Tag: ಪತಿ

  • ಕೊಡಲಿಯಿಂದ ಹಲ್ಲೆಗೈದು ಹೊರಹಾಕಿ ಮನೆಯೊಳಗೆ ಮಲಗಿದ- ಬೆಳಗೆದ್ದು ನೋಡಿದಾಗ ಪತ್ನಿ ಸಾವು

    ಕೊಡಲಿಯಿಂದ ಹಲ್ಲೆಗೈದು ಹೊರಹಾಕಿ ಮನೆಯೊಳಗೆ ಮಲಗಿದ- ಬೆಳಗೆದ್ದು ನೋಡಿದಾಗ ಪತ್ನಿ ಸಾವು

    ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ಶಂಕಿಸಿ ಪತಿಯೇ ಪತ್ನಿಯನ್ನ ಕೊಲೆಗೈದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದಲ್ಲಿ ನಡೆದಿದೆ.

    ಮೃತಳನ್ನ ಪದ್ಮಾಕ್ಷಿ (40) ಎಂದು ಗುರುತಿಸಲಾಗಿದೆ. ಕಿರಗುಂದ ಗ್ರಾಮದ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಚಂದ್ರ-ಪದ್ಮಾಕ್ಷಿ ದಂಪತಿ ಮಧ್ಯೆ ಕುಡಿತ ಹಾಗೂ ಪದ್ಮಾಕ್ಷಿಯ ಅನೈತಿಕ ಸಂಬಂಧದ ಬಗ್ಗೆ ಗಲಾಟೆ ನಡೆಯುತ್ತಲೇ ಇತ್ತು. ಕಳೆದ ರಾತ್ರಿ ಕಂಠ ಪೂರ್ತಿ ಕುಡಿದು ಬಂದ ಪತಿ ಚಂದ್ರ ಪತ್ನಿ ಜೊತೆ ಜಗಳವಾಡಿದ್ದಾನೆ.

    ಕುಡಿದ ಮತ್ತಿನಲ್ಲಿ ಅನೈತಿಕ ಸಂಬಂಧವನ್ನ ಶಂಕಿಸಿ ಜಗಳವಾಡಿ ಪತ್ನಿಗೆ ಹೊಡೆದು, ಮನೆಯಲ್ಲಿದ್ದ ಕೊಡಲಿಯಿಂದ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಕೊಡಲಿಯಿಂದ ಹಲ್ಲೆಗೈದ ಪತಿ ಆಕೆಯನ್ನ ಮನೆಯಿಂದ ಹೊರತಳ್ಳಿ ಬಾಗಿಲು ಹಾಕಿಕೊಂಡು ಮಲಗಿದ್ದಾನೆ. ಕೊಡಲಿಯಿಂದ ಹಲ್ಲೆಗೈದ ಹಿನ್ನೆಲೆ ತೀವ್ರ ರಕ್ತಸ್ರಾವ ಹಾಗೂ ಇಡೀ ರಾತ್ರಿ ಹೊರಗೆ ಬಿದ್ದಿದ್ದ ಮಹಿಳೆ ಪದ್ಮಾಕ್ಷಿ ಅತಿಯಾದ ಶೀತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ – ದೆಹಲಿಯಲ್ಲಿ ಇಬ್ಬರು ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಹೈಕಮಾಂಡ್ ಉತ್ಸುಕ

    ಪತ್ನಿಗೆ ಹೊಡೆದು ಹೊರತಳ್ಳಿ ಮಲಗಿದ್ದ ಪತಿ ಚಂದ್ರ ಬೆಳಗ್ಗೆ ಎದ್ದು ನೋಡಿದಾಗ ಪತ್ನಿ ಸಾವನ್ನಪ್ಪಿದ್ದಳು. ಪತ್ನಿಯ ಶವದ ಮುಂದೆ ಕೂತು ಕಣ್ಣೀರಿಟ್ಟಿದ್ದಾನೆ. ಮೃತಳಿಗೆ 18 ಹಾಗೂ 15 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದು, ಇವರ ಜಗಳದ ವೇಳೆ ಅವರು ಮನೆಯಲ್ಲಿ ಇರಲಿಲ್ಲ. ಬೆಳಗ್ಗೆ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಚಂದ್ರನನ್ನ ಬಂಧಿಸಿದ್ದಾರೆ. ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೈಪರ್ ಟೆನ್ಷನ್, ಮೂಡ್ ಸ್ವಿಂಗ್ ಖಾಯಿಲೆಯಿಂದ ಬಳಲುತ್ತಿರೋ ಪತ್ನಿಯಿಂದ ಪತಿಗೆ ಕಿರುಕುಳ

    ಹೈಪರ್ ಟೆನ್ಷನ್, ಮೂಡ್ ಸ್ವಿಂಗ್ ಖಾಯಿಲೆಯಿಂದ ಬಳಲುತ್ತಿರೋ ಪತ್ನಿಯಿಂದ ಪತಿಗೆ ಕಿರುಕುಳ

    ಬೆಂಗಳೂರು: ಹೈಪರ್ ಟೆನ್ಷನ್ ಹಾಗೂ ಮೂಡ್ ಸ್ವಿಂಗ್ ಖಾಯಿಲೆಯಿಂದ ಬಳಲುತ್ತಿರುವ ಪತ್ನಿಯು ಪತಿಗೆ ಕಿರುಕುಳ ನೀಡಿರುವ ಪ್ರಕರಣವೊಂದು ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

    ಪತ್ನಿ ಹಾಗೂ ಅತ್ತೆಯ ಕಿರುಕುಳ ಹಾಗೂ ಹಲ್ಲೆಯಿಂದ ಬೇಸತ್ತು ಕರುಣಾಕರನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ದನಗಳ ಮೈ ತೊಳೆಯಲು ಹೋದ ರೈತ ನೀರು ಪಾಲು

    ಮ್ಯಾಟ್ರಿಮೋನಿಯಲ್ಲಿ ಲೇಖನಾಶ್ರೀ ಪರಿಚಯವಾಗಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಕರುಣಾಕರಣ್ ಮದುವೆಯಾಗಿದ್ದ. ಇದೀಗ ಪತ್ನಿ ಹಾಗೂ ಆಕೆಯ ತಾಯಿ ಐದು ವರ್ಷದ ಹಿಂದಿನ ಕೆಲ ಖಾಸಗಿ ಫೋಟೋಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಕರುಣಾಕರನ್ ದೂರಿದ್ದಾರೆ.

    ಐದು ವರ್ಷದ ಫೋಟೋಗಳನ್ನ ಇಟ್ಟುಕೊಂಡು ತೊಂದರೆ ನೀಡಿದ್ದ ಹಿನ್ನೆಲೆಯಲ್ಲಿ ಕರುಣಾಕರನ್ ಚೆನ್ನೈಗೆ ತೆರಳಿದ್ದ. ಈ ವೇಳೆ ಪತ್ನಿ ಹಾಗೂ ಅತ್ತೆ ಮಿಸ್ಸಿಂಗ್ ಕಂಪ್ಲೆಂಟ್ ಕೂಡ ನೀಡಿದ್ದರು. ನಂತರ ಮನೆಗೆ ಬಂದಾಗ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಪತ್ನಿ ಹಾಗೂ ಅತ್ತೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರುಣಾಕರನ್ ದೂರಿನಲ್ಲಿ ತಿಳಿಸಿದ್ದಾರೆ.

    ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೈಟ್ ಕೊಡ್ತೀನೆಂದು ಮೋಸ ಮಾಡಿದ್ದಾರೆ ಅಂತಾ ಪತ್ನಿಗೆ ಕಿರುಕುಳ ಕೊಟ್ಟು ಕೊಲೆಗೈದ!

    ಸೈಟ್ ಕೊಡ್ತೀನೆಂದು ಮೋಸ ಮಾಡಿದ್ದಾರೆ ಅಂತಾ ಪತ್ನಿಗೆ ಕಿರುಕುಳ ಕೊಟ್ಟು ಕೊಲೆಗೈದ!

    ಬೆಂಗಳೂರು: ಪತಿಯೇ ತನ್ನ ಪತ್ನಿಯನ್ನು ಕೊಲೆಗೈದು ಬಳಿಕ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹತ್ಯೆಗೆ ಕಾರಣ ರಿವೀಲ್ ಆಗಿದೆ.

    ಯಲಹಂಕ (Yalahanka) ಉಪನಗರ 3 ನೇ ಹಂತದಲ್ಲಿ ಈ ಘಟನೆ ನಡೆದಿದೆ. ರೇಖಾ ಮನೆಯವರು ಸೈಟ್ ಕೊಡ್ತಿನಿ ಅಂತಾ ಮೋಸ ಮಾಡಿದ್ದಾರೆ ಎಂದು ಪತಿ ಸಂತೋಷ್ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಕೇಳಿ ಬಂದಿದೆ.

    ಬುಧವಾರ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ರೇಖಾ ಪತ್ತೆಯಾಗಿದ್ದರು. ಇದೀಗ ರೇಖಾ ಪೋಷಕರು ಕತ್ತು ಹಿಸುಕಿ ಕೊಲೆ ಮಾಡಿ ನೇಣು ಬಿಗಿರೋ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಯಲಹಂಕ ನ್ಯೂ ಟೌನ್ ಪೊಲೀಸರಿಂದ ಪತಿ ಸಂತೋಷ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪತ್ನಿ ಕೊಲೆಗೈದು ಸೀರೆಯಿಂದ ಫ್ಯಾನಿಗೆ ನೇತಾಕಿದ ಕಿರಾತಕ!

    ಲವ್ ಮ್ಯಾರೇಜ್: ಕಳೆದ ನಾಲ್ಕು ವರ್ಷಗಳಿಂದ ರೇಖಾ ಮತ್ತು ಸಂತೋಷ್ ಪರಸ್ಪರ ಪ್ರೀತಿಸುತ್ತಿದ್ದರು. ಕಾಲೇಜು ದಿನಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದ ಈ ಜೊಡಿ ಎರಡೂ ಮನೆಯವರನ್ನು ಒಪ್ಪಿಸಿ ಒಂದೂವರೆ ವರ್ಷದ ಹಿಂದೆ ಮದುವೆಯಾಗಿತ್ತು. ಮೂಲತಃ ತಮಿಳುನಾಡು ಮೂಲದವರಾಗಿರುವ ಇವರು ಮದುವೆ ಆದ ನಂತರ ಬೆಂಗಳೂರಿನ ಯಲಹಂಕಗೆ ಶಿಫ್ಟ್ ಆಗಿದ್ದರು. ಈ ದಂಪತಿಗೆ 6 ತಿಂಗಳ ಹೆಣ್ಣು ಮಗು ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತ್ನಿ ಕೊಲೆಗೈದು ಸೀರೆಯಿಂದ ಫ್ಯಾನಿಗೆ ನೇತಾಕಿದ ಕಿರಾತಕ!

    ಪತ್ನಿ ಕೊಲೆಗೈದು ಸೀರೆಯಿಂದ ಫ್ಯಾನಿಗೆ ನೇತಾಕಿದ ಕಿರಾತಕ!

    ಬೆಂಗಳೂರು: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾರೆ. ಆದರೆ ಇಲ್ಲೊಬ್ಬ ಕಿರಾತಕ ಪತಿಯು ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಕುತ್ತಿಗೆಗೆ ಸೀರೆ ಕಟ್ಟಿ ಫ್ಯಾನಿಗೆ ನೇತಾಕಿದ ಪ್ರಸಂಗವೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ರೇಖಾ ಕೊಲೆಯಾದ ಮೃತ ದುರ್ದೈವಿ. ಆರೋಪಿ ಪತಿಯನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಈ ಘಟನೆ ಯಲಹಂಕ ಉಪನಗರ 3 ನೇ ಹಂತದಲ್ಲಿ ನಡೆದಿದೆ. ಇದನ್ನೂ ಓದಿ: ಪತ್ನಿಗೆ ಡಿವೋರ್ಸ್ ಕೊಟ್ಟ ಶಿಖರ್ ಧವನ್

    ವರದಕ್ಷಿಣೆ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಸಂತೋಷ್ ಪತ್ನಿ ರೇಖಾಳನ್ನು ಕೊಲೆ ಮಾಡಿದ ಬಳಿಕ ಸೀರೆಯಿಂದ ಫ್ಯಾನಿಗೆ ನೇಣು ಹಾಕಿ, ಆತ್ಮಹತ್ಯೆ ಅಂತಾ ಬಿಂಬಿಸಿದ್ದ. ಸದ್ಯ ಪತಿ ಸಂತೋಷ್ ನನ್ನು ಯಲಹಂಕ ನ್ಯೂ ಟೌನ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 10 ಸಾವಿರ ಕೊಟ್ಟು ಪತಿಯನ್ನು ಮಂಗಳೂರು ಬೀಚ್ ನೋಡಲು ಲವ್ವರ್ ಜೊತೆ ಕಳುಹಿಸಿ ಕೊಲೆಗೈದ್ಳು!

    10 ಸಾವಿರ ಕೊಟ್ಟು ಪತಿಯನ್ನು ಮಂಗಳೂರು ಬೀಚ್ ನೋಡಲು ಲವ್ವರ್ ಜೊತೆ ಕಳುಹಿಸಿ ಕೊಲೆಗೈದ್ಳು!

    ಕಾರವಾರ: ಕೆಲವು ದಿನಗಳ ಹಿಂದೆ ಕುಮಟಾ ತಾಲೂಕಿನ ಗಡಿ ಭಾಗದ ದೇವಿಮನೆ ಘಟ್ಟ ಭಾಗದ ಮಾಸ್ತಿಮನೆ ದೇವಸ್ಥಾನದ ಹಿಂಭಾಗದಲ್ಲಿ ಅನಾಥ ಶವ ಪತ್ತೆಯಾಗಿತ್ತು. ಈ ಕುರಿತು ಕುಮಟಾ ಪೊಲೀಸರು (Kumta Police) ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಗದಗ ಮತ್ತು ಬಾಗಲಕೋಟೆ (Bagalkote) ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಗದಗ ಮೂಲದ ಪರಶುರಾಮ, ಬಾಗಲಕೋಟೆ ಮೂಲದ ರವಿ, ಕೊಲೆಯಾದ ವ್ಯಕ್ತಿಯ ಪತ್ನಿ ರಾಜಮಾ, ಗದಗ ಮೂಲದ ಬಸವರಾಜ್ ಬಂಧಿತರು.

    ಘಟನೆ ಏನು?, ಪ್ರಕರಣ ಬೇಧಿಸಿದ್ದು ಹೇಗೆ?: ಸೆ.30 ರಂದು ಬಾಗಲಕೋಟೆ ಮೂಲದ ಬಶೀರ್ ಸಾಬ್ ಎಂಬಾತನನ್ನು ಮಂಗಳೂರಿಗೆ ಬೀಚ್ ನೋಡುವ ಹೆಸರಿನಲ್ಲಿ ಪತ್ನಿ ರಾಜಮಾ 10 ಸಾವಿರ ಹಣ ನೀಡಿ ತಾನು ಅಕ್ರಮ ಸಂಬಂಧ ಹೊಂದಿದ್ದ ಪರಶುರಾಮನೊಂದಿಗೆ ಕಳುಹಿಸಿ ಕೊಟ್ಟಿದ್ದಾಳೆ. ಮಂಗಳೂರಿಗೆ ತೆರಳಿದ್ದ ಇವರು ಅಲ್ಲಿ ಕೊಲೆ ಮಾಡುವ ಉದ್ದೇಶದಿಂದ ಪರಶುರಾಮ ತನ್ನ ದೊಡ್ಡಮ್ಮನ ಮಗ ರವಿ, ಬಸವರಾಜ್ ಜೊತೆಯಾಗಿದ್ದಾರೆ.

    ನಂತರ ಮಂಗಳೂರಿನಿಂದ ಕುಮಟಾ ಮಾರ್ಗವಾಗಿ ದೇವಿಮನೆ ಘಟ್ಟದಲ್ಲಿ ಕೊಲೆಯಾದ ಬಶೀರ್ ಸಾಬ್ ನೊಂದಿಗೆ ಇವರು ಇಳಿದು ದೇವಸ್ಥಾನದ ಹಿಂಭಾಗದಲ್ಲಿ ಮದ್ಯ ಸೇವಿಸಿದ್ದಾರೆ. ಈ ವೇಳೆ ಪರಶುರಾಮ, ಬಶೀರ್ ಸಾಬ್‍ಗೆ ಹಿಂಭಾಗದಿಂದ ಕಟ್ಟಿಗೆಯಲ್ಲಿ ಹೊಡೆದು ಸಾಯಿಸಿ ಅಲ್ಲಿಯೇ ಕಾಡಿನಲ್ಲಿ ಶವ ಹಾಕಿ ಹೋಗಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಾಟೆ ಕೇಸ್ ವಾಪಸ್ ಪಡೆಯೋ ಚರ್ಚೆಯೇ ಆಗಿಲ್ಲ: ಪರಮೇಶ್ವರ್

    ಘಟನೆ ಬೆಳಕಿಗೆ ಬರುತ್ತಿದ್ದಂತೆ ಕುಮಟಾ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ನಾಲ್ಕು ಜನರನ್ನು ಬಂಧಿಸಿದ್ದು, ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಾನೆ ಎಂಬ ಕಾರಣದಿಂದ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ಕೊಲೆಯಾದ ಬಶೀರ್ ಸಾಬ್ ಪತ್ನಿ ರಾಜಮ ತಪ್ಪೊಪ್ಪಿಕೊಂಡಿದ್ದಾಳೆ. ಆರೋಪಿಗಳನ್ನು ನ್ಯಾಯಾಲಯದ ಸುಪರ್ದಿಗೆ ವಹಿಸಲಾಗಿದೆ.

    ಕಾರ್ಯಾಚರಣೆಯಲ್ಲಿ ಕುಮಟಾ ಪಿ.ಎಸ್.ಐ ನವೀನ್ ನಾಯ್ಕ್, ಕುಮಟಾ ಪೊಲೀಸ್ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್, ಪಿ.ಎಸ್.ಐ ಸಂಪತ್ , ಸಿಬ್ಬಂದಿ ಗಣೇಶ್ ನಾಯ್ಕ್, ಗುರು ನಾಯ್ಕ್, ಪ್ರದೀಪ್ ನಾಯ್ಕ್, ಲೋಕೇಶ್, ರಾಜು ನಾಯ್ಕ್, ನಿರಂಜನ್ ಸೇರಿದಂತೆ ಇತರರು ಭಾಗಿಯಾಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ – ವಿಷ ಸೇವಿಸಿ ದಂಪತಿ ಆತ್ಮಹತ್ಯೆ

    ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ – ವಿಷ ಸೇವಿಸಿ ದಂಪತಿ ಆತ್ಮಹತ್ಯೆ

    ಲಕ್ನೋ: ಪತ್ನಿಯ (Wife) ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ (Gang Rape) ಪರಿಣಾಮ ವಿಷ (Poison) ಸೇವಿಸಿ ದಂಪತಿ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಉತ್ತರಪ್ರದೇಶದ (Uttar Pradesh) ಬಸ್ತಿ ಜಿಲ್ಲೆಯಲ್ಲಿ ನಡೆದಿದೆ.

    30 ವರ್ಷದ ಪತಿ ಮತ್ತು 27 ವರ್ಷದ ಪತ್ನಿ ಗುರುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ (Husband) ಅದೇ ದಿನ ಮೃತಪಟ್ಟರೆ, ಪತ್ನಿ ಶುಕ್ರವಾರ ಗೋರಖ್‌ಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯ ಕುರಿತು ಎಫ್‌ಐಆರ್ ದಾಖಲಿಸಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಬಸ್ತಿ ಎಸ್‌ಪಿ ಗೋಪಾಲ ಕೃಷ್ಣ ಶನಿವಾರ ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮವಾಗಿ ಗಡಿ ನುಸುಳಿದ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದ ಬಿಎಸ್‌ಎಫ್

    ಸೆಪ್ಟೆಂಬರ್ 21ರ ಮಧ್ಯರಾತ್ರಿ ಇಬ್ಬರು ದುಷ್ಕರ್ಮಿಗಳು ಮನೆಗೆ ನುಗ್ಗಿ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ದಂಪತಿಯ ಸಂಬಂಧಿಕರು ಆರೋಪಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ದಂಪತಿ ಆರೋಪಿಗಳ ಹೆಸರನ್ನು ನಮೂದಿಸಿ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಐಫೋನ್‌ ನೀಡಲು ತಡ ಮಾಡಿದ್ದಕ್ಕೆ ಸಿಬ್ಬಂದಿ ಮೇಲೆ ಗ್ರಾಹಕರಿಂದ ಹಲ್ಲೆ

    ಮೃತ ವ್ಯಕ್ತಿಯ ಸಹೋದರ ನೀಡಿರುವ ದೂರಿನ ಆಧಾರದ ಮೇಲೆ ಶುಕ್ರವಾರ ಇಬ್ಬರು ಆರೋಪಿಗಳ ವಿರುದ್ಧ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ) ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆದರ್ಶ್ (25) ಮತ್ತು ತ್ರಿಲೋಕಿ (45) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ‘ಸಿಂಗಂ’ ರೀತಿಯ ಸಿನಿಮಾಗಳು ಸಮಾಜಕ್ಕೆ ಕೆಟ್ಟ ಸಂದೇಶ ಸಾರುತ್ತವೆ: ಹೈಕೋರ್ಟ್‌ ನ್ಯಾಯಮೂರ್ತಿ

    ಶುಕ್ರವಾರ ಬೆಳಗ್ಗೆ ಮಕ್ಕಳು ಶಾಲೆಗೆ ಹೋಗಲು ತಯಾರಾಗುತ್ತಿದ್ದ ವೇಳೆ ವಿಷ ಸೇವಿಸಿ ಸಾಯುವುದಾಗಿ ಪೋಷಕರು ತಿಳಿಸಿದ್ದಾರೆ ಎಂದು ಮೃತ ದಂಪತಿಯ ಮಕ್ಕಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ದಂಪತಿಗೆ 8 ಮತ್ತು 6 ವರ್ಷದ ಇಬ್ಬರು ಗಂಡು ಮಕ್ಕಳಿದ್ದು, 1 ವರ್ಷದ ಹೆಣ್ಣು ಮಗುವಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ತಗೋ ನಿನ್ನ ಲವ್ವರ್ ತಲೆ ತಂದಿದ್ದೇನೆ- ಪತ್ನಿ ಮನೆ ಮುಂದೆ ರುಂಡ ಎಸೆದ ಪತಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಗೋ ನಿನ್ನ ಲವ್ವರ್ ತಲೆ ತಂದಿದ್ದೇನೆ- ಪತ್ನಿ ಮನೆ ಮುಂದೆ ರುಂಡ ಎಸೆದ ಪತಿ!

    ತಗೋ ನಿನ್ನ ಲವ್ವರ್ ತಲೆ ತಂದಿದ್ದೇನೆ- ಪತ್ನಿ ಮನೆ ಮುಂದೆ ರುಂಡ ಎಸೆದ ಪತಿ!

    ಚೆನ್ನೈ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಅಕ್ರಮ ಸಂಬಂಧದಿಂದ ಬೇತಸ್ತು ಆಕೆಯ ಲವ್ವರ್ ನನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ಆರೋಪಿಯನ್ನು ಎಸ್ ವೇಲುಸಾಮಿ ಎಂದು ಗುರುತಿಸಲಾಗಿದೆ. ಡಿ ಮುರುಗನ್ ಕೊಲೆಯಾದಾತ. ಇವರಿಬ್ಬರು ತೆಂಕಾಸಿ ಜಿಲ್ಲೆಯ ಕನ್ನಡಿಕುಲಂ ಗ್ರಾಮದ ನಿವಾಸಿಗಳು. ಇದನ್ನೂ ಓದಿ: 2 ವರ್ಷದ ಹೆಣ್ಣು ಮಗು ಅನುಮಾನಾಸ್ಪದ ಸಾವು – ತಾತನ ವಿರುದ್ಧವೇ ಕೊಲೆಯ ಶಂಕೆ

    ವೇಲುಸಾಮಿ ಪತ್ನಿಗೆ ಮುರುಗನ್ ಜೊತೆ ಅಕ್ರಮ ಸಂಬಂಧವಿತ್ತು. ಈ ವಿಚಾರ ವೆಲುಸಾಮಿ ಗಮನಕ್ಕೆ ಬಂದಿದ್ದು, ಪತ್ನಿಗೆ ಎಚ್ಚರಿಕೆ ನೀಡಿದ್ದನು. ಆದರೆ ಪತಿಯ ಮಾತನ್ನು ಪತ್ನಿ ಕೇಳದೇ ಮುರುಗನ್ ಜೊತೆ ತನ್ನ ಸಂಬಂಧ ಮುಂದುವರಿಸಿದ್ದಳು. ಹೀಗಾಗಿ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು.

    ಪದೇ ಪದೇ ಜಗಳವಾಗುತ್ತಿದ್ದರಿಂದ ಪತಿ ಮೇಲೆ ಸಿಟ್ಟುಮಾಡಿಕೊಂಡು ಪತ್ನಿ ತವರು ಮನೆ ಸೇರಿದ್ದಳು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ವೆಲುಸಾಮಿ, ಮುರುಗನ್ ಜೊತೆ ಜಗಳವಾಡಿದ್ದಾನೆ. ಮಾತಿಗೆ ಮಾತು ಬೆಳೆದು ಮುರುಗನ್‍ನನ್ನು ವೆಲುಸಾಮಿ ರುಂಡ-ಮುಂಡ ಬೇರೆ ಬೇರೆ ಮಾಡಿದ್ದಾನೆ. ನಂತರ ಮುರುಗನ್ ರುಂಡದೊಂದಿಗೆ ಪತ್ನಿ ಮನೆಗೆ ತೆರಳಿದ್ದಾನೆ.

    ಪತ್ನಿ ಮನೆಗೆ ಹೋಗಿ, ತಗೋ ನಿನ್ನ ಲವ್ವರ್ ತಲೆ ಕಡಿದು ತಂದಿದ್ದೇನೆ ಎಂದು ಸಿಟ್ಟಿನಿಂದ ಕಿರುಚಾಡಿದ್ದಾನೆ. ಇತ್ತ ತನ್ನ ಲವ್ವರ್ ತಲೆ ಕಂಡು ಆಕೆ ಗಾಬರಿಂದ ತಲೆ ಸುತ್ತು ಬಂದು ಬಿದ್ದಿದ್ದಾಳೆ. ಕೂಡಲೇ ಆಕೆಯ ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ವೆಲುಸಾಮಿಯನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

    ಇತ್ತ ಮುರುಗನ್ ತಲೆಯನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇನ್ನು ವೆಲುಸಾಮಿಯನ್ನು ಪ್ರಕರಣ ಸಂಬಂಧ ವಿಚಾರಣೆ ನಡೆಸಿದಾಗ ಆತ ಪತ್ನಿಯ ಅಕ್ರಮ ಸಂಬಂಧದ ಕುರಿತು ವಿವರಿಸಿದ್ದಾನೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮನೆಯ ಎರಡನೇ ಮಹಡಿಯಿಂದ ಬಿದ್ದು ಗೃಹಿಣಿ ಅನುಮಾನಾಸ್ಪದ ಸಾವು – ಪತಿ ಪರಾರಿ

    ಮನೆಯ ಎರಡನೇ ಮಹಡಿಯಿಂದ ಬಿದ್ದು ಗೃಹಿಣಿ ಅನುಮಾನಾಸ್ಪದ ಸಾವು – ಪತಿ ಪರಾರಿ

    ರಾಯಚೂರು: ಮನೆಯ ಎರಡನೇ ಮಹಡಿಯಿಂದ ಬಿದ್ದು ಗೃಹಿಣಿಯೊಬ್ಬಳು (House Wife) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ರಾಯಚೂರು (Raichur) ಜಿಲ್ಲೆಯ ಬದ್ರಿನಾಥ ಕಾಲೋನಿಯಲ್ಲಿ ನಡೆದಿದೆ.

    ಶಿಲ್ಪಾ (28) ಮೃತ ಮಹಿಳೆ. ಈಕೆ ಮನೆಯ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತಳ ಪತಿ ಶರತ್ ಹಾಗೂ ಅತ್ತೆ-ಮಾವ ಸೇರಿ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಶಿಲ್ಪಾ ಸಂಬಂಧಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಕೂದಲು ವ್ಯಾಪಾರಕ್ಕೆ ತೆರಳಿದ್ದ ಬಾಲಕನ ಬರ್ಬರ ಹತ್ಯೆ

    ಘಟನೆ ಹಿನ್ನೆಲೆ ಆಕ್ರೋಶದಲ್ಲಿ ಶರತ್ ತಂದೆಗೆ ಶಿಲ್ಪಾ ಸಂಬಂಧಿಕರು ಥಳಿಸಿದ್ದಾರೆ. ಮಂಗಳವಾರ ರಾತ್ರಿ ಜಗಳ ಮಾಡಿ ಎರಡನೇ ಮಹಡಿಯಿಂದ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ. 2022ರ ಜೂನ್‌ನಲ್ಲಿ ಆಂಧ್ರಪ್ರದೇಶ ಆದೋನಿಯಲ್ಲಿ ಶಿಲ್ಪಾ ಹಾಗೂ ಶರತ್ ಮದುವೆಯಾಗಿತ್ತು. ಮದುವೆಯಾದಾಗಿನಿಂದಲೂ ಪತಿ-ಪತ್ನಿ ನಡುವೆ ಹೊಂದಾಣಿಕೆಯಾಗದೇ ಆಗಾಗ ಜಗಳಗಳು ನಡೆಯುತ್ತಿದ್ದವು. ಈ ಕುರಿತು ಕುಟುಂಬದ ಹಿರಿಯರು ಸಂಧಾನ ಮಾಡಿದ್ದರು. ಆದರೂ ಕೂಡ ಸಮಸ್ಯೆಗಳು ಬಗೆಹರಿದಿರಲಿಲ್ಲ ಎಂದು ಆಂಧ್ರ ಮೂಲದ ಶಿಲ್ಪಾ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಂತರಗಂಗೆ ಬೆಟ್ಟದಲ್ಲಿ ಪಾಕ್ ಬಾವುಟ ಹೋಲುವ ಪೇಂಟಿಂಗ್ – ಆರೋಪಿ ಅರೆಸ್ಟ್

    ಘಟನೆಯ ಬಳಿಕ ಶಿಲ್ಪಾ ಪತಿ ಶರತ್ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಪತಿ ಬರುವವರೆಗೂ ಆಕೆಯ ಮೃತದೇಹ ಎತ್ತಲು ಬಿಡಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ನೇತಾಜಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ಇನ್ನೂ ಪ್ರಕರಣ ದಾಖಲಾಗಿಲ್ಲ. ಇದನ್ನೂ ಓದಿ: ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಕ್ಕಳಾಗಲಿಲ್ಲ ಅಂತ ಪತ್ನಿಯಿಂದ ಪತಿಯನ್ನ ದೂರ ಮಾಡಿದ ಅತ್ತೆ?

    ಮಕ್ಕಳಾಗಲಿಲ್ಲ ಅಂತ ಪತ್ನಿಯಿಂದ ಪತಿಯನ್ನ ದೂರ ಮಾಡಿದ ಅತ್ತೆ?

    – ಮನೆ ಮುಂದೆಯೇ ಆಹೋರಾತ್ರಿ ಧರಣಿ ಕೂತ ಪತ್ನಿ

    ಚಿಕ್ಕಬಳ್ಳಾಪುರ: ಅವರದ್ದು ಶ್ರೀಮಂತ ಕುಟುಂಬ ಪ್ರತಿಷ್ಠಿತ ಶಾಲೆಯೂ ಸಹ ಇದೆ. ಆದರೆ ಆ ಕುಟುಂಬದಲ್ಲಿ ಮಕ್ಕಳಾಗಲಿಲ್ಲ ಅನ್ನೋ ಕಾರಣಕ್ಕೆ ಸೊಸೆಯನ್ನೇ ಅತ್ತೆ ಮನೆಯಿಂದ ಹೊರಹಾಕಿದ್ದಾರಂತೆ. ಇದರಿಂದ ನೊಂದ ಪತ್ನಿ ತನಗೆ ಗಂಡ ಬೇಕು ಅತ್ತೆ ಮನೆಯಲ್ಲೇ ಸಂಸಾರ ಮಾಡಬೇಕು ಅಂತ ಆಹೋರಾತ್ರಿ ಮನೆ ಮುಂದೆ ಧರಣಿ ಕೂತು ಪ್ರತಿಭಟನೆ ನಡೆಸಿದ್ದಾಳೆ.

    ಅಂದಹಾಗೆ ಜಬೀನ್ ತಾಜ್ ಹಾಗೂ ಚಿಕ್ಕಬಳ್ಳಾಪುರ (Chikkaballapur) ನಗರದ ಮುನಿಸಿಪಾಲ್ ಬಡಾವಣೆ ನಿವಾಸಿ ಮುಕ್ತಿಯಾರ್ ಅಹಮದ್‍ಗೆ ಮದುವೆಯಾಗಿ ಸರಿಸುಮಾರು 09 ವರ್ಷಗಳೇ ಕಳೆದಿವೆ. ಆದರೆ ಈ ದಂಪತಿಗೆ ಇದುವರೆಗೂ ಮಕ್ಕಳಾಗಿಲ್ಲ. ಆರಂಭದಲ್ಲಿ ಎಲ್ಲವೂ ಚೆನ್ನಾಗಿದ್ದ ಸಂಸಾರದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಪದೇ ಪದೇ ಕೌಟುಂಬಿಕ ಕಲಹ ಸಮಸ್ಯೆಗಳು ಕಾಡತೊಡಗಿವೆ. ಇದನ್ನೂ ಓದಿ: ಹಿಂದೆ ಏನಾಯ್ತು ಅನ್ನೋದು ಮುಖ್ಯವಲ್ಲ, ಇಂದು ಏನಾಯ್ತು ಎಂಬುದು ಮುಖ್ಯ: ದಿನೇಶ್ ಗುಂಡೂರಾವ್

    ಇಬ್ಬರ ನಡುವೆ ಸಣ್ಣ ಪುಟ್ಟ ವಿಷಯಕ್ಕೂ ಜಗಳ ಅಂತ ಹಲವು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದಕ್ಕೆ ಮೂಲ ಕಾರಣ ಮಕ್ಕಳಾಗಿಲ್ಲ ಅನ್ನೋದು ಆರೋಪ. ಹೀಗಾಗಿ ಮುಕ್ತಿಯಾರ್ ಅಹಮದ್ ತಾಯಿ ಜಬೀನ್ ತಾಜ್ ರ ಅತ್ತೆ ನ್ಯಾಮತಿ ಬೇಗಂ ಮಕ್ಕಳಾಗಲಿಲ್ಲ ಅಂತ ಸೊಸೆಯನ್ನ ತನ್ನ ಮನೆಯಲ್ಲಿ ಇಟ್ಟುಕೊಳ್ಳದೆ ಹೊರಗೆ ಹಾಕಿದ್ದಾಳಂತೆ. ಇದರಿಂದ ನೊಂದ ಜಬೀನ್ ತಾಜ್ ಅತ್ತೆಯ ಮನೆಯ ಎದುರೇ ಕೂತು ಆಹೋರಾತ್ರಿ ಪ್ರತಿಭಟನೆ ನಡೆಸಿದ್ದಾಳೆ.

    ಅಂದಹಾಗೆ ಕಳೆದ 1 ವರ್ಷದಿಂದ ಅತ್ತೆ-ಸೊಸೆ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿ ಗಂಡ ಮುಕ್ತಿಯಾರ್ ಅಹಮದ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಬೇರೊಂದು ಮನೆ ಮಾಡಿ ಹೆಂಡತಿಯನ್ನ ಅಲ್ಲಿ ಬಿಟ್ಟಿದ್ದ. ಆದರೆ ಆರಂಭದಲ್ಲಿ ವಿಜಯಪುರಕ್ಕೆ ಹೋಗಿ ಬರುತ್ತಿದ್ದ ಗಂಡ ಮುಕ್ತಿಯಾರ್ ಅಹಮದ್ ಬರ ಬರುತ್ತಾ ಹೆಂಡತಿ ಮನೆಗೆ ಹೋಗೋದನ್ನೆ ನಿಲ್ಲಿಸಿದ್ದಾನಂತೆ. ಹೆಂಡತಿ ಕರೆ ಮಾಡಿದ್ರೂ ಬ್ಲಾಕ್ ಲಿಸ್ಟ್‍ಗೆ ಹಾಕಿ ಹೆಂಡತಿ ಜೊತೆ ಮಾತಾಡೋದನ್ನ ಸಹ ಬಿಟ್ಟಿದ್ದನಂತೆ. ಇದ್ರಿಂದ ರೋಸಿ ಹೋದ ಜಬೀನಾತಾಜ್ ಈಗ ಅತ್ತೆಯ ಮನೆಯ ಎದುರೇ ಧರಣಿ ಕೂತು ನಾನು ಗಂಡನ ಜೊತೆ ಇದೇ ಮನೆಯಲ್ಲಿ ಸಂಸಾರ ಮಾಡ್ತೇನೆ ಅಂತ ಪಟ್ಟು ಹಿಡಿದಿದ್ದಾಳೆ.

    ಇತ್ತ ಗಂಡ ನನ್ನ ಹೆಂಡತಿ ಸುಖಾಸುಮ್ಮನೆ ಟಾರ್ಚರ್ ಕೊಡ್ತಾಳೆ, ಕಾಟ ತಡೆಯೋಕೆ ಆಗ್ತಿಲ್ಲ. ನನ್ನ ಬಾಯಿಗೆ ಬಂದ ಹಾಗೆ ಬೈತಾಳೆ. ಹಾಗಾಗಿ ನಾನು ಆಕೆಗೆ ಡಿವೋರ್ಸ್ ಕೊಡೋಕೆ ಮುಂದಾಗಿದ್ದೇನೆ ಅಂತಾನೆ. ಆದರೆ ಇತ್ತ ಪಟ್ಟು ಬಿಡದ ಜಬೀನಾತಾಜ್ ವಿಜಯಪುರದಿಂದ ಬಂದು ಅತ್ತೆ ಮನೆಯ ಎದುರು ಧರಣಿ ಕೂರುತ್ತಿದ್ದಂತೆ. ಇನ್ನು ಅತ್ತೆ ಮನೆಗೆ ಬೀಗ ಜಡಿದು ಎಸ್ಕೇಪ್ ಆಗಿದ್ದಾರೆ. ಆದರೂ ಪಟ್ಟು ಬಿಡದ ಜಬೀನಾ ತಾಜ್ ಮೂರು ದಿನಗಳಿಂದ ಏಕಾಂಗಿಯಾಗಿ ಆಹೋರಾತ್ರಿ ಧರಣಿ ಮುಂದುವರಿಸಿದ್ದು ನಾನು ಎಷ್ಟೇ ದಿನ ಆದ್ರೂ ಇಲ್ಲೇ ಇರ್ತೇನೆ ಅಂತ ಕೂತಿದ್ದಾಳೆ. ಗಂಡ ಬಂದು ವಿಜಯಪುರದ ಮನೆಗೆ ಹೋಗೋಣ ಬಾ ಅಂದ್ರೂ ಹೋಗದೆ ಅತ್ತೆ ಮನೆ ಎದುರೇ ಆಹೋರಾತ್ರಿ ಧರಣಿ ಮುಂದುವರಿಸಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದ್ವೆಯಾಗಿ ಮೂರೇ ತಿಂಗಳಲ್ಲಿ ಬೆಲೆಬಾಳೋ ವಸ್ತು ಜೊತೆ ಪತ್ನಿ ಪರಾರಿ!

    ಮದ್ವೆಯಾಗಿ ಮೂರೇ ತಿಂಗಳಲ್ಲಿ ಬೆಲೆಬಾಳೋ ವಸ್ತು ಜೊತೆ ಪತ್ನಿ ಪರಾರಿ!

    ಬೆಂಗಳೂರು: ಮದುವೆ ಆಗಿ ಮೂರು ತಿಂಗಳಲ್ಲಿ ಪತ್ನಿ ಮೂರು ನಾಮ ಹಾಕಿ ಎಸ್ಕೇಪ್ ಆಗಿರುವ ಪ್ರಕರಣವೊಂದು ಸಿಲಿಕಾನ್ ಸಿಟಿಯಲ್ಲಿ (Bengaluru) ಬೆಳಕಿಗೆ ಬಂದಿದೆ.

    ಹೌದು. ಫೇಸ್‍ಬುಕ್‍ನಲ್ಲಿ ಯುವಕನಿಗೆ ಯುವತಿ ಪರಿಚಯವಾಗಿದ್ದಾಳೆ. ಪರಿಚಯ ಪ್ರೀತಿಗೆ ತಿರುಗಿ ಪ್ರೀತಿ, ಪ್ರೇಮ, ಮದುವೆ ಅನ್ನೋ ಹೆಸರಿನಲ್ಲಿ ಗಂಡನಿಗೆ ಪಂಗನಾಮ ಹಾಕಿದ್ದಾಳೆ. ಮದುವೆ ಬಳಿಕ ದುಬಾರಿ ಮೌಲ್ಯದ 2 ಮೊಬೈಲ್ ಹಾಗೂ 15 ರಿಂದ 20 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್‍ನೊಂದಿಗೆ ಪರಾರಿಯಾಗಿದ್ದಾಳೆ. ಇತ್ತ ಪ್ರಿಯತಮೆಗಾಗಿ ಪ್ರಾಣಕೊಡಲು ಸಿದ್ಧನಿದ್ದ ಗಂಡ ಪತ್ನಿಯ ಮೋಸದ ಬಲೆಗೆ ಬಿದ್ದು ಇಂಗು ತಿಂದ ಮಂಗನಂತೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಕದತಟ್ಟಿದ್ದಾನೆ.

    ಏನಿದು ಪ್ರಕರಣ..?: ಸಂತೋಷ್‍ಗೆ ಕೊರೊನಾ (Corona Virus) ಸಮಯದಲ್ಲಿ ಸಾಮಾಜಿಕ ಜಾಲಾತಾಣದಲ್ಲಿ ಈಕೆ ಪರಿಚಯವಾಗುತ್ತಾಳೆ. ಸಂತೋಷ್ ಪರಿಚಯವಾಗುತ್ತಿದ್ದಂತೆ ಕೆಲಸ ಕೊಡಿಸುವಂತೆ ಕೇಳುತ್ತಾಳೆ. ಸಂತೋಷ್ ಅಖಿಲಾಗೆ ತಾನು ಕೆಲಸ ಮಾಡುತ್ತಿದ್ದ ನೋಬ್ರೋಕರ್ ಡಾಟ್‍ಕಾಂನಲ್ಲಿ ಕೆಲಸ ಕೊಡಿಸಿದ್ದ. ಆಗ ಇಬ್ಬರು ಒಂದೇ ಬೈಕ್‍ನಲ್ಲಿ ಹೋಗೋದು ಬರುವುದು ಮಾಡುತ್ತಿದ್ದರು. ಹಾಗೆಯೇ ಇಬ್ಬರಿಗೆ ಲವ್ ಆಗುತ್ತೆ. ಈ ವೇಳೆ ದುಬಾರಿ ಬೆಲೆಯ ಐಫೋನ್‍ಗೆ ಡಿಮಾಂಡ್ ಮಾಡುತ್ತಾಳೆ. ಪ್ರಿಯತಮೆ ಅಖಿಲಾಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ಕಾರಣ ಸಂತೋಷ್ ಒಂದು ಲಕ್ಷದ 30 ಸಾವಿರದ ಐಫೋನ್ ಕೊಡಿಸುತ್ತಾನೆ. ಐಫೋನ್ ಕೈಗೆ ಸಿಗುತ್ತಿದ್ದಂತೆಯೇ ಬ್ಯಾಂಕಾಕ್‍ಗೆ ಹೋಗಬೇಕು ಅಂತ 6 ಲಕ್ಷ ಪೀಕಿದ್ದಾಳೆ. ವಿದೇಶಿ ಪ್ರವಾಸದಿಂದ ಬಂದ ಕೂಡಲೇ ಮತ್ತೊಂದು ದುಬಾರಿ ಬೆಲೆಯ ಐಫೋನ್ ಅನ್ನು ಸಂತೋಷ್ ಗಿಫ್ಟ್ ಮಾಡುತ್ತಾನೆ.

    ಇಷ್ಟೆಲ್ಲ ಅಖಿಲಾ ಪೀಕಿದ್ಮೇಲೆ ಪ್ರಿಯತಮೆಯ ಬಾವ ಅರುಣ್ ಹಾಗೂ ಅಶ್ವಿನಿ ಎಂಟ್ರಿಯಾಗಿದ್ದಾರೆ. ಪ್ರಿಯತಮೆ ಅಕ್ಕ ಅಶ್ವಿನಿ 15 ಲಕ್ಷದ ಒಡವೆ ಕೊಡಿಸಿದರೆ ಇಬ್ಬರದ್ದು ಮದುವೆ ಮಾಡಿಸೋದಾಗಿ ಡಿಮಾಂಡ್ ಮಾಡುತ್ತಾಳೆ. ನಾದಿನಿಯ ಡಿಮಾಂಡ್‍ನಂತೆ 15 ಲಕ್ಷದ ಒಡವೆ ಕೂಡ ಕೊಡಿಸಿದ್ದಾನೆ. ನಾದಿನಿ ಗಂಡ ಅರುಣ್ ಮದುವೆ ಹೆಸರಲ್ಲಿ ಐದು ಲಕ್ಷ ಸಂತೋಷ್ ಬಳಿ ವಸೂಲಿ ಮಾಡಿದ್ದಾನೆ. ಬಳಿಕ ಚಂದ್ರಲೇಔಟ್‍ನಲ್ಲಿರೋ ಮದ್ದೂರಮ್ಮ ದೇವಸ್ಥಾನದಲ್ಲಿ ಯುವಕನ ಸಂಬಂಧಿಕರ ಅನುಪಸ್ಥಿತಿಯಲ್ಲಿ ಅಕ್ಕ-ಬಾವ ನಿಂತು ಇಬ್ಬರ ಮದುವೆ ಮಾಡಿಸಿ ಮುಗಿಸುತ್ತಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

    ಮದುವೆ ಆಗಿ ಮೂರು ತಿಂಗಳಲ್ಲಿ ಗಂಡ ಸಂತೋಷ್ ಜೊತೆಗಿದ್ದ ಅಖಿಲಾ ಮೂರು ತಿಂಗಳ ಸಮಯವೂ ಜೊತೆಗೆ ಬಾಳಿಲ್ಲ. ಮದುವೆ ಆದ ಬಳಿಕ ಅಖಿಲಾಗೆ ಮದುವೆ ಆಗಿ ವಿಚ್ಛೇದನವಾಗಿರೊದು ಬೆಳಕಿಗೆ ಬರುತ್ತೆ. ಅಷ್ಟೆಲ್ಲಾ ಆದರೂ ಪತ್ನಿಯನ್ನೇ ದೇವರು ಎಂದುಕೊಂಡು ಹೋಗುತ್ತಿದ್ದ ಯುವಕನಿಗೆ ಮೋಸ ಮಾಡಿ ಗಂಡನ ಸಂಪರ್ಕ ಸಿಗದೇ ಅಖಿಲಾ ನಾಪತ್ತೆ ಆಗಿದ್ದಾಳೆ. ಇತ್ತ ಪತ್ನಿಯ ನೌಟಂಕಿ ನಾಟಕಕ್ಕೆ ಮಾರುಹೋಗಿ ಮೋಸಹೋದ ಪತ್ನಿ ಹಾಗೂ ಆಕೆಯ ಅಕ್ಕ ಬಾವನ ವಿರುದ್ಧ ಕೇಸ್ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]