Tag: ಪತಿ

  • ಮನೆ ಕನ್‍ಸ್ಟ್ರಕ್ಷನ್ ಉಸ್ತುವಾರಿಗೆ ಬಂದವ ಸ್ನೇಹಿತನ ಪತ್ನಿಯ ಜೊತೆ ಪರಾರಿ

    ಮನೆ ಕನ್‍ಸ್ಟ್ರಕ್ಷನ್ ಉಸ್ತುವಾರಿಗೆ ಬಂದವ ಸ್ನೇಹಿತನ ಪತ್ನಿಯ ಜೊತೆ ಪರಾರಿ

    ಬೆಂಗಳೂರು: ಮನೆ ಕಟ್ಟುತ್ತಿದ್ದೇನೆ. ಸ್ವಲ್ಪ ಮನೆ ಉಸ್ತುವಾರಿ ನೋಡಿಕೋ ಎಂದು ಸ್ನೇಹಿತನನ್ನು ಬಿಟ್ಟರೆ ಆ ಮಹಾನುಭಾವ ಸ್ನೇಹಿತನ ಹೆಂಡತಿಯನ್ನೇ ಪಟಾಯಿಸಿಕೊಂಡುಬಿಟ್ಟಿದ್ದಾನೆ.

    ಕೋಣನಕುಂಟೆ ನಿವಾಸಿ ದೇವರಾಜ್, ಮನೆ ಸ್ನೇಹಿತ ಮಹೇಶ್‍ಗೆ ಉಸ್ತುವಾರಿ ನೀಡಿದ್ದರು. ಈ ವೇಳೆ ದೇವರಾಜ್ ಪತ್ನಿ ಲತಾ ಜೊತೆ ಸ್ನೇಹ ಬೆಳೆಸಿದ್ದಾನೆ. ಬಳಿಕ ಇವರ ಸಂಬಂಧ ಅನೈತಿಕ ಸಂಬಂಧಕ್ಕೆ ತಿರುಗಿತ್ತು.

    ಸ್ವಲ್ಪ ದಿನದ ನಂತರ ಗಂಡ ದೇವರಾಜ್ ಅವರನ್ನು ಬಿಟ್ಟು ಲತಾ ಹೊರ ಹೋಗಿದ್ದಾರೆ. ಬಳಿಕ ಎರಡು ಹೆಣ್ಣು ಮಕ್ಕಳ ತಾಯಿಯಾಗಿರುವ ಲತಾ ಮತ್ತು ದೇವರಾಜ್ ಅವರನ್ನು ಕೂರಿಸಿ ಹಿರಿಯರು ಸಂಧಾನ ಮಾಡಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪತ್ನಿಯ ಮೂಗು ಕಚ್ಚಿದ ಪತಿ

    ಇದಾದ ಬಳಿಕ ಬಸವನಗುಡಿ ಮಹಿಳಾ ಠಾಣೆಯಲ್ಲಿ ಲತಾ ಅವರು ಪತಿ ಹೊಡೆಯುತ್ತಾನೆ ಎಂದು ದೂರು ನೀಡಿದ್ದಾರೆ. ಇತ್ತ ಪತ್ನಿ ಮತ್ತು ಪ್ರಿಯಕರನ ವಿರುದ್ಧ ದೇವರಾಜ್ ದೂರು ನೀಡಲು ಹೋದರೆ ಕೋಣನಕುಂಟೆ ಪೊಲೀಸರು ದೂರು ಸ್ವೀಕರಿಸಿಲ್ಲ.

    ಈ ನಡುವೆ ಮನೆಯನ್ನೇ ಖಾಲಿ ಮಾಡಿಕೊಂಡುವಂತೆ ಧಮ್ಕಿ ಹಾಕಿದ್ದಾರೆ. ಧಮ್ಕಿ ಹಾಕಿ ಸ್ಟೇಷನ್ ನಲ್ಲೇ ಒಂದು ದಿನ ಕೂರಿಸಿದ್ದಾರೆ. ಅಷ್ಟೇ ಅಲ್ಲದೇ ಲಂಚವನ್ನು ಕೋಣನಕುಂಟೆ ಪೊಲೀಸರು ಪಡೆದಿದ್ದಾರೆ ಎಂದು ದೇವರಾಜ್ ಆರೋಪಿಸಿದ್ದಾರೆ.

    ಮದುವೆಯಾದ ನಂತರ ನಾನು ಪತ್ನಿ ಹೆಸರಿನಲ್ಲಿ ಆಸ್ತಿ ಮಾಡಿದ್ದೆ. ಆದರೆ ಈಗ ಗೆಳೆಯನ ಜೊತೆ ಸೇರಿ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಇಬ್ಬರು ಹೆಣ್ಣು ಮಕ್ಕಳನ್ನು ಕೊಡುವಂತೆ ಧಮ್ಕಿ ಹಾಕುತ್ತಿದ್ದಾರೆ. ಈಗ ಕೋರ್ಟ್ ನಿಂದ ಮನೆ ಮಾರಾಟಕ್ಕೆ ತಡೆಯಾಜ್ಞೆ ತಂದಿದ್ದೇನೆ ಎಂದು ದೇವರಾಜ್ ಹೇಳಿದ್ದಾರೆ.

  • ಅನೈತಿಕ ಸಂಬಂಧದ ಗುಮಾನಿ- ಬಿಹಾರದಿಂದ ಬಂದು ಪತ್ನಿಯ ಕೊಲೆಗೆ ಯತ್ನ

    ಅನೈತಿಕ ಸಂಬಂಧದ ಗುಮಾನಿ- ಬಿಹಾರದಿಂದ ಬಂದು ಪತ್ನಿಯ ಕೊಲೆಗೆ ಯತ್ನ

    ಬೆಂಗಳೂರು: ಪತಿಗೆ ಕುಡಿಯೋದೊಂದೇ ಚಿಂತೆ, ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಅನುಮಾನಪಡುತ್ತಿದ್ದ. ಈತನ ಕಿರುಕುಳದಿಂದ ಬೇಸತ್ತ ಪತ್ನಿ ಬಿಹಾರದಿಂದ ಬೆಂಗಳೂರಿಗೆ ಬಂದು ಜೀವನ ಕಟ್ಟಿಕೊಂಡಿದ್ದಳು. ಆದರೂ ಬಿಡದ ಪಾಪಿ ಪತಿ ಬೆಂಗಳೂರಿಗೆ ಆಗಮಿಸಿ ಪತ್ನಿ ಕೊಲೆಗೆ ಯತ್ನಿಸಿದ್ದಾನೆ.

    ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ಅನ್ವರಾ ಬೇಗಂ ಮಕ್ಕಳನ್ನು ಜೊತೆಗೆ ಕರೆದುಕೊಂಡು ಬಿಹಾರದಿಂದ ಬೆಂಗ್ಳೂರಿಗೆ ಬಂದಿದ್ದರು. ಮಾರತ್‍ಹಳ್ಳಿ ಬಳಿ ಶೆಡ್‍ನಲ್ಲಿ ವಾಸ ಮಾಡಿಕೊಂಡು, ಹೌಸ್ ಕೀಪಿಂಗ್ ಕೆಲಸ ಮಾಡಿ ಮಕ್ಕಳನ್ನು ಸಾಕಿಕೊಂಡು ಜೀವನ ಮಾಡುತ್ತಿದ್ದರು. ಎರಡು ವರ್ಷದ ಬಳಿಕ ಪತ್ನಿ ಹುಡುಕಿಕೊಂಡು ಬೆಂಗಳೂರಿಗೆ ಆಗಮಿಸಿದ್ದ ಪತಿ ಭುಜ್ರತ್ ಅಲಿ, ಆಕೆಯನ್ನು ಕೊಲೆ ಮಾಡಲೆಂದು ಬಿಹಾರದಲ್ಲೇ ಹರಿತವಾದ ಚಾಕು ಖರೀದಿಸಿ ಜೊತೆಯಲ್ಲೇ ತಂದಿದ್ದ.

    ಭುಜ್ರತ್ ಅಲಿ ಗುರುವಾರ ಪತ್ನಿ ಕೊಲೆಗೆ ಯತ್ನಿಸಿದ್ದ, ಈ ವೇಳೆ ಪತ್ನಿ ವಿರೋಧ ವ್ಯಕ್ತಪಡಿಸಿದರೂ ಮುಖವನ್ನೇ ಕತ್ತರಿಸಿದ್ದ. ಬಳಿಕ ಕೊಲೆಯಾಗಿದ್ದಾಳೆಂದು ಭಯಬಿದ್ದು ಸ್ಥಳದಿಂದ ಪರಾರಿಯಾಗಿದ್ದ. ಯಾವುದೇ ಸುಳಿವು ಇಲ್ಲದೆ ಕೇವಲ ಪೋಟೋ ಹಿಡಿದು ಮಾರತ್ ಹಳ್ಳಿ ಪೊಲೀಸರು ಹುಡುಕಾಟ ನಡೆಸಿದ್ದರು. ಬಳಿಕ ಕೇವಲ 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

    ಕೆ.ಆರ್.ಪುರಂ ರೈಲ್ವೆ ಸ್ಟೇಷನ್ ಬಳಿ ಸ್ವಲ್ಪ ಯಾಮಾರಿದ್ದರೂ ಆರೋಪಿ ಎಸ್ಕೇಪ್ ಆಗುತ್ತಿದ್ದ. ಸದ್ಯ ಗಾಯಾಳು ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ, ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

  • ಬೆನ್ನ ಮೇಲಿನ ಟ್ಯಾಟೂ ರಿವೀಲ್ ಮಾಡಿ ಪತಿಗೆ ಸಂಜನಾ ಧನ್ಯವಾದ

    ಬೆನ್ನ ಮೇಲಿನ ಟ್ಯಾಟೂ ರಿವೀಲ್ ಮಾಡಿ ಪತಿಗೆ ಸಂಜನಾ ಧನ್ಯವಾದ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ 15 ವರ್ಷಗಳ ನಂತರ ಟ್ಯಾಟೂವನ್ನು ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ.

    ಗಂಡ-ಹೆಂಡತಿ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟು, ಖ್ಯಾತಿ ಪಡೆದ ನಟಿ ಸಂಜನಾ ಗಲ್ರಾನಿ ನಂತರ ಹಲವು ಚಿತ್ರರಂಗಗಳಲ್ಲಿ ಬ್ಯುಸಿಯಾಗಿದ್ದರು. ಇತ್ತೀಚೆಗೆ ಕೆಲವು ತಿಂಗಳ ಹಿಂದೆ ನಟಿ ಸಂಜನಾ ಗಲ್ರಾನಿ ವೈದ್ಯ ಆಜೀಜ್ ಎಂಬವರನ್ನು ವಿವಾಹವಾಗಿದ್ದಾರೆ ಎಂಬ ವಿಚಾರ ಬಹಿರಂಗಗೊಂಡಿತು.

    ಸದ್ಯ ಇದೀಗ ಸಂಜನಾ ಗಲ್ರಾನಿಯವರು ಬೆನ್ನ ಮೇಲೆ ಹಾಕಿಸಿಕೊಂಡಿರುವ ತಮ್ಮ ಪತಿಯ ಹೆಸರಿನ ಟ್ಯಾಟೂವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸಂಜನಾ ಸೀರೆಯುಟ್ಟು, ಮುಡಿಗೆ ಮಲ್ಲಿಗೆ ಹೂ ಮುಡಿದು, ಟ್ರೇಡಿಶನ್ ಲುಕ್‍ನಲ್ಲಿ ಫೋಸ್ ನೀಡಿದ್ದು, ಅವರ ಬೆನ್ನ ಮೇಲೆ ಆಜೀಜ್ ಎಂಬ ಹಚ್ಚೆ ಇರುವುದನ್ನು ಕಾಣಬಹುದಾಗಿದೆ.

    ಫೋಟೋ ಜೊತೆಗೆ ನನ್ನ ಟ್ಯಾಟೂವನ್ನು ಬಹಿರಂಗ ಪಡಿಸುತ್ತಿದ್ದೇನೆ. ನನ್ನ ವೈಯಕ್ತಿಕ ಮತ್ತು ನನ್ನ ಹೃದಯಕ್ಕೆ ಹತ್ತಿರವಾದಂತಹ ಟ್ಯಾಟೂ, ಅನಗತ್ಯ ಗಾಸಿಪ್‍ಗಳಿಂದ ದೂರವಿರುವ ಸಲುವಾಗಿ ನನ್ನ ಜೀವನದ ಪ್ರೀತಿಯನ್ನು ಇಷ್ಟು ದಿನ ಮುಚ್ಚಿಟ್ಟಿದೆ. ಆದರೀಗ ನಾವು ಮದುವೆಯಾಗಿರುವ ವಿಚಾರವನ್ನು ಅಧಿಕೃತವಾಗಿ ಘೋಷಿಸುತ್ತಿದ್ದೇವೆ. ಹಾಗಾಗಿ ಟ್ಯಾಟೂವನ್ನು ತೋರಿಸುತ್ತಿದ್ದೇನೆ ಎಂದಿದ್ದಾರೆ.

    ವೃತ್ತಿ ಜೀವನದಲ್ಲಿ ನಟಿಯರು ಸ್ನೇಹಿತರೊಂದಿಗೆ ಒಂದೆರಡು ಬಾರಿ ಕಾಣಿಸಿಕೊಂಡರೆ ಹಲವಾರು ಗಾಸಿಪ್‍ಗಳನ್ನು ಎದುರಿಸಬೇಕಾಗುತ್ತದೆ. ನಾನು ಹೇಳುತ್ತಿರುವುದು ತಮಾಷೆ ಎನಿಸಬಹುದು, ಆದರೆ ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ನನ್ನ ರಾಕಿ ಬ್ರದರ್ ಅಲ್ಲದೇ ನನ್ನ ಶುಗರ್ ಡ್ಯಾಡಿಯನ್ನು ಕೂಡ ಬಾಯ್ ಫ್ರೆಂಡ್ ಎಂದು ಕರೆದಿರುವುದನ್ನು ನೋಡಿದ್ದೇನೆ. ಓರ್ವ ನಟಿಯೊಂದಿಗೆ ಪಬ್ಲಿಕ್‍ನಲ್ಲಿ ಕಾಣಿಸಿಕೊಳ್ಳುವವರೆಲ್ಲರೂ ಬಾಯ್‍ಫ್ರೆಂಡ್ ಆಗುತ್ತಾರಾ? ಇದು ಮಾನಸಿಕವಾಗಿ ತೊಂದರೆ ಕೊಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ನಮ್ಮ ಎದುರಾಳಿ ವ್ಯಕ್ತಿ ಸ್ನೇಹಿತ, ಹಿತೈಷಿ, ಓರ್ವ ಪ್ರಸಿದ್ಧ ನಟ, ರಾಜಕಾರಣಿ ಅಥವಾ ಕ್ರಿಕೆಟಿಗನಾಗಿದ್ದು, ಯಾವುದೇ ಸಾಕ್ಷಿಗಳಿಲ್ಲದೇ ಅವರ ಸ್ನೇಹಕ್ಕೆ 1,000 ಕಥೆಗಳನ್ನು ಕಟ್ಟಿ ಹೇಳುತ್ತಾರೆ. ವಾವ್ ನಾವು ಎಂತಹ ಸಮಾಜದಲಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈ ಎಲ್ಲಾ ಸಮಸ್ಯೆ, ಆರೋಪ ಮತ್ತು ನೆಗೆಟಿವಿಟಿಗಳ ಮಧ್ಯೆ ನಿಜವಾದ ಪ್ರೀತಿ ತನ್ನ ದಾರಿಯನ್ನು ಕಂಡುಕೊಂಡಿದೆ ಮತ್ತು ನಿಜವಾದ ಪ್ರೇಮಿಗಳು ಮಾತ್ರ ಒಬ್ಬರಿಗೊಬ್ಬರು ನಿಲ್ಲುತ್ತಾರೆ. ಸತ್ಯ ಕೊನೆಗೆ ಗೆಲ್ಲುತ್ತದೆ ಎಂದು ತಿಳಿಸಿದ್ದಾರೆ.

    ನನ್ನ ದೇಹದ ಒಂದು ಭಾಗವನ್ನು ನಾನು ಪ್ರೀತಿಸುವ ವ್ಯಕ್ತಿಗೆ ಅರ್ಪಿಸುತ್ತೇನೆ, ಅವರ ಹೆಸರನ್ನು ನನ್ನ ಮೇಲೆ ಬರೆಸಿಕೊಂಡಿದ್ದೇನೆ. ಇಂದಿಗೂ ಮತ್ತು ಎಂದಿಗೂ ಐ ಲವ್ ಯೂ ಅಜೀಜ್.. 15 ವರ್ಷದಿಂದ ನನ್ನ ಜೀವನದ ಸರ್ವ ಶಕ್ತಿಯಾಗಿ, ನಿಜವಾದ ಗೆಳೆಯ, ಲವರ್, ಗಂಡ ಮತ್ತು ತಂದೆ ರೀತಿಯ ಮೆಂಟರ್ ಆಗಿ ಇರುವುದಕ್ಕೆ ಧನ್ಯವಾದ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: 80 ಕೆಜಿ ತೂಕ ಎತ್ತಿದ ನಟಿ ದಿಶಾ ಪಟಾನಿ

  • ಪತ್ನಿಯಿಂದ ದೂರವಿರಲು ಕೋವಿಡ್ ಪಾಸಿಟಿವ್ ನಕಲಿ ವರದಿ ಮನೆಗೆ ಕಳಿಸಿದ

    ಪತ್ನಿಯಿಂದ ದೂರವಿರಲು ಕೋವಿಡ್ ಪಾಸಿಟಿವ್ ನಕಲಿ ವರದಿ ಮನೆಗೆ ಕಳಿಸಿದ

    ಇಂದೋರ್: ಪತ್ನಿಯಿಂದ ದೂರವಿರಲು 26 ವರ್ಷದ ವ್ಯಕ್ತಿ ಭರ್ಜರಿ ನಾಟಕವಾಡಿದ್ದು, ತನಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ಕೋವಿಡ್ ಪಾಸಿಟಿವ್ ರಿಪೋರ್ಟ್ ಮನೆಗೆ ಕಳುಹಿಸಿದ್ದಾನೆ.

    ಮಧ್ಯ ಪ್ರದೇಶದ ಮಹೌ ನಿವಾಸಿ ಇದೇ ವರ್ಷ ಫೆಬ್ರವರಿಯಲ್ಲಿ ವಿವಾಹವಾಗಿದ್ದು, ವೈಯಕ್ತಿಕ ಕಾರಣಗಳಿಂದಾಗಿ ತನ್ನ ಪತ್ನಿಯೊಂದಿಗೆ ದೂರವಿರಲು ಬಯಸಿದ್ದಾನೆ. ಹೀಗಾಗಿ ಪತ್ನಿಯಿಂದ ದೂರವಿರಲು ಕೊರೊನಾ ಪಾಸಿಟಿವ್ ನಾಟಕವಾಡಿದ್ದಾನೆ. ಖಾಸಗಿ ಆಸ್ಪತ್ರೆಯ ವೆಬ್‍ಸೈಟ್ ಮೂಲಕ ಬೇರೆ ವ್ಯಕ್ತಿಯ ಕೊರೊನಾ ಪಾಸಿಟಿವ್ ರಿಪೋರ್ಟ್ ಡೌನ್‍ಲೋಡ್ ಮಾಡಿಕೊಂಡು, ಅದಕ್ಕೆ ತನ್ನ ಹೆಸರನ್ನು ಸೇರಿಸಿದ್ದಾನೆ ಎಂದು ಛೋಟಿ ಗ್ವಾಲ್‍ಟೋಲಿ ಪೊಲೀಸ್ ಠಾಣೆಯ ಇನ್‍ಚಾರ್ಜ್ ಸಂಜಯ್ ಶುಕ್ಲಾ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.

    ತನ್ನ ಕೊರೊನಾ ಪಾಸಿಟಿವ್ ನಕಲಿ ವರದಿಯನ್ನು ಕುಟುಂಸ್ಥರಿಗೆ ಕಳುಹಿಸಿದ್ದು, ಬಳಿಕ ಮನೆಯಿಂದ ನಾಪತ್ತೆಯಾಗಿದ್ದಾನೆ. ವ್ಯಕ್ತಿಗೆ ಕೊರೊನಾ ಲಕ್ಷಣಗಳು ಇರಲಿಲ್ಲ, ಪಾಸಿಟಿವ್ ಆಗಲು ಹೇಗೆ ಸಾಧ್ಯ ಎಂದು ಮನೆಯವರಿಗೆ ಅನುಮಾನ ಮೂಡಿದೆ.

    ವಾಟ್ಸಪ್ ಮೂಲಕ ತನ್ನ ತಂದೆ ಹಾಗೂ ಪತ್ನಿಗೆ ವ್ಯಕ್ತಿ ನಕಲಿ ರಿಪೋರ್ಟ್ ಕಳುಹಿಸಿ, ನಾಪತ್ತೆಯಾಗಿದ್ದಾನೆ. ವ್ಯಕ್ತಿಗೆ ಯಾವುದೇ ರೀತಿಯ ಕೊರೊನಾ ಲಕ್ಷಣಗಳು ಇರಲಿಲ್ಲ. ಹೀಗಾಗಿ ಕುಟುಂಬಸ್ಥರಿಗೆ ಅನುಮಾನ ಮೂಡಿದ್ದು, ತಕ್ಷಣವೇ ಖಾಸಗಿ ಲ್ಯಾಬರೋಟರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದು, ಈ ವೇಳೆ ಕೊರೊನಾ ಪಾಸಿಟಿವ್ ಕುರಿತು ನಕಲಿ ವರದಿ ಪಡೆದಿರುವುದು ತಿಳಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಲ್ಯಾಬರೋಟರಿಯವರು ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದು, ಬಳಿಕ ಸುಳ್ಳು ದಾಖಲೆ ಸೃಷ್ಟಿ ಸೇರಿದಂತೆ ಸಂಬಂಧಿಸಿದ ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ದೃಷ್ಟಿಯಿಂದ ಪೊಲೀಸರ ಮುಂದೆ ಹಾಜರಾಗುವಂತೆ ವ್ಯಕ್ತಿಗೆ ಈಗಾಗಲೇ ನೋಟಿಸ್ ಕಳುಹಿಸಲಾಗಿದೆ ಎಂದು ಶುಕ್ಲ ಅವರು ತಿಳಿಸಿದ್ದಾರೆ.

  • ಚಿನ್ನ, ಬೆಳ್ಳಿ ಅಲ್ಲ – ಪತಿ ನೀಡಿದ ಗಿಫ್ಟ್ ಗೆ ಪತ್ನಿ ಫುಲ್ ಖುಷ್!

    ಚಿನ್ನ, ಬೆಳ್ಳಿ ಅಲ್ಲ – ಪತಿ ನೀಡಿದ ಗಿಫ್ಟ್ ಗೆ ಪತ್ನಿ ಫುಲ್ ಖುಷ್!

    – ಗಿಫ್ಟ್ ನೋಡಲು ಮನೆಗೆ ಮಹಿಳೆಯರ ದೌಡು!
    – ವಜ್ರ, ಬ್ರ್ಯಾಂಡೆಡ್ ಬಟ್ಟೆಯಂತೂ ಅಲ್ಲವೇ ಅಲ್ಲ

    ಪಾಟ್ನಾ: ಬಿಹಾರದ ಮೆಕ್ಯಾನಿಕಲ್ ಇಂಜಿನೀಯರ್ ಪತ್ನಿಗೆ ನೀಡಿರುವ ಕಾಣಿಕೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಇತ್ತ ಗಿಫ್ಟ್ ಪಡೆದ ಪತ್ನಿ ಫುಲ್ ಖುಷಿಯಾಗಿದ್ದು, ಮನೆಗೆ ಆಗಮಿಸುತ್ತಿರುವ ಗೆಳತಿಯರಿಗೆ ಪತಿ ನೀಡಿದ ಕಾಣಿಕೆಯನ್ನು ತೋರಿಸುತ್ತಿದ್ದಾರೆ.

    ಅನುಜ್ ಕುಮಾರ್ ಗಿಫ್ಟ್ ನೀಡಿದ ಪತಿ. ಚಿನ್ನ, ಬೆಳ್ಳಿ, ವಜ್ರ ಮತ್ತು ಬ್ರ್ಯಾಂಡೆಡ್ ಬಟ್ಟೆ ಬದಲಾಗಿ ಪತ್ನಿಗೆ ಲಿಫ್ಟ್ ನೀಡಿದ್ದಾರೆ. ಈ ಲಿಫ್ಟ್ ಮೂಲಕವೇ ಪತ್ನಿ ಇದೀಗ ಊಟ, ತಿಂಡಿ, ಪಾನೀಯ ಕಳುಹಿಸುತ್ತಿದ್ದಾರೆ. ಇದರಿಂದ ಪತ್ನಿ ಕೆಳಗಿನಿಂದ ಮೇಲಕ್ಕೆ, ಮೇಲಿನಿಂದ ಕೆಳಗೆ ಓಡಾಡೋದು ಕಡಿಮೆಯಾಗಿದೆ. ಇದರಿಂದ ಪತ್ನಿಯ ಆಯಾಸ ಕಡಿಮೆ ಮಾಡಿದ್ದಾರೆ. ಮನೆಯಲ್ಲಿಯೇ ಊಟ ಕಳಿಸುವ ಪುಟ್ಟ ಲಿಫ್ಟ್ ತಯಾರಿಸಿದ್ದಾರೆ. ಕಿಚನ್ ನಿಂದ ನೇರವಾಗಿ ಡೈನಿಂಗ್ ಹಾಲ್ ಗೆ ಊಟ ಕಳಿಸಬಹುದಾಗಿದೆ.

    ಲಿಫ್ಟ್ ಗಿಫ್ಟ್ ನೀಡಿದ್ಯಾಕೆ?:
    ಒಮ್ಮೆ ಮನೆಗೆ ಅತಿಥಿಗಳು ಬಂದಾಗ ಪತ್ನಿ ಒಳಗೂ, ಹೊರಗೂ ಓಡಾಡುತ್ತಿದ್ದಳು. ಮೆಟ್ಟಿಲುಗಳು ಹೆಚ್ಚಾಗಿರೋದರಿಂದ ಒಮ್ಮೆ ಪತ್ನಿ ಜಾರಿ ಬಿದ್ದು ಆಸ್ಪತ್ರೆ ಸೇರುವಂತಾಗಿದೆ. ಹಾಗಾಗಿ ಪತ್ನಿಯ ಶ್ರಮ ಕಡಿಮೆ ಮಾಡುವ ಉದ್ದೇಶದಿಂದ ಪುಟ್ಟ ಲಿಫ್ಟ್ ನಿರ್ಮಿಸುವ ಆಲೋಚನೆ ಬಂತು ರಂದು ಅನುಜ್ ಕುಮಾರ್ ಹೇಳುತ್ತಾರೆ.

    ನಮ್ಮದು ಪುಟ್ಟ ಮನೆ. ಹಾಗಾಗಿ ಅಡುಗೆ ಮನೆ ಮೊದಲ ಮಹಡಿಯಲ್ಲಿ ಮಾಡಲಾಗಿದ್ದು, ಗ್ರೌಂಡ್ ಫ್ಲೋರ್ ನಲ್ಲಿ ವಿಸ್ತಾರವಾದ ಹಾಲ್ ಮಾಡಿದ್ದೇವೆ. ಯಾರೇ ಅತಿಥಿಗಳು ಬಂದ್ರೂ ಪತ್ನಿ ಕಾಜಲ್ ಮೇಲೆ, ಕೆಳಗೆ ಓಡಾಡುವಂತಾಗಿತ್ತು. ಹಾಗಾಗಿ ಲಿಫ್ಟ್ ಮಾಡಿದೆ. ಇನ್ನೂ ಕೊರೊನಾ ಕಾಲದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿತ್ತು. ಕ್ವಾರಂಟೈನ್ ಸಂದರ್ಭದಲ್ಲಿ ಲಿಫ್ಟ್ ನಮಗೆ ಹೆಚ್ಚು ಉಪಯುಕ್ತವಾಯ್ತು ಎಂದು ಅನುಜ್ ಕುಮಾರ್ ಹೇಳಿದ್ದಾರೆ.

    ಸದ್ಯ ಅನುಜ್ ಕುಮಾರ್ ನೀಡಿದ ಗಿಫ್ಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮನೆಯ ಸುತ್ತಲಿನ ಮಹಿಳೆಯರು, ಸಂಬಂಧಿಕರು ಲಿಫ್ಟ್ ನೋಡಲು ಅನುಜ್ ಕುಮಾರ್ ಮನೆಗೆ ದೌಡಾಯಿಸುತ್ತಿದ್ದಾರೆ. ಮನೆಯ ಬರುವ ಅತಿಥಿಗಳಿಗೆ ಕಾಜಲ್, ಇದೇ ಲಿಫ್ಟ್ ಮೂಲಕವೇ ಚಹಾ, ತಿಂಡಿ ನೀಡುತ್ತಿದ್ದಾರೆ.

  • ಕೌಟುಂಬಿಕ ಕಲಹ ಶಂಕೆ – 3 ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ

    ಕೌಟುಂಬಿಕ ಕಲಹ ಶಂಕೆ – 3 ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ

    ದಾವಣಗೆರೆ: ಕೌಟುಂಬಿಕ ಕಲಹ ಶಂಕೆ ಹಿನ್ನೆಲೆಯಲ್ಲಿ ಮೂರು ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಜರುಗಿದೆ.

    ಹರ್ಷಿತಾ(3), ಚಂದ್ರಮ್ಮ (25), ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಮೃತರಾದ ಚಂದ್ರಮ್ಮನ ಪತಿ ಮಂಜಪ್ಪ ಡಿ.ಆರ್ ಪೊಲೀಸ್ ಕಾನ್ಸ್‌ಟೇಬಲ್‌ ಆಗಿ ಸೇವೆ ಸಲ್ಲಿಸುತ್ತಿದ್ದು, ಇಂದು ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಬಂದಾಗ ಪತ್ನಿ, ಮಗು ಸಹಿತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪ್ರಕರಣ ಬೆಳಕಿಗೆ ಬಂದಿದೆ.

    ಮೂರು ವರ್ಷದ ಹೆಣ್ಣು ಮಗುವಿನೊಂದಿಗೆ ತಾನು ಆತ್ಮಹತ್ಯೆ ಮಾಡಿಕೊಂಡ ಚಂದ್ರಮ್ಮ ಮೃತ ನೋಡಿ ಪತ್ನಿ ಮಂಜಪ್ಪನಿಗೆ ಸಿಡಿಲು ಹೊಡೆದಂತಾಗಿದೆ. ಪೊಲೀಸ್ ಪೇದೆ ಮಂಜಪ್ಪ ಹಾಗು ಚಂದ್ರಮ್ಮನ ಕಳೆದ ಐದು ವರ್ಷಗಳ ಹಿಂದೆ ವಿವಾಹವಾಗಿದ್ದು, ಅನ್ಯೋನ್ಯವಾಗಿ ಇದ್ದರು ಎನ್ನಲಾಗಿದೆ. ಆದರೆ ಕಳೆದ ದಿನ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದು, ಮನನೊಂದು ಈ ರೀತಿಯಾಗಿ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ಸದ್ಯ ಈ ಸಂಬಂಧ ಸ್ಥಳಕ್ಕೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸರ ತನಿಖೆ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ. ಇದನ್ನೂ ಓದಿ : ಬರ್ತ್ ಡೇ ಪಾರ್ಟಿಗೆ ತೆರಳಿದ್ದ ಯುವಕರು ನೀರುಪಾಲು

  • ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆ ಶವ ಪತ್ತೆ- ವರದಕ್ಷಿಣೆ ಕಿರುಕುಳ ಆರೋಪ

    ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆ ಶವ ಪತ್ತೆ- ವರದಕ್ಷಿಣೆ ಕಿರುಕುಳ ಆರೋಪ

    ದಾವಣಗೆರೆ: ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆಯ ಮೃತದೇಹ ಪತ್ತೆಯಾಗಿದ್ದು, ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಎಂದು  ಯುವತಿಯ ಪೋಷಕರು ಆರೋಪ ಮಾಡಿದ್ದಾರೆ.

    ಜಿಲ್ಲೆಯ ಹೊಸ ಕುಂದವಾಡ ಗ್ರಾಮದ ನಿವಾಸಿ ರೂಪಾಗೆ (25) ಕಳೆದ ಡಿಸೆಂಬರ್ 10ರಂದು ದಾವಣಗೆರೆ ತಾಲೂಕಿನ ಹನುಮನಹಳ್ಳಿ ಗ್ರಾಮದ ಯುವಕ ಜಯಪ್ರಕಾಶ್ ಜೊತೆ ಮದುವೆಯಾಗಿತ್ತು. ಯುವತಿಯ ಕಡೆಯವರು ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದು, ಹತ್ತು ತೊಲೆ ಬಂಗಾರದ ಒಡವೆ, ಲಕ್ಷಾಂತರ ರೂಪಾಯಿ ಹಣವನ್ನು ವರದಕ್ಷಿಣೆಯಾಗಿ ನೀಡಿ, ಮಗಳ ವಿವಾಹ ಮಾಡಿದ್ದರು. ಆದರೆ ಮದುವೆಯಾಗಿ 6 ತಿಂಗಳು ಕಳೆದಿಲ್ಲ, ಜಯಪ್ರಕಾಶ್ ಗೆ ರೂಪಾ ಮೇಲೆ ಅನುಮಾನ ಶುರುವಾಗಿದೆ.

    ಯಾರೋ ಪದೇ ಪದೇ ಫೋನ್ ಮಾಡುತ್ತಾರೆ. ಆತನಿಗೂ ನಿನಗೂ ಏನು ಸಂಬಂಧ ಎಂದು ಅನುಮಾನ ಪಟ್ಟಿದ್ದಾನೆ. ಅಲ್ಲದೆ ಆಕೆಯ ಬಳಿ ಇರುವ ಫೋನ್‍ನ್ನು ಒಡೆದು ಹಾಕಿ, ಮುದ್ದಾದ ಮಡದಿಯ ಮೇಲೆ ಅನುಮಾನ ಪಟ್ಟಿದ್ದಾನೆ. ಅಲ್ಲದೆ ಅಪ್ಪ, ಅಮ್ಮನಿಗೂ ಕರೆ ಮಾಡಬಾರದು ಎಂದು ಷರತ್ತು ವಿಧಿಸಿ, ಕಿರುಕುಳ ನೀಡುತ್ತಿದ್ದ. ಇದೀಗ ನಮ್ಮ ಮಗಳನ್ನು ಹೊಡೆದು, ಕೊಲೆ ಮಾಡಿದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಥೆ ಕಟ್ಟುತಿದ್ದಾರೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ.

    ರೂಪಾ ಪೋಷಕರಿಗೆ ಕರೆ ಮಾಡಿ, ಬೇರೊಬ್ಬನ ಜೊತೆ ಮಾತನಾಡುತ್ತಿದ್ದೀಯಾ ಎಂದು ನನ್ನ ಪತಿ ಆರೋಪ ಮಾಡುತ್ತಿದ್ದಾರೆ. ಅನುಮಾನ ಪಡುತ್ತಿದ್ದಾರೆ, ಆದರೆ ನಾನು ಯಾವುದೇ ಕಾರಣಕ್ಕೂ ಸಾಯುವುದಿಲ್ಲ. ಧೈರ್ಯವಾಗಿ ಎದುರಿಸಿ ನನ್ನ ಕಳಂಕವನ್ನು ನಾನೇ ತೊಳೆದುಹಾಕುತ್ತೇನೆ ಎಂದು ತಾಯಿ ನಿರ್ಮಾಲಾಗೆ ಕರೆ ಮಾಡಿ ರೂಪಾ ಹೇಳಿದ್ದಳಂತೆ. ಅಲ್ಲದೆ ಕಳೆದ ಸೋಮವಾರ ತಂದೆ ಮಂಜುನಾಥ್ ಕೂಡ ಮಗಳ ಮನೆಗೆ ಹೋಗಿ ನೋಡಿಕೊಂಡು ಬಂದಿದ್ದರಂತೆ. ಆಗ ಚನ್ನಾಗಿದ್ದ ಮಗಳು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳುತ್ತಿದ್ದಾರೆ. ತವರು ಮನೆಗೂ ಕಳುಹಿಸದೆ, ಪದೇ ಪದೇ ಹಲ್ಲೆ ನಡೆಸುತ್ತಿದ್ದ. ಅಲ್ಲದೆ 2 ಎಕರೆಗೆ ಅಡಿಕೆ ಸಸಿ ನೆಡಬೇಕು, ಎರಡು ಲಕ್ಷ ರೂ. ತರುವಂತೆ ಪತಿ ಜಯಪ್ರಕಾಶ್ ಪೀಡಿಸುತ್ತಿದ್ದ ಎಂದು ತನ್ನ ತಾಯಿ ಬಳಿ ರೂಪಾ ಹೇಳಿಕೊಂಡಿದ್ದಳಂತೆ.

    ಬಾಳಿ ಬದುಕಬೇಕೆಂದು ಬೆಟ್ಟದಷ್ಟು ಕನಸು ಕಂಡವಳು ಈಗ ಬಾರದ ಲೋಕಕ್ಕೆ ಹೋಗಿದ್ದಾಳೆ. ವರದಕ್ಷಿಣೆ ಕಿರುಕುಳ ಹಾಗೂ ಅನುಮಾನದಿಂದ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ. ತಹಶೀಲ್ದಾರ್ ಗಿರೀಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯ ಪತಿ ಹಾಗೂ ಸಂಬಂಧಿಕರು ತಲೆಮರೆಸಿಕೊಂಡಿದ್ದು, ಮತ್ತಷ್ಟು ಅನುಮಾನಕ್ಕೆ ಕಾರಣವಾಗುತ್ತಿದೆ.

  • ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಪತಿಯ ಮರ್ಡರ್ ಶಂಕೆ!

    ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಪತಿಯ ಮರ್ಡರ್ ಶಂಕೆ!

    ಚಾಮರಾಜನಗರ: ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಪತಿ ಮರ್ಡರ್ ಆಗಿದ್ದು, ಶೌಚ ಗುಂಡಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಹನೂರು ತಾಲೂಕಿನ ಗುಂಡಿಮಾಳದಲ್ಲಿ ನಡೆದಿದೆ. ಇದನ್ನೂ ಓದಿ:  ಸಿಡಿ ತನಿಖೆಯ ಎಸ್‍ಐಟಿ ಮುಖ್ಯಸ್ಥರ ರಜೆ ಅವಧಿ ಮತ್ತೆ ವಿಸ್ತರಣೆ

    ಗ್ರಾಮದ ರಾಜಶೇಖರ್ ಮೃತನಾಗಿದ್ದಾನೆ. ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಶೌಚಾಲಯದ ಗುಂಡಿಯಲ್ಲಿ ಶವ ಪತ್ತೆಯಾಗಿದ್ದು, ಪ್ರಿಯಕರನೊಡನೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ರಾಜಶೇಖರ್ ಪತ್ನಿ ನಂದಿನಿ ಮತ್ತು ಪ್ರಿಯಕರ ದಿನಕರ್ ಕೊಲೆ ಮಾಡಿದ್ದಾರೆಂದು ಹೇಳಲಾಗಿದ್ದು, ಹನೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    ರಾಜಶೇಖರಮೂರ್ತಿ ಕಳೆದ ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ. ನಿನ್ನೆ ಮನೆಯ ಶೌಚಾಲಯದ ಗುಂಡಿಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನಲೆಯಲ್ಲಿ ರಾಜಶೇಖರಮೂರ್ತಿಯ ತಂದೆ ಹನೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಗ್ರಾಮಕ್ಕೆ ಭೇಟಿ ನೀಡಿ ಶೌಚಾಲಯ ಗುಂಡಿ ಓಪನ್ ಮಾಡಿಸಿದ ಪೊಲೀಸರಿಗೆ ಶಾಕ್ ಕಾದಿತ್ತು.

    ಶೌಚ ಗುಂಡಿಯೊಳಗೆ ಕೈಕಾಲು ಕಟ್ಟಿ ತಲೆಕೆಳಕಾಗಿ ರಾಜಶೇಖರ ಮೂರ್ತಿ ಶವ ಬಿದ್ದಿತ್ತು.ಈ ಬಗ್ಗೆ ಹನೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಪ್ರೀತಿಸಿ ಮದುವೆಯಾಗಿ, ಮಕ್ಕಳಾದ ಬಳಿಕ ಜಾತಿ ನೆಪ- ಪತ್ನಿ, ಮಕ್ಕಳನ್ನು ಮನೆಯಿಂದ ಹೊರ ಹಾಕಿದ ಪಾಪಿ

    ಪ್ರೀತಿಸಿ ಮದುವೆಯಾಗಿ, ಮಕ್ಕಳಾದ ಬಳಿಕ ಜಾತಿ ನೆಪ- ಪತ್ನಿ, ಮಕ್ಕಳನ್ನು ಮನೆಯಿಂದ ಹೊರ ಹಾಕಿದ ಪಾಪಿ

    – ಮನೆ ಎದುರು ಅಂಗಲಾಚಿದರೂ ಒಪ್ಪದ ಮನೆಯವರು

    ಕೋಲಾರ: ಪ್ರೀತಿಸಿ ಮದುವೆಯಾಗಿ ಎರಡು ಮಕ್ಕಳಾದ ಬಳಿಕ ಜಾತಿ ಹೆಸರಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಮತ್ತೊಂದು ಮದುವೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ತನ್ನ ಪತಿಗಾಗಿ ಮಕ್ಕಳೊಂದಿಗೆ ಪತಿಯ ಮನೆ ಬಳಿ ಅತ್ತೆಯನ್ನು ಅಂಗಲಾಚಿದರೂ ಮನೆಗೆ ಸೇರಿಸಿಕೊಳ್ಳದೆ, ಅವಮಾನ ಮಾಡಿದ್ದಾರೆ.

    5 ವರ್ಷದ ಹಿಂದೆ ಬಂಗಾರಪೇಟೆ ತಾಲೂಕಿನ ದೊಡ್ಡ ಚಿನ್ನಹಳ್ಳಿಯ ಸುನಿಲ್, ಚಿಕ್ಕ ಅಂಕಂಡಹಳ್ಳಿಯ ಕಾವ್ಯಾ ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ 4 ವರ್ಷದ ಹಾಗೂ 9 ತಿಂಗಳ ಎರಡು ಗಂಡು ಮಕ್ಕಳಿವೆ. ಈ ಮಧ್ಯೆ ಪತಿ ತನ್ನ ತಾಯಿಯ ಮನೆಗೆ ಹೋಗಿ ಬರುತ್ತಿದ್ದು, ಮನೆಯವರ ಮಾತು ಕೇಳಿರುವ ಸುನಿಲ್, ಮತ್ತೊಂದು ಮದುವೆಯಾಗಿದ್ದಾನೆ ಎಂದು ಕಾವ್ಯಾ ಆರೋಪಿಸಿದ್ದಾರೆ. ಹೀಗಾಗಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಹಾಯ ಪಡೆದು ಪತಿಯ ಮನೆ ಎದುರು ಮನೆಗೆ ಸೇರಿಸಿಕೊಳ್ಳುವಂತೆ ಬೇಡಿಕೊಂಡಿದ್ದಾರೆ.

    ಕಾಲಿಗೆ ಬೀಳುವೆ, ಕೈ ಮುಗಿಯುವೆ ಅಂದರೂ ಜಾತಿ ನೆಪ ಹೇಳಿ ಗಂಡನ ಮನೆಯವರು ಮನೆಯೊಳಗೆ ಸೇರಿಸಿಕೊಳ್ಳುತ್ತಿಲ್ಲ. ಇದರಿಂದ ನೊಂದ ಮಹಿಳೆ ಕೆಲಕಾಲ ಗಂಡನೆ ಮನೆ ಎದುರು ಪ್ರತಿಭಟನೆ ಮಾಡಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾಳೆ. ಪತಿ ಸುನಿಲ್ ಮದುವೆಯಾಗಿ ಮೋಸ ಮಾಡಿದ್ದು, ಜಾತಿ ನೆಪದಲ್ಲಿ ನನ್ನನ್ನು ನಿರಾಕರಿಸುತ್ತಿದ್ದಾನೆ ಎಂದು ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಕಾವ್ಯಾ ದೂರು ನೀಡಿದ್ದಾಳೆ.

  • ಹತ್ತು ಮಕ್ಕಳಿಗೆ ಜನ್ಮ ನೀಡಿದ್ದ ಮಹಿಳೆ ಸುದ್ದಿ ಸುಳ್ಳು!

    ಹತ್ತು ಮಕ್ಕಳಿಗೆ ಜನ್ಮ ನೀಡಿದ್ದ ಮಹಿಳೆ ಸುದ್ದಿ ಸುಳ್ಳು!

    ಕೇಪ್‍ಟೌನ್: ಕೆಲವು ದಿನಗಳ ಹಿಂದೆ ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ಹತ್ತು ಮಕ್ಕಳಿಗೆ ಜನ್ಮ ನೀಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ ಎಂಬ ಸುದ್ದಿ ಪ್ರಕಟವಾಗಿತ್ತು. ಆದರೆ ಇದೀಗ ಬಿಬಿಸಿ ಸುದ್ದಿ ವಾಹಿನಿ, ದಕ್ಷಿಣ ಆಫ್ರಿಕಾದಲ್ಲಿ ಯಾವುದೇ ಮಹಿಳೆ ಹತ್ತು ಮಕ್ಕಳಿಗೆ ಜನ್ಮ ನೀಡಿಲ್ಲ ಹಾಗೂ ಅಲ್ಲಿನ ಯಾವುದೇ ಆಸ್ಪತ್ರೆಯಲ್ಲಿ ದಾಖಲಾಗಿಲ್ಲ ಎಂದು ವರದಿ ಪ್ರಕಟಿಸಿದೆ.

    ಗೋಸಿಯಮ್ ತಮಾರಾ ಸಿಥೋಲ್(37) ಎಂಬ ಮಹಿಳೆ ಮಕ್ಕಳಿಗೆ ಜನ್ಮ ನೀಡಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ ಹಾಗೂ ಇತ್ತೀಚೆಗೆ ಆಕೆ ಗರ್ಭಿಣಿ ಕೂಡ ಆಗಿರಲಿಲ್ಲ ಎಂದು ವೈದ್ಯಕೀಯ ಪರೀಕ್ಷೆ ಮೂಲಕ ತಿಳಿದು ಬಂದಿದೆ. ಸದ್ಯ ಇದೀಗ ಮಹಿಳೆಯನ್ನು ಮಾನಸಿಕ ಆರೋಗ್ಯ ಕಾಯ್ದೆ ಅಡಿ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಪ್ರಾಂತೀಯ ಸರ್ಕಾರ ತಿಳಿಸಿದೆ.

    ಎರಡು ವಾರಗಳ ಹಿಂದೆ ಗೋಸಿಯಮ್ ತಮಾರಾ ಸಿಥೋಲ್ ಎಂಬ ಮಹಿಳೆ ಪ್ರಿಟೋರಿಯಾದ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಏಳು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವ ಸುದ್ದಿ ಹಬ್ಬಿತ್ತು. ಆದರೆ ಇದೀಗ ಆ ಸುದ್ದಿ ಸುಳ್ಳು ಎಂಬ ವಿಚಾರ ಬಹಿರಂಗಗೊಂಡಿದೆ. ಇದನ್ನೂ ಓದಿ: ಒಂದೇ ಬಾರಿಗೆ 10 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ