Tag: ಪತ್ನಿ ಪಲ್ಲವಿ

  • ನನ್ನ ಪತಿ ಕಾಫಿಯನ್ನೇ ಕುಡಿಯಲ್ಲ, ಇನ್ನು ಡ್ರಿಂಕ್ಸ್ ಹೇಗೆ ಮಾಡ್ತಾರೆ: ಸಿ.ಟಿ.ರವಿ ಪತ್ನಿ

    ನನ್ನ ಪತಿ ಕಾಫಿಯನ್ನೇ ಕುಡಿಯಲ್ಲ, ಇನ್ನು ಡ್ರಿಂಕ್ಸ್ ಹೇಗೆ ಮಾಡ್ತಾರೆ: ಸಿ.ಟಿ.ರವಿ ಪತ್ನಿ

    ಚಿಕ್ಕಮಗಳೂರು: ಶಾಸಕ ಸಿ.ಟಿ.ರವಿ ಕಾರು ಡಿಕ್ಕಿ ಪ್ರಕರಣ ಸಂಬಂಧ, ಅಪಘಾತದಿಂದ ದುರ್ಮರಣ ಹೊಂದಿರುವ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಯಸುತ್ತೇನೆ. ಆದ್ರೆ ನನ್ನ ಪತಿ ಕಾಫಿಯನ್ನೇ ಕುಡಿಯಲ್ಲ. ಹೀಗಾಗಿ ಮದ್ಯಪಾನ ಹೇಗೆ ಮಾಡ್ತಾರೆ ಎಂದು ಸಿ.ಟಿ ರವಿ ಅವರ ಪತ್ನಿ ಪಲ್ಲವಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತನ್ನ ಪತಿ ಮದ್ಯ ಸೇವಿಸಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಮಾಧ್ಯಮದಲ್ಲಿ ಈ ಬಗ್ಗೆ ನೋಡಿ ನನಗೆ ಬೇಸರವಾಗಿ, ಶಾಕ್ ಆಯ್ತು. ಅವರು ನೀರು ಕುಡಿಯೋದು ಬಿಟ್ಟು, ಬೇರೆ ಏನು ಕುಡಿದಿರೋದು ನನಗೆ ಗೊತ್ತಿಲ್ಲ. ಬೆಳಗ್ಗೆ 6.30ಕ್ಕೆ ವಿಮಾನ ಇತ್ತು. ಹಾಗಾಗಿ ಕಾರಿನಲ್ಲಿ ರಾತ್ರಿ 12 ಗಂಟೆಗೆ ಮನೆಯಿಂದ ಹೊರಟ್ಟಿದ್ದರು. ನನ್ನ ಪತಿ ಕಾರು ಡ್ರೈವ್ ಮಾಡುವುದನ್ನು ಬಿಟ್ಟು 15 ವರ್ಷ ಆಗಿದೆ. ಬಹುಷ: ಅವರಿಗೆ ಡ್ರೈವಿಂಗ್ ಮರೆತೇ ಹೋಗಿದೆ. ಕಾರನ್ನು ಡ್ರೈವರ್ ಓಡಿಸುತ್ತಿದ್ದರು ಎಂದು ಪಲ್ಲವಿ ಅವರು ತಿಳಿಸಿದ್ದಾರೆ.  ಇದನ್ನೂ ಓದಿ: ಅಪಘಾತದ ಬಗ್ಗೆ ಶಾಸಕ ಸಿ.ಟಿ ರವಿ ಸ್ಪಷ್ಟನೆ

    ಅಪಘಾತದಿಂದ ಸ್ವಲ್ಪ ಎದೆಗೆ ಪೆಟ್ಟು ಬಿದ್ದಿದೆ ಎಂದು ಪತಿ ಹೇಳಿದ್ದರು. ಮೃತರ ಕುಟುಂಬಕ್ಕೆ ನಮ್ಮ ಕೈಯಲ್ಲಿ ಏನಾಗುತ್ತೋ ಆ ರೀತಿಯ ಸಹಾಯ ಮಾಡ್ತೇವೆ. ಅಪಘಾತದಿಂದ ನನಗೆ ಶಾಕ್ ಆಯ್ತು. ಎರಡು ಯುವಕರು ಜೀವ ಕಳೆದುಕೊಂಡಿದ್ದಾರೆ. ಅದು ನಿಜವಾಗಿಯೂ ಬೇಸರದ ವಿಷಯ. ಈ ಅಪಘಾತ ಆಕಸ್ಮಿಕ, ಈ ಅಪಘಾತದಿಂದ ನಮಗೆ ನೋವಾಗಿದೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇವೆ ಎಂದು ಸಂತಾಪ ಸೂಚಿಸಿದ್ದಾರೆ.

    https://www.youtube.com/watch?v=YPEOa75NnvQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv