Tag: ಪತ್ನಿ

  • ನಗ್ನ ಫೋಟೋ ತಗೆದು ಯೂಟ್ಯೂಬ್ ಹಾಕ್ತೀನಿ: ಪತ್ನಿಗೆ ಬೆಂಗ್ಳೂರು ಪತಿಯಿಂದ ಬೆದರಿಕೆ

    ನಗ್ನ ಫೋಟೋ ತಗೆದು ಯೂಟ್ಯೂಬ್ ಹಾಕ್ತೀನಿ: ಪತ್ನಿಗೆ ಬೆಂಗ್ಳೂರು ಪತಿಯಿಂದ ಬೆದರಿಕೆ

    ಬೆಂಗಳೂರು: ವರದಕ್ಷಿಣೆಗಾಗಿ ನಗ್ನ ಫೋಟೋ ತೆಗದು ಯೂಟ್ಯೂಬ್‍ಗೆ ಹಾಕುವುದಾಗಿ ಪತಿ ಬೆದರಿಸುತ್ತಿದ್ದಾನೆ ಎಂದು ಆರೋಪಿಸಿ ಪತ್ನಿಯೊಬ್ಬರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಕೃಷ್ಣಮೂರ್ತಿ(36) ಪತ್ನಿಗೆ ಬೆದರಿಕೆ ಹಾಕಿದ ಪತಿ. ಕಳೆದ ವರ್ಷ ಏಪ್ರೆಲ್ 30ರಂದು ಮೀನಾ (ಹೆಸರು ಬದಲಾಯಿಸಲಾಗಿದೆ) ಅವರನ್ನು ಕೃಷ್ಣಮೂರ್ತಿ ಮದುವೆಯಾಗಿದ್ದ. ಬಸವನಗುಡಿಯ ಗಾಂಧಿನಗರದಲ್ಲಿ ಮದುವೆಯಾಗಿದ್ದು, ಈಗ ವರದಕ್ಷಿಣೆಗಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೀನಾ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಈ ದೂರಿನ ಆಧಾರದಲ್ಲಿ ಕೃಷ್ಣಮೂರ್ತಿ ಸೇರಿದಂತೆ 8 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 506(ಬೆದರಿಕೆ) 498 ಎ(ಮನೆಯರಿಂದ ಹಿಂಸೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಮದುವೆಯ ಸಂದರ್ಭದಲ್ಲಿ 500 ಗ್ರಾಂ ಚಿನ್ನದ ಒಡವೆ ಹಾಗೂ 5 ಲಕ್ಷ ರೂ. ಹಣವನ್ನು ನೀಡಬೇಕೆಂದು ಕೃಷ್ಣಮೂರ್ತಿ ಕಡೆಯವರು ಬೇಡಿಕೆ ಇಟ್ಟಿದ್ದರು. ಆದರೆ ನಮ್ಮ ಕುಟುಂಬ 350 ಗ್ರಾಂ ತೂಕದ ಚಿನ್ನದ ಒಡವೆಗಳಲ್ಲಿ ಕೃಷ್ಣಮೂರ್ತಿಗೆ 80 ಗ್ರಾಂ ತೂಕದ ಕೊರಳ ಚೈನ್, 7 ಗ್ರಾಂ ತೂಕದ ಉಂಗುರ ಮತ್ತು 40 ಗ್ರಾಂ ತೂಕದ ಕಡ್ಗವನ್ನು ನೀಡಿದ್ದರು. ಇದ್ದಲ್ಲದೇ 4 ಲಕ್ಷ ರೂ. ನೀಡಿ ಮದುವೆ ಮಾಡಿಸಿದ್ದರು. ಆದರೆ ಈಗ ಮತ್ತಷ್ಟು ಹಣವನ್ನು ತರುವಂತೆ ಬೇಡಿಕೆ ಇಟ್ಟಿದ್ದಾನೆ.

    ತನ್ನ ಸ್ನೇಹಿತರೊಬ್ಬರ ಬರ್ತಡೇ ಪಾರ್ಟಿ ವೇಳೆ ಕೃಷ್ಣಮೂರ್ತಿ ಬಲವಂತವಾಗಿ ಡ್ರಿಂಕ್ಸ್ ಮಾಡಿಸಿದ್ದ. ಅಲ್ಲದೇ ಅವರು ಹಾಗೂ ಅವರ ಸ್ನೇಹಿತರು ಕುಡಿದು ವಾಂತಿ ಮಾಡಿದ್ದನ್ನು ಕ್ಲೀನ್ ಮಾಡುವಂತೆ ಹಿಂಸೆ ನೀಡುತ್ತಿದ್ದನು. ನಿನ್ನನ್ನು ಮದುವೆಯಾಗುವ ಬದಲು ಬೇರೆಯವರನ್ನು ಮದುವೆಯಾಗಿದ್ದರೆ ಹೆಚ್ಚಿನ ವರದಕ್ಷಿಣೆಯಾಗಿ ಸೈಟ್, ಮನೆ ಹಾಗೂ ಹೆಚ್ಚಿನ ಹಣವನ್ನು ನೀಡುತ್ತಿದ್ದರು ಎಂದು ಹೀಯಾಳಿಸಿ ಈಗ ಮಾತನಾಡುತ್ತಿದ್ದಾನೆ. ಈಗ ವರದಕ್ಷಿಣೆಗಾಗಿ ನನ್ನ ನಗ್ನ ಫೋಟೋಗಳನ್ನು ತೆಗೆದು ಬೆದರಿಸುತ್ತಿದ್ದಾನೆ. ಹೆಚ್ಚಿನ ವರದಕ್ಷಿಣೆಗಾಗಿ 500 ಗ್ರಾಂ ಒಡವೆ ಹಾಗೂ 10 ಲಕ್ಷ ರೂ. ಹಣ ನೀಡಬೇಕೆಂದು ಪತಿಯ ಕಡೆಯವರು ಬಲವಂತ ಮಾಡುತ್ತಿದ್ದಾರೆ. ತಮ್ಮ ಬೇಡಿಕೆಯನ್ನು ಈಡೇರಿಸದೇ ಇದ್ದರೆ ಯೂಟ್ಯೂಬ್‍ನಲ್ಲಿ ನನ್ನ ನಗ್ನ ಫೋಟೋಗಳನ್ನು ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ವರದಕ್ಷಿಣೆ ತರುವಂತೆ ಮನೆಯಿಂದ ಹೊರ ಹಾಕಿದ್ದಾರೆ. ಮನೆ ಹತ್ತಿರ ಹೋದರೆ ಮನೆಗೆ ಸೇರಿಸದೇ ಹೊಡೆದು, ಬೈದು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಆರೋಪಿಸಿ ದೂರು ನೀಡಿದ್ದಾರೆ.

  • ಅನೈತಿಕ ಸಂಬಂಧಕ್ಕೆ ಅಡ್ಡಿ- ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ!

    ಅನೈತಿಕ ಸಂಬಂಧಕ್ಕೆ ಅಡ್ಡಿ- ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ!

    ತುಮಕೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯನ್ನು ಹತ್ಯೆ ಮಾಡಿದ್ದ ಹಂತಕಿ ಪತ್ನಿ ಹಾಗೂ ಪ್ರಿಯಕರನನ್ನು ತುಮಕೂರಿನ ಕೋರಾ ಪೊಲೀಸರು ಬಂಧಿಸಿದ್ದಾರೆ.

    ಸಂಗೀತಾ ಹಾಗೂ ಆಕೆಯ ಪ್ರಿಯಕರ ತಿಪ್ಪೆಸ್ವಾಮಿ ಬಂಧಿತ ಆರೋಪಿಗಳು. ಜೂನ್ 16ರಂದು ಸೋಮಸಾಗರ ಗೇಟ್ ಬಳಿ ಹೊಗೆಯಾಡುತ್ತಿದ್ದ ಶವವೊಂದು ಪತ್ತೆಯಾಗಿತ್ತು. ಅದು ಆರೋಪಿ ಸಂಗೀತಾ ಪತಿ ನಾಗಾನಂದನ ಶವವಾಗಿತ್ತು.

    ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಪತ್ನಿ ಸಂಗಿತಾ ಹಾಗೂ ಪ್ರಿಯಕರ ತಿಪ್ಪೆಸ್ವಾಮಿ ತಮ್ಮೂರು ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ದಾರಿ ಮಧ್ಯೆ ಹತ್ಯೆ ಮಾಡಿದ್ದಾರೆ. ಮದ್ಯ ಕುಡಿಸಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸಿದ್ದಾರೆ. ಬಳಿಕ ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ.

    ಈ ಕೊಲೆಯ ಜಾಡು ಹಿಡಿದು ಹೊರಟ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಬ್ಬರು ಬೆಂಗಳೂರುನ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.

  • Exclusive: ಲವ್ ಜಿಹಾದ್ ಕೇಸ್ ನಲ್ಲಿ ಕರ್ನಾಟಕ ಡಿಸಿ ಕುಟುಂಬವೇ ಭಾಗಿ!

    Exclusive: ಲವ್ ಜಿಹಾದ್ ಕೇಸ್ ನಲ್ಲಿ ಕರ್ನಾಟಕ ಡಿಸಿ ಕುಟುಂಬವೇ ಭಾಗಿ!

    ಬೆಂಗಳೂರು: ಲವ್ ಜಿಹಾದ್ ಕೇಸ್ ನಲ್ಲಿ ಕರ್ನಾಟಕ ಡಿಸಿ ಕುಟುಂಬವೇ ಭಾಗಿಯಾಗಿದ್ದು, ಮನೆ ಮೇಲೆ ದಾಳಿ ಮಾಡಿದಾಗ ಸ್ಫೋಟಕ ರಹಸ್ಯ ಹೊರ ಬಂದಿದೆ.

    ಜನವರಿಯಲ್ಲಿ ದಾಖಲಾದ ಕೇರಳ ಯುವತಿಯ ಲವ್ ಜಿಹಾದ್ ಕೇಸ್ ನಲ್ಲಿ ಕಲಬುರುಗಿಯ ಕಮರ್ಷಿಯಲ್ ಟ್ಯಾಕ್ಸ್ ನ ಡಿಸಿ ಇರ್ಷಾದುಲ್ಲಾ ಖಾನ್ ಪತ್ನಿ ಭಾಗಿಯಾಗಿರುವುದು ತಿಳಿದು ಬಂದಿದೆ. ಯುವತಿ ಕೇರಳದ ಕೊಚ್ಚಿಯಿಂದ ಬೆಂಗಳೂರಿಗೆ ಓದಲೆಂದು ಬಂದಿದ್ದಳು. ಆಗ ಬೆಂಗಳೂರಿನ ಬಿಸಿನೆಸ್‍ಮೆನ್ ನಜೀರ್ ಖಾನ್ ಯುವತಿಯನ್ನು ಪ್ರೀತಿಸಿದ್ದನು. ನಂತರ ಆ ಯುವತಿಯ ತಲೆಕೆಡಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದ. ಮತಾಂತರ ಮಾಡಿ ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರ ನಡೆಸಿದ ಬಳಿಕ ನಜೀರ್ ಖಾನ್ ಯುವತಿಯನ್ನು ಡಿಸಿ ಇರ್ಷಾದುಲ್ಲಾ ಖಾನ್ ಮನೆಯಲ್ಲಿ ಇರಿಸಿದ್ದನು.

    ನಜೀರ್ ಯುವತಿಯನ್ನು 15 ದಿನಗಳ ಕಾಲ ಡಿಸಿ ಇರ್ಷಾದುಲ್ಲಾ ಖಾನ್ ಮನೆಯಲ್ಲಿಯೇ ಇರಿಸಿ, ಬಳಿಕ ಆಕೆಯನ್ನು ಸೌದಿಗೆ ಕರೆದುಕೊಂಡು ಹೋಗಿದ್ದನು. ಸೌದಿಯಲ್ಲೂ ಕೂಡ ಯವತಿಯ ಮೇಲೆ ಶೇಖ್ ಗಳಿಂದ ನಿರಂತರ ಅತ್ಯಾಚಾರ ನಡೆದಿದೆ. ಈ ಬಗ್ಗೆ ಯುವತಿ ಮನೆಯವರಿಗೆ ಮಾಹಿತಿ ನೀಡಿದ್ದಾಳೆ. ನಜೀರ್ ಸೌದಿಯಿಂದ ಬೆಂಗಳೂರಿಗೆ ಮಾರ್ಗ ಮಧ್ಯೆ ಬರುತ್ತಿದ್ದಾಗ ಎನ್‍ಐಎ ತಂಡ ಆತನನ್ನು ಬಂಧಿಸಿ ಯುವತಿ ರಕ್ಷಣೆ ಮಾಡಿ ವಿಚಾರಣೆ ನಡೆಸಿದ್ದಾರೆ.

    ವಿಚಾರಣೆ ನಡೆಸುವಾಗ ಯುವತಿ ಸ್ಫೋಟಕ ಮಾಹಿತಿಯೊಂದನ್ನು ಹೊರ ಹಾಕಿದ್ದು, ಇಡೀ ಲವ್ ಜಿಹಾದ್ ನ ಹಿಂದೆ ಡಿಸಿ ಇರ್ಷಾದುಲ್ಲಾ ಖಾನ್ ಕುಟುಂಬದ ಕೈವಾಡವಿತ್ತು ಎಂದು ತಿಳಿಸಿದ್ದಾಳೆ. ಕೊಚ್ಚಿ ಎನ್‍ಐಎ ಮಾಹಿತಿಯನ್ನು ಆಧರಿಸಿ ಎರಡು ದಿನಗಳ ಹಿಂದೆ ದಾಳಿ ನಡೆಸಿತ್ತು. ದೊಮ್ಮಲೂರು ಬಳಿಯ ಡೈಮಂಡ್ ಡಿಸ್ಟ್ರಿಕ್ಟ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಡಿಸಿ ಇರ್ಷಾದುಲ್ಲಾ ಖಾನ್ ಪತ್ನಿಯ ಅಸಲಿಯತ್ತು ಅನಾವರಣಗೊಂಡಿದೆ. ಡಿಸಿ ಪತ್ನಿಯೇ ಲವ್ ಜಿಹಾದ್ ನ ರೂವಾರಿಯೇ ಎಂದು ಎನ್‍ಐಎ ಮೂಲಗಳು ತಿಳಿಸಿವೆ.

    ಡಿಸಿ ಪತ್ನಿ ಹಿಂದೂ ಯುವತಿಯರ ಹೆಸರಲ್ಲಿ ಫೇಸ್ ಬುಕ್, ಇನ್‍ಸ್ಟಾಗ್ರಾಂ ಖಾತೆ ತೆರೆದಿದ್ದು, ಅಕೌಂಟ್ ಗಳ ಮೂಲಕ ಹಿಂದೂ ಯುವತಿಯರನ್ನು ಸೆಳೆದು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಳು ಎಂಬ ಸತ್ಯ ಬಯಲಿಗೆ ಬಂದಿದೆ. ಸದ್ಯ ಎನ್‍ಐಎ ತಂಡ ಡಿಸಿ ಇರ್ಷಾದುಲ್ಲಾ ಖಾನ್ ಪತ್ನಿಯಿಂದ 8 ಲ್ಯಾಪ್ ಟಾಪ್ ಹಾಗೂ 12 ಮೊಬೈಲ್ ಗಳ ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆಸುತ್ತಿದ್ದಾರೆ

    ಈ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಡಿಸಿ ಇರ್ಷಾದುಲ್ಲಾ ಖಾನ್, “ಈ ರೀತಿಯ ವಿಚಾರಗಳಿಗೆ ಹೋಗಬೇಡ ಎಂದು ಪತ್ನಿಗೆ ಈ ಹಿಂದೆ ತಿಳಿ ಹೇಳಿದ್ದೇನೆ. ಎನ್‍ಐಎ ತಂಡ ವಿಚಾರಣೆ ನಡೆಸಿದೆ ಹಾಗೂ ಯುವತಿ ನಮ್ಮ ಮನೆಗೆ ಬಂದು ಹೋಗಿದ್ದು ನಿಜ. ನನ್ನ ಪತ್ನಿ ಸಮಾಜ ಸೇವೆಯಲ್ಲಿ ತೊಡಗಿದ್ದು, ಆಕೆಯೇ ಸಹಾಯ ಮಾಡಿರಬಹುದು. ಸದ್ಯ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.

  • ಪತ್ನಿಯನ್ನು ಹೆದರಿಸಲು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡ!

    ಪತ್ನಿಯನ್ನು ಹೆದರಿಸಲು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡ!

    ಬೆಂಗಳೂರು: ಪತ್ನಿಗೆ ಹೆದರಿಸಲು ಹೋಗಿ ಪತಿ ಮಹಾಶಯನೊಬ್ಬ ಬೆಂಕಿ ಹಚ್ಚಿಕೊಂಡ ಘಟನೆ ಬೆಂಗಳೂರಿನ ಸಂಜೀವಿನಿನಗರದಲ್ಲಿ ನಡೆದಿದೆ.

    ಸಂಜೀವಿನಿನಗರದ ನಿವಾಸಿ ನಾಗರಾಜ್ ತಮ್ಮ ಪತ್ನಿ ಲಲಿತಾ ಜೊತೆ ರಾತ್ರಿ ಜಗಳ ಮಾಡಿದ್ದಾರೆ. ಬಳಿಕ ಸಾಯುತ್ತೇನೆ ಅಂತ ಪತ್ನಿಯನ್ನು ಹೆದರಿಸಲು ಹೋಗಿ, ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಪರಿಣಾಮ ನಾಗರಾಜ್ ದೇಹ ಶೇಕಡಾ 60ರಷ್ಟು ಸುಟ್ಟು ಹೋಗಿದೆ.

    ಘಟನೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ನಾಗರಾಜ್ ಅವರನ್ನು ಕೂಡಲೇ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 5 ಲಕ್ಷಕ್ಕೆ ಪತ್ನಿ, ಮಕ್ಕಳನ್ನು ಮಾರಾಟ ಮಾಡಲು ಡೀಲ್ ಮಾಡ್ಕೊಂಡ ಪತಿ!

    5 ಲಕ್ಷಕ್ಕೆ ಪತ್ನಿ, ಮಕ್ಕಳನ್ನು ಮಾರಾಟ ಮಾಡಲು ಡೀಲ್ ಮಾಡ್ಕೊಂಡ ಪತಿ!

    ಹೈದರಾಬಾದ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವ್ಯಕ್ತಿಯೊಬ್ಬ ಸಾಲ ತೀರಿಸುವ ಸಲುವಾಗಿ ತನ್ನ ಪತ್ನಿ ಹಾಗೂ ಮಕ್ಕಳನ್ನು 5 ಲಕ್ಷಕ್ಕೆ ಮಾರಿದ ಅಚ್ಚರಿಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

    ನಂದ್ಯಾಳ್ ನಗರದ ನಿವಾಸಿ 35 ವರ್ಷದ ವೆಂಕಟಮ್ಮ ಅವರು ಕೊಯಿಲಕುಂಟ್ಲಾ ನಿವಾಸಿ 30 ವರ್ಷದ ಪಸುಪೊಲ್ಟಿ ಮಡ್ಡಿಲೆಟಿ ಎಂಬಾತನನ್ನು ವಿವಾಹವಾಗಿದ್ದರು. ಈ ದಂಪತಿಗೆ 4 ಹೆಣ್ಣು ಹಾಗೂ ಓರ್ವ ಪುತ್ರನಿದ್ದಾನೆ. ಮಡ್ಡಿಲೆಟಿ ಜೂಜಾಟ ಹಾಗೂ ಮದ್ಯವ್ಯಸನಿಯಾಗಿದ್ದನು.

    ಅತಿಯಾಗಿ ಸಾಲ ಮಾಡಿಕೊಂಡಿದ್ದ ಮಡ್ಡಿಲೆಟಿ, ವಯಸ್ಸಿಗೆ ಬಂದ ತನ್ನ ಮಗಳನ್ನು ಮಾರಾಟ ಮಾಡಲು ಯೋಜನೆ ಹಾಕಿದ್ದನು. ಅಂತೆಯೇ ಕಳೆದ ವರ್ಷವೇ 1.5 ಲಕ್ಷಕ್ಕೆ ಸಂಬಂಧಿಯೊಬ್ಬರ ಮಗನಿಗೆ ಕೊಡುವುದಾಗಿ ಪ್ಲಾನ್ ಮಾಡಿದ್ದನು. ಆದ್ರೆ ಆ ಸಮಯದಲ್ಲಿ ಆಕೆಗೆ ಮದುವೆ ವಯಸ್ಸು ಆಗಿರಲಿಲ್ಲ. ಹೀಗಾಗಿ ಮದುವೆಯ ವಯಸ್ಸು ಬಂದಾಗ ಕೊಡುವುದಾಗಿ ಹೇಳಿ ಹಣ ಪಡೆದುಕೊಂಡಿದ್ದನು. ಆ ಹಣ ಖರ್ಚಾದ ಬಳಿಕ ಆತ ಹಣ ಪಡೆಯುವ ಸುಲಭ ಉಪಾಯಗಳನ್ನು ಹುಡುಕುತ್ತಿದ್ದನು. ಉಳಿದ ಹೆಣ್ಣು ಮಕ್ಕಳಿಗೆ ಇದೀಗ 10, 8 ಮತ್ತು 6 ಆದ್ರೆ ಮಗನಿಗೆ 4 ವರ್ಷ ವಯಸ್ಸು.

    ಇದೇ ವೇಳೆ ಈತನ ಸಹೋದರ ಬುಸ್ಸಿ, ಪತ್ನಿ ಹಾಗೂ ಉಳಿದ ಹೆಣ್ಣು ಮಕ್ಕಳು ಹಾಗೂ ಪುತ್ರನನ್ನು 5 ಲಕ್ಷಕ್ಕೆ ಮಾರಟ ಮಾಡುವಂತೆ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಇವರಿಬ್ಬರೂ ಮಾತುಕತೆ ನಡೆಸಿ ಡೀಲ್ ಮಾಡಿಕೊಂಡಿದ್ದು, ಪೇಪರ್‍ಗೆ ಸಹಿ ಮಾಡುವಂತೆ ಪತ್ನಿಗೆ ಮಡ್ಡಿಲೆಟ್ ಹೇಳಿದ್ದಾನೆ. ಈ ವೇಳೆ ಪತ್ನಿ ಸಹಿ ಹಾಕಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟುಗೊಂಡ ಮಡ್ಡಿಲೆಟ್ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಗಂಡನ ಕಿರುಕುಳದಿಂದ ಬೇಸತ್ತ ಪತ್ನಿ, ನಾನು ಈತನೊಂದಿಗೆ ಜೀವನ ನಡೆಸಲ್ಲ ಅಂತ ಹೇಳಿ ತವರು ಮನೆಗೆ ತೆರಳಿದ್ದರು.

    ಈ ವೇಳೆ ಆಕೆಯ ಪೋಷಕರು ಮೆಡಿಲೆಟ್ ವಿರುದ್ಧ ನಂದ್ಯಾಳ್ ತಾಲೂಕ ಪೊಲೀಸ್ ಠಾಣೆಯಲ್ಲಿ ಕಿರುಕುಳ ನೀಡುವುದಾಗಿ ದೂರು ನೀಡಿದ್ದಾರೆ. ಈ ವೇಳೆ ಪತ್ನಿ ಮಕ್ಕಳ ಮಾರಾಟ ಮಾಡಲು ತಯಾರಿ ನಡೆಸಿರುವ ಪ್ಲಾನ್ ಬೆಳಕಿಗೆ ಬಂದಿದೆ.

    ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮಾರಾಟ ಮಾಡಿದ ಕುರಿತು ದೂರೊಂದು ಬಂದಿತ್ತು. ಆದ್ರೆ ನಾವು ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ನಿರಾಕರಿಸಿದ್ದೇವೆ. ಯಾಕಂದ್ರೆ ಮೆಡ್ಡಿಲೆಟ್ ಬುಡಗ ಜಂಗಲು ಸಮುದಾಯಕ್ಕೆ ಸೇರಿದವನಾಗಿದ್ದು, ಅಲ್ಲಿ ಪತ್ನಿಯರ ಖರೀದಿ ಸಾಮಾನ್ಯ ಅಂತ ಸುಮ್ಮನಾದ್ವಿ. ಆದ್ರೆ ಪತ್ನಿಗೆ ಪತಿ ಕಿರುಕುಳ ನೀಡುತ್ತಿದ್ದ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸಬ್ ಇನ್ಸ್ ಪೆಕ್ಟರ್ ರಮೇಶ್ ಬಾಬು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಬುಡಗ ಜಂಗಲು ಸಮುದಾಯದಲ್ಲಿ ಪತಿಯೊಬ್ಬ ಮೊದಲು ತನ್ನ ಪತ್ನಿಯನ್ನು ಮಾರಾಟ ಮಾಡುವ ವಿಚಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಆತ ಯಾರಿಗೂ ಗೊತ್ತಾಗದಂತೆ ತನ್ನ ಕುಟುಂಬವನ್ನೇ ಮಾರಾಟ ಮಾಡಲು ತಯಾರಿ ನಡೆಸಿರುವುದು ತಿಳಿದುಬಂತು ಎಂದು ಐಸಿಡಿಎಸ್(Integrated Child Development Services)ಯ ಅಧಿಕಾರಿ ತಿಳಿಸಿದ್ದಾರೆ. ಸದ್ಯ ಮಕ್ಕಳನ್ನು ರಕ್ಷಿಸಲಾಗಿದೆ ಅಂತ ಅವರು ಹೇಳಿದ್ದಾರೆ.

  • ವಿಡಿಯೋ: ಏಳೇಳು ಜನ್ಮದಲ್ಲೂ ಈಗಿರುವ ಪತ್ನಿ ಬೇಡವೆಂದು ಅತ್ತಿ ಮರಕ್ಕೆ ಪೂಜೆ ಸಲ್ಲಿಸಿದ ಪತಿ!

    ವಿಡಿಯೋ: ಏಳೇಳು ಜನ್ಮದಲ್ಲೂ ಈಗಿರುವ ಪತ್ನಿ ಬೇಡವೆಂದು ಅತ್ತಿ ಮರಕ್ಕೆ ಪೂಜೆ ಸಲ್ಲಿಸಿದ ಪತಿ!

    ಚಿಕ್ಕೋಡಿ: ಪತ್ನಿಯಂದಿರು ವಟ ಸಾವಿತ್ರಿ ಹುಣ್ಣಿಮೆ ನಿಮಿತ್ತ ಅತ್ತಿ ಮರಕ್ಕೆ ಪೂಜೆ ಮಾಡಿ ಪ್ರದಕ್ಷಿಣೆ ಹಾಕುವುದು ಸಾಮಾನ್ಯ. ಆದರೆ ಚಿಕ್ಕೋಡಿಯಲ್ಲಿರುವ ವ್ಯಕ್ತಿಯೊಬ್ಬರು ಪತ್ನಿ ಕಿರುಕುಳ ತಾಳಲಾರೇ ಅತ್ತಿ ಮರಕ್ಕೆ ಪೂಜೆ ಸಲ್ಲಿಸಿ ಸುದ್ದಿಯಾಗಿದ್ದಾರೆ.

    ಹೌದು. ಪತ್ನಿ ಪೀಡಿತರಾಗಿರುವ ಶಶಿಧರ್ ರಾಮಚಂದ್ರ ಅವರು ವಟ ಸಾವಿತ್ರಿ ವೃತ್ತದ ನಿಮಿತ್ತ ಏಳೇಳು ಜನ್ಮದಲ್ಲೂ ಈಗ ಇರುವ ಹೆಂಡತಿ ಬೇಡವೆಂದು ಅತ್ತಿ ಮರಕ್ಕೆ ಪೂಜೆ ಸಲ್ಲಿಸಿದ್ದಾರೆ.

    ಪತ್ನಿಯಂದಿರು ತನಗೆ ಪ್ರತಿ ಜನ್ಮದಲ್ಲೂ ತನ್ನ ಗಂಡನೇ ಸಿಗಬೇಕು ಎಂದು ವಟ ಸಾವಿತ್ರಿ ಹುಣ್ಣಿಮೆ ದಿನದಂದು ಅತ್ತಿ ಮರಕ್ಕೆ ಪೂಜೆ ಮಾಡಿ ಪ್ರದಕ್ಷಿಣೆ ಹಾಕಿ ಮರಕ್ಕೆ ದಾರವನ್ನು ಕಟ್ಟುತ್ತಾರೆ. ಆದರೆ ಈ ಜನ್ಮದಲ್ಲಿ ತನ್ನ ಹೆಂಡತಿಯು ತನಗೆ ಹಾಗೂ ನನ್ನ ತಂದೆ ತಾಯಿ ಸೇರಿದಂತೆ ಕುಟುಂಬದವರ ಮೇಲೆ ಸುಳ್ಳು ವರದಕ್ಷಿಣೆ ಪ್ರಕರಣ ದಾಖಲಿಸಿ ಕಿರುಕುಳ ನೀಡಿದ್ದಾಳೆ. ಹೀಗಾಗಿ ಈ ಹೆಂಡತಿ ನನಗೆ ಮುಂದಿನ ಜನಮದಲ್ಲಿ ಬೇಡ ಎಂದು ಅವರು ಅತ್ತಿ ಮರಕ್ಕೆ ಪೂಜೆ ಸಲ್ಲಿಸಿದ್ದಾರೆ.

    ಮುಂದಿನ ಜನ್ಮದಲ್ಲಿ ಬೇಕಾದರೆ ನಾನು ಕುಮಾರನಾಗಿಯೇ ಇರುತ್ತೇನೆ. ಆದರೆ ಈ ರೀತಿಯ ಪತ್ನಿಯನ್ನು ನನಗೆ ದಯವಿಟ್ಟು ನೀಡಬೇಡ ಎಂದು ಪ್ರಾರ್ಥನೆ ಮಾಡಿ ದೇವರಲ್ಲಿ ಬೇಡಿಕೊಂಡಿದ್ದಾರೆ. ಪತ್ನಿಯಿಂದ ಕಿರುಕುಳ ಅನುಭವಿಸಿದ ಶಶಿಧರ್ ಪುರುಷ ಸಾಂತ್ವಾನ ಕೇಂದ್ರವನ್ನು ಸ್ಥಾಪನೆ ಮಾಡಿದ್ದಾರೆ.

    https://www.youtube.com/watch?v=5-m-RvIaRsc&feature=youtu.be

  • ಮಕ್ಕಳೊಂದಿಗೆ ಮಲಗಿದ್ದ ಪತ್ನಿಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಹತ್ಯೆ!

    ಮಕ್ಕಳೊಂದಿಗೆ ಮಲಗಿದ್ದ ಪತ್ನಿಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಹತ್ಯೆ!

    ಚಿತ್ರದುರ್ಗ: ಪತಿಯೇ ಪತ್ನಿಯನ್ನು ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಬಬ್ಬಲ ರಂಗವ್ವನಹಳ್ಳಿಯಲ್ಲಿ ನಡೆದಿದೆ.

    ಸಾಕಮ್ಮ(26) ಮೃತ ಮಹಿಳೆ. ಇವರು ಬಬ್ಬರ ರಂಗವ್ವನಹಳ್ಳಿಯ ವಾಸಿಗಳಾಗಿದ್ದು, ತನ್ನ ಪತಿ ಶ್ರೀಧರನಿಂದಲೇ ಹತ್ಯೆಗೀಡಾದ ದುರ್ದೈವಿ.

    ಮಂಗಳವಾರ ರಾತ್ರಿ ಇಬ್ಬರು ಮಕ್ಕಳೊಂದಿಗೆ ಮಲಗಿದ್ದ ಸಾಕಮ್ಮ ಎಂಬವರ ಮೇಲೆ ಪತಿಯೇ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಪತ್ನಿಯನ್ನು ಕೊಲೆ ಮಾಡಿದ ನಂತರ ಪತಿ ಪರಾರಿಯಾಗಿದ್ದಾನೆ.

    ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಘಟನೆ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ಯಾವುದೇ ಕಾರಣ ತಿಳಿದು ಬಂದಿಲ್ಲ, ಕುಡಿದ ಮತ್ತಿನಲ್ಲಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಘಟನೆ ಕುರಿತು ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

  • ಡೇಟಿಂಗ್ ವೆಬ್‍ಸೈಟ್‍ನಲ್ಲಿ ವಂಚಿಸುತ್ತಿದ್ದ ಕಿರುತೆರೆ ನಟ, ಪತ್ನಿ ಬಂಧನ!

    ಡೇಟಿಂಗ್ ವೆಬ್‍ಸೈಟ್‍ನಲ್ಲಿ ವಂಚಿಸುತ್ತಿದ್ದ ಕಿರುತೆರೆ ನಟ, ಪತ್ನಿ ಬಂಧನ!

    ಬೆಂಗಳೂರು: ಸಿಐಡಿ ಸೈಬರ್ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಡೇಟಿಂಗ್ ವೆಬ್‍ಸೈಟ್‍ನಲ್ಲಿ ವಂಚಿಸುತ್ತಿದ್ದ ಬೆಂಗಾಲಿ ಕಿರುತೆರೆ ನಟ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದಾರೆ.

    ಕುಶನ್ ಮಜುಮ್ದಾರ್ ಹಾಗೂ ಅರ್ಪಿತಾ ಮಜುಮ್ದಾರ್ ಬಂಧಿತ ಆರೋಪಿಗಳು. ಕುಶನ್ ಬೆಂಗಾಲಿಯ ಕುರುಕ್ಷೇತ್ರ ಸತಪಕ್ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದಾನೆ. ಇದೀಗ ಡೇಟಿಂಗ್ ವೆಬ್ ಸೈಟ್‍ನಲ್ಲಿ ನಕಲಿ ಖಾತೆ ತೆರೆದು ದಂಪರಿ ಬೆರೆಯವರನ್ನು ಪರಿಚಯ ಮಾಡುಕೊಂಡು ವಂಚಿಸಲು ಆರಂಭಿಸಿದ್ದರು.

    ಇದೇ ರೀತಿ ಬೆಂಗಳೂರಿನ ವ್ಯಕ್ತಿಯಿಂದ ಸುಮಾರು 60 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು. ಅಮ್ಮನಿಗೆ ಹೃದಯ ಸಂಬಂಧಿ ಕಾಯಿಲೆ ಎಂದು ಹೇಳಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು ಎಂಬುದಾಗಿ ತಿಳಿದುಬಂದಿದೆ.

    ಸುಮಾರು 10 ವರ್ಷದಿಂದ ಇದೆ ರೀತಿಯ ಕೃತ್ಯಗಳಲ್ಲಿ ದಂಪತಿ ತೊಡಗಿದ್ದು, ಈ ಕುರಿತು ಸಿಐಡಿಯಲ್ಲಿ ದೂರು ದಾಖಲಾಗಿತ್ತು. ಸದ್ಯ ಪೊಲೀಸರು ಇಬ್ಬರನ್ನು ಬಂಧಿಸಿ 44 ಸಾವಿರ ಹಣ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಹಣಕ್ಕಾಗಿ ಪತ್ನಿಗೆ ಕಿರುಕುಳ- ಮಾತು ಕೇಳದಿದ್ರೆ ಮಕ್ಳನ್ನೇ ರೇಪ್ ಮಾಡುವುದಾಗಿ ಸಹೋದರರಿಂದ ಬೆದರಿಕೆ

    ಹಣಕ್ಕಾಗಿ ಪತ್ನಿಗೆ ಕಿರುಕುಳ- ಮಾತು ಕೇಳದಿದ್ರೆ ಮಕ್ಳನ್ನೇ ರೇಪ್ ಮಾಡುವುದಾಗಿ ಸಹೋದರರಿಂದ ಬೆದರಿಕೆ

    ರಾಮನಗರ: ವಿಚ್ಚೇದನವಾದ್ರೂ ಪತಿಯೊಬ್ಬ ತನ್ನ ಮೊದಲ ಪತ್ನಿಯನ್ನು ಹಣಕ್ಕಾಗಿ ಕಿರುಕುಳ ನೀಡುವುದಲ್ಲದೆ ಒಟ್ಟಾಗಿ ಬಾಳದಿದ್ದರೆ ಜೀವ ಉಳಿಸಲ್ಲ ಎಂದು ಬೆದರಿಕೆ ಹಾಕುತ್ತಿರುವ ಘಟನೆ ರಾಮನಗರದಲ್ಲಿ ನಡೆದಿದೆ.

    ಗೀತಾ ಸಿಂಗ್ ಪತಿಯ ಕಿರುಕುಳಕ್ಕೆ ಬೇಸತ್ತ ಮಹಿಳೆ. ರಾಯಚೂರಿನ ಎಲ್‍ಬಿಎಸ್ ನಿವಾಸಿಯಾಗಿರುವ ಗೀತಾ ಅವರಿಗೆ ಐದು ಜನ ಮಕ್ಕಳು. ಸಫಾಯಿ ಕರ್ಮಚಾರಿ ಕೆಲಸ ಮಾಡಿಕೊಂಡು ಬದುಕುತ್ತಿರುವ ಗೀತಾ ಸಿಂಗ್, ನಾಲ್ಕು ಜನ ಹೆಣ್ಣುಮಕ್ಕಳು ಒಂದು ಗಂಡು ಮಗುವನ್ನ ಕರುಣಿಸಿರುವ ಪಾಪಿ ಪತಿ ರಾಜೇಶ್ ಸಿಂಗ್ ಗೆ ಡಿವೋರ್ಸ್ ನೀಡಿದ್ದಾರೆ. ಆದರೂ ಆತ ಹಣಕ್ಕಾಗಿ ಪತ್ನಿ ಮಕ್ಕಳನ್ನು ಪೀಡಿಸುತ್ತಿದ್ದಾನೆ.

    ಈಗಾಗಲೇ ಇನ್ನೂ ಇಬ್ಬರು ಪತ್ನಿಯರನ್ನು ಹೊಂದಿರುವ ರಾಜೇಶ್ ಸಿಂಗ್ ಏಪ್ರಿಲ್ 2018ರಲ್ಲಿ ವಿವಾಹ ವಿಚ್ಛೇದನವಾದರೂ ಜೊತೆಗೆ ಸಂಸಾರ ಮಾಡು ಎಂದು ಪೀಡಿಸುತ್ತಿದ್ದಾನೆ. ನಿತ್ಯ ಕುಡಿದು ಬಂದು ಹಣಕ್ಕಾಗಿ ಪತ್ನಿ ಮಕ್ಕಳನ್ನು ಹೊಡೆಯುತ್ತಿದ್ದಾನೆ. ಹೀಗಾಗಿ ನೊಂದ ಗೀತಾ ಸಿಂಗ್ ವಿವಾಹ ವಿಚ್ಚೇದನ ಪಡೆದಿದ್ದಾರೆ. ಆದರೆ ರಾಜೇಶ್ ಹಾಗೂ ಅವನ ಸಹೋದರರು ಮತ್ತು ಗೀತಾ ಸಿಂಗ್ ಸಂಬಂಧಿಕರು ಒಟ್ಟಾಗಿರುವಂತೆ ಕಿರುಕುಳ ನೀಡುತ್ತಿದ್ದಾರೆ.

    ಒಂದಾಗದಿದ್ದರೇ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನ ಅತ್ಯಾಚಾರ ಮಾಡುವುದಾಗಿ ಅಣ್ಣನ ಮಕ್ಕಳೇ ಬೆದರಿಸುತ್ತಿದ್ದಾರೆ ಎಂದು ಗೀತಾ ಸಿಂಗ್ ಆರೋಪಿಸಿದ್ದಾರೆ. ರಾಜೇಶ್ ಹಣಕ್ಕಾಗಿ ಕಿರುಕುಳ ನೀಡುವುದಲ್ಲದೆ ಒಟ್ಟಾಗಿ ಬಾಳದಿದ್ದರೆ ಜೀವ ಉಳಿಸಲ್ಲ ಎಂದು ಬೆದರಿಕೆ ಹಾಕುತ್ತಿದ್ದಾನೆ. ಹಣ ಹೆಂಡದ ಆಸೆಗೆ ಗೀತಾ ಸಹೋದರರು ಸಹ ಪಾಪಿ ಪತಿಯ ಮಾತನ್ನೇ ಕೇಳುತ್ತಿದ್ದಾರೆ. ಮಾತು ಕೇಳದಿದ್ದರೇ ತಂಗಿಯ ಮಕ್ಕಳನ್ನೇ ಅತ್ಯಾಚಾರ ಮಾಡುವುದಾಗಿ ಹೆದರಿಸುತ್ತಿದ್ದಾರೆ. ಇದರಿಂದ ನೊಂದ ಮಹಿಳೆ ಜಿಲ್ಲಾಧಿಕಾರಿ ಕಚೇರಿ ಎದುರು ವಿಷಕುಡಿದು ಸಾಯುವುದಾಗಿ ಹೇಳುತ್ತಿದ್ದಾರೆ.

    ಸಂಬಂಧಿಕರು ಏಕಾಏಕಿ ಮನೆಗೆ ನುಗ್ಗಿ ಗಲಾಟೆ ಮಾಡಿ ಕಿವಿಯೋಲೆಯನ್ನು ಕಿತ್ತುಕೊಂಡು ಹೋಗಿದ್ದಾರೆ. ಗೀತಾ ಸಿಂಗ್ ಸಹೋದರರ ಮಕ್ಕಳಾದ ರೋಹಿತ್, ರಾಹುಲ್, ವಿಶಾಲ್, ಸುಮಿತ್, ರಾಜೀವ್ ನಿಮ್ಮ ಮಕ್ಕಳಿಗೆ ಮದುವೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಬೆದರಿಸಿದ್ದಾರೆ. ಈಗಾಗಲೇ ಎಸ್‍ಪಿ, ಡಿಸಿ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೂ ಈ ತಾಯಿ ಮಕ್ಕಳು ದೂರು ನೀಡಿದ್ದಾರೆ. ಆದರೆ ಕೌಟುಂಬಿಕ ವಿಚಾರ ಎಂದು ಯಾರೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಕೆಲ ಅಧಿಕಾರಿಗಳು ಇನ್ನೂ ರೇಪ್ ಆಗಿಲ್ಲವಲ್ಲಾ ಎನ್ನುವ ಉಡಾಫೆ ಮಾತನಾಡಿದ್ದಾರೆ ಎಂದು ಗೀತಾ ಮಗಳು ತನ್ನ ಅಲವತ್ತುಕೊಂಡಿದ್ದಾರೆ.

    ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದರು ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ಹೀಗಾಗಿ ಯಾವ ಅಧಿಕಾರಿಗಳು ಸ್ಪಂದಿಸದಿದ್ದದೆ ಜಿಲ್ಲಾಧಿಕಾರಿ ಕಚೇರಿ ಎದುರು ಐದು ಮಕ್ಕಳೊಂದಿಗೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗೀತಾ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

  • ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ!

    ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ!

    ದಾವಣಗೆರೆ: ಗೃಹಿಣಿಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕಜ್ಜರಿ ಗ್ರಾಮದಲ್ಲಿ ಘಟನೆ ನಡೆದಿದೆ.

    ರೇಖಾ (22) ಮೃತ ಗೃಹಿಣಿಯಾಗಿದ್ದು, ಪತಿ ಆನಂದ ವರದಕ್ಷಿಣೆ ಕಿರುಕುಳಕ್ಕೆ ಆಕೆ ಬಲಿಯಾಗಿದ್ದಾರೆ ಅಂತ ರೇಖಾ ಪೋಷಕರು ಆರೋಪಿಸುತ್ತಿದ್ದಾರೆ.

    ಭಾನುವಾರ ರೇಖಾಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರೋ ಆರೋಪ ಕೇಳಿಬಂದಿತ್ತು. ಗಂಭೀರ ಗಾಯಾಳು ರೇಖಾ ಅವರನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇದೀಗ ಚಿಕಿತ್ಸೆ ಫಲಿಸದೆ ತಡ ರಾತ್ರಿ ರೇಖಾ ಮೃತಪಟ್ಟಿದ್ದಾರೆ.

    ಮೂಲತಃ ಶಿವಮೊಗ್ಗದ ರೇಖಾಳನ್ನು 3 ವರ್ಷದ ಹಿಂದೆ ಆನಂದ್ ಗೆ ಕೊಟ್ಟು ಮದುವೆ ಮಾಡಿದ್ದರು. ಬಳಿಕ ಆನಂದ್, ರೇಖಾ ಬಳಿ 2 ಲಕ್ಷ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದನು. ಇದೀಗ ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾನೆಂದು ರೇಖಾ ಪೋಷಕರು ಆರೋಪಿಸುತ್ತಿದ್ದಾರೆ.

    ಸದ್ಯ ಆನಂದ್ ಹಾಗೂ ಕುಟುಂಬದವರನ್ನು ವಶಕ್ಕೆ ಪಡೆದರುವ ಪೊಲೀಸರು, ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.