Tag: ಪತಿ

  • ಫೇಸ್‍ಬುಕ್ ಗೆಳೆಯನಿಗಾಗಿ ಭಾರತದಿಂದ ಪಾಕ್‍ಗೆ ತೆರಳಿದ ವಿವಾಹಿತೆ

    ಫೇಸ್‍ಬುಕ್ ಗೆಳೆಯನಿಗಾಗಿ ಭಾರತದಿಂದ ಪಾಕ್‍ಗೆ ತೆರಳಿದ ವಿವಾಹಿತೆ

    ಜೈಪುರ: ತನ್ನ ಗೆಳೆಯನನ್ನು ಭೇಟಿಯಾಗಲು ಪಾಕಿಸ್ತಾನದಿಂದ (Pakistan) ಬಂದಿರುವ ಸೀಮಾ ಹೈದರ್ ಕುರಿತು ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಭಾರತದಿಂದ (Indian Woman) ಮಹಿಳೆಯೊಬ್ಬಳು ಪಾಕಿಸ್ತಾನಕ್ಕೆ ತೆರಳಿದ ಪ್ರಸಂಗ ನಡೆದಿದೆ.

    ಹೌದು. ಫೇಸ್‍ಬುಕ್ ಗೆಳೆಯನ (Facebook Friend) ಭೇಟಿಯಾಗಲು ಮಹಿಳೆಯೊಬ್ಬಳು ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಿದ್ದಾಳೆ. ರಾಜಸ್ಥಾನದ ಬಿವಾಡಿ ಜಿಲ್ಲೆಯ ವಿವಾಹಿತೆ ತನ್ನ ಬಾಯ್‍ಫ್ರೆಂಡ್ ಭೇಟಿಯಾಗಲು ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯಕ್ಕೆ ಪ್ರಯಾಣ ಬೆಳೆಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾಳೆ.

    ಮಹಿಳೆಯನ್ನು ಅಂಜು (Anju) ಎಂದು ಗುರುತಿಸಲಾಗಿದೆ. ಈಕೆಯ ಪತಿ ಅರವಿಂದ್ ಈ ಬಗ್ಗೆ ಪ್ರತಿಕ್ರಿಯಿಸಿ ಕೆಲ ದಿನಗಳ ಹಿಂದೆ ಅಂಜು ಜೈಪುರಕ್ಕೆ ತೆರಳಿದ್ದಾಳೆ. ಆದರೆ ಆಕೆ ಗಡಿ ದಾಟಿ ಹೋಗಿದ್ದಾಳೆ ಎಂಬುದು ಮಾಧ್ಯಮಗಳ ಮೂಲಕ ಭಾನುವಾರ ನನಗೆ ತಿಳಿಯಿತು ಎಂದರು. ಇದನ್ನೂ ಓದಿ: ಪ್ರಿಯಕರನಿಗಾಗಿ 6 ವರ್ಷದ ಮಗಳೊಂದಿಗೆ ಭಾರತಕ್ಕೆ ಹಾರಿಬಂದ 49ರ ಪೋಲೆಂಡ್‌ ಮಹಿಳೆ

    ನಾನು ಆಕೆಯ ಜೊತೆ ವಾಟ್ಸಾಪ್ (Whatsapp) ಸಂಪರ್ಕದಲ್ಲಿದ್ದೆ. ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಕರೆ ಮಾಡಿ ತಾನು ಲಾಹೋರ್‍ನಲ್ಲಿದ್ದೇನೆ. ಎರಡು-ಮೂರು ದಿನಗಳಲ್ಲಿ ವಾಪಸ್ ಬರುವುದಾಗಿ ತಿಳಿಸಿದ್ದಳು ಎಂದು ಅರವಿಂದ್ ಹೇಳಿದರು. ಇದೇ ವೇಳೆ ಪತ್ನಿಯ ಲವ್ ಬಗ್ಗೆ ಕೇಳಿದಾಗ, ಈ ವಿಚಾರ ನನಗೆ ಗೊತ್ತಿದೆ. ನನ್ನ ಪತ್ನಿ ವಾಪಸ್ ಬಂದೇ ಬರುತ್ತಾಳೆ ಅನ್ನೋ ನಂಬಿಕೆಯಿದೆ ಎಂದು ಹೇಳಿದರು.

    ಅರವಿಂದ್ ಭಿವಾಡಿಯಲ್ಲಿ ಕೆಲಸ ಮಾಡುತ್ತಿದ್ದು, ಅಂಜು ಖಾಸಗಿ ಸಂಸ್ಥೆಯೊಂದರಲ್ಲಿ ಬಯೋಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ದಂಪತಿ ಇಬ್ಬರು ಮಕ್ಕಳನ್ನು ಹೊಂದಿದ್ದು, ಅಂಜು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ಅರವಿಂದ್ ಅವರೊಂದಿಗೆ ಮದುವೆಯಾಗಿದ್ದಾರೆ. ಅರವಿಂದ್ ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಅಂಜು ಅವರ ಸಹೋದರನೊಂದಿಗೆ ಭಿವಾಡಿಯಲ್ಲಿ ಬಾಡಿಗೆ ಫ್ಲಾಟ್‍ನಲ್ಲಿ ವಾಸವಾಗಿದ್ದರು.

    ರಾಜಸ್ಥಾನ ಟು ಪಾಕಿಸ್ತಾನ: ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ನಸ್ರುಲ್ಲಾ ಮತ್ತು ಅಂಜು ಕೆಲವು ತಿಂಗಳ ಹಿಂದೆ ಫೇಸ್‍ಬುಕ್‍ನಲ್ಲಿ ಸ್ನೇಹಿತರಾದರು. ಇದೀಗ ಗುರುವಾರ ಅಂಜು ಜೈಪುರಕ್ಕೆ ಹೋಗುವ ನೆಪದಲ್ಲಿ ಭಿವಾಡಿಯಲ್ಲಿರುವ ತನ್ನ ಮನೆಯಿಂದ ಹೊರಟಿದ್ದಳು. ನಂತರ ಆಕೆ ತನ್ನ ಫೇಸ್‍ಬುಕ್ ಸ್ನೇಹಿತ ನಸ್ರುಲ್ಲಾಳನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಳು. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ

    ಆಕೆ ಆರಂಭದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಳು. ಆಕೆಯ ಪ್ರಯಾಣ ದಾಖಲೆಗಳನ್ನು ಪರಿಶೀಲಿಸಿದ ನಂತರ ಬಿಡುಗಡೆ ಮಾಡಲಾಯಿತು. ಎಲ್ಲಾ ಪ್ರಯಾಣದ ದಾಖಲೆಗಳು ಸರಿಯಾಗಿವೆ ಎಂದು ಕಂಡುಬಂದ ನಂತರ ಆಕೆಗೆ ಹೋಗಲು ಅನುಮತಿ ನೀಡಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ದೇಶಕ್ಕೆ ಕೆಟ್ಟ ಹೆಸರು ತರುವುದನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಭದ್ರತೆಯನ್ನು ಒದಗಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತಿಯ ಮುಂದೆಯೇ ಸೋದರ ಸಂಬಂಧಿಯನ್ನು ವರಿಸಿದ ಪತ್ನಿ!

    ಪತಿಯ ಮುಂದೆಯೇ ಸೋದರ ಸಂಬಂಧಿಯನ್ನು ವರಿಸಿದ ಪತ್ನಿ!

    ಭುವನೇಶ್ವರ: ಮಹಿಳೆಯೊಬ್ಬಳು ತನ್ನ ಗಂಡನ ಮುಂದೆಯೇ ಸೋದರ ಸಂಬಂಧಿಯನ್ನು ಮದುವೆಯಾದ ಅಚ್ಚರಿಯ ಘಟನೆಯೊಂದು ಒಡಿಶಾದಲ್ಲಿ (Odisha) ನಡೆದಿದೆ.

    ಸೋನೆಪುರ್ ಜಿಲ್ಲೆಯ ಬಿರ್ಮಹಾರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸುಬಲಯ ಗ್ರಾಮದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಇದನ್ನೂ ಓದಿ: ಹೆಚ್ಚು ಜನ ಪ್ರಯಾಣಿಸುವ ಬಿಎಂಟಿಸಿ ರೂಟ್ ಮಾರ್ಕ್ ಮಾಡಿಕೊಂಡಿದ್ದ ಶಂಕಿತರು!

    ಘಟನೆ ವಿವರ: ಅಂಗುಲ್ ಜಿಲ್ಲೆಯ ಹಳ್ಳಿಯೊಂದರ 22 ವರ್ಷದ ಜಿಲ್ಲಿ ಪ್ರಧಾನ್ ಎಂಬಾಕೆ ಮೂರು ವರ್ಷಗಳ ಹಿಂದೆ ಮಾಧವ್ ಪ್ರಧಾನ್ ಎಂಬಾತನನ್ನು ವರಿಸಿದ್ದಳು. ಆದರೆ ಮಾಧವ್ ಮನೆಗೆ ಆಗಾಗ ಜಿಲ್ಲಿಯ ಸೋದರ ಸಂಬಂಧಿ ಭೇಟಿ ಕೊಡುತ್ತಿದ್ದ. ಇದರಿಂದ ಚೆನ್ನಾಗಿಯೇ ಇದ್ದ ಮಾಧವ್- ಜಿಲ್ಲಿ ದಂಪತಿ ಮಧ್ಯೆ ಬಿರುಕು ಮೂಡಲು ಆರಂಭವಾಗಿದೆ.

    ಮಾಧವ್‍ಗೆ ತಿಳಿಯದಂತೆ ಪರಮೇಶ್ವರ್ ಜಿಲ್ಲಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ. ಕ್ರಮೇಣ ಮಾಧವ್ ಇಲ್ಲದಿದ್ದ ಸಮಯದಲ್ಲಿ ಇಬ್ಬರೂ ಭೇಟಿಯಾಗಲು ಶುರುಮಾಡಿರು. ಇವರಿಬ್ಬರ ಪ್ರೇಮಕಥೆಯು ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಗೆ ತಿಳಿದ ನಂತರ ವಿಷಯಗಳು ವಿಕೋಪಕ್ಕೆ ತಿರುಗಿದವು. ಇದಾದ ಬಳಿಕ ಇಬ್ಬರೂ ಓಡಿಹೋಗಿ ತಲೆಮರೆಸಿಕೊಂಡಿದ್ದರು.

    ಈ ಸಂಬಂಧ ಮಾಧವ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ರಕ್ಷಿಸಿ ಠಾಣೆಗೆ ಕರೆತಂದರು. ತಮ್ಮ ಕುಟುಂಬದ ಸದಸ್ಯರು ಪದೇ ಪದೇ ಪ್ರಯತ್ನಿಸಿದರೂ, ಇಬ್ಬರೂ ಪರಸ್ಪರ ಮದುವೆಯಾಗುವುದಾಗಿ ತಿಳಿಸಿದರು. ಇಬ್ಬರಿಗೂ ಬುದ್ಧಿ ಹೇಳಿದರೂ ಕುಟುಂಬಸ್ಥರು ನಡೆಸಿದ ಪ್ರಯತ್ನ ವಿಫಲವಾದ ಬಳಿಕ ಪೊಲೀಸ್ ಠಾಣೆಯಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಇಬ್ಬರಿಗೂ ವಿವಾಹ ನೆರವೇರಿಸಲಾಯಿತು.

    ಸದ್ಯ ಈ ವಿಲಕ್ಷಣ ವಿವಾಹವು ಪಟ್ಟಣದಾದ್ಯಂತ ಚರ್ಚೆಯಾಗಿದೆ. ಆದರೆ ಈ ಬಗ್ಗೆ ಮಾಧವ್ ಮತ್ತು ಅವರ ಕುಟುಂಬದ ಸದಸ್ಯರಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುಗಂಧ ದ್ರವ್ಯ ಹಾಕಿದ್ದಕ್ಕೆ ಹೆಂಡತಿಗೆ ಗುಂಡು ಹಾರಿಸಿದ ಪತಿ

    ಸುಗಂಧ ದ್ರವ್ಯ ಹಾಕಿದ್ದಕ್ಕೆ ಹೆಂಡತಿಗೆ ಗುಂಡು ಹಾರಿಸಿದ ಪತಿ

    – ಘಟನೆಯ ಬಳಿಕ ಗಂಡ ಎಸ್ಕೇಪ್

    ಭೋಪಾಲ್: ಮನೆಯಿಂದ ಆಚೆ ಹೋಗುವ ಸಂದರ್ಭ ಹೆಂಡತಿ ಸುಗಂಧ ದ್ರವ್ಯ (Perfume) ಹಾಕಿದ್ದಕ್ಕಾಗಿ ಪತಿ ಆಕೆಯ ಮೇಲೆ ಗುಂಡು (Shoot) ಹಾರಿಸಿದ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ (Gwalior) ನಡೆದಿದೆ.

    ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು, ಗುಂಡು ಹಾರಿಸಿದ ಬಳಿಕ ಆಕೆಯ ಪತಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಬಿಜೋಯಿಲಿ (Bijoili) ಠಾಣಾ ವ್ಯಾಪ್ತಿಯ ಗಣೇಶಪುರ ನಿವಾಸಿ ನೀಲಂ ಜಾತವ್ ಎಂಬಾಕೆ 8 ವರ್ಷಗಳ ಹಿಂದೆ ಮಹೇಂದ್ರ ಜಾತವ್ ಎಂಬಾತನನ್ನು ವಿವಾಹವಾಗಿದ್ದಳು. ಮಹೇಂದ್ರ ಜಾತವ್ ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಯಾಗಿದ್ದು, ಕಳ್ಳತನ ಪ್ರಕರಣದಲ್ಲಿ ಜೈಲುಪಾಲಾಗಿದ್ದ. ಇದನ್ನೂ ಓದಿ: ಮುತ್ತು ಕೊಡುವ ವೇಳೆ ನೆನಪಾದ ಸೇಡು – ಗಂಡನ ನಾಲಿಗೆಗೆ ಹಲ್ಲಿನಲ್ಲೇ ಕತ್ತರಿ

    ಗಂಡ ಜೈಲು ಸೇರಿದ ಬಳಿಕ ನೀಲಂ ತನ್ನ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದಳು. ಮಹೇಂದ್ರ ಜಾತವ್ ನಾಲ್ಕು ವರ್ಷಗಳ ಜೈಲುವಾಸ ಮುಗಿಸಿ ಒಂದು ವರ್ಷದ ಹಿಂದಷ್ಟೇ ಜೈಲಿನಿಂದ ಹೊರಬಂದು ತನ್ನ ಹೆಂಡತಿಯೊಂದಿಗೆ ಆಕೆಯ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದ. ಇದನ್ನೂ ಓದಿ: ಬೆಂಗ್ಳೂರಲ್ಲಿ ಕದ್ರು, ಚೆನ್ನೈನಲ್ಲಿ ಮಾರಿದ್ರು- ಕೊನೆಗೂ ಸಿಕ್ಕಿಬಿದ್ದ ಟೊಮೆಟೋ ಕಳ್ಳರು

    ಶನಿವಾರ ನೀಲಂ ಮನೆಯಿಂದ ಹೊರಗಡೆ ಹೋಗುವ ಸಂದರ್ಭ ಸುಗಂಧ ದ್ರವ್ಯವನ್ನು ಹಾಕಿದ್ದು, ಇದರ ಬಗ್ಗೆ ಪತಿ ಮಹೇಂದ್ರ ಆಕೆಯನ್ನು ಪ್ರಶ್ನಿಸಿದ್ದಾನೆ. ಇದರಿಂದಾಗಿ ದಂಪತಿ ನಡುವೆ ವಾಗ್ವಾದ ಶುರುವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಕೋಪದ ಭರದಲ್ಲಿ ಪತಿ ಗನ್ (Gun) ತೆಗೆದು ಪತ್ನಿಯ ಎದೆಗೆ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ದೇಗುಲ ಧ್ವಂಸ- ಆರೋಪಿಯ ಬಂಧನ

    ಎದೆಗೆ ಗುಂಡು ತಗುಲಿದ ಬಳಿಕ ಆಕೆ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ. ಘಟನೆ ನಡೆದ ತಕ್ಷಣ ನೀಲಂ ಅವರ ಸಹೋದರ ದಿನೇಶ್ ಜಾತವ್ ತನ್ನ ಸಂಬಂಧಿಕರಿಗೆ ಕರೆ ಮಾಡಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ನೀಲಂ ಕುಟುಂಬಸ್ಥರು ದೂರು ನೀಡಿದ್ದು, ಮಹೇಂದ್ರನ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆತನ ಪತ್ತೆಗಾಗಿ ಬಲೆಬೀಸಿದ್ದಾರೆ.  ಇದನ್ನೂ ಓದಿ: ತಂಗಿಯ ಶಿರಚ್ಛೇದ ಮಾಡಿ ರುಂಡ ಹಿಡಿದು ಹೋಗ್ತಿದ್ದ ಅಣ್ಣನ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭೀಮನ ಅಮವಾಸ್ಯೆಯ ದಿನವೇ ಪತಿಯಿಂದ ಪತ್ನಿ ಕಿಡ್ನಾಪ್

    ಭೀಮನ ಅಮವಾಸ್ಯೆಯ ದಿನವೇ ಪತಿಯಿಂದ ಪತ್ನಿ ಕಿಡ್ನಾಪ್

    ಶಿವಮೊಗ್ಗ: ಭೀಮನ ಅಮವಾಸ್ಯೆಯ ದಿನವೇ ಪತಿಯೇ ಪತ್ನಿಯನ್ನು (Wife Kidnapped By Husband) ಅಪಹರಿಸಿರುವ ಘಟನೆ ಶಿವಮೊಗ್ಗದ (Shivamogga) ಬಸ್ ನಿಲ್ದಾಣದ ಬಳಿ ನಡೆದಿದೆ.

    ಅಪಹರಣವಾದ ಗೃಹಿಣಿಯನ್ನು ದಿವ್ಯ (23) ಎಂದು ಗುರುತಿಸಲಾಗಿದೆ. ಶಿವಮೊಗ್ಗ ತಾಲೂಕಿನ ಗಾಜನೂರಿನ ರವಿ ಹಾಗೂ ಶಿವಮೊಗ್ಗದ ಹೊಸಮನೆ ಬಡಾವಣೆ ನಿವಾಸಿ ದಿವ್ಯ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಕುಟುಂಬಸ್ಥರ ವಿರೋಧ ಇತ್ತು. ವಿರೋಧದ ನಡುವೆಯೂ ಇಬ್ಬರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿ ಮದುವೆಯಾಗಿದ್ದರು. ಆದರೆ ಕಳೆದ ಕೆಲವು ದಿನಗಳ ಹಿಂದೆ ದಿವ್ಯಾಳನ್ನು ಆಕೆಯ ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದರು.

    ಇಂದು ಬಸ್ ನಿಲ್ದಾಣದ ಬಳಿ ಯುವತಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ಆಕೆಯ ಪತಿ ರವಿ ಹಾಗೂ ಆತನ ಸ್ನೇಹಿತರು ದಿವ್ಯಾಳನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಅಪಹರಣದ ನಂತರ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ. ನಮ್ಮ ಮಗಳನ್ನು ಗಾಜನೂರಿನ ರವಿಯೇ ಅಪಹರಿಸಿಕೊಂಡು ಹೋಗಿದ್ದಾನೆ ಎಂದು ದಿವ್ಯಾ ಕುಟುಂಬಸ್ಥರು ಆರೋಪಿಸಿದ್ದಾರೆ.

    ಈ ಘಟನೆ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮಾವಾಸ್ಯೆ ದಿನ ದೇವಸ್ಥಾನದಲ್ಲಿ ಪತ್ನಿಯ ಕಣ್ಣೆದುರೇ ಪತಿಯ ಬರ್ಬರ ಹತ್ಯೆ

    ಅಮಾವಾಸ್ಯೆ ದಿನ ದೇವಸ್ಥಾನದಲ್ಲಿ ಪತ್ನಿಯ ಕಣ್ಣೆದುರೇ ಪತಿಯ ಬರ್ಬರ ಹತ್ಯೆ

    ಬೆಳಗಾವಿ: ಅಮಾವಾಸ್ಯೆ ಎಂದು ದೇವಸ್ಥಾನಕ್ಕೆ ಹೋದ ಸಂದರ್ಭ ಪತ್ನಿಯ (Wife) ಎದುರೇ ಗಂಡನ ಬರ್ಬರ ಹತ್ಯೆ (Murder) ಮಾಡಿರುವ ಘಟನೆ ಮೂಡಲಗಿ (Mudalagi) ತಾಲೂಕಿನ ಬನಸಿದ್ದೇಶ್ವರ ದೇವಸ್ಥಾನ (Banasiddeshwara Temple) ಮುಂದೆ ನಡೆದಿದೆ.

    ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಟ್ಟಿ ಬನಸಿದ್ದೇಶ್ವರ ದೇವಸ್ಥಾನದ ಮುಂದೆ ಹೆಂಡತಿಯ ಕಣ್ಣೆದುರೇ ಗಂಡನ (Husband) ಮೇಲೆ ಮಚ್ಚು ಲಾಂಗುಗಳಿಂದ ಹಲ್ಲೆ ಮಾಡಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಘಟನೆಯಲ್ಲಿ ಶಂಕರ್ ಸಿದ್ದಪ್ಪ ಜಗಮುತ್ತಿ(25) ಮೃತಪಟ್ಟಿದ್ದಾರೆ. ಇದನ್ನೂ ಓದಿ: ಯುವಕನ ಹಲ್ಲೆಗೈದು ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ- ಆರೋಪಿಗಳ ಬಂಧನ

    ಮೃತ ಶಂಕರ್ ಕಳೆದ ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಅಮಾವಾಸ್ಯೆ ಹಿನ್ನೆಲೆ ಇಂದು ಪತ್ನಿ ಪ್ರಿಯಾಂಕಾ ಜೊತೆಗೆ ದೇವಸ್ಥಾನಕ್ಕೆಂದು ಬಂದಿದ್ದರು. ವಡೇರಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ ಬಂದ ವೇಳೆ ಘಟನೆ ನಡೆದಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ – ಅಂಡರ್‌ವೇರ್ ಸಹಿತ ಕೊಲೆ ಮಾಡಲು ಬಳಸಿದ್ದ ಬಟ್ಟೆಗಳನ್ನು ಸುಟ್ಟಿದ್ದ ಹಂತಕರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತವರು ಮನೆ ಸೇರಿದ್ದ ಪತ್ನಿಯನ್ನು ಚುಚ್ಚಿ ಕೊಂದ ಪತಿ

    ತವರು ಮನೆ ಸೇರಿದ್ದ ಪತ್ನಿಯನ್ನು ಚುಚ್ಚಿ ಕೊಂದ ಪತಿ

    ಮೈಸೂರು: ತವರು ಮನೆ ಸೇರಿದ್ದ ಪತ್ನಿಯನ್ನು ಪತಿ ಭೀಕರವಾಗಿ ಕೊಂದ ಘಟನೆ ಮೈಸೂರಿನ (Mysuru) ಕುಂಬಾರಕೊಪ್ಪಲಿನಲ್ಲಿ ನಡೆದಿದೆ.

    ಹರ್ಷಿತಾ (21)ವರ್ಷ ಮೃತ ದುರ್ದೈವಿ. ಈಕೆಯನ್ನು ಪತಿ ಮಾದೇಶ್ (30) ಕೊಲೆ ಮಾಡಿದ್ದು, ಈತ ಗುಂಡ್ಲುಪೇಟೆ ತಾಲೂಕಿನ ಬೇರಂಬಳ್ಳಿ ಗ್ರಾಮದ ನಿವಾಸಿ.

    ವರ್ಷದ ಹಿಂದೆ ಹರ್ಷಿತಾ, ಮಾದೇಶ್ ಇಬ್ಬರು ಮದುವೆಯಾಗಿದ್ದರು. ಪ್ರಾರಂಭದ ದಿನಗಳಲ್ಲಿ ಅನ್ಯೋನತೆಯಿಂದ ಇದ್ದ ದಂಪತಿ ನಡುವೆ ಕ್ರಮೇಣ ಕ್ಷುಲ್ಲಕ ಕಾರಣಕ್ಕೆ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ಬೇಸರಗೊಂಡ ಹರ್ಷಿತಾ ತವರು ಮನೆ ಸೇರಿದ್ದಳು. ಹೀಗಾಗಿ ಹರ್ಷಿತಾಳನ್ನ ಕರೆದುಕೊಂಡು ಹೋಗಲೆಂದು ಮಾದೇಶ್ ಬಂದಿದ್ದನು.

    ಆಗ ಹರ್ಷಿತಾ ಮೇಲೆ ಮಾದೇಶ್ ಮನಸ್ಸೋ ಇಚ್ಛೆ ಚಾಕುವಿನಲ್ಲಿ ಚುಚ್ಚಿ ಕೊಲೆ ಮಾಡಿದ್ದಾನೆ. ಇತ್ತ ಅಡ್ಡ ಬಂದ ಅತ್ತೆಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಘಟನೆಯ ಮಾಹಿತಿ ಅರಿತ ಕೂಡಲೇ ಮೇಟಗಳ್ಳಿ ಪೊಲೀಸರು (Metagalli Police Station) ಸ್ಥಳಕ್ಕಾಗಿಮಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಲಿಸುತ್ತಿದ್ದ ಕಾರಿನಲ್ಲೇ ಪತಿಯೊಂದಿಗೆ ಜಗಳವಾಡುತ್ತಾ ಸ್ಟೇರಿಂಗ್ ಎಳೆದ ಪತ್ನಿ!

    ಚಲಿಸುತ್ತಿದ್ದ ಕಾರಿನಲ್ಲೇ ಪತಿಯೊಂದಿಗೆ ಜಗಳವಾಡುತ್ತಾ ಸ್ಟೇರಿಂಗ್ ಎಳೆದ ಪತ್ನಿ!

    ಬೆಂಗಳೂರು: ಚಲಿಸುತ್ತಿದ್ದ ಸಂದರ್ಭದಲ್ಲಿಯೇ ಪತಿ ಜೊತೆ ಜಗಳವಾಡುತ್ತಾ ಪತ್ನಿ ಕಾರಿನ ಸ್ಟೇರಿಂಗ್ ಎಳೆದ ಪ್ರಸಂಗವೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಘಟನೆಯಿಂದ ಪತಿ ಹಾಗೂ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಹಲಸೂರು ಗೇಟ್ ಪೊಲೀಸರು (Halasurugate Police) ಸ್ಥಳಕ್ಕೆ ದೌಡಾಯಿಸಿ ದಂಪತಿಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ದಂಪತಿ ಕಲಹದಿಂದಾಗಿ ಈ ದುರ್ಘಟನೆ ನಡೆದಿರುವುದು ಬಯಲಾಗಿದೆ.

    ಮಾರ್ಕೆಟ್ ಕಡೆಯಿಂದ ಬರುತ್ತಿದ್ದ ಐ20 ಕಾರಿನಲ್ಲಿ ಕ್ಲುಲ್ಲಕ ವಿಚರವೊಂದಕ್ಕೆ ಗಂಡ-ಹೆಂಡ್ತಿ ಮಧ್ಯೆ (Husband- Wife Fight in Moving Car) ಮಾತಿಗೆ ಮಾತು ಬೆಳೆದಿದೆ. ಇಬ್ಬರ ಮಧ್ಯೆ ವಾಗ್ವಾದಗಳಾಗುತ್ತಿದ್ದಂತೆಯೇ ಸಿಟ್ಟುಗೊಂಡ ಪತ್ನಿ ದಿಢೀರ್ ಎಂಬಂತೆ ಕಾರಿನ ಸ್ಟೇರಿಂಗ್ ಎಳೆದಿದ್ದಾಳೆ. ಪರಿಣಾಮ ಹಲಸೂರು ಗೇಟ್ ಠಾಣೆ ಸಮೀಪ ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿಯಾಗಿದೆ. ಇದನ್ನೂ ಓದಿ: ಚಲುವರಾಯಸ್ವಾಮಿ ವಿರುದ್ಧ ಮತ್ತೊಂದು ಆಡಿಯೋ ಬಿಟ್ಟ ಜೆಡಿಎಸ್

    ಘಟನೆಯಿಂದ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಭಾರೀ ಅನಾಹುತದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಹಲಸೂರು ಗೇಟ್ ಪೊಲೀಸರು, ಪಲ್ಟಿ ಹೊಡೆದ ಕಾರು ನಿಲ್ಲಿಸಿ ದಂಪತಿಯನ್ನು ರಕ್ಷಣೆ ಮಾಡಿದ್ದಾರೆ. ಪತಿ ಕುಡಿದ ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿರುವ ಶಂಕೆ ವ್ಯಕ್ತವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಗುವಿನೊಂದಿಗೆ ಪ್ರಿಯಕರನ ಜೊತೆ  ಪತ್ನಿ ವಾಸ- ರೊಚ್ಚಿಗೆದ್ದ ಪತಿ ಕೊಂದೇ ಬಿಟ್ಟ!

    ಮಗುವಿನೊಂದಿಗೆ ಪ್ರಿಯಕರನ ಜೊತೆ ಪತ್ನಿ ವಾಸ- ರೊಚ್ಚಿಗೆದ್ದ ಪತಿ ಕೊಂದೇ ಬಿಟ್ಟ!

    ದೊಡ್ಡಬಳ್ಳಾಪುರ: ಗಂಡನ ಬಿಟ್ಟು ಪ್ರಿಯಕರನ ಜೊತೆ ಪರಾರಿಯಾಗಿದ್ದ ಪತ್ನಿಯನ್ನ ಗಂಡ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರವ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಕೋಳೂರು ಗ್ರಾಮದಲ್ಲಿ ನಡೆದಿದೆ.

    ಕೋಳೂರು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಭಾರತಿ (27) ಕೊಲೆಯಾದ ಗೃಹಿಣಿ. ಈಕೆಯ ಪತಿ ಹರೀಶ್ ಕೊಲೆ ಮಾಡಿದಾತ. ಮೃತ ಭಾರತಿ ಮೂಲತಃ ಮಧುಗಿರಿ ತಾಲೂಕಿನ ಐಡಿಹಳ್ಳಿ ಹೋಬಳಿಯ ಚಿಕ್ಕದಾಳವಟ್ಟ ಗ್ರಾಮದವಳಾಗಿದ್ದು, ಪತಿ ಹರೀಶ್‍ನ ತ್ಯಜಿಸಿ ಮಗುವಿನೊಂದಿಗೆ ಅದೇ ಗ್ರಾಮದ ಗಂಗರಾಜನೆಂಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಳು. ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದ ಬಾಡಿಗೆ ಮನೆಯಲ್ಲಿ ಕೆಲ ದಿನಗಳಿಂದ ಭಾರತಿ ಅಕ್ರಮವಾಗಿ ಸಂಸಾರ ನಡೆಸುತ್ತಿದ್ದಳು.

    ಈ ವಿಳಾಸ ತಿಳಿದುಕೊಂಡ ಗಂಡ ಹರೀಶ್ ಹುಡುಕಿಕೊಂಡು ಬಂದಿದ್ದಾನೆ. ಈ ವೇಳೆ ಹರೀಶ್ ಮತ್ತು ಭಾರತಿಯ ನಡುವೆ ಜಗಳ ನಡೆದಿದ್ದು, ಕೋಪ ತಾರಕಕ್ಕೇರಿ ಹರೀಶ್, ಭಾರತಿಯನ್ನು ಕೊಂದು ಮಗುವನ್ನು ಎತ್ತಿಕೊಂಡು ಚಿಕ್ಕದಾಳವಟ್ಟ ಗ್ರಾಮಕ್ಕೆ ಹಿಂದಿರುಗಿದ್ದಾನೆ. ಆದರೆ ಘಟನೆಯ ಸ್ಥಳದಲ್ಲಿದ್ದ ಗಂಗರಾಜ ನಾನೇ ಮೃತ ಭಾರತಿಯ ಪತಿ ಎಂದು ಹೇಳಿದ್ದು, ಗ್ರಾಮಸ್ಥರು ಹಾಗೂ ಪೊಲೀಸರಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ – ಪತಿ ವಿರುದ್ಧ ಕೊಲೆ ಆರೋಪ

    ತನಿಖೆಯ ವೇಳೆ ಭಾರತಿಯ ನಿಜವಾದ ಗಂಡ ಹರೀಶ್ ಆಗಿದ್ದು, ಆತನೇ ಗಂಗರಾಜನೊಂದಿಗಿನ ಭಾರತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಕೊಲೆ ಮಾಡಿದ್ದಾನೆಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸದ್ಯ ಗಂಡ ಹರೀಶ್ ಹಾಗೂ ಪ್ರಿಯಕರ ಇಬ್ಬರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಣ್ಣೆ ಏಟಿನಲ್ಲಿ ಪತಿ ಪ್ರತಿನಿತ್ಯ ಜಗಳ- ನೇಣಿಗೆ ಕೊರಳೊಡ್ಡಿದ ಪತ್ನಿ

    ಎಣ್ಣೆ ಏಟಿನಲ್ಲಿ ಪತಿ ಪ್ರತಿನಿತ್ಯ ಜಗಳ- ನೇಣಿಗೆ ಕೊರಳೊಡ್ಡಿದ ಪತ್ನಿ

    ಚಾಮರಾಜನಗರ: ಕುಡಿದು ಬಂದು ಪ್ರತಿನಿತ್ಯ ಜಗಳವಾಡುತ್ತಿದ್ದ ಪತಿಯಿಂದಾಗಿ ಪತ್ನಿ ನೇಣಿಗೆ ಕೊರಳೊಡ್ಡಿದ ಘಟನೆಯೊಂದು ಚಾಮರಾಜನಗರದಲ್ಲಿ (Chamarajanagar) ನಡೆದಿದೆ.

    ರೂಪಾ (32) ಆತ್ಮಹತ್ಯೆಗೆ ಶರಣಾದಾಕೆ. ಈ ಘಟನೆ ಗುಂಡ್ಲುಪೇಟೆ ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ನಡೆದಿದೆ. ರೂಪಾ 6 ವರ್ಷದ ಹಿಂದೆ ಮಂಜುನಾಥ್ ನನ್ನು ವಿವಾಹವಾಗಿದ್ದರು. ಆದರೆ ಕೌಟುಂಬಿಕ ಕಲಹದಿಂದಾಗಿ ನೇಣು ಬಿಗಿದುಕೊಂಡು ರೂಪಾ ಸಾವಿನ ದಾರಿ ಹಿಡಿದಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ 250 ರೂ. ತಲುಪಿದ ಟೊಮೆಟೋ ದರ- ಗ್ರಾಹಕರು ಕಂಗಾಲು

    ಮಂಜುನಾಥ್ ಪ್ರತಿನಿತ್ಯ ಕುಡಿದು ಬಂದು ರೂಪಾ ಜೊತೆ ಕ್ಲುಲ್ಲಕ ವಿಚಾರಕ್ಕೆ ಜಗಳ ಮಾಡುತ್ತಿದ್ದನು. ಸಾಕಷ್ಟು ಬಾರಿ ಇದನ್ನು ಸಹಿಸಿಕೊಂಡಿದ್ದ ರೂಪಾ ಇದೀಗ ತನ್ನ ತಾಳ್ಮೆ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಘಟನೆ ಸಂಬಂಧ ಪೊಲೀಸರು ಪತಿ ಮಂಜುನಾಥ್‍ನನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ತೆರಕಣಾಂಬಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೋರ್ನ್ ಸ್ಟಾರ್‌ನಂತೆ ಡ್ರೆಸ್ ಧರಿಸಲು ಪತ್ನಿಗೆ ಪತಿ ಒತ್ತಾಯ

    ಪೋರ್ನ್ ಸ್ಟಾರ್‌ನಂತೆ ಡ್ರೆಸ್ ಧರಿಸಲು ಪತ್ನಿಗೆ ಪತಿ ಒತ್ತಾಯ

    ನವದೆಹಲಿ: ಪೋರ್ನ್ ವೀಡಿಯೋಗಳಿಗೆ ಅಡಿಕ್ಟ್ ಆಗಿರುವ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಪೋರ್ನ್ ಸ್ಟಾರ್ ಗಳಂತೆ (Dress Like Pornstar) ಡ್ರೆಸ್ ಧರಿಸು ಎಂದು ಮಾನಸಿಕ ಕಿರುಕುಳ ನೀಡಿದ ಪ್ರಕರಣವೊಂದು ಬಯಲಾಗಿದೆ.

    30 ವರ್ಷದ ಮಹಿಳೆಯೊಬ್ಬು ಇದೀಗ ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ದಂಪತಿ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಇದನ್ನೂ ಓದಿ: ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರವಿಸರ್ಜಿಸಿ ವಿಕೃತಿ- ದುಷ್ಕರ್ಮಿ ಅರೆಸ್ಟ್

    ಪತಿಯು ಪೋರ್ನ್ ವೀಡಿಯೋಗಳಿಗೆ ಅಡಿಕ್ಟ್ ಆಗಿದ್ದಾರೆ. ಅಲ್ಲದೆ ಮದುವೆಯಾದ ಬಳಿಕ ಪತಿ ಹಾಗೂ ಆತನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ ಇದೇ ವಿಚಾರಕ್ಕೆ ದೈಹಿಕ ಹಾಗೂ ಮಾನಸಿಕ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಪತ್ನಿಯು ದೂರಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಮಹಿಳೆ ನೀಡಿದ ದೂರಿನ ಸಂಬಂಧ ಪತಿ ಹಾಗೂ ಆತನ ಮನೆಯವರ ವಿರುದ್ಧ ಐಪಿಸಿ ಸೆಕ್ಷನ್ 498 ಎ (ಕ್ರೌರ್ಯಕ್ಕೆ ಒಳಪಡಿಸುವುದು), 406 (ನಂಬಿಕೆ ದ್ರೋಹ) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ ರೋಹಿತ್ ಮೀನಾ ತಿಳಿಸಿದ್ದಾರೆ.

    ಪ್ರಕರಣದ ಮುಂದಿನ ಕ್ರಮಕ್ಕಾಗಿ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಅಲ್ಲದೆ ಡಿಜಿಟಲ್ ಮತ್ತು ಇತರ ಸಾಕ್ಷ್ಯಗಳನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.