Tag: ಪತಿ

  • 4ನೇ ಮಹಡಿಯಿಂದ ತಳ್ಳಿ ಪತ್ನಿಯನ್ನೇ ಕೊಂದ ಪತಿ

    4ನೇ ಮಹಡಿಯಿಂದ ತಳ್ಳಿ ಪತ್ನಿಯನ್ನೇ ಕೊಂದ ಪತಿ

    ಲಕ್ನೋ: ಮಹಿಳೆಯೊಬ್ಬಳನ್ನು ಆಕೆಯ ಪತಿ ಹಾಗೂ ನಾಲ್ವರು ಸೇರಿ 4ನೇ ಮಹಡಿಯ ಬಾಲ್ಕನಿಯಿಂದ ತಳ್ಳಿ ಹತ್ಯೆಗೈದಿದ್ದಾರೆ.

    ಮೃತ ಮಹಿಳೆಯನ್ನು ರಿತಿಕಾ ಸಿಂಗ್(30) ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. ಇದೀಗ ಪೊಲೀಸರು ಆರೋಪಿ ಪತಿ ಆಕಾಶ್ ಗೌತಮ್ ಸೇರಿದಂತೆ ಮೂವರನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ದಯವಿಟ್ಟು ಸಹಾಯ ಮಾಡೋದನ್ನ ನಿಲ್ಲಿಸಬೇಡಿ- ಅಮೆರಿಕಾಗೆ ತಾಲಿಬಾನ್ ಬೇಡಿಕೆ

    ವಿಚಾರಣೆ ವೇಳೆ 2014ರಲ್ಲಿ ರಿತಿಕಾ ಸಿಂಗ್, ಫಿರೋಜಾಬಾದ್ ನಿವಾಸಿ ಆಕಾಶ್ ಗೌತಮ್ ಅವರನ್ನು ಮದುವೆಯಾಗಿದ್ದರು. ಆದರೆ 2018ರಲ್ಲಿ ಇಬ್ಬರು ಬೇರ್ಪಟ್ಟಿದ್ದರು. ಪತಿಯಿಂದ ದೂರವಾದ ರಿತಿಕಾ ಸಿಂಗ್ ನಂತರ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದ ಸ್ನೇಹಿತ ವಿಪುಲ್ ಅಗರ್‍ವಾಲ್‍ನೊಂದಿಗೆ ತಾಜ್‍ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ಮೇವಾಟಿಯ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದಳು ಎಂಬ ವಿಚಾರ ತಿಳಿದುಬಂದಿದೆ ಆಗ್ರಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಎಸ್‍ಪಿ) ಸುಧೀರ್ ಕುಮಾರ್ ಸಿಂಗ್ ಹೇಳಿದ್ದಾರೆ.

    ಶುಕ್ರವಾರ ಆಕಾಶ್ ಗೌತಮ್ ಇಬ್ಬರು ಮಹಿಳೆಯರು ಮತ್ತು ಇಬ್ಬರು ವ್ಯಕ್ತಿಗಳೊಂದಿಗೆ ರಿತಿಕಾ ಸಿಂಗ್ ಇದ್ದ ಅಪಾರ್ಟ್‍ಮೆಂಟ್‍ಗೆ ಹೋಗಿ, ಆಕೆಯ ಗೆಳೆಯ ವಿಪುಲ್ ಅಗರವಾಲ್ ಹಾಗೂ ಆಕೆಯೊಂದಿಗೆ ಜೊತೆಗೆ ಜಗಳವಾಡಿ, ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಸ್ಕೂಲ್ ಡೇಸ್‍ನಿಂದ ಪ್ರೀತಿಸಿದವಳ ಮೇಲೆ ಗುಂಡು ಹಾರಿಸಿದ – ಯುವತಿಗೆ ಗಂಭೀರ ಗಾಯ

    ನಂತರ ವಿಪುಲ್ ಅಗರವಾಲ್ ಹಾಗೂ ರಿತಿಕಾ ಸಿಂಗ್ ಇಬ್ಬರ ಕೈಗಳನ್ನು ಆರೋಪಿಗಳು ಕಟ್ಟಿ ಹಾಕಿ, ಆತನನ್ನು ಬಾತ್‍ರೂಂಗೆ ತಳ್ಳಿ ಲಾಕ್ ಮಾಡಿದ್ದಾರೆ. ಬಳಿಕ ಅಪಾರ್ಟ್‍ಮೆಂಟ್‍ನ ಬಾಲ್ಕನಿಯಿಂದ ರಿತಿಕಾಳನ್ನು ಕೆಳಗೆ ತಳ್ಳಿದ್ದಾರೆ. ಈ ವೇಳೆ ಬಾತ್ ರೂಂ ಕಿಟಕಿಯಿಂದ ನೆರೆಹೊರೆಯವರನ್ನು ಸಹಾಯಕ್ಕಾಗಿ ವಿಪುಲ್ ಅಗರ್‍ವಾಲ್ ಕೂಗಾಡುತ್ತಿರುವುದನ್ನು ಕೇಳಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರೆ ಎಂದು ತಿಳಿಸಿದ್ದಾರೆ.

    ಇದೀಗ ಆಗ್ರಾದ ತಾಜ್‍ಗಂಜ್ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 302 ಮತ್ತು 34ರ ಅಡಿಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದ್ದು, ಇಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಪಿ ನಗರ) ವಿಕಾಸ್ ಕುಮಾರ್ ಹೇಳಿದ್ದಾರೆ.

    Live Tv

  • ಪತಿ ಜೊತೆ ಬಳೆ ಖರೀದಿಸಲು ಹೋದವಳು ಲವ್ವರ್ ಜೊತೆ ಜೂಟ್

    ಪತಿ ಜೊತೆ ಬಳೆ ಖರೀದಿಸಲು ಹೋದವಳು ಲವ್ವರ್ ಜೊತೆ ಜೂಟ್

    ಪಾಟ್ನಾ: ಗಂಡನೊಂದಿಗೆ ಬಳೆ ಖರೀದಿಸಲು ಹೋದ ಪತ್ನಿ ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಬಿಹಾರದ ಮುಂಗೇರ್‌ನಲ್ಲಿ ನಡೆದಿದೆ.

    ಜೂನ್ 14ರಂದು ಮುಂಗೇರ್ ನಿವಾಸಿ ರಾಮವಿಲಾಸ್ ಗುಪ್ತಾ ಅವರ ಪುತ್ರ ವಿವೇಕ್ ಪೊದ್ದಾರ್ ಹಾಗೂ ನೌವಾಗರ್ಹಿ ನಿವಾಸಿ ರಾಮ್ವಿಲಾಸ್ ಪೊದ್ದಾರ್ ಅವರ ಪುತ್ರಿ ಮೋನಿ ಕುಮಾರಿ ವಿವಾಹವಾಗಿದ್ದರು. ಹೊಸದಾಗಿ ಮದುವೆಯಾದ ನವದಂಪತಿ ಕುಟುಂಬಸ್ಥರ ಮನೆಗೆ ಭೇಟಿ ನೀಡುತ್ತಿದ್ದರು.

    ಜೂನ್ 22ರಂದು ಸಂಜೆ ಮೋನಿ ಕುಮಾರಿ ಬಳೆ ಖರೀದಿಸಲು ನಗರಕ್ಕೆ ಹೋಗಿದ್ದಾಳೆ. ಈ ವೇಳೆ ಕಾರ್‌ನಿಂದ ಬಂದ ನವದಂಪತಿಗೆ ಅಡ್ಡಹಾಕಿ ಪತಿ ವಿವೇಕ್‍ಗೆ ಗನ್ ತೋರಿಸಿ ಬೆದರಿಕೆಯೊಡ್ಡಿದ್ದಾರೆ. ಮತ್ತೊಂದೆಡೆ ಮೋನಿ ಕುಮಾರಿಯನ್ನು ಕಾರ್ ಒಳಗೆ ಹತ್ತಿಸಿಕೊಂಡು ಪರಾರಿಯಾಗಿದ್ದಾರೆ. ನಂತರ ಗಾಬರಿಗೊಂಡ ಪತಿ ವಿವೇಕ್ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಇದು ಮಂಗಗಳ ನೃತ್ಯ – ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟಿನ ಬಗ್ಗೆ ಓವೈಸಿ ವ್ಯಂಗ್ಯ

    ಇದಾದ ಬಳಿಕ ಮನೆಗೆ ಬಂದು ನೋಡಿದರೆ, ಮನೆಯಲ್ಲಿದ್ದ ಒಡವೆ ಯಾವುದೇ ಕಾಣಲಿಲ್ಲ. ಅಲ್ಲದೇ ಮೋನಿಗೆ ಬೇಕಾದ ವಸ್ತುಗಳು ಕೂಡ ರೂಮ್‍ನಲ್ಲಿ ಇರಲಿಲ್ಲ. ಈ ಬಗ್ಗೆ ಅನುಮಾನಗೊಂಡ ವಿವೇಕ್ ಪೊಲೀಸರಿಗೆ ತಿಳಿಸಿದ್ದಾರೆ. ಮೋನಿ ಮೊಬೈಲ್ ಪರಿಶೀಲನೆ ನಡೆಸಿದ ವಿವೇಕ್‍ಗೆ ವ್ಯಕ್ತಿಯೋರ್ವ ಪದೇ, ಪದೇ ಕರೆ ಮಾಡಿರುವ ವಿಚಾರ ತಿಳಿದುಬಂದಿದೆ.

    ಕೂಡಲೇ ತನಿಖೆ ಆರಂಭಿಸಿದ ಪೊಲೀಸರು ಮೋನಿ ಕುಮಾರಿ ಹಾಗೂ ಆಕೆಯ ಪ್ರಿಯಕರ ದಿವ್ಯಾಂಶು ಕುಮಾರ್ ಫೋನ್ ಟ್ರ್ಯಾಕ್ ಮಾಡಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮೋನಿ ಕುಮಾರಿ ಹಾಗೂ ದಿವ್ಯಾಂಶು ಕುಮಾರ್ ಇಬ್ಬರು ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಮನೆಯವರು ನಿರಾಕರಿಸಿದ್ದರಿಂದ ಮದುವೆಯಾದ ಬಳಿಕ ಓಡಿ ಹೋಗಲು ಮೋನಿ ಕುಮಾರಿ ಪ್ಲ್ಯಾನ್ ಮಾಡಿದ್ದಾಳೆ.

    ಜೂನ್ 22ರಂದು ಮೋನಿ ಕುಮಾರಿ ಪ್ರಿಯಕರ ದಿವ್ಯಾಂಶು ಕುಮಾರ್‌ಗೆ ತನ್ನನ್ನು ಕಿಡ್ನಾಪ್ ಮಾಡುವಂತೆ ತಿಳಿಸಿದ್ದಳು. ಅದರಂತೆ ದಿವ್ಯಾಂಶು ಕುಮಾರ್ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಬಂದು ಮೋನಿಯನ್ನು ಅಪಹರಿಸಿದ್ದಾನೆ. ಎಲ್ಲವೂ ಮೋನಿ ಪ್ಲ್ಯಾನ್ ಪ್ರಕಾರವೇ ಮಾಡಿರುವುದಾಗಿ ದಿವ್ಯಾಂಶು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಇದೀಗ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸುವುದಾಗಿ ಎಸ್‍ಎಚ್‍ಒ ಧೀರೇಂದ್ರ ಕುಮಾರ್ ಪಾಂಡೆ ತಿಳಿಸಿದ್ದಾರೆ.  ಇದನ್ನೂ ಓದಿ: ಗುಜರಾತ್ ಗಲಭೆ ಪ್ರಕರಣದಲ್ಲಿ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ತೀಸ್ತಾ ಸೆತಲ್ವಾಡ್ ಬಂಧನ

    ಒಟ್ಟಾರೆ ಮದುವೆ ಬಗ್ಗೆ ಸಾಕಷ್ಟು ಆಸೆ ಕನಸು ಇಟ್ಟುಕೊಂಡಿದ್ದ ಪತಿ ವಿವೇಕ್‍ಗೆ ಹೆಂಡತಿಯ ಕಥೆ ಕೇಳಿ ದಿಕ್ಕು ದೋಚದಂತೆ ಆಗಿದೆ.

    Live Tv

  • ಪಾಸ್‍ಪೋರ್ಟ್ ಸುಟ್ಟುಹಾಕಿದ್ದಕ್ಕೆ ಪತ್ನಿ ಕತ್ತು ಸೀಳಿದ – ಆಕೆ ಕೈ ಹಿಡಿದು ಇಷ್ಟವಾದ ಹಾಡು ನುಡಿಸಿದ ಪಾಗಲ್

    ಪಾಸ್‍ಪೋರ್ಟ್ ಸುಟ್ಟುಹಾಕಿದ್ದಕ್ಕೆ ಪತ್ನಿ ಕತ್ತು ಸೀಳಿದ – ಆಕೆ ಕೈ ಹಿಡಿದು ಇಷ್ಟವಾದ ಹಾಡು ನುಡಿಸಿದ ಪಾಗಲ್

    ತಲ್ಲಹಸ್ಸೀ: ಪಾಸ್‍ಪೋರ್ಟ್ ಸುಟ್ಟುಹಾಕಿದ್ದಕ್ಕೆ ಪತ್ನಿ ಕತ್ತು ಸೀಳಿ ಕೊಂದು ಆಕೆ ಕೈ ಹಿಡಿದು ಇಷ್ಟವಾದ ಹಾಡು ನುಡಿಸಿದ ವಿಚಿತ್ರ ಘಟನೆ ಫ್ಲೋರಿಡಾದಲ್ಲಿ ನಡೆದಿದೆ.

    ಅಲ್ಟಾಮೊಂಟೆ ಸ್ಪ್ರಿಂಗ್ಸ್ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಕರೆ ಬಂದಿದ್ದು, ನಂತರ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಪಾಗಲ್ ಪತಿಯು ಪತ್ನಿಯ ಕತ್ತು ಸೀಳಿ ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    Man Kills Wife, Holds Hand And Plays Her Favourite Song After: Report

    ನಡೆದಿದ್ದೇನು?
    ಕ್ಸಿಚೆನ್ ಯಾಂಗ್(21) ಆರೋಪಿ. ಯಾಂಗ್‍ನ ಪತ್ನಿ ಆತನ ಪಾಸ್‍ಪೋರ್ಟ್ ಸುಟ್ಟು ಹಾಕಿದ್ದಾಳೆ. ಇದರಿಂದ ಯಂಗ್ ಅವರ ಬಾಸ್‍ನಿಂದ ಚೆನ್ನಾಗಿ ಬೈಯಿಸಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಆತ ಸಿಟ್ಟಿನಿಂದ ಪತ್ನಿಯನ್ನು ಬಾತ್‍ರೂಮ್‌ನಲ್ಲಿ ಗಂಟಲು ಕಟ್ ಮಾಡಿ ಸಾಯಿಸಿದ್ದಾನೆ. ಈ ವೇಳೆ ಆಕೆ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಕ್ಕೆ ಬಾತ್‍ರೂಂ ಟಾಬ್‍ಗೆ ಮುಳುಗಿಸಿದ್ದಾನೆ.

    ನಂತರ ಆಕೆಯ ಕೈ ಹಿಡಿದುಕೊಂಡು ಅವಳಿಗೆ ಇಷ್ಟವಾದ ಹಾಡನ್ನು ನುಡಿಸುತ್ತಿದ್ದ. ಇತ್ತ ಯಂಗ್‍ನ ಬಾಸ್ ಪೊಲೀಸರಿಗೆ, ಯಂಗ್ ಕೆಲಸಕ್ಕೆ ಬರುತ್ತಿಲ್ಲ ಎಂದು ದೂರು ನೀಡಿದ್ದಾರೆ. ನಂತರ ಪೊಲೀಸರು ಯಾಂಗ್ ಅಪಾರ್ಟ್‍ಮೆಂಟ್‍ಗೆ ಹೋಗಿದ್ದು, ದೃಶ್ಯ ನೋಡಿ ಶಾಕ್ ಆಗಿದ್ದಾರೆ.

    ಪೊಲೀಸರು ಯಂಗ್ ಮನೆಗೆ ಪ್ರವೇಶ ಮಾಡುತ್ತಿದ್ದಂತೆ ಬಾತ್‍ರೂಮ್‌ನಲ್ಲಿ ರಕ್ತದ ಮಡುವಿನ ಯಾಂಗ್‌ನ ಪತ್ನಿಯನ್ನು ನೋಡಿ ಶಾಕ್ ಆಗಿದ್ದಾರೆ. ಈ ಕುರಿತು ವಿಚಾರಣೆ ಮಾಡಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv

  • ಅಯೋಧ್ಯೆ ನದಿಯಲ್ಲಿ ಪತ್ನಿಗೆ ಕಿಸ್ ಕೊಟ್ಟ ಪತಿಗೆ ಥಳಿಸಿದ್ದ 12 ಮಂದಿ ವಿರುದ್ಧ FIR

    ಅಯೋಧ್ಯೆ ನದಿಯಲ್ಲಿ ಪತ್ನಿಗೆ ಕಿಸ್ ಕೊಟ್ಟ ಪತಿಗೆ ಥಳಿಸಿದ್ದ 12 ಮಂದಿ ವಿರುದ್ಧ FIR

    ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ಸರಯೂ ನದಿಯಲ್ಲಿ ಸ್ನಾನ ಮಾಡುವ ವೇಳೆ ಪತ್ನಿಗೆ ಮುತ್ತು ಕೊಟ್ಟಿದ್ದ ಪತಿಯನ್ನು ಸಾರ್ವಜನಿಕರು ನಿಂದಿಸಿ ಹಿಗ್ಗಾಮುಗ್ಗಾ ಥಳಿಸಿದ್ದರು. ಈ ವೀಡಿಯೋ ವೈರಲ್ ಆದ ಒಂದು ದಿನದ ಬಳಿಕ ವ್ಯಕ್ತಿ ಮೇಲೆ ಹಲ್ಲೆಗೈದಿದ್ದದವರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ವೈರಲ್ ಆದ ವೀಡಿಯೋದಲ್ಲಿ ವ್ಯಕ್ತಿಯನ್ನು ಆತನ ಹೆಂಡತಿಯಿಂದ ಸುತ್ತಮುತ್ತಲಿನ ಜನ ಥಳಿಸುತ್ತಿದ್ದರೆ, ಪತಿಯನ್ನು ರಕ್ಷಿಸಲು ಪತ್ನಿ ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಅಯೋಧ್ಯೆಯಲ್ಲಿ ಇಂತಹ ಅಸಹ್ಯವನ್ನು ಸಹಿಸುವುದಿಲ್ಲ ಎಂದು ಒಬ್ಬ ವ್ಯಕ್ತಿ ಹೇಳುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಈ ವೀಡಿಯೋ ವೈರಲ್ ಆದ ಬಳಿಕ ಅಯೋಧ್ಯೆ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

    ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147 (ಗಲಭೆ),323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಅವಮಾನ) ಅಡಿಯಲ್ಲಿ 10 ರಿಂದ 12 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವೀಡಿಯೋ ಗಮನಕ್ಕೆ ಬಂದ ನಂತರ ನಾವು ಆರೋಪಿಗಳು ಹಾಗೂ ವ್ಯಕ್ತಿಯ ಗುರುತನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಅಯೋಧ್ಯೆ ನದಿಯಲ್ಲಿ ಪತ್ನಿಗೆ ಕಿಸ್‌ ಮಾಡಿದ ಪತಿಯನ್ನೇ ಥಳಿಸಿದ ಸಾರ್ವಜನಿಕರು… Video Viral

    ‘ಸರಯೂ’ ಗಂಗೆಯ ಏಳು ಉಪನದಿಗಳಲ್ಲಿ ಒಂದಾಗಿದೆ. ಇದನ್ನು ಹಿಂದೂಗಳು ಪವಿತ್ರವೆಂದು ಪರಿಗಣಿಸುತ್ತಾರೆ. ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯು ಸರಯೂ ನದಿಯ ದಡದಲ್ಲಿದೆ. ಇದನ್ನೂ ಓದಿ: ಜೆಪಿ ನಡ್ಡಾ ನಿವಾಸಕ್ಕೆ ಬೆಂಕಿ ಹಚ್ಚಲು ಯತ್ನಿಸಿದ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ

    Live Tv

  • ಅನೈತಿಕ ಸಂಬಂಧ ಶಂಕೆ – ಪತ್ನಿ, ಮಗನ ಮೇಲೆ ವ್ಯಕ್ತಿಯಿಂದ ಆ್ಯಸಿಡ್ ದಾಳಿ

    ಅನೈತಿಕ ಸಂಬಂಧ ಶಂಕೆ – ಪತ್ನಿ, ಮಗನ ಮೇಲೆ ವ್ಯಕ್ತಿಯಿಂದ ಆ್ಯಸಿಡ್ ದಾಳಿ

    ಮುಂಬೈ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಮೂರು ವರ್ಷದ ಮಗನ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ನಿರುದ್ಯೋಗಿಯಾಗಿದ್ದ ವ್ಯಕ್ತಿ, ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ತನ್ನ ಹೆಂಡತಿ ಕೆಲಸದ ಸ್ಥಳದಲ್ಲಿ ಯಾರೊಂದಿಗೋ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಹೊಂದಿದ್ದನು. ಹೀಗಾಗಿ ತನ್ನ ಪತ್ನಿ ಹಾಗೂ ಮಗುವಿನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ. ಈ ವೇಳೆ ನೆರೆಹೊರೆಯವರು ದಾವಿಸಿ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಮತ್ತು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಸತೀಶ್ ಪಾಟೀಲ್ ಹತ್ಯೆಗೆ ಪೊಲೀಸರ ವೈಫಲ್ಯವೇ ಕಾರಣ: ಸತೀಶ್ ಜಾರಕಿಹೊಳಿ

    ಸದ್ಯ ಮಹಿಳೆ ಸ್ಥಿತಿ ಸ್ಥಿರವಾಗಿದ್ದು, ಆಕೆಯ ಮುಖ ಮತ್ತು ಎದೆಗೆ ಗಂಭೀರ ಗಾಯಗಳಾಗಿದೆ ಮತ್ತು ಮಗುವಿನ ತುಟಿಗೆ ಸುಟ್ಟಗಾಯಗಳಿವೆ. ದಂಪತಿ ಆಗಾಗ ಜಗಳವಾಡುತ್ತಿದ್ದರು. ಹೀಗಾಗಿ ಎರಡು ವರ್ಷಗಳಿಂದ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮಹಿಳೆ ಕೆಲಸಕ್ಕೆ ಹೋಗುವ ಮುನ್ನ ತನ್ನ ಮಗನನ್ನು ತಾಯಿಯ ಮನೆಗೆ ಬಿಡುತ್ತಿದ್ದಳು. ಇದನ್ನೂ ಓದಿ:  ಮರಾಠಿ ಬೋರ್ಡ್ ಹಾಕಿ ಇಲ್ಲದಿದ್ದರೆ ಕನ್ನಡ ನಾಮಫಲಕ ಇರಲ್ಲ ಎಂದು MES ಪುಂಡಾಟ – ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು

    Live Tv

  • ಅಕ್ರಮ ಸಂಬಂಧ ಶಂಕೆ –  5 ಮಕ್ಕಳ ತಾಯಿಯನ್ನೇ ಹತ್ಯೆಗೈದ ತಂದೆ

    ಅಕ್ರಮ ಸಂಬಂಧ ಶಂಕೆ – 5 ಮಕ್ಕಳ ತಾಯಿಯನ್ನೇ ಹತ್ಯೆಗೈದ ತಂದೆ

    ನವದೆಹಲಿ: ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ವ್ಯಕ್ತಿಯೋರ್ವ ತನ್ನ ಪತ್ನಿಯನ್ನೇ ಹತ್ಯೆಗೈದಿರುವ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

    CRIME 2

    ಆರೋಪಿಯನ್ನು ಛೋಟೆ ಎಂದು ಗುರುತಿಸಲಾಗಿದ್ದು, ಈತನಿಗೆ 5 ಜನ ಮಕ್ಕಳಿದ್ದಾರೆ. ಆದರೆ ತನ್ನ ಪತ್ನಿ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ ಹರಿತವಾದ ಮಾರಕಾಸ್ತ್ರದಿಂದ ಪತ್ನಿ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬಳಿ ಇದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಾರ್ಯವೈಖರಿ ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಮುಂದಾದ ಗ್ರಾ.ಪ ಅಧ್ಯಕ್ಷೆ

    ಘಟನೆ ವೇಳೆ ಗಾಯಗೊಂಡ ಮಹಿಳೆಯನ್ನು ತಕ್ಷಣ ನೆಹರು ವಿಹಾರ್‍ನ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾಳೆ. ಇದೀಗ ದಂಪತಿ ಮಗಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: 6 ವರ್ಷದ ಹಿಂದೆ ಮದುವೆ- 4ನೇ ಪತ್ನಿಗೆ ಡಿವೋರ್ಸ್ ಕೊಟ್ಟ 91ರ ರೂಪರ್ಟ್ ಮುರ್ಡೋಕ್

    Live Tv

  • ಅಯೋಧ್ಯೆ ನದಿಯಲ್ಲಿ ಪತ್ನಿಗೆ ಕಿಸ್‌ ಮಾಡಿದ ಪತಿಯನ್ನೇ ಥಳಿಸಿದ ಸಾರ್ವಜನಿಕರು… Video Viral

    ಅಯೋಧ್ಯೆ ನದಿಯಲ್ಲಿ ಪತ್ನಿಗೆ ಕಿಸ್‌ ಮಾಡಿದ ಪತಿಯನ್ನೇ ಥಳಿಸಿದ ಸಾರ್ವಜನಿಕರು… Video Viral

    ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ಸರಯೂ ನದಿಯಲ್ಲಿ ಸ್ನಾನ ಮಾಡುವಾಗ ತನ್ನ ಪತ್ನಿಗೆ ಮುತ್ತು ಕೊಟ್ಟ ಪತಿಯನ್ನೇ ಸಾರ್ವಜನಿಕರು ನಿಂದಿಸಿ ಥಳಿಸಿದ್ದಾರೆ. ಘಟನೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪುರುಷನನ್ನು ಆತನ ಹೆಂಡತಿಯಿಂದ ಪಕ್ಕಕ್ಕೆ ಎಳೆದೊಯ್ದು ಸುತ್ತಮುತ್ತಲಿನ ಹಲವರು ಪುರುಷರು ಥಳಿಸಿರುವ ದೃಶ್ಯ ವೀಡಿಯೋದಲ್ಲಿದೆ. ಅಯೋಧ್ಯೆಯಲ್ಲಿ ಇಂತಹ ಅಸಹ್ಯವನ್ನು ಸಹಿಸುವುದಿಲ್ಲ ಎಂದು ಒಬ್ಬ ವ್ಯಕ್ತಿ ಹೇಳುತ್ತಿರುವುದು ವೀಡಿಯೋದಲ್ಲಿದೆ. ಇದನ್ನೂ ಓದಿ: ಜೆಪಿ ನಡ್ಡಾ ನಿವಾಸಕ್ಕೆ ಬೆಂಕಿ ಹಚ್ಚಲು ಯತ್ನಿಸಿದ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ

    ಥಳಿತದ ಸಂದರ್ಭದಲ್ಲಿ ತನ್ನ ಪತಿಯನ್ನು ರಕ್ಷಿಸಲು ಪತ್ನಿ ಮುಂದಾಗಿ, ವಿಫಲಳಾಗಿದ್ದಾಳೆ. ನಂತರ ಅಲ್ಲಿದ್ದ ಜನರು ಆ ದಂಪತಿಯನ್ನು ನದಿಯಿಂದ ಹೊರಗೆ ಕಳುಹಿಸಿದ್ದಾರೆ.

    ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಯೋಧ್ಯಾ ಪೊಲೀಸರು ತಿಳಿಸಿದ್ದಾರೆ.

    ʻಸರಯೂʼ ಗಂಗೆಯ ಏಳು ಉಪನದಿಗಳಲ್ಲಿ ಒಂದಾಗಿದೆ. ಇದನ್ನು ಹಿಂದೂಗಳು ಪವಿತ್ರವೆಂದು ಪರಿಗಣಿಸುತ್ತಾರೆ. ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯು ಸರಯೂ ನದಿಯ ದಡದಲ್ಲಿದೆ.

    Live Tv

  • ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲವೆಂದು ಪತ್ನಿಯನ್ನ ಕೊಂದು ಬಾತ್‍ರೂಮ್‍ನಲ್ಲಿ ಬಚ್ಚಿಟ್ಟ

    ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲವೆಂದು ಪತ್ನಿಯನ್ನ ಕೊಂದು ಬಾತ್‍ರೂಮ್‍ನಲ್ಲಿ ಬಚ್ಚಿಟ್ಟ

    ನವದೆಹಲಿ: ಪತಿಯೋರ್ವ ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲವೆಂದು ಪತ್ನಿಯನ್ನ ಕೊಲೆ ಮಾಡಿ ಶವವನ್ನು ಬಾತ್‍ರೂಮ್‍ನಲ್ಲಿ ಬಚ್ಚಿಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ.

    ದೆಹಲಿಯ ಕಪಿಲ್ ವಿಹಾರ್ ನಿವಾಸಿ ವಿಜಯ್(38) ಜೂನ್ 18 ರಂದು ಭಾಲ್ಸ್ವಾ ಡೈರಿ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ತನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣದ ಕುರಿತು ತನಿಖೆ ಮಾಡಿದ್ದಾರೆ.

    ಪರಿಶೀಲನೆ ವೇಳೆ ಬಾತ್‍ರೂಮ್ ಒಳಗೆ ಬಟ್ಟೆಯಲ್ಲಿ ಸುತ್ತಿದ್ದ ಮೃತ ಸಂತೋಷಿದೇವಿ ದೇಹ ಪತ್ತೆಯಾಗಿದೆ. ಈ ಹಿನ್ನೆಲೆ ಪ್ರಕರಣ ದಾಖಲಾಗಿದ್ದು, ಆರೋಪಿ ವಿಜಯ್‍ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರುದ್ಧ ಯುವಕರನ್ನು ಕಾಂಗ್ರೆಸ್‍ ಬೇಕೆಂದು ಪ್ರಚೋದಿಸುತ್ತಿದೆ: ಬಿ.ಸಿ.ಪಾಟೀಲ್

    ತನಿಖೆಯಲ್ಲಿ ತಿಳಿದಿದ್ದೇನು?
    ವಿಜಯ್‍ಗೆ ಈ ಹಿಂದೆ ಬೇರೊಂದು ಮಹಿಳೆ ಜೊತೆ ವಿವಾಹವಾಗಿದ್ದು, ಆತನಿಗೆ 4 ಮಕ್ಕಳಿದ್ದರು. ಆದರೆ ಮೊದಲ ಹೆಂಡತಿ ಅವನಿಂದ ಬೇರೆಯಾಗಿದ್ದಳು. ಈ ವೇಳೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಂತೋಷಿದೇವಿಯನ್ನು ವಿಜಯ್ ಭೇಟಿಯಾಗಿದ್ದು, ನಂತರ ಅದು ಪ್ರೇಮಕ್ಕೆ ತಿರುಗಿಕೊಂಡಿದೆ.

    ಸಂತೋಷಿಗೂ 4 ಮಕ್ಕಳಿದ್ದು 14, 13 ಮತ್ತು 12 ವರ್ಷದ ಮೂವರು ಹುಡುಗಿಯರು ಮತ್ತು 8 ವರ್ಷದ ಒಬ್ಬ ಗಂಡು ಮಗುವಿದೆ. ಆಕೆಯೂ ಪತಿಯಿಂದ ಬೇರ್ಪಟ್ಟು ಒಂಟಿಯಾಗಿ ಜೀವನ ನಡೆಸುತ್ತಿದ್ದಳು.

    CNG CRIME

    ಈ ಮಧ್ಯೆ ವಿಜಯ್ ಮತ್ತು ಸಂತೋಷಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಇವರಿಬ್ಬರು ಒಂದು ಮಗುವನ್ನು ಸಹ ಹೊಂದಿದ್ದರು. ನಂತರ ಎಲ್ಲ ಮಕ್ಕಳ ಆರೈಕೆಗೆ ಸಂಬಂಧಿಸಿದಂತೆ ವಿಜಯ್ ಮತ್ತು ಸಂತೋಷಿ ನಡುವೆ ಕೆಲವು ಸಣ್ಣ-ಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಯಿತು. ಇದನ್ನೂ ಓದಿ: ಪತ್ನಿ, ಐವರು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ- ನಾಲ್ವರು ಸಾವು, ಇಬ್ಬರು ಗಂಭೀರ

    CRIME 2

    ಜೂನ್ 17ರ ಸಂಜೆ ಸಂತೋಷಿ ಕೆಲಸ ಮುಗಿಸಿ ವಾಪಸ್ಸಾಗಿದ್ದು, ಎಲ್ಲಾ ಮಕ್ಕಳು ಕೆಳಗೆ ಮಲಗಿಕೊಂಡಿದ್ದರು. ರಾತ್ರಿ 11:30ರ ಸುಮಾರಿಗೆ ಇವರಿಬ್ಬರ ನಡುವೆ ಜಗಳ ನಡೆದಿದೆ. ಇದು ಅತಿರೇಕಕ್ಕೆ ಹೋಗಿ ವಿಜಯ್, ಸಂತೋಷಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಬೇರೆಕಡೆ ಸಾಗಿಸಲು ಬಟ್ಟೆಯಲ್ಲಿ ಸುತ್ತಿದ್ದಾನೆ. ಆದರೆ ಇದನ್ನು ನಿಭಾಯಿಸಲು ಸಾಧ್ಯವಾಗದೆ ಜೂನ್ 18ರಂದು ರಾತ್ರಿ 8.45ರ ಸುಮಾರಿಗೆ ಪೊಲೀಸರ ಮೊರೆ ಹೋಗಿದ್ದು, ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

    Live Tv

  • ಮದುವೆಯಾದ ಒಂದು ತಿಂಗಳಲ್ಲೇ ನವವಿವಾಹಿತೆ 4 ತಿಂಗಳ ಗರ್ಭಿಣಿ – ಪತಿ, ಅತ್ತೆ ಶಾಕ್

    ಮದುವೆಯಾದ ಒಂದು ತಿಂಗಳಲ್ಲೇ ನವವಿವಾಹಿತೆ 4 ತಿಂಗಳ ಗರ್ಭಿಣಿ – ಪತಿ, ಅತ್ತೆ ಶಾಕ್

    ಲಕ್ನೋ: ಮದುವೆಯಾಗಿ ಕೇವಲ ಒಂದೂವರೆ ತಿಂಗಳಷ್ಟೇ ಆಗಿದೆ. ಆದರೆ ನವವಿವಾಹಿತೆ ನಾಲ್ಕು ತಿಂಗಳ ಗರ್ಭಿಣಿಯಾಗಿರುವುದನ್ನು ತಿಳಿದ ಪತಿ ಮತ್ತು ಅತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್‍ಗಂಜ್‍ನಲ್ಲಿ ನಡೆದಿದೆ.

    ಹೊಟ್ಟೆ ನೋವಿನಿಂದ ಬಳಲುತ್ತಿದ್ದ ನವವಿವಾಹಿತೆಗೆ ಸೋನೋಗ್ರಫಿ ಮಾಡಲಾಯಿತು. ಈ ವೇಳೆ ಗರ್ಭಿಣಿಯಾಗಿರುವ ವಿಚಾರ ತಿಳಿದ ಅತ್ತೆ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಮೋದಿ ‘ಮಾಫಿವೀರ್’ ಆಗಿ ದೇಶದ ಯುವಕರ ಕ್ಷಮೆ ಕೇಳಬೇಕು: ರಾಹುಲ್ ಗಾಂಧಿ

    ಇದೀಗ ಪತ್ನಿ ವಿರುದ್ಧ ಆಕೆಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಒಂದೂವರೆ ತಿಂಗಳ ಹಿಂದೆ ಗ್ರಾಮದ ಸಂಬಂಧಿಯೊಬ್ಬರ ಮೂಲಕ ಪಕ್ಕದ ಜಿಲ್ಲೆಯ ಹುಡುಗಿಯನ್ನು ಮದುವೆಯಾಗಿರುವುದಾಗಿ ತಿಳಿಸಿದ್ದಾರೆ. ಆದರೆ ಮದುವೆಯಾದ ಒಂದು ತಿಂಗಳಿನಲ್ಲಿಯೇ ಪತ್ನಿ ನಾಲ್ಕು ತಿಂಗಳ ಗರ್ಭಿಣಿಯಾಗಿರುವುದನ್ನು ತಿಳಿದು ವಂಚನೆಗೊಳಗಾಗಿರುವುದಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: ‘ಅಗ್ನಿಪಥ್’ ವಿರೋಧದ ನಡುವೆ ಗೃಹ ಇಲಾಖೆಯಿಂದ ಮಹತ್ವದ ನಿರ್ಧಾರ

    ಮಗಳು ಗರ್ಭಿಣಿಯಾಗಿರುವ ವಿಚಾರ ಮೊದಲೇ ಆಕೆಯ ಕುಟುಂಬಸ್ಥರಿಗೆ ತಿಳಿದಿತ್ತು. ಆದರೂ ಈ ವಿಚಾರವನ್ನು ಮರೆ ಮಾಚಿ ಮದುವೆ ಮಾಡಿದ್ದಾರೆ ಎಂದು ನವವಿವಾಹಿತೆ ಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ ಎಂದು ಕೊಲ್ಹುಯಿ ಎಸ್‍ಎಚ್‍ಒ ಅಭಿಷೇಕ್ ಸಿಂಗ್ ಹೇಳಿದ್ದಾರೆ.

    Live Tv

  • ಪತ್ನಿ ಕತ್ತು ಬಿಗಿದು, ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಪತಿ

    ಪತ್ನಿ ಕತ್ತು ಬಿಗಿದು, ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಪತಿ

    ಬಾಗಲಕೋಟೆ: ಪತಿಯೊಬ್ಬ ಪತ್ನಿಯ ಕತ್ತನ್ನು ಹಗ್ಗದಿಂದ ಬಿಗಿದು, ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗ್ರಾಮದಲ್ಲಿ ನಡೆದಿದೆ.

    ಸಾವಿತ್ರಿ ವಡ್ಡರ್(32) ಕೊಲೆಯಾದ ದುರ್ದೈವಿ. ಹೂವಿನಹಳ್ಳಿ ಗ್ರಾಮದ ನಿವಾಸಿ ಮುತ್ತಪ್ಪ ವಡ್ಡರ್ ತನ್ನ ಪತ್ನಿ ಸಾವಿತ್ರಿ ವಡ್ಡರ್‌ಗೆ  ಅನೈತಿಕ ಸಂಬಂಧ ಇದೆ ಎಂದು ಶಂಕಿಸಿ ಜಗಳ ಪ್ರಾರಂಭಿಸಿದ್ದಾನೆ. ಇದು ಅತಿರೇಕಕ್ಕೆ ಹೋಗಿ ಮುತ್ತಪ್ಪ, ಸಾವಿತ್ರಿ ಕತ್ತನ್ನು ಹಗ್ಗದಿಂದ ಬಿಗಿದು, ಮಾರಕಾಸ್ತ್ರದಲ್ಲಿ ಕೊಚ್ಚಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ:  ಒಂಟಿ ಮಹಿಳೆಯನ್ನ ಭೀಕರವಾಗಿ ಹತ್ಯೆಗೈದು ಪರಾರಿಯಾದ ಪಾಪಿಗಳು 

    ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಮೀನಗಢ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆ ನಿನ್ನೆ(ಬುಧವಾರ) ರಾತ್ರಿ ನಡೆದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv