Tag: ಪತ್ನಿ

  • ತಾಯಿ, ಮಗನಿಂದಲೇ ಪತಿಯ ಕತ್ತು ಹಿಸುಕಿ ಕೊಲೆ

    ತಾಯಿ, ಮಗನಿಂದಲೇ ಪತಿಯ ಕತ್ತು ಹಿಸುಕಿ ಕೊಲೆ

    ಕೋಲಾರ: ಕುಡಿದು ಬಂದು ನಿತ್ಯ ಕಿರುಕುಳ ನೀಡುತ್ತಿದ್ದ ಪತಿಯನ್ನು ತಾಯಿ ಹಾಗೂ ಮಗನೆ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಆಲಂಬಾಡಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಗ್ರಾಮದ ಮುನಿಕೃಷ್ಣ(45) ಕೊಲೆಯಾದ ವ್ಯಕ್ತಿ. ಶುಕ್ರವಾರ ಮುನಿಕೃಷ್ಣ ಪತ್ನಿ ಸುಕನ್ಯ ಹಾಗೂ ಮಗ ಕತ್ತು ಹಿಸುಕಿ ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ.

    ಮೃತ ಮುನಿಕೃಷ್ಣನ ತಾಯಿ ರಾಮಕ್ಕನಿಗೆ ಅನುಮಾನ ಬಂದ ಹಿನ್ನೆಲೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸೊಸೆ ಹಾಗೂ ಮೊಮ್ಮಗನ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆ ಬಂಗಾರಪೇಟೆ ಪೊಲೀಸರು ತಾಯಿ ಮತ್ತು ಮಗನನ್ನು ವಿಚಾರಣೆಗೆ ಒಳಪಡಿಸಿದಾಗ, ನಿತ್ಯ ಕುಡಿದು ಕಿರುಕುಳ ನೀಡುತ್ತಿದ್ದ ಹಿನ್ನೆಲೆ ತಾವೇ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

    ಸದ್ಯ ಪತ್ನಿ ಹಾಗೂ ಮಗನನ್ನು ಬಂಗಾರಪೇಟೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಿನಕ್ಕೆ 3-4 ಸರಗಳ್ಳತನ ಮಾಡ್ಲೆಬೇಕೆಂದು ತಾಕೀತು – ಪತಿಗೆ ಗುಂಡೇಟು ಬಿಳ್ತಿದ್ದಂತೆ ಪತ್ನಿ ಎಸ್ಕೇಪ್

    ದಿನಕ್ಕೆ 3-4 ಸರಗಳ್ಳತನ ಮಾಡ್ಲೆಬೇಕೆಂದು ತಾಕೀತು – ಪತಿಗೆ ಗುಂಡೇಟು ಬಿಳ್ತಿದ್ದಂತೆ ಪತ್ನಿ ಎಸ್ಕೇಪ್

    ಬೆಂಗಳೂರು: ಕುಖ್ಯಾತ ಚೈನ್ ಸ್ನ್ಯಾಚರ್ ಅಚ್ಯುತ್ ಕುಮಾರ್ ಪತ್ನಿಗಾಗಿ ಕೆಂಗೇರಿ ಪೊಲೀಸರು ಮೂರು ತಿಂಗಳಿನಿಂದ ಹುಡುಕಾಟ ನಡೆಸುತ್ತಿದ್ದಾರೆ.

    ಸರಗಳ್ಳ ಅಚ್ಯುತ್ ಕುಮಾರ್ ಪತ್ನಿ ಮಹಾದೇವಿಗಾಗಿ ಕೆಂಗೇರಿ ಪೊಲೀಸರು ಬಲೆ ಬೀಸಿದ್ದು, ಮೂರು ತಿಂಗಳಿನಿಂದ ನಿರಂತರವಾಗಿ ಮಹಾದೇವಿಗಾಗಿ ಹುಡುಕಾಟ ನಡಸುತ್ತಿದ್ದಾರೆ. ಆರೋಪಿ ಮಹಾದೇವಿ ಐಷಾರಾಮಿ ಜೀವನಕ್ಕಾಗಿ ಸರಗಳ್ಳತನ ಮಾಡುವಂತೆ ಪತಿಯನ್ನು ಒತ್ತಾಯಿಸಿದ್ದಳು. ಆದರೆ ಆರೋಪಿ ಪತಿ ಅಚ್ಯುತ್ ಕುಮಾರ್ ಮೇಲೆ ಗುಂಡೇಟು ಬೀಳುತ್ತಿದ್ದಂತೆ ಪೊಲೀಸರ ಕೈಗೆ ಸಿಗದೇ ಪರಾರಿಯಾಗಿದ್ದಾಳೆ. ಇದನ್ನೂ ಓದಿ: ಸರಗಳ್ಳನ ಮೇಲೆ ಶೂಟೌಟ್- ಚಿನ್ನದ ಸರದ ಗಣಿಯೇ ಪತ್ತೆ

    ಮಹಾದೇವಿ ಐಷಾರಾಮಿ ಜೀವನಕ್ಕಾಗಿ ಮೊದಲ ಪತಿಗೆ ಕೈಕೊಟ್ಟು ಅಚ್ಯುತ್ ಕುಮಾರ್ ನನ್ನು ಮದುವೆಯಾಗಿದ್ದಳು. ಅಷ್ಟೇ ಅಲ್ಲದೇ ಮಹಾದೇವಿ ದಿನಕ್ಕೆ ಕನಿಷ್ಟ ಮೂರ್ನಾಲ್ಕು ಸರಗಳ್ಳತನ ಮಾಡಲೇಬೇಕೆಂದು ಗಂಡನಿಗೆ ತಾಕೀತು ಮಾಡಿದ್ದಳು. ಹೆಂಡತಿ ಮಾತಿನಂತೆಯೇ ಅಚ್ಯುತ್ ಕುಮಾರ್ ಕಳ್ಳತನ ಮಾಡುತ್ತಿದ್ದನ್ನು ಎನ್ನುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: 150 ಕೇಸ್ ನಲ್ಲಿ ಬೇಕಾಗಿದ್ದ ಆರೋಪಿಗೆ ಶೂಟ್, ಅರೆಸ್ಟ್ – ಡಿಸಿಪಿ ರವಿ ಡಿ.ಚನ್ನಣ್ಣನವರಿಂದ ತಂಡಕ್ಕೆ ಬಹುಮಾನ ಘೋಷಣೆ

    ಒಂದೇ ವರ್ಷದಲ್ಲಿ ಅಚ್ಯುತ್ ಕುಮಾರ್ ಸುಮಾರು ಒಂದೂವರೆ ಕೋಟಿ ರೂ. ಬೆಲೆ ಬಾಳುವಷ್ಟು ಸರಗಳ್ಳತನ ಮಾಡಿದ್ದನು. ಆದರೆ ಮೂರು ತಿಂಗಳ ಹಿಂದೆ ನೈಸ್ ರೋಡ್ ಬಳಿ ಆರೋಪಿ ಅಚ್ಯುತ್ ಕಾಲಿಗೆ ಗುಂಡು ಹಾರಿಸಿ ಆತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಅಂದಿನಿಂದಲೂ ಪತ್ನಿ ಮಹಾದೇವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಅಚ್ಯುತ್ ಕುಮಾರ್ ವಿರುದ್ಧ ಸುಮಾರು ಬೆಂಗಳೂರಿನಲ್ಲಿ 70 ಸರಗಳ್ಳತನ ಕೇಸ್ ಗಳು ದಾಖಲಾಗಿದೆ. ಆದರೆ ರಾಜ್ಯದ ಇತರ ಜಿಲ್ಲೆಗಳೂ ಸೇರಿ ಒಟ್ಟು 150 ಕ್ಕೂ ಹೆಚ್ಚು ಕೇಸ್ ಆರೋಪಿ ಅಚ್ಯುತ್ ಮೇಲೆ ದಾಖಲಾಗಿದೆ. ಅಷ್ಟೇ ಅಲ್ಲದೇ ಬಂಧನಕ್ಕೂ ಮುನ್ನ ತುಮಕೂರಿನಲ್ಲಿ ಮೂರು ಕಡೆ ಸರಗಳ್ಳತನ ಮಾಡಿದ್ದನು. ಜೂನ್ 17 ರಂದು ಸರಗಳ್ಳ ಅಚ್ಯುತ್ ಕುಮಾರ್ ನನ್ನ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನ್ನ ಹೆಂಡ್ತಿ ನನಗೆ ಬೈತಾಳೆ, ಸಿಎಂ ಮಾಡಿದ್ದು ಅನ್ಯಾಯ, ಮೈಸೂರು, ರಾಮನಗರಗಳಿಗೆ ಮಾತ್ರ ಸೀರೆ ಯಾಕೆ?

    ನನ್ನ ಹೆಂಡ್ತಿ ನನಗೆ ಬೈತಾಳೆ, ಸಿಎಂ ಮಾಡಿದ್ದು ಅನ್ಯಾಯ, ಮೈಸೂರು, ರಾಮನಗರಗಳಿಗೆ ಮಾತ್ರ ಸೀರೆ ಯಾಕೆ?

    ಚಿಕ್ಕಬಳ್ಳಾಪುರ: “ಸರ್ ಗೌರಿ ಗಣೇಶ ಹಬ್ಬಕ್ಕೆ ಕಡಿಮೆ ರೇಟ್‍ಗೆ ರೇಷ್ಮೆ ಸೀರೆ ಕೊಡ್ತಾರಲ್ಲ. ಚಿಕ್ಕಬಳ್ಳಾಪುರದಲ್ಲಿ ಎಲ್ಲಿ ಕೊಡ್ತಾರೆ ಸರ್? ನನ್ನ ಹೆಂಡತಿ ಬಿಡ್ತಾ ಇಲ್ಲ ಸರ್ ಸೀರೆ ಬೇಕೇ ಬೇಕು ಅಂತ ತಲೆ ತಿಂತಾವಳೆ. ಕಡಿಮೆ ಬೆಲೆಗೆ ರೇಷ್ಮೆ ಸೀರೆ ನಮ್ಮ ಜಿಲ್ಲೆಗೂ ನೀಡಿದ್ದರೇ ಕುಮಾರಸ್ವಾಮಿ ಅವರಿಗೆ ಏನಾಗುತ್ತಿತ್ತು. ಇದು ಅನ್ಯಾಯ ಸರ್. ಮೈಸೂರಿಗೆ ಮಾತ್ರ ನೀಡಿ, ಚಿಕ್ಕಬಳ್ಳಾಪುರಕ್ಕೆ ನೀಡುತ್ತಿಲ್ಲ. ಇದರಿಂದ ಮನೆಯಲ್ಲಿ ರೇಷ್ಮೆ ಸೀರೆಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ನನ್ನ ಹೆಂಡತಿ ನನಗೆ ಬೈತಾಳೆ” – ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಪಬ್ಲಿಕ್ ಟಿವಿ ಪ್ರತಿನಿಧಿಗೆ ಬಂದ ಕರೆಯ ಸಂಭಾಷಣೆ.

    ಗೌರಿ ಹಬ್ಬದ ಅಂಗವಾಗಿ ರಾಜ್ಯ ಸರ್ಕಾರ ಕರ್ನಾಟಕ ಸಿಲ್ಕ್ ಇಂಡಸ್ಟ್ರಿಸ್ ಕಾರ್ಪೋರೇಷನ್ ಲಿಮಿಟೆಡ್ (ಕೆಎಸ್‍ಐಸಿ) ಮಹಿಳೆಯರಿಗೆ ಕಡಿಮೆ ರೇಷ್ಮೆ ಸೀರೆ ನೀಡುವ ಆಫರ್ ಪ್ರಕಟಿಸಿದೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಸೀರೆ ನೀಡದ್ದಕ್ಕೆ ಮಹಿಳೆಯರು ಆಕ್ರೋಶಗೊಂಡಿದ್ದಾರೆ. ಮೈಸೂರು ಸೇರಿದಂತೆ ಕೆಲ ಜಿಲ್ಲೆಗಳ ಬಹುತೇಕ ಮಹಿಳೆಯರು ಬೆಲೆಬಾಳುವ ಸೀರೆಯನ್ನು ಕಡಿಮೆ ಬೆಲೆಗೆ ಲಕ್ಕಿ ಕೂಪನ್ ಮೂಲಕ ಪಡೆಯುತ್ತಿರುವುದು ಬಯಲು ಸೀಮೆ ಜಿಲ್ಲೆಯ ಮಹಿಳೆಯರಿಗೆ ಸಹಿಸಲಾಗುತ್ತಿಲ್ಲ.

    ಏನಿದು ಆಫರ್?
    ಗೌರಿ ಹಬ್ಬದ ಅಂಗವಾಗಿ ರಾಜ್ಯ ಸರ್ಕಾರ ಕರ್ನಾಟಕ ಸಿಲ್ಕ್ ಇಂಡಸ್ಟ್ರಿಸ್ ಕಾರ್ಪೋರೇಷನ್ ಲಿಮಿಟೆಡ್ (ಕೆಎಸ್‍ಐಸಿ) ವತಿಯಿಂದ ರಾಜ್ಯಾದ್ಯಂತ 14 ಸಾವಿರ ರೂ. ಬೆಲೆ ಬಾಳುವ 5 ಸಾವಿರ ಮೈಸೂರು ಸಿಲ್ಕ್ ಸೀರೆಗಳನ್ನು 4,725 ರೂ.ಗಳ ಬಂಪರ್ ರಿಯಾಯಿತಿ ದರದಲ್ಲಿ ನೀಡಿದೆ. ಲಕ್ಕಿ ಡಿಪ್ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿದೆ. ಸೀರೆ ಅಗತ್ಯವಿರುವವರಿಂದ ಆಧಾರ್ ಕಾರ್ಡ್ ಪಡೆದು ಅವರ ಹೆಸರಿನ ಚೀಟಿಗಳನ್ನು ಲಕ್ಕಿ ಡಿಪ್ ಮುಖಾಂತರ ಆಯ್ಕೆ ಮಾಡಿದೆ. ಅಂತೆಯೇ ರಾಜ್ಯದ ಐದು ಕೇಂದ್ರಗಳಲ್ಲಿ ಸೀರೆ ಕೊಳ್ಳುವ ಮಹಿಳೆಯರಿಂದ ಆಧಾರ್ ಪಡೆದು ನೋಂದಣಿ ಕಾರ್ಯ ಆರಂಭಿಸಿ, ಸೀರೆ ವಿತರಿಸಲಾಗಿದೆ. ಆದರೆ ಈ ಕೇಂದ್ರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಲ್ಲ.

    ಇಲಾಖಾಧಿಕಾರಿಗಳ ಮಾಹಿತಿ ಪ್ರಕಾರ ಬೆಂಗಳೂರು ಮತ್ತು ಮೈಸೂರು ಕೇಂದ್ರಗಳಲ್ಲಿ 3,000, ಚನ್ನಪಟ್ಟಣದಲ್ಲಿ 1,000, ದಾವಣಗೆರೆಯಲ್ಲಿ 500, ಬೆಳಗಾವಿಯಲ್ಲಿ 500 ಸೀರೆಗಳು ಸೇರಿ ಒಟ್ಟು 5 ಸಾವಿರ ಸೀರೆಗಳನ್ನು 5,000 ಮಂದಿ ಮಹಿಳೆಯರಿಗೆ ವಿತರಿಸಿದೆ. ಸೀರೆ ನಿಗದಿತ ಮೊತ್ತ 14 ಸಾವಿರ ರೂ. ಇದ್ದು, ಸರ್ಕಾರ ಅದನ್ನು 4,725 ರೂ.ಗೆ ರಿಯಾಯಿತಿಯಲ್ಲಿ ವಿತರಿಸಿದೆ. ಈ ಸೌಲಭ್ಯ ಹಲವು ಜಿಲ್ಲೆಗಳಿಗೆ ಸಿಗದಿರುವುದು ಪತಿರಾಯರ ಕಣ್ಣೀರ ಕತೆಗೆ ಕಾರಣವಾಗಿದೆ ಎಂದರೇ ನೀವು ನಂಬಲೇ ಬೇಕು.

    ಇನ್ನೂ 5 ಜಿಲ್ಲೆಗಳಲ್ಲ ಗೌರಿ ಹಬ್ಬದ ಕೊಡುಗೆಯಾಗಿ ಬೆಲೆ ಬಾಳುವ ಸೀರೆಯನ್ನು ಕಡಿಮೆ ಬೆಲೆಗೆ ಪಡೆದುಕೊಂಡಿರುವ ನಾರಿಮಣಿಯರ ಸುದ್ದಿ ಮೀಡಿಯಾಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾದ ಬಳಿಕ ಜಿಲ್ಲೆಯಲ್ಲಿನ ಮಹಿಳೆಯರ ಕಣ್ಣು ಕೆಂಪಾಗಿದೆ. ನನಗೆ 10 ಸಾವಿರದ ರೇಷ್ಮೆ ಸೀರೆಯೇ ಬೇಕು ಎಂದು ತಮ್ಮ ಗಂಡದಿರ ಜೀವ ಹಿಂಡುತ್ತಿದ್ದಾರೆ. ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರುವ ಪತಿರಾಯರು, ಸರ್ಕಾರ ಮೋಸ ಮಾಡುತ್ತಿದೆ. ನಮ್ಮನ್ನು ನಮ್ಮ ಹೆಂಡತಿ ಮೂಲಕ ಗೋಳು ಹೂಯ್ದುಕೊಳ್ಳುತ್ತಿದೆ. ಸರ್ಕಾರ ಸುಮ್ಮನಿರಬೇಕಿತ್ತು. ಎಲ್ಲ ಜಿಲ್ಲೆಗಳಲ್ಲಿಯೂ ಸೀರೆ ನೀಡಬೇಕಿತ್ತು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಹಬ್ಬ-ಹರಿದಿನಗಳಲ್ಲಿ ಜೇಬು ಖಾಲಿ ಮಾಡಿಕೊಳ್ಳುತ್ತಿದ್ದ ಪುರುಷರು, ಇದೀಗ ತಮ್ಮ ಪತ್ನಿಯರಿಗೆ ಸೀರೆ ಕೊಡಿಸಲು ಸಾಲ ಮಾಡುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೇಗಿಲಿನಿಂದ ಹೊಡೆದು ಪತಿಯಿಂದ್ಲೇ ಪತ್ನಿಯ ಬರ್ಬರ ಕೊಲೆ

    ನೇಗಿಲಿನಿಂದ ಹೊಡೆದು ಪತಿಯಿಂದ್ಲೇ ಪತ್ನಿಯ ಬರ್ಬರ ಕೊಲೆ

    ಚಿಕ್ಕಬಳ್ಳಾಪುರ: ಆಸ್ತಿ ವಿಚಾರದಲ್ಲಿ ಉಂಟಾದ ಜಗಳದಲ್ಲಿ ಪತಿಯೊರ್ವ ತನ್ನ ಪತ್ನಿಯನ್ನ ನೇಗಿಲಿನಿಂದ ಹೊಡೆದು ಕೊಂದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಯರಲಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಭಾರತಮ್ಮ(28) ಮೃತ ದುರ್ದೈವಿ ಪತ್ನಿ. ಇವರನ್ನು ಪತಿ 35 ವರ್ಷದ ಗಂಗಾಧರ್ ಕೊಲೆ ಮಾಡಿದ್ದಾನೆ. ಗಂಗಾಧರ್ ಗೆ ಎರಡು ಮದುವೆ ಆಗಿದ್ದು ಮೊದಲ ಪತ್ನಿ ತೀರಿಕೊಂಡ ನಂತರ ಎರಡನೇ ವಿವಾಹವಾಗಿದ್ದನು. ಮೊದಲು ಪತ್ನಿಗೆ ಒರ್ವ ಮಗಳಿದ್ದು, ಎರಡನೇ ಪತ್ನಿ ಮೃತ ಭಾರತಮ್ಮಳಿಗೆ 8 ವರ್ಷದ ಗಂಡು ಮಗನಿದ್ದಾನೆ.

    ಆಸ್ತಿಯಲ್ಲಿ ಮೊದಲ ಹೆಂಡತಿ ಮಗಳಿಗೂ ಪಾಲು ಕೊಡುವ ವಿಚಾರದಲ್ಲಿ ಇಬ್ಬರ ನಡುವೆ ಪದೇ ಪದೇ ಜಗಳಗಳಾಗುತ್ತಿದ್ದು, ಇಂದು ಸಹ ಅದೇ ವಿಚಾರವಾಗಿ ಜಗಳ ಆಗಿದೆ. ನನ್ನ ಮಗನಿಗೆ ಸಂಪೂರ್ಣ ಆಸ್ತಿ ಸೇರಬೇಕು ಅಂತ ಭಾರತಮ್ಮ ಪಟ್ಟು ಹಿಡಿದಿದ್ದಳಂತೆ. ಇದ್ರಿಂದ ಸಿಟ್ಟುಗೊಂಡ ಗಂಡ ಮನೆಯಲ್ಲಿಯೇ ಇದ್ದ ನೇಗಿಲಿನಿಂದ ತಲೆಗೆ ಹೊಡೆದಿದ್ದಾನೆ. ಇದ್ರಿಂದ ಭಾರತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಈ ಸಂಬಂಧ ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಆರೋಪಿ ಗಂಡ ಗಂಗಾಧರ್ ನನ್ನ ವಶಕ್ಕೆ ಪಡೆದಿರುವ ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತಿಯಿಂದಲೇ ಪತ್ನಿ ಕುತ್ತಿಗೆಗೆ ಚಾಕು ಇರಿತ!

    ಪತಿಯಿಂದಲೇ ಪತ್ನಿ ಕುತ್ತಿಗೆಗೆ ಚಾಕು ಇರಿತ!

    ದಾವಣಗೆರೆ: ಪತ್ನಿಯ ಮೇಲೆ ಪತಿ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಓಂಕಾರೇಶ್ವರಿ ಬಡಾವಣೆಯಲ್ಲಿ ನಡೆದಿದೆ.

    ದೇವಮ್ಮ(35) ಪತಿ ತಿಪ್ಪೇಸ್ವಾಮಿಯಿಂದಲೇ ಚಾಕುವಿನಿಂದ ಹಲ್ಲೆಗೊಳಗಾದ ಮಹಿಳೆ. 10 ವರ್ಷದ ಹಿಂದೆ ಇಬ್ಬರಿಗೂ ಮದುವೆಯಾಗಿದ್ದು, ಮೂರು ಜನ ಮಕ್ಕಳಿದ್ದಾರೆ.

    ಹಲ್ಲೆಗೊಳಗಾದ ಮಹಿಳೆ ಸಂಬಂಧಿಕರ ಮನೆಗೆ ಹೋಗಿ ಬಂದ ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದದೆ. ಪತ್ನಿಯ ಮಾತುಗಳಿಂದ ಸಿಟ್ಟುಗೊಂಡ ಪತಿ, ದೇವಮ್ಮ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ದೇವಮ್ಮ ಅವರನ್ನು ಕೂಡಲೇ ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಷ ಸೇವಿಸಿ ಜೀವನ್ಮರಣದ ಹೋರಾಡುತ್ತಿದ್ದ ಯುಪಿ ಐಪಿಎಸ್ ಅಧಿಕಾರಿ ಸಾವು

    ವಿಷ ಸೇವಿಸಿ ಜೀವನ್ಮರಣದ ಹೋರಾಡುತ್ತಿದ್ದ ಯುಪಿ ಐಪಿಎಸ್ ಅಧಿಕಾರಿ ಸಾವು

    ಲಕ್ನೋ: ವಿಷ ಸೇವಿಸಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿ ಸುರೇಂದ್ರ ಕುಮಾರ್ ದಾಸ್ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.

    ಪತ್ನಿಯೊಂದಿಗೆ ಜಗಳವಾಡಿದ್ದ ಸುರೇಂದ್ರ ಅವರು, ಜೀವನ ಅಂತ್ಯಗೊಳಿಸುವ ದಾರಿಗಳ ಬಗ್ಗೆ ತಮ್ಮ ಮೊಬೈಲ್ ಹಾಗೂ ಲ್ಯಾಪ್ ಟಾಪ್‍ನಲ್ಲಿ ಕೆಲ ದಿನಗಳಿಂದ ಗೂಗಲ್ ಸರ್ಚ್ ಮಾಡಿದ್ದರು ಎನ್ನುವುದು ಪೊಲೀಸ್ ತನಿಖೆ ವೇಳೆ ಬಯಲಾಗಿತ್ತು. 30 ವರ್ಷದ ಅಧಿಕಾರಿ ಸುರೇಂದ್ರ ಕುಮಾರ ದಾಸ್ ಅವರು ಆಗಸ್ಟ್ 9ರಂದು ಕಾನ್ಪುರ ಪೂರ್ವ ವಿಭಾಗದ ಎಸ್‍ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

    ಸೆಪ್ಟೆಂಬರ್ 5 ರಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ದಾಸ್ ಅವರನ್ನು ಪೇದೆಯೊಬ್ಬರು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಅವರನ್ನು ಬದುಕಿಸಲು ಮುಂಬೈನಿಂದ ವೈದ್ಯರ ತಂಡವನ್ನು ಕರೆಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದಾಸ್ ಅವರು ಮೃತಪಟ್ಟಿದ್ದಾರೆ.

    ವಿಷ ಕಿಡ್ನಿಯ ಮೇಲೆ ಪ್ರಭಾವ ಬೀರಿದ್ದು, ದೇಹದ ಎಲ್ಲ ಅಂಗಗಳೂ ಬಹುತೇಕ ಕಾರ್ಯ ಸ್ಥಗಿತಗೊಳಿಸಿವೆ ಎಂದು ಶನಿವಾರವೇ ಆಸ್ಪತ್ರೆಯ ಹಿರಿಯ ವೈದ್ಯ ರಾಜೇಸ್ ಅಗರವಾಲ್ ತಿಳಿಸಿದ್ದರು.

    ಶನಿವಾರ ಉತ್ತರ ಪ್ರದೇಶ ರಾಜ್ಯದ ಡಿಜಿಪಿ ಓ.ಪಿ.ಸಿಂಗ್ ಕೂಡಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇನ್ನು ಸುರೇಂದ್ರ ಅವರ ಸಾವಿನ ಸುದ್ದಿ ತಿಳಿಸಿಯುತ್ತಿದ್ದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಟನ್ ಅಡುಗೆ ಮಾಡದ ಪತ್ನಿ- ಕಬ್ಬಿಣದ ಪೈಪ್‍ನಿಂದ ಹೊಡೆದು 3ನೇ ಮಹಡಿಯಿಂದ ತಳ್ಳಿದ ಪತಿ

    ಮಟನ್ ಅಡುಗೆ ಮಾಡದ ಪತ್ನಿ- ಕಬ್ಬಿಣದ ಪೈಪ್‍ನಿಂದ ಹೊಡೆದು 3ನೇ ಮಹಡಿಯಿಂದ ತಳ್ಳಿದ ಪತಿ

    ಲಕ್ನೋ: ಮಾಂಸದ ಅಡುಗೆಯನ್ನು ಮಾಡಿಕೊಡದ್ದಕ್ಕೆ ಸಿಟ್ಟಿಗೆದ್ದ ಕುಡುಕ ಪತಿಯೊಬ್ಬನು ತನ್ನ ಪತ್ನಿಯನ್ನು ಕಬ್ಬಿಣದ ಕೊಳವೆ(ಪೈಪ್)ಯಿಂದ ಹೊಡೆದು, ಮೂರನೇ ಮಹಡಿಯಿಂದ ತಳ್ಳಿ ಹತ್ಯೆ ಮಾಡಿದ್ದ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಪಚ್ವಾನ್ ಕಾಲೋನಿಯ ರಾಣಿ ಕೊಲೆಯಾದ ಪತ್ನಿ. ಮನೋಜ್ ಕುಮಾರ್ (30) ಕೊಲೆ ಮಾಡಿದ ಪತಿರಾಯ. ಗುರುವಾರ ರಾತ್ರಿ 11.30ರ ಸುಮಾರಿಗೆ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ ಪತಿ ಮನೋಜ್, ರಾಣಿಗೆ ಮಾಂಸದ ಅಡುಗೆಯನ್ನು ಮಾಡಲು ಹೇಳಿದ್ದಾನೆ. ಈ ವೇಳೆ ಪತ್ನಿ ಮಾಂಸದ ಅಡುಗೆ ಮಾಡುವುದಕ್ಕೆ ನಿರಾಕರಿಸಿದ್ದಾಳೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಇದರಿಂದ ರೊಚ್ಚಿಗೆದ್ದ ಮನೋಜ್ ಆಕೆಯ ಮೇಲೆ ಕಬ್ಬಿಣದ ಕೊಳವೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.

    ಹತ್ಯೆಯ ಬಳಿಕ ಕೊಲೆಯನ್ನು ಮುಚ್ಚಿ ಹಾಕಲು ತನ್ನ ತಂದೆ ನೇತ್ರಪಾಲ್ ಹಾಗೂ ಸಹೋದರ ಮನೀಶ್ ಜೊತೆಗೂಡಿ ಪತ್ನಿಯನ್ನು ಮೂರನೇ ಮಹಡಿಯಿಂದ ಬಿಸಾಕಿದ್ದಾರೆ. ಶುಕ್ರವಾರ ಬೆಳಗ್ಗೆ ಕಟ್ಟಡದ ಬಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಗಮನಿಸಿದ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ರಾಣಿ ಮೃತಪಟ್ಟಿದ್ದಾರೆ.

    ಮರಣೋತ್ತರ ಪರೀಕ್ಷೆಯ ವೇಳೆ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದರಿಂದ ಅನುಮಾನಗೊಂಡು ಮಹಿಳೆಯ ಪತಿ ಮನೋಜ್ ಕುಮಾರ್ ಸಹೋದರ ಮನೀಶ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೆವು. ವಿಚಾರಣೆ ವೇಳೆ ಮನೋಜ್ ತನ್ನ ಪತ್ನಿಯನ್ನು ಕಬ್ಬಣದ ಕೊಳವೆಯಿಂದ ಹೊಡೆದು ಹತ್ಯೆ ಮಾಡಿರುವುದಾಗಿ ಆತನ ಸಹೋದರ ಒಪ್ಪಿಕೊಂಡಿದ್ದಾನೆ ಎಂದು ನಾರ್ಕಿ ಪೊಲೀಸರು ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಅನಿಲ್, ಮಾಂಸದ ಅಡುಗೆ ಮಾಡಿ ಕೊಡಲಿಲ್ಲವೆಂಬ ಕ್ಷುಲ್ಲಕ ವಿಚಾರಕ್ಕೆ ಪತಿಯೇ ಪತ್ನಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಮನೋಜ್ ಹಾಗೂ ಆತನ ತಂದೆಗಾಗಿ ತೀವ್ರ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾನು ದೈವ ಸ್ವರೂಪಿ, ತೊಡೆ ಮೇಲೆ ಕೂತ್ಕೊ-ಸಾಮೀಜಿಯಿಂದ ಲೈಂಗಿಕ ಕಿರುಕುಳ

    ನಾನು ದೈವ ಸ್ವರೂಪಿ, ತೊಡೆ ಮೇಲೆ ಕೂತ್ಕೊ-ಸಾಮೀಜಿಯಿಂದ ಲೈಂಗಿಕ ಕಿರುಕುಳ

    -ಸಂತ್ರಸ್ತೆಯಿಂದ ಪತಿ, ಸ್ವಾಮೀಜಿ ವಿರುದ್ಧ ದೂರು

    ಮೈಸೂರು: ಗೃಹಿಣಿಯೊಬ್ಬರು ಸ್ವಾಮೀಜಿಯ ವಿರುದ್ಧ ಅತ್ಯಾಚಾರ ಯತ್ನ ಕೇಸ್ ದಾಖಲಿಸಿದ್ದಾರೆ.

    ಪಾಂಡವಪುರ ಶ್ರೀ ಕ್ಷೇತ್ರ ತ್ರಿಧಾಮ ಆಶ್ರಮದ ವಿದ್ಯಾಹಂಸ ಭಾರತಿ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿದೆ. ಕುವೆಂಪು ನಗರದ ನಿವಾಸಿಯಿಂದ ದೂರು ದಾಖಲಾಗಿದೆ. ಚಾತುರ್ಯಾಮಾಸ ಪೂಜೆಗೆ ಎಂದು ಮನೆಗೆ ಬಂದಾಗ ಅತ್ಯಾಚಾರಕ್ಕೆ ಯತ್ನಸಿದ್ದಾನೆ. ಅಷ್ಟೇ ಅಲ್ಲದೇ ಸ್ವಾಮೀಜಿಯ ಈ ಕೃತ್ಯಕ್ಕೆ ಪತಿಯೇ ಸಹಕಾರ ಕೊಟ್ಟಿದ್ದಾನೆ ಎಂದು ದೂರಿನಲ್ಲಿ ಗೃಹಿಣಿ ಉಲ್ಲೇಖಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ನನ್ನ ಪತಿ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀ ರಾಮಮಂದಿದಲ್ಲಿ ವಿದ್ಯಾಹಂಸ ಭಾರತಿ ಸ್ವಾಮೀಜಿ ಪರಿಚಯ ಇದ್ದಾರೆ. ಅವರು ಹೇಳಿದಂತೆ ಕೇಳಿದರೆ ನಮ್ಮ ಸಾಲವನ್ನೆಲ್ಲಾ ತೀರಿಸಿಕೊಳ್ಳಬಹುದು ಎಂದು ಹೇಳಿದನು. ಅದಕ್ಕೆ ನಾನು ನಿರಾಕರಿಸಿದೆ. ಮಂಗಳವಾರ ರಾತ್ರಿ ಸುಮಾರು 1 ಗಂಟೆಗೆ ಮನೆಗೆ ಬಂದು ಬೆಲ್ ಮಾಡಿದರು. ನಾನು ನನ್ನ ಪತಿ ಬಂದಿರಬೇಕು ಎಂದು ಬಾಗಿಲು ತೆಗೆದೆ. ಆದರೆ ನಮ್ಮ ಗಂಡನ ಜೊತೆ ಸ್ವಾಮೀಜಿ ಮತ್ತು ಆತನ ಚೇಲಾಗಳು ಸುಮಾರು 5 ಜನ ಏಕಾಏಕಿ ಮನೆಗೆ ನುಗ್ಗಿದರು.

    ನಮ್ಮ ಪತಿ ಮತ್ತು ಸ್ವಾಮೀಜಿ ನನ್ನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಸ್ವಾಮೀಜಿ ನನ್ನ ಸೇವೆಗೆ ಬರುವುದಿಲ್ಲ ಎಂದು ನಿರಾಕರಿಸುತ್ತೀಯಾ ಎಂದು ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿ ರೂಮಿಗೆ ಎಳೆದುಕೊಂಡು ಹೋಗಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ನಾನು ದೇವಿ ಸ್ವರೂಪದವನು ನನ್ನ ಬೇಡಿಕೆಯನ್ನು ತಿರಸ್ಕರಿಸುತ್ತೀಯಾ ಎಂದು ಮೃಗನಂತೆ ವರ್ತಿಸಿದನು. ಇದಕ್ಕೆ ನನ್ನ ಪತಿ ಕುಮ್ಮಕ್ಕು ಕೊಟ್ಟಿದ್ದಾನೆ.

    ಅಷ್ಟೇ ಅಲ್ಲದೇ ನನ್ನ ಬಟ್ಟೆ, ಹಾಸಿಗೆ, ಮಂಚಕ್ಕೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದನು. ಕೊನೆಗೆ ನಾನು ತಪ್ಪಿಸಿಕೊಂಡು ಪಕ್ಕದ ಮನೆಗೆ ಹೋಗಲು ಯತ್ನಸಿದೆ. ಅಷ್ಟರಲ್ಲಿ ಎಳೆದುಕೊಂಡು ಕಾರಿನಲ್ಲಿ ತನ್ನ ತೊಡೆ ಮೇಲೆ ಕೂರಿಸಿಕೊಂಡು ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಇನ್ನು ಮೂರು ದಿನದಲ್ಲಿ ನನ್ನ ಸೇವೆಗೆ ಬರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ನನ್ನ ಪತಿಯ ಸಹೋದರನ ಮನೆಗೆ ಬಿಟ್ಟು ಹೋಗಿದ್ದಾನೆ. ಆದ್ದರಿಂದ ಸ್ವಾಮೀಜಿ, ಪತಿ ಮತ್ತು ಮೇಲ್ಕಂಡವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಘಟನೆ ಸಂಬಂಧ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೃಷ್ಣಜನ್ಮಾಷ್ಟಮಿಯಂದು ಪತ್ನಿಯ ನಾನ್ ವೆಜ್ ಪಿಜ್ಜಾ ಆರ್ಡರ್ – ಗೂಗಲ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಐಪಿಎಸ್ ಅಧಿಕಾರಿ!

    ಕೃಷ್ಣಜನ್ಮಾಷ್ಟಮಿಯಂದು ಪತ್ನಿಯ ನಾನ್ ವೆಜ್ ಪಿಜ್ಜಾ ಆರ್ಡರ್ – ಗೂಗಲ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಐಪಿಎಸ್ ಅಧಿಕಾರಿ!

    – ಪತ್ನಿ ಜೊತೆ ಗಲಾಟೆ ಬಳಿಕ ಖಿನ್ನತೆಗೆ ಜಾರಿದ್ದ ಎಸ್‍ಪಿ
    – ವೈದ್ಯಕೀಯ ವಿದ್ಯಾಭ್ಯಾಸ ನಡೆಸುತ್ತಿರುವ ಪತ್ನಿ

    ಕಾನ್ಪುರ: ಕೃಷ್ಣಾಷ್ಟಮಿಯಂದು ಪತ್ನಿ ನಾನ್ ವೆಜ್ ಪಿಜ್ಜಾ ಆರ್ಡರ್ ಮಾಡಿದ್ದಕ್ಕೆ ಶುರುವಾದ ಗಲಾಟೆ ಐಪಿಎಸ್ ಅಧಿಕಾರಿಯೊಬ್ಬರ ಆತ್ಮಹತ್ಯೆ ಯತ್ನದಲ್ಲಿ ಅಂತ್ಯವಾಗಿದೆ. ಉತ್ತರ ಪ್ರದೇಶದ ಈ ಐಪಿಎಸ್ ಅಧಿಕಾರಿ ಸದ್ಯ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಜೀವನ ಅಂತ್ಯಗೊಳಿಸುವ ದಾರಿಗಳ ಬಗ್ಗೆ ಈ ಅಧಿಕಾರಿ ತನ್ನ ಮೊಬೈಲ್ ಹಾಗೂ ಲ್ಯಾಪ್ ಟಾಪ್‍ನಲ್ಲಿ ಕೆಲ ದಿನಗಳಿಂದ ಗೂಗಲ್ ಸರ್ಚ್ ಮಾಡಿದ್ದರು ಎಂಬ ವಿಚಾರವೂ ಪೊಲೀಸ್ ತನಿಖೆ ವೇಳೆ ಬಯಲಾಗಿದೆ. 30 ವರ್ಷದ ಅಧಿಕಾರಿ ಸುರೇಂದ್ರ ಕುಮಾರ ದಾಸ್ ಅವರು ಕಳೆದ 1 ತಿಂಗಳ ಹಿಂದಷ್ಟೇ ಅಂದರೆ ಆಗಸ್ಟ್ 9ರಂದು ಕಾನ್ಪುರ ಪೂರ್ವ ವಿಭಾಗದ ಎಸ್‍ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

    ಆಗಿದ್ದೇನು?
    ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯ ಐಪಿಎಸ್ ಅಧಿಕಾರಿ ಸುರೇಂದ್ರ ದಾಸ್ ಕಳೆದ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲೇ ಕೃಷ್ಣಾಷ್ಟಮಿ ಆಚರಣೆ ಬಳಿಕ ತಮ್ಮ ಮೊಬೈಲ್ ಹಾಗೂ ಲ್ಯಾಪ್‍ಟಾಪಲ್ಲಿ ವಿಷವನ್ನು ತೆಗೆದುಕೊಳ್ಳುವುದು ಹೇಗೆ, ರೇಜರ್ ಬಳಸಿ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಇತ್ಯಾದಿ ವೀಡಿಯೋಗಳನ್ನು ನೋಡಿದ್ದಾರೆ. ಈ ಬಗ್ಗೆ ಪೊಲೀಸ್ ತನಿಖೆ ಮುಂದುವರಿದಿದ್ದು, ಈ ವೇಳೆ ಈ ಮಹತ್ವದ ಅಂಶಗಳು ಬಯಲಾಗಿವೆ ಎಂದು ಕಾನ್ಪುರರ ಎಸ್‍ಎಸ್‍ಪಿ ಅನಂತ್ ದೇವ್ ಹೇಳಿದ್ದಾರೆ.

    ಸದ್ಯ ದಾಸ್ ಅವರನ್ನು ಉಳಿಸಿಕೊಳ್ಳಲು ವೈದ್ಯಾಧಿಕಾರಿಗಳ ತಂಡ ಶತಾಯಗತಾಯ ಪ್ರಯತ್ನ ನಡೆಯುತ್ತಿದ್ದು, ಮುಂಬೈನಿಂದ ವಿಶೇಷ ವೈದ್ಯಕೀಯ ತಂಡ ದೌಡಾಯಿಸಿದೆ. ಎಲ್ಲರೂ ದಾಸ್ ಉಳಿವಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಪೂರ್ವ ಕಾನ್ಪುರ ಎಸ್‍ಪಿಯಾಗಿ ಸುರೇಂದ್ರ ಕುಮಾರ್ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಬುಧವಾರ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ?
    ದಾಸ್ ಹಾಗೂ ಅವರ ಪತ್ನಿ ರವೀನಾ ಸಿಂಗ್ ಮಧ್ಯೆ ಆಹಾರ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ ಅಂತ ದಾಸ್ ಮನೆಯ ಹತ್ತಿರದ ನಿವಾಸಿಯೊಬ್ಬರು ತಿಳಿಸಿದ್ದಾರೆ. ದಾಸ್ ಪತ್ನಿ ರವೀನಾ ಅವರು ಜಿಎಸ್‍ವಿಎಂ ಮೆಡಿಕಲ್ ಕಾಲೇಜಿನಲ್ಲಿ ಮಾಸ್ಟರ್ಸ್ ಇನ್ ಸರ್ಜರಿ ವ್ಯಾಸಂಗ ಮಾಡುತ್ತಿದ್ದಾರೆ.

    ಕೃಷ್ಣ ಜನ್ಮಾಷ್ಟಮಿಯಂದು ದಾಸ್ ಪತ್ನಿ ನಾನ್ ವೆಜ್ ಪಿಜ್ಜಾ ಆರ್ಡರ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ಮಧ್ಯೆ ಗಲಾಟೆ ಶುರುವಾಗಿದೆ. ಗಲಾಟೆ ತಾರಕಕ್ಕೇರುತ್ತಿದ್ದಂತೆಯೇ ಅವರ ಸಂಬಂಧಿಕರು ಮನೆಗೆ ಬಂದು ಸಂಧಾನ ಮಾತುಕತೆ ನಡೆಸಿದ್ದರು. ಇದಾದ ಬಳಿಕ ದಾಸ್ ಖಿನ್ನತೆಗೆ ಜಾರಿದ್ದರು ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಾಸ್ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ವೈದ್ಯರು ಹೇಳುತ್ತಿದ್ದಾರೆ. ಅಲ್ಲದೇ ವಿಷಕಾರಿ ಅಂಶ ಸೇವಿಸಿದ್ದರಿಂದ ಅದು ದಾಸ್ ಕಿಡ್ನಿ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಅಂತ ಆಸ್ಪತ್ರೆಯ ವೈದ್ಯಕೀಯ ಮುಖ್ಯ ಅಧೀಕ್ಷಕ ಡಾ. ರಾಜೇಶ್ ಅಗರ್‍ವಾಲ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದ್ವೆಯಾದ ಮೂರೇ ದಿನಕ್ಕೆ ಆತ್ಮಹತ್ಯೆಗೆ ಶರಣಾದ ವರ!

    ಮದ್ವೆಯಾದ ಮೂರೇ ದಿನಕ್ಕೆ ಆತ್ಮಹತ್ಯೆಗೆ ಶರಣಾದ ವರ!

    ಅಮರಾವತಿ: ಮಡದಿ ನೋಡಲು ಸಾಧಾರಾಣವಾಗಿ ಕಾಣಿಸುತ್ತಿದ್ದಾಳೆ ಎಂದು ಮನನೊಂದು ವರನೊಬ್ಬ ಮದುವೆಯಾಗಿ ಮೂರನೇ ದಿನಕ್ಕೆ ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರ ಪ್ರದೇಶದ ವಿಜಿಯಾನಗರಂ ನಗರದಲ್ಲಿ ನಡೆದಿದೆ.

    ಶೇಖ್ ಮಥೀನ್ ಆತ್ಮಹತ್ಯೆಗೆ ಶರಣಾದ ವರ. ಮಥೀನ್ ಚಿಪುರಪಳ್ಳಿ ಮಂಡಳದ ಪೆಡನಾಡಿಪಳ್ಳಿಯ ಕಂದಾಯ ಅಧಿಕಾರಿಯಾಗಿದ್ದನು. ಇದೇ ಸೆಪ್ಟೆಂಬರ್ 2 ರಂದು ವಿಶಾಖಪಟ್ಟಣದ ಸಾಲೂರು, ರೈಲ್ವೇ ಕಾಲೋನಿಯ ಮೊಹಮೂದ್ ಮುಬೀನ್ ಎಂಬವರ ಜೊತೆ ವಿವಾಹವಾಗಿತ್ತು. ವಧು ನೋಡಲು ಸುಂದರವಾಗಿ ಕಾಣುತ್ತಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಶರಣನಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಮದುವೆಯ ಬಳಿಕ ಮಥೀನ್ ಮಡದಿಯು ನೋಡಲು ಸುಂದರವಾಗಿಲ್ಲ, ಆಕೆಯ ಮುಖದ ಮೇಲೆ ಕಪ್ಪು ಮೊಡವೆಗಳಿಗೆ, ಹೀಗಾಗಿ ನನಗೆ ಇಷ್ಟವಿಲ್ಲವೆಂದು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದನು. ತಾಯಿಯು ಮುಬೀನಾಳಿಗೆ ಚಿಕಿತ್ಸೆ ನೀಡಿದರೆ ಸರಿಹೋಗುತ್ತದೆ ಚಿಂತಿಸಬೇಡ ಎಂದು ಸಮಾಧಾನ ಪಡಿಸಿದ್ದರು. ಆದರೆ ತಾಯಿಯ ಮಾತಿಗೆ ಮಥೀನ್ ಸಮಾಧಾನ ಹೊಂದಿರಲಿಲ್ಲ ತಿಳಿದು ಬಂದಿದೆ.

    ಕಳೆದ ಮಂಗಳವಾರ ಎರಡೂ ಮನೆಯವರು ಆರತಕ್ಷತೆಗೆ ಸಿದ್ಧತೆ ಮಾಡಿಕೊಂಡಿದ್ದರು. ಈ ವೇಳೆ ಮಥೀನ್ ಬಾಬಾಮೆಟ್ಟದಲ್ಲಿರುವ ತನ್ನ ಸ್ನೇಹಿತನ ಮನೆಗೆ ಹೋಗಿ ಬರುತ್ತೇನೆಂದು ಹೊರಟು, ಸ್ನೇಹಿತನ ಮನೆಯಲ್ಲೇ ನೇಣಿಗೆ ಶರಣನಾಗಿದ್ದಾನೆ. ಸ್ನೇಹಿತ ಮನೆಗೆ ಹೋಗುತ್ತಿರುವ ವಿಚಾರ ತಿಳಿದ ಸ್ನೇಹಿತರು ಹಾಗೂ ಆಕೆಯ ತಾಯಿ ಆತನಿಗೆ ಕರೆ ಮಾಡಲು ಯತ್ನಿಸುತ್ತಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

    ಕೂಡಲೇ ಸ್ನೇಹಿತನ ಮನೆಗೆ ಬಂದು ನೋಡಿದಾಗ, ಆತ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಮಥೀನ್‍ನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಯಿತಾದರೂ, ಆಸ್ಪತ್ರೆಗೆ ಕರೆತರುವ ಮುನ್ನವೇ ಮೃತಪಟ್ಟಿದ್ದಾನೆಂದು ವೈದ್ಯರು ದೃಢಪಡಿಸಿದ್ದಾರೆ.

    ಪುತ್ರನ ಸಾವಿನಿಂದ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು, ನನ್ನ ಮಗನ ಸಾವಿಗೆ ಮುಬೀನ ಕುಟುಂಬದವರೇ ಕಾರಣವೆಂದು ಆಕ್ರೋಶ ಹೊರಹಾಕಿದ್ದಾರೆ. ಮದುವೆಗೂ ಮುನ್ನ ಮುಬೀನ್ ಪೋಷಕರು ಬೇರೆ ಯುವತಿಯನ್ನು ತೋರಿಸಿದ್ದರು. ಮದುವೆಯ ವೇಳೆ ಮತ್ತೊಬ್ಬ ಯುವತಿಯೊಂದಿಗೆ ವಿವಾಹ ಮಾಡಿಕೊಟ್ಟಿದ್ದರು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮುಬೀನ್ ಕುಟುಂಬದವರ ವಿರುದ್ಧ ಮಥೀನ್ ತಾಯಿ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv