Tag: ಪತಿ

  • ಗಂಡ ಹೆಂಡತಿ ಜಗಳ- ಬಾಮೈದನಿಂದ ಬಾವನ ಮೇಲೆ ಮಾರಣಾಂತಿಕ ಹಲ್ಲೆ

    ಗಂಡ ಹೆಂಡತಿ ಜಗಳ- ಬಾಮೈದನಿಂದ ಬಾವನ ಮೇಲೆ ಮಾರಣಾಂತಿಕ ಹಲ್ಲೆ

    ನೆಲಮಂಗಲ: ಗಂಡ, ಹೆಂಡತಿ ಜಗಳವಾಡಿದನ್ನು ಕಂಡು ರೊಚ್ಚಿಗೆದ್ದ ಬಾಮೈದನೊಬ್ಬ ಬಾವನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವಾಲ್ಮೀಕನಗರದಲ್ಲಿ ನಡೆದಿದೆ.

    ನೆಲಮಂಗಲ ತಾಲೂಕಿನ ವಾಲ್ಮೀಕನಗರದಲ್ಲಿ ವಾಸವಾಗಿರುವ ಹಿದಾಯತ್ ಖಾನ್ ತನ್ನ ಪತ್ನಿ ಜೊತೆ ಜಗಳವಾಡಿಕೊಂಡು ಬಳಿಕ ಹಿರಿಯರ ನೇತೃತ್ವದಲ್ಲಿ ಮನಸ್ತಾಪ ಬಗೆಹರಿಸಿ ಸಂಸಾರ ಒಂದು ಮಾಡಿದ್ದರು. ಅದಾದ ಬಳಿಕ ಮತ್ತೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದೆ. ಪತಿ, ಪತ್ನಿಗೆ ಹೊಡೆದ ಎಂಬ ವಿಚಾರಕ್ಕೆ ಹಿದಾಯತ್ ಖಾನ್ ಪತ್ನಿಯ ಅಣ್ಣ ತಮ್ಮಂದಿರಾದ ಅಜ್ಘರ್ ಖಾನ್, ಸಲ್ಮಾನ್, ಮತ್ತು ಅನ್ಸರ್ ಖಾನ್ ಸೇರಿ ಬಾವನಿಗೆ ಲಾಂಗ್, ರಾಡ್, ಬಡಿಗೆಗಳಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಗೌಡ್ರ ಕುಟುಂಬದಲ್ಲಿ ಹಬ್ಬದ ಸಂಭ್ರಮ – ನಿಖಿಲ್ ಪತ್ನಿಗೆ ಸೀಮಂತ

    ಹಲ್ಲೆಗೊಳಗಾಗಿದ್ದ ಹಿದಾಯತ್ ಖಾನ್ ತೀವ್ರ ರಕ್ತಸ್ರಾವದಿಂದ ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಯಾದಗರಿಯಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ನಾಲ್ವರು ಅರೆಸ್ಟ್

  • ದರ್ಗಾದಲ್ಲಿ ಪ್ರಾರ್ಥನೆ ಮುಗಿಸಿ ಬರುವಾಗ ಪತ್ನಿ ಕೊಂದ ಪತಿ

    ದರ್ಗಾದಲ್ಲಿ ಪ್ರಾರ್ಥನೆ ಮುಗಿಸಿ ಬರುವಾಗ ಪತ್ನಿ ಕೊಂದ ಪತಿ

    ಚಿತ್ರದುರ್ಗ: ದರ್ಗಾದಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ಪತಿಯೇ ಪತ್ನಿಯನ್ನು ಕೊಲೆಗೈದಿರುವ ಘಟನೆ ಜಿಲ್ಲೆಯ ಚಳ್ಳಕೆರೆ ಗೇಟ್ ಬಳಿ ನಡೆದಿದೆ.

    ನಗರದ ಬಡಾಮಖಾನ್ ಬಡಾವಣೆಯ ನಿವಾಸಿ ಅಮೀನಾ(30) ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾರೆ. ಆರೋಪಿ ಪತಿ ಮಹಿಬೂಬ್ ಪಾಶಾನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗ್ಗೆ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಹೊರವಲಯದಲ್ಲಿರುವ ದರ್ಗಾಕ್ಕೆ ಪತ್ನಿಯನ್ನು ಸ್ಕೂಟಿಯಲ್ಲಿ ಆರೋಪಿ ಕರೆದೊಯ್ದಿದ್ದನು. ಇದನ್ನೂ ಓದಿ: ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ

    ಇಬ್ಬರೂ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ಚಳ್ಳಕೆರೆ ನಗರದ ಸಂಬಂಧಿಗಳ ಮನೆಗೆ ತೆರಳಿ, ಅವರೊಂದಿಗೆ ಕೆಲ ಸಮಯ ಕಳೆದು ವಾಪಸ್ ಬರುವಾಗ ಸ್ಕೂಟಿ ಚಾಲನೆ ವೇಳೆಯೇ ಕತ್ತಲಲ್ಲಿ ಪತ್ನಿಯನ್ನು ಕೊಲೆಗೈದಿದ್ದಾನೆ.

    ಹಲವು ದಿನಗಳಿಂದ ಇಬ್ಬರ ನಡುವೆ ದಿನನಿತ್ಯ ವಾಗ್ವಾದ ಹಾಗೂ ಗಲಭೆ ನಡೆಯುತ್ತಿತ್ತು. ಕೌಟುಂಬಿಕ ವಿಚಾರವಾಗಿ ಶುರುವಾದ ಗಲಭೆ ಇಂದು ಪತ್ನಿಯ ಸಾವಿನೊಂದಿಗೆ ಅಂತ್ಯವಾಗಿದೆ. ಈಗಾಗಲೇ ಆರೋಪಿ ಪತಿ ಮಹಿಬೂಬ್ ಪಾಶಾನನ್ನು ಬಡಾವಣೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಎಸ್‍ಪಿ ರಾಧಿಕಾ, ಎಎಸ್‍ಪಿ ನಂದಗಾವಿ, ಡಿವೈಎಸ್‍ಪಿ ಪಾಂಡುರಂಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.

  • 10 ವರ್ಷದಲ್ಲಿ 25 ಬಾರಿ ಅನ್ಯ ಪುರುಷರೊಂದಿಗೆ ಓಡಿಹೋದಳು – ಗಂಡನಿಗೆ ಮಾತ್ರ ಅವಳೇ ಬೇಕಂತೆ

    10 ವರ್ಷದಲ್ಲಿ 25 ಬಾರಿ ಅನ್ಯ ಪುರುಷರೊಂದಿಗೆ ಓಡಿಹೋದಳು – ಗಂಡನಿಗೆ ಮಾತ್ರ ಅವಳೇ ಬೇಕಂತೆ

    ದಿಸ್ಪೂರ್: ಸಂಬಂಧಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವುದು ಬಹಳ ಕಷ್ಟ. ಆದರೆ ಅಸ್ಸಾಂನ ಮಹಿಳೆಯೊಬ್ಬಳು ಕಳೆದ ಹತ್ತು ವರ್ಷಗಳಲ್ಲಿ 25 ಬಾರಿ ಹಲವುಪುರುಷರೊಂದಿಗೆ ಓಡಿಹೋಗಿದ್ದಾಳೆ ಎಂದು ಆರೋಪಿಸಲಾಗಿದೆ.

    ಹೌದು, 40 ವರ್ಷದ ಮಹಿಳೆಯೊಬ್ಬಳು ಅಸ್ಸಾಂನ ನಾಗಾಂವ್ ಜಿಲ್ಲೆಯ ಧಿಂಗ್ ಲಹ್ಕರ್ ಗ್ರಾಮದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮಾಫಿಜುದ್ದೀನ್‍ರನ್ನು ವಿವಾಹವಾಗಿದ್ದಾಳೆ. ಮದುವೆಯ ಬಳಿಕ ಹತ್ತು ವರ್ಷಗಳಲ್ಲಿ 25 ಬಾರಿ ಹಲವು ಪುರುಷರೊಂದಿಗೆ ಮನೆಬಿಟ್ಟು ಓಡಿಹೋಗಿದ್ದಾಳೆ. ಹೀಗಿದ್ದರೂ ಪತಿ ಮತ್ತು ಅತ್ತೆ ಮಾತ್ರ ಯಾವುದೇ ದೂರು ನೀಡಿದೆ, ಆಕೆಯನ್ನು ಮರಳಿ ಮನೆಗೆ ಸೇರಿಸಿಕೊಂಡಿದ್ದಾರೆ. ಅಲ್ಲದೇ ಮಹಿಳೆಗೆ 3 ವರ್ಷ ಹಾಗೂ 3 ತಿಂಗಳ ಇಬ್ಬರು ಗಂಡು ಮಕ್ಕಳಿದ್ದು, 6 ವರ್ಷದ ಓರ್ವ ಮಗಳಿದ್ದಾಳೆ. ಈ ಬಗ್ಗೆ ಆಕೆಯ ನೆರೆಮನೆಯವರು, ಮಹಿಳೆ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಅಲ್ಲದೇ ಅನೇಕ ಬಾರಿ ಪ್ರೀತಿ ಮಾಡಿ ಓಡಿಹೋಗಿದ್ದಳು. ಆದರೆ ಕೆಲವು ತಿಂಗಳ ಬಳಿಕ ಅತ್ತೆ ಮನೆಗೆ ಮರಳಿದ್ದಳು ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಬೈಕಿಗೆ ಬೊಲೆರೋ ಡಿಕ್ಕಿ- ಮೂವರು ಯುವಕರ ದುರ್ಮರಣ

    ಈ ವಿಚಾರವಾಗಿ ಮಾತನಾಡಿದ ಮಾಫಿಜುದ್ದೀನ್, ನನ್ನ ಹೆಂಡತಿ ವಾಪಸ್ ಬಂದ ಬಳಿಕ ಮತ್ತೆ ಓಡಿಹೋಗುವುದಿಲ್ಲ ಎಂದು ಮಾತು ನೀಡಿದ್ದಳು. ಆದರೆ ಆ ಮಾತನ್ನು ಉಳಿಸಿಕೊಂಡಿಲ್ಲ. ಕೆಲವು ಬಾರಿ ನನ್ನ ಹೆಂಡತಿ ತನ್ನ ಸಂಬಂಧಿಕರ ಮನೆಗೆ ಹೋಗಿರುವುದಾಗಿ ಹೇಳುತ್ತಿದ್ದಳು. ಮತ್ತೆ ಕೆಲವು ಬಾರಿ ತನ್ನ ಸಂಬಂಧಿಗೆ ಅನಾರೋಗ್ಯದ ಕಾರಣ ಅವರನ್ನು ನೋಡಲು ಹೋಗಿದ್ದೆ ಎನ್ನುತ್ತಿದ್ದಳು. ನಮಗೆ ಮೂವರು ಮಕ್ಕಳಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ನಾವು ಆಕೆಯನ್ನು ಮರಳಿ ಮನೆಗೆ ಸೇರಿಸಿಕೊಳ್ಳುತ್ತಿದ್ದೇವು ಎಂದಿದ್ದಾರೆ. ಇದನ್ನೂ ಓದಿ: ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ರಿಲೀಫ್

    ಶನಿವಾರ ನಾನು ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದಾಗ, ನೆರೆ ಮನೆಯವರ ಬಳಿ ನನ್ನ ಮೂರು ತಿಂಗಳ ಮಗುವನ್ನು ಬಿಟ್ಟು ಓಡಿ ಹೋಗಿದ್ದಾಳೆ ಎಂದು ನನ್ನ ತಂದೆ ತಿಳಿಸಿದರು. ಅಲ್ಲದೇ ನೆರೆಮನೆಯವರು, ಆಡುಗಳಿಗೆ ಮೇವು ತರಲು ಹೋಗಿಬರುವುದಾಗಿ ಹೇಳಿ ಹೊರಟಿದ್ದಳು ಎಂದು ತಿಳಿಸಿದ್ದಾರೆ. ಇದೀಗ ಮತ್ತೆ ಅವಳು ಯಾವಾಗ ಹಿಂದಿರುಗುತ್ತಾಳೆ ಅಂತ ಗೊತ್ತಿಲ್ಲ. ಅಲ್ಲದೇ ಮನೆಯಲ್ಲಿದ್ದ 22,000 ಹಣ ಮತ್ತು ಕೆಲವು ವಸ್ತುಗಳನ್ನು ಜೊತೆಗೆ ತೆಗೆದುಕೊಂಡು ಹೋಗಿದ್ದಾಳೆ. ಆದರೆ ಯಾರೊಟ್ಟಿಗೆ ಹೋಗಿದ್ದಾಳೆ ಎಂಬ ಬಗ್ಗೆ ಮಾಹಿತಿ ಇಲ್ಲ. ಇದು ಅವಳು ಓಡಿ ಹೋಗುತ್ತಿರುವುದು 25ನೇ ಬಾರಿ. ಆದರೂ ನಾನು ಅವಳನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ ಹಾಗೂ ಅವಳನ್ನು ಮತ್ತೆ ಒಪ್ಪಿಕೊಳ್ಳುತ್ತೇನೆ. ನಮಗೆ ಇನ್ನೂ ಚಿಕ್ಕ, ಚಿಕ್ಕ ಮಕ್ಕಳಿದ್ದಾರೆ. ನಾನು ಅವಳನ್ನು ಒಪ್ಪಿಕೊಳ್ಳದಿದ್ದರೆ, ಅವರನ್ನು ನೋಡಿಕೊಳ್ಳುವವರ‍್ಯಾರು? ಕಾನೂನು ಮತ್ತು ಇತರೆ ಸಮಸ್ಯೆಗಳು ಆಗಬಾರದೆಂದು ನಾನು ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಧಾರವಾಡಿ ಎಮ್ಮೆ’ ತಳಿಗೆ ದೊರೆತಿದೆ ರಾಷ್ಟ್ರಮಟ್ಟದ ಮಾನ್ಯತೆ!

  • ಕೇಳದೇ ಪಾನಿಪುರಿ ತಂದ ಗಂಡ- ಪ್ರಾಣ ಬಿಟ್ಟ ಪತ್ನಿ

    ಕೇಳದೇ ಪಾನಿಪುರಿ ತಂದ ಗಂಡ- ಪ್ರಾಣ ಬಿಟ್ಟ ಪತ್ನಿ

    ಮುಂಬೈ: ಪತಿ ತನ್ನನ್ನು ಕೇಳದೆ ಪಾನಿಪುರಿ ತಂದ ಎಂದು ಕೋಪಗೊಂಡ ಪತ್ನಿ ಆತನೊಂದಿಗೆ ಸಿಕ್ಕಾಪಟೆ ಜಗಳ ಆಡಿ, ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಪ್ರತೀಕ್ಷಾ ಸರ್ವದೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ. ಆಕೆಯ ಪತಿ ಗಹಿನಿನಾಥ್ ಸರ್ವದೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಗಹಿನಿನಾಥ್ ಅವರ ಹುಟ್ಟೂರು ಸೋಲಾಪುರ. 2019ರಲ್ಲಿ ಇವರಿಬ್ಬರೂ ಮದುವೆಯಾಗಿದ್ದು, ಒಬ್ಬ ಮಗ ಕೂಡ ಇದ್ದಾನೆ. ಪಾನಿಪುರಿಗಾಗಿ ಜಗಳ ಮಾಡಿಕೊಂಡು ಪ್ರತೀಕ್ಷಾ ಪ್ರಾಣ ಬಿಟ್ಟಿದ್ದಾಳೆ. ಇದನ್ನೂ ಓದಿ: ವಧು ಬೇಕಾಗಿದ್ದಾಳೆ, ಅಂಗಡಿ ಮುಂದೆ ಬೋರ್ಡ್-ಆಸ್ಟ್ರೇಲಿಯ, ಇಂಗ್ಲೆಂಡ್‍ನಿಂದ ಬಂತು ಆಫರ್

    ಗಹಿನಿನಾಥ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಗಹಿನಿನಾಥ್ ಮತ್ತು ಪ್ರತೀಕ್ಷಾ ಇಬ್ಬರೂ ಮದುವೆಯಾದ ನಂತರ ಪದೇಪದೆ ಜಗಳವಾಡುತ್ತಿದ್ದರು. ಇತ್ತೀಚೆಗಷ್ಟೇ ಇವರಿಬ್ಬರೂ ಅಂಬೇಗಾಂವ್ ಏರಿಯಾದಲ್ಲಿ ವಾಸಿಸಲು ಶುರು ಮಾಡಿದ್ದರು. ಇದನ್ನೂ ಓದಿ: ವಿದ್ಯಾರ್ಥಿಗಳ ಜತೆ ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ

    ಗಹಿನಿನಾಥ್ ಆಫೀಸಿನಿಂದ ಮನೆಗೆ ಬರುವಾಗ ಪಾನಿಪುರಿ ಪಾರ್ಸೆಲ್ ತಂದಿದ್ದರು. ಅದನ್ನು ನೋಡಿ ಖುಷಿಯಿಂದ ತಿನ್ನುವುದನ್ನು ಬಿಟ್ಟು ಪ್ರತೀಕ್ಷಾ, ನನ್ನನ್ನು ಕೇಳದೆ ಪಾನಿಪುರಿ ಯಾಕೆ ತಂದಿರಿ ಎಂದು ಪ್ರಶ್ನಿಸಿದ್ದಳು. ಜಗಳವನ್ನೂ ಪ್ರಾರಂಭಿಸಿದ್ದಲ್ಲದೆ, ಆ ಪಾನಿಪುರಿಯನ್ನು ತಿನ್ನಲೂ ಇಲ್ಲ. ಮರುದಿನ ಬೆಳಗ್ಗೆ ಗಹಿನಿನಾಥ್ ಕೆಲಸಕ್ಕೆ ಹೋಗುವಾಗ ತಿಂಡಿಯನ್ನೂ ಮಾಡಿಕೊಡಲಿಲ್ಲ. ಆಕೆ ಅದಾಗಲೇ ವಿಷಯುಕ್ತ ಮಾತ್ರೆ ಸೇವಿಸಿದ್ದಳು. ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಿಲಾಯಿತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಇಷ್ಟಾದ ಮೇಲೆ ಪ್ರತೀಕ್ಷಾಳ ತಂದೆ ಪ್ರಕಾಶ್ ಪಿಸೆ ಗಹಿನಿನಾಥ್ ವಿರುದ್ಧ ದೂರು ನೀಡಿದ್ದಾರೆ. ಇದನ್ನೂ ಓದಿ: ಪ್ರತಿ ಬುಧವಾರ 10 ಲಕ್ಷ ಲಸಿಕೆ ಗುರಿ: ಸುಧಾಕರ್

    ಪಾನಿಪುರಿ ಕಾರಣಕ್ಕೆ ಜಗಳ ಶುರು ಮಾಡಿದ್ದರು. ಇಬ್ಬರ ನಡುವಿನ ವಾಗ್ವಾದ ತೀವ್ರರೂಪಕ್ಕೆ ಏರಿ, ಕೊನೆಗೆ ಪತ್ನಿಯ ಸಾವಿನಲ್ಲಿ ಅಂತ್ಯವಾಗಿದೆ. ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

  • ಮದ್ಯಪಾನ ಮಾಡ್ಬೇಡಿ ಎಂದಿದಕ್ಕೆ ಹೆಂಡತಿಯನ್ನೇ ಹತ್ಯೆಗೈದ ಪತಿ

    ಮದ್ಯಪಾನ ಮಾಡ್ಬೇಡಿ ಎಂದಿದಕ್ಕೆ ಹೆಂಡತಿಯನ್ನೇ ಹತ್ಯೆಗೈದ ಪತಿ

    ದಾವಣಗೆರೆ: ಮದ್ಯಪಾನ ಮಾಡಬೇಡಿ ಎಂದು ಬುದ್ದಿ ಹೇಳಿದ ಪತ್ನಿಯನ್ನು ಪತಿಯೇ ಕೊಂದಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ನಡೆದಿದೆ.

    davangere murder

    ಶಿಲ್ಪಾ(40) ಪತಿಯಿಂದ ಕೊಲೆಯಾದ ದುರ್ದೈವಿ ಪತ್ನಿ. ಗಿರೀಶ್ ಪತ್ನಿಯನ್ನೇ ಕೊಲೆ ಮಾಡಿದ ಆರೋಪಿ ಪತಿ. ಎರಡು ವರ್ಷಗಳಿಂದ ಸೊರಟೂರು ಗ್ರಾಮದಲ್ಲಿ ಗಿರೀಶ್ ಹಾಗೂ ಶಿಲ್ಪಾ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪ್ರತಿನಿತ್ಯ ಕುಡಿದು ಬರುತ್ತಿದ್ದ ಗಿರೀಶ್‍ಗೆ ಶಿಲ್ಪಾ ಬುದ್ಧಿ ಮಾತು ಹೇಳುತ್ತಿದ್ದರು. ಆದರೆ ಒಮ್ಮೆ ಕುಡಿಯಲು ಹಣ ಕೊಡುತ್ತಿಲ್ಲ, ಬುದ್ದಿಮಾತು ಹೇಳುತ್ತೀಯಾ ಎಂದು ಗಿರೀಶ್ ಪತ್ನಿಯನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.  ಇದನ್ನೂ ಓದಿ:ಗಣೇಶೋತ್ಸವದ ಬಗ್ಗೆ ಹೆಚ್ಚು ಪ್ರಶ್ನೆ ಕೇಳಿದ್ದಕ್ಕೆ ಸಿಡಿಮಿಡಿಗೊಂಡ ಕಟೀಲ್

    davangere murder

    ಇದೀಗ ಹೊನ್ನಾಳಿ ಸಿಪಿಐ ದೇವರಾಜ್ ತಂಡ ಶಿಲ್ಪಾಳ ಕೊಲೆಯಾದ 8 ಗಂಟೆಯಲ್ಲಿಯೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:ಕೇರಳದ 32 ಮಂದಿಗೆ ಸೋಂಕು, ಕೋಲಾರದ ನರ್ಸಿಂಗ್ ಕಾಲೇಜು ವಿರುದ್ಧ ಕಠಿಣ ಕ್ರಮ: ಸುಧಾಕರ್

  • ಪತ್ನಿಯನ್ನು ಕೊಂದು ಶವವನ್ನು ಹೂತಿಟ್ಟ ಪತಿ ಅರೆಸ್ಟ್

    ಪತ್ನಿಯನ್ನು ಕೊಂದು ಶವವನ್ನು ಹೂತಿಟ್ಟ ಪತಿ ಅರೆಸ್ಟ್

    ವಿಜಯಪುರ: ಕ್ಷುಲ್ಲಕ ಕಾರಣಕ್ಕಾಗಿ ಪತಿಯೇ ಪತ್ನಿಯನ್ನು ಕೊಲೆಗೈದು ಶವವನ್ನು ತೋಟದ ಮನೆಯ ಜಮೀನಿನಲ್ಲಿ ಹೂತಿಟ್ಟ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ನಡೆದಿದೆ.

    ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದ ದ್ರಾಕ್ಷಾಯಣಿ ರಾಚಯ್ಯ ಬನ್ನಿಗೋಳ ಮಠ(36) ಹತ್ಯೆಯಾಗಿರುವ ಪತ್ನಿಯಾಗಿದ್ದು, ರಾಚಯ್ಯ ಬನ್ನಿಗೋಳ ಮಠ ಹತ್ಯೆಗೈದಿರುವ ಪಾಪಿ ಪತಿಯಾಗಿದ್ದಾನೆ. ಮಕ್ಕಳನ್ನು ದೂರ ಮಾಡಿದ್ದಾಳೆ ಎನ್ನುವ ಕಾರಣಕ್ಕೆ ಪತ್ನಿಯನ್ನು ರಾಚಯ್ಯ ಕೊಲೆಗೈದು ಶವವನ್ನು ಮನೆಯ ಪಕ್ಕ ಜಮೀನಿನಲ್ಲಿ ಹೂತಿಟ್ಟು ಪರಾರಿಯಾಗಿದ್ದಾನೆ. ಇದನ್ನೂ ಓದಿ: ಹಾಡಹಗಲೇ ಬೆಂಗಳೂರಿನಲ್ಲಿ ಅಪ್ರಾಪ್ತೆಗೆ ಮುತ್ತಿಟ್ಟ ಯುವಕ

    ಕೊಲೆಗೈದು ಪರಾರಿಯಾಗಿದ್ದ ಪತಿ ರಾಚಯ್ಯನನ್ನು ಪೊಲೀಸರು ಸೆರೆ ಹಿಡದಿದ್ದು, ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿಎಂ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ- ಒಂದೂವರೆ ಲಕ್ಷ ಕದ್ದ ಖದೀಮರು

  • ಪತ್ನಿಯನ್ನು ಕೊಂದು ಅಪಘಾತವೆಂದು ಬಿಂಬಿಸಿದ್ದ ಪತಿಯ ಬಂಧನ

    ಪತ್ನಿಯನ್ನು ಕೊಂದು ಅಪಘಾತವೆಂದು ಬಿಂಬಿಸಿದ್ದ ಪತಿಯ ಬಂಧನ

    ಹಾಸನ: ಪತ್ನಿಯನ್ನು ಕೊಂದು ಅಪಘಾತವೆಂದು ಬಿಂಬಿಸಿದ್ದ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

    ಮೂರು ವರ್ಷದ ಹಿಂದೆ ಅರಕಲಗೂಡು ತಾಲೂಕಿನ ಅತ್ನಿ ಗ್ರಾಮದ ಪ್ರೀತಿಯನ್ನು ಅಕ್ಕಲವಾಡಿ ಗ್ರಾಮದ ಮಹೇಶ್ ದೇವಾಲಯವೊಂದರಲ್ಲಿ ಬಲವಂತವಾಗಿ ವಿವಾಹವಾಗಿದ್ದ ಎನ್ನಲಾಗಿದೆ. ನಂತರ ಪತ್ನಿಯೊಂದಿಗೆ ಬೆಂಗಳೂರಿಗೆ ತೆರಳಿದ್ದ ಆತ, ಕೊರೊನಾ ಹಿನ್ನೆಲೆಯಲ್ಲಿ ಅಕ್ಕಲವಾಡಿಗೆ ವಾಪಸ್ ಬಂದಿದ್ದರು. ಗಂಡ-ಹೆಂಡತಿ ನಡುವೆ ಆಗಾಗ್ಗೆ ಜಗಳ ನಡೆದು ಮನಸ್ತಾಪ ಮೂಡಿತ್ತು. ಹಿರಿಯರೆಲ್ಲಾ ಸೇರಿ ರಾಜಿ ಪಂಚಾಯ್ತಿ ಮಾಡಿ ಹೊಂದಿಕೊಂಡು ಹೋಗುವಂತೆ ಹೇಳಿದ್ದರೂ ಸಂಸಾರ ಸರಿ ಹೋಗಿರಲಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಅರಗ ಜ್ಞಾನೇಂದ್ರ

    ಮಂಗಳವಾರ ರಾತ್ರಿ 8.30 ರ ಸುಮಾರಿನಲ್ಲಿ ಅರಕಲಗೂಡು ತಾಲೂಕಿನ ಕಣಿವೆ ಬಸಪ್ಪ-ಹುಲಿಕಲ್ ರಸ್ತೆಯಲ್ಲಿ ಬೈಕಿನಲ್ಲಿ ಬರುತ್ತಿದ್ದ ವೇಳೆ ಅಪಘಾತವಾಗಿ ಪ್ರೀತಿ ಸಾವನ್ನಪ್ಪಿದ್ದಾಳೆ. ನನಗೆ ಗಾಯಗಳಾಗಿವೆ ಎಂದು ಮಹೇಶ್ ಸಂಬಂಧಿಕರಿಗೆ ಫೋನ್ ಮಾಡಿ ತಿಳಿಸಿದ್ದನು. ಅಲ್ಲದೆ ಅಂಬುಲೆನ್ಸ್ ಕರೆಸಿ ಪ್ರೀತಿ ಮೃತದೇಹ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದನು. ಆದರೆ ಪತಿ ಮಹೇಶ್ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಪತಿಯ ನೀಚ ಕೃತ್ಯ ಬಯಲಾಗಿದೆ. ಇದನ್ನೂ ಓದಿ: ಪ್ರೇಮ ವೈಫಲ್ಯ- ಪ್ರಿಯತಮೆಯನ್ನು ಕೊಲೆಗೈದು, ಆತ್ಮಹತ್ಯೆಗೆ ಯತ್ನಿಸಿದ ಭಗ್ನಪ್ರೇಮಿ

    ಪತ್ನಿ ಪ್ರೀತಿ ತಲೆಗೆ ಚಾಕುವಿನಿಂದ ಇರಿದು, ಆಕೆ ಮೃತಪಟ್ಟ ನಂತರ ಬೈಕಿನಲ್ಲಿ ಶವ ತಂದು ಅಪಘಾತ ಎಂದು ಬಿಂಬಿಸಲು ಹೊರಟಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಇತ್ತ ಪ್ರೀತಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮದುವೆಯಾದ ದಿನದಿಂದಲೂ ವರದಕ್ಷಿಣೆ ತರುವಂತೆ ಮಹೇಶ್ ಹಾಗೂ ಅವರ ಪೋಷಕರು ಕಿರುಕುಳ ನೀಡುತ್ತಿದ್ದರು. ಅನೇಕ ಬಾರಿ ಆಕೆಯ ಮೇಲೆ ಹಲ್ಲೆ ಕೂಡ ಮಾಡಿದ್ದರು. ಎಷ್ಟೇ ಬುದ್ಧಿವಾದ ಹೇಳಿದರೂ ಬದಲಾಗದ ಮಹೇಶ್, ಪ್ರೀತಿಯನ್ನು ಕೊಲೆ ಮಾಡಿದ್ದಾನೆ. ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.  ಇದನ್ನೂ ಓದಿ: ಗ್ಯಾಂಗ್‍ರೇಪ್ ಆರೋಪಿಗಳನ್ನು ಗಲ್ಲಿಗೇರಿಸಬೇಕು: ಯತ್ನಾಳ್

  • ಸುಪಾರಿ ಕೊಟ್ಟು ಗಂಡನಿಗೆ ಗುಂಡು ಹೊಡೆಸಿದ್ದ ಪತ್ನಿ ಅರೆಸ್ಟ್!

    ಸುಪಾರಿ ಕೊಟ್ಟು ಗಂಡನಿಗೆ ಗುಂಡು ಹೊಡೆಸಿದ್ದ ಪತ್ನಿ ಅರೆಸ್ಟ್!

    ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕರ ಹಾಗೂ ತನ್ನ ಸಹೋದರನ ಜೊತೆ ಸೇರಿ ಸುಪಾರಿ ಕೊಟ್ಟು ಗಂಡನಿಗೆ ಗುಂಡು ಹೊಡೆಸಿ ಕೊಲೆ ಮಾಡಲು ಯತ್ನಿಸಿದ ಐನಾತಿ ಹೆಂಡತಿ, ಈಕೆಯ ಪ್ರಿಯಕರ ಹಾಗೂ ಆಕೆಯ ಸಹೋದರ ಸೇರಿ 6 ಮಂದಿಯನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರ ಪೊಲೀಸರು ಬಂಧಿಸಿದ್ದಾರೆ.

    ಸುಪಾರಿ ಕೊಟ್ಟ ಹೆಂಡತಿಯ ಹೆಸರು ಸುಮಿತ್ರಾ. ಗುಂಡಿನ ದಾಳಿಗೆ ಒಳಗಾದವರು ಮೂಲತಃ ಆನೆಮಡುಗು ಗ್ರಾಮದ ಗಾರೆ ಕೆಲಸಗಾರ ಗೋವಿಂದಪ್ಪ.

    CKB_ WIFE_ HUSBAND

    ಘಟನೆಯ ವಿವರ:
    ಆಗಸ್ಟ್ 18 ರಂದು ಶಿಡ್ಲಘಟ್ಟ ನಗರದ ಇದ್ಲೂಡು ರಸ್ತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಗೋವಿಂದಪ್ಪ ಮೇಲೆ ಪಲ್ಸರ್ ಬೈಕಿನಲ್ಲಿ ಬಂದ ಅಪರಿಚಿತರು ಮಸಲ್ ಗನ್ ಬಳಸಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ರು. ಘಟನೆಯಲ್ಲಿ ಮಸಲ್ ಗನ್ ಗೆ ಸೈಕಲ್ ಬಾಲ್ಸ್ ಬಳಸಿ ಗುಂಡಿನ ದಾಳಿ ನಡೆಸಲಾಗಿದ್ದು, ಪರಿಣಾಮ ಗೋವಿಂದಪ್ಪ ಬೆನ್ನಿನ ಭಾಗ ಸೇರಿ ತಲೆಯ ಭಾಗದಲ್ಲಿ ಗಾಯಗಳಾಗಿದ್ದವು. ಇದನ್ನೂ ಓದಿ: ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಅರಗ ಜ್ಞಾನೇಂದ್ರ

    ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗೋವಿಂದಪ್ಪ ಗುಣಮುಖರಾಗಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸಿರುವ ಪೊಲೀಸರಿಗೆ ಇದೆಲ್ಲಾ ಗೋವಿಂದಪ್ಪನ ಪತ್ನಿ ಸುಮಿತ್ರಾಳದ್ದೇ ಕೃತ್ಯ ಅನ್ನೋ ಸತ್ಯ ಗೊತ್ತಾಗಿದೆ. ಗೋವಿಂದಪ್ಪ ಪತ್ನಿ ಸುಮಿತ್ರ, ಮುನಿಕೃಷ್ಣ ಎಂಬವನ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಇದಕ್ಕೆ ಗಂಡ ಗೋವಿಂದಪ್ಪ ಜಗಳ ಮಾಡಿ ಬುದ್ಧಿವಾದ ಹೇಳಿದ್ದಾರೆ.

    ಇದೇ ವಿಚಾರವಾಗಿ ಗಂಡ ಪದೇ ಪದೇ ಟಾರ್ಚರ್ ಕಿರುಕುಳ ಕೊಡ್ತಾನೆ ಅಂತ ಪತ್ನಿ ಸುಮತ್ರಾ ಪ್ರಿಯಕರ ಮುನಿಕೃಷ್ಣ ಹಾಗೂ ಸಹೋದರ ರಾಮಕೃಷ್ಣ ಜೊತೆ ಪ್ಲಾನ್ ಮಾಡಿ, ಹರೀಶ್, ಮುರುಳಿ, ಪ್ರವೀಣ್ ಎಂಬವರಿಗೆ 2 ಲಕ್ಷ ರೂಪಾಯಿ ಸುಪಾರಿ ಕೊಟ್ಟಿದ್ರು. ಹೀಗಾಗಿ ಸುಪಾರಿ ಪಡೆದವರು ಸೇರಿ ಪತ್ನಿ, ಪ್ರಿಯಕರ ಹಾಗೂ ಸಹೋದರನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

  • ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು

    ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು

    ಬೆಂಗಳೂರು/ಆನೇಕಲ್: ವರದಕ್ಷಿಣೆ ಕಿರುಕುಳ ಹಿನ್ನೆಲೆ ಗೃಹಿಣಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಶೃತಿ (32) ಮೃತ ಮಹಿಳೆಯಾಗಿದ್ದು, ಹೆಚ್.ಎಸ್.ಆರ್ ಲೇಔಟ್ ನಿವಾಸಿಯಾದ ಇವರನ್ನು 2014 ರಲ್ಲಿ ಹೊರಮಾವು ಮುಖ್ಯರಸ್ತೆ ಬಾಣಸವಾಡಿಯ ಮುನಿರೆಡ್ಡಿ ಬಡಾವಣೆಯ ಮಿಥುನ್ ರೆಡ್ಡಿ ಎಂಬವರಿಗೆ ನೀಡಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಅಂದಿನಿಂದಲೂ ಗಂಡ ಹಾಗೂ ಅತ್ತೆ ಭಾಗ್ಯಮ್ಮಳ ವರದಕ್ಷಿಣೆ ಭೂತ ಶೃತಿಯನ್ನು ಕಾಡತೊಡಗಿದ್ದು, ಕಳೆದ ಶುಕ್ರವಾರ ವರಮಹಾಲಕ್ಷೀ ಹಬ್ಬದಂದು ಶೃತಿ ಗಂಡ ಹಾಗೂ ಅತ್ತೆ ತವರು ಮನೆಯಿಂದ ಒಂದು ಲಕ್ಷ ರೂ. ಹಣ ತರುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ:ಒನ್ ಸೈಡ್ ಲವ್ – ಬೆಳ್ಳಂಬೆಳಗ್ಗೆ ಯುವತಿ ತಂದೆಯ ಬರ್ಬರ ಕೊಲೆ

    ಹಾಗಾಗಿ 35 ಸಾವಿರ ಹಣ ತಂದು ಕೊಟ್ಟು, 65 ಸಾವಿರ ಬಾಕಿ ಉಳಿಸಿಕೊಂಡಿದ್ದ ಶೃತಿಗೆ ಬಾಕಿ ಹಣ ತರುವಂತೆ ಸೋಮವಾರ ಸಂಜೆ ಗಂಡ ಮಿಥುನ್ ಹಾಗೂ ಅತ್ತೆ ಭಾಗ್ಯಮ್ಮ ಶೃತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಮನನೊಂದು ಶೃತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಮಮೂರ್ತಿ ನಗರ ಪೊಲೀಸರು ಗಂಡ ಹಾಗೂ ಅತ್ತೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಅತ್ತೆ ಆರೋಪ ಸುಳ್ಳು ಎಂದು ಸಾಬೀತುಪಡಿಸಲು ಕೆಂಡದ ಮೇಲೆ ನಡೆದ ಸೊಸೆ

  • ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ

    ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ

    ಧಾರವಾಡ: ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ಪತ್ನಿಯನ್ನು ಪತಿ ಕೊಲೆ ಮಾಡಿದ ಘಟನೆ ನಗರದ ರಾಜೀವಗಾಂಧಿ ನಗರದಲ್ಲಿ ನಡೆದಿದೆ.

    ಗಣೇಶ ಬಳ್ಳಾರಿ ಪತ್ನಿ ಶಿಲ್ಪಾಳನ್ನು ಕೊಲೆ ಮಾಡಿದ್ದಾನೆ. ಪತಿ ಗಣೇಶ ಮಂಜುಳಾ ಎಂಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರವಾಗಿ ಪತಿ ಪತ್ನಿಯ ಜೊತೆ ಜಗಳ ಅತಿರೇಕಕ್ಕೆ ತಿರುಗಿ, ಪತಿ ಗಣೇಶ ಸಲಾಕೆಯಿಂದ ಪತ್ನಿಯ ತಲೆಗೆ ಹೊಡೆದಿದ್ದಾನೆ. ಶಿಲ್ಪಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಗಣೇಶ ಅಲ್ಲಿಂದ ಪರಾರಿಯಾಗಿದ್ದ.

    ಕೊಲೆ ನಡೆದ ವಿಷಯ ಯಾರಿಗೂ ಗೊತ್ತಿರಲಿಲ್ಲ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಶವವನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿ ತನಿಖೆ ಕೈಗೊಂಡಿದ್ದರು. ನಂತರ ಪತಿ ಗಣೇಶನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಗಣೇಶನ ಜೊತೆಯಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಸಹ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಕೊಲೆಗೆ ಬಳಸಿದ್ದ ಸಲಾಕೆಯನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆಸಿದ್ದು, ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.