Tag: ಪತಿ

  • ಪ್ರಿಯತಮನ ಕೊಲೆ ಮಾಡಿದ ಪ್ರಿಯತಮೆ – 7 ವರ್ಷದ ಬಳಿಕ ಅರೆಸ್ಟ್!

    ಪ್ರಿಯತಮನ ಕೊಲೆ ಮಾಡಿದ ಪ್ರಿಯತಮೆ – 7 ವರ್ಷದ ಬಳಿಕ ಅರೆಸ್ಟ್!

    ಬೆಂಗಳೂರು: ಅಕ್ರಮ ಸಂಬಂಧವನ್ನು ಮುಂದುವರೆಸುವಂತೆ ಒತ್ತಾಯ ಮಾಡುತ್ತಿದ್ದ ಪ್ರಿಯಕರನ ಕೊಂದು ಹೆಣವನ್ನು ಸಾಗಿಸಿದ್ದ ದಂಪತಿಯನ್ನು ಏಳು ವರ್ಷದ ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

    2015 ರ ಮರ್ಡರ್ ಮಿಸ್ಟರಿ ಕಥೆ!
    ಪತಿ ಮಹಮ್ಮದ್ ಗೌಸ್, ಪತ್ನಿ ಕೌಸರ್ ಸೇರಿ ಪ್ರಿಯತಮ ವಜೀರ್‍ನನ್ನು ಕೊಲೆ ಮಾಡಿದ್ದರು. 2015ರ ಮೇ 13 ರಂದು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಹೆಗ್ಗನಹಳ್ಳಿಯ ಮನೆಯಲ್ಲಿ ದಂಪತಿ ಸೇರಿ ವಜೀರ್ ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: ಮತ್ತೆ ಕ್ಲೋಸ್ ಆಯ್ತು ಫ್ಲೈಓವರ್ – ಕಳಪೆ ಕಾಮಗಾರಿ ಎಂದ ತಜ್ಞರು

    ಮೃತ ವಜೀರ್ ಜೊತೆ ಕೌಸರ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಕೌಸರ್, ವಜೀರ್ ಜೊತೆ ಸಂಬಂಧವನ್ನು ಬಿಟ್ಟು ತನ್ನ ಪತಿ ಜೊತೆ ಇರೋದಕ್ಕೆ ಇಚ್ಚಿಸಿದ್ಲು. ಆದ್ರೆ, ವಜೀರ್ ಗೆ ಕೌಸರ್ ಬಿಟ್ಟುಕೊಡೋಕೆ ಇಷ್ಟ ಇರಲಿಲ್ಲ. ಈ ವಿಚಾರವಾಗಿ ಇವರಿಬ್ಬರ ನಡುವೆ ಪದೇ-ಪದೇ ಗಲಾಟೆಯಾಗುತ್ತಿತ್ತು.

    ಈ ಪರಿಣಾಮ ಪತಿ ಗೌಸ್ ಜೊತೆ ಸೇರಿ ಪ್ರಿಯತಮನ ಕೊಲೆಗೆ ಕೌಸರ್ ಸ್ಕೇಚ್ ಹಾಕಿದ್ದಳು. ಅದಕ್ಕೆ 2015 ಮೇ 13 ರಂದು ವಜೀರ್‍ನನ್ನು ಮನೆಗೆ ಕರೆಯಿಸಿಕೊಂಡಿದ್ದಾಳೆ. ವಜೀರ್ ಮನೆಗೆ ಬಂದಾಗ ಗೌಸ್ ಮಂಚದ ಕೆಳಗೆ ಅವಿತು ಕುಳಿತಿದ್ದು, ಮನೆ ಆತ ಬರ್ತಿದ್ದಂತೆ ವೇಲ್ ನಲ್ಲಿ ಕೌಸರ್ ಕತ್ತು ಬಿಗಿದಿದ್ದಾಳೆ. ನಂತರ ದಂಪತಿ ಸೇರಿ ವಜೀರ್ ಕತ್ತು ಬಿಗಿದು ಕೊಲೆ ಮಾಡಿದ್ರು.

    ಪ್ರಿಯತಮನ ಬೈಕ್‍ನಲ್ಲೇ ಹೆಣ ಪ್ಯಾಕ್!
    ಕೊಲೆ ಮಾಡಿದ ದಂಪತಿ ವಜೀರ್ ಬೈಕ್‍ನಲ್ಲೇ ಹೆಣ ಪ್ಯಾಕ್ ಮಾಡಿ ಸಾಗಿಸಿದ್ದಾರೆ. ನಂತರ ಈ ಇಬ್ಬರು ಆಂಧ್ರದ ಪಾಲಸಮುದ್ರಕ್ಕೆ ಶವವನ್ನು ಎಸೆದು ಅಲ್ಲಿಂದ ಎಸ್ಕೇಪ್ ಆಗಿದ್ರು. ಇದನ್ನೂ ಓದಿ:  ಪೊಲೀಸ್ ಪೇದೆ ದಾಂಪತ್ಯದಲ್ಲಿ ಕಲಹ – ಪತ್ನಿ ಆತ್ಮಹತ್ಯೆ

    ವಜೀರ್ ಕುಟುಂಬದವರು ಕಾಮಾಕ್ಷಿಪಾಳ್ಯದಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ್ದು, ಆತನನ್ನು ಪೊಲೀಸರು ಹುಡುಕುತ್ತಿದ್ದರು. ಇತ್ತೀಚಿಗಷ್ಟೆ ಬೆಂಗಳೂರು ಹೆಗ್ಗನಹಳ್ಳಿಗೆ ಬಂದಿದ್ದ ಗೌಸ್ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ನಂತರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಮಾಡುತ್ತಿದ್ದಂತೆ ಕೊಲೆ ರಹಸ್ಯ ಬಯಲಾಗಿದೆ. ಬಳಿಕ ಗಂಡ-ಹೆಂಡತಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

  • ಪೊಲೀಸ್ ಪೇದೆ ದಾಂಪತ್ಯದಲ್ಲಿ ಕಲಹ – ಪತ್ನಿ ಆತ್ಮಹತ್ಯೆ

    ಪೊಲೀಸ್ ಪೇದೆ ದಾಂಪತ್ಯದಲ್ಲಿ ಕಲಹ – ಪತ್ನಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡ-ಹೆಂಡತಿ ಜಗಳವಾಡಿದ್ದು, ಪರಿಣಾಮ ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಣಕನೂರು ಗ್ರಾಮದಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆ ಸುರೇಂದ್ರ ಅವರ ಪತ್ನಿ ಸ್ನೇಹಾ(25) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುದ್ದಿ ತಿಳಿದ ತಕ್ಷಣ ಸುರೇಂದ್ರ ಸಹ ಚಾಕುವಿನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಸ್ತುತ ಸುರೇಂದ್ರ ಅವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದನ್ನೂ ಓದಿ: ಪುಟ್ಟ ಕಂದಮ್ಮನೊಂದಿಗೆ ಪತಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ ಪತ್ನಿ..!

    ಸ್ನೇಹಾ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿಲಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಮೃತಳ ಪೋಷಕರು ಹಾಗೂ ಸಂಬಂಧಿಕರ ಆಗಮನಕ್ಕಾಗಿ ಕಾದಿದ್ದು, ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ.

  • ಪುಟ್ಟ ಕಂದಮ್ಮನೊಂದಿಗೆ ಪತಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ ಪತ್ನಿ..!

    ಪುಟ್ಟ ಕಂದಮ್ಮನೊಂದಿಗೆ ಪತಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ ಪತ್ನಿ..!

    ರಾಯ್‍ಪುರ: ಮಾವೋವಾದಿಗಳು ಅಪಹರಿಸಿದ ಪತಿಯನ್ನು ಹುಡುಕುತ್ತಾ ಪತ್ನಿ ತನ್ನ ಎರಡೂವರೆ ವರ್ಷದ ಮಗಳೊಂದಿಗೆ ಅರಣ್ಯಕ್ಕೆ ಹೋಗಿರುವ ಭಾವನಾತ್ಮಕ ಘಟನೆ ರಾಯ್‍ಪುರದಲ್ಲಿ ನಡೆದಿದೆ.

    ಛತ್ತೀಸ್‍ಗಢದಲ್ಲಿ ತನ್ನ ಎಂಜಿನಿಯರ್ ಪತಿ ಅಶೋಕ್ ಅವರನ್ನು ಮಾವೋವಾದಿಗಳು ಅಪಹರಿಸಿದ ಕೆಲವು ದಿನಗಳ ನಂತರ, ಪತ್ನಿ ಸೋನಾಲಿ ಪವಾರ್, ಅವರನ್ನು ಬಿಡುಗಡೆ ಮಾಡುವಂತೆ ಭಾವನಾತ್ಮಕ ಮನವಿ ಮಾಡಿಕೊಂಡಿದ್ದರು. ಆದರೆ ಕೊನೆಗೂ ಅವರನ್ನು ಕಿಡಿಗೇಡಿಗಳು ಬಿಡುಗಡೆ ಮಾಡಿಲ್ಲ. ಪರಿಣಾಮ ತನ್ನ ಅಪ್ರಾಪ್ತ ಮಗಳೊಂದಿಗೆ ಸೋನಾಲಿ ಅವರು ಮಾವೋವಾದಿಗಳ ದಟ್ಟವಾದ ಅಬುಜ್ಮದ್ ಅರಣ್ಯಕ್ಕೆ ಪ್ರಯಾಣಿಸಿದ್ದಾರೆ.

    ಮಂಗಳವಾರ ಸಂಜೆ ಎಂಜಿನಿಯರ್ ಅಶೋಕ್ ಪವಾರ್ ಮತ್ತು ಕೆಲಸಗಾರ ಆನಂದ್ ಯಾದವ್ ಅವರನ್ನು ಮಾವೋವಾದಿಗಳು ಅವರಿಗೆ ಯಾವುದೇ ರೀತಿಯ ಹಾನಿಯಾಗದಂತೆ ಬಿಡುಗಡೆ ಮಾಡಿದ್ದಾರೆ. ಆದರೆ ಸೋನಾಲಿ ಪವಾರ್ ಇನ್ನೂ ಕಾಡಿನೊಳಗಿದ್ದು, ಅವರು ಸ್ಥಳೀಯ ಪತ್ರಕರ್ತರು ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿ ಕ್ಲಾಸ್‍ಗೆ ಅನುಮತಿ ನೀಡಿ ಎಂದು ವಿದ್ಯಾರ್ಥಿನಿಯರು ಪಟ್ಟು!

    ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‍ಪಿ) ಪಂಕಜ್ ಶುಕ್ಲಾ ಈ ಕುರಿತು ಪ್ರತಿಕ್ರಿಯಿಸಿದ್ದು, ಅಶೋಕ್ ಪವಾರ್ ಮತ್ತು ಯಾದವ್ ಅವರನ್ನು ಪ್ರಸ್ತುತ ಬಿಜಾಪುರದ ಕುಟ್ರುದಲ್ಲಿ ಇರಿಸಲಾಗಿದೆ. ಪತಿಯನ್ನು ಭೇಟಿಯಾಗಲು ಸೋನಾಲಿ ಶೀಘ್ರದಲ್ಲೇ ಕುಟ್ರು ತಲುಪಲಿದ್ದಾರೆ ಎಂದು ಹೇಳಿದ್ದಾರೆ.

    ವೀಡಿಯೋದಲ್ಲಿ ಏನಿತ್ತು?
    ನನ್ನ ಹೆಣ್ಣು ಮಕ್ಕಳಿಗಾಗಿ ಪತಿಯನ್ನು ಬಿಡುಗಡೆ ಮಾಡುವಂತೆ ಮಾವೋವಾದಿಗಳಿಗೆ ಭಾವನಾತ್ಮಕ ವೀಡಿಯೊವನ್ನು ಮಾಡಿ ಸೋನಾಲಿ ಅವರು ಕಳುಹಿಸಿದ್ದರು. ವೀಡಿಯೋ ಕಳುಹಿಸಿದ ನಂತರವೂ ಅಶೋಕ್ ಅವರನ್ನು ಬಿಡುಗಡೆ ಮಾಡದ ಪರಿಣಾಮ, ಸೋನಾಲಿ ಪವಾರ್ ಅವರನ್ನು ಹುಡುಕಲು ಛತ್ತೀಸ್‍ಗಢದ ಬಿಜಾಪುರ ಮತ್ತು ನಾರಾಯಣಪುರ ಜಿಲ್ಲೆಗಳ ಅಬುಜ್ಮದ್ ಅರಣ್ಯವನ್ನು ಪ್ರವೇಶಿಸಿದ್ದಾರೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ.

    ಪ್ರಸ್ತುತ ಸೋನಾಲಿ ಅವರು ಪತ್ರಕರ್ತರ ಮತ್ತು ಪೊಲೀಸರ ಸಹಾಯದಿಂದ ಕೆಲವು ಸ್ಥಳೀಯರನ್ನು ಸಂಪರ್ಕಿಸಿದ್ದಾರೆ. ಅಲ್ಲದೆ ಸೋನಾಲಿ ಪವಾರ್ ತನ್ನ ಎರಡೂವರೆ ವರ್ಷದ ಕಿರಿಯ ಮಗಳನ್ನು ತನ್ನೊಂದಿಗೆ ಕಾಡಿಗೆ ಕರೆದೊಯ್ದಿದ್ದಾಳೆ. ಐದು ವರ್ಷದ ಹಿರಿಯ ಮಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್‍ಗೆ ಆಲಿಯಾ ಬೌಲ್ಡ್

  • ವರದಕ್ಷಿಣೆ ಕಿರುಕುಳ – ಗಂಡನಿಂದಲೇ ಹೆಂಡತಿಯ ಕೊಲೆ

    ವರದಕ್ಷಿಣೆ ಕಿರುಕುಳ – ಗಂಡನಿಂದಲೇ ಹೆಂಡತಿಯ ಕೊಲೆ

    ಮೈಸೂರು: ಪತಿಯೊಬ್ಬ ವರದಕ್ಷಿಣೆಗಾಗಿ ತನ್ನ ಪತ್ನಿಯನ್ನೇ ಕೊಲೆಗೈದ ಘಟನೆ ನಗರದ ಜೆ.ಪಿ ನಗರದಲ್ಲಿ ನಡೆದಿದೆ.

    ನಂದಿನಿ (25) ಮೃತ ಪತ್ನಿ. ಪತಿ ವಿಜಯ್ (30) ಕೊಲೆ ಆರೋಪಿ. ದಂಪತಿ 2 ವರ್ಷಗಳ ಹಿಂದಷ್ಟೇ ಮದುವೆ ಆಗಿದ್ದರು. ವರದಕ್ಷಿಣೆಗಾಗಿ ವಿಜಯ್ ಹಾಗೂ ಕುಟುಂಬಸ್ಥರು ನಂದಿನಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: NSA ಅಜಿತ್ ದೋವಲ್ ನಿವಾಸಕ್ಕೆ ಅಕ್ರಮ ಪ್ರವೇಶ – ವ್ಯಕ್ತಿ ಬಂಧನ

    ಆರೋಪಿಯು ನಿನ್ನೆ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾನೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ತ್ರಿವರ್ಣ ಧ್ವಜದ ಬಗ್ಗೆ ಗೌರವ ಇಲ್ಲದ ಸಂಘ ಪರಿವಾರದವರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್

    ಆರೋಪಿಯು 11 ತಿಂಗಳ ಮಗು ಕೊಲೆಗೂ ಯತ್ನಿಸಿದ್ದಾನೆ ಎಂದು ನಂದಿನಿ ಕುಟುಂಬಸ್ಥರು ಆರೋಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭುಜದಲ್ಲಿ ಚಾಕು ಸಿಲುಕಿಕೊಂಡ್ರೂ ಲೆಕ್ಕಿಸದೆ ಪತಿ ವಿರುದ್ಧ ದೂರು ಕೊಟ್ಟ ಪತ್ನಿ..!

    ಭುಜದಲ್ಲಿ ಚಾಕು ಸಿಲುಕಿಕೊಂಡ್ರೂ ಲೆಕ್ಕಿಸದೆ ಪತಿ ವಿರುದ್ಧ ದೂರು ಕೊಟ್ಟ ಪತ್ನಿ..!

    ನವದೆಹಲಿ: 27 ವರ್ಷದ ಮಹಿಳೆಗೆ ಪತಿ ಹಲವು ಬಾರಿ ಇರಿದಿದ್ದಾನೆ. ಪರಿಣಾಮ ಆಕೆಯ ಭುಜದಲ್ಲಿ ಚಾಕು ಸಿಲುಕಿಕೊಂಡ್ರೂ ಲೆಕ್ಕಿಸದೆ ಪೊಲೀಸರಿಗೆ ಪತಿ ವಿರುದ್ಧ ದೂರು ಕೊಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ರೋಹಿಣಿಯ ಕಂಝವಾಲಾ ಪ್ರದೇಶದಲ್ಲಿ 27 ವರ್ಷದ ಮಹಿಳೆಯೊಬ್ಬಳ ಮೇಲೆ ಆಕೆಯ ಪತಿ ಹಲ್ಲೆ ನಡೆಸಿ ಹಲವು ಬಾರಿ ಇರಿದಿದ್ದಾನೆ. ಗಾಯಗೊಂಡ ಮಹಿಳೆ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ತನ್ನ ಭುಜದಲ್ಲಿ ಇನ್ನೂ ಚಾಕು ಇದ್ರೂ ಅದನ್ನ ಲೆಕ್ಕಿಸದೆ ದೂರು ಕೊಡಲು ಪೊಲೀಸ್ ಠಾಣೆಗೆ ಪ್ರವೇಶಿಸಿದ್ದಾಳೆ. ದೂರು ದಾಖಲಿಸಿಕೊಂಡ ತಕ್ಷಣ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಸದ್ಯ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಮಹಿಳೆಯ ದೂರಿನ ಆಧಾರದ ಮೇಲೆ ಪತಿ ವಿರುದ್ಧ ಪೊಲೀಸರು, 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ್ದಕ್ಕಾಗಿ ಶಿಕ್ಷೆ), 342 (ಅಕ್ರಮ ಬಂಧನಕ್ಕೆ ಶಿಕ್ಷೆ), 324(ಅಪಾಯಕಾರಿ ಆಯುಧದಿಂದ ಹಲ್ಲೆ) ಮತ್ತು 34 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮಹೀಂದ್ರಾ ಶೂಟ್‍ನಲ್ಲಿ ತಾಳ್ಮೆ ಕಳೆದುಕೊಂಡ ಅಜಯ್ ದೇವಗನ್!

    ಅಲ್ಲದೆ ಈ ಕುರಿತು ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುವುದು. ಪ್ರಸ್ತುತ ಮುಖ್ಯ ಆರೋಪಿ ಮತ್ತು ಅವನ ತಾಯಿ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆಗಾಗಿ ನಾವು ತಂಡವನ್ನು ರಚಿಸಿದ್ದೇವೆ. ಈಗ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

    ದೂರಿನಲ್ಲಿ ಏನಿದೆ?
    ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ನಾವು 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ನಮಗೆ ಇಬ್ಬರು ಮಕ್ಕಳಿದ್ದಾರೆ. ನನ್ನ ಪತಿ ಕೆಲಸ ಕಳೆದುಕೊಂಡ ನಂತರ ನನ್ನನ್ನು ತುಂಬಾ ನಿಂದಿಸುತ್ತಿದ್ದನು. ಅಲ್ಲದೆ ಹಿಂಸೆ ಕೊಡುತ್ತಿದ್ದನು. ಪರಿಣಾಮ ನಾನು ನನ್ನ ಗಂಡನ ಮನೆ ಬಿಟ್ಟು ತವರುಮನೆಗೆ ಹೋಗಿ ವಾಸಿಸಲು ಪ್ರಾರಂಭಿಸಿದೆ. ನನ್ನ ಮಕ್ಕಳನ್ನು ನೋಡಲು ಪತಿ ಮನೆಗೆ ಹೋಗಿದ್ದೆ. ಆಗ ಮಕ್ಕಳು ಕಾಣಿಸಲಿಲ್ಲ. ಅದಕ್ಕೆ ನಾನು, ಮಕ್ಕಳು ಎಲ್ಲಿ ಎಂದು ಕೇಳಿದೆ ಎಂದು ವಿವರಿಸಿದ್ದಾಳೆ. ಇದನ್ನೂ ಓದಿ: ಹಿಜಬ್ ಬೆಂಬಲಿಸಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ!

    How To Pick A Bedroom Door Lock | Home Security Store

    ನನ್ನ ಪತಿ, ನೀನು ರೂಮ್‍ನಲ್ಲಿರು ಮಕ್ಕಳನ್ನು ನಾನು ಕರೆತರುತ್ತೇನೆ ಎಂದು ಹೇಳಿದರು. ಅದಕ್ಕೆ ನಾನು ರೂಮ್ ನಲ್ಲಿ ಕುಳಿತುಕೊಂಡಿದ್ದೆ. ರೂಮ್ ಒಳಗೆ ಬಂದ ಪತಿ ನನ್ನ ಮೇಲೆ ಹಲ್ಲೆ ನಡೆಸಿದ್ದು, ಚಾಕುವನ್ನ ಹೊರತೆಗೆದು ನನ್ನ ಸೊಂಟ, ಬೆನ್ನು ಮತ್ತು ಭುಜಕ್ಕೆ ಇರಿದಿದ್ದಾನೆ. ಅವನು ಚುಚ್ಚಿದ ರಭಸಕ್ಕೆ ಚಾಕುವಿನ ಹಿಡಿಕೆಯೇ ಮುರಿದು ನನ್ನ ಭುಜದಲ್ಲಿ ಸಿಕ್ಕಿಕೊಂಡಿದೆ. ಆದರೂ ಬಿಡದ ಅವನು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ವಿವರವಾಗಿ ತಿಳಿಸಿದ್ದಾಳೆ.

  • ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ

    ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ

    ಪಾಟ್ನಾ: ಮತ್ತೋರ್ವ ಮಹಿಳೆಯನ್ನು ಮದುವೆಯಾಗಲು ಹೊರಟಿದ್ದ ವ್ಯಕ್ತಿಯನ್ನು ಲೈಟ್ ಕಂಬಕ್ಕೆ ಕಟ್ಟಿ ಅತ್ತಿಗೆ ಥಳಿಸಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕತಿಹಾರ್ ಜಿಲ್ಲೆಯ ಅಜಮ್‍ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಿಕ್‍ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೊಹಮ್ಮದ್ ಅಬಿದ್ ಮಹಿಳೆಯೊಬ್ಬರನ್ನು ಪ್ರೀತಿಸುತ್ತಿದ್ದನು ಮತ್ತು ಆಕೆಯನ್ನು ಮದುವೆಯಾಗಲು ನ್ಯಾಯಾಲಯಕ್ಕೆ ಹೋಗುತ್ತಿರುವುದನ್ನು ತಿಳಿದ ಪತ್ನಿ ಸನಾ ಖಾತೂನ್ ಆತನನ್ನು ತಡೆಯಲು ವಿಫಲವಾದಾಗ ಕುಟುಂಬಸ್ಥರಿಗೆ ತಿಳಿಸಿದ್ದಾಳೆ.

    ಮುಂಬೈನಲ್ಲಿ ವಾಸಿಸುತ್ತಿದ್ದ ಅಬಿದ್ ಪಕ್ಕದ ಹಳ್ಳಿಯ ನಿವಾಸಿಯಾಗಿದ್ದ ಮಹಿಳೆಯನ್ನು ಪ್ರೀತಿಸುತ್ತಿದ್ದರಿಂದ ತನಗೆ ಹಣ ಕಳುಹಿಸುವುದನ್ನು ನಿಲ್ಲಿಸಿದ್ದ ಎಂದು ಪತ್ನಿ ಸನಾ ಖಾತೂನ್ ಆರೋಪಿಸಿದ್ದಾರೆ. ಇದನ್ನೂ ಓದಿ: ಭವಿಷ್ಯದ ದಿನಗಳಲ್ಲಿ ವಾಹನ ಚಾಲನೆ ಮಾಡುವಾಗ ಫೋನ್‍ನಲ್ಲಿ ಮಾತಾಡಿದ್ರೆ ಅದು ಅಪರಾಧವಲ್ಲ: ನಿತಿನ್ ಗಡ್ಕರಿ

    ಅಬಿದ್ ತನ್ನ ಗೆಳತಿಯನ್ನು ಮದುವೆಯಾಗುವಂತೆ ಮನವೊಲಿಸಿ, ಶನಿವಾರ ಆಕೆಯನ್ನು ಮದುವೆಯಾಗಲು ನ್ಯಾಯಾಲಯಕ್ಕೆ ಹೋಗುತ್ತಿದ್ದನು. ಅಬಿದ್ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಆತನ ಪತ್ನಿ ಸನಾ ಆತನನ್ನು ತಡೆಯಲು ಪ್ರಯತ್ನಿಸಿದ್ದಾಳೆ. ಆದರೆ ಸಾಧ್ಯವಾಗದ ಕಾರಣ ಕೊನೆಗೆ ಅಬಿದ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ನಂತರ ಕೂಡಲೇ ಕುಟುಂಬಸ್ಥರು ಅಬಿದ್ ಹಿಡಿದು ಕಂಬಕ್ಕೆ ಕಟ್ಟಿ ಹಿಗ್ಗಾ ಮುಗ್ಗ ಥಳಿಸಿದ್ದಾರೆ.

    ಅಬಿದ್ ಒಪ್ಪಿಗೆ ಮೇರೆಗೆ ಆತನಿಗೆ ಮದುವೆ ಮಾಡಲಾಗಿತ್ತು. ಆದರೀಗ ಪತ್ನಿಯನ್ನು ಬಿಟ್ಟು ಬೇರೆ ಮದುವೆಯಾಗಲು ಮುಂದಾಗಿದ್ದಾನೆ. ಪತ್ನಿಗೆ ದ್ರೋಹ ಬಗೆದಿದ್ದಕ್ಕೆ ತಕ್ಕ ಪಾಠ ಕಲಿಸಬೇಕೆಂದು ಥಳಿಸಿಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಆಧುನಿಕ ಜಿನ್ನಾ : ಹಿಮಂತ ಬಿಸ್ವಾ ಶರ್ಮಾ

  • ತಲೆಗೆ ದೊಣ್ಣೆಯಿಂದ ಹೊಡೆದು ವ್ಯಕ್ತಿ ಬರ್ಬರ ಹತ್ಯೆ- ಕೊಲೆಗೆ ಸುಪಾರಿ ನೀಡಿದ್ದ ಹೆಂಡತಿ ಅಂದರ್

    ತಲೆಗೆ ದೊಣ್ಣೆಯಿಂದ ಹೊಡೆದು ವ್ಯಕ್ತಿ ಬರ್ಬರ ಹತ್ಯೆ- ಕೊಲೆಗೆ ಸುಪಾರಿ ನೀಡಿದ್ದ ಹೆಂಡತಿ ಅಂದರ್

    ಹಾಸನ: ತಲೆಗೆ ದೊಣ್ಣೆಯಿಂದ ಹೊಡೆದು ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜ.31 ರಂದು ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಾವಲುಹೊಸೂರು ಗ್ರಾಮದ ಬಳಿ ನಡೆದಿದೆ.

    ಕಾವಲುಹೊಸೂರು ಗ್ರಾಮದ ನಿವಾಸಿಯಾದ ಆನಂದ್ ಕುಮಾರ್ (42) ಕೊಲೆಯಾಗಿದ್ದ ವ್ಯಕ್ತಿ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆಗೆ ಸುಪಾರಿ ನೀಡಿದ್ದ ಪತ್ನಿ, ಆಕೆಯ ಪ್ರಿಯಕರ ಹಾಗೂ ಇಬ್ಬರು ಹಂತಕರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಶಾಲಾ, ಕಾಲೇಜುಗಳ ರಜೆ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಂಡಿಲ್ಲ: ಬಿ.ಸಿ. ನಾಗೇಶ್

    ಪತ್ನಿ ಸುನಿತಾ ಹಾಗೂ ಪ್ರಿಯಕರ ನವೀನ್ ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಬೆಂಗಳೂರಿನ ಇಬ್ಬರು ಹಂತಕರಿಗೆ ಸುಪಾರಿ ನೀಡಿದ್ದರು.

  • 17ರ ಹರೆಯದ ಪತ್ನಿಯ ರುಂಡ ಕತ್ತರಿಸಿ ಬೀದಿಯಲ್ಲಿ ಪ್ರದರ್ಶಿಸಿದ ಪಾಪಿ ಪತಿ..!

    17ರ ಹರೆಯದ ಪತ್ನಿಯ ರುಂಡ ಕತ್ತರಿಸಿ ಬೀದಿಯಲ್ಲಿ ಪ್ರದರ್ಶಿಸಿದ ಪಾಪಿ ಪತಿ..!

    ಟೆಹರಾನ್: ವ್ಯಕ್ತಿಯೊಬ್ಬ ತನ್ನ ಪತ್ನಿಯ ತಲೆಯನ್ನು ಕತ್ತರಿಸಿ ಬಳಿಕ ಆ ತಲೆಯನ್ನು ಬೀದಿಯಲ್ಲಿ ಪ್ರದರ್ಶಿಸಿ ಬೆಚ್ಚಿಬೀಳಿಸುವಂತೆ ಮಾಡಿದ ಘಟನೆ ಇರಾನ್ ನಲ್ಲಿ ನಡೆದಿದೆ.

    ಇರಾನ್‍ನ ನೈರುತ್ಯ ಭಾಗದ ನಗರ ಅಹ್ವಾಜ್ ಎಂಬಲ್ಲಿ ಈ ಘಟನೆ ನಡೆದಿದೆ. ಮೃತಳನ್ನು ಮೋನಾ ಹೈದರಿ (17) ಎಂದು ಗುರುತಿಸಲಾಗಿದೆ. ಪತಿಯೇ ಮೋನಾಳನ್ನು ಬರ್ಬರವಾಗಿ ಹತ್ಯೆ ಮಾಡಿ ವಿಕೃತಿ ಮೆರೆದಿದ್ದಾನೆ. ಈತನಿಗೆ ಸೋದರ ಮಾವನೂ ಸಾಥ್ ನೀಡಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಕೊಲೆ ಮಾಡಿದ್ದು ಯಾಕೆ..?
    ತನಗೆ ದ್ರೋಹ ಎಸಗಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶೀಲ ಶಂಕಿಸಿದ ವ್ಯಕ್ತಿ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಅಲ್ಲದೆ ಆಕೆಯ ಶಿರವನ್ನು ಕತ್ತರಿಸಿ ಬೀದಿಯಲ್ಲಿ ಹಿಡಿದು ಪ್ರದರ್ಶಿಸಿದ್ದಾನೆ. ಈ ಘಟನೆಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭವಾಯಿತು. ಇದನ್ನೂ ಓದಿ: ಭಾರತೀಯ ಮೂಲದ ವ್ಯಕ್ತಿಗೆ ಸಿಂಗಾಪುರದಲ್ಲಿ 6 ತಿಂಗಳು ಜೈಲು!

    ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಇರಾನ್‍ನಲ್ಲಿ ತೀವ್ರ ಸಂಚಲನವೇ ಸೃಷ್ಟಿಯಾಗಿದೆ. ಮಹಿಳಾ ವ್ಯವಹಾರಗಳ ಉಪಾಧ್ಯಕ್ಷೆ ಎನ್ಸೀಹ್ ಖಜಾಲಿ ಅವರು ಸಂಸತ್ತಿನಲ್ಲಿ ಪ್ರಕರಣ ಸಂಬಂಧ ಶೀಘ್ರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮತ್ತು ಇಂತಹ ಪ್ರಕರಣಗಳನ್ನು ತಡೆಯಲು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಚರಂಡಿ ವಿವಾದ ಬಗೆಹರಿಸಲು ಹೋದ ಪೊಲೀಸರಿಗೆ ದೊಣ್ಣೆಯಿಂದ ಥಳಿಸಿದ ಗ್ರಾಮಸ್ಥರು!

    ಹೆಸರಾಂತ ಸ್ತ್ರೀವಾದಿ ಚಲನಚಿತ್ರ ನಿರ್ಮಾಪಕಿ ತಹ್ಮಿನೆ ಮಿಲಾನಿ ತಮ್ಮ ಇನ್‍ಸ್ಟಾ ಖಾತೆಯಲ್ಲಿ ಮೋನಾ ಅಜ್ಞಾನಕ್ಕೆ ಬಲಿಯಾಗಿದ್ದಾರೆ. ಈ ಅಪರಾಧಕ್ಕೆ ನಾವೆಲ್ಲರೂ ಜವಾಬ್ದಾರರು ಎಂದು ಬರೆದುಕೊಂಡಿದ್ದಾರೆ. ಇರಾನ್‍ನಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯಗಳನ್ನು ತಡೆಯಲು ಮದುವೆಗೆ ಕಾನೂನಿನ ವಯಸ್ಸನ್ನು 13ಕ್ಕೆ ನಿಗದಿ ಮಾಡಲಾಗಿದೆ. ಇರಾನ್ ಮಾಧ್ಯಮಗಳ ಪ್ರಕಾರ ಮೋನಿ ಹೈದರಿ 12 ವರ್ಷವಿದ್ದಾಗಲೇ ವಿವಾಹವಾಗಿದ್ದು, ಮೂರು ವರ್ಷದ ಮಗ ಆಕೆಗಿದ್ದಾನೆ.

  • 82 ವರ್ಷದ ವೃದ್ಧನಿಂದ 78ರ ವೃದ್ಧೆ ಮೇಲೆ ವರದಕ್ಷಿಣೆ ಕಿರುಕುಳ!

    82 ವರ್ಷದ ವೃದ್ಧನಿಂದ 78ರ ವೃದ್ಧೆ ಮೇಲೆ ವರದಕ್ಷಿಣೆ ಕಿರುಕುಳ!

    ಲಕ್ನೋ: 78 ವರ್ಷದ ವೃದ್ಧೆಯೊಬ್ಬಳಿಗೆ 82ರ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಯ ಮೇಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಕಾನ್ಪುರದ ಚಕೇರಿ ಪ್ರದೇಶದಲ್ಲಿ ವೃದ್ಧ ಪತಿ, ಪತ್ನಿಗೆ ಕಿರುಕುಳ ನೀಡುತ್ತಿದ್ದಾನೆ. ಸಂತ್ರಸ್ತೆ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆಕೆಯ ದೂರಿನ ಮೇರೆಗೆ ಪೊಲೀಸರು ವೃದ್ಧೆಯ ಪತಿ ಗಣೇಶ್ ನರೇನ್ ಶುಕ್ಲಾ ಮತ್ತು ಅವರ ಅಳಿಯ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    BRIBE

    ವೃದ್ಧೆಯ ದೂರಿನ ಪ್ರಕಾರ, ಪತಿ ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ. ಪತಿಯ ಕಾಟ ತಾಳದ ವೃದ್ಧೆ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ. ಇನ್ನು ಪತಿ ನರೇನ್ ಶುಕ್ಲಾ ಆತನ ಅಳಿಯ ಸೇರಿದಂತೆ ಒಟ್ಟು ಆರು ಜನರ ಮೇಲೆ ಕೇಸ್ ದಾಖಲಿಸಿದ್ದಾರೆ.

    ವೃದ್ಧ ದಂಪತಿಯ ಪುತ್ರ ರಜನೀಶ್ ಸುದ್ದಿಗಾರರೊಂದಿಗೆ ಮಾತನಾಡಿ, ತನ್ನ ತಾಯಿ ಎಲ್ಲಾ ಕುಟುಂಬ ಸದಸ್ಯರೊಂದಿಗೆ ಚೆನ್ನಾಗಿ ವರ್ತಿಸುತ್ತಾಳೆ. ಆದರೆ ಕೆಲವು ಸಂಬಂಧಿಕರ ಪ್ರಭಾವದಿಂದ  ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ಓದಿ: ಯಾವುದೇ ಒತ್ತಡವಿಲ್ಲ, ಸ್ವ-ಇಚ್ಛೆಯಿಂದ ಆತ್ಮಹತ್ಯೆ- ಸೆಲ್ಫಿ ವೀಡಿಯೋ ಮಾಡಿ ಯುವಕ ಬಾವಿಗೆ ಹಾರಿದ!

    MONEY

    ಇದೇ ವೇಳೆ ವಕೀಲ ಶಿವೇಂದ್ರ ಕುಮಾರ್ ಪಾಂಡೆ ಮಾತನಾಡಿ, ಮೂಲಗಳ ಪ್ರಕಾರ, ಇಡೀ ವಿಷಯವು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದೆ. ಮದುವೆಯಾಗಿ ಇಷ್ಟು ವರ್ಷಗಳಾದರೂ ವರದಕ್ಷಿಣೆ ಕಿರುಕುಳದ ಆರೋಪದಲ್ಲಿ ಅರ್ಥವಿಲ್ಲ. ಆದ್ದರಿಂದ ದಂಪತಿ ನಡುವಿನ ಪರಸ್ಪರ ಮಾತುಕತೆಯಿಂದ ವಿವಾದವನ್ನು ಇತ್ಯರ್ಥಪಡಿಸಬಹುದು ಎಂದು ಪಾಂಡೆ ಹೇಳಿದರು.

  • ವರದಕ್ಷಿಣೆ ಕಿರುಕುಳ- ಒತ್ತಾಯ ಮಾಡಿ ಆ್ಯಸಿಡ್ ಕುಡಿಸಿದ ಪತಿ, ಕುಟುಂಬಸ್ಥರು

    ವರದಕ್ಷಿಣೆ ಕಿರುಕುಳ- ಒತ್ತಾಯ ಮಾಡಿ ಆ್ಯಸಿಡ್ ಕುಡಿಸಿದ ಪತಿ, ಕುಟುಂಬಸ್ಥರು

    ಲಕ್ನೋ: ಪತ್ನಿ ತವರು ಮನೆಯಿಂದ ವರದಕ್ಷಿಣೆ ತಂದಿಲ್ಲ ಎಂದು ಪತಿ ಕಿರುಕುಳ ನೀಡಿ ಆ್ಯಸಿಡ್ ಕುಡಿಸಿ ಆಕೆಯನ್ನು ಕೊಂದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಸಂತ್ರಸ್ತೆಯನ್ನು ರೇಷ್ಮಾ ಎಂದು ಗುರುತಿಸಲಾಗಿದೆ. ಈಕೆಗೆ ತವರು ಮನೆಯಿಂದ ವರದಕ್ಷಿಣೆ ತಂದಿಲ್ಲವೆಂದು ಪತಿ ಮತ್ತು ಆತನ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು. ನ್ಯೂ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಥೇಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಖಡ್ಗ, ಭಯ, ದಬ್ಬಾಳಿಕೆಯಿಂದ ತನ್ವೀರ್ ಸೇಠ್ ಆಗಿದ್ದಾರೆ: ಪ್ರತಾಪ್ ಸಿಂಹ

    ವರದಕ್ಷಿಣೆ ನೀಡುವಂತೆ ರೇಷ್ಮಾ ಪತಿ ಮನೆಯವರು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು. ಒಂದು ದಿನ ಚಿತ್ರ ಹಿಂಸೆ ನೀಡಿದ್ದಾರೆ. ಆಕೆ ಪತಿ ಹಾಗೂ ಮನೆ ಮಂದಿ ಎಲ್ಲರೂ ಸೇರಿ ಆಕೆಗೆ ಆ್ಯಸಿಡ್ ಕುಡಿಸಿದ್ದಾರೆ. ಹೀಗಾಗಿ ರೇಷ್ಮಾ ಸಾವನ್ನಪ್ಪಿದ್ದಾರೆ ಎಂದು ರೇಷ್ಮಾ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ದೇಶವನ್ನು ಒಡೆದು ಆಳುವ ಕಾಂಗ್ರೆಸ್‌ ತುಕ್ಡೆ ತುಕ್ಡೆ ಗ್ಯಾಂಗ್‌ ಲೀಡರ್‌: ನರೇಂದ್ರ ಮೋದಿ

    POLICE JEEP

    ಗಂಡನ ಮನೆಯಲ್ಲಿ ರೇಷ್ಮಾ ಮೃತದೇಹವನ್ನು ವಶಪಡಿಸಿಕೊಂಡಾಗ ಆಕೆಯ ಮುಖದ ಮೇಲೆ ಸುಟ್ಟ ಗಾಯದ ಗುರುತುಗಳಿದ್ದವು. ಕುಟುಂಬಸ್ಥರು ದೂರು ನೀಡಿದ್ದಾರೆ ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.