ಕೋಲಾರ: ಸಾಲ ತೀರಿಸುವ ಸಲುವಾಗಿ ತಂದೆಯೊಬ್ಬ ತನ್ನ ಗಂಡು ಮಗುವನ್ನೇ ಮಾರಿದ ಅಮಾನವೀಯ ಘಟನೆಯೊಂದು ಕೋಲಾರದಲ್ಲಿ (Kolar) ನಡೆದಿದೆ.
ಬಂಗಾರಪೇಟೆ ನಗರ ನಿವಾಸಿಗಳಾದ ಮುನಿರಾಜು ಹಾಗೂ ಪವಿತ್ರ ದಂಪತಿಯ ಮೂರು ತಿಂಗಳ ಮಗು ಇದಾಗಿದೆ. ಬಂಗಾರಪೇಟೆಯ ಕೆರೆಕೋಡಿ ನಿವಾಸಿಯಾದ ವಲ್ಲಿ ಎನ್ನುವ ಮಹಿಳೆ ಮೂಲಕ ಮುನಿರಾಜು, ಮಗು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.
ಹಣದಾಸೆಗೆ ಬಿದ್ದ ಪತಿ ಮುನಿರಾಜು 3 ತಿಂಗಳ ಗಂಡು ಮಗು ಮಾರಾಟ ಮಾಡಿದ್ದಾನೆ. ತನಗೆ ಮಗು ಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಆಯೋಗ ಹಾಗೂ ಬಂಗಾರಪೇಟೆ ಪೊಲೀಸ್ ಠಾಣೆಗೆ ಪತ್ನಿ ಪವಿತ್ರ ದೂರು ನೀಡಿದ್ದಾರೆ. ಮಗು ಅಪಹರಣ ಮಾಡಿದ್ದಾರೆಂದು ಪತಿ ಮುನಿರಾಜು ಹಾಗೂ ವಲ್ಲಿ ವಿರುದ್ದ ದೂರು ನೀಡಿರುವ ಪವಿತ್ರಾ, ಮಗುವನ್ನ ವಾಪಾಸ್ ಕೊಡಿಸುವಂತೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೋಲಾರ: ಕುಡಿದ ಅಮಲಿನಲ್ಲಿ ಪತಿ ಮಹಾಶಯನೋರ್ವ ಪತ್ನಿಯನ್ನೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕು ದುಡ್ಡಿಗಾನಹಳ್ಳಿಯಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಲಕ್ಷ್ಮಮ್ಮ (55) ಕೊಲೆಯಾದ ದುರ್ದೈವಿಯಾಗಿದ್ದು, ಈಕೆಯನ್ನು ಪತಿ ರಾಮಪ್ಪ (60) ಕೊಲೆ ಮಾಡಿದ್ದಾನೆ.
ರಾಮಪ್ಪ ಕುಡಿದು ಬಂದು ಪತ್ನಿಯೊಂದಿಗೆ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದ. ಅಲ್ಲದೆ ಇಬ್ಬರು ಸಹ ಆಗಾಗ ಕುಡಿದು ಗಲಾಟೆ ಮಾಡಿಕೊಳ್ಳುತ್ತಿದ್ದರು. ಆದರೆ ಕಳೆದ ರಾತ್ರಿ ಗಲಾಟೆ ತಾರಕಕ್ಕೇರಿ ಪತ್ನಿಯ ಎದೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾನೆ.
ಲಕ್ನೋ: ಅಚ್ಚರಿಯ ಪ್ರಕರಣವೊಂದರಂತೆ ಪತ್ನಿಯೊಬ್ಬಳು ತನ್ನ ಪತಿಗೆ ಚಿತ್ರಹಿಂಸೆ ಕೊಟ್ಟ ಆಘಾತಕಾರಿ ಘಟನೆಯೊಂದು ಉತ್ತರಪ್ರದೇಶದ (Uttar Pradesh) ಸಿಯೋಹರಾ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಪತ್ನಿ ಮೆಹರ್ (30) ಹಾಗೂ ಪತಿಯನ್ನು ಮನ್ನನ್ ಜೈದಿ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ ಪತ್ನಿ ತನ್ನ ಪತಿಯ ಮೇಲೆ ಈ ರೀತಿಯ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ಸದ್ಯ ಪತಿಯ ಮೇಲೆ ಕ್ರೌರ್ಯ ಮೆರೆದ ಪತ್ನಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ.
ಮೆಹರ್ ಹಾಗೂ ಮುನ್ನನ್ ಜೈದಿ ಪ್ರತ್ಯೇಕವಾಗಿ ವಾಸವಾಗಿದ್ದರು. ಇವರಿಬ್ಬರ ದಾಂಪತ್ಯದ ನಡುವೆ ಬಿರುಕು ಮೂಡಿದ ಬಳಿಕ ಮೆಹರ್ ಮದ್ಯಪಾನ ಹಾಗೂ ಸಿಗರೇಟ್ ಸೇದಲು ಆರಂಭಿಸಿದ್ದಾಳೆ. ಅಲ್ಲದೇ ಮೆಹರ್ ತನ್ನನ್ನು ದೈಹಿಕವಾಗಿ ನಿಂದಿಸಿದ್ದಾಳೆ. ತನ್ನ ಮೇಲೆ ಸುಳ್ಳು ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ತನ್ನ ಖಾಸಗಿ ಅಂಗಗಳನ್ನು ಸಿಗರೇಟಿನಿಂದ ಸುಡುವ ಮುನ್ನ ಪತ್ನಿ ತನ್ನ ಕೈಕಾಲುಗಳನ್ನು ಕಟ್ಟಿ ಹಾಕಿದ್ದಾಳೆ ಎಂದು ಸಂತ್ರಸ್ತ ಆರೋಪಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಭ್ರೂಣಹತ್ಯೆ ದಂಧೆ: ದಂಪತಿ ಅರೆಸ್ಟ್
ತನ್ನ ಸುರಕ್ಷತೆಯ ಬಗ್ಗೆ ಕಳವಳ ವ್ಯ ಕ್ತಪಡಿಸಿದ ಮನ್ನನ್ ತಮ್ಮ ಮನೆಯಲ್ಲಿ ಸಿಸಿಕ್ಯಾಮೆರಾ ಅಳವಡಿಸಿದ್ದಾರೆ ಈ ಕ್ಯಾಮೆರಾದಲ್ಲಿ ಮೆಹರ್ ಕ್ರೂರ ಕೃತ್ಯ ಸೆರೆಯಾಗಿದ್ದು, ಮುನ್ನನ್ ಪೊಲೀಸರಿಗೆ ಈ ದೃಶ್ಯವನ್ನು ನೀಡಿದ್ದಾರೆ. ಪತಿ ದೂರು ಮತ್ತು ಸಿಸಿಟಿವಿ ದೃಶ್ಯಾ ವಳಿಗಳನ್ನು ಸಲ್ಲಿಸಿದ ನಂತರ ಸಿಯೋಹರಾ ಜಿಲ್ಲಾ ಪೊಲೀಸರು ಕ್ರಮ ಕೈಗೊಂಡಿದ್ದು, ಭಾನುವಾರ ಮಹಿಳೆಯನ್ನು ಬಂಧಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಮಹಿಳೆಯ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ ಎಂದು ಎಸ್‌ಪಿ ಪೂರ್ವ ಧರಂಪಾಲ್ ಸಿಂಗ್ ತಿಳಿಸಿದ್ದಾರೆ.
ಲಕ್ನೋ: ಮದುವೆ ಉಡುಗೊರೆಗೆ ಸಂಬಂಧಿಸಿದಂತೆ ಗಂಡ- ಹೆಂಡತಿ ಜಗಳ ಪತಿಯ ಕೊಲೆಯಲ್ಲಿ ಅಂತ್ಯವಾದ ಘಟನೆಯೊಂದು ಉತ್ತರಪ್ರದೇಶದಲ್ಲಿ (Uttarpradesh) ನಡೆದಿದೆ.
ಮೃತನನನು ಚಂದ್ರಪ್ರಕಾಶ್ (35) ಎಂದು ಗುರುತಿಸಲಾಗಿದೆ. ಈತನನ್ನು ಪತ್ನಿ ಚಾಬಿ ತನ್ನ ಸಹೋದರರ ಸಹಾಯದಿಂದ ಕೊಲೆ ಮಾಡಿದ್ದಾಳೆ. ಈ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಸಮೀಪದ ಹಳ್ಳಿಯೊಂದರಲ್ಲಿ ನಡೆದಿದೆ.
ನಡೆದಿದ್ದೇನು?: ಚಂದ್ರಪ್ರಕಾಶ್ ಸಹೋದರಿಗೆ ಮದುವೆ ನಿಗದಿಯಾಗಿತ್ತು. ಅಂತೆಯೇ ಏಪ್ರಿಲ್ 26 ರಂದು ಮದುವೆ ಕಾರ್ಯಕ್ರಮ ನಡೆಯುವುದಿತ್ತು. ಹೀಗಾಗಿ ಸಹೋದರಿಗೆ ಏನಾದರೂ ಗಿಫ್ಟ್ ಕೊಡಬೇಕು ಎಂದು ಯೋಚಿಸುತ್ತಿರುವಾಗ ಚಂದ್ರಶೇಖರ್‌ಗೆ ಚಿನ್ನದ ಉಂಗುರ ಮತ್ತು ಟಿವಿ ಕೊಡಿಸುವ ಯೋಚನೆ ಬಂತು. ಅಂತೆಯೇ ಈ ವಿಚಾರವನ್ನು ಪತ್ನಿಯ ಮುಂದೆ ಪ್ರಸ್ತಾಪಿಸಿದ್ದಾನೆ. ಇದನ್ನೂ ಓದಿ; 6 ವರ್ಷದ ಮಗಳ ಮುಂದೆಯೇ ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ!
ಈ ವೇಳೆ ಪತಿಯ ನಿರ್ಧಾರಕ್ಕೆ ಪತ್ನಿ ಚಾಬಿ ವಿರೋಧ ವ್ಯಕ್ತಪಡಿಸಿದ್ದಾಳೆ. ಅಲ್ಲದೇ ಇದೇ ವಿಚಾರವಾಗಿ ಪತಿ- ಪತ್ನಿಯ ನಡುವೆ ವಾಗ್ವಾದವೂ ನಡೆದಿದೆ. ಆದರೆ ಚಂದ್ರಶೇಖರ್ ಈ ಎರಡು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳುತ್ತಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಪತ್ನಿ ಚಾಬಿ ತನ್ನ ಸಹೋದರರಿಗೆ ಈ ವಿಷಯ ಮುಟ್ಟಿಸುತ್ತಾಳೆ. ಅಲ್ಲದೇ ಪತಿಗೆ ತಕ್ಕ ಬುದ್ಧಿ ಕಲಿಸುವಂತೆ ಹೇಳುತ್ತಾಳೆ.
ಸಹೋದರಿ ಚಾಬಿ ಮಾತು ಕೇಳಿ ಮನೆಗೆ ಬಂದು ಚಂದ್ರಶೇಖರ್‌ಗೆ ದೊಣ್ಣೆಗಳಿಂದ ಮನಬಂದಂತೆ ಥಳಿಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಥಳಿಸಿದ್ದರಿಂದ ಗಂಭೀರ ಗಾಯಗೊಂಡು ಚಂದ್ರಶೇಕರ್ ಕುಸಿದು ಬಿದ್ದಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು ಚಂದ್ರಶೇಖರ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಸದೇ ಚಂದ್ರಶೇಖರ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ.
ಇತ್ತ ಪ್ರಕರಣ ಸಂಬಂಧ ಚಾಬಿ ಮತ್ತು ಆಕೆಯ ಸಹೋದರರು ಸೇರಿದಂತೆ ಐವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇಂದೋರ್: ಪಾಪಿ ಪತಿ ಮಹಾಶಯನೊಬ್ಬ ತನ್ನ ಗರ್ಭಿಣಿ ಪತ್ನಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ (Madhyapradesh) ಇಂದೋರ್‌ನಲ್ಲಿ ನಡೆದಿದೆ.
ಚಂದನ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶ್ ನಗರದಲ್ಲಿ ಈ ಪ್ರಕರಣ ನಡೆದಿದೆ. ಮೃತಳನ್ನು ಶಾರದಾ (35) ಎಂದೂ ಆರೋಪಿ ಪತಿಯನ್ನು ಉಮೇಶ್ ರಾಥೋಡ್ ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ಮೃತರು 5 ತಿಂಗಳ ಗರ್ಭಿಣಿ. ಆರೋಪಿ ಪತಿ ತನ್ನ 6 ವರ್ಷದ ಅಪ್ರಾಪ್ತ ಮಗಳ ಎದುರೇ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ. ಇದನ್ನೂ ಓದಿ: ಸಲ್ಮಾನ್ ಮನೆ ಎದುರು ಗುಂಡಿನ ದಾಳಿ ಪ್ರಕರಣ- ಸೂರತ್‌ನ ತಾಪಿ ನದಿಯಲ್ಲಿ ಗನ್ ಪತ್ತೆ
ಘಟನೆ ವಿವರ: ಆರೋಪಿ ಪತಿ ಉಮೇಶ್ ರಾಥೋಡ್ ತನ್ನ ಪತ್ನಿ ಶಾರದಾ ಜೊತೆ ಮದುವೆಗೆಂದು ತಡರಾತ್ರಿ ಮನೆಗೆ ಬಂದಿದ್ದ. ಈ ವೇಳೆ ಹಣದ ವಿಚಾರವಾಗಿ ಪತಿ-ಪತ್ನಿಯ ನಡುವೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಪತಿ, ಪತ್ನಿ ಶಾರದಾ ಹೊಟ್ಟೆಗೆ ಮನೆಯಲ್ಲಿಟ್ಟಿದ್ದ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಪೊಲೀಸರ ಪ್ರಕಾರ, ಪತ್ನಿಗೆ ಚಾಕುವಿನಿಂದ ಇರಿಯುತ್ತಿರುವಾಗ ತನ್ನ 6 ವರ್ಷದ ಮಗಳು ಅಲ್ಲಿಯೇ ಇರುವುದನ್ನು ಕೂಡ ಆತ ನೋಡಿದ್ದಾನೆ. ಆಕೆಯ ಎದುರೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಚಂದನ್ ನಗರ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ಧಾವಿಸಿದ್ದಾರೆ. ಇದಾದ ಬಳಿಕ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿ ಉಮೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಕ್ನೋ: ತೀವ್ರ ಹಣದ ಕೊರತೆ, 7 ವರ್ಷಗಳ ವಿವಾಹೇತರ ಸಂಬಂಧ ಮತ್ತು ವಿದ್ಯುತ್ ಕಂಬದ (woman Climbs Pole In Protest) ಮೇಲೆ ಕುಳಿತ ಮಹಿಳೆ. ಈ ದೃಶ್ಯ ಕಂಡುಬಂದಿದ್ದು ಉತ್ತರ ಪ್ರದೇಶದ (Uttarpradesh) ಪಟ್ಟಣವೊಂದರಲ್ಲಿ.
ಹೌದು. ಗೋರಖ್‌ಪುರದ ಪಿಪ್ರೈಚ್‌ನಲ್ಲಿ 34 ವರ್ಷದ ಮೂರು ಮಕ್ಕಳ ತಾಯಿಯೊಬ್ಬಳು ತನ್ನ ವಿವಾಹೇತರ ಸಂಬಂಧದ ಬಗ್ಗೆ ಪತಿಗೆ ತಿಳಿದ ನಂತರ ವಿದ್ಯುತ್ ಕಂಬವನ್ನು ಹತ್ತುವ ಮೂಲಕ ರಾದ್ದಾಂತ ಸೃಷ್ಟಿಸಿದ್ದಾಳೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ.
ಏನಿದು ಪ್ರಕರಣ?: ಮಹಿಳೆ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಾಗಿದ್ದಳು. ಆದರೆ ಕ್ರಮೇಣ ಆಕೆಗೆ ಪಕ್ಕದ ಗ್ರಾಮದ ವ್ಯಕ್ತಿಯೊಬ್ಬರ ಪರಿಚಯವಾಗಿದೆ. ಈ ಪರಿಚಯ ಪ್ರೇಮಕ್ಕೆ ತಿರುಗಿದ್ದು, ಕಳೆದ 7 ವರ್ಷಗಳಿಂದ ಪತಿಗೆ ತಿಳಿಯದಂತೆ ಇವರಿಬ್ಬರ ಪ್ರೇಮ ಪುರಾಣ ನಡೆಯುತ್ತಿತ್ತು. ಇದನ್ನೂ ಓದಿ: ನಾಮಪತ್ರ ಸಲ್ಲಿಸಿದ ಡಾ.ಮಂಜುನಾಥ್ – ಡಿಕೆಸು ನೋಡಿ ಮೋದಿ ಘೋಷಣೆ ಕೂಗಿದ ಕಾರ್ಯಕರ್ತರು
ಮಹಿಳೆಯ ಪತಿ ರಾಮ್ ಗೋವಿಂದ್ ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಇವರಿಬ್ಬರ ಪ್ರೀತಿ ವಿಚಾರ ಪತಿಯ ಗಮನಕ್ಕೆ ಬಂದಿದೆ. ಹೀಗಾಗಿ ದಂಪತಿ ನಡುವೆ ವಾಗ್ವಾದ ನಡೆಯಿತು. ಅಲ್ಲದೇ ಪ್ರಿಯತಮನಿಗೂ ಮನೆಯಲ್ಲಿ ಇರಲು ಅವಕಾಶ ಕಲ್ಪಿಸಬೇಕು ಮತ್ತು ಮನೆಯ ಆರ್ಥಿಕತೆಗೆ ಸಹಾಯ ಮಾಡಬೇಕೆಂದು ಒತ್ತಾಯಿಸಿದಳು. ಪತ್ನಿಯ ಮಾತಿನಿಂದ ರಾಮ್ ಗೋವಿಂದ್ ಪಿತ್ತ ನೆತ್ತಿಗೇರಿತು. ಕೂಡಲೇ ಮನೆಯಿಂದಲೇ ಹೊರ ನಡೆದನು.
ಪತಿ ಮನೆಯಿಂದ ಹೊರ ನಡೆಯುತ್ತಿದ್ದಂತೆಯೇ ಪತಿ ಹಾಗೂ ಪ್ರಿಯತಮ ಇಬ್ಬರೂ ನನಗೆ ಬೇಕು ಎಂದು ಹೇಳಿ ಮನೆಯ ಪಕ್ಕದಲ್ಲೇ ಇರುವ ವಿದ್ಯುತ್ ಕಂಬವೇರಿ ಮಹಿಳೆ ಪ್ರತಿಭಟನೆ ನಡೆಸಿದ್ದಾಳೆ. ಮಹಿಳೆಯು ವಿದ್ಯುತ್ ಕಂಬವನ್ನು ಏರುತ್ತಿರುವುದು ನೋಡುಗರನ್ನು ದಿಗ್ಭ್ರಮೆಗೊಳಿಸಿತು. ಕೂಡಲೇ ಸ್ಥಳೀಯರು ಆಕೆಯನ್ನು ಕೆಳಗೆ ಇಳಿಯುವಂತೆ ಕೇಳಿಕೊಂಡಿದ್ದಾರೆ. ಹೈ-ಟೆನ್ಷನ್ ತಂತಿಗಳಿರುವ ಕಂಬವೇರಿ ಮಹಿಳೆ ಅಪಾಯಕಾರಿಯಾಗಿ ಕುಳಿತಿದ್ದನ್ನು ಕಂಡು ಜನ ಕೂಡ ಭಯಭೀತರಾಗಿದ್ದಾರೆ.
ಎಷ್ಟು ಮನವಿ ಮಾಡಿಕೊಂಡರೂ ಮಹಿಳೆ ಕಂಬದಿಂದ ಕೆಳಗೆ ಇಳಿಯದಿದ್ದರಿಂದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಮತ್ತು ವಿದ್ಯುತ್ ಇಲಾಖೆಗಳ ತಂಡವು ಮುಂಜಾಗ್ರತಾ ಕ್ರಮವಾಗಿ ವಿದ್ಯುಚ್ಛಕ್ತಿ ಸರಬರಾಜನ್ನು ಸ್ಥಗಿತಗೊಳಿಸಿದರು. ಬಳಿಕ ಕಂಬದಿಂದ ಕೆಳಗಿಳಿಯುವಂತೆ ಮಹಿಳೆಯನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.
ಪುಣೆ: ಪತಿ (Husband) ಸಲಿಂಗಿಯಾಗಿದ್ದು, ಆ ವಿಚಾರವನ್ನು ಮರೆಮಾಚಿ ಮದುವೆಯಾಗಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಪೊಲೀಸ್ (Police) ಠಾಣೆಯ ಮೆಟ್ಟಿಲೇರಿರುವ ಘಟನೆ ಪುಣೆಯ (Pune) ವಡ್ಗಾಂಶೇರಿ ಎಂಬಲ್ಲಿ ನಡೆದಿದೆ.
ಜುಲೈ 2022ರಲ್ಲಿ ಮಹಿಳೆಯ ವಿವಾಹವಾಗಿತ್ತು. ಮದುವೆಯ ಬಳಿಕ ಪತಿಯ ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಆತ ಸಲಿಂಗಿ ಎಂಬುದು ಪತ್ನಿಗೆ ತಿಳಿದಿದೆ. ಇದರಿಂದ ಮಹಿಳೆ ಪತಿ ಹಾಗೂ ಅವಳ ಅತ್ತೆಯನ್ನು ಪ್ರಶ್ನಿಸಿದ್ದಾಳೆ. ಇದಾದ ಮೇಲೆ ಅತ್ತೆ ಹಾಗೂ ಪತಿ ಸೇರಿ ತನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ. ಅಲ್ಲದೇ ಕಾರು ಮತ್ತು ಹಣಕ್ಕೆ ಬೇಡಿಕೆ ಇಟ್ಟು ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದನ್ನೂ ಓದಿ: ನಿಮ್ಮ ರಾಮಮಂದಿರ ಸ್ಫೋಟಿಸುತ್ತೇವೆ – ಅಲ್ಲಾಹು ಅಕ್ಬರ್ ಹೆಸರಿನಲ್ಲಿ ಬೆದರಿಕೆ ಪತ್ರ
ಈ ಸಂಬಂಧ ಪುಣೆಯ ಚಂದನ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಪತಿ, ಅತ್ತೆ ಮತ್ತು ಮಾವನ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ), 498 (ಎ) (ಕ್ರೌರ್ಯಕ್ಕೆ ಒಳಪಡಿಸುವುದು) ಮತ್ತು 504 (ಉದ್ದೇಶಪೂರ್ವಕವಾಗಿ ಅವಮಾನ)ರ ಅಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: 2 ಸಾವಿರ ಕೋಟಿ ರೂ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ: ಖ್ಯಾತ ನಿರ್ಮಾಪಕ ಜಾಫರ್ ಬಂಧನ
ಹಾಸನ: ವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ (Hassan Woman Death) ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಸುರಭಿ (24) ಮೃತ ಮಹಿಳೆ. ಪತಿಯೇ ಕೊಲೆ ಮಾಡಿದ್ದಾನೆಂದು ಮೃತಳ ಪೋಷಕರು ಗಂಭೀರ ಆರೋಪ ಮಾಡುತ್ತಿದ್ದಾರೆ. ಜೊತೆಗೆ ಸುರಭಿ ಸಾವಿಗೆ ಪತಿ ದರ್ಶನ್ ಕಾರಣವಾಗಿದ್ದು, ಆತನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಪ್ರಕರಣದ ವಿವರ: ಮೂರು ವರ್ಷದ ಹಿಂದೆ ನಾಗಯ್ಯನಕೊಪ್ಪಲು ಗ್ರಾಮದ ದರ್ಶನ್ ಜೊತೆ ಹುಣಸೂರಿನ ಸುರಭಿಯನ್ನು ಅದ್ಧೂರಿಯಾಗಿ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ವರ್ಷದ ಹೆಣ್ಣುಮಗುವಿದ್ದು, ಪತಿ ದರ್ಶನ್‌ಗೆ ಬೇರೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದನ್ನೂ ಓದಿ: 6 ವರ್ಷ ಪ್ರೀತಿಸಿ ಕೈಕೊಟ್ಟ, ಸಪ್ತಪದಿ ತುಳಿದವನೂ ಬೇಡವೆಂದ- ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಯುವತಿ ಕಂಗಾಲು
ನಿಮ್ಮ ಮಗಳು ಲೋ ಬಿಪಿಯಾಗಿ ಸಾವನ್ನಪ್ಪಿದ್ದಾಳೆ ಎಂದು ದರ್ಶನ್ ಗುರುವಾರ ಸುರಭಿ ಪೋಷಕರಿಗೆ ಕರೆ ಮಾಡಿದ್ದಾನೆ. ನಂತರ ನಾಗಯ್ಯನಕೊಪ್ಪಲಿಗೆ ಬಂದ ಪೋಷಕರು, ಸುರಭಿ ಲೋಬಿಪಿಯಿಂದ ಸತ್ತಿಲ್ಲ. ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಸುರಭಿಯನ್ನು ನೇಣುಬಿಗಿದು ಕೊಲೆ ಮಾಡಿ ನಾಟವಾಡುತ್ತಿದ್ದಾರೆ. ಸುರಭಿ ಕುತ್ತಿಗೆಯ ಮೇಲೆ ಗಾಯದ ಗುರುತುಗಳಿವೆ ಎಂದು ಆರೋಪಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಹೊಂಚು ಹಾಕಿ ಕುಳಿತಿದ್ದ ಪತಿರಾಯ, ನಡು ರೋಡಲ್ಲಿ ಬಾಯ್ ಫ್ರೆಂಡ್ ಎದುರೇ ಮೀನು ಕತ್ತರಿಸುವ ಮಚ್ಚಲ್ಲಿ ಮನಸ್ಸೋ ಇಚ್ಛೆ ಪತ್ನಿಯನ್ನು ಕತ್ತರಿಸಿ ಹಾಕಿದ್ದಾನೆ. ಭಂಡಧೈರ್ಯ ಮಾಡಿದ್ದ ಸ್ಥಳೀಯರು, ಅಟ್ಯಾಕ್ ಮಾಡ್ತಿದ್ದ ಪತಿಯನ್ನ ಹಿಡಿದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಂಗಳೂರಿನ ಮುರುಗೇಶ್ ಪಾಳ್ಯದ ವಿಂಡ್ ಟನೆಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ನೈಗರ್ ಮೇಲೆ ಆಕೆಯ ಪತಿ ಶೇಖ್ ಮುಜೀಬ್ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಇವರಿಬ್ಬರೂ ಕಳೆದ ಮೂರು ವರ್ಷಗಳಿಂದ ಲವ್ ಮಾಡಿ ಮದುವೆಯಾಗಿದ್ರು. ಹೊಸಕೋಟೆ ಮೂಲದ ಮುಜೀಬ್, ಕ್ಯಾಬ್ ಡ್ರೈವರ್ ಕೆಲಸ ಮಾಡಿಕೊಂಡು ಆರ್ ಟಿ ನಗರದಲ್ಲಿ ವಾಸವಿದ್ದ. ನೈಗರ್ ಪ್ರೈವೆಟ್ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು.
ಇತ್ತೀಚೆಗೆ ಹೆಂಡ್ತಿ ನಡತೆ ಮೇಲೆ ಸಂಶಯ ಹೊಂದಿದ್ದ ಶೇಖ್ ಮುಜೀಬ್, ಹೆಂಡ್ತಿಯಿಂದ ದೂರಾಗಿದ್ದನು. ಇತ್ತ ಪತ್ನಿಯು ಸಲೀಂ ಅನ್ನೋನ ಜೊತೆ ಸುತ್ತಾಡ್ತಿದ್ದಾಳೆ ಅನ್ನೋ ವಿಚಾರ ಮುಜೀಬ್ ಗಮನಕ್ಕೆ ಬಂದಿದೆ. ಹೀಗಾಗಿ ಸೋಮವಾರ ಶಿವಾಜಿನಗರಕ್ಕೆ ಹೋಗಿ ಮೀನು ಕತ್ತರಿಸುವ ಮಚ್ಚು ಖರೀದಿ ಮಾಡಿ ಪತ್ನಿ ಪಿಜಿಗೆ ವಾಪಸ್ಸಾಗುವ ರಸ್ತೆಯಲ್ಲಿ ಹೊಂಚು ಹಾಕಿ ಕುಳಿತಿದ್ದ. ಅಂತೆಯೇ ಸಂಜೆ 7 ಗಂಟೆಗೆ ಬಾಯ್ ಫ್ರೆಂಡ್ ಸಲೀಂ ಜೊತೆ ಬಂದ ಹೆಂಡ್ತಿ ನೋಡಿ ಆಕೆಯ ಕೈ ಬೆರಳುಗಳನ್ನ ಟಾರ್ಗೆಟ್ ಮಾಡಿ ಮಚ್ಚಿಂದ ಹಲ್ಲೆ ಮಾಡಿದ್ದ. ಈ ವೇಳೆ ಪತ್ನಿ ತಲೆ ಮೇಲೆ ಕೈ ಇಟ್ಕೊಂಡಿದ್ದರಿಂದ ಕೈ ಜೊತೆಗೆ ತಲೆಗೂ ಗಂಭೀರ ಗಾಯವಾಗಿದೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.
ಕೂಡಲೇ ಸ್ಥಳೀಯರು ಮುಜೀಬ್ ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307 ರಡಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿಚಾರಣೆ ನಡೆಸಲಾಗ್ತಿದೆ. ಇದನ್ನೂ ಓದಿ: ಚಂದಗಾಣಲೆಂದು ಹಲ್ಲಿನ ಶಸ್ತ್ರಚಿಕಿತ್ಸೆಗೆ ಹೋಗಿ ಮದುಮಗ ದುರ್ಮರಣ!
ಬೆಂಗಳೂರು: ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ವ್ಯಕ್ತಿಯೊಬ್ಬ ಆತನ ಪತ್ನಿಗೆ ಚಾಕುವಿನಿಂದ ಇರಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ದಿವ್ಯಶ್ರೀ (26)ಗೆ ಚಾಕು ಇರಿತಕ್ಕೊಳಗಾದವಳು. ಜಯಪ್ರಕಾಶ್ (32) ಚಾಕು ಇರಿದ ಪತಿ. ಸುಂಕದಕಟ್ಟೆ ಬಳಿಯ ಸೊಲ್ಲಾಪುರದಮ್ಮ ದೇವಸ್ಥಾನ ಬಳಿ ಫೆಬ್ರವರಿ 15ರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ವಿವರ: ಜಯಪ್ರಕಾಶ್ ಹಾಗೂ ದಿವ್ಯಶ್ರೀ ಪರಸ್ಪರ ಪ್ರೀತಿಸಿ 2019 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರ ಮದುವೆಗೆ ಪೋಷಕರ ವಿರೋಧವಿತ್ತು. ಹೀಗಾಗಿ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಅನಾರೋಗ್ಯ ಹಿನ್ನೆಲೆ ಮನೆಯ ಖರ್ಚೆಲ್ಲ ಪತ್ನಿಯೇ ನೋಡಿಕೊಳ್ಳುತ್ತಿದ್ದರು. ಮೊದಲು ಮೂಡಲಪಾಳ್ಯದಲ್ಲಿ ಮನೆಮಾಡಿಕೊಂಡು ದಂಪತಿ ವಾಸವಿದ್ದರು.
ಈ ಸಂದರ್ಭದಲ್ಲಿ ನಿನಗೆ ಅಕ್ರಮ ಸಂಬಂಧ ಇದೆ ಎಂದು ಪ್ರತಿದಿನ ಪತಿ ಗಲಾಟೆ ಮಾಡುತ್ತಿದ್ದನು. ಫೋನಿನಲ್ಲಿ ಯಾರದ್ದೊ ಜೊತೆಗೆ ಮಾತನಾಡುತ್ತೀಯಾ ಎಂದು ಹಲ್ಲೆ ಮಾಡುತ್ತಿದ್ದನು. ಈ ಗಲಾಟೆಯ ನಡುವೆಯೇ ದಂಪತಿ ಸುಂಕದಕಟ್ಟೆಗೆ ಶಿಫ್ಟ್ ಆಗಿದ್ದರು. ಇದೀಗ ತಂಗಿಯ ಎಂಗೆಜ್ಮೆಂಟ್‍ಗೆ ಬರ್ಲಿಲ್ಲ ಎಂದು ಜಯಪ್ರಕಾಶ್, ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ.
ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ (Kamakshipalya Police Station) ಎಫ್‍ಐಆರ್ ದಾಖಲಾಗಿದೆ. ಆರೋಪಿ ಜಯಪ್ರಕಾಶ್ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.