Tag: ಪತಿ

  • ಪತಿ ಸೇವಿಸುವ ಆಹಾರಕ್ಕೆ ಡ್ರಗ್ಸ್ ಸೇರಿಸುತ್ತಿದ್ದ ಪತ್ನಿ ಅರೆಸ್ಟ್

    ಪತಿ ಸೇವಿಸುವ ಆಹಾರಕ್ಕೆ ಡ್ರಗ್ಸ್ ಸೇರಿಸುತ್ತಿದ್ದ ಪತ್ನಿ ಅರೆಸ್ಟ್

    ತಿರುವನಂತಪುರಂ: ಮಹಿಳೆ ತನ್ನ ಪತಿಗೆ 6 ವರ್ಷದಿಂದ ಗಂಡನ ಆಹಾರಕ್ಕೆ ಡ್ರಗ್ಸ್ ಸೇರಿಸುತ್ತಿದ್ದಳು. ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾ ಪಟ್ಟಣದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಆಶಾ (36) ಬಂಧಿತ ಆರೋಪಿಯಾಗಿದ್ದಾಳೆ. ಈಕೆ ಪತಿ ಸತೀಶ್ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿದ್ದಾರೆ.

    ದಂಪತಿ 2006ರಲ್ಲಿ ವಿವಾಹವಾಗಿದ್ದಾರೆ. ಐಸ್ ಕ್ರೀಮ್ ಉದ್ಯಮವನ್ನು ಸತೀಶ್ ಪ್ರಾರಂಭಿಸಿದರು. 2012ರಲ್ಲಿ ದಂಪತಿ ಪಾಲಕ್ಕಾಡ್‍ನಲ್ಲಿ ಸ್ವಂತ ಮನೆಯನ್ನು ಖರೀದಿ ಮಾಡಿದರು. ದಂಪತಿ ಮಧ್ಯೆ ಆಗಾಗಾ ಸಣ್ಣ, ಪುಟ್ಟ ವಿಚಾರಗಳಿಗೆ ಜಗಳವಾಡುತ್ತಿತ್ತು. ಇತ್ತ ಸತೀಶ್‌ಗೆ ಅನಾರೋಗ್ಯವು ಕಾಡುತ್ತಿತ್ತು. ಬಹಳ ಸುಸ್ತಾಗುತ್ತಿತ್ತು, ಹೀಗಾಗಿ ವೈದ್ಯರನ್ನು ಸಂಪರ್ಕಿಸಿದ ವೇಳೆ ಅವರು ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿರುವುದು ಸುಸ್ತಿಗೆ ಕಾರಣವಾಗಿರಬಹುದು ಎಂದು ಸಲಹೆ ನೀಡಿದರು. ಸತೀಶ್ ವೈದ್ಯರು ಕೊಟ್ಟ ಔಷಧವನ್ನು ಸೇವಿಸಿದರೂ ಸತೀಶ್ ಆರೋಗ್ಯ ಸುಧಾರಿಸಲಿಲ್ಲ. ಇದನ್ನೂ ಓದಿ: ಶಾರೂಖ್ ಜೊತೆ ಪ್ರಾರ್ಥನೆ ಮಾಡಿದ್ದು ಪತ್ನಿ ಗೌರಿ ಖಾನ್ ಅಲ್ಲ

    2021ರ ಸೆಪ್ಟೆಂಬರ್ ನಂತರ ಸತೀಶ್ ಮನೆಯ ಆಹಾರವನ್ನು ಊಟ ಮಾಡುವುದನ್ನು ಬಿಟ್ಟರು. ನಂತರ ಅವರ ಆರೋಗ್ಯ ಕ್ರಮೇಣವಾಗಿ ಸುಧಾರಿಸುತ್ತಾ ಬಂದಿದೆ. ಈ ವಿಚಾರವಾಗಿ ಅನುಮಾನಗೊಂಡು ಆಶಾ ತನ್ನ ಆಹಾರಕ್ಕೆ ಯಾವುದಾದರೂ ಔಷಧ ಸೇರಿಸುತ್ತಿದ್ದಾಳೆಯೇ ಎಂದು ಪತ್ತೆ ಹಚ್ಚಲು ಸತೀಶ್ ಸ್ನೇಹಿತನ ಸಹಾಯ ಕೇಳಿದ್ದಾನೆ.

    POLICE JEEP

    ಸತೀಶ್ ಸ್ನೇಹತ ಆಶಾಳವನ್ನು ವಿಚಾರಿಸಿದಾಗ ಆಕೆ ಪತಿಯ ಊಟಕ್ಕೆ ಮಾದಕ ವಸ್ತೂವನ್ನು ಬಳಸುತ್ತಿರುವುದಾಗಿ ಹೇಳಿದ್ದಾಳೆ. ಈ ವಿಚಾರವನ್ನು ತಿಳಿದ ಸತೀಶ್ ಸಿಸಿಟಿವಿ ದೃಶ್ಯಗಳನ್ನು ಇಟ್ಟುಕೊಂಡು ಪೊಲೀಸರಲ್ಲಿ ದೂರು ನೀಡಿದ್ದಾನೆ. ಪತಿ ನೀಡಿದ ದೂರಿನ ಆದಾರದ ಮೇಲೆ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

  • ಹೆಂಡ್ತಿ ಪವರ್, ಗಂಡನ ದರ್ಬಾರ್- ಪತ್ನಿಯ ಅಧಿಕಾರ ದುರ್ಬಳಕೆಗೆ ಗ್ರಾಮಸ್ಥರು ಗರಂ

    ಹೆಂಡ್ತಿ ಪವರ್, ಗಂಡನ ದರ್ಬಾರ್- ಪತ್ನಿಯ ಅಧಿಕಾರ ದುರ್ಬಳಕೆಗೆ ಗ್ರಾಮಸ್ಥರು ಗರಂ

    ಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ಹೆಣ್ಮಕ್ಕಳು ಕೆಲಸ ಮಾಡದಿರೋ ಕ್ಷೇತ್ರವೇ ಇಲ್ಲ. ಪುರುಷರಿಗಿಂತ ನಾವೇನ್ ಕಮ್ಮಿ ಇಲ್ಲ ಅಂತಾ ಸಾಬೀತು ಮಾಡಿ ತೋರ್ಸಿತ್ತಿದ್ದಾರೆ. ಆದರೆ ಇಲ್ಲೊಬ್ಬ ಆಸಾಮಿ ಹೆಂಡ್ತಿ ಅಧಿಕಾರ ದುರುಪಯೋಗಿಸಿಕೊಂಡು ಅಂಧಾದರ್ಬಾರ್ ಮಾಡ್ತಿದ್ದಾನೆ.

    ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಬಿದರೆಕೆರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪ ಮಹಿಳಾ ಮೀಸಲು ಕ್ಷೇತ್ರದಿಂದ ಗೆದ್ದು ಅಧಿಕಾರ ಸ್ವೀಕರಿಸಿದ್ದಾರೆ. ಇಲ್ಲಿ ಹೆಸರಿಗೆ ಮಾತ್ರ ಪುಷ್ಪಾ ಅಧ್ಯಕ್ಷೆ. ಆದರೆ ಅಧಿಕಾರ ಎಲ್ಲಾ ಆಕೆಯ ಪತಿ ಸಚಿನ್‍ರದ್ದೇ. ಗ್ರಾ.ಪಂಚಾಯ್ತಿಯ ಎಲ್ಲಾ ಸಭೆ ಸಮಾರಂಭಗಳಲ್ಲಿ ಈತ ಹೇಳಿದ್ದೇ ವೇದವಾಕ್ಯ. ಮನೆ ಮಂಜೂರು, ಕಾಮಗಾರಿ ವಿಚಾರದಲ್ಲೂ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ತಾರಂತೆ. ಹೀಗಾಗಿ ಅಘೋಷಿತ ಅಧ್ಯಕ್ಷ ಸಚಿನ್ ವಿರುದ್ಧ ಗ್ರಾಮಸ್ಥರು ಕೆಂಡಾಮಂಡಲರಾಗಿದ್ದಾರೆ.

    ಸಚಿನ್ ಅಂಧಾದರ್ಬಾರ್ ಬಗ್ಗೆ ಜಿ.ಪಂ ಸಿಇಒ, ಡಿಸಿ ಗಮನಕ್ಕೂ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ. ಬಿಜೆಪಿ ಶಾಸಕ ಚಂದ್ರಪ್ಪನ ಬೆಂಬಲಿಗ ಅಂತಾ ಅಹಂಕಾರದಲ್ಲಿ ಮೆರೆಯುತ್ತಿದ್ದಾರಂತೆ. ಹೀಗಾಗಿ ಸಚಿನ್ ವರ್ತನೆಯನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಚಿನ್ ದೌರ್ಜನ್ಯಕ್ಕೆ ಬ್ರೇಕ್ ಹಾಕ್ಬೇಕು, ಇಲ್ಲದಿದ್ರೆ ಪುಷ್ಪಾ ಸದಸ್ಯತ್ವ ರದ್ದು ಮಾಡ್ಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಮಾತ್ರವಲ್ಲ, ಬೆಂಗ್ಳೂರಲ್ಲೂ ಅನ್ಯಭಾಷಿಕರ ದರ್ಬಾರ್ – ಪಬ್‍ನಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಹಲ್ಲೆ ಯತ್ನ

    ಒಟ್ಟಿನಲ್ಲಿ ಪತ್ನಿಯ ಅಧಿಕಾರ ದುರ್ಬಳಕೆ ಮಾಡಿಕೊಳ್ತಿರೋ ಸಚಿನ್ ವರ್ತನೆ ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ. ಆದಷ್ಟು ಬೇಗ ಅಂಧಾದರ್ಬಾರ್ ಗೆ ಕಡಿವಾಣ ಹಾಕಿ ನ್ಯಾಯ ಸಿಗ್ಲಿ ಅನ್ನೋದೇ ಎಲ್ಲರ ಬೇಡಿಕೆಯಾಗಿದೆ.

  • ವೈಫ್ ಸ್ವಾಪಿಂಗ್ ದಂಧೆ – ಗಂಡನ ವಿಲಕ್ಷಣ ಬಯಕೆಗೆ ಹೆಂಡತಿಯ ಸಾಥ್

    ವೈಫ್ ಸ್ವಾಪಿಂಗ್ ದಂಧೆ – ಗಂಡನ ವಿಲಕ್ಷಣ ಬಯಕೆಗೆ ಹೆಂಡತಿಯ ಸಾಥ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೈಫ್ ಸ್ವಾಪಿಂಗ್ ದಂಧೆ ಬೆಳಕಿಗೆ ಬಂದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಪತಿ ವಿನಯ್ ಕುಮಾರ್ ಪತ್ನಿಯನ್ನು ಫ್ಯಾಂಟಸಿ ಸೆಕ್ಸ್‌ಗೆ ಬಳಸಲು ಪ್ಲಾನ್ ಮಾಡಿದ್ದ. ವಿನಯ್ ತನ್ನ ಪತ್ನಿ ಇನ್ನೊಬ್ಬನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದನ್ನ ನೋಡಲು ಬಯಸುತ್ತಿದ್ದನಂತೆ. ಅವನ ಈ ವಿಲಕ್ಷಣ ಬಯಕೆಗೆ ಪತ್ನಿಯು ಕೂಡಾ ಸಾಥ್ ನೀಡಿದ್ದಳು. ಇದನ್ನೂ ಓದಿ: 18 ವರ್ಷದಲ್ಲಿಯೇ ಮೊದಲು- ಫೇಸ್‍ಬುಕ್‍ಗೆ ಒಂದೇ ದಿನ 16 ಲಕ್ಷ ಕೋಟಿ ರೂ. ನಷ್ಟ

    ದಂಪತಿಯು ವೈಫ್ ಸ್ವಾಪಿಂಗ್ ದಂಧೆಗೆ ಸಾಮಾಜಿಕ ಜಾಲತಾಣದ ಮೂಲಕ ಸಮಾನ ಮನಸ್ಕರ ಹುಡುಕಾಟ ನಡೆಸಿದ್ದರು. ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಟೆಲಿಗ್ರಾಂ ಖಾತೆ ತೆರೆದು ದಂಧೆಗೆ ಆಹ್ವಾನಿಸುತ್ತಿದ್ದರು. ವಿನಯ್ ಎಲೆಕ್ಟ್ರಾನಿಕ್ ಶಾಪ್ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದನು. ತನ್ನ ಸಹದ್ಯೋಗಿ ಯುವತಿಯನ್ನೇ ಪ್ರೀತಿಸಿ ವಿವಾಹವಾಗಿದ್ದ ಅವನು ಪತ್ನಿಯನ್ನು ಫ್ಯಾಂಟಸಿ ಸೆಕ್ಸ್‌ಗೆ ಬಳಸಲು ಪ್ಲಾನ್ ಮಾಡಿದ್ದನು. ಇದನ್ನೂ ಓದಿ: ಚೀನಾ ಒಲಿಂಪಿಕ್ಸ್‌ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ

    ಬೆಂಗಳೂರು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿನ ಈ ವಿಲಕ್ಷಣ ಆಫರ್ ಕಂಡು ಸಕ್ರಿಯರಾಗಿದ್ದರು. ಈಗಾಗಲೇ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿ ವಿನಯ್‍ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

  • ಪತಿಯನ್ನು ಹರಾಜಿಗಿಟ್ಟು, ಯಾವುದೇ ಕಾರಣಕ್ಕೂ Exchange  ಇಲ್ಲವೆಂದ ಪತ್ನಿ..!

    ಪತಿಯನ್ನು ಹರಾಜಿಗಿಟ್ಟು, ಯಾವುದೇ ಕಾರಣಕ್ಕೂ Exchange ಇಲ್ಲವೆಂದ ಪತ್ನಿ..!

    ವೆಲ್ಲಿಂಗ್ಟನ್: ಐರಿಶ್ ಮಹಿಳೆಯೊಬ್ಬರು ಗಂಡನನ್ನು ಮಾರಾಟಕ್ಕಿಟ್ಟು, ಎಕ್ಸ್​ಚೇಂಜ್ ಇಲ್ಲ ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾಳೆ. ವಿಷಯ ತಿಳಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

    ಐರಿಶ್ ಮಹಿಳೆಯೊಬ್ಬರು ತನ್ನ ಪತಿಯನ್ನು ಹರಾಜು ವೆಬ್‍ನಲ್ಲಿ ‘ಮಾರಾಟ’ ಮಾಡುತ್ತಿದ್ದು, ಇವರನ್ನು ಖರೀದಿಸಿದ ನಂತರ ಯಾವುದೇ ರೀತಿಯಲ್ಲಿ ಎಕ್ಸ್​ಚೇಂಜ್ ಇಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನಲ್ಲಿ ಪತಿಯ ಸಂಪೂರ್ಣ ವಿವರವಿದ್ದು, ನನ್ನ ಪತಿಯ ಹೆಸರು ಜಾನ್, ಎತ್ತರ 6.1, 37 ವರ್ಷ, ಕೃಷಿಕ, ಶೂಟಿಂಗ್ ಮತ್ತು ಮೀನುಗಾರಿಕೆ ಸಹವರ್ತಿ ಎಂದು ಬರೆದಿದ್ದಾರೆ. ಪೋಸ್ಟ್ ನೋಡಿದ ನೆಟ್ಟಿಗರು ಏನಿದು ವಿಚಿತ್ರ ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಜಾನ್‍ನನ್ನು ಖರೀದಿಸಲು ಆಸಕ್ತಿಯನ್ನು ತೋರಿಸಿದ್ದಾರೆ. ಇದನ್ನೂ ಓದಿ: ಕರಡಿ ಬಾಯಿಗೆ 3 ವರ್ಷದ ಮಗಳನ್ನೇ ನೂಕಿದ ತಾಯಿ!

    ಕಾರಣವೇನು?
    ಐರಿಶ್ ಮಹಿಳೆ ಲಿಂಡಾ ಮ್ಯಾಕ್‍ಅಲಿಸ್ಟರ್ ಟ್ರೇಡ್ ಮಿ ಎಂಬ ವೆಬ್ ನಲ್ಲಿ ಪತಿಯನ್ನು ಮಾರಾಟ ಮಾಡಲು ಹೊರಟಿದ್ದಾರೆ. ಜಾನ್ ಮ್ಯಾಕ್‍ಅಲಿಸ್ಟರ್, ನನ್ನನ್ನು ಮತ್ತು ಮಕ್ಕಳನ್ನು ಮನೆಯಲ್ಲೇ ಬಿಟ್ಟು, ಮೀನುಗಾರಿಕೆ ಮಾಡಿ ಎಂದು ಹೇಳಿ ಹೊರಟು ಹೋಗಿದ್ದಾರೆ ಎಂದು ಬರೆದುಕೊಂಡು ಜಾಹೀರಾತು ಕೊಟ್ಟಿದ್ದಾರೆ.

    ಈ ಪಟ್ಟಿಯಲ್ಲಿ ಲಿಂಡಾ, ಜಾನ್ ಬಗ್ಗೆ ಪೂರ್ಣ ವಿವರವನ್ನು ಕೊಟ್ಟಿದ್ದಾರೆ. ಇವರಿಗೆ ಶೂಟಿಂಗ್ ಮತ್ತು ಮೀನುಗಾರಿಕೆಯ ಹಲವು ಮಾಲೀಕರ ಪರಿಚಯವಿದೆ. ಆದರೆ ನೀವು ಇವರನ್ನು ಚೆನ್ನಾಗಿ ನೋಡಿಕೊಂಡರೆ ನಿಮಗೆ ನಿಷ್ಠರಾಗಿರುತ್ತಾರೆ ಎಂದು ಬರೆದುಕೊಂಡಿದ್ದಾರೆ. ಜಾನ್ ಅವರನ್ನು ಖರೀದಿಸಿದ ಮೇಲೆ ಯಾವುದೇ ರಿಟನ್ರ್ಸ್ ಅಥವಾ ವಿನಿಮಯವಿಲ್ಲ ಎಂದು ಜಾಹೀರಾತಿನಲ್ಲಿ ತಿಳಿಸಿದ್ದಾರೆ.

    ಜಾನ್ ಹೆಚ್ಚು ಕೆಲಸದ ಕಡೆಯೇ ಗಮನ ಕೊಡುವುದು ನನ್ನನ್ನು ಕಾಡುತ್ತಿದೆ. ಮಕ್ಕಳಿಗೆ ರಜೆ ಇದ್ದಾಗಲೂ, ಮನೆಯಲ್ಲಿ ಮಲಗಿದ್ದಾಗಲೂ ಅವರು ಕೆಲಸದ ಬಗ್ಗೆಯೇ ಯೋಚಿಸುತ್ತಿರುತ್ತಾರೆ ಎಂದು ಜಾಹೀರಾತಿನಲ್ಲಿ ವಿವರಿಸಿದ್ದಾರೆ. ದಂಪತಿ 2019 ರಲ್ಲಿ ಐರ್ಲೆಂಡ್‍ನಲ್ಲಿ ವಿವಾಹವಾದ್ದು, ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

    ಜಾನ್ ಅವರಿಗೆ ವಿಷಯ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಆದರೆ ಜಾನ್ ಸ್ನೇಹಿತರು, ನಿನ್ನನ್ನು ಲಂಡಾ ಹರಾಜಿಗೆ ಇಟ್ಟಿದ್ದಾಳೆ ಎಂದು ಜಾನ್‍ಗೆ ತಿಳಿಸಿದ್ದಾರೆ. ವಿಷಯ ತಿಳಿದ ಜಾನ್, ಏನಿಂದು ತಮಾಷೆ ಎಂದು ನಕ್ಕಿದ್ದಾರೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ.

    ಲಿಂಡಾ ಅವರ ಪಟ್ಟಿಯಲ್ಲಿ ಜಾನ್ ಬಗ್ಗೆ ಪೂರ್ಣ ವಿವರವಿದ್ದು, ಬಿಡ್ಡಿಂಗ್ ಕೆಲವೇ ಗಂಟೆಗಳಲ್ಲಿ 5,000 ರೂ. ಗೆ ಏರಿತು. ಖರೀದಿದಾರರು ತಮ್ಮ ಗಂಡನಾಗಬಹುದಾದ ಜಾನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕುತೂಹಲ ವ್ಯಕ್ತಪಡಿಸಿದರು. ಜಾನ್ ಅವರಿಗೆ ಯಾವುದದರೂ ದುರ್ಗುಣಗಳಿದೆಯಾ ಎಂದು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆಲ್ಲ ಲಿಂಡಾ ತಾಳ್ಮೆಯಿಂದ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಮುಂದಿನ ವಾರ ಕನ್ನಡಪರ ಸಂಘಟನೆಗಳ ಸಭೆ ಕರೆದ ಹೆಚ್.ಡಿ.ಕುಮಾರಸ್ವಾಮಿ

    ಲಿಂಡಾ ಅವರು ಹರಾಜು ವೆಬ್‍ನ ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟ್ರೇಡ್ ಮಿ ಪೋಸ್ಟ್ ತೆಗೆದುಹಾಕಿದೆ. ಈ ಕುರಿತು ಪ್ರತಿಕ್ರಿಯಿಸಿದ ಟ್ರೇಡ್ ಮಿ ಸಿಬ್ಬಂದಿ, ಸಂಗಾತಿಯನ್ನೆ ಮಾರಾಟಕ್ಕೆ ಇಟ್ಟಿದ್ದು ಇದೇ ಮೊದಲಬಾರಿ. ನಮಗೂ ಇದು ವಿಚಿತ್ರ ಎನ್ನಿಸಿದೆ. ನಾವು ಜನರ ಮಸ್ತಿ-ಮೋಜನ್ನು ಇಷ್ಟಪಡುತ್ತೇವೆ. ಟ್ರೇಡ್ ಮಿ ಮೂಲಕ ಜನರು ಉತ್ತಮ ಅನುಭವವನ್ನು ಪಡೆದುಕೊಂಡಿದ್ದಾರೆ ಎಂದಿದ್ದಾರೆ

  • ಅನೈತಿಕ ಸಂಬಂಧ ಶಂಕೆ- ನೀರು ಅಂತ ಎಣ್ಣೆ ಕಾಯಿಸಿ ಪತ್ನಿ ಮೇಲೆ ಎರಚಿದ್ದವ ಅರೆಸ್ಟ್

    ಅನೈತಿಕ ಸಂಬಂಧ ಶಂಕೆ- ನೀರು ಅಂತ ಎಣ್ಣೆ ಕಾಯಿಸಿ ಪತ್ನಿ ಮೇಲೆ ಎರಚಿದ್ದವ ಅರೆಸ್ಟ್

    ಬೆಂಗಳೂರು: ಅಡುಗೆ ಮನೆಗೆ ಹೋಗಿ ಸ್ನಾನಕ್ಕೆ ನೀರು ಕಾಯಿಸುತ್ತೇನೆ ಎಂದು ಎಣ್ಣೆ ಕಾಯಿಸಿ ಪತ್ನಿಯ ಮೇಲೆ ಎರಚಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಥಾಮಸ್ ಎಂದು ಗುರುತಿಸಲಾಗಿದ್ದು, ಈತನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಜನವರಿ 30 ರಂದು ಆಡುಗೋಡಿಯ ಎಲ್ ಆರ್ ನಗರದಲ್ಲಿ ಹೆಂಡತಿ ಅಂಥೋಣಿಯಮ್ಮ ಮೇಲೆ ಥಾಮಸ್ ಬಿಸಿ ಎಣ್ಣೆ ಸುರಿದಿದ್ದನು.

    ಅನೈತಿಕ ಸಂಬಂಧ ಇದೆ ಎಂದು ಪತ್ನಿಯ ಮೇಲೆ ಥಾಮಸ್ ಸಂಶಯ ಪಟ್ಟಿದ್ದನು. ಇದೇ ವಿಚಾರವಾಗಿ ಪತ್ನಿಯೊಂದಿಗೆ ಗಲಾಟೆ ಕೂಡ ಮಾಡಿದ್ದನು. ಅಲ್ಲದೆ ದೊಣ್ಣೆಯಿಂದ ಹಲ್ಲೆ ನಡೆಸಿ ಮೂರ್ಛೆ ತಪ್ಪಿಸಿದ್ದನು. ನಂತರ ಅಡುಗೆ ಮನೆಗೆ ಹೋಗಿ ಸ್ನಾನಕ್ಕೆ ನೀರು ಕಾಯಿಸುತ್ತೇನೆ ಎಂದು ಎಣ್ಣೆ ಕಾಯಿಸಿದ್ದ. ಎಣ್ಣೆ ಕುದಿಯುತ್ತಿದ್ದಂತೆಯೇ ಅದನ್ನು ಪತ್ನಿ ಮೇಲೆ ಎರಚಿದ್ದ.

    ಹೆಂಡತಿ ಮುಖ, ಎದೆ, ಹೊಟ್ಟೆ, ಕಾಲು ಹಾಗೂ ಕೈಗಳ ಮೇಲೆ ಎಣ್ಣೆ ಸುರಿದಿದ್ದ. ಇತ್ತ ಅಮ್ಮನ ಮೇಲೆ ಎಣ್ಣೆ ಎರಚಿದಾಗ ಅಡ್ಡ ಬಂದ ಮಗಳ ಮೇಲೂ ಎಣ್ಣೆ ಚೆಲ್ಲಿದೆ. ಸದ್ಯ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಗಾಯಾಳು ಅಂಥೋಣಿಯಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಹಾಸ್ಟೆಲ್‍ಗೆ ಟ್ರಾವೆಲ್ ಬ್ಯಾಗ್‍ನಲ್ಲಿ ಯುವತಿಯನ್ನು ಕರೆತಂದ ಪ್ರಿಯಕರ – ವೀಡಿಯೋ ಮಣಿಪಾಲದ್ದಲ್ಲ

  • ಅಕ್ರಮ ಸಂಬಂಧ ಶಂಕೆ – ಪತ್ನಿಗೆ ಸಿಲಿಂಡರ್‌ನಿಂದ ಹೊಡೆದು ಹತ್ಯೆಗೈದ ಪತಿ

    ಅಕ್ರಮ ಸಂಬಂಧ ಶಂಕೆ – ಪತ್ನಿಗೆ ಸಿಲಿಂಡರ್‌ನಿಂದ ಹೊಡೆದು ಹತ್ಯೆಗೈದ ಪತಿ

    ನವದೆಹಲಿ: ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ 26 ವರ್ಷದ ವ್ಯಕ್ತಿಯೋರ್ವ ಕುಕ್ಕರ್ ಹಾಗೂ ಸಿಲಿಂಡರ್‍ನಿಂದ ಹೊಡೆದು ಹತ್ಯೆಗೈದಿರುವ ಘಟನೆ ಆಗ್ನೇಯ ದೆಹಲಿಯ ತುಘಲಕಾಬಾದ್ ಎಕ್ಸ್‌ಟೆನ್ಶನ್ ಏರಿಯಾದಲ್ಲಿ ನಡೆದಿದೆ.

    ಆರೋಪಿಯನ್ನು ತುಘಲಕಾಬಾದ್ ಎಕ್ಸ್‌ಟೆನ್ಶನ್ ನಿವಾಸಿ ಹಾಸಿಂ ಖಾನ್ ಎಂದು ಗುರುತಿಸಲಾಗಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆ ಡ್ಯಾನ್ಸ್ ಕಾರ್ಯಕ್ರಮಕ್ಕೆ ಹೋಗಿದ್ದು, ನನ್ನ ಜೀವನದ ಮರೆಯಲಾಗದ ಕ್ಷಣ: ಅಲ್ಲು ಅರ್ಜುನ್

    ಹಾಸಿಂ ಖಾನ್ ಮುಂಜಾನೆ ಗೋವಿಂದಪುರಿ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ಹೆಂಡತಿಯನ್ನು ಕೊಂದಿರುವುದಾಗಿ ತಿಳಿಸಿದ್ದಾರೆ. ನಂತರ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದಾಗ ಪತ್ನಿ ಶಾಹೀನ್ ಖಾನ್ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿರುವುದು ಕಂಡು ಬಂದಿದೆ.

    ಸಲ್ಮಾನ್ ಎಂಬಾತನೊಂದಿಗೆ ಶಾಹೀನ್ ಖಾನ್ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆರೋಪಿ ಆಕೆಯ ತಲೆಗೆ ಕುಕ್ಕರ್ ಹಾಗೂ ಸಿಲಿಂಡರ್‌ನಿಂದ ಹೊಡೆದಿದ್ದಾನೆ. ಇದೀಗ ಪೊಲೀಸರು ಕುಕ್ಕರ್ ಹಾಗೂ ಸಿಲಿಂಡರ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    POLICE JEEP

    2018ರ ಜೂನ್‍ನಲ್ಲಿ ಹಾಸಿಮ್ ಮತ್ತು ಶಾಹೀನ್ ವಿವಾಹವಾಗಿದ್ದರು. ಅವರಿಗೆ ಮಕ್ಕಳಿರಲಿಲ್ಲ ಮತ್ತು ಆರೋಪಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೇವೇಂದ್ರ ಫಡ್ನವೀಸ್ ಮೂಲಕ ಮಂತ್ರಿಗಿರಿಗೆ ರಮೇಶ್ ಜಾರಕಿಹೊಳಿ ಲಾಬಿ

  • 3ನೇ ಪತಿಗೆ ನಿಷ್ಠೆ ತೋರಿಸಲು 2ನೇ ಪತಿಯಿಂದ ಪಡೆದ ಮಗುವನ್ನು ಸುಟ್ಟು ಹಾಕಿದ್ಳು!

    3ನೇ ಪತಿಗೆ ನಿಷ್ಠೆ ತೋರಿಸಲು 2ನೇ ಪತಿಯಿಂದ ಪಡೆದ ಮಗುವನ್ನು ಸುಟ್ಟು ಹಾಕಿದ್ಳು!

    ಚೆನ್ನೈ: 3ನೇ ಪತಿಗೆ ನಿಷ್ಠೆ ತೋರಿಸಲು ಪತ್ನಿಯೊಬ್ಬಳು 2ನೇ ಪತಿಯಿಂದ ಪಡೆದುಕೊಂಡಿದ್ದ ಮಗುವನ್ನು ಸುಟ್ಟು ಹಾಕಿದ ಅಮಾನುಷ ಘಟನೆ ಚೆನ್ನೈನಲ್ಲಿ ನಡೆದಿದೆ.

    3ನೇ ಪತಿ, ನೀನು ನನಗೆ ನಿಷ್ಠೆ ತೋರಿಸುವುದಾದ್ರೆ ನಿನ್ನ ಮಗಳನ್ನು ಸುಟ್ಟು ಹಾಕು ಎಂದು ಹೇಳಿದ್ದಾನೆ. ಅದಕ್ಕೆ ಪತ್ನಿ ತನ್ನ 10 ವರ್ಷದ ಹೆಣ್ಣು ಮಗುವನ್ನು ಬೆಂಕಿಯಲ್ಲಿ ಸುಟ್ಟು ಹಾಕಿದ್ದಾಳೆ. ನೆರೆಮನೆಯವರು ಬಾಲಕಿಯ ಕಿರುಚಾಟ ಕೇಳಿಸಿಕೊಂಡು ಸ್ಥಳಕ್ಕೆ ಓಡಿ ಬಂದಿದ್ದಾರೆ. ತಕ್ಷಣ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬಾಲಕಿ 75% ಸುಟ್ಟು ಹೋಗಿದ್ದ ಕಾರಣ ಸೋಮವಾರ ಬೆಳಗ್ಗೆ ಸಾವನ್ನಪ್ಪಿದ್ದಾಳೆ. ಘಟನೆ ಬೆಳಕಿಗೆ ಬರುತ್ತಿದಂತೆ ತಾಯಿ ಮತ್ತು ಮಲತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರಿಬ್ಬರನ್ನು ಕಟ್ಟಿ ಹಾಕಿ ನಗದು, ಚಿನ್ನ ದೋಚಿದ ಖದೀಮರು

    ಏನಿದು ಘಟನೆ?: 5ನೇ ತರಗತಿ ವಿದ್ಯಾರ್ಥಿನಿ ಪವಿತ್ರಾ ತನ್ನ ತಾಯಿ ಜಯಲಕ್ಷ್ಮಿ (38) ಮತ್ತು ಮಲತಂದೆ ಪದ್ಮನಾಭನ್ ಅವರೊಂದಿಗೆ ವಾಸಿಸುತ್ತಿದ್ದಳು. ಜಯಲಕ್ಷ್ಮಿ 19 ವರ್ಷದವಳಿದ್ದಾಗ ಮೊದಲು ಪಾಲ್ವಣ್ಣನ್ ಅವರನ್ನು ವಿವಾಹವಾಗಿದ್ದಳು. ಆದರೆ ಆತನನ್ನು ಬಿಟ್ಟು ಅವನ ಕಿರಿಯ ಸಹೋದರ ದುರೈರಾಜ್ ಜೊತೆ ಓಡಿ ಹೋಗಿ ವಿವಾಹವಾದಳು. ಇಬ್ಬರೂ ಮುಂಬೈನಲ್ಲಿ ವಾಸಿಸುತ್ತಿದ್ದರು. ಅಲ್ಲಿ ಜಯಲಕ್ಷ್ಮಿ ಪವಿತ್ರಾಗೆ ಜನ್ಮ ನೀಡಿದಳು.

    ಜಯಲಕ್ಷ್ಮಿ, ದುರೈರಾಜ್ ಅವರನ್ನು ಬಿಟ್ಟು ಮಗು ಜೊತೆಗೆ ಚೆನ್ನೈಗೆ ಮರಳಿದ್ದು, ತಿರುವೊಟ್ಟಿಯೂರಿನಲ್ಲಿ ನೆಲೆಸಿದಳು. ನಂತರ ಟ್ಯಾಂಕರ್ ಡ್ರೈವರ್ ಪದ್ಮನಾಭನ್ ಜೊತೆ ಸ್ನೇಹ ಬೆಳೆಸಿದಳು. ಈತನಿಗೆ 9 ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ವಿಚ್ಛೇದನ ಪಡೆದುಕೊಂಡಿದ್ದನು. ಆತನಿಗೂ ಇಬ್ಬರು ಮಕ್ಕಳಿದ್ದರು. ಆದರೂ ಜಯಲಕ್ಷ್ಮಿ ಆತನೊಂದಿಗೆ ಜೀವನ ನಡೆಸುತ್ತಿದ್ದಳು. ಆದರೆ ಪದ್ಮನಾಭನ್ ಆಗಾಗ್ಗೆ ಕುಡಿದು ಬಂದು ಜಯಲಕ್ಷ್ಮಿಯೊಂದಿಗೆ ಜಗಳವಾಡುತ್ತಿದ್ದ. ಅದು ಅಲ್ಲದೇ ಆಕೆಯ ನಿಷ್ಠೆಯನ್ನು ಶಂಕಿಸುತ್ತಿದ್ದನು. ಇದನ್ನೂ ಓದಿ: ಕಳ್ಳಮಾರ್ಗದ ಮೂಲಕ ರಾಜ್ಯಪ್ರವೇಶಕ್ಕೆ ಯತ್ನ – ಖಾಸಗಿ ಬಸ್‍ಗಳ ವಿರುದ್ಧ ಪ್ರಕರಣ ದಾಖಲು

    ಈ ಪರಿಣಾಮ ಭಾನುವಾರ ರಾತ್ರಿ, ಪದ್ಮನಾಭನ್ ಆಕೆಯ ನಿಷ್ಠೆಯನ್ನು ಪ್ರಶ್ನಿಸಿದ್ದು, ಪವಿತ್ರಾಳನ್ನು ಸುಟ್ಟು ಹಾಕು ಎಂದು ಹೇಳುತ್ತಾನೆ. ಅದಕ್ಕೆ ಜಯಲಕ್ಷ್ಮಿ ತನ್ನ ಮಗಳನ್ನು ಸೀಮೆಎಣ್ಣೆ ಸುರಿದು ಬೆಂಕಿ ಇಡುತ್ತಾಳೆ. ಬಾಲಕಿಯ ಕಿರುಚಾಟ ಕೇಳಿ ನೆರೆಹೊರೆಯವರು ಮನೆಗೆ ಧಾವಿಸಿದ್ದು, ಬೆಂಕಿ ನಂದಿಸಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಪವಿತ್ರಾ 75% ಸುಟ್ಟ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

  • ಇನ್‍ಸ್ಟಾದಲ್ಲಿ ತಲಾಖ್ ಘೋಷಿಸಿದ ಪತಿ ವಿರುದ್ಧ ಪತ್ನಿ ದೂರು

    ಇನ್‍ಸ್ಟಾದಲ್ಲಿ ತಲಾಖ್ ಘೋಷಿಸಿದ ಪತಿ ವಿರುದ್ಧ ಪತ್ನಿ ದೂರು

    ಗಾಂಧೀನಗರ: ಇನ್‍ಸ್ಟಾಗ್ರಾಮ್‍ನಲ್ಲಿ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಆರೋಪದಡಿ 28 ವರ್ಷದ ವ್ಯಕ್ತಿ ಮೇಲೆ ಗುಜರಾತ್ ಪೊಲೀಸರು ದೂರು ದಾಖಲಿಸಿದ್ದಾರೆ.

    ಗುಜರಾತ್‍ನ ಆನಂದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬುಧವಾರ ಮಹಿಳೆ ಪೊಲೀಸರಿಗೆ ದೂರು ನೀಡಿದ ಬಳಿಕ ವಿಷಯ ಬೆಳಕಿಗೆ ಬಂದಿದೆ. ಮಹಿಸಾಗರ್ ಜಿಲ್ಲೆಯ ದೇಬಾರ್ ಗ್ರಾಮದ ವ್ಯಕ್ತಿ 2019ರ ನವೆಂಬರ್‌ನಲ್ಲಿ ಆನಂದ್ ಜಿಲ್ಲೆಯ ಉಮ್ರೆತ್ ತಾಲೂಕಿನ 27 ವರ್ಷದ ಮಹಿಳೆಯನ್ನು ವಿವಾಹವಾಗಿದ್ದನು. ಇದನ್ನೂ ಓದಿ: IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್

    ಗಂಡ, ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಜುಲೈನಲ್ಲಿ ಮಹಿಳೆಗೆ ತಲಾಖ್ ನೀಡುವಂತೆ ಹೇಳಿ ಆಕೆಯನ್ನು ಗಂಡನ ಮನೆಯಿಂದ ಹೊರಗೆ ಹಾಕಲಾಗಿದೆ. ಬಳಿಕ ಮಹಿಳೆ ತನ್ನ ಪೋಷಕರ ಮನೆಗೆ ಹಿಂದಿರುಗಿ ವಾಸಿಸುತ್ತಿದ್ದಳು. ಆದರೆ ಈ ವೇಳೆ ಮಹಿಳೆಗೆ ತ್ರಿವಳಿ ತಲಾಖ್ ವಿರುದ್ಧ ಜಾರಿಯಾಗಿರುವ ಕಾನೂನಿನ ಬಗ್ಗೆ ತಿಳಿದಿರಲಿಲ್ಲ. ಹಾಗಾಗಿ ಆಗ ದೂರು ನೀಡಿರಲಿಲ್ಲ.

    ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪತಿಯ ಚಟುವಟಿಕೆಯನ್ನು ಪರಿಶೀಲಿಸಲು ಇನ್‍ಸ್ಟಾಗ್ರಾಮ್‍ನಲ್ಲಿ ಫೇಕ್ ಪ್ರೊಫೈಲ್ ಕ್ರಿಯೆಟ್ ಮಾಡಿ ಮಾತನಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಈ ಪ್ರೊಫೈಲ್ ಹಿಂದೆ ತನ್ನ ಪತ್ನಿ ಇದ್ದಾಳೆ ಎಂಬುವುದನ್ನು ತಿಳಿದು ವ್ಯಕ್ತಿ ಮತ್ತೊಮ್ಮೆ ತ್ರಿವಳಿ ತಲಾಖ್ ಉಚ್ಚರಿಸಿದ್ದಾನೆ. ಇದನ್ನೂ ಓದಿ: ಹೂ ಕಟ್ಟುತ್ತಿದ್ದ ಯುವತಿ ಈಗ ಪಿಎಸ್‍ಐ..!

    ನಂತರ ಈ ಕುರಿತಂತೆ ಮಹಿಳೆ ಕುಟುಂಬಕ್ಕೆ ಮಾಹಿತಿ ನೀಡಿ, ದೂರು ದಾಖಲಿಸಲು ಪೊಲೀಸ್ ಠಾಣೆಯ ಮೆಟ್ಟಿಲೇರಿರುವುದಾಗಿ ಚೇತನ್ ಸಿಂಗ್ ರಾಥೋಡ್ ಹೇಳಿದ್ದಾರೆ. ಇದೀಗ ಈ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಸೋದರಮಾವನ ಜೊತೆ ಸೇರಿ ಪತಿಯನ್ನೇ ಕೊಂದಳು!

    ಸೋದರಮಾವನ ಜೊತೆ ಸೇರಿ ಪತಿಯನ್ನೇ ಕೊಂದಳು!

    ಮುಂಬೈ: ಪತಿಯ ಕುಡಿತದಿಂದ ಬೇಸತ್ತು ಪತ್ನಿ ಸೋದರಮಾವನ ಸಹಾಯದಿಂದ ಕೊಲೆ ಮಾಡಿದ ಘಟನೆಯೊಂದು ಪುಣೆಯಲ್ಲಿ ಬೆಳಕಿಗೆ ಬಂದಿದೆ.

    ಮೃತ ವ್ಯಕ್ತಿಯನ್ನು ಕಪ್ತಾನ್‍ಸಿಂಗ್ ನಾಯಕ್(37) ಎಂದು ಗುರುತಿಸಲಾಗಿದೆ. ಅಂಜಲಿ ಚವ್ಹಾಣ್ ನಾಯಕ್(32) ಮತ್ತು ಸೋದರಮಾವ ಗಜೇಂದ್ರ ಚಿತ್ತಾರಸಿಂಗ್ ನಾಯಕ್(36) ಸೇರಿ ಕಪ್ತಾನ್‍ಸಿಂಗ್ ನಾಯಕ್‍ನನ್ನು ಕೊಂದಿದ್ದಾರೆ. ಪ್ರಸ್ತುತ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಎಂದಿಗೂ ಮನೆಗೆ ಬಾರದ ಮಾಲಕಿಗಾಗಿ ಕಾಯುತ್ತಿರುವ ನಾಯಿ – ವೀಡಿಯೋ ವೈರಲ್!

    POLICE JEEP

    ಕಾರಣವೇನು?
    ಕಪ್ತಾನ್‍ಸಿಂಗ್ ಮತ್ತು ಅವರ ಪತ್ನಿ ಅಂಜಲಿ ಚವ್ಹಾಣ್-ನಾಯಕ್ ಮುಂಡ್ವಾದ ಕೇಶವನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮೃತ ವ್ಯಕ್ತಿ ದೆಹಲಿ ಮೂಲದವರಾಗಿದ್ದು, ಪುಣೆಯಲ್ಲಿ ವಾಸವಾಗಿದ್ದರು. ಕಪ್ತಾನ್‍ಸಿಂಗ್ ದಿನಗೂಲಿ ಕೆಲಸ ಮಾಡುತ್ತಿದ್ದು, ಕುಡಿತದ ಚಟ ಇತ್ತು.

    ಅಲ್ಲದೆ ಕುಡಿದು ಬಂದು ದಿನನಿತ್ಯ ಅಂಜಲಿ ಮೇಲೆ ಹಲ್ಲೆ ಮಾಡುತ್ತಿದ್ದ. ಇದರಿಂದ ಬೇಸತ್ತ ಅಂಜಲಿ ಭಾನುವಾರ ಮಧ್ಯಾಹ್ನ, ತನ್ನ ಸಹೋದರಿಯ ಪತಿಯಿಂದ ಸಹಾಯ ಕೇಳಿದ್ದಾಳೆ. ಈ ಸಂಬಂಧ ಇಬ್ಬರು ಸೇರಿ ತಮ್ಮ ಮನೆಯಲ್ಲೇ ಕಪ್ತಾನ್ ಸಿಂಗ್‍ನನ್ನು ಹೊಡೆದು ಕೊಂದಿದ್ದಾರೆ. ಇದನ್ನೂ ಓದಿ: ಪಿಂಚಣಿ ಪಡೆಯಲು ಚಿಕ್ಕಪ್ಪನ ಶವವನ್ನ ಪೋಸ್ಟ್ ಆಫೀಸ್‍ಗೇ ತಂದ!

    ಮುಂಡ್ವಾ ಪೊಲೀಸ್ ಠಾಣೆಯ ಪೊಲೀಸರಿಗೆ ಈ ಮಾಹಿತಿ ತಿಳಿದ ತಕ್ಷಣ ಇಬ್ಬರನ್ನು ಬಂಧಿಸಿದ್ದಾರೆ. ಪ್ರಸ್ತುತ ಇವರಿಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302(ಕೊಲೆ) ಮತ್ತು 34 ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

  • ಗಂಡನ ಕಿರುಕುಳ ತಾಳಲಾರದೇ ಗರ್ಭಿಣಿ ಆತ್ಮಹತ್ಯೆ

    ಗಂಡನ ಕಿರುಕುಳ ತಾಳಲಾರದೇ ಗರ್ಭಿಣಿ ಆತ್ಮಹತ್ಯೆ

    ರಾಮನಗರ: ಗಂಡನ ಕಿರುಕುಳ ತಾಳಲಾರದೇ ತವರು ಮನೆಯಲ್ಲಿ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದ ಮಂಜುನಾಥನಗರ ಬಡಾವಣೆಯಲ್ಲಿ ನಡೆದಿದೆ.

    ಮೃತ ಗರ್ಭಿಣಿಯನ್ನು ಜಾನ್ಹವಿ (23) ಎಂದು ಗುರುತಿಸಲಾಗಿದ್ದು, ಇವರು 5 ತಿಂಗಳ ಗರ್ಭಿಣಿಯಾಗಿದ್ದರು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಕರ್ಣ ಅವರ ಜೊತೆ 9 ತಿಂಗಳ ಹಿಂದೆ ಜಾನ್ಹವಿ ವಿವಾಹವಾಗಿದ್ದರು. ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದ ಬುದ್ಧದೇವ್ ಭಟ್ಟಾಚಾರ್ಯ

    ಜಾನ್ಹವಿಗೆ ಪ್ರತಿನಿತ್ಯ ಪತಿ ಕರ್ಣ ಹೊಡೆದು ಬಡೆದು ಚಿತ್ರ ಹಿಂಸೆ ನೀಡುತ್ತಿದ್ದನು. ಹೀಗಾಗಿ ಹಿಂಸೆ ತಾಳಲಾಗದೇ ಒಂದು ತಿಂಗಳ ಹಿಂದೆ ಜಾನ್ಹವಿ ತವರು ಮನೆಗೆ ಬಂದಿದ್ದಳು. ಆದರೂ ಫೋನ್ ಮಾಡಿ ಜಾನ್ಹವಿಗೆ ಹಿಂಸೆ ನೀಡುತ್ತಿದ್ದ, ಈ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ಯಾರೂ ಇಲ್ಲದ ವೇಳೆ ಜಾನ್ಹವಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಘಟನೆ ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಇದೀಗ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೆದ್ದಾರಿಯನ್ನು ಅಡವಿಟ್ಟು ಸಾಲ ಪಡೆದ ಪಾಕಿಸ್ತಾನ