Tag: ಪತಿ

  • ಪತಿಯನ್ನೇ ಕೊಂದ ಪತ್ನಿ- ಪುತ್ರ, ಪ್ರಿಯತಮನ ಸಾಥ್

    ಪತಿಯನ್ನೇ ಕೊಂದ ಪತ್ನಿ- ಪುತ್ರ, ಪ್ರಿಯತಮನ ಸಾಥ್

    ಚಿಕ್ಕೋಡಿ: ಪತ್ನಿಯ ಅನೈತಿಕ ಸಂಭಂಧವನ್ನು ಪತಿ  ಪ್ರಶ್ನಿಸಿದ್ದಕ್ಕೆ ಪತ್ನಿ, ಪುತ್ರ ಹಾಗೂ ಆಕೆಯ ಪ್ರಿಯತಮ ಸೇರಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ.

    ಕುಮಾರ ರಾಮು ಖೋತ (39) ಮೃತನಾಗಿದ್ದಾನೆ. ಪತ್ನಿಯಿಂದ ಕೊಲೆಯಾದ ಈತ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ನಿವಾಸಿಯಾಗಿದ್ದನು. ಚಿಂಚಲಿ ಪಟ್ಟಣದ ಬಾಳೇಶ ಶ್ರೀಕಾಂತ ಹಾರೂಗೇರಿ, ಸಚಿನ್ ಕುಮಾರ ಖೋತ, ಗೀತಾ ಕುಮಾರ ಖೋತ, ಬೆಳಕೂಡ ಗ್ರಾಮದ ಅಪ್ಪಾಸಾಬ ಜಿನ್ನಾಪ್ಪಾ ತಪಕಿರೆ ಹಾಗೂ ಸಂತೋಷ ನೇಮಿನಾಥ ತಪಕಿರೆ ಬಂಧಿತ ಆರೋಪಿಗಳಾಗಿದ್ದಾರೆ.

    ಮೃತ ಕುಮಾರ ರಾಮು ಖೋತ ಪತ್ನಿ ಗೀತಾ ಕುಮಾರ ಖೋತ ಕುಡಚಿ ಪೊಲೀಸ್ ಠಾಣೆಗೆ ಜೂ.02 ರಂದು ಬಂದು ಠಾಣೆಯಲ್ಲಿ ಪತಿಯ ಬಗ್ಗೆ ಪ್ರಕರಣ ದಾಖಲಿಸಿದ್ದಾಳೆ.ನನ್ನ ಪತಿ ಮೇ. 27 ರಂದು ಸಾವನಪ್ಪಿದ್ದು, ನನ್ನ ಪತಿಯನ್ನು ಯಾರೋ ಆರೋಪಿತರು ಯಾವುದೋ ಕಾರಣಕ್ಕಾಗಿ ಯಾವುದೋ ಆಯುಧದಿಂದ ತಲೆಗೆ ಹೊಡೆದು ಭಾರಿ ಗಾಯಪಡಿಸಿ ಕೊಲೆ ಮಾಡಿದ್ದಾರೆ. ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಬಿಳಿಯ ಪ್ಲಾಸ್ಟಿಕನಲ್ಲಿ ಕಟ್ಟಿ ಮೃತದೇಹವನ್ನು ಕೃಷ್ಣಾ ನದಿಯಲ್ಲಿ ಒಗೆದು ಸಾಕ್ಷಿ ನಾಶ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಇದನ್ನೂ ಓದಿ: ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ರಾಧಿಕಾ ಪಂಡಿತ್

    ಪೊಲೀಸರ ತನಿಖೆ ವೇಳೆ ಗೀತಾಗೆ ಚಿಂಚಲಿ ಗ್ರಾಮದ ಬಾಳೇಶ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಇದು ಕುಮಾರ ಖೋತನಿಗೆ ಗೊತ್ತಾಗಿ ಜಗಳ ಮಾಡಿದ್ದನು. ಈ ವೇಳೆ ಗೀತಾ ಪತಿಯ ಮೇಲೆ ಸಿಟ್ಟಾಗಿ ಮೃತನ ಹೆಂಡತಿ, ಮಗ ಸಚಿನ ಮತ್ತು ಬಾಳೇಶ ಹಾರೂಗೇರಿ ಕೂಡಿ ಕೊಲೆ ಸಂಚು ರೂಪಿಸಿ ಜೂ.27 ರಂದು ಕುಮಾರನಿಗೆ ಸಾರಾಯಿ ಕುಡಿಸಿ ಕಲ್ಲಿನಿಂದ ತಲೆಗೆ, ಎದೆಗೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಮೃತನ ಶವವನ್ನು ಮೃತನ ಮಗ ಸಚಿನ್ ಹಾಗೂ ಬಾಳೇಶ ಇಬ್ಬರೂ ತೆಗೆದುಕೊಂಡು ಹೋಗಿ ಸಾಕ್ಷಿ ಹಾಳು ಮಾಡಲು ಚಿಂಚಲಿ ಜಾಕವೆಲ್ ಹತ್ತಿರ ಕೃಷ್ಣಾ ನದಿಯಲ್ಲಿ ಎಸೆದು ಹೋಗಿದ್ದಾರೆ ಎಂದು ಪೊಲೀಸರ ಬಳಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ : ಸಿಎಂ ಬದಲಾವಣೆ ಚರ್ಚೆಯಿಂದ ಸರ್ಕಾರದ ಇಮೇಜಿಗೆ ಧಕ್ಕೆ ಬರಲಿದೆ: ಶೆಟ್ಟರ್

    ಕುಡಚಿ ಪೊಲೀಸರು ಐದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಸದ್ಯ ಆರೋಪಿತರು ನ್ಯಾಯಾಂಗ ಬಂಧನದಲ್ಲಿದ್ದಾರೆ.

  • ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆಗೆ ಶರಣು

    ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆಗೆ ಶರಣು

    ಹುಬ್ಬಳ್ಳಿ: ಮದುವೆಯಾಗಿ ಎರಡು ಮಕ್ಕಳಿದ್ದರೂ ಪತ್ನಿ ತನ್ನ ಜೊತೆಗೆ ಇಲ್ಲದೇ ಬೇರೆಯವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ.

    ನಗರದ ಅಂಚಟಗೇರಿಯ ನಿವಾಸಿ ಬೂದಪ್ಪ ಕೋರಿಗೆ 23 ವರ್ಷಗಳ ಹಿಂದೆಯೇ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಆದರೆ ತನ್ನ ಪತ್ನಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮನನೊಂದು ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಆತ್ಮಹತ್ಯೆಗೂ ಮುನ್ನ ಮೃತ ಬೂದಪ್ಪ ಕೋರಿ ಡೆತ್ ನೋಟ್ ಬರೆದಿದ್ದು, ಪತ್ನಿ ಬೇರೆಯವರ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿದ್ದಾನೆ. ನಗರದ ಡಾ.ಎಂ.ಎಂ.ಜೋಶಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನನ್ನ ಪತ್ನಿ ಕಳೆದ ಎರಡು ವರ್ಷಗಳಿಂದ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಬರೆದಿದ್ದಾನೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ಕೈಗೊಂಡಿದ್ದಾರೆ.

  • ಪತಿಯ ಸಮ್ಮುಖದಲ್ಲಿಯೇ ಪ್ರೇಮಿಯ ಜೊತೆ ಪತ್ನಿಯ ಮದುವೆ

    ಪತಿಯ ಸಮ್ಮುಖದಲ್ಲಿಯೇ ಪ್ರೇಮಿಯ ಜೊತೆ ಪತ್ನಿಯ ಮದುವೆ

    – ಮದ್ವೆ ಬಳಿಕ ಇಬ್ಬರದ್ದೂ ಭಿನ್ನ ಹೇಳಿಕೆ

    ಪಾಟ್ನಾ: ಪತಿಯೇ ತನ್ನ ಪತ್ನಿಯ ಮದುವೆಯನ್ನ ಆಕೆಯ ಪ್ರಿಯಕರನ ಜೊತೆ ಮಾಡಿಸಿರುವ ಘಟನೆ ಬಿಹಾರದ ಛಪ್ರಾದಲ್ಲಿ ನಡೆದಿದೆ. ಛಪ್ರಾದ ವಾರ್ಡ್-45ರ ಗೇಗಟಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದುವೆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಮದುವೆ ಬಳಿಕ ಕಳೆದ ಆರು ತಿಂಗಳಿನಿಂದ ಪತ್ನಿ ಮತ್ತು ಯುವಕ ಪ್ರೇಮಪಾಶದಲ್ಲಿ ಸಿಲುಕಿದ್ದರು. ಹಾಗಾಗಿ ಪತ್ನಿಯ ಇಚ್ಛೆಯಂತೆ ಪ್ರಿಯಕರನ ಜೊತೆ ಮದುವೆ ಮಾಡುತ್ತಿದ್ದೇನೆ. ನಾನು ಮತ್ತೊಂದು ಮದುವೆಯಾಗಿ ಮಗು ಸಾಕುತ್ತೇನೆ ಎಂದು ಪತಿ ಹೇಳಿದ್ದಾನೆ.

    ಇತ್ತ ಮದುವೆ ಬಳಿಕ ಪತ್ನಿ, ನನ್ನ ಮೇಲೆ ಆತ ಹಲ್ಲೆ ನಡೆಸುತ್ತಿದ್ದನು. ಈಗ ಹೊಡೆಯಲು ಬಂದ್ರೆ ನಾನು ತಿರುಗಿ ಹೊಡೆಯುತ್ತೇನೆ. ಯುವಕನನ್ನು ಇಷ್ಟಪಟ್ಟು ಮದುವೆಯಾಗಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ. ಇತ್ತ ಯುವಕ, ಆಕೆಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾನೆ.

    ವೀಡಿಯೋದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿಯೇ ಮದುವೆ ನಡೆದಿದೆ. ಇತ್ತ ಪತಿ ಮಾತ್ರ ಖುಷಿಯಿಂದಲೇ ಪತ್ನಿ ಮದುವೆ ಮಾಡಿಸಿ ಯುವಕನ ಜೊತೆ ಕಳುಹಿಸಿದ್ದಾನೆ. ದಂಪತಿಯ ಮಗು ಪತಿ ಬಳಿಯಲ್ಲಿದೆ. ಇದನ್ನೂ ಓದಿ: ಭೂಮಿ ಮೇಲೆ ಕೊರೊನಾ ಇದೆ – ವಿಶೇಷ ವಿಮಾನದಲ್ಲಿ ಮದುವೆ

  • ಮೂರು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಬಲಿ

    ಮೂರು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಬಲಿ

    ಬಳ್ಳಾರಿ: ಕೇವಲ ಮೂರು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಕೊರೊನಾ ಸೋಂಕಿಗೆ ಬಲಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಮದಿರೆ ಗ್ರಾಮದಲ್ಲಿ ನಡೆದಿದೆ.

    ಒಂದೇ ಕುಟುಂಬದ ಗಂಡ-ಹೆಂಡತಿ ಮತ್ತು ಮಗಳು ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಮದಿರೆ ಗ್ರಾಮದ ಸುನೀತಮ್ಮ (45), ರುದ್ರಪ್ಪ (56) ಹಾಗೂ ನಂದಿನಿ (22) ಮೃತಪಟ್ಟಿದ್ದಾರೆ.

    ಕಳೆದ ಒಂದು ತಿಂಗಳ ಹಿಂದೆ ಮೊದಲಿಗೆ ರುದ್ರಪ್ಪ ಅವರ ಮಗ ತಿಪ್ಪೇಸ್ವಾಮಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು, ನಂತರ ಚಿಕಿತ್ಸೆ ಪಡೆದ ಬಳಿಕ ಗುಣಮುಖರಾಗಿದ್ದರು. ಆದರೆ ಹೈದ್ರಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದ ಮಗಳು ನಂದಿನಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಹೈದರಾಬಾದ್ ನಿಂದ ಗ್ರಾಮಕ್ಕೆ ಮರಳಿದ್ದಳು. ಗ್ರಾಮಕ್ಕೆ ಬಂದ ಬಳಿಕ ಮಗಳ ಕೋವಿಡ್ ಪರೀಕ್ಷೆ ಮಾಡಿದಾಗ ನಂದಿನಿಗೆ ಕೊರೊನಾ ಸೋಂಕು ಇರುವುದು ದೃಢವಾದ ಹಿನ್ನೆಲೆಯಲ್ಲಿ ಮಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.

    ಆಗ ಮನೆಯಲ್ಲಿ ಇದ್ದ ಉಳಿದ ಮೂವರಿಗೂ ಕೋವಿಡ್ ಪರೀಕ್ಷೆ ಮಾಡಿದಾಗ ಮೂವರಲ್ಲಿಯೋ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಇವರನ್ನು ಸಹ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಕಳೆದ ಎರಡು ದಿನಗಳ ಹಿಂದೆ ತಾಯಿ ಸುಮಿತಮ್ಮ ಹಾಗೂ ಮಗಳು ನಂದಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

    ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆ ರುದ್ರಪ್ಪಾ ಸಹ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಕೇವಲ ಮೂರು ದಿನಗಳ ಅಂತರದಲ್ಲಿ ಮನೆಯ ಮೂರು ಮಂದಿಯನ್ನು ಕೊರೊನಾ ಸೋಂಕು ಬಲಿಪಡೆದಿದೆ. ಅದೃಷ್ಟವಶಾತ್ ಸೋಂಕಿನಿಂದ ಮಗ ಪಾರಾಗಿದ್ದಾನೆ.

  • ನೋಡ ನೋಡುತ್ತಿದ್ದಂತೆ ಪತಿ, ಅತ್ತೆ ಮುಂದೆಯೇ ನದಿಗೆ ಜಿಗಿದ ಮಹಿಳೆ

    ನೋಡ ನೋಡುತ್ತಿದ್ದಂತೆ ಪತಿ, ಅತ್ತೆ ಮುಂದೆಯೇ ನದಿಗೆ ಜಿಗಿದ ಮಹಿಳೆ

    – 40 ಅಡಿ ಎತ್ತರದ ಸೇತುವೆ ಮೇಲಿಂದ ಜಂಪ್

    ಭೋಪಾಲ್: ಪತಿ, ಅತ್ತೆ ಮತ್ತು ಪುಟ್ಟ ಮಗಳ ಮುಂದೆಯೇ ಮಹಿಳೆ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯನ್ನ ಸ್ಥಳೀಯ ಯುವಕ ರಕ್ಷಿಸುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಖರ್ಗೋನ್ ಜಿಲ್ಲೆಯಿಂದ 45 ಕಿ.ಮೀ.ದೂರದಲ್ಲಿರುವ ಠಿಬಾಗಾಂವ್ ಗ್ರಾಮದ 26 ವರ್ಷದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಭಾನುವಾರ ಪತಿ, ಅತ್ತೆ ಹಾಗೂ 2 ವರ್ಷದ ಮಗಳ ಜೊತೆ ತವರಿಗೆ ತೆರಳುತ್ತಿದ್ದರು. ಈ ವೇಳೆ ಪತಿ-ಪತ್ನಿ ನಡುವೆ ಜಗಳ ನಡೆದಿದೆ. ನರ್ಮದಾ ನದಿಯ ಸೇತುವೆ ಬರುತ್ತಿದ್ದಂತೆ ಬೈಕ್ ನಿಲ್ಲಿಸುವಂತೆ ಮಹಿಳೆ ಹೇಳಿದ್ದಾಳೆ. ಬೈಕ್ ನಿಲ್ಲಿಸಿದ ಕೂಡಲೇ ಮಹಿಳೆ ನೋಡ ನೋಡುತ್ತಿದ್ದಂತೆ 40 ಅಡಿ ಎತ್ತರದ ಸೇತುವೆ ಮೇಲಿಂದ ನದಿಗೆ ಧುಮುಕಿದ್ದಾಳೆ.

    ಇತ್ತ ನದಿಯ ತೀರದಲ್ಲಿ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದ ಯುವಕ ರಾಧೆಶ್ಯಾಮ್ ಕೂಡಲೇ ನೀರಿಗೆ ಧುಮುಕಿ ಮಹಿಳೆಯನ್ನ ರಕ್ಷಿಸಿದ್ದಾರೆ. ನುರಿತ ಈಜುಪಟು ಅಲ್ಲದಿದ್ರೂ ರಾಧೆಶ್ಯಾಮ್ ಮಹಿಳೆಯನ್ನ ರಕ್ಷಿಸಿ ದಡಕ್ಕೆ ತಂದಿದ್ದಾರೆ. ಮಹಿಳೆಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

  • ಮದ್ವೆಯಾಗಿ ಮನೆಗೆ ಬಂದ ಗಂಡ – ಮೊದಲ ಹೆಂಡತಿಯಿಂದ ಚಪ್ಪಲಿ ಏಟು

    ಮದ್ವೆಯಾಗಿ ಮನೆಗೆ ಬಂದ ಗಂಡ – ಮೊದಲ ಹೆಂಡತಿಯಿಂದ ಚಪ್ಪಲಿ ಏಟು

    – ಇತ್ತ 2ನೇ ಪತ್ನಿಯಿಂದಲೂ ಪೊರಕೆ ಸೇವೆ

    ಪಾಟ್ನಾ: ಎರಡನೇ ಮದುವೆಯಾಗಿ ಮನೆಗೆ ಬಂದ ಗಂಡನಿಗೆ ಪತ್ನಿ ಚಪ್ಪಲಿಯಿಂದ ಥಳಿಸಿರುವ ಘಟನೆ ಬಿಹಾರದ ಲಖಿಸರಾಯ ಪೊಲೀಸ್ ಠಾಣಾ ವ್ಯಾಪ್ತಿಯ ಅಮರಪುರ ಗ್ರಾಮದಲ್ಲಿ ನಡೆದಿದೆ.

    ರೂಪೇಶ್ ಕುಮಾರ್ ಪತ್ನಿಯಿಂದರಿಂದ ಥಳಿತಕ್ಕೊಳಗಾದ ಗಂಡ. ಮೂರು ವರ್ಷಗಳ ಹಿಂದೆ ರೂಪೇಶ್ ಗೆ ಮದುವೆಯಾಗಿದ್ದು, ಒಂದು ಹೆಣ್ಣು ಮಗು ಸಹ ಇದೆ. ಕುಟುಂಬಸ್ಥರಿಗೆ ಯಾರಿಗೂ ತಿಳಿಸದೇ ಎರಡನೇ ಮದುವೆ ಆಗಿದ್ದಾನೆ. ಮದುವೆ ಬಳಿಕ ಮೊದಲ ಪತ್ನಿಯ ಮನೆಗೆ ಎರಡನೇ ಹೆಂಡ್ತಿ ಜೊತೆ ಬಂದು ಸ್ವಾಗತ ಮಾಡು ಎಂದು ಆದೇಶಿಸಿದ್ದಾನೆ.

    ಪತಿ ಮದುವೆಯಾದ ವಿಷಯವನ್ನ ತನ್ನ ಸೋದರರಿಗೆ ತಿಳಿಸಿದ ಮೊದಲ ಪತ್ನಿ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರ ಹಾಕಿದ್ದಾರೆ. ಇತ್ತ ಹೊಸ ಕನಸುಗಳೊಂದಿಗೆ ರೂಪೇಶ್ ಜೊತೆ ಸಾಂಸರಿಕ ಜೀವನಕ್ಕೆ ಕಾಲಿಟ್ಟಿದ್ದ ಯುವತಿಗೆ ತಾನು ಮೋಸ ಹೋಗಿರುವುದು ತಿಳಿದಿದೆ. ಆಕೆಯೂ ಸಹ ಮನೆಯಲ್ಲಿದ್ದ ಪೊರಕೆಯಿಂದಲೇ ಗಂಡನಿಗೆ ಏಟು ನೀಡಿದ್ದಾಳೆ. ರೂಪೇಶ್ ನನ್ನು ಪತ್ನಿಯರು ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಎರಡನೇ ಪತ್ನಿ ರೂಪೇಶ್ ಕಟ್ಟಿದ್ದ ಮಾಂಗಲ್ಯ ಕಿತ್ತು, ಸಿಂಧೂರ ಅಳಸಿ ಸೋದರರೊಂದಿಗೆ ಊರಿಗೆ ತೆರಳಿದ್ದಾಳೆ. ಕೊನೆಗೆ ಗ್ರಾಮಸ್ಥರ ಸಮ್ಮುಖದಲ್ಲಿ ಪಂಚಾಯ್ತಿ ನಡೆದಿದ್ದು, ಎರಡನೇ ಪತ್ನಿ ರೂಪೇಶ್ ನೊಂದಿಗೆ ಇರಲಾರೆ ಎಂದು ಹೇಳಿ ತನ್ನೂರಿಗೆ ಹೋಗಿದ್ದಾಳೆ. ಇತ್ತ ರೂಪೇಶ್ ಮೊದಲ ಪತ್ನಿಯ ಮನೆ ಸೇರಿಕೊಂಡಿದ್ದಾನೆ.

  • ಕೊರೊನಾ ಸೋಂಕಿಗೆ ದಂಪತಿ ಬಲಿ – ಪತಿಯ ಅಂತ್ಯ ಸಂಸ್ಕಾರ ಮುಗಿಸಿ ಬರುವಷ್ಟರಲ್ಲಿ ಪತ್ನಿಯೂ ಸಾವು

    ಕೊರೊನಾ ಸೋಂಕಿಗೆ ದಂಪತಿ ಬಲಿ – ಪತಿಯ ಅಂತ್ಯ ಸಂಸ್ಕಾರ ಮುಗಿಸಿ ಬರುವಷ್ಟರಲ್ಲಿ ಪತ್ನಿಯೂ ಸಾವು

    ಚಾಮರಾಜನಗರ: ಕೊರೊನಾ ಸೋಂಕಿಗೆ ದಂಪತಿಗಳಿಬ್ಬರು ಬಲಿಯಾಗಿರುವ ಘಟನೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ನಾಗರತ್ನಮ್ಮ ಬಡಾವಣೆಯ ಸುದರ್ಶನ್, ಹೇಮಲತಾ ಸೋಂಕಿಗೆ ಬಲಿಯಾದ ದಂಪತಿ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಪತಿ ಸುದರ್ಶನ್ ಕೊರೊನಾದಿಂದ ಮೃತಪಟ್ಟಿದ್ದು, ತದಾನಂತರ ಪತಿಯ ಅಂತ್ಯ ಸಂಸ್ಕಾರ ನಡೆಸಿ ವಾಪಾಸ್ ಬರುವ ವೇಳೆಗೆ ಪತ್ನಿ ಹೇಮಲತಾ ಕೂಡ ಮೃತಪಟ್ಟಿದ್ದಾರೆ.

    ಸುದರ್ಶನ್ ಗುಂಡ್ಲುಪೇಟೆ ಪಟ್ಟಣದಲ್ಲಿ ಚುರುಮುರಿ ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿದ್ದರು. ಪತಿಯು ಸಾವನ್ನಪ್ಪಿದ ದಿನವೇ ಪತ್ನಿಯ ಸಾವನ್ನಪ್ಪಿದ್ದಾರೆ.

  • ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ಸಾವು – ಸಾವಿನಲ್ಲೂ ಒಂದಾದ ದಂಪತಿ

    ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ಸಾವು – ಸಾವಿನಲ್ಲೂ ಒಂದಾದ ದಂಪತಿ

    ಚಿಕ್ಕಮಗಳೂರು: ಪತಿಯ ಸಾವಿನ ಸುದ್ದಿ ಕೇಳಿ ಪತ್ನಿಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ನಗರದ ಕೋಟೆ ಬಡಾವಣೆಯಲ್ಲಿ ನಡೆದಿದೆ.

    ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಕೋಟೆ ಬಡಾವಣೆ ನಿವಾಸಿ ಹರೀಶ್ ಅವರನ್ನು ಸೋಮವಾರ ಮಧ್ಯಾಹ್ನ ನಗರದ ಕೆ.ಆರ್.ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆ.ಆರ್.ಎಸ್. ಆಸ್ಪತ್ರೆಯಲ್ಲಿ ಹರೀಶ್‍ಗೆ ಆಕ್ಸಿಜನ್ ನೀಡಿ ಚಿಕಿತ್ಸೆ ನೀಡುತ್ತಿದ್ದರು. ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿದ್ದರಿಂದ ವೈದ್ಯರು ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು. ಆ ಬಳಿಕ ಕುಟುಂಬಸ್ಥರು ಹರೀಶ್ ಅವರನ್ನ ನಗರದ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಹರೀಶ್ ಮೃತಪಟ್ಟಿದ್ದಾರೆ.

    ತಂದೆ ಹರೀಶ್ ಮೃತಪಟ್ಟ ವಿಷಯವನ್ನ ಪಿಯುಸಿ ಓದುತ್ತಿರುವ ಮಗ ತಾಯಿಗೆ ಮೊಬೈಲ್ ಮೂಲಕ ಫೋನ್ ಮಾಡಿ ತಿಳಿಸಿದ್ದಾರೆ. ಪತಿ ಮೃತಪಟ್ಟ ಸುದ್ದಿ ಕೇಳಿ ಪತ್ನಿ ಸೌಮ್ಯ ಕೂಡ ವಿಷಯ ತಿಳಿದ ಹತ್ತೇ ನಿಮಿಷದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಈ ಮೂಲಕ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಹರೀಶ್ ಹಾಗೂ ಸೌಮ್ಯಾ ದಂಪತಿಗೆ ಕೋವಿಡ್ ಸೋಂಕು ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

    ಅಪ್ಪ-ಅಮ್ಮನನ್ನು ಕಳೆದುಕೊಂಡ ಮಗ ಹಾಗೂ ಸಂಬಂಧಿಕರ ನೋವು ನೋಡುಗರ ಕಣ್ಣಲ್ಲೂ ನೀರು ತರಿಸುವಂತಿತ್ತು. ಮೃತ ಹರೀಶ್ ನಗರದ ಎಂ.ಜಿ.ರಸ್ತೆಯಲ್ಲಿ ಗಿಫ್ಟ್ ಸೆಂಟರ್ ನಡೆಸುತ್ತಿದ್ದರು.

  • ಮಾಸ್ಕ್ ಹಾಕು ಅಂದಿದ್ದಕ್ಕೆ ಪಿಡಿಓ ಮೇಲೆ ಇಬ್ಬರು ಯುವಕರಿಂದ ಹಲ್ಲೆ

    ಮಾಸ್ಕ್ ಹಾಕು ಅಂದಿದ್ದಕ್ಕೆ ಪಿಡಿಓ ಮೇಲೆ ಇಬ್ಬರು ಯುವಕರಿಂದ ಹಲ್ಲೆ

    ಚಿಕ್ಕಬಳ್ಳಾಪುರ: ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದ್ದಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರು ಯುವಕರು ಮಹಿಳಾ ಪಿಡಿಓ ಹಾಗೂ ಆಕೆಯ ಪತಿ ಮೇಲೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಶೆಟ್ಟಿಹಳ್ಳಿ-ಪಾಲೇಪಲ್ಲಿ ಮಾರ್ಗಮಧ್ಯೆ ನಡೆದಿದೆ.

    ಅಂದಹಾಗೆ ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ಪಿಡಿಓ ಭಾಗ್ಯಮ್ಮ ಹಾಗೂ ಆಕೆಯ ಪತಿ ಕೃಷ್ಣಪ್ಪ ಹಲ್ಲೆಗೆ ಓಳಗಾದವರು. ಶೆಟ್ಟಿಹಳ್ಳಿ ಗ್ರಾಮದ ನವೀನ್ ಹಾಗೂ ಮನೋಹ್ ಹಲ್ಲೆ ಮಾಡಿದ ಪುಂಡರು. ಪಿಡಿಓ ಭಾಗ್ಯಮ್ಮ ಕರ್ತವ್ಯ ನಿಮಿತ್ತ ಪಾಲೇಪಲ್ಲಿ ಗ್ರಾಮಕ್ಕೆ ಹೋಗಿ ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ಕಚೇರಿಗೆ ತನ್ನ ಗಂಡನ ಜೊತೆ ಬೈಕ್‍ನಲ್ಲಿ ವಾಪಾಸ್ಸಾಗುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಇಬ್ಬರು ಯುವಕರು ಮಾಸ್ಕ್ ಹಾಕದೆ, ಸಾಮಾಜಿಕ ಅಂತರವಿಲ್ಲದೆ ಮಾತನಾಡುತ್ತಿದ್ದು ಕಂಡು ಮಾಸ್ಕ್ ಹಾಕಿ ಅಂತ ಹೇಳಿದ್ದಾರೆ.

    ಈ ವೇಳೆ ಪರಸ್ಪರರ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದ್ದು ಈ ವೇಳೆ ಪಿಡಿಓ ಭಾಗ್ಯಮ್ಮ ಹಾಗೂ ಆಕೆಯ ಪತಿ ಕೃಷ್ಣಪ್ಪ ಮೇಲೆ ಹಲ್ಲೆ ನಡೆಸಲಾಗಿದೆ. ಭಾಗ್ಯಮ್ಮ ಮೂಗಿಗೆ ಗಾಯವಾಗಿದ್ದು, ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾಗ್ಯಮ್ಮ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಇಬ್ಬರು ಯವಕರು ಅಸಭ್ಯ ಅವಾಚ್ಯವಾಗಿ ನನ್ನ ಸೀರೆ ಎಳೆದಾಡಿ ಜಾತಿನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

  • ಮದುವೆಯಾಗಿ  ಮೂರೇ ದಿನಕ್ಕೆ ಪ್ರಾಣಬಿಟ್ಟ ನವವಿವಾಹಿತ

    ಮದುವೆಯಾಗಿ ಮೂರೇ ದಿನಕ್ಕೆ ಪ್ರಾಣಬಿಟ್ಟ ನವವಿವಾಹಿತ

    ಲಕ್ನೋ: ಮದುವೆಯಾಗಿ ಮೂರೇ ದಿನಕ್ಕೆ ಯುವಕ ಕೊರೊನಾ ಮಾಹಾಮಾರಿಗೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಜಾಟಾನ್ ನಿವಾಸಿ ಅರ್ಜುನ್ ಮದುವೆಯಾಗಿ ಮೂರೇ ದಿನಕ್ಕೆ ಕೊರೊನಾಗೆ ಬಲಿಯಾಗಿದ್ದಾನೆ. ಏ,25 ರಂದು ಅರ್ಜುನ್ ಬಬಲಿ ಎನ್ನುವ ಯುವತಿಯ ಜೊತೆಗೆ ಹಸೆಮಣೆ ಏರಿದ್ದರು. ಮದುವೆ ಮುಗಿಸಿ ಮನೆಗೆ ಬಂದ ದಿನವೇ ಅರ್ಜುನ್ ಆರೋಗ್ಯದಲ್ಲಿ ಏರುಪೇರಾಗಿತ್ತು.

    ಅರ್ಜುನ್‍ಗೆ ರಾತ್ರಿ ಜ್ವರ ಕಣಿಸಿಕೊಂಡಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅರ್ಜುನನ್ನು ಕುಟುಂಬಸ್ಥರು ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಆತನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕೂಡಲೇ ಅರ್ಜುನ್‍ನನ್ನು ಜಿಲ್ಲಾಸ್ಪತ್ರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅರ್ಜುನ್ ಆರೋಗ್ಯ ಕ್ಷಿಣಿಸುತ್ತಲೇ ಹೋಯಿತ್ತು.

    ಏಪ್ರಿಲ್29 ರಂದು ಆಕ್ಸಿಜನ್ ಕೊರತೆಯಿಂದಾಗಿ ಅರ್ಜುನ್ ಪ್ರಾಣಬಿಟ್ಟುನು. ಮಗನನ್ನು ಕಳೆದುಕೊಂಡ ಕುಟುಂಬ, ಆಗ ತಾನೇ ಹಸೆಮಣೆ ಏರಿದ್ದ ಮಗಳು ಪತಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.