Tag: ಪತ್ನಿ

  • ಮೊದಲ ಪತ್ನಿಯನ್ನು ಬಿಟ್ಟು ಕಾಲೇಜು ಯುವತಿಯನ್ನು ಮದ್ವೆಯಾದ ಬಿಜೆಪಿ ಶಾಸಕ!

    ಮೊದಲ ಪತ್ನಿಯನ್ನು ಬಿಟ್ಟು ಕಾಲೇಜು ಯುವತಿಯನ್ನು ಮದ್ವೆಯಾದ ಬಿಜೆಪಿ ಶಾಸಕ!

    – ಬಿಜೆಪಿ ಶಿಸ್ತು ಸಮಿತಿಗೆ ಪತ್ನಿಯಿಂದ ದೂರು

    ಶ್ರೀನಗರ: ಜಮ್ಮು ಕಾಶ್ಮೀರ ಬಿಜೆಪಿ ಶಾಸಕರೊಬ್ಬರ ಪತ್ನಿ ತಮ್ಮ ಪತಿ ಕಾಲೇಜು ಯುವತಿಯೊಂದಿಗೆ ಮದುವೆಯಾಗಿರುವುದಾಗಿ ಆರೋಪ ಮಾಡಿ, ಬಿಜೆಪಿ ಶಿಸ್ತು ಸಮಿತಿಗೆ ದೂರು ನೀಡಿದ್ದಾರೆ.

    ಜಮ್ಮು ಜಿಲ್ಲೆಯ ಶಾಸಕ ಗಗನ್ ಭಗತ್ ವಿರುದ್ಧ ಪತ್ನಿ ಮೋನಿಕಾ ಶರ್ಮಾ ಈ ಆರೋಪ ಮಾಡಿದ್ದು, 19 ವರ್ಷದ ಕಾಲೇಜು ಯುವತಿಯೊಂದಿಗೆ ಮದುವೆಯಾಗಿ ಆಕೆಯೊಂದಿಗೆ ವಾಸಿಸುತ್ತಿದ್ದಾರೆ ಎಂದು ದೂರಿದ್ದಾರೆ.

    ಸದ್ಯ ಶಾಸಕ ಪತ್ನಿ ಆರೋಪದೊಂದಿಗೆ ಕಾಲೇಜು ಯುವತಿಯ ತಂದೆಯೂ ಸಹ ತಮ್ಮ ಮಗಳನ್ನು ಪಂಜಾಬ್ ಕಾಲೇಜಿನಿಂದ ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪಗಳನ್ನು ಯುವತಿ ಹಾಗೂ ಶಾಸಕ ಗಗನ ಭಗತ್ ನಿರಾಕರಿಸಿದ್ದು, ತಮ್ಮ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ತರಲು ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಅಂದಹಾಗೇ 13 ವರ್ಷಗಳ ಹಿಂದೆ ಶಾಸಕ ಗಗನ್ ಭಗತ್ ಹಾಗೂ ಮೋನಿಕಾ ಶರ್ಮಾ ಮದುವೆಯಾಗಿರುವುದಾಗಿ ತಿಳಿಸಿದ್ದು, ಸದ್ಯ ಶಾಸಕರ ವಿರುದ್ಧ ಪ್ರಧಾನಿ ಮೋದಿ ಸೇರಿದಂತೆ ಪಕ್ಷದ ಹಿರಿಯ ನಾಯಕರಿಗೆ ಶರ್ಮಾ ದೂರು ನೀಡಿದ್ದಾರೆ. ಅಲ್ಲದೇ ಈ ಹಿಂದೆ ತಮ್ಮ ದೈನಂದಿನ ಜೀವನ ನಿರ್ವಹಣೆಗಾಗಿ ಮಾಸಿಕ 1 ಲಕ್ಷ ರೂ. ಹಣ ನೀಡುವುದಾಗಿ ಗಗನ್ ಭಗತ್ ಹೇಳಿದ್ದರು. ಆದರೆ ಇದುವರೆಗೂ ಯಾವುದೇ ಹಣವನ್ನು ನೀಡಿಲ್ಲ. ಇದರಿಂದ ನನಗೆ ಹಾಗೂ ಮಕ್ಕಳಿಗೆ ತೀವ್ರ ಸಮಸ್ಯೆಯಾಗಿದೆ ಎಂದು ದೂರಿದ್ದಾರೆ.

    ಜಮ್ಮು ಕಾಶ್ಮೀರದ ಬಿಜೆಪಿ ಮಹಿಳಾ ಘಟಕದ ಕಾರ್ಯದರ್ಶಿಯಾಗಿರುವ ನಾನು ತನ್ನ ಕುಟುಂಬ ಒಳಿತಿಗಾಗಿ ಒಂದು ವರ್ಷದಿಂದ ಈ ಕುರಿತು ಮಾಹಿತಿ ಬಹಿರಂಗ ಪಡಿಸಿಲ್ಲ. ತನಗೆ 12 ವರ್ಷದ ಮಗ ಹಾಗೂ 4 ವರ್ಷದ ಮಗಳು ಇದ್ದಾರೆ. ಪತಿ ವಿರುದ್ಧ ಆರೋಪದ ಕುರಿತು ಸಾಕ್ಷಿ ನೀಡಲು ತಮ್ಮ ಬಳಿ ಆಧಾರಗಳು ಇದ್ದು, ಅವುಗಳನ್ನು ಬಿಜೆಪಿ ಶಿಸ್ತು ಸಮಿತಿಗೆ ನೀಡಿದ್ದಾಗಿ ಹೇಳಿದ್ದಾರೆ. ಅಲ್ಲದೇ ಕಳೆದ ಎರಡು ದಿನಗಳ ಹಿಂದೆ ಈ ಆಧಾರಗಳನ್ನು ಸಮಿತಿಗೆ ನೀಡದಿರಲು ಗಗನ್ ಭಗತ್ ತಮ್ಮ ಬಳಿ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

    ತಮ್ಮ ಪತಿ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು, ಅವರು ಇಂತಹ ಕೆಲಸ ಮಾಡಿ ಸಮಾಜಕ್ಕೆ ಯಾವ ಸಂದೇಶ ನೀಡುತ್ತಾರೆ. ಆದರೆ ಅವರು ಮದುವೆಯಾಗುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಅದನ್ನು ಬಹಿರಂಗ ಪಡಿಸಲಿ ಎಂದು ತಿಳಿಸಿದ್ದಾರೆ.

  • ಪತ್ನಿಗೆ ಸೆಲ್ಫಿ ವಿಡಿಯೋ ಕಳುಹಿಸಿ ಪತಿ ನಾಪತ್ತೆ!

    ಪತ್ನಿಗೆ ಸೆಲ್ಫಿ ವಿಡಿಯೋ ಕಳುಹಿಸಿ ಪತಿ ನಾಪತ್ತೆ!

    ಮೈಸೂರು: ಪತ್ನಿಗೆ ಸೆಲ್ಫಿ ವಿಡಿಯೋ ಕಳುಹಿಸಿ ಪತಿ ನಾಪತ್ತೆ ಆಗಿರುವ ಪ್ರಕರಣ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

    ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಚಿನ್ನದ ವ್ಯಾಪಾರಿ ಸುಖಾಲಾಲ್ ನಾಪತ್ತೆಯಾದ ವ್ಯಕ್ತಿ. ಜುಲೈ 8ರಂದು ತನ್ನ ಪತ್ನಿ ಅನಿತಾ ಮೊಬೈಲ್ ಗೆ ಸೆಲ್ಫಿ ವಿಡಿಯೋ ಕಳುಹಿಸಿರುವ ಸುಖಾಲಾಲ್, ಬದುಕು ಬೇಸರವಾಗಿದೆ ಎಂದು ಹೇಳಿಕೊಂಡಿದ್ದಾರೆ.

    ಹಣಕಾಸಿನ ವಹಿವಾಟಿನಲ್ಲಿ ನನಗೆ ಮೋಸ ಆಗಿದೆ. ಸ್ವಾಮಿ ಮಾಸ್ಟರ್ ಎಂಬವರು ನಾನು ಕೊಡಬೇಕಾಗಿದ್ದ 11 ಲಕ್ಷ ಹಣಕ್ಕೆ ಬದಲಾಗಿ, ಮನೆ ಗೋಡೌನ್ ನನ್ನು ಅವರ ಹೆಸರಿಗೆ ಬರೆಸಿಕೊಂಡು ಬಾಕಿ ಹಣ ನೀಡದೆ ಮೋಸ ಮಾಡಿದ್ದಾರೆ. ಇದರಿಂದ ನನಗೆ ಬದುಕು ಬೇಸರವಾಗಿ ದೂರ ಬಂದಿದ್ದೇನೆ ಎಂದು ವಿಡಿಯೋದಲ್ಲಿ ವಿವರಿಸಿದ್ದಾರೆ.

    ಪಿರಿಯಾಪಟ್ಟಣದ ರಾವಂದೂರು ನಿವಾಸಿಯಾಗಿರುವ ಸುಖಾಲಾಲ್ ಮೈಸೂರಿನಲ್ಲಿ ನ್ಯಾಯಾಲಯಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಮೈಸೂರಿಗೆ ಬಂದು ಈ ವೀಡಿಯೋ ಮಾಡಿ ಪತ್ನಿಗೆ ಕಳುಹಿಸಿ ನಾಪತ್ತೆಯಾಗಿದ್ದಾರೆ. ಪರ್ವಿನ್ ಎಂಬ ಹೆಸರಿನಲ್ಲಿ ಟೆಕ್ಸ್ ಟೈಲ್, ಆಭರಣ ಅಂಗಡಿಯನ್ನು ಸುಖಾಲಾಲ್ ನಡೆಸುತ್ತಿದ್ದಾರೆ.

    ಈ ಸಂಬಂಧ ಸುಖಲಾಲ್ ಪತ್ನಿ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಮದ್ವೆಯಾದ ಒಂದೇ ತಿಂಗಳಿಗೆ ಪತಿ ಆತ್ಮಹತ್ಯೆ- ಮನನೊಂದು ಪತ್ನಿಯು ನೇಣಿಗೆ ಶರಣು!

    ಮದ್ವೆಯಾದ ಒಂದೇ ತಿಂಗಳಿಗೆ ಪತಿ ಆತ್ಮಹತ್ಯೆ- ಮನನೊಂದು ಪತ್ನಿಯು ನೇಣಿಗೆ ಶರಣು!

    ಚಿಕ್ಕಮಗಳೂರು: ಮದುವೆಯಾದ ಒಂದೇ ತಿಂಗಳಿಗೆ ಪತಿ ಆತ್ಮಹತ್ಯೆ ಮಾಡಿಕೊಂಡ ಎಂದು ಒಂದೇ ತಿಂಗಳಿಗೆ ಪತ್ನಿಯೂ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಚಿಕ್ಕಮಗಳೂರಿನ ಕಂಬೀಹಳ್ಳಿಯಲ್ಲಿ ನಡೆದಿದೆ.

    ಅನಿಲ್ ಹಾಗೂ ಚಾಂದಿನಿ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಚಿಕ್ಕಮಗಳೂರು ಟ್ರಾಫಿಕ್ ಸ್ಟೇಷನ್‍ನಲ್ಲಿ ಪೇದೆಯಾಗಿದ್ದ ಅನಿಲ್ ಎಂಬವರು ಚಾಂದಿನಿ ಎಂಬ ಯುವತಿಯನ್ನು ಎರಡು ತಿಂಗಳ ಹಿಂದೆ ವಿವಾಹವಾಗಿದ್ದರು.

    ಕೌಟುಂಬಿಕ ಕಲಹದ ಹಿನ್ನೆಲೆ ಒಂದು ತಿಂಗಳ ಹಿಂದೆ ಅನಿಲ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ ಬುಧವಾರ ಅನಿಲ್ ಪತ್ನಿ ಚಾಂದಿನಿ ಕೂಡ ಪತಿ ಆತ್ಮಹತ್ಯೆ ಮಾಡಿಕೊಂಡಿದರಿಂದ ಮನನೊಂದು ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸದ್ಯ ಈ ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಅಪಘಾತವಾಗಿ ವ್ಯಕ್ತಿ ಸಾವು-ಬದುಕಿನ ಹೋರಾಟ- ಪತಿಯ ರಕ್ಷಣೆಗೆ ಗೋಗರೆದ್ರೂ ಚಿತ್ರೀಕರಿಸುತ್ತಾ ನಿಂತ ಜನ!

    ಅಪಘಾತವಾಗಿ ವ್ಯಕ್ತಿ ಸಾವು-ಬದುಕಿನ ಹೋರಾಟ- ಪತಿಯ ರಕ್ಷಣೆಗೆ ಗೋಗರೆದ್ರೂ ಚಿತ್ರೀಕರಿಸುತ್ತಾ ನಿಂತ ಜನ!

    – ಚಿಕ್ಕಬಳ್ಳಾಪುರದಲ್ಲಿ ಅಮಾನವೀಯ

    ಚಿಕ್ಕಬಳ್ಳಾಪುರ: ಆಟೋ ಮುಂದಿನ ಚಕ್ರ ಕಳಚಿದ ಪರಿಣಾಮ ಚಾಲಕನೋರ್ವ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿದ್ದು, ಅತನ ಪತ್ನಿ ಪತಿಯ ರಕ್ಷಣೆಗೆ ಪರಿ ಪರಿಯಾಗಿ ಬೇಡಿಕೊಂಡಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮೇಳ್ಯಾ ಗ್ರಾಮದ ಬಳಿ ನಡೆದಿದೆ.

    ಮಹಮದ್ ಖಾನ್(51) ಎಂಬಾತ ತನ್ನ ಆಟೋ ಮೂಲಕ ಪತ್ನಿ ಜೊತೆ ಗೌರಿಬಿದನೂರಿನಿಂದ ಸ್ವಗ್ರಾಮ ಮೇಳ್ಯಾಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಆಟೋ ಮುಂದಿನ ಚಕ್ರ ಕಳಚಿಕೊಂಡ ಪರಿಣಾಮ ಚಾಲಕ ಮೊಹಮ್ಮದ್ ಖಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ.

    ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿದ್ದ ಪತಿಯನ್ನು ಕಂಡ ಪತ್ನಿ ಅಲ್ಲಿದ್ದವರ ಬಳಿ ಸಹಾಯ ಮಾಡಿ, ತಮ್ಮ ಸಂಬಂಧಿಕರ ವಿಷಯ ತಿಳಿಸಿ ಅಂತ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಅಲ್ಲಾ ನಾನು ಏನು ಮಾಡಲಿ ಈಗ ಅಂತ ತನ್ನ ಅಸಾಹಯಕತೆಯನ್ನು ತೋಡಿಕೊಂಡಿದ್ದಾರೆ. ಕೊನೆಗೆ ಹರಸಾಹಸ ಪಟ್ಟು ಗಂಡನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೆ ಮೊಹಮ್ಮದ್ ಖಾನ್ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಪತಿಯ ರಕ್ಷಣೆಗೆ ಪತ್ನಿ ಗೋಗರೆಯುತಿರೋದನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ರಕ್ಷಣೆಗೆ ಮುಂದಾಗದೆ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿರುವುದು ಮಾನವೀಯತೆ ಮರೆಯಾಯಿತಾ ಅನ್ನೋ ಪ್ರಶ್ನೆ ಉದ್ಭವವಾಗುವಂತೆ ಮಾಡಿದೆ.

    ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡದಿದೆ.

  • ಹಸೆಮಣೆ ಏರಿದ್ದ ಪತಿಯನ್ನು ಮಂಟಪದಿಂದ ಎಳೆದು ತಂದ ಮೊದಲ ಪತ್ನಿ!

    ಹಸೆಮಣೆ ಏರಿದ್ದ ಪತಿಯನ್ನು ಮಂಟಪದಿಂದ ಎಳೆದು ತಂದ ಮೊದಲ ಪತ್ನಿ!

    ಮೈಸೂರು: ಕದ್ದುಮುಚ್ಚಿ ಎರಡನೇ ಮದ್ವೆ ಆಗೋಕೆ ಹಸೆಮಣೆ ಏರಿದ್ದ ಗಂಡನನ್ನು ಮೊದಲ ಹೆಂಡ್ತಿಯೇ ಮಂಟಪದಿಂದಲೇ ಎಳೆದು ತಂದಿದ್ದಾರೆ.

    ಮೈಸೂರಿನ ಯೋಗಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯಲ್ಲಿರುವ 40 ವರ್ಷದ ಹೆಡ್ ಕಾನ್ಸ್ ಸ್ಟೇಬಲ್ ರಾಜಾರಿಗೆ ಸವಿತಾ ಎಂಬವರೊಂದಿಗೆ ಮದುವೆ ಆಗಿ 18 ವರ್ಷ ಆಗಿದ್ದು, ಇಬ್ಬರು ಮಕ್ಕಳೂ ಇದ್ದಾರೆ. ರಾಜಾ ಪೊಲೀಸ್ ಕೆಲಸದೊಂದಿಗೆ ಬಡ್ಡಿ ವಹಿವಾಟು ಕೂಡ ನಡೆಸುತ್ತಿದ್ದಾನೆ ಎಂದು ಹೇಳಲಾಗಿದೆ.

    ಇಷ್ಟಾದರೂ ಚಪಲ ಬಿಡದ ಹುಣಸೂರು ತಾಲೂಕಿನ ಹೊಸಹಳ್ಳಿಯ ಚನ್ನಿಗರಾಯ ಫೇಸ್‍ಬುಕ್‍ನಲ್ಲಿ ಪರಿಚಯವಾದ ಮಹಿಳೆಯೊಂದಿಗೆ ಮದ್ವೆಗೆ ಮುಂದಾಗಿದ್ದನು. ನನಗೆ ಗೊತ್ತಾಗದಂತೆ ಎಲ್‍ಐಸಿ ಬಾಂಡ್‍ಗೆ ಅಂತ ಹೇಳಿ ಡೈವೋರ್ಸ್ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾನೆ ಅಂತ ಸವಿತಾ ಆರೋಪಿಸಿದ್ದಾರೆ.

  • ಪತಿಯ ಘನಘೋರ ಕೃತ್ಯ ತಡೆದು 10ರ ಬಾಲಕಿಯ ಮಾನ ಉಳಿಸಿದ ಪತ್ನಿ!

    ಪತಿಯ ಘನಘೋರ ಕೃತ್ಯ ತಡೆದು 10ರ ಬಾಲಕಿಯ ಮಾನ ಉಳಿಸಿದ ಪತ್ನಿ!

    ಭೋಪಾಲ್: ಅಪ್ತಾಪ್ತ ಬಾಲಕಿಯ ಡ್ರೆಸ್ ಬಿಚ್ಚಿ ಆಕೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ಪತಿಯ ಕೃತ್ಯವನ್ನು ಪತ್ನಿಯೇ ತಡೆದ ಘಟನೆಯೊಂದು ಮಧ್ಯಪ್ರದೇಶದ ಬಲಘಾಟ್ ಜಿಲ್ಲೆಯ ಬಿರ್ಸಾ ಎಂಬ ಪ್ರದೇಶದಲ್ಲಿ ನಡೆದಿದೆ.

    25 ವರ್ಷದ ಸಕು ನೇತಮ್ ಎಂಬಾತ 5ನೇ ತರಗತಿ ಓದುತ್ತಿರುವ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ.

    ಏನಿದು ಘಟನೆ:
    ಶುಕ್ರವಾರ ಸಂಜೆ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಸಕು ಬಾಲಕಿಯ ಮನೆಗೆ ನುಗ್ಗಿದ್ದಾನೆ. ಅಲ್ಲದೇ ಆಕೆಯ ಡ್ರೆಸ್ ಬಿಚ್ಚಿ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಸಕು ಬಾಲಕಿ ಮನೆಗೆ ಹೋಗುತ್ತಿದ್ದಂತೆಯೇ ಪತ್ನಿ ಆತನನ್ನು ಹಿಂಬಾಲಿಸಿದ್ದಾರೆ. ಅಲ್ಲದೇ ಆತ ಬಾಲಕಿಯ ಡ್ರೆಸ್ ಬಿಚ್ಚುತ್ತಿರುವುದನ್ನು ಕಂಡ ಪತ್ನಿ ಜೋರಾಗಿ ಕಿರುಚಿಕೊಂಡಿದ್ದಾರೆ ಅಂತ ಬಿರ್ಸಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನಿಲೇಶ್ ಪಾರ್ಟೆಟಿ ಹೇಳಿದ್ದಾರೆ.

    ಆರೋಪಿ ಬಾಲಕಿಯ ಕುಟುಂಬಕ್ಕೆ ಗೊತ್ತಿರುವವನೇ ಆಗಿದ್ದಾನೆ. ಘಟನೆ ಬೆಳಕಿಗೆ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಆರೋಪಿ ಪರಾರಿಯಾಗಿದ್ದಾನೆ. ಸದ್ಯ ಆತನಿಗಾಗಿ ಬಲೆ ಬೀಸಲಾಗಿದೆ ಅಂತ ಅವರು ತಿಳಿಸಿದ್ದಾರೆ.

    ಸದ್ಯ ಪ್ರಕರಣ ಸಂಬಂಧ ಬಾಲಕಿಯ ಕುಟುಂಬ ದೂರು ದಾಖಲಿಸಿದ್ದು, ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಕೇವಲ 20 ರೂ. ಗಾಗಿ ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದ ಪಾಪಿ ಪತಿ!

    ಕೇವಲ 20 ರೂ. ಗಾಗಿ ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದ ಪಾಪಿ ಪತಿ!

    ಬೆಂಗಳೂರು: ಪತಿಯೇ ತನ್ನ ಪತ್ನಿಯ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯದ ಹೆಸರಘಟ್ಟ ರಸ್ತೆಯ ಚಿಕ್ಕಸಂದ್ರದಲ್ಲಿ ನಡೆದಿರುವ ಬಗ್ಗೆ ಇದೀಗ ಬೆಳಕಿಗೆ ಬಂದಿದೆ. ಕಸ್ತೂರಿ(35) ಕೊಲೆಯಾದ ದುರ್ದೈವಿ. ಮಧ್ಯಪ್ರದೇಶ ಮೂಲದ ರಾಜಾಸಿಂಗ್ ತನ್ನ ಪತ್ನಿ ಕಸ್ತೂರಿಯನ್ನು ಕೊಲೆಗೈದಿದ್ದಾನೆ.

    ಕುಡಿಯಲು 20 ರೂಪಾಯಿ ನೀಡಲಿಲ್ಲ ಎಂದು ಕೇವಲ 20 ರೂಪಾಯಿಯ ಆಸೆಗೆ ಕೊಲೆ ನಡೆದಿರುವುದು ದುರಾದೃಷ್ಟಕರವಾಗಿದೆ. ಮಧ್ಯಪ್ರದೇಶದಿಂದ 10 ದಿನಗಳ ಹಿಂದೆಯಷ್ಟೇ ಕಟ್ಟಡ ನಿರ್ಮಾಣ ಮಾಡುವ ಕೆಲಸಕ್ಕಾಗಿ ಬೆಂಗಳೂರಿಗೆ ದಂಪತಿ ಆಗಮಿಸಿದ್ದರು.

    ಸದ್ಯ ಆರೋಪಿ ರಾಜಾಸಿಂಗ್ ನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಗಂಡನನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ನೇಣಿಗೆ ಹಾಕಿದ್ಳು!

    ಗಂಡನನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ನೇಣಿಗೆ ಹಾಕಿದ್ಳು!

    ಕೋಲಾರ: ಹೆಂಡತಿಯೇ ಗಂಡನನ್ನು ಹತ್ಯೆ ಮಾಡಿ ನಂತರ ನೇಣು ಹಾಕಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಜುಂಜನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಜುಂಜನಹಳ್ಳಿ ಗ್ರಾಮದ ವೆಂಕಟೇಶಪ್ಪ (60) ಕೊಲೆಯಾದ ವ್ಯಕ್ತಿ. ಪತ್ನಿ ಭಾಗ್ಯಮ್ಮ ಗಂಡನ ತಲೆಗೆ ಹೊಡೆದು ಕೊಲೆ ಮಾಡಿ ಪ್ರಕರಣ ಮುಚ್ಚಿ ಹಾಕುವ ಸಲುವಾಗಿ ಗಂಡನನ್ನು ನೇಣು ಹಾಕಿಕೊಂಡಿರುವಂತೆ ಸೃಷ್ಟಿ ಮಾಡಿದ್ದಾಳೆ. ಇಂದು ಬೆಳಗ್ಗೆ ತನ್ನ ಗಂಡ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರಿಗೆ ನಂಬಿಸಿದ್ದಾಳೆ.

    ವಿಷಯ ತಿಳಿದ ಬಂಗಾರಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ತಲೆಗೆ ಹೊಡೆದು ಕೊಲೆ ಮಾಡಿ ನಂತರ ನೇಣು ಹಾಕಿದ್ದಾರೆ ಎನ್ನುವುದು ಪೋಲೀಸರ ಪ್ರಾಥಮಿಕ ತನಿಖೆಯಿಂದ ಸಾಬೀತುಗೊಂಡಿದೆ. ಹೀಗಾಗಿ ಪತ್ನಿ ಭಾಗ್ಯಮ್ಮಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಘಟನೆ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತನ್ನ ಸಾವಿಗೆ ಪತ್ನಿಯೇ ಕಾರಣವೆಂದು ಬರೆದಿಟ್ಟು ಪತಿ ಆತ್ಮಹತ್ಯೆ!

    ತನ್ನ ಸಾವಿಗೆ ಪತ್ನಿಯೇ ಕಾರಣವೆಂದು ಬರೆದಿಟ್ಟು ಪತಿ ಆತ್ಮಹತ್ಯೆ!

    ಹಾಸನ: ತನ್ನ ಸಾವಿಗೆ ಪತ್ನಿಯೇ ಕಾರಣವೆಂದು ಬರೆದಿಟ್ಟು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ತಾಲೂಕಿನ ಮರ್ಕುಲಿ ಗ್ರಾಮದಲ್ಲಿ ನಡೆದಿದೆ.

    ರಾಘವೇಂದ್ರ(45) ಆತ್ಮಹತ್ಯೆ ಮಾಡಿಕೊಂಡ ಪತಿ. ನನ್ನ ಸಾವಿಗೆ ನನ್ನ ಹೆಂಡತಿಯೇ ಕಾರಣ ಎಂದು ಬರೆದು ಸಹಿ ಮಾಡಿ ವಿಷ ಸೇವಿಸಿದ್ದಾರೆ. ತೀವ್ರ ಅಸ್ವಸ್ಥರಾದ ರಾಘವೇಂದ್ರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಘವೇಂದ್ರ ಹಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಹಲವು ವರ್ಷಗಳಿಂದ ಪತಿ-ಪತ್ನಿ ನಡುವೆ ಕೌಟುಂಬಿಕ ಕಲಹ ಆರೋಪ ಕೇಳಿ ಬರುತ್ತಿದೆ. ಸದ್ಯ ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ನಿ ಆಶಾ ವಿರುದ್ದ ಎಫ್ಐಆರ್ ದಾಖಲಾಗಿದೆ.

  • ಪ್ರಿಯಕರನಿಗಾಗಿ ಪತಿಯನ್ನು ಬಿಟ್ಟು ಮೈಸೂರಿಗೆ ಓಡಿಹೋದ ಗೃಹಿಣಿ!

    ಪ್ರಿಯಕರನಿಗಾಗಿ ಪತಿಯನ್ನು ಬಿಟ್ಟು ಮೈಸೂರಿಗೆ ಓಡಿಹೋದ ಗೃಹಿಣಿ!

    ಮೈಸೂರು: ಪ್ರಿಯಕರನಿಗಾಗಿ ಗೃಹಿಣಿಯೊಬ್ಬಳು ಕಟ್ಟಿಕೊಂಡ ಗಂಡನನ್ನೇ ಬಿಟ್ಟು ಬಂದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ರೈಲ್ವೆ ಕ್ವಾಟ್ರಸ್ ನ ನಿವಾಸಿಯಾಗಿದ್ದ ಸ್ವಾತಿ ಪ್ರಿಯಕರನಿಗಾಗಿ ಪತಿಯನ್ನು ಬಿಟ್ಟು ಬೆಂಗಳೂರಿನಿಂದ ಮೈಸೂರಿಗೆ ಬಂದಿದ್ದಾರೆ. ಅಶೋಕಪುರಂ ನಿವಾಸಿ ರಕ್ಷಿತ್ ಎಂಬಾತನನ್ನು ಕಳೆದ 9 ವರ್ಷಗಳಿಂದ ಸ್ವಾತಿ ಪ್ರೀತಿ ಮಾಡ್ತಿದ್ದರು.

    ಹುಡುಗನ ಜಾತಿ ಬೇರೆ ಅಂತಾ ಸ್ವಾತಿ ಮನೆಯವರು ಆಕೆಗೆ ಕಳೆದ ಏಪ್ರಿಲ್ 24ರಂದು ಬೆಂಗಳೂರಿನ ಕೆಜಿ ಹಳ್ಳಿ ನಿವಾಸಿಯಾಗಿರುವ ಪ್ರತಾಪ್ ಎಂಬುವರೊಂದಿಗೆ ಮದುವೆ ಮಾಡಿದ್ದರು. ಆದರೆ ಪತಿಗಿಂತ ಪ್ರಿಯಕರನ ಮೇಲೆಯೇ ಸ್ವಾತಿಗೆ ಪ್ರೀತಿ ಹೆಚ್ಚಾಗಿದ್ದು, ಆತನನ್ನು ಸಂಪರ್ಕಿಸಿ ಬೆಂಗಳೂರಿನಿಂದ ಮೈಸೂರಿಗೆ ಆತನ ಜೊತೆ ಬಂದಿದ್ದಾರೆ.

    ಇನ್ನೂ ಪತಿಗೆ ಕೈಕೊಟ್ಟು ಲವರ್ ಜೊತೆ ಓಡಿ ಬಂದಿರುವ ಸ್ವಾತಿ ವಿರುದ್ಧ ಇದೀಗ ಪ್ರತಾಪ್ ಕುಟುಂಬಸ್ಥರು ಮೈಸೂರಿನ ಅಶೋಕಪುರಂ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ವಾತಿ ನಮ್ಮ ಬಳಿ ಇದ್ದ 3 ಕೆಜಿ ಚಿನ್ನವನ್ನು ಕದ್ದಿದ್ದಾಳೆ. ಹೀಗಾಗಿ ಈಕೆಯನ್ನು ಪತ್ತೆ ಹಚ್ಚಿ ಆಕೆಯನ್ನು ನಮಗೆ ಒಪ್ಪಿಸಿ ಎಂದು ಪತ್ನಿ ವಿರುದ್ಧ ಪತಿ ಪ್ರತಾಪ್ ದೂರು ನೀಡಿದ್ದಾರೆ.

    ಈ ಕಳ್ಳತನ ಆರೋಪವನ್ನು ತಳ್ಳಿ ಹಾಕಿರುವ ಸ್ವಾತಿ ಅದು ನನ್ನ ಚಿನ್ನ, ಅದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ನನ್ನ ಹತ್ತಿರ ಇವೆ ಅಂತಾ ಹೇಳ್ತಿದ್ದಾರೆ. ಇನ್ನೂ ರಕ್ಷಿತ್ ಮತ್ತು ಸ್ವಾತಿ ನಾವಿಬ್ಬರು ಒಂದಾಗಬೇಕು, ಒಂದಾಗಿ ಬದುಕುಬೇಕು ಅಂತಿದ್ದಾರೆ. ಇಲ್ಲವಾದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ನಮ್ಮಿಬ್ಬರಿಗೆ ಪೊಲೀಸರ ರಕ್ಷಣೆ ಬೇಕೆಂದು ಆಗ್ರಹಿಸಿ ಅಶೋಕ ಪುರಂ ಪೊಲೀಸ್ ಠಾಣೆಯಲ್ಲಿ ಕೂತಿದ್ದಾರೆ.