ಹಾಸನ: ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ ಪತಿಯನ್ನೇ ಹತ್ಯೆಗೈದು, ಕೃತ್ಯವನ್ನು ಅಪಘಾತ ಎಂದು ಬಿಂಬಿಸಲು ಹೋಗಿ ಮಹಿಳೆಯೊಬ್ಬಳು ಸಿಕ್ಕಿಬಿದ್ದಿರುವ ಘಟನೆ ಹಾಸದಲ್ಲಿ ನಡೆದಿದೆ.
ಜೂನ್ 5ರ ರಾತ್ರಿ ಬೈಕ್‍ನಿಂದ ಬಿದ್ದ ಸ್ಥಿತಿಯಲ್ಲಿ ಕೃಷ್ಣೇಗೌಡ(52) ಸಾವನ್ನಪ್ಪಿದ್ದರು. ಮೂಲತಃ ಶಾಂತಿಗ್ರಾಮ ಹೋಬಳಿ ಬಸ್ತಿಹಳ್ಳಿ ಗ್ರಾಮದ ಕೃಷ್ಣೇಗೌಡ, ಮೊಸಳೆಹೊಸಳ್ಳಿ ಸಮೀಪ ಹೆಂಡತಿ ಮನೆಯಲ್ಲಿಯೇ ವಾಸವಿದ್ದರು. ಮನೆಯ ಸಮೀಪ ರಸ್ತೆಯಲ್ಲಿ ಕೃಷ್ಣೇಗೌಡ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ ಈ ಬಗ್ಗೆ ಅನುಮಾನಗೊಂಡ ಪೊಲೀಸರಿಗೆ ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅಸಲಿ ಸತ್ಯ ತಿಳಿದು ಬಂದಿದೆ.
ಶಾಂತಿಗ್ರಾಮ ಹೋಬಳಿ ಬಸ್ತಿಹಳ್ಳಿ ಗ್ರಾಮದ ಕೃಷ್ಣೇಗೌಡ ಮತ್ತು ಗುಡುಗನಹಳ್ಳಿ ಗ್ರಾಮದ ಜ್ಯೋತಿ ಅವರನ್ನು 23 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಪ್ರತಿದಿನ ಕೃಷ್ಣೇಗೌಡರೊಂದಿಗೆ ಜ್ಯೋತಿ ಜಗಳ ತೆಗೆದು, ಕೆಲವು ವೇಳೆ ಹಲ್ಲೆ ಸಹ ಮಾಡುತ್ತಿದ್ದಳು ಎನ್ನಲಾಗಿದೆ. ಇದನ್ನೂ ಓದಿ: ದೇವಾಲಯದ ರಥ ಉರುಳಿ ಬಿದ್ದು ಇಬ್ಬರು ಸಾವು – ನಾಲ್ವರಿಗೆ ಗಾಯ
ಇದೇ ಜಗಳ ವಿಕೋಪಕ್ಕೆ ತಿರುಗಿ ಹರಿತವಾದ ಆಯುಧದಿಂದ ಹೊಡೆದು, ಕತ್ತುಹಿಸುಕಿ ಕೊಲೆ ಮಾಡಿದ್ದಾಳೆ. ಈ ಕೊಲೆಯನ್ನು ಮರೆಮಾಚಲು ಅಪಘಾತವಾಗಿದೆ ಎಂದು ಬಿಂಬಿಸಲು ಬೈಕ್ ಸಮೇತ ಮೃತದೇಹವನ್ನು ರೈಸ್ ಮಿಲ್ ಹತ್ತಿರ ರಸ್ತೆಗೆ ರಾತ್ರೋರಾತ್ರಿ ತಂದು ಹಾಕಿದ್ದಾರೆ. ಕೃಷ್ಣೇಗೌಡನನ್ನು ಕೊಲೆ ಮಾಡಲು ಆತನ ಪತ್ನಿ ಜ್ಯೋತಿಗೆ, ಜ್ಯೋತಿಯ ತಾಯಿ ಪುಟ್ಟಮ್ಮ ಕೂಡ ಸಾಥ್ ನೀಡಿದ ಆರೋಪ ಕೇಳಿ ಬಂದಿದೆ.
ಚಾಮರಾಜಪೇಟೆ: ಬೆಂಗಳೂರಿನಲ್ಲಿ ವೃದ್ಧ ಜುಗರಾಜ್ ಜೈನ್ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ವೃದ್ಧನ ಮನೆಯಲ್ಲಿ ಕೆಲಸ ಮಾಡ್ತಿದ್ದ ಬಿಜೊರಾಮ್, ಹೆಂಡತಿಯ ಕಾಟಕ್ಕೆ ಬೇಸತ್ತು ಜುಗರಾಜ್ ಜೈನ್ ಅವರನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. 15 ಸಾವಿರ ರೂ.ಗೆ ಕೆಲಸ ಮಾಡ್ತಿದ್ದ ಬಿಜೊರಾಮ್‍ಗೆ ಪತ್ನಿ ಹಣ ತರುವಂತೆ ಪ್ರತಿದಿನ ಪೀಡಿಸ್ತಿದ್ಲು. ಇದರಿಂದ ಬೇಸತ್ತಿದ್ದ ಬಿಜೊರಾಮ್ ಪ್ಲಾನ್ ಮಾಡಿ ಓಂಪ್ರಕಾಶ್ ಮಹೇಂದ್ರ ಜೊತೆ ಸೇರಿ ವೃದ್ಧನ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ದೇವಸ್ಥಾನದಲ್ಲಿ ಅರ್ಚಕರ ಶವ ಪತ್ತೆ, ವಿಗ್ರಹ ನಾಪತ್ತೆ
ಜುಗರಾಜ್ ಜೈನ್ ಅವರನ್ನು ಕೊಲೆ ಮಾಡಿದ ಬಳಿಕ ಚೀಲದಲ್ಲಿ ಚಿನ್ನ, ಹಣ ತುಂಬಿಕೊಂಡು ಚಿತ್ರದುರ್ಗ, ಹುಬ್ಬಳ್ಳಿ ಮೂಲಕ ಗೋವಾಗೆ ಎಸ್ಕೇಪ್ ಆಗಿ, ಅಲ್ಲಿಂದ ರಾಜಸ್ಥಾನಕ್ಕೆ ಹೋಗಿದ್ರು. ಆದರೆ, ಪೊಲೀಸರು ಬೇಟೆಯಾಡಿ 8.75 ಕೆಜಿ ಚಿನ್ನ, 4 ಕೆಜಿ ಬೆಳ್ಳಿ, 53 ಲಕ್ಷ ನಗದನ್ನು ವಶಕ್ಕೆ ಪಡೆದಿದ್ದಾರೆ.
ಪಣಜಿ: ಕಳೆದ ವಾರ ಉತ್ತರ ಗೋವಾದ ಅರಂಬೋಲ್ ಸ್ವೀಟ್ ವಾಟರ್ ಬೀಚ್‍ನಲ್ಲಿ ಬ್ರಿಟಿಷ್ ಮಹಿಳೆಯೊಬ್ಬರು ಅತ್ಯಾಚಾರಕ್ಕೊಳಗಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಪತಿಯೊಂದಿಗೆ ರಜೆಯ ಮೇಲೆ ಗೋವಾದಲ್ಲಿರುವ ಸಂತ್ರಸ್ತೆ ಸೋಮವಾರ (ಜೂನ್ 6) ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ, ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣು
ಚಿಕ್ಕಬಳ್ಳಾಪುರ: ಗಂಡನ ಹತ್ಯೆಗೆ 40 ಲಕ್ಷ ರೂ.ಗೆ ಸುಪಾರಿ ಕೊಟ್ಟ ಐನಾತಿ ಹೆಂಡತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಟಿ ದಾಸರಹಳ್ಳಿಯ ನಿವಾಸಿ ಮಮತಾ ತನ್ನ ಗಂಡ ಮುಕುಂದನ ಕೊಲೆಗೆ 40 ಲಕ್ಷ ರೂ.ಗೆ ಸುಪಾರಿ ನೀಡಿದ್ದಳು. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಮಮತಾ, ಮಮತಾಳ ಸ್ನೇಹಿತೆ ತಸ್ಲೀಮಾ, ಹಾಗೂ ಸುಪಾರಿ ಹಂತಕರಾದ ಮೌಲಾ, ಸಯ್ಯದ್ ನಯೀಮ್‍ರನ್ನು ಬಂಧಿಸಿದ್ದಾರೆ.
ಘಟನೆಯೇನು?: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಬೆಂಗಳೂರಿನ ಟಿ. ದಾಸರಹಳ್ಳಿಯ ಮುಕುಂದ ಎಫ್‍ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿದಿನ ಬೆಂಗಳೂರಿನಿಂದ ತಮ್ಮ ಸ್ಯಾಂಟ್ರೋ ಕಾರಿನಲ್ಲಿ ತಮ್ಮ ನಾಲ್ವರು ಸಹ ಉದ್ಯೋಗಿಗಳೊಂದಿಗೆ ಬೆಂಗಳೂರಿನಿಂದ ಕಚೇರಿಗೆ ಬಂದು ಹೋಗುತ್ತಿದ್ದರು.
ಅದೇ ರೀತಿ ಮೇ 26ರಂದು ಕೆಲಸ ಮುಗಿಸಿ ಸ್ಯಾಂಟ್ರೋ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾಗ ದೊಡ್ಡಬಳ್ಳಾಪುರ ನಗರದ ಕೈಗಾರಿಕೆ ಪ್ರದೇಶದಲ್ಲಿ ಸ್ಯಾಂಟ್ರೋ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರು ಗಾಜು ಒಡೆದು ಮುಕುಂದ ಕೊಲೆಗೆ ಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಕಾರು ಡೋರ್ ಲಾಕ್ ಆಗಿದ್ದು, ಸಾರ್ವಜನಿಕರು ಬಂದ ಕಾರಣ ಹಂತಕರ ಪ್ಲ್ಯಾನ್ ಫ್ಲಾಪ್ ಆಗಿ ವಾಪಸ್ಸಾಗಿದ್ದರು. ಬಿಳಿ ಬಣ್ಣದ ಕಾರಿನಲ್ಲಿ ಬಂದವರು ಕೊಲೆಗೆ ಯತ್ನಿಸಿದ್ದಾರೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸರಿಂದ ಸುಪಾರಿ ಹತ್ಯೆ ಬಯಲು:
ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಘಟನೆ ನಡೆದ ಸುತ್ತ ಮುತ್ತಲೂ ಏರಿಯಾಗಳಲ್ಲಿನ ಸಿಸಿಟಿವಿಗಳ ದೃಶ್ಯಗಳನ್ನು ಪರಿಶೀಲಿಸಿದಾಗ ಬಿಳಿ ಬಣ್ಣದ ಕಾರಿನ ಮೇಲೆ ಅನುಮಾನ ಬಂದಿತ್ತು. ಅನುಮಾನದ ಮೇರೆಗೆ ಕಾರು ನಂಬರ್ ಆಧರಿಸಿ ಕಾರು ಪತ್ತೆ ಹಂಚಲು ಮುಂದಾದಾಗ ಆ ಕಾರು ಒಬ್ಬರಲ್ಲ, 7 ಮಂದಿ ಮಾಲೀಕರ ಬದಲಾವಣೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.
ಕಾರನ್ನ ಕೊನೆಗೆ ಗ್ಯಾರೇಜ್ ಒಂದರಲ್ಲಿ ಪತ್ತೆ ಹಚ್ಚಿದ್ದರು. ಪತ್ತೆ ಹಚ್ಚಿ ಆರೋಪಿ ಮೌಲ ಹಾಗೂ ನಯೀಮ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಮತಾಳ ಸುಪಾರಿ ಕಥೆ ಬಯಲಾಗಿದೆ. ಮುಕುಂದನ ಹತ್ಯೆಗೆ ಹೆಂಡತಿ ಮಮತಾ ಸ್ನೇಹಿತೆ ತಸ್ಲೀಮಾ ಮೂಲಕ ಸುಪಾರಿ ಕೊಟ್ಟಿದ್ದಳು ಎನ್ನುವ ವಿಚಾರ ಬಹಿರಂಗವಾಗಿದೆ.
ಗಂಡನ ಮೇಲೆ ಹೆಂಡತಿ ಸುಪಾರಿ ಕೊಟ್ಟಿದ್ದು ಯಾಕೆ?:
ಮಮತಾ ತನ್ನ ಮನೆಯ ಪಕ್ಕದ ಮಹಿಳೆಯೊಬ್ಬರ ಬಳಿ ಸಂಬಂಧಿಕರಿಂದ ಚೀಟಿ ಹಾಕಿಸಿದ್ದಳು. ಆದರೆ ಚೀಟಿ ಹಣ ಪಡೆದ ಮಹಿಳೆ ಪಂಗನಾಮ ಹಾಕಿ ಮೋಸ ಮಾಡಿ ಪರಾರಿಯಾಗಿದ್ದಾಳೆ. ಇದರಿಂದ ಸಂಬಂಧಿಕರೆಲ್ಲಾ ಹಣ ಕೊಡುವಂತೆ ಮಮತಾಳ ದುಂಬಾಲು ಬಿದ್ದಿದ್ದರು.
ಇದ್ರಿಂದ ಗಂಡ 20 ಲಕ್ಷದಷ್ಟು ಸ್ವಂತ ಹಣ ಕೊಟ್ಟಿದ್ದು, ಆದರೂ ಮತ್ತಷ್ಟು ಮಂದಿ ಹಣ ಕೊಡಿ ಅಂತ ಮನೆಗೆ ಬರುತ್ತಿದ್ದರು. ಇದರಿಂದ ದಿನೇ ದಿನೇ ಇದೇ ಆಗೋಯ್ತು ಎಂದು ಹೆಂಡತಿ ಮಮತಾಳ ಮೇಲೆ ಗಂಡ ಕೋಪಗೊಂಡು ಬೈಯ್ಯುತ್ತಿದ್ದ. ಅಷ್ಟೇ ಅಲ್ಲದೇ ಮಮತಾಳ ತಂದೆ, ತಾಯಿಯನ್ನು ಕರೆಸಿ ಹೇಳಿ ಅವಮಾನ ಮಾಡಿದ್ದ.
ಆಗ ತಸ್ಲೀಮಾ ತನಗೆ ಪರಿಚಯ ಇದ್ದ ಮೌಲಾ ಹಾಗೂ ನಯೀಮ್‍ನನ್ನು ಕರೆಸಿ 40 ಲಕ್ಷ ರೂ.ಗೆ ಸುಪಾರಿ ಡೀಲ್ ಒಪ್ಪಿಸಿದ್ದಾಳೆ. ಆಗ ಮಮತಾ ತನ್ನ ಒಡವೆ ಮಾರಿ 10 ಲಕ್ಷ ರೂ. ಅಡ್ವಾನ್ಸ್ ಕೊಟ್ಟಿದ್ದು ಅದೇ ಅಡ್ವಾನ್ಸ್ ಹಣದಲ್ಲಿ 1 ಲಕ್ಷ ಕೊಟ್ಟು ಗೆಟ್ಜ್ ಕಾರು ಖರೀದಿಸಿ ಹತ್ಯೆಗೆ ಮುಂದಾಗಿದ್ದರು.
ಸದ್ಯ ಪೊಲೀಸರು ಪತ್ನಿ ಮಮತಾಳನ್ನು ಬಂಧಿಸಿದ್ದಾರೆ. ವಿಪರ್ಯಾಸ ಅಂದರೆ ಗಂಡನ ಹತ್ಯೆಗೆ ಸುಪಾರಿ ನೀಡಿದ್ದ ಮಮತಾ, ಘಟನೆ ನಡೆದ ದಿನ ಹಾಗೂ ಕಾರು ಬಿಡಿಸಿಕೊಳ್ಳುವಾಗ ಗಂಡನ ಜೊತೆಯಲ್ಲೇ ಪೊಲೀಸ್ ಠಾಣೆಗೆ ಬಂದು ಗೊತ್ತಿಲ್ಲದವಳಂತೆ ನಾಟಕ ಮಾಡಿದ್ದಳು.
ಆದರೆ ಪೊಲೀಸರು ತನಿಖೆ ನಡೆಸಿದಾಗ ನಿಜವಾದ ವಿಚಾರ ತಿಳಿದುಬಂದಿದ್ದು, ಪತ್ನಿ ಮಮತಾ, ಸ್ನೇಹಿತೆ ತಸ್ಲೀಮಾ, ಸುಪಾರಿ ಹಂತಕರಾದ ಶಿಡ್ಲಘಟ್ಟ ಮೂಲದ ಮೌಲಾ, ಕೆ ಜಿ ಹಳ್ಳಿಯ ನಯೀಮ್‍ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ:ಪಿಎಸ್‍ಐ ಹಗರಣ – ಆರೋಪಿ ದರ್ಶನ್ ಗೌಡ ಅರೆಸ್ಟ್
ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ 4 ಮಂದಿ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದೇವೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಕೋನ ವಂಶಿಕೃಷ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ನಾಗರಾಜ್, ಸಿಪಿಐ ಗಳಾದ ಸತೀಶ್ ಹಾಗೂ ಹರೀಶ್ ಭಾಗಿಯಾಗಿದ್ದು, ಪೊಲೀಸರಿಗೆ ಎಸ್ಪಿ ಕೋನವಂಶಿಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಂಡೀಗಢ: ಗರ್ಭಿಣಿ ಮಹಿಳೆ ಮೇಲೆ ಐವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಝೇಲಂ ನಗರದಲ್ಲಿ ನಡೆದಿದೆ.
ಮನೆಗೆ ನುಗ್ಗಿದ ಕಿಡಿಗೇಡಿಗಳು ಮಹಿಳೆಯ ಪತಿ ಮೇಲೆ ಹಲ್ಲೆ ನಡೆಸಿ ದಾರದಿಂದ ಕಟ್ಟಿಹಾಕಿದ್ದಾರೆ. ಬಳಿಕ ಮಗುವಿನ ನಿರೀಕ್ಷೆಯಲ್ಲಿದ್ದ ಸಂತ್ರಸ್ತೆ ಮೇಲೆ ಅತ್ಯಾಚಾರವೆಸಗಿದ್ದಾರೆ. ನಂತರ ಆಸ್ಪತ್ರೆಗೆ ಭೇಟಿ ನೀಡಿದ ಮಹಿಳೆ ನಡೆದ ಘಟನೆ ಬಗ್ಗೆ ವಿವರಿಸಿದಾಗ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆಯ ರಕ್ತದ ಮಾದರಿಗಳನ್ನು ಫೋರೆನ್ಸಿಕ್ ಪರೀಕ್ಷೆಗಾಗಿ ಲಾಹೋರ್‍ಗೆ ಕಳುಹಿಸಲಾಗಿದೆ.
ಇದೀಗ ಈ ಪ್ರಕರಣ ಪಾಕಿಸ್ತಾನವನ್ನೇ ಬೆಚ್ಚಿ ಬೀಳಿಸಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದ ತಿಂಗಳು, ಕರಾಚಿಯಲ್ಲಿ ಚಲಿಸುವ ರೈಲಿನಲ್ಲಿ 25 ವರ್ಷದ ಮಹಿಳೆಯೊಬ್ಬರು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಇದನ್ನೂ ಓದಿ: ಚರ್ಚ್‍ನಲ್ಲಿ ಹತ್ಯಾಕಾಂಡ – 50 ಮಂದಿಯನ್ನು ಗುಂಡಿಟ್ಟು ಕೊಂದ
ಅಮರಾವತಿ: ಪತ್ನಿ ತನಗೆ ಇಷ್ಟ ಬಂದಂತೆ ಅಡುಗೆ ಮಾಡುತ್ತಿದ್ದಾಳೆ. ಅಡುಗೆ ಒಂದು ಸ್ವಲ್ಪವೂ ರುಚಿಯಾಗಿರುವುದಿಲ್ಲ ಎಂದು ಮನನೊಂದ ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದ ಗುಡೂರು ಮಂಡಲದ ಪಿಂಡಿವಾನಿಪಾಲೆಂ ಗ್ರಾಮದಲ್ಲಿ ನಡೆದಿದೆ.
ತಿರುಮಲ ರಾವ್ ಮೃತ ವ್ಯಕ್ತಿ. ಈತ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ನಿರ್ಮಲಾ ಜ್ಯೋತಿ ಹಾಗೂ ತಿರುಮಲ ರಾವ್ ಮದುವೆ ಆಗಿ ಒಂದು ವರ್ಷ ಕಳೆದಿತ್ತು. ಈ ದಂಪತಿಗೆ ಒಬ್ಬಳು ಮಗಳು ಇದೆ. ಆದರೆ ತಿರುಮಲ ರಾವ್ ಮದ್ಯವ್ಯಸನಿಯಾಗಿದ್ದ. ಇದರ ಜೊತೆಗೆ ಪತ್ನಿ ನಿರ್ಮಲಾ ಜ್ಯೋತಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ.
ತಿರುಮಲ ರಾವ್ ಕುಡಿದು ಮನೆಗೆ ಬಂದ್ದಿದ್ದಾನೆ. ಆದರೆ ಪತ್ನಿ ನಿರ್ಮಲಾ ಮಾಡಿದ ಅಡುಗೆ ರುಚಿಯಾಗಿಲ್ಲ ಎಂದು ಜಗಳವಾಡಿದ್ದಾನೆ. ಇದರಿಂದ ಮನನೊಂದು ತಿರುಮಲ ರಾವ್ ಮನಿ ಬಿಟ್ಟು ಅದೇ ಗ್ರಾಮದಲ್ಲಿರುವ ತನ್ನ ಸ್ನೇಹಿತ ಗೋಪಿಯ ಮನೆಗೆ ಹೋಗಿದ್ದ. ಆದರೆ ಮುಂಜಾನೆ ಗೋಪಿ ಕೆಲಸಕ್ಕೆ ಹೋದಾಗ ತಿರುಮಲ ರಾವ್ ಕ್ರಿಮಿನಾಶಕ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ಇದನ್ನೂ ಓದಿ: ಕಂಟೈನರ್ ಡಿಪೋದಲ್ಲಿ ಬೆಂಕಿ: 16 ಸಾವು, 450ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ವಿಷಯ ತಿಳಿದ ನೆರೆಹೊರೆಯವರು ನಿರ್ಮಲಾ ಅವರಿಗೆ ಮಾಹಿತಿ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಫಲಾಕರಿಯಾಗದೇ ತಿರುಮಲ ರಾವ್ ಮಚಲಿಪಟ್ಟಣಂ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧ ನಿರ್ಮಲಾ ಪೇಡಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅನುಮಾನಾಸ್ಪದ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಅಪ್ರಾಪ್ತ ಪುತ್ರಿಯ ಅಂಡಾಣು ದಾನ ಮಾಡಲು ಒತ್ತಾಯಿಸಿದ ಪಾಪಿ ತಾಯಿ!
ನೆಲಮಂಗಲ: 2 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಪತ್ನಿ ಗಂಡನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ವೀವರ್ಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಪೂಜಾ ಮೃತ ಗೃಹಿಣಿ. ಕಳೆದ ಎರಡು ವರ್ಷಗಳ ಹಿಂದೆ ಅವರು ಮಂಜುನಾಥ್ ಜೊತೆ ಮದುವೆ ಮಾಡಿಕೊಂಡಿದ್ದರು. ಗೃಹಿಣಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್ ರೇಪ್ ತನಿಖೆ CBIಗೆ ವಹಿಸುವಂತೆ ಬಿಜೆಪಿ ಒತ್ತಾಯ
ಪೂಜಾ ಅವರ ಪತಿ ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಅಲ್ಲದೆ ಚಿತ್ರಹಿಂಸೆ ನೀಡುತ್ತಿದ್ದ ಬಗ್ಗೆ ಮೃತ ಪೂಜಾ ಕುಟುಂಬಸ್ಥರು ಆರೋಪಿಸಿದ್ದಾರೆ. ಆತನಿಗೆ ಶಿಕ್ಷೆ ಆಗಬೇಕೆಂದು ಮೃತ ಮಹಿಳೆಯ ಪೋಷಕರು ಆಗ್ರಹಿಸಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಪತಿಗೆ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣ ಮಸೀದಿ ವಿವಾದ – ಹಿಂದೂ, ಮುಸ್ಲಿಮರ ವಾದ ಏನು?
ಲಕ್ನೋ: ಇಬ್ಬರು ಹೆಣ್ಣು ಮಕ್ಕಳನ್ನು ಹೆತ್ತ ಕಾರಣಕ್ಕೆ ಮಹಿಳೆಯೊಬ್ಬಳಿಗೆ ಪತಿ ಹಾಗೂ ಆತನ ಕುಟುಂಬಸ್ಥರು ರಸ್ತೆಯಲ್ಲಿ ಅಮಾನುಷವಾಗಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಡೆದಿದೆ.
ನನ್ನ ಗಂಡ ಮತ್ತು ಅತ್ತೆಯಂದಿರು ನನಗೆ ಗಂಡು ಮಗುವಾಗಲಿಲ್ಲ ಅಂತ ಚಿತ್ರಹಿಂಸೆ ನೀಡುತ್ತಿದ್ದರು. ಅದರಲ್ಲಿಯೂ ನನಗೆ ಎರಡನೇ ಬಾರಿ ಹೆಣ್ಣು ಮಗು ಹುಟ್ಟಿದ ನಂತರ ಹೆಚ್ಚಾಗಿ ಕಿರುಕುಳ ನೀಡುತ್ತಿದ್ದರು. ಹಸಿವಿನಿಂದ ಬಳಲುತ್ತಿದ್ದರು ಎಷ್ಟೋ ಬಾರಿ ಊಟ ಹಾಕುತ್ತಿರಲಿಲ್ಲ. ಬಳಿಕ ನಾನೇ ಕೂಲಿ ಕೆಲಸಕ್ಕೆ ಹೋಗಲು ಆರಂಭಿಸಿದೆ ಎಂದು ಹೇಳಿದ್ದಾಳೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಮಹಿಳೆಗೆ ನಿಂದಿಸುವುದು, ಕಾಲಿನಿಂದ ಒದೆಯುವುದು ಮತ್ತು ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಈ ವೆಳೆ ಮಹಿಳೆ ಗಳಗಳನೆ ಕಣ್ಣೀರು ಹಾಕುತ್ತಾ ಹಲ್ಲೆ ಮಾಡದಂತೆ ಬೇಡಿಕೊಳ್ಳುತ್ತಿರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: ತಲ್ವಾರ್‌ನಲ್ಲಿ ಕೇಕ್ ಕಟ್ – ಮೂವರ ಬಂಧನ
ಇದೀಗ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಮತ್ತು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಹೋಬಾದ ಪೊಲೀಸ್ ವರಿಷ್ಠಾಧಿಕಾರಿ ಸುಧಾ ಸಿಂಗ್ ಹೇಳಿದ್ದಾರೆ.
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಲದಕುಪ್ಪೆ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಹತ್ಯೆಗೈದ ಘಟನೆ ನಡೆದಿದೆ.
ಮಹದೇವಪ್ಪ (55) ಬಂಧಿತ ಆರೋಪಿ ಹಾಗೂ ಮಹದೇವಮ್ಮ (45) ಮೃತ ಮಹಿಳೆ. ದಂಪತಿ ಕಿಲಗೆರೆ ಹಾಗೂ ಮಾದಲವಾಡಿ ಗ್ರಾಮದ ನಡುವೆ ಇರುವ ಬೇಲದಕುಪ್ಪೆಯ ಜಮೀನೊಂದರಲ್ಲಿ ವಾಸವಾಗಿದ್ದರು. ಇವರ ನಡುವೆ ಇಂದು ಮುಂಜಾನೆ ಏಕಾಏಕಿ ಜಗಳ ನಡೆದಿದೆ. ಇದನ್ನೂ ಓದಿ: ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿಗೆ ಆಧಾರ್ ಕಾರ್ಡ್ ಸಮಸ್ಯೆ!
ಜಗಳ ವಿಕೋಪಕ್ಕೆ ತಿರುಗಿ ಸ್ನಾನದ ಮನೆಯಲ್ಲಿದ್ದ ಪತ್ನಿ ಮಹದೇವಮ್ಮರನ್ನು ಪತಿ ಮಹದೇವಪ್ಪ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಪತಿ ಮಹದೇವಪ್ಪ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ನಡೆದಿದೆ. ಘಟನೆ ಸಂಬಂಧಿಸಿ ತೆರಕಣಾಂಬಿ ಪೊಲೀಸ್ ಠಾಣೆಗೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಮನಗರದಲ್ಲಿ ಮೌಢ್ಯತೆ ಇನ್ನೂ ಜೀವಂತ- ಹಸಿ ಬಾಣಂತಿ, ಮಗು ಗ್ರಾಮದಿಂದ ಹೊರಕ್ಕೆ
ಜೈಪುರ: ಕೌಟುಂಬಿಕ ಹಿಂಸಾಚಾರದ ಆಘಾತಕಾರಿ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೊರಹೊಮ್ಮಿದ್ದು, ಮಹಿಳೆಯೊಬ್ಬಳು ಮಗನ ಮುಂದೆಯೇ ಕ್ರಿಕೆಟ್ ಬ್ಯಾಟ್‍ನಿಂದ ಪತಿಯನ್ನು ಥಳಿಸಿದ್ದಾಳೆ. ಈ ಹಿನ್ನೆಲೆ ಪತಿಯೂ ತನ್ನ ರಕ್ಷಣೆ ಮಾಡಿ ಎಂದು ನ್ಯಾಯಾಲಯಕ್ಕೆ ಮೊರೆ ಹೋಗಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.
ತೊಂದರೆಗೀಡಾದ ಪತಿಯೂ ಶಾಲೆಯ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಇವರು ಪೊಲೀಸರಿಗೆ ದೂರನ್ನು ಕೊಟ್ಟಿದ್ದು, ನನ್ನ ಪತ್ನಿಯೂ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ. ಈ ಹಿನ್ನೆಲೆ ನನಗೆ ರಕ್ಷಣೆ ಕೊಡಿ ಎಂದು ಪ್ರಾಂಶುಪಾಲರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪಗೆ ಕೊಟ್ಟು ಗೊತ್ತೇ ಹೊರತು ಬೇಡಿ ಪಡೆದು ಗೊತ್ತಿಲ್ಲ: ಬಿ.ವೈ.ವಿಜಯೇಂದ್ರ
ಪತಿಯು ದೂರಿನಲ್ಲಿ, ಪತ್ನಿ ನನ್ನ ಮೇಲೆ ಪ್ಯಾನ್, ಸ್ಟಿಕ್ ಮತ್ತು ಕ್ರಿಕೆಟ್ ಬ್ಯಾಟ್‍ನಿಂದ ಹಲ್ಲೆ ನಡೆಸುತ್ತಿದ್ದಾಳೆ. ಇದರಿಂದ ಗಾಬರಿಗೊಂಡ ನಾನು ಸಾಕ್ಷ್ಯ ಸಂಗ್ರಹಿಸಲು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದೆ ಎಂದು ತಿಳಿಸಿದ್ದಾರೆ. ಪತ್ನಿ ಹಲ್ಲೆ ಮಾಡುತ್ತಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು, ವೈರಲ್ ಆಗಿದೆ.
In a strange case of domestic violence, a school principal in #Alwar district of #Rajasthan has move the court seeking protection from the physical and mental harassment of his wife.
According to the man, his wife has been beating him black and blue leaving him weak mentally. pic.twitter.com/J1UOmRhyHw
ವೀಡಿಯೋದಲ್ಲಿ ಏನಿದೆ?
ಪತ್ನಿಯೂ ತಮ್ಮ ಮಗ ಮುಂದೆಯೇ ಕ್ರಿಕೆಟ್ ಬ್ಯಾಟ್ ಹಿಡಿದು ಪತಿಗೆ ಕ್ರಿಕೆಟ್ ಬ್ಯಾಟ್‍ನಿಂದ ಹೊಡೆಯುತ್ತಿರುವುದನ್ನು ಕಾಣಬಹುದು. ಈ ಹಿನ್ನೆಲೆ ಪತಿಯೂ ರಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ಘಟನೆಯ ದೃಶ್ಯಾವಳಿಗಳನ್ನು ಹಾಜರುಪಡಿಸಿದ್ದಾರೆ. ಅವರಿಗೆ ಭದ್ರತೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ನಡೆದಿದ್ದೇನು?
ಪ್ರಾಂಶುಪಾಲರಾದ ಅಜಿತ್ ಸಿಂಗ್ ಯಾದವ್ ಅವರು ಏಳು ವರ್ಷಗಳ ಹಿಂದೆ ಹರಿಯಾಣದ ಸೋನಿಪತ್ ನಿವಾಸಿ ಸುಮನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ, ಅವರ ಜೀವನವು ಚೆನ್ನಾಗಿತ್ತು. ಆದರೆ ಸ್ವಲ್ಪ ಸಮಯದ ನಂತರ ಸುಮನ್ ಅವರು ಅಜಿತ್ ಅವರಿಗೆ ಹೊಡೆಯುವುದನ್ನು ಪ್ರಾರಂಭಿಸಿದರು. ಆಗಾಗ್ಗೆ ಪತ್ನಿ ನೀಡುತ್ತಿದ್ದ ಹಿಂಸೆಯಿಂದ ಅಜಿತ್‍ಗೆ ಹಲವು ಗಾಯವಾಗಿದೆ. ಅವುಗಳನ್ನು ಗುಣಪಡಿಸಲು ಅವರು ವೈದ್ಯಕೀಯ ಸಹಾಯವನ್ನು ಪಡೆಯುತ್ತಿದ್ದರು ಎಂದು ಅವರೇ ತಿಳಿಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಬೆಂಗಳೂರಿನಲ್ಲಿದ್ದರೆ, ಈ ದೇವಸ್ಥಾನಕ್ಕೆ ಭೇಟಿ ಪಕ್ಕಾ
ಯಾವುದೇ ರೀತಿಯ ಸಾಕ್ಷ್ಯಿಗಳು ಇಲ್ಲದ ಹಿನ್ನೆಲೆ ಅಜಿತ್ ಮನೆಯಲ್ಲಿ ಯಾರಿಗೂ ತಿಳಿಯದಂತೆ ಕ್ಯಾಮೆರಾ ಇಟ್ಟಿದ್ದಾರೆ. ನಂತರ ಸುಮನ್ ಬ್ಯಾಟ್‍ನಲ್ಲಿ ಹೊಡೆಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಹೆಂಡತಿ ಮಿತಿಗಳನ್ನು ಮೀರಿದ್ದರಿಂದ ನಾನು ನ್ಯಾಯಾಲಯದ ಆಶ್ರಯ ಪಡೆದಿದ್ದೇನೆ. ಸೋದರ ಮಾವ ಸಹ ನನ್ನ ಪತ್ನಿಯನ್ನು ಹಿಂಸೆಗೆ ಪ್ರೇರೇಪಿಸುತ್ತಾನೆ ಎಂದು ಆರೋಪಿಸಿದರು.