Tag: ಪತಿ

  • ಮನೆಯಲ್ಲಿದ್ದ ಗೃಹಿಣಿ ಅನುಮಾನಾಸ್ಪದ ಸಾವು – ಪತಿ ವಿರುದ್ಧ ಕೊಲೆ ಶಂಕೆ

    ಮನೆಯಲ್ಲಿದ್ದ ಗೃಹಿಣಿ ಅನುಮಾನಾಸ್ಪದ ಸಾವು – ಪತಿ ವಿರುದ್ಧ ಕೊಲೆ ಶಂಕೆ

    ಚಿಕ್ಕಮಗಳೂರು: ಮನೆಯಲ್ಲಿದ್ದ ಗೃಹಿಣಿ (House Wife) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮೃತ ಗೃಹಿಣಿಯ ಪೋಷಕರು ಪತಿ ವಿರುದ್ಧ ಕೊಲೆ ಶಂಕೆ ವ್ಯಕ್ತಪಡಿಸಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ದೇವವೃಂದದಲ್ಲಿ ನಡೆದಿದೆ.

    ಶ್ವೇತಾ (31) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಗೃಹಿಣಿ. ಮೂರು ವರ್ಷದ ಹಿಂದೆ ಶ್ವೇತಾ ದರ್ಶನ್ ಎಂಬವರನ್ನು ವಿವಾಹವಾಗಿದ್ದರು. ದರ್ಶನ್ ಬೆಂಗಳೂರಿನ (Bengaluru) ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ಪಾಯಿಸನ್ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಶ್ವೇತಾಳ ಪೋಷಕರು ಆರೋಪಿಸಿದ್ದಾರೆ. ವಇದನ್ನೂ ಓದಿ: ರಾಡ್‌ನಿಂದ ಹೊಡೆದು ವೃದ್ಧ ದಂಪತಿಯ ಕೊಲೆ – ಆಸ್ತಿ ವಿಚಾರಕ್ಕೆ ಮಗನಿಂದ ಹತ್ಯೆ ಶಂಕೆ

    4 ದಿನದ ಹಿಂದೆ ಬೆಂಗಳೂರಿನಿಂದ ದೇವವೃಂದಕ್ಕೆ ದರ್ಶನ್ ಮತ್ತು ಶ್ವೇತಾ ಆಗಮಿಸಿದ್ದು, ಹೃದಯಾಘಾತವಾಗಿ ಶ್ವೇತಾ ಸಾವನ್ನಪ್ಪಿದ್ದಾಳೆ ಎಂದು ದರ್ಶನ್ ಪತ್ನಿಯ ಪೋಷಕರಿಗೆ ಮಾಹಿತಿ ನೀಡಿದ್ದಾನೆ. ಇದನ್ನೂ ಓದಿ: ಮನೆಗೆ ಬರಲು ನಿರಾಕರಿಸಿದ ಪತ್ನಿ – ಮನನೊಂದು ಪತಿ ಆತ್ಮಹತ್ಯೆ

    ದರ್ಶನ್ ಮನೆಯವರು ತರಾತುರಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದು, ಮೃತಳ ಪೋಷಕರು ಅಂತ್ಯಕ್ರಿಯೆ ತಡೆದು ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ದರ್ಶನ್ ವಿರುದ್ಧ ಅನೈತಿಕ ಸಂಬಂಧದ ಆರೋಪವಿದ್ದು, ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ – ತನಿಖೆಗೆ ಹಾಜರಾಗದೇ ಶ್ರೀಕಿ ಕಳ್ಳಾಟ

    ಈಗ ಶ್ವೇತಾ ಮೃತದೇಹವನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಬೈಕ್ ಬೆಲೆ 25 ಸಾವಿರ – ಗಾಡಿ ಮೇಲಿದೆ 225 ಕೇಸ್!

  • ಮನೆಗೆ ಬರಲು ನಿರಾಕರಿಸಿದ ಪತ್ನಿ – ಮನನೊಂದು ಪತಿ ಆತ್ಮಹತ್ಯೆ

    ಮನೆಗೆ ಬರಲು ನಿರಾಕರಿಸಿದ ಪತ್ನಿ – ಮನನೊಂದು ಪತಿ ಆತ್ಮಹತ್ಯೆ

    ಚಾಮರಾಜನಗರ: ಎಷ್ಟೇ ಕರೆದರೂ ತನ್ನ ಮನೆಗೆ ಬರಲು ಪತ್ನಿ ನಿರಾಕರಿಸಿದ್ದಕ್ಕೆ ಪತಿ ಮನನೊಂದು ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಚಾಮರಾಜನಗರ (Chamarajanagara) ತಾಲೂಕಿನ ಹೊನ್ನಹಳ್ಳಿಯಲ್ಲಿ ನಡೆದಿದೆ.

    ವಸಂತಕುಮಾರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ 3 ವರ್ಷದ ಹಿಂದೆ ವಸಂತಕುಮಾರ್ ಬೆಂಗಳೂರಿನ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ಕೆಲ ದಿನಗಳಿಂದ ಪತ್ನಿ ಗಂಡನ ಮನೆಗೆ ಬರಲು ನಿರಾಕರಿಸಿದ್ದಾಳೆ. ಇದನ್ನೂ ಓದಿ: ರಾಡ್‌ನಿಂದ ಹೊಡೆದು ವೃದ್ಧ ದಂಪತಿಯ ಕೊಲೆ – ಆಸ್ತಿ ವಿಚಾರಕ್ಕೆ ಮಗನಿಂದ ಹತ್ಯೆ ಶಂಕೆ

    ಪತ್ನಿ ಮನೆಗೆ ಬಾರದ ಕಾರಣ ಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನದ ಬಳಿ ಪ್ರತಿಭಟನೆಗೆ ತೆರಳುತ್ತಿದ್ದ ಬಸ್ ಅಪಘಾತ – 17 ಮಂದಿಗೆ ಗಾಯ

  • ಪತ್ನಿಯನ್ನು ಕೊಂದು ರುಂಡ ಹಿಡಿದುಕೊಂಡೇ ಠಾಣೆಗೆ ಬಂದ ಪತಿ!

    ಪತ್ನಿಯನ್ನು ಕೊಂದು ರುಂಡ ಹಿಡಿದುಕೊಂಡೇ ಠಾಣೆಗೆ ಬಂದ ಪತಿ!

    ಭುವನೇಶ್ವರ: ಅಕ್ರಮ ಸಂಬಂಧದ ಶಂಕೆಯ ಮೇಲೆ ಪತ್ನಿಯನ್ನು ಕೊಂದು ಆಕೆಯ ತಲೆಯನ್ನು ಕತ್ತರಿಸಿ, ಅದನ್ನು ಹಿಡಿದುಕೊಂಡೇ ಪತಿ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಆಘಾತಕಾರಿ ಘಟನೆ ಒಡಿಶಾದ (Odisha) ನಯಾಗಢ (Nayagarh) ಜಿಲ್ಲೆಯಲ್ಲಿ ನಡೆದಿದೆ.

    ಬಿಡಪಾಜು ಗ್ರಾಮದ ನಿವಾಸಿ ಅರ್ಜುನ ಬಾಘಾ (35) ಪತ್ನಿ ಧರಿತ್ರಿಯನ್ನು (30) ಅಕ್ರಮ ಸಂಬಂಧ ಹೊಂದಿರುವ ಶಂಕೆಯ ಮೇಲೆ ಹತ್ಯೆ ಮಾಡಿದ್ದಾನೆ. ಆಕೆಯನ್ನು ಕ್ರೂರವಾಗಿ ಕೊಂದ ಬಳಿಕ ಹರಿತವಾದ ಆಯುಧ ಬಳಸಿ ಶಿರಚ್ಛೇದನ (Beheading) ಮಾಡಿದ್ದಾನೆ. ಬಳಿಕ ಪತ್ನಿಯ ರುಂಡವನ್ನು ಹಿಡಿದುಕೊಂಡು ನಡೆದೇ ಪೊಲೀಸ್ ಠಾಣೆಗೆ ಹೋಗಿದ್ದಾನೆ. ವ್ಯಕ್ತಿ ದಾರಿಯುದ್ದಕ್ಕೂ ಪತ್ನಿಯ ತಲೆಯನ್ನು ಝಾಡಿಸಿ ಸ್ಥಳೀಯರನ್ನು ಬೆಚ್ಚಿಬೀಳಿಸಿದ್ದಾನೆ.

    ಪೊಲೀಸ್ ಠಾಣೆಗೆ ಬಂದ ಬಾಘಾ ಪೊಲೀಸರ ಮುಂದೆ ತಾನು ಪತ್ನಿಯನ್ನು ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆ ಕೊಂದಿರುವುದಾಗಿ ತಿಳಿಸಿ ಶರಣಾಗಿದ್ದಾನೆ. ಜೊತೆಗೆ ಪೊಲೀಸ್ ಠಾಣೆ ವರೆಗೂ ಹಿಡಿದುಕೊಂಡೇ ಬಂದಿದ್ದ ಪತ್ನಿಯ ತಲೆಯನ್ನು ತೋರಿಸಿದ್ದಾನೆ. ವ್ಯಕ್ತಿಯ ಅಮಾನವೀಯ ಕೃತ್ಯ ಕಂಡು ಪೊಲೀಸರು ತಬ್ಬಿಬ್ಬಾಗಿದ್ದಾರೆ. ಇದನ್ನೂ ಓದಿ: ಕಾರು, ಟ್ರಕ್ ನಡುವೆ ಅಪಘಾತ – ಮದುವೆಗೆ ಹೊರಟಿದ್ದ ಎಂಟು ಮಂದಿ ಸಜೀವ ದಹನ

    ಪತ್ನಿಯನ್ನು ಕ್ರೂರವಾಗಿ ಕೊಂದ ಆರೋಪಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಬಳಿಕ ಬಾಘಾ ಪತ್ನಿಯ ತಲೆ ಇಲ್ಲದ ಮುಂಡವನ್ನೂ ವಶಪಡಿಸಿಕೊಂಡಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ ಪ್ರಕರಣ – ಇಬ್ಬರು ಶೂಟರ್ ಸೇರಿ ಮೂವರು ಅರೆಸ್ಟ್

  • ಚಿಕನ್ ಸಾರು ಮಾಡಿಲ್ಲವೆಂದು ಪತ್ನಿ ಕೊಲೆಗೈದಿದ್ದ ಪತಿಗೆ 6 ವರ್ಷ ಜೈಲು

    ಚಿಕನ್ ಸಾರು ಮಾಡಿಲ್ಲವೆಂದು ಪತ್ನಿ ಕೊಲೆಗೈದಿದ್ದ ಪತಿಗೆ 6 ವರ್ಷ ಜೈಲು

    ದಾವಣಗೆರೆ: ಚಿಕನ್ ಸಾರು (Chicken) ಮಾಡಿಲ್ಲವೆಂದು ಕ್ಯಾತೆ ತೆಗೆದು ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿದ್ದ ಪತಿಗೆ ಇದೀಗ ನ್ಯಾಯಾಲಯ ಜೈಲು ಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸಿದೆ.

    ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಮಾಗನಹಳ್ಳಿ ಕೆಂಚಪ್ಪ ಶಿಕ್ಷೆಗೊಳಗಾದವ. ಸದ್ಯ ಈತನಿಗೆ ದಾವಣಗೆರೆ (Davanagere) 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 6 ವರ್ಷ ಜೈಲು (Jail) ಶಿಕ್ಷೆ ಹಾಗೂ 10,000 ದಂಡ ವಿಧಿಸಿದೆ.

    ಏನಿದು ಪ್ರಕರಣ..?: 2022ರ ಜೂನ್ 8 ರಂದು ಕೆಂಚಪ್ಪ ಕಂಠಪೂರ್ತಿ ಮದ್ಯ ಸೇವಿಸಿ ಬಂದು ಚಿಕನ್ ಸಾಂಬಾರು ಮಾಡಿಲ್ಲ ಅಂತಾ ಪತ್ನಿ ಶೀಲಾರೊಂದಿಗೆ ಜಗಳವಾಡಿ ಚಾಕುವಿನಿಂದ ಎಡಭುಜಕ್ಕೆ ಚುಚ್ಚಿ ಕೊಲೆ ಮಾಡಿದ್ದ. ಈ ಸಂಬಂಧ ಶೀಲಾ ಅವರ ತಾಯಿ ಉಕ್ಕಡಗಾತ್ರಿ ಗುತ್ಯಮ್ಮ ಅವರು ಹರಿಹರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಆರೋಪಿಯ ತಂದೆ ಅನುಮಾನಾಸ್ಪದ ಸಾವು

    ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ತನಿಖಾಧಿಕಾರಿ ಸಿಪಿಐ ಸತೀಶ್, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೆ.ವಿ.ವಿಜಯಾನಂದ ಅವರು ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರ ವಕೀಲ ಸತೀಶ್ ಕುಮಾರ್ ವಾದ ಮಂಡಿಸಿದ್ದರು.

  • ಲವ್ವರ್ ಮಾತು ಕೇಳಿ ಪತಿ ಮೊಬೈಲ್‍ನಿಂದ ಬೆದರಿಕೆ ಮೆಸೇಜ್ ಕಳಿಸಿ ಸಿಕ್ಕಿಬಿದ್ದ ಪತ್ನಿ!

    ಲವ್ವರ್ ಮಾತು ಕೇಳಿ ಪತಿ ಮೊಬೈಲ್‍ನಿಂದ ಬೆದರಿಕೆ ಮೆಸೇಜ್ ಕಳಿಸಿ ಸಿಕ್ಕಿಬಿದ್ದ ಪತ್ನಿ!

    ಆನೇಕಲ್: ಪತಿ ಹಾಗೂ ಪತ್ನಿ ನಡುವೆ ನಡೆದ ಜಗಳವು ಬೆದರಿಕೆ ಮೆಸೇಜ್ (Message) ಕಳುಹಿಸುವಷ್ಟರ ಮಟ್ಟಕ್ಕೆ ಬೆಳೆದ ಘಟನೆ ಬೆಂಗಳೂರು ಹೊರವಲಯದ ಆನೇಕಲ್‍ನಲ್ಲಿ (Anekal) ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಪ್ರಕರಣದ ಹಿನ್ನೆಲೆ: ಆನೇಕಲ್‍ನ ಮಾರುತಿ ಬಡಾವಣೆಯಲ್ಲಿ ಉತ್ತರ ಕರ್ನಾಟಕ (Uttara Karnataka) ಮೂಲದ ಕಿರಣ್ ಮತ್ತು ವಿದ್ಯಾರಾಣಿ ದಂಪತಿ ವಾಸವಿದ್ದರು. ಈ ನಡುವೆ ವಿದ್ಯಾರಾಣಿಗೆ ಸೋಷಿಯಲ್ ಮೀಡಿಯಾ ಅಪ್ ಮೂಲಕ ರಾಮ್‍ಪ್ರಸಾದ್ ಅನ್ನೋ ವ್ಯಕ್ತಿಯ ಪರಿಚಯವಾಗುತ್ತೆ. ಅಂತೆಯೇ ರಾಮ್‍ಪ್ರಸಾದ್ ಜೊತೆ ವಿದ್ಯಾರಾಣಿ ನಿರಂತರ ಚ್ಯಾಟಿಂಗ್ ಮಾಡುತ್ತಿದ್ದಳು.

    ಈ ವಿಚಾರ ಪತಿ ಕಿರಣ್‍ಗೆ ಗೊತ್ತಾಗಿ ಮೊಬೈಲ್ ಹೊಡೆದು ಹಾಕಿದ್ದ. ಇದನ್ನು ಬೇರೆ ನಂಬರ್ ಮೂಲಕ ರಾಮ್‍ಪ್ರಸಾದ್‍ಗೆ ವಿದ್ಯಾರಾಣಿ ತಿಳಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಪ್ರಿಯಕರ ರಾಮ್ ಪ್ರಸಾದ್, ವಿದ್ಯಾರಾಣಿ ಗಂಡನಿಗೆ ಬುದ್ಧಿ ಕಲಿಸಲು ಪ್ಲಾನ್ ಮಾಡಿದ್ದ. ಅಂತೆಯೇ ನಾನು ಕಳುಹಿಸುವ ಮೆಸೇಜ್‍ನ ಗಂಡನ ನಂಬರ್‍ನಿಂದ ಫಾರ್ವರ್ಡ್ ಮಾಡು ಅಂತ ಸೂಚನೆ ಕೊಟ್ಟಿದ್ದನು.  ಇದನ್ನೂ ಓದಿ: ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರದ ಚೆಕ್ ವಿತರಣೆ

    ಡಿಸೆಂಬರ್ 5ರಂದು ಆರ್‍ಡಿಎಕ್ಸ್ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕುವ ಮೆಸೇಜ್ ಅನ್ನು ಕಿರಣ್ ನಂಬರ್‍ನಿಂದ ತನಿಖಾ ಸಂಸ್ಥೆಗಳಿಗೆ ರವಾನಿಸುವಂತೆ ಹೇಳುತ್ತಾನೆ. ಪ್ರಿಯಕರನ ಮಾತನ್ನು ನಂಬಿದ ವಿದ್ಯಾರಾಣಿ ಖುದ್ದು ಪೊಲೀಸ್ ಮತ್ತು ಕೇಂದ್ರ ತನಿಖಾ ಸಂಸ್ಥೆಗೆ ಕಳುಹಿಸಿದ್ದಳು. ಬಳಿಕ ಗಂಡನ ಮೊಬೈಲ್‍ನಿಂದ ಮೆಸೇಜ್ ಡಿಲೀಟ್ ಮಾಡಿದ್ದಳು.

    ಇತ್ತ ಮೆಸೇಜ್ ಬಂದಿದ್ದ ನಂಬರ್ ನ ಮೂಲ ಹುಡುಕಿ ಹೊರಟಿದ್ದ ತನಿಖಾ ಸಂಸ್ಥೆಗಳು, ಮನೆಗೆ ಬಂದು ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಿಗೆ ಬಂದಿದೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

  • ಮಲಗಿದ್ದಾಗ ತಲೆಗೆ ದೊಣ್ಣೆಯಿಂದ ಹೊಡೆದು ಪತ್ನಿ ಕೊಂದ ಪತಿ

    ಮಲಗಿದ್ದಾಗ ತಲೆಗೆ ದೊಣ್ಣೆಯಿಂದ ಹೊಡೆದು ಪತ್ನಿ ಕೊಂದ ಪತಿ

    ಆನೇಕಲ್: ಅಕ್ರಮ ಸಂಬಂಧ (Illicit Relationship) ಶಂಕೆಯ ಮೇಲೆ ಪತಿ ದೊಣ್ಣೆಯಿಂದ ಹೊಡೆದು ಪತ್ನಿಯನ್ನು ಹತ್ಯೆಗೈದ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ತಮ್ಮನಾಯಕನಹಳ್ಳಿಯಲ್ಲಿ ನಡೆದಿದೆ.

    ಲಕ್ಷ್ಮಮ್ಮ (40) ಪತಿಯಿಂದ ಕೊಲೆಯಾದ ಮಹಿಳೆ. ಮಹದೇವಯ್ಯ (45) ಪತ್ನಿಯನ್ನು ಹತ್ಯೆಗೈದ ಪತಿ. ಇವರಿಬ್ಬರಿಗೆ ಆರು ಜನ ಮಕ್ಕಳಿದ್ದರು. ಮಹದೇವಯ್ಯ ಆನೇಕಲ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಲಕ್ಷ್ಮಮ್ಮ ಗಾರೆ ಕೆಲಸ ಮಾಡಿಕೊಂಡಿದ್ದರು. ಗಾರೆ ಕೆಲಸ ಮಾಡುವ ವ್ಯಕ್ತಿಯ ಜೊತೆ ಲಕ್ಷ್ಮಮ್ಮ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಪತಿ ಶಂಕಿಸಿದ್ದು, ಈ ಬಗ್ಗೆ ಹಲವು ಬಾರಿ ಲಕ್ಷ್ಮಮ್ಮಹಾಗೂ ಮಹದೇವಯ್ಯ ನಡುವೆ ಗಲಾಟೆ ನಡೆದಿತ್ತು. ಇದನ್ನೂ ಓದಿ: ಕುಡಿದ ನಶೆಯಲ್ಲಿ ಟ್ರಕ್‌ನ ರೈಲ್ವೆ ಹಳಿಯಲ್ಲಿ ಬಿಟ್ಟ ಚಾಲಕ – ತಪ್ಪಿದ ಭಾರೀ ದುರಂತ

    ಈ ವಿಚಾರ ಇಡೀ ತಮ್ಮನಾಯಕನಹಳ್ಳಿ ಗ್ರಾಮದ ಜನಕ್ಕೆ ತಿಳಿದಿತ್ತು. ಜನರು ಅಕ್ರಮ ಸಂಬಂಧದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ಮನನೊಂದ ಮಹದೇವಯ್ಯ ಪತ್ನಿ ಲಕ್ಷ್ಮಮ್ಮತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಮನೆಯಲ್ಲಿ ಮಲಗಿದ್ದಾಗಲೇ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದು, ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಂಬಳ ನೋಡಿ ವಾಪಸ್ಸಾಗ್ತಿದ್ದ ವೇಳೆ ಭೀಕರ ಅಪಘಾತ- ಇಬ್ಬರು ಸಾವು, ಮೂವರು ಗಂಭೀರ

  • ದೂರು ಕೊಟ್ಟ ಪತ್ನಿಗೆ ಠಾಣೆಯಲ್ಲೇ ಇರಿದ ಪಾಪಿ ಪತಿ!

    ದೂರು ಕೊಟ್ಟ ಪತ್ನಿಗೆ ಠಾಣೆಯಲ್ಲೇ ಇರಿದ ಪಾಪಿ ಪತಿ!

    ಹಾಸನ: ದೂರು ಕೊಟ್ಟ ಪತ್ನಿಗೆ ಪತಿ ಠಾಣೆಯಲ್ಲೇ ಇರಿದ ಘಟನೆಯೊಂದು ಹಾಸನದಲ್ಲಿ (Hassan) ನಡೆದಿದೆ.

    ಗಾಯಾಳು ಪತ್ನಿಯನ್ನು ಶಿಲ್ಪ ಎಂದು ಗುರುತಿಸಲಾಗಿದ್ದು, ಈಕೆಯ ಕೊಲೆಗೆ ಪತಿ ಹರೀಶ್ ಯತ್ನಿಸಿದ್ದಾನೆ. ಈ ಘಟನೆ ಹಾಸನದ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಆರು ವರ್ಷದ ಹಿಂದೆ ಮದುವೆಯಾಗಿದ್ದ ಶಿಲ್ಪಾ- ಹರೀಶ್, ಪರಸ್ಪರ ಅನುಮಾನದಿಂದ ಜಗಳ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅಂತೆಯೇ ಗಂಡನಿಂದ ಕಿರುಕುಳ ಎಂದು ಶಿಲ್ಪಾ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪತಿ ಹರೀಶ್ ನನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾಗಲೇ ಹತ್ಯೆಗೆ ಯತ್ನ ನಡೆದಿದೆ. ಆದರೆ ಪೊಲೀಸರ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದತ ತಪ್ಪಿದೆ. ಚಾಕು ಕಿತ್ತುಕೊಂಡು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ಗಾಯಾಳು ಶಿಲ್ಪಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: 2 ದಿನದಲ್ಲಿ ಮದುವೆಯಾಗಬೇಕಿದ್ದ ಯುವತಿ ಅನುಮಾನಾಸ್ಪದ ಸಾವು

  • ಪ್ರಜ್ಞೆತಪ್ಪಿ ಬಿದ್ದ ಪತ್ನಿಯನ್ನು ನೇಣು ಬಿಗಿದು ಹತ್ಯೆಗೈದ ಪತಿ

    ಪ್ರಜ್ಞೆತಪ್ಪಿ ಬಿದ್ದ ಪತ್ನಿಯನ್ನು ನೇಣು ಬಿಗಿದು ಹತ್ಯೆಗೈದ ಪತಿ

    ರಾಯಚೂರು: ಪ್ರಜ್ಞೆ ತಪ್ಪಿ ಬಿದ್ದ ಪತ್ನಿಯನ್ನು (Wife) ಪತಿ (Husband) ನೇಣುಬಿಗಿದು ಕೊಲೆ (Murder) ಮಾಡಿರುವ ಘಟನೆ ರಾಯಚೂರಿನ (Raichur) ಸಿಂಧನೂರು (Sindhanur) ನಗರದ ಪಟೇಲವಾಡಿಯಲ್ಲಿ ನಡೆದಿದೆ.

    ಭುವನೇಶ್ವರಿ (31) ಕೊಲೆಯಾದ ಮಹಿಳೆ. ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿ ಪತಿ ನಾಗರಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 14 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿ ಆರಂಭದಲ್ಲಿ ಚನ್ನಾಗಿಯೇ ಇದ್ದರು. ಆದರೆ ಇತ್ತೀಚೆಗೆ ಆರೋಪಿ ಪತಿ ನಾಗರಾಜ್ ಪ್ರತಿನಿತ್ಯ ಮದ್ಯಸೇವಿಸಿ ಬಂದು ಜಗಳ ಮಾಡುತ್ತಿದ್ದ. ಇದನ್ನೂ ಓದಿ: ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ-ಮಗಳು ಬಲಿ

    ಅದೇ ರೀತಿ ಗಲಾಟೆ ವೇಳೆ ಪತ್ನಿ ಮೇಲೆ ನಾಗರಾಜ್ ಕೈ ಮಾಡಿದ್ದಾನೆ. ಈ ವೇಳೆ ಪತ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಕೊರಳಿಗೆ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತಳ ಪೋಷಕರು ದೂರು ನೀಡಿದ್ದಾರೆ. ಈ ಕುರಿತು ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಾಂಬಾರ್ ಪಾತ್ರೆಗೆ ಬಿದ್ದು 2ನೇ ಕ್ಲಾಸ್ ವಿದ್ಯಾರ್ಥಿನಿ ದಾರುಣ ಸಾವು

  • ಫ್ಯಾಶನ್ ಬಳೆ ತೊಟ್ಟಿದ್ದಕ್ಕೆ ಪತ್ನಿಗೆ ಬೆಲ್ಟ್‌ನಲ್ಲಿ ಥಳಿಸಿದ ಪತಿ!

    ಫ್ಯಾಶನ್ ಬಳೆ ತೊಟ್ಟಿದ್ದಕ್ಕೆ ಪತ್ನಿಗೆ ಬೆಲ್ಟ್‌ನಲ್ಲಿ ಥಳಿಸಿದ ಪತಿ!

    ಥಾಣೆ: ಪತ್ನಿಗೆ ಥಳಿಸಿದ ಆರೋಪದ ಮೇಲೆ ಪತಿ ಹಾಗೂ ಆತನ ಇಬ್ಬರು ಸಂಬಂಧಿಕರ ಮೇಲೆ ಪೊಲೀಸರು ಎಫ್‍ಐಆರ್ (FIR) ದಾಖಲಿಸಿದ ಘಟನೆ ನವಿಮುಂಬೈನಲ್ಲಿ (Navi Mumbai) ನಡೆದಿದೆ. 23 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಈ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ದೂರಿನ ಪ್ರಕಾರ, ಫ್ಯಾಶನ್ ಬಳೆಯನ್ನು ತೊಟ್ಟಿದ್ದಕ್ಕೆ ಪತಿ 30 ವರ್ಷದ ಪ್ರದೀಪ್ ಅರ್ಕಾಡೆಯು ಪತ್ನಿಗೆ ಬೆಲ್ಟ್ ನಲ್ಲಿ ಹಿಗ್ಗಾಮುಗ್ಗವಾಗಿ ಥಳಿಸಿದ್ದಾನೆ. ನವೆಂಬರ್ 13 ರಂದು 50 ವರ್ಷದ ಅತ್ತೆ ಮಹಿಳೆಯ ಕೂದಲನ್ನು ಎಳೆದು ಹಲವಾರು ಬಾರಿ ಕಪಾಳಮೋಕ್ಷ ಮಾಡಿದ್ದಾಳೆ. ಪತಿ ಕೂಡ ಬೆಲ್ಟ್ ನಿಂದ ಥಳಿಸಿದ್ದಾನೆ. ಅಲ್ಲದೆ ಥಳಿಸುವ ಮುನ್ನ ಅತ್ತೆ ನೆಲಕ್ಕೆ ತಳ್ಳಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಘಟನೆಯ ನಂತರ ಸಂತ್ರಸ್ತೆ ಪುಣೆಯಲ್ಲಿರುವ ತನ್ನ ಪೋಷಕರ ಮನೆಗೆ ಹೋಗಿ ಅಲ್ಲಿ ದೂರು ದಾಖಲಿಸಿದರು. ನಂತರ ಪ್ರಕರಣವನ್ನು ನವಿ ಮುಂಬೈಗೆ ತನಿಖೆಗಾಗಿ ವರ್ಗಾಯಿಸಲಾಯಿತು ಎಂದು ಪೊಲೀಸರು ಹೇಳಿದರು. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿದ್ದ ಸೇತುವೆ ಉದ್ಘಾಟಿಸಿದ ಆದಿತ್ಯ ಠಾಕ್ರೆ ವಿರುದ್ಧ ದೂರು

    ಘಟನೆ ಸಂಬಂಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 324 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು), 34 (ಸಾಮಾನ್ಯ ಉದ್ದೇಶ), 504 (ಉದ್ದೇಶವನ್ನು ಉಲ್ಲಂಘಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 506 (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಐಬ್ರೋಸ್ ಮಾಡಿಸಿದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ

    ಐಬ್ರೋಸ್ ಮಾಡಿಸಿದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ

    ಲಕ್ನೋ: ತನ್ನ ಇಚ್ಛೆಗೆ ವಿರುದ್ಧವಾಗಿ ಕಣ್ಣಿನ ಹುಬ್ಬುಗಳಿಗೆ ಆಕಾರ (Eyebrows) ನೀಡಿದ್ದಕ್ಕಾಗಿ ಪತಿ ತನ್ನ ಪತ್ನಿಗೆ ತ್ರಿವಳಿ ತಲಾಖ್ (Triple Talaq) ನೀಡಿದ ಘಟನೆ ಉತ್ತರಪ್ರದೇಶದ (Uttar Pradesh) ಕಾನ್ಪುರದಲ್ಲಿ (Kanpur) ನಡೆದಿದೆ.

    ಸೌದಿ ಅರೇಬಿಯಾದಿಂದ (Saudi Arabia) ವಿಡಿಯೋ ಕಾಲ್ ಮಾಡಿ ಪತಿ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ. ಅಕ್ಟೋಬರ್ 4 ರಂದು ಈ ಘಟನೆ ನಡೆದಿದ್ದು, ಪತ್ನಿ ಗುಲ್ಸಾಬ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಅತ್ತೆಯಂದಿರಿಂದ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಮುಸ್ಲಿಂ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ – ಓರ್ವ ಸಾವು, 8 ಮಂದಿ ಗಂಭೀರ

    2022ರ ಜನವರಿಯಲ್ಲಿ ಪ್ರಯಾಗರಾಜ್‌ನ ಮೊಹಮ್ಮದ್ ಸಲೀಂ ಅವರನ್ನು ಗುಲ್ಸಾಬಾ ವಿವಾಹವಾಗಿದ್ದರು. ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಸಲೀಂ, ಗುಲ್ಸಾಬಾ ಅವರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗ ಆಕೆಯ ಹುಬ್ಬುಗಳನ್ನು ಗಮನಿಸಿ ತನ್ನ ಅನುಮತಿ ಪಡೆಯದೇ ಯಾಕೆ ಹುಬ್ಬುಗಳಿಗೆ ಆಕಾರ ನೀಡಿದ್ದೀಯಾ ಎಂದು ಕೇಳಿದ್ದಾನೆ. ನಂತರ ಕೋಪಗೊಂಡ ಆತ ಪತ್ನಿಗೆ ತ್ರಿವಳಿ ತಲಾಖ್ ಅನ್ನು ನೀಡಿ, ಅವಳು ಏನು ಬೇಕಾದರೂ ಮಾಡಲು ಸ್ವತಂತ್ರಳು ಎಂದು ಹೇಳಿದ್ದಾನೆ. ಇದನ್ನೂ ಓದಿ: ಅಮ್ಮನನ್ನು ನಿಂದಿಸ್ತಿದ್ದ ಮಾವನನ್ನೇ ಕೊಂದ ಅಳಿಯ!

    ನಂತರ ಗುಲ್ಸಾಬ ಸಲೀಂ, ಆಕೆಯ ಅತ್ತೆ ಮತ್ತು ಇತರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತಿ ವಿರುದ್ಧ ಕ್ರೌರ್ಯ ಮತ್ತು ವರದಕ್ಷಿಣೆ ಆರೋಪ ಹೊರಿಸಲಾಗಿದೆ. ತ್ರಿವಳಿ ತಲಾಖ್ ಪದ್ಧತಿಯನ್ನು 2019ರಲ್ಲಿ ದೇಶದಲ್ಲಿ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಲಾಯಿತು. ಇದನ್ನೂ ಓದಿ: ಸರ್ಯು ನದಿಯಲ್ಲಿ ದೋಣಿ ಮುಳುಗಿ ಇಬ್ಬರ ದುರ್ಮರಣ, 7 ಮಂದಿ ನಾಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]