Tag: ಪತಿ

  • ಪತಿ ಜಗಳ ಬಿಡಿಸಲು ಹೋದ ಮಹಿಳೆಗೆ ಗರ್ಭಪಾತ

    ಪತಿ ಜಗಳ ಬಿಡಿಸಲು ಹೋದ ಮಹಿಳೆಗೆ ಗರ್ಭಪಾತ

    ಚಾಮರಾಜನಗರ: ಪತಿಯ ಮೇಲೆ ನಡೆಸುತ್ತಿದ್ದ ಜಗಳ ಬಿಡಿಸಲು ಹೋದ ಮಹಿಳೆ ಹಲ್ಲೆಗೊಳಗಾಗಿ ಮಹಿಳೆಯೆ ಗರ್ಭಪಾತ ಆಗಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೋಕು ಉತ್ತಂಬಳ್ಳಿಯಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಮಹಿಳೆಯನ್ನು ಮಾದೇವಿ ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಮಹಿಳೆ ಗಂಡ ಸೋಮು ಎಂಬಾತನ ಮೇಲೆ ಮಾದೇಶ್ ಹಾಗೂ ಇತರ ಸ್ನೇಹಿತರು ಜಗಳ ಮಾಡಿದ್ದಾರೆ. ಈ ವೇಳೆ ಪತಿಯನ್ನು ಜಗಳದಿಂದ ಬಿಡಿಸಲು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಾದೇವಿ ಮುಂದಾಗಿದ್ದಾರೆ.

    ಜಗಳ ನಡೆಯುತ್ತಿದ್ದ ಸಮಯದಲ್ಲಿ ಮಾದೇವಿ ಅಡ್ಡ ಬಂದಿದ್ದಕ್ಕೆ ಕೋಪಗೊಂಡ ಮಾದೇಶ್ ಮಹಿಳೆ ಹೊಟ್ಟೆಗೆ ಕಾಲಿನಿಂದ ಜೋರಾಗಿ ಒದ್ದಿದ್ದಾನೆ. ಒದೆತದಿಂದ ಮಾದೇವಿ ಗಂಭೀರವಾಗಿ ಗಾಯಗೊಂಡಿದ್ದು, ಇದೀಗ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸದ್ಯ ಘಟನೆ ಕುರಿತಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿ ಮಾದೇಶ ಹಾಗು ಸ್ನೇಹಿತರಾದ ಶಿವಣ್ಣ, ಗೋವಿಂದ ಎಂಬಾವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಮಲಗಿದ್ದ ಪತಿ ಮೇಲೆ ಮಚ್ಚಿನಿಂದ ಕೊಚ್ಚಿ ಮಾರಣಾಂತಿಕ ಹಲ್ಲೆಗೈದ ಪತ್ನಿ

    ಮಲಗಿದ್ದ ಪತಿ ಮೇಲೆ ಮಚ್ಚಿನಿಂದ ಕೊಚ್ಚಿ ಮಾರಣಾಂತಿಕ ಹಲ್ಲೆಗೈದ ಪತ್ನಿ

    ಹಾಸನ: ಪತ್ನಿಯೇ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.

    ಜಿಲ್ಲೆಯ ಬೇಲೂರು ತಾಲೂಕಿನ ತಗರೆ ಗ್ರಾಮದಲ್ಲಿ ಘಟನೆ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ನಿಂಗರಾಜು ಮೇಲೆ ಪತ್ನಿ ಗಿರಿಜಾ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಪತಿ ನಿಂಗರಾಜು ಹಾಗೂ ಪತ್ನಿ ಗಿರಿಜಾ ನಡುವೆ ಜಗಳ ನಡೆದು ತಾರಕಕ್ಕೇರಿದೆ. ಮಧ್ಯರಾತ್ರಿ ಸುಮಾರು ಎರಡು ಗಂಟೆ ಸಮಯದಲ್ಲಿ ಪತಿ ನಿಂಗರಾಜು ಮಲಗಿದ್ದ ವೇಳೆ ಪತ್ನಿ ಗಿರಿಜಾ ಮಚ್ಚಿನಿಂದ ಕೈ, ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಮನಸ್ಸೋ ಇಚ್ಛೆ ಕೊಚ್ಚಿದ್ದಾಳೆ.

    ತೀವ್ರವಾಗಿ ಗಾಯಗೊಂಡಿದ್ದ ನಿಂಗರಾಜುವಿಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಂಗರಾಜು ಸಂಬಂಧಿಕರು ಅರೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಗಿರಿಜಾಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

  • ಝೂಮ್ ಕಾಲ್ ವೇಳೆ ಪತಿಗೆ ಕಿಸ್ ನೀಡಲು ಬಂದ ಪತ್ನಿ- ವೀಡಿಯೋ ವೈರಲ್

    ಝೂಮ್ ಕಾಲ್ ವೇಳೆ ಪತಿಗೆ ಕಿಸ್ ನೀಡಲು ಬಂದ ಪತ್ನಿ- ವೀಡಿಯೋ ವೈರಲ್

    ನವದೆಹಲಿ: ಮೀಟಿಂಗ್ ನಡೆಯುತ್ತಿರುವಾಗ ಝೂಮ್ ಕಾಲ್‍ನಲ್ಲಿ ಪತಿ ಮಾತನಾಡುತ್ತಿರುವಾಗಲೇ ಪತ್ನಿ ಕಿಸ್ ನೀಡಲು ಮುಂದಾಗಿದ್ದು, ಈ ವೀಡಿಯೋ ಇದೀಗ ಸಖತ್ ವೈರಲ್ ಆಗಿದೆ.

    ಕೈಗಾರಿಕೋದ್ಯಮಿ ಹರ್ಷ್ ಗೊಯಂಕಾ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ‘ಝೂಮ್ ಕಾಲ್ ಸೋ ಫನ್ನಿ’ ಎಂದು ಬರೆದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಮಹೀಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರ ಸಹ ವೈರಲ್ ಆಗಿರುವ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಝೂಮ್ ಕಾಲ್ ಮೀಟಿಂಗ್ ವೇಳೆ ವಿವಿಧ ವಿಷಯಗಳ ಕುರಿತು ವ್ಯಕ್ತಿ ಚರ್ಚಿಸುತ್ತಿದ್ದು, ಈ ವೇಳೆ ಅವರ ಪತ್ನಿ ರೂಮ್‍ಗೆ ಆಗಮಿಸಿ, ಬರುತ್ತಿದ್ದಂತೆಯೇ ಕಿಸ್ ನೀಡಲು ಮುಂದಾಗಿದ್ದಾರೆ. ತಕ್ಷಣವೇ ವ್ಯಕ್ತಿ ತನ್ನ ಲ್ಯಾಪ್‍ಟಾಪ್ ಕಡೆ ತಿರುಗಿ ನೋಡಿ ಸಿಗ್ನಲ್ ಮಾಡಿದ್ದಾರೆ. ಬಳಿಕ ಪತ್ನಿ ಸ್ಮೈಲ್ ಮಾಡಿ ಹಿಂದೆ ಸರಿದಿದ್ದಾರೆ.

    ಈ ವೀಡಿಯೋವನ್ನು ಎಂಜಾಯ್ ಮಾಡಿರುವ ಆನಂದ್ ಮಹೀಂದ್ರಾ, ಹ..ಹ.. ವರ್ಷದ ಪತ್ನಿಯನ್ನಾಗಿ ಈ ಮಹಿಳೆಯನ್ನು ನಾಮಿನೇಟ್ ಮಾಡಬೇಕು. ಅಲ್ಲದೆ ಪತಿಗೂ ಹೆಚ್ಚು ಆಸೆ ಹೊಗಳಿಕೆ ಇದ್ದಿದ್ದರೆ, ಈ ಇಬ್ಬರನ್ನೂ ವರ್ಷದ ಜೋಡಿ ಎಂದು ನಾಮಿನೇಟ್ ಮಾಡುತ್ತಿದ್ದೆ. ಆದರೆ ವ್ಯಕ್ತಿ ಸಿಟ್ಟಾಗಿದ್ದರಿಂದ ಈ ಬಿರುದಿನಿಂದ ವಂಚಿತರಾಗಿದ್ದಾರೆ ಎಂದು ಆನಂದ್ ಮಹೀಂದ್ರ ಪ್ರತಿಕ್ರಿಯಿಸಿದ್ದಾರೆ.

    ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, 3 ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದಿದೆ. ಅಲ್ಲದೆ ಕಮೆಂಟ್ ಮಾಡುವ ಮೂಲಕ ಸಹ ನೆಟ್ಟಿಗರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಕೆಲವು ಯಾಂತ್ರಿಕ ಪತಿಯಂದಿರು ಇಂತಹ ಅಪರೂಪದ, ನೆನಪಿನಲ್ಲಿಟ್ಟುಕೊಳ್ಳಬಹುದಾದ ಸಿಹಿ ಕ್ಷಣಗಳನ್ನು ಆನಂದಿಸಲು ಹಿಂಜರಿಯುತ್ತಾರೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಹೀಗೆ ಹಲವರು ಹಲವು ರೀತಿ ಪ್ರತಿಕ್ರಿಯಿಸುತ್ತಿದ್ದಾರೆ.

  • ಕುಡಿಯಲು ಹಣ ನೀಡದ ಪತ್ನಿ – ಚಾಕುವಿನಿಂದ ಇರಿದು ತಾನೂ ಚುಚ್ಚಿಕೊಂಡ ಪತಿರಾಯ

    ಕುಡಿಯಲು ಹಣ ನೀಡದ ಪತ್ನಿ – ಚಾಕುವಿನಿಂದ ಇರಿದು ತಾನೂ ಚುಚ್ಚಿಕೊಂಡ ಪತಿರಾಯ

    ದಾವಣಗೆರೆ: ಕುಡಿಯಲು ಹಣ ಕೊಡಲಿವೆಂದು ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ತಾನೂ ಚಾಕುವಿನಿಂದ ಚುಚ್ಚಿಕೊಂಡಿರುವ ಘಟನೆ ದಾವಣಗೆರೆಯ ಅಮರಾವತಿಯಲ್ಲಿ ನಡೆದಿದೆ.

    ಸೌಭಾಗ್ಯಮ್ಮ (50) ಕೊಲೆಯಾದ ಮಹಿಳೆ. ಕುಡಿಯಲು ಹಣ ನೀಡಲ್ಲವೆಂದು ಪತಿ ಪರಶುರಾಮ(54) ಕೊಲೆ ಮಾಡಿ ತಾನು ಚಾಕುವಿನಿಂದ ಇರಿದುಕೊಂಡು ಆಸ್ಪತ್ರೆ ಸೇರಿದ್ದಾನೆ.

    ದಂಪತಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಅಮರಾವತಿ ಗ್ರಾಮದ ನಿವಾಸಿಗಳಾಗಿದ್ದಾರೆ. ಕುಡಿಯಲು ಪತ್ನಿ ಹಣ ನೀಡುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತಿರಾಯ ಚಾಕುನಿಂದ ಪತ್ನಿಗೆ ಇರಿದಿದ್ದಾನೆ. ಕೊನೆಗೆ ತಾನೂ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕುಡಿಯಲು ದುಡ್ಡು ಕೇಳಿದಾಗ ಕೊಡದ ಪತ್ನಿಯ ಮೇಲೆ ಸಿಟ್ಟು ಬಂದು ಚಾಕುವಿನಿಂದ ದಾಳಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

  • 3 ತಿಂಗಳ ಹಿಂದಷ್ಟೇ ಮದ್ವೆ- ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೈದು ಪತಿ ಆತ್ಮಹತ್ಯೆ

    3 ತಿಂಗಳ ಹಿಂದಷ್ಟೇ ಮದ್ವೆ- ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೈದು ಪತಿ ಆತ್ಮಹತ್ಯೆ

    ಹಾಸನ: ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಬಳಿಕ ಪತಿ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮದಲ್ಲಿ ನಡೆದಿದೆ.

    ಮೃತ ದುರ್ದೈವಿ ಪತ್ನಿಯನ್ನು ಅನ್ನಪೂರ್ಣ(23) ಎಂದು ಗುರುತಿಸಲಾಗಿದೆ. ಈಕೆಯನ್ನು ಪತಿ ತುಳಸಿದಾಸ್ (40) ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ತುಳಸಿದಾಸ್ ಮೂರು ತಿಂಗಳ ಹಿಂದೆ ಮೈಸೂರು ಮೂಲದ ಅನ್ನಪೂರ್ಣಳನ್ನ ಮದುವೆಯಾಗಿದ್ದ. ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ತುಳಸಿದಾಸ್, ಇಂದು ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ. ಈತ ಇಂದು ಜಮೀನು ಬಳಿ ಪತ್ನಿ ಅನ್ನಪೂರ್ಣಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

    ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕುಡಿಯಲು ಹಣ ಕೊಡದ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ!

    ಕುಡಿಯಲು ಹಣ ಕೊಡದ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ!

    ಕೋಲಾರ: ಕುಡಿತದ ಚಟಕ್ಕೆ ಬಿದ್ದಿದ್ದ ಪಾಪಿ ಗಂಡ ಕುಡಿಯೋದಕ್ಕೆ ಹಣ ಕೊಡದ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ನಾಗನಾಳ ಗ್ರಾಮದ ಸೋಮಶೇಖರ್ ಎಂಬಾತ ತನಗೆ ಕುಡಿಯಲು ಹಣ ಕೊಡದ ತನ್ನ ಹೆಂಡತಿ ವಿಜಯಲಕ್ಷ್ಮಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. 14 ವರ್ಷದ ಹಿಂದೆ ಇವರಿಬ್ಬರು ಮದುವೆಯಾಗಿದ್ದರು. ಆದರೆ ಸೋಮಶೇಖರ್ ಪ್ರತಿದಿನ ಕುಡಿದು ಬಂದು ಕಿರುಕುಳ ನೀಡುತ್ತಿದ್ದನಂತೆ. ಕುಡುಕ ಗಂಡನ ಕಿರಕುಳದಿಂದಾಗಿ ವಿಜಯಲಕ್ಷ್ಮಿ ಕೂಲಿ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದಳು. ಕೂಲಿಯಲ್ಲಿ ಬಂದ ಹಣವನ್ನು ಬಿಡದೆ ಕುಡಿದು ಮುಗಿಸುತ್ತಿದ್ದ. ಎರಡು ವರ್ಷಗಳ ಹಿಂದೆ ಕುಡಿಯಲು ಹಣ ನೀಡಿಲ್ಲ ಎಂದು ತನ್ನ ನಾಲ್ಕು ವರ್ಷದ ಮಗ ಗೌತಮ್ ಎಂಬಾತನನ್ನು ಹೊಡೆದು ಕೊಂದು ತನ್ನ ಮೃಗರೂಪ ಮೆರೆದಿದ್ದ ಎಂದು ಹೇಳಲಾಗುತ್ತಿದೆ.


    ವಿಜಯಲಕ್ಷ್ಮಿಗೆ ಪತಿ ಸೋಮಶೇಖರ್ ಸುತ್ತಿಗೆಯಿಂದ ಹೊಡೆದು ಪರಾರಿಯಾಗಿದ್ದಾನೆ. ಕೂಡಲೇ ಅಕ್ಕಪಕ್ಕದ ಮನೆಯವರು ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರಾದರೂ ವಿಜಯಲಕ್ಷ್ಮಿ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾಳೆ. ವಿಷಯ ತಿಳಿದ ವಿಜಯಲಕ್ಷ್ಮಿ ಸಂಬಂಧಿಕರು ಆಘಾತಗೊಂಡಿದ್ದಾರೆ.

    ಹೆಂಡತಿಯನ್ನು ಕೊಲೆ ಮಾಡಿದ್ದ ಸೋಮಶೇಖರ್ ಕುಡಿಯಲು ಹಣ ಸಿಕ್ಕೊಡನೆ ಅಲ್ಲಿಂದ ಪರಾರಿಯಾಗಿದ್ದ. ಆತನನ್ನು ಬಂಧಿಸುವವರೆಗೂ ಶವವನ್ನು ಇಲ್ಲಿಂದ ತೆಗೆಯಲು ಬಿಡುವುದಿಲ್ಲ ಎಂದು ವಿಜಯಲಕ್ಷ್ಮಿಯ ಸಂಬಂಧಿಕರು ಪಟ್ಟುಹಿಡಿದಿದ್ದಾರೆ. ಈ ವೇಳೆ ಎರಡೂ ಕುಟುಂಬಗಳ ನಡುವೆ ಜಗಳ ನಡೆಯಿತು. ಕೋಲಾರ ಗ್ರಾಮಾಂತರ ಪೊಲೀಸರು ಹಾಗೂ ವೇಮಗಲ್ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಆರೋಪಿಯನ್ನು ಬಂಧಿಸಿದ್ದಾರೆ.

  • ಅವಳೊಂದಿಗೆ 3, ಇವಳೊಂದಿಗೆ 3 ದಿನ, ಒಂದು ದಿನ ರಜೆ- ಪತ್ನಿ, ಗೆಳತಿ ಜೊತೆ ವ್ಯಕ್ತಿ ಶೇರಿಂಗ್

    ಅವಳೊಂದಿಗೆ 3, ಇವಳೊಂದಿಗೆ 3 ದಿನ, ಒಂದು ದಿನ ರಜೆ- ಪತ್ನಿ, ಗೆಳತಿ ಜೊತೆ ವ್ಯಕ್ತಿ ಶೇರಿಂಗ್

    – ಇಬ್ಬರಿಗೂ ಸಮಯ ನೀಡುವ ಉದ್ದೇಶದಿಂದ ಪ್ಲಾನ್

    ರಾಂಚಿ: ಪತ್ನಿ ಜೊತೆ 3 ಹಾಗೂ ಗರ್ಲ್ ಫ್ರೆಂಡ್ ಜೊತೆ 3 ದಿನ ಬಳಿಕ ಒಂದು ರಜೆ ಎಂದು ವ್ಯಕ್ತಿಯೊಬ್ಬ ಒಪ್ಪಂದ ಮಾಡಿಕೊಂಡಿದ್ದು, ಖುಷಿಯಾಗಿ ಸಂಸಾರ ನಡೆಸುತ್ತಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

    ಜಾರ್ಖಂಡ್‍ನ ರಾಂಚಿಯಲ್ಲಿ ಘಟನೆ ನಡೆದಿದ್ದು, ವ್ಯಕ್ತಿ ತನ್ನ ಪತ್ನಿ ಹಾಗೂ ಗರ್ಲ್ ಫ್ರೆಂಡ್ ಇಬ್ಬರಿಗೂ ಸಮಯ ನೀಡುವ ಉದ್ದೇಶದಿಂದ ಒಪ್ಪಂದ ಮಾಡಿಕೊಂಡು ಅದರಂತೆ ನಡೆದುಕೊಳ್ಳುತ್ತಿದ್ದಾನೆ. ಹೌದು ಪತ್ನಿ ಜೊತೆ 3 ದಿನ ಹಾಗೂ ಗರ್ಲ್ ಫ್ರಂಡ್ ಜೊತೆ ಮೂರು ದಿನ, ಒಂದು ದಿನ ಸ್ವತಂತ್ರವಾಗಿರಲು ರಜೆ ತೆಗೆದುಕೊಳ್ಳುತ್ತಾನೆ. ಹೀಗೆ ವಾರದ ದಿನಗಳನ್ನು ಎಂಜಾಯ್ ಮಾಡುತ್ತಾನೆ.

    ವಿವಾಹಿತ ವ್ಯಕ್ತಿಯನ್ನು ರಾಜೇಶ್ ಮಹತೋ ಎಂದು ಗುರುತಿಸಲಾಗಿದ್ದು, ರಾಂಚಿಯ ಕೊಕಾರ್ ತಿರಿಲ್ ರಸ್ತೆಯ ನಿವಾಸಿಯಾಗಿದ್ದಾನೆ. ವ್ಯಕ್ತಿ ಪತ್ನಿ ಹಾಗೂ ಮಕ್ಕಳು ಇದ್ದರೂ ವಿವಾಹವಾಗಿಲ್ಲ ಎಂದು ಸುಳ್ಳು ಹೇಳಿ ಬೇರೊಬ್ಬ ಯುವತಿಯ ಜೊತೆ ಸಂಬಂಧ ಬೆಳೆಸಿದ್ದಾನೆ. ಬಳಿಕ ಪತ್ನಿ ಮಕ್ಕಳನ್ನು ಬಿಟ್ಟು ರಾಜೇಶ್ ಗರ್ಲ್ ಫ್ರಂಡ್ ಜೊತೆ ಓಡಿ ಹೋಗಿದ್ದ.

    ಬಳಿಕ ಪ್ರಕರಣ ಸಂಬಂಧ ಕಳೆದ ವರ್ಷ ಜನವರಿಯಲ್ಲಿ ರಾಜೇಶ್ ಪತ್ನಿ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ನಂತರ ಗರ್ಲ್ ಫ್ರೆಂಡ್ ಮನೆಯವರು ಸಹ ಕಿಡ್ನ್ಯಾಪ್ ಪ್ರಕರಣ ದಾಖಲಿಸಿದ್ದರು. ಬಳಿಕ ಪೊಲೀಸರು ರಾಜೇಶ್ ಹಾಗೂ ಈತನ ಗರ್ಲ್ ಫ್ರೆಂಡ್ ನ್ನು ಪತ್ತೆ ಹಚ್ಚಿದ್ದು, ಇಷ್ಟರಲ್ಲಾಗಲೇ ಇಬ್ಬರೂ ವಿವಾಹವಾಗಿದ್ದರು. ಇಬ್ಬರೂ ಓಡಿ ಹೋಗಿ ವಿವಾಹವಾಗಿರುವುದಾಗಿ ಮಹಿಳೆ ತಿಳಿಸಿದ್ದಾಳೆ.

    ಇದಾದ ಬಳಿಕ ಪತ್ನಿ ಹಾಗೂ ಗರ್ಲ್ ಫ್ರೆಂಡ್ ನಡುವೆ ವಾಗ್ವಾದ ನಡೆದಿದ್ದು, ಪೊಲೀಸರು ಇಬ್ಬರು ಮಹಿಳೆಯರ ಮಧ್ಯೆ ನಡೆಯುತ್ತಿದ್ದ ಜಗಳವನ್ನು ಬಗೆಹರಿಸಿದ್ದಾರೆ. ಅಲ್ಲದೆ 3 ದಿನ ಪತ್ನಿ ಜೊತೆ ಹಾಗೂ 3 ದಿನ ಗರ್ಲ್ ಫ್ರೆಂಡ್ ಜೊತೆ, ಉಳಿದ ಒಂದು ದಿನ ರಜೆ ತೆಗೆದುಕೊಳ್ಳುವಂತೆ ರಾಜೇಶ್‍ಗೆ ಪೊಲೀಸರು ತಿಳಿಸಿದ್ದಾರೆ. ಬಳಿಕ ಎರಡೂ ಕಡೆಯವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದು, ಒಪ್ಪಿಗೆ ಸೂಚಿಸಿದ್ದಾರೆ.

    ಬಳಿಕ ಕೆಲವೇ ದಿನಗಳಲ್ಲಿ ರಾಜೇಶ್ ಒಪ್ಪಂದ ಮುರಿದಿದ್ದು, ಈ ವೇಳೆ ಸುಳ್ಳು ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಗರ್ಲ್ ಫ್ರೆಂಡ್ ದೂರು ದಾಖಲಿಸಿದ್ದಾಳೆ. ಇದೀಗ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ರಾಜೇಶ್ ವಿರುದ್ಧ ಅರೆಸ್ಟ್ ವಾರೆಂಟ್ ನೀಡಲಾಗಿದೆ. ಇದೀಗ ಪೊಲೀಸರು ರಾಜೇಶ್‍ನನ್ನು ಬಂಧಿಸಲು ಮುಂದಾಗಿದ್ದಾರೆ.

    ಮೊದಲ ಪತ್ನಿ ರಾಜೇಶ್‍ನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಳೆ. ಪೊಲೀಸರು ಬಂಧಿಸಲು ಆತನ ಮನೆಗೆ ತೆರಳುತ್ತಿದ್ದಂತೆ ಆತ ಓಡಿ ಹೋಗಲು ಸಹಾಯ ಮಾಡುತ್ತಿದ್ದಾಳೆ. ಪೊಲೀಸರು ಆತನನ್ನು ಬಂಧಿಸಲು ದಾಳಿ ನಡೆಸುತ್ತಲೇ ಇದ್ದಾರೆ.

  • ಧರ್ಮಸ್ಥಳದ ಹುಂಡಿ ಸೇರಬೇಕಿದ್ದ ಮಾಂಗಲ್ಯ ಸರ ಮತ್ತೆ ಮಹಿಳೆಯ ಕೊರಳು ಸೇರಿತು

    ಧರ್ಮಸ್ಥಳದ ಹುಂಡಿ ಸೇರಬೇಕಿದ್ದ ಮಾಂಗಲ್ಯ ಸರ ಮತ್ತೆ ಮಹಿಳೆಯ ಕೊರಳು ಸೇರಿತು

    ಚಿಕ್ಕಮಗಳೂರು: ಧರ್ಮಸ್ಥಳ ಮುಂಜುನಾಥನ ಹುಂಡಿಗೆ ಸೇರಬೇಕಿದ್ದ ಮಾಂಗಲ್ಯ ಸರ ಮತ್ತೆ ಮಹಿಳೆ ಕೊರಳು ಸೇರಿರುವ ಅಪರೂಪದ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಫೆಬ್ರವರಿ 6ರಂದು ಶಿಕ್ಷಕಿ ಹೇಮಲತಾ ಪತಿ ಯೋಗೀಶ್ ಜೊತೆ ಆಟದ ಮೈದಾನವೊಂದರಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ ಮಾಂಗಲ್ಯ ಸರ ಕಳೆದುಕೊಂಡಿದ್ದರು. ನಂತರ ಮಾಂಗಲ್ಯ ಸರ ಯುವಕ ವಿನೋದ್ ಹಾಗೂ ರಾಘವೇಂದ್ರ ಎಂಬವರಿಗೆ ಸಿಕ್ಕಿದೆ. ಈ ವಿಚಾರವಾಗಿ ಇವರಿಬ್ಬರು ಮಾಂಗಲ್ಯ ಸರ ಸಿಕ್ಕಿದ್ದು, ಸರ ನಿಮ್ಮದೇ ಆಗಿದ್ದರೆ ಕರೆ ಮಾಡಿ ಸರ ಸ್ವೀಕರಿಸಿ ಎಂದು ಮೈದಾನದ ಸುತ್ತಾಮುತ್ತ ನಾಮಫಲಕಗಳನ್ನು ಹಾಕಿದ್ದರು.

    ಮಾಂಗಲ್ಯ ಸರ ಕಳೆದುಕೊಂಡ ದಂಪತಿ ಮನನೊಂದು ವಾಕ್ ಬರುವುದನ್ನೆ ನಿಲ್ಲಿಸಿದ್ದರು. ಒಮ್ಮೆ ಶನಿವಾರ ಯೋಗೀಶ್ ಮತ್ತೆ ವಾಕಿಂಗ್‍ಗೆಂದು ಬಂದಾಗ ಸರದ ಬಗೆಗೆ ಹಾಕಿದ್ದ ನಾಮಫಲಕವನ್ನು ನೋಡಿದ್ದಾರೆ. ಬಳಿಕ ಮೊಬೈಲ್ ತರದ ಕಾರಣ ಆ ನಾಮಫಲಕವನ್ನೇ ಕಿತ್ತುಕೊಂಡು ಮನೆಗೆ ಹೋಗಿ ಕರೆ ಮಾಡಿದ್ದಾರೆ. ಆಗ ವಿನೋದ್ ಧರ್ಮಸ್ಥಳ ಬಂದಿರುವುದಾಗಿ ತಿಳಿಸಿ, ನಾಳೆ ಬಂದು ನಿಮ್ಮ ಸರ ವಾಪಸ್ ಕೊಡುತ್ತೇವೆ ಎಂದು ಹೇಳಿದ್ದಾರೆ.

    ಅದೇ ರೀತಿ ಧರ್ಮಸ್ಥಳದಿಂದ ಹಿಂದಿರುಗಿದ ವಿನೋದ್ ಹಾಗೂ ರಾಘವೇಂದ್ರ ಸರದ ಮಾಲೀಕ ಪೇದೆ ಯೋಗೀಶ್ ಹಾಗೂ ಶಿಕ್ಷಕಿ ಹೇಮಲತ ಅವರಿಗೆ ಸರವನ್ನು ವಾಪಸ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಾಂಗಲ್ಯ ಸರ ಸುಮಾರು 11.500 ಗ್ರಾಂ ಇದ್ದು, ಅಂದಾಜು 60 ಸಾವಿರ ರೂ. ಆಗಿದೆ. ನೂರು ರೂಪಾಯಿ ಸಿಕ್ಕಿದರೂ ವಾಪಸ್ ಕೊಡದ ಈ ಕಾಲದಲ್ಲಿ 60 ಸಾವಿರ ಮೌಲ್ಯದ ಬಂಗಾರದ ಸರವನ್ನು ಹಿಂದಿರುಗಿಸಿದ ವಿನೋದ್ ಹಾಗೂ ರಾಘವೇಂದ್ರ ದಂಪತಿ ಅಭಿನಂದನೆ ಸಲ್ಲಿಸಿದ್ದಾರೆ.


    ಹುಂಡಿ ಸೇರುತ್ತಿದ್ದ ಸರ : ಏಳು ದಿನವಾದರೂ ಸರದ ಮಾಲೀಕರು ಯಾರೂ ಕೇಳದ, ಫೋನ್ ಮಾಡದ ಹಿನ್ನೆಲೆ ವಿನೋದ್ ಹಾಗೂ ರಾಘವೇಂದ್ರ ಅವರು ಮೂರ್ನಾಲ್ಕು ದಿನ ನೋಡಿ ಸರವನ್ನ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಹುಂಡಿಗೆ ಹಾಕಲು ತೀರ್ಮಾನಿಸಿದ್ದರು. ಆದರೆ, ಸರ ಕಳೆದುಕೊಂಡ ಹೇಮಲತಾ ಅವರ ಅದೃಷ್ಟ ಹಾಗೂ ಚೆನ್ನಾಗಿತ್ತು. ಇದರಿಂದ ಹೇಮಲತಾ ಕೂಡ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಶಾಲೆ, ಮನೆ, ಆಟದ ಮೈದಾನ ಎಲ್ಲಾ ಕಡೆ ಹುಡುಕಿದ್ದೆ. ಎಲ್ಲೂ ಸರ ಸಿಕ್ಕಿರಲಿಲ್ಲ. ಮಾಂಗಲ್ಯ ಸರ ಎಂದು ತುಂಬಾ ನೋವಾಗಿತ್ತು. ಸರ ಸಿಕ್ಕಿದ್ದು ತುಂಬಾ ಖುಷಿಯಾಯ್ತು ಎಂದಿದ್ದಾರೆ.

    ಮತ್ತೊಮ್ಮೆ ಮದುವೆ : ವಾರದಿಂದ ಹುಡುಕಾಡಿದ ಸರ ಸಿಕ್ಕ ಖುಷಿಯಲ್ಲಿ ಪೇದೆ ಯೋಗೀಶ್ ಹಾಗೂ ಶಿಕ್ಷಕಿ ಹೇಮಲತಾ ಪ್ರೇಮಿಗಳ ದಿನದಂದೇ ಮತ್ತೊಮ್ಮೆ ಮದುವೆಯಾಗಿದ್ದಾರೆ. ಸರ ಸಿಕ್ಕ ಖುಷಿಯಲ್ಲಿ ನಗರದ ಬೋಳರಾಮೇಶ್ವರ ದೇವಾಲಯದ ಮುಂಭಾಗ ಯೋಗೀಶ್ ಮತ್ತೊಮ್ಮೆ ಪತ್ನಿ ಕೊರಳಿಗೆ ಮಾಂಗಲ್ಯ ಸರವನ್ನ ಕಟ್ಟಿದ್ದಾರೆ.

    ಈ ವೇಳೆ, ಸರವನ್ನ ಹಿಂದಿರುಗಿಸಿದ ವಿನೋದ್, ರಾಘವೇಂದ್ರ ಹಾಗೂ ಅವರ ಪತ್ನಿ ಕೂಡ ಜೊತೆಗಿದ್ದರು. ದಾರಿಯಲ್ಲಿ ಸಿಕ್ಕ ಮಾಂಗಲ್ಯ ಸರವನ್ನ ವಾರಗಳ ಕಾಲ ಕಷ್ಟಪಟ್ಟು ವಿಭಿನ್ನ ಪ್ರಯತ್ನದ ಮೂಲಕ ನೊಂದ ಮಹಿಳೆಯ ಕೊರಳು ಸೇರಿಸಿದ ವಿನೋದ್ ಹಾಗೂ ರಾಘವೇಂದ್ರ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಅವರ ಈ ಕಾರ್ಯಕ್ಕೆ ನಗರದ ಜನ ಕೂಡ ಮೆಚ್ಚುಗೆ ವ್ಯಕ್ತಪಡಿಸಿ, ಇದು ಮಾದರಿ ಹಾಗೂ ಎಲ್ಲರೂ ಈ ನಡೆಯನ್ನ ಬೆಳೆಸಿಕೊಳ್ಳಬೇಕು ಎಂದಿದ್ದಾರೆ.

  • ಪ್ರೇಮಿಗಳ ದಿನಕ್ಕೆ ಪತ್ನಿ ನೀಡಿದ ಕಾಣಿಕೆಗೆ ನಾಚಿ ತಲೆ ತಗ್ಗಿಸಿದ ಪತಿ

    ಪ್ರೇಮಿಗಳ ದಿನಕ್ಕೆ ಪತ್ನಿ ನೀಡಿದ ಕಾಣಿಕೆಗೆ ನಾಚಿ ತಲೆ ತಗ್ಗಿಸಿದ ಪತಿ

    – ಪತಿಯ ಉತ್ತರಕ್ಕಾಗಿ ಕಾಯ್ತಿರೋ ನೆಟ್ಟಿಗರು

    ವಾಷಿಂಗ್ಟನ್: ಪ್ರೇಮಿಗಳ ದಿನಕ್ಕೆ ಪತ್ನಿ ನೀಡಿದ ಕಾಣಿಕೆ ನೋಡಿದ ಪತಿ ಶಾಕ್ ಆಗಿ ತಲೆ ತಗ್ಗಿಸಿದ ಅಪರೂಪದ ಘಟನೆ ಅಮೆರಿಕದಲ್ಲಿ ನಡೆದಿದೆ. ಪತಿಗೆ ನೀಡಿದ ಉಡುಗೊರೆಯ ಫೋಟೋಗಳನ್ನ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಹಿಳೆಯರು ಮೆಚ್ಚುಗೆ ಸೂಚಿಸಿದ್ರೆ, ಪುರುಷರು ಈ ರೀತಿ ಸಿಕ್ಕಿಕೊಳ್ಳೋದಾ ಅಂತ ಕಮೆಂಟ್ ಮಾಡುತ್ತಿದ್ದಾರೆ.

    ಗ್ಲೆರಿಯಾ ಅಮೆರಿಕಾದ ಪರಿಚಿತ ಟಿಕ್‍ಟಾಕ್ ಸ್ಟಾರ್ ಗಳಲ್ಲಿ ಒಬ್ಬರು. ಇನ್‍ಸ್ಟಾಗ್ರಾಂನಲ್ಲಿ ಪತಿ ಲೈಕ್ ಮಾಡಿರೋ ಸುಂದರ ಮಾದಕ ಚೆಲುವೆಯರ ಫೋಟೋಗಳ ಪ್ರಿಂಟ್ ತಗೆದು ಪ್ಲಕಾರ್ಡ್ ರೀತಿಯಲ್ಲಿ ಮಾಡಿಸಿದ್ದಾರೆ. ಈ ಪ್ಲಕಾರ್ಡ್ ಗಳನ್ನ ಟೇಬಲ್ ಮೇಲೆ ಅಂಟಿಸಿರೋ ಫೋಟೋವನ್ನ ಶೇರ್ ಮಾಡಿಕೊಂಡಿದ್ದು, ನಿಮ್ಮ ಪತಿ/ಗೆಳೆಯನಿಗೆ ನೀವೇನು ಗಿಫ್ಟ್ ನೀಡಿದಿರಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಬರೋಬ್ಬರಿ 38 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

    ಪತಿ ಲೈಕ್ ನೀಡಿರುವ ಮಾದಕ ಚೆಲುವೆಯರ ಫೋಟೋ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ನಂತರ ಎಲ್ಲವನ್ನ ಪ್ಲಕಾರ್ಡ್ ರೀತಿ ಮಾಡಿ ಬಾಕ್ಸ್ ನಲ್ಲಿರಿಸಿ ಪತಿಗೆ ಗಿಫ್ಟ್ ನೀಡಿದ್ದಾರೆ. ಪತಿ ಆಶ್ಚರ್ಯದಿಂದ ಗಿಫ್ಟ್ ನೋಡುತ್ತಿರುವ ಫೋಟೋ ಸಹ ವೈರಲ್ ಆಗಿದೆ. ಬಹುತೇಕ ನೆಟ್ಟಿಗರು ಗ್ಲೆರಿಯಾ ಪತಿಗೆ ಗಿಫ್ಟ್ ಕುರಿತು ಪ್ರತಿಕ್ರಿಯೆ ನೀಡುವಂತೆ ಒತ್ತಾಯಿಸಿದ್ದಾರೆ.

  • ಡ್ರಗ್ಸ್ ನೀಡಿ ಅಸಹಜ ಲೈಂಗಿಕ ಕ್ರಿಯೆ – ವರ್ಷ ತುಂಬುದರೊಳಗೆ ಗೃಹಿಣಿ ಸೂಸೈಡ್

    ಡ್ರಗ್ಸ್ ನೀಡಿ ಅಸಹಜ ಲೈಂಗಿಕ ಕ್ರಿಯೆ – ವರ್ಷ ತುಂಬುದರೊಳಗೆ ಗೃಹಿಣಿ ಸೂಸೈಡ್

    – 18 ಪುಟದಲ್ಲಿ ಕಾಮುಕ ಪತಿಯ ರಹಸ್ಯ
    – ಪತ್ನಿಗೆ ಇಂಜೆಕ್ಷನ್ ನೀಡಿ ಪ್ರತಿನಿತ್ಯ ಸೆಕ್ಸ್ ಗೆ ಕಿರುಕುಳ

    ಅಹಮದಾಬಾದ್: ಮದುವೆಯಾಗಿ ವರ್ಷ ತುಂಬುವದರೊಳಗೆ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಜರಾತಿನ ಘಟ್ಲೋಡಿಯಾದಲ್ಲಿ ನಡೆದಿದೆ.

    39 ವರ್ಷದ ಹರ್ಷಾ ಪಟೇಲ್ ಪತಿ ಹಾಗೂ ಆತನ ಕುಟುಂಬಸ್ಥರ ಕಿರುಕುಳಕ್ಕೆ ನೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ. 2020 ಆಗಸ್ಟ್ 28ರಂದು ಮೂಳೆ ವೈದ್ಯನಾಗಿರುವ ಹಿತೇಂದ್ರ ಪಟೇಲ್ ಜೊತೆ ಹರ್ಷಾ ಮದುವೆಯಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಮ್ಯಾಟ್ರಿಮೋನಿಯಲ್ ವೈಬ್‍ಸೈಟ್ ನಲ್ಲಿ ಪರಿಚಯವಾಗಿದ್ದರು.

    ಮದುವೆಯಾದ ಕೆಲವೇ ದಿನಗಳಲ್ಲಿ ಹಿತೇಂದ್ರ ತಾಯಿ ಮತ್ತು ತಂದೆ ವರದಕ್ಷಿಣೆ ತರುವಂತೆ ಸೊಸೆಗೆ ಕಿರುಕುಳ ನೀಡಲಾರಂಬಿಸಿದ್ದಾರೆ. ಹಗಲು ಅತ್ತೆ-ಮಾವ ವರದಕ್ಷಿಣೆಯ ಕಿರುಕುಳ ನೀಡಿದ್ರೆ, ರಾತ್ರಿ ಸೆಕ್ಸ್ ಹೆಸರಲ್ಲಿ ಹಿತೇಂದ್ರ ಪತ್ನಿಗೆ ನರಕ ದರ್ಶನ ಮಾಡಿಸುತ್ತಿದ್ದನು. ಹಿತೇಂದ್ರ ವೈದ್ಯನಾಗಿದ್ದರಿಂದ ಮತ್ತು ಬರುವ ಔಷಧಿ, ಇಂಜೆಕ್ಷನ್ ನೀಡಿ ಅಸಹಜವಾಗಿ ವಿವಿಧ ಭಂಗಿಗಳಲ್ಲಿ ಸೆಕ್ಸ್ ನಡೆಸುತ್ತಿದ್ದನು ಎಂದು ಹರ್ಷಾ ಡೆತ್ ನೋಟ್ ನಲ್ಲಿ ಹೇಳಿದ್ದಾರೆ.

    ಸಾಂದರ್ಭಿಕ ಚಿತ್ರ

    ತವರು ಮನೆ ಸೇರಿದ ಪತ್ನಿ: ಪತಿಯ ಕಿರುಕುಳದಿಂದ ನೊಂದಿದ್ದ ಹರ್ಷಾ ಡಿಸೆಂಬರ್ ನಲ್ಲಿ ತವರು ಸೇರಿದ್ದರು. ಅಂದಿನಿಂದ ತವರು ಮನೆಯಲ್ಲಿ ಉಳಿದುಕೊಂಡಿದ್ದ ಹರ್ಷಾ, ಮಂಗಳವಾರ 18 ಪುಟದ ಡೆತ್ ನೋಟ್ ಬರೆದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಘಟನೆ ಸಂಬಂಧ ಪತಿ ಹಿತೇಂದ್ರ, ಆತನ ತಂದೆ, ತಾಯಿ ಮತ್ತು ಸೋದರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾನಸಿಕ ಮತ್ತು ದೈಹಿಕ ಕಿರುಕುಳ, ಅಸಹಜ ಲೈಂಗಿಕ ಕ್ರಿಯೆ, ಡ್ರಗ್ಸ್ ಬಳಕೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.