ಹೂತಿಟ್ಟ ಶವವನ್ನು ಹೊರ ತೆಗೆಯುವ ಕಾರ್ಯ ಆರಂಭವಾಗಿದ್ದು, ಎಎಸ್‍ಪಿ ಮಹಾನಿಂಗ ನಂದಗಾವಿ, ಡಿವೈಎಸ್ಪಿ ಪಾಡುರಂಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಕಬ್ಬಿನ ಟ್ರ್ಯಾಕ್ಟರ್‌ಗೆ ಆಕಸ್ಮಿಕ ಬೆಂಕಿ
ವಾಷಿಂಗ್ಟನ್: ಪತಿ ಕಾಣೆಯಾಗಿದ್ದಾನೆಂದು ಅಂಧ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಬೆಡ್ ಮೇಲೆಯೇ ಪತಿ ಶವವಾಗಿ ಪತ್ತೆಯಾಗಿರುವ ಪ್ರಸಂಗ ಅಮೆರಿಕದಲ್ಲಿ ನಡೆದಿದೆ.
76 ವರ್ಷದ ವ್ಯಕ್ತಿಯೋರ್ವ ಗುಂಡಿನ ದಾಳಿಗೆ ಒಳಗಾಗಿ ಬೆಡ್ ಮೇಲೆ ಸಾವನ್ನಪ್ಪಿದ್ದಾನೆ. ಆದರೆ ಈ ವಿಚಾರ ಅಂಧ ಪತ್ನಿಗೆ ಗೊತ್ತಾಗಿಲ್ಲ. ತನ್ನ ಪತಿ ಕಾಣೆಯಾಗಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮನೆಗೆ ಬಂದು ನೋಡಿದಾಗಲೇ ತನ್ನ ಪತಿ ಕೊಲೆಯಾಗಿದ್ದಾನೆ ಎಂದು ಅಂಧ ಪತ್ನಿಗೆ ತಿಳಿದುಬಂದಿದೆ. ಇದನ್ನೂ ಓದಿ: ಬಿಹಾರ್ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ
ದೂರು ಆಧರಿಸಿ ಪೊಲೀಸರು ಕಳೆದ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಅಮೆರಿಕಾದ ಲೂಸಿಯಾನದ ಲೀವಿ ರಸ್ತೆಯಲ್ಲಿರುವ ದಂಪತಿ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರು ಅಲ್ಲೇ ಇರುವುದನ್ನು ಗಮನಿಸಿದ ಪೊಲೀಸರು ನಂತರ ಮನೆಯನ್ನು ಪರಿಶೀಲಿಸಿದಾಗ ಕಿಟಕಿ ಗಾಜು ಒಡೆದು ಹೋಗಿರುವುದು ಕಂಡುಬಂದಿದೆ. ಆರೋಪಿಗಳು ಅನೇಕ ಬಾರಿ ಗುಂಡು ಹಾರಿಸಿರುವುದರಿಂದ ವ್ಯಕ್ತಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ನೀಡದಿದ್ದಕ್ಕೆ ಅಖಿಲೇಶ್ ಯಾದವ್ ಮೊದಲು ಕ್ಷಮೆಯಾಚಿಸಲಿ: ಯೋಗಿ ಆದಿತ್ಯನಾಥ್
ಈ ಪ್ರಕರಣ ಸಂಬಂಧ ಇದೀಗ ತನಿಖೆ ಆರಂಭಿಸಲಾಗಿದೆ ಎಂದು ನಾಚಿಟೋಚೆಸ್ ಪ್ಯಾರೀಷ್ ಶೆರಿಫ್ ಕಚೇರಿ ತಿಳಿಸಿದೆ. ಆದರೆ ಇದುವರೆಗೂ ಯಾರನ್ನು ಸಹ ಬಂಧಿಸಲಾಗಿಲ್ಲ.
ಮಡಿಕೇರಿ: ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ನಾಪತ್ತೆಯಾಗಿದ್ದ ಮಹಿಳೆ, 7 ವರ್ಷದ ಬಳಿಕ ತನ್ನ ಗಂಡನ ಸೇರಿದ ಅಪರೂಪದ ಘಟನೆಗೆ ಮಡಿಕೇರಿಯ ತನಲ್ ಸಂಸ್ಥೆ ಸಾಕ್ಷಿಯಾಗಿದೆ. ಏಳು ವರ್ಷಗಳ ಬಳಿಕ ತನ್ನ ಪತ್ನಿಯನ್ನು ಕಂಡ ಪತಿಗೆ ದುಃಖ ಉಮ್ಮಳಿಸಿ ಬಂದಿತ್ತು. ಏನೂ ಮಾತನಾಡದೆ ಪತ್ನಿಯ ತಲೆಯನ್ನು ಸವರಿ ಕಣ್ತುಂಬಿ ಬಂದ ನೀರನ್ನು ಕಣ್ಣಂಚಿನಲ್ಲೇ ತಡೆಹಿಡಿದು ಪತ್ನಿಯ ಮುದ್ದಿಸಿದ ಆ ಕ್ಷಣ ಎಂತ ಕಲ್ಲು ಹೃದಯದವನ್ನಾದರೂ ಕರಗಿಸುವಂತಿತ್ತು.
ಹೌದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೊತ್ತೂರಿನ ರಾಜಪ್ಪ ಮತ್ತವರ ಪತ್ನಿ ಮುತ್ತಮ್ಮ ಏಳು ವರ್ಷದ ಬಳಿಕ ಒಂದಾಗಿದ್ದಾರೆ. ಸಂಬಂಧ ಎನ್ನೋದು ಎಷ್ಟು ಗಟ್ಟಿ ಎನ್ನೋದಕ್ಕೆ ಈ ಘಟನೆ ಸಾಕ್ಷಿ. ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದ ಮುತ್ತಮ್ಮನನ್ನು 2014 ರಲ್ಲಿ ಬೆಂಗಳೂರಿಗೆ ಕರೆತಂದು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ತಿಂಗಳ ಕಾಲ ಮುತ್ತಮ್ಮನಿಗೆ ಚಿಕಿತ್ಸೆ ಕೊಡಲಾಗಿತ್ತು. ಆದರೆ ಮುತ್ತಮ್ಮ ಇದ್ದಕ್ಕಿದ್ದಂತೆ ಒಂದು ದಿನ ಆಸ್ಪತ್ರೆಯಿಂದ ನಾಪತ್ತೆ ಆಗಿದ್ದರು. ಅಂದಿನಿಂದ ಪತಿ ರಾಜಪ್ಪ, ಅಳಿಯಂದಿರಾದ ದೊರೆ, ನಾಗರಾಜ್ ಸೇರಿದಂತೆ ಇಡೀ ಕುಟುಂಬ ಮುತ್ತಮ್ಮನಿಗಾಗಿ ಹುಡುಕದ ಊರಿಲ್ಲ, ಸುತ್ತದ ಜಿಲ್ಲೆಯಿಲ್ಲ. ಕೊನೆಗೆ ತನ್ನ ಪತ್ನಿ ನಾಪತ್ತೆ ಎಂದು ರಾಜಪ್ಪ ಬೆಂಗಳೂರಿನಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ನಾಲ್ಕೈದು ವರ್ಷಗಳ ಕಾಲ ನಿತ್ಯವೂ ಹುಡುಕಾಡಿದ ರಾಜಪ್ಪ ಮತ್ತು ಕುಟುಂಬದವರು ಇನ್ನು ನಮ್ಮ ಪಾಲಿಗೆ ಅವರಿಲ್ಲ ಎಂದು ಸುಮ್ಮನಾಗಿ ಬಿಟ್ಟಿದ್ದರು. ಆದರೆ 2017 ರಲ್ಲಿ ಇತ್ತ ಮಡಿಕೇರಿಯ ಹೊಟೇಲ್ ಒಂದರ ಮುಂದೆ ಕಸದ ತೊಟ್ಟಿಯ ಬಳಿ ಮುತ್ತಮ್ಮ ನಡೆಯಲಾರದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಸ್ಪತ್ರೆಯಿಂದ ತಪ್ಪಿಸಿಕೊಂಡ ಬಳಿಕ ಮುತ್ತಮ್ಮ ಅವರ ಎಡಗಾಲಿಗೆ ಏನೋ ಪೆಟ್ಟು ಬಿದ್ದಿತ್ತು. ಪರಿಣಾಮ ಕಾಲು ಗ್ಯಾಂಗ್ರಿನ್ ಗೆ ತಿರುಗಿ ಪಾದದ ಭಾಗ ಕೊಳೆತು ಉಳು ಬಿದ್ದಿತ್ತು. ಆ ಸ್ಥಿತಿಯನ್ನು ಕಂಡು ಅಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದರು. ಅಂತಹ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆಗೆ ಮುಂದಾಗಿದ್ದು ಮಡಿಕೇರಿಯ ತನಲ್ ಎಂಬ ಅನಾಥಾಶ್ರಮ. ಇದನ್ನೂ ಓದಿ: ಪೈರಸಿ ಒಂದು ವೈರಸ್, ತಡೆಯವುದು ಕಷ್ಟ: ಸುಮಲತಾ ಅಂಬರೀಶ್
2017 ರಲ್ಲಿ ಮಹಿಳೆಯನ್ನು ರಕ್ಷಿಸಿದ ಸಂಸ್ಥೆಯು ಕೇರಳದಲ್ಲಿರುವ ಕೇಂದ್ರ ಶಾಖೆಗೆ ಕಳುಹಿಸಿ ಅಲ್ಲಿ ಕೊಳೆತಿದ್ದ ಕಾಲು ಮತ್ತು ಮಾನಸಿಕ ಚಿಕಿತ್ಸೆಯನ್ನು ಕೊಡಿಸಿದೆ. ಏಳು ತಿಂಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಕಾಲು ಸಂಪೂರ್ಣ ಗುಣವಾಗಿದ್ದರೆ, ಮಾನಸಿಕ ಆರೋಗ್ಯ ಕೂಡ ಶೇ 90 ರಷ್ಟು ಸರಿಹೋಗಿದೆ. ಕೇರಳದಿಂದ ಮುತ್ತಮ್ಮ ಅವರನ್ನು ವಾಪಸ್ ಕರೆತಂದ ಬಳಿಕ ಅವರ ವಿಳಾಸ ಕೇಳಿದಾಗ ಮಹಿಳೆಯದ್ದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೊತ್ತೂರಿನ ರಾಜಪ್ಪ ಎಂಬವರ ಪತ್ನಿ ಎನ್ನೋದು ಗೊತ್ತಾಗಿದೆ. ಆದರೆ ಅವರನ್ನು ಪತ್ತೆಹಚ್ಚಲು ತನಲ್ ಸಂಸ್ಥೆಯ ಕೊಡಗು ಶಾಖೆಯ ವ್ಯವಸ್ಥಾಪಕ ಮಹಮ್ಮದ್ ಸಾಕಷ್ಟು ಪ್ರಯತ್ನಿಸಿದ್ದರು. ನಂತರ ಕೊಡಗು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಅವರು ಮುತ್ತಮ್ಮ ಅವರ ವಿಳಾಸ ಹುಡುಕಿಸುವುದರಲ್ಲಿ ಯಶಸ್ವಿಯಾಗಿದ್ದರು. ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ ಮೈಸೂರು ಪೊಲೀಸರಿಂದ ವಿನೂತನ ಪ್ರಯತ್ನ – ಸ್ವಯಂ ಸೇವಕರಿಗೆ ಗುರುತಿನ ಚೀಟಿ
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೊತ್ತೂರಿಗೆ ಹೋದ ಪೊಲೀಸರು ಕಟ್ಟಡ ಕಾರ್ಮಿಕರಾಗಿರುವ ರಾಜಪ್ಪ ಅವರನ್ನು ಭೇಟಿಯಾಗಿ ನಿಮ್ಮ ಪತ್ನಿ ಇದ್ದಾರೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ರಾಜಪ್ಪಗೆ ಇನ್ನಿಲ್ಲದ ಸಂತೋಷ, ದುಃಖ ಮತ್ತು ಆಶ್ಚರ್ಯ ಎಲ್ಲವೂ ಒಟ್ಟೊಟ್ಟಿಗೆ ಆಗಿದೆ. ಕೂಡಲೇ ತಮ್ಮ ಅಳಿಯ ದೊರೆ ಮತ್ತು ನಾಗರಾಜು ಅವರನ್ನು ಕರೆದುಕೊಂಡು ಭಾನುವಾರ ತಡರಾತ್ರಿ ಮಡಿಕೇರಿ ತಲುಪಿದ್ದಾರೆ. ರಾತ್ರಿ ತಡವಾಗಿದ್ದರಿಂದ ರಾಜಪ್ಪ ಮತ್ತು ಅಳಿಯಂದಿರಿಗೆ ಮುತ್ತಮ್ಮನನ್ನು ಸೋಮವಾರ ಬೆಳಗ್ಗೆ ಭೇಟಿ ಮಾಡಿಸಿದ್ದಾರೆ. ಇದ್ದಕ್ಕಿದ್ದಂತೆ ನಾಪತ್ತೆಯಾಗಿ ತನ್ನಿಂದ ದೂರವಿದ್ದ ಹೆಂಡತಿಯನ್ನು ಏಳು ವರ್ಷಗಳ ಬಳಿಕ ಕಂಡ ಪತಿ ರಾಜಪ್ಪಗೆ ಕಣ್ಣಿನಲ್ಲಿ ನೀರು ತುಂಬಿ ಕೊರಳು ಬಿಗಿದು ಹೋಗಿತ್ತು. ತಾನೇನು ಮಾತನಾಡದೆ ಕೇವಲ ತನ್ನ ಪತಿಯ ತಲೆಯನ್ನು ಸವರಿ ಮುದ್ದು ಮಾಡಿದರು. ಈ ದೃಶ್ಯ ಎಂಥವರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದ್ದವು. ತನ್ನ ಪತಿಯನ್ನು ಕಂಡ ಮುತ್ತಮ್ಮ ಕೂಡ ಖುಷಿಯಿಂದಲೇ ತನ್ನ ಊರಿಗೆ ಹೊರಟಿದ್ದರು. ಅನಾಥಾಶ್ರಮದಲ್ಲಿದ್ದ ಇತರ ವೃದ್ಧೆಯರು, ಮಹಿಳೆಯರು ಮುತ್ತಮ್ಮಗೆ ಕೈಬಿಸಿ ಹೋಗಿ ಬಾ ಮುತ್ತಮ್ಮ ಚೆನ್ನಾಗಿರು ಎಂದು ಹಾರೈಸುತ್ತಿದ್ದ ದೃಶ್ಯವೂ ಹೃದಯಸ್ಪರ್ಶೀಯಾಗಿತ್ತು.
ವಿಜಯಪುರ: ಪತ್ನಿ ಶೀಲ ಶಂಕಿಸಿ ಪತ್ನಿಯ ಕತ್ತು ಹಿಸುಕಿ ಪತಿಯೇ ಕ್ರೂರವಾಗಿ ಹತ್ಯೆಗೈದು, ತಾನು ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಆರ್‍ಎಸ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಹೊರ ಭಾಗದ ಜಮೀನಲ್ಲಿರುವ ಶೆಡ್‍ಗೆ ಪತ್ನಿಯನ್ನು ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಗೈದಿದ್ದೇನೆ. ಪತ್ನಿಯ ಹತ್ಯೆಗೈದ ಬಳಿಕ ತಾನು ಕೂಡ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಒಬ್ಬ ಕ್ರಿಮಿನಲ್‍ನ ರಕ್ಷಿಸುತ್ತಿದ್ದೀರಾ – ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ
ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಶರಣಾದ ವ್ಯಕ್ತಿ ಶಿವಪ್ಪ ಮನಗೂಳಿ (45)ಯಾಗಿದ್ದು, ಹನುಮವ್ವ (38) ಪತಿಯಿಂದ ಕೊಲೆಗೀಡಾದ ಪತ್ನಿಯಾಗಿದ್ದಾರೆ. ಇದೀಗ ಸ್ಥಳಕ್ಕೆ ನಿಡಗುಂದಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹೆದ್ದಾರಿಯಲ್ಲೇ ಹೊತ್ತಿ ಉರಿದ 22 ಮಂದಿ ಪ್ರಯಾಣಿಕರಿದ್ದ ಬಸ್!
ಭೋಪಾಲ್: ಬಲವಂತವಾಗಿ ಸೆಕ್ಸ್ ಮಾಡಲು ಮುಂದಾದ ಪತಿಯ ಮರ್ಮಾಂಗವನ್ನೇ ಪತ್ನಿ ಕತ್ತರಿಸಿರುವ ವಿಲಕ್ಷಣ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಮಧ್ಯಪ್ರದೇಶದ ಟಿಕಮ್ ಗಢ ಜಿಲ್ಲೆಯಲ್ಲಿ ಡಿಸೆಂಬರ್ 7ರಂದು ನಡೆದಿದೆ. ತನ್ನ ಸ್ವ-ಇಚ್ಛೆಗೆ ವಿರುದ್ಧವಾಗಿ ಬಲವಂತದಿಂದ ಸೆಕ್ಸ್ ಮಾಡುವಂತೆ ಒತ್ತಡ ಹಾಕಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಪತಿಯ ಕಿರುಕುಳದಿಂದ ಬೇಸತ್ತ 24 ವರ್ಷದ ಪತ್ತನ ರೊಚ್ಚಿಗೆದ್ದು 27 ವರ್ಷದ ಪತಿಯ ಮರ್ಮಾಂಗವನ್ನು ಹರಿತವಾದ ಆಯುಧದಿಂದ ಕತ್ತರಿಸಿ ಬಿಟ್ಟಿದ್ದಾಳೆ. ಇದನ್ನೂ ಓದಿ: 27 ದಿನದ ಶಿಶುವಿನ ತಲೆಯನ್ನು ಗೋಡೆಗೆ ಚಚ್ಚಿ ಕೊಂದ ಕ್ರೂರಿ ತಾಯಿ
ಪತಿ ಹಾಗೂ ಪತ್ನಿ ಮಧ್ಯೆ ದೈಹಿಕ ಸಂಬಂಧದ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಹೀಗಿರುವಾಗಿ ಪತಿ ಪ್ರತಿನಿತ್ಯ ಸೆಕ್ಸ್ ಮಾಡುವಂತೆ ಒತ್ತಡ ಹೇರುತ್ತಿದ್ದನು. ಆದರೆ ಇದು ಪತ್ನಿಗೆ ಇಷ್ಟವಿರಲಿಲ್ಲ. ಹೀಗಾಗಿ ಬಲವಂತವಾಗಿ ಸೆಕ್ಸ್ ಮಾಡಲು ಮುಂದಾದಾಗ ಸಿಟ್ಟಿನಿಂದ ಪತ್ನಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಆಮ್ಲೆಟ್ ಸೀದು ಹೋಗಿದೆ ಎಂದಿದ್ದಕೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ
ಸಾಂದರ್ಭಿಕ ಚಿತ್ರ
ಈ ಘಟನೆ ಡಿ.7ರಂದು ರಾತ್ರಿ ನಡೆದಿದ್ದು, ಕೂಡಲೇ ಆತ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಡಿ.13ರಂದು ಸಂತ್ರಸ್ತ ಠಾಣೆಗೆ ಬಂದು ದೂರು ನೀಡಿದ್ದಾನೆ. ಈ ದಂಪತಿ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಮದುವೆಯಾದ ಕೆಲ ತಿಂಗಳಿನಿಂದಲೇ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿದೆ. ಪರಿಣಾಮ ಇಬ್ಬರೂ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದರು. ಆದರೂ ಇಬ್ಬರ ನಡುವೆ ಮತ್ತೆ ಜಗಳವಾಗಿದ್ದು, ಪರಿಣಾಮ ಪತ್ನಿ ಈ ಮೂಲಕ ಪತಿಗೆ ಬುದ್ಧಿ ಕಲಿಸಿದ್ದಾಳೆ. ಇದನ್ನೂ ಓದಿ: ಮಗನನ್ನ ನೀರಿನ ಸಂಪ್‍ಗೆ ಎಸೆದು ತಂದೆ ಆತ್ಮಹತ್ಯೆ
ಘಟನೆಗೆ ಸಂಬಂಧಿಸಂತೆ ಪತ್ನಿ ವಿರುದ್ಧ ಐಪಿಸಿ ಸೆಕ್ಷನ್ 324ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್: ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದ ಸಾಫ್ಟ್ ವೇರ್ ಉದ್ಯೋಗಿ ಮಹಿಳೆ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಸ್ವಾರ್ತಿ ಕುಸುಮಾ (32)ಮೃತಳಾಗಿದ್ದಾಳೆ. ಈಕೆ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದಳು. ಆರ್ಥಿಕ ಸಂಕಷ್ಟಕ್ಕೆ ಬೇಸತ್ತು ತಮ್ಮ ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಕೊಂಡು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿ ಸಾಯಿಕುಮಾರ್‌ಗೆ ಬರುತ್ತಿದ್ದ ಸಂಬಳ ಮಕ್ಕಳ ಫೀಸಿಗೂ ಸಾಕಾಗುತ್ತಿಲ್ಲವೆಂದು ಸ್ವಾತಿ ಚಿಂತಿತರಾಗಿದ್ದರು ಎನ್ನಲಾಗಿದೆ. ಸಾಯಿಕುಮಾರ್ ಕೆಲಸಕ್ಕೆ ತೆರಳಿದ್ದ ವೇಳೆ ಬೆಡ್ ರೂಮಿನಲ್ಲಿ ಆತ್ಮಹತ್ಯೆ ನೋಟ್ ಬರೆದು ಸ್ವಾತಿ 5 ವರ್ಷದ ಮಗ ಮಗು 3 ವರ್ಷದ ಮಗಳನ್ನು ಕೊಂದು ತಾವೂ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಪ್ರಧಾನಿಗೆ ಭಗವದ್ಗೀತೆ ಗಿಫ್ಟ್ ಕೊಟ್ಟ ಐರಾವತ ನಟಿ
ಚಾಮರಾಜನಗರ: ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದ್ದು, ಎರಡು ಲಕ್ಷ ರೂ. ದಂಡ ವಿಧಿಸಿದೆ.
ಉತ್ತುವಳ್ಳಿ ಗ್ರಾಮದ ಮಂಜು ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಮದ್ಯ ವ್ಯಸನಿಯಾಗಿದ್ದ ಈತ ಪ್ರತಿದಿನ ಕುಡಿದು ಬಂದು ಪತ್ನಿ ಚಿನ್ನತಾಯಮ್ಮಳೊಂದಿಗೆ ಗಲಾಟೆ ಮಾಡುತ್ತಿದ್ದ. ಕುಡಿತದ ಬಗ್ಗೆ ಪ್ರಶ್ನಿಸಿದ್ದ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಈ ಘಟನೆಯು 2017 ರ ಅಕ್ಟೋಬರ್ 26 ರಂದು ರಾತ್ರಿ ನಡೆದಿದ್ದು, ಚಾಮರಾಜನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇದನ್ನೂ ಓದಿ: ರಾಜ್ಯದಲ್ಲಿ 373 ಪಾಸಿಟಿವ್, 4 ಸಾವು – 29 ಜಿಲ್ಲೆಗಳಲ್ಲಿ ಶೂನ್ಯ ಮರಣ
ಈ ಪ್ರಕರಣದ ಹಿನ್ನೆಲೆ ಇಂದು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಲೋಕಪ್ಪ, ಆರೋಪಿಗೆ ಜೀವಾವಧಿ ಶಿಕ್ಷೆ 2 ಲಕ್ಷ ರೂ. ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಉಷಾ ವಾದ ಮಂಡಿಸಿದ್ದರು. ಇದನ್ನೂ ಓದಿ: ಟೊಮೆಟೊ ಕದ್ದ ಖಾಕಿ ಸಮವಸ್ತ್ರಧಾರಿ – ವೀಡಿಯೋ ವೈರಲ್
ಲಕ್ನೋ: ವಿವಾಹಿತ ಪುರುಷನೊಬ್ಬ ಎರಡನೇ ಮದುವೆಯಾಗಲು ಪ್ರಯತ್ನಿಸಿ ಮಂಟಪದಲ್ಲೇ ಸಿಕ್ಕಿ ಬಿದ್ದು, ಥಳಿತಕ್ಕೊಳಗಾದ ಘಟನೆ ಇತ್ತೀಚೆಗೆ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ. ಪೆಟ್ಟು ತಿಂದ ವ್ಯಕ್ತಿ ತನ್ನ ಮೊದಲ ಪತ್ನಿಯ ಕೈಯಲ್ಲೇ ಸಿಕ್ಕಿ ಬಿದ್ದಿದ್ದಾನೆ.
ವಿವಾಹಿತ ವ್ಯಕ್ತಿ ತನ್ನ ಮೊದಲ ಮದುವೆಯ ಬಗ್ಗೆ ಹುಡುಗಿಯ ಮನೆಯವರಿಗೆ ತಿಳಿಸಿರಲಿಲ್ಲ. ಆದರೂ ಆತನ ಮೊದಲ ಪತ್ನಿ ಮದುವೆಯ ಬಗ್ಗೆ ತಿಳಿದು ಸ್ಥಳಕ್ಕೆ ಸರಿಯಾದ ಸಮಯದಲ್ಲಿ ತಲುಪಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು
ಘಟನೆಯಲ್ಲಿ ಏನಾಗಿತ್ತು?
ಗೋರಖ್‍ಪುರದ ನಿವಾಸಿಯೊಬ್ಬನ ಮದುವೆಯನ್ನು ಒಂದು ವರ್ಷಗಳ ಹಿಂದೆ ನಿಶ್ಚಯಿಸಲಾಗಿತ್ತು. ಡಿಸೆಂಬರ್ 5 ರಂದು ವರ ಮೆರವಣಿಗೆಯೊಂದಿಗೆ ಹುಡುಗಿ ಮನೆಗೆ ತಲುಪಿದ್ದ. ಆದರೆ ಅದೇ ಸಮಯದಲ್ಲಿ ತನ್ನ ಮೊದಲ ಪತ್ನಿ ನಾಲ್ಕು ವರ್ಷದ ಮಗುವಿನೊಂದಿಗೆ ಸ್ಥಳಕ್ಕೆ ಆಗಮಿಸಿದ್ದರು. ಹೆಂಡತಿಯನ್ನು ನೋಡಿದ ತಕ್ಷಣ ವ್ಯಕ್ತಿ ಅಲ್ಲಿಂದ ಓಟಕ್ಕಿತ್ತಿದ್ದಾನೆ.
ವರ ಮದುವೆ ಮಂಟಪದಿಂದ ಓಡಿ ಹೋಗುತ್ತಿದ್ದುದನ್ನು ಕಂಡ ಅತಿಥಿಗಳು ಅವನನ್ನು ಹಿಡಿದು ಥಳಿಸಿದ್ದಾರೆ ಹಾಗೂ ಸ್ಥಳಕ್ಕೆ ಆಗಮಿಸಿದ ಪೊಲೀಸರ ಕೈಗೆ ಒಪ್ಪಿಸಿದ್ದಾರೆ. ವಶಕ್ಕೆ ಪಡೆದ ಪೊಲೀಸರು ವರನನ್ನು ವಿಚಾರಿಸಿದ್ದಾರೆ. ಸ್ಥಳದಲ್ಲಿ ಹಾಜರಿದ್ದ ಆರೋಪಿಯ ಪತ್ನಿ ಆತ 5 ವರ್ಷಗಳ ಹಿಂದೆಯೇ ಎರಡು ಮದುವೆಯಾಗಿದ್ದ ವಿಚಾರವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ನೀವು ಬದಲಾಗದಿದ್ದರೆ ಮುಂದೆ ಎಲ್ಲವೂ ಬದಲಾಗುತ್ತೆ: ಸಂಸದರಿಗೆ ಮೋದಿ ಎಚ್ಚರಿಕೆ
ಆರೋಪಿಗೆ ನಾಲ್ಕು ವರ್ಷದ ಮಗು ಇರುವ ವಿಷಯ ಮಹಿಳೆ ಪೊಲೀಸರಿಗೆ ತಿಳಿಸಿದ್ದು, ಆತ ಮತ್ತೊಂದು ಮದುವೆಯಾಗುತ್ತಿರುವ ವಿಚಾರ ತಿಳಿದ ತಕ್ಷಣ ಮದುವೆಯನ್ನು ತಡೆಯಲು ಸ್ಥಳಕ್ಕೆ ಆಗಮಿಸಿದ್ದಾಗಿ ಹೇಳಿದ್ದಾರೆ. ಸದ್ಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿ ವರನನ್ನು ಬಂಧಿಸಿದ್ದಾರೆ.
ರಾಯಚೂರು: ಪತ್ನಿ ತಂದೆಯ ನಿವೃತ್ತಿ ಹಣಕ್ಕಾಗಿ ಕಿರುಕುಳ ಮಾಡಿ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಗರದ ಅಂದ್ರೂನ್‍ಕಿಲ್ಲಾದಲ್ಲಿ ನಡೆದಿದೆ.
ಆಸ್ಮಾ ಬಾನು ( 30) ಸಾವನ್ನಪ್ಪಿರುವ ಮಹಿಳೆ. ಪತಿ ಫಸಲುದ್ದೀನ್ ಹಾಗೂ ಮನೆಯವರು ಹಣಕ್ಕಾಗಿ ಕಿರುಕುಳ ನೀಡಿ ಕೊಲೆ ಮಾಡಿರುವ ಬಗ್ಗೆ ಆರೋಪಿಸಲಾಗಿದೆ. ಮೃತಳ ತಾಯಿ ಹಾಗೂ ಸಂಬಂಧಿಕರು ಗಂಡನ ಮನೆಯವರ ವಿರುದ್ದ ಆರೋಪಿಸಿದ್ದಾರೆ.
ಹಣಕ್ಕಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಕೊಲೆ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿದೆ. ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿ ಫಸಲುದ್ದೀನ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ಮುಂದುವರೆದಿದೆ. ಇದನ್ನೂ ಓದಿ: ಹತ್ತು ವರ್ಷ ಹಾಸನ ಜಿಲ್ಲೆಗೆ ಎರಡು ಪಕ್ಷಗಳ ಕೊಡುಗೆ ಏನು: ರೇವಣ್ಣ ಪ್ರಶ್ನೆ
ಆಸ್ಮಾ ಹಾಗೂ ಫಸಲುದ್ದೀನ್‍ಗೆ ಮದ್ವೆಯಾಗಿ ಒಂಬತ್ತು ವರ್ಷವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಮೃತ ಆಸ್ಮಾ ಬಾನು ತಂದೆ ಕೆಎಸ್‍ರ್‌ಟಿಸಿ ನಿವೃತ್ತ ನೌಕರ. ತಂದೆಗೆ ಬಂದಿರುವ ನಿವೃತ್ತಿ ಹಣ ತೆಗೆದುಕೊಂಡು ಬರುವಂತೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಅಂತ ಮೃತಳ ಕಡೆಯವರು ಆರೋಪಿಸಿದ್ದಾರೆ. ಘಟನೆ ಹಿನ್ನೆಲೆ ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ರು ಅಪ್ಪು
ಹೈದರಾಬಾದ್: ಬ್ಲೌಸ್ ಸರಿಯಾಗಿ ಹೊಲಿಯಲಿಲ್ಲವೆಂದು ಪತಿಯೊಂದಿಗೆ ಮಹಿಳೆ ಜಗಳವಾಡಿದ್ದಾಳೆ. ಇದೇ ವಿಚಾರವಾಗಿ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಶ್ರೀನಿವಾಸ್ ಪತ್ನಿ ವಿಜಯಲಕ್ಷ್ಮಿ (36) ಮೃತರು. ಬ್ಲೌಸ್ ವಿಚಾರವಾಗಿ ದಂಪತಿ ನಡುವೆ ನಡೆದಿರುವ ಜಗಳ ಪತ್ನಿ ಪ್ರಾಣವನ್ನು ಕಳೆದುಕೊಳ್ಳವ ಮಟ್ಟಿಗೆ ಹೋಗಿದೆ. ಇದನ್ನೂ ಓದಿ:ರಾಜ್ ಕುಟುಂಬದಿಂದ ಗಂಧದಗುಡಿಯ 3ನೇ ಪ್ರಯೋಗ
ದಂಪತಿ ಹೈದರಾಬಾದ್‍ನ ಅಂಬರಪೇಟ್‍ನಲ್ಲಿ ವಾಸವಾಗಿದ್ದರು. ಶ್ರೀನಿವಾಸ್ ಟೈಲರ್ ಆಗಿದ್ದು, ಸೀರೆ ವ್ಯಾಪಾರವನ್ನೂ ಮಾಡುತ್ತಿದ್ದರು. ಶನಿವಾರ ಪತ್ನಿ ವಿಜಯಲಕ್ಷ್ಮಿಗೆ ಬ್ಲೌಸ್ ಹೊಲಿದು ಕೊಟ್ಟಿದ್ದಾರೆ. ಆದರೆ ಆಕೆಗೆ ಬ್ಲೌಸ್ ಇಷ್ಟವಾಗಿರಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಇದನ್ನೂ ಓದಿ:ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್
ಇದೇ ಸಿಟ್ಟಿನಿಂದ ವಿಜಯಲಕ್ಷ್ಮಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಮಧ್ಯಾಹ್ನ 12.30ಕ್ಕೆ ಮಕ್ಕಳು ಶಾಲೆಯಿಂದ ಮನೆಗೆ ಬಂದು ಬಾಗಿಲು ತಟ್ಟಿದರೂ ಆಕೆ ಪ್ರತಿಕ್ರಿಯಿಸಲಿಲ್ಲ. ಆಕೆ ಪತಿ ಶ್ರೀನಿವಾಸ್ ಬಾಗಿಲು ಒಡೆದು ಒಳ ಹೋದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಶ್ರೀನಿವಾಸ್ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಂಬರ್‍ಪೇಟ್ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.