Tag: ಪತಿ

  • ಪತ್ನಿ ಜೊತೆ ಸೆಕ್ಸ್‌ಗೆ ಮುಂದಾದ ಪತಿಗೆ ಶಾಕ್- ಡಿವೋರ್ಸ್‍ಗಾಗಿ ಕೋರ್ಟ್ ಮೆಟ್ಟಿಲೇರಿದ!

    ಪತ್ನಿ ಜೊತೆ ಸೆಕ್ಸ್‌ಗೆ ಮುಂದಾದ ಪತಿಗೆ ಶಾಕ್- ಡಿವೋರ್ಸ್‍ಗಾಗಿ ಕೋರ್ಟ್ ಮೆಟ್ಟಿಲೇರಿದ!

    ನವದೆಹಲಿ: ವ್ಯಕ್ತಿಯೊಬ್ಬ ತನ್ನ ಪತ್ನಿ ಜೊತೆ ಲೈಂಗಿಕ ಕ್ರಿಯೆ ನಡೆಸಲು ಮುಂದಾದಾಗ ನೈಜ ಸತ್ಯ ತಿಳಿದುಬಂದಿದ್ದು, ಇದೀಗ ಆತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಸಂಗ ನಡೆದಿದೆ.

    ನಡೆದಿದ್ದೇನು..?
    2016ರಲ್ಲಿ ಜೋಡಿ ಮದುವೆಯಾಗಿದೆ. ಕೆಲ ದಿನಗಳ ಕಾಲ ಇಬ್ಬರೂ ಲೈಂಗಿಕ ಕ್ರಿಯೆ ನಡೆಸಿರಲಿಲ್ಲ. ಈ ವೇಳೆ ಆಕೆ ಪೀರಿಯೆಡ್ಸ್ ನೆಪ ಹೇಳಿ 6 ದಿನ ಪತಿಯಿಂದ ದೂರ ಉಳಿದು ಮತ್ತೆ ಮರಳಿದಳು.

    ಇದಾದ ಬಳಿಕವೂ ಪತ್ನಿ ಸೆಕ್ಸ್ ಗೆ ಒಪ್ಪಿರಲಿಲ್ಲ. ಇದರಿಂದ ರೋಸಿಹೋಗಿದ್ದ ಪತಿ, ಬಲವಂತವಾಗಿ ಸೆಕ್ಸ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಪತ್ನಿಯ ಜನನಾಂಗ ನೋಡಿ ಪತಿಗೆ ಶಾಕ್ ಆಗಿದೆ. ಆಕೆ ಮಹಿಳೆಯಾಗಿದ್ದರೂ ಜನನಾಂಗ ಮಾತ್ರ ಪುರುಷರಂತೆ ಇತ್ತು. ಇದನ್ನು ಕಂಡು ಆತ ಗಾಬರಿಗೊಳಗಾಗಿದ್ದಾನೆ. ಅಲ್ಲದೆ ತನಗೆ ಮೋಸ ಆಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾನೆ. ಇದನ್ನೂ ಓದಿ: ಸೌಂಡ್ ಕಡಿಮೆ ಮಾಡಲು ಹೇಳಿದ ಕಾನ್‍ಸ್ಟೇಬಲ್- ಬಿಯರ್ ಬಾಟ್ಲಿಯಲ್ಲಿ ಹೊಡೆದು ಎಸ್ಕೇಪ್

    ನ್ಯಾಯಾಲಯದ ಆದೇಶ ಮೇರೆಗೆ ವ್ಯಕ್ತಿ ತನ್ನ ಪತ್ನಿಯನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದ್ದಾನೆ. ಈ ವೇಳೆ ಅಲ್ಲಿ ವೈದ್ಯರು ಪರೀಕ್ಷೆ ನಡೆಸಿದಾಗ ಆಕೆಗೆ ಗರ್ಭಕೋಶ, ಗರ್ಭನಾಳ ಸೇರಿಧಮತೆ ಒಳಗಿನ ರಚನೆ ಮಹಿಳೆಯಂತೆ ಇತ್ತು. ಆದರೆ ಹೊರಗೆ ಜನನಾಂಗ ಮಾತ್ರ ಪುರುಷರಂತೆ ಇರುವುದು ಖಚಿತವಾಯಿತು. ಹೀಗಾಗಿ ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸುವುದು ಹಾಗೂ ಆಕೆ ಮಗು ಹುಟ್ಟಲು ಸಾಧ್ಯವಿಲ್ಲ ಎಂಬುದು ಸಾಬೀತಾಯಿತು.

    SUPREME COURT

    ಸದ್ಯ ಸ್ಥಳೀಯ ನ್ಯಾಯಾಲಯದಲ್ಲಿ ನ್ಯಾಯ ಸಿಗದ ಕಾರಣ ಪತಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾನೆ. ತನ್ನ ಪತ್ನಿ ಹಾಗೂ ಆಕೆಯ ಮನೆಯವರಿಂದ ತನಗೆ ಮೋಸ ಆಗಿದೆ ಎಂದು ದೂರಿದ್ದಾನೆ. ಪತಿಯ ದೂರಿನಂತೆ ಇದೀಗ ಕೋರ್ಟ್ 4ದಿನಗಳ ಒಳಗೆ ಉತ್ತರಿಸುವಂತೆ ಮಹಿಳೆಗೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಮೃತದೇಹ ತರಿಸಲು ಮೋದಿ ಸೂಚನೆ

  • ಗಂಡನ ಶಿರಚ್ಛೇದ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ದೇಗುಲದಲ್ಲಿ ಕೂತಿದ್ಲು!

    ಗಂಡನ ಶಿರಚ್ಛೇದ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ದೇಗುಲದಲ್ಲಿ ಕೂತಿದ್ಲು!

    ಅಗರ್ತಲಾ: ಮಹಿಳೆಯೊಬ್ಬಳು ಇಂದು ಮುಂಜಾನೆ ದೇವಸ್ಥಾನದಲ್ಲಿ ತನ್ನ 50 ವರ್ಷದ ಗಂಡನ ಶಿರಚ್ಛೇದ ಮಾಡಿ ತಲೆಯನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಕುಳಿತ್ತಿದ್ದ ಆಘಾತಕಾರಿ ಘಟನೆ ತ್ರಿಪುರದ ಖೋವೈನಲ್ಲಿ ನಡೆದಿದೆ.

    ಇಂದಿರಾ ಕಾಲೋನಿ ಗ್ರಾಮದಲ್ಲಿ ಮಹಿಳೆ, ಪತಿ ರವೀಂದ್ರ ತಂತಿ ಮತ್ತು ಇಬ್ಬರು ಪುತ್ರರೊಂದಿಗೆ ವಾಸಿಸುತ್ತಿದ್ದಳು. ಕೊಲೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ ದಂಪತಿ ಹಿರಿಯ ಮಗ ತನ್ನ ತಾಯಿ ಇತ್ತೀಚೆಗೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು. ಅಲ್ಲದೆ ಆಕೆಗೆ ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆ ಕೊಡಿಸುತ್ತಿದ್ದೆವು ಎಂದು ಪೊಲೀಸರಿಗೆ ವಿವರಿಸಿದರು. ಇದನ್ನೂ ಓದಿ: ಸೋನಂ ಕಪೂರ್ ಮಾವನಿಗೆ 27 ಕೋಟಿ ರೂ. ವಂಚಿಸಿದ ಸೈಬರ್ ಕ್ರಿಮಿನಲ್ಸ್! 

    ಖೋವಾಯ್ ಪೊಲೀಸ್ ವರಿಷ್ಠಾಧಿಕಾರಿ ಭಾನುಪಾದ ಚಕ್ರವರ್ತಿ ಈ ಕುರಿತು ಮಾಹಿತಿ ನೀಡಿದ್ದು, ಕೊಲೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

    ಘಟನೆ ಬಗ್ಗೆ ವಿವರಿಸಿದ ಹಿರಿಯ ಪುತ್ರ, ನನ್ನ ತಾಯಿ ಸಸ್ಯಾಹಾರಿಯಾಗಿದ್ದಳು. ಆದರೆ ನಿನ್ನೆ ರಾತ್ರಿ ಅವರು ಚಿಕನ್ ಸೇವಿಸಿದ್ದಳು. ಇದರಿಂದ ನಮಗೆ ಗಾಬರಿಯಾಯಿತು. ನಾವೆಲ್ಲರೂ ಮಲಗಲು ಹೋದೆವು. ಇದ್ದಕ್ಕಿದ್ದಂತೆ ನನಗೆ ಎಚ್ಚರಿಕೆ ಆಯ್ತು. ಆಗ ನನ್ನ ತಾಯಿ, ತಂದೆಯ ಶಿರಚ್ಛೇದ ಮಾಡುವುದನ್ನು ನೋಡಿದೆ. ಈ ವೇಳೆ ನನ್ನ ತಾಯಿ ರಕ್ತಸಿಕ್ತವಾಗಿ ಕುಳಿತುಕೊಂಡಿದ್ದಳು. ಈ ದೃಶ್ಯ ನೋಡಿ ನನಗೆ ಆಘಾತವಾಯಿತು. ನಂತರ ಆಕೆ ರೂಮಿನಿಂದ ಹೊರಗೆ ಧಾವಿಸಿ ನಮ್ಮ ದೇವಸ್ಥಾನದಲ್ಲಿ ತಂದೆಯ ತಲೆಯನ್ನು ಇಟ್ಟು ಕುಳಿತುಕೊಂಡಳು ಎಂದು ವಿವರಿಸಿದನು.

    ಸ್ಥಳೀಯರು ದೃಶ್ಯ ನೋಡಿ ಗಾಬರಿಗೊಂಡಿದ್ದು, ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಪ್ರಸ್ತುತ ಪೊಲೀಸರು ಶವವನ್ನು ವಶಪಡಿಸಿಕೊಂಡಿದ್ದು, ಮಹಿಳೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ರಾತ್ರಿಯೆಲ್ಲಾ ಮೋಜು ಮಸ್ತಿ – ಬೆಳಗ್ಗೆ ಯುವಕ ಶವವಾಗಿ ಪತ್ತೆ

    ಫೋರೆನ್ಸಿಕ್ ತಂಡವು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಆರೋಪಿಯ ಮಾನಸಿಕ ಅಸ್ವಸ್ಥತೆಯ ಬಗ್ಗೆ, ವೈದ್ಯರ ವರದಿಯಿಲ್ಲದೆ ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿ ಚಕ್ರವರ್ತಿ ತಿಳಿಸಿದ್ದಾರೆ.

  • ರಾಡ್‍ನಿಂದ ಹೊಡೆದು ಪತ್ನಿಯ ಹತ್ಯೆಗೈದು ಪತಿಯೂ ಆತ್ಮಹತ್ಯೆಗೆ ಶರಣು

    ರಾಡ್‍ನಿಂದ ಹೊಡೆದು ಪತ್ನಿಯ ಹತ್ಯೆಗೈದು ಪತಿಯೂ ಆತ್ಮಹತ್ಯೆಗೆ ಶರಣು

    ಧಾರವಾಡ: ಪತ್ನಿಯನ್ನು ಕೊಲೆ ಮಾಡಿ ಪತಿ ಕೂಡ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡದಲ್ಲಿ ನಡೆದಿದೆ.

    ನಗರದ ಹೊರವಲಯದ ಗಣೇಶನಗರದಲ್ಲಿ ಈ ಘಟನೆ ನಡೆದಿದ್ದು, ಚಟ್ಟು ತನ್ನ ಪತ್ನಿ ಮನಿಷಾಳನ್ನು ಹತ್ಯೆಗೈದು ನೇಣಿಗೆ ಶರಣಾಗಿದ್ದಾನೆ. ಕಳೆದ ರಾತ್ರಿ ಇದೇ ಬಡಾವಣೆಯ ತನ್ನ ತಾಯಿಯ ಮನೆಯಲ್ಲಿ ಇದ್ದ ಮನಿಷಾ, ಪತಿಗೆ ಊಟ ಕೊಡಲು ಬಂದು, ಪತಿಯ ಮನೆಯಲ್ಲಿಯೇ ಮಲಗಿದ್ದಳು. ರಾತ್ರಿ ಕುಡಿದು ಪತ್ನಿಯ ಜೊತೆ ಜಗಳ ಮಾಡಿದ ಚಟ್ಟು, ಪತ್ನಿ ಮಲಗಿದ್ದಾಗ ಕಬ್ಬಿಣದ ರಾಡ್‍ನಿಂದ ಹೊಡೆದು ಕೊಲೆ ಮಾಡಿ, ನಂತರ ತಾನು ಕೂಡ ನೇಣು ಹಾಕಿಕೊಂಡಿದ್ದಾನೆ. ಇದನ್ನೂ ಓದಿ: ಯುಪಿ ಚುನಾವಣಾ ಫಲಿತಾಂಶ ನಮಗೊಂದು ಪಾಠ: ಮಾಯಾವತಿ

    POLICE JEEP

    ಕಳೆದ ಮೂರು ದಿನಗಳ ಹಿಂದೆ ಕೂಡಾ ಚಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ತಿಳಿದು ಬಂದಿದೆ. ಆದರೆ ಪತ್ನಿ ಇದನ್ನು ತಡೆದಿದ್ದಳು. ಗೋವಾದಲ್ಲಿ ಪೈಪ್ ಲೈನ್ ಕೆಲಸ ಮಾಡುತಿದ್ದ ಚಟ್ಟು ಕಳೆದ ವಾರವಷ್ಟೇ ಧಾರವಾಡಕ್ಕೆ ಬಂದಿದ್ದ. ಈ ದಂಪತಿಗೆ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಸದ್ಯ ಉಪನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವ ಮಹಿಳಾ ದಿನಾಚರಣೆ – ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕರಿಗೆ ಗೌರವ


    Husband, wife, policeman, Dharwad

  • ಸ್ಕೂಟಿ ಕಲಿಯಲು ಹೋದ ಪತ್ನಿಯನ್ನು ಕೊಲ್ಲಲು ಮುಂದಾದ ಪತಿ

    ಸ್ಕೂಟಿ ಕಲಿಯಲು ಹೋದ ಪತ್ನಿಯನ್ನು ಕೊಲ್ಲಲು ಮುಂದಾದ ಪತಿ

    ಗದಗ: ನಗರದ ಲಾಯನ್ ಸ್ಕೂಲ್ ಪ್ಲೆಗ್ರೌಂಡ್‍ಗೆ ಸ್ಕೂಟಿ ಕಲಿಯಲು ಹೋದ ಪತ್ನಿಯನ್ನು, ಪತಿ ಪ್ಲೆಗ್ರೌಂಡ್‍ನಲ್ಲೇ ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

    ಅಪೂರ್ವ ಹಲ್ಲೆಗೊಳಗಾದ ಮಹಿಳೆ. ಆರೋಪಿ ಇಜಾಜ್ ಹುಬ್ಬಳ್ಳಿ ಕೌಲಬಜಾರ್ನ‌ ನಿವಾಸಿಯಾಗಿದ್ದಾನೆ. ಸ್ಕೂಟಿ ಕಲೆಯಲು ಹೋದ  ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ.

    ಕಾರಣ ಕೌಟುಂಬಿಕ ಕಲಹ: ಜಾತಿ ಧರ್ಮದ ಕಟ್ಟಲೆ ಮೀರಿ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆ ಆಗಿದ್ದರು. ಜೀನವದ ಆಯ್ಕೆಯಲ್ಲಿ ಜಾತಿ ಲೆಕ್ಕಾಚಾರವೇ ಇರಲಿಲ್ಲ. ಒಂದು ಹಂತದಲ್ಲಿ ಮನೆಯವರನ್ನು ಎದುರು ಹಾಕಿಕೊಂಡು ಪತಿಯೇ ಪರದೈವ ಅಂತಾ ಜೀವನ ನಡೆಸುತ್ತಿದ್ದಳು. ದಂಪತಿ ನಡುವೆ ಕೆಲವು ವಿಚಾರವಾಗಿ ಮನಸ್ತಾಪವಿತ್ತು. ಇದನ್ನೂ ಓದಿ: ಮಣಿಪುರದಲ್ಲಿ ಅತಂತ್ರವಿದ್ದರೂ ಬಿಜೆಪಿ ಸರ್ಕಾರ

    ಗದಗದಲ್ಲಿ ಅಪೂರ್ವ ಕಾಲೇಜು ಹೋಗುತ್ತಿದ್ದಾಗ ಇಜಾಜ್ ಗದಗನಲ್ಲೇ ಅವರ ಸಂಬಂಧಿಕರ ಮನೆಯಲ್ಲಿದ್ದ. ಗದಗ ಬೆಟಗೇರಿ ಅವಳಿ ನಗರದಲ್ಲಿ ಆಟೋ ಓಡಸ್ಕೊಂಡಿದ್ದ. ಕಾಲೇಜ್‍ಗೆ ಹೋಗುವಾಗ ಆಟೋದಲ್ಲಿ ಓಡಾಡ್ತಾ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿತ್ತು. ಬ್ರಾಹ್ಮಣ ಕುಟುಂಬದವಳಾದ ಅಪೂರ್ವಾ ಕುಟುಂಬದ ವಿರೋಧದ ನಡುವೆಯೂ 2018ರಲ್ಲಿ ಇಜಾಜ್ ನನ್ನ ಮದ್ವೆಯಾಗಿದ್ದಳು. ಅರ್ಫಾಬಾನು ಆಗಿ ಕನ್ವರ್ಟ್ ಕೂಡಾ ಆಗಿದ್ದಳು. ಇದನ್ನೂ ಓದಿ: 22 ವರ್ಷಗಳ ಇತಿಹಾಸದಲ್ಲಿ ಫಸ್ಟ್‌ ಟೈಂ – ಉತ್ತರಾಖಂಡದಲ್ಲಿ ಸತತ ಎರಡನೇ ಬಾರಿ ಬಿಜೆಪಿ ಅಧಿಕಾರಕ್ಕೆ

    ಮದ್ವೆ ಆದ ಆರಂಭದಲ್ಲಿ ಇಬ್ಬರು ಚೆನ್ನಾಗಿದ್ದರು. ಇಜಾಜ್‍ಗೆ ಇದು 2ನೇ ಮದ್ವೆಯಾಗಿತ್ತು. ಇಜಾಜ್ ಮೊದಲ ಹೆಂಡತಿಗೆ ಮೂರು ಮಕ್ಕಳು. ಮೊದಲ ಹೆಂಡತಿ ವಿಚಾರ ಇಜಾಜ್ ಅಪೂರ್ವಳ ಮುಂದೆ ಗುಟ್ಟಾಗೇ ಇಟ್ಟಿದ್ದ. ಅದ್ಯಾವಾಗ ಅಪೂರ್ವಳಿಗೆ ಗಂಡನ ಅಸಲಿಯತ್ತು ಗೋತ್ತಾಯ್ತೊ, ಆಗಿನಿಂದ ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ಈ ವಿಚಾರವಾಗಿ ಬೇಸತ್ತು ತವರು ಮನೆ ಸೇರಿದ್ದ ಅಪೂರ್ವ, ವಿಚ್ಚೇದನಕ್ಕೆ ಅಪ್ಲೈ ಮಾಡಿದ್ದಳು. ಇದೇ ಕಾರಣಕ್ಕೆ ಇಜಾಜ್ ಬೆಳಗಿನ ಜಾವ ಮಚ್ಚಿನಿಂದ ಹಲ್ಲೆ ಮಾಡಿ ಮುಗಿಸೋ ಪ್ಲಾನ್ ಮಾಡಿದ್ದ. ಸ್ಕೂಟಿ ಕಲಿಯಲೆಂದು ಪ್ಲೇ ಗ್ರೌಂಡ್‍ಗೆ ಹೋದ ವೇಳೆ  ಹಲ್ಲೆ ಮಾಡಿದ್ದಾನೆ.

    ಯುವತಿ ಮುಖ, ತಲೆ, ಭುಜ, ಕೈ, ಬೆನ್ನಿನ ಭಾಗ ಹೀಗೆ ಬರೋಬ್ಬರಿ ಸುಮಾರು 22 ಕಡೆಗಳಲ್ಲಿ ಮಚ್ಚು ಬೀಸಿ ವಿಕೃತಿ ಮೆರೆದಿದಾನೆ. ನಂತರ ಸ್ಥಳೀಯರ ಸಹಾಯದಿಂದ ಅಪೂರ್ವಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

    ಅಪೂರ್ವ ಕನ್ವರ್ಟ್ ಆಗಿರೋ ಕಾರಣ, ಮುಸ್ಲಿಂ ಪದ್ಧತಿ ಪಾಲಿಸಬೇಕು, ಬುರ್ಕಾ, ಹಿಜಬ್ ಹಾಕಿಕೊಳ್ಳುವಂತೆ ಒತ್ತಾಯಿಸಿದ್ದನಂತೆ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ಬಂದಿದ್ದ ಹಿಂದೂ ಸಂಘಟನೆ ಕಾರ್ಯಕರ್ತರು, ಇದೊಂದು ಲವ್ ಜಿಹಾದ್ ಪ್ರಕರಣ. ಇಜಾಜ್ ಬಂಧನದ ಜೊತೆಗೆ ಲವ್ ಜಿಹಾದ್ ಹಿಂದಿರುವರನ್ನೂ ಅರೆಸ್ಟ್ ಆಗ್ಬೇಕು ಅಂತಾ ಆಗ್ರಹಿಸಿದ್ದಾರೆ. ಆಸ್ಪತ್ರೆಗೆ ಎಸ್.ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆರೋಪಿ ಬಂಧಿಸುವುದಾಗಿ ಭರವಸೆ ನೀಡಿದರು.

  • ಕುಡಿದ ಮತ್ತಿನಲ್ಲಿ ಪತ್ನಿಯನ್ನೆ ಸ್ಕ್ರೂಡೈವರ್‌ನಿಂದ ಚುಚ್ಚಿ ಕೊಂದ!

    ಕುಡಿದ ಮತ್ತಿನಲ್ಲಿ ಪತ್ನಿಯನ್ನೆ ಸ್ಕ್ರೂಡೈವರ್‌ನಿಂದ ಚುಚ್ಚಿ ಕೊಂದ!

    ತುಮಕೂರು: ಕುಡಿದ ಮತ್ತಿನಲ್ಲಿ ಪತ್ನಿಯನ್ನ ಸ್ಕ್ರೂಡೈವರ್‌ನಿಂದ ಚುಚ್ಚಿ ಕೊಲೆ ಮಾಡಿರೋ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

    ಜಯಮ್ಮ(52) ಕೊಲೆಯಾದ ದುರ್ದೈವಿ ಮಹಿಳೆ. ತುಮಕೂರು ಜಿಲ್ಲೆ ಹೆಬ್ಬೂರು ಸಮೀಪದ ಕೆಂಬಳಲು ಕಾಲೋನಿಯಲ್ಲಿ ಪ್ರಕರಣ ನಡೆದಿದೆ. ಪಾಪಿ ಪತಿ ನಾಗರಾಜ್(58) ಕೊಲೆಗೈದ ಆರೋಪಿಯಾಗಿದ್ದಾನೆ. ನಾಗರಾಜ್ ಕ್ಷುಲ್ಲಕ ಕಾರಣಕ್ಕೆ ಜಯಮ್ಮಳನ್ನ ಸ್ಕ್ರೂಡೈವರ್‌ನಿಂದ ಚುಚ್ಚಿ ಕೊಲೆ ಮಾಡಿದ್ದೂ, ಅಲ್ಲದೆ ಬಾತ್ ರೂಂ ಫಿಟ್ ಗುಂಡಿಯಲ್ಲಿ ಬಿಸಾಡಿದ್ದಾನೆ. ಇದನ್ನೂ ಓದಿ: ಕೊರೊನಾ ಹರಡಿದ್ದು, ಟ್ರಾಫಿಕ್ ಜಾಮ್ ಮಾಡಿದ್ದು ಪಾದಯಾತ್ರೆ ಸಾಧನೆ: ಕಾರಜೋಳ ವ್ಯಂಗ್ಯ

    ನಡೆದಿದ್ದೇನು?
    ನಾಗರಾಜ್, ಜಯಮ್ಮಳನ್ನು ಎರಡನೇ ಮದುವೆಯಾಗಿದ್ದನು. ಕಳೆದ ಮೂರು ದಿನಗಳ ಹಿಂದೆ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪತ್ನಿ ಜೊತೆ ಗಲಾಟೆ ಮಾಡಿಕೊಂಡಿದ್ದ. ಗಲಾಟೆ ವೇಳೆ ಸ್ಕ್ರೂಡೈವರ್ ನಿಂದ ಪತ್ನಿಗೆ ಮನಬಂದಂತೆ ಚುಚ್ಚಿ ಕೊಲೆಗೈದಿದ್ದಾನೆ. ಬಳಿಕ ಮನೆ ಹಿಂಬದಿಯಿದ್ದ ಬಾತ್ ರೂಂ ಫಿಟ್ ಗೆ ಮೃತದೇಹವನ್ನ ಎಸೆದಿದ್ದಾನೆ.

    ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಬ್ಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನ ಹೊರತೆಗೆದು ತುಮಕೂರು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಸ್ತುತ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಬಿಚ್ಚಿಟ್ಟ ಜನಾರ್ದನ ರೆಡ್ಡಿ ಪುತ್ರ!

  • ಚಾಟ್ ಮಾಡಿದ್ದಕ್ಕೆ ಹೆಂಡತಿಯನ್ನೇ ಉಸಿರುಗಟ್ಟಿಸಿ ಕೊಂದ!

    ಚಾಟ್ ಮಾಡಿದ್ದಕ್ಕೆ ಹೆಂಡತಿಯನ್ನೇ ಉಸಿರುಗಟ್ಟಿಸಿ ಕೊಂದ!

    ಲಕ್ನೋ: ಹೆಂಡತಿ ಹೆಚ್ಚು ಸಮಯ ಚಾಟ್ ಮಾಡುವುದರಲ್ಲೇ ಸಮಯವನ್ನು ಕಳೆಯುತ್ತಿದ್ದ ಹಿನ್ನೆಲೆ, ಪತಿಯು ಸೀರೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಂದಿರುವ ಘಟನೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

    ಉನ್ನಾವೋ ಜಿಲ್ಲೆಯ ಹಸನ್‍ಗಂಜ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಅಹ್ಮದ್‍ಪುರ ವಡೆ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಹೆಂಡತಿಯನ್ನು ಕೊಂದ ನಂತರ ಪತಿಯೇ ಪೊಲೀಸರ ಬಳಿ ಬಂದು ತಪ್ಪನ್ನು ಒಪ್ಪಿಕೊಂಡಿದ್ದಾನೆ. ನನ್ನ ಪತ್ನಿ ಹೆಚ್ಚು ಸಮಯ ಫೋನ್ ನೋಡುವುದರಲ್ಲಿ ಮತ್ತು ಬೇರೆಯವರ ಜೊತೆ ಚಾಟ್ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಳು. ಅದಕ್ಕೆ ಆಕೆ ಮೇಲೆ ಕೋಪ ಹೆಚ್ಚಾಗಿ ಈ ಕೆಲಸ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ನಾನಾ ವೇಷ ತೊಟ್ಟು ಜನರಿಗೆ ಟೋಪಿ ಹಾಕಿದ್ದ ಸ್ವಾಮೀಜಿ ಪೊಲೀಸರ ಅತಿಥಿ!

    ಈ ಕುರಿತು ಮಾತನಾಡಿದ ಪೊಲೀಸ್ ಅಧಿಕಾರಿಗಳು, ಪತ್ನಿ ಆರತಿ ಯಾವಾಗಲೂ ತನ್ನ ಫೋನ್‌ನಲ್ಲಿ ಬ್ಯುಸಿಯಾಗಿರುತ್ತಿದ್ದಳು. ಪತಿ ಅರುಣ್ ಒಂದು ವೇಳೆ ಆಕೆಯ ಫೋನ್ ಚೆಕ್ ಮಾಡಲು ಬಂದ್ರೆ ಅವನ ಜೊತೆಗೆ ಜಗಳವಾಡುತ್ತಿದ್ದಳು. ಈ ಹಿನ್ನೆಲೆ ಅರುಣ್‍ ಕೋಪಗೊಂಡು ಜಗಳವಾಡಿದ್ದಾರೆ. ಈ ವೇಳೆ ಪಕ್ಕದಲ್ಲೇ ಇದ್ದ ಸೀರೆಯನ್ನು ತೆಗೆದುಕೊಂಡು ಆಕೆಯ ಕುತ್ತಿಗೆಗೆ ಸುತ್ತಿ ಬಿಗಿದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ವಿವರಿಸಿದ್ದಾರೆ.

    ಪ್ರಸ್ತುತ ಪೊಲೀಸರು ಆರೋಪಿ ಅರುಣ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಬಂಧಿಸಿದ್ದಾರೆ. ಅರುಣ್ ಎಂಟು ವರ್ಷಗಳ ಹಿಂದೆ ಆರತಿ ಅವರನ್ನು ಮದುವೆಯಾಗಿದ್ದರು. ಇವರಿಗೆ ಒಬ್ಬ ಮಗನಿದ್ದ. ಅವರು ತಮ್ಮ ಮನೆ ಸಮೀಪದ ಅಂಗಡಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಆಂಜನೇಯನ ಜನ್ಮಭೂಮಿ ಹೈಜಾಕ್ – ಬಿಜೆಪಿ ಯಾಕೆ ಸುಮ್ಮನಿದೆ ಉಗ್ರಪ್ಪ ಪ್ರಶ್ನೆ

    ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

  • ವರದಕ್ಷಿಣೆಗಾಗಿ ಪತ್ನಿ, ಮಗಳನ್ನೇ ಮನೆಯಿಂದ ಹೊರಹಾಕಿದ ವೈದ್ಯ!

    ವರದಕ್ಷಿಣೆಗಾಗಿ ಪತ್ನಿ, ಮಗಳನ್ನೇ ಮನೆಯಿಂದ ಹೊರಹಾಕಿದ ವೈದ್ಯ!

    ಗಾಂಧಿನಗರ: ವೈದ್ಯನೊಬ್ಬ ವರದಕ್ಷಿಣೆ ತರುವಂತೆ ಹಿಂಸಿಸಿದ್ದಲ್ಲದೇ ಪತ್ನಿ ಹಾಗೂ ತನ್ನ 7 ವರ್ಷದ ಮಗಳನ್ನೇ ಮನೆಯಿಂದ ಹೊರಹಾಕಿದ ಘಟನೆಯೊಂದು ಗುಜರಾತ್‍ನ ಅಹಮ್ಮದಾಬಾದ್‍ನಲ್ಲಿ ನಡೆದಿದೆ.

    ರಾಜಸ್ಥಾನ ಮೂಲದ ವೈದ್ಯ 2011ರಲ್ಲಿ ಮದುವೆಯಾಗಿದ್ದಾನೆ. ಮೊದ ಮೊದಲು ಪತ್ನಿ ಜೊತೆ ಚೆನ್ನಾಗಿಯೇ ಇದ್ದ ಆತ, ನಂತರ ತನ್ನ ಹೆತ್ತವರ ಜೊತೆ ಸೇರಿಕೊಂಡು ತವರು ಮನೆಯಿಂದ ವರದಕ್ಷಿಣೆ ತರುವಂತೆ ಪತ್ನಿಯನ್ನು ಪೀಡಿಸಲು ಆರಂಭಿಸಿದ್ದಾನೆ. ಈ ಮಧ್ಯೆ ದಂಪತಿಗೆ ಹೆಣ್ಣು ಮಗು ಕೂಡ ಜನಿಸಿತ್ತು. ಆ ಬಳಿಕವಂತೂ ಆತ ಪತ್ನಿಯನ್ನು ಮತ್ತಷ್ಟು ಪೀಡಿಸಲು ಶುರು ಮಾಡಿದ. ಇದನ್ನೂ ಓದಿ: ಉಕ್ರೇನ್‌ಗೆ ಸಹಕಾರ ನೀಡುತ್ತೇವೆ ಎಂದಿದ್ದ ಅಮೆರಿಕ ಸೇನೆಯನ್ನು ಕಳುಹಿಸಿಲ್ಲ ಯಾಕೆ?

    ಇತ್ತ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆತ 2014ರಲ್ಲಿ ತಮಿಳುನಾಡಿನ ತಂಜಾವೂರಿಗೆ ಶಿಫ್ಟ್ ಆದ. ಈ ವೇಳೆ ಪತ್ನಿ ಕೂಡ ಪತಿ ಜೊತೆಗೇ ತೆರಳಿದ್ದಾಳೆ. ಆದರೆ ಅಲ್ಲಿ ಆತ ಬೇರೊಂದು ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡ. ಈ ವಿಚಾರ ಪತ್ನಿ ಗಮನಕ್ಕೆ ಬಂದಿದೆ. ಕೂಡಲೇ ಈ ಕುರಿತು ಪತಿಯನ್ನು ಪ್ರಶ್ನೆ ಮಾಡಿದಳು. ಇದರಿಂದ ಸಿಟ್ಟಿಗೆದ್ದ ವೈದ್ಯ, ಪತ್ನಿಯನ್ನು ಚೆನ್ನಾಗಿ ಥಳಿಸಿದ್ದಾನೆ. ಇದನ್ನೂ ಓದಿ: ರಷ್ಯಾ ಅಧ್ಯಕ್ಷ ಪುಟಿನ್‌ಗೆ ವೈಯಕ್ತಿಕ ನಿರ್ಬಂಧ ಹೇರಲು ಮುಂದಾದ ಅಮೆರಿಕ

     

    ಪತಿಯ ಹಿಂಸೆ ತಾಳಲಾರದೆ ಪತ್ನಿ ತನ್ನ ತವರಿಗೆ ತೆರಳಿದಳು. ಆದರೆ ತವರು ಮನೆಯವರು ಅವಳ ಮನಸ್ಸನ್ನು ಪರಿವರ್ತನೆ ಮಾಡಿ, ಇಬ್ಬರನ್ನು ಬಲವಂತವಾಗಿ ಹೊಂದಾಣಿಕೆ ಮಾಡಿಸಿ ಮತ್ತೆ ಪತಿ ಬಳಿ ಕಳುಹಿಸಿದ್ದಾರೆ. 2020ರಲ್ಲಿ ಮತ್ತೆ 20 ಲಕ್ಷ ಹಣ ತರುವಂತೆ ಬೇಡಿಕೆ ಇಟ್ಟ. ಆಸ್ಪತ್ರೆ ಕಟ್ಟಿಸಬೇಕು ಹಣ ಬೇಕು, ತವರಿಂದ ಹಣ ತರುವಂತೆ ತಿಳಿಸಿದ್ದಾನೆ. ಅಂತೆಯೇ ಪತ್ನಿ ತನ್ನ ತವರು ಮನೆಯಲ್ಲಿ ಹಣ ಕೇಳಿದ್ದಾಳೆ. ಆದರೆ ಅವರು ಹಣ ಕೊಡಲು ಒಪ್ಪಲಿಲ್ಲ. ಇದರಿಂದ ರೊಚ್ಚಿಗೆದ್ದ ವೈದ್ಯ ತನ್ನ ಪತ್ನಿ ಹಾಗೂ ಮಗಳನ್ನು ಮನೆಯಿಂದ ಹೊರಹಾಕಿದ್ದಾನೆ.

    ಸದ್ಯ ಪತ್ನಿ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪತಿ ದೂರು ದಾಖಲಿಸಿದ್ದಾಳೆ.

  • ಪತಿ ಕೊಂದು ದೇಹದ ತುಂಡುಗಳನ್ನು ಟ್ಯಾಂಕ್‍ನಲ್ಲಿ ಬಚ್ಚಿಟ್ಟ ಪತ್ನಿ

    ಪತಿ ಕೊಂದು ದೇಹದ ತುಂಡುಗಳನ್ನು ಟ್ಯಾಂಕ್‍ನಲ್ಲಿ ಬಚ್ಚಿಟ್ಟ ಪತ್ನಿ

    ಭೋಪಾಲ್: 40 ವರ್ಷದ ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಂದು ಆತನ ದೇಹವನ್ನು ಐದು ತುಂಡುಗಳಾಗಿ ಕತ್ತರಿಸಿ ವಿಭಿನ್ನ ಸ್ಥಳಗಳಲ್ಲಿ ಎಸೆದಿರುವ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ನಡೆದಿದೆ.

    ಮಹಿಳೆಯನ್ನು ಸುನೀತಾ ಎಂದು ಗುರುತಿಸಲಾಗಿದ್ದು, ತನ್ನ ಇಬ್ಬರು ಸ್ನೇಹಿತರಾದ ರಿಜ್ವಾನ್ ಖಾನ್ ಮತ್ತು ಭಯ್ಯೂ ಜೊತೆ ಸೇರಿ ತನ್ನ ಪತಿ ಬಬ್ಲು ಜಾಡೋನ್ ಹತ್ಯೆಗೈದಿದ್ದಾಳೆ. ಮಹಿಳೆಯ ಮೃತ ವ್ಯಕ್ತಿಯ ಪುತ್ರ ಪ್ರಶಾಂತ್ ಮದ್ಯದ ಅಮಲಿನಲ್ಲಿ ತನ್ನ ಸ್ನೇಹಿತರ ಬಳಿ ಹೇಳಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕುಡಿಯಲು ಹಣ ನೀಡದ್ದಕ್ಕೆ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ

    ಫೆಬ್ರವರಿ 6ರಂದು ಈ ಘಟನೆ ನಡೆದಿದ್ದು, ಸುನೀತಾ ಜಾಡೋನ್ ಊಟದಲ್ಲಿ ವಿಷವನ್ನು ಬೆರೆಸಿ ಬಬ್ಲು ಜಾಡೋನ್‍ಗೆ ನೀಡಿದ್ದಾಳೆ. ಇದರಿಂದ ಆತ ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆ ತನ್ನ ಸ್ನೇಹಿತ ರಿಜ್ವಾನ್ ಜೊತೆ ಸೇರಿ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ನಗರದಲ್ಲಿ ಮಾಂಸದ ಅಂಗಡಿ ನಡೆಸುತ್ತಿದ್ದ ರಿಜ್ವಾನ್ ಮತ್ತು ಭಯ್ಯು ಬಬ್ಲು ಜಾಡೋನ್ ದೇಹವನ್ನು ಐದು ತುಂಡುಗಳಾಗಿ ಕತ್ತರಿಸಿ, ಶವದ ತುಂಡುಗಳನ್ನು ವಿವಿಧೆಡೆ ಎಸೆದಿದ್ದಾರೆ. ಆತನ ಕಾಲು ಮತ್ತು ಕೈಗಳನ್ನು ದೇವಾಸ್ ಅರಣ್ಯಪ್ರದೇಶದಲ್ಲಿ ಎಸೆದಿದ್ದು, ಸುನೀತಾ ಮುಂಡ ಮತ್ತು ತಲೆಯನ್ನು ಅವರ ಮನೆಯ ಸೆಪ್ಟಿಕ್ ಟ್ಯಾಂಕ್‍ನಲ್ಲಿ ಹೂತಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗುರುವಾರ ರಾತ್ರಿ ಮದ್ಯದ ಅಮಲಿನಲ್ಲಿದ್ದ ಮಗ ಪ್ರಶಾಂತ್ ಜೇಡನ್ ತನ್ನ ಸ್ನೇಹಿತನಿಗೆ ತನ್ನ ತಂದೆಯನ್ನು ಕೊಂದು ಹೂತಿಟ್ಟಿರುವುದಾಗಿ ತಿಳಿದಾಗ ವಿಷಯ ಬೆಳಕಿಗೆ ಬಂದಿದೆ. ಮತ್ತು ತನ್ನ ತಂದೆಯನ್ನು ತಾಯಿ ಕೊಂದ ಈ ವಿಚಾರ ಯಾರಿಗೂ ತಿಳಿದಿಲ್ಲ. 20 ದಿನಗಳ ಹಿಂದೆ ತಂದೆಯನ್ನು ಕೊಂದು ಶವವನ್ನು ಎಸೆದಿರುವುದಾಗಿ ಪ್ರಶಾಂತ್ ಜೇಡನ್ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಭಾರತೀಯರನ್ನು ಕರೆತರಲು ರೊಮೇನಿಯಾಗೆ ವಿಮಾನ – ಏರ್ ಇಂಡಿಯಾ ಯೋಜನೆ

    ಈ ಪ್ರಕರಣ ಸಂಬಂಧ ಪೊಲೀಸರು ಶುಕ್ರವಾರ ಬೆಳಗ್ಗೆ ಸುನೀತಾ ಮತ್ತು ಪ್ರಶಾಂತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಸುನೀತಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಮತ್ತು ತನ್ನ ಪತಿ ತನಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾಳೆ. ಮತ್ತೊಂದೆಡೆ ರಿಜ್ವಾನ್ ಮತ್ತು ಭಯ್ಯೂ ತಲೆಮರೆಸಿಕೊಂಡಿದ್ದಾರೆ.

  • ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಮಚ್ಚಿನಿಂದ ಕೊಚ್ಚಿ ಹೆಂಡತಿ, ಅತ್ತೆ ಕೊಲೆ

    ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಮಚ್ಚಿನಿಂದ ಕೊಚ್ಚಿ ಹೆಂಡತಿ, ಅತ್ತೆ ಕೊಲೆ

    ಬೆಂಗಳೂರು: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತಿದ್ದ ವ್ಯಕ್ತಿಯೋರ್ವ ಪತ್ನಿ ಹಾಗೂ ಅತ್ತೆಯನ್ನು ಕೊಂದಿರುವ ಘಟನೆ ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಸಾವಿತ್ರಿ ಹಾಗೂ ಸರೋಜಮ್ಮ ಎಂದು ಗುರುತಿಸಲಾಗಿದ್ದು, ರವಿಕುಮಾರ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಹೆಂಡತಿಯ ಅನೈತಿಕ ಸಂಬಂಧಕ್ಕೆ ಬೇಸತ್ತಿದ್ದ ರವಿಕುಮಾರ್, ಪದೇ ಪದೇ ಹೆಂಡತಿಗೆ ಬುದ್ಧಿವಾದ ಹೇಳಿದ್ದನು. ಆದರೂ ಹೆಂಡತಿ ತನ್ನ ಛಾಳಿಯನ್ನು ತಿದ್ದುಕೊಳ್ಳದ ಹಿನ್ನೆಲೆ ಮೊದಲು ವಾಸ ಮಾಡುತ್ತಿದ್ದ ಮನೆಯನ್ನು ಖಾಲಿ ಮಾಡಿ ಬೇರೆ ಕಡೆ ಮನೆ ಮಾಡಿದನು. ಬಳಿಕವೂ ಹೆಂಡತಿ ತನ್ನ ಹಳೇ ಗೆಳಯನನ್ನು ಬಿಟ್ಟಿರಲಿಲ್ಲ. ಇದರಿಂದ ಬೇಸತ್ತ ರವಿಕುಮಾರ್ ಇಂದು ಮಕ್ಕಳನ್ನು ಸ್ವತಃ ತಾನೇ ಸ್ಕೂಲ್‍ಗೆ ಬಿಟ್ಟಿದ್ದಾನೆ. ಇದನ್ನೂ ಓದಿ:  ಉಗ್ರರ ಪತ್ತೆಗೆ ಗಾಜಿಯಾಬಾದ್ ಕವಿಯನ್ನು ನೇಮಿಸಿಕೊಳ್ಳಿ: ಕೇಜ್ರಿವಾಲ್ ವ್ಯಂಗ್ಯ

    ನಂತರ ಸ್ಕೂಲಿನಿಂದ ಮನೆಗೆ ಬಂದು ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಎಳ ನೀರು ಕೊಚ್ಚುವ ಮಚ್ಚಿನಿಂದ ಪತ್ನಿ ಸಾವಿತ್ರಿ ಮತ್ತು ಆಕೆಯ ತಾಯಿ ಸರೋಜಮ್ಮ ಇಬ್ಬರನ್ನೂ ಕೊಚ್ಚಿ ಕೊಂದಿದ್ದಾನೆ. ಕೊಲೆ ಮಾಡಿ ತಕ್ಷಣ ತಾನೇ ತನ್ನ ಸ್ಕೂಟರ್ ಮೂಲಕ ಪೊಲೀಸ್ ಠಾಣೆಗೆ ತೆರಳಿ ಹೆಂಡತಿಯನ್ನು ಹತ್ಯೆ ಮಾಡಿರುವ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾನೆ. ಇದನ್ನೂ ಓದಿ:  ಉಗ್ರರ ಪತ್ತೆಗೆ ಗಾಜಿಯಾಬಾದ್ ಕವಿಯನ್ನು ನೇಮಿಸಿಕೊಳ್ಳಿ: ಕೇಜ್ರಿವಾಲ್ ವ್ಯಂಗ್ಯ

     

  • ಅನ್ಯ ಜಾತಿಯವನನ್ನು ಮದುವೆಯಾದ ಮಗಳು- ರುಬ್ಬುವ ಕಲ್ಲಿನಿಂದ ಚಚ್ಚಿ ಪತ್ನಿ, ಮಕ್ಕಳನ್ನು ಕೊಂದು ಪ್ರಾಣ ಬಿಟ್ಟ ತಂದೆ

    ಅನ್ಯ ಜಾತಿಯವನನ್ನು ಮದುವೆಯಾದ ಮಗಳು- ರುಬ್ಬುವ ಕಲ್ಲಿನಿಂದ ಚಚ್ಚಿ ಪತ್ನಿ, ಮಕ್ಕಳನ್ನು ಕೊಂದು ಪ್ರಾಣ ಬಿಟ್ಟ ತಂದೆ

    ಚೆನ್ನೈ: ಮಗಳು ಕೆಳಜಾತಿಯ ಯುವಕನನ್ನು ಮದುವೆಯಾಗಿದ್ದಾಳೆ ಎನ್ನುವ ಅವಮಾನ ತಾಳಲಾರದೆ ತಂದೆ ಮನೆಯವರನ್ನೆಲ್ಲ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.

    ಟೀ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣನ್ ತನ್ನ ಹಿರಿಯ ಮಗಳು ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕಾಗಿ ಮನನೊಂದಿದ್ದರು. ಹೀಗಾಗಿ ಅವರು ತಮ್ಮ ಹೆಂಡತಿ, ಮಕ್ಕಳನ್ನು ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದ ಅವರ ಮಗಳು ಈಗ ಪತಿಯೊಂದಿಗೆ ವಾಸಿಸುತ್ತಿದ್ದು, ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ ಎಂದು ನಾಗಪಟ್ಟಣಂ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಜಿ ಜವಾಹರ್ ಹೇಳಿದ್ದಾರೆ.  ಇದನ್ನೂ ಓದಿ:ಸಿಎಂ ಜಗನ್ ಆದೇಶಕ್ಕೆ ನಿಟ್ಟುಸಿರಿಟ್ಟ ತೆಲುಗು ಚಿತ್ರರಂಗ

    ನಡೆದಿದ್ದೇನು?: ಮಗಳ ಮದುವೆ ವಿಚಾರವಾಗಿ ನೊಂದ ಲಕ್ಷ್ಮಣನ್ ರಾತ್ರಿ ವೇಳೆ ರುಬ್ಬುವ ಕಲ್ಲನ್ನು ತೆಗೆದುಕೊಂಡು ತನ್ನ ಪತ್ನಿ ಭುವನೇಶ್ವರಿ ಮತ್ತು ಇಬ್ಬರು ಕಿರಿಯ ಪುತ್ರಿಯರಾದ ವಿನೋತಿನಿ ಮತ್ತು ಅಕ್ಷಯ ಅವರನ್ನು ಬರ್ಬರವಾಗಿ ಕೊಂದಿದ್ದಾರೆ. ನಂತರ ಲಕ್ಷ್ಮಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಲಕ್ಷ್ಮಣನ್ ಟೀ ಅಂಗಡಿ ತೆರೆಯದ ಕಾರಣ ಅಕ್ಕಪಕ್ಕದ ಮನೆಯವರು ಬೆಳಗ್ಗೆ 7 ಗಂಟೆ ಸುಮಾರಿಗೆ ಅವರ ಮನೆ ಬಳಿ ಬಂದು ನೋಡಿದ್ದಾರೆ. ಆಗ ಲಕ್ಷ್ಮಣನ ಕುಟುಂಬಸ್ಥರು ಸಾವನ್ನಪ್ಪಿರುವುದು ತಿಳಿದಿದೆ.

    ಮಾಹಿತಿ ಪಡೆದ ಪೊಲೀಸರು ಶವಗಳನ್ನು ಶವಪರೀಕ್ಷೆಗಾಗಿ ನಾಗಪಟ್ಟಣಂ ಸರ್ಕಾರಿ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ನಾಗಪಟ್ಟಣಂ ಜಿಲ್ಲೆಯ ಎಸ್‌ಪಿ ಜವಾಹರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದಾರೆ.