ಮೇಲೆ ಹೊರಬಂದು 11 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಮರುಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದ ಅಪರಾಧಿಯನ್ನು ಇದೀಗ ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

    2007ರಲ್ಲಿ ಹೆಂಡತಿಯನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಆರೋಪದಡಿ ಶಿವಮೊಗ್ಗ ಸಾಗರ ಮೂಲದ ಅಬ್ದಲ್ ಘನಿ ಪೆರೋಲ್ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದನು. ಆ ನಂತ್ರ ಆತ ಪೆರೋಲ್ ಮೇಲೆ ಹೊರಬಂದಿದ್ದ. ಬಂದವನು ವಾಪಸ್ ಹೋಗದೆ ತನ್ನ ಇತಿಹಾಸವನ್ನೆಲ್ಲಾ ಬದಲಿಸಿಕೊಂಡು, ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬೈಕಿನ ಲೈಸನ್ಸ್ ಎಲ್ಲವನ್ನೂ ಮಾಡಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಿದ್ದನು. ಆದರೆ ಈತ ತನ್ನ ದ್ವಿಚಕ್ರವನ್ನು ಸ್ನೇಹಿತನಿಗೆ ನೀಡಿದ್ದನು.

    ಕುರಿ ಕದ್ದು ಸಿಕ್ಕಿಬಿದ್ದ:
    ಕುರಿ ಕದಿಯುವಾಗ ಸಿಕ್ಕಿಬಿದ್ದ ಅಬ್ದುಲ್ ಘನಿ, ದಕ್ಷಿಣ ಕನ್ನಡದ ಕಡಬ ಠಾಣೆ ಮೆಟ್ಟಿಲೇರಿದ್ದ. ಅಲ್ಲಿನ ಪೊಲೀಸರು ಈತನ ಫಿಂಗರ್ ಪ್ರಿಂಟ್ ಅನ್ನು ಪೊಲೀಸ್ ಇಲಾಖೆಯ ಕ್ರೈಂ ವಿಭಾಗದ ಡಾಟಾಸ್‍ಗೆ ಅಪ್‍ಲೋಡ್ ಮಾಡಿದ್ದಾರೆ. 11 ವರ್ಷದ ಹಿಂದೆ ಇದೇ ಅಬ್ದುಲ್ ಘನಿ ನೀಡಿದ್ದ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿ ಪೂರ್ವಪರ ಕೆದಕಿದಾಗ ಸಿಕ್ಕಿ ಬಿದ್ದಿದ್ದಾನೆ.

    ಜಾಮೀನು ಫೋರ್ಜರಿ:
    ಈತನ ಮೂಲ ಶಿವಮೊಗ್ಗ. ಪೆರೋಲ್ ಮೇಲೆ ಬಂದವನು ತನ್ನ ಜೀವನದ ಸತ್ಯವನ್ನೆಲ್ಲಾ ಬದಲಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಿದ್ದನು. ಆದ್ರೆ ಇದೀಗ ಈತನನ್ನು ಬಂಧಿಸಿದ್ದು ಮಾತ್ರ ಚಿಕ್ಕಮಗಳೂರಿನ ಪೊಲೀಸರು. ಯಾಕಂದ್ರೆ ಈತ 2007ರಲ್ಲಿ ಪೆರೋಲ್ ಮೇಲೆ ಹೊರಬರುವಾಗ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ಹೋಬಳಿಯ ಸೊಲ್ಲಾಪುರ ಗ್ರಾಮ ಪಂಚಾಯತಿಯ ಅಧ್ಯಕ್ಷ ಪೆರೋಲ್ ಗೆ ಜಾಮೀನಾಗಿದ್ದನು. ಆದರೆ ಈತ ಜೈಲಿಗೆ ವಾಪಸ್ ಬರದಾಗ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಜಾಮೀನು ಫೋರ್ಜರಿ ಎಂದು ತಿಳಿದು ಪೊಲೀಸರು ಕೈಚೆಲ್ಲಿದ್ರು. ಆದರೆ ಸದ್ಯ ಅಪರಾಧಿಯ ಫಿಂಗರ್ ಪ್ರಿಂಟ್ ಬರೋಬ್ಬರಿ 11 ವರ್ಷಗಳ ಬಳಿಕ ಈತನನ್ನು ಬಂಧಿಸುವಲ್ಲಿ ಸಹಾಯ ಮಾಡಿದೆ.

  • `ಈ ಸಲ ಕಪ್ ನಮ್ದೆ’ ಎಂದು ಮಗ, ಪತ್ನಿ ಜೊತೆ ಎಬಿಡಿ ಆಟೋ ರೈಡ್!

    `ಈ ಸಲ ಕಪ್ ನಮ್ದೆ’ ಎಂದು ಮಗ, ಪತ್ನಿ ಜೊತೆ ಎಬಿಡಿ ಆಟೋ ರೈಡ್!

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್ ಮೆನ್ ಎಬಿಡಿ ಎಲಿಯರ್ಸ್ ತನ್ನ ಪತ್ನಿ ಡೇನಿಯಲ್ ಹಾಗೂ ಪುತ್ರ ಅಬ್ರಹಾಂನೊಂದಿಗೆ ಈ ಸಲ ಕಪ್ ನಮ್ದೆ ಎಂದು ಹೇಳುತ್ತಾ ಆಟೋರಿಕ್ಷಾ ಏರಿ ಬೆಂಗಳೂರು ಸುತ್ತಿದ್ದಾರೆ.

    ಎಬಿಡಿ ಡೇನಿಯಲ್ ಹಾಗೂ ಅಬ್ರಹಾಂನೊಂದಿಗೆ ಆಟೋ ಹಿಡಿದು ಬೆಂಗಳೂರು ತಿರುಗಿದ್ದಾರೆ. ಈ ವೇಳೆ ಅಭಿಮಾನಿಗಳು ಬೈಕಿನಲ್ಲಿ ಬಂದು ಅವರ ಆಟೋವನ್ನು ಫಾಲೋ ಮಾಡಿದ್ದಾರೆ. ಅಲ್ಲದೇ ಎಬಿಡಿಯಿರುವ ಆಟೋ ಹತ್ತಿರ ಅಭಿಮಾನಿಗಳು ಬಂದು ಈ ಸಲ ಕಪ್ ನಮ್ದೆ ಎಂದು ಜೋರಾಗಿ ಹೇಳುತ್ತಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಅಭಿಮಾನಿಗಳು ಕಿರುಚಾಡುವುದನ್ನು ಕಂಡು ಖುಷಿಯಿಂದ ಎಬಿಡಿ ಕೂಡ ಈ ಸಲ ಕಪ್ ನಮ್ದೆ ಎಂದು ಹೇಳಿದ್ದಾರೆ. ವಿಶೇಷವೆನೆಂದರೆ ಎಬಿಡಿ ಹೇಳಿದ್ದನ್ನು ನೋಡಿ ಅಬ್ರಹಾಂ ಹಾಗೂ ಅವರ ಡೇನಿಯಲ್ ಕೂಡ ಆರ್‌ಸಿಬಿ ಸ್ಲೋಗನ್ ಹೇಳಿದ್ದಾರೆ.

    ಎಬಿಡಿ ಕುಟುಂಬ ಆರ್‌ಸಿಬಿ ಸ್ಲೋಗನ್ ಹೇಳುವುದನ್ನು ಕೇಳಿ ಅಭಿಮಾನಿಗಳು ತುಂಬಾ ಖುಷಿಯಾಗಿ ಅವರ ಆಟೋ ರೈಡಿನಲ್ಲಿ ಸಾಥ್ ನೀಡಿದ್ದರು. ಎಬಿಡಿ ಹಾಗೂ ಕುಟುಂಬ ಈ ಸಲ ಕಪ್ ನಮ್ದೆ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಎಬಿಡಿ ಅವರಿಗೆ ಕನ್ನಡ ಮೇಲಿರುವ ಪ್ರೀತಿ ನೋಡಿ ಎಲ್ಲರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=JBrLFCrIYVc