Tag: ಪತಿ

  • ಶೀಲ ಶಂಕಿಸಿ ಪತ್ನಿಯನ್ನೇ ಕೊಂದ ಪತಿರಾಯ

    ಶೀಲ ಶಂಕಿಸಿ ಪತ್ನಿಯನ್ನೇ ಕೊಂದ ಪತಿರಾಯ

    ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಪತಿ ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ನಗರದ ಹುಳಿಮಾವು ಸಮೀಪದ ಅರಕೆರೆ ಬಿಟಿಎಸ್ ಲೇಔಟ್ ನಲ್ಲಿ ನಡೆದಿದೆ.

    ಕೊಲೆಯಾದ ಮಹಿಳೆಯನ್ನು ಆಶಾ ಎಂದು ಗುರುತಿಸಲಾಗಿದ್ದು, ಆರೋಪಿ ಮಣಿ ತನ್ನ ಪತ್ನಿಯನ್ನು ಕೊಂದ ಪತಿರಾಯ. ಆಶಾ ಹಾಗೂ ಮಣಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಅದೇ ರೀತಿ ನಿನ್ನೆ ರಾತ್ರಿಯೂ ಪತಿ, ಪತ್ನಿ ನಡುವೆ ಗಲಾಟೆಯಾಗಿದೆ. ಮಣಿ ಇತ್ತೀಚೆಗೆ ವಿಪರೀತ ಮದ್ಯ ಕುಡಿಯಲು ಆರಂಭಿಸಿದ್ದ. ಹೀಗಾಗಿ ಪತ್ನಿಯ ಶೀಲದ ಶಂಕಿಸಿ ಗಲಾಟೆ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಯುವ ವೈದ್ಯೆ ಸಾವು

    ನಿನ್ನೆ ರಾತ್ರಿ ನಡೆದ ಜಗಳದ ಸಿಟ್ಟಿನಿಂದ ಪತ್ನಿ ಆಶಾ ಮಲಗಿದ್ದ ಸಮಯದಲ್ಲಿ ಇಂದು ಬೆಳಗಿನಜಾವ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬೆಳಗ್ಗೆಯಾದರೂ ಆಶಾ ಮನೆಯಿಂದ ಹೊರಬಾರದ ಹಿನ್ನೆಲೆ ಪಕ್ಕದ ಮನೆಯವರು ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಕೂಡಲೇ ಹುಳಿಮಾವು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಪತಿ ಮಣಿ ಕೊಲೆ ಮಾಡಿರುವ ಬಗ್ಗೆ ಮಾಹಿತಿ ಬಂದಿದ್ದು, ಆತನ ಹುಡುಕಾಟ ನಡೆಸುತ್ತಿದ್ದಾರೆ.

  • ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಯುವ ವೈದ್ಯೆ ಸಾವು

    ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಯುವ ವೈದ್ಯೆ ಸಾವು

    – ಮದುವೆಯಾಗಿ ವರ್ಷಕ್ಕೆ ಆತ್ಮಹತ್ಯೆ..?

    ತಿರುವನಂತಪುರಂ: ವರ್ಷದ ಹಿಂದಷ್ಟೇ ವಿವಾಹವಾಗಿದ್ದ 24 ವರ್ಷದ ಯುವ ವೈದ್ಯೆ ಪತಿಯ ಮನೆಯಲ್ಲೇ ಸಾವನ್ನಪ್ಪಿದ್ದು, ಇದಕ್ಕೂ ಮುನ್ನ ತನಗೆ ನೀಡಿದ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾಳೆ.

    ಕೇರಳದ ಕೊಲ್ಲಂ ಜಿಲ್ಲೆಯ ಸಾಸ್ತಂಕೋಟಾ ಬಳಿಯ ಸಾಸ್ತಮ್ನಾಡದಲ್ಲಿ ಘಟನೆ ನಡೆದಿದ್ದು, ಸಾವನ್ನಪ್ಪಿದ 24 ವರ್ಷದ ಯುವ ವೈದ್ಯೆಯನ್ನು ವಿಸ್ಮಯ.ವಿ.ನೈಯರ್ ಎಂದು ಗುರುತಿಸಲಾಗಿದೆ. ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಆ್ಯಂಡ್ ಸರ್ಜರಿ ವಿದ್ಯಾರ್ಥಿನಿಯಾಗಿದ್ದ ವಿಸ್ಮಯ 2020ರ ಮೇ ತಿಂಗಳಲ್ಲಿ ಮೋಟಾರು ವಾಹನ ಇಲಾಖೆಯ ಅಧಿಕಾರಿ ಎಸ್.ಕಿರಣ್‍ಕುಮಾರ್ ಜೊತೆ ವಿವಾಹವಾಗಿದ್ದರು. ಮನೆಯವರು ಅದ್ಧೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು. ದಂಪತಿ ಕೇರಳದ ಕೊಲ್ಲಂನಲ್ಲಿ ವಾಸವಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    ಘಟನೆ ನಡೆಯುವುದಕ್ಕೂ 2 ದಿನ ಮುಂಚೆ ತನ್ನ ಸೋದರ ಸಂಬಂಧಿಗೆ ಈ ಕುರಿತು ತಿಳಿಸಿದ್ದು, ವರದಕ್ಷಿಣೆ ಸಂಬಂಧ ಪತಿ ಕಿರುಕುಳ ನೀಡುತ್ತಿದ್ದು, ಹಲವು ಬಾರಿ ಹೊಡೆದಿದ್ದಾನೆ ಎಂದು ವಿವರಿಸಿದ್ದಾಳೆ.

    ಸೋಮವಾರ ಬೆಳಗ್ಗೆ ಗಂಡನ ಮನೆಯಲ್ಲಿ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ದೇಹದ ಮೇಲೆ ಗಾಯದ ಗುರುತುಗಳಿವೆ. ಸಾವಿಗೂ ಮುನ್ನನ ವಿಸ್ಮಯ ತನ್ನ ಸೋದರ ಸಂಬಂಧಿ ಜೊತೆ ನೋವನ್ನು ತೋಡಿಕೊಂಡಿದ್ದು, ಪತಿಯ ಚಿತ್ರ ಹಿಂಸೆಯನ್ನು ಸಹಿಸಲಾಗುತ್ತಿಲ್ಲ, ವರದಕ್ಷಿಣೆ ಬೇಕೆಂದು ನಿತ್ಯ ಹಿಂಸೆ ನಿಡುತ್ತಿದ್ದಾನೆ ಎಂದು ತಿಳಿಸಿದ್ದಾಳೆ. ಈ ಕುರಿತು ಭಾನುವಾರ ರಾತ್ರಿ ಸಹ ಸೋದರಸಂಬಂಧಿ ಜೊತೆ ಸಾಮಾಜಿಕ ಜಾಲತಾಣಗಳ ಮೂಲಕ ಫೋಟೋಗಳನ್ನು ಹಂಚಿಕೊಂಡಿದ್ದು, ಕಿರುಕುಳ ಸಹಿಸಲಾಗುತ್ತಿಲ್ಲ. ಬಹುಶಃ ಇದೇ ಕೊನೆಯ ಮೆಸೇಜ್ ಆಗಬಹುದು ಎಂದು ಹೇಳಿಕೊಂಡಿದ್ದಳು. ಮರುದಿನ ಬೆಳಗ್ಗೆ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

    ವಿಸ್ಮಯ ತಂದೆ ತ್ರಿವಿಕ್ರಮನ್ ನೈಯರ್ ಈ ಕುರಿತು ಮಾಹಿತಿ ನೀಡಿದ್ದು, ಈ ಹಿಂದೆ ಸಹ ಆತನ ಹಲ್ಲೆ ಮಾಡಿದ್ದ, ಒಮ್ಮೆ ಅವಳೊಂದಿಗೆ ನಾನು ಮನೆಗೆ ತೆರಳಿದಾಗ ಪಾರ್ಟಿ ಮಾಡಿ, ಎಲ್ಲರೂ ಕುಡಿದಿದ್ದರು. ನಾವು ಮನೆಗೆ ಪ್ರವೇಶಿಸುತ್ತಿದ್ದಂತೆ ಆತ ವಿಸ್ಮಯಳನ್ನು ಹೊಡೆಯಲು ಆರಂಭಿಸಿದ. ಈ ಕುರಿತು ನನ್ನ ಮಗ ಪ್ರಶ್ನಿಸಲು ಹೋದಾಗ ಅವನನ್ನೂ ಹೊಡೆದಿದ್ದ. ಆಗಲೂ ಈ ಕುರಿತು ನಾವು ಪ್ಯಾಟ್ರೋಲ್ ಪೊಲೀಸರಿಗೆ ತಿಳಿಸಿದ್ದೆವು. ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದಿದ್ದೆವು. ಸರ್ಕಲ್ ಇನ್‍ಸ್ಪೆಕ್ಟರ್ ಕಿರಣ್ ಕುಟುಂಬಸ್ಥರನ್ನು ಕರೆದು ಸಂಧಾನ ನಡೆಸಿದ್ದರು. ಬಳಿಕ ನನ್ನ ಮಗ ಇದೊಂದು ಬಾರಿ ಬಿಟ್ಟುಬಿಡಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದ. ಬಳಿಕ ನನ್ನ ಮಗಳು ನಮ್ಮ ಮನೆಯಲ್ಲೇ ಇದ್ದಳು. ಆದರೆ ಎರಡು ತಿಂಗಳ ಹಿಂದೆ ಅವಳು ಬಿಎಎಂಎಸ್ ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗುವಾಗ ಕಿರಣ್ ಅವಳನ್ನು ಮನೆಗೆ ಕರೆದೊಯ್ದಿದ್ದ. ಬಳಿಕ ಅವಳು ನಮ್ಮ ಮನೆಗೆ ಬಂದಿರಲಿಲ್ಲ ಎಂದು ವಿವರಿಸಿದ್ದಾರೆ.

    ಈ ಘಟನೆ ನಡೆದ ಬಳಿಕ ವಿಸ್ಮಯ ತನ್ನ ತಾಯಿಗೆ ಮಾತ್ರ ಕರೆ ಮಾಡುತ್ತಿದ್ದಳು. ತಂದೆ, ಸಹೋದರನಿಗೆ ಕರೆ ಮಾಡುತ್ತಿರಲಿಲ್ಲ. ಇದೆಲ್ಲ ನನಗೆ ಈಗ ತಿಳಿದಿದೆ. ಕಿರಣ್ ಹಲ್ಲೆ ಮಾಡಿರುವುದನ್ನು ಅವಳು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು. ಅಲ್ಲದೆ ಎರಡು ದಿನಗಳ ಹಿಂದೆ ನನ್ನ ಸೋದರ ಸಂಬಂಧಿಗೂ ಮೆಸೇಜ್ ಮಾಡಿ, ಕಿರಣ್ ಕೆಲಸಕ್ಕೆ ಹೋದಾಗ ನನ್ನನ್ನು ಮನೆಯಿಂದ ಕರೆದುಕೊಂಡು ಹೋಗು ಎಂದು ತಿಳಿಸಿದ್ದಳು ಎಂದು ವಿವರಿಸಿದ್ದಾರೆ.

    ಮರುದಿನ ಬೆಳಗ್ಗೆ ವಿಸ್ಮಯ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಗಳ ಸಾವಿಗೆ ಆಕೆಯ ಪತಿಯೇ ಕಾರಣ, ಮದುವೆ ಸಮಯದಲ್ಲಿ ಒಂದು ಎಕರೆ ಭೂಮಿ, ಒಂದು ಕಾರನ್ನು ನೀಡಲಾಗಿದೆ. ಆದರೂ ಅಳಿಯನ ಹಣದಾಹ ಕಡಿಮೆಯಾಗಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದೀಗ ಆರೋಪಿ ಕಿರಣ್ ಕುಮಾರ್‍ನನ್ನು ಬಂಧಿಸಲಾಗಿದೆ.

  • ಪ್ರಿಯತಮನ ಮೇಲಿನ ಮೋಹಕ್ಕಾಗಿ ಸ್ಕೆಚ್ ಹಾಕಿ ಗಂಡನನ್ನೇ ಕೊಲ್ಲಿಸಿದ್ಳು!

    ಪ್ರಿಯತಮನ ಮೇಲಿನ ಮೋಹಕ್ಕಾಗಿ ಸ್ಕೆಚ್ ಹಾಕಿ ಗಂಡನನ್ನೇ ಕೊಲ್ಲಿಸಿದ್ಳು!

    ಚಿತ್ರದುರ್ಗ: ಪರಪುರುಷ ಮೇಲಿನ ವ್ಯಾಮೋಹದಿಂದಾಗಿ ಗಂಡನನ್ನೇ ಉಸಿರುಗಟ್ಟಿಸಿ ಪತ್ನಿಯೊಬ್ಬಳು ಕೊಲ್ಲಿಸಿರುವ ಘಟನೆ ಚಿತ್ರದುರ್ಗ ತಾಲೂಕಿನ ಅಳವುದರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಚಿತ್ರದುರ್ಗ ತಾಲೂಕು ಅಳವುದರ ಗ್ರಾಮದಲ್ಲಿ ಮುರುಗೇಶ್ ಹಾಗೂ ನಾಗಮ್ಮ ಎಂಬ ದಂಪತಿ ಹಾಯಾದ ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ ವರ್ಷ ಯುಗಾದಿ ಹಬ್ಬದಂದು ಅಮಾವಾಸ್ಯೆಯ ಅಪಶಕುನದಂತೆ ಈ ಸಂಸಾರದ ಮಧ್ಯೆ ಅರಬಘಟ್ಟ ಗ್ರಾಮದ ಬಸವರಾಜ್ ಬಂದಿದ್ದು, ಸ್ನೇಹದ ನೆಪದಲ್ಲಿ ಹಣದ ವ್ಯವಹಾರ ಬೆಳೆಸಿಕೊಂಡಿದ್ದನು. ಅಂದಿನಿಂದ ಈ ಚೊಕ್ಕ ಸಂಸಾರಕ್ಕೆ ವಕ್ರಗತಿ ಶುರುವಾಗಿದ್ದೂ, ಹಣದ ವ್ಯವಹಾರ ಹಾಗೂ ಸ್ನೇಹದ ಸಲುಗೆಯಲ್ಲಿ ಪದೇ ಪದೇ ಮನೆಗೆ ಬರುತಿದ್ದ ಬಸವರಾಜನ ಮೋಹದ ಪಾಶಕ್ಕೆ ನಾಗಮ್ಮ ಸಿಲುಕಿದ್ದಳು.

    ಪ್ರಿಯತಮನಾದ ಬಸವರಾಜ್ ಜೊತೆ ಸೇರಿ, ತನ್ನ ಕ್ಷಣಕಾಲದ ಸುಖಕ್ಕಾಗಿ ತಾಳಿಕಟ್ಟಿದ ಗಂಡನನ್ನೇ ಕೊಲ್ಲಲು ಸ್ಕೆಚ್ ಹಾಕಿದಳು. ಹೊಟ್ಟೆ ನೋವಿನ ನೆಪದಲ್ಲಿ ಕಳೆದ 15 ದಿನಗಳ ಹಿಂದೆ, ರಾತ್ರೋರಾತ್ರಿ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಗಂಡನನ್ನು ಮುಗಿಸಲು ಮುಂದಾಗಿದ್ದರು. ಆದರೆ ಅಂದು ಅವರ ಸ್ಕೆಚ್ ವಿಫಲವಾಗಿದ್ದು, ಎರಡನೇ ಬಾರಿಗೆ ಅವರ ಹೊಲದಲ್ಲಿ ಉಸಿರು ಕಟ್ಟಿಸಿ ಕೊಲ್ಲುವಲ್ಲಿ ಸಕ್ಸಸ್ ಆಗಿದ್ದಾರೆ.

    ಇನ್ನು ಬಸವರಾಜನೊಂದಿಗೆ ತನ್ನ ಪತ್ನಿಯ ಅಕ್ರಮ ಸಂಬಂಧ ಹೊಂದಿರುವ ವಿಚಾರ ತಿಳಿದು, ಆಘಾತಗೊಂಡಿದ್ದ ಮುರುಗೇಶನು, ಪತ್ನಿಯಾದ ನಾಗಮ್ಮನೊಂದಿಗೆ ನಿತ್ಯ ಜಗಳವಾಡಿದ್ದನು. ಅಲ್ಲದೇ ಇವರಿಬ್ಬರ ಅಕ್ರಮ ಸಂಬಂಧದ ವಿಚಾರವನ್ನು ಕಾಗದದಲ್ಲಿ ಬರೆದು ತನ್ನ ಸೇಫ್ಟಿಗಾಗಿ ಜೇಬಿನಲ್ಲಿಟ್ಟುಕೊಂಡಿದ್ದನು. ಈ ವಿಚಾರ ತಿಳಿಯದ ಆರೋಪಿಗಳು, ಮುರುಗೇಶನನ್ನು ಕೊಲ್ಲಲು ಒಂದು ಎಣ್ಣೆ ಪಾರ್ಟಿ ಆಯೋಜನೆ ಮಾಡಿ, ಕಂಠ ಪೂರ್ತಿ ಕುಡಿಸಿ ಕೃಷಿ ಹೊಂಡದಲ್ಲಿ ಮುಳುಗಿಸಿ ಕೊಲೆಗೈದು, ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

    ಮಗನ ಸಾವಿನಿಂದ ಅನುಮಾನಗೊಂಡ ಮುರುಗೇಶನ ತಂದೆ ಮಹಾರುದ್ರಪ್ಪ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದಾಗ, ಈ ಕಳ್ಳ ಪ್ರಣಯ ಪಕ್ಷಿಗಳ ನವರಂಗಿ ಆಟವನ್ನು ಪೊಲೀಸರು ಬಯಲು ಮಾಡಿದ್ದಾರೆ.

    ಸ್ನೇಹಿತನ ಜೊತೆ ಸ್ನೇಹ, ಸ್ನೇಹಿತನ ಹೆಂಡತಿಯ ಜೊತೆ ಮೋಹ ಎರಡು ಕಡೆ ಏಕಕಾಲದಲ್ಲಿ ಬಣ್ಣದ ಆಟವಾಡಿ ಇಡೀ ಕುಟುಂಬದ ಜೀವನ ಹಾಳು ಮಾಡಿದ ಕಿರಾತಕ ಬಸವರಾಜ್ ಹಾಗೂ ಪ್ರಿಯತಮೆ ನಾಗಮ್ಮ ಮಾಡಿದ ತಪ್ಪಿಗೆ ಜೈಲು ಪಾಲಾಗಿದ್ದಾರೆ. ಏನು ಗೊತ್ತಿಲ್ಲದೆ ತನ್ನ ಪಾಡಿಗೆ ಸ್ನೇಹಿತ ಹಾಗೂ ಹೆಂಡತಿಯನ್ನು ನಂಬಿದ್ದ, ಮುರುಗೇಶ್ ಕೊಲೆಯಾಗಿದ್ದು ನಿಜಕ್ಕೂ ದುರಂತ. ಇದನ್ನೂ ಓದಿ:ಉದ್ಯಮಿ ಮನೆಯಲ್ಲಿ ದರೋಡೆ – ಶಿಕ್ಷಕ ಸೇರಿ ಐವರ ಬಂಧನ

  • ಮಗಳೊಂದಿಗೆ ನೇಣಿಗೆ ಶರಣಾದ ತಾಯಿ

    ಮಗಳೊಂದಿಗೆ ನೇಣಿಗೆ ಶರಣಾದ ತಾಯಿ

    ಹಾಸನ: ಪತಿಯನ್ನು ಕಳೆದುಕೊಂಡ ಬೇಸರದಿಂದ ಮಹಿಳೆಯೊಬ್ಬರು ಎರಡು ವರ್ಷದ ಮಗಳೊಂದಿಗೆ ನೇಣಿಗೆ ಶರಣಾಗಿರುವ ಘಟನೆ ಘಟನೆ ಸಕಲೇಶಪುರ ತಾಲ್ಲೂಕು, ಆನೆಮಹಲ್ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ದಾಖಲೆ ಬರೆದ ವಿರಾಟ್ ಕೊಹ್ಲಿ

    ಪ್ರಜ್ವಲ (26), ಸಾಧ್ವಿ (2) ಮೃತ ದುರ್ದೈವಿಗಳಾಗಿದ್ದಾರೆ. ಅಪಘಾತದಲ್ಲಿ ಪ್ರಜ್ವಲ ಅವರ ಗಂಡ ಸುರೇಂದ್ರ ಸಾವನ್ನಪ್ಪಿದ್ದರು. ಈ ಆಘಾತದಿಂದ ಪ್ರಜ್ವಲ ಹೊರಬಂದಿರಲಿಲ್ಲ. ಪತಿಯ ನೆನಪಿನಲ್ಲಿಯೇ ಮಗುವಿನೊಂದಿಗೆ ಸಾವಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಭಾನುವಾರದ ಬಾಡೂಟಕ್ಕೆ ಮಾಡಿ ಪೋರ್ಕ್ ಫ್ರೈ

    ಪತಿಯನ್ನು ಕಳೆದುಕೊಂಡು ಬೇಸರದಲ್ಲಿದ್ದ ಮಗಳ ಸ್ಥಿತಿ ಕಂಡು ಪ್ರಜ್ವಲ ಪೋಷಕರು ಆನೆಮಹಲ್ ಗ್ರಾಮದ ಮೋಹನ್ ಎಂಬುವವರೊಂದಿಗೆ ಜೂನ್ 16 ರಂದು ಮತ್ತೊಂದು ವಿವಾಹ ಮಾಡಿದ್ದರು. ಆದರೆ ಮೊದಲ ಪತಿಯ ಸಾವಿನ ಆಘಾತದಿಂದ ಹೊರಬರಲಾಗದೆ, ಆನೆಮಹಲ್ ಗ್ರಾಮದ ಮನೆಯಲ್ಲಿಯೇ ಮಗು ಕೊಂದು ನಂತರ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಸಕಲೇಶಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಹನಿಮೂನ್‍ನಲ್ಲಿ ಗೊತ್ತಾಯ್ತು ಪತಿ ಅವನಲ್ಲ, ಅವಳು – ಪತ್ನಿಯ ನಿರ್ಧಾರಕ್ಕೆ ಮೆಚ್ಚುಗೆ

    ಹನಿಮೂನ್‍ನಲ್ಲಿ ಗೊತ್ತಾಯ್ತು ಪತಿ ಅವನಲ್ಲ, ಅವಳು – ಪತ್ನಿಯ ನಿರ್ಧಾರಕ್ಕೆ ಮೆಚ್ಚುಗೆ

    ಲಂಡನ್: ಹನಿಮೂನ್ ನಲ್ಲಿ ತೆರಳಿದಾಗ ಪತಿ ಅವನಲ್ಲ, ಅವಳು ಎಂಬ ರಹಸ್ಯ ಪತ್ನಿಗೆ ಗೊತ್ತಾಗಿದೆ. ವಿಷಯ ತಿಳಿದ ಬಳಿಕ ಪತ್ನಿ ತೆಗೆದುಕೊಂಡ ನಿರ್ಧಾರ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

    ಬ್ರಿಟನ್ ಗ್ರಾಫಿಕ್ ಡಿಸೈನರ್ ಜೆಕ್ ಮತ್ತು ಅಮೆರಿಕದ ಹಾರ್ವಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕ ಜೆಕ್ ಮತ್ತು ಹಾರ್ವಿ ಹನಿಮೂನ್ ಗಾಗಿ ಸುಂದರ ದ್ವೀಪಕ್ಕೆ ತೆರಳಿದ್ದರು. ಈ ವೇಳೆ ಹಾರ್ವಿಗೆ ತನ್ನ ಪತಿ ಪುರುಷನಲ್ಲಿ ಅನ್ನೋ ರಹಸ್ಯ ತಿಳಿದಿದೆ. ಪತಿ ಸಹ ತಾನು ಮಹಿಳೆಯಂತೆ ಇರಲು ಇಷ್ಟಪಡೋದಾಗಿ ಪತ್ನಿ ಮುಂದೆ ಹೇಳಿಕೊಂಡಿದ್ದಾನೆ. ಈ ವಿಷಯ ತಿಳಿಯುತ್ತಲೇ ಹಾರ್ವಿ ಪತಿಯನ್ನು ನಿಂದಿಸದೇ ಆತನಿಗೆ ಅವನ ಇಷ್ಟದಂತೆ ಇರಲು ಅನುಮತಿ ನೀಡಿದ್ದಾರೆ.

    ಪ್ರೀತಿಸಿ ಮದುವೆಯಾಗಿದ್ದ ಜೋಡಿ: 33 ವರ್ಷದ ಜೆಕ್ ಮತ್ತು 30 ವರ್ಷದ ಹಾರ್ವಿ 2007ರಲ್ಲಿ ಆನ್‍ಲೈನ್ ನಲ್ಲಿ ಭೇಟಿಯಾಗಿದ್ದರು. 2010ರಲ್ಲಿ ಇಬ್ಬರು ಪ್ರೇಮಪಾಶದಲ್ಲಿ ಸಿಲುಕಿದ್ದಾರೆ. ಹೀಗೆ ಇಬ್ಬರ ಪ್ರೀತಿ ಕೆಲ ವರ್ಷಗಳವರೆಗೆ ಮುಂದುವರಿದಿದೆ. 2018ರಲ್ಲಿ ಇಬ್ಬರೂ ಮದುವೆ ಆಗಿದ್ದಾರೆ. ಮದುವೆಯ ಮೂರು ತಿಂಗಳ ನಂತ್ರ ಹನಿಮೂನ್ ಗಾಗಿ ತೆರಳಿದಾಗ ಜೆಕ್, ತನ್ನಲ್ಲಾಗುವ ಬದಲಾವಣೆಗಳನ್ನು ಹಾರ್ವಿ ಜೊತೆ ಹಂಚಿಕೊಂಡಿದ್ದಾನೆ. ನಾನು ಟ್ರಾನ್ಸ್‍ಜೆಂಡರ್ ಆಗಿ ಬದಲಾಗುವ ಇಚ್ಛೆಯನ್ನ ಸಹ ವ್ಯಕ್ತಪಡಿಸಿದ್ದಾನೆ.

    ಪತಿಗೆ ಶಸ್ತ್ರಚಿಕಿತ್ಸೆ: ಹಾರ್ವಿ ತನ್ನ ಉಳಿತಾಯದ ಹಣದಿಂದ ಅಂದ್ರೆ ಬರೋಬ್ಬರಿ 45 ಸಾವಿರ ಪೌಂಡ್ ಖರ್ಚು ಮಾಡಿ ಪತಿಗೆ ಶಸ್ತ್ರಚಿಕಿತ್ಸೆ ಮಾಡಿಸಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇಷ್ಟು ಮಾತ್ರ ಅಲ್ಲದೇ ಪತಿಗೆ ಮೇಕಪ್ ಮಾಡೋದು, ಹುಡುಗಿಯರಂತೆ ಡ್ರೆಸ್ ತೊಡಿಸಿ ಹಾರ್ವಿ ಖುಷಿ ಪಡ್ತಾರೆ ಎಂದು ವರದಿಯಾಗಿದೆ.

    ಮರು ಮದುವೆಗೆ ಮುಂದಾದ ಜೋಡಿ : ಶಸ್ತ್ರಚಿಕಿತ್ಸೆ ಬಳಿಕ ಹಾರ್ವಿ ಮತ್ತು ಜೆಕ್ ಮತ್ತೊಮ್ಮೆ ಮದುವೆಯಾಗಲು ಮುಂದಾಗಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಜೆಕ್ ತನ್ನ ಹೆಸರನ್ನ ರಾಯನಾ ಅಂತ ಬದಲಿಸಿಕೊಂಡಿದ್ದಾನೆ. ಸದ್ಯ ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

  • ಪತ್ನಿ, ಅತ್ತೆಯನ್ನು ಕೊಚ್ಚಿ ಕೊಂದ ಪತಿ

    ಪತ್ನಿ, ಅತ್ತೆಯನ್ನು ಕೊಚ್ಚಿ ಕೊಂದ ಪತಿ

    ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆ ಹಾಸನದಲ್ಲಿ ಜೋಡಿ ಕೊಲೆ ನಡೆದಿದ್ದು, ದುರುಳ ಪತಿ ತನ್ನ ಪತ್ನಿ ಹಾಗೂ ಅತ್ತೆಯನ್ನು ಕೊಚ್ಚಿ ಕೊಲೆ ಮಾಡಿದ್ದು, ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಜಿಲ್ಲೆಯ ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಪತ್ನಿ ಮಂಜುಳಾ (30) ಹಾಗೂ ಮಂಜುಳಾ ತಾಯಿ ಭಾರತಿ (55) ರನ್ನು ಪತಿ ಶ್ರೀಧರ್ ಕೊಲೆ ಮಾಡಿದ್ದಾನೆ. ನಿನ್ನೆ ಜಮೀನಿನ ಬಳಿ ಕೆಲಸ ಮಾಡುತ್ತಿದ್ದ ವೇಳೆ ಪತಿ, ಪತ್ನಿ ನಡುವೆ ಜಗಳವಾಗಿದೆ. ಈ ವೇಳೆ ಪತ್ನಿಯನ್ನು ಕೊಚ್ಚಿ ಕೊಂದು ಅತ್ತೆಯನ್ನೂ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ರೋಮಾಂಚನಕಾರಿ ಕಾರ್ಯಾಚರಣೆ ನಡೆಸಿ ಹಾಸನದಲ್ಲಿ ಪುಂಡಾನೆಗಳ ಸೆರೆ

    ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಎಸ್‍ಪಿ ಶ್ರೀನಿವಾಸಗೌಡ, ಸಿಪಿಐ ವಸಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಶ್ರೀಧರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಪತಿಯ ಮರ್ಮಾಂಗ ಕತ್ತರಿಸಿ, ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿದ್ಳು!

    ಪತಿಯ ಮರ್ಮಾಂಗ ಕತ್ತರಿಸಿ, ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿದ್ಳು!

    – ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿ

    ಬ್ರಸಿಲ್ಲಾ: 33 ವರ್ಷದ ಮಹಿಳೆಯ ಪತಿಯ ಮರ್ಮಾಂಗ ಕತ್ತರಿಸಿ ಅದನ್ನ ಬೇಯಿಸಿದ ಆಘಾತಕಾರಿ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ.

    ಡಯಾನೆ ಕ್ರಿಸ್ಟಿನಾ ಪತಿಯನ್ನು ಕೊಲೆಗೈದ ಮಹಿಳೆ. ಸದ್ಯ ಪೊಲೀಸರು ಕ್ರಿಸ್ಟಿನಾಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಪತಿ ಆಂಡ್ರೆ ಜೊತೆ ಕ್ರಿಸ್ಟಿನಾ ಬ್ರೆಜಿಲ್ ನ ಸಾವೋ ಗೋನ್ಕಲೋದಲ್ಲಿ ವಾಸವಾಗಿದ್ದಳು. ಇಬ್ಬರ ಮಧ್ಯೆ ಸದಾ ಗಲಾಟೆ ನಡೆಯುತ್ತಿತ್ತು ಎಂದು ವರದಿಯಾಗಿದೆ.

    ಪೊಲೀಸರು ಕೊಲೆಯ ವಿಷಯ ತಿಳಿದ ಕ್ರಿಸ್ಟಿನಾ ಮನೆಗೆ ತೆರಳಿದಾಗ ಭಯಾನಕ ದೃಶ್ಯ ಕಾಣಿಸಿದೆ. ಆಂಡ್ರೆ ಮರ್ಮಾಂಗ ಕತ್ತರಿಸಿ, ಪ್ಯಾನ್ ನಲ್ಲಿ ಹಾಕಿ ಫ್ರೈ ಮಾಡಲಾಗಿತ್ತು. ದಂಪತಿ 10 ವರ್ಷಗಳಿಂದ ಜೊತೆಯಾಗಿದ್ದು, ಎರಡು ವರ್ಷಗಳಿಂದ ಪ್ರತ್ಯೇಕವಾಗಿರಲು ಆರಂಭಿಸಿದ್ದರು. ಆದ್ರೆ ಕೆಲ ದಿನಗಳ ಹಿಂದೆ ಮತ್ತೆ ಇಬ್ಬರು ಜೊತೆಯಾಗಿರಲು ಆರಂಭಿಸಿದ್ದರು.

    ಈ ನಡುವೆ ಇಬ್ಬರ ನಡುವೆ ವಿಚ್ಛೇದನ ಕುರಿತು ಜಗಳ ಆರಂಭಗೊಂಡಿದೆ. ಬೆಳಗಿನ ಜಾವ 4 ಗಂಟೆಗೆ ಅಡುಗೆ ಮನೆಯಿಂದ ಚಾಕು ತಂದು ಮರ್ಮಾಂಗ ಕತ್ತರಿಸಿ ಕೊಲೆಗೈದಿದ್ದಾಳೆ. ದಂಪತಿ ಜೊತೆಯಾಗಿ ಪಿಜ್ಜಾ ಶಾಪ್ ನಡೆಸುತ್ತಿದ್ದು, 8 ವರ್ಷದ ಮಗ ಮತ್ತು 5 ವರ್ಷದ ಮಗಳಿದ್ದಾಳೆ.

    ಆಂಡ್ರೆಗೆ ಪತ್ನಿಯಿಂದ ಪ್ರತ್ಯೇಕವಾಗಲು ಇಷ್ಟವಿರಲಿಲ್ಲ. ಕ್ರಿಸ್ಟಿನಾ ದೂರ ಆಗಿದ್ದರಿಂದ ಮಾನಸಿಕ ಒತ್ತಡದಲ್ಲಿದ್ದನು. ಒಂದು ವೇಳೆ ದೂರವಾದ್ರೆ ಬೇರೆ ಯಾರ ಜೊತೆಯೂ ನೀನು ಇರುವಂತಿಲ್ಲ ಎಂದು ಕ್ರಿಸ್ಟಿನಾಗೆ ಷರತ್ತು ವಿಧಿಸಿದ್ದನು. ಅದೇ ರೀತಿ ಪತ್ನಿಗೆ ಹಲವು ಕೊಲೆ ಬೆದರಿಕೆ ಸಹ ಹಾಕಿದ್ದನು. ಕ್ರಿಸ್ಟಿನಾ ತನ್ನ ರಕ್ಷಣೆಗಾಗಿ ಕೊಲೆ ಮಾಡಿದ್ದಾಳೆ. ಪತಿಯನ್ನ ಕೊಲೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ. ತಾವಾಗಿಯೇ ಪೊಲೀಸರಿಗೆ ಶರಣಾಗಿದ್ದು, ವಿಚಾರಣೆಗೆ ಸಹಕರಿಸುತ್ತಿದ್ದಾರೆ ಎಂದು ಕ್ರಿಸ್ಟಿನಾ ಪರ ವಕೀಲ ಹೇಳಿದ್ದಾರೆ.

  • ಮೊಬೈಲಿನಲ್ಲಿ ಮಾತನಾಡಬೇಡ – ಬುದ್ಧಿ ಹೇಳಿದ್ದಕ್ಕೆ ಪತಿ ಹತ್ಯೆಗೆ ಪತ್ನಿಯಿಂದಲೇ ಸುಪಾರಿ

    ಮೊಬೈಲಿನಲ್ಲಿ ಮಾತನಾಡಬೇಡ – ಬುದ್ಧಿ ಹೇಳಿದ್ದಕ್ಕೆ ಪತಿ ಹತ್ಯೆಗೆ ಪತ್ನಿಯಿಂದಲೇ ಸುಪಾರಿ

    ಕಾರವಾರ : ಪ್ರತಿ ದಿನ ಮನೆಯಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ಹರಟುತ್ತಿದ್ದ ಪತ್ನಿಗೆ ಬುದ್ಧಿ ಹೇಳಿದ್ದಕ್ಕೆ ಪತಿಯನ್ನೇ ಕೊಲ್ಲಲು 30 ಸಾವಿರ ಸುಪಾರಿ ನೀಡಿ ಹತ್ಯೆ ಪ್ರಯತ್ನದ ವೇಳೆ ಪತ್ನಿ  ಸಿಕ್ಕಿಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.

    ಸರಸ್ವತಿ ಸುತಾರ ಪತಿಯ ಕೊಲೆಗೆ ಸುಪಾರಿ ನೀಡಿದ ಪತ್ನಿ. ಈಕೆ ದಾಂಡೇಲಿಯ ಅಂಕುಷ ರಾಮಾ ಸುತಾರ ಎಂಬುವವನನ್ನು ಆರು ವರ್ಷದ ಹಿಂದೆ ಮದುವೆಯಾಗಿದ್ದು, ಹಲವು ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಹೀಗಾಗಿ ಮನೆಯಲ್ಲಿ ಸಮಯ ಕಳೆಯಲು ನೆಂಟರು ಹಾಗೂ ಪರಿಚಯಸ್ಥರೊಂದಿಗೆ ಮೊಬೈಲ್ ನಲ್ಲಿ ಕಾಲಹರಣ ಮಾಡುತ್ತಿದ್ದಳು.

    ಹೆಂಡತಿಯ ಈ ವರ್ತನೆಯಿಂದ ಬೇಸತ್ತಿದ್ದ ಪತಿ ಅಂಕುಷರಾಮಾ ಪತ್ನಿಗೆ ಮೊಬೈಲ್ ನಲ್ಲಿ ಹರಟದಂತೆ ಬುದ್ದಿ ಹೇಳಿದ್ದನು. ಇದರಿಂದ ಕೋಪಗೊಂಡ ಈಕೆ ತನ್ನ ಪರಿಚಯ ಹೊಂದಿದ್ದ ಗಣೇಶ ಶಾಂತರಾಂ ಎಂಬುವವನಿಗೆ 30 ಸಾವಿರ ಸುಪಾರಿ ನೀಡಿ ಹತ್ಯೆ ಮಾಡುವಂತೆ ತಿಳಿಸಿದ್ದಳು.

    ಗಣೇಶ ಶಾಂತರಾಂ ಇಬ್ಬರು ಅಪ್ರಾಪ್ತ ಬಾಲಕರೊಂದಿಗೆ ಇಂದು ಮನೆಗೆ ಆಗಮಿಸಿದ್ದು ಮನೆಯಲ್ಲಿದ್ದ ಅಂಕುಷ ರಾಮಾ ಸುತಾರ ನನ್ನು ಕತ್ತು ಹಿಸುಕಿ ಕೊಲೆ ಮಾಡಲು ಎತ್ನಿಸಿದ್ದು, ಈತ ಕೂಗಿಕೊಂಡಾಗ ಪಕ್ಕದ ಮನೆಯಲ್ಲಿ ಇದ್ದ ಸಹೋದರರು ಓಡಿ ಬಂದಿದ್ದಾರೆ. ಈ ವೇಳೆ ಹತ್ಯೆ ಮಾಡಲು ಬಂದಿದ್ದ ಇಬ್ಬರು ಅಪ್ರಾಪ್ತರು ಓಡಿಹೋಗಿದ್ದು, ಸುಪಾರಿ ತೆಗೆದುಕೊಂಡ ಗಣೇಶ್ ಶಾಂತರಾಂ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಫೇಸ್‍ಬುಕ್ ಲೈವ್ ವೇಳೆ ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಕಿರುತೆರೆ ನಟ

    ಘಟನೆ ಸಂಬಂಧ ದಾಂಡೇಲಿಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಸ್ವತಿ ಸುತಾರ ಮತ್ತು ಬೆಳಗಾವಿ ಮೂಲದ ಗಣೇಶ ಶಾಂತರಾಂ ಪಾಟೀಲ್ ನನ್ನು ಬಂಧಿಸಿದ್ದಾರೆ.

  • ವರದಕ್ಷಿಣೆಗಾಗಿ ಪತ್ನಿಯನ್ನೇ ಕೊಂದ ಪತಿ

    ವರದಕ್ಷಿಣೆಗಾಗಿ ಪತ್ನಿಯನ್ನೇ ಕೊಂದ ಪತಿ

    ತುಮಕೂರು: ಒಂದು ವರ್ಷದ ಹಿಂದೆ ಮಾದುವೆಯಾಗಿದ್ದ ಯುವತಿಯನ್ನು ವರದಕ್ಷಿಣೆ ಆಸೆಗೆ ಪತಿಯೇ ಕೊಲೆಗೈದ ಘಟನೆ ತುಮಕೂರಿನಲ್ಲಿ ನಡೆದಿದೆ.

    ಸೌಂದರ್ಯ(19) ಕೊಲೆಯಾದ ದುರ್ದೈವಿ. ಈಕೆಯ ಪತಿ ನಾಗರಾಜು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಕಳೆದ ಒಂದು ವರ್ಷದ ಹಿಂದೆ ಹಾಸನದ ಸಕಲೇಶಪುರದ ನಿವಾಸಿ ಸೌಂದರ್ಯಳನ್ನು, ಕುಣಿಗಲ್ ತಾಲೂಕಿನ ಕಾವೇರಿಪುರದ ನಿವಾಸಿ ನಾಗರಾಜು ವಿವಾಹವಾಗಿದ್ದರು. ಒಂದು ವರ್ಷದಿಂದಲು ವರದಕ್ಷಿಣೆ ಹಣಕ್ಕಾಗಿ ಸೌಂದರ್ಯಾಳ ಪತಿ ನಾಗರಾಜ್ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದನ್ನು ಓದಿ: ತವರು ಮನೆಯಿಂದ ಹಣ ತರುವಂತೆ ಗಲಾಟೆ- ಸಿವಿಲ್ ಎಂಜಿನಿಯರ್ ಪತ್ನಿ ಆತ್ಮಹತ್ಯೆ

    ಆರೋಪಿ ನಾಗರಾಜು ತುಮಕೂರಿನ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಕೆಲವು ತಿಂಗಳ ಹಿಂದೆಯಷ್ಟೇ ತುಮಕೂರಿನ ಸರಸ್ವತಿಪುರಂಗೆ ಬಂದು ನೆಲೆಸಿದ್ದರು. ಆದರೆ ಆಗಿಂದಾಗ್ಗೆ ಇಬ್ಬರ ನಡುವೆ ವರದಕ್ಷಿಣೆ ಹಾಗೂ ಸಣ್ಣಪುಟ್ಟ ವಿಷಯಕ್ಕೆ ಜಗಳ ನಡೆಯುತ್ತಿತ್ತು. ಆದರೆ ಕಳೆದ ರಾತ್ರಿ ಹಣಕ್ಕಾಗಿ ಪೀಡಿಸಿದ ನಾಗರಾಜು ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ಆರೋಪಿ ತಲೆ ಮರೆಸಿಕೊಂಡಿದ್ದು, ತುಮಕೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನು ಓದಿ:ಲಸಿಕೆ ಹಾಕಿಸಿಕೊಂಡ ವರನೇ ಬೇಕೆಂದ ವಧು – ಶಶಿ ತರೂರ್ ತಬ್ಬಿಬ್ಬು

  • ಒಂದೇ ಬಾರಿಗೆ 10 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಒಂದೇ ಬಾರಿಗೆ 10 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಕೇಪ್‍ಟೌನ್: ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ಹತ್ತು ಮಕ್ಕಳಿಗೆ ಜನ್ಮ ನೀಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ

    ಈಗಾಗಲೇ ಅವಳಿ ಮಕ್ಕಳಿಗೆ ತಾಯಿಯಾಗಿರುವ, ಗೋಸಿಯಮ್ ತಮಾರಾ ಸಿಥೋಲ್(37) ಇದೀಗ ಪ್ರಿಟೋರಿಯಾದ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಏಳು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ ಅವರ ಪತಿ ತಿಳಿದ್ದಾರೆ.

    ಪ್ರಸ್ತುತ ನಿರುದ್ಯೋಗಿ ಟೆಬೋಗೊ ತ್ಸೊಟೆಟ್ಸಿ ಸೋಮವಾರ ತಡರಾತ್ರಿ ತಮಗೆ ಮಗು ಜನಿಸಿರುವ ಬಗ್ಗೆ ಮಾದ್ಯಮಗಳಿಗೆ ತಿಳಿಸಿದ್ದು, ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ಮುನ್ನ ಗೋಸಿಯಮ್ ತಮಾರಾ ಸಿಥೋಲ್ ಗರ್ಭಿಣಿಯಾಗಿದ್ದಾಗ ಸ್ವಾಭಾವಿಕ ಹೆರಿಗೆಯಾಗಿತ್ತು. ಆದರೆ ಚಿಕಿತ್ಸೆಯ ಪರಿಣಾಮ ಮಹಿಳೆ ಇಷ್ಟು ಭ್ರೂಣಗಳಿಗೆ ಗರ್ಭಧರಿಸಿದ್ದಾರೆ. ಇದನ್ನು ಓದಿ: ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಈ ಮುನ್ನ ಮೊರೊಕ್ಕೊದ ಆಸ್ಪತ್ರೆಯಲ್ಲಿ ಮಾಲಿಮನ್ ಮಹಿಳೆ-ಹಲೀಮಾ ಸಿಸ್ಸೆ ಒಂಬತ್ತು ಮ್ಕಕಳಿಗೆ ಜನ್ಮ ನೀಡಿದ್ದರು. ಇದಕ್ಕೆ ಆಕೆ ಪಡೆದ ಚಿಕಿತ್ಸೆ ಕಾರಣ ಎಂದು ಹೇಳಲಾಗಿತ್ತು. ಇದೀಗ ದಕ್ಷಿಣ ಆಫ್ರಿಕಾದ ಮಹಿಳೆ 10 ಮಕ್ಕಳಿಗೆ ಜನ್ಮ ನೀಡುವ ಮೂಲಕ ಹಳೆಯ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಇದನ್ನು ಓದಿ: ಇಂಟರ್ನೆಟ್‌ ನಿಲುಗಡೆ – ವಿಶ್ವದ ಟಾಪ್ ವೆಬ್‍ಸೈಟ್‍ಗಳು ಡೌನ್