Tag: ಪತ್ನಿ

  • ಅನೈತಿಕ ಸಂಬಂಧದ ಅನುಮಾನ- ಮರ್ಮಾಂಗ ಹಿಸುಕಿ ಪತ್ನಿಯಿಂದ ಪತಿಯ ಕೊಲೆ!

    ಅನೈತಿಕ ಸಂಬಂಧದ ಅನುಮಾನ- ಮರ್ಮಾಂಗ ಹಿಸುಕಿ ಪತ್ನಿಯಿಂದ ಪತಿಯ ಕೊಲೆ!

    ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧದ ಅನುಮಾನ ವ್ಯಕ್ತಪಡಿಸಿದಕ್ಕೆ ಗಲಾಟೆ ಮಾಡಿದ್ದಕ್ಕೆ ಮರ್ಮಾಂಗ ಹಾಗೂ ಕತ್ತು ಹಿಸುಕಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಘಟನೆ ಗೌರಿಬಿದನೂರು ತಾಲೂಕು ಯರ್ರಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಫೆಬ್ರವರಿ 10 ರಂದು ಗ್ರಾಮದ ಸಂಜೀವಪ್ಪ(35) ಮೂಗಿನಲ್ಲಿ ರಕ್ತ ಕಾರುವುದರ ಮೂಲಕ ಮನೆಯಲ್ಲೇ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ಈ ಬಗ್ಗೆ ತನ್ನ ಪತಿ ಕುಡಿದ ಅಮಲಿನಲ್ಲಿ ಮೃತಪಟ್ಟಿದ್ದಾನೆ ಎಂದು ಗೌರಿಬಿದನೂರು ಗ್ರಾಮಾಂತರ ಪೊಲೀಸರ ಬಳಿ ಪತ್ನಿ ಗಂಗರತ್ನ ಕಟ್ಟುಕಥೆ ಕಟ್ಟಿದ್ದಳು. ಆದರೆ ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದರೂ ಗಂಗರತ್ನ ಸತ್ಯ ಬಾಯ್ಬಿಟ್ಟಿರಲಿಲ್ಲ.

    ಬೆಳಕಿಗೆ ಬಂದಿದ್ದು ಹೇಗೆ?
    ಮೃತ ಸಂಜೀವಪ್ಪನ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮರ್ಮಾಂಗ ಹಿಸುಕಿ ಹಾಗೂ ಕತ್ತು ಹಿಸುಕಿರುವುದರಿಂದ ಉಸಿರುಗಟ್ಟಿ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದರು. ಹೀಗಾಗಿ ಪತ್ನಿ ಗಂಗರತ್ನಳನ್ನ ಮತ್ತೆ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಗಂಗರತ್ನ ಕೊಲೆ ಎಸಗಿರುವುದನ್ನು ಒಪ್ಪಿಕೊಂಡಿದ್ದಾಳೆ.

    ಎರಡನೇ ಗಂಡ-ಎರಡನೇ ಹೆಂಡತಿ: ಮೃತ ಸಂಜೀವಪ್ಪನಿಗೆ ಗಂಗರತ್ನ ಎರಡನೇ ಹೆಂಡತಿಯಾಗಿದ್ದು, ಮೊದಲ ಹೆಂಡತಿ ಬಿಟ್ಟು ಹೋದ ನಂತರ ಗಂಗರತ್ನಳನ್ನ ಸಂಜೀವಪ್ಪ ಮದುವೆಯಾಗಿದ್ದರು. ಇನ್ನೂ ಗಂಗರತ್ನಳಿಗೂ ಸಂಜೀವಪ್ಪ ಎರಡನೇ ಗಂಡ, ಮೊದಲ ಗಂಡನನ್ನ ಬಿಟ್ಟು ಸಂಜೀವಪ್ಪ ನನ್ನ ಕೈ ಹಿಡಿದಿದ್ದಳು.

    ಇವರಿಬ್ಬರ ಸುಖ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಒಂದು ಮಗು ಕೂಡ ಇದೆ. ಆದರೆ ಕೊಲೆ ನಡೆಯವುದಕ್ಕೂ ಮುನ್ನ 3-4 ತಿಂಗಳ ಹಿಂದೆ ಗಂಗರತ್ನ ಸಂಜೀವಪ್ಪನನ್ನ ಬಿಟ್ಟು ಹೋಗಿದ್ದಳು. ಕೊಲೆ ಮಾಡುವ ಮುನ್ನ 15 ದಿನಗಳ ಹಿಂದೆಯಷ್ಟೇ ಮತ್ತೆ ಮನೆಗೆ ಬಂದು ಜೊತೆಯಲ್ಲಿ ಇರುತ್ತೇನೆ ಎಂದು ಜೊತೆಯಾಗಿ ಸಂಸಾರ ನಡೆಸಿದ್ದಳು.

  • ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಪತ್ನಿಯಿಂದಲೇ ಪತಿಯ ಹತ್ಯೆ!

    ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಪತ್ನಿಯಿಂದಲೇ ಪತಿಯ ಹತ್ಯೆ!

    ಹುಬ್ಬಳ್ಳಿ: ಪತಿಯನ್ನು ಹತ್ಯೆ ಮಾಡಿ, ಬಳಿಕ ಅದೊಂದು ಅಸಹಜ ಸಾವು ಎಂದು ಬಿಂಬಿಸಿದ್ದ ಪತ್ನಿಯನ್ನು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಶಿವಯೋಗಿ ಹಳಿಮನಿ ಪತ್ನಿಯಿಂದ ಕೊಲೆಯಾದ ಪತಿ. ಇವರು ವಿದ್ಯಾನಗರದ ಅಶ್ವಿನಿ ಕಾಲೋನಿ ನಿವಾಸಿಗಳಾಗಿದ್ದು, ಮೃತ ಶಿವಯೋಗಿ ಹಳಿಮನಿ ಹಾಗೂ ಆರೋಪಿ ಭಾರತಿ ಹಳಿಮನಿ ಮದುವೆಯಾಗಿ ಕೆಲ ವರ್ಷ ಸುಖವಾಗಿ ಜೀವನ ನಡೆಸುತ್ತಿದ್ದರು. ಆದರೆ ಕೆಲವು ವರ್ಷಗಳಿಂದ ಪತಿರಾಯ ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಇದರಿಂದ ರೋಸಿಹೊದ ಪತ್ನಿ ಭಾರತಿ ಮೇ2 ರಂದು ರಾತ್ರಿ ಗಂಡನನ್ನು ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಹತ್ಯೆ ಮಾಡಿದ್ದಳು.

    ಪೊಲೀಸರ ಮುಂದೆ ಕುಡಿದು ಕಾಟ್ ಮೇಲಿಂದ ಬಿದ್ದು ಸತ್ತಿದ್ದಾನೆ ಅಂತಾ ಸುಳ್ಳು ಕಥೆ ಹೇಳಿ ಕೊಲೆ ಕೇಸಿನಿಂದ ಪಾರಾಗಲು ಪ್ರಯತ್ನ ನಡೆಸಿದ್ದಳು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಅದು ಸಹಜ ಸಾವು ಅಲ್ಲ. ತಲೆ ಮತ್ತು ಮೈಮೇಲೆ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ ಎನ್ನುವ ವರದಿ ಬಂದಿತ್ತು. ಈ ವರದಿಯ ಆಧಾರದಲ್ಲಿ ಪೊಲೀಸರು ಶಂಕಿಸಿ ತಮ್ಮ ಸ್ಟೈಲ್ ನಲ್ಲಿ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಹಂತಕಿ ಭಾರತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಮದ್ವೆಯಾದ್ರೂ ಹಳೆ ಲವರ್ ಜೊತೆ ಟಚ್-ಗೆಳೆಯರಿಗೆ ಪತ್ರ ಬರೆದು ಪ್ರೇಯಸಿಯೊಂದಿಗೆ ಆತ್ಮಹತ್ಯೆ

    ಮದ್ವೆಯಾದ್ರೂ ಹಳೆ ಲವರ್ ಜೊತೆ ಟಚ್-ಗೆಳೆಯರಿಗೆ ಪತ್ರ ಬರೆದು ಪ್ರೇಯಸಿಯೊಂದಿಗೆ ಆತ್ಮಹತ್ಯೆ

    ಬೆಂಗಳೂರು: ಪ್ರೇಮಿಗಳಿಬ್ಬರು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ರಾಮಮೂರ್ತಿ ನಗರ ಮಂಜುನಾಥ ಬಡಾವಣೆಯಲ್ಲಿ ನಡೆದಿದೆ.

    ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ನಾಗೇಶ್ ಹಾಗೂ ಮುಗಳಬೆಲೆ ಗ್ರಾಮದ ಭಾರತಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಮೃತ ನಾಗೇಶ್ ಆಡುಗೊಡಿಯ ಬಾಷ್ ಕಂಪೆನಿಯಲ್ಲಿ ಟೆಕ್ನಿಷಿಯನ್ ಕೆಲಸ ಮಾಡುತ್ತಿದ್ದರು.

    ಏನಿದು ಪ್ರಕರಣ: ನಾಗೇಶ್ ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿ ಭಾರತಿಯನ್ನು ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದರು. ಆದರೆ ಇವರಿಬ್ಬರ ಮದುವೆಗೆ ಸಮ್ಮತಿಸದ ಪೋಷಕರು ಬೇರೊಂದು ಯುವತಿಯೊಂದಿಗೆ ಮದುವೆ ಮಾಡಿದ್ದರು. ಬಳಿಕ ಇಬ್ಬರಿಗೂ ಒಂದು ಮಗುವು ಜನಿಸಿತ್ತು. ಆದರೆ ಮದುವೆ ಮುನ್ನ ಪ್ರೀತಿಸುತ್ತಿದ್ದ ಭಾರತಿಯೊಂದಿಗೆ ನಾಗೇಶ್ ತನ್ನ ಪ್ರೀತಿಯನ್ನು ಮುಂದುವರೆಸಿದ್ದ ಎನ್ನಲಾಗಿದೆ.

    ಆತ್ನಹತ್ಯೆಗೂ ಮುನ್ನ ಪತ್ರ ಬರೆದಿಟ್ಟಿರುವ ನಾಗೇಶ್ ಫೋನ್ ಮೂಲಕ ತನ್ನ ಗೆಳೆಯರಿಗೆ ಪತ್ರವನ್ನು ರವಾನಿಸಿದ್ದಾರೆ. ಪತ್ರದಲ್ಲಿ ತನ್ನ ಪ್ರೇಮಿಯನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಅದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದು, ತನ್ನ ಪತ್ನಿಗೆ ಆಕ್ರಮ ಸಂಬಂಧ ಇದ್ದು, ಮಾವನಿಂದ ಕಿರುಕುಳ ಇತ್ತು ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

    ಸದ್ಯ ಕುರಿತು ಮಾಹಿತಿ ಪಡೆದಿರುವ ಕೆಆರ್ ಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತ್ನಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • 15 ಕೋಟಿ ರೂ. ಪ್ಲಾಟ್‍ಗಾಗಿ ಪತಿಯ ಕೊಲೆಗೆ ಸುಪಾರಿ ನೀಡಿ ಜೈಲು ಪಾಲಾದ ಪತ್ನಿ!

    15 ಕೋಟಿ ರೂ. ಪ್ಲಾಟ್‍ಗಾಗಿ ಪತಿಯ ಕೊಲೆಗೆ ಸುಪಾರಿ ನೀಡಿ ಜೈಲು ಪಾಲಾದ ಪತ್ನಿ!

    ಮುಂಬೈ: 15 ಕೋಟಿ ರೂ. ಪ್ಲಾಟ್ ಮಾರಾಟ ಮಾಡಲು ಪತಿ ನಿರಾಕರಿಸಿದ್ದರಿಂದ ಆತನ್ನನೇ ಕೊಲೆ ಮಾಡಲು ಪತ್ನಿ ಸುಪಾರಿ ನೀಡಿರುವ ಘಟನೆ ಮುಂಬೈನ ಕಲ್ಯಾಣ ನಗರದಲ್ಲಿ ನಡೆದಿದೆ.

    ಅಶಾ ಗಾಯಕ್ವಾಡ್ (40) ಪತಿಯ ಕೊಲೆಗೆ ಸುಪಾರಿ ನೀಡಿದ ಪತ್ನಿ. ಶಂಕರ್ ಗಾಯಕ್ವಾಡ್ (44) ಕೊಲೆಯಾದ ವ್ಯಕ್ತಿಯಾಗಿದ್ದು, ಆರೋಪಿ ಅಶಾ ತನ್ನ ಗಂಡನ ಹೆಸರಿನಲ್ಲಿದ್ದ ಪ್ಲಾಟನ್ನು ಮಾರಾಟ ಮಾಡಲು ನಿರ್ಧರಿಸಿದ್ದಳು. ಆದರೆ ಪತ್ನಿಯ ಆಸೆಗೆ ಶಂಕರ್ ನಿರಾಕರಿಸಿದ್ದರಿಂದ ಪ್ಲಾಟ್ ಮಾರಾಟ ಮಾಡಲೇ ಬೇಕು ಎಂದು ನಿರ್ಧರಿಸಿದ್ದ ಅಶಾ ಪತಿಯನ್ನು ಕೊಲೆ ಮಾಡಲು 30 ಲಕ್ಷ ರೂ. ಗಳಿಗೆ ಸುಪಾರಿ ನೀಡಿ 4 ಲಕ್ಷ ರೂ. ಮುಂಗಡ ಹಣವನ್ನು ಪಾವತಿಸಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಏನಿದು ಪ್ರಕರಣ : ಕಲ್ಯಾಣ ನಗರದ ಶಂಕರ್ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದರು. ಮೇ 18 ರಂದು ಧಾರ್ಮಿಕ ಕ್ಷೇತ್ರಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋದ ಪತಿ ಕಾಣೆಯಾಗಿರುವುದಾಗಿ ಅಶಾ ಹಾಗೂ ಕುಟುಂಬ ಸದಸ್ಯರು ಮೇ 21 ರಂದು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದೂರು ನೀಡಿದ್ದರು.

    ಈ ವೇಳೆ ಶಂಕರ್ ಸಹೋದರ ಅಣ್ಣ ಕಾಣೆಯಾದರೂ, ಅತ್ತಿಗೆ ಅಶಾ ನಡೆಯಲ್ಲಿ ಯಾವುದೇ ದುಃಖ ಕಾಣದೇ ಇರುವ ನಡೆ ಕುರಿತು ಅನುಮಾನಗೊಂಡು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ವೇಳೆ ಪ್ರಕರಣ ಕುರಿತು ಹಿರಿಯ ಅಧಿಕಾರಿಗಳಿಂದ ಒತ್ತಡ ಆರಂಭವಾದ ಬಳಿಕ ತನಿಖೆಯ ವೇಗ ಹೆಚ್ಚಿಸಿದ ಪೊಲೀಸರು ಘಟನೆಗೆ ಕಾರಣವಾದ ಅಶಾ ಹಾಗೂ ಕೊಲೆಗೆ ಸುಪಾರಿ ಪಡೆದಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಕೃತ್ಯಕ್ಕೆ ಸಹಕಾರ ನೀಡಿದ ಇಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

    ಸಿಕ್ಕಿಬಿದ್ದಿದ್ದು ಹೇಗೆ: ಪ್ರಕರಣದ ತನಿಖೆ ವೇಳೆ ಶಂಕರ್ ಸಹೋದರ ನೀಡಿದ ಮಾಹಿತಿ ಬೆನ್ನತ್ತಿದ್ದ ಪೊಲೀಸರಿಗೆ ಆರೋಪಿ ಅಶಾ ತನ್ನ ಸ್ನೇಹಿತರೊಂದಿಗೆ ಹಾಗೂ ಆರೋಪಿಗಳೊಂದಿಗೆ ಮಾತನಾಡಿದ್ದ ಕರೆ ಹಾಗೂ ಸಂದೇಶಗಳ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಶಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಅಶಾ ತನ್ನ ಕೃತ್ಯದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾಳೆ.

    ಕೃತ್ಯ ಎಸಗಿದ್ದು ಹೇಗೆ: ಮೇ 18 ರ ರಾತ್ರಿ ಪತಿಗೆ ಊಟದಲ್ಲಿ ಮತ್ತು ಬರುವ ಔಷಧಿ ನೀಡಿದ್ದ ಅಶಾ, ಕೊಲೆಗೆ ಸುಪಾರಿ ನೀಡಿದ್ದ ದುಬೆ ಎಂಬಾತನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಳು. ಈ ವೇಳೆ ಮನಗೆ ಬಂದ ದುಬೆ ಹಾಗೂ ಆತನ ಇತರೇ ಇಬ್ಬರು ಸಹಚರರು ಶಂಕರ್ ರನ್ನು ಗೋಣಿ ಚೀಲದಲ್ಲಿ ತುಂಬಿ ಆಟೋ ಮೂಲಕ ನಿರ್ಜನ ಪ್ರದೇಶಕ್ಕೆ ಕರೆದ್ಯೊದಿದ್ದರು. ಬಳಿಕ ರಾಡ್ ನಿಂದ ಶಂಕರ್ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಕೊಲೆ ಮಾಡಿ ಮೃತ ದೇಹವನ್ನು ಕಾಲುವೆಗೆ ಎಸೆದು ಹಿಂದಿರುಗಿದ್ದರು. ಸದ್ಯ ಈ ಕುರಿತು ಮಾಹಿತಿ ಪಡೆದಿರುವ ಪೊಲೀಸರು ಮೃತ ದೇಹದ ಭಾಗಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.

    ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಮೃತ ಶಂಕರ್ ಸಹೋದರ, ಘಟನೆಯ ಹಿಂದೆ ಮನೆ ಕೊಳ್ಳಲು ಆಗಮಿಸಿದ್ದ ಬಿಲ್ಡರ್ ಹಾಗೂ ಸ್ಥಳೀಯ ಕೆಲ ರಾಜಕಾರಣಗಳ ಕೈವಾಡ ವಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

  • ಪತ್ನಿಯ ಫೋಟೋದೊಂದಿಗೆ ಮತ್ತೊಬ್ಬ ವ್ಯಕ್ತಿಯ ಫೋಟೋ ಎಡಿಟ್- ವೆಬ್‍ಸೈಟ್‍ನಲ್ಲಿ ಪೋಸ್ಟ್ ಮಾಡಿದ ಪತಿ ಅರೆಸ್ಟ್!

    ಪತ್ನಿಯ ಫೋಟೋದೊಂದಿಗೆ ಮತ್ತೊಬ್ಬ ವ್ಯಕ್ತಿಯ ಫೋಟೋ ಎಡಿಟ್- ವೆಬ್‍ಸೈಟ್‍ನಲ್ಲಿ ಪೋಸ್ಟ್ ಮಾಡಿದ ಪತಿ ಅರೆಸ್ಟ್!

    ಬೆಂಗಳೂರು: ಡೇಟಿಂಗ್ ವೆಬ್‍ಸೈಟ್‍ನಲ್ಲಿ ಪತ್ನಿಯ ಮೊಬೈಲ್ ನಂಬರ್ ಹಾಗೂ ಫೋಟೋಗಳನ್ನು ಪೋಸ್ಟ್ ಮಾಡಿದ ಪತಿಯನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

    ತೀರ್ಥಹಳ್ಳಿ ಮೂಲದ ವಿನಯ್ ಬಂಧಿತ ಆರೋಪಿ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ಹಾಗೂ ಪತ್ನಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ನಕಲಿ ಅಕೌಂಟ್ ಓಪನ್ ಮಾಡಿ ತನ್ನ ಪತ್ನಿಯ ಫೋಟೋ ಜೊತೆಗೆ ಮತ್ತೊಬ್ಬ ವ್ಯಕ್ತಿಯ ಫೋಟೋ ಎಡಿಟ್ ಮಾಡಿ ವೆಬ್‍ಸೈಟ್‍ನಲ್ಲಿ ಹಾಕಿದ್ದನು.

    ಡೇಟಿಂಗ್ ವೆಬ್‍ಸೈಟೊಂದರಲ್ಲಿ ಪತ್ನಿಯ ಫೋಟೋ ಮತ್ತು ನಂಬರ್ ಹಾಕಿದ್ದ. ಇದರಿಂದಾಗಿ ಅಪರಿಚಿತರು ಪತ್ನಿಗೆ ನಿರಂತರವಾಗಿ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪತ್ನಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸುವ ಪೊಲೀಸರು ಸದ್ಯ ಆರೋಪಿ ಪತಿಯನ್ನು ಬಂಧಿಸಿದ್ದಾರೆ.

  • ಪತಿಯ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ನಿರೂಪಕ ಚಂದನ್ ಪತ್ನಿ ಇನ್ನಿಲ್ಲ!

    ಪತಿಯ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ನಿರೂಪಕ ಚಂದನ್ ಪತ್ನಿ ಇನ್ನಿಲ್ಲ!

    ಬೆಂಗಳೂರು: ಪತಿಯ ಸಾವಿನಿಂದ ಮನನೊಂದು ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ನಿರೂಪಕ ಚಂದನ್ ಪತ್ನಿ ಮೀನಾ ಇದೀಗ ಮೃತಪಟ್ಟಿದ್ದಾರೆ.

    ಪತಿ ಚಂದನ್ ಸಾವಿನ ಬಳಿಕ ತೀವ್ರ ನೊಂದಿದ್ದ ಮೀನಾ ತನ್ನ ಮಗನನ್ನು ಕೊಲೆ ಮಾಡಿ ತಾನೂ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೀನಾ ಗುರುವಾರ ರಾತ್ರಿ 10 ಗಂಟೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರುಳೆದಿದ್ದಾರೆ.

    ಖಾಸಗಿ ವಾಹಿನಿ ನಿರೂಪಕ ಚಂದನ್ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಮೀನಾ ಏನಾದ್ರೂ ಮಾಡಿಕೊಳ್ಳಬಹುದೆಂದು ಆಕೆಯ ಅಣ್ಣ ಮತ್ತು ತಂದೆ ಒಂದು ವಾರದಿಂದ ಕಾವಲು ಕಾಯುತ್ತಿದ್ದರು. ಆದರೆ ಗುರುವಾರ ಬೆಳಗ್ಗೆ ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ ಯಾರೂ ಇಲ್ಲದ ವೇಳೆ ಮೀನಾ ತನ್ನ 13 ವರ್ಷದ ಮಗ ತುಷಾರ್ ನ ಕತ್ತು ಕೊಯ್ದು ಕೊಲೆ ಮಾಡಿದ್ದರು. ಬಳಿಕ ತಾನೂ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆಯಲ್ಲಿ ಚಂದನ್ ಮಗ ತುಷಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಆದ್ರೆ ಮೀನಾ ಅವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿತ್ತು. ಇದನ್ನೂ ಓದಿ: ನಿರೂಪಕ ಚಂದನ್ ಸಾವಿನ ಬಳಿಕ ಮಗನ ಕತ್ತು ಕೊಯ್ದು, ಆ್ಯಸಿಡ್ ಕುಡಿದ ಪತ್ನಿ

    ಮೃತ ಚಂದನ್ ಚಿಕ್ಕಪ್ಪ ವಿಜಯ್ ಕುಮಾರ್ ಗುರುವಾರ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀನಾ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಬೆಳಗ್ಗೆ 11 ಗಂಟೆ ವೇಳೆಗೆ ನಮಗೆ ಮಾಹಿತಿ ಗೊತ್ತಾಯಿತು. ಮೀನಾಗೆ ಮೊದಲು ಕೊಲಂಬೊಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕರೆದುಕೊಂಡು ಹೋಗಿ ನಂತರ ಅಲ್ಲಿಂದ ವಿಕ್ಟೋರಿಯಾಗೆ ಕರೆದುಕೊಂಡು ಹೋಗಲಾಯಿತು. ವಿಕ್ಟೋರಿಯಾ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲಿ ಮನೆಯಲ್ಲಿ ಏನ್ ಆಗಿತ್ತು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಪಕ್ಕದ ಮನೆಯವರು ಆಸ್ಪತ್ರೆಗೆ ಸೇರಿಸಿದ್ದರು. ಈಗ ಮೀನಾ ಆರೋಗ್ಯದಲ್ಲಿ ಚೇತರಿಕೆ ಕಾಣುತಿತ್ತು. ಪುತ್ರ ತುಷಾರ್ ಮರಣೋತ್ತರ ಪರೀಕ್ಷೆ ಆಗಿದ್ದು, ಶುಕ್ರವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಿದ್ದರು. ಸದ್ಯ ಮೀನಾ ಕೂಡ ಚಿಕಿತ್ಸೆ ಫಲಕಾರಿ ಆಗದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ನಿರೂಪಕ ಚಂದನ್ ಪುತ್ರ!

    ತುಷಾರ್ ಸಾವಿನ ಬಳಿಕ ಆತನ ಕಣ್ಣನ್ನು ಕುಟುಂಬದವರು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.

  • ಕೌಟುಂಬಿಕ ಕಲಹ – ಪತ್ನಿ ಸೇರಿ ಮೂವರಿಗೆ ಚಾಕು ಇರಿದು ತಾನು ಆತ್ಮಹತ್ಯೆಗೆ ಯತ್ನಿಸಿದ!

    ಕೌಟುಂಬಿಕ ಕಲಹ – ಪತ್ನಿ ಸೇರಿ ಮೂವರಿಗೆ ಚಾಕು ಇರಿದು ತಾನು ಆತ್ಮಹತ್ಯೆಗೆ ಯತ್ನಿಸಿದ!

    ಹಾವೇರಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಪತ್ನಿ ಸೇರಿ ಇಬ್ಬರಿಗೆ ಚಾಕು ಮತ್ತು ತಲ್ವಾರ್ ನಿಂದ ಇರಿದು, ತಾನು ಚಾಕು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸಾವಿಕೇರಿ ಗ್ರಾಮದಲ್ಲಿ ನಡೆದಿದೆ.

    ಪತ್ನಿ ಗುತ್ತೆಮ್ಮ (21), ಅಜ್ಜಿ ಗೌರಮ್ಮ (60), ಹೊನ್ನಮ್ಮ (23) ಚಾಕು ಇರಿತಕ್ಕೆ ಒಳಗಾಗಿದವರು. ಪತ್ನಿ ಸೇರಿ ಕುಟುಂಬ ಸದಸ್ಯರಿಗೆ ಆರೋಪಿ ಅರುಣ್ ಚಾಕು ಹಾಕಿದ್ದಾನೆ. ಸದ್ಯ ಚಾಕು ಇರಿತಕ್ಕೆ ಒಳಗಾದವರಲ್ಲಿ ಪತ್ನಿ ಹಾಗೂ ಅಜ್ಜಿ ಗೌರಮ್ಮ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಆರೋಪಿ ಕುಟುಂಬ ಸದಸ್ಯರಿಗೆ ಚಾಕು ಇರಿದ ಬಳಿಕ ತಾನು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಆರೋಪಿ ಅರುಣ್‍ನನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಅರುಣ್ ಕಳೆದ ಒಂದು ವರ್ಷದ ಹಿಂದೆ ಗುತ್ತೆಮ್ಮಳನ್ನ ಪ್ರೀತಿಸಿ ಮದುವೆಯಾಗಿದ್ದ. ಸ್ಥಳಕ್ಕೆ ಹಾನಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಪತ್ನಿಯನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಪರಾರಿಯಾದ!

    ಪತ್ನಿಯನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಪರಾರಿಯಾದ!

    ಬೆಂಗಳೂರು: ಮಕ್ಕಳಾಗಿಲ್ಲವೆಂದು ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನ್ನೇರುಘಟ್ಟದ ಹುಲ್ಲಹಳ್ಳಿಯಲ್ಲಿ ನಡೆದಿದೆ.

    ಅನುಸುಜ(24) ಪತಿಯಿಂದಲೇ ಕೊಲೆಯಾದ ದುರ್ದೈವಿ. ಆರೋಪಿ ಸಾಬು ಪತ್ನಿಯನ್ನೇ ಕೊಂದು ಪರಾರಿಯಾಗಿದ್ದಾನೆ. ಇನ್ನು ಪತಿ-ಪತ್ನಿ ಇಬ್ಬರು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಸಣ್ಣಬಡಗಾರನಹಳ್ಳಿಯವರಾಗಿದ್ದು, ಹುಲ್ಲಹಳ್ಳಿಯ ಹಾಲೊಬ್ಲಾಕ್ ಇಟಿಯಿಗೆ ತಯಾರಿಕಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು.

    ಅನುಸುಜಾ ಹಾಗೂ ಸಾಬು ಮದುವೆಯಾಗಿ 4 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಈ ವಿಷಯವಾಗಿ ಹಲವು ಬಾರಿ ದಂಪತಿ ನಡುವೆ ಜಗಳ ನಡೆದಿತ್ತು. 15 ದಿನಗಳ ಹಿಂದೆ ಮೃತ ಅನುಸುಜ ತನ್ನ ತಾಯಿಯನ್ನು ಹುಲ್ಲಾಹಳ್ಳಿಗೆ ಕರೆಸಿಕೊಂಡಿದ್ದಳು. ಆದರೆ ಮತ್ತೆ ಬುಧವಾರ ರಾತ್ರಿ ಇದೆ ವಿಷಯವಾಗಿ ಜಗಳವಾಡಿದ್ದ ಪತಿ ಸಾಬು ಕುಡಿದ ಅಮಲಿನಲ್ಲಿ ಪತ್ನಿ ಮೇಲೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

    ಘಟನೆ ನಡೆದ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ವರದಕ್ಷಿಣೆ ಕಿರುಕುಳ, ಅಕ್ರಮ ಸಂಬಂಧದ ಆರೋಪಿಸಿ ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ!

    ವರದಕ್ಷಿಣೆ ಕಿರುಕುಳ, ಅಕ್ರಮ ಸಂಬಂಧದ ಆರೋಪಿಸಿ ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ!

    ಮೈಸೂರು: ದುಷ್ಟ ಪತಿಯೊಬ್ಬ ಪತ್ನಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕರಡಿಮೊಳೆಯಲ್ಲಿ ನಡೆದಿದೆ.

    ಮಹಾದೇವಿ(22) ಸಾವು ಬದುಕಿನ ನಡುವೆ ಹೋರಾಡುತ್ತಿರುವ ಮಹಿಳೆ. ವರದಕ್ಷಿಣೆ ತರುವಂತೆ ಕಿರುಕುಳ ನೀಡಿ, ಅಕ್ರಮ ಸಂಬಂಧದ ಆರೋಪ ಮಾಡುತ್ತಿದ್ದ ಈಕೆಯ ಪತಿ ನಾಗೇಶ್ ಈಕೆಯ ಕೊಲೆಗೆ ಯತ್ನಿಸಿದ್ದಾನೆ.

    ನಂಜನಗೂಡು ತಾಲೂಕು ಕರಳಪುರ ಗ್ರಾಮದ ನಿವಾಸಿಯಾಗಿದ್ದ ಮಹದೇವಿ, 4 ವರ್ಷದ ಹಿಂದಷ್ಟೇ ಚಾಮರಾಜನಗರದ ನಾಗೇಶ್ ಜೊತೆಗೆ ಮದುವೆ ಆಗಿದ್ದರು. ಪತಿಯ ಜೊತೆ ಗಲಾಟೆಯಿಂದ ಬೇಸತ್ತು 2 ವರ್ಷದಿಂದ ಮಹಾದೇವಿ ತನ್ನ ತಾಯಿ ಮನೆಯಲ್ಲಿ ವಾಸವಿದ್ದರು.

    ಇತ್ತೀಚೆಗೆ ಹಿರಿಯ ಸಮ್ಮುಖದಲ್ಲಿ ಸಂಧಾನ ನಡೆದು 20 ದಿನದಿಂದಷ್ಟೇ ಗಂಡನ ಮನೆಗೆ ಮಹಾದೇವಿ ಹೋಗಿದ್ದರು. ಮೊನ್ನೆ ರಾತ್ರಿ ಗಂಡನೇ ಸೀಮೆಎಣ್ಣೆ ಸುರಿದು ಈಕೆಯ ಕೊಲೆಗೆ ಯತ್ನಿಸಿದ್ದಾನೆ. ಈ ಬಗ್ಗೆ ಮಹದೇವಿ ಸಂತೆಮರಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

  • ಪತ್ನಿಯನ್ನು ಚುಡಾಯಿಸಿದ್ದಕ್ಕೆ ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪತಿ!

    ಪತ್ನಿಯನ್ನು ಚುಡಾಯಿಸಿದ್ದಕ್ಕೆ ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪತಿ!

    ಮೈಸೂರು: ಪತ್ನಿಯನ್ನು ಚುಡಾಯಿಸಿದ ಕಾಮುಕನಿಗೆ ಪತಿ ಧರ್ಮದೇಟು ನೀಡಿದ ಘಟನೆ ಮೈಸೂರು ಮಹಾನಗರ ಪಾಲಿಕೆ ಬಳಿ ನಡೆದಿದೆ.

    ಸ್ವಾಮಿ, ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪತಿ. ಸ್ವಾಮಿ ಅವರ ಪತ್ನಿ ಚಾಮುಂಡಿ ಬೆಟ್ಟದ ಪಾದದ ಬಳಿಕ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಪಾದದ ಬಳಿ ಇದ್ದ ಕಾಮುಕ ಪ್ರತಿದಿನ ಸ್ವಾಮಿ ಪತ್ನಿಯನ್ನು ಚುಡಾಯಿಸುತ್ತಿದ್ದನು.

    ದಿನನಿತ್ಯ ಮಹಿಳೆಯನ್ನು ಚುಡಾಯಿಸುತ್ತಿದ್ದ ಕಾಮುಕ ಇಂದು ಆಕೆಯ ಪತಿಯ ಕೈಗೆ ಸಿಕ್ಕಿ ಬಿದಿದ್ದಾನೆ. ಆಗ ಸ್ವಾಮಿ ಕಾಮುಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಸಾರ್ವಜನಿಕರ ಮಧ್ಯ ಪ್ರವೇಶದಿಂದ ಕಾಮುಕ ಬಚಾವ್ ಆಗಿದ್ದಾನೆ.