Tag: ಪತಿ

  • ಪತಿ, ಪತ್ನಿ ನಡುವೆ ಒಡವೆ ವಿಚಾರಕ್ಕೆ ಕಿರಿಕ್ – ಕೊಲೆಯಲ್ಲಿ ಅಂತ್ಯ

    ಪತಿ, ಪತ್ನಿ ನಡುವೆ ಒಡವೆ ವಿಚಾರಕ್ಕೆ ಕಿರಿಕ್ – ಕೊಲೆಯಲ್ಲಿ ಅಂತ್ಯ

    ಬೆಂಗಳೂರು: ಬಾಡಿಗೆ ಕಟ್ಟಲು ಎತ್ತಿಟ್ಟ ಹಣವನ್ನು ಒಡವೆ ಖರೀದಿಗೆ ಖರ್ಚು ಮಾಡಿದಕ್ಕೆ ಪತ್ನಿ ಮೇಲೆ ಹಲ್ಲೆ ನಡೆಸಿ ಪತಿಯೇ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ನಾಜಿಯಾ ಎಂದು ಗುರುತಿಸಲಾಗಿದ್ದು, ಈ ಘಟನೆ ನವೆಂಬರ್ 2ರಂದು ಬೆಂಗಳೂರಿನ ದಯಾನಂದ ನಗರದಲ್ಲಿ ನಡೆದಿದೆ. ಪತಿ ಫಾರೂಕ್ ಮನೆ ಬಾಡಿಗೆಗೆಂದು ಹಣ ಕೂಡಿಟ್ಟಿದ್ದರು. ಆದರೆ ಒಡವೆ ಮೇಲೆ ಆಸೆ ಹೊಂದಿದ್ದ ಪತ್ನಿ ಬಾಡಿಗೆಗೆಂದು ಕೂಡಿಟ್ಟ 6,500 ರೂ. ಹಣ ಖರ್ಚು ಮಾಡಿ ಡ್ಯೂಪ್ಲಿಕೇಟ್ ಜ್ಯುವೆಲ್ಲರಿಯನ್ನು ಖರೀದಿ ಮಾಡಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

    BRIBE

    ಬಾಡಿಗೆ ಹಣ ನೀಡುವಂತೆ ಪತಿ ಕೇಳಿದಾಗ ಪತ್ನಿ ಹಣ ಖರ್ಚು ಮಾಡಿರುವ ವಿಚಾರವನ್ನು ತಿಳಿಸಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಜಗಳ ವಿಕೋಪಕ್ಕೆ ತಿರುಗಿ ಫಾರೂಕ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ನಾಜಿಯಾ ಪ್ರಜ್ಞೆ ತಪ್ಪಿದ್ದಾರೆ. ಹೀಗಾಗಿ ಪತ್ನಿಯನ್ನು ಕೂಡಲೇ ಫಾರೂಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ನಾಜಿಯಾ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಬಡ್ಡಿ ಸಮೇತ ವಸೂಲಿ ಮಾಡ್ತೀವಿ: ಈಶ್ವರಪ್ಪ

    ಈ ಸಂಬಂಧ ಮೃತಳ ಪೋಷಕರು ಫಾರೂಕ್ ವಿರುದ್ಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಆರೋಪಿ ಫಾರೂಕನ್ನು ಬಂಧಿಸಿದ್ದಾರೆ.

  • ಪತ್ನಿಗೆ ವೀಡಿಯೋ ಕರೆ ಮಾಡಿ ಮಾತಾಡುತ್ತಲೇ ನೇಣಿಗೆ ಶರಣಾದ!

    ಪತ್ನಿಗೆ ವೀಡಿಯೋ ಕರೆ ಮಾಡಿ ಮಾತಾಡುತ್ತಲೇ ನೇಣಿಗೆ ಶರಣಾದ!

    ಶಿವಮೊಗ್ಗ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಗೆ ವೀಡಿಯೋ ಕರೆ ಮಾಡಿ, ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ಕೇಂದ್ರ ಕಾರಾಗೃಹದ ವಸತಿ ಗೃಹದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಕೇಂದ್ರ ಕಾರಾಗೃಹದ ವಾರ್ಡನ್ ಅಸ್ಪಾಕ್ ತಗಡಿ (24) ಎಂದು ಗುರುತಿಸಲಾಗಿದೆ. ಅಸ್ಪಾಕ್ ತಗಡಿ ಮೂಲತಃ ಬೆಳಗಾವಿ ಜಿಲ್ಲೆ ಹುಕ್ಕೇರಿ ಮೂಲದ ನಿವಾಸಿ. ಇವರು ಕಳೆದ ಎರಡೂವರೆ ವರ್ಷದಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ವಿವಾಹವಾಗಿದ್ದ ಅಸ್ಪಾಕ್ ತಗಡಿಗೆ ಒಂದೂವರೆ ತಿಂಗಳ ಮಗುವಿದ್ದು, ಪತ್ನಿ ಬಾಣಂತನಕ್ಕೆ ತವರು ಮನೆಗೆ ತೆರಳಿದ್ದರು. ಇದನ್ನೂ ಓದಿ: ಪೆಟ್ರೋಲ್,ಡೀಸೆಲ್ ದರ ಇಳಿಕೆ ದೀಪಾವಳಿ ಕೊಡುಗೆ ಅಲ್ಲ, ಉಪಚುನಾವಣೆಗಳ ಕೊಡುಗೆ: ಸಿದ್ದರಾಮಯ್ಯ

    ವಿವಾಹವಾದ ಎರಡು ಮೂರು ತಿಂಗಳ ನಂತರದಿಂದಲೇ ಸಣ್ಣ ಪುಟ್ಟ ವಿಷಯಕ್ಕೆ ಪತಿ ಪತ್ನಿ ಇಬ್ಬರು ಜಗಳ ಆಡುತ್ತಿದ್ದರು ಎನ್ನಲಾಗಿದೆ. ಬುಧವಾರ ರಾತ್ರಿ ಸಹ ಪತ್ನಿಗೆ ವೀಡಿಯೋ ಕರೆ ಮಾಡಿದ್ದ ಅಸ್ಪಾಕ್ ತಗಡಿ ಈ ವೇಳೆಯೂ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಅಲ್ಲದೇ ಅತ್ತೆ ಮಾವನೊಂದಿಗೂ ಸಹ ಜಗಳವಾಡಿದ್ದಾನೆ ಎನ್ನಲಾಗಿದೆ. ಜಗಳ ಆಡುತ್ತಿರುವಾಗಲೇ ನೇಣು ಹಾಕಿಕೊಳ್ಳುವ ದೃಶ್ಯವನ್ನು ಪತ್ನಿಗೆ ತೋರಿಸಿದ್ದಾನೆ. ಪತಿಯ ಆತ್ಮಹತ್ಯೆ ನಿರ್ಧಾರಕ್ಕೆ ಕಂಗಾಲಾದ ಪತ್ನಿ ನಂತರ ಕಾರಾಗೃಹದ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದು ಇತರೆ ಸಿಬ್ಬಂದಿ ವಸತಿಗೃಹಕ್ಕೆ ತೆರಳಿ ನೋಡುವಷ್ಟರಲ್ಲಿ ಅಸ್ಪಾಕ್ ತಗಡಿ ಕೊನೆಯುಸಿರು ಎಳೆದಿದ್ದಾನೆ.

    ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಮೃತ ವ್ಯಕ್ತಿಯ ಮರಣೋತ್ತರ ಶವ ಪರೀಕ್ಷೆ ನಡೆಸಿದ ವೈದ್ಯರು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

  • ಹೆಂಡತಿಯನ್ನು ಆಕೆಯ ಪ್ರೇಮಿಯೊಂದಿಗೆ ಮದುವೆ ಮಾಡಿಸಿದ ಪತಿ

    ಹೆಂಡತಿಯನ್ನು ಆಕೆಯ ಪ್ರೇಮಿಯೊಂದಿಗೆ ಮದುವೆ ಮಾಡಿಸಿದ ಪತಿ

     ಲಕ್ನೋ: ಐದು ತಿಂಗಳ ಹಿಂದೆ ಮದುವೆಯಾದ ವ್ಯಕ್ತಿ ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

    ಗುರುಗ್ರಾಮನಲ್ಲಿ ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುವ ಪಂಕಜ್ ಶರ್ಮಾ ಮೇ ತಿಂಗಳಲ್ಲಿ ಕೋಮಲ್‍ಳನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ನಂತರ ಆಕೆ ಬೇರೆಯವನನ್ನು ಪ್ರೀತಿಸುತ್ತಿದ್ದಳು ಎನ್ನುವ ವಿಚಾರ ಶರ್ಮಾನಿಗೆ ತಿಳಿದಿದೆ. ನಂತರ ಮದುವೆಯಾದ ದಿನದಿಂದಲೂ ಆಕೆ ಗಂಡ ಜೊತೆಗಾಗಲಿ, ಗಂಡನ ಮನೆಯವರೊಂದಿಗಾಗಲಿ ಮಾತನಾಡಿರಲಿಲ್ಲ. ಇದರಿಂದ ಆತನಿಗೆ ಬಹಳ ಗೊಂದಲವಾಗಿತ್ತು. ಇದನ್ನೂ ಓದಿ: ನೀಟ್ ಫಲಿತಾಂಶ ಪ್ರಕಟ- ಇ-ಮೇಲ್‍ಗೇ ರಿಸಲ್ಟ್

    ಮದುವೆಯಾದ ಮೇಲೂ ತನ್ನ ಪ್ರೇಮಿ ಪಿಂಟು ಜೊತೆ ಜೀವನ ನಡೆಸಬೇಕು ಅಂದುಕೊಂಡಿದ್ದಳು. ಇದನ್ನು ತಿಳಿದ ಆಕೆಯ ಗಂಡ ಪಂಕಜ್ ಶರ್ಮ ಈ ವಿಷಯವನ್ನು ಕೋಮಲ್‍ಳ ತಂದೆ, ತಾಯಿಗೆ ಹೇಳಿದರು. ಅವರು ತಮ್ಮ ಮಗಳಿಗೆ ಬುದ್ಧಿ ಹೇಳಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಆಕೆ ತನ್ನ ಪ್ರೇಮಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹಠ ಹಿಡಿದಿದ್ದಾಳೆ. ಇದನ್ನೂ ಓದಿ:  ಪಾಕ್ ಪರ ಘೋಷಣೆ- ದೇಶದ್ರೋಹ ಪ್ರಕರಣ ದಾಖಲಿಸಿ ಯುವಕನ ಬಂಧನ

    ಪಂಕಜ್, ಕೋಮಲ್ ಹಾಗೂ ಪಿಂಟುವನ್ನು ಕರೆಸಿ ಮಾತನಾಡಿದ್ದಾನೆ. ಆಗ ಕೋಮಲ್ ತಾನು ಪಂಕಜ್ ಜೊತೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಕೋಮಲ್ ಸ್ಪಷ್ಟವಾಗಿ ಹೇಳಿದ್ದರಿಂದ ಪಂಕಜ್ ತಾನೇ ಮುಂದೆ ನಿಂತು ಕೋಮಲ್ ಹಾಗೂ ಪಿಂಟುವಿನ ಮದುವೆ ಮಾಡಿಸುವುದಾಗಿ ಹೇಳಿದರು. ಮರುದಿನವೇ ಆಕೆಯ ಪ್ರೇಮಿಯ ಜೊತೆ ಮದುವೆ ಮಾಡಿಸಿದ್ದಾನೆ.

  • ಮನೆಯಲ್ಲಿದ್ದ ಹಣ ದೋಚಿ ಆಟೋ ಚಾಲಕನೊಂದಿಗೆ ಕೋಟ್ಯಧಿಪತಿ ಪತ್ನಿ ಎಸ್ಕೇಪ್

    ಮನೆಯಲ್ಲಿದ್ದ ಹಣ ದೋಚಿ ಆಟೋ ಚಾಲಕನೊಂದಿಗೆ ಕೋಟ್ಯಧಿಪತಿ ಪತ್ನಿ ಎಸ್ಕೇಪ್

    ಭೋಪಾಲ್: ಕೋಟ್ಯಧಿಪತಿ ಉದ್ಯಮಿಯ ಪತ್ನಿ ಮನೆಯಲ್ಲಿದ್ದ ಹಣ ದೋಚಿ ಆಟೋ ಚಾಲಕನೊಂದಿಗೆ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

    ಇಂದೋರ್‍ನ ಖಜ್ರಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಕೋಬರ್ 13ರಂದು ಪತ್ನಿ ನಾಪತ್ತೆಯಾಗಿರುವ ಬಗ್ಗೆ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ತನಗಿಂತ 13 ವರ್ಷ ಚಿಕ್ಕ ವಯಸ್ಸಿನ ಆಟೋ ಚಾಲಕನೊಂದಿಗೆ ಮನೆಯಲ್ಲಿದ್ದ 47 ಲಕ್ಷ ರೂಪಾಯಿ ಹಣ ದೋಚಿ ಪರಾರಿಯಾಗಿದ್ದಾಳೆ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಯೂಟ್ಯೂಬ್ ವೀಡಿಯೋ ನೋಡಿ ಮಗುವಿಗೆ ಜನ್ಮ ನೀಡಿದ ಹುಡುಗಿ – ಪ್ರಿಯಕರ ಅರೆಸ್ಟ್

    ತನ್ನ ಪತ್ನಿಗೆ ಆಟೋ ಚಾಲಕ ಆಗಾಗ ಮನೆಗೆ ಡ್ರಾಪ್ ಮಾಡುತ್ತಿದ್ದ ಎಂದು ಪತಿ ಆರೋಪಿಸಿದ್ದು, ಅಕ್ಟೋಬರ್ 13ರಂದು ರಾತ್ರಿಯಾದರೂ ಮನೆಗೆ ಪತ್ನಿ ಬಾರದೇ ಇದ್ದಾಗ, ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಪ್ರೀತಿಯಿಂದ ಸಾಕಿದ್ದ ಜಾನುವಾರುಗಳು ಸಾವು – ಕಣ್ಣೀರಿಟ್ಟ ಮಾಲೀಕ

    ಆಟೋಚಾಲಕ 32 ವರ್ಷದ ಇಮ್ರಾನ್ ಎಂದು ಗುರುತಿಸಲಾಗಿದ್ದು, ಮಹಿಳೆಗೆ 45 ವರ್ಷವಾಗಿದೆ ಎಂದು ತನಿಖೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ. ಅಲ್ಲದೇ ಚಾಲಕ ಇಮ್ರಾನ್ ಸ್ನೇಹಿತರೊಬ್ಬರ ಮನೆಯಲ್ಲಿದ್ದ 33 ಲಕ್ಷ ರೂಪಾಯಿಯನ್ನು ಹಣವನ್ನು ವಶಪಡಿಸಿಕೊಂಡಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಮಹಿಳೆ ಹಾಗೂ ಚಾಲಕ ಖಾಂಡ್ವಾ, ಜವ್ರಾ, ಉಜ್ಜಯಿನಿ ಮತ್ತು ರತ್ಲಂ ಎಂಬ ನಾಲ್ಕು ನಗರಗಳಿಗೆ ತೆರಳಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

     

  • ಪತ್ನಿಯ ವಿರುದ್ಧವೇ ದೂರು ನೀಡಿದ ಹುಬ್ಬಳ್ಳಿಯ ಖ್ಯಾತ ವೈದ್ಯ

    ಪತ್ನಿಯ ವಿರುದ್ಧವೇ ದೂರು ನೀಡಿದ ಹುಬ್ಬಳ್ಳಿಯ ಖ್ಯಾತ ವೈದ್ಯ

    ಹುಬ್ಬಳ್ಳಿ: ಕುಟುಂಬ ಕಲಹದಿಂದ ಬೇರ್ಪಟ್ಟಿರುವ ವೈದ್ಯ ದಂಪತಿಗಳ ಕಲಹ ಇದೀಗ ಮತ್ತಷ್ಟು ಜಟಿಲಗೊಂಡಿದೆ. ಪತ್ನಿ ಜೀವ ಬೆದರಿಕೆ ಹಾಕಿರುವುದಾಗಿ ಖ್ಯಾತ ವೈದ್ಯರೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ನಡೆದಿದೆ.

    ಹುಬ್ಬಳ್ಳಿಯ ಶಿರೂರ ಪಾರ್ಕ್ ಪ್ರದೇಶದಲ್ಲಿರುವ ಮನೆಗೆ ನುಗ್ಗಿ ತಮ್ಮ ಮೇಲೆ ಕೈಯಿಂದ ಹಾಗೂ ಛತ್ರಿಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆಂದು ಪತ್ನಿಯ ವಿರುದ್ಧ ಖ್ಯಾತ ವೈದ್ಯ ಕ್ರಾಂತಿಕಿರಣ್ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ತಮ್ಮ ಮಕ್ಕಳ ಎದುರಿಗೆ ಪತ್ನಿ ಶೋಭಾ ಸುಣಗಾರ ಅಶ್ಲೀಲಪದಗಳನ್ನು ಬಳಸಿ ಮಾತನಾಡಿದ್ದಾರೆಂದು ದೂರಿನಲ್ಲಿ ಕ್ರಾಂತಿಕಿರಣ್ ಅವರು ಉಲ್ಲೇಖ ಮಾಡಿದ್ದಾರೆ. ಇದನ್ನೂ ಓದಿ:  ಗಡ್ಡ ಬೆಳೆಸಿ ಒಲಿಂಪಿಕ್ಸ್ ಗೆದ್ದು ಮೀಸೆ ತಿರುವಿದ ಶೂರರು

     

    ಈಗಾಗಲೇ ಕ್ರಾಂತಿಕಿರಣ್ ಅವರ ಪತ್ನಿ ಶೋಭಾ ಸುಣಗಾರ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದಾರೆಂಬುದನ್ನು ದೂರಿನಲ್ಲಿ ತಿಳಿಸಿದ್ದು, ಇನ್ನೂ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲು ಮಾಡಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ವಿದ್ಯಾನಗರ ಠಾಣೆ ಪೊಲೀಸರು, ಶೋಭಾ ಸುಣಗಾರರ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

  • ಹೈ ಡೋಸ್ ಇಂಜೆಕ್ಷನ್ ನೀಡಿ ಕೊಲೆ ಮಾಡಿದ ಪತಿ- ಹತ್ತು ತಿಂಗಳ ನಂತರ ಸತ್ಯ ಬಯಲಿಗೆ

    ಹೈ ಡೋಸ್ ಇಂಜೆಕ್ಷನ್ ನೀಡಿ ಕೊಲೆ ಮಾಡಿದ ಪತಿ- ಹತ್ತು ತಿಂಗಳ ನಂತರ ಸತ್ಯ ಬಯಲಿಗೆ

    ದಾವಣಗೆರೆ: ರೋಗಿಗಳಿಗೆ ಚುಚ್ಚುಮದ್ದು ನೀಡಿ ಜೀವ ಉಳಿಸುವ ವೈದ್ಯನೋರ್ವ ತನ್ನ ಮಡದಿಗೆ ಹೈಡೋಸ್ ಇಂಜೆಕ್ಷನ್ ನೋಡಿ ಕೊಲೆಗೈದಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ನಡೆದಿದೆ.

    ಶಿಲ್ಪಾ(36) ಮೃತಳಾಗಿದ್ದಾಳೆ. ಚನ್ನೇಶಪ್ಪ (45) ಶಿಲ್ಪಾಳನ್ನು ಕೊಲೆ ಮಾಡಿದ ಪತಿ. ಕಳೆದ ಹತ್ತು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಶಿಲ್ಪಾಳ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಡಾ. ಚನ್ನೇಶಪ್ಪ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR

    ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಶಿಲ್ಪಾ ಜೊತೆ 2005ರಲ್ಲಿ ವಿವಾಹ ನೆರವೇರಿತ್ತು. ಇಬ್ಬರು ಮಕ್ಕಳಿದ್ದು, ಆರೋಪಿ ಡಾ.ಚನ್ನೇಶಪ್ಪ ಬೆಳಗುತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವಾಗ ಶಿಲ್ಪಾಳನ್ನು ಮದುವೆಯಾಗಿದ್ದನು. ಮೂಢನಂಬಿಕೆ ಹಾಗೂ ಮದ್ಯ, ಜೂಜು ವಾಮಾಚಾರಗಳಲ್ಲಿ ತೊಡಗಿದ್ದ. ಚನ್ನೇಶಪ್ಪ ಪತ್ನಿ ಶಿಲ್ಪಾಗೆ ಫೆಬ್ರವರಿ 11ರಂದು ರಕ್ತದೊತ್ತಡದಲ್ಲಿ ತೀವ್ರ ಇಳಿಕೆ ಕಂಡುಬಂದಿತ್ತಂತೆ. ಇದನ್ನೂ ಓದಿ:   ಮಕ್ಕಳ ಜೊತೆ ಶಿಲ್ಪಾ ಶೆಟ್ಟಿ ಸುತ್ತಾಟ- ರಾಜ್ ಕುಂದ್ರಾ ಮಿಸ್ಸಿಂಗ್

    ಪತ್ನಿಗೆ ಹೆಕ್ಸಾಮೆಟಜೋನ್ ಸ್ಪಿರಾಯಡ್ ಹೈಡೋಸ್ ನೀಡಿ ಕೊಲೆಗೈದಿದ್ದಾನೆ. ಬಳಿಕ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವನ್ನಪಿದ್ದಾಳೆ ಎಂದು ಆರೋಪಿ ವೈದ್ಯ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾನೆ. ಈ ವೇಳೆ ಶವವನ್ನು ಆಸ್ಪತ್ರೆಗೆ ಕೊಂಡೊಯ್ಯುವ ಬದಲು ಮನೆಗೆ ತಂದಿದ್ದಾ ವೈದ್ಯ ಚನ್ನೇಶಪ್ಪ ಮೇಲೆ ಶಿಲ್ಪಾಳ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಶಿಲ್ಪಾಳ ಎಡ ಭುಜದ ಮೇಲೆ ಚುಚ್ಚುಮದ್ದಿನ ಗುರುತು ಪತ್ತೆಯಾಗಿದ್ದು, ಬಾಯಿಂದ ರಕ್ತ ಮಿಶ್ರಿತ ನೊರೆ ಬಂದಿದ್ದರಿಂದ ಶಿಲ್ಪಾ ಪಾಲಕರಿಗೆ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಹೀಗಾಗಿ ಶಿಲ್ಪಾಳ ತಂದೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ವೈದ್ಯನ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    ಮೃತ ಶಿಲ್ಪಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್‌ಎಸ್‍ಎಲ್ ತನಿಖೆ ವರದಿ ಎರಡು ಹೊಂದಿಕೆಯಾದ ಬೆನ್ನಲ್ಲೇ ಕೊಲೆ ಪ್ರಕರಣ ಖಚಿತಪಡಿಸಿಕೊಂಡ ಪೊಲೀಸರು ಡಾ. ಚನ್ನೇಶಪ್ಪ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಸದ್ಯ ಆರೋಪಿ ವೈದ್ಯ ಚನ್ನೇಶಪ್ಪ ನ್ಯಾಯಾಂಗ ಬಂಧನದಲ್ಲಿದ್ದು, ಕೊಲೆಗೆ ಕಾರಣ ತನಿಖೆ ಬಳಿಕ ತಿಳಿದು ಬರಬೇಕಾಗಿದೆ.

    g

  • ಪತ್ನಿ, ಅಣ್ಣನ ಮಗನಿಗೆ ಶೂಟ್ ಮಾಡಿ ಪತಿ ಆತ್ಮಹತ್ಯೆಗೆ ಶರಣು

    ಪತ್ನಿ, ಅಣ್ಣನ ಮಗನಿಗೆ ಶೂಟ್ ಮಾಡಿ ಪತಿ ಆತ್ಮಹತ್ಯೆಗೆ ಶರಣು

    ಮಡಿಕೇರಿ: ಆಸ್ತಿ ಬಗ್ಗೆ ವೈಷಮ್ಯದ ಹಿನ್ನೆಲೆಯಲ್ಲಿ ಸಂಬಂಧಿಕರ ಮಧ್ಯೆ ನಡೆದ ಜಗಳದಲ್ಲಿ ಗುಂಡು ಹಾರಿಸಿ ಪತ್ನಿ ಮತ್ತು ಅಣ್ಣನ ಮಗನನ್ನು ಕೊಂದು ತಾನು ಕೆರೆಗೆ ಬಿದ್ದು ಆತ್ಮಹತ್ಯೆಗೆ ಶರಣಾದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕಿರಗೂರು ಗ್ರಾಮದಲ್ಲಿ ನಡೆದಿದೆ.

    ಸೋಮಯ್ಯ ಸಾಗರ್ ಎಂಬುವವರು ತನ್ನ ಪತ್ನಿ ಯಶೋಧ ಮತ್ತು ಅಣ್ಣನ ಮಗ ಮಧುಗೆ ಶೂಟ್ ಮಾಡಿದ್ದಾರೆ. ಪರಿಣಾಮ ಸ್ಥಳದಲ್ಲೇ ಮಧು(43) ಮೃತಪಟ್ಟಿದ್ದಾರೆ. ಗುಂಡು ಹಾರಿಸಲು ಮುಂದಾದಾಗ ತಡೆಯಲು ಬಂದ ಯಶೋಧ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಯಶೋಧ ಅವರ ಸ್ಥಿತಿ ಚಿಂತಾಜನಕವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಯಶೋಧರನ್ನು ಮೈಸೂರಿಗೆ ರವಾನೆ ಮಾಡಲಾಗಿದೆ. ಇಬ್ಬರಿಗೂ ಗುಂಡು ಹೊಡೆದು ಸಾಗರ್ ಮನೆಯ ಸಮೀಪ ಇರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಧಾರವಾಡದಲ್ಲಿ ಕೃತಕ ಆನೆ ಬಳಸಿ ದಸರಾ ಮೆರವಣಿಗೆ

    ಅಡಿಕೆ ತೋಟದ ಆಸ್ತಿಯಲ್ಲಿ ಪಾಲುಗಾರಿಕೆ ಬಗ್ಗೆ ಪದೇ ಪದೇ ಸೋಮಯ್ಯ ಹಾಗೂ ಮಧು ಅವರೊಂದಿಗೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಇಂದು ಕೊಂಡ ಅಸ್ತಿ ವಿಷಯವಾಗಿ ಇಬ್ಬರ ನಡುವೆ ಜಗಳ ಆರಂಭಗೊಂಡಿದೆ ಮಾತಿಗೆ ಮಾತು ಬೆಳೆದು ಸಾಗರ್, ಮನೆಯಲ್ಲಿ ಇದ್ದ ಕೋವಿಯಿಂದ ಮಧು ಮೇಲೆ ಗುಂಡು ಹಾರಿಸಿದ್ದಾರೆ. ಮಧು ಸ್ಥಳದಲ್ಲೇ ಮೃತಪಟ್ಟರೆ, ಯಶೋಧ ತೀವ್ರ ಗಾಯಗೊಂಡಿದ್ದರು. ವಿಷಯ ತಿಳಿದ ಗ್ರಾಮಸ್ಥರು ಯಶೋಧ ಅವರನ್ನು ಗೋಣಿಕೊಪ್ಪ ಅಸ್ಪತ್ರೆ ದಾಖಲು ಮಾಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಾಗರ್ ಅವರ ಮೃತ ದೇಹವನ್ನು ಪೊಲೀಸರು, ಗ್ರಾಮಸ್ಥರ ನೆರವಿನಿಂದ ಹೊರತೆಗೆದಿದ್ದಾರೆ. ಈ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ಇನ್ನಿಲ್ಲ

  • ಮಕ್ಕಳಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಕೊಂದೇ ಬಿಟ್ಟ

    ಮಕ್ಕಳಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಕೊಂದೇ ಬಿಟ್ಟ

    – ಆತ್ಮಹತ್ಯೆ ಎಂದು ನಿರೂಪಿಸಲು ಪತ್ರ ಬರೆದಿದ್ದ ಪತಿ

    ನವದೆಹಲಿ: ಮಕ್ಕಳಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಪತಿ ಕತ್ತು ಹಿಸುಕಿ ಸಾಯಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

    ಮೇಘಾ ಆರ್ಯ ಹತ್ಯೆಯಾದ ದುರ್ದೈವಿ. ಕಳೆದ ವಾರ ದೆಹಲಿ ನಿವಾಸಿ ಜಸ್ವೀರ್ ಆರ್ಯ ತನ್ನ ಪತ್ನಿ ಮೇಘಾ ಆರ್ಯನನ್ನು ಬಟ್ಟೆಯಿಂದ ಕತ್ತು ಹಿಸುಕಿ ಸಾಯಿಸಿದ್ದು, ಶವಪರೀಕ್ಷೆಯಲ್ಲಿ ಈ ಪ್ರಕರಣ ಬಯಲಾಯಿದೆ. ಈ ಪರಿಣಾಮ ಜಸ್ವೀರ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ಮೇಘಾ ಹತ್ಯೆ ನಂತರ ಜಸ್ವೀರ್ ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಜಸ್ವೀರ್ ತನ್ನ ಹೇಳಿಕೆಯನ್ನು ಹಲವು ಬಾರಿ ಬದಲಾಯಿಸಿದ್ದ. ಕೊನೆಯಲ್ಲಿ ತನ್ನ ಹೆಂಡತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡನು. ಈ ವೇಳೆ ಜಸ್ವೀರ್, ನಮಗೆ ಮಕ್ಕಳಿರಲಿಲ್ಲ. ಅದು ಅಲ್ಲದೇ ಮೇಘಾ ದುಡಿದ ಹಣವನ್ನು ಪೋಷಕರಿಗೆ ನನ್ನ ಅನುಮತಿಯಿಲ್ಲದೇ ಕೊಡುತ್ತಿದ್ದಳು. ಅತ್ತೆ, ಮಾವ ನಮ್ಮ ಕುಟುಂಬದ ವಿಚಾರದಲ್ಲಿ ತುಂಬಾ ಹಸ್ತಕ್ಷೇಪ ಮಾಡುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಇದನ್ನೂ ಓದಿ: ಪೋಕ್ಸೋ ಆರೋಪಿ ಠಾಣೆಯಿಂದ್ಲೇ ಎಸ್ಕೇಪ್ – ನಾಲ್ವರು ಪೊಲೀಸರು ಸಸ್ಪೆಂಡ್

    ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ದಂಪತಿ ಮಧ್ಯೆ ನಡುವೆ ಜಗಳವಾಗಿದ್ದು, ಮೇಘಾ 2ನೇ ಮಹಡಿಗೆ ರೂಮಿನಲ್ಲಿ ಮಲಗಿಕೊಳ್ಳಲು ಹೋಗಿದ್ದಾರೆ. ಈ ವೇಳೆ ಸಿಟ್ಟಿನಿಂದ ಜಸ್ವೀರ್ ಆಕೆ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲೇ ಇದ್ದ ಬಟ್ಟೆಯನ್ನು ಬಳಸಿ ಮೇಘಾ ಅವರನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪತ್ನಿಯ ಸಾವು ಆತ್ಮಹತ್ಯೆ ಎಂದು ನಿರೂಪಿಸಲು ಪತ್ರವನ್ನು ಬರೆದಿದ್ದು, ಕೈ ಬರಹ ಕಂಡುಹಿಡಿಯುತ್ತಾರೆಂಬ ಭಯದಿಂದ ಅದನ್ನು ಸುಟ್ಟು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಧಿವಿಜ್ಞಾನ ತಂಡವು ಸುಟ್ಟ ಪತ್ರದ ಕುರುಹುಗಳನ್ನು ಸಹ ಪಡೆದುಕೊಂಡಿದೆ. ಇದನ್ನೂ ಓದಿ: ರೈತರ ಮೇಲೆ ಥಳಿತ – ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

    ಈ ಕುರಿತು ಮೇಘಾ ತಂದೆ ಪ್ರತಿಕ್ರಿಯಿಸಿದ್ದು, ಮೊದಲು ಜಸ್ವೀರ್ ನನ್ನ ಮಗಳು ಹಾಸಿಗೆಯಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಹೇಳಿದ್ದ. ಆದರೆ ನನ್ನ ಮಗಳ ಮುಖದ ಮೇಲಿನ ಗಾಯವನ್ನು ನೋಡಿ ಪೊಲೀಸರಿಗೆ ದೂರು ನೀಡಿದ್ದೆ ಎಂದು ತಿಳಿಸಿದ್ದಾರೆ.

  • ಮದ್ಯ ಸೇವಿಸಲು ಪತ್ನಿ ಹಣ ನೀಡಿಲ್ಲವೆಂದು ಪತಿ ಆತ್ಮಹತ್ಯೆಗೆ ಶರಣು

    ಮದ್ಯ ಸೇವಿಸಲು ಪತ್ನಿ ಹಣ ನೀಡಿಲ್ಲವೆಂದು ಪತಿ ಆತ್ಮಹತ್ಯೆಗೆ ಶರಣು

    ಕಾರವಾರ: ಮದ್ಯ ಸೇವಿಸಲು ಪತ್ನಿ ಹಣ ನೀಡಲಿಲ್ಲ ಎಂದು ಕೋಪಗೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಚಲುವಾದಿಕೇರಿಯಲ್ಲಿ ನಡೆದಿದೆ.

    ಬಷ್ಯ ಲಿಂಗ (40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಪ್ರತಿ ದಿನ ಮದ್ಯ ಸೇವಿಸುವ ಈತ, ಕೆಲಸ ಮಾಡದೆ ಮನೆಯಲ್ಲೇ ಇರುತಿದ್ದ. ಮದ್ಯ ಸೇವನೆಗಾಗಿ ಪತ್ನಿಯ ಬಳಿ ಹಣಕ್ಕಾಗಿ ಪೀಡಿಸುತಿದ್ದ. ಪ್ರತಿ ದಿನ ಪತ್ನಿ ಹಣ ನೀಡುತ್ತಿದ್ದಳು. ಆದರೆ ಇಂದು ನೀಡದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ನಾಯಿಯಿಂದ ನಾಯಿಗೆ ರಕ್ತದಾನ

    ಪತ್ನಿ ಹಣ ನೀಡದಿದ್ದಕ್ಕೆ ಕೋಪ ಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

  • ಊಟ ಕೊಡಿಸ್ತೀನೆಂದು ಕರೆದೊಯ್ದು 500 ರೂ.ಗೆ ಪತ್ನಿಯನ್ನೇ ಮಾರಿಬಿಟ್ಟ!

    ಊಟ ಕೊಡಿಸ್ತೀನೆಂದು ಕರೆದೊಯ್ದು 500 ರೂ.ಗೆ ಪತ್ನಿಯನ್ನೇ ಮಾರಿಬಿಟ್ಟ!

    ಗಾಂಧಿನಗರ: ಊಟ ಕೊಡಿಸುತ್ತೇನೆಂದು ಹೇಳಿ ಹೆಂಡತಿಯನ್ನು ಹೋಟೆಲ್‍ಗೆ ಕರೆದುಕೊಂಡು ಹೋಗಿದ್ದ ಗಂಡ 500 ರೂಪಾಯಿಗೆ ಪತ್ನಿಯನ್ನು ಮಾರಿದ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ಊಟ ಕೊಡಿಸುತ್ತೇನೆಂದು ಹೇಳಿ ಹೆಂಡತಿಯನ್ನು ಹೋಟೆಲ್‍ಗೆ ಕರೆದುಕೊಂಡು ಹೋಗಿದ್ದ ಗಂಡ ಅಲ್ಲಿ ಸೋನು ಶರ್ಮ ಎಂಬಾತನಿಗೆ 500 ರೂ.ಗೆ ತನ್ನ ಹೆಂಡತಿಯನ್ನು ಮಾರಾಟ ಮಾಡಿದ್ದಾನೆ. ಆತನ ಹೆಂಡತಿಯನ್ನು ಖರೀದಿಸಿದ ವ್ಯಕ್ತಿ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ. ಇದನ್ನೂ ಓದಿ:  ವಿಶ್ವ ಹಿಂದೂ ಪರಿಷತ್‍ನವರು ದೇಶ ಭಕ್ತರಾ?: ರಾಮಲಿಂಗಾರೆಡ್ಡಿ

    ಹೋಟೆಲ್‍ಗೆ ಬಂದಿದ್ದ ವ್ಯಕ್ತಿಯ ಜೊತೆಗಿದ್ದ ಆತನ ಹೆಂಡತಿಯನ್ನು ನೋಡಿದ ಸೋನು ಶರ್ಮ ಆಕೆಯನ್ನು ತನಗೆ ಕೊಡಬೇಕೆಂದು ಕೇಳಿದ್ದ. ಅದಕ್ಕೆ ಒಪ್ಪಿದ ಆತ ಸೋನು ಶರ್ಮನಿಂದ 500 ರೂ. ಪಡೆದು ತನ್ನ ಹೆಂಡತಿಯನ್ನು ಆತನಿಗೆ ಮಾರಾಟ ಮಾಡಿದ್ದ. ಈ ಘಟನೆ ನಡೆದು 24 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇದನ್ನೂ ಓದಿ: ಡ್ರಗ್ಸ್, ಸಿಗರೇಟ್, ಸೆಕ್ಸ್‌ಗೆ ಮಗನಿಗೆ ಓಕೆ ಅಂದಿದ್ದೇನೆ: ಶಾರೂಖ್ ವೀಡಿಯೋ ವೈರಲ್

    ಅತ್ಯಾಚಾರ ನಡೆದ ಬಳಿಕ ಆ 21 ವರ್ಷದ ಮಹಿಳೆ ಪೊಲೀಸ್ ಠಾಣೆಗೆ ಬಂದು ತನ್ನ ಗಂಡನ ವಿರುದ್ಧ ದೂರು ನೀಡಿದ್ದಾಳೆ. ಆ ದೂರಿನ ಆಧಾರದಲ್ಲಿ ಸೋನು ಶರ್ಮ ಹಾಗೂ ಆ ಮಹಿಳೆಯ ಗಂಡನನ್ನು ಬಂಧಿಸಲಾಗಿದೆ.