Tag: ಪತಿ

  • ‘ಕರಿಮಣಿ ಮಾಲೀಕ ನೀನಲ್ಲ’- ಪತ್ನಿ ರೀಲ್ಸ್‌ನಿಂದ ಬೇಸತ್ತು ಪತಿ ಸೂಸೈಡ್

    ‘ಕರಿಮಣಿ ಮಾಲೀಕ ನೀನಲ್ಲ’- ಪತ್ನಿ ರೀಲ್ಸ್‌ನಿಂದ ಬೇಸತ್ತು ಪತಿ ಸೂಸೈಡ್

    ಚಾಮರಾಜನಗರ: ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್ ರೀಲ್ಸ್ (Trending Reels) ಅಂದ್ರೆ ಅದು ಕರಿಮಣಿ ಮಾಲೀಕ ನೀನಲ್ಲ (Karimani Malika Neenalla). ಈ ರೀಲ್ಸ್ (Wife Reels) ಇದೀಗ ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾಗಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿಜಿ ಪಾಳ್ಯ ಗ್ರಾಮದ ಕುಮಾರ್ (33) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕುಮಾರ್ ಪತ್ನಿ ರೂಪಾ ಗುಂಡಾಲ್ ಜಲಾಶಯಕ್ಕೆ ಹೋಗಿದ್ದ ವೇಳೆ ಸೋದರ ಮಾವ ಗೋವಿಂದ ಹಾಗೂ ಸಹೋದರಿ ದೀಪಾ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದರು. ಇದನ್ನೂ ಓದಿ: ಫ್ಲಾಟ್‌ಗೆ ಕರೆಸಿಕೊಂಡು ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌; ನಾಲ್ವರ ಬಂಧನ

    ಈ ರೀಲ್ಸ್ ಗೂ ಮುನ್ನಾ ಪತಿ ಕುಮಾರ್ ಹಾಗೂ ಪತ್ನಿ ರೂಪಾ ನಡುವೆ ಹಲವು ಬಾರಿ ಕೌಟುಂಬಿಕ ಕಲಹ ನಡೆದಿತ್ತು. ರೀಲ್ಸ್ ಮಾಡದಂತೆ ಹಲವು ಸಲ ಎಚ್ಚರಿಕೆ ಕೂಡ ನೀಡಿದ್ದರು. ಆದರೆ ಇದನ್ನೂ ಲೆಕ್ಕಿಸದೆ ರೂಪಾ ರೀಲ್ಸ್ ಮಾಡಿದ್ದರು. ರೂಪಾ ರೀಲ್ಸ್ ನೋಡಿದ್ದ ಕುಮಾರ್ ಸ್ನೇಹಿತರು ರೇಗಿಸಿದ್ದರು. ಇದರಿಂದ ಮನಸ್ಸಿಗೆ ಕುಮಾರ್ ಬೇಸರಗೊಂಡಿದ್ದರು. ಪತ್ನಿಯ ಬಳಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಕೂಡ ಮಾಡಿಕೊಂಡಿದ್ದರಂತೆ. ಪತ್ನಿ ರೂಪಾ ಕುಮಾರ್ ಮಾತಿಗೆ ಸೊಪ್ಪು ಹಾಕಿಲ್ಲವೆಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಕುಮಾರ್ ಕುಟುಂಬಸ್ಥರು ರೂಪಾ, ಯಶೋದಾ, ಗೋವಿಂದ ಮೂವರ ಮೇಲೂ ದೂರು ಕೊಟ್ಟಿದ್ದಾರೆ. ಮೂವರು ನಮ್ಮ ಅಣ್ಣನ ಸಾವಿಗೆ ಕಾರಣರಾಗಿದ್ದು, ಪ್ರಕರಣ ದಾಖಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹಿಂದೆಯೂ ಕೂಡ ರೂಪಾ ಹಾಗೂ ಕುಮಾರ್ ನಡುವೆ ಕಲಹ ನಡೆದಿತ್ತು. ಆ ವೇಳೆಯೂ ಆತ್ಮಹತ್ಯೆಗೆ ಯತ್ನಿಸಿದ್ದನು. ನಂತರ ಎಲ್ಲಾ ಸೇರಿ ಬಿಡಿಸಿದ್ದೇವು. ಈಗ ಮತ್ತೆ ರೀಲ್ಸ್ ಹಾಗೂ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದು ಮನನೊಂದು ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ದೂರು ಕೊಟ್ಟಿದ್ದಾರೆ.

    ಒಟ್ಟಿನಲ್ಲಿ ರೀಲ್ಸ್ ಹುಚ್ಚಿನಿಂದ ಪತಿಯ ಪ್ರಾಣ ಪಕ್ಷಿ ಹಾರಿಹೋಗಿದೆ.

  • ಪತ್ನಿಯ ಶಿರಚ್ಛೇದಗೈದು ತಲೆಯೊಂದಿಗೆ ರಕ್ತಸಿಕ್ತ ಬಟ್ಟೆಯಲ್ಲೇ ತಿರುಗಾಡಿದ!

    ಪತ್ನಿಯ ಶಿರಚ್ಛೇದಗೈದು ತಲೆಯೊಂದಿಗೆ ರಕ್ತಸಿಕ್ತ ಬಟ್ಟೆಯಲ್ಲೇ ತಿರುಗಾಡಿದ!

    ಕೋಲ್ಕತ್ತಾ: ವ್ಯಕ್ತಿಯೊಬ್ಬ ಪತ್ನಿಯ ಶಿರಚ್ಛೇದ ಮಾಡಿ ತಲೆಯೊಂದಿಗೆ ಊರು ತುಂಬಾ ಓಡಾಡಿದ ಘಟನೆಯೊಂದು ಪಶ್ಚಿಮ ಬಂಗಾಳದ (West Bengal) ಪೂರ್ವ ಮಿಡ್ನಾಪುರದಲ್ಲಿ ನಡೆದಿದೆ.

    ವ್ಯಕ್ತಿಯನ್ನು ಗೌತಮ್ ಗುಚ್ಚೈತ್ (40) ಎಂದು ಗುರುತಿಸಲಾಗಿದೆ. ಗೌತಮ್‌ ತನ್ನ ಪತ್ನಿಯನ್ನು ಕೊಲೆ ಮಾಡಿದ ಬಳಿಕ ರಸ್ತಸಿಕ್ತ ಧಿರಿಸಿನಲ್ಲೇ ಚಿಸ್ತಿಪುರ ಬಸ್ ನಿಲ್ದಾಣದ ಬಳಿ ತಿರುಗಾಡಿದ್ದಾನೆ. ಜೊತೆಗೆ ಆತನ ಕೈಯಲ್ಲಿ ಪತ್ನಿ ತಲೆ ಇರುವುದನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ನಂತರ ಆತನನ್ನು ಮನೆಗೆ ಕರೆದುಕೊಂಡು ಹೋಗಿ ಪತ್ನಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ಸ್ಟೈಲ್‍ನಲ್ಲಿ ಗಾಂಜಾ ಸಾಗಾಟ ಮಾಡ್ತಿದ್ದ ಗ್ಯಾಂಗ್ – 10 ಕಿ.ಮೀ ಚೇಸ್ ಮಾಡಿ ಹಿಡಿದ ಪೊಲೀಸರು

    ಪೊಲೀಸರ ಪ್ರಕಾರ, ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಚೂಪಾದ ಆಯುಧದಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

  • ಬ್ಯಾಂಕ್ ಅಕೌಂಟ್, ಇನ್ಶುರೆನ್ಸ್‌ಗೆ ನಾಮಿನಿ ಮಾಡದ್ದಕ್ಕೆ ಮ್ಯಾಜಿಸ್ಟ್ರೇಟ್ ಪತ್ನಿಯನ್ನೇ ಕೊಂದ ಪತಿ!

    ಬ್ಯಾಂಕ್ ಅಕೌಂಟ್, ಇನ್ಶುರೆನ್ಸ್‌ಗೆ ನಾಮಿನಿ ಮಾಡದ್ದಕ್ಕೆ ಮ್ಯಾಜಿಸ್ಟ್ರೇಟ್ ಪತ್ನಿಯನ್ನೇ ಕೊಂದ ಪತಿ!

    – ಕೊಲೆ ರಹಸ್ಯ ಬಯಲಿಗೆಳೆದ ತಲೆದಿಂಬು, ಬೆಡ್‍ಶೀಟ್, ವಾಷಿಂಗ್‍ಮೆಷಿನ್

    ಭೋಪಾಲ್: ವ್ಯಕ್ತಿಯೊಬ್ಬ ತನ್ನ ಪತ್ನಿ ಬ್ಯಾಂಕ್ ಖಾತೆ ಹಾಗೂ ಇನ್ಶುರೆನ್ಸ್‌ಗೆ ತನ್ನನ್ನು ನಾಮಿನಿ ಮಾಡದ ಕಾರಣಕ್ಕೆ ಆಕೆಯನ್ನು ಹತ್ಯೆಗೈದ ಘಟನೆ ಮಧ್ಯಪ್ರದೇಶದ (Madhya Pradesh) ಶಹಪುರದಲ್ಲಿ ನಡೆದಿದೆ.

    ಡಿಂಡೋರಿ ಜಿಲ್ಲೆಯ ಶಹಪುರದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (Sub Divisional Magistrate) ನಿಶಾ ನಾಪಿತ್ ಹತ್ಯೆಯಾದ ಮಹಿಳೆಯಾಗಿದ್ದಾರೆ. ಆಕೆಯ ಪತಿ ಮನೀಶ್ ಶರ್ಮಾ ಹತ್ಯೆಗೈದ ಆರೋಪಿಯಾಗಿದ್ದಾನೆ. ನಿರುದ್ಯೋಗಿಯಾಗಿದ್ದ ಮನೀಶ್ ಶರ್ಮಾ, ತನ್ನ ಪತ್ನಿಯ ಬಳಿ ಆಗಾಗ ಜಗಳ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಬ್ಯಾಂಕ್ ಖಾತೆ ಹಾಗೂ ಇನ್ಶುರೆನ್ಸ್‌ಗೆ ನಾಮಿನಿ ಮಾಡುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಟಯರ್ ಬ್ಲಾಸ್ಟ್- ಆಟೋಗೆ ಇನ್ನೋವಾ ಗುದ್ದಿದ ರಭಸಕ್ಕೆ ಕಾಂಪೌಂಡ್ ಪುಡಿಪುಡಿ

    ಜ.28 ರಂದು ಸಹ ಇದೇ ವಿಚಾರಕ್ಕೆ ನಿಶಾ ನಾಪಿತ್ ಹಾಗೂ ಮನೀಶ್ ಶರ್ಮಾ ನಡುವೆ ಗಲಾಟೆಯಾಗಿದೆ. ಈ ವೇಳೆ ಮಹಿಳೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಮಹಿಳೆ ಸಾವನ್ನಪ್ಪಿದ್ದಾರೆ. ಬಳಿಕ ರಕ್ತದ ಕಲೆಯಾಗಿದ್ದ ತಲೆದಿಂಬು ಹಾಗೂ ಬೆಡ್‍ಶೀಟ್‍ನ್ನು ವಾಷಿಂಗ್ ಮಷಿನ್‍ನಲ್ಲಿ ಹಾಕಿ ಮುಚ್ಚಿಟ್ಟಿದ್ದ ಎಂದು ತಿಳಿದು ಬಂದಿದೆ.

    ನಿಶಾ ಅವರ ಸಹೋದರಿ ನಿಲಿಮಾ ನಾಪಿತ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಿಶಾ ಮಲಗುವ ಕೋಣೆಯೊಳಗೆ ಹೋಗದಂತೆ ಮನೀಶ್ ತಡೆದಿದ್ದ. ಅಲ್ಲದೇ ನಿಶಾ ಅವರ ಬಳಿ ಹಣಕ್ಕಾಗಿ ಮನೀಶ್ ಪೀಡಿಸುತ್ತಿದ್ದ ಎಂದು ಆರೋಪಿಸಿದ್ದಾರೆ.

    ಪತ್ನಿಯನ್ನು ಹತ್ಯೆಗೈದ ಬಳಿಕ ಮನೀಶ್, ನಿಶಾ ಅವರಿಗೆ ಮೂತ್ರ ಪಿಂಡದ ಸಮಸ್ಯೆ ಇತ್ತು, ರಾತ್ರಿ ಔಷಧಿ ಸೇವಿಸಿ ಮಲಗಿದ್ದರು ಎಂದು ಕತೆ ಕಟ್ಟಿದ್ದ. ಬಳಿಕ ಬೆಳಗ್ಗೆ ಆಸ್ಪತ್ರೆಗೆ ಸಾಗಿಸಿದ್ದ ವೇಳೆ ವೈದ್ಯರು ಮೃತಪಟ್ಟಿದ್ದಾಗಿ ಘೋಷಿಸಿದ್ದರು. ಅಲ್ಲದೇ ಮೂಗು ಮತ್ತು ಬಾಯಿಯಲ್ಲಿ ರಕ್ತವನ್ನು ಗಮನಿಸಿದ್ದ ವೈದ್ಯರು, ಮರಣೋತ್ತರ ಪರೀಕ್ಷೆ ಬಳಿಕ ತಲೆಗೆ ಪೆಟ್ಟು ಬಿದ್ದಿರುವುದನ್ನು ಖಚಿತ ಪಡಿಸಿದ್ದರು. ಬಳಿಕ ಪೊಲೀಸರು (Police) ಮನೀಶ್ ಶರ್ಮಾನನ್ನು ವಿಚಾರಣೆಗೊಳಪಡಿಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.

    ಮ್ಯಾಟ್ರಿಮೋನಿಯಲ್ ಸೈಟ್‍ನಲ್ಲಿ ಭೇಟಿಯಾಗಿದ್ದ ನಿಶಾ ನಾಪಿತ್ ಮತ್ತು ಮನೀಶ್ ಶರ್ಮಾ ಅವರು 2020 ರಲ್ಲಿ ವಿವಾಹವಾಗಿದ್ದರು. ನಿಶಾ ಅವರ ಕುಟುಂಬ ಈ ಮದುವೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ನಿಲಿಮಾ ನಾಪಿತ್ ತಿಳಿಸಿದ್ದಾರೆ. ಇದನ್ನೂ ಓದಿ: ʻJEE ಮಾಡೋಕಾಗಲ್ಲ, ನಾನು ಕೆಟ್ಟ ಮಗಳು, ಇದೇ ನನ್ನ ಕೊನೇ ಆಯ್ಕೆʼ – ಡೆತ್‌ನೋಟ್‌ ಬರೆದಿಟ್ಟು ಯುವತಿ ಆತ್ಮಹತ್ಯೆ!

  • ಸೆಕ್ಸ್‌ಗೆ ಒತ್ತಾಯಿಸಿದ ಪತಿಯ ಮರ್ಮಾಂಗವನ್ನೇ ಕಚ್ಚಿ ಗಾಯಗೊಳಿಸಿದಳು!

    ಸೆಕ್ಸ್‌ಗೆ ಒತ್ತಾಯಿಸಿದ ಪತಿಯ ಮರ್ಮಾಂಗವನ್ನೇ ಕಚ್ಚಿ ಗಾಯಗೊಳಿಸಿದಳು!

    ಲಕ್ನೋ: ಸೆಕ್ಸ್‌ಗೆ ಸಹಕರಿಸುವಂತೆ ಒತ್ತಾಯಿಸಿದ ಪತಿಯ ಮರ್ಮಾಂಗವನ್ನೇ ಪತ್ನಿ (Husband- Wife Fight) ಕಚ್ಚಿ ಗಾಯಗೊಳಿಸಿದ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದಲ್ಲಿ (Uttarpradesh) ನಡೆದಿದೆ.

    ಹಮೀರ್‌ಪುರ ಜಿಲ್ಲೆಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಮು ನಿಶಾದ್ (34) ಗಾಯಗೊಂಡ ಪತಿ. ಪತ್ನಿಯ ಕೃತ್ಯದಿಂದ ನಿಶಾದ್‌ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ʻJEE ಮಾಡೋಕಾಗಲ್ಲ, ನಾನು ಕೆಟ್ಟ ಮಗಳು, ಇದೇ ನನ್ನ ಕೊನೇ ಆಯ್ಕೆʼ – ಡೆತ್‌ನೋಟ್‌ ಬರೆದಿಟ್ಟು ಯುವತಿ ಆತ್ಮಹತ್ಯೆ!

    ನಡೆದಿದ್ದೇನು..?: ಜನವರಿ 28ರಂದು ಸೆಕ್ಸ್‌ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದಗಳು ನಡೆದಿವೆ. ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ರೊಚ್ಚಿಗೆದ್ದ ಪತ್ನಿ, ಪತಿಯ ಖಾಸಗಿ ಅಂಗವನ್ನೇ ಕಚ್ಚಿದ್ದಾಳೆ. ಬಳಿಕ ತಪ್ಪಿನ ಅರಿವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಇತ್ತ ಪತ್ನಿಯ ಕೃತ್ಯದಿಂದ ನಿಶಾದ್‌ ಗಂಭೀರ ಗಾಯಗೊಂಡರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

    ಸೆಕ್ಸ್‌ ಮಾಡುವಂತೆ ಒತ್ತಾಯಿಸಿದ್ದರಿಂದ ಬೇಸರಗೊಂಡಿರುವುದಾಗಿ ಪತ್ನಿ ಆರೋಪಿಸಿದ್ದಾರೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೊತೆಗೆ ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಅನೂಪ್ ಸಿಂಗ್ ತಿಳಿಸಿದ್ದಾರೆ.

  • ಅತ್ತಿಗೆ ಮೇಲೆ ಗ್ಯಾಂಗ್‌ರೇಪ್ ಮಾಡಿ ಕೊಲೆಗೈದ ಐವರು ಮೈದುನರು – ದುಬೈನಲ್ಲಿರೋ ಮಹಿಳೆಯ ಪತಿಯೇ ಮಾಸ್ಟರ್‌ಮೈಂಡ್

    ಅತ್ತಿಗೆ ಮೇಲೆ ಗ್ಯಾಂಗ್‌ರೇಪ್ ಮಾಡಿ ಕೊಲೆಗೈದ ಐವರು ಮೈದುನರು – ದುಬೈನಲ್ಲಿರೋ ಮಹಿಳೆಯ ಪತಿಯೇ ಮಾಸ್ಟರ್‌ಮೈಂಡ್

      ದುಬೈನಲ್ಲಿರೋ ಮೃತ ಮಹಿಳೆ ಪತಿಗಾಗಿ ಪೊಲೀಸರ ಶೋಧ

    ಲಕ್ನೋ: ತನ್ನ 5 ಜನ ಸಹೋದರರಿಗೆ ಹಣ ನೀಡಿ ಪತ್ನಿಯನ್ನೇ (Wife)  ಪತಿ (Husband)  ಕೊಲೆ ಮಾಡಿಸಿರುವ ಘಟನೆ ಫತೇಪುರ್‌ನಲ್ಲಿ  (Fatehpur)  ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ (Uttar Pradesh) ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿಗಳನ್ನು ರೋಹಿತ್ ಲೋಧಿ, ರಾಮಚಂದ್ರ ಆಲಿಯಾಸ್ ಪುಟ್ಟು, ಶಿವಂ ಅಲಿಯಾಸ್ ಪಂಚಮ್, ಸೋನು ಲೋಧಿ ಎಂದು ಗುರುತಿಸಲಾಗಿದೆ. ಐದನೇ ಆರೋಪಿಯಾದ ನೊಂಕು ಲೋಧಿ ಪರಾರಿಯಾಗಿದ್ದಾನೆ. ಸಂತ್ರಸ್ತೆಯ ಗಂಡ ದುಬೈನಲ್ಲಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರೀಲ್ಸ್ ಮಾಡ್ತಾ ಸೋಶಿಯಲ್ ಮೀಡಿಯಾದಲ್ಲಿ ಫುಲ್‌ ಆಕ್ಟೀವ್ ಆಗಿದ್ದ ಶಿಕ್ಷಕಿ – ಸಾವಿನ ಸುತ್ತ ಅನುಮಾನಗಳ ಹುತ್ತ!

    ಏನಿದು ಪ್ರಕರಣ?
    ತವರು ಮನೆಗೆ ಹೋಗಿದ್ದ ಆತ್ತಿಗೆಯನ್ನು ಜಾತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಆಕೆಯನ್ನು ನಂಬಿಸಿ ಮೈದುನರು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆಕೆಯ ಮೇಲೆ ಐದು ಜನ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತರ ಆಕೆಯ ಗುರುತನ್ನು ಮರೆಮಾಚಲು ಮುಖಕ್ಕೆ ಇಟ್ಟಿಗೆಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ.  ಇದನ್ನೂ ಓದಿ : ವೇದಿಕೆಯಲ್ಲೇ ಕುಸಿದು ಬಿದ್ದು ಹನುಮ ವೇಷಧಾರಿ ನಿಧನ

    ಹಲ್ಲೆ ಮಾಡಿದ ನಂತರ ಸಂತ್ರಸ್ತೆಯ ಮೃತದೇಹವನ್ನು ಬೆತ್ತಲೆಯಾಗಿಯೇ ಫತೇಪುರ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರ ನೀರಿನ ಟ್ಯಾಂಕ್‌ನಲ್ಲಿ ಬಿಸಾಡಿ ಹೋಗಿದ್ದರು. ಗ್ರಾಮಸ್ಥರು ಮೃತದೇಹವನ್ನು ಕಂಡು ಈ ಕುರಿತು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಂತ್ರಸ್ತೆಯ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಜೊತೆಗೆ ಸ್ಥಳದಲ್ಲಿ ಆರೋಪಿಗಳು ಕುಡಿದು ಬಿಸಾಡಿದ ಮದ್ಯದ ಬಾಟಲಿ ಮತ್ತು ತಿನಿಸುಗಳು ದೊರಕಿವೆ. ಇದನ್ನೂ ಓದಿ: ರನ್‌ವೇನಲ್ಲಿ ಸ್ಕಿಡ್‌ ಆದ ಮ್ಯಾನ್ಮಾರ್ ಮಿಲಿಟರಿ ವಿಮಾನ- 6 ಮಂದಿಗೆ ಗಾಯ

    ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಕೊಲೆ ಬಗ್ಗೆ ಬಾಯಿಬಿಟ್ಟಿದ್ದು, ಸಂತ್ರಸ್ತೆಯ ಪತಿಯೇ ಇದಕ್ಕೆ ಸಾಥ್ ನೀಡಿರುವುದಾಗಿ ಬೆಳಕಿಗೆ ಬಂದಿದೆ. ತವರು ಮನೆಗೆ ಹೋಗಿದ್ದ ಪತ್ನಿಯನ್ನು ಕೊಲೆ ಮಾಡಿದರೆ ಹಣ ನೀಡುವುದಾಗಿ ಸಂತ್ರಸ್ತೆಯ ಪತಿ, ಅವನ ಐದು ಮಂದಿ ಸಹೋದರಿಗೆ ಹಣದ ಆಸೆ ತೋರಿಸಿದ್ದ. ಹಣದ ಮೋಹಕ್ಕೆ ಒಳಗಾದ ಸಹೋದರರು ಅತ್ತಿಗೆಯನ್ನೇ ಕೊಲೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತಿ ದುಬೈನಲ್ಲಿದ್ದಾನೆ. ಐದನೇ ಆರೋಪಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ʻಜೈ ಶ್ರೀರಾಮ್ʼ ಘೋಷಣೆ ಕೂಗುತ್ತಿದ್ದ ಯುವಕರ ಗುಂಪಿನ ಮೇಲೆ ಕಲ್ಲು ತೂರಾಟ

    ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದು, ತಲೆಗೆ ಪೆಟ್ಟು ಬಿದ್ದ ಕಾರಣ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢೀಕರಿಸಿದ್ದಾರೆ. ಇದನ್ನೂ ಓದಿ: 11 ದಿನಗಳ ಕಾಲ ಮೋದಿ ಉಪವಾಸ ಮಾಡಿದ್ದೇ ಅನುಮಾನ: ವೀರಪ್ಪ ಮೊಯ್ಲಿ

  • ನಾಪತ್ತೆಯಾಗಿರೋ ಗರ್ಭಿಣಿ ಪತ್ನಿಗಾಗಿ ಕಣ್ಣೀರಾಕುತ್ತಾ ಹುಡುಕಾಡ್ತಿದ್ದಾರೆ ಪತಿ!

    ನಾಪತ್ತೆಯಾಗಿರೋ ಗರ್ಭಿಣಿ ಪತ್ನಿಗಾಗಿ ಕಣ್ಣೀರಾಕುತ್ತಾ ಹುಡುಕಾಡ್ತಿದ್ದಾರೆ ಪತಿ!

    ಆನೇಕಲ್/ಬೆಂಗಳೂರು: ಗರ್ಭಿಣಿಯೊಬ್ಬರು ತನ್ನ 5 ವರ್ಷದ ಪುಟ್ಟ ಮಗುವನ್ನು ಬಿಟ್ಟು ನಾಪತ್ತೆಯಾಗಿದ್ದು, ಇದೀಗ ಆಕೆಗಾಗಿ ಪತಿ (Husband Searching his Wife) ಹುಡುಕಾಡುತ್ತಿರುವ ಪ್ರರಣವೊಂದು ಬೆಳಕಿಗೆ ಬಂದಿದೆ.

    ಶಾಲಿನಿ ನಾಪತ್ತೆಯಾಗಿರುವ 4 ತಿಂಗಳ ಗರ್ಭಿಣಿ. ಶಾಲಿನಿ ಹಾಗೂ ಸ್ವಾಮಿ ದಂಪತಿ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮತ್ ಲೇ ಔಟ್ ನಲ್ಲಿ ವಾಸವಾಗಿದ್ದಾರೆ. ಸದ್ಯ ಈಕೆಗಾಗಿ ಪತಿ ಮೆಜೆಸ್ಟಿಕ್ ಹಾಗೂ ಬಿಎಂಟಿಸಿ (BMTC) ಬಸ್ ಸ್ಟಾಂಡ್‍ನಲ್ಲಿ ಕಣ್ಣೀರಾಕುತ್ತಾ ಹುಡುಕಾಡುತ್ತಿದ್ದಾರೆ.

    ಶಾಲಿನಿ ಎಂದಿನಂತೆ ಬೆಳಗ್ಗೆ 6 ಗಂಟೆಗೆ ಹಾಲು ತರಲು 30 ರೂ. ಹಣ ತೆಗೆದುಕೊಂಡು ಹೋಗಿದ್ದರು. ಆದರೆ 8 ಗಂಟೆಯಾದ್ರೂ ಕೂಡ ಪತ್ನಿ ಶಾಲಿನಿ ಮನೆಗೆ ಬಾರದೇ ಇದ್ದಾಗ ಪತಿ ಗಾಬರಿಯಾದರು. ಬಳಿಕ ಯಾಕೆ ಪತ್ನಿ ಇನ್ನೂ ಮನೆಗೆ ಬಂದಿಲ್ಲ ಎಂದು ಹುಡುಕಾಟ ನಡೆಸಲು ಆರಂಭಿಸಿದರು. ಈ ವೇಳೆ ಪತ್ನಿ ಬಿಎಂಟಿಸಿ ಬಸ್ ಹತ್ತಿ ತೆರಳುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯ – ಎಂಇಎಸ್‌ಗೆ ಬೆಳಗಾವಿ ಪಾಲಿಕೆ ಆಯುಕ್ತರ ಶಾಕ್!

    ಬೆಳಗ್ಗೆಯಿಂದ ಮಧ್ಯರಾತ್ರಿಯಾದ್ರೂ ಪತಿ ಹುಡುಕಾಟ ನಡೆಸಿದ್ದಾರೆ. ಕೆಆರ್ ಮಾರ್ಕೆಟ್, ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಕುಟುಂಬಸ್ಥರು ಕೂಡ ಹುಡುಕಾಡಿದ್ದಾರೆ. ಅಲ್ಲದೆ ಬಸ್ ಸ್ಟಾಂಡ್ ನಲ್ಲಿ ಮಲಗಿರುವವರ ಬಳಿಯೂ ಹೋಗಿ ವಿಚಾರಿಸಿದ್ದಾರೆ. ಆದರೆ ಆಕೆ ಎಲ್ಲಿಯೂ ಕಾಣಿಸುತ್ತಿಲ್ಲ. ಹೀಗಾಗಿ 5 ವರ್ಷದ ಮಗನನ್ನ ಬಿಟ್ಟು ಶಾಲಿನಿ ತೆರಳಿರುವುದಾದ್ರೂ ಎಲ್ಲಿಗೆ ಎನ್ನುವ ಪ್ರಶ್ನೆ ಎದ್ದಿದೆ.

    ಪತ್ನಿಯ ನಾಪತ್ತೆ ಸಂಬಂಧ ಪತಿ ಸ್ವಾಮಿ ತಾವರೆಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  • ಹೆಲ್ಮೆಟ್‌ನಿಂದ ಹೊಡೆದು 3 ತಿಂಗಳ ಗರ್ಭಿಣಿಯನ್ನು ಕೊಂದು ಅಪಘಾತವೆಂದ ಪತಿ!

    ಹೆಲ್ಮೆಟ್‌ನಿಂದ ಹೊಡೆದು 3 ತಿಂಗಳ ಗರ್ಭಿಣಿಯನ್ನು ಕೊಂದು ಅಪಘಾತವೆಂದ ಪತಿ!

    ದಾವಣಗೆರೆ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹೆಲ್ಮೆಟ್‌ನಿಂದ ಹೊಡೆದು ಕೊಂದು ಬಳಿಕ ಅಪಘಾತದ ನಾಟಕವಾಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಮೃತಳನ್ನು ಯಶೋದಾ ಎಂದು ಗುರುತಿಸಲಾಗಿದ್ದು, ಈಕೆ 3 ತಿಂಗಳ ಗರ್ಭಿಯಾಗಿದ್ದರು. ಇದೇ ತಿಂಗಳ 4 ರಂದು ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ ತಾಲೂಕಿಗ ನುಗ್ಗಿಹಳ್ಳಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಜೀವನದಲ್ಲಿ ಭರವಸೆಯಿಲ್ಲ, ಜೈಲಿನಲ್ಲೇ ಸಾಯೋದು ಉತ್ತಮ: ಜೆಟ್‌ ಏರ್‌ವೇಸ್‌ ಸಂಸ್ಥಾಪಕ ಗೋಯಲ್‌

    ಚನ್ನಗಿರಿ ತಾಲೂಕಿನ ಸಾರಥಿ ಹೊಸೂರು ಗ್ರಾಮದ ನಿವಾಸಿ ಯಶೋದಾ, ನರಗನಹಳ್ಳಿ ಗ್ರಾಮದ ತಿಪ್ಪೇಶ್ (28) ಎಂಬಾತನನ್ನ ಪ್ರೀತಿಸಿ ಆರು ತಿಂಗಳ ಹಿಂದೆ ಮದುವೆ ಆಗಿದ್ದರು. ಅಂತೆಯೇ ಜನವರಿ 4 ರಂದು ಪತಿ ಜೊತೆ ಯಶೋದಾ ತವರಿಗೆ ಬಂದಿದ್ದರು. ತವರು ಮನೆಯಿಂದ ವಾಪಸ್ ಹೋಗುವಾಗ ಬೈಕ್ ಅಪಘಾತವಾಗಿ ಯಶೋದಾ ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರಿಗೆ ಪತಿ ತಿಪ್ಪೇಶ್ ಮಾಹಿತಿ‌ ನೀಡಿದ್ದ.

    ಇತ್ತ ಯಶೋದಾಳ ಶವ ನೋಡಿದ ತಂದೆ ಚಂದ್ರಪ್ಪಗೆ ಕೊಲೆ ಶಂಕೆ ವ್ಯಕ್ತವಾಗಿದೆ. ತನ್ನ ಪುತ್ರಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿಲ್ಲ ಕೊಲೆಯಾಗಿದೆ ಎಂದು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬಹಿರಂಗವಾಗಿದೆ. ತಾನೇ ಹೊಡೆದು ಸಾಯಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

    ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯಿಂದಲೇ ಪತಿಯ ಕೊಲೆ

    ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯಿಂದಲೇ ಪತಿಯ ಕೊಲೆ

    – ಪತ್ನಿ ಜೊತೆ ಪ್ರಿಯಕರ ಅರೆಸ್ಟ್‌

    ಬೀದರ್ : ಅನೈತಿಕ ಸಂಬಂಧವನ್ನು (Illicit affairs) ಪ್ರಶ್ನೆ ಮಾಡಿದ್ದಕ್ಕೆ ಪತಿಯನ್ನೇ (Husband) ಸಂಚು ರೂಪಿಸಿ ಪತ್ನಿ (Wife) ಹಾಗೂ ಪ್ರಿಯಕರ ಸೇರಿ ‌ಕೊಲೆ ಮಾಡಿದ ಪ್ರಕರಣವನ್ನು ಕೊನೆಗೂ ಬೀದರ್ ಪೊಲೀಸರು (Bidar Police) ಬೇಧಿಸಿದ್ದಾರೆ.

    ಅಮಿತ್‌ ಕೊಲೆಯಾಗಿದ್ದು, ಪೊಲೀಸರು ಈಗ ಪತ್ನಿ ಚೈತ್ರಾ, ಆಕೆಯ ಗೆಳೆಯ ರವಿ ಪಾಟೀಲ್ ಅಲ್ಲದೇ ಕೃತ್ಯಕ್ಕೆ ಸಹಕಾರ ನೀಡಿದ ಸಿಕ್ಕಿಂದರ್ ಶಾಹಾ, ವೆಂಕಟ್ ಗಿರಿಮಾತೆ ಮತ್ತು ಆಕಾಶ್ ಅವರನ್ನು ಬಂಧಿಸಿದ್ದಾರೆ.
    ಇದನ್ನೂ ಓದಿ: ನಾನು ನ್ಯಾಯದ ದಾರಿಯಲ್ಲಿದ್ದೇನೆ, ಸತ್ಯಕ್ಕೆ ಜಯ ಸಿಕ್ಕಿದೆ: ವಿಕ್ರಂ ಸಿಂಹ

    ಚೈತ್ರ ಮತ್ತು ಗೆಳೆಯ ಅಮಿತ್‌ ಪಾಟೀಲ್‌
    ಚೈತ್ರಾ ಮತ್ತು ಗೆಳೆಯ ಅಮಿತ್‌ ಪಾಟೀಲ್‌

    ಏನಿದು ಪ್ರಕರಣ?
    ನವೆಂಬರ್‌ 11 ರಂದು ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದ ಬಳಿ ಅಮಿತ್‌ ಶವ ಪತ್ತೆಯಾಗಿತ್ತು. ಇದನ್ನು ಅಪಘಾತ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಮೃತದೇಹ ನೋಡಿದಾಗ ಪೊಲೀಸರಿಗೆ ಅನುಮಾನ ವ್ಯಕ್ತವಾಗಿತ್ತು.

    ತನಿಖೆಗೆ ಇಳಿದ ಪೊಲೀಸರಿಗೆ ಶವ ಪತ್ತೆಯಾದ ಜಗದಲ್ಲಿ ಸಕ್ರಿಯವಾಗಿದ್ದ ಮೊಬೈಲ್‌ ನಂಬರ್‌ ಪತ್ತೆಹಚ್ಚಿದ್ದಾರೆ. ಬಳಿಕ ಸಿಕ್ಕಿಂದರ್ ಶಾಹಾ, ವೆಂಕಟ್ ಗಿರಿಮಾತೆ ಮತ್ತು ಆಕಾಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರವಿ ಪಾಟೀಲ್ ಇವರಿಗೆ ಮುಂಗಡವಾಗಿ ಹಣ ನೀಡಿ ಕೃತ್ಯ ನಡೆಸಿ ವಿಚಾರಣೆಯನ್ನು ಬಾಯಿಬಿಟ್ಟಿದ್ದಾರೆ.

    ನಂತರ ರವಿಪಾಟೀಲ್‌ ವಿಚಾರಣೆ ವೇಳೆ ಚೈತ್ರಾ ಪಾತ್ರ ಬಹಿರಂಗವಾಗಿದೆ. ವಿಚಾರಣೆ ವೇಳೆ ನಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಹತ್ಯೆ ಮಾಡಲಾಗಿದೆ ಎಂದು ಚೈತ್ರಾ ತಿಳಿಸಿದ್ದಾಳೆ.

    ಪೊಲೀಸರು ಈಗ ಕೃತ್ಯಕ್ಕೆ ಬಳಸಿದ ರಾಡ್, ಮೊಬೈಲ್‌ ಹಾಗೂ ಕೊಲೆ ಮಾಡಲು ಸಹಚರರಿಗೆ ನೀಡಿದ ಮುಂಗಡ ಹಣವನ್ನು ಜಪ್ತಿ ಮಾಡಿದ್ದಾರೆ.

     

  • ಪತಿಯ ಎದೆಗೆ ಚಾಕುವಿನಿಂದ ಇರಿದು ಹತ್ಯೆಗೈದ  ಪತ್ನಿ

    ಪತಿಯ ಎದೆಗೆ ಚಾಕುವಿನಿಂದ ಇರಿದು ಹತ್ಯೆಗೈದ ಪತ್ನಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪತ್ನಿಯಿಂದಲೇ ಪತಿ ಬರ್ಬರ ಹತ್ಯೆಗೈದ ಪ್ರಕರಣವೊಂದು ನಡೆದಿದೆ.

    ಉಮೇಶ್ ದಾಮಿ (27) ಕೊಲೆಯಾದ ಪತಿಯಾಗಿದ್ದು, ಈತನನ್ನು ಪತ್ನಿ ಮನಿಷಾ ದಾಮಿ ಕೊಲೆ ಮಾಡಿದ್ದಾಳೆ. ಈ ಘಟನೆ ಹುಳಿಮಾವು (Hulimavu) ಸಮೀಪದ ಕಾಲೇಜಿನಲ್ಲಿ ನಡೆದಿದೆ.

    ಈ ದಂಪತಿ ಕಾಲೇಜೊಂದರಲ್ಲಿ ಸೆಕ್ಯುರಿಟಿ ಹಾಗೂ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಘಟನೆ ನಡೆದಂದು ಉಮೇಶ್ ರಾತ್ರಿ ಗೆಳೆಯನೊಂದಿಗೆ ಎಣ್ಣೆ ಪಾರ್ಟಿಗೆ ಹೋಗಿದ್ದ. ಪಾರ್ಟಿ ಮುಗಿಸಿಕೊಂಡು ರಾತ್ರಿ 12 ಗಂಟೆ ಸುಮಾರಿಗೆ ಮನೆಗೆ ವಾಪಸ್ಸಾಗಿದ್ದ. ಆ ವೇಳೆ ಮನಿಷಾ ಫೋನ್ ನಲ್ಲಿ ಮಾತನಾಡುತ್ತಿದ್ದಳು. ಇದರಿಂದ ಕೋಪಗೊಂಡ ಉಮೇಶ್ ಆಕೆಯ ಜೊತೆಗೆ ಜಗಳವಾಡಿದ್ದಾನೆ. ಇದನ್ನೂ ಓದಿ: ಲಾರಿ, ಜೀಪ್ ಡಿಕ್ಕಿ- ಸ್ಥಳದಲ್ಲೇ ನಾಲ್ವರ ದುರ್ಮರಣ

    ಅನೈತಿಕ ಸಂಬಂಧ ಹೊಂದಿರೋ ಬಗ್ಗೆ ಅನುಮಾನದಿಂದ ಪತ್ನಿ ಜೊತೆ ಗಲಾಟೆ ಮಾಡಿದ್ದಾನೆ. ಈ ಜಗಳ ವಿಕೋಪಕ್ಕೆ ಹೋದಾಗ ಮನಿಷಾ, ಚಾಕು ತೆಗೆದುಕೊಂಡು ಉಮೇಶ್ ದಾಮಿಗೆ ಇರಿದಿದ್ದಾಳೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಉಮೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬಳಿಕ ಉಮೇಶ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಇತ್ತ ಆರೋಪಿ ಮನಿಷಾಳನ್ನ ಬಂಧಿಸಿ ಹುಳಿಮಾವು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಸಂಬಂಧ ಹುಳಿಮಾವು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತಿ ಸಾವಿನ ಬಳಿಕ ಲೈನ್‍ಮ್ಯಾನ್ ಸಖ್ಯ ಬೆಳೆಸಿದಾಕೆ ಕೊಳೆತ ಸ್ಥಿತಿಯಲ್ಲಿ ಪತ್ತೆ!

    ಪತಿ ಸಾವಿನ ಬಳಿಕ ಲೈನ್‍ಮ್ಯಾನ್ ಸಖ್ಯ ಬೆಳೆಸಿದಾಕೆ ಕೊಳೆತ ಸ್ಥಿತಿಯಲ್ಲಿ ಪತ್ತೆ!

    ಚಾಮರಾಜನಗರ: ಪತಿ ಸಾವಿನ ಬಳಿಕ ಲೈನ್ ಮ್ಯಾನ್ (Line Man) ಒಬ್ಬನ ಗೆಳೆತ ಬೆಳೆಸಿದಾಕೆಯು ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಆದರ್ಶನಗರದ ಮನೆಯೊಂದರಲ್ಲಿ ರೇಖಾ (26) ಮೃತದೇಹ ಪತ್ತೆಯಾಗಿದೆ.

    27 ವರ್ಷದ ಅಗರ ಗ್ರಾಮದ ನಿವಾಸಿ ರೇಖಾಳ ಪತಿ ಕಳೆದ ಎರಡು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಯ ಸಾವಿನ ಬಳಿಕ ಲೈನ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಗೆಳೆಯ ನಾಗೇಂದ್ರ ಅಲಿಯಾಸ್ ಆನಂದ್ ಸಹವಾಸದಲ್ಲಿದ್ದಳು. ಇಬ್ಬರ ಲೀವಿಂಗ್ ಟು ಗೆದರ್ ರಿಲೇಷನ್ ಶಿಪ್ ಮನೆಗೆ ತಿಳಿದು ಗಲಾಟೆ ನಡೆದಿತ್ತು. ಮನೆಯಲ್ಲಿ ಗಲಾಟೆ ಗದ್ದಲವಾದ್ರು, ನಾಗೇಂದ್ರ ಗೆಳೆತನವನ್ನು ಮಾತ್ರ ರೇಖಾ ಬಿಟ್ಟಿರಲಿಲ್ಲ. ಈಗ ಅದೇ ಗೆಳೆಯ ನಾಗೇಂದ್ರ ಮನೆಯಲ್ಲಿ ರೇಖಾಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲೊಂದು ಅಮಾನವೀಯ ಘಟನೆ – ಘೋರ ದುರಂತದಲ್ಲೂ ಪ್ರಾಣಾಪಾಯದಿಂದ ಪಾರಾದ ಮಗು

    ಗೆಳೆಯ ನಾಗೇಂದ್ರನೇ ರೇಖಾಳನ್ನ ಹೊಡೆದು ಕೊಂದಿರುವ ಆರೋಪ ಕೇಳಿಬಂದಿದ್ದು, ಸ್ಥಳಕ್ಕೆ ಕೊಳ್ಳೇಗಾಲ ಪೆÇಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಮರಣೋತ್ತರ ಪರೀಕ್ಷೆಗಾಗಿ ರೇಖಾಳ ಮೃದೇಹವನ್ನ ಸರ್ಕಾರಿ ಆಸ್ಪತ್ರೆಗೆ ಪೊಲೀಸರು ರವಾನಿಸಿದರು. ಈ ವೇಳೆ ಯಾವುದೇ ಕಾರಣಕ್ಕೂ ಶವ ಮುಟ್ಟದಂತೆ ಮೃತಳ ಸಂಬಂಧಿಕರು ಗಲಾಟೆ ಮಾಡಿದ್ದಾರೆ.

    ಕೊಳ್ಳೇಗಾಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.