Tag: ಪತ್ನಿ ಕೊಲೆ

  • ಪತ್ನಿ ತಲೆ ಕಡಿದಿದ್ದವ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ!

    ಪತ್ನಿ ತಲೆ ಕಡಿದಿದ್ದವ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ!

    ಚಿಕ್ಕಮಗಳೂರು: ಪತ್ನಿ ತಲೆ ಕಡಿದು ಜೈಲು ಸೇರಿದ್ದ ಕೈದಿಯೊಬ್ಬ ಮನನೊಂದು ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

    ಸತೀಶ್ ಕುತ್ತಿಗೆಗೆ ವುಲ್ಲನ್ ಸ್ವೆಟರ್ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತು ಸತೀಶ್ ಆಕೆಯನ್ನು ಕೊಲೆ ಮಾಡಿದ್ದನು. ಸೆಪ್ಟೆಂಬರ್ 9ರಂದು ಪತ್ನಿ ರೂಪಳ ತಲೆ ಕಡಿದು ಠಾಣೆಗೆ ತಂದಿದ್ದನು. ಆದರೆ ಅದೆನಾಯ್ತೋ ಗೊತ್ತಿಲ್ಲ ಸೋಮವಾರ ಜೈಲಿನಲ್ಲೇ ಸತೀಶ್ ಆತ್ಮಹತ್ಯೆಗೆ ಯತ್ನಿಸಿದ್ದು, ಜೈಲು ಅಧಿಕಾರಿಗಳು ಸತೀಶನನ್ನು ರಕ್ಷಿಸಿದ್ದಾರೆ.

    ಸದ್ಯ ಸತೀಶ್ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ಬಿಗಿ ಭದ್ರತೆಯಲ್ಲಿ ಸತೀಶ್‍ನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಏನಿದು ಘಟನೆ?
    ಸತೀಶ್ ತನ್ನ ಪತ್ನಿ ರೂಪಳ ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡಿ ತಲೆಯನ್ನು ಪೊಲೀಸ್ ಠಾಣೆಗೆ ತಂದು ಶರಣಾಗಿದ್ದನು. ಸತೀಶ್ ಮತ್ತು ರೂಪ ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ರೂಪ ಅದೇ ಗ್ರಾಮದಲ್ಲಿ ಸುನೀಲ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಸತೀಶ್ ಅನುಮಾನ ಪಟ್ಟಿದ್ದನು. ರೂಪ ಹಾಗೂ ಸುನೀಲ್ ಇಬ್ಬರು ಒಟ್ಟಿಗೆ ಇದ್ದರು ಎಂದು ಶಂಕಿಸಿ ಕೋಪಗೊಂಡು ಆಕ್ರೋಶದಿಂದ ಕತ್ತಿಯಿಂದ ಹೆಂಡತಿಯ ತಲೆ ಕತ್ತರಿಸಿದ್ದನು.

    ಬಳಿಕ ತನ್ನ ಪತ್ನಿಯ ತಲೆಯನ್ನು ಬ್ಯಾಗಿನಲ್ಲಿಟ್ಟುಕೊಂಡು ಸುಮಾರು 20 ಕಿ.ಮೀ. ವರೆಗೂ ಬಸ್ ಸಂಚಾರ ಮಾಡಿ ಶಿವನಿ ರೈಲ್ವೆ ಸ್ಟೇಷನ್‍ನಿಂದ ಅಜ್ಜಂಪುರ ಠಾಣೆಗೆ ಕತ್ತಿ ಹಾಗೂ ತಲೆ ಎರಡನ್ನೂ ತಂದು ಸತೀಶ್ ಶರಣಾಗಿದ್ದನು. ಅಷ್ಟೇ ಅಲ್ಲದೆ ನನಗೆ ಯಾವ ಶಿಕ್ಷೆ ಕೊಡಬೇಕೋ ಕೊಡಿ, ಆದರೆ ಜೈಲಿನಿಂದ ಬಿಡುಗಡೆಯಾದ ನಂತರ ಆತನನ್ನು ಹುಡುಕಿ ಕೊಲೆ ಮಾಡಿ ಮತ್ತೆ ಬರುತ್ತೇನೆ ಎಂದು ಹೇಳಿದ್ದನು ಅಂತ ಪೊಲೀಸರು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗಳೂರಿನಲ್ಲೇ ಇರೋಣ ಅಂದಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ

    ಬೆಂಗಳೂರಿನಲ್ಲೇ ಇರೋಣ ಅಂದಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ

    ಚಿಕ್ಕಮಗಳೂರು: ಊರಿನಲ್ಲಿ ಬರಗಾಲ, ಮಕ್ಕಳ ಭವಿಷ್ಯಕ್ಕಾಗಿ ಬೆಂಗಳೂರಿನಲ್ಲೇ ಇರೋಣ ಅಂದಿದ್ದಕ್ಕೆ ಪತ್ನಿಯನ್ನೇ ಪತಿ ಕೊಂದಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಜೋಡಿಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಜ್ಯೋತಿ ಬಾಯಿ ಎಂಬವರೇ ಕೊಲೆಯಾದ ಮಹಿಳೆ. ಮೃತ ಜ್ಯೋತಿ ಬಾಯಿ ಹಾಗೂ ಮಹೇಶ್ ನಾಯ್ಕ್ ಮೂಲತಃ ಜೋಡಿಲಿಂಗದಹಳ್ಳಿ ಗ್ರಾಮದ ನಿವಾಸಿಗಳು. ಈ ಜೋಡಿಗೆ ಇಬ್ಬರು ಮಕ್ಕಳೂ ಕೂಡ ಇದ್ದಾರೆ. ಕೆಲ ವರ್ಷಗಳ ಹಿಂದೆ ಮಳೆ-ಬೆಳೆ ಇಲ್ಲದ ಕಡೂರಿನಲ್ಲಿ ಜೀವನ ನಡೆಸುವುದು ಕಷ್ಟವೆಂದು ಇಡೀ ಕುಟುಂಬವೇ ಬೆಂಗಳೂರಿಗೆ ಬಂದು ಸೇರಿತ್ತು. ಒಂದೆಡೆ ಗಂಡ ಟಿಂಬರ್ ಕೆಲಸಕ್ಕೆ ಹೋದ್ರೆ, ಇನ್ನೊಂದೆಡೆ ಹೆಂಡತಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

    ದೀಪಾವಳಿ ಹಬ್ಬಕ್ಕೆಂದು ಊರಿಗೆ ಹೋಗಿದ್ದಾಗ, ಮಹೇಶ್ ಪತ್ನಿಗೆ ಮತ್ತೆ ಬೆಂಗಳೂರಿಗೆ ಹೋಗೋದು ಬೇಡ ಇಲ್ಲಿಯೇ ಇರೋಣ ಎಂದಿದ್ದಾನೆ. ಈ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದೆ. ಇದರಿಂದ ಕೋಪಗೊಂಡಿದ್ದ ಮಹೇಶ್ ಮನೆಗೆ ಕುಡಿದು ಬಂದು ಮೊದಲು ಮಕ್ಕಳಿಗೆ 5 ರೂ. ದುಡ್ಡು ಕೊಟ್ಟು ಚಾಕಲೇಟ್ ತರಲು ಅಂಗಡಿಗೆ ಕಳುಹಿಸಿದ್ದಾನೆ. ನಂತರ ಪತ್ನಿಯನ್ನು ಹೊಡೆದು ಸಾಯಿಸಿದ್ದಾನೆ. ಆ ಬಳಿಕ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿ ಕುತ್ತಿಗೆಗೆ ಹಗ್ಗ ಹಾಕಿಕೊಂಡು ಕೆಳಗೆ ಬಿದ್ದಿದ್ದಾನೆ. ಮಕ್ಕಳು ಅಂಗಡಿಯಿಂದ ಹಿಂತಿರುಗಿ ಬಂದು ಬಾಗಿಲು ಬಡಿದಾಗ ಯಾರು ಬಾರದ ಕಾರಣ ಅಕ್ಕಪಕ್ಕದವರು ಬಂದು ಮನೆಯ ಹೆಂಚು ತೆಗೆದು, ಜ್ಯೋತಿಯನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ ಎಂದು ಜ್ಯೋತಿಯ ಕುಟುಂಬಸ್ಥರು ಹೇಳಿದ್ದಾರೆ.

    ಸದ್ಯ ಆರೋಪಿ ಮಹೇಶ್‍ನನ್ನು ಪೊಲೀಸರು ಬಂಧಿಸಿದ್ದು, ಸಖರಾಯಪಟ್ಟಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮನೆಬಿಟ್ಟು ಹೋಗಿದ್ದಕ್ಕೆ ಪತ್ನಿಯನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ ಪತಿ

    ಮನೆಬಿಟ್ಟು ಹೋಗಿದ್ದಕ್ಕೆ ಪತ್ನಿಯನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ ಪತಿ

    ರಾಮನಗರ: ಒಂದು ತಿಂಗಳು ಮನೆಬಿಟ್ಟು ಹೋಗಿದ್ದ ಪತ್ನಿಯನ್ನು ಕೊಂದು, ಬಳಿಕ ಹೆದರಿ ಮಕ್ಕಳಿಗೆ ವಿಷ ನೀಡಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಕನಕಪುರದ ವಿನಾಯಕ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ವಿನಾಯಕ ನಗರದ ನಿವಾಸಿಗಳಾದ ಪತಿ ಶಿವು (40) ಹಾಗೂ ಪತ್ನಿ ರೇಖಾ (22) ಮೃತ ದುರ್ದೈವಿಗಳು. ಶುಕ್ರವಾರ ಘಟನೆ ನಡೆದಿದ್ದು, ಶನಿವಾರ ಸಂಜೆ ಸ್ಥಳೀಯರ ಗಮನಕ್ಕೆ ಬಂದಿದ್ದು, ಅದೃಷ್ಟವಶಾತ್ ಇಬ್ಬರು ಮಕ್ಕಳು ವಿಷ ಆಹಾರ ಸೇವಿಸಿದ್ದರೂ ಬದುಕುಳಿದಿದ್ದಾರೆ.

    ಒಂದು ತಿಂಗಳ ಹಿಂದೆ ರೇಖಾ ಮನೆ ಬಿಟ್ಟು ಹೋಗಿದ್ದು, ಶುಕ್ರವಾರ ಪತಿಯ ಮನೆಗೆ ಮರಳಿದ್ದರು. ಮನೆಯಲ್ಲಿ ಯಾರು ಇಲ್ಲದಿದ್ದ ವೇಳೆ ರಾತ್ರಿ ಶಿವು ಹಾಗೂ ರೇಖಾ ಮಧ್ಯ ಮಾತಿನ ಚಕಮಕಿ ಪ್ರಾರಂಭವಾಗಿದ್ದು, ಕೋಪಗೊಂಡ ಶಿವು ರೇಖಾ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾರೆ. ಪರಿಣಾಮ ರೇಖಾ ಅವರು ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪತ್ನಿಯ ಸಾವಿನಿಂದ ಗಾಭರಿಗೊಂಡ ಶಿವು ತನ್ನ ಮಕ್ಕಳಿಗೆ ವಿಷ ಮಿಶ್ರಿತ ಊಟ ನೀಡಿದ್ದು, ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಶನಿವಾರ ಸಂಜೆಯಾದರೂ ಮನೆಯಿಂದ ಯಾರೂ ಹೊರ ಬರದಿದ್ದರಿಂದ ನೆರೆಹೊರೆಯವರಿಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಮನೆ ಕಿಟಕಿಯಲ್ಲಿ ನೋಡಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಕ್ಕಳು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಕುರಿತು ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೇಜರ್ ಪತ್ನಿಯನ್ನು ಮತ್ತೊಬ್ಬ ಮೇಜರ್ ಹತ್ಯೆಗೈದ!

    ಮೇಜರ್ ಪತ್ನಿಯನ್ನು ಮತ್ತೊಬ್ಬ ಮೇಜರ್ ಹತ್ಯೆಗೈದ!

    ನವದೆಹಲಿ: ಸೇನಾ ಮೇಜರ್ ಒಬ್ಬರ ಪತ್ನಿಯ ಶವ ದೆಹಲಿಯ ರಸ್ತೆಯೊಂದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಮೇಜರ್ ಅಮಿತ್ ದ್ವಿವೇದಿ ಪತ್ನಿ ಶೈಲಜಾ ದ್ವಿವೇದಿ (35) ಮೃತದೇಹ ಶನಿವಾರ ಮಧ್ಯಾಹ್ನ ದೆಹಲಿಯ ದೆಹಲಿಯ ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣ ಸಮೀಪದಲ್ಲಿ ಸಿಕ್ಕಿದೆ.

    ಶವ ಪತ್ತೆಯಾದ ಆರಂಭದಲ್ಲಿ ಅಪಘಾತದಿಂದ ಶೈಲಾಜ ದ್ವಿವೇದಿ ಮೃತಪಟ್ಟಿದ್ದಾರೆ ಎಂದು ತಿಳಿಯಲಾಗಿತ್ತು. ಆದರೆ ಈಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಶೈಲಾಜ ಪತಿಗೆ ಪರಿಚಯವಿದ್ದ ಮೇಜರ್ ಒಬ್ಬ ಈ ಕೃತ್ಯ ಎಸಗಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ.

    ಪ್ರಾಥಮಿಕ ವರದಿಯ ಪ್ರಕಾರ ಶೈಲಜಾ ಅವರು ಅಪಘಾತದಲ್ಲಿ ಮೃತಪಟ್ಟಿಲ್ಲ. ಉದ್ದೇಶ ಪೂರ್ವಕವಾಗಿಯೇ ಕೊಲೆ ಮಾಡಲಾಗಿದ್ದು, ಕೊಲೆ ಮಾಡಿರುವ ವ್ಯಕ್ತಿ ಅಮಿತ್ ಹಾಗೂ ಶೈಲಜಾ ಅವರ ಆತ್ಮೀಯ ವ್ಯಕ್ತಿಯಾಗಿದ್ದಾನೆ. ಅಲ್ಲದೇ ಶಂಕಿತ ವ್ಯಕ್ತಿ ಮೇಜರ್ ಆಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತ ಪಡೆಸಿದ್ದಾರೆ. ಸದ್ಯ ಶಂಕಿತ ವ್ಯಕ್ತಿಯ ಸುಳಿವು ಸಿಕ್ಕಿದೆ. ಆದರೆ ಆತನ ಮೊಬೈಲ್ ನಂಬರ್ ಸ್ವೀಚ್ ಆಫ್ ಮಾಡಿಕೊಂಡಿದ್ದಾನೆ ಎಂದು ದೆಹಲಿಯ ನಗರ ಪೊಲೀಶ್ ಜಂಟಿ ಆಯುಕ್ತ ಮಧುಪ್ ತಿವಾರಿ ತಿಳಿಸಿದ್ದಾರೆ.

    ನಡೆದಿದ್ದು ಏನು?
    ಶೈಲಜಾ ಅವರು ಬೆಳಗ್ಗೆ 10 ಗಂಟೆಗೆ ಬ್ಯಾಸ್ ಆಸ್ಪತ್ರೆಗೆ ಫಿಸಿಯೋಥೆರಫಿ ಅಧಿವೇಶನಕ್ಕೆ ಹೋಗಿಬೇಕಿತ್ತು. ಅಧಿವೇಶನದ ನಂತರ ಶೈಲಜಾ ಅವರನ್ನು ಕರೆದುಕೊಂಡು ಬರಲು ಚಾಲಕ ಆಸ್ಪತ್ರೆಗೆ ಬಂದಿದ್ದನು. ಈ ವೇಳೆ ಶೈಲಜಾ ಅವರು ಅಧಿವೇಶನಕ್ಕೆ ಹಾಜರಾಗಿಲ್ಲ ಎನ್ನುವ ಮಾಹಿತಿ ಪಡೆದ ಚಾಲಕ, ಶೈಲಜಾ ಅವರ ಪತಿ ಮೇಜರ್ ಅಮಿತ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಪತಿಯನ್ನು ಹುಡುಕುತ್ತ ಅಮಿತ್ ಅವರು ಪೆರೆಡ್ ಗ್ರೌಂಡ್ ಕಡೆಗೆ ಹೋಗುತ್ತಾರೆ. ಶೈಲಜಾ ಅವರ ಕುರಿತಾಗಿ ಯಾವುದೇ ಮಾಹಿತಿ ದೊರೆಯದ ಕಾರಣ ಸಂಜೆ 4.30 ಗಂಟೆಗೆ ನಾಪತ್ತೆ ದೂರು ದಾಖಲಿಸಲು ಠಾಣೆಗೆ ಹೋಗುತ್ತಾರೆ. ಈ ವೇಳೆ ಪೊಲೀಸರು ರಸ್ತೆ ಅಪಘಾತದಲ್ಲಿ ಬಿದ್ದಿದ್ದ ಮಹಿಳೆಯ ಶವವನ್ನು ತೋರಿಸುತ್ತಾರೆ. ಈ ಶವವನ್ನು ನೋಡಿದ ಪತಿ ಅಮಿತ್ ಶೈಲಜಾ ಅವರ ಗುರುತು ಹಿಡಿಯುತ್ತಾರೆ.

    ಕೊಲೆ ಶಂಕೆ ವ್ಯಕ್ತವಾಗಿದ್ದು ಹೇಗೆ?
    ಮಧ್ಯಾಹ್ನ 1.28 ಗಂಟೆಗೆ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ಶೈಲಜಾ ರಸ್ತೆಯಲ್ಲೇ ಬಿದ್ದಿದ್ದಾರೆ. ಅಪಘಾತದ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಘಟನಾ ಸ್ಥಳದಲ್ಲಿ ಒಂದೇ ವಾಹನ ಪದೇ ಪದೇ ಶೈಲಜಾ ಮೃತ ದೇಹದ ಸುತ್ತ ಹಾದು ಹೋಗಿದ್ದ ಗುರುತುಗಳು ಪೊಲೀಸರಿಗೆ ಸಿಕ್ಕಿದೆ. ಪತಿ ಅಮಿತ್ ಪತ್ನಿಯ ಗುರುತು ಹಿಡಿಯುವವರೆಗೂ ಶೈಲಜಾ ಯಾರು ಎನ್ನುವುದು ಪೊಲೀಸರಿಗೆ ತಿಳಿದಿರಲಿಲ್ಲ. ಮಾಹಿತಿ ಸಿಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಪರಿಚಿತ ವ್ಯಕ್ತಿಯೇ ಕೊಲೆ ಮಾಡಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ತೀವ್ರ ತನಿಖೆ ಕೈಗೊಂಡ ಪೊಲೀಸರು, ಶೈಲಜಾ ಅವರ ಫೋನ್ ಕರೆ ದಾಖಲೆಗಳನ್ನು ಪರಿಶೀಸಿದಾಗ ಶಂಕಿತ ಆರೋಪಿಯು ಕಿರುಕುಳ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

    ಅಮೀತ್ ದ್ವಿವೇದಿ ಅವರು ನಾಗಾಲ್ಯಾಂಡ್‍ನ ಜಾಕ್ಲೀಸ್ ಯುನಿಟ್‍ನ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪತ್ನಿ ಶೈಲಜಾ ಹಾಗೂ ಆರು ವರ್ಷದ ಮಗನೊಂದಿಗೆ ವಾಸವಾಗಿದ್ದರು. ಎರಡು ತಿಂಗಳ ಹಿಂದಷ್ಟೇ ರಜೆ ಪಡೆದು ದೆಹಲಿಗೆ ಬಂದಿದ್ದರು. ಅಲ್ಲದೇ ಅಮಿತ್ ಅವರನ್ನು ಕೆಲವು ವಾರಗಳ ಮಟ್ಟಿಗೆ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಸದಸ್ಯರಾಗಿ ಸುಡಾನ್‍ಗೆ ಹೋಗಬೇಕಿತ್ತು.

    ಅಪ್‍ಡೇಟ್ ಮಾಹಿತಿ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನಾ ಮೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಉತ್ತರ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ವಿಚ್ಛೇದನ ಕೊಡುವಂತೆ ಒತ್ತಡ ಹೇರಿದ್ದಕ್ಕೆ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

    ವಿಚ್ಛೇದನ ಕೊಡುವಂತೆ ಒತ್ತಡ ಹೇರಿದ್ದಕ್ಕೆ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

    ಬೆಂಗಳೂರು: ಗಂಡನಿಂದಲೇ ಹೆಂಡತಿ ಬರ್ಬರ ಕೊಲೆಯಾದ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ.

    45 ವರ್ಷದ ಮಂಜುಳಾ ಕೊಲೆಯಾಗಿದ್ದು, ಪತ್ನಿಯನ್ನ ಕೊಂದು ಆರೋಪಿ ಮೈಲಾರಯ್ಯ ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿ ಮೈಲಾರಯ್ಯ ನಗರದ ಕಾಲೇಜೊಂದರಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡುತ್ತಿದ್ದು, ವಿಚ್ಛೇದನ ಕೊಡುವಂತೆ ಪತ್ನಿ ಒತ್ತಡ ಹೇರಿದ್ದಕ್ಕೆ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

    ಕೊಲೆಯಾದ ಮಂಜುಳಾ ಇಂದಿರಾ ನಗರ ಕ್ಲಬ್ ನಿಂದ ಮನೆಗೆ ತೆರಳಿದ್ದಳು. ಇದನ್ನ ಪ್ರಶ್ನಿಸಿದ ಪತಿ ಮಂಜುಳಾ ಜೊತೆ ಜಗಳವಾಡಿದ್ದ. ಆಗ ಮಕ್ಕಳು ಕೂಡ ತಾಯಿ ಸಪೋರ್ಟ್‍ಗೆ ಬಂದು ಅಪ್ಪನನ್ನೇ ಮನೆ ಬಿಟ್ಟು ಹೋಗು ಅಂದಿದ್ರು. ಇದ್ರಿಂದ ಕೆರಳಿದ ಮೈಲಾರಯ್ಯ ಪತ್ನಿಯನ್ನ ಕೊಲೆ ಮಾಡಿದ್ದಾನೆ. ಇತ್ತ ಅಮ್ಮನನ್ನ ಕೊಂದ ಅಪ್ಪನಿಗೆ ಮಕ್ಕಳು ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಮಕ್ಕಳ ಕೈಯಿಂದ ತಪ್ಪಿಸಿಕೊಂಡು ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.