ಲಕ್ನೋ: ಸಹೋದ್ಯೋಗಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಾಗಿ ಶಂಕಿಸಿ ಪತ್ನಿಯ ಕತ್ತು ಸೀಳಿ ಪತಿ ಕ್ರೂರವಾಗಿ ಕೊಂದಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ.
ಈ ಘಟನೆಯು ಗುರುವಾರ ಬುಧಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಖಾನೆಯ ಆವರಣದಲ್ಲಿ ನಡೆದಿದೆ. ಆರೋಪಿ ಪತಿ ಮತ್ತು ಆತನ ಪತ್ನಿ ಒಂದೇ ಟೈಲ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಕಾರ್ಖಾನೆಯ ಆವರಣದಲ್ಲಿಯೇ ವಾಸಿಸುತ್ತಿದ್ದರು.
ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಹೊಂದಿದ್ದ ಆರೋಪಿ ಗುರುವಾರ ತಡರಾತ್ರಿ ಪತ್ನಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಆಕೆಯ ಮೇಲೆ ಹಲ್ಲೆ ನಡೆಸಿ ಕತ್ತು ಸೀಳಿಕೊಂದಿದ್ದಾನೆ ಎಂದು ಸ್ಟೇಷನ್ ಹೌಸ್ ಆಫೀಸರ್(ಎಸ್‍ಎಚ್‍ಒ) ಸಂಜೀವ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ:ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ
ಹೈದರಾಬಾದ್: ಪ್ರೇಯಸಿಯ ಗಂಡನನ್ನು ಕೊಂದು, ಸಿನಿಮಾಗಳಿಂದ ಸ್ಫೂರ್ತಿ ಪಡೆದು ಬೇರೆ ಬೇರೆ ಸ್ಥಳಗಳಲ್ಲಿ ಶವವನ್ನು ಕತ್ತರಿಸಿ ಬಿಸಾಡಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಕೊಲೆ ಮಾಡಿದ ಆರೋಪಿಯನ್ನು ಪಿ. ರಾಜು ಎಂದು ಗುರುತಿಸಲಾಗಿದೆ. ರಾಮಗುಂಡಂನ ಎನ್‍ಟಿಪಿಸಿ ಆಸ್ಪತ್ರೆಯೊಂದರಲ್ಲಿ ಸ್ವೀಪರ್ ಆಗಿದ್ದ ರಾಜು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 31 ವರ್ಷದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆ ಮಹಿಳೆಯ ಗಂಡ ಶಂಕರ್‌ಗೆ ಈ ವಿಷಯ ಗೊತ್ತಾಗಿದ್ದರಿಂದ ತನ್ನ ಹೆಂಡತಿ ತನಗೆ ಮೋಸ ಮಾಡುತ್ತಿದ್ದಾಳೆಂಬ ಕೋಪದಿಂದ ಆಕೆಗೆ ಕಿರುಕುಳ ನೀಡುತ್ತಿದ್ದರು. ಇದನ್ನೂ ಓದಿ:ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ
ಶಂಕರ್ ತುಂಡರಿಸಿದ ತಲೆ, ಕೈಗಳನ್ನು ಪೊಲೀಸರು ವಶಪಡಿಸಿಕೊಂಡು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನವೆಂಬರ್ 26ರಂದು ಶಂಕರ್ ಅವರ ತಾಯಿ ತಮ್ಮ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ನ. 25ರ ರಾತ್ರಿ ಮನೆಯಿಂದ ಹೋದ ಮಗ ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು. ನವೆಂಬರ್ 27ರಂದು, ಎನ್‍ಟಿಪಿಸಿ ಕೂಲಿಂಗ್ ಟವರ್‌ಗಳ ಬಳಿ ಮಲ್ಲಯಾಲಪಲ್ಲಿ ಕ್ರಾಸ್‍ರೋಡ್ಸ್ ಬಳಿ ಶಂಕರ್ ಅವರ ತಲೆ ಮತ್ತು ಕೈಗಳು ಪತ್ತೆಯಾಗಿತ್ತು. ಇದನ್ನೂ ಓದಿ: ನನ್ನ ಹುಟ್ಟಿಸಿದ್ಯಾಕೆ?- ತಾಯಿಯ ಹೆರಿಗೆ ಮಾಡಿಸಿದ್ದ ವೈದ್ಯರ ವಿರುದ್ಧ ಯುವತಿ ಕೇಸ್
ತನ್ನ ಹೆಂಡತಿ ಆಕೆಯ ಸಹೋದ್ಯೋಗಿಯಾಗಿದ್ದ ರಾಜು ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವ ವಿಷಯ ತಿಳಿದು ಶಂಕರ್ ಕೆಂಡಾಮಂಡಲರಾಗಿದ್ದರು. ಇದೇ ವಿಷಯಕ್ಕೆ ಅವರಿಬ್ಬರ ನಡುವೆ ಜಗಳವೂ ಆಗುತ್ತಿತ್ತು. ತನ್ನ ಮಗ ನಾಪತ್ತೆಯಾಗಿರುವುದರ ಹಿಂದೆ ಸೊಸೆ ಮತ್ತು ಪ್ರಿಯಕರನ ಕೈವಾಡವಿದೆ ಎಂದು ಶಂಕರ್ ಅವರ ತಾಯಿ ಆರೋಪಿಸಿದ್ದರು. ಇದನ್ನೂ ಓದಿ:ಸಿಪಿಎಂ ಸ್ಥಳೀಯ ಮುಖಂಡನ ಬರ್ಬರ ಹತ್ಯೆ- RSS ಮೇಲೆ ಆರೋಪ
ತನ್ನ ವಿರುದ್ಧ ಕೇಸ್ ದಾಖಲಾದ ನಂತರ ರಾಜು ಬೈಕ್‍ನಲ್ಲಿ ಕರೀಂನಗರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರು ಆತನನ್ನು ಹಿಡಿದಿದ್ದಾರೆ. ವಿಚಾರಣೆ ವೇಳೆ ಶಂಕರ್‌ನನ್ನು ಕೊಂದಿರುವುದಾಗಿ ರಾಜು ಒಪ್ಪಿಕೊಂಡಿದ್ದಾನೆ. ಶಂಕರ್ ತನ್ನ ಪತ್ನಿಯ ಶೀಲವನ್ನು ಶಂಕಿಸಿ ಕಿರುಕುಳ ನೀಡುತ್ತಿದ್ದ. ಹೀಗಾಗಿ, ಈ ಕಿರುಕುಳದ ಕುರಿತು ರಾಜು ಜೊತೆ ಚರ್ಚಿಸಿ ಶಂಕರ್‌ನನ್ನು ಹತ್ಯೆ ಮಾಡಲು ನಿರ್ಧರಿಸಲಾಗಿತ್ತು. ಇದನ್ನೂ ಓದಿ:ದಿನಕ್ಕೆ ಆರು ಬಾರಿ ಸ್ನಾನ ಮಾಡುವ ಪತ್ನಿಗೆ ಡೈವೋರ್ಸ್ ನೀಡಲು ಮುಂದಾದ ಪತಿ
ನವೆಂಬರ್ 25ರಂದು ರಾಜು ತಮ್ಮ ಭಿನ್ನಾಭಿಪ್ರಾಯವನ್ನು ಚರ್ಚಿಸುವ ನೆಪದಲ್ಲಿ ಶಂಕರ್‍ನನ್ನು ಮನೆಗೆ ಕರೆದಿದ್ದ ಎನ್ನಲಾಗಿದೆ. ಆಗ ಶಂಕರ್‍ಗೆ ಮದ್ಯ ಸೇವಿಸುವಂತೆ ಮಾಡಿ ಬಿಯರ್ ಬಾಟಲಿಯಿಂದ ತಲೆಯ ಮೇಲೆ ಹಲ್ಲೆ ನಡೆಸಿದ್ದರು. ನಂತರ ದೇಹವನ್ನು ಏಳು ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಎಸೆದಿದ್ದ. ಆರೋಪಿಗಳು ತೆಲುಗು ಸಿನಿಮಾಗಳಿಂದ ಸ್ಫೂರ್ತಿ ಪಡೆದು ಬೇರೆ ಬೇರೆ ಸ್ಥಳಗಳಲ್ಲಿ ಶವಗಳನ್ನು ಎಸೆದಿದ್ದ ಎಂದು ವರದಿಯಾಗಿದೆ. ಘಟನೆಯ ನಂತರ ರಾಜು ಮತ್ತು ಆತನ ಗೆಳತಿಯನ್ನು ಬಂಧಿಸಲಾಗಿದೆ.
ಬೆಂಗಳೂರು: ದಿನಕ್ಕೆ ಆರು ಬಾರಿ ಸ್ನಾನ, ಬಳಸಿದ ಸೋಪನ್ನು ಮತ್ತೊಂದು ಸೋಪಿನಿಂದ ಸ್ವಚ್ಛಗೊಳಿಸುವ ಪತ್ನಿಯ ಅತಿಯಾದ ಸ್ವಚ್ಛತೆಯ ಗೀಳಿನಿಂದ ಬೇಸತ್ತಿರುವ ಪತಿ ದಾಂಪತ್ಯ ಕಡಿದುಕೊಂಡು ವಿವಾಹ ವಿಚ್ಛೇದನಕ್ಕೆ ಮುಂದಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಒಸಿಡಿ ಸಮಸ್ಯೆಯಿಂದ ಬಳಲುತ್ತಿರುವ 35 ವರ್ಷದ ಮಹಿಳೆ ಲ್ಯಾಪ್‍ಟಾಪ್, ಸೆಲ್‍ಫೋನ್‍ಗಳನ್ನು ಡಿಟರ್ಜೆಂಟ್ ಹಾಕಿ ಸ್ವಚ್ಛಗೊಳಿಸುವ ಅತಿರೇಕದ ವರ್ತನೆಯಿಂದ ರೋಸಿರುವ ಪತಿ ಪೊಲೀಸರ ಮೊರೆ ಹೋಗಿದ್ದಾನೆ. ಪೊಲೀಸರು ಈ ಪ್ರಕರಣವನ್ನು ವನಿತಾ ಸಹಾಯವಾಣಿ ಪರಿಹಾರ್‌ಗೆ ಶಿಫಾರಸು ಮಾಡಿದ್ದಾರೆ. ಇದನ್ನೂ ಓದಿ:ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ
ಆರ್.ಟಿ.ನಗರ ಸುಮಾ ಮತ್ತು ಜಯಂತ್ 2009ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಜಯಂತ್, ವಿವಾಹ ಬಳಿಕ ಪತ್ನಿ ಸುಮಾ ಜೊತೆಗೆ ಲಂಡನ್‍ಗೆ ಹೋಗುತ್ತಾರೆ. ಎಂಬಿಎ ಪದವೀಧರೆಯಾಗಿರುವ ಸುಮಾ ಲಂಡನ್‍ನಲ್ಲಿ ಮನೆಯನ್ನು ತುಂಬಾ ಸ್ವಚ್ಛವಾಗಿ ಇರಿಸಿಕೊಳ್ಳುತ್ತಾರೆ. ಮೊದಲ ಮಗು ಹುಟ್ಟಿದ 2 ವರ್ಷದ ಬಳಿಕ ಸುಮಾಗೆ ಈ ಸ್ವಚ್ಛತೆ ಗೀಳು ಮತ್ತಷ್ಟು ಹೆಚ್ಚಾಗುತ್ತದೆ. ಪತಿ ಕೆಲಸ ಮುಗಿಸಿ ಮನೆಗೆ ಬಂದಾಗ ಶೂ, ಬಟ್ಟೆ, ಸೆಲ್‍ಫೋನ್ ಸ್ವಚ್ಛ ಮಾಡುವಂತೆ ಪದೇ ಪದೇ ಹೇಳುತ್ತಿರುತ್ತಾಳೆ. ಇದರಿಂದ ಕಿರಿಕಿರಿಗೆ ಒಳಗಾಗುವ ಪತಿ, ಈಕೆಯ ಸ್ವಚ್ಛತೆಯ ಅತಿರೇಕದ ವರ್ತನೆಯಿಂದ ಬೇಸತ್ತು ಹೋಗುತ್ತಾನೆ. ಇದನ್ನೂ ಓದಿ: ನನ್ನ ಹುಟ್ಟಿಸಿದ್ಯಾಕೆ?- ತಾಯಿಯ ಹೆರಿಗೆ ಮಾಡಿಸಿದ್ದ ವೈದ್ಯರ ವಿರುದ್ಧ ಯುವತಿ ಕೇಸ್
ಲಂಡನ್‍ನಿಂದ ಬೆಂಗಳೂರಿಗೆ ವಾಪಸ್ ಆಗಿರುವ ದಂಪತಿ ಕೌಟುಂಬಿಕ ಸಮಾಲೋಚನೆಗೆ ಬಳಗಾಗುತ್ತಾರೆ. ಈ ವೇಳೆ ಈ ಸ್ವಚ್ಛತೆಯ ಗೀಳು ಕೊಂಚ ಕಡಿಮೆಯಾಗುತ್ತದೆ. ಈ ನಡುವೆ ದಂಪತಿಗೆ 2ನೇ ಮಗು ಜನಿಸುತ್ತದೆ. ಕೋವಿಡ್ ಸಂದರ್ಭದಲ್ಲಿ ಸುಮಾಳಿಗೆ ಈ ಸ್ವಚ್ಛತೆಯ ಗೀಳು ಮತ್ತಷ್ಟು ಹೆಚ್ಚಾಗುತ್ತದೆ. ಮನೆಯನ್ನು ಪದೇ ಪದೇ ಸ್ಯಾನಿಟೈಸ್ ಮಾಡುವುದು ಮನೆಯ ಪೀಠೋಪಕರಣಗಳು, ಚಮಚ, ಪ್ಲೋರ್ ಮ್ಯಾಟ್ ಸೇರಿದಂತೆ ಎಲ್ಲ ವಸ್ತುಗಳನ್ನು ಪದೇ ಪದೇ ಸ್ವಚ್ಛ ಮಾಡಲು ಶುರು ಮಾಡುತ್ತಾಳೆ. ಇದನ್ನೂ ಓದಿ:ಸಿಪಿಎಂ ಸ್ಥಳೀಯ ಮುಖಂಡನ ಬರ್ಬರ ಹತ್ಯೆ- RSS ಮೇಲೆ ಆರೋಪ
ಲಾಕ್‍ಡೌನ್ ಸಂದರ್ಭದಲ್ಲಿ ದಿನಕ್ಕೆ ಆರು ಬಾರಿ ಸ್ನಾನ ಮಾಡುವುದು, ಸ್ನಾನಕ್ಕೆ ಬಳಸಿದ ಸೋಪನ್ನು ಮತ್ತೊಂದು ಸೋಪಿನಿಂದ ಸ್ವಚ್ಛಗೊಳಿಸುವ ಮಟ್ಟಕ್ಕೆ ಇವಳ ವರ್ತನೆ ಬದಲಾಗುತ್ತದೆ ಎಂದಿದ್ದಾನೆ.
ಈ ನಡುವೆ ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಸುಮಾ ತಾಯಿ ಮೃತಪಡುತ್ತಾರೆ. ಈ ಘಟನೆ ಬಳಿಕ ಸುಮಾಳ ಸ್ವಚ್ಛತೆ ಹೆಚ್ಚಾಗುತ್ತದೆ. ಲಾಕ್‍ಡೌನ್ ಸಂದರ್ಭದಲ್ಲಿ ಪತಿ ವರ್ಕ್ ಫ್ರಂ ಹೋಮ್ ಕೆಲಸ ಮಡುವಾಗ ಆತನ ಲ್ಯಾಪ್‍ಟಾಪ್, ಸೆಲ್‍ಫೋನ್‍ಗಳನ್ನು ಡಿಟರ್ಜೆಂಟ್ ಹಾಕಿ ಸ್ವಚ್ಛಗೊಳಿಸಿದ್ದಳು. ಮಕ್ಕಳು ಶಾಲೆಗೆ ಹೋಗಿ ಬಂದರೆ ಅವರ ಬ್ಯಾಗ್, ಯೂನಿಫಾರ್ಮ್, ಶೂಗಳನ್ನು ಪ್ರತಿ ದಿನ ಸ್ವಚ್ಛ ಮಾಡುತ್ತಿದ್ದಳು. ಈಕೆಯ ಸ್ವಚ್ಛತೆಯ ಅತಿರೇಕದ ವರ್ತನೆಗೆ ಬೇಸತ್ತ ಪತಿ ಜಯಂತ್ ಇದೀಗ ಆಕೆಯಿಂದ ವಿಚ್ಛೇದನ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮೈಸೂರು: ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪತಿರಾಯನೊಬ್ಬ, ತಡೆಯಲು ಬಂದ ನಾಲ್ಕು ಜನರ ಮೇಲೂ ಲಾಂಗ್ ಬೀಸಿದ ಘಟನೆ ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ.
ಈರಯ್ಯ ಕೊಲೆ ಆರೋಪಿ. ಈತ ತನ್ನ ಎರಡನೇ ಪತ್ನಿ ನಿಂಗಮ್ಮನನ್ನು ಕೊಲೆ ಮಾಡಿದ್ದಾನೆ. ಅಲ್ಲದೆ ನಿಂಗಮ್ಮ ತಂದೆ, ತಾಯಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಘಟನೆಯಿಂದ ವೃದ್ಧ ದಂಪತಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅಲ್ಲದೆ ಈರಯ್ಯನಿಂದ ಹಲ್ಲೆಗೊಳಗಾದ ಮತ್ತಿಬ್ಬರ ಸ್ಥಿತಿಯೂ ಗಂಭೀರವಾಗಿದೆ.
ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಕ್ರೂರವಾಗಿ ಹತ್ಯೆಗೈದಿದ್ದವನನ್ನು ಪೊಲೀಸರು ಬಂಧಿಸುವಷ್ಟರಲ್ಲಿ ಆರೋಪಿ ಶವವಾಗಿ ಪತ್ತೆಯಾಗಿರುವ ಪ್ರಕರಣ ಬೆಂಗಳೂರಿನ ರಾಜೇಂದ್ರನಗರದಲ್ಲಿ ಬೆಳಕಿಗೆ ಬಂದಿದೆ.
ಮೃತ ದುರ್ದೈವಿಯನ್ನು ಆಯೇಶಾ ಎಂದು ಗುರುತಿಸಲಾಗಿದ್ದು, ನವೆಂಬರ್ 19ರಂದು ಪತ್ನಿಯ ಶೀಲ ಶಂಕಿಸಿ ಆರೋಪಿ ನಿಸಾರ್ ಪೆಟ್ರೋಲ್ ಸುರಿದು ಕೊಲೆ ಮಾಡಿದ್ದಾನೆ. ಪತ್ನಿಗೆ ಬೆಂಕಿ ಹಚ್ಚಿದ್ದರಿಂದ ಮನೆಯಲ್ಲಿದ್ದ ಸಿಲಿಂಡರ್ ಇದೇ ವೇಳೆ ಬ್ಲಾಸ್ಟ್ ಆಗಿದೆ. ಸಿಲಿಂಡರ್ ಬ್ಲಾಸ್ಟ್‌ನಿಂದಾಗಿ ನಿಸಾರ್ ಕೈ ಹಾಗೂ ಮೈ ಭಾಗಕ್ಕೆ ಗಾಯವಾಗಿದ್ದು, ಆಯೇಶಾ ಮೃತಪಟ್ಟಿದ್ದಾರೆ. ಇದೇ ವೇಳೆ ಆರೋಪಿ ನಿಸಾರ್ ಮನೆಯಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ನಡು ರಸ್ತೆಯಲ್ಲೇ ಶಿಶುವಿನ ತಲೆ ಕಂಡು ಭಯಭೀತರಾದ ಜನ
ಈ ಘಟನೆ ಬಳಿಕ ಪೊಲೀಸರು ನಿಸಾರ್‌ಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಆದರೆ ನಿಸಾರ್ ಬಸ್ ಹತ್ತಿ ಆಂಧ್ರಪ್ರದೇಶಕ್ಕೆ ತೆರಳಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದನು. ಮೈ, ಕೈ ನೋವಿದ್ದರೂ ಆಸ್ಪತ್ರೆಗೆ ಹೋಗದ ನಿಸಾರ್ ಕೊನೆಗೆ ನೋವು ತೀವ್ರಗೊಂಡಾಗ ಮಗನಿಗೆ ಕರೆ ಮಾಡಿದ್ದಾರೆ. ಇದೇ ವೇಳೆ ಆರೋಪಿಯ ಲೊಕೇಶನ್ ಟ್ರೇಸ್ ಮಾಡಿದ ಪೊಲೀಸರಿಗೆ ನಿಸಾರ್ ಮದನಪಲ್ಲಿಯಲ್ಲಿರುವ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: ಸಂಬಂಧಿಕರ ಮನೆಗೆ ಹೋಗಿ ವಾಪಸ್ ಬರ್ತಿದ್ದವ ಸೇರಿದ್ದು ಮಸಣ
ನಂತರ ಆರೋಪಿಯನ್ನು ಬಂಧಿಸಲು ಆಡುಗೋಡಿ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ನಿಸಾರ್ ಶವವಾಗಿ ಪತ್ತೆಯಾಗಿದ್ದಾನೆ. ಮರಣೋತ್ತರ ಪರೀಕ್ಷೆ ವೇಳೆ ಎರಡು ದಿನಗಳ ಹಿಂದೆ ನಿಸಾರ್ ಸಾವನ್ನಪ್ಪಿದ್ದಾಗಿ ವರದಿಯಾಗಿದೆ. ಇದೀಗ ಪೊಲೀಸರು ಯಾರನ್ನು ತನಿಖೆ ಮಾಡಬೇಕೆಂದು ಗೊಂದಲದಲ್ಲಿದ್ದಾರೆ.
ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಎರಡನೇ ಪತ್ನಿಯ ಕತ್ತು ಕೊಯ್ದು ಪತಿಯೊಬ್ಬ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಪಟ್ರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪತಿ ಸುರೇಶ್ ತನ್ನ ಎರಡನೇ ಪತ್ನಿ ಉಷಾ ಅವರ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿದ್ದು, ಅದೃಷ್ಟವಶಾತ್ ಪತ್ನಿ ಪ್ರಾಣಾಪಯದಿಂದ ಪಾರಾಗಿದ್ದಾರೆ. ಪ್ರಸ್ತುತ ಉಷಾ ಅವರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಪುನೀತ್‍ರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ: ವಿಜಯ ರಾಘವೇಂದ್ರ
ಏನಿದು ಘಟನೆ?
ಅಂದರ್ಹಳ್ಳಿ ಗ್ರಾಮದ ಸುರೇಶ್ ಚಿಕ್ಕಬಳ್ಳಾಪುರ ಗೃಹರಕ್ಷಕದಳ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ಮೊದಲ ಪತ್ನಿ ಇದ್ದರೂ ಉಷಾ ಜೊತೆ ಎರಡನೇ ಮದುವೆಯಾಗಿದ್ದ. ಇಬ್ಬರು ಪತ್ನಿಯರಿಗೂ ಇಬ್ಬರು ಮಕ್ಕಳು ಸಹ ಇದ್ದಾರೆ. ಆದ್ರೆ ಕಳೆದ 2-3 ವರ್ಷಗಳಿಂದ ಉಷಾ ಮತ್ತು ಸುರೇಶ್ ನಡುವೆ ದಾಂಪತ್ಯದಲ್ಲಿ ಬಿರುಕು ಮೂಡಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಉಷಾ ತನ್ನ ಹಾಗೂ ತನ್ನಿಬ್ಬರ ಮಕ್ಕಳ ಜೀವನ ನಿರ್ವಹಣೆಗೆ ಜೀವನಾಂಶದ ಹಣ ಕೊಡುವಂತೆ ಲಾಯರ್ ಮೂಲಕ ಸುರೇಶ್ ಗೆ ನೋಟಿಸ್ ಕಳುಹಿಸಿದ್ದರು. ಇದರಿಂದ ರೋಸಿ ಹೋದ ಸುರೇಶ್ ತವರುಮನೆಯಲ್ಲಿದ್ದ ಉಷಾ ಅವರ ಮನೆಗೆ ಮಕ್ಕಳನ್ನ ನೋಡುವ ನೆಪದಲ್ಲಿ ಹೋಗಿದ್ದ. ಈ ವೇಳೆ ಮನೆಯಲ್ಲಿದ್ದ ಉಷಾ ಅವರ ಕತ್ತನ್ನ ಚಾಕುವಿನಿಂದ ಕೊಯ್ದು ಪರಾರಿಯಾಗಿದ್ದಾನೆ. ನಂತರ ಅಕ್ಕಪಕ್ಕದ ಮನೆಯವರು ಉಷಾ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಭ್ರಷ್ಟನಿಗೆ ಅಂಬಿ ಕಾಯಕ ಪ್ರಶಸ್ತಿ
ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಸುರೇಶ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸಮೋವಾ: ಪತ್ನಿಯರಿಗೆ ಪತಿ ಪ್ರೀತಿ ತೋರಿಸಬೇಕು, ತಮ್ಮನ್ನು ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಅನಿಸುವುದು ಸಹಜ. ಅದೇ ರೀತಿ ತನ್ನ ಹುಟ್ಟುಹಬ್ಬ ನೆನಪಿನಲ್ಲಿ ಇಟ್ಟುಕೊಂಡು ಅದ್ದೂರಿಯಿಂದ ಆಚರಿಸಬೇಕು ಎಂದು ಅನಿಸುತ್ತೆ. ಆದರೆ ಇಲ್ಲಿ ರೂಪಿಸಿರುವ ಕಾನೂನಿನ ಪ್ರಕಾರ ಒಂದು ವೇಳೆ ಪತಿ ಏನಾದರೂ ಹೆಂಡತಿಯ ಹುಟ್ಟುಹಬ್ಬ ಮರೆತರೆ ಆತ ಡೈರೆಕ್ಟ್ ಜೈಲು ಪಾಲು.
ಹೌದು, ಇದು ನಿಜ. ಏನಿದು ಗಂಡ ಹೆಂಡತಿಯ ಹುಟ್ಟುಹಬ್ಬ ಮರೆತೆರೆ ಜೈಲಾ! ಎಂದು ಹುಬ್ಬೆರಿಸುತ್ತಿದ್ದೀರಾ, ಈ ಕಾನೂನು ಜಾರಿಯಾಗಿರುವುದು ನಿಜ. ಪೆಸಿಫಿಕ್ ಮಹಾಸಾಗರದ ಪಾಲಿನೇಷನ್ ಪ್ರದೇಶದ ಸಮೋವಾ ದ್ವೀಪದಲ್ಲಿ ಇಂತಹದ್ದೊಂದು ಕಾನೂನು ಜಾರಿಯಲ್ಲಿದೆ. ಪತ್ನಿಯ ಹುಟ್ಟುಹಬ್ಬವನ್ನು ಪತಿ ಆಚರಿಸಲೇ ಬೇಕು ಎಂಬ ನಿಯಮ ಇಲ್ಲಿ ಕಡ್ಡಾಯವಾಗಿದೆ. ಒಂದು ವೇಳೆ ಪತಿ ಏನಾದರೂ ಅಸಡ್ಡೆ ತೋರಿಸಿದರೆ ಆತನಿಗೆ ಜೈಲು ಗ್ಯಾರಂಟಿ.
ಹಾಗಾದರೆ ಗಂಡನ ಹುಟ್ಟುಹಬ್ಬವನ್ನು ಹೆಂಡತಿ ಅಷ್ಟೇ ಗಮನಕೊಟ್ಟು ಮಾಡಬೇಕಾ! ಎಂಬುದಕ್ಕೆ ಉತ್ತರ ಇಲ್ಲ. ಏಕೆಂದರೆ ಇಲ್ಲಿ ಗಂಡ ಮಾತ್ರ ಹೆಂಡತಿಯ ಹುಟ್ಟುಹಬ್ಬಕ್ಕೆ ಹೆಚ್ಚು ಗಮನಕೊಟ್ಟು ಮಾಡಬೇಕು. ಒಂದು ವೇಳೆ ಪತಿಯ ಮೇಲೆ ಪತ್ನಿಗೆ ಅಷ್ಟು ಪ್ರೀತಿ ಇದ್ದರೆ ಆತನಿಗೆ ಇಷ್ಟವಾದ ಯಾವುದಾದರೂ ತಿಂಡಿ ಮಾಡಿದರೆ ಸಾಕು. ಅದು ಇಲ್ಲ ಎಂದರೆ ಆತ ಪತ್ನಿ ಏನು ಮಾಡುತ್ತಾಳೋ ಅದನ್ನು ತಿಂದು ಮಲಗಬಹುದು. ಇದನ್ನೂ ಓದಿ: ಜನವರಿಯಿಂದ ಮಕ್ಕಳಿಗೂ ಸಿಗಲಿದೆ ಲಸಿಕೆ?
ಒಂದು ವೇಳೆ ಗಂಡ ಏನಾದರೂ ಹೆಂಡತಿಯ ಹುಟ್ಟುಹಬ್ಬದ ಸಮಯದಲ್ಲಿ ಮೈಮರೆತರೆ ಅಥವಾ ದುಡ್ಡಿಲ್ಲವೆಂದು ಸುಮ್ಮನಾದರೆ ಆತನ ಕಥೆ ಮುಗಿಯಿತು ಎಂದೇ ಅರ್ಥ. ಆತ ಮಾತ್ರ ಹೆಂಡತಿ ಯಾವ ರೀತಿ ಹುಟ್ಟುಹಬ್ಬ ಆಚರಿಸಬೇಕು ಎಂದು ಕೇಳುತ್ತಾಳೆ ಅಂದೇ ರೀತಿ ಆಕೆಯ ಹುಟ್ಟುಹಬ್ಬ ಆಚರಿಸಬೇಕು. ಒಂದು ವೇಳೆ ಹಣವಿಲ್ಲವೆಂದು ಬಿಟ್ಟರೆ ಆತನನ್ನು ಪೊಲೀಸರು ಬಂದು ಕರೆದುಕೊಂಡು ಹೋಗುತ್ತಾರೆ.
ಮೊದಲ ಬಾರಿ ಈ ರೀತಿ ತಪ್ಪು ಆದರೆ ಆತನನ್ನು ಕ್ಷಮಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗುತ್ತದೆ. ಮತ್ತೊಮ್ಮೆ ತಪ್ಪು ಪುನಾರವರ್ತನೆಯಾದರೆ ಹೆಂಡತಿಯ ಕೆಂಗಣ್ಣಿಗೆ ಗುರಿಯಾಗಿ ಪತಿರಾಯ ಜೈಲು ಸೇರುತ್ತಾನೆ. ಇದನ್ನೂ ಓದಿ: ಐಎಎಫ್ ಗ್ರೂಪ್ ಕ್ಯಾಪ್ಟನ್ ಅಭಿನಂದನ್‍ಗೆ ವೀರ ಚಕ್ರ ಪ್ರಶಸ್ತಿ
ಈ ರೀತಿಯ ವಿಚಿತ್ರ ಕಾನೂನುಗಳು ಕೇಳಲು ಹಾಸ್ಯವೆನಿಸಿದರೂ ಅದನ್ನು ಅನುಭವಿಸುತ್ತಿರುವವರಿಗೇ ಅದರ ಕಷ್ಟ ಗೊತ್ತಿರುತ್ತೆ. ಇದೇ ರೀತಿ ಹಲವು ವಿಚಿತ್ರವಾದ ಕಾನೂನುಗಳನ್ನು ನಾವು ವಿವಿಧ ದೇಶಗಳಲ್ಲಿ ನೋಡಬಹುದು. ಉತ್ತರ ಕೋರಿಯಾದಲ್ಲಿ ನೀಲಿ ಬಣ್ಣದ ಜೀನ್ಸ್ ಧರಿಸಿ ಮನೆಯಿಂದ ಹೊರ ಬಂದರೆ ಅವರಿಗೆ ಶಿಕ್ಷೆ ಕಾಯಂ. ಪೂರ್ವ ಅಫ್ರಿಕಾದಲ್ಲಿ ಜಾಗಿಂಗ್ ಮಾಡುವಂತಿಲ್ಲ. ಸಿಂಗಾಪುರದಲ್ಲಿ ಚೂಯಿಂಗ್ ಗಂ ಜಗಿಯುವುದೇ ನಿಷಿಧವಾಗಿದೆ. ಇದೇ ರೀತಿ ಹಲವು ದೇಶ-ವಿದೇಶಗಳಲ್ಲಿ ಚಿತ್ರ-ವಿಚಿತ್ರವಾದ ಕಾನೂನುಗಳಿದ್ದು, ಕೇಳುಗರಿಗೆ ಹಾಸ್ಯವೆನಿಸಿದರೆ ಅನುಭವಿಸುವವರಿಗೆ ಪ್ರಾಣ ಸಂಕಟವಾಗಿರುತ್ತೆ.
ಲಕ್ನೋ: ಮೈಬಣ್ಣ ಕಪ್ಪು ಎಂದು ಪತಿ ತಲಾಖ್ ನೀಡಿದ್ದಾನೆ ಎಂದು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ದೇಶಾದ್ಯಂತ ತ್ರಿವಳಿ ತಲಾಖ್ ನಿಷೇಧ ಮಾಡಲಾಗಿದ್ದು, ಇದರ ಮಧ್ಯೆ ಕೆಲವೊಂದು ಇಂತಹ ಪ್ರಕರಣ ಕೇಳಿ ಬರುತ್ತವೆ. ಅದೇ ರೀತಿಯ ಘಟನೆವೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಇದನ್ನೂ ಓದಿ: ಕೊಹ್ಲಿ ಅಲ್ಲ ಗುಪ್ಟಿಲ್ ಈಗ ಟಿ20 ಕ್ರಿಕೆಟ್‍ನ ಕಿಂಗ್
ಮೈಬಣ್ಣ ಕಪ್ಪು ಇದೆ ಎಂದು ಆರೋಪಿಸಿರುವ ಪತಿ ತಲಾಖ್ ನೀಡಿದ್ದಾನೆ. ಇದೇ ಕಾರಣಕ್ಕಾಗಿ ಮಹಿಳೆಯ ಗಂಡ ಸೇರಿದಂತೆ 8 ಮಂದಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಹಾಗೂ ಮುಸ್ಲಿಂ ವಿವಾಹ ಹಕ್ಕುಗಳ ರಕ್ಷಣೆ ಕಾಯ್ದೆ ಅಡಿ ದೂರು ದಾಖಲು ಮಾಡಿದ್ದಾಳೆ. ಕಳೆದ 9 ತಿಂಗಳ ಹಿಂದೆ ಆಲಂ ಎಂಬ ವ್ಯಕ್ತಿ ಯುವತಿ ಜೊತೆ ಮದುವೆ ಮಾಡಿಕೊಂಡಿದ್ದಳು ಎಂದು ವರದಿಯಾಗಿದೆ. ಇದನ್ನೂ ಓದಿ: ಕಾರವಾರ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೇಬರ ಪತ್ತೆ
ಮಹಿಳೆಯ ಮೈಬಣ್ಣ ಹಾಗೂ ವರದಕ್ಷಿಣೆ ವಿಚಾರವಾಗಿ ಪತಿ ಮನೆಯವರು ಕೀಳು ಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ಇದರ ಜೊತೆಗೆ ತವರು ಮನೆಯಿಂದ ಮತ್ತಷ್ಟು ವರದಕ್ಷಿಣೆ ತೆಗೆದುಕೊಂಡು ಬರುವಂತೆ ಚಿತ್ರಹಿಂಸೆ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಮದುವೆ ಸಂದರ್ಭದಲ್ಲಿ ಯುವತಿಯ ತಂದೆ ಗಂಡನ ಮನೆಯವರಿಗೆ 10 ಗುಂಟೆ ಜಮೀನು ನೀಡಿದ್ದರು. ಇದರ ಹೊರತಾಗಿ ಕೂಡ ಕಾರು ಖರೀದಿ ಮಾಡಲು 10 ಲಕ್ಷ ರೂ. ತೆಗೆದುಕೊಂಡು ಬರುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ನಿರಾಕರಣೆ ಮಾಡಿದಾಗ ಮಹಿಳೆ ಮೇಲೆ ಗಂಡನ ಮನೆಯವರು ದೈಹಿಕವಾಗಿ ಕಿರುಕುಳ ನೀಡಿದ್ದಾರೆ. ಜೊತೆಗೆ ತಲಾಖ್ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಭೂಪಾಲ್: ಸ್ನಾನಕ್ಕೆ ಹೋದ ಗಂಡನಿಗೆ ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಪುಷ್ಪಾ ಬಾಯಿ (45) ಮೃತಳು, ಈಕೆ ಪತಿ ರಾಜಕುಮಾರ್ ಬಹೆ (50) ಕೊಲೆ ಮಾಡಿದ್ದಾನೆ. ಈತ ಅರಣ್ಯ ಇಲಾಖೆಯ ದಿನಗೂಲಿ ನೌಕರನಾಗಿದ್ದನು. ಸ್ನಾನಕ್ಕೆ ಹೋದಾಗ ತನ್ನ ಹೆಂಡತಿಯನ್ನು ಕರೆದು ಟವೆಲ್ ಕೊಡಲು ಹೇಳಿದ್ದ. ಆದರೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ಸ್ವಲ್ಪ ಹೊತ್ತು ಕಾಯುವಂತೆ ಹೇಳಿದ್ದಳು. ಆತನ ಸ್ನಾನ ಮುಗಿದರೂ ಆಕೆ ಟವೆಲ್ ಕೊಡದಿದ್ದರಿಂದ ಕೋಪಗೊಂಡ ಗಂಡ ತನ್ನ ಹೆಂಡತಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಡೆದಿದ್ದೇನು?: ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಕಿರ್ನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹೀರಾಪುರ ಗ್ರಾಮದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ:ಆರೋಗ್ಯಕರವಾದ ಸೌತೆಕಾಯಿ ತಂಬುಳಿ ಮಾಡುವ ವಿಧಾನ
ರಾಜಕುಮಾರ್ ಬಹೆ ಸ್ನಾನದ ನಂತರ ಟವೆಲ್ ನೀಡುವಂತೆ ಕೇಳಿದ್ದ. ಪುಷ್ಪ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದುದರಿಂದ ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದಳು. ಇದರಿಂದ ಕೋಪಗೊಂಡ ವ್ಯಕ್ತಿ ಸ್ನಾನ ಮುಗಿಸಿ ಹೊರಗೆ ಬಂದ ನಂತರ ಕಬ್ಬಿಣದ ರಾಡಿನಿಂದ ಪತ್ನಿಯ ತಲೆಗೆ ಪದೇ ಪದೇ ಹೊಡೆದಿದ್ದಾನೆ. ಇದರಿಂದ ಆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತನ್ನ ಅಪ್ಪನನ್ನು 23 ವರ್ಷದ ಮಗಳನ್ನು ತಡೆಯಲು ಪ್ರಯತ್ನಿಸಿದಾಗ ಆಕೆಗೆ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಕೋವಿಡ್-19 ಲಸಿಕೆ ಪಡೆದು 7.4 ಕೋಟಿ ರೂ. ಗೆದ್ದ ಯುವತಿ
ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಭಾನುವಾರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಆರೋಪಿಯನ್ನು ಭಾನುವಾರ ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.
ನೆಲಮಂಗಲ: ಆತ ಕೋಟಿ ಕೋಟಿ ಹಣದ ಒಡೆಯ. ಆತನಿಗೆ ಮದುವೆ ಕೂಡ ಆಗಿತ್ತು. ನಂತರ ಮೊದಲನೇ ಹೆಂಡತಿಯನ್ನು ಹಾಗೂ ತನ್ನ ಮನೆಯವರನ್ನು ದೂರ ಮಾಡಿಕೊಂಡು ಮತ್ತೊಬ್ಬಳಿಗೆ ಫಿದಾ ಆಗಿದ್ದ. ಆದರೆ ಆಕೆಯೇ ಇಂದು ಆತನಿಗೆ ಪರಲೋಕದ ದಾರಿ ತೋರಿಸಿದ್ದಾಳೆ.
ಹೌದು. ಬೆಂಗಳೂರು ಹೊರವಲಯ ಮಾದನಾಯಕನಹಳ್ಳಿ ಬಳಿಯ ಗೌಡಹಳ್ಳಿಯಲ್ಲಿ ಘಟನೆ ನಡೆದಿದೆ. ಕೊಲೆಯಾದವನನ್ನು ಸ್ವಾಮಿರಾಜ್ ಎಂದು ಗುರುತಿಸಲಾಗಿದ್ದು, ಈತನನ್ನು ಪತ್ನಿ ನೇತ್ರಾವತಿ ಹತ್ಯೆ ಮಾಡಿದ್ದಾಳೆ. ಇದನ್ನೂ ಓದಿ: ಮೈಸೂರಲ್ಲಿ ಶಿಕ್ಷಕರಿಗೆ ಜೀನ್ಸ್ ಪ್ಯಾಂಟ್ ಬ್ಯಾನ್
ಕೊಲೆಯಾಗಿರೋ ಸ್ವಾಮಿರಾಜ್‍ಗೆ ಈಗಾಗಲೇ ಒಂದು ಮದುವೆಯಾಗಿತ್ತು. ನಂತರ ಈತ ನೇತ್ರಾವತಿಯನ್ನ ಮದುವೆ ಆಗಿದ್ದ. ಕೋಟಿ ಕೋಟಿ ಒಡಯನಾಗಿದ್ದ ಸ್ವಾಮಿರಾಜ್, ಎರಡನೇ ಪತ್ನಿಗಾಗಿ ನಾಲ್ಕು ಕೋಟಿ ಮನೆ, ಓಡಾಡೋಕೆ ಕಾರು ಕೊಡಿಸಿದ್ದ ಎನ್ನಲಾಗಿದೆ. ಆದರೆ ಆಕೆ ಹೇಳುವಂತೆ ತನ್ನನ್ನು ಅಕ್ರಮ ಸಂಬಂಧಕ್ಕೆ ಒತ್ತಾಯಿಸಿದ್ದ. ಬೇರೆಯವರ ಜೊತೆಗೆ ಮಲಗಲು ಹೇಳುತ್ತಿದ್ದ. ಅದಕ್ಕೆ ಕೊಲೆ ಮಾಡಿದ್ದೇನೆ ಅಂತಿದ್ದಾಳೆ. ಇದನ್ನೂ ಓದಿ:ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ
ಇತ್ತ ಪತಿಯನ್ನ ಕೊಲೆ ಮಾಡಿ ಪೊಲೀಸ್ ಠಾಣೆಗೆ ಬಂದು ಈ ನೇತ್ರಾವತಿ ನಾಟಕ ಆಡಿದ್ಳಾ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ. ಕೊಲೆಯಾದ ಸ್ವಾಮಿರಾಜ್, ನೇತ್ರಾವತಿಗಾಗಿ ತನ್ನ ಫ್ಯಾಮಿಲಿಯನ್ನೇ ದೂರ ಮಾಡಿಕೊಂಡಿದ್ದ. ಹಾಗಾಗಿ ಪ್ರೀತಿಸಿದ್ದ ಪತ್ನಿಯನ್ನು ಬೇರಯವರ ಜೊತೆ ಮಲಗು ಎಂದು ಹೇಳಿದ್ನಾ ಅನ್ನೋ ಅನುಮಾನ ವ್ಯಕ್ತಪಡಿಸಿರೋ ಪೊಲೀಸ್ರು ಆಕೆಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಸಪ್ತಪದಿ ತುಳಿದು ಹೆಂಡತಿ ಹಾಗೂ ಮನೆಯವರಿಗೆ ಮೋಸ ಮಾಡಿ, ಮನೆಯವರ ವಿರೋಧದ ನಡುವೆಯೂ ಮತ್ತೊಬ್ಬಳ ಮೋಹಕ್ಕೆ ಒಳಗಾದವ ಈಗ ಆಕೆಯಿಂದಲೇ ಕೊಲೆಯಾಗಿದ್ದಾನೆ. ಇತ್ತ ಸ್ವಾಮಿ ರಾಜ್ ಮನೆಯವರು ಆಕೆಗೆ ಸೂಕ್ತ ಶಿಕ್ಷೆಗಾಗಿ ಆಗ್ರಹಿಸಿದ್ದಾರೆ.