Tag: ಪತಿ

  • ಪತಿಗೆ ದೇವಸ್ಥಾನ ನಿರ್ಮಿಸಿದ ಪತ್ನಿ

    ಪತಿಗೆ ದೇವಸ್ಥಾನ ನಿರ್ಮಿಸಿದ ಪತ್ನಿ

    ಹೈದರಾಬಾದ್: ಮೃತ ಪತಿಗೆ ದೇವಸ್ಥಾನ ನಿರ್ಮಿಸಿ ಪತ್ನಿ ಪೂಜೆ ಮಾಡುತ್ತೀರುವುದು ಆಂಧ್ರಪ್ರದೇಶದ ಪ್ರಕಾಸಂ ಜಿಲ್ಲೆಯಲ್ಲಿ ಕಂಡು ಬಂದಿದೆ.

    ಪತಿಯೇ ಪರದೈವ ಎಂದು ತನ್ನ ಗಂಡನಲ್ಲಿ ದೇವರನ್ನು ಕಾಣುವ ಅನೇಕ ಮಹಿಳೆಯರು ಈಗಲೂ ಭಾರತದಲ್ಲಿದ್ದಾರೆ. ಅದರಂತೆ ಇಲ್ಲೊಬ್ಬ ಮಹಿಳೆ ಎಲ್ಲರಿಗಿಂತ ಕೊಂಚ ವಿಭಿನ್ನವಾಗಿದ್ದು, 4 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟ ತನ್ನ ಪತಿಗಾಗಿ ದೇವಸ್ಥಾನವನ್ನೇ ನಿರ್ಮಿಸಿದ್ದು, ಅದರಲ್ಲಿ ಪತಿಯ ಮೂರ್ತಿ ಇಟ್ಟು ಪ್ರತಿದಿನ ಪೂಜಿಸುತ್ತಿದ್ದಾಳೆ. ಇದನ್ನೂ ಓದಿ:  ಪತ್ನಿ ಜೊತೆಗಿನ ಲವ್ಲೀ ಫೋಟೋ ಶೇರ್ ಮಾಡಿದ ನಟ ನಿಖಿಲ್

    ಪದ್ಮಾವತಿ ಪತಿ ಅಂಕಿರೆಡ್ಡಿಗೆ ದೇಗುಲ ನಿರ್ಮಿಸಿದ್ದಾರೆ. ತನ್ನ ತಾಯಿ ಅವರ ಪತಿಗೆ ನಮಸ್ಕರಿಸಿ, ಪೂಜೆ ಮಾಡುತ್ತಿರುವುದನ್ನು ಗಮನಿಸಿದ್ದ ಪದ್ಮಾವತಿ ಅದನ್ನು ತಮ್ಮ ಬದುಕಲ್ಲೂ ಅಳವಡಿಸಿಕೊಂಡಿದ್ದು, ಪತಿಯನ್ನು ಮರೆಯಲು ಆಗದೇ ಅವರ ಹೆಸರಿನಲ್ಲಿ ದೇಗುಲ ಕಟ್ಟಿ ಪ್ರತಿದಿನ ಪೂಜಿಸುತ್ತಿದ್ದಾರೆ.

    ಅಪಘಾತದಲ್ಲಿ ಅಂಕಿರೆಡ್ಡಿ ಸಾವನ್ನಪ್ಪಿದ ಕೆಲವು ದಿನಗಳ ಬಳಿಕ ಪದ್ಮಾವತಿ ಅವರ ಕನಸಿನಲ್ಲಿ ಅಂಕಿರೆಡ್ಡಿ ಬಂದು ತನಗಾಗಿ ದೇವಸ್ಥಾನ ಕಟ್ಟುವಂತೆ ಹೇಳಿದ್ದನಂತೆ. ಅದಕ್ಕಾಗಿ ದೇವಸ್ಥಾನ ನಿರ್ಮಿಸಿ ಅದರಲ್ಲಿ ಅಂಕಿರೆಡ್ಡಿ ಮೂರ್ತಿ ಪ್ರತಿಷ್ಠಾಪಿಸಿ ದಿನವೂ ಪೂಜೆ ಸಲ್ಲಿಸುತ್ತಿದ್ದಾಳೆ. ನನ್ನ ಪತಿ ಬದುಕಿದ್ದಾಗಲೂ ಅವರನ್ನು ದೇವರೆಂದೇ ಭಾವಿಸಿದ್ದೆ ಎಂದು ಪದ್ಮಾವತಿ ಹೇಳುತ್ತಾರೆ.

    ಅಂಕಿರೆಡ್ಡಿಯವರ ಜನ್ಮದಿನ ಸೇರಿ ಉಳಿದ ಕೆಲವು ವಿಶೇಷ ದಿನಗಳಲ್ಲಿ ವಿಗ್ರಹಕ್ಕೆ ಅಭಿಷೇಕ, ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ಹುಣ್ಣಿಮೆಯಂದು ಬಡಜನರಿಗೆ ಊಟ ಹಾಕಲಾಗುತ್ತದೆ. ಅಂಕಿರೆಡ್ಡಿ ಸ್ನೇಹಿತ ತಿರುಪತಿ ರೆಡ್ಡಿ ಅವರೊಂದಿಗೆ ಸೇರಿ, ನನ್ನ ಮಗ ಶಿವಶಂಕರ್ ರೆಡ್ಡಿ ಈ ದೇಗುಲದ ಸೇವೆಗಳನ್ನು ಮಾಡುತ್ತಿದ್ದಾನೆ ಎಂದು ಪದ್ಮಾವತಿ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

  • ತವರು ಸೇರಿದ ಪತ್ನಿ – ಮಕ್ಕಳು ಸತ್ತಂತೆ ಫೋಟೋ ಕ್ಲಿಕ್ಕಿಸಿ ಹೆಂಡ್ತಿಗೆ ಕಳಿಸಿದ!

    ತವರು ಸೇರಿದ ಪತ್ನಿ – ಮಕ್ಕಳು ಸತ್ತಂತೆ ಫೋಟೋ ಕ್ಲಿಕ್ಕಿಸಿ ಹೆಂಡ್ತಿಗೆ ಕಳಿಸಿದ!

    ಮುಂಬೈ: ಮುನಿಸಿಕೊಂಡು ತವರು ಸೇರಿದ್ದ ಪತ್ನಿಯನ್ನು ಕರೆ ತರಲು ಮಕ್ಕಳು ಸತ್ತಂತೆ ಫೋಟೋ ಕ್ಲಿಕ್ಕಿಸಿದ ಪತಿ ಜೈಲು ಸೇರಿದ್ದಾನೆ. ಈ ಘಟನೆ ಮುಂಬೈನ ಕುರಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    33 ವರ್ಷದ ಸುಚಿತ್ ಗೌಡ ಜೈಲು ಸೇರಿದ ವ್ಯಕ್ತಿ. ಎರಡು ವರ್ಷಗಳ ಹಿಂದೆ ಸುಚಿತ್ ಪತ್ನಿ ಮುನಿಸಿಕೊಂಡು ತವರು ಸೇರಿದ್ದಳು. ಪತ್ನಿಯನ್ನ ಕರೆತರಲು ಮಗನನ್ನು ಶವದಂತೆ ಮಲಗಿಸಿದ್ದಾನೆ. ಆತನ ಮೇಲೆ ಹೂವಿನ ಹಾರ ಹಾಕಿ, ಹಣೆಗೆ ದೊಡ್ಡದಾದ ತಿಲಕವಿಟ್ಟು, ಪಕ್ಕದಲ್ಲಿ ಅಗರಬತ್ತಿ ಬೆಳಗಿ ಫೋಟೋ ಕ್ಲಿಕ್ ಮಾಡಿ, ಪತ್ನಿಗೆ ಕಳುಹಿಸಿದ್ದಾನೆ. ಎಂಟು ವರ್ಷದ ಮಗ ತಂದೆ ಹೇಳಿದಂತೆಯೇ ಕೇಳಿದ್ದಾನೆ.

    ಇದೆಲ್ಲ ನೋಡಿದ 13 ವರ್ಷದ ಮಗಳು ಭಯಗೊಂಡಿದ್ದಳು. ಆಕೆಯ ಕುತ್ತಿಗೆ ಹಗ್ಗ ಬಿಗಿದು ಫ್ಯಾನ್ ಗೆ ಕಟ್ಟಿದ್ದಾನೆ. ಹಗ್ಗ ಬಿಗಿಯಾಗುತ್ತಿದ್ದಂತೆ ಭಯಗೊಂಡ ಮಗಳು ಜೋರಾಗಿ ಕಿರುಚಿದ ಕೂಡಲೇ ಸುಚಿತ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಮಗು ಧ್ವನಿ ಕೇಳಿ ಬಂದ ನೆರೆ ಮನೆಯವರು ಆಕೆಯನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸುಚಿತ್ ಗೌಡ ಮದ್ಯದ ನಶೆಯಲ್ಲಿ ಈ ರೀತಿ ಮಾಡಿದ್ದಾನೆ. ವಾರದ ಹಿಂದೆ ಊರಿಗೆ ಹೋಗಿದ್ದ ಸುಚಿತ್, ಜೊತೆಯಲ್ಲಿ ಮಗ ಮತ್ತು ಮಗಳನ್ನು ಮುಂಬೈಗೆ ಕರೆದುಕೊಂಡು ಬಂದಿದ್ದನು. ಆರೋಪಿ ನಶೆಯಲ್ಲಿ ಮಕ್ಕಳ ಮೇಲೆ ಹಲ್ಲೆ ಸಹ ನಡೆಸುತ್ತಿರುವ ವಿಚಾರ ನೆರೆಹೊರೆಯವರಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದರು. ಇದನ್ನೂ ಓದಿ: ಕಾಜಲ್, ಸಮಂತಾ, ವಿಜಯ್ ದೇವರಕೊಂಡ ಹಿಂದಿಕ್ಕಿದ ರಶ್ಮಿಕಾ

    ಆರೋಪಿ ವಿರುದ್ಧ ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಹಾಗೂ ಕೊಲೆ ಯತ್ನದಡಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಯನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಸದ್ಯ ಮಕ್ಕಳನ್ನು ತಾಯಿಯ ವಶಕ್ಕೆ ನೀಡಲಾಗಿದೆ. ಇದನ್ನೂ ಓದಿ: ನಾನೇನು ಕಿಂಗ್ ಮೇಕರ್ ಅಲ್ಲ, ಗೇಮ್ ಬ್ರೇಕರ್ ಅಂತೂ ಅಲ್ಲ: ಅಸಾದುದ್ದೀನ್ ಓವೈಸಿ

  • ಪ್ರಿಯಕರನ ಜೊತೆ ಸೇರಿ ಪತಿ ಕೊಲೆ ಮಾಡಿಸಿದ್ದ ಲೇಡಿ ಅರೆಸ್ಟ್

    ಪ್ರಿಯಕರನ ಜೊತೆ ಸೇರಿ ಪತಿ ಕೊಲೆ ಮಾಡಿಸಿದ್ದ ಲೇಡಿ ಅರೆಸ್ಟ್

    – ಆಶ್ರಯ ನೀಡಿದ ಗೆಳೆಯನ ಪತ್ನಿ ಜೊತೆ ಕಳ್ಳ ಸಂಬಂಧ

    ಬೆಂಗಳೂರು: ಲವ್ವಿ ಡವ್ವಿಗೆ ಪತಿ ಅಡ್ಡಿ ಆಗುತ್ತಿದ್ದಾನೆಂದು ಪ್ರಿಯಕರನಿಗೆ ಹೇಳಿ ಕೊಲೆ ಮಾಡಿಸಿ ನವರಂಗಿ ಆಟವಾಡಿ ಕೈತೊಳೆದುಕೊಳ್ಳಲು ಮುಂದಾಗಿದ್ದ ಐನಾತಿ ಸುಂದರಿಯನ್ನ ಕೆ.ಜಿ ನಗರ ಪೊಲೀಸರು ಬಂಧಿಸಿದ್ದಾರೆ.

    ರಂಜಿತಾ ಬಂಧಿತ ಆರೋಪಿ. ರಂಜಿತಾ ಐದು ವರ್ಷದ ಹಿಂದೆ ಆಟೋ ಚಾಲಕ ಕಾರ್ತಿಕ್ ಎಂಬತಾನನ್ನು ಪ್ರೀತಿಸಿ ಮದುವೆ ಆಗಿದ್ದಳು. ಇಬ್ಬರ ಮದುವೆಗೆ ಸಾಕ್ಷಿ ಎಂಬಂತೆ ನಾಲ್ಕು ವರ್ಷದ ಹೆಣ್ಣು ಮಗುವಿದೆ. ಕೊಲೆಯಾದ ಕಾರ್ತಿಕ್ ಸ್ನೇಹಿತ ಸಂಜೀವ್ ಗೆ ತನ್ನದೇ ಮನೆಯಲ್ಲಿ ಆಸರೆ ನೀಡಿದ್ದ. ಆರೋಪಿ ಸಂಜೀವ್ ಸ್ನೇಹ ಮರೆತು ಗೆಳೆಯನ ಪತ್ನಿ ರಂಜಿತಾ ಜೊತೆಯಲ್ಲಿ ಲವ್ವಿ ಡವ್ವಿ ಶುರು ಮಾಡಿಕೊಂಡಿದ್ದನು.

    ರಂಜಿತಾ ಮತ್ತು ಸಂಜೀವ್ ಪ್ರೀತಿ ಮದುವೆ ಹಂತಕ್ಕೆ ಹೊಗುತ್ತಿದ್ದಂತೆ ಕಾರ್ತಿಕ್ ತಮಗೆ ಅಡ್ಡಿ ಆಗಬಹುದೆಂದು ತಿಳಿದು ಕೊಲೆಗೆ ಸ್ಕೆಚ್ ಹಾಕುತ್ತಾರೆ. ಜುಲೈ 29 ರಂದು ಕಾರ್ತಿಕ್ ನನ್ನ ಆರೋಪಿ ಸಂಜೀವ್, ಸುಬ್ರಮಣ್ಯ ಇಬ್ಬರು ಸೇರಿ ಚನ್ನಪಟ್ಟಣ ಕಡೆ ಕರೆದುಕೊಂಡು ಹೋಗಿದ್ದಾರೆ. ದಾರಿ ಮಧ್ಯೆ ಪಾರ್ಟಿ ಹೆಸರಲ್ಲಿ ಕಾರ್ತಿಕ್‍ಗೆ ಕಂಠ ಪೂರ್ತಿ ಮದ್ಯ ಕುಡಿಸಲಾಗಿದೆ. ಬಳಿಕ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ವೃಷಭವತಿ ನದಿಗೆ ಮೂಟೆ ಕಟ್ಟಿ ಎಸೆದು ಬಂದಿರುತ್ತಾರೆ. ಇದನ್ನೂ ಓದಿ: ಪತಿಯನ್ನು ಖುಷಿಪಡಿಸಲು ಪತ್ನಿಯಿಂದ ನಗ್ನ ಫೋಟೋಶೂಟ್

     

    ಕೊಲೆ ಬಳಿಕ ಪತ್ನಿ ರಂಜಿತಾ ನನ್ನ ಪತಿ ಕಾರ್ತಿಕ್ ಮಿಸ್ಸಿಂಗ್ ಆಗಿದ್ದಾರೆಂದು ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸರು ರಂಜಿತಾಳ ಬಗ್ಗೆ ಅನುಮಾನ ಬಂದು ತನಿಖೆಗೆ ಒಳಪಡಿಸಿದ್ದಾರೆ. ಆಗ ಕೊಲೆಯ ರಹಸ್ಯ ಬಯಲಾಗಿದೆ. ಸದ್ಯ ಘಟನೆ ಸಂಬಂಧ ಕೊಲೆಯಾದ ಕಾರ್ತಿಕ್ ಪತ್ನಿ ರಂಜಿತಾ, ಪ್ರಿಯಕರ ಸಂಜೀವ್, ಸುಬ್ರಮಣ್ಯ ಮೂವರನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ನಗ್ನ ಫೋಟೋ ಹಾಕಿ ಹಾಟ್ ಅವತಾರದಲ್ಲಿ ಮಿಂಚಿದ ಸನ್ನಿ

  • ಅಕ್ರಮ ಸಂಬಂಧ- ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ

    ಅಕ್ರಮ ಸಂಬಂಧ- ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ

    ದಾವಣಗೆರೆ: ಅಕ್ರಮ ಸಂಬಂಧಕ್ಕೆ ಪತಿಯನ್ನು ಪತ್ನಿ ಬಲಿ ಪಡೆದಿದ್ದು, ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯ ಕತ್ತು ಹಿಸುಕಿ ಕೊಲೆ ಮಾಡಿ ವಿಕೃತಿ ಮೆರೆದಿದ್ದಾಳೆ. ಕೊಲೆ ಮಾಡಿ ತನಗೆ ಏನೂ ಗೊತ್ತೇ ಇಲ್ಲ ಎಂಬಂತೆ ವರ್ತಿಸಿದ್ದು, ಬಳಿಕ ಪೊಲೀಸರು ಕೊಲೆಗಾರ್ತಿ ಹಾಗೂ ಪ್ರಿಯಕರ ಇಬ್ಬರನ್ನೂ ಬಂಧಿಸಿದ್ದಾರೆ.

    ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿಸಿದ ಘಟನೆಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವಡ್ನಾಳ್ ಬನ್ನಿಹಟ್ಟಿ ಗ್ರಾಮ ಸಾಕ್ಷಿಯಾಗಿದೆ. ವಡ್ನಾಳ್ ಬನ್ನಿಹಟ್ಟಿ ಗ್ರಾಮದ ನಿವಾಸಿ ಲೋಕೇಶಪ್ಪ (38) ಕೊಲೆಯಾದ ವ್ಯಕ್ತಿಯಾಗಿದ್ದು, ಪತ್ನಿ ಕುಸುಮ (30), ಪ್ರಿಯಕರ ಪ್ರಭು ಲಿಂಗಪ್ಪ (35) ಬಂಧಿತ ಆರೋಪಿಗಳೆಂದು ತಿಳಿದುಬಂದಿದೆ. ಮಹಿಳೆಯ ಪ್ರಿಯಕರ ಪ್ರಭು ಲಿಂಗಪ್ಪ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ನಿವಾಸಿಯಾಗಿದ್ದು, ಕುಸುಮಳೊಂದಿಗೆ ಅಕ್ರಮಸಂಬಂಧ ಇಟ್ಟುಕೊಂಡಿದ್ದನು. ಈ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಲೋಕೇಶಪ್ಪನನ್ನು ಇಬ್ಬರೂ ಸೇರಿ ಕತ್ತು ಹಿಸುಕಿ ಕಳೆದ 27ರ ತಡರಾತ್ರಿ ಮನೆಯಲ್ಲೇ ಕೊಲೆ ಮಾಡಿದ್ದರು.

    ಕೊಲೆ ಬಳಿಕ ಕುಸುಮ ತನಗೇನೂ ಗೊತ್ತೇ ಇಲ್ಲ ಎಂಬಂತೆ ನಟಿಸಿದ್ದಳು. ಪೊಲೀಸರು ವಿಚಾರಣೆ ನಡೆಸಿದಾಗ ಕುಸುಮ ಹಾಗೂ ಪ್ರಭು ಕೊಲೆ ಮಾಡಿರುವ ಮಾಹಿತಿ ಹೊರಬಿದ್ದಿದೆ. ಇದೀಗ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬೇರೆಯಾಗಿದ್ದ ದಂಪತಿ
    ಮೃತ ಲೋಕೇಶಪ್ಪ ಹಾಗೂ ಆರೋಪಿ ಪತ್ನಿ ಕುಸುಮ ಇಬ್ಬರ ನಡುವೆ ಸಾಕಷ್ಟು ಬಾರಿ ಗಲಾಟೆಯಾಗಿ ಬೇರೆ ಇದ್ದರಂತೆ. ಗ್ರಾಮಸ್ಥರು ಕೂಡ ರಾಜೀಪಂಚಾಯಿತಿ ಮಾಡಿದ್ದರು. ಆದರೂ ಪ್ರಯೋಜನ ಆಗಿರಲಿಲ್ಲ. ಆದರೆ ಕುಸುಮ ಪ್ರಿಯಕರ ಫ್ರಭು ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳಂತೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಲೋಕೇಶಪ್ಪನನ್ನು ಕತ್ತು ಹಿಸುಕಿ ಪತ್ನಿ ಕೊಲೆಗೈದಿದ್ದಾಳೆ.

  • ಪತಿಯೊಂದಿಗೆ ಜಗಳ – ನಾಲ್ವರಲ್ಲಿ ಮೂವರ ಅಪ್ರಾಪ್ತೆಯರನ್ನು ಕೊಂದ ತಾಯಿ

    ಪತಿಯೊಂದಿಗೆ ಜಗಳ – ನಾಲ್ವರಲ್ಲಿ ಮೂವರ ಅಪ್ರಾಪ್ತೆಯರನ್ನು ಕೊಂದ ತಾಯಿ

    ಲಕ್ನೋ: ಪತಿಯ ಜೊತೆ ಜಗಳವಾಡಿದ ಪತ್ನಿಯೊಬ್ಬಳು ಅದೇ ಸಿಟ್ಟಿನಿಂದ ತನ್ನ ನಾಲ್ವರು ಅಪ್ರಾಪ್ತೆಯರನ್ನು ಕೊಳಕ್ಕೆ ತಳ್ಳಿದ್ದು, ಅದರಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಗಿಲಬ್ಸಾ (8), ಅಫ್ರಿನಾ ಖತೂನ್ (5), ನುಸಬಾ ಖತೂನ್(3) ಮತ್ತು ಸಹೆಬಾ ಖತೂನ್ (2) ಮೃತರಾಗಿದ್ದಾರೆ. ನೂರ್ಜಹಾನ್ ನಿಸಾನ್ ಮತ್ತು ಅಸ್ಲಾಮ್ ಅಲಂ ದಂಪತಿ ನಡುವೆ ಜಗಳವಾಗಿದ್ದಕ್ಕೆ ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ತಾಯಿ ಕೊಳಕ್ಕೆ ನೂಕಿದ್ದಾಳೆ. ಇದನ್ನೂ ಓದಿ:  ಅಧಿಕಾರ ಸ್ವೀಕರಿಸಿದ ಬಳಿಕ ಹಲವು ಸವಾಲುಗಳನ್ನು ಎದುರಿಸಿದ್ದೇನೆ: ಬಿಎಸ್‍ವೈ ಅಳಲು

    ನೂರ್ಜಹಾನ್ ನಿಸಾನ್ ತನ್ನ ನಾಲ್ಕು ಜನ ಹೆಣ್ಣು ಮಕ್ಕಳೊಂದಿಗೆ ಬಿಹಾರ ಗೋಪಾಲಗಂಜ್ ಜಿಲ್ಲೆಯಲ್ಲಿ ವಾಸಿಸುತ್ತಿರುತ್ತಾಳೆ. ಪತಿ ಅಸ್ಲಾಂ ಅಲಂ ಅಬ್ರಾಡ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ದೂರವಾಣಿ ಕರೆಯಲ್ಲಿ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿದೆ. ಬಳಿಕವೇ ನಿಸಾನ್ ತಡ ಮಾಡದೇ ಬ್ಯಾಗ್‍ಪ್ಯಾಕ್ ಮಾಡಿಕೊಂಡು ತನ್ನ ಮೂಲ ನೆಲೆಯಾದ ಉತ್ತರಪ್ರದೇಶದ ಖುಷಿ ನಗರಕ್ಕೆ ಹೊರಟಿದ್ದಾರೆ. ಹೊರಡುವ ಮುನ್ನ ಮನೆಯ ಹತ್ತಿರದಲ್ಲಿದ್ದ ಕೊಳದಲ್ಲಿ ತನ್ನ ನಾಲ್ಕೂ ಹೆಣ್ಣು ಮಕ್ಕಳನ್ನು ನೂಕಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ. ಒಂದು ಮಗುವಿನ ಜೀವ ಉಳಿದಿದ್ದು, ಮೂವರ ಶವವಾಗಿ ಪತ್ತೆಯಾಗಿದ್ದಾರೆ.

    ನಾಲ್ವರಲ್ಲಿ ಒಬ್ಬಳಾದ ಅಫ್ರೀನಾಳನ್ನು ಸ್ಥಳೀಯರು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಘಟನೆಯ ಬಳಿಕ ತಾಯಿ ನಿಸಾನ್‍ರನ್ನು ಬಂಧಿಸಲಾಗಿದೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

  • ಪತ್ನಿಯ ಜೊತೆ ಅನೈತಿಕ ಸಂಬಂಧ- ಪತಿಯಿಂದ ವ್ಯಕ್ತಿಯ ಬರ್ಬರ ಹತ್ಯೆ

    ಪತ್ನಿಯ ಜೊತೆ ಅನೈತಿಕ ಸಂಬಂಧ- ಪತಿಯಿಂದ ವ್ಯಕ್ತಿಯ ಬರ್ಬರ ಹತ್ಯೆ

    ರಾಯಚೂರು: ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಲಿಂಗಸುಗೂರಿನ ಗುಂತಗೋಳ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಮೌನೇಶ್ ನಾಯಕ(38) ಕೊಲೆಯಾದ ವ್ಯಕ್ತಿ. ಅನೈತಿಕ ಸಂಬಂಧದ ಶಂಕೆ ಕೊಲೆಗೆ ಕಾರಣವಾಗಿದೆ. ಕೊಲೆ ಆರೋಪಿ ಗ್ರಾಮದ ಗುಂಡಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಯಾದ ಮೌನೇಶ್ ನಾಯಕ ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಕೊಲೆ ಮಾಡಿದ್ದಾನೆ. ಬುಧವಾರ ರಾತ್ರಿ 11 ಗಂಟೆಗೆ ಘಟನೆ ನಡೆದಿದೆ.

    ರಾತ್ರಿ ವೇಳೆ ಮೌನೇಶ್‍ಗಾಗಿ ಹೊಂಚು ಹಾಕಿ ಕಾದು ಕುಳಿತು ಆರೋಪಿ ದಾಳಿ ಮಾಡಿದ್ದಾನೆ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದು ಬಂದಿದೆ. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಗುಂಡಪ್ಪನ ವಿಚಾರಣೆ ಮುಂದುವರಿದಿದೆ.

  • ವಿಶಾಲ ಗಾಣಿಗಳಿಗೆ ದುಬೈನಿಂದ ಪತಿ ಸ್ಕೆಚ್ – ನೇಪಾಳ ಗಡಿಯಲ್ಲಿ ಸುಪಾರಿ ಕಿಲ್ಲರ್ ಅರೆಸ್ಟ್

    ವಿಶಾಲ ಗಾಣಿಗಳಿಗೆ ದುಬೈನಿಂದ ಪತಿ ಸ್ಕೆಚ್ – ನೇಪಾಳ ಗಡಿಯಲ್ಲಿ ಸುಪಾರಿ ಕಿಲ್ಲರ್ ಅರೆಸ್ಟ್

    ಉಡುಪಿ: ಇಲ್ಲಿನ ವಿಶಾಲ ಗಾಣಿಗ ಕೊಲೆ ಪ್ರಕರಣವನ್ನು ಪೊಲೀಸರು 10 ದಿನದೊಳಗೆ ಬೇಧಿಸಿದ್ದಾರೆ. ನೇಪಾಳ ದೇಶದ ಗಡಿ ಪ್ರದೇಶದಲ್ಲಿ ಸುಪಾರಿ ಹಂತಕ ಅರೆಸ್ಟ್ ಆಗಿದ್ದಾನೆ. ಪತಿಯೇ ಪತ್ನಿಯ ಕೊಲೆಗೆ ಎರಡು ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ಟಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

    ಜುಲೈ 12 ರಂದು ಸಂಜೆ ಉಡುಪಿ ಜಿಲ್ಲೆ ಬ್ರಹ್ಮಾವರದ ಮಿಲನ್ ಅಪಾರ್ಟ್ ಮೆಂಟ್ ನಲ್ಲಿ ವಿಶಾಲ ಕೊಲೆಯಾಗಿತ್ತು. ಮೈಮೇಲಿದ್ದ ಚಿನ್ನಾಭರಣವನ್ನು ಕದ್ದು ಆರೋಪಿ ಪ್ರಕರಣದ ದಿಕ್ಕು ತಪ್ಪಿಸಿ ಪರಾರಿಯಾಗಿದ್ದ. ಒಂದು ವಾರಗಳ ಕಾಲ ತನಿಖೆ ನಡೆಸಿದ ಪೊಲೀಸರು, ಉತ್ತರಪ್ರದೇಶ ರಾಜ್ಯದ ಗೋರಖಪುರ ಜಿಲ್ಲೆಯ ಚಾರ್ಪನ್ ಬಹುರಾಗ್ ಗ್ರಾಮದ ಶ್ರೀ ಸ್ವಾಮಿನಾಥ ನಿಶಾದ (38) ನನ್ನು ಬಂಧಿಸಲಾಗಿದೆ. ಆರೋಪಿ ಕೊಲೆಗೈದು ಉತ್ತರ ಪ್ರದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ.

    ಪೊಲೀಸ್ ತನಿಖೆ ತೀವ್ರವಾಗುತ್ತಿದ್ದಂತೆ ನೇಪಾಳ ದೇಶಕ್ಕೆ ನುಸುಳಲು ಯತ್ನಿಸಿದ್ದ. ಕೊಲೆಯ ಹಿಂದಿನ ಸಂಚು ಗಂಡನದ್ದೆಂದು ಪೊಲೀಸರು ಫೋನ್ ಕರೆಯೊಂದರಿಂದ ಕಂಡು ಹುಡುಕಿದ್ದಾರೆ. ಸಾಕ್ಷಿಗಳೇ ಇಲ್ಲದ ಸವಾಲಿನ ಪ್ರಕರಣವನ್ನು ತಾಂತ್ರಿಕ ಸಾಕ್ಷಿಗಳ ಮೂಲಕ ಪತ್ತೆ ಮಾಡಿದ್ದಾರೆ. ಗಂಡ-ಹೆಂಡತಿಯ ನಡುವೆ ಅನ್ಯೋನ್ಯತೆ ಸಮಸ್ಯೆಯಿತ್ತು. ಇದೇ ಕಾರಣಕ್ಕೆ ಕೊಲೆ ಮಾಡಿಸಿರುವುದಾಗಿ ಗಂಡ ರಾಮಕೃಷ್ಣ ಗಾಣಿಗ ಹೇಳಿಕೆ ನೀಡಿದ್ದಾನೆ. ಇದನ್ನೂ ಓದಿ: ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಲಿ: ಸಿದ್ದಗಂಗಾ ಶ್ರೀ

    ತನ್ನ ಹೇಳಿಕೆಗಳನ್ನು ಆಗಾಗ ಬದಲಿಸುತ್ತಿರುವ ರಾಮಕೃಷ್ಣರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೌಟುಂಬಿಕ ಸಮಸ್ಯೆಗೆ ಕೊಲೆ ನಡೆದಿರಲಿಕ್ಕಿಲ್ಲ. ಕೊಲೆಗೆ ಇನ್ನೇನೋ ಮಹತ್ವದ ಕಾರಣ ಇದೆ ಎಂಬ ಗುಮಾನಿ ಪೊಲೀಸರಿಗೆ ಇದೆ. ಆಸ್ತಿ ವಿಚಾರದ ದೃಷ್ಟಿಯಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಕೊಲೆಗೆ ಡೀಲ್ ಕುದುರಿಸಿದ ಓರ್ವ ಆರೋಪಿ ಮತ್ತು ಕೊಲೆಗೈದಿರುವ ಇನ್ನೋರ್ವ ಆರೋಪಿಯ ಬಂಧನ ಇನ್ನಷ್ಟೇ ಆಗಬೇಕಾಗಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳ ತೀವ್ರ ವಿಚಾರಣೆ ನಡೆಯುತ್ತಿದೆ. ಪ್ರಕರಣ ಸಂಬಂಧ ಪೊಲೀಸರಿಗೆ ಆರಂಭಿಕ ಹಂತದಲ್ಲಿ ಯಾವುದೇ ಸಾಕ್ಷ್ಯಗಳು ಲಭ್ಯವಾಗಿರಲಿಲ್ಲ. ಪಡುಬಿದ್ರೆಯಿಂದ ಬೈಂದೂರುವರೆಗೆ ನೂರಾರು ಕಿಲೋಮೀಟರ ಸಿಸಿಟಿವಿ ಜಾಲಾಡಿದ್ದರು.

    ವಿಮಾನ ನಿಲ್ದಾಣ ರೈಲು ನಿಲ್ದಾಣದಲ್ಲಿ ಪೊಲೀಸರು ಮಾಹಿತಿ ಕಲೆಹಾಕಲು ಶ್ರಮಿಸಿದ್ದರು. ಪ್ರಕರಣ ತನಿಖೆ ಮಾಡಿದ ಪೊಲೀಸರ ನಾಲ್ಕು ತಂಡಗಳಿಗೆ ಪೊಲೀಸರಿಗೆ ಎಸ್ಪಿ ವಿಷ್ಣುವರ್ಧನ್ ಧನ್ಯವಾದ ಹೇಳಿದ್ದಾರೆ. ರಾಜ್ಯದ ಗಮನ ಸೆಳೆದಿದ್ದ ಜಟಿಲ ಪ್ರಕರಣವನ್ನು ಬೇಧಿಸಿರುವ ಸಹೋದ್ಯೋಗಿಗಳಿಗೆ ಡಿಜಿಪಿ ಪ್ರವೀಣ್ ಸೂದ್ 50 ಸಾವಿರ ರುಪಾಯಿ ಬಹುಮಾನ ನೀಡಿದ್ದಾರೆ.

  • ಗಂಡನ ಕೊಲೆ- ಮನನೊಂದ ಪತ್ನಿ ಆತ್ಮಹತ್ಯೆ

    ಗಂಡನ ಕೊಲೆ- ಮನನೊಂದ ಪತ್ನಿ ಆತ್ಮಹತ್ಯೆ

    – 1 ತಿಂಗಳ ಹಿಂದೆ ಪತಿ ಕೊಲೆ

    ಚಿಕ್ಕಬಳ್ಳಾಪುರ: ಕೊಲೆಯಾದ ಗಂಡನ ನೆನಪು ತಾಳಲಾರದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಮುಷ್ಟೂರು ಗ್ರಾಮದಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಚಿಕ್ಕಬಳ್ಳಾಪುರ ತಾಲೂಕಿನ ಮುಸ್ಟೂರು ಗ್ರಾಮದ ನಿವಾಸಿ ಸುನಿತಾ ಎಂದು ಗುರುತಿಸಲಾಗಿದೆ. ಕಳೆದ ತಿಂಗಳು ಪತಿ ವೆಂಕಟೇಶ್ ತನ್ನ ಆಪ್ತ ಸ್ನೇಹಿತರಿಂದಲೇ ಹಳೆ ದ್ವೆಷದ ಹಿನ್ನೆಲೆಯಲ್ಲಿ ಕೊಲೆಯಾಗಿದ್ದ. ಇದಾದ ಬಳಿಕ ಗಂಡನ ನೆನಪಲ್ಲೇ ಕಾಲ ಕಳೆಯುತ್ತಿದ್ದ ಪತ್ನಿ ಸುನಿತಾ, ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಹೀಗೆ ಹಲವು ಶುಭ ಸಮಾರಂಭಗಳಲ್ಲಿ ತನ್ನ ಪ್ರೀತಿಯ ಗಂಡ ತೋರುತ್ತಿದ್ದ ಅಕ್ಕರೆ, ಆರೈಕೆ ನೆನಪಾಗುತ್ತಿತ್ತು. ಜೊತೆಗೆ ಗಂಡನ ಕೊಲೆ ಮಾಡಿದ ಆರೋಪಿಗಳು ರಾಜಾರೋಷವಾಗಿ ಊರಲ್ಲಿ ತಿರುಗಾಡುತ್ತಿದ್ದನ್ನು ಸಹಿಸದ ಪತ್ನಿ ಸುನಿತಾ, ಇಂದು ಬೆಳಗ್ಗೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಗಂಡ ಕೊಲೆಯಾದ ನಂತರ ನಿತ್ಯ ಗಂಡನ ಕೊರಗಲ್ಲೇ ನರಳುತ್ತಿದ್ದರು. ಜೊತೆಗೆ ಕೊಲೆಗಾರರು ಕಣ್ಣ ಮುಂದೆ ಓಡಾಟ, ನ್ಯಾಯ ಕೊಡಿಸಲು ಪೊಲೀಸರು ನಿರ್ಲಕ್ಷ್ಯ ವಹಿಸಿದ್ದು ಹೀಗೆ ಹಲವು ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಶಂಕಿಸಿದ್ದಾರೆ. ಸುನಿತಾ ಮನೆ ಕೆಲಸದ ಜೊತೆಗೆ ಕೂಲಿ ಕೆಲಸಕ್ಕೂ ಹೋಗುತ್ತಿದ್ದರು. ಆದರೆ ಪತಿಯ ಸಾವಿನ ನೋವು ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಪ್ರಿಯಕರನ ಜೊತೆ ಸೇರಿ ಪತಿ ಕೊಂದ ಪತ್ನಿಯ ಬಂಧನ

    ಪ್ರಿಯಕರನ ಜೊತೆ ಸೇರಿ ಪತಿ ಕೊಂದ ಪತ್ನಿಯ ಬಂಧನ

    ಮೈಸೂರು: ಪ್ರಿಯಕರನ ಜೊತೆ ಸೇರಿ ಪತಿ ಹತ್ಯೆ ಮಾಡಿದ ಪತ್ನಿಯನ್ನು ಕೊಲೆಯಾದ 9 ತಿಂಗಳ ನಂತರ ಪೊಲೀಸರು ಬಂಧಿಸಿದ್ದಾರೆ.

    ಈ ಕೊಲೆ ಪ್ರಕರಣ ಭೇಧಿಸಿದ ಪೊಲೀಸರು ಪತ್ನಿ ಉಮಾ ಹಾಗೂ ಪ್ರಿಯಕರ ಅವಿನಾಶ್ ನನ್ನು ಬಂಧಿಸಿದ್ದಾರೆ. ಬನ್ನೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಅಕ್ಟೋಬರ್ 2020ರಲ್ಲಿ ನಡೆದಿದ್ದ ವೆಂಕಟರಾಜು (50) ಕೊಲೆಯಾಗಿತ್ತು.

    ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಹುಣಸಗಳ್ಳಿ ಗ್ರಾಮದ ವೆಂಕಟರಾಜು ಮೂಲತಃ ಮಂಡ್ಯ ಜಿಲ್ಲೆ ಹೊನಗಾನಹಳ್ಳಿ ಗ್ರಾಮದ ನಿವಾಸಿ. 10 ವರ್ಷದ ಹಿಂದೆ ಉಮಾಳನ್ನು ಮದುವೆಯಾಗಿದ್ದ. ಉಮಾ ಶ್ರೀರಂಗಪಟ್ಟಣ ತಾಲೂಕಿನ ಬಳ್ಳೆಕರೆ ಗ್ರಾಮದ ನಿವಾಸಿ. 8 ವರ್ಷದ ಒಂದು ಹೆಣ್ಣು ಮಗು 6 ವರ್ಷದ ಗಂಡು ಮಗುವಿದೆ. ವಯಸ್ಸಿನ ಅಂತರದಿಂದಾಗಿ ಗಂಡ ಹೆಂಡತಿ ನಡುವೆ ಸಂಬಂಧ ಬಿರುಕು ಮೂಡಿತ್ತು. ಈ ವೇಳೆ ಉಮಾಗೆ ಅವಿನಾಶ್ ಪರಿಚಯವಾಗಿದ್ದ. ಇದನ್ನೂ ಓದಿ: ಕಡಲ ಅಬ್ಬರ, ಏಂಡಿ ಬಲೆಗೆ ಸಿಕ್ತು ರಾಶಿ-ರಾಶಿ ಮೀನು

    ಅವಿನಾಶ್ ಉಮಾ ಪಕ್ಕದ ಮನೆಯ ನಿವಾಸಿ. ಇಬ್ಬರು ಸೇರಿ ವೆಂಕಟರಾಜು ಕೊಲೆ ಮಾಡಿದ್ದರು. ಅವಿನಾಶ್ ತನ್ನ ಅಜ್ಜಿ ಮನೆಗೆ ವೆಂಕಟರಾಜುನನ್ನು ಕರೆಸಿಕೊಂಡು ಕಾಫಿಯಲ್ಲಿ ನಿದ್ದೆ ಮಾತ್ರೆ ಬೆರೆಸಿ ವೆಂಕಟರಾಜು ನಿದ್ರಾವಸ್ಥೆಯಲ್ಲಿದ್ದಾಗ ಖಾಸಗಿ ಭಾಗಕ್ಕೆ ಹಲ್ಲೆ ಮಾಡಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಸ್ವಾಭಾವಿಕ ಸಾವು ಎಂಬಂತೆ ಬಿಂಬಿಸಿದ್ದರು.

    ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಈ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  • ಮಂಚದಾಟಕ್ಕೆ ಅಡ್ಡಿಯಾದ ಗಂಡನಿಗೆ ಸುಪಾರಿ ಕೊಟ್ಳು – ಮಂಕಿ ಕ್ಯಾಪ್‍ನಿಂದ ತಗ್ಲಾಕೊಂಡ ಗ್ಯಾಂಗ್

    ಮಂಚದಾಟಕ್ಕೆ ಅಡ್ಡಿಯಾದ ಗಂಡನಿಗೆ ಸುಪಾರಿ ಕೊಟ್ಳು – ಮಂಕಿ ಕ್ಯಾಪ್‍ನಿಂದ ತಗ್ಲಾಕೊಂಡ ಗ್ಯಾಂಗ್

    – ಇನಿಯನ ಜೊತೆ ಸೇರಿ 15 ಲಕ್ಷಕ್ಕೆ ಡೀಲ್
    – ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ಕೊಲೆ

    ಬೆಂಗಳೂರು: ಪ್ರಿಯಕರನ ಜೊತೆಗೆ ಸೇರಿ ಗಂಡನಿಗೆ ಸುಪಾರಿ ನೀಡಿ ಪತ್ನಿಯೇ ಕೊಲೆ ಮಾಡಿಸಲು ಯತ್ನಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರಿನ ಮಾದನಾಯಕನಹಳ್ಳಿ ನಿವಾಸಿಯಾಗಿರುವ ರೂಪ ಮತ್ತು ಗಿರೀಶ್ ಮದುವೆ ಆರು ವರ್ಷಗಳ ಹಿಂದೆ ನಡೆದಿತ್ತು. ಕೆಲ ದಿನಗಳ ಕಾಲ ಮನೆಯಲ್ಲೇ ಇದ್ದ ಪತ್ನಿ ರೂಪ ಇತ್ತೀಚೆಗೆ ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲಸಕ್ಕೆ ಸೇರಿದ ನಂತರ ರೂಪಾಗೆ ಕುಮಾರ್ ಜೈನ್ ಎಂಬ ವ್ಯಕ್ತಿಯ ಪರಿಚಯವಾಗಿದೆ. ನಂತರ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಮಂಚದ ತನಕ ಹೋಗಿತ್ತು. ಹೀಗಾಗಿ ರೂಪಾಳ ನಡುವಳಿಯಲ್ಲಿ ಕೂಡ ಬದಲಾವಣೆ ಕಾಣಿಸತೊಡಗಿತ್ತು. ಈ ವಿಚಾರ ತಿಳಿದ ರೂಪಾಳ ಗಂಡ ಗಿರೀಶ್ ನೀನು ಇನ್ಮೇಲೆ ಕೆಲಸಕ್ಕೆ ಹೋಗೋದು ಬೇಡ, ಮನೆಯಲ್ಲೇ ಇರು ಅಂತಾ ವಾರ್ನ್ ಮಾಡಿದ್ದಾರೆ.

     

    ಇದರಿಂದ ಬೇಸರಗೊಂಡ ಪತ್ನಿ ರೂಪಾ, ಪ್ರಿಯಕರ ಕುಮಾರ್ ಜೈನ್ ಜೊತೆಗೆ ಸೇರಿ, ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದಾಳೆ. ಅದರಂತೆ ಕುಮಾರ್ ಜೈನ್ ಮೂಲಕ ಹದಿನೈದು ಲಕ್ಷಕ್ಕೆ ಗಂಡನ ಕೊಲೆಗೆ ಸುಪಾರಿ ನೀಡಿದ್ದಾನೆ. ಇವರ ಪ್ಲಾನ್ ನಂತೆ ಮೂರು ಲಕ್ಷ ಅಡ್ವಾನ್ಸ್ ಪಡೆದ ನಾಲ್ವರು ಆರೋಪಿಗಳು, ಕೊಲೆಗೆ ಸಿದ್ಧತೆ ನಡೆಸಿ, ಗಿರೀಶ್ ಕೊಲೆ ಮಾಡಲು ಎಲ್ಲರೂ ಮಂಕಿ ಕ್ಯಾಪ್ ಹಾಕಿಕೊಳ್ಳುತ್ತಿದ್ದರು. ಇದೇ ವೇಳೆ ನೈಟ್ ರೌಂಡ್ಸ್ ಬಂದ ಮಾದನಾಯಕನಹಳ್ಳಿ ಪೊಲೀಸರು, ಮಂಕಿ ಕ್ಯಾಪ್ ಗಳನ್ನು ನೋಡಿ ಆರೋಪಿಗಳನ್ನು ಪ್ರಶ್ನಿಸಿದ್ದಾರೆ.

    ತಕ್ಷಣ ಎಲ್ಲರನ್ನೂ ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ ವೇಳೆ ಸುಪಾರಿ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಪ್ರಮುಖ ಆರೋಪಿ ರೂಪಾ, ಪ್ರಿಯಕರ ಸೇರಿ ಐವರನ್ನು ಪೊಲೀಸರು ಅರೆಸ್ಟ್ ಮಾಡಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳ ರ‍್ಯಾಗಿಂಗ್- ಆರು ಮಂದಿ ಬಂಧನ