Tag: ಪತ್ನಿ

  • ಮೋಕ್ಷಕ್ಕಾಗಿ ಕಪಿಲಾ ನದಿಗೆ ಹಾರಿದ ಬೆಂಗ್ಳೂರು ದಂಪತಿ!

    ಮೋಕ್ಷಕ್ಕಾಗಿ ಕಪಿಲಾ ನದಿಗೆ ಹಾರಿದ ಬೆಂಗ್ಳೂರು ದಂಪತಿ!

    ಮೈಸೂರು: ಕಪಿಲಾ ನದಿಗೆ ಹಾರಿ ಪ್ರಾಣ ಬಿಟ್ಟರೆ ಮೋಕ್ಷ ಸಿಗುತ್ತದೆ ಎಂಬ ಮೂಢನಂಬಿಕೆಯಿಂದ ಬೆಂಗಳೂರು ಮೂಲದ ದಂಪತಿಗಳು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

    ಬೆಂಗಳೂರಿನ ಹೆಬ್ಬಾಳ ನಿವಾಸಿಗಳಾದ ನಾಗರಾಜು ಮತ್ತು ಕಲಾವತಿ ಎಂಬ ದಂಪತಿ ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದವರು. ನದಿಗೆ ಹಾರಿದ ದಂಪತಿಗಳಲ್ಲಿ ಪತಿ ನಾಗರಾಜು ಸಾವನ್ನಪ್ಪಿದ್ದರೆ, ಪತ್ನಿ ಕಲಾವತಿ ಬದುಕುಳಿದು ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಗೆ ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಪ್ರತಿ ವರ್ಷ ಭಕ್ತರ ಸಂಖ್ಯೆ ಜಾಸ್ತಿಯಾಗಿ ತಿಂಗಳಿಗೆ ಕೋಟಿ ಹಣವನ್ನು ಗಳಿಸುತ್ತಿದೆ. ಈ ಮೂಲಕ ರಾಜ್ಯದ ಅತ್ಯಂತ ಶ್ರೀಮಂತರ ದೇವಾಲಯಗಳಲ್ಲಿ ನಂಜನಗೂಡಿನ ನಂಜುಂಡನ ಸನ್ನಿಧಿ ಸಹ ಒಂದಾಗಿದೆ.

    ಇಂತಹ ಪವಿತ್ರ ಸ್ಥಳಕ್ಕೆ ಆಗಮಿಸುವ ಕೆಲವು ಭಕ್ತರು ಕಪಿಲಾ ನದಿಯಲ್ಲಿ ಜೀವ ಬಿಟ್ಟರೆ ಮೋಕ್ಷ ಸಿಗುತ್ತದೆ ಎಂಬ ಮೂಢನಂಬಿಕೆಯಿಂದ ಹೀಗೆ ಜೀವ ಕಳೆದು ಕೊಳ್ಳುತ್ತಿದ್ದಾರೆ. ಈಗ ಈ ಸಾಲಿಗೆ ಬೆಂಗಳೂರು ಮೂಲದ ಹೆಬ್ಬಾಳ ನಿವಾಸಿಗಳಾದ ನಾಗರಾಜು ಮತ್ತು ಕಲಾವತಿ ವೃದ್ಧ ದಂಪತಿನೂ ಸೇರ್ಪಡೆ ಆಗಿದ್ದಾರೆ.

    ಕಾಲು ಜಾರಿ ನದಿಗೆ ಬಿದ್ದಿದ್ದೇವೆ ಎಂದು ಪ್ರಾಣಾಪಾಯದಿಂದ ಪಾರಾದ ಕಲಾವತಿ ಹೇಳಿದ್ದಾರೆ. ನಂಜನಗೂಡು ನಂಜುಂಡೇಶ್ವರನ ದರ್ಶನಕ್ಕಾಗಿ ಬೆಂಗಳೂರಿನಿಂದ ಬಂದಿದ್ದೆವು. ದೇವರ ದರ್ಶನ ಮುಗಿಸಿ ನದಿ ಹತ್ತಿರ ಬಂದ್ದೆವು. ಪತಿಯನ್ನು ಹಿಡಿದುಕೊಳ್ಳಲು ಹೋದಾಗ ನಾನೂ ನೀರಿಗೆ ಬಿದ್ದೆ ಎಂದು ಪೊಲೀಸರ ಮುಂದೆ ಕಲಾವತಿ ಹೇಳಿಕೆ ನೀಡಿದ್ದಾರೆ.

    ಸದ್ಯ ಈ ಬಗ್ಗೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿ, ಪ್ರಿಯಕರನ ಕಿರುಕುಳದಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆಗೆ ಯತ್ನ!

    ಪತ್ನಿ, ಪ್ರಿಯಕರನ ಕಿರುಕುಳದಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆಗೆ ಯತ್ನ!

    ಹಾಸನ: ಪತ್ನಿಯ ಪ್ರಿಯಕರ ಹಾಗೂ ಇತರರು ನೀಡಿದ ಕಿರುಕುಳದಿಂದ ಮನನೊಂದ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆ ಶಾಂತಿಗ್ರಾಮದಲ್ಲಿ ನಡೆದಿದೆ.

    ಹರೀಶ್ ವಿಷ ಸೇವಿಸಿ ಆತ್ಮಹತ್ಯೆಕ್ಕೆ ಯತ್ನಿಸಿದ ವ್ಯಕ್ತಿ. ಕಳೆನಾಶಕ ಸೇವಿಸಿರುವ ಹರೀಶ್ ಸ್ಥಿತಿ ಚಿಂತಾಜನಕವಾಗಿದ್ದು, ಹಾಸನ ಜಿಲ್ಲಾಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅರ್ಪಿತಾಗೆ ಇಬ್ಬರು ಮುದ್ದಾದ ಮಕ್ಕಳಿದ್ದರೂ, ಗಂಡನನ್ನು ಬಿಟ್ಟು ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎನ್ನಲಾಗಿದೆ. ಲವರ್ ಹಾಗೂ ಕೆಲ ವಕೀಲರ ಮೂಲಕ ವಿಚ್ಛೇದನ ನೀಡು ಇಲ್ಲ ಅಂದ್ರೆ ಸುಳ್ಳು ಕೇಸು ದಾಖಲು ಮಾಡಿಸುತ್ತೇವೆ ಎಂದೆಲ್ಲಾ ಟಾರ್ಚರ್ ನೀಡಿದ್ದೇ ಹರೀಶ್ ವಿಷ ಕುಡಿಯಲು ಕಾರಣ ಎಂದು ಸಂಬಂಧಿಕರು ದೂರಿದ್ದಾರೆ.

    ಹರೀಶ್ ವಿಷ ಕುಡಿದು ಸಾಯಲಾಗದೆ, ಬದುಕಲಾಗದೇ ನರಳಾಡುತ್ತಿದ್ದಾರೆ. ಹರೀಶ್ ಮತ್ತು ಅರ್ಪಿತಾಗೂ 5 ವರ್ಷಗಳ ಹಿಂದೆ ಮದುವೆಯಾಗಿತ್ತು. ಇವರಿಗೆ ಮುದ್ದಾದ ಇಬ್ಬರು ಮಕ್ಕಳಿದ್ದರೂ, ಈಗ ವರ್ಷದ ಹಿಂದೆ ತಮ್ಮ ಮನೆಗೆ ಬಂದ ಚಾಲಕ ಮಲ್ಲಿಕಾರ್ಜುನ ಎಂಬಾತನ ಬಲೆಗೆ ಅರ್ಪಿತಾ ಬಿದ್ದಳು. ಆರಂಭದ ಪರಿಚಯ ಕ್ರಮೇಣ ಅಕ್ರಮ ಸಂಬಂಧಕ್ಕೆ ತಿರುಗಿದೆ.

    ಕೆಲ ತಿಂಗಳ ಹಿಂದೆ ಅರ್ಪಿತಾ ತನ್ನ ಗಂಡನನ್ನು ತೊರೆದು ಹೋಗಿದಳು. ನಂತರ ಪ್ರಿಯಕರ ಮಲ್ಲಿಕಾರ್ಜುನ್ ಹಾಗೂ ಕೆಲವು ಲಾಯರ್ ಗಳ ಮೂಲಕ ಗಂಡನಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಮಲ್ಲಿಕಾರ್ಜುನ್, ಅರ್ಪಿತಾಳೊಂದಿಗೆ ನಡೆಸಿರೋ ಎಲ್ಲಾ ಸಂಭಾಷಣೆಗಳನ್ನು ಹರೀಶ್‍ನಿಗೆ ಕಳಿಸಿದ್ದಾನೆ. ಭಾನುವಾರ ಪತ್ನಿಗೆ ಡೈವೋರ್ಸ್ ಕೊಡು, ಇಲ್ಲಾಂದ್ರೆ ಸರಿ ಇರೋದಿಲ್ಲ ಅಂತೆಲ್ಲಾ ಲಾಯರ್ ಗಳ ಮೂಲಕ ಧಮ್ಕಿ ಹಾಕಿಸಿದ್ದಾನೆ. ಇದರಿಂದ ಮನನೊಂದ ಹರೀಶ್, ಸೋಮವಾರ ಬೆಳಗ್ಗೆ ವಿಷ ಕುಡಿದು ಸಾಯಲು ಯತ್ನಿಸಿದ್ದಾನೆ.

    ಮಲ್ಲಿಕಾರ್ಜುನ್ ಮತ್ತು ಅರ್ಪಿತಾ ನಡುವೆ ಸಂಬಂಧ ಇತ್ತು ಅನ್ನೋದಕ್ಕೆ ಇಬ್ಬರೂ ಚಾಟ್ ಮಾಡಿರುವ ಮೊಬೈಲ್ ಮೆಸೇಜ್ ಹಾಗೂ ಆಡಿಯೋ ಸಂಭಾಷಣೆ ಸಾಕ್ಷಿಯಾಗಿವೆ. ಈ ಎಲ್ಲಾ ಸಂಭಾಷಣೆಗಳನ್ನು ಹರೀಶ್ ಗೆ ಕಳಿಸಿರುವ ಮಲ್ಲಿಕಾರ್ಜುನ್, ನಿನ್ನ ಪತ್ನಿ ನಾನು ಮದುವೆಯಾಗುತ್ತೇವೆ. ಇದಕ್ಕೆ ನೀನೇನಾದ್ರೂ ಚಕಾರ ಎತ್ತಿದ್ರೆ, ನಿನ್ನ ಮೇಲೆ ಸುಳ್ಳು ಕೇಸು ಹಾಕಿಸಿ ಜೈಲಿಗೆ ಕಳಿಸುತ್ತೇವೆ ಎಂದೆಲ್ಲಾ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲ ನಿನ್ನ ಪತ್ನಿಗೆ ಜನಿಸಲಿರುವ ಮೂರನೇ ಮಗುವಿಗೆ ನಾನೇ ಅಪ್ಪ ಎಂದು ಮುಜುಗರ ತರುವ ಮಾತುಗಳನ್ನು ಆಡಿದ್ದೇ ಹರೀಶ್ ಸಾಯುವ ನಿರ್ಧಾರಕ್ಕೆ ಬರಲು ಮೂಲ ಕಾರಣ ಎನ್ನಲಾಗಿದೆ.

  • ಕುಡಿದ ಮತ್ತಿನಲ್ಲಿ ಕತ್ತಿಯಿಂದ ಪತ್ನಿಯ ತಲೆ ಕಡಿದ ಪತಿ

    ಕುಡಿದ ಮತ್ತಿನಲ್ಲಿ ಕತ್ತಿಯಿಂದ ಪತ್ನಿಯ ತಲೆ ಕಡಿದ ಪತಿ

    ಉಡುಪಿ: ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬ್ರಹ್ಮಾವರ ಸಮೀಪದ ಹೇರೂರಿನಲ್ಲಿ ನಡೆದಿದೆ.

    ಆರೋಪಿ ರಾಜು ಪೂಜಾರಿ ತನ್ನ ಎರಡನೇ ಹೆಂಡತಿ ಗಿರಿಜಾ ಅವರನ್ನು ಸಂಜೆ ಕುಡಿದ ಮತ್ತಿನಲ್ಲಿ ಕಡಿದು ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹ ವಿಪರೀತವಾಗಿ ಮನೆಯಲ್ಲಿದ್ದ ಕತ್ತಿಯಿಂದ ತಲೆಗೆ ಮತ್ತು ದೇಹದ ಇತರೆ ಭಾಗಗಳಿಗೆ ಕಡಿದಿದ್ದಾನೆ. ಮೃತ ದೇಹವನ್ನು ಹತ್ತಿರದ ತೋಡಿಗೆ ಹಾಕಲು ಎಳೆದುಕೊಂಡು ಹೋಗಿದ್ದಾನೆ.

    ಇದನ್ನು ಕಂಡ ಅಳಿಯ ಆರೋಪಿಯನ್ನು ಊರಿನವರ ಸಹಾಯದಿಂದ ಹಿಡಿದು ಬ್ರಹ್ಮಾವರ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಿರಿಜಾರ ಮಗಳು ಮನೆಯಲ್ಲಿದ್ದು ಸೋಮವಾರ ಬೆಳಗ್ಗೆ ಮನೆಗೆ ಹೋಗಿ ಬೇಗ ಬರುತ್ತೇನೆ ಎಂದು ಹೋಗಿದ್ದಾರೆ. ವಾಪಸ್ಸು ಬರದೇ ಇರುವುದನ್ನು ಗಮನಿಸಿದ ಮಗಳ ಗಂಡ ಮನೆ ಸಮೀಪ ಬಂದಿದ್ದಾನೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

    ಆರೋಪಿಯು ಕುಡಿತದ ಚಟವನ್ನು ಹೊಂದಿದ್ದು, ನಶೆಯಲ್ಲಿ ಹತ್ತಿರದವರ ಜೊತೆ ಯಾವಾಗಲೂ ಗಲಾಟೆ ಮಾಡುತ್ತಿದ್ದ. ಆರೋಪಿಯು 25 ವರ್ಷದ ಹಿಂದೆ ಮೊದಲನೆಯ ಹೆಂಡತಿಗೂ ಚೂರಿಯಿಂದ ಇರಿದಿದ್ದು ಅವಳು ಪ್ರಾಣಾಪಾಯದಿಂದ ಪಾರಾಗಿ ಗಂಡನಿಂದ ದೂರವಾಗಿದ್ದಳು. ಬಳಿಕ ಆರೋಪಿ ರಾಜು ಗಿರಿಜಾ ಜೊತೆ ಎರಡನೇಯ ಮದುವೆಯಾಗಿದ್ದನು.

    ಸದ್ಯ ಬ್ರಹ್ಮಾವರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪತ್ನಿಯನ್ನು ಆಕ್ಸಿಡೆಂಟ್ ರೀತಿಯಲ್ಲಿ ಕೊಲೆ ಮಾಡಲು ಯತ್ನಿಸಿದ ಪಾಪಿ ಪತಿ!

    ಪತ್ನಿಯನ್ನು ಆಕ್ಸಿಡೆಂಟ್ ರೀತಿಯಲ್ಲಿ ಕೊಲೆ ಮಾಡಲು ಯತ್ನಿಸಿದ ಪಾಪಿ ಪತಿ!

    ಹುಬ್ಬಳ್ಳಿ: ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದರೆ ಹುಬ್ಬಳ್ಳಿಯಲ್ಲಿ ಪತಿಯೊಬ್ಬ ಪತ್ನಿಯ ಹತ್ಯೆಗೆ ಯತ್ನಿಸಿದ್ದು, ಈಗ ಪ್ರಕರಣ ದಾಖಲಾಗಿದೆ.

    ರಾಘವೇಂದ್ರ ಬ್ಯಾಡಗಿ ಪತ್ನಿಯನ್ನೇ ಕೊಲೆ ಮಾಡಲು ಮುಂದಾದ ಪತಿ. ರಾಘವೇಂದ್ರ ಆಕ್ಸಿಡೆಂಟ್ ರೀತಿಯಲ್ಲಿ ನನ್ನ ಹತ್ಯೆಗೆ ಯತ್ನಿಸಿದ್ದಾನೆ ಎಂದು ಪತ್ನಿ ಗೀತಾ ಆರೋಪಿಸಿದ್ದಾರೆ.

    ಹುಬ್ಬಳ್ಳಿ ಹೊಸೂರು ಬಳಿ ಪತ್ನಿ ಗೀತಾ ಹಾಗೂ ಅವಳ ಸಹೋದರಿ ಬೈಕ್ ಮೇಲೆ ಹೋಗುವಾಗ ಪತಿ ರಾಘವೇಂದ್ರ ಬ್ಯಾಡಗಿ ಆಟೋದಿಂದ ಡಿಕ್ಕಿ ಹೊಡಿಸಿ ಆಕ್ಸಿಡೆಂಟ್ ರೀತಿಯಲ್ಲಿ ಹತ್ಯೆ ಮಾಡಲು ಯತ್ನಿಸಿದ್ದಾನೆ. ಗಾಯಗೊಂಡ ಗೀತಾ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಲೆಗೆ ಹಾಗೂ ಕೈಗೆ ಗಂಭೀರ ಗಾಯವಾಗಿದೆ.

    ಸದ್ಯ ಗೀತಾ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಒಂದೂವರೆ ವರ್ಷಗಳ ಹಿಂದೆ ಮದುವೆಯಾದ ಗೀತಾ ಹಾಗೂ ರಾಘವೇಂದ್ರ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ರಾಘವೇಂದ್ರ ಪತ್ನಿ ಗೀತಾ ಮೇಲೆ ಸಂಶಯ ವ್ಯಕ್ತಪಡಿಸಿದ ಆ ಹಿನ್ನಲೆಯಲ್ಲಿ ಕೊಲೆಗೆ ಯತ್ನಿಸಿದ್ದಾನೆ ಅಂತಾ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

  • 20 ವರ್ಷದ ಪತಿಯ ಕಿವಿಯನ್ನೇ ಕತ್ತರಿಸಿದ್ಳು 40ರ ಪತ್ನಿ!

    20 ವರ್ಷದ ಪತಿಯ ಕಿವಿಯನ್ನೇ ಕತ್ತರಿಸಿದ್ಳು 40ರ ಪತ್ನಿ!

    ಕೋಲ್ಕತ್ತಾ: 40 ವರ್ಷದ ಮಹಿಳೆಯೊಬ್ಬಳು ತನ್ನ 20 ವರ್ಷದ ಪತಿಯ ಕಿವಿಯನ್ನೇ ಕತ್ತರಿಸಿದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ನರ್ಕೆಲ್‍ದಂಗ್‍ನಲ್ಲಿ ನಡೆದಿದೆ.

    ತನ್ವೀರ್ ಕಿವಿ ಕಳೆದುಕೊಂಡ ಪತಿ. ತನ್ವೀರ್ ನರ್ಕೆಲ್‍ದಂಗ್ ನಿವಾಸಿಯಾಗಿದ್ದು, ಎರಡು ವರ್ಷಗಳ ಹಿಂದೆ ಮುಮ್ತಾಜ್‍ಳನ್ನು ಮದುವೆಯಾಗಿದ್ದನು.

    ಏನಿದು ಘಟನೆ?:
    ಮುಮ್ತಾಜ್ ತನ್ನ ಪತಿ ತನ್ವೀರ್ ಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದಳು. ಮುಮ್ತಾಜ್ ಕಿರುಕುಳ ತಾಳಲಾರದೇ ತನ್ವೀರ್ ಮನೆ ಬಿಟ್ಟು ಓಡಿ ಹೋಗಲು ಯತ್ನಿಸಿದ್ದಾನೆ. ಆಗ ಮುಮ್ತಾಜ್ ತನ್ನ ಪತಿಯನ್ನು ವಾಪಸ್ ಕರೆದುಕೊಂಡು ಬಂದಿದ್ದಾಳೆ. ಅಲ್ಲದೇ ಮುಮ್ತಾಜ್ ತನ್ನ ಸಹೋದರಿ ಜೊತೆ ಸೇರಿ ತನ್ವೀರ್ ಕಿವಿಯನ್ನೇ ಕತ್ತರಿಸಿದ್ದಾಳೆ. ಬಳಿಕ ಆತ ಮೃತಪಟ್ಟಿದ್ದಾನೆಂದು ತಿಳಿದು ಮುಮ್ತಾಜ್ ಹಾಗೂ ಆಕೆಯ ಸಹೋದರಿ ಪರಾರಿಯಾಗಿದ್ದಾರೆ. ಈ ಘಟನೆಯ ವಿಷಯ ತಿಳಿದ ನಂತರ ತನ್ವೀರ್ ಕುಟುಂಬದವರು ಆತನನ್ನು ಎನ್‍ಆರ್‍ಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ಹಿಂದೆ ತನ್ವೀರ್ ತನ್ನ ಪತ್ನಿಯ ಕಿರುಕುಳ ತಾಳಲಾರದೇ ಮುಲಿಕ್ ಪುರ್ ಗೆ ಓಡಿ ಹೋಗಿದ್ದನು. ಆಗ ಮುಮ್ತಾಜ್ ಹಾಗೂ ಆಕೆಯ ಸಹೋದರಿ ಆತನನ್ನು ವಾಪಸ್ ಕರೆದುಕೊಂಡು ಬಂದರು. ಮನೆಗೆ ಕರೆದುಕೊಂಡು ಬಂದ ತಕ್ಷಣ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

    ಆಕೆ ನನ್ನ ಕಿವಿಯನ್ನು ಕತ್ತರಿಸಿದ್ದಾಳೆ. ಅಲ್ಲದೇ ನಾನು ಅದಕ್ಕೆ ವಿರೋಧಿಸಿದ್ದರೆ ಅವರು ನನ್ನ ಕೊಲೆ ಮಾಡುತ್ತಿದ್ದರು. ಮುಮ್ತಾಜ್ ನನ್ನನ್ನು ಆಕೆಯ ಮನೆಯಲ್ಲೇ ಬಂಧಿಸಿದ್ದಳು. ಅಷ್ಟೇ ಅಲ್ಲದೇ ನನ್ನ ಕುಟುಂಬದವರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿರಲಿಲ್ಲ ಎಂದು ತನ್ವೀರ್ ಹೇಳಿದ್ದಾನೆ.

    ಮುಮ್ತಾಜ್ ತನ್ನ ಮಗನಿಗೆ ಕಿರುಕುಳ ನೀಡುತ್ತಿರುವುದನ್ನು ನೋಡಿದ ತನ್ವೀರ್ ತಾಯಿ ತನ್ನ ಮನೆಯನ್ನು ಮಾರಿದ್ದರು. ಬಳಿಕ ಆ ಹಣವನ್ನು ಮುಮ್ತಾಜ್‍ಗೆ ನೀಡಿ ತನ್ನ ಮಗನನ್ನು ಬಿಟ್ಟು ಬಿಡಲು ಹೇಳಿದ್ದರು. ಆದರೆ ಮುಮ್ತಾಜ್ ಹಣವನ್ನು ಪಡೆದು ತನ್ವೀರ್ ಗೆ ಇನ್ನಷ್ಟು ಕಿರುಕುಳ ನೀಡುತ್ತಿದ್ದಳು ಎಂಬುದಾಗಿ ವರದಿಯಾಗಿದೆ.

    ಸದ್ಯ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಪತ್ನಿಯ ಗುಪ್ತಾಂಗಕ್ಕೆ ಕರೆಂಟ್ ಶಾಕ್ ಕೊಟ್ಟ ಸಿಎಎಫ್ ಸೈನಿಕ

    ಪತ್ನಿಯ ಗುಪ್ತಾಂಗಕ್ಕೆ ಕರೆಂಟ್ ಶಾಕ್ ಕೊಟ್ಟ ಸಿಎಎಫ್ ಸೈನಿಕ

    ರಾಯ್ಪುರ್: ಛತ್ತೀಸ್‍ಗಢ ಆರ್ಮಿ ಫೋರ್ಸ್(ಸಿಎಎಫ್) ನ ಸೈನಿಕನೊಬ್ಬ ಪತ್ನಿಯ ಶೀಲ ಶಂಕಿಸಿ ಆಕೆಗೆ ವಿದ್ಯುತ್ ಶಾಕ್ ಕೊಟ್ಟು ಕೊಲೆ ಮಾಡಿರುವ ಘಟನೆ ಭಟಪಾರ ಜಿಲ್ಲೆಯ ಬಾಲೋದಬಜಾರ್ ನಗರದಲ್ಲಿ ನಡೆದಿದೆ.

    ಲಕ್ಷ್ಮೀ(27) ಪತಿಯಿಂದಲೇ ಕೊಲೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ 33 ವರ್ಷದ ಸುರೇಶ್ ಮಿರಿನನ್ನು ಬುಧವಾರ ಮುಂಗೆಲಿ ಜಿಲ್ಲೆಯ ಸರ್ಗಾಂವ್ ಪೊಲೀಸರು ಬಂಧಿಸಿದ್ದಾರೆ ಎಂದು ಸಹಾಯಕ ಉಪ ಇನ್ಸ್ ಪೆಕ್ಟರ್ ಪರಾಸ್ ರಾಮ್ ಜಗತ್ ಹೇಳಿದ್ದಾರೆ.

    ಘಟನೆಯ ವಿವರ:
    ಆರೋಪಿ ದಾಂತೇವಾಡಾ ಜಿಲ್ಲೆಯ ಸಿಎಎಫ್ ನ 6ನೇ ಬೆಟಾಲಿಯನ್ ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದನು. ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಭಟಪಾರದ ವಸತಿ ಬೋರ್ಡ್ ಕಾಲೊನಿಯಲ್ಲಿ ವಾಸವಾಗಿದ್ದರು. ಆರೋಪಿ ಮಿರಿ ಪತ್ನಿ ಬೇರೊಬ್ಬರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎಂದು ಅನುಮಾನ ಪಡುತ್ತಿದ್ದನು. ಇದೇ ವಿಚಾರಕ್ಕೆ ಪ್ರತಿದಿನ ಜಗಳವಾಗುತ್ತಿತ್ತು ಎಂದು ಜಗತ್ ಅವರು ತಿಳಿಸಿದ್ದಾರೆ.

    ಬುಧವಾರ ಮೃತ ಲಕ್ಷ್ಮಿ ಬಾತ್‍ರೂಮಿನಲ್ಲಿ ಬಟ್ಟೆಯನ್ನು ವಾಶ್ ಮಾಡುತ್ತಿದ್ದರು. ಆಗ ಏಕಾಏಕಿ ಆರೋಪಿ ಮಿರಿ ಮನೆಗೆ ಬಂದು ಪತ್ನಿಗೆ ಥಳಿಸಿದ್ದಾನೆ. ಪರಿಣಾಮ ಲಕ್ಷ್ಮಿ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಈ ವೇಳೆ ಆರೋಪಿ ಮಿರಿ ವಿದ್ಯುತ್ ತಂತಿಯಿಂದ ಆಕೆಯ ಗುಪ್ತಾಂಗಕ್ಕೆ ಶಾಕ್ ಕೊಟ್ಟಿದ್ದಾನೆ. ಆದ್ದರಿಂದ ಲಕ್ಷ್ಮಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಳಿಕ ಮಿರಿ ಆಕೆಯ ಸಂಬಂಧಿಕರಿಗೆ ಕರೆ ಮಾಡಿ ಲಕ್ಷ್ಮಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಎಂದು ಹೇಳಿದ್ದಾನೆ.

    ಇಷ್ಟು ಮಾತ್ರವಲ್ಲದೇ ಆತನೇ ವ್ಯಾನ್ ಬುಕ್ ಮಾಡಿ ಲಕ್ಷ್ಮಿ ಮೃತ ದೇಹವನ್ನು ಮುಂಗೆಲಿ ಜಿಲ್ಲೆಯ ಪತ್ನಿಯ ಖಜರಿ ಗ್ರಾಮಕ್ಕೆ ಸಾಗಿಸಿದ್ದಾನೆ. ಅಲ್ಲಿಯೂ ಕೂಡ ಅನಾರೋಗ್ಯದಿಂದ ಲಕ್ಷ್ಮಿ ಮೃತಪಟ್ಟಿದ್ದಾಳೆ ಎಂದು ಹೇಳಿಕೊಂಡಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

    ಲಕ್ಷ್ಮಿಯ ದೇಹವನ್ನು ನೋಡಿ ಸಂಬಂಧಿಕರು ಪೋಲಿಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಪತಿಯನ್ನು ಕಸ್ಟಡಿಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯಕ್ಕೆ ಭಟಪಾರ ಪೊಲೀಸರು ಆರೋಪಿ ಮಿರಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ

  • ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಡೆತ್ ನೋಟ್ ಬರೆದು ಪತಿ ಆತ್ಮಹತ್ಯೆ!

    ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಡೆತ್ ನೋಟ್ ಬರೆದು ಪತಿ ಆತ್ಮಹತ್ಯೆ!

    ಬೆಂಗಳೂರು: ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಜ್ಞಾನಗಂಗಾನಗರದಲ್ಲಿ ನಡೆದಿದೆ.

    ಯೋಗೇಶ್(37) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಬಿಎಂಟಿಸಿ ಕಂಡಕ್ಟರ್ ಆಗಿದ್ದ ಪತ್ನಿ ಲತಾಗೆ ಡ್ರೈವರ್ ಜೊತೆ ಅಕ್ರಮ ಸಂಬಂಧವಿತ್ತು. ಈ ಬಗ್ಗೆ ಯೋಗೇಶ್ ತನ್ನ ಪತ್ನಿಗೆ ಸಾಕಷ್ಟು ಬುದ್ಧಿವಾದ ಹೇಳಿದ್ದರು.

    ಊರಿನ ಹಿರಿಯರ ನೇತೃತ್ವದಲ್ಲಿ ಒಂದೆರಡು ಬಾರಿ ರಾಜಿ ಪಂಚಾಯಿತಿ ಕೂಡ ಆಗಿತ್ತು. ಇಷ್ಟಾದ್ರೂ ಪತ್ನಿ ಪರ ಪುರುಷನ ಸಂಬಂಧ ಬಿಡಲಿಲ್ಲ ಅಂತಾ ಮನನೊಂದು ಪತಿ ಡೆತ್ ನೋಟ್ ಬರೆದಿದ್ದಾರೆ. ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಈ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಒಂದು ವಾರ ಕಾಲ ಪತ್ನಿಯ ಮೃತದೇಹದೊಂದಿಗೆ ಕಾಲ ಕಳೆದ ಅನಾರೋಗ್ಯ ಪೀಡಿತ ಪತಿ

    ಒಂದು ವಾರ ಕಾಲ ಪತ್ನಿಯ ಮೃತದೇಹದೊಂದಿಗೆ ಕಾಲ ಕಳೆದ ಅನಾರೋಗ್ಯ ಪೀಡಿತ ಪತಿ

    -ಕಾರವಾರದಲ್ಲಿ ಹೃದಯ ವಿದ್ರಾವಕ ಘಟನೆ

    ಕಾರವಾರ: ಒಂದು ವಾರದಿಂದ ಅನಾರೋಗ್ಯ ಪೀಡಿತ ಪತಿ ತನ್ನ ಪತ್ನಿಯ ಶವದ ಜೊತೆ ಕಾಲ ಕಳೆದ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿನ ಕೆ.ಹೆಚ್ .ಬಿ ಕಾಲೋನಿಯಲ್ಲಿ ನಡೆದಿದೆ.

    ಆನಂದ್ ಮಡಿವಾಳ (55) ಪತ್ನಿ ಶವದ ಜೊತೆ ಕಾಲ ಕಳೆದ ಪತಿಯಾಗಿದ್ದು ಗಿರಿಜಾ ಮಡಿವಾಳ (42) ಮೃತ ಪತ್ನಿ. ಆನಂದ್ ಹಲವು ವರ್ಷಗಳಿಂದ ಪ್ಯಾರಲಿಸೀಸ್ ಅನಾರೋಗ್ಯ ಸಮಸ್ಯೆಯಿಂದ ಇಡೀ ದೇಹದ ಸ್ವಾದೀನ ಕಳೆದುಕೊಂಡಿದ್ದು ಹೆಂಡತಿಯ ಆಶ್ರಯದಲ್ಲಿ ಜೀವಿಸುತ್ತಿದ್ದರು. ಆದರೆ ಕಳೆದ ಒಂದು ವಾರದ ಹಿಂದೆ ಗಿರಿಜಾ ಅವರು ಹೃದಯಘಾತದಿಂದ ಮೃತಪಟ್ಟಿದ್ದು, ಈ ವೇಳೆ ಯಾರ ಸಹಾಯ ಪಡೆಯಲು ಸಾಧ್ಯವಾಗದೆ ಪತ್ನಿಯ ಮೃತದೇಹದೊಂದಿಗೆ ಕಾಲ ಕಳೆದಿದ್ದಾರೆ.

    ಘಟನೆ ಬೆಳಕಿಗೆ ಬಂದಿದ್ದು ಹೇಗೆ: ಅಂದಹಾಗೇ ದಂಪತಿಗೆ ಮಕ್ಕಳಿಲ್ಲವಾದ್ದರಿಂದ ಇಬ್ಬರೇ ವಾಸಿಸುತ್ತಿದ್ದರು. ಗಿರಿಜಾ ಅವರು ಸ್ಥಳೀಯ ಮನೆಗಳಲ್ಲಿ ಮನೆಗೆಲಸ ಮಾಡಿ ಪತಿಯನ್ನು ಸಲಹುತಿದ್ದರು. ಆದರೆ ಕಳೆದ ಒಂದು ವಾರದ ಹಿಂದೆ ಗಿರಿಜಾ ಅವರು ರಾತ್ರಿ ಮನೆಯಲ್ಲಿ ಗಂಡನ ಎದುರು ಕುಳಿತಿದ್ದ ವೇಳೆಯೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಈ ವೇಳೆ ಪಾಶ್ರ್ವವಾಯು ಪೀಡಿತ ಗಂಡ ಮಾತ್ರ ಎದ್ದೇಳಲು ಆಗದೇ ಮಾತನಾಡಲೂ ಆಗದೇ ಸತತ ಒಂದು ವಾರದಿಂದ ಕೊಳೆತ ಸ್ಥಿತಿಯಲ್ಲಿರುವ ತನ್ನ ಹೆಂಡತಿಯ ದೇಹದೊಂದಿಗೆ ಅನ್ನ ,ನೀರಿಲ್ಲದೇ ದಿನದೂಡಿದ್ದಾರೆ.

    ಈ ವೇಳೆ ಪ್ರತಿ ದಿನ ಮನೆಗೆಲಸಕ್ಕೆ ಬರುತ್ತಿದ್ದ ಗಿರಿಜಾ ಅವರು ಒಂದು ವಾರದಿಂದ ಕೆಲಸಕ್ಕೆ ಬರದ ಹಿನ್ನಲೆಯಲ್ಲಿ ಮಾಲೀಕರು ಮನೆಯ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಕಾರವಾರ ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಸಂಸ್ಕಾರ ಮಾಡಿದ್ದಾರೆ. ಇನ್ನು ಅನಾರೋಗ್ಯದ ಜೊತೆ ಐದು ದಿನಗಳವರೆಗೆ ಉಪವಾಸವಿದ್ದ ಆನಂದ್ ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಗಂಡು ಮಕ್ಕಳಾಗ್ಬೇಕಿದ್ರೆ ಸೆಕ್ಸ್ ಫಿಲಂ ನೋಡಿ ಅದೇ ರೀತಿ ಸೆಕ್ಸ್ ಮಾಡು – ಕಾಮುಕನಿಂದ ಪತ್ನಿಗೆ ಹಿಂಸೆ

    ಗಂಡು ಮಕ್ಕಳಾಗ್ಬೇಕಿದ್ರೆ ಸೆಕ್ಸ್ ಫಿಲಂ ನೋಡಿ ಅದೇ ರೀತಿ ಸೆಕ್ಸ್ ಮಾಡು – ಕಾಮುಕನಿಂದ ಪತ್ನಿಗೆ ಹಿಂಸೆ

    ತುಮಕೂರು: ವ್ಯಕ್ತಿಯೊಬ್ಬ ಗಂಡು ಮಕ್ಕಳಾಗಿಲ್ಲ ಎಂದು ತನ್ನ ಇಬ್ಬರು ಮಕ್ಕಳೊಂದಿಗೆ ಪತ್ನಿಯನ್ನು ಮನೆಯಿಂದ ಹೊರ ಹಾಕಿರುವ ಘಟನೆ ಜಿಲ್ಲೆಯ ಕೊರಟಗೆರೆ ಕೋಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕೋಡನಹಳ್ಳಿ ನಿವಾಸಿ ಶ್ರೀಧರ ತನ್ನ ಪತ್ನಿಗೆ ಹಿಂಸೆ ಕೊಟ್ಟು ಮನೆಯಿಂದ ಹೊರ ಹಾಕಿದ್ದಾನೆ. ಅಲ್ಲದೇ ಪ್ರತಿ ದಿನ ಗಂಡು ಮಕ್ಕಳನ್ನು ಹೆತ್ತಿಲ್ಲ, ತವರು ಮನೆಯಿಂದ ವರದಕ್ಷಿಣೆ ತರುವಂತೆ ಪತ್ನಿಯನ್ನು ಸದಾ ಪೀಡಿಸುತ್ತಿದ್ದನು. ಅಷ್ಟೇ ಅಲ್ಲದೇ ಗಂಡು ಮಕ್ಕಳಾಗಬೇದಾರೆ ಸೆಕ್ಸ್ ಫಿಲಂ ನೋಡು. ಅದೇ ರೀತಿ ಸೆಕ್ಸ್ ಮಾಡಿದ್ರೆ ಮಾತ್ರ ಗಂಡು ಮಕ್ಕಳು ಆಗುತ್ತವೆ ಎಂದು ವಿಲಕ್ಷಣವಾಗಿ ವರ್ತಿಸುತಿದ್ದನಂತೆ.

    ಕಳೆದ ಒಂದು ತಿಂಗಳಿನಿಂದ ಇಬ್ಬರು ಹೆಣ್ಣುಮಕ್ಕಳ ಸಮೇತ ಮನೆಯಿಂದ ಹೊರಹಾಕಿದ್ದಾನೆ. ಈ ಸಂಬಂಧ ಪತ್ನಿ ಶಿರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದ್ರೆ ಪೊಲೀಸರು ಆರೋಪಿ ಶ್ರೀಧರನನ್ನು ಬಂಧಿಸದೇ ರಕ್ಷಣೆಗೆ ನಿಂತಿದ್ದಾರೆ. ಸ್ವತಃ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರೇ ಆರೋಪಿ ಶ್ರೀಧರನ ರಕ್ಷಣೆಗೆ ನಿಂತಿದ್ದಾರೆ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ.

    ಆರೋಪಿ ಶ್ರೀಧರ್ ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ಅವರ ಸಂಬಂಧಿಯಾಗಿದ್ದಾನೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಒತ್ತಡದ ಮೇರೆಗೆ ಗೃಹ ಸಚಿವರೂ ಆದ ಜಿ.ಪರಮೇಶ್ವರ್ ಆರೋಪಿ ಶ್ರೀಧರನ ಬಚಾವ್ ಮಾಡುತ್ತಿದ್ದಾರೆ ಎನ್ನಲಾಗಿದೆ.

  • ಈರುಳ್ಳಿ, ಬೆಳ್ಳುಳ್ಳಿ ತಿನ್ನಲು ಪತಿ ಕುಟುಂಬಸ್ಥರ ಒತ್ತಾಯ – ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ

    ಈರುಳ್ಳಿ, ಬೆಳ್ಳುಳ್ಳಿ ತಿನ್ನಲು ಪತಿ ಕುಟುಂಬಸ್ಥರ ಒತ್ತಾಯ – ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ

    ಅಹಮದಾಬಾದ್: ಪತಿ ಮನೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಯಿಂದ ತಯಾರಿಸಿದ ಆಹಾರ ತಿನ್ನಲು ಒತ್ತಾಯ ಮಾಡಿದ್ದು, ನಿರಾಕರಿಸಿದಕ್ಕಾಗಿ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಗುಜರಾತ್ ನ ಕಾದಿ ಟೌನ್ ನಿವಾಸಿಯಾದ 25 ವರ್ಷದ ಮಹಿಳೆ ಪತಿ ಹಾಗೂ ಕುಟುಂಬದ ವಿರುದ್ಧ ಜುಲೈ 10 ರಂದು ಗಾಂಧಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ತನ್ನ ಸಹೋದರನ ಸ್ನೇಹಿತನನ್ನು ಪ್ರೀತಿಸಿ 4 ವರ್ಷಗಳ ಹಿಂದೆ ಮದುವೆಯಾಗಿದ್ದಾಗಿದ್ದು, ಪತಿ ಟೀ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾನು ಖಾಸಗಿ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಿ ತಿಳಿಸಿದ್ದಾರೆ. ಅಂದಹಾಗೇ ಮಹಿಳೆ ದೂರಿನಲ್ಲಿ ತಾನು ಪಾಟೇಲ್ ಸಮುದಾಯಕ್ಕೆ ಸೇರಿದ್ದಾಗಿ ತಿಳಿಸಿದ್ದು, ತಾನು ಸ್ವಾಮಿನಾರಾಯಣ್ ಪಂಥದ ಅನುಯಾಯಿ ಎಂದು ಹೇಳಿದ್ದಾರೆ. ಆಹಾರದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಸೇವನೆ ಮಾಡಿದರೆ ತನ್ನ ಧಾರ್ಮಿಕ ನಂಬಿಕೆಗೆ ತೊಂದರೆಯಾಗುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ದೂರಿನ ಹಿನ್ನೆಲೆಯಲ್ಲಿ ಪತಿಯ ವಿರುದ್ಧ ಹಲ್ಲೆ ಹಾಗೂ ಗೃಹ ಹಿಂಸೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.