Tag: ಪತ್ನಿ

  • ಪತ್ನಿ ತೀರಿಕೊಂಡ ಬಳಿಕ 10ರ ಮಗಳ ಮೇಲೆ ಅತ್ಯಾಚಾರವೆಸಗಿದ!

    ಪತ್ನಿ ತೀರಿಕೊಂಡ ಬಳಿಕ 10ರ ಮಗಳ ಮೇಲೆ ಅತ್ಯಾಚಾರವೆಸಗಿದ!

    ನವದೆಹಲಿ: 40 ವರ್ಷದ ವ್ಯಕ್ತಿಯೊಬ್ಬ ತನ್ನ 10 ವರ್ಷದ ಮಗಳ ಮೇಲೆಯೇ ಅತ್ಯಾಚಾರವೆಸಗಿದ ಘಟನೆಯೊಂದು ದೆಹಲಿಯ ಗೋವಿಂದಪುರಿಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ತನ್ನ ತಂದೆ ಅತ್ಯಾಚಾರವೆಸಗಿದ ವಿಚಾರವನ್ನು ಬಾಲಕಿ ತನ್ನ ಸಹಪಾಠಿಗಳಿಗೆ ತಿಳಿಸಿದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಾಲಕಿಯನ್ನು ಮಂಗಳವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಅಂತ ಡಿಸಿಪಿ ಘನಶ್ಯಾಮ್ ಬನ್ಸಾಲ್ ತಿಳಿಸಿದ್ದಾರೆ.

    ಕೆಲ ದಿನಗಳ ಹಿಂದೆ ಬಾಲಕಿಯ ತಾಯಿ ತೀರಿಕೊಂಡಿದ್ದರು. ತಾಯಿಯ ನಿಧನದ ಬಳಿಕ ಬಾಲಕಿ ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಳು. ಈ ವೇಳೆ ತಂದೆ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ತನ್ನ ಮೇಲೆ ತಂದೆ ಎಸಗುತ್ತಿರುವ ಅತ್ಯಾಚಾರದ ವಿಷಯವನ್ನು ಮೊದಲು ಬಾಲಕಿ ಸಹಪಾಠಿಗಳಿಗೆ ತಿಳಿಸಿದ್ದಾಳೆ. ಈ ವಿಚಾರವನ್ನು ಆಕೆಯ ಸಹಪಾಠಿಗಳು ಟೀಚರ್ ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನೆಯನ್ನರಿತ ಶಿಕ್ಷಕರು ಬಾಲಕಿಯನ್ನು ವಿಚಾರಿಸಿ, ನಿನಗೆ ಯಾರು ಕಿರುಕುಳ ನೀಡುತ್ತಾರೆ ಅಂತ ಪ್ರಶ್ನಿಸಿದ್ದಾರೆ. ಬಳಿಕ ಈ ವಿಚಾರವಾಗಿ ಶಾಲಾ ಆಡಳಿತ ಮಂಡಳಿ ಜೊತೆ ಚರ್ಚಿಸಿ ಬಳಿಕ ಆಡಳಿತ ಮಂಡಳಿ ಸದಸ್ಯರು ಪೊಲೀಸರನ್ನು ಸಂಪರ್ಕಿಸಿ ಘಟನೆಯನ್ನು ವಿವರಿಸಿದ್ದಾರೆ. ಕೂಡಲೇ ಪೊಲೀಸರ ತಂಡ ಘಟನಾ ಸ್ಥಳಕ್ಕೆ ತೆರಳಿ, ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಯಲ್ಲಿ ತನಿಖೆ ನಡೆಸಿದ ವೇಳೆ ಆರೋಪಿ ತಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಸದ್ಯ ಬಾಲಕಿಗೆ ಕೌನ್ಸಿಲಿಂಗ್ ನಡೆಸುತ್ತಿದ್ದು, ವೈದ್ಯಕೀಯ ವರದಿಗಾಗಿ ಕಾಯುತ್ತಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿ ಕಿಡ್ನಾಪ್ ಆಗಿದ್ದಾಳೆಂದು ದೂರು ಕೊಟ್ಟವನೇ ಕೊನೆಗೆ ಅರೆಸ್ಟ್ ಆದ!

    ಪತ್ನಿ ಕಿಡ್ನಾಪ್ ಆಗಿದ್ದಾಳೆಂದು ದೂರು ಕೊಟ್ಟವನೇ ಕೊನೆಗೆ ಅರೆಸ್ಟ್ ಆದ!

    ಬೆಂಗಳೂರು: ಪತ್ನಿ ಇದ್ದರೆ ನನ್ನ ಹತ್ತಿರನೇ ಇರಬೇಕು ಬೇರೆ ಇರಬಾರದೆಂದು ಪತಿಯೊಬ್ಬ ತನ್ನ ಪತ್ನಿ ಕಿಡ್ನಾಪ್ ಆಗಿದ್ದಾಳೆಂದು ದೂರು ನೀಡಿದ್ದಕ್ಕೆ ಮಡಿವಾಳ ಪೊಲೀಸರು ಆತನನ್ನೇ ಬಂಧಿಸಿದ್ದಾರೆ.

    ಹುಸೇನ್ ಪೊಲೀಸ್ ಠಾಣೆಗೆ ದೂರು ನೀಡಿ ಅರೆಸ್ಟ್ ಆದ ಪತಿ. ನನ್ನ ಪತ್ನಿ ಶಬೀನಾಳನ್ನು ಯಾರೋ ದುಷ್ಕರ್ಮಿಗಳು ಕಾರಿನಲ್ಲಿ ಬಂದು ಅಪಹರಣ ಮಾಡಿದ್ದಾರೆ. ಆಕೆಯನ್ನು ಅಪಹರಣ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಕೊಲೆ ಮಾಡುತ್ತಾರೆ ಎಂದು ಹುಸೇನ್ ದೂರು ನೀಡಿದ್ದನು. ದೂರು ಸ್ವೀಕರಿಸಿದ ಬಳಿಕ ಪತಿ ಹುಸೇನ್ ಅಸಲಿಯತ್ತು ಅನಾವರಣಗೊಂಡಿದೆ.

    ಶಬೀನಾ ಬೇರೊಬ್ಬನ ಜೊತೆ ಸಂಬಂಧ ಬೆಳೆಸಿ ಅವನೊಂದಿಗೆ ಇರೋದಾಗಿ ಮನೆ ಬಿಟ್ಟು ಹೋಗಿದ್ದಳು. ಅವನೊಂದಿಗೆ ಪತ್ನಿ ನೆಮ್ಮದಿಯಾಗಿ ಇರುತ್ತಾಳೆ ಅಂತ ಶಬೀನಾ ಬಾಯ್ ಫ್ರೆಂಡ್ ನನ್ನು ಜೈಲಿಗೆ ಕಳುಹಿಸಲು ಹುಸೇನ್ ಸ್ಕೆಚ್ ಹಾಕಿದ್ದನು. ಹೀಗಾಗಿ ಬಾಯ್ ಫ್ರೆಂಡ್ ಜೈಲಿಗೆ ಹೋದರೆ ಪತ್ನಿ ಮತ್ತೆ ವಾಪಸ್ ಬರುತ್ತಾಳೆ ಎಂದು ಹುಸೇನ್ ದೂರು ನೀಡಿದ್ದನು.

    ಈ ಬಗ್ಗೆ ತನಿಖೆ ಮಾಡಿದಾಗ ನಿಜಾಂಶ ಹೊರ ಬಂದಿದೆ. ಪರಿಣಾಮ ದೂರು ನೀಡಿದ ಹುಸೇನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಸತ್ಯ ಗೊತ್ತಿದ್ದರೂ ಪೊಲೀಸರಿಗೆ ಸುಳ್ಳು ಮಾಹಿತಿ ನೀಡುತ್ತೀಯಾ ಎಂದು ಮಡಿವಾಳ ಪೊಲೀಸರು ಹುಸೇನ್‍ನನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಚ್ಛೇದಿತ ಪತ್ನಿಗೆ ಜೀವನಾಂಶ 7 ಲಕ್ಷ ರೂ.ಯನ್ನು ನಾಣ್ಯಗಳಲ್ಲಿ ನೀಡಿದ ಪತಿ

    ವಿಚ್ಛೇದಿತ ಪತ್ನಿಗೆ ಜೀವನಾಂಶ 7 ಲಕ್ಷ ರೂ.ಯನ್ನು ನಾಣ್ಯಗಳಲ್ಲಿ ನೀಡಿದ ಪತಿ

    -12 ಮೂಟೆ, 860 ಕೆ.ಜಿ. ತೂಕ

    ಜಕಾರ್ತ: ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿಗೆ ನೀಡಬೇಕಾಗಿದ್ದ ಜೀವನಾಂಶದ ಹಣವನ್ನು ನಾಣ್ಯಗಳ ರೂಪದಲ್ಲಿ ನೀಡಿದ್ದಾನೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ಬರೋಬ್ಬರಿ 860 ಕೆ.ಜಿ. ತೂಕವುಳ್ಳ 12 ಮೂಟೆಗಳನ್ನು ನೀಡಿದ್ದಾನೆ.

    ಗುರುವಾರ ಸ್ಥಳೀಯ ಸಿವಿಲ್ ನ್ಯಾಯಾಲಯಕ್ಕೆ ಹಾಜರಾದ ಡ್ವಿ ಸ್ಸುಲಾರ್ಟೊ ಎಂಬವರು 12 ಮೂಟೆಗಳಲ್ಲಿ ಒಟ್ಟು 10,000 ಡಾಲರ್ (6.97 ಲಕ್ಷ ರೂ.) ತಂದು ವಿಚ್ಛೇದಿತ ಪತ್ನಿಗೆ ಪರಿಹಾರವಾಗಿ ನೀಡಿದ್ದಾರೆ. ಆ ಮೂಟೆಗಳ ತೂಕ ಬರೋಬ್ಬರಿ 890 ಕಿಲೋ ಗ್ರಾಂ ಇತ್ತು ಎಂದು ವರದಿಯಾಗಿದೆ.

    ಒಂಬತ್ತು ವರ್ಷಗಳಿಂದ ಡ್ವಿ ಸ್ಸುಲಾರ್ಟೊ ತನ್ನ ವಿಚ್ಛೇದಿತ ಪತ್ನಿಗೆ ಜೀವನಾಂಶವನ್ನು ನೀಡಿರಲಿಲ್ಲ. ಹೀಗಾಗಿ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದರು. ಗುರುವಾರ ನ್ಯಾಯಾಲಯಕ್ಕೆ ಹಾಜರಾದ ಡ್ವಿ ಸ್ಸುಲಾರ್ಟೊ ವಿಚ್ಛೇದಿತ ಪತ್ನಿಗೆ ನಾಣ್ಯರೂಪದಲ್ಲಿ ಜೀವನಾಂಶ ನೀಡಿದ್ದಾನೆ. ಇದನ್ನು ಓದಿ: ವಿಚ್ಛೇದಿತ ಪತ್ನಿಗೆ ಜೀವನಾಂಶದ ಹಣವನ್ನ ಚಿಲ್ಲರೆ ರೂಪದಲ್ಲಿ ನೀಡಿದ ಪತಿ!

    ‘ನನ್ನ ಕಕ್ಷಿದಾರರನ್ನು ಅವಮಾನಿಸಲು ಡ್ವಿ ಸ್ಸುಲಾರ್ಟೊ ಚಿಲ್ಲರೆ ಹಣವನ್ನು ನೀಡುತ್ತಿದ್ದಾರೆ’ ಎಂದು ವಿಚ್ಛೇದಿತ ಮಹಿಳೆಯ ಪರ ವಕೀಲ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡ್ವಿ ಸ್ಸುಲಾರ್ಟೊ ಪರ ವಕೀಲ, ನನ್ನ ಕಕ್ಷಿದಾರ ಕೆಳ ದರ್ಜೆಯ ನಾಗರಿಕ ಸೇವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತನ್ನ ಸಂಬಂಧಿಕರು ಹಾಗೂ ಸ್ನೇಹಿತರಿಂದ ಹಣ ಸಂಗ್ರಹಿಸಿದ್ದು, ಅವರೆಲ್ಲರೂ ಚಿಲ್ಲರೆ ಹಣ ನೀಡಿದ್ದರಿಂದ ಅದನ್ನು ಕೋರ್ಟ್ ಗೆ ಒಪ್ಪಿಸಿದ್ದಾರೆ ಎಂದರು.

    ನಾನು ಬಡತನದಲ್ಲಿ ಇದ್ದೇನೆ ಎನ್ನುವಂತೆ ಅವಮಾನ ಮಾಡಲು ಡ್ವಿ ಸ್ಸುಲಾರ್ಟೊ ಚಿಲ್ಲರೆ ಹಣವನ್ನು ನೀಡುತ್ತಿದ್ದಾರೆ ಎಂದು ವಿಚ್ಛೇದಿತ ಮಹಿಳೆ ಆರೋಪಿಸಿದ್ದಾರೆ. ಕೊನೆಗೆ ಚಿಲ್ಲರೆ ಹಣವನ್ನು ಏಣಿಕೆ ಮಾಡುವಂತೆ ನ್ಯಾಯಾಲಯವು ತನ್ನ ಸಿಬ್ಬಂದಿಗೆ ಸೂಚನೆ ನೀಡಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಕೊಲೆ!

    ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಕೊಲೆ!

    ಬೆಂಗಳೂರು: ಶೀಲ ಶಂಕಿಸಿ ಪತಿ ತನ್ನ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಂಜುನಾಥ ನಗರದಲ್ಲಿ ನಡೆದಿದೆ.

    ಜಯಶ್ರೀ(32) ಕೊಲೆಯಾದ ದುರ್ದೈವಿ. ಆರೋಪಿ ಪತಿ ಹನುಮಂತ ಪತ್ನಿಯ ಶೀಲ ಶಂಕಿಸಿ ಹತ್ಯೆಗೈದಿದ್ದಾನೆ. ಹನುಮಂತ ತನ್ನ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಪತಿ ಹನುಮಂತನನ್ನ ಪೊಲೀಸರು ಬಂಧಿಸಿದ್ದಾರೆ.

    ಈ ಬಗ್ಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿಯ ಮೂಗನ್ನೇ ಕಚ್ಚಿ ಗಾಯಗೊಳಿಸಿದ ಪತಿ ಮಹಾಶಯ!

    ಪತ್ನಿಯ ಮೂಗನ್ನೇ ಕಚ್ಚಿ ಗಾಯಗೊಳಿಸಿದ ಪತಿ ಮಹಾಶಯ!

    ಲಕ್ನೋ: ಬೇರೊಬ್ಬ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರಬಹುದು ಎಂಬ ಅನುಮಾನದಿಂದ ಪತಿ ಮಹಾಶಯನೊಬ್ಬ ಪತ್ನಿಯ ಮೂಗನ್ನೇ ಕಚ್ಚಿರುವ ಘಟನೆ ಉತ್ತರ ಪ್ರದೇಶದ ಶಹಜಾಹನ್ಪುರದಲ್ಲಿ ನಡೆದಿದೆ.

    ಪಾಲ್ಹೋರಾ ಗ್ರಾಮದ ನಿವಾಸಿ ಅರ್ಜುನ್, ತನ್ನ ಪತ್ನಿ ಗೀತಾಳಿಗೆ ಭಾನುವಾರ ಮನೆಯಿಂದ ಹೊರಗೆ ಹೋಗಬೇಡವೆಂದು ತಡೆದಿದ್ದನು. ಆದ್ರೆ ಆಕೆ ಪತಿಯ ಮಾತನ್ನು ಲೆಕ್ಕಿಸದೇ ಹೊರ ಹೋಗಲು ಮುಂದಾಗಿದ್ದಾಳೆ. ಆ ವೇಳೆ ಅರ್ಜುನ್ ಕೋಪದಿಂದ ಆಕೆಯ ಮೂಗನ್ನು ಹಿಡಿದು ಕಚ್ಚಿದ್ದಾನೆ ಎಂದು ನಗರದ ಪೊಲೀಸ್ ಅಧಿಕಾರಿ ದಿನೇಶ್ ತ್ರಿಪಾಠಿ ಹೇಳಿದ್ದಾರೆ.

    ಐದು ದಿನಗಳ ಹಿಂದೆ ಗೀತಾ ಅರ್ಜುನ್ ಗೆ ಹೇಳದೆ ಕೇಳದೆ ಬರೇಲಿಗೆ ಹೋಗಿದ್ದರು. ಇದರಿಂದಾಗಿ ಕೋಪಗೊಂಡ ಅರ್ಜುನ ಆಕೆ ವಾಪಸ್ಸಾದ ಬಳಿಕ ಅನೈತಿಕ ಸಂಬಂಧ ಹೊಂದಿರಬಹುದು ಎಂದು ಅವ್ಯಾಚಪದಗಳಿಂದ ಆಕೆಗೆ ಬೈದಿದ್ದಾನೆ ಈ ಘಟನೆಯೇ ಅರ್ಜುನ್ ಗೆ ಗೀತಾಳ ಮೇಲೆ ಅನುಮಾನ ಪಡಲು ಕಾರಣವಾಗಿದೆ. ಈ ಘಟನೆ ಪೊಲೀಸರವರೆಗೂ ತಲುಪಿದ್ದು, ಹಾಗಾಗಿ ಮಧ್ಯಪ್ರವೇಶಿಸಬೇಕಾಯಿತು ಎಂದು ತ್ರಿಪಾಠಿ ಹೇಳಿದ್ದಾರೆ.

    ಸದ್ಯ ಘಟನೆ ಬಳಿಕ ಗೀತಾಳನ್ನು ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿ ಸುಂದರವಾಗಿದ್ದಾಳೆಂದು ಆಕೆಯನ್ನೇ ಮಾರಲು ಮುಂದಾದ ಪತಿ!

    ಪತ್ನಿ ಸುಂದರವಾಗಿದ್ದಾಳೆಂದು ಆಕೆಯನ್ನೇ ಮಾರಲು ಮುಂದಾದ ಪತಿ!

    ನವದೆಹಲಿ: ಪತ್ನಿಯನ್ನು ಮಾರಾಟ ಮಾಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯನ್ನು ಬಂಧಿಸಿದ್ದು ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿದೆ.

    ಸದ್ದಾಮ್(32) ತನ್ನ ಪತ್ನಿಯನ್ನೇ ಮಾರಲು ಮುಂದಾಗಿದ್ದ ಪತಿ. ಸಮೀರಾ, 28 (ಹೆಸರು ಬದಲಾಯಿಸಲಾಗಿದೆ) ಸದ್ದಾಮ್‍ನ ಎರಡನೇ ಪತ್ನಿಯಾಗಿದ್ದಳು. ಸಮೀರಾ ಸುಂದರವಾಗಿದ್ದಳು ಎಂದು ಸದ್ದಾಮ್ ಆಕೆ ಜೊತೆ ಎರಡನೇ ಮದುವೆಯಾಗಿದ್ದನು.

    ಸದ್ದಾಮ್ ತನ್ನ ಪತ್ನಿ ಸಮೀರಾ ಜೊತೆ ಹೊರಗೆ ಹೋಗುವಾಗ ಎಲ್ಲ ಪುರಷರು ಆಕೆಯನ್ನು ಗುರಾಯಿಸುತ್ತಿದ್ದರು. ಇದನ್ನೂ ಕಂಡು ಪತಿ ಅಸೂಯೆ ಪಡುತ್ತಿದ್ದ. ಅಲ್ಲದೇ ಈ ವಿಷಯಕ್ಕಾಗಿ ಸಮೀರಾ ಜೊತೆ ಜಗಳವಾಡುತ್ತಿದ್ದ. ಇಬ್ಬರ ನಡುವೆ ಜಗಳ ತೀವ್ರವಾಗಿ ಇಬ್ಬರೂ ಒಂದೇ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ವಾಸಿಸಲು ಶುರು ಮಾಡಿದ್ದರು. ಈ ನಡುವೆ ಸದ್ದಾಮ್ ತನ್ನ ಮೊದಲ ಪತ್ನಿ ಹಾಗೂ ಮೂವರು ಮಕ್ಕಳನ್ನು ಭೇಟಿಯಾಗಲು ವಾರಕ್ಕೆ ಎರಡೂ ಬಾರಿ ಅವರ ಮನೆಗೆ ಹೋಗುತ್ತಿದ್ದನು.

    ಅಗಸ್ಟ್ 1ರಂದು ಕೂಡ ಸದ್ದಾಮ್, ಸಮೀರಾ ಜೊತೆ ಶಾಪಿಂಗ್‍ಗೆ ಹೋಗಿದ್ದಾಗ ಅಲ್ಲಿ ವ್ಯಕ್ತಿಯೊಬ್ಬ ಆಕೆಯನ್ನು ಗುರಾಯಿಸಿದ್ದಕ್ಕೆ ಜಗಳವಾಡಿದ್ದ. ಇದರಿಂದ ಬೇಸತ್ತ ಸದ್ದಾಮ್ ಹೀಗೆ ಇದ್ದರೆ ಸರಿ ಹೋಗುವುದಿಲ್ಲ ಎಂದು ಆಕೆಯನ್ನು ಕೊಲೆ ಮಾಡಲು ಚಾಕು ತಂದಿದ್ದ. ಮರುದಿನ ಬೆಳಗ್ಗೆ ಸದ್ದಾಮ್ ಯೋಚನೆ ಮಾಡಿ ಆಕೆಯನ್ನು ಕೊಲೆ ಮಾಡುವ ಬದಲು ವೇಶ್ಯಾವಾಟಿಕೆ ಅಡ್ಡೆ ಅಥವಾ ಪಿಂಪ್‍ಗೆ ಮಾರಲು ನಿರ್ಧರಿಸಿದ್ದಾನೆ. ನಂತರ ದೆಹಲಿಯಲ್ಲಿರುವ ಎಲ್ಲ ವೇಶ್ಯಾವಾಟಿಕೆ ಅಡ್ಡೆ ಹಾಗೂ ಪಿಂಪ್‍ಗಳ ಬಗ್ಗೆ ವಿಚಾರಿಸಿಕೊಂಡಿದ್ದಾನೆ.

    ನಿನ್ನ ಕುಟುಂಬದವರ ಮನೆಗೆ ಸಪ್ರೈಸ್ ಭೇಟಿ ನೀಡೋಣ ಎಂದು ಸದ್ದಾಮ್ ತನ್ನ ಪತ್ನಿ ಸಮೀರಾ ಬಳಿ ಹೇಳಿದ್ದಾನೆ. ನಂತರ ದೆಹಲಿಯಲ್ಲಿರುವ ವೇಶ್ಯಾವಾಟಿಕೆ ಹಾಗೂ ಪಿಂಪ್ ಅಡ್ಡೆಗಳ ಬಗ್ಗೆ ವಿಚಾರಿಸಲು ಶುರು ಮಾಡಿದ್ದಾಗ ಗೊತ್ತಿಲ್ಲದೇ ಮಫ್ತಿ ಪೊಲೀಸರ ಜೊತೆ ಸಂಪರ್ಕ ಬೆಳೆಸಿದ್ದಾನೆ.

    ಮಾತುಕತೆಯ ವೇಳೆ ಸದ್ದಾಮ್ 1.5 ಲಕ್ಷ ರೂ. ಗೆ ತನ್ನ ಪತ್ನಿಯನ್ನು ಮಾರಾಟ ಮಾಡುತ್ತೇನೆ ಎಂದಿದ್ದಾನೆ. ಕೊನೆಗೆ 1.2 ಲಕ್ಷ ರೂ. ಗೆ ಮಾರಲು ಒಪ್ಪಿಕೊಂಡಿದ್ದಾನೆ. ನಿಗದಿಯಂತೆ ಗುರುವಾರ ರಾತ್ರಿ 8 ಗಂಟೆಗೆ ಪತ್ನಿಯನ್ನು ವೇಶ್ಯಾವಾಟಿಕೆ ಅಡ್ಡೆಯಲು ಬಿಡಲು ಸದ್ದಾಮ್ ನಿರ್ಧರಿಸಿದ್ದ. ವೇಶ್ಯಾವಾಟಿಕೆ ನಡೆಸುವವರು ಬರಲಿಲ್ಲವೆಂದರೆ ಆತ ಸಮೀರಾಳನ್ನು ಕೊಲೆ ಮಾಡಲು ಎಲ್ಲ ತಯಾರಿ ಮಾಡಿಕೊಂಡಿದ್ದ.

    ನಿಗದಿಯಾಗಿದ್ದ ಸ್ಥಳಕ್ಕೆ ಸದ್ದಾಮ್ ನನ್ನು ಬಂಧಿಸಲು ಪೊಲೀಸರು ಬಂದಿದ್ದಾರೆ. ಆದರೆ ಸದ್ದಾಮ್ ಜೊತೆ ಸಮೀರಾ ಇಲ್ಲದಿರುವುದನ್ನು ಗಮನಿಸಿದ ಪೊಲೀಸರು ಆತನ ಬಂಧನಕ್ಕೆ ವಿಳಂಬ ಮಾಡಿದ್ದರು. ಆಗ ಸದ್ದಾಮ್ ಮುಂಚಿತವಾಗಿ ಹಣ ನೀಡಿದರೆ ಮಾತ್ರ ಪತ್ನಿಯನ್ನು ಕರೆತರುವುದಾಗಿ ಬೇಡಿಕೆಯಿಟ್ಟಿದ್ದಾನೆ. ಹೀಗಾಗಿ ಪೊಲೀಸರು ಆತನಿಗೆ 10 ಸಾವಿರ ರೂ. ಮುಂಚಿತವಾಗಿ ನೀಡಿದ್ದಾರೆ.

    ಹಣ ಸಿಕ್ಕಿದ ಕೂಡಲೇ ಸದ್ದಾಮ್ ತನ್ನ ಪತ್ನಿಯನ್ನು ಕರೆತಂದಿದ್ದಾನೆ. ಪತ್ನಿ ಬಂದ ಕೂಡಲೇ ಸದ್ದಾಮ್ ನನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದಾರೆ. ಈ ವೇಳೆ ಸಮೀರಾಗೆ ತನ್ನ ಪತಿ ಮಾಡಿದ ಮೋಸದ ಬಗ್ಗೆ ಅರಿವಿರಲಿಲ್ಲ.

    ಪತಿ ಬಂಧನದ ಬಳಿಕ ಪೊಲೀಸರು ಸಮೀರಾಗೆ ಸಂಪೂರ್ಣ ವಿಷಯ ತಿಳಿಸಿದಾಗ ಆಕೆ ದಂಗಾಗಿ ಹೋಗಿದ್ದಾಳೆ. ಸದ್ಯ ಸಮೀರಾಳನ್ನು ಕೌನ್ಸಿಲರ್ ನೋಡಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ವೇಶ್ಯಾವಾಟಿಕೆ ಜಾಲಕ್ಕೆ 2ನೇ ಪತ್ನಿಯನ್ನು ಮಾರಲು ಯತ್ನಿಸಿದವ ಪೊಲೀಸ್ ಬಲೆಗೆ!

    ವೇಶ್ಯಾವಾಟಿಕೆ ಜಾಲಕ್ಕೆ 2ನೇ ಪತ್ನಿಯನ್ನು ಮಾರಲು ಯತ್ನಿಸಿದವ ಪೊಲೀಸ್ ಬಲೆಗೆ!

    ನವದೆಹಲಿ: ಎರಡನೇ ಪತ್ನಿಯನ್ನು ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡಲು ಯತ್ನಿಸಿದ್ದ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಸದ್ದಾಂ ಬಂಧಿತ ಆರೋಪಿಯಾಗಿದ್ದು, 28 ವರ್ಷದ 2ನೇ ಪತ್ನಿ ಸಮೀರಾರನ್ನು ಮಾರಾಟ ಮಾಡಲು ಯತ್ನಿಸಿದ್ದ ಆರೋಪದಡಿ ಬಂಧಿಸಲಾಗಿದೆ. ಪತ್ನಿಯನ್ನು ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಪಡೆದ ಪೊಲೀಸರು ಪಿಂಪ್ ರೀತಿ ಆತನನ್ನು ಸಂಪರ್ಕಿಸಿ ಮಾತನಾಡಿಸಿದ್ದಾರೆ. ಬಳಿಕ ಪತ್ನಿಯನ್ನು ಹಣಕ್ಕಾಗಿ ಮಾರಾಟ ಮಾಡಲು ತಿಳಿಸಿದ್ದು, ಆಕೆಯನ್ನು ಪಿಂಪ್ ವಶಕ್ಕೆ ನೀಡಲು ಬಂಧ ವೇಳೆ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

    ಆರೋಪಿ ಸದ್ದಾಂ ತನ್ನ ಪತ್ನಿಗೆ ಸಂಬಂಧಿಗಳ ಮನೆಗೆ ತೆರಳುವುದಾಗಿ ತಿಳಿಸಿದ್ದು, ಪೊಲೀಸರು ಪತಿಯನ್ನು ವಶಕ್ಕೆ ಪಡೆದ ವೇಳೆ ಸಮೀರಾ ಶಾಕ್ ಆಗಿದ್ದಾರೆ. ಸದ್ಯ ಸಮೀರಾರನ್ನು ಮಹಿಳಾ ಸಾಂತ್ವಾನ ಅಧಿಕಾರಿಗಳ ವಶಕ್ಕೆ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

    ಕೊಲೆಗೆ ಸಂಚು?
    ಆರೋಪಿ ಸದ್ದಾಂ ಹಾಗೂ ಪತ್ನಿ ಸಮೀರಾ ದೆಹಲಿ ಅಪಾರ್ಟ್ ಮೆಂಟ್‍ವೊಂದರಲ್ಲಿ ವಾಸಿಸುತ್ತಿದ್ದು ಇಬ್ಬರ ನಡುವೆ ಕೌಟುಂಬಿಕ ಕಾರಣಕ್ಕಾಗಿ ಜಗಳ ನಡೆಯುತ್ತಿತ್ತು. ಇದರಿಂದ ಅಕ್ಕಪಕ್ಕದ ಮನೆಯವರ ಬಳಿ ಆತ ಅವಮಾನಕ್ಕೆ ಒಳಗಾಗಿದ್ದ. ಅವಮಾನದಿಂದಸ ಬೇಸರಗೊಂಡ ಸದ್ದಾಂ ಪತ್ನಿಯನ್ನು ಕೊಲೆ ಮಾಡಲು ಯೋಚಿಸಿದ್ದ. ಆದರೆ ಬಳಿಕ ತನ್ನ ಸಂಚು ಬದಲಿಸಿ ದೆಹಲಿಯ ವೇಶ್ಯಾವಾಟಿಕೆ ಜಾಲಕ್ಕೆ ಪತ್ನಿಯನ್ನು ಮಾರಾಟ ಮಾಡಿ ಹಣ ಗಳಿಸುವ ಉದ್ದೇಶ ಹೊಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪತ್ನಿಯನ್ನು ಮಾರಾಟ ಮಾಡುವ ಯತ್ನದಲ್ಲಿ ಸದ್ದಾಂ ಪಿಂಪ್ ಒಬ್ಬರ ಸಹಾಯ ಪಡೆದಿದ್ದ, ಈ ಕುರಿತು ಮಾಹಿತಿ ಪಡೆದ ಪೊಲೀಸರು ಸದ್ದಾಂನನ್ನು ಪ್ಲಾನ್ ಮಾಡಿ ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಜೋಡಿ ಕೊಲೆ: ಪತಿಯಿಂದ ಪತ್ನಿಯ ಕೊಲೆ- ಇತ್ತ ಮೇಲ್ಛಾವಣಿ ಮೇಲೆ ಮಲಗಿದ್ದ ಯುವಕನ ಬರ್ಬರ ಹತ್ಯೆ

    ಜೋಡಿ ಕೊಲೆ: ಪತಿಯಿಂದ ಪತ್ನಿಯ ಕೊಲೆ- ಇತ್ತ ಮೇಲ್ಛಾವಣಿ ಮೇಲೆ ಮಲಗಿದ್ದ ಯುವಕನ ಬರ್ಬರ ಹತ್ಯೆ

    ಗದಗ: ಜಿಲ್ಲೆಯಲ್ಲಿ ಒಂದೇ ದಿನ ಎರಡು ಕೊಲೆಯಾಗಿದ್ದು, ವ್ಯಕ್ತಿಯೊಬ್ಬ ಪತ್ನಿಯನ್ನೇ ಕೊಲೆ ಮಾಡಿದ್ರೆ ಇತ್ತ ರೋಣದಲ್ಲಿ ಯುವಕನನ್ನು ಮಾರಕಾಸ್ತರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

    ಗದಗ ತಾಲೂಕಿನ ಅಸುಂಡಿ ಗ್ರಾಮದ ವಿನೋದಾ(28) ಪತಿಯಿಂದ ಕೊಲೆಯಾದ ದುರ್ದೈವಿ. ಆರೋಪಿ ಪತಿ ಹನುಮಂತ ಈ ಕೊಲೆ ಮಾಡಿದ್ದಾನೆ. ಆಸ್ತಿವಿವಾದಕ್ಕೆ ಸಂಬಂಧಪಟ್ಟಂತೆ ಕೌಟುಂಬಿಕ ಕಲಹವೇ ಈ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಜೊತೆಗೆ ಇಬ್ಬರ ನಡುವೆ ಮತ್ತೊಂದು ಅನೈತಿಕ ಸಂಬಂಧದ ಅನುಮಾನವೂ ಕಾರಣ ಎನ್ನಲಾಗುತ್ತಿದೆ.

    ವಿನೋದಾ ಶುಕ್ರವಾರ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಪತಿ ಹನುಮಂತ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಕೊಲೆಮಾಡಿದ್ದಾನೆ. ಕೊಲೆ ಮಾಡಿದ ನಂತರ ಹನಮಂತ ಗದಗ ಗ್ರಾಮೀಣ ಪೊಲೀಸ್ ಠಾಣೆಗೆ ಸ್ವತ: ತಾನೆ ಬಂದು ಶರಣಾಗಿದ್ದಾನೆ. ಆರು ವರ್ಷದಿಂದ ಗಂಡ-ಹೆಂಡತಿ ನಡುವೆ ಜಗಳವಾಗಿ ಇಬ್ಬರು ದೂರವಿದ್ದರು. ಆರು ವರ್ಷದ ನಂತರ ಹೊಂಚು ಹಾಕಿ ಮಿಗಿಸಿಯೇ ಬಿಟ್ಟಿದ್ದಾನೆ ಎಂದು ಸಹೋದರ ಮಂಜುನಾಥ್ ಹೇಳಿದ್ದಾರೆ.

    ಜಿಲ್ಲೆಯ ರೋಣ ತಾಲೂಕಿನ ಯಾ.ಸ. ಹಡಗಲಿ ಗ್ರಾಮದಲ್ಲಿ 20 ವರ್ಷದ ದಾವಲ್ ಸಾಬ್ ಬೆಳವಣಿಕಿ ಯುವಕನನ್ನ ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿದೆ. ಮನೆಯ ಮೇಲ್ಛಾವಣಿಯ ಮೇಲೆ ಮಲಗಲು ಹೋಗಿದ್ದನು. ಆದರೆ ಮುಂಜಾನೆ ರಕ್ತದ ಮಡುವಿನಲ್ಲಿ ಮೃತದೇಹ ಕಂಡು ಗ್ರಾಮಸ್ಥರು ಕಂಗಾಲಾಗಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ ಕೊಲೆಗೆ ಕಾರಣ ಹಾಗೂ ಕೊಲೆ ಮಾಡಿದ ಆರೋಪಿ ಮಾತ್ರ ಪತ್ತೆಯಾಗಿಲ್ಲ. ಆರೋಪಿಗಳ ಸುಳಿವಿಗೆ ಪೊಲೀಸರು ಬಲೆ ಬೀಸಿದ್ದಾರೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಇಲ್ಲಿದೆ ಕರುಣಾನಿಧಿಯವರ ರಸಮಯ ಬದುಕಿನ ಚಿತ್ರಣ!

    ಇಲ್ಲಿದೆ ಕರುಣಾನಿಧಿಯವರ ರಸಮಯ ಬದುಕಿನ ಚಿತ್ರಣ!

    ಚೆನ್ನೈ: ವಿದ್ಯಾರ್ಥಿ ಚಳುವಳಿ, ಸಾಮಾಜಿಕ ಹೋರಾಟ, ಸಿನಿಮಾ ರಂಗದ ಪಯಣ, ರಾಜಕೀಯದ ಏಳು-ಬೀಳು, ಏರಿದ ಉನ್ನತ ಹುದ್ದೆ ಇದರಿಂದಾಚೆಗೆ ಕರುಣಾನಿಧಿಯವರ ವೈಯಕ್ತಿಕ ಜೀವನ ರಂಗು ಹೊಂದಿತ್ತು. ತಮಿಳುನಾಡಿನ ಆರಾಧ್ಯ ದೈವ, ದ್ರಾವಿಡ ಚಳವಳಿಯ ಕಡೆಯ ಕೊಂಡಿ ಕಲೈನರ್ ಕರುಣಾನಿಧಿಯವರ ರಸಮಯ ಬದುಕಿನ ಚಿತ್ರಣ ಇಲ್ಲಿದೆ.

    60ರ ದಶಕ ಕೊನೆಯಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿದ್ದ ಮುಥುವೇಲು ಕರುಣಾನಿಧಿಯವರ ಬಳಿ, ಸರ್ಕಾರದಿಂದ ಅಧಿಕೃತವಾಗಿ ನೀವು ಬಾಡಿಗೆ ಪಡೆದು ನೆಲೆಸುತ್ತಿರುವ ಆಲಿವರ್ ರಸ್ತೆಯಲ್ಲಿರುವ ಆ ಕಟ್ಟಡದಲ್ಲಿ ನಿಮ್ಮೊಂದಿಗಿರುವವರು ಯಾರು ಎಂಬ ವಿಚಿತ್ರ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಸಂದರ್ಭದಲ್ಲಿ ಪ್ರಶ್ನಿಸಿದವರ ಕಣ್ಣಲ್ಲಿ ಕಣ್ಣಿಟ್ಟು ಉತ್ತರಿಸಿದ್ದ ಕರುಣಾನಿಧಿ, ಅಲ್ಲಿ ನನ್ನ ಮಗಳು ಕನಿಮೋಳಿಯ ತಾಯಿ ವಾಸಿಸುತ್ತಿದ್ದಾರೆ ಎಂದಿದ್ದರು. ಇದಾದ ಬಳಿಕ ರಜತಿ ಅಮ್ಮಲ್‍ರನ್ನು ಅವರ ಅಧಿಕೃತ ಪತ್ನಿ ಎನ್ನಲಾಯಿತು. ಇದಾದ ಬಳಿಕ ಯಾರೊಬ್ಬರೂ ಕರುಣಾನಿಧಿಯ ಬಳಿ ಇಂತಹ ಪ್ರಶ್ನೆ ಕೇಳಲಿಲ್ಲ.

    ಕಳೆದ ಕೆಲ ದಶಕಗಳಿಂದ ಕರುಣಾನಿಧಿಯವರ ದಿನಚರಿ ಕಣ್ಣಿಗೆ ಕಟ್ಟುವಂತಿತ್ತು. ಅವರು ಸಿಜೆಐ ಕಾಲೋನಿಯ ಐಷಾರಾಮಿ ಬಂಗಲೆಯಲ್ಲಿ ರಜತಿ ಅಮ್ಮಲ್ ಜೊತೆಗೆ ರಾತ್ರಿ ಕಳೆಯುತ್ತಿದ್ದರು. ಬೆಳಗಾಗುತ್ತಿದ್ದಂತೆಯೇ ತಮ್ಮ ಪತ್ನಿ ದಯಾಲ್ ಅಮ್ಮಲ್ ಇದ್ದ ಗೋಪಾಲ್‍ಪುರ್ ನಲ್ಲಿದ್ದ ಅಧಿಕೃತ ನಿವಾಸಕ್ಕೆ ತೆರಳುತ್ತಿದ್ದರು. ತಮಿಳುನಾಡು ರಾಜಕಾರಣದಲ್ಲಿ, ರಾಜಕೀಯ ಮುಖಂಡರಿಗೆ ಒಂದಕ್ಕಿಂತ ಹೆಚ್ಚು ಪತ್ನಿಯರಿರುವ ಪರಂಪರೆ ಇದೆ. ಇದನ್ನು ಅಲ್ಲಿನ ಜನರು “ಚಿನ್ನವೀಡು” ಎನ್ನುತ್ತಾರೆ. ಆದರೆ ಹಿಂದೂ ಆಕ್ಟ್ ಅನ್ವಯ ಕಾನೂನಾತ್ಮಕವಾಗಿ ಒಂದಕ್ಕಿಂತ ಹೆಚ್ಚು ವಿವಾಹವಾಗುವುದು ಅಪರಾಧವಾಗಿದೆ. ಆದರೆ ಕರುಣಾನಿಧಿಗೆ ಈ ವಿಚಾರವಾಗಿ ಯಾವತ್ತೂ ಸಮಸ್ಯೆ ಎದುರಾಗಿಲ್ಲ. ಅವರು ತಮ್ಮ ಜೀವನದಲ್ಲಿ ಮೂವರನ್ನು ಮದುವೆಯಾಗಿದ್ದಾರೆ. ಇವರಲ್ಲಿ ಇಬ್ಬರನ್ನು ಸಕಲ ಸಂಪ್ರದಾಯದಂತೆ ವಿವಾಹವಾಗಿದ್ದರೆ, ಒಬ್ಬರನ್ನು ಅನ್ಯ ಪರಂಪರೆಯನ್ವಯ ಮದುವೆಯಾಗಿದ್ದರು.

    ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಕರುಣಾನಿಧಿಗೆಗೆ ಪ್ರಖ್ಯಾತ ಗಾಯಕ ಜಯರಾಮನ್ ಪರಿಚಯವಾಗಿತ್ತು. ಕ್ರಮೇಣ ಇವರ ತಂಗಿ ಪದ್ಮಾವತಿ ಅಮ್ಮಾಯ್ಯರ್ ಪರಿಚಯವಾಗಿ ಪ್ರೀತಿಗೆ ತಿರುಗಿತು. 1945 ರಲ್ಲಿ ಕರುಣಾನಿಧಿ ಪದ್ಮಾವತಿಯನ್ನು ವಿವಾಹವಾದರು. ಇವರಿಗೆ ಹುಟ್ಟಿದ ಗಂಡು ಮಗನೇ ಎಂ.ಕೆ ಮುತ್ತು. ಪದ್ಮಾವತಿ ಕರುಣಾನಿಧಿ ಜೊತೆ ಹೆಚ್ಚು ದಿನ ಬದುಕಲೇ ಇಲ್ಲ. 1948ರಲ್ಲಿ ಕಾಯಿಲೆಯೊಂದಕ್ಕೆ ತುತ್ತಾಗಿ ಕೊನೆಯುಸಿರೆಳದ್ದರು. ಇದಾಗಿ ನಾಲ್ಕು ವರ್ಷಗಳ ಬಳಿಕ 1952ರಲ್ಲಿ ಕರುಣಾನಿಧಿ ಪೋಷಕರು ದಯಾಲು ಅಮ್ಮಲ್‍ರೊಂದಿಗೆ ಎರಡನೇ ಮದುವೆ ಮಾಡಿಸಿದ್ದರು. ಇವರಿಗೆ ಮೂವರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಮಗು ಸೇರಿ ನಾಲ್ವರು ಮಕ್ಕಳಾದರು. ಅವರೇ ಎಂ.ಕೆ. ಅಳಗಿರಿ, ಎಂ.ಕೆ ಸ್ಟಾಲಿನ್, ಎಂ.ಕೆ ತಮಿಳಾರಸು ಹಾಗೂ ಸೆಲ್ವಿ. ಇದೊಂದು ಪರಿಪೂರ್ಣ ಕುಟುಂಬವಾಗಿತ್ತು.

    ಈ ವೇಳೆಗಾಗಲೇ ಕರುಣಾನಿಧಿ ರಾಜಕೀಯವೆಂಬ ಹಡಗಿನಲ್ಲಿ ಅಣ್ಣಾದೊರೈಯೊಂದಿಗೆ ತಮ್ಮ ಪ್ರಯಾಣ ಆರಂಭಿಸಿದ್ದರು. ನಂತರ ಚುನಾವಣೆ ಸಂದರ್ಭದಲ್ಲಿ ಎಐಎಡಿಎಂಕೆ ಚುನಾವಣಾ ಪಕ್ಷದ ಪ್ರಚಾರ ತಂಡದಲ್ಲಿ ರಜತಿ ಎಂಬಾಕೆಯನ್ನು ಕಂಡ ಕುರುಣಾನಿಧಿಗೆ ಮತ್ತೊಂದು ಪ್ರೇಮಾಂಕುರವಾಯ್ತು. ದಯಾಲು ಅಮ್ಮಲ್‍ರನ್ನೂ ಬಿಡಲು ಇಷ್ಟಪಡದ ಕರುಣಾನಿಧಿ ರಜತಿಯನ್ನು ಬಿಟ್ಟುಕೊಡಲು ಮನಸ್ಸಿರಲಿಲ್ಲ. 1966ರಲ್ಲಿ ಪಕ್ಷದ ಹಲವಾರು ಹಿರಿಯರ ಸಮ್ಮುಖದಲ್ಲಿ ರಜತ ನಾನು ಜೀವಮಾನವಿಡೀ ಜೊತೆಯಾಗಿರುತ್ತೇವೆಂದು ಪ್ರತಿಜ್ಞೆ ಮಾಡಿ, ಆಶೀರ್ವಾದ ಪಡೆದರು. ಇದಾಗಿ ಒಂದು ವರ್ಷದಲ್ಲಿ ಕನಿಮೋಳಿ ಜನಿಸಿದರು. ಕಾನೂನಾತ್ಮಕವಾಗಿ ದಯಾಲು ಅವರ ಹೆಂಡತಿಯಾಗಿದ್ದರೂ, ಜಗತ್ತಿನ ದೃಷ್ಟಿಯಲ್ಲಿ ಇಬ್ಬರೂ ಅವರ ಹೆಂಡತಿಯರು. ಇಬ್ಬರು ಹೆಂಡತಿಯರು ಏಕಕಾಲದಲ್ಲಿ ಕರುಣಾನಿಧಿ ಭಾಗವಹಿಸುತ್ತಿದ್ದ ಸಾರ್ವಜನಿಕ ಸಭೆಗಳಲ್ಲಿ ಕಾಣಸಿಗುತ್ತಿದ್ದರು. ಆದರೆ ಇವರ ಮಕ್ಕಳ ನಡುವೆ ಮಾತ್ರ ಹೊಂದಾಣಿಕೆ ಬರಲೇ ಇಲ್ಲ. ಇಷ್ಟೆಲ್ಲಾ ಏರಿಳಿತಗಳನ್ನು ಹೊಂದಿರುವ ವರ್ಣರಂಜಿತ ವ್ಯಕ್ತಿತ್ವ ಈಗ ಕೊನೆಯಾಗಿದೆ.

  • ಟಿವಿ ಹಚ್ಚಿದ್ರೆ 500 ರೂ, ಲೇಟ್ ಆದ್ರೆ 2 ಸಾವಿರ, ಸ್ವಿಚ್ಛ್ ಹಾಕಿದ್ರೆ 50 ರೂ-ಪ್ರತಿ ತಪ್ಪಿಗೂ ದಂಡ ವಿಧಿಸೋ ಪತಿರಾಯ

    ಟಿವಿ ಹಚ್ಚಿದ್ರೆ 500 ರೂ, ಲೇಟ್ ಆದ್ರೆ 2 ಸಾವಿರ, ಸ್ವಿಚ್ಛ್ ಹಾಕಿದ್ರೆ 50 ರೂ-ಪ್ರತಿ ತಪ್ಪಿಗೂ ದಂಡ ವಿಧಿಸೋ ಪತಿರಾಯ

    ಮುಂಬೈ: ಮನೆಯಲ್ಲಿ ಪತಿಯೊಬ್ಬ ಪತ್ನಿ ಮಾಡುವ ಸಣ್ಣ ತಪ್ಪುಗಳಿಗೂ ದಂಡ ಹಾಕುವ ಮೂಲಕ ಕಿರುಕುಳ ನೀಡುತ್ತಿರುವ ವಿಚಿತ್ರ ಪ್ರಕರಣವೊಂದು ಮುಂಬೈನಲ್ಲಿ ಬೆಳಕಿಗೆ ಬಂದಿದೆ.

    ಪತ್ನಿ ಶ್ವೇತಾ ಮಾಡುವ ಪ್ರತಿಯೊಂದು ತಪ್ಪಿಗೆ ಪತಿರಾಯ ಅನಿಲ್ ದಂಡ ಪಡೆಯುತ್ತಿದ್ದಾನೆ. ಅನಿಲ್ ಮತ್ತು ಶ್ವೇತಾ 14 ವರ್ಷಗಳ ಹಿಂದೆ ಪ್ರೇಮಿಸಿ ಮದುವೆಯಾಗಿದ್ದರು. ಪುಣೆ ಮೂಲದ ಶ್ವೇತಾ ಮದುವೆ ಬಳಿಕ ಮುಂಬೈನಲ್ಲಿ ವಾಸವಾಗಿದ್ದರು. ಮದುವೆಯಾದ 5 ವರ್ಷ ಚೆನ್ನಾಗಿಯೇ ಇದ್ದ ಅನಿಲ್ ನಂತರ ಶ್ವೇತಾರ ಪ್ರತಿಯೊಂದು ತಪ್ಪುಗಳಿಗೆ ದಂಡ ವಿಧಿಸಲು ಆರಂಭಿಸಿದ್ದಾನೆ. ಪತಿಯ ಕಿರುಕುಳದಿಂದ ಬೇಸತ್ತ ಶ್ವೇತಾ ತವರು ಮನೆ ಸೇರಿದ್ದು, ಸ್ಥಳೀಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಯಾವ ತಪ್ಪಿಗೆ ಎಷ್ಟು ದಂಡ?:
    1. ಮಾರುಕಟ್ಟೆಯಿಂದ ಬಾಳೆಹಣ್ಣು ತರದೇ ಇದ್ದರೆ 100 ರೂ.
    2. ಮನೆಯಲ್ಲಿ ಹೆಚ್ಚಿನ ಸಮಯವರೆಗೆ ಟಿವಿ ನೋಡಿದ್ರೆ 500 ರೂ.
    3. ಮಕ್ಕಳನ್ನು ಶಾಲೆಯಿಂದ ಅಥವಾ ಟ್ಯೂಶನ್ ನಿಂದ ಕರೆತರೋದು ತಡವಾದರೆ 2,000 ರೂ.
    4. ಮನೆಯ ಯಾವುದೇ ಕೋಣೆಯಲ್ಲಿ ಅನಾವಶ್ಯಕವಾಗಿ ಲೈಟ್ ಹಾಕಿದರೆ 50 ರೂ.

    ಹೀಗೆ ಪತ್ನಿಯ ಪ್ರತಿಯೊಂದು ಕೆಲಸದಲ್ಲಿ ಕಂಡು ಹಿಡಿದು ಅನಿಲ್ ದಂಡ ಹಾಕಲಾರಂಭಿಸಿದ್ದಾನೆ. ಶ್ವೇತಾ ಎಂಬಿಎ ಪದವೀಧರೆಯಾಗಿದ್ದು, ಮುಂಬೈನ ಖಾಸಗಿ ಹೋಟೆಲ್ ನಲ್ಲಿ ಕೆಲಸ ಮಾಡಿ ತಿಂಗಳಿಗೆ 22,000 ರೂ. ಸಂಬಳ ಪಡೆಯುತ್ತಾರೆ. ದಂಡ ಅಂತಾ ಹೇಳಿ ತಿಂಗಳ ಪೂರ್ಣ ಸಂಬಳವನ್ನು ಪಡೆದು ಕೇವಲ ಖರ್ಚಿಗೆ 500 ರೂ. ಅನಿಲ್ ನೀಡುತ್ತಾನೆ. ಹೊಸ ಬಟ್ಟೆ ಖರೀದಿಸಲು ಹಣ ನೀಡುವುದಿಲ್ಲ ಎಂದು ಶ್ವೇತಾ ಆರೋಪಿಸಿದ್ದಾರೆ.

    ಅನಿಲ್ ಸಹ ಎಂಬಿಎ ಪದವೀಧರನಾಗಿದ್ದು ಖಾಸಗಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 1 ಲಕ್ಷದ 10 ಸಾವಿರ ರೂ. ಸಂಬಳ ಪಡೆಯುತ್ತಿದ್ದಾನೆ. ಮುಂಬೈನಲ್ಲಿ ಮೂರು ಫ್ಲ್ಯಾಟ್ ಅನಿಲ್ ಹೊಂದಿದ್ದಾನೆ. ಒಂದು ಫ್ಲ್ಯಾಟ್‍ನಲ್ಲಿ ಅನಿಲ್ ವಾಸವಾಗಿದ್ದು, ಉಳಿದೆರೆಡನ್ನು ಬಾಡಿಗೆಗೆ ನೀಡಿದ್ದಾನೆ. ಎರಡು ತಿಂಗಳ ಹಿಂದೆ ಶ್ವೇತಾರ ಸಿಮ್ ಕಾರ್ಡ್, ಬ್ಯಾಗ್, ಕ್ರೆಡಿಟ್, ಡೆಬಿಟ್ ಕಾರ್ಡ್, ಪರ್ಸ್ ಎಲ್ಲವು ಪಡೆದುಕೊಂಡು ಮನೆಯಿಂದ ಹೊರ ಹಾಕಿದ್ದಾನೆ.

    ತನ್ನ ತಪ್ಪಿನ ಅರಿವಾದ ಅನಿಲ್ ಪತ್ನಿಯನ್ನು ಕರೆಯಲು ಪುಣೆಗೆ ತೆರಳಿದ್ದಾನೆ. ಈ ವೇಳೆ ಕುಟುಂಬ ವೈದ್ಯರು ಇಬ್ಬರಿಗೂ ಕೌನ್ಸಿಲಿಂಗ್ ಮಾಡಿದ್ದಾರೆ. ಕೌನ್ಸಲಿಂಗ್ ಬಳಿಕವೂ ಶ್ವೇತಾ ಪತಿಯೊಂದಿಗೆ ಮುಂಬೈ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews