Tag: ಪತಿ

  • ಗೃಹಿಣಿ ಸಾವು, ಪೋಷಕರಿಂದ ಕೊಲೆ ಆರೋಪ

    ಗೃಹಿಣಿ ಸಾವು, ಪೋಷಕರಿಂದ ಕೊಲೆ ಆರೋಪ

    ಚಿಕ್ಕಮಗಳೂರು: ಹೂವಿನಹಡಗಲಿ ಡಿಪೋದಲ್ಲಿ ಕೆಎಸ್‍ಆರ್ ಟಿಸಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಜಿಲ್ಲೆಯ ತರೀಕೆರೆ ತಾಲೂಕಿನ ಚೀರನಹಳ್ಳಿ ಮೂಲದ ಮಂಜುಳ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಪೋಷಕರು ಕೊಲೆಯಾಗಿದೆ ಎಂದು ಆರೋಪಿಸಿದ್ದಾರೆ.

    ಮೃತ ಮಂಜುಳ ಮೂಲತಃ ದಾವಣಗೆರೆ ಜಿಲ್ಲೆ ಮಾಯಕೊಂಡ ನಿವಾಸಿ. ಎಂಟು ವರ್ಷಗಳ ಹಿಂದೆ ತರೀಕೆರೆ ತಾಲೂಕಿನ ಚೀರನಹಳ್ಳಿ ಪ್ರದೀಪ್ ಜೊತೆ ವಿವಾಹವಾಗಿತ್ತು. ಪ್ರದೀಪ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ, ಹೀಗಾಗಿ ಗಂಡನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಮಹಿಳೆ ಪೋಷಕರು ಆರೋಪಿಸಿದ್ದಾರೆ.

    ದಂಪತಿಗೆ ಐದು ವರ್ಷದ ಹೆಣ್ಣು ಮಗು ಹಾಗೂ 3 ವರ್ಷದ ಗಂಡು ಮಗುವಿದೆ. ಮೈಕ್ರೋ ಫೈನಾನ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ಪ್ರದೀಪ್, ಎರಡು ವರ್ಷಗಳಿಂದ ಮನೆಯಲ್ಲೇ ಮಕ್ಕಳನ್ನ ನೋಡಿಕೊಂಡು ಇದ್ದ. ಹೂವಿನಹಡಗಲಿ ಡಿಪೋದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಮಂಜುಳ ಪತಿ ಊರಿಗೆ ಬಂದಿದ್ದರು.

    ಪ್ರದೀಪ್ ಹಾಗೂ ಮಂಜುಳ ನಡುವೆ ಆಗಾಗ್ಗೇ ಜಗಳವಾಗಿ ಮನಸ್ಥಾಪ ಕೂಡ ಇತ್ತಂತೆ. ಊರಿಗೆ ಬಂದ ಮಂಜುಳಾಗೆ ಪತಿ ಪ್ರದೀಪ್ ಬಾಕಿ ಇದ್ದ ವರದಕ್ಷಿಣೆ ಹಣ ತರುವಂತೆ ಪೀಡಿಸುತ್ತಿದ್ದ. ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಮಂಜುಳ, ಕಳೆದ ರಾತ್ರಿ ವಿಷ ಕುಡಿದಿದ್ದಾಳೆ. ಬಳಿಕ ಪತಿ ಹಾಗೂ ಕುಟುಂಬಸ್ಥರು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಬಳಿಕ ಮಂಜುಳ ಪೋಷಕರಿಗೆ ಬೆಳಗ್ಗೆ ಆರು ಗಂಟೆಗೆ ತಿಳಿಸಿದ್ದಾರೆ. ಇದು ಮಂಜುಳ ಪೋಷಕರ ಅನುಮಾನಕ್ಕೆ ಕಾರಣವಾಗಿದೆ. ಪತಿ ಮನೆಯವರೇ ಹೊಡೆದು ಉಸಿರುಗಟ್ಟಿ ಸಾಯಿಸಿ ಬಾಯಿಗೆ ವಿಷ ಹಾಕಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ಮಂಜುಳಾ ಪೋಷಕರು ಆರೋಪಿಸಿದ್ದಾರೆ. ಅಷ್ಟೆ ಅಲ್ಲದೆ ದೇಹದ ಮೇಲೆ ಗಾಯದ ಕಲೆಗಳಿವೆ. ವಿಷ ಕುಡಿದವರ ದೇಹದ ಬಣ್ಣ ಬದಲಾಗುತ್ತೆ. ಆದರೆ ಮಂಜುಳಾ ದೇಹ ಮಾಮೂಲಿಯಂತಿತ್ತು. ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಮಾಡಿದ್ದಾರೆಂದು ಮೃತ ಮಂಜುಳ ಪೋಷಕರು ಆರೋಪಿಸಿದ್ದಾರೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

  • ಪತಿ, ಕುಟುಂಬಸ್ಥರ ಕಿರುಕುಳ- ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ

    ಪತಿ, ಕುಟುಂಬಸ್ಥರ ಕಿರುಕುಳ- ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ

    – ನಿತ್ಯ ಮದ್ಯ ಸೇವಿಸಿ, ಕಿರುಕುಳ ನೀಡ್ತಿದ್ದ ಪತಿ

    ಶಿವಮೊಗ್ಗ: ಪತಿ ಹಾಗೂ ಆತನ ಮನೆಯವರ ಕಿರುಕುಳ ತಾಳಲಾರದೆ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಜೋಗದಲ್ಲಿ ನಡೆದಿದೆ.

    ಮೃತ ಗೃಹಿಣಿಯನ್ನು ಸಂಧ್ಯಾ(25) ಎಂದು ಗುರುತಿಸಲಾಗಿದೆ. ಮಗಳ ಸಾವಿಗೆ ಆಕೆಯ ಪತಿಯ ಮನೆಯವರೇ ಕಾರಣ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ. ನಿನ್ನೆ ರಾತ್ರಿ ಮನೆಯಲ್ಲೇ ವಿಷ ಸೇವಿಸಿದ್ದ ಸಂಧ್ಯಾ ಅವರನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಧ್ಯಾ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

    ಮೃತ ಸಂಧ್ಯಾ ಕಳೆದ 7 ವರ್ಷದ ಹಿಂದೆ ಮಧುಸೂದನ್ ಜೊತೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಆದರೆ ಮದುವೆಯಾದ ದಿನದಿಂದಲೂ ಪತಿ ದಿನನಿತ್ಯ ಮದ್ಯ ಸೇವಿಸಿ ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಸಂಧ್ಯಾ ಪೋಷಕರು ಆರೋಪಿಸಿದ್ದಾರೆ.

    ಘಟನೆ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತಿ ಮಧುಸೂದನ್ ನನ್ನು ವಶಕ್ಕೆ ಪಡೆದಿದ್ದಾರೆ. ಅಂತ್ಯ ಸಂಸ್ಕಾರದ ವೇಳೆ ಸಹ ಜಟಾಪಟಿ ನಡೆದಿದ್ದು, ಮೃತಳ ಶವವನ್ನು ಆಕೆಯ ತವರೂರು ಆನಂದಪುರದಲ್ಲಿ ಪೊಲೀಸರ ಮಧ್ಯಸ್ಥಿಕೆಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ.

  • ಪ್ರಿಯತಮನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಅರೆಸ್ಟ್

    ಪ್ರಿಯತಮನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಅರೆಸ್ಟ್

    ಬೆಂಗಳೂರು: ಪ್ರಿಯತಮನೊಂದಿಗೆ ಸೇರಿಕೊಂಡು ತನ್ನ ಸ್ವಂತ ಪತಿಯನ್ನೆ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಪತ್ನಿ ತಸ್ಲೀಮ್ ಬಾನು ಸೇರಿ 9 ಮಂದಿಯನ್ನು ಬಂಧಿಸಿದ್ದಾರೆ.

    ಮೊಹಮ್ಮದ್ ಶಫಿ ಎಂಬಾತನನ್ನು ಮಾರ್ಚ್ 19 ರಂದು ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೃತ ಮೊಹಮ್ಮದ್ ಶಫಿ ಪತ್ನಿ ತಸ್ಲೀಮ್ ಬಾನು ಸೇರಿ ಇತರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ತಸ್ಲೀಮ್ ಬಾನು ಮದುವೆಯಾಗಿದ್ದರು ಕೂಡ, ಅಫ್ಸರ್ ಖಾನ್ ಎಂಬಾತನನ್ನ ಇಷ್ಟಪಡುತ್ತಿದ್ದಳು. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಆರೋಪಿ ಅಫ್ಸರ್ ಖಾನ್, ಮೃತ ಮೊಹಮ್ಮದ್ ಶಫಿ ಮೂಲಕ ರಿಯಲ್ ಎಸ್ಟೇಟ್ ನಲ್ಲಿ 75 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದ. ನಂತರ ಐದು ಲಕ್ಷ ಹಣವನ್ನು ಕಮಿಷನ್ ಕೊಡೋದಾಗಿ ಮಹಮ್ಮದ್ ಶಫಿಯನ್ನು ಕರೆಸಿದ್ದ ಅಫ್ಸರ್ ಖಾನ್, ಸಹಚರರೊಂದಿಗೆ ಸೇರಿ ಕೊಲೆ ಮಾಡಿದ್ದ.

    ಮೊಹಮ್ಮದ್ ಶಫಿಯನ್ನು ಕೊಲೆ ಮಾಡಲು ತಬ್ರೇಜ್ ಹಾಗೂ ವಸೀಂ ಎಂಬುವವರಿಗೆ ಸುಪಾರಿ ನೀಡಿದ್ದ ಅಫ್ಸರ್ ಖಾನ್ ಕಮಿಷನ್ ಹಣ ಕೊಡ್ತಿನಿ ಅಂತ ಗುರಪ್ಪನಪಾಳ್ಯ ಬಳಿ ಕರೆಸಿಕೊಂಡು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಮೊಹಮ್ಮದ್ ಶಫಿ ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಪ್ರಕರಣದ ಜಾಡು ಹಿಡಿದು ಪೊಲೀಸರು ತನಿಖೆ ನಡೆಸಿದ ವೇಳೆ ಪ್ರಕರಣದಲ್ಲಿ ಪತ್ನಿ ತಸ್ಲೀಮ್ ಬಾನು ಮತ್ತು ಆಕೆಯ ಪ್ರಿಯಕರ ಅಫ್ಸರ್ ಖಾನ್ ಸೇರಿ 9 ಮಂದಿಯ ಕೈವಾಡವಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  • ಮಂಚದ ಕೆಳಗೆ ಅವಿತಿದ್ದ ಪತ್ನಿಯ ಪ್ರಿಯಕರನನ್ನು ಎಳೆದು ಚೂರಿ ಇರಿದು ಕೊಂದ!

    ಮಂಚದ ಕೆಳಗೆ ಅವಿತಿದ್ದ ಪತ್ನಿಯ ಪ್ರಿಯಕರನನ್ನು ಎಳೆದು ಚೂರಿ ಇರಿದು ಕೊಂದ!

    ಬೆಂಗಳೂರು: ಪತ್ನಿಯ ಪ್ರಿಯತಮನನ್ನು ಆಕೆಯ ಪತಿಯೇ ಕೊಲೆ ಮಾಡಿದ ಘಟನೆ ಸಿಲಿಕಾನ್ ಸಿಟಿಯ ಅಂದ್ರಹಳ್ಳಿಯಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು ಶಿವು ಎಂದು ಗುರುತಿಸಲಾಗಿದೆ. ವಿನುತಾ ಮತ್ತು ಭರತ್ ಜೋಡಿ ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿತ್ತು. ಈ ನಡುವೆ ಪತ್ನಿ ವಿನುತಾ ಜೊತೆ ಶಿವು ಸಂಬಂಧ ಇಟ್ಟುಕೊಂಡಿದ್ದ.

    ಗಂಡ ಕೆಲಸಕ್ಕೆಂದು ಮನೆ ಬಿಟ್ಟು ಹೋದ ಬಳಿಕ ಶಿವು ವಿನುತಾಳನ್ನ ಭೇಟಿಯಾಗಲು ಬರುತ್ತಿದ್ದನು. ಪತಿ ಇಲ್ಲದಿದ್ದಾಗ ಪ್ರಿಯತಮನ ಜೊತೆ ಚಕ್ಕಂದ ಆಡುತ್ತಿದ್ದ ಪತ್ನಿಯ ಕಳ್ಳ ಕೆಲಸ ಭರತ್ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಒಂದು ದಿನ ಕೆಲಸಕ್ಕೆಂದು ಹೋದ ಭರತ್, ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವ ಸಲುವಾಗಿ ಏಕಾಏಕಿ ಮನೆಗೆ ಎಂಟ್ರಿ ಕೊಟ್ಟಿದ್ದಾನೆ.

    ಇತ್ತ ಕೆಲಸಕ್ಕೆಂದು ಹೋಗಿದ್ದ ಪತಿ ಏನೂ ಹೇಳದೆ ಮನೆಗೆ ಏಕಾಏಕಿ ಬರುತ್ತಿದ್ದಂತೆಯೇ ಗಾಬರಿಗೊಂಡ ವಿನುತಾ, ತನ್ನ ಪ್ರಿಯಕರನನ್ನು ಮಂಚದ ಕೆಳಗೆ ಅವಿತುಕೊಳ್ಳುವಂತೆ ಸೂಚನೆ ನೀಡಿದ್ದಾಳೆ. ಆದರೆ ಇದನ್ನು ಮನಗಂಡ ಪತಿ ಭರತ್, ಮಂಚದ ಕೆಳಗೆ ಅವಿತಿದ್ದ ಶಿವುನನ್ನು ಹೊರಗೆ ಎಳೆದು ಮೂರು ಬಾರಿ ಚಾಕುವಿನಿಂದ ಇರಿದಿದ್ದಾನೆ.

    ಚಾಕು ಇರಿತದಿಂದ ಗಂಭೀರ ಗಾಯಗೊಂಡ ಶಿವು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧಿಸಿದಂತೆ ಭರತ್ ನನ್ನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

  • ಅಕ್ರಮ ಸಂಬಂಧ ಶಂಕೆ- ಪತ್ನಿಯ ಜನನಾಂಗವನ್ನೇ ಹೊಲಿದ ಪತಿ

    ಅಕ್ರಮ ಸಂಬಂಧ ಶಂಕೆ- ಪತ್ನಿಯ ಜನನಾಂಗವನ್ನೇ ಹೊಲಿದ ಪತಿ

    – ಅಲ್ಯೂಮಿನಿಯಂ ದಾರದಿಂದ ಜನನಾಂಗ ಹೊಲಿದ
    – ಕೈ ಕಾಲು ಕಟ್ಟಿ ರಕ್ತಸ್ರಾವವಾಗುವ ವರೆಗೆ ಹಿಂಸೆ

    ಲಕ್ನೋ: ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತಿ ಅಲ್ಯೂಮಿನಿಯಂ ದಾರದಿಂದ ತನ್ನ ಪತ್ನಿಯ ಜನನಾಂಗವನ್ನೇ ಹೊಲಿದಿರುವ ಆಘಾತಕಾರಿ ಘಟನೆ ನಡೆದಿದೆ.

    ಉತ್ತರ ಪ್ರದೇಶದ ರಾಮ್‍ಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಚಾಲಕನಾಗಿ ಕೆಲಸ ಮಾಡುವ ವ್ಯಕ್ತಿ ಫೆಡಲಿಟಿ ಟೆಸ್ಟ್ ಮಾಡಿಸುವಂತೆ ಕೇಳಿದ್ದು ಇದಕ್ಕೆ ಪತ್ನಿಯೂ ಒಪ್ಪಿದ್ದಾಳೆ. ನಂತರ ಇದಕ್ಕೆ ಸಮಾಧನಗೊಳ್ಳದ ಕ್ರೂರಿ ಪತಿ, ಪತ್ನಿಯ ಕೈ, ಕಾಲುಗಳನ್ನು ಕಟ್ಟಿ ಅವಳ ಜನನಾಂಗವನ್ನು ಅಲ್ಯೂಮಿನಿಯಂ ದಾರದಿಂದ ಹೊಲಿದಿದ್ದಾನೆ. ರಕ್ತಸ್ರಾವ ಹೆಚ್ಚಾದ ಬಳಿಕ ಅವಳನ್ನು ಬಿಟ್ಟಿದ್ದಾನೆ. ಅಲ್ಲದೆ ರಕ್ತಸ್ರಾವ ಹೆಚ್ಚಾಗುತ್ತಿದ್ದಂತೆ ಪತ್ನಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

    ಘಟನೆ ಬಳಿಕ 24 ವರ್ಷದ ಮಹಿಳೆ ಹತ್ತಿರ ಊರಿನಲ್ಲಿದ್ದ ತನ್ನ ತಾಯಿಗೆ ಈ ವಿಷಯವನ್ನು ತಿಳಿಸಿದ್ದು, ಬಳಿಕ ತಾಯಿ ಮನೆಗೆ ಆಗಮಿಸಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ನಂತರ ಅಳಿಯನ ವಿರುದ್ಧ ಮಿಲಾಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರ ಮನವಿ ಮೇರೆಗೆ ಜಿಲ್ಲಾಸ್ಪತ್ರೆಯ ವೈದ್ಯರು ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ.

    ವೈದ್ಯರು ಹಲ್ಲೆಯಾಗಿರುವುದನ್ನು ಖಚಿತಪಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಐಪಿಸಿ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲಾಗಿದೆ. ಘಟನೆ ನಡೆದ ಮರುದಿನವೇ ಆರೋಪಿಯನ್ನು ಬಂಧಿಸಲಾಗಿದೆ.

    ಯಾವುದೇ ಕಾರಣವಿಲ್ಲದೆ ನನ್ನ ಪತಿ ತುಂಬಾ ಹೊಡೆಯುತ್ತಿದ್ದ, ನಾನು ಅನೈತಿಕ ಸಂಬಂಧ ಹೊಂದಿದ್ದೇನೆ ಎಂದು ಅನುಮಾನ ಪಟ್ಟು, ಫೆಡಲಿಟಿ ಟೆಸ್ಟ್ ಮಾಡಿಸುವಂತೆ ಪೀಡಿಸುತ್ತಿದ್ದ. ಈ ರೀತಿ ಕ್ರೂರವಾಗಿ ವರ್ತಿಸುತ್ತಾನೆ ಎಂದು ನಾನು ಊಹಿಸಿರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ.

    ಮಹಿಳೆ ಆರೋಪಿಯನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದು, ಇತ್ತೀಚೆಗೆ ಮಗು ಜನಿಸಿತ್ತು. ಆದರೆ ಹೆರಿಗೆಯಾಗುತ್ತಿದ್ದಂತೆ ಸಾವನ್ನಪ್ಪಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮಹಿಳೆಗೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯಕೀಯ ಪರೀಕ್ಷೆ ವೇಳೆ ತಿಳಿದಿದೆ. ಆಕೆಯ ಪತಿಯನ್ನು ಬಂಧಿಸಲಾಗಿದ್ದು, ಜೈಲಿನಲ್ಲಿಡಲಾಗಿದೆ. ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ರಾಮ್‍ಪುರ ಎಸ್‍ಪಿ ಖಚಿತಪಡಿಸಿದ್ದಾರೆ.

  • ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

    ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಗೃಹಿಣಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

    ನಗರದ ಪ್ರಭಾಕರ್ ಬಡಾವಣೆಯ ನಳಿನಿ(36) ಮೃತ ಗೃಹಿಣಿ. ಶಿಡ್ಲಘಟ್ಟ ತಾಲೂಕು ದೊಡ್ಡಹಳ್ಳಿ ಗ್ರಾಮದ ಶ್ರೀರಾಮ ಎಂಬಾತನಿಗೆ 16 ವರ್ಷಗಳ ಹಿಂದೆ ನಳಿನಿ ಮದುವೆ ಮಾಡಿಕೊಡಲಾಗಿದೆ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಅಂತ ಚಿಂತಾಮಣಿ ನಗರದಲ್ಲಿ ಬಂದು ನೆಲೆಸಿದ್ರು.

    ಪತಿ ಶ್ರೀರಾಮ ಮದುವೆಯಾದಗಿಂದಲೂ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದನಂತೆ. ಹಣ ತರದಿದ್ದಾಗ ಹೊಡೆಯುತ್ತಿದ್ದನು. ಅಲ್ಲದೆ ಪತ್ನಿಯನ್ನು ತವರು ಮನೆಗೆ ಕಳುಹಿಸುತ್ತಿದ್ದನಂತೆ. ಕಳೆದ 15 ದಿನಗಳ ಹಿಂದೆಯೂ ಇದೇ ರೀತಿ ಹಲ್ಲೆ ಮಾಡಿದ ಪರಿಣಾಮ ನಳಿನಿ ತವರು ಮನೆ ಸೇರಿದ್ದಳು.

    ಇತ್ತ ತವರು ಮನೆ ಸೇರಿದ ಬಳಿಕ ಅಲ್ಲಿಗೆ ಬಂದಿದ್ದ ಗಂಡ ಇನ್ನು ಮುಂದೆ ಈ ರೀತಿ ಮಾಡೋದಿಲ್ಲ, ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾನೆ. ಹೀಗೆ ಪದೆ ಪದೇ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿದ್ದು ಇದ್ರಿಂದ ನೊಂದ ಗೃಹಿಣಿ ತನ್ನ ಹಿರಿ ಮಗಳನ್ನ ಶಾಲೆಗೆ ಕಳುಹಿಸಿ ಮನೆಯಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಘಟನೆ ನಂತರ ಗಂಡ ಪರಾರಿಯಾಗಿದ್ದಾನೆ. ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತಿಯನ್ನು ಕೊಲೆಗೈದ ಪತ್ನಿಗೆ ಜೀವಾವಧಿ ಶಿಕ್ಷೆ

    ಪತಿಯನ್ನು ಕೊಲೆಗೈದ ಪತ್ನಿಗೆ ಜೀವಾವಧಿ ಶಿಕ್ಷೆ

    ದಾವಣಗೆರೆ: ಮದ್ಯ ಸೇವಿಸಲು ಹಣಕ್ಕಾಗಿ ಪೀಡಿಸುತ್ತಿದ್ದ ಪತಿಯನ್ನು ಕೊಲೆ ಮಾಡಿ ಶೌಚಾಲಯದ ಗುಂಡಿಯಲ್ಲಿ ಹೂತು ಹಾಕಿದ್ದಾ ಪತ್ನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

    ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಅರುಂಡಿ ಗ್ರಾಮದ ವಾಸಿ ಶ್ರೀಮತಿ ರೇಣುಕಾ (29) ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾಳೆ. ಪತಿ ಬಂಗಿ ನರಸಿಂಹಪ್ಪ ಹತ್ಯೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗೀತಾ ಕೆಬಿ ಜೀವಾವಧಿ ಶಿಕ್ಷೆ ಸಹಿತ 15 ಸಾವಿರ ದಂಡವನ್ನು ವಿಧಿಸಿತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಭಿಯೋಜಕರಾದ ಎಸ್.ವಿ.ಪಾಟೀಲ್ ವಾದ ಮಂಡಿಸಿದ್ದರು.

     

    ಏನಿದು ಪ್ರಕರಣ?
    ಮೃತ ಬಂಗಿ ನರಸಿಂಹಪ್ಪ ಯಾವುದೇ ಕೆಲಸವನ್ನು ಮಾಡುತ್ತಿರಲಿಲ್ಲ. ಪ್ರತಿ ದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಇದಲ್ಲದೆ ಪ್ರತಿ ದಿನ ಕುಡಿಯಲು ಹಣ ಕೊಡುವಂತೆ ತನ್ನ ಹೆಂಡತಿ ರೇಣುಕಾಳಿಗೆ ಪೀಡಿಸುತ್ತಿದ್ದನು. ಪತ್ನಿ ರೇಣುಕಾ ಹಣ ಕೊಡದೇ ಇದ್ದಲ್ಲಿ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದನು. ಇದರಿಂದ ರೋಸಿ ಹೋದ ಪತ್ನಿ ರೇಣುಕಾ ಹಿಂಸೆಯಿಂದ ಪಾರಾಗಲು ತನ್ನ ಗಂಡನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದಳು.

    2018 ಏಪ್ರಿಲ್ 8ರಂದು ಬಂಗಿನರಸಿಂಹಪ್ಪನು ಕುಡಿದು ಬಂದು ಹಣ ಕೊಡುವಂತೆ ಮತ್ತೆ ಪೀಡಿಸಿದ್ದಾನೆ. ಇದರಿಂದ ಕೋಪಗೊಂಡ ರೇಣುಕಾ ಶೌಚಾಲಯದ ಕೋಣೆಯೊಳಗೆ ಎಳೆದುಕೊಂಡು ಹೋಗಿ ಕಬ್ಬಿಣದ ಕುಡುಗೋಲಿನಿಂದ ಕುತ್ತಿಗೆಯನ್ನು ಕೊಯ್ದು ಸಾಯಿಸಿ ತಾನೇ ಕೊಲೆ ಮಾಡಿರುವುದು ಯಾರಿಗೂ ತಿಳಿಯಬಾರದೆಂದು ಹೆಣವನ್ನು ಅಲ್ಲೇ ಪಕ್ಕದಲ್ಲಿರುವ ಶೌಚಾಲಯದ ಗುಂಡಿಯೊಳಗೆ ಹಾಕಿದ್ದಳು. ಪ್ರಕರಣ ದಾಖಲಿಸಿದ ನ್ಯಾಮತಿ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದರು.

  • ಪತ್ನಿಗೆ ಬೆಂಕಿ ಹಚ್ಚಿ ಕ್ರೂರವಾಗಿ ಕೊಂದ ಪತಿ!

    ಪತ್ನಿಗೆ ಬೆಂಕಿ ಹಚ್ಚಿ ಕ್ರೂರವಾಗಿ ಕೊಂದ ಪತಿ!

    ಭುವನೇಶ್ವರ: 32 ವರ್ಷದ ವ್ಯಕ್ತಿಯೋರ್ವ 28 ವರ್ಷದ ತನ್ನ ಪತ್ನಿಯನ್ನೇ ಸುಟ್ಟುಹಾಕಿರುವ ಘಟನೆ ಒಡಿಶಾದ ಕೇಂದ್ರಪರಾ ಜಿಲ್ಲೆಯಲ್ಲಿ ನಡೆದಿದೆ.

    ಪಟ್ಟಮುಂಡೈ ಪೊಲೀಸ್ ಠಾಣಾ ವ್ಯಾಪ್ತಿ ಬಜೀಪಾಡ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ. ಮಹಿಳೆ ಸುಟ್ಟ ದೇಹ ಗುರುವಾರ ಬೆಳಗ್ಗೆ ಮನೆಯೊಳಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಸದ್ಯ ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಕುಡಿಯಲು ಹಣ ನೀಡದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿ ಕೊಲೆ- ಅಪರಾಧಿಗೆ ಜೀವಾವಧಿ ಶಿಕ್ಷೆ

    ಕುಡಿಯಲು ಹಣ ನೀಡದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿ ಕೊಲೆ- ಅಪರಾಧಿಗೆ ಜೀವಾವಧಿ ಶಿಕ್ಷೆ

    ಬೆಂಗಳೂರು: ಕುಡಿಯಲು ಹಣ ನೀಡದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಅಪರಾಧಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ.

    ಆನೇಕಲ್‍ನ 3ನೇ ಜಿಲ್ಲಾ ಸತ್ರ ನ್ಯಾಯಾಲಯ ಈ ಮಹತ್ವದ ತೀರ್ಪು ಪ್ರಕಟಿಸಿದ್ದು, ಮೌಲಾ(45) ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿ. ನ್ಯಾಯಾಧೀಶರಾದ ಸೈಯದ್ ಬಲಿಗೂರ್ ರೆಹಮಾನ್ ಅವರು ತಿರ್ಪು ಪ್ರಕಟಿಸಿದ್ದು, ಸರ್ಕಾರಿ ಅಭಿಯೋಜಕರಾಗಿ ಗಣೇಶ್ ನಾಯಕ್ ವಾದ ಮಂಡಿಸಿದ್ದರು.

    ಕುಡಿಯಲು ಹಣ ನೀಡದ ಕಾರಣ ಪತ್ನಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. 2014ರಲ್ಲಿ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು. ಆರೋಪಿ ಮೌಲಾ ತನ್ನ ಪತ್ನಿ ಜಬಿನಾಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ.

  • ಮಹಿಳೆ ಜೊತೆ ಪತಿ ಪ್ರತ್ಯಕ್ಷ- ಮಾರುಕಟ್ಟೆಯಲ್ಲೇ ಮನಬಂದಂತೆ ಥಳಿಸಿದ ಪತ್ನಿ

    ಮಹಿಳೆ ಜೊತೆ ಪತಿ ಪ್ರತ್ಯಕ್ಷ- ಮಾರುಕಟ್ಟೆಯಲ್ಲೇ ಮನಬಂದಂತೆ ಥಳಿಸಿದ ಪತ್ನಿ

    – ಮಾರುಕಟ್ಟೆ ಜನಸಂದಣಿ ನಡುವೆಯೇ ಕಪಾಳಮೋಕ್ಷ

    ಲಕ್ನೋ: ಬೇರೊಬ್ಬ ಮಹಿಳೆಯ ಜೊತೆ ಪತಿ ಪ್ರತ್ಯಕ್ಷವಾಗಿರುವುದನ್ನು ಕಂಡ ಮಹಿಳೆ, ನೆರೆದಿದ್ದ ಜನರನ್ನೂ ಲೆಕ್ಕಿಸದೆ ಮನಬಂದಂತೆ ಥಳಿಸಿದ್ದು ವೀಡಿಯೋ ವೈರಲ್ ಆಗಿದೆ.

    ಉತ್ತರ ಪ್ರದೇಶದ ಮೀರತ್‍ನ ಸೆಂಟ್ರಲ್ ಮಾರ್ಕೆಟ್‍ನಲ್ಲಿ ಈ ಘಟನೆ ನಡೆದಿದ್ದು, ತನ್ನ ಪತಿ ಮತ್ತೊಬ್ಬ ಮಹಿಳೆ ಜೊತೆ ಶಾಪಿಂಗ್ ಕಾಂಪ್ಲೆಕ್ಸ್‍ನಲ್ಲಿ ಕಾಣಿಸಿಕೊಂಡಿದ್ದೇ ತಡ, ಸುತ್ತ ಜನರಿದ್ದಾರೆ ಎಂಬುದನ್ನೂ ಲೆಕ್ಕಿಸದ ಮಹಿಳೆ ಪತಿಗೆ ಕಪಾಳಮೋಕ್ಷ ಮಾಡಿದ್ದಾರೆ.

    ವ್ಯಕ್ತಿಯನ್ನು ಅದ್ನಾನ್ ಎಂದು ಗುರುತಿಸಲಾಗಿದ್ದು, ಬೇರೊಬ್ಬ ಮಹಿಳೆ ಜೊತೆ ಶಾಪಿಂಗ್ ಮಾಡುವಾಗ ವ್ಯಕ್ತಿ ತನ್ನ ಪತ್ನಿ ಆಯೇಶಾಗೆ ಕೈಗೆ ಸಿಕ್ಕಿಬಿದ್ದಿದ್ದಾನೆ. ತಕ್ಷಣವೇ ಸಿಟ್ಟಿಗೆದ್ದ ಆಯೇಶಾ ಜನನಿಬಿಡ ಪ್ರದೇಶವನ್ನೂ ಲೆಕ್ಕಿಸದೆ ಪತಿಯನ್ನು ಮನಬಂದಂತೆ ಥಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆಗೆ ಗಲಾಟೆ ಕಂಡು ಹೆಚ್ಚು ಜನ ಸೇರಿದ್ದರು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ, ದಂಪತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದರು.

    ಪೊಲೀಸ್ ಠಾಣೆಗೆ ತೆರಳಿದ ಮೇಲೆ ಸಹ ಅದ್ನಾನ್ ಹಾಗೂ ಆಯೇಶಾ ಜಗಳ ಮಾಡಿದ್ದಾರೆ. ಫೆಬ್ರವರಿ 2020 ರಂದು ದಂಪತಿಯ ವಿವಾಹವಾಗಿತ್ತು. ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು. ಅದ್ನಾನ್ ನನ್ನನ್ನು ತವರು ಮನೆಯಲ್ಲಿ ಬಿಟ್ಟಿದ್ದ. ಆದರೆ ಇಂದು ಮಾರುಕಟ್ಟೆಯಲ್ಲಿ ಅದ್ನಾನ್ ಬೇರೊಬ್ಬ ಮಹಿಳೆಯೊಂದಿಗೆ ಇದ್ದಿದ್ದನ್ನು ಆಯೇಶಾ ಗಮನಿಸಿದ್ದಾರೆ.

    ಬಳಿಕ ಆಯೇಶಾ ಇಬ್ಬರನ್ನೂ ಫಾಲೋ ಮಾಡಿದ್ದಾರೆ. ಮಹಿಳೆ ಜೊತೆ ಅದ್ನಾನ್ ಶೋರೂಂಗೆ ತೆರಳುವುದನ್ನು ಸಹ ಕಂಡಿದ್ದು, ಅದ್ನಾನ್ ಹೆಚ್ಚು ಹೊತ್ತು ಶೋರೂಂನಲ್ಲೇ ಇದ್ದಿದ್ದನ್ನು ಗಮನಿಸಿದ ಆಯೇಶಾ, ಹೊರಗೆ ಬರುವಂತೆ ತಿಳಿಸಿದ್ದಾರೆ. ಇದಾದ ಬಳಿಕ ಹೊಡೆದಾಟ ಶುರುವಾಗಿದೆ. ಒಬ್ಬರಿಗೊಬ್ಬರು ಹೊಡೆದುಕೊಂಡು ರಸ್ತೆ ಮಧ್ಯೆಯೇ ಜಗಳವಾಡಿದ್ದಾರೆ.

    ಈ ಹಿಂದೆ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆಯೇಶಾ ಆರೋಪಿಸಿದ್ದಾರೆ. ನಾನು ಆಯೇಶಾಗೆ ವಿಚ್ಛೇದನ ನೀಡಿದ್ದೇನೆ ಎಂದು ಅದ್ನಾನ್ ತಿಳಿಸಿದ್ದಾನೆ. ಆಗ ವಿಚ್ಛೇದನದ ಪೇಪರ್ ತೋರಿಸುವಂತೆ ಆಯೇಶಾ ಕೇಳಿದ್ದಾರೆ. ಅಲ್ಲದೆ ಈತನನ್ನು ಜೈಲಿಗೆ ಹಾಕಬೇಕೆಂದು ಆಯೇಶಾ ಒತ್ತಾಯಿಸಿದ್ದಾರೆ. ಅದ್ನಾನ್ ಕಾನೂನಾತ್ಮಕವಾಗಿ ವಿಚ್ಛೇದನ ನೀಡಿಲ್ಲ, ನಾನು ಪೇಪರ್‍ಗೆ ಸಹಿ ಹಾಕಿಲ್ಲ ಎಂದು ಆಯೇಶಾ ತಿಳಿಸಿದ್ದಾರೆ.

    ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದ್ದು, ಆಯೇಶಾ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ನನ್ನ ಮಹಿಳಾ ಸ್ನೇಹಿತೆಯೊಂದಿಗೆ ಮಾರುಕಟ್ಟೆಯಲ್ಲಿ ಇದ್ದಾಗ ಕೆಲ ಜನರೊಂದಿಗೆ ಆಗಮಿಸಿದ ಆಯೇಶಾ ನನ್ನನ್ನು ಬೈಯುತ್ತ, ಹೊಡೆದಿದ್ದಾಳೆ ಎಂದು ಅದ್ನಾನ್ ಆರೋಪಿಸಿದ್ದಾನೆ.

    ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಆಯೇಶಾ ಹಾಗೂ ಅದ್ನಾನ್ ನಡುವೆ ಜಗಳವಿದೆ. ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ. ಕೋರ್ಟ್‍ನಲ್ಲಿ ಇದು ಇತ್ಯರ್ಥವಾಗಬೇಕಿದೆ. ಅದ್ನಾನ್ ತನ್ನ ಸ್ನೇಹಿತೆಯೊಂದಿಗೆ ಹೋಗುತ್ತಿರುವುದನ್ನು ಸಹಿಸದೆ ಆಯೇಶಾ ಈ ರೀತಿ ವರ್ತಿಸಿದ್ದಾರೆ. ಮಾರ್ಕೆಟ್ ಪ್ರದೇಶದಲ್ಲೇ ಇಬ್ಬರೂ ಜಗಳವಾಡಿಕೊಂಡಿದ್ದಾರೆ. ಈ ಕುರಿತು ವಿಚಾರಣೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.