Tag: ಪತ್ನಿ

  • ಗಂಡನ ಶವ ರಸ್ತೆಯಲ್ಲಿ ಬಿದ್ರೂ, ಪ್ರಿಯಕರನ ಜೊತೆ ರಾತ್ರಿ ಕಾಲ ಕಳೆದ್ಳು!

    ಗಂಡನ ಶವ ರಸ್ತೆಯಲ್ಲಿ ಬಿದ್ರೂ, ಪ್ರಿಯಕರನ ಜೊತೆ ರಾತ್ರಿ ಕಾಲ ಕಳೆದ್ಳು!

    ಕಲಬುರಗಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನು ಕೊಲೆ ಮಾಡಿ ಬಳಿಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ನಾಟಕವಾಡಿದ್ದ ಆರೋಪಿ ಪತ್ನಿಯನ್ನು ಕಲಬುರಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ವಿನೋದ್ ಪತ್ನಿಯಿಂದಲೇ ಕೊಲೆಯಾದ ವ್ಯಕ್ತಿ. ಶಾಂತಾಬಾಯಿ (35) ಹಾಗೂ ಪ್ರೀಯಕರ ಹೀರಾಸಿಂಗ್ (38) ಬಂಧಿತ ಆರೋಪಿಗಳು. ಕೆಲ ವರ್ಷಗಳ ಹಿಂದೆ ಮನೆಯವರ ಒಪ್ಪಿಗೆಯಂತೆ ವಿನೋದ್ ಹಾಗೂ ಶಾಂತಾಬಾಯಿಗೆ ವಿವಾಹವಾಗಿತ್ತು. ಆದರೆ ಶಾಂತಾಬಾಯಿ ಮದುವೆ ಬಳಿಕ ಹೀರಾಸಿಂಗ್ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಇದಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ.

    ಏನಿದು ಪ್ರಕರಣ: ಮೃತ ವಿನೋದ್ ಹಾಗೂ ಹೀರಾಸಿಂಗ್ ಸಂಬಂಧಿಗಳಾಗಿದ್ದು, ಪ್ರತಿನಿತ್ಯ ಇಬ್ಬರು ಮನೆಯಲ್ಲೇ ಕುಡಿಯುತ್ತಿದ್ದರು. ಈ ವೇಳೆ ಶಾಂತಾಬಾಯಿಯೊಂದಿಗೆ ಹೀರಾಸಿಂಗ್ ಆಕ್ರಮ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ಆದರೆ ಕೆಲ ದಿನಗಳ ಹಿಂದೆ ಇಬ್ಬರ ಆಕ್ರಮ ಸಂಬಂಧ ವಿನೋದ್ ಗೆ ತಿಳಿದು ಪತ್ನಿಗೆ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ.

    ಮೇ 25 ರಂದು ವಿನೋದ್ ಹಾಗೂ ಹೀರಾಸಿಂಗ್ ಕಂಠಪೂರ್ತಿ ಕುಡಿದಿದ್ದರು. ಈ ವೇಳೆ ಇಬ್ಬರ ನಡುವೆ ಅನೈತಿಕ ಸಂಬಂಧದ ಕುರಿತು ಗಲಾಟೆ ಆರಂಭವಾಗಿದೆ. ಗಲಾಟೆ ತಾರಕಕ್ಕೇರಿದ್ದು, ವಿನೋದ್ ತಲೆಯನ್ನು ಕಲ್ಲಿನಿಂದ ಜಜ್ಜಿ ಹೀರಾಸಿಂಗ್ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಬೈಕ್ ಸಮೇತ ರಸ್ತೆಯ ಮಧ್ಯೆ ಎಸೆದಿದ್ದಾನೆ.

    ಶಾಂತಾಬಾಯಿ ಮನೆಗೆ ತೆರಳಿ ಪತಿಯನ್ನು ಕೊಲೆ ಮಾಡಿರುವ ವಿಚಾರ ತಿಳಿಸಿದ್ದಾನೆ. ಆದರೆ ಪತಿ ಕೊಲೆ ಬಗ್ಗೆ ತಿಳಿದ್ರೂ ಕೂಡ ಇಬ್ಬರು ಮನೆಯಲ್ಲೇ ರಾತ್ರಿ ಕಾಲ ಕಳೆದಿದ್ದಾರೆ. ಮರುದಿನ ಬೆಳಗ್ಗೆ ವಿನೋದ್ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಶಾಂತಾಬಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಳು.

    ಅಪಘಾತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸಿದ್ದರು. ಈ ವೇಳೆ ಶಾಂತಾಬಾಯಿ ಹಾಗೂ ವಿನೋದ್ ನಡುವೆ ಇದ್ದ ಅನೈತಿಕ ಸಂಬಂಧದ ಮಾಹಿತಿ ತಿಳಿದು ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ. ಪರಿಣಾಮ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ.

    ಸದ್ಯ ಇಬ್ಬರನ್ನು ಬಂದಿಸಿರುವ ಆಳಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಿದ್ದಾರೆ.

  • ನನ್ನ ಪತಿಗೆ ಬೆರಳು ತೋರಿಸಿ ಮಾತಾಡ್ತೀಯಾ.. ಹುಷಾರ್- ವೈದ್ಯರಿಗೆ ಜಿ.ಪಂ. ಸದಸ್ಯೆ ಅವಾಜ್

    ನನ್ನ ಪತಿಗೆ ಬೆರಳು ತೋರಿಸಿ ಮಾತಾಡ್ತೀಯಾ.. ಹುಷಾರ್- ವೈದ್ಯರಿಗೆ ಜಿ.ಪಂ. ಸದಸ್ಯೆ ಅವಾಜ್

    ದಾವಣಗೆರೆ: ಸರ್ಕಾರಿ ವೈದ್ಯಾಧಿಕಾರಿ ಮೇಲೆ ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಆಕೆಯ ಗಂಡ ದರ್ಪ ತೋರಿಸಿದ್ದು, ಅದಕ್ಕೆ ಬಿಜೆಪಿಯ ಶಾಸಕರು ಸಾಥ್ ನೀಡಿದ ಘಟನೆ ಜಿಲ್ಲೆಯ ಜಗಳೂರು ತಾಲಲೂಕಿನ ಆಸ್ಪತ್ರೆಯಲ್ಲಿ ನಡೆದಿದೆ.

    ಆಸ್ಪತ್ರೆಯ ಪರಿಶೀಲನೆಗೆ ಜಿಲ್ಲಾ ಪಂಚಾಯತ್ ಸದಸ್ಯೆ ಶಾಂತಕುಮಾರಿ ಹಾಗೂ ಶಾಸಕ ಎಸ್.ವಿ ರಾಮಚಂದ್ರಪ್ಪ ಹಾಗೂ ಬೆಂಬಲಿಗರು ಬಂದಿದ್ದರು. ಆದರೆ ಈ ಸಮಯದಲ್ಲಿ ಶಾಂತಕುಮಾರಿ ಪತಿ ಶಶಿಧರ್, ಡಾಕ್ಟರ್ ಗೆ ಮಾಹಿತಿ ಹಾಗೂ ದ್ವೇಷದಿಂದ ಆಡಳಿತ ನಡೆಸುತ್ತಿದ್ದೀರಿ ಎಂದು ಹೆಂಡತಿಯ ಅಧಿಕಾರವನ್ನು ಬಳಸಿಕೊಂಡು ಅವಾಜ್ ಹಾಕಿದ್ದಾರೆ. ಆಗ ವೈದ್ಯಾಧಿಕಾರಿ ಮುರುಳೀಧರ್ ಅವರು ಶಶಿಧರ್ ಗೆ ಬೆರಳು ತೋರಿಸಿ ಮಾತಾಡಿದ್ದಾರೆ.

    ಈ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯೆ, ನನ್ನ ಪತಿಗೆ ಬೆರಳು ತೋರಿಸಿ ಮಾತಾಡುತ್ತೀಯಾ ಹುಷಾರ್ ಅಂತ ಆವಾಜ್ ಹಾಕಿದ್ದಾರೆ. ಆಗ ಪಕ್ಕದಲ್ಲೇ ಇದ್ದ ಶಾಸಕ ಎಸ್.ವಿ ರಾಮಚಂದ್ರಪ್ಪ ಕೂಡ ಶಾಂತಕುಮಾರಿಗೆ ಸಾಥ್ ಕೊಟ್ಟು ಆವಾಜ್ ಹಾಕಿದ್ದಾರೆ. ಪತ್ನಿ ಅಧಿಕಾರವನ್ನ ಪತಿ ಶಶಿಧರ್ ಚಲಾಯಿಸಿ ಅಧಿಕಾರಿಗಳಿಗೆ ಕಿರುಕುಳ, ಅವಾಜ್ ಹಾಕಿದ್ರೂ ಶಾಸಕರು ಮಾತ್ರ ಮೌನವಹಿಸಿದ್ದಾರೆ.

    ದೊಣ್ಣೆಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸದಸ್ಯನ ಗಂಡ ಶಶಿಧರ್ ಕಾಟ ಕೊಡುತ್ತಲೇ ಬರುತ್ತಿದ್ದರೂ ಅಧಿಕಾರಿಗಳ ಬೆಂಬಲಕ್ಕೆ ಬಾರದ ಶಾಸಕರು, ಈಗ ಸದಸ್ಯೆಯ ಪತಿಯ ಬೆಂಬಲಕ್ಕೆ ಬಂದು ಅವಾಜ್ ಹಾಕಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

    ಆಸ್ಪತ್ರೆಯಲ್ಲಿ ಏನೇ ಲೋಪದೋಷ ಅಕ್ರಮ ಇದ್ದರೂ ಶಾಸಕರು ಜಿಲ್ಲಾ ಪಂಚಾಯಿತಿ ಸದಸ್ಯೆ ಕೇಳಬೇಕಿತ್ತು. ಕಳೆದ ಒಂದು ವರ್ಷದ ಕೆಳಗೆ ಮಾಜಿ ಕಾಂಗ್ರೆಸ್ ಶಾಸಕನ ಆಪ್ತರೊಬ್ಬರು ಇದೇ ರೀತಿ ಅಧಿಕಾರಿಗಳಿಗೆ ಕಿರುಕುಳ ಕೊಟ್ಟಿದ್ದರು. ಈಗ ಜಿಲ್ಲಾಪಂಚಾಯಿತಿ ಸದಸ್ಯೆಯ ಪತ್ನಿ ಅವಾಜ್ ಹಾಕಿದ್ದಾರೆ. ಗ್ರಾಮೀಣ ಭಾಗಕ್ಕೆ ವೈದ್ಯರು ಬರುವುದೇ ಕಷ್ಟ, ಅಂತದರಲ್ಲಿ ಬಂದಂತಹ ವೈದ್ಯರಿಗೆ ಜನಪ್ರತಿನಿಧಿಗಳೇ ಅವಾಜ್ ಹಾಕಿದರೇ ಅವರಿಗೆ ರಕ್ಷಣೆ ಕೊಡೋರು ಯಾರು ಎನ್ನುವ ಪ್ರಶ್ನೆ ಅಲ್ಲಿನ ಜನರನ್ನು ಕಾಡುತ್ತಿದೆ.

  • ಪತ್ನಿಯನ್ನು ಭೇಟಿ ಮಾಡಲು ಪೊಲೀಸರ ವಾಹನವನ್ನು ಕದ್ದ!

    ಪತ್ನಿಯನ್ನು ಭೇಟಿ ಮಾಡಲು ಪೊಲೀಸರ ವಾಹನವನ್ನು ಕದ್ದ!

    ಹೈದರಾಬಾದ್: ಪತ್ನಿಯನ್ನು ಭೇಟಿಯಾಗಲು ಪತಿಯೊಬ್ಬ ಪೊಲೀಸರ ವಾಹವನ್ನು ಕದ್ದು ಅಲ್ಲಿಂದ ಪರಾರಿಯಾದ ಘಟನೆ ಸೋಮವಾರ ಆಂಧ್ರ ಪ್ರದೇಶದ ಸೂರ್ಯಪೇಟ್ ಜಿಲ್ಲೆಯಲ್ಲಿ ನಡೆದಿದೆ.

    ತಿರುಪತಿ ಲಿಂಗರಾಜು(30) ಪೊಲೀಸರ ವಾಹನವನ್ನು ಕದ್ದ ಪತಿ. ಲಿಂಗರಾಜು ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದು, ಪತ್ನಿ ತಕ್ಷಣ ಭೇಟಿಯಾಗುವಂತೆ ಲಿಂಗರಾಜುಗೆ ತಿಳಿಸಿದ್ದಳು. ಆಗ ಲಿಂಗರಾಜು ಪೊಲೀಸರ ವಾಹನವನ್ನು ಕದ್ದು ಪತ್ನಿಯನ್ನು ಭೇಟಿ ಮಾಡಲು ಹೋಗಿದ್ದಾನೆ.

    ಲಿಂಗರಾಜು ನಮ್ಮ ಗಮನ ಬೇರೆಡೆ ಸೆಳೆಯುವ ಹಾಗೇ ಮಾಡಿ ನಮ್ಮ ವಾಹನವನ್ನು ಕದ್ದು ತನ್ನ ಪತ್ನಿಯನ್ನು ಭೇಟಿ ಮಾಡಲು ಪರಾರಿಯಾಗಿದ್ದ. ನಂತರ ಆತನನ್ನು ನಾವು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಲಿಂಗರಾಜು ಕಾರನ್ನು ಕದ್ದು ಪರಾರಿಯಾಗುತ್ತಿದ್ದಂತೆ ನಾವು ಪಕ್ಕದ ಜಿಲ್ಲೆಗೆ ಕರೆ ಮಾಡಿ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದೇವು. ನಂತರ ಸಿಸಿಟಿವಿ ಕ್ಯಾಮೆರಾ ಸಹಾಯದಿಂದ ಕಮ್ಮಮ್‍ವರೆಗೂ ಆತನನ್ನು ಫಾಲೋ ಮಾಡಿ ಹಿಡಿದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಲಿಂಗರಾಜು ವಿಜಯ್‍ವಾಡದತ್ತ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದನು. ಆಗ ಕೃಷ್ಣ ಜಿಲ್ಲೆಯ ಚೆಕ್ ಪೋಸ್ಟ್ ಬಳಿ ಸೋಮವಾರ ರಾತ್ರಿ ನಾವು ಆತನನ್ನು ಬಂಧಿಸಿದ್ದೇವೆ. ನಂತರ ನಾವು ವಿಚಾರಿಸಿದ್ದಾಗ ಜಗನ್ನಾಥ್‍ಪುರಂ ಗ್ರಾಮದಲ್ಲಿರುವ ತನ್ನ ಪತ್ನಿಯನ್ನು ಭೇಟಿಯಾಗಲು ಈ ವಾಹನವನ್ನು ಕದ್ದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

    ಲಿಂಗರಾಜು ತನ್ನ ನಾಲ್ಕು ಸ್ನೇಹಿತರ ಜೊತೆ ಪೊಲೀಸರ ವಾಹನದಲ್ಲಿ ಪ್ರಯಾಣಿಸುತ್ತಿದ್ದನು. ಸದ್ಯ ಐವರು ಆರೋಪಿಗಳನ್ನು ಸೂರ್ಯಪೇಟ್‍ಗೆ ವಾಪಸ್ ಕರೆತಂದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಎಸ್‍ಪಿ ಪ್ರಕಾಶ್ ಜಾದವ್ ತಿಳಿಸಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 379(ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಫೇಸ್‍ಬುಕ್ ವಿಚಾರದಲ್ಲಿ ಪತಿ, ಪತ್ನಿ ನಡುವೆ ಜಗಳ- ಪ್ರತ್ಯೇಕ ಕೋಣೆಗೆ ಹೋಗಿ ಇಬ್ಬರು ಆತ್ಮಹತ್ಯೆಗೆ ಶರಣು!

    ಫೇಸ್‍ಬುಕ್ ವಿಚಾರದಲ್ಲಿ ಪತಿ, ಪತ್ನಿ ನಡುವೆ ಜಗಳ- ಪ್ರತ್ಯೇಕ ಕೋಣೆಗೆ ಹೋಗಿ ಇಬ್ಬರು ಆತ್ಮಹತ್ಯೆಗೆ ಶರಣು!

    ಬೆಂಗಳೂರು: ಫೇಸ್‍ಬುಕ್ ವಿಚಾರದಲ್ಲಿ ಪತಿ-ಪತ್ನಿ ನಡುವೆ ನಡೆದ ಕಲಹ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಸೌಮ್ಯ(23), ಅನೂಪ್(34) ಆತ್ಮಹತ್ಯೆ ಗೆ ಶರಣಾದ ದಂಪತಿ. ದಂಪತಿಗಳಿಬ್ಬರು ಹಾಸನ ಮೂಲದವರಾಗಿದ್ದು, ಕಳೆದ ಕೆಲ ವರ್ಷಗಳಿಂದ ಎಂಟನೇ ಮೈಲಿಯಲ್ಲಿ ವಾಸವಾಗಿದ್ದರು.

    ಅನೂಪ್ ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮೂರು ವರ್ಷಗಳ ಹಿಂದೆ ಸೌಮ್ಯಾ ಅವರನ್ನು ಮದುವೆ ಆಗಿದ್ದರು. ಅನೂಪ್ ಹಾಗೂ ಸೌಮ್ಯ ದಂಪತಿಗೆ 2 ವರ್ಷದ ಗಂಡು ಮಗುವಿದ್ದು, ಆ ಮಗು ಸೌಮ್ಯ ತವರು ಮನೆಯಲ್ಲಿ ಬೆಳೆಯುತ್ತಿತ್ತು.

    ನಡೆದಿದ್ದೇನು?
    ಅನೂಪ್ ಮನೆಯಲ್ಲಿದ್ದ ವೇಳೆ ಮೊಬೈಲಿನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ವ್ಯಾಟ್ಸಪ್ ಹಾಗೂ ಫೇಸ್‍ಬುಕ್‍ನಲ್ಲಿ ತನ್ನ ಸ್ನೇಹಿತರ ಜೊತೆ ಚಾಟಿಂಗ್ ಮಾಡುತ್ತಾ ಹೆಚ್ಚು ಸಮಯ ವ್ಯರ್ಥ ಮಾಡುತ್ತಿದ್ದರು. ಸೋಮವಾರ ಬೆಳಗ್ಗೆ ಕೂಡ ಅನೂಪ್ ಯುವತಿಯ ಜೊತೆ ಚಾಟಿಂಗ್ ನಡೆಸುತ್ತಿದ್ದರು. ಅದನ್ನು ನೋಡಿದ ಸೌಮ್ಯ ತನ್ನ ಪತಿಯನ್ನು ಪ್ರಶ್ನಿಸಿದ್ದಾರೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ನಂತರ ಸೌಮ್ಯ ಅಳುತ್ತಲೇ ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದನ್ನು ನೋಡಿದ ಅನೂಪ್ ಮತ್ತೊಂದು ರೂಮಿಗೆ ಹೋಗಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸಹೋದರನಿಗೆ ಕರೆ ಮಾಡಿದ ಸೌಮ್ಯ:
    ಜಗಳ ನಡೆದ ಕೂಡಲೇ ಸೌಮ್ಯ ಸೋಮವಾರಪೇಟೆಯಲ್ಲಿರುವ ತನ್ನ ಸಹೋದರನಿಗೆ ಬೆಳಗ್ಗೆ ಸುಮಾರು 10 ಗಂಟೆಗೆ ಕರೆ ಮಾಡಿದ್ದರು. ಸಹೋದರನಿಗೆ ಕರೆ ಮಾಡಿ, “ಬೆಂಗ್ಳೂರಿಗೆ ಬಂದು ನನ್ನನ್ನು ಕರೆದುಕೊಂಡು ಹೋಗು, ಇಲ್ಲದಿದ್ದರೆ ನಾನು ಸಾಯುತ್ತೇನೆ” ಎಂದು ತಿಳಿಸಿದ್ದರು. ಸೌಮ್ಯ ಮಾತು ಕೇಳಿ ಗಾಬರಿಗೊಂಡ ಸಹೋದರ ಬೆಂಗಳೂರಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕರೆ ಮಾಡಿ ಮನೆಯ ಬಳಿ ಹೋಗುವಂತೆ ತಿಳಿಸಿದ್ದರು.

    ಸಹೋದರನ ಮಾತು ಕೇಳಿ ಸಂಬಂಧಿಕರು ಸುಮಾರು 12 ಗಂಟೆಗೆ ಸೌಮ್ಯಳ ಮನೆಗೆ ಬಂದಿದ್ದಾರೆ. ಆದರೆ ಅಲ್ಲಿ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ನಂತರ ಮಧ್ಯಾಹ್ನ ಸುಮಾರು 2 ಗಂಟೆಗೆ ಸಹೋದರ ಸೌಮ್ಯಳ ಮನೆಗೆ ಬಂದು ಕಿಟಕಿ ಬಳಿ ಹೋಗಿ ನೋಡಿದಾಗ ಅನೂಪ್ ಹಾಗೂ ಸೌಮ್ಯ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದಿದೆ. ನಂತರ ಅವರು ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದರು.

    ಅನೂಪ್ 5 ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಮೊದಲು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಅನೂಪ್, ಮೂರು ವರ್ಷಗಳ ಹಿಂದೆ ಅಹಾರ ತಯಾರಿಕಾ ಕಾರ್ಖಾನೆಗೆ ಸೇರಿದ್ದರು. ಅನೂಪ್ ಹಾಗೂ ಸೌಮ್ಯ ಮದುವೆ ಆದಾಗಿನಿಂದಲೂ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅಲ್ಲದೇ ಇಬ್ಬರ ಆತ್ಮಹತ್ಯೆಗೆ ಫೇಸ್‍ಬುಕ್ ಅಲ್ಲದೇ ಹಲವು ಕಾರಣಗಳಿವೆ. ಅದು ತನಿಖೆ ಮೂಲಕ ಗೊತ್ತಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗಂಡ ಬೇಕು, ಗಂಡ ಬೇಕು ಅಂತ ಪತಿ ಮನೆ ಮುಂದೆ ಪತ್ನಿ ಧರಣಿ!

    ಗಂಡ ಬೇಕು, ಗಂಡ ಬೇಕು ಅಂತ ಪತಿ ಮನೆ ಮುಂದೆ ಪತ್ನಿ ಧರಣಿ!

    ಕೋಲಾರ: ಗಂಡ ಬೇಕು ಗಂಡ ಅಂತ ಗಂಡನ ಮನೆ ಎದುರು ಹೆಂಡತಿ ಎರಡು ದಿನಗಳಿಂದ ಧರಣಿ ನಡೆಸುತ್ತಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಜಿಲ್ಲೆಯ ಮಾಲೂರು ತಾಲೂಕು ಭಂಟಹಳ್ಳಿ ಗ್ರಾಮದಲ್ಲಿ ಶಶಿ ಕುಮಾರ್ ಹಾಗೂ ಪ್ರತಿಮಾ ಇಬ್ಬರು ಪ್ರೀತಿಸಿ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದರು. ಪ್ರತಿಮಾ ಗಂಡನಿಗಾಗಿ ತನ್ನ ಪತಿ ಶಶಿಕುಮಾರ್ ಮನೆ ಎದುರು ಶನಿವಾರ ಸಂಜೆಯಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಬೇಕೇ ಬೇಕು ಗಂಡ ಬೇಕೆಂದು ಪ್ರತಿಭಟನೆ ಕುಳಿತ ಪತ್ನಿ

    ನಾಲ್ಕು ತಿಂಗಳ ಹಿಂದೆ ಶಶಿಕುಮಾರ್ ಹಾಗೂ ಪ್ರತಿಮಾಗೆ ಪೊಲೀಸರ ಸಮಕ್ಷಮದಲ್ಲಿ ಮದುವೆಯಾಗಿತ್ತು. ಮದುವೆಯಾದ ನಂತರ ನಾಪತ್ತೆಯಾಗಿರುವ ಶಶಿಕುಮಾರ್ ಗಾಗಿ ಹೆಂಡತಿ ಪ್ರತಿಮಾ ಪ್ರತಿಭಟನೆ ನಡೆಸುತ್ತಿದ್ದಾರೆ. ತನ್ನ ಪತಿಯನ್ನು ಹುಡುಕಿಕೊಡುವಂತೆ ಪತಿ ಮನೆ ಮುಂದೆ ಪತ್ನಿ ಧರಣಿ ಆರಂಭಸುತ್ತಿದ್ದಂತೆ ಶಶಿಕುಮಾರ್ ತಂದೆ-ತಾಯಿ ಕೂಡಾ ಮನೆಗೆ ಬೀಗ ಜಡಿದು ಗ್ರಾಮದಿಂದ ನಾಪತ್ತೆಯಾಗಿದ್ದಾರೆ. ಇದನ್ನು ಓದಿ: ಪತಿ ಬೇಕೆಂದು ಮನೆಯ ಮುಂದೆ ಧರಣಿ ಕುಳಿತ ಪತ್ನಿ!

    ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಅನೈತಿಕ ಸಂಬಂಧದ ಶಂಕೆಗೆ ಮಹಿಳೆ ಬಲಿ!

    ಅನೈತಿಕ ಸಂಬಂಧದ ಶಂಕೆಗೆ ಮಹಿಳೆ ಬಲಿ!

    ಕಲಬುರಗಿ: ಅನೈತಿಕ ಸಂಬಂಧ ಶಂಕೆ ವ್ಯಕ್ತವಾಗಿದ್ದರಿಂದ ಬೆಂಕಿಗೆ ಬಲಿಯಾಗಿದ್ದ ಮಹಿಳೆಯೊಬ್ಬರು ಇಂದು ಜಿಲ್ಲಾಸ್ಪತ್ರೆಯಲ್ಲಿ ಮೃತಟ್ಟಿದ್ದಾರೆ.

    ಜಿಲ್ಲೆಯ ಆಳಂದ ತಾಲೂಕಿನ ಕೊಡಲಹಂಗರಗಾ ಗ್ರಾಮದ ಶಾರದಾಬಾಯಿ (20) ಮೇಲೆ ಅನೈತಿಕ ಸಂಬಂಧದ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಪತಿ ವೀರಣ್ಣ ಪೋಷಕರ ಜೊತೆ ಸೇರಿ ಪತ್ನಿ ಶಾರದಾಬಾಯಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದನು. ಘಟನೆ ನಂತರ ಶಾರದಾಬಾಯಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ವೀರಣ್ಣ ಪರಾರಿಯಾಗಿದ್ದನು. ಇದನ್ನು ಓದಿ: ಅನೈತಿಕ ಸಂಬಂಧ ಶಂಕೆ: ಪೋಷಕರೊಂದಿಗೆ ಸೇರಿ ಪತ್ನಿಗೆ ಬೆಂಕಿ ಇಟ್ಟ ಪತಿ!

    ಶಾರದಾಬಾಯಿಯ ದೇಹವು 80% ರಷ್ಟು ಸುಟ್ಟ ಗಾಯಗಳಾಗಿತ್ತು. ಹೀಗಾಗಿ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದ ಶಾರದಾಬಾಯಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

    ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಪತಿ ವೀರಣ್ಣನನ್ನು ಬಂಧಿಸಿದ್ದಾರೆ. ಇನ್ನು ಪ್ರಕರಣದ ಆರೋಪಿಗಳಾದ ಅತ್ತೆ ನೀಲಮ್ಮಾ, ಮಾವ ಗುಂಡಪ್ಪನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

  • ಪತಿಯನ್ನೇ ಕೊಲೆಗೈದು ಆಕ್ಸಿಡೆಂಟ್ ಎಂದು ಬಿಂಬಿಸಿದ್ದ ಪತ್ನಿ, ಸಹಚರರು ಅರೆಸ್ಟ್!

    ಪತಿಯನ್ನೇ ಕೊಲೆಗೈದು ಆಕ್ಸಿಡೆಂಟ್ ಎಂದು ಬಿಂಬಿಸಿದ್ದ ಪತ್ನಿ, ಸಹಚರರು ಅರೆಸ್ಟ್!

    ಬೆಳಗಾವಿ: ಜೂನ್ 1ರಂದು ವ್ಯಕ್ತಿಯೊಬ್ಬರು ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಹೊರವಲಯದಲ್ಲಿ ನಡೆದಿತ್ತು.

    ಆದರೆ ಈಗ ಅದು ಕೇವಲ ಆಕ್ಸಿಡೆಂಟ್ ಅಲ್ಲ ಬದಲಾಗಿ ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ ಎಂದು ಗ್ರಾಮಸ್ಥರ ಶಂಕಿಸಿದ್ದಾರೆ. ಗ್ರಾಮಸ್ಥರ ಶಂಕೆಯನ್ನು ಬೆನ್ನು ಬಿದ್ದ ಪೊಲೀಸರು ಗುರುವಾರ ತಡರಾತ್ರಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಜೂನ್ 1ರಂದು ಉಮಾರಾಣಿ ಹೊರವಲಯದ ರಾಜ್ಯ ಹೆದ್ದಾರಿ 18ರಲ್ಲಿ ನಿವೃತ್ತ ಸೈನಿಕ ಪ್ರಕಾಶ್ ಶಂಕರ್ ಈಟಿಗೆ ಅಪಘಾತವಾಗಿತ್ತು. ಅಪಘಾತವಾಗಿದೆ ನಮಗೆ ನ್ಯಾಯ ಕೊಡಿಸಿ ಎಂದು ಮೃತನ ಪತ್ನಿ ಶ್ರೀದೇವಿ ಈಟಿ ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆಗೆ ದೂರನ್ನು ಸಹ ನೀಡಿದ್ದಳು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆಕ್ಸಿಡೆಂಟ್ ಮಾಡಿದ ವಾಹನಕ್ಕಾಗಿ ಹುಡುಕಾಟ ನಡೆಸಿದ್ದರು.

                                  ಸಂತೋಷ್

    ಈ ವೇಳೆ ಸ್ಥಳೀಯರು ನೀಡಿದ ಮಾಹಿತಿ ಅನ್ವಯಿಸಿ ತನಿಖೆಯ ದಿಕ್ಕು ಬದಲಿಸಿದ ಪೊಲೀಸರು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತೋಷ್ ಕಮತೆ, ಮಹೇಶ್ ಮತ್ತು ಬರಮು ಸೇರಿದಂತೆ ಮೃತ ಪ್ರಕಾಶ್ ಪತ್ನಿ ಶ್ರೀದೇವಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ.

                                                           ಬರಮು

    ಸಂತೋಷ್ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಪ್ರಕಾಶ್ ಪತ್ನಿ ಶ್ರೀದೇವಿಯೇ ಈ ಕೊಲೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದ್ದು, ಕೊಲೆಗೆ ತಾನೇ ಸುಪಾರಿ ಕೊಟ್ಟು ಆಕ್ಸಿಡೆಂಟ್ ನಾಟಕವಾಡಿದ್ದು ಬಯಲಾಗಿದೆ. ಅಲ್ಲದೆ ಕೊಲೆ ನಡೆದ ದಿನ ಪ್ರಕಾಶ್ ಅವರನ್ನ ಕ್ರೂಸರ್ ವಾಹನವೊಂದು ಪದೇ ಪದೇ ಹಿಂಬಾಲಿಸುತ್ತಿದ್ದ ದೃಶ್ಯ ಸ್ಥಳೀಯ ಪೆಟ್ರೋಲ್ ಬಂಕ್‍ವೊಂದರ ಸಿಸಿಟಿವಿಗಳಲ್ಲಿ ರೆಕಾರ್ಡ್ ಆಗಿದೆ.

    ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಎಂಬ ಕಾರಣಕ್ಕೆ ಕಟ್ಟಿಕೊಂಡ ಪತಿಯನ್ನೇ ಕೊಲೆ ಮಾಡಿಸಿದ ಶ್ರೀದೇವಿ ಮತ್ತು ಆತಳ ಸಹಚರರು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಆದರೆ ಸುಂದರ ಭವಿಷ್ಯದ ಕನಸು ಕಂಡಿದ್ದ ದಂಪತಿಗಳಿಗಿದ್ದ ಒಂದೇ ಒಂದು ಹೆಣ್ಣು ಮಗು ಈಗ ಅನಾಥವಾಗಿದೆ.

                                                      ಮಹೇಶ್
  • ಪತ್ನಿ ಮಾಡಿದ ನೀಚ ಕೆಲಸಕ್ಕೆ ಪತಿಯ ಕೆಲಸ ಹೋಯ್ತು!

    ಪತ್ನಿ ಮಾಡಿದ ನೀಚ ಕೆಲಸಕ್ಕೆ ಪತಿಯ ಕೆಲಸ ಹೋಯ್ತು!

    ಗುರ್‍ಗಾಂವ್: ಪತ್ನಿಯೊಬ್ಬಳು ತನ್ನ ಪತಿಯ ಬಾಸ್‍ಗೆ ಹಾಗೂ ಆತನ ಸಹದ್ಯೋಗಿಗಳಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸಿ ಆತ ಕೆಲಸ ಕಳೆದುಕೊಳ್ಳುವಂತೆ ಮಾಡಿದ ಘಟನೆ ಗುರ್‍ಗಾಂವ್‍ನಲ್ಲಿ ನಡೆದಿದೆ.

    ಅಭಿಷೇಕ್ ಕೆಲಸ ಕಳೆದುಕೊಂಡ ಪತಿ. ಅಭಿಷೇಕ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿಯ ಈ ನೀಚ ಕೆಲಸದಿಂದ ನಾನು ನನ್ನ ಕೆಲಸವನ್ನು ಕಳೆದುಕೊಂಡಿದ್ದೇನೆ ಎಂದು ಸ್ವತಃ ಅಭಿಷೇಕ್ ತನ್ನ ಪತ್ನಿಯ ಮೇಲೆ ಆರೋಪಿಸಿದ್ದಾರೆ.

    ಅಭಿಷೇಕ್ ಹಾಗೂ ಆತನ ಪತ್ನಿಯ ವಿಚ್ಛೇದನ ಕೇಸ್ ಕೋರ್ಟ್ ನಲ್ಲಿ ನಡೆಯುತ್ತಿತ್ತು. ಹಾಗಾಗಿ ಪತ್ನಿ ತನ್ನ ಪತಿಯ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಅಕೌಂಟ್ ಓಪನ್ ಮಾಡಿದ್ದಾಳೆ. ನಂತರ ಆ ಖಾತೆಯಿಂದ ತನ್ನ ಪತಿಯ ಬಾಸ್ ಹಾಗೂ ಆತನ ಸಹದ್ಯೋಗಿಗಳಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸಿದ್ದಾಳೆ.

    ಅಭಿಷೇಕ್ 2014ರಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, 2011ರಲ್ಲಿ ಮದುವೆ ನಡೆದಿತ್ತು. ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರು ಬೇರೆ ಬೇರೆ ಆಗಿದ್ದರು. ಈಗ ಇವರಿಬ್ಬರ ವಿಚ್ಛೇದನ ಕೇಸ್ ಕೋರ್ಟ್‍ನಲ್ಲಿ ನಡೆಯುತ್ತಿದೆ.

    2016ರಲ್ಲಿ ಅಭಿಷೇಕ್ ಪತ್ನಿ ತನ್ನ ಪತಿಯ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆಯನ್ನು ಓಪನ್ ಮಾಡಿದ್ದಳು. ಆ ಖಾತೆಯಲ್ಲಿ ತನ್ನ ಪತಿಯ ಫೋಟೋ ಹಾಕಿ, ಆತನ ಬಾಸ್, ಸಹದ್ಯೋಗಿ ಹಾಗೂ ಹಿರಿಯ ಉದ್ಯೋಗಿಗಳಿಗೆ ಅಶ್ಲೀಲ ಫೋಟೋ ಹಾಗೂ ಮೆಸೇಜ್ ಮಾಡುತ್ತಿದ್ದಳು. ಅಲ್ಲದೇ ಮೆಸೆಂಜರ್ ನಲ್ಲಿ ಕರೆ ಮಾಡಿ ಹಲವು ಕಥೆಗಳನ್ನು ಹೇಳುತ್ತಿದ್ದಳು ಎನ್ನಲಾಗಿದೆ.

    ನನ್ನ ಪತ್ನಿಯಿಂದಾಗಿ ನಾನು ನನ್ನ ಕೆಲಸವನ್ನು ಕಳೆದುಕೊಂಡೆ. ನಾನು ಈ ಬಗ್ಗೆ ಪೊಲೀಸರ ಹತ್ತಿರ ಆಕೆಯ ವಿರುದ್ಧ ದೂರನ್ನು ದಾಖಲಿಸಿದ್ದೇನೆ ಎಂದು ಪತಿ ಅಭಿಷೇಕ್ ತಿಳಿಸಿದ್ದಾನೆ. ಪ್ರಾಥಮಿಕ ತನಿಖೆಯಿಂದ ಅಭಿಷೇಕ್ ಪತ್ನಿ ಆರೋಪಿ ಎಂದು ತಿಳಿದು ಬಂದಿದ್ದು, ಆಕೆಯ ವಿರುದ್ಧ ಐಟಿ ಕಾಯ್ದೆ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ಸೆಕ್ಟರ್ 10ರ ಎಸ್‍ಒಎಚ್ ಚಂದ್ರಪ್ರಕಾಶ್ ತಿಳಿಸಿದ್ದಾರೆ.

  • ಕರುಳ ಕುಡಿಯನ್ನೇ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಂದ ನಿವೃತ್ತ ನೌಕಾ ಅಧಿಕಾರಿ

    ಕರುಳ ಕುಡಿಯನ್ನೇ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಂದ ನಿವೃತ್ತ ನೌಕಾ ಅಧಿಕಾರಿ

    ಹುಬ್ಬಳ್ಳಿ: ತಂದೆಯೇ ತನ್ನ ಮಗಳನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಸಂತೋಷ ನಗರದಲ್ಲಿ ನಡೆದಿದೆ.

    ಆರೋಪಿ ತಂದೆಯಾದ ಯನಗಣ್ಣ ಮಗಳಾದ ನಿಖಿತಾ (16)ಳನ್ನು ಕೊಲೆ ಮಾಡಿದ್ದಾನೆ. ಇದೇ ವೇಳೆ ಪತ್ನಿ ಸುಜಾತಾ ಹಾಗೂ ಮಾವ ರಾಗಪ್ಪ ಎಂಬವರ ಮೇಲೆಯೂ ಮೋಹನ್ ಚಾಕುವಿನಿಂದ ಹಲ್ಲೆ ನಡೆಸಿ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಏನಿದು ಘಟನೆ: ಮೋಹನ್ ಯನಗಣ್ಣವರ ನಿವೃತ್ತ ನೌಕಾ ಸೇನೆ ಉದ್ಯೋಗಿಯಾಗಿದ್ದು, ಕೆಲ ವರ್ಷಗಳಿಂದ ಗಂಡ ಹೆಂಡತಿ ನಡುವೆ ಕೌಟುಂಬಿಕ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಅದ್ದರಿಂದ ದಂಪತಿಗಳಿಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ ಸೋಮವಾರ ಏಕಾಏಕಿ ಬಂದು ಆಗಮಿಸಿದ ಮೋಹನ್ ಇಡೀ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾನೆ.

    ಘಟನೆಯ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಮಗಳು ನಿಖಿತಾಳನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ಕೊಂಡ್ಯೊಯುವ ದಾರಿ ಮಧ್ಯೆ ಸಾವನ್ನಪ್ಪಿದ್ದಾಳೆ. ಈ ವೇಳೆ ಗಾಯಗೊಂಡಿರುವ ಪತ್ನಿ ಸುಜಾತಾ ಹಾಗೂ ಮಾವ ರಾಗಪ್ಪ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಗಳ ಮತ್ತು ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ ಬಳಿಕ ವಿಷ ಕುಡಿದು ಆತ್ನಹತ್ಯೆಗೆ ಯತ್ನಿಸಿರುವ ಆಶೋಕ್ ಸಹ ಅಸ್ವಸ್ಥರಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಅಶೋಕ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

     

  • ಮದ್ವೆಯಾದ 13ನೇ ದಿನಕ್ಕೆ ಪತಿಯನ್ನೇ ಕೊಂದ್ಳು

    ಮದ್ವೆಯಾದ 13ನೇ ದಿನಕ್ಕೆ ಪತಿಯನ್ನೇ ಕೊಂದ್ಳು

    ಮುಂಬೈ: 31 ವರ್ಷದ ನವವಿವಾಹಿತ ಶನಿವಾರ ವಾಯ್ ನ ಪಸರಾನಿ ಘಾಟ್ ನಲ್ಲಿ ದರೋಡೆ ಉದ್ದೇಶದಿಂದ ಕೊಲೆಗೀಡಾಗಿದ್ದು, ತನಿಖೆ ನಂತರ ಆತನ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿಸಿರುವ ವಿಚಾರ ಬೆಳಕಿಗೆ ಬಂದಿದೆ.

    ಆನಂದ್ ಕಾಂಬ್ಳೆ ಪತ್ನಿಯಿಂದ ಕೊಲೆಯಾದ ದುರ್ದೈವಿ. ಮೃತ ಕಾಂಬ್ಳೆ ಆರೋಪಿ ಪತ್ನಿ ದೀಕ್ಷಾ ಓವಲ್ ಳನ್ನು ಮೇ 20 ರಂದು ಬಾನರ್ ನಲ್ಲಿ ಮದುವೆಯಾಗಿದ್ದನು. ಈ ಮದುವೆ ಎರಡು ಕುಟುಂಬಗಳು ಒಪ್ಪಿಗೆ ನೀಡಿತ್ತು.

    ಕೊಲೆ ಮಾಡಿದ್ದು ಹೇಗೆ?
    ಹೊಸದಾಗಿ ಮದುವೆಯಾದ ದಂಪತಿಗಳು ಶನಿವಾರ ಮಹಾಬಲೇಶ್ವರಕ್ಕೆ ಬೈಕಿನಲ್ಲಿ ತೆರಳಿದ್ದರು. ಆನಂದ್ ಅವರ ಸ್ನೇಹಿತ ರಾಜೇಂದ್ರ ಬೊಬಡೆ ಮತ್ತು ಅವರ ಪತ್ನಿ ಕಲ್ಯಾಣಿ ಸಹ ಜೊತೆ ಹೋಗಿದ್ದರು. ಪಸರಾನಿ ಘಾಟ್ ಗೆ ಬಳಿ ಹೋಗುತ್ತಿದ್ದಂತೆ ದೀಕ್ಷಾ ಆರೋಗ್ಯ ಸಮಸ್ಯೆಯಿಂದ ಬೈಕ್ ನಿಲ್ಲಿಸುವಂತೆ ಹೇಳಿದ್ದಾಳೆ. ಬಳಿಕ ಇಬ್ಬರು ತಮ್ಮ ತಮ್ಮ ಬೈಕ್ ಗಳನ್ನು ಸ್ಥಳದಲ್ಲೇ ನಿಲ್ಲಿಸಿದ್ದಾರೆ.

    ಇದೇ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಏಕಾಏಕಿ ಆನಂದ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಹಲ್ಲೆ ಮಾಡಿದ ಪರಿಣಾಮ ಆನಂದ್ ಕುಸಿದು ಬಿದ್ದಿದ್ದಾರೆ. ನಂತರ ಈ ಘಟನೆಯನ್ನು ವೀಕ್ಷಿಸಿದ ಮೊತ್ತೊಂದು ದಂಪತಿ ಪಂಚಗಣಿ ಪೊಲೀಸ್ ಠಾಣೆಗೆ ಹೋಗಿ ಘಟನೆಯ ಬಗ್ಗೆ ವಿವರಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಬಂದು ಆನಂದನನ್ನು ವಾಯ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸತಾರಾಕ್ಕೆ ರವಾನಿಸಿದ್ದಾರೆ. ಆದರೆ ಮಾರ್ಗ ಮಧ್ಯೆ ಆನಂದ್ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಮಹಾಬಲೇಶ್ವರದಲ್ಲಿ ಪ್ರವಾಸಿಗರಲ್ಲಿ ಭಯ ಉಂಟುಮಾಡಿತ್ತು.

    ಸಿಕ್ಕಿ ಬಿದ್ದಿದ್ದು ಹೇಗೆ?
    ಈ ಬಗ್ಗೆ ಸ್ಥಳೀಯ ಅಪರಾಧ ಶಾಖೆ ತನಿಖೆಯನ್ನು ಆರಂಭಿಸಿದ್ದು, ಪುಣೆಗೆ ಪೊಲೀಸ್ ತಂಡಗಳನ್ನು ಕಳುಹಿಸಿದ್ದಾರೆ. ತನಿಖೆಯಲ್ಲಿ ಈ ಕೇಸಿನಲ್ಲಿ ಮೃತನ ಪತ್ನಿ ದೀಕ್ಷಾ ಪ್ರಿಯಕರ ನಿಖಿಲ್ ಮಾಲೇಕರ ಕೈವಾಡ ಇದೆ ಎಂದು ಶಂಕಿಸಿ ನಿಗ್ಡಿಯಲ್ಲಿ ಆತನನ್ನು ಬಂಧಿಸಿದ್ದಾರೆ. ದೀಕ್ಷಾ ಮತ್ತು ನಿಖಿಲ್ ಇಬ್ಬರು ಒಂದೇ ಪ್ರದೇಶದ ನಿವಾಸಿಗಳಾಗಿದ್ದು, ಕೆಲವು ವರ್ಷಗಳಿಂದ ಇಬ್ಬರು ನಡುವೆ ಸಂಬಂಧ ಇತ್ತು. ಆನಂದ್ ಜೊತೆ ದೀಕ್ಷಾ ಮದುವೆಯನ್ನು ಪೋಷಕರು ಮಾಡಿದ್ದಾರೆ. ಆದರೆ ಈ ಮದುವೆ ದೀಕ್ಷಾಗೆ ಇಷ್ಟವಿರಲ್ಲಿ. ಈ ಬಗ್ಗೆ ದೀಕ್ಷಾ ನಿಖಿಲ್ ಗೆ ಕರೆ ಮಾಡಿ ಹೇಳಿದ್ದಾಳೆ. ಬಳಿಕ ಇಬ್ಬರು ಸೇರಿ ಪ್ಲ್ಯಾನ್ ಮಾಡಿ ಆನಂದ್ ನನ್ನು ಕೊಲೆ ಮಾಡಿದ್ದಾರೆ ಎಂದು ವಿಚಾರಣೆಯ ವೇಳೆ ತಿಳಿದು ಬಂದಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ವಾಯ್ ಪೊಲೀಸರು ಪತ್ನಿ, ಪ್ರಿಯಕರ ನಿಖಿಲ್ ಮತ್ತು ಹಲ್ಲೆಗೆ ಸಹಾಯ ಮಾಡಿದ್ದ ಇಬ್ಬರು ಆರೋಪಿಗಳನ್ನು ಸೇರಿ ನಾಲ್ಕು ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ದೀಕ್ಷಾ ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಶೀಘ್ರದಲ್ಲೇ ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸುತ್ತೇವೆ. ನಮ್ಮ ತಂಡಗಳು ಇತರ ಆರೋಪಿಗಳ ಹುಡುಕಾಟದಲ್ಲಿವೆ ಎಂದು ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಪ್ರಭಾಕರ್ ಘನವಾತ್ ಹೇಳಿದ್ಧಾರೆ.

    ದೀಕ್ಷಾ ನನ್ನ ಸಹೋದರನನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದಾಳೆ ಎಂದು ನಾವು ಭಾವಿಸಿರಲಿಲ್ಲ. ನಾವು ಅವಳು ಮತ್ತು ಆಕೆಯ ಕುಟುಂಬದಿಂದ ವಂಚಿಸಲ್ಪಟ್ಟಿದ್ದೇವೆ. ಎಲ್ಲ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದು ಮೃತ ಆನಂದ್ ಸೋದರ ಸಂತೋಷ್ ಕಾಂಬ್ಳೆ ನೋವಿನಿಂದ ಹೇಳಿದ್ದಾರೆ.