Tag: ಪತಿ

  • ಸೋಂಕಿನಿಂದ ತೀವ್ರವಾಗಿ ಬಳಲ್ತಿದ್ದ ಪತಿ – ಪತ್ನಿ ಆತ್ಮಹತ್ಯೆ

    ಸೋಂಕಿನಿಂದ ತೀವ್ರವಾಗಿ ಬಳಲ್ತಿದ್ದ ಪತಿ – ಪತ್ನಿ ಆತ್ಮಹತ್ಯೆ

    ಚಾಮರಾಜನಗರ: ಕೊರೊನಾ ಸೋಂಕಿತೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚಾಮರಾಜನಗರ ತಾಲೂಕು ದೇಶಿಗೌಡನಪುರದಲ್ಲಿ ನಡೆದಿದೆ.

    ಶಿವಮ್ಮ(65) ಆತ್ಮಹತ್ಯೆ ಮಾಡಿಕೊಂಡ ಸೋಂಕಿತೆ. ಪತಿ ಹಾಗೂ ಪತ್ನಿ ಇಬ್ಬರಿಗೂ ಪಾಸಿಟಿವ್ ಆಗಿತ್ತು. ಪತಿಗೆ ಉಸಿರಾಟದ ಸಮಸ್ಯೆ ಇದ್ದುದ್ದರಿಂದ ಚಾಮರಾಜನಗರ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    ಇತ್ತ ಪತ್ನಿ ಶಿವಮ್ಮಳಿಗೆ ರೋಗ ಲಕ್ಷಣ ಇಲ್ಲದ ಕಾರಣ ಹೋಂ ಐಸೋಲೇಷನ್ ಗೆ ಕಳುಹಿಸಲಾಗಿತ್ತು. ಪತಿಗೆ ತೀವ್ರ ಸೋಂಕಿನಿಂದ ಬೇಸತ್ತು ಪತ್ನಿ ಶಿವಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿಯ ಹೆಣವನ್ನು ಸೈಕಲ್‍ನಲ್ಲಿ ಸಾಗಿಸಿ ಅಂತ್ಯಸಂಸ್ಕಾರ ಮಾಡಿದ ಪತಿ

    ಪತ್ನಿಯ ಹೆಣವನ್ನು ಸೈಕಲ್‍ನಲ್ಲಿ ಸಾಗಿಸಿ ಅಂತ್ಯಸಂಸ್ಕಾರ ಮಾಡಿದ ಪತಿ

    ಲಕ್ನೋ: ಕೊರೊನಾದಿಂದಾಗಿ ಮೃತಪಟ್ಟ ಪತ್ನಿ ದೇಹವನ್ನು ಅಂತ್ಯಸಂಸ್ಕಾರ ಮಾಡಲು ಗ್ರಾಮದ ಜನ ಯಾರು ಬಾರದ ಕಾರಣ ವ್ಯಕ್ತಿಯೊಬ್ಬರು ತನ್ನ ಪತ್ನಿಯ ಶವವನ್ನು ಸೈಕಲ್‍ನಲ್ಲಿ ಸಾಗಿಸಿರುವ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ.

    ಕೊರೊನಾ ಎರಡನೇ ಅಲೆ ಭೀಕರವಾಗಿ ಜನರ ಪ್ರಾಣವನ್ನೇ ಬಲಿ ಪಡೆಯುತ್ತಿದೆ. ಈ ಮಧ್ಯೆ ಜನ ಕೊರೊನಾದಿಂದ ಮೃತಪಟ್ಟರೆ ಅಂತವರ ಅಂತ್ಯಸಂಸ್ಕಾರಕ್ಕೂ ಭಯ ಪಡುವಂತಹ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ.

    ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಕೊರೊನಾದಿಂದಾಗಿ ಮಹಿಳೆಯೊಬ್ಬರು ಮರಣ ಹೊಂದಿದ್ದರು. ಅವರ ದೇಹವನ್ನು ಸಂಸ್ಕಾರ ಮಾಡಲು ಗ್ರಾಮಸ್ಥರು ಬಾರದ ಕಾರಣ ವಯಸ್ಸಾದ ಮಹಿಳೆಯ ಪತಿ ಸೈಕಲ್‍ನಲ್ಲಿ ಕಟ್ಟಿಕೊಂಡು ಸ್ಮಶಾನಕ್ಕೆ ಸಾಗಿದ್ದಾರೆ. ಅದರಲ್ಲೂ ಸೈಕಲ್‍ನಲ್ಲಿ ಸಾಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಬಿದ್ದಿದ್ದಾರೆ.

    ಕೊನೆಗೆ ವಯಸ್ಸಾದ ವ್ಯಕ್ತಿಯ ಸಹಾಯಕ್ಕೆ ಬಂದ ಸ್ಥಳೀಯ ಪೊಲೀಸರು ನೆರವಾಗಿದ್ದಾರೆ. ಬಳಿಕ ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, ಈ ವ್ಯಕ್ತಿಯ ಹೆಸರು ತಿಲಖಧರಿ ಯಾಗಿದ್ದು ಇವರಿಗೆ 70 ವರ್ಷ ವಯಸ್ಸು ಇವರು ಜಾನ್‍ಪುರದ ಅಂಬರ್ಪುರ ಗ್ರಾಮದವರಾಗಿದ್ದು, ಇವರ ಪತ್ನಿ ಕೊರೊನಾದಿಂದಾಗಿ ಮೃತಪಟ್ಟಿದ್ದರು. ಬಳಿಕ ಶವಸಂಸ್ಕಾರಕ್ಕೆ ಗ್ರಾಮದಲ್ಲಿ ಅವಕಾಶ ಕೊಡದ ಕಾರಣ ಈರೀತಿ ಸೈಕಲ್‍ನಲ್ಲಿ ಕಟ್ಟಿ ಬೇರೆಡೆ ಸಾಗಿಸುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

  • ನಾಲ್ಕನೇ ಪತಿಯಿಂದ ಕೊಲೆಯಾದ 8 ತಿಂಗಳ ಗರ್ಭಿಣಿ ‘ಡ್ರಗ್ ಕ್ವೀನ್’ ಶಯನಾ

    ನಾಲ್ಕನೇ ಪತಿಯಿಂದ ಕೊಲೆಯಾದ 8 ತಿಂಗಳ ಗರ್ಭಿಣಿ ‘ಡ್ರಗ್ ಕ್ವೀನ್’ ಶಯನಾ

    – ಶಯನಾ ಸೋದರಿ ಜೊತೆ 4ನೇ ಪತಿಯ ಮಂಚದಾಟ

    ನವದೆಹಲಿ: ರಾಜಧಾನಿ ದೆಹಲಿಯ ನಿಜಾಮುದ್ದೀನ್ ಇಲಾಖೆಯಲ್ಲಿ ವಾಸವಾಗಿದ್ದ ಡ್ರಗ್ ಕ್ವೀನ್ ಶಯನಾ ಕೊಲೆಯಾಗಿದೆ. ಮಂಗಳವಾರ ಬೆಳಗ್ಗೆ 10.30ಕ್ಕೆ ಶಯನಾ ಆಕೆಯ ನಾಲ್ಕನೇ ಪತಿ ಕೊಲೆ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳು ಶಯನಾಳನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

    ಶಯನಾ ರಕ್ಷಣೆಗೆ ಬಂದ ನೌಕರ:
    ಶಯನಾ ಕೊಲೆಯ ವಿಷಯ ತಿಳಿಯುತ್ತಿದ್ದಂತೆ ನಿಜಾಮುದ್ದೀನ್ ವ್ಯಾಪ್ತಿಯ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಶಯನಾ ನಾಲ್ಕನೇ ಪತಿ ವಸೀಮ್ ಜೊತೆ ವಾಸವಾಗಿದ್ದರು. ವಸೀಮ್ ಬಳಿ ಎರಡು ಗನ್ ಗಳಿದ್ದು, ಶಯನಾ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಮಧ್ಯೆ ಬಂದ ಮನೆಯ ಕೆಲಸಗಾರ ಶಹದತ್ ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಕೊಲೆಯ ಬಳಿಕ ವಸೀಮ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯ ಸಿಸಿಟಿವಿ ಫೋಟೋಜ್ ದೃಶ್ಯಗಳನ್ನ ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

    ನಾಲ್ಕು ಮದುವೆಯಾಗಿತ್ತು:
    ಶಯಾನಳ ಇಬ್ಬರು ಪತಿಯರು ಈಕೆಯನ್ನ ತೊರೆದು ಬಾಂಗ್ಲಾಗೆ ತೆರಳಿದ್ದಾರೆ. ಇಬ್ಬರಿಂದ ದೂರವಾದ ಶಯನಾ ಡ್ರಗ್ ಕಿಂಗ್ ಶರಾಫತ್ ಶೇಖ್ ಜೊತೆ ಮದುವೆಯಾಗಿದ್ದಳು. ಡ್ರಗ್ ಪ್ರಕರಣದಲ್ಲಿ ಬಂಧಿಯಾಗಿ ಶಯನಾ ಮತ್ತು ಶರಾಫತ್ ತಿಹಾರ ಜೈಲು ಸೇರಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಎನ್‍ಡಿಪಿಎಸ್ ಆ್ಯಕ್ಟ್ ಅಡಿ ಶರಾಫತ್ ನನ್ನು ಪೊಲೀಸರು ಬಂಧಿಸಿದ್ದರು.

    ವರ್ಷದ ಹಿಂದೆ ವಸೀಮ್ ಜೊತೆ ಮದುವೆ:
    ಮದುವೆ ಬಳಿಕ ಕೆಲವೇ ದಿನಗಳಲ್ಲಿ ಶರಾಫತ್ ಜೈಲು ಸೇರಿದ್ದರಿಂದ ವಸೀಮ್ ಎಂಬಾತನನ್ನು ಮದುವೆಯಾಗಿದ್ದಳು. ಇಬ್ಬರ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. ನಾಲ್ಕನೇ ಮದುವೆಯ ಸಂಭ್ರಮದಲ್ಲಿದ್ದ ಶಯನಾಳನ್ನ ಡ್ರಗ್ಸ್ ಪ್ರಕರಣದಲ್ಲಿ ದೆಹಲಿ ಪೊಲೀಸರು ಬಂಧಿಸಿ ತಿಹಾರ್ ಜೈಲಿಗೆ ಅಟ್ಟಿದ್ದರು. ಇತ್ತ ಶಯನಾ ಜೈಲು ಸೇರುತ್ತಿದ್ದಂತಿ ವಸೀಮ್ ಆಕೆಯ ಸೋದರಿ ರೆಹಾನಾ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಶಯಾನಾ ಜೈಲಿನಲ್ಲಿದ್ದರಿಂದ ಇಬ್ಬರ ಕಳ್ಳಾಟ ಯಾರ ಭಯವಿಲ್ಲದೇ ನಡೆದಿತ್ತು.

    ಮಂಚದಾಟ ಬಯಲಾಯ್ತು:
    ಜೈಲಿನಲ್ಲಿ ಶಯಾನಾ ಎಂಟು ತಿಂಗಳ ಗರ್ಭಿಣಿಯಾಗಿದ್ದರಿಂದ ಪೆರೋಲ್ ಮೇಲೆ ಹೊರ ಬಂದು ಮನೆ ಸೇರಿದ್ದಳು. ಈ ವೇಳೆ ಪತಿ ವಾಸೀಮ್ ಮಂಚದಾಟದ ವಿಷಯ ತಿಳಿದಿದೆ. ಇದೇ ವಿಷಯವಾಗಿ ಇಬ್ಬರ ನಡುವೆ ಹಲವು ಬಾರಿ ಜಗಳ ಸಹ ನಡೆದಿತ್ತು. ಮಂಗಳವಾರ ಮನೆಗೆ ಬಂದ ವಸೀಮ್ ಪತ್ನಿಯನ್ನ ಕೊಲೆ ಮಾಡಿದ್ದಾನೆ. ಈ ವೇಳೆ ಮಾಲಕಿ ಶಯಾನ ರಕ್ಷಣೆಗೆ ಬಂದ ನೌಕರನ ಮೇಲೆಯೂ ಗುಂಡು ಹಾರಿಸಿದ್ದಾನೆ. ನಂತರ ಠಾಣೆಗೆ ತೆರಳಿ ಕೃತ್ಯಕ್ಕೆ ಬಳಸಿದ ಗನ್ ಪೊಲೀಸರಿಗೆ ನೀಡಿ ಶರಣಾಗಿದ್ದಾನೆ.

  • 7 ಲಕ್ಷ ಖರ್ಚು ಮಾಡಿ ವಧುವನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದ ವರ!

    7 ಲಕ್ಷ ಖರ್ಚು ಮಾಡಿ ವಧುವನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದ ವರ!

    ಜೈಪುರ: ವರನೊಬ್ಬ ತನಗೆ ಮಡದಿಯಾಗುವವಳ ಕನಸನ್ನು ನನಸು ಮಾಡಿದ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ.

    ಹೌದು. ವರನನ್ನು ಸಿಯಾರಾಮ್ ಗುರ್ಜರ್ ಎಂದು ಗುರುತಿಸಲಾಗಿದ್ದು, ಈತ ಭರತ್‍ಪುರ ಜಿಲ್ಲೆಯ ವೈರ್ ಸಬ್‍ಬ್ಲಾಕ್‍ನ ರಾಯ್‍ಪುರ ಗ್ರಾಮದ ನಿವಾಸಿ. ಸಿಯಾರಾಮ್ ತನ್ನ ಮದುವೆ ಸಮಾರಂಭದ ಬಳಿಕ ವಧುವನ್ನು ಹೆಲಿಕಾಪ್ಟರ್ ಮೂಲಕ ಮನೆಗೆ ಕರೆತಂದಿದ್ದಾನೆ. ಈ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.

    ರೈತನ ಮಗನಾಗಿರುವ ಗುರ್ಜರ್ ತನ್ನ ಸಹೋದರ ಕರ್ತಾರ್ ಸಿಂಗ್ ಮತ್ತು ಸೋದರ ಮಾವ ರಾಮ್‍ಪ್ರಸಾದ್ ಅವರೊಂದಿಗೆ ಚಾಪರ್‍ಗೆ ಹತ್ತಿದ್ದಾನೆ. ಟೇಕ್-ಆಫ್ ಸಮಯದಲ್ಲಿ ಹೆಲಿಕಾಪ್ಟರ್ ನೋಡಲು ಜನರ ದಂಡೇ ಜಮಾಯಿಸಿತ್ತು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮಾರ್ಗಸೂಚಿಯನ್ನು ಉಲ್ಲಂಘಿಸದಂತೆ ನೋಡಿಕೊಳ್ಳಲು ಪೊಲೀಸರು ಸ್ಥಳದಲ್ಲಿದ್ದರು.

    ಗುರ್ಜರ್ ಅವರು ತಮ್ಮ ಪತ್ನಿ ರಾಮಾ ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಿ ‘ಸ್ವೀಟ್ ಹೋಮ್’ಗೆ ಪ್ರಯಾಣಿಸುವ ಕನಸು ಹೊಂದಿದ್ದರು. ಇದಕ್ಕಾಗಿ ಅವರು 7 ಲಕ್ಷ ರೂ. ನೀಡಿ ಚಾಪರ್ ಬುಕ್ ಮಾಡಿದ್ದರು.

  • ತನ್ನ ಬಾಯಿ ಮೂಲಕ ಪತಿಗೆ ಉಸಿರು ನೀಡಲು ಯತ್ನಿಸಿದ ಪತ್ನಿ!

    ತನ್ನ ಬಾಯಿ ಮೂಲಕ ಪತಿಗೆ ಉಸಿರು ನೀಡಲು ಯತ್ನಿಸಿದ ಪತ್ನಿ!

    – ವಿಫಲವಾಯ್ತು ಹೆಂಡ್ತಿಯ ಅವಿರತ ಪ್ರಯತ್ನ

    ಲಕ್ನೋ: ಮಹಾಮಾರಿ ಕೊರೊನಾ ವೈರಸ್ ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಈ ಮಧ್ಯೆ ಹಲವಾರು ಮನಕಲಕುವ ದೃಶ್ಯಗಳು ನಡೆದು ಹೋಗಿವೆ, ಇನ್ನೂ ನಡೆಯುತ್ತಲೇ ಇವೆ. ಸದ್ಯ ಪತಿ ಹಾಗೂ ಪತ್ನಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಫೋಟೋ ನೋಡಿ ಮೂಕವಿಸ್ಮಿತರಾಗಿದ್ದಾರೆ.

    ಹೌದು. ಮಹಿಳೆಯೊಬ್ಬರು ಆಟೋದಲ್ಲಿ ಕುಳಿತುಕೊಂಡು ತನ್ನ ಪತ್ನಿಯನ್ನು ಕೊರೊನಾದಿಂದ ಬಚಾವ್ ಮಾಡಲು ಅವಿರತ ಪ್ರಯತ್ನ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ಮಹಿಳೆಯನ್ನು ರೇಣು ಸಿಂಘಾಲ್ ಎಂದು ಗುರುತಿಸಲಾಗಿದೆ.

    ರೇಣು ಅವರು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ತಮ್ಮ ಪತಿ ರವಿ ಸಿಂಘಾಲ್ ಬಾಯಿಗೆ ತನ್ನ ಬಾಯಿಯಿಟ್ಟು ಉಸಿರು ನೀಡುವ ಮೂಲಕ ಹೃದಯ ಮತ್ತು ಶ್ವಾಸಕೋಶ ಪ್ರಚೋದಿಸಲು ಯತ್ನಿಸಿದ್ದಾರೆ. ಇದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಿದ್ದು, ಈ ಫೋಟೋ ವೈರಲ್ ಆಗಿದೆ.

    ದುರ್ದೈವ ಅಂದರೆ ಮಹಿಳೆಯ ಪ್ರಯತ್ನ ವಿಫಲವಾಗಿದೆ. ಪತಿ ಆಟೋದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ನಂತರ ಆಗ್ರಾದ ಎಸ್‍ಎನ್ ಮೆಡಿಕಲ್ ಆಸ್ಪತ್ರೆಯಲ್ಲೂ ರವಿ ನಿಧನರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

    ಒಟ್ಟಿನಲ್ಲಿ ದೇಶದಲ್ಲಿ ಮಹಾಮಾರಿಯಿಂದಾಗಿ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಒಂದೆಡೆ ಆಸ್ಪತ್ರೆಯಲ್ಲಿ ಬೆಡ್ ಗಾಗಿ ಜನ ಪರದಾಡುತ್ತಿದ್ದರೆ, ಇನ್ನೊಂದೆಡೆ ಆಕ್ಸಿಜನ್ ಸಿಗದೆ ಜನ ನರಳಾಡುತ್ತಿದ್ದಾರೆ.

  • 4 ಲಕ್ಷ ಬಿಲ್ ಕೇಳಿದ್ದಕ್ಕೆ ಪತಿಯ ಮೃತದೇಹ ಬಿಟ್ಟು ಊರಿಗೆ ತೆರಳಿದ ಪತ್ನಿ..!

    4 ಲಕ್ಷ ಬಿಲ್ ಕೇಳಿದ್ದಕ್ಕೆ ಪತಿಯ ಮೃತದೇಹ ಬಿಟ್ಟು ಊರಿಗೆ ತೆರಳಿದ ಪತ್ನಿ..!

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆಯಿಂದ ಜನ ಕಂಗಾಲಾಗಿದ್ದಾರೆ. ಒಂದೆಡೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಪರದಾಡುತ್ತಿದ್ದರೆ, ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳ ಧನದಾಹಕ್ಕೆ ಜನ ನಲುಗಿ ಹೋಗಿದ್ದಾರೆ.

    ಹೌದು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಿಲ್ ಕಟ್ಟಲು ಆಗದೇ ಪತಿಯ ಮೃತದೇಹವನ್ನೇ ಪತ್ನಿ ಬಿಟ್ಟು ಹೋದ ಪ್ರಸಂಗ ನಡೆದಿದೆ. ಆಸ್ಪತ್ರೆಯ ಬಿಲ್ ಕಟ್ಟಿಲ್ಲ ಅಂತ ಮೃತದೇಹ ನೀಡಿಲ್ಲ ಎಂದು ಮೃತ ಸೋಂಕಿತನ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

    ಕಳೆದ ನಾಲ್ಕು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿಯೇ ಮೃತದೇಹವಿದೆ. ಆಸ್ಪತ್ರೆ ಸಿಬ್ಬಂದಿ 4 ಲಕ್ಷ ಬಿಲ್ ಕಟ್ಟುವಂತೆ ಹೇಳಿದ್ದಾರೆ. ಇದರಿಂದ ದಿಕ್ಕು ತೋಚದ ಮಹಿಳೆ, 4 ಲಕ್ಷ ಹಣ ಇಲ್ಲ, ನೀವೇ ಅಂತ್ಯಸಂಸ್ಕಾರ ಮಾಡಿ ಎಂದು ಹೇಳಿ ಊರಿಗೆ ತೆರಳಿದ್ದಾರೆ.

    ನನ್ನ ತಂದೆಗೆ 4 ದಿನಗಳಿಂದ ಹುಷಾರು ಇರಲಿಲ್ಲ. ಸ್ವಲ್ಪ ಜ್ವರ ಕೆಮ್ಮು ಇತ್ತು. ನಂತರ ಕೊರೊನಾ ಚೆಕ್ ಮಾಡಿಸಿದ್ವಿ. ಆಗ ಕೊರೊನಾ ಪಾಸಿಟಿವ್ ಬಂತು. ಬಿಬಿಎಂಪಿಯವರಿಗೆ ಕಾಲ್ ಮಾಡಿದ್ವಿ. ಆದರೆ ಬಿಬಿಎಂಪಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಾವು ಮೊದಲು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಹೋದ್ವಿ. 1 ಗಂಟೆಯ ನಂತರ ಕಣ್ವ ಆಸ್ಪತ್ರೆಗೆ ಅಡ್ಮಿಟ್ ಮಾಡಿಸಿದ್ರು. ಮೊದಲಿಗೆ 50 ಸಾವಿರ ಅಡ್ವಾನ್ಸ್ ಹಣ ಕಟ್ಟಿ ಅಂದ್ರು. ನಮ್ಮ ಬಳಿ ಹಣ ಇರಲಿಲ್ಲ. ಹಾಗಾಗಿ 20 ಸಾವಿರ ಕಟ್ಟಿದ್ವಿ. ಕಣ್ವ ಆಸ್ಪತ್ರೆಯಲ್ಲಿ ಯಾವುದೇ ರೀತಿಯಲ್ಲಿ ಚಿಕಿತ್ಸೆ ನೀಡಲಿಲ್ಲ. ಇತ್ತ ತಂದೆ, ನನ್ನನ್ನ ಈ ಆಸ್ಪತ್ರೆಯಲ್ಲಿ ಇರಿಸಿದ್ರೆ ಸಾಯಿಸ್ತಾರೆ. ಬೇರೆ ಆಸ್ಪತ್ರೆಗೆ ಸೇರಿಸು ಎಂದು ವಿಡಿಯೋ ಕಾಲ್‍ನಲ್ಲಿ ಹೇಳಿದ್ರು. ಮೊದಲಿಗೆ ಶೇ.30ರಷ್ಟು ಸೋಂಕಿನಿಂದ ಗುಣಮುಖ ಆಗಿದ್ದಾರೆ ಅಂದ್ರು. ಆದಾಗಿ ಎರಡು ದಿನಗಳ ನಂತರ ಅಪ್ಪ ತೀರಿಕೊಂಡ್ರು ಎಂದು ಸೋಂಕಿತನ ಮಗಳು ಗಂಭೀರ ಆರೋಪ ಮಾಡಿದ್ದಾರೆ.

    ಮೃತ ಸೋಂಕಿತನಿಗೆ 39 ವರ್ಷ ವಯಸ್ಸಾಗಿದ್ದು, ಮೂಲತಃ ವಿಜಯಪುರದವರಾಗಿದ್ದಾರೆ. ಐದು ವರ್ಷದಿಂದ ಬೆಂಗಳೂರಿನ ಬಾಡಿಗೆ ಮನೆಯಲ್ಲಿದ್ರು.

  • ಪತಿಯನ್ನು ಬಿಟ್ಟು ಬಂದ 3 ಮಕ್ಕಳ ತಾಯಿ- ಪ್ರಿಯತಮನೇ ಮಚ್ಚಿನಿಂದ ಕೊಚ್ಚಿ ಕೊಂದ

    ಪತಿಯನ್ನು ಬಿಟ್ಟು ಬಂದ 3 ಮಕ್ಕಳ ತಾಯಿ- ಪ್ರಿಯತಮನೇ ಮಚ್ಚಿನಿಂದ ಕೊಚ್ಚಿ ಕೊಂದ

    – ಪ್ರಿಯತಮನಿಂದಲೇ ಮಹಿಳೆಯ ಕೊಲೆ

    ಮೈಸೂರು: ಪತಿಯನ್ನು ಬಿಟ್ಟು ಪ್ರಿಯತಮನ ಜೊತೆ ಬಂದಿದ್ದ ಮೂರು ಮಕ್ಕಳ ತಾಯಿಯನ್ನು ಆತನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳವಾಡಿಯಲ್ಲಿ ನಡೆದಿದೆ.

    ಪ್ರೀತಿ ಕುಮಾರಿ (25) ಮೃತ ಮಹಿಳೆ. ಈಕೆಯ ಅತ್ತೆ ಮಗ ಕಿರಣ್ ಕೊಲೆ ಮಾಡಿದ್ದಾನೆ. ಮೂಲತಃ ಎಚ್.ಡಿ.ಕೋಟೆ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಪ್ರೀತಿ ಕುಮಾರಿ, ಪತಿ ತೊರೆದು ಅತ್ತೆ ಮಗ ಕಿರಣ್ ಜೊತೆಗೆ ವಾಸವಿದ್ದಳು. ಆದರೆ ಕಿರಣ್ ವಿಪರೀತ ಕಿರುಕುಳ ನೀಡುತ್ತಿದ್ದ. ಈ ಹಿನ್ನೆಲೆ ಮನೆ ಬಿಟ್ಟು ಹೊಗುತ್ತೇನೆ ಎಂದು ಪ್ರೀತಿ ಹೇಳಿದ್ದಳು. ಇದರಿಂದ ಸಿಟ್ಟಿಗೆದ್ದ ಕಿರಣ್, ಜನರು ಇರುವಾಗಲೇ ಮನೆ ಒಳಗೆ ಎಳೆದುಕೊಂಡು ಹೋಗಿ ಮಚ್ಚಿನಿಂದ ಪ್ರೀತಿ ಕುಮಾರಿ ಮೇಲೆ ಹಲ್ಲೆ ನಡೆಸಿದ್ದಾನೆ.

    ಇದರಿಂದಾಗಿ ತಲೆ, ಕೈ, ಹೊಟ್ಟೆ ಭಾಗಕ್ಕೆ ತೀರ್ವ ಗಾಯಗಳಾಗಿದ್ದವು. ತಕ್ಷಣವೇ ಪ್ರೀತಿ ಕುಮಾರಿಯನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಪ್ರೀತಿ ಸಾವನ್ನಪ್ಪಿದ್ದಾಳೆ. ಬಳಿಕ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಜಯನಗರ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದೆ.

  • ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಕೊಂದು ಚಿನ್ನ ದೋಚಿದ..!

    ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಕೊಂದು ಚಿನ್ನ ದೋಚಿದ..!

    – ಟ್ಯೂಷನ್ ಕೊಡಲು ಬಂದ ಶಿಕ್ಷಕಿಯನ್ನೂ ಹತ್ಯೆಗೈದ

    ಜೆಮ್‍ಶೆಡ್‍ಪುರ್: ವ್ಯಕ್ತಿಯೊಬ್ಬ ಇಬ್ಬರು ಅಪ್ರಾಪ್ತ ಬಾಲಕಿಯರು ಸೇರಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿರುವ ಘಟನೆ ಕಡ್ಮಾ ಪೊಲೀಸ್ ಠಾಣಾ ವ್ಯಾಪ್ತಿಯ ಟಿಸ್ಟಾ ರಸ್ತೆಯಲ್ಲಿರುವ ವಸತಿ ಕ್ವಾಟ್ರಸ್ ನಲ್ಲಿ ನಡೆದಿದೆ.

    ಆರೋಪಿಯನ್ನು ದೀಪಕ್ ಕುಮಾರ್(42) ಎಂದು ಗುರುತಿಸಲಾಗಿದೆ. ಈತ ಟಾಟಾ ಸ್ಟೀಲ್ ಕಂಪನಿಯ ಉದ್ಯೋಗಿ. ಸೋಮವಾರ ಮಧ್ಯಾಹ್ನದ ವೇಳೆಯಲ್ಲಿ ದೀಪಕ್ ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಸೇರಿ ನಾಲ್ವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.

    ಕೊಲೆಯಾದ ಪತ್ನಿಯನ್ನು ವೀಣಾ ಕುಮಾರಿ(35) ಹಾಗೂ ಅಪ್ರಾಪ್ತ ಮಕ್ಕಳನ್ನು ದಿಯಾ ಕುಮಾರಿ(15) ಹಾಗೂ ಸಂವಿ ಕುಮಾರಿ(11) ಜೊತೆಗೆ ಈ ಇಬ್ಬರು ಮಕ್ಕಳಿಗೆ ಟ್ಯೂಷನ್ ನೀಡುತ್ತಿರುವ ಶಿಕ್ಷಕಿ ರಿಂಕಿ ಘೋಷ್(22) ಹೀಗೆ ನಾಲ್ವರನ್ನು ದೀಪಕ್ ಕೊಲೆ ಮಾಡಿದ್ದಾನೆ.

    ಕಡ್ಮಾದ ರಂಜನಂ ನಗರದಲ್ಲಿ ವಾಸವಾಗಿರುವ ರಿಂಕಿ ಘೋಷ್ ಸೋಮವಾರ ಬೆಳಗ್ಗೆ 11 ಗಂಟೆಗೆ ದಿಯಾ ಹಾಗೂ ಸಂವಿಗೆ ಟ್ಯೂಶನ್ ಕೊಡಲು ಬಂದಿದ್ದರು. ಹೀಗೆ ಬಂದ ರಿಂಕಿ ಮಧ್ಯಾಹ್ನ 1 ಗಂಟೆಯಾದರೂ ತನ್ನ ಮನೆಗೆ ವಾಪಸ್ ಹೋಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಿಂಕಿ ಪೋಷಕರು ಆಕೆಯನ್ನು ಹುಡುಕಿಕೊಂಡು ದೀಪಕ್ ನಿವಾಸಕ್ಕೆ ಬಂದಿದ್ದಾರೆ.

    ಈ ವೇಳೆ ದೀಪಕ್ ಮನೆಯಲ್ಲಿ ಏನೋ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಅಂತೆಯೇ ರಿಂಕಿ ಪೋಷಕರು ಮನೆಯ ಬಾಗಿಲು ಒಡೆದು ನೋಡಿದ್ದಾರೆ. ಈ ವೇಳೆ ಅಡುಗೆ ಮನೆಯಲ್ಲಿ ರಿಂಕಿ ಸೇರಿದಂತೆ ನಾಲ್ವರ ಮೃತದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ದಂಗಾಗಿ ಹೋಗಿದ್ದಾರೆ.

    ಇತ್ತ ಮೃತ ಮಹಿಳೆ ವೀಣಾ ಸಹೋದರ ವಿನೋದ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ಮಧ್ಯಾಹ್ನದ ಬಳಿಕ ಸಹೋದರಿ ಮನೆಗೆ ಬಂದೆ. ಈ ವೇಳೆ ಮನೆಯ ಬಾಗಿಲು ಮುಚ್ಚಿತ್ತು. ಆದರೆ ಒಳಗಡೆ ಎಸಿ ಆನ್ ಆಗಿತ್ತು. ಹೀಗಾಗಿ ಮನೆಯೊಳಗೆ ಇದ್ದಾರೆ ಅಂತ ಕಿಟಿಕಿ ಮೂಲಕ ನೋಡಿದೆ. ಈ ವೇಳೆ ಇಬ್ಬರು ಸೊಸೆಯರ ಹಾಗೂ ಸಹೋದರಿಯ ಮೃತದೇಹ ಬೆಡ್ ಮೇಲೆ ಬಿದ್ದಿರುವುದು ಗಮನಕ್ಕೆ ಬಂತು. ಅಲ್ಲದೆ ಇನ್ನೊಂದು ಕೋಣೆಯಲ್ಲಿ ಶಿಕ್ಷಕಿಯ ಶವ ಬಿದ್ದಿತ್ತು.

    ಹಿಂದಿನ ದಿನ ದೀಪಕ್ ಮನೆಗೆ ಬಂದು ಪತ್ನಿಯ ಒಡವೆಗಳನ್ನು ತೆಗೆದುಕೊಂಡು ಹೋಗಿದ್ದನು. ಅಲ್ಲದೆ ಪತ್ನಿ ಹಾಗೂ ಮಕ್ಕಳನ್ನು ರಾಂಚಿಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕಳುಹಿಸುವುದಾಗಿ ತಿಳಿಸಿದ್ದನು ಎಂದು ವಿನೋದ್ ಕುಮಾರ್ ತಿಳಿಸಿದ್ದಾರೆ.

    ಘಟನಾ ಸ್ಥಳಕ್ಕೆ ನಗರ ಎಸ್‍ಪಿ ಸುಭಾಷ್ ಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಲ್ವರು ಹರಿತವಾದ ಆಯುಧಗಳನ್ನು ಬಳಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • 3.5 ಕೋಟಿ ವಿಮೆ ಹಣಕ್ಕಾಗಿ ಪತಿಯನ್ನೇ ಕೊಂದ ಪತ್ನಿ

    3.5 ಕೋಟಿ ವಿಮೆ ಹಣಕ್ಕಾಗಿ ಪತಿಯನ್ನೇ ಕೊಂದ ಪತ್ನಿ

    – ಸಂಬಂಧಿ ಜೊತೆ ಸೇರಿ ಗಂಡನ ಕೊಲೆಗೆ ಸ್ಕೆಚ್
    – ಬೆಂಕಿ ಹಚ್ಚಿ ಕೊಂದ್ಳು

    ಚೆನ್ನೈ: 62 ವರ್ಷದ ಮಹಿಳೆಯೊಬ್ಬಳು 3.5 ಕೋಟಿ ರೂ. ವಿಮೆ ಹಣಕ್ಕಾಗಿ ಸಂಬಂಧಿಕನ ಜೊತೆ ಸೇರಿ ಪತಿಯನ್ನೇ ಕೊಂದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಮೃತಪಟ್ಟ ವ್ಯಕ್ತಿಯನ್ನು ಕೆ. ರಂಗರಾಜು ಎಂದು ಗುರುತಿಸಲಾಗಿದ್ದು, ಈತ ಈರೋಡ್ ಜಿಲ್ಲೆಯ ತುಡುಪತಿಯ ನಿವಾಸಿಯಾಗಿದ್ದಾನೆ. ಮೃತ ವ್ಯಕ್ತಿ ವಿದ್ಯುತ್ ಮಗ್ಗದ ಘಟಕ ಹೊಂದಿದ್ದು, ಮಾರ್ಚ್ 15 ರಂದು ಅಪಘಾತದಲ್ಲಿ ಗಾಯಗೊಂಡರು. ಹಾಗಾಗಿ ರಂಗರಾಜುನನ್ನು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಬಳಿಕ ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಈ ವೇಳೆ ಪತ್ನಿ ಆರ್. ಜ್ಯೋತಿ ಮಣಿ ಹಾಗೂ ಸಂಬಂಧಿ ರಾಜಾ ರಂಗರಾಜುರನ್ನು ವ್ಯಾನ್‍ನಲ್ಲಿ ಕರೆದೊಯಿದ್ದಾರೆ.

    ರಾತ್ರಿ ಸುಮಾರು 11.30ಕ್ಕೆ ಪೆರುಮನಲ್ಲೂರು ಬಳಿಯ ವಲಸುಪಾಲಯಂನಲ್ಲಿ ವಾಹನವನ್ನು ನಿಲ್ಲಿಸಿ ರಾಜಾ ಹಾಗೂ ಜ್ಯೋತಿಮಣಿ ವಾಹನದಿಂದ ಕೆಳಗೆ ಇಳಿದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ರಂಗರಾಜ್‍ರನ್ನು ಜೀವಂತವಾಗಿ ಸುಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ ರಾಜಾ ಸಾವಿನ ಕುರಿತಂತೆ ತಿರುಪುರ ಗ್ರಾಮೀಣ ಪೊಲೀಸರಿಗೆ ಅಪಘಾತ ನಡೆದಿರುವುದಾಗಿ ಮಾಹಿತಿ ನೀಡಿದ್ದಾನೆ.

    ಈ ಬಗ್ಗೆ ಅನುಮಾನಗೊಂಡ ಪೊಲೀಸರು, ತನಿಖೆ ನಡೆಸಲು ಆರಂಭಿಸಿದಾಗ ಪೆಟ್ರೋಲ್ ಬಂಕ್‍ನಲ್ಲಿ ಆರೋಪಿ ರಾಜಾ ಪೆಟ್ರೋಲ್ ಖರೀದಿಸಿರುವ ದೃಶ್ಯ ಸೆರೆಯಾಗಿದೆ. ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿ ರಾಜಾ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ವೇಳೆ ರಂಗರಾಜು 1.5 ಕೋಟಿ ಸಾಲ ಮಾಡಿದ್ದು, ಜ್ಯೋತಿಮಣಿಗೆ ಹಣಕ್ಕಾಗಿ ಪೀಡಿಸುತ್ತಿದ್ದನು. ರಂಗರಾಜು ಹೆಸರಿನಲ್ಲಿ 3.5 ಕೋಟಿ ವಿಮೆ ಹಣವಿದ್ದರಿಂದ ಜ್ಯೋತಿ ಮಣಿ ಹಾಗೂ ನಾನು ಸಂಚು ರೂಪಿಸಿ ಕೊಲೆ ಮಾಡಲು ನಿರ್ಧರಿಸೆದೇವು. ಅಲ್ಲದೆ ಜ್ಯೋತಿ ಮಣಿ ಕೊಲೆ ಮಾಡಲು ನನಗೆ ಮುಂಗಡವಾಗಿ 50,000 ರೂ ಹಣ ನೀಡಿದ್ದು, ಕೊಲೆ ನಂತರ 1 ಲಕ್ಷ ರೂ. ಹಣ ನೀಡುವುದಾಗಿ ತಿಳಿಸಿದ್ದಳು ಎಂದು ಹೇಳಿದ್ದಾನೆ.

    ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

  • ಚಿಕನ್, ನೂಡಲ್ಸ್ ತಿಂದು ನಿದ್ದೆಗೆ ಜಾರಿದ ಪ್ರಿಯಕರ- ಮರ್ಮಾಂಗ ಕತ್ತರಿಸಿದ ಪ್ರೇಯಸಿ

    ಚಿಕನ್, ನೂಡಲ್ಸ್ ತಿಂದು ನಿದ್ದೆಗೆ ಜಾರಿದ ಪ್ರಿಯಕರ- ಮರ್ಮಾಂಗ ಕತ್ತರಿಸಿದ ಪ್ರೇಯಸಿ

    ತೈಪೆ: ಪ್ರಿಯಕರನ ಮರ್ಮಾಂಗವನ್ನು ಕತ್ತರಿಸಿ ಟಾಯ್ಲಟ್ ಕಮೋಡ್‍ನಲ್ಲಿ ಬೀಸಾಡಿ ಪ್ರೇಯಸಿ ಪೊಲೀಸರಿಗೆ ಶರಣಾಗಿರುವ ಘಟನೆ  ತೈವಾನ್‍ನಲ್ಲಿ ನಡೆದಿದೆ.

    ಪ್ರೇಯಸಿಯಿಂದ ಹಲ್ಲೆಗೊಳಗಾದ ಯುವಕನನ್ನು ಹೌಂಗ್ (52) ಎಂದು ಗುರುತಿಸಲಾಗಿದೆ. ಈತ ಕೌಂಡಿಯ ಕ್ಸಿಹು ಟೌನ್‍ಶಿಪ್ ನಿವಾಸಿ. ಈತನ ಗೆಳತಿ ಫುಂಗ್(40), ತೈವಾನ್ ಗಾಢ ನಿದ್ರೆಗೆ ಜಾರಿದ್ದಾಗ ಅವನಿಗೆ ತಿಳಿಯದಂತೆ  ಈ ಕೃತ್ಯ ಎಸಗಿದ್ದಾಳೆ.

    ಹೌಂಗ್ ಚಿಕನ್, ನೂಡಲ್ಸ್ ತಿಂದು ಗಾಢ ನಿದ್ರೆಗೆ ಜಾರಿದ್ದನು. ಈ ವೇಳೆ ಫುಂಗ್ ಅಡಿಗೆ ಮನೆಯಲ್ಲಿ ಇದ್ದ ಕತ್ತರಿಯನ್ನು ತೆಗೆದುಕೊಂಡು ಬಂದು ಪ್ರಿಯಕರನ ಮರ್ಮಾಂಗವನ್ನು ಕತ್ತರಿಸಿ ಟಾಯ್ಲೆಟ್ ಕಮೋಡ್‍ನಲ್ಲಿ ಹಾಕಿ ನೀರು ಬಿಟ್ಟಿದ್ದಾಳೆ. ಇತ್ತ ಹೌಂಗ್‍ಗೆ ತೀವ್ರ ರಕ್ತಸ್ರಾವದಿಂದ ಎಚ್ಚರಗೊಂಡಾಗ ಆತನ ಮರ್ಮಾಂಗ ಕತ್ತರಿಸಿರುವುದು ಬೆಳಕಿಗೆ ಬಂದಿದೆ.

    ಇತ್ತ ಪ್ರೇಯಸಿ ಪೊಲೀಸ್ ಠಾಣೆಗೆ ತೆರಳಿ ತನ್ನ ತಪ್ಪುನ್ನು ಒಪ್ಪಿಕೊಂಡು ಶರಣಾಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕತ್ತರಿಸಿದ ಮರ್ಮಾಂಗವನ್ನು ಹುಡುಕುತ್ತಿದ್ದಾರೆ.

    ಹೌಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಮಾರ್ಂಂಗದ 1.5 ಸೆಂಟಿಮೀಟರ್ ಭಾಗವನ್ನು ಪ್ರೇಯಸಿ ಕತ್ತರಿಸಿದ್ದಾಳೆ. ಅದರೆ ಅವನ ವೃಷಣಗಳು ಹಾಗೇ ಇವೆ. ಇನ್ನು ಮುಂದೆ ಲೈಂಗಿಕ ಕ್ರೀಯೆಯನ್ನು ನಡೆಸುವುದು ಅಸಾಧ್ಯ ಎಂದು ವೈದ್ಯರು ಹೇಳಿದ್ದಾರೆ. ಈಗ ಕೃತಕ ಮರ್ಮಾಂಗವನ್ನು ಜೋಡಿಸುತ್ತೇವೆ ಎಂದು ಹೇಳಿದ್ದಾರೆ.

    ಪ್ರೇಯಸಿ ಫುಂಗ್ ವಿಯೆಟ್ನಾಂ ಮೂಲದವಳಾಗಿದ್ದಾಳೆ. ತನ್ನ ಪತಿಯಿಂದ ಡಿವೋರ್ಸ್ ಪಡೆದ ನಂತರ ಹೌಂಗ್ ಪರಿಚಯವಾಗಿತ್ತು. ಕಳೆದ ಕೆಲವು ತಿಂಗಳಿದಂದ ಇಬ್ಬರ ನಡುವೆ ಜಗಳವಾಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.