Tag: ಪತಿ

  • ಪತಿ, ಪತ್ನಿ ಮತ್ತು ಅವಳು – ಗರ್ಲ್‍ಫ್ರೆಂಡ್ ಜೊತೆಗಿನ ಟ್ರಿಪ್ ಮುಚ್ಚಿಡಲು ಪಾಸ್‍ಪೋರ್ಟ್ ಪುಟ ಹರಿದು ತಗ್ಲಾಕೊಂಡ

    ಪತಿ, ಪತ್ನಿ ಮತ್ತು ಅವಳು – ಗರ್ಲ್‍ಫ್ರೆಂಡ್ ಜೊತೆಗಿನ ಟ್ರಿಪ್ ಮುಚ್ಚಿಡಲು ಪಾಸ್‍ಪೋರ್ಟ್ ಪುಟ ಹರಿದು ತಗ್ಲಾಕೊಂಡ

    ಮುಂಬೈ: ವ್ಯಕ್ತಿಯೋರ್ವ ತನ್ನ ಗರ್ಲ್‍ಫ್ರೆಂಡ್ ಜೊತೆಗೆ ಪ್ರವಾಸಕ್ಕೆ ಹೋಗಿದ್ದನ್ನು ಪತ್ನಿಯಿಂದ ಮುಚ್ಚಿಡಲು ಹೋಗಿ ಜೈಲು ಕಂಬಿ ಎಣಿಸುವಂತಾಗಿದೆ.

    ಹೌದು, 32 ವರ್ಷದ ವ್ಯಕ್ತಿಯೋರ್ವ ತನ್ನ ಗರ್ಲ್‍ಫ್ರೆಂಡ್ ಜೊತೆಗೆ ಮಾಲ್ಡೀವ್ಸ್ ಪ್ರವಾಸ ಹೋಗಿದ್ದನು. ಈ ವಿಚಾರವನ್ನು ಪತ್ನಿಯಿಂದ ಮರೆಮಾಚಲು ಪಾಸ್‍ಪೋರ್ಟ್‍ನಲ್ಲಿದ್ದ ವೀಸಾ ಸ್ಟಾಂಪ್‍ನ ಪುಟಗಳನ್ನು ಹರಿದು ಹಾಕಿದ್ದಾನೆ. ಮಾಲ್ಡೀವ್ಸ್‌ನಿಂದ ಹಿಂದಿರುಗಿದ ನಂತರ ಪಾಸ್‍ಪೋರ್ಟ್ ತಪಾಸಣೆ ವೇಳೆ ಆತನ ಪಾಸ್‍ಪೋರ್ಟ್‍ನ ಕೆಲವು ಪುಟಗಳು ಕಾಣೆಯಾಗಿರುವುದನ್ನು ವಲಸೆ ಅಧಿಕಾರಿಗಳಿಗೆ ತಿಳಿದುಬಂದಿದ್ದು, ಆತನ ವಿರುದ್ಧ ಮುಂಬೈ ಪೊಲೀಸರು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ (ಐಪಿಸಿ) ಸೆಕ್ಷನ್ ವಂಚನೆ ಮತ್ತು ಫೋರ್ಜರಿ ಪ್ರಕರಣವನ್ನು ದಾಖಲಿಸಿ ವಿಚಾರಣೆ ನಡೆಸಿದ್ದಾರೆ.

    HUSBAND WIFE FIGHT

    ಮುಂಬೈ ನಿವಾಸಿಯಾಗಿದ್ದ, ಇಂಜಿನಿಯರ್ ತನ್ನ ಹೆಂಡತಿಗೆ ಕೆಲಸದ ನಿಮಿತ್ತ ವಿದೇಶ ಪ್ರವಾಸಕ್ಕೆ ಹೋಗುವುದಾಗಿ ಹೇಳಿ ತನ್ನ ಗೆಳತಿಯನ್ನು ಭೇಟಿ ಮಾಡಲು ಕೆಲವು ದಿನಗಳ ಹಿಂದೆ ಮಾಲ್ಡೀವ್ಸ್‌ಗೆ ಹೋಗಿದ್ದ. ಆದರೆ ಈ ವೇಳೆ ಫೋನ್ ಕರೆಯನ್ನು ಸ್ವೀಕರಿಸದೇ ಇದ್ದಿದ್ದರಿಂದ ಪತ್ನಿಗೆ ಅನುಮಾನ ಹುಟ್ಟಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ, ಮಾಲ್ಡೀವ್ಸ್ ಟ್ರಿಪ್ ಹೋಗಿದ್ದನ್ನು ಪತ್ನಿಯಿಂದ ಮರೆಮಾಚಲು, ತನ್ನ ಪಾಸ್‍ಪೋರ್ಟ್‍ನ ಕೆಲವು ಪುಟಗಳನ್ನು ಹರಿದು ಗುರುವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣ ತಲುಪಿದ್ದಾನೆ. ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯಾ ಪ್ರಕರಣ- ಕಾರಾಗೃಹದಲ್ಲಿ ಆರೋಪಿಗೆ ಕೈದಿಗಳಿಂದ ಹಲ್ಲೆ

    ನಂತರ ವಿಮಾನ ನಿಲ್ದಾಣದಲ್ಲಿ ಪಾಸ್‍ಪೋರ್ಟ್ ತಪಾಸಣೆ ವೇಳೆ ವಲಸೆ ಅಧಿಕಾರಿಗಳು ಆತನ ಪಾಸ್‍ಪೋರ್ಟ್‍ನಲ್ಲಿದ್ದ ಕೆಲವು ಪುಟಗಳು ಕಾಣೆಯಾಗಿರುವುದನ್ನು ಗಮನಿಸಿ ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. ಈ ವೇಳೆ ಸತ್ಯ ಹೇಳಲು ವ್ಯಕ್ತಿ ತಡಬಡಾಯಿಸಿದ್ದರಿಂದ ಅಧಿಕಾರಿಗಳು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊನೆಗೆ ಬೇರೆ ದಾರಿ ಕಾಣದೇ ವ್ಯಕ್ತಿ ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾನೆ. ಅಲ್ಲದೇ ಪಾಸ್‍ಪೋರ್ಟ್‍ನ ಪುಟಗಳನ್ನು ಹರಿದು ಹಾಕುವುದು ಅಪರಾಧ ಎಂಬುದು ತನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾನೆ. ಇದನ್ನೂ ಓದಿ:  100 ವರ್ಷ ಹಳೆಯ, 3,800 ಟನ್ ತೂಕದ ಕಟ್ಟಡ ಸ್ಥಳಾಂತರ – ಹೇಗೆ ನೋಡಿ

    ವಾಸ್ತವವಾಗಿ, ಪಾಸ್‍ಪೋರ್ಟ್ ಅನ್ನು ಭಾರತ ಸರ್ಕಾರ ನೀಡುತ್ತದೆ ಮತ್ತು ಇದನ್ನು ಸರ್ಕಾರಿ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಯಾವುದೇ ಹಾನಿಯನ್ನುಂಟುಮಾಡುವುದು ಕ್ರಿಮಿನಲ್ ಆಕ್ಟ್‌ಗೆ ಸಮಾನವಾಗಿರುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಪತಿ ಕುಡಿದು ಗಲಾಟೆ ಮಾಡುತ್ತಾನೆ ಅಂತಾ ಪ್ರಿಯಕರನಿಂದ ಕೊಲೆ ಮಾಡಿಸಿದ ಪತ್ನಿ

    ಪತಿ ಕುಡಿದು ಗಲಾಟೆ ಮಾಡುತ್ತಾನೆ ಅಂತಾ ಪ್ರಿಯಕರನಿಂದ ಕೊಲೆ ಮಾಡಿಸಿದ ಪತ್ನಿ

    ಮಂಡ್ಯ: ಪ್ರಿಯಕರನ ಜೊತೆ ಸೇರಿ ಪತಿಯನ್ನು ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿಸಿ, ಅಮಾಯಕಿ ಎನ್ನುವ ರೀತಿಯಲ್ಲಿ ಡ್ರಾಮಾ ಮಾಡಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

    ಗೌರಿ ಕೊಲೆ ಮಾಡಿದ ಆರೋಪಿ. ಈಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ತಲಕಾಡು ಫೈಲ್‍ನ ನಿವಾಸಿ. ಈಕೆ ತನ್ನ ಪತಿ ಸುಂದರ್‌ ರಾಜ್‍ನನ್ನು ಇದೇ ತಿಂಗಳ 2ರಂದು ಕೆಆರ್‌ಎಸ್ ಹೊರವಲಯದಲ್ಲಿರುವ ಹುಲಿಕೆರೆಯ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿದ್ದಳು. ಆದರೆ ಪೊಲೀಸರು ಸುಂದರ್‌ ರಾಜ್ ಕೊಲೆಯ ವಿಷಯವನ್ನು ತಿಳಿಸಿದಾಗ ಹೈಡ್ರಾಮಾವನ್ನೇ ಮಾಡಿದ್ದಳು.

    ಅಷ್ಟೇ ಅಲ್ಲದೇ ಮಾಧ್ಯಮಗಳ ಮುಂದೆ ಆಕೆ, ನನ್ನ ಗಂಡ ನಿನ್ನೆ ಮನೆಗೆ ಬಂದಿದ್ದ. ಅದಾದ ನಂತರ ಮನೆಗೆ ಬಂದಿಲ್ಲ. ಇದೀಗ ನನ್ನ ಗಂಡನನ್ನು ಯಾರೋ ಕೊಲೆ ಮಾಡಿದ್ದಾರೆ. ಆತನನ್ನು ಯಾರು ಕೊಲೆ ಮಾಡಿದ್ದಾರೆ ಎಂದು ಗೊತ್ತಿಲ್ಲ. ನನ್ನ ಗಂಡನಿಗೆ ಯಾರು ಶತ್ರುಗಳು ಇರಲಿಲ್ಲ ಎಂದು ಕಣ್ಣೀರು ಹಾಕಿದ್ದಳು. ಇದನ್ನೂ ಓದಿ: ಶ್ವಾನದ ಜೊತೆ ಬೈಕ್‍ನಲ್ಲಿ ಲಡಾಕ್ ಟ್ರಿಪ್‍ಗೆ ಹೊರಟ ಯುವಕ

    ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆ ವೇಳೆ ಗೌರಿಯ ಪ್ರಿಯಕರ ಪರಮೇಶ್‍ಚಾರಿಯನ್ನು ವಿಚಾರಣೆ ನಡೆಸುತ್ತಾರೆ. ಆ ಬಳಿಕ ಇವರಿಗೆ ಸುಂದರ್ ರಾಜ್‍ನನ್ನು ಕೊಲೆ ಮಾಡಿರುವುದು ಅಮಾಯಕಿಯಂತೆ ನಟಿಸುತ್ತಿರುವ ಪತ್ನಿ ಗೌರಿ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಸಾವಿರಾರು ಜನ – ಪೂಲ್‌ನಲ್ಲಿ ಪ್ರತಿಭಟನಾಕಾರರು, ರಾಜಪಕ್ಸೆ ಪರಾರಿ

    ಅಷ್ಟೇ ಅಲ್ಲದೇ ಸುಂದರ್‌ ರಾಜ್ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ನನಗೆ ನೆಮ್ಮದಿಯೇ ಇಲ್ಲ ಎಂದು ಗೌರಿ ಪ್ರಿಯಕರನ ಬಳಿ  ಹೇಳಿಕೊಂಡಿದ್ದಳು. ಇದಾದ ನಂತರ ಆತನನ್ನು ಕೊಲೆ ಮಾಡಬೇಕೆಂದು ಸಹ ಆಕೆ ಹೇಳಿದ್ದಳು. ನಂತರ ನನ್ನ ಸ್ನೇಹಿತರಾದ ಚೇತನ್, ತೇಜಸ್, ಶ್ರೀನಿವಾಸ ಎಂಬುವರ ಜೊತೆ ಸುಂದರ್‌ ರಾಜ್‍ನನ್ನು ಪಾರ್ಟಿ ಮಾಡೋಕೆ ಹುಲಿಕೆರೆಯ ಬಳಿ ಕರೆದುಕೊಂಡು ಹೋಗಿ, ಅಲ್ಲಿ ಆತನಿಗೆ ಚೆನ್ನಾಗಿ ಕುಡಿಸಿ ಆತನಿಗೆ ಮನಬಂದ ಹಾಗೆ ಹೊಡೆದು ಕೊಲೆ ಮಾಡಿರುವುದಾಗಿ ಪರಮೇಶ್‍ ಚಾರಿ ತಪ್ಪು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಗೌರಿಯನ್ನು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೆಂಡತಿ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತಿ – ಆಸ್ತಿಗಾಗಿ ಅತ್ತೆಗೂ ಕಾಟ

    ಹೆಂಡತಿ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತಿ – ಆಸ್ತಿಗಾಗಿ ಅತ್ತೆಗೂ ಕಾಟ

    ಬೆಂಗಳೂರು: ಈ ತಾಯಿ ಮಗನನ್ನು ಕಳೆದುಕೊಂಡು ಇಳಿವಯಸ್ಸಿನಲ್ಲೂ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸೊಸೆಯ ಕಾಟದಿಂದಾಗಿ ಬದುಕೇ ಬರಡಾಗಿದೆ. ಸೊಸೆ ಎಂದು ಬಂದ ಆ ಖತರ್ನಾಕ್ ಲೇಡಿ ಇಡೀ ಕುಟುಂಬದ ನೆಮ್ಮದಿಯನ್ನೇ ಬೀದಿ ಪಾಲು ಮಾಡಿದ್ದಾಳೆ.

    ಹೌದು ಈಕೆಯ ಹೆಸರು ರೇಣುಕಮ್ಮಾ. ವಯಸ್ಸು 60 ದಾಟಿದೆ. ಕೆಂಗೇರಿ ಬಳಿಯ ಸೂಲಿಕೆರೆಯಲ್ಲಿ ವಾಸವಾಗಿರುವ ಇವರ ಮಗ ಇತ್ತೀಚೆಗಷ್ಟೇ ಹೆಂಡತಿಯ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗಲೂ ತನ್ನ ಕಂದನ ನೆನೆದು ಈ ಜೀವ ಕಣ್ಣೀರು ಹಾಕುತ್ತಿದೆ. ಇಡೀ ಬದುಕೇ ಈಗ ಅಲ್ಲೋಲಕಲ್ಲೋಲವಾಗಿದೆ.

    ಹೆಂಡತಿಯ ಕಾಟದಿಂದ ಬದುಕೇ ಸಾಕು ಎಂದು ಮಗ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ. ಸೊಸೆಯ ಕಾರಣದಿಂದ ಈ ಬಡ ಜೀವ ಹೆತ್ತ ಮಗುವನ್ನೂ ಕಳೆದುಕೊಂಡಿದೆ. ಬದುಕು ದುಸ್ತರವಾಗಿದೆ. ಇವರ ಮಗ ಮಂಜುನಾಥ್ ಜೂನ್ 1 ರಂದು ಮನನೊಂದು ಡೆತ್ ನೋಟ್ ಬರೆದಿಟ್ಟು ಪ್ರಾಣ ಚೆಲ್ಲಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದೆ ಸೊಸೆ ಅನಸೂಯ.

    ಈ ಅನಸೂಯ ಖತರ್ನಾಕ್ ಲೇಡಿ. ಮದುವೆಯಾಗಿ ಬಂದ ದಿನವೇ ದುಡ್ಡಿಗಾಗಿ ತನ್ನ ಅಸಲಿ ಮುಖವನ್ನು ಗಂಡ ಹಾಗೂ ಅತ್ತೆಗೆ ತೋರಿಸಿದ್ದಾಳೆ. ಮದುವೆಯ ದಿನದಂದೇ ಶುರುವಾದ ಕಲಹ ಸುಮಾರು 3-4 ವರ್ಷಗಳು ನಡೆದಿದೆ. ಕೊನೆಗೆ ಹೆಂಡತಿಯ ಹಿಂಸೆಗೆ ಡೆತ್ ನೋಟ್ ಬರೆದಿಟ್ಟು ಮಂಜುನಾಥ್ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದಾರೆ. ಇವಳ ಕಾಟ ಎಂಥದ್ದು ಎಂದರೆ, ರೌಡಿಗಳನ್ನು ಮನೆಗೆ ಕರೆಸಿ, ಪ್ರತಿನಿತ್ಯ ಪತಿ ಮಂಜುನಾಥ್ ಹಾಗೂ ತಾಯಿ ರೇಣುಕಮ್ಮಗೆ ದುಡ್ಡು, ಜಮೀನು ಅಂತ ಕಿರುಕುಳ ಕೊಡಿಸುತ್ತಿದ್ದಳು. ಗಂಡ ಸತ್ತ ಬಳಿಕವೂ ಇದೀಗ ಅನಸೂಯ ತನ್ನ ಅತ್ತೆಗೆ ಆಸ್ತಿ ಕೊಡುವಂತೆ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಬೈಕ್ ಜಪ್ತಿ ಮಾಡಿ ವಿಮೆ ಮಾಡಿಸಿದ ಪೊಲೀಸರು – ಕಣ್ಣೀರಿಟ್ಟ ಸವಾರ

    ಜೂನ್ 1ರಂದು ಡೆತ್ ನೋಟ್ ಬರೆದಿಟ್ಟು ಕೆಂಗೇರಿ ಬಳಿಯ ರಾಮಸಂದ್ರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಂಜುನಾಥ್, ಡೆತ್ ನೋಟ್‌ನಲ್ಲಿ ತನ್ನ ಸಾವಿಗೆ ಹೆಂಡತಿ ಅನಸೂಯಾ ಕಾರಣ ಎಂದು ಬರೆದಿದ್ದರು. ಅಲ್ಲದೆ ತನ್ನ ಆಸ್ತಿ, ಹಣ ಯಾವುದನ್ನೂ ಹೆಂಡತಿಗೆ ಕೊಡಬಾರದು, ತಾಯಿಗೆ ಕೊಡಬೇಕು ಎಂದು ಹೇಳಿದ್ದರು. ಮಂಜುನಾಥ್ ಜೊತೆಗಿನ ಖಾಸಗಿ ವೀಡಿಯೋ ಮುಂದಿಟ್ಟುಕೊಂಡು ಪುಡಿ ರೌಡಿಗಳ ಜೊತೆ ಸೇರಿ ಬ್ಲಾಕ್‌ಮೇಲ್ ಕೂಡ ಮಾಡುತ್ತಿದ್ದಳು. ಸೈಟು, ಆಸ್ತಿಯನ್ನೆಲ್ಲಾ ತನ್ನ ಹೆಸರಿಗೆ ಬರೆದುಕೊಡುವಂತೆ ಮದುವೆಯ ಮರುದಿನವೇ ಕಿರುಕುಳ ಕೊಟ್ಟಿದ್ದಳು. ಇದರಿಂದ ಮನನೊಂದು ಮಂಜುನಾಥ್ ಒಂದು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವ್ಯವಸ್ಥೆಯನ್ನು ಪ್ರಶ್ನಿಸಿದವರ ವಿರುದ್ಧ ಕೇಸ್ ಹಾಕುವುದು, ಬೆದರಿಸುವುದು ಮಾಡುತ್ತಿದ್ದಾರೆ: ಪ್ರಿಯಾಂಗ್ ವಿರುದ್ಧ ಮಣಿಕಂಠ್ ಕಿಡಿ

    ಈ ಹಿಂದೆ ಮಂಜುನಾಥ್ ಒಂದು ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಬಳಿಕ ಅನಸೂಯಾಳನ್ನು ವರಿಸಿಕೊಂಡಿದ್ದರು. ಅನಸೂಯಾಳನ್ನು ಮದುವೆಯಾಗಿ ಕೆಲವೇ ವರ್ಷಕ್ಕೆ ಮನನೊಂದು ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಜೈಲಿಗೂ ಹೋಗಿ ಬಂದಿದ್ದ ಮಂಜುನಾಥ್ ಎರಡನೇ ಪತ್ನಿ ಅನಸೂಯಾ, ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಮೃತ ಮಂಜುನಾಥ್ ತಾಯಿ ರೇಣುಕಮ್ಮಾರನ್ನು ಟಾರ್ಗೆಟ್ ಮಾಡಿದ್ದಾಳೆ. ಮಂಜುನಾಥ್ ಆಸ್ತಿ, ಹಣ ಎಲ್ಲವನ್ನೂ ತನಗೆ ಕೊಡುವಂತೆ ಕಿರುಕುಳ ಕೊಡುತ್ತಿದ್ದಾಳೆ. ಯಾರ ಆಶ್ರಯವೂ ಇಲ್ಲದೆ ರೇಣುಕಮ್ಮಾ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಕ್ರಮ ಸಂಬಂಧಕ್ಕೆ ಮಕ್ಕಳ ಮುಂದೆಯೇ ಹೆಂಡತಿಯನ್ನು ಕೊಂದ ಕಿರಾತಕ

    ಅಕ್ರಮ ಸಂಬಂಧಕ್ಕೆ ಮಕ್ಕಳ ಮುಂದೆಯೇ ಹೆಂಡತಿಯನ್ನು ಕೊಂದ ಕಿರಾತಕ

    ಮಂಡ್ಯ: ಆ ಕುಟುಂಬದಲ್ಲಿ ಗಂಡ-ಹೆಂಡತಿ, ಅವರಿಬ್ಬರಿಗೆ ಆರತಿಗೊಂದು ಕೀರ್ತಿಗೊಂದು ಎಂಬಂತೆ ಇಬ್ಬರು ಮಕ್ಕಳಿದ್ರು. ಆದರೆ ಆತನಿಗೆ ಪರಸ್ತ್ರೀಯರೆಂದರೆ ಹುಚ್ಚು. ಪರಸ್ತ್ರೀಯರ ಆಸೆಗಾಗಿ ಪಾಪಿ ಗಂಡ ತನ್ನ ಇಬ್ಬರು ಮಕ್ಕಳ ಎದುರೇ ಕಟ್ಟಿಕೊಂಡವಳನ್ನು ಕೊಲೆಗೈದಿದ್ದಾನೆ. ಪಾಪಿ ತಂದೆಯ ಈ ಕ್ರೌರ್ಯ ನೋಡಿದ ಮಕ್ಕಳು ಬೆಚ್ಚಿ ಬಿದ್ದಿದ್ದಾರೆ.

    ಪತಿಯ ಕೈಯಿಂದಲೇ ಹತ್ಯೆಯಾದ ಮಹಿಳೆ ಯೋಗಿತಾ. ಈಕೆಯನ್ನು 9 ವರ್ಷಗಳ ಹಿಂದೆ ಕೆಆರ್ ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದಿಂದ ಶ್ರೀರಂಗಪಟ್ಟಣ ತಾಲೂಕಿನ ಗೆಂಡೆಹೊಸಹಳ್ಳಿ ಗ್ರಾಮದ ರವಿ ಗೌಡನೊಂದಿಗೆ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. 2-3 ವರ್ಷ ರವಿ ಗೌಡ ಹಾಗೂ ಯೋಗಿತಾ ಸಂಸಾರ ಚೆನ್ನಾಗಿಯೇ ಇತ್ತು. ಇದರ ಪ್ರತಿಫಲವಾಗಿ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಯೋಗಿತಾ ಜನ್ಮ ನೀಡಿದ್ದಳು.

    ಮದುವೆಯಾದ ಕೆಲವೇ ವರ್ಷಗಳಲ್ಲಿ ರವಿ ಗೌಡ ತನ್ನ ಹಳೆಯ ವರಸೆ, ಎಂದರೆ ಅಕ್ರಮ ಸಂಬಂಧವನ್ನು ಮುಂದುವರಿಸುತ್ತಾನೆ. ಪಕ್ಕದ ಗ್ರಾಮದ ಮಹಿಳೆಯ ಜೊತೆ ರವಿ ಗೌಡ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದ. ಈ ವಿಚಾರ ಗೊತ್ತಾದ ಬಳಿಕ ಯೋಗಿತಾ ರವಿ ಗೌಡನನ್ನು ಪ್ರಶ್ನೆ ಮಾಡಿದ್ದಾಳೆ. ಇದರಿಂದ ಸಂಸಾರದಲ್ಲಿ ಬಿರುಗಾಳಿ ಬೀಸಿದ್ದು, ಪ್ರತಿ ದಿನ ರವಿ ಗೌಡ ಯೋಗಿತಾಗೆ ಬೈಯ್ಯುವುದು, ಹೊಡೆಯುವುದು ಮಾಡುತ್ತಿದ್ದ.

    ಇದರ ನಡುವೆಯೇ ಯೋಗಿತಾ ತನ್ನ ಗಂಡ ಪರಸ್ತ್ರೀಯ ಜೊತೆ ಇರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ತಂದೆಯ ಮನೆಯಲ್ಲಿ ತಿಳಿಸಿದ್ದಾಳೆ. ನಂತರ ಅವರಿಬ್ಬರ ನಡುವೆ ರಾಜಿ ಪಂಚಾಯಿತಿ ಎಲ್ಲಾ ಮಾಡಿ ಚೆನ್ನಾಗಿ ಇರಿ ಎಂದು ಹಿರಿಯರು ಹೇಳಿದ್ದರು. ನಂತರವೂ ರವಿ ಗೌಡ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ. ಅಕ್ರಮ ಸಂಬಂಧ ಮುಂದುರೆಸುವುದರ ಜೊತೆಗೆ ಯೋಗಿತಾಗೆ ಟಾರ್ಚರ್ ಮಾಡುತ್ತಿದ್ದ. ಇದನ್ನೂ ಓದಿ: ಕಾಳಿ ವಿವಾದ ಆಯ್ತು, ಇದೀಗ ಶಿವ, ಪಾರ್ವತಿ ಪಾತ್ರಧಾರಿಗಳ ಚಿತ್ರ ಹಂಚಿಕೊಂಡ ಲೀನಾ

    crime

    ಬುಧವಾರ ಸಂಜೆ ರವಿ ಗೌಡ ಮಕ್ಕಳಿಗೆ ತಿನ್ನಲು ಪಾನಿಪುರಿ ನೀಡಿದ್ದ. ಈ ವೇಳೆ ಯೋಗಿತಾ ಮಕ್ಕಳಿಗೆ ತಿನ್ನಬೇಡಿ ಎಂದಿದ್ದಳು. ಇದಕ್ಕೆ ಕೋಪಗೊಂಡ ರವಿ ಗೌಡ ಯೋಗಿತಾಳ ಜಡೆ ಹಿಡಿದು, ಮನೆಯ ಒಳಗಡೆ ಕೆರೆದುಕೊಂಡು ಹೋಗಿದ್ದಾನೆ. ಮನೆಯಲ್ಲಿದ್ದ ವೈರ್ ಅನ್ನು ತೆಗೆದುಕೊಂಡು, ಯೋಗಿತಾಳ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ತಂದೆಯ ಈ ಕ್ರೌರ್ಯವನ್ನು ಕಂಡ ಮಕ್ಕಳು ಬೆಚ್ಚಿ ಬಿದ್ದಿದ್ದಾರೆ. ಕೊಲೆ ಮಾಡಿ ಹೊರಗೆ ಬಂದ ಪಾಪಿ ತಂದೆ ಯಾರಿಗೂ ಹೇಳಬೇಡಿ ನನ್ನನ್ನು ಪೊಲೀಸರು ಅರೆಸ್ಟ್ ಮಾಡಿ ಬಿಡುತ್ತಾರೆ ಎಂದು ಮಕ್ಕಳಿಗೆ ಹೇಳಿ ಪರಾರಿಯಾಗಿದ್ದಾನೆ.

    ಇತ್ತ ಮಗಳನ್ನು ಕೊಲೆ ಮಾಡಿರುವ ಅಳಿಯನ ವಿರುದ್ಧ ಹೆತ್ತವರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಆತ ಒಬ್ಬ ವಿಕೃತ ಕಾಮಿ. ಬಾತ್‌ರೂಂಗೂ ಸಿಸಿ ಟಿವಿ ಹಾಕಿಸಿ, ನಮ್ಮನ್ನೂ ಬೆತ್ತಲೆಯಾಗಿ ನೋಡಿದ್ದಾನೆ. ಅವನಿಗೆ ಹುಡುಗಿಯರ ಶೋಕಿಯಿದೆ. ಈ ವಿಚಾರ ನಮಗೆ ಮದುವೆಯಾದ ಮೇಲೆ ಗೊತ್ತಾಗಿದೆ. ಇವನ ಹೆಣ್ಣುಬಾಕತನದಿಂದ ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ. ಅವನನ್ನು ಹಿಡಿದು, ಆಕೆಯನ್ನು ಸಾಯಿಸಿದ ರೀತಿಯಲ್ಲೇ ಸಾಯಿಸಬೇಕು. ನಮ್ಮ ಮಗಳ ಸಾವಿಗೆ ನ್ಯಾಯ ದೊರಕುವವರೆಗೆ ನಾವು ಶವ ಎತ್ತುವುದಿಲ್ಲ ಎಂದು ಹೆತ್ತವರು ಆಕ್ರಂದಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ನುಸುಳಿದ ಪಾಕಿಸ್ತಾನಿ ಮೀನುಗಾರರು- ನಾಲ್ವರ ಬಂಧನ

    ಒಟ್ಟಾರೆ ತನ್ನ ಹೆಣ್ಣುಬಾಕ ಬುದ್ಧಿಯಿಂದ ಹೆಂಡತಿಯನ್ನು ಕೊಲೆ ಮಾಡಿ ಮುದ್ದಾದ ಇಬ್ಬರು ಮಕ್ಕಳನ್ನು ಅನಾಥ ಮಾಡಿದ ಪಾಪಿ ಪತಿ ಪರಾರಿಯಾಗಿದ್ದಾನೆ. ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನು ನನ್ನ ಪತ್ನಿಯನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ – ಪತ್ರ ಬರೆದು ವೃದ್ಧ ನೇಣಿಗೆ ಶರಣು

    ನಾನು ನನ್ನ ಪತ್ನಿಯನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ – ಪತ್ರ ಬರೆದು ವೃದ್ಧ ನೇಣಿಗೆ ಶರಣು

    ಜೈಪುರ: ನಾನು ನನ್ನ ಹೆಂಡತಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರ ಬರೆದು 70 ವರ್ಷದ ವೃದ್ಧನೊಬ್ಬ ನೇಣಿಗೆ ಶರಣಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ರಾಜಸ್ಥಾನದ ಭರತ್‍ಪುರ ಪಟ್ಟಣದಲ್ಲಿ ಬುಧವಾರ 70 ವರ್ಷದ ವೃದ್ಧ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರೂಪ್ವಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ವಹ್ರಾವಲಿ ಗ್ರಾಮದಲ್ಲಿ ನಡೆದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

    ನಡೆದಿದ್ದೇನು?
    ಮಥುರಾ ಗೇಟ್ ಠಾಣೆಯ ಅಧಿಕಾರಿ ರಾಮನಾಥ್ ಗುರ್ಜರ್ ಈ ಕುರಿತು ಮಾತನಾಡಿದ್ದು, ನರೇಂದ್ರ ಸಿಂಗ್(70) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಯಹತ್ಯೆ ಮಾಡಿಕೊಳ್ಳುವ ಮುನ್ನ ನರೇಂದ್ರ ಸಿಂಗ್ ಸೂಸೈಡ್ ನೋಟ್ ಬರೆದಿದ್ದು, ತನ್ನ ಸ್ವ-ಇಚ್ಛೆಯಿಂದ ಆತ್ಯಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನು ನನ್ನ ಹೆಂಡತಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿಟ್ಟು ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಈ ಪತ್ರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವಿವರಿಸಿದರು.

    ಯಾರಿದು?
    ಮಾಹಿತಿ ಪ್ರಕಾರ, ನರೇಂದ್ರ ಸಿಂಗ್ ಕಳೆದ 20 ವರ್ಷಗಳಿಂದ ಜಿಲ್ಲಾ ಆಸ್ಪತ್ರೆ ಬಳಿ ಇರುವ ಧರ್ಮಶಾಲೆಯಲ್ಲಿ ಕಾವಲು ಕಾಯುತ್ತಿದ್ದರು. ಆದರೆ ಒಂದು ವರ್ಷದ ಹಿಂದೆ ಅವರ ಪತ್ನಿ ಭಗವಾನ್ ದೇಯಿ ಮೃತಪಟ್ಟರು. ನಂತರ ಅವರು ಒಂಟಿತನವನ್ನು ಅನುಭವಿಸುತ್ತಿದ್ದರು. ಈ ಹಿನ್ನೆಲೆ ತನ್ನ ಪತ್ನಿಯ ಸಾವಿನ ಆಘಾತವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಮಲಗಿದ್ದ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಕತ್ತಿ ಹಿಡಿದು ಕುಳಿತ ಪತ್ನಿ

    ಮಲಗಿದ್ದ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಕತ್ತಿ ಹಿಡಿದು ಕುಳಿತ ಪತ್ನಿ

    ಮಂಗಳೂರು: ಮಲಗಿದ್ದ ಪತಿಯನ್ನು ಪತ್ನಿಯೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ ನಡೆದಿದೆ.

    ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಅಬಂನ್ ಕರೆ ಮನೆಯಲ್ಲಿ ಬೇಬಿ ಪೊಟ್ಟಸ್ (55)ನನ್ನು ಪತ್ನಿ ನಲ್ಲಮ್ಮ(50) ಕೊಲೆ ಮಾಡಿದ್ದಾಳೆ. ಕ್ಷುಲ್ಲಕ ಕಾರಣಕ್ಕಾಗಿ ಪತಿಯ ಕೊಲೆ ಮಾಡಿ ಬಳಿಕ ನಲ್ಲಮ್ಮ ಕತ್ತಿ ಹಿಡಿದು ಕುಳಿತ್ತಿದ್ದಳು. ಇದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಶಾಸಕ ಜಮೀರ್‌ ಮನೆ ಮೇಲೆ ಎಸಿಬಿ ದಾಳಿ – ಸಿಎಂ ಹೇಳಿದ್ದೇನು?

    POLICE JEEP

    ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ಘಟನೆ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯೂ ಕ್ಷುಲಕ ಕಾರಣಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಗುಡ್ಡ ಕುಸಿತ- ಕರ್ನಾಟಕ, ಗೋವಾ ಸಂಪರ್ಕಿಸುವ ರಸ್ತೆ 5 ಗಂಟೆ ಬಂದ್

    Live Tv
    [brid partner=56869869 player=32851 video=960834 autoplay=true]

  • ಪ್ರಿಯಕರನ ಜೊತೆ ಸಿಕ್ಕಿಬಿದ್ದ ಮಹಿಳೆಗೆ ಗಂಡನನ್ನು ಹೆಗಲ ಮೇಲೆ ಹೊತ್ತು ನಡೆಯೋ ಶಿಕ್ಷೆ!

    ಪ್ರಿಯಕರನ ಜೊತೆ ಸಿಕ್ಕಿಬಿದ್ದ ಮಹಿಳೆಗೆ ಗಂಡನನ್ನು ಹೆಗಲ ಮೇಲೆ ಹೊತ್ತು ನಡೆಯೋ ಶಿಕ್ಷೆ!

    ಭೋಪಾಲ್: ತನ್ನ ಪ್ರಿಯಕರನ ಜೊತೆ ಇದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಮಹಿಳೆಗೆ ಗ್ರಾಮಸ್ಥರು ಕಠಿಣ ಶಿಕ್ಷೆ ವಿಧಿಸಿದ ಘಟನೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದಿದೆ.

    ಸದ್ಯ ಆದಿವಾಸಿಗಳ ಪ್ರಾಬಲ್ಯವಿರುವ ಉದಯನಗರದ ಬೋರ್ಪದವ್ ಗ್ರಾಮದಲ್ಲಿ ಮಹಿಳೆಗೆ ನೀಡಿರುವ ಶಿಕ್ಷೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಸಿಧು ಮೂಸೆವಾಲಾ ಹಂತಕರು ಕಾರಿನಲ್ಲಿ ಗನ್ ಹಿಡಿದು ಸಂಭ್ರಮಿಸಿದ ವೀಡಿಯೋ ವೈರಲ್

    ಏನಿದು ಘಟನೆ..?: ಜೂನ್ 24ರಂದು ಮಹಿಳೆ ಹೊರಗಡೆ ಹೋದವಳು ವಾಪಸ್ ಬಂದಿರಲಿಲ್ಲ. ಮಹಿಳೆಯ ಪತಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪತಿ ಉದಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಹಿಳೆ ಅದೇ ಗ್ರಾಮದಲ್ಲಿರುವ ತನ್ನ ಲವ್ವರ್ ಹರಿಸಿಂಗ್ ಮನೆಯಲ್ಲಿ ವಾಸವಾಗಿದ್ದಾಳೆ ಎಂದು ತಿಳಿದುಬಂದಿದೆ.

    ಮಹಿಳೆಯನ್ನು ಗ್ರಾಮದ ಜನರೇ ಹರಿಸಿಂಗ್ ಮನೆಯಲ್ಲಿರುವುದನ್ನು ಪತ್ತೆಹಚ್ಚಿದ್ದಾರೆ. ಪತಿ ಮತ್ತು ಗ್ರಾಮಸ್ಥರು ಮಹಿಳೆ ಹಾಗೂ ಪ್ರಿಯಕರನನ್ನು ಮನೆಯಿಂದ ಹೊರಗಡೆ ಕರೆತಂದು ಇಬ್ಬರನ್ನೂ ಮೊದಲು ಚೆನ್ನಾಗಿ ಥಳಿಸಿದ್ದಾರೆ. ನಂತರ ಪತಿಯನ್ನು ಮಹಿಳೆಯ ಭುಜದ ಮೇಲೆ ಕೂರಿಸಿ ಗ್ರಾಮದಾದ್ಯಂತ ಮೆರವಣಿಗೆ ಮಾಡಿದ್ದಾರೆ. ಇತ್ತ ಪ್ರಿಯಕರನ ಕೊರಳಿಗೆ ಚಪ್ಪಲಿಯನ್ನು ಧರಿಸಿ ಮೆರವಣಿಗೆ ನಡೆಸಿದ್ದಾರೆ.

    9 ಮಂದಿಯ ಬಂಧನ: ಶಿಕ್ಷೆಯಿಂದ ನೊಂದ ಇಬ್ಬರೂ ಕ್ಷಮೆಯಾಚಿಸಿದರೂ ಅಲ್ಲಿ ನೆರೆದಿದ್ದ ಜನರು ಸಹಾಯ ಮಾಡುವ ಬದಲು ಅವರನ್ನು ನೋಡಿ ನಗುತ್ತಿದ್ದರು. ಇದನ್ನು ನೆರೆದಿದ್ದವರೊಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಈ ವೀಡಿಯೋ ಪೊಲೀಸರಿಗೆ ತಲುಪಿದ ಕೂಡಲೇ ವಿಡಿಯೋ ಆಧರಿಸಿ ಪತಿ ಮಂಗಿಲಾಲ್ ಸೇರಿದಂತೆ 9 ಮಂದಿಯನ್ನು ಬಂಧಿಸಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸುಳ್ಳಾದ ಆತ್ಮಹತ್ಯೆ ನಾಟಕ – ಪತಿಗೆ ಮೂಹೂರ್ತ ಇಟ್ಟಿದ್ದ ಪತ್ನಿ, ಪ್ರಿಯಕರ ಅರೆಸ್ಟ್

    ಸುಳ್ಳಾದ ಆತ್ಮಹತ್ಯೆ ನಾಟಕ – ಪತಿಗೆ ಮೂಹೂರ್ತ ಇಟ್ಟಿದ್ದ ಪತ್ನಿ, ಪ್ರಿಯಕರ ಅರೆಸ್ಟ್

    ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧಕ್ಕೆ ಗಂಡ ಅಡ್ಡಿ ಎಂಬ ಕಾರಣಕ್ಕೆ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆಗೈದಿದ್ದ ಪತ್ನಿ ಹಾಗೂ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

    ದಾಪಾಪೀರ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಪತ್ನಿ ಮೆಹರ್ ಹಾಗೂ ಪ್ರಿಯಕರ ತೌಸೀಫ್ ಆರೋಪಿಗಳಾಗಿದ್ದಾರೆ. ಶಿಡ್ಲಘಟ್ಟ ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ 2021 ನವೆಂಬರ್ 26 ರಂದು ದಾದಾಪೀರ್ ಮನೆಯಲ್ಲಿ ಸುಟ್ಟು ಹೋದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು. ಹೆಂಡತಿ ಮೆಹರ್ ತನ್ನ ಗಂಡ ಸೀಮೆಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಅಕ್ಕ-ಪಕ್ಕದ ಮನೆಯವರೆನ್ನೆಲ್ಲಾ ಕರೆದು, ಅವರ ಮುಂದೆಯೇ ಬಾಗಿಲು ಒಡೆದು ಹಾಕಿ, ನಾಟಕ ಮಾಡಿ ಆತ್ಮಹತ್ಯೆಯ ಕಥೆ ಕಟ್ಟಿದ್ದಳು. ಇದನ್ನೂ ಓದಿ: ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಪ್ರತಿಭಟನೆ – ಮೂವರು ಕಾರ್ಯಕರ್ತರ ಪ್ಯಾಂಟ್‍ಗೆ ತಗುಲಿದ ಬೆಂಕಿ

    ವಿಷಯ ತಿಳಿದು ಘಟನಾ ಸ್ಥಳಕ್ಕೆ ತೆರಳಿದ್ದ ದಿಬ್ಬೂರಹಳ್ಳಿ ಪಿಎಸ್‍ಐ ಪಾಪಾಣ್ಣ ಹಾಗೂ ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಎಫ್ ಎಸ್‍ಎಲ್ ವರದಿ ಆಧಾರದ ಮೇಲೆ ಮೃತನ ಪತ್ನಿಯ ನಡೆ ಅನುಮಾನಿಸಿ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಯಲಾಗಿದೆ. ಹೀಗಾಗಿ ಸದ್ಯ ಪ್ರಿಯಕರ ತೌಸೀಫ್ ಹಾಗೂ ಪತ್ನಿ ಮೆಹರ್ ಅನ್ನು ಶಿಡ್ಲಘಟ್ಟ ವೃತ್ತ ನೀರೀಕ್ಷಕ ಧರ್ಮೇಗೌಡ ನೇತೃತ್ವದಲ್ಲಿ ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಹೋಂ ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿ ಕಿವಿಯಲ್ಲಿ ರಕ್ತ ಬರುವಂತೆ ಹೊಡೆದ – ಶಿಕ್ಷಕನ ವಿರುದ್ಧ ಪೋಷಕರ ಆಕ್ರೋಶ

    ಮೆಹರ್ ಹಾಗೂ ತೌಸೀಫ್ ದಾಪಾಪೀರ್‌ಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಹಾಕಿ ಕುಡಿಸಿದ್ದರು. ತದನಂತರ ಪ್ರಿಯಕರ ಚಿಕನ್ ಅಂಗಡಿಯಲ್ಲಿ ಕೋಳಿ ಕ್ಲೀನ್ ಮಾಡುವ ಗ್ಯಾಸ್ ಗನ್ ನಿಂದ ಮೃತದೇಹವನ್ನ ಸುಟ್ಟು ಹಾಕಿದ್ದಾನೆ. ನಿದ್ರೆ ಮಾತ್ರೆ ಸೇವಿಸಿದ್ದ ಪರಿಣಾಮ ಅರೆ ಪ್ರಜ್ಞಾವಸ್ಥೆಗೆ ಜಾರಿದ್ದ ಗಂಡ ದಾದಾಪೀರ್ ಮೇಲೆ ಏಳಲಾಗದೇ ಸುಟ್ಟು ಹೋಗಿ ಸಾವನ್ನಪ್ಪಿದ್ದರು. ಅಲ್ಲದೇ ಈ ಪ್ರಕರಣ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    Live Tv

  • ಅನೈತಿಕ ಸಂಬಂಧ ಶಂಕೆ – ಪತ್ನಿಯ ರುಂಡಮುಂಡ ಬೇರೆ ಮಾಡಿದ ಪತಿ!

    ಅನೈತಿಕ ಸಂಬಂಧ ಶಂಕೆ – ಪತ್ನಿಯ ರುಂಡಮುಂಡ ಬೇರೆ ಮಾಡಿದ ಪತಿ!

    ಮೈಸೂರು: ಪತ್ನಿಯ ಶೀಲ ಶಂಕಿಸಿ ಪತಿಯೇ ಪತ್ನಿಯ ರುಂಡಮುಂಡ ಬೇರೆಯಾಗುವಂತೆ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಪುಟ್ಟಮ್ಮ(40) ಕೊಲೆಯಾದ ಮಹಿಳೆ. ಪತಿ ದೇವರಾಜ್ ಬಂಧನಕ್ಕೆ ವರುಣಾ ಪೊಲೀಸರು ಜಾಲ ಬೀಸಿದ್ದಾರೆ. ಮೊದಲ ಹೆಂಡತಿಯನ್ನೂ ಸಹ ಕೊಲೆ ಮಾಡಲು ಯತ್ನಿಸಿ ಜೈಲು ವಾಸ ಅನುಭವಿಸಿದ್ದ ದೇವರಾಜ್, ನಂತರ ಎರಡನೇ ಮದುವೆಯಾಗಿ ಈಗ ಆಕೆಯನ್ನು ಕೂಡ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ – ಜನರಲ್ಲಿ ಹೆಚ್ಚಿದ ಆತಂಕ

    POLICE JEEP

    ಮೊದಲ ಹೆಂಡತಿಯಿಂದ ದೂರವಾದ ದೇವರಾಜ್, 21 ವರ್ಷಗಳ ಹಿಂದೆ ಪುಟ್ಟಮ್ಮಳನ್ನು ಎರಡನೇ ವಿವಾಹವಾಗಿದ್ದ. ಎರಡನೇ ಮದುವೆಯಾದರೂ ಪುಟ್ಟಮ್ಮಳ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ. 20 ವರ್ಷದ ಮಗಳಿದ್ದರೂ ಪತ್ನಿ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದ. ಕಳೆದ ಒಂದು ತಿಂಗಳಿಂದ ಪುಟ್ಟಮ್ಮಳಿಗೆ ದೇವರಾಜ್ ಕಿರುಕುಳ ಹೆಚ್ಚಾಗಿತ್ತು.

    ಮಗಳು ಪವಿತ್ರ ಕಾಲೇಜಿಗೆ ಹೋಗಿದ್ದ ವೇಳೆ ಇದೇ ವಿಚಾರಕ್ಕೆ ಕ್ಯಾತೆ ತೆಗೆದ ದೇವರಾಜ್ ಪತ್ನಿಯನ್ನು ಭೀಕರವಾಗಿ ಕೊಂದಿದ್ದಾನೆ. ರುಂಡಮುಂಡವನ್ನು ಬೇರ್ಪಡಿಸಿ ಆಕ್ರೋಶ ತೀರಿಸಿಕೊಂಡಿದ್ದಾನೆ. ಇದೀಗ ದೇವರಾಜ್ ವಿರುದ್ಧ ಮಗಳು ಪವಿತ್ರ ದೂರು ನೀಡಿದ್ದಾಳೆ. ವರುಣಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ದೇವರಾಜ್ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಪತಿಯ ಅಕ್ರಮ ಸಂಬಂಧ- ಮಕ್ಕಳ ಜೊತೆ ಪತ್ನಿ ಆತ್ಮಹತ್ಯೆ

    Live Tv

  • ಬಾಲಕನನ್ನು ಅಪಹರಿಸಿ 1 ಲಕ್ಷಕ್ಕೆ ಮಾರಿದ್ರು – ನರ್ಸ್ ಜೊತೆ ಪತಿ ಕೈಗೂ ಕೋಳ

    ಬಾಲಕನನ್ನು ಅಪಹರಿಸಿ 1 ಲಕ್ಷಕ್ಕೆ ಮಾರಿದ್ರು – ನರ್ಸ್ ಜೊತೆ ಪತಿ ಕೈಗೂ ಕೋಳ

    ಲಕ್ನೋ: ಆರು ವರ್ಷದ ಬಾಲಕನನ್ನು ಅಪಹರಿಸಿ ಒಂದು ಲಕ್ಷ ರೂ.ಗೆ ಮಾರಾಟ ಮಾಡಿದ್ದ ನರ್ಸ್ ಮತ್ತು ಆಕೆಯ ಪತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

    ಜೂನ್ 6 ರಂದು ಆಗ್ರಾದ ಶಾಸ್ತ್ರಿಪುರಂ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರು ವರ್ಷದ ಆರವ್ ಕಾಣೆಯಾಗಿದ್ದ ಬಾಲಕನಾಗಿದ್ದಾನೆ. ಆರವ್ ತಂದೆ ಫತ್ತೇಲಾಲ್ ಮೂಲತಃ ಛತ್ತೀಸ್‍ಗಢದ ಬಿಲಾಸ್‍ಪುರ ಜಿಲ್ಲೆಯವರಾಗಿದ್ದು, ಕೂಲಿ ಕಾರ್ಮಿಕರಾಗಿದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಪಕ್ಷಿ ಬಡಿದು ಎಮರ್ಜೆನ್ಸಿ ಲ್ಯಾಂಡಿಂಗ್

    ಆರವ್ ತನ್ನ ಎಂಟು ವರ್ಷದ ಸಹೋದರ ರಿತೇಶ್ ಜೊತೆ ಆಗ್ರಾದ ಶಾಸ್ತ್ರಿಪುರಂ ಪ್ರದೇಶದ ಸಿ ಬ್ಲಾಕ್‍ನಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಆಟವಾಡುತ್ತಿದ್ದಾಗ ನರ್ಸ್ ಪೂಜಾ ಮತ್ತು ಆಕೆಯ ಪತಿ ಅನಿಲ್ ಅವರನ್ನು ಅಪಹರಿಸಿದ್ದಾರೆ. ನಂತರ ಕಾಣೆಯಾದ ಮಗನಿಗಾಗಿ ಹುಡುಕಾಟ ನಡೆಸಿ ಪೋಷಕರು ಕೊನೆಗೆ ಫತ್ತೇಲಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈ ಘಟನೆ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಬಾಲಕ ಕಿಡ್ನಾಪ್ ಆದ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅನಿಲ್ ಮತ್ತು ಪೂಜಾ ಸ್ಕೂಟರ್‌ನಲ್ಲಿ ಆರವ್‍ನನ್ನು ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಆವಾಸ್ ವಿಕಾಸ್ ಕಾಲೋನಿಯ ನಿವಾಸಿ ಅನಿಲ್ ಶರ್ಮಾ ಮತ್ತು ಅವರ ಪತ್ನಿ ಪೂಜಾ ಪ್ರಸ್ತುತ ಕಾಸ್‌ಗಂಜ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು. ಸದ್ಯ ಇಬ್ಬರು ದೆಹಲಿಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಅಪಘಾತ- 9 ಮಂದಿ ದುರ್ಮರಣ

    ವಿಚಾರಣೆ ವೇಳೆ ಪೂಜಾ ಬಾಲಕನನ್ನು ಕಾಸ್‍ಗಂಜ್‍ನಲ್ಲಿರುವ ನೀರಜ್ ದೇವಿಗೆ ಮಾರಾಟ ಮಾಡಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾಳೆ. ನೀರಜ್ ದೇವಿಗೆ 20 ವರ್ಷಗಳಿಂದ ಮಕ್ಕಳಿಲ್ಲದ ಕಾರಣ ಪೂಜಾ ಅವರಿಗೆ ಮಗುವನ್ನು ಕೊಡಿಸಿದರೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಹಣದ ಆಮಿಷಕ್ಕೆ ಒಳಗಾಗಿದ್ದ ಪೂಜಾ ಮತ್ತು ಆಕೆಯ ಪತಿ ಅನಿಲ್ ಜೂನ್ 6 ರಂದು ಆರವ್‍ನನ್ನು ಕಿಡ್ನಾಪ್ ಮಾಡಿ ಮಾರಾಟ ಮಾಡಿದ್ದಾರೆ. ಇದೀಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    =

    Live Tv