Tag: ಪತಿ

  • ಅನೈತಿಕ ಸಂಬಂಧ ಶಂಕೆ – ಪತಿಯ ಗುಪ್ತಾಂಗಕ್ಕೆ ಬಿಸಿ ನೀರು ಎರಚಿದ್ಲು

    ಅನೈತಿಕ ಸಂಬಂಧ ಶಂಕೆ – ಪತಿಯ ಗುಪ್ತಾಂಗಕ್ಕೆ ಬಿಸಿ ನೀರು ಎರಚಿದ್ಲು

    ಚೆನ್ನೈ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯೇ ಪತಿಯ ಗುಪ್ತಾಂಗಕ್ಕೆ ಕುದಿಯುವ ಬಿಸಿ ನೀರು ಎರಚಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದೀಗ ಸುಟ್ಟ ಗಾಯದಿಂದ ಬಳಲುತ್ತಿರುವ 32 ವರ್ಷದ ವ್ಯಕ್ತಿಯನ್ನು ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಗಾಯಗೊಂಡಿರುವ ವ್ಯಕ್ತಿಯನ್ನು ಪುದುಪಟ್ಟು ಮೂಲದ ತಂಗರಾಜ್ ಎಂದು ಗುರುತಿಸಲಾಗಿದ್ದು, ಏಳು ವರ್ಷಗಳ ಹಿಂದೆ 29 ವರ್ಷದ ಪ್ರಿಯಾಳನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದನ್ನೂ ಓದಿ: ಈ ಬಾರಿ ಗಣಪನ ಜೊತೆ ಸಾವರ್ಕರ್ ಫೋಟೋ- ಹಿಂದೂ ಸಂಘಟನೆಗಳಿಂದ ಹೊಸ ಪ್ಲ್ಯಾನ್

    POLICE JEEP

    ತಂಗರಾಜ್ ಮೊಬೈಲ್ ತಯಾರಿಸುವ ಕಂಪನಿಯಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ತಂಗರಾಜ್ ತನ್ನ ಕೆಲಸದ ಸ್ಥಳದಲ್ಲಿ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಪ್ರಿಯಾ ಅನೇಕ ಬಾರಿ ಪತಿಯೊಂದಿಗೆ ಜಗಳವಾಡಿದ್ದಳು ಎಂದು ತಿಳಿದುಬಂದಿದೆ.

    ಮಂಗಳವಾರ ದಂಪತಿ ನಡುವೆ ಮತ್ತೆ ಜಗಳ ಆಗಿದ್ದು, ನಂತರ ತಂಗರಾಜ್ ಮಲಗಿದ್ದರು. ಆದರೆ ಇನ್ನೂ ಅಸಮಾಧಾನಗೊಂಡ ಪ್ರಿಯಾ, ಕುದಿಯುವ ನೀರನ್ನು ಕಾಯಿಸಿ ತಂಗರಾಜ್ ಅವರ ಗುಪ್ತಾಂಗದ ಮೇಲೆ ಸುರಿದಿದ್ದಾಳೆ. ಇದನ್ನೂ ಓದಿ: ದೇಶದ ಮೊದಲ ಎಲೆಕ್ಟ್ರಿಕ್‌ ಡಬ್ಬಲ್ ಡೆಕ್ಕರ್ ಬಸ್‌ ಇಂದಿನಿಂದ ಕಾರ್ಯಾರಂಭ – ಏನಿದರ ವಿಶೇಷತೆ?

    ಈ ವೇಳೆ ತಂಗರಾಜ್ ನೋವಿನಿಂದ ಕಿರುಚಾಡುತ್ತಿರುವುದನ್ನು ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರು ಆತನನ್ನು ರಕ್ಷಿಸಿ ವಾಲಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ವ್ಯಕ್ತಿಯ ಗುಪ್ತಾಂಗಕ್ಕೆ ಶೇ.50ರಷ್ಟು ಸುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಕಾವೇರಿಪಾಕ್ಕಂ ಪೊಲೀಸರು ಇದೀಗ ಪ್ರಿಯಾ ವಿರುದ್ಧ 294, 324, 506 ಮತ್ತು 506 (ii) ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತ್ನಿಯನ್ನು ಇತರ ಮಹಿಳೆಯರಿಗೆ ಹೋಲಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮ: ಹೈಕೋರ್ಟ್

    ಪತ್ನಿಯನ್ನು ಇತರ ಮಹಿಳೆಯರಿಗೆ ಹೋಲಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮ: ಹೈಕೋರ್ಟ್

    ತಿರುವನಂತರಪುರಂ: ಹೆಂಡತಿಯನ್ನು ಇತರ ಮಹಿಳೆಯರಿಗೆ ಹೋಲಿಸುವುದು ಹಾಗೂ ಆಕೆ ನಿರೀಕ್ಷೆಯ ಸಂಗಾತಿಯಲ್ಲ ಎಂದು ಅವಳನ್ನು ನಿರಂತರವಾಗಿ ನಿಂದಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮವಾಗಿದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

    ಸುಮಾರು 13 ವರ್ಷಗಳ ಕಾಲದಿಂದ ಪತ್ನಿಯಿಂದ ಬೇರ್ಪಟ್ಟಿದ್ದ ಪತಿಯು ತಮ್ಮ ಮದುವೆಯನ್ನು ರದ್ದು ಮಾಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿ ಈ ತೀರ್ಪು ನೀಡಿದೆ. ಮಹಿಳೆಯೂ ಪತಿಯಿಂದ ಈ ರೀತಿಯ ನಡುವಳಿಕೆಯನ್ನು ಸಹಿಸಿಕೊಳ್ಳಬಾರದು ಎಂದಿದೆ.

    ನ್ಯಾಯಮೂರ್ತಿಗಳಾದ ಅನಿಲ್ ಕೆ. ನರೇಂದ್ರನ್ ಹಾಗೂ ಸಿಎಸ್ ಸುಧಾ ಅವರ ಪೀಠವು ವಿಚ್ಛೇದಿತ ಕಾಯ್ದೆಯಡಿಯಲ್ಲಿ ಈ ತೀರ್ಪನ್ನು ನೀಡಿದೆ. ಪತಿಯು ಪದೇ ಪದೇ ಪತ್ನಿಯನ್ನು ತಮ್ಮ ನಿರೀಕ್ಷೆಯ ಪತ್ನಿಯಲ್ಲ ಎನ್ನುವುದರ ಜೊತೆಗೆ ಇತರ ಮಹಿಳೆಯರೊಂದಿಗೆ ಹೋಲಿಕೆ ಮಾಡುವುದು ಮಾನಸಿಕ ಕ್ರೌರ್ಯವಾಗಿದೆ. ಇದನ್ನು ಪತ್ನಿಯು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ಇದನ್ನೂ ಓದಿ: ಸಹೋದ್ಯೋಗಿ ಗಟ್ಟಿಯಾಗಿ ತಬ್ಬಿಕೊಂಡಿದ್ರಿಂದ ಮುರಿಯಿತಂತೆ ಮಹಿಳೆಯ 3 ಪಕ್ಕೆಲುಬು!

    ದಾಖಲೆಗಳ ಪ್ರಕಾರ ದಂಪತಿ ಕೇವಲ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಒಟ್ಟಿಗೆ ಇದ್ದಂತೆ ಕಂಡುಬರುತ್ತದೆ. ನಂತರ ಅವರು ಬೇರ್ಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಪತಿಯು ಪತ್ನಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ವಿಚಾರಣೆ ಸಂದರ್ಭದಲ್ಲಿ ತಿಳಿದುಬಂದಿದೆ. ಜೊತೆಗೆ ಪತ್ನಿಯು ದೈಹಿಕವಾಗಿ ಆಕರ್ಷಣೀಯವಾಗಿ ಇಲ್ಲ ಎಂಬ ಕಾರಣಕ್ಕೆ ಆಕೆಯೊಂದಿಗೆ ಪತಿ ಒಡನಾಟದಲ್ಲಿ ತೊಡಗಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದಿದೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಕೊಡಲಿಯಿಂದ ಪತ್ನಿ ಹತ್ಯೆಗೈದ ಪತಿ

    Law

    ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಪತಿ, ಪತ್ನಿಯರಾಗಿ ಮುಂದುವರಿಯಲು ಹೆಚ್ಚು ಉತ್ಸಾಹಕರಾಗಿಲ್ಲ. ಪತ್ನಿಗೆ 26 ಮತ್ತು ಪತಿಗೆ 29 ವರ್ಷ ವಯಸ್ಸಾಗಿದ್ದು, ಮದುವೆ ಬಳಿಕ ಅವರ ನಡುವೆ ಯಾವುದೇ ಭಾವನಾತ್ಮಕ ಸಂಬಂಧ ಏರ್ಪಟ್ಟಂತೆ ಕಾಣುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಅನೈತಿಕ ಸಂಬಂಧ ಶಂಕೆ – ಕೊಡಲಿಯಿಂದ ಪತ್ನಿ ಹತ್ಯೆಗೈದ ಪತಿ

    ಅನೈತಿಕ ಸಂಬಂಧ ಶಂಕೆ – ಕೊಡಲಿಯಿಂದ ಪತ್ನಿ ಹತ್ಯೆಗೈದ ಪತಿ

    ರಾಯಚೂರು: ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತಿಯೇ ಪತ್ನಿಯ ಹತ್ಯೆಗೈದಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ನಡೆದಿದೆ.

    CRIME 2

    ರೇಣುಕಾ (28) ಕೊಲೆಯಾದ ಮಹಿಳೆಯಾಗಿದ್ದು, ಆರೋಪಿಯನ್ನು ಜಟ್ಟೆಪ್ಪ ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕೊಲೆ ಮಾಡಿ ಆರೋಪಿ ಜಟ್ಟೆಪ್ಪ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಕೊಲೆಯಾದ ರೇಣುಕಾ ಅದೇ ಗ್ರಾಮದ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಅಂತ ಆರೋಪಿ ಶಂಕಿಸಿದ್ದಾನೆ. ಇದನ್ನೂ ಓದಿ: ಶಿವಮೊಗ್ಗ ಕಿಡಿಗೇಡಿಗಳಿಗೆ ಗುಂಡೇಟು ಬರೀ ಸ್ಯಾಂಪಲ್: ಕೆ.ಎಸ್ ಈಶ್ವರಪ್ಪ

    ಇದೇ ವಿಚಾರಕ್ಕೆ ಆಗಾಗ ಪತಿ-ಪತ್ನಿ ನಡುವೆ ಜಗಳವಾಗುತ್ತಿತ್ತು. ಇಂದು ಬೆಳಗ್ಗೆ ಸಹ ಇದೇ ವಿಚಾರಕ್ಕೆ ಗಲಾಟೆಯಾಗಿದೆ. ಗಲಾಟೆ ವೇಳೆ ಮನೆಯಲ್ಲಿದ್ದ ಕೊಡಲಿಯಿಂದ ರೇಣುಕಾಳನ್ನು ಆರೋಪಿ ಹತ್ಯೆ ಮಾಡಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಬಗ್ಗೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮೊಬೈಲ್ ವಾಪಸ್ ಕೇಳಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

    Live Tv
    [brid partner=56869869 player=32851 video=960834 autoplay=true]

  • ಪ್ರೀತಿಸಿ ಮದುವೆಯಾದವಳ ಕಿರಿಕಿರಿ – ಫಿಲ್ಮಿ ಸ್ಟೈಲ್ ಕೊಲೆ, ಪತಿ ಅಂದರ್

    ಪ್ರೀತಿಸಿ ಮದುವೆಯಾದವಳ ಕಿರಿಕಿರಿ – ಫಿಲ್ಮಿ ಸ್ಟೈಲ್ ಕೊಲೆ, ಪತಿ ಅಂದರ್

    ಬೆಂಗಳೂರು: ಪ್ರೀತಿಸಿ ಮದುವೆಯಾದವಳ ಟಾರ್ಚರ್ ತಡೆಯೋಕಾಗದೇ ಫಿಲ್ಮಿ ಸ್ಟೈಲ್ ಪ್ಲ್ಯಾನ್ ಮಾಡಿ ಯಾರಿಗೂ ಗೊತ್ತಾಗದಂತೆ ಆಕೆಯ ಕೊಲೆ ಮಾಡಿ ಬಳಿಕ ತಾನೇ ಪೊಲೀಸ್ ಠಾಣೆಗೆ ದೂರು ನೀಡಿದ ಪತಿಯ ಕೃತ್ಯ ತನಿಖೆಯಿಂದ ಬಯಲಾಗಿದೆ

    ಹೌದು, ಮೊದಲೇ ಪ್ಲ್ಯಾನ್ ಹಾಕಿ, ಪತ್ನಿಯ ಕೊಲೆ ಮಾಡಿ ಬಳಿಕ ಮಡಿವಾಳ ಪೊಲೀಸರಿಗೆ ದೂರನ್ನೂ ಕೊಟ್ಟಿದ್ದಾನೆ. ಆದರೆ ಅನುಮಾನಗೊಂಡ ಪೊಲೀಸರು ಆತನನ್ನೇ ವಿಚಾರಣೆ ನಡೆಸಿದಾಗ ಖತರ್ನಾಕ್ ಪ್ಲ್ಯಾನ್ ಬಗ್ಗೆ ಬಾಯಿ ಬಿಟ್ಟಿದ್ದಾನೆ.

    ಘಟನೆಯೇನು?
    ಬೆಂಗಳೂರಿನ ಮಡಿವಾಳದ ಪೃಥ್ವಿರಾಜ್, ಜ್ಯೋತಿಯನ್ನು 8 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಮದುವೆಯ ಬಳಿಕ ನಿರಂತರವಾಗಿ ಜಗಳವಾಡುತ್ತಿದ್ದರಿಂದ ಪೃಥ್ವಿರಾಜ್ ಟಾರ್ಚರ್ ತಡೆಯಲಾಗದೇ ಪತ್ನಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ.

    ಮೊದಲೇ ಯೋಜಿಸಿದ ಪ್ಲ್ಯಾನ್‌ನಂತೆ ಪೃಥ್ವಿರಾಜ್ ತನ್ನ ಹಾಗೂ ಪತ್ನಿಯ ಮೊಬೈಲ್ ಫೋನ್‌ಗಳನ್ನು ಮನೆಯಲ್ಲಿಯೇ ಇರಿಸಿ ಟ್ರಿಪ್‌ಗೆ ಕರೆದುಕೊಂಡು ಹೋಗಿದ್ದ. ಆಗಸ್ಟ್ 2 ರಂದು ಹೆಂಡತಿಯನ್ನು ಉಡುಪಿಯ ಮಲ್ಪೆ ಬೀಚ್‌ಗೆ ಕರೆದುಕೊಂಡು ಹೋಗಿ, ಅಲ್ಲಿ ಸಮುದ್ರದಲ್ಲಿ ಮುಳುಗಿಸಿ ಆಕೆಯ ಕೊಲೆ ಮಾಡುವುದು ಪೃಥ್ವಿರಾಜ್‌ನ ಪ್ಲ್ಯಾನ್ ಆಗಿತ್ತು. ಬಳಿಕ ಅದನ್ನು ನ್ಯಾಚುರಲ್ ಡೆತ್ ಎಂದು ಬಣ್ಣಿಸುವ ಯೋಜನೆ ಮಾಡಿದ್ದ. ಆದರೆ ಸಮುದ್ರದ ಆಳಕ್ಕೆ ಇಳಿಯದಂತೆ ಬೋರ್ಡ್ ಹಾಕಿದ್ದರಿಂದ ಆತನ ಪ್ಲ್ಯಾನ್ ಫ್ಲಾಪ್ ಆಗಿತ್ತು. ಇದನ್ನೂ ಓದಿ: ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ NSUI ಕಾರ್ಯಕರ್ತರ ಮಧ್ಯೆ ಕಿತ್ತಾಟ

    CRIME

    ಆದರೂ ಪಟ್ಟು ಬಿಡದ ಪೃಥ್ವಿರಾಜ್, ಇನ್ನೊಂದು ಪ್ಲ್ಯಾನ್ ಮಾಡಿ, ಜ್ಯೋತಿಯನ್ನು ಸಕಲೇಶಪುರದ ಗುಂಡ್ಯ ಬಳಿ ಕರೆದುಕೊಂಡು ಹೋಗಿದ್ದ. ಅಲ್ಲಿ ಆಕೆಯ ವೇಲ್‌ನಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದ. ಬಳಿಕ ಆಕೆಯ ಶವವನ್ನು ಅಲ್ಲಿಯೇ ಪೊದೆಯೊಂದರಲ್ಲಿ ಎಸೆದಿದ್ದ.

    ಪ್ಲ್ಯಾನ್‌ನಂತೆ ಎಲ್ಲಾ ಮುಗಿಸಿಕೊಂಡು ಬೆಂಗಳೂರಿಗೆ ಬಂದ ಪೃಥ್ವಿರಾಜ್, ಮಡಿವಾಳ ಪೊಲೀಸ್ ಠಾಣೆಯಲ್ಲಿ ಪತ್ನಿ ಮಿಸ್ಸಿಂಗ್ ಎಂದು ದೂರು ನೀಡಿದ್ದಾನೆ. ಕಂಪ್ಲೆಂಟ್ ಪಡೆದ ಪೊಲೀಸರು ತನಿಖೆಗೆ ಇಳಿದಿದ್ದರು. ಈ ವೇಳೆ ಅವರಿಬ್ಬರ ಫೋನ್‌ಗಳು ಮನೆಯಲ್ಲಿಯೇ ಇದ್ದ ಬಗ್ಗೆ ತಿಳಿದು ಅನುಮಾನಗೊಂಡ ಪೊಲೀಸರು ಸಿಸಿಟಿವಿ ಹಾಗೂ ಸಿಡಿಆರ್ ಆಧರಿಸಿ ಪೃಥ್ವಿರಾಜ್‌ನನ್ನು ಬಂಧಿಸುತ್ತಾರೆ. ಈ ವೇಳೆ ಪೃಥ್ವಿರಾಜ್‌ನ ಬಾಯಿ ಬಿಡಿಸಿದ ಪೊಲೀಸರು ಕೊಲೆ ಹಿಂದಿನ ರಹಸ್ಯವನ್ನೆಲ್ಲಾ ರಿವೀಲ್ ಮಾಡಿದ್ದಾನೆ. ಇದನ್ನೂ ಓದಿ: ದಯಾಮರಣಕ್ಕೆ ಅನುಮತಿ ಕೋರಿದ ಮಂಗಳಮುಖಿ

    POLICE JEEP

    ನಾನು ಹೆಂಡತಿಯಿಂದ ಬಹಳ ಕಿರಿಕಿರಿ ಅನುಭವಿಸಿದ್ದೇನೆ. ಆಕೆ ಇನ್ನೊಬ್ಬ ಗೆಳೆಯನನ್ನು ಹೊಂದಿದ್ದಳು. 2 ಬಾರಿ ಯುಪಿಎಸ್‌ಸಿ ಎಕ್ಸಾಂ ಬರೆದಿದ್ದ ಆಕೆ ಟ್ರೈನಿಂಗ್‌ಗಾಗಿ ದೆಹಲಿಗೆ ಹೋಗಿದ್ದಳು. ಅಲ್ಲಿ ಅವಳು ಒಬ್ಬ ಯುವಕನೊಂದಿಗೆ ಸಖ್ಯ ಬೆಳೆಸಿದ್ದಳು. ಹೀಗಾಗಿ ನಾನು ಆಕೆಯ ಕೊಲೆಗೆ ಪ್ಲ್ಯಾನ್ ಮಾಡಿದ್ದೆ ಎಂದು ಬಾಯ್ಬಿಟ್ಟಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಊಟ ನೀಡೋ ವಿಚಾರಕ್ಕೆ ಜಗಳ – ಬಾಮೈದನಿಂದಲೇ ಯೋಧನ ಕೊಲೆ

    ಊಟ ನೀಡೋ ವಿಚಾರಕ್ಕೆ ಜಗಳ – ಬಾಮೈದನಿಂದಲೇ ಯೋಧನ ಕೊಲೆ

    ಬಾಗಲಕೋಟೆ: ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದ ಬಾವನನ್ನು ಬಾಮೈದನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದೆ.

    POLICE JEEP

    ಕರಿಸಿದ್ದಪ್ಪ ಕಳಸದ(25) ಮೃತ ಭಾರತೀಯ ಸೇನೆ ಯೋಧರಾಗಿದ್ದು, ಆರೋಪಿಯನ್ನು ಸಿದ್ದನಗೌಡ ದೂಳಪ್ಪ ಎಂದು ಗುರುತಿಸಲಾಗಿದೆ. ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕರಿಸಿದ್ದಪ್ಪ ಕಳಸದ ಅವರು ರಜೆ ಹಿನ್ನೆಲೆ ನಾಲ್ಕು ದಿನಗಳ ಹಿಂದೆಯಷ್ಟೇ ಮನೆಗೆ ಬಂದಿದ್ದರು. ಇದನ್ನೂ ಓದಿ: ಸಿಲಿಕಾನ್ ಸಿಟಿಗೆ ಮತ್ತಷ್ಟು ಎಲೆಕ್ಟ್ರಿಕ್ ಬಸ್‍ಗಳು – ಆಗಸ್ಟ್ 15ಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ

    ಎರಡು ವರ್ಷಗಳ ಹಿಂದೆ ಕರಿಸಿದ್ದಪ್ಪ ಕಳಸದ, ವಿದ್ಯಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಗುರುವಾರ ರಾತ್ರಿ ಊಟ ನೀಡುವ ವೇಳೆ ದಂಪತಿ ನಡುವೆ ಜಗಳವಾಗಿದೆ. ಇದರಿಂದಾಗಿ ವಿದ್ಯಾ ತಮ್ಮ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಸಿದ್ದನಗೌಡ ದೂಳಪ್ಪ ತನ್ನ ಸಹೋದರಿಗೆ ಕಿರುಕುಳ ಕೊಡುತ್ತಿಯಾ ಎಂದು ಚಾಕು ಇರಿದು ಕರಿಸಿದ್ದಪ್ಪ ಕಳಸದರನ್ನು ಕೊಲೆ ಮಾಡಿದ್ದಾನೆ. ಇದೀಗ ಸ್ಥಳಕ್ಕೆ ಕೆರೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗುಂಪು ಘರ್ಷಣೆಗೆ ಇಬ್ಬರು ಬಲಿ – ಕೊಪ್ಪಳದ ಹುಲಿಹೈದರ್ ಗ್ರಾಮದಲ್ಲಿ ನಿಷೇಧಾಜ್ಞೆ

    Live Tv
    [brid partner=56869869 player=32851 video=960834 autoplay=true]

  • ಲಿಪ್‍ಸ್ಟಿಕ್‍ನಿಂದ ವಾಲ್ ಮೇಲೆ ಡೆತ್ ನೋಟ್ – ಗೃಹಿಣಿ ಆತ್ಮಹತ್ಯೆಗೆ ಕಿರುಕುಳವೇ ಕಾರಣವಾಯ್ತಾ?

    ಲಿಪ್‍ಸ್ಟಿಕ್‍ನಿಂದ ವಾಲ್ ಮೇಲೆ ಡೆತ್ ನೋಟ್ – ಗೃಹಿಣಿ ಆತ್ಮಹತ್ಯೆಗೆ ಕಿರುಕುಳವೇ ಕಾರಣವಾಯ್ತಾ?

    ರಾಂಚಿ: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಂಚಿಯಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಚಂದಾ ದೇವಿ ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ಕಾರಣವೆನೆಂಬುವುದನ್ನು ಲಿಪ್‍ಸ್ಟಿಕ್‍ನಿಂದ ಮನೆಯ ವಾಲ್ ಮೇಲೆ ಬರೆದಿದ್ದಾರೆ. 2019ರಲ್ಲಿ ಚಂದಾ ದೇವಿ ಅವರು, ದಿಲೀಪ್ ಚೌಹಾಣ್ ಅವರನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿ ದೂರವಾಗಿದ್ದರು. ನಿತ್ಯವೂ ಇಬ್ಬರು ಜಗಳವಾಡುತ್ತಿದ್ದರು. ತನ್ನ ಸಾವಿಗೆ ಅತ್ತೆಯಂದಿರು ಮತ್ತು ಪತಿ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಆತ್ಮಹತ್ಯೆ ಬರಹದಲ್ಲಿ ಗೃಹಿಣಿ ಬಹಿರಂಗಪಡಿಸಿದ್ದಾರೆ.

    ಮಂಗಳವಾರ ರಾತ್ರಿ ದಿಲೀಪ್ ಮನೆಯಲ್ಲಿ ಇಲ್ಲದ ವೇಳೆ ಚಂದಾ ರಾತ್ರಿ ರೂಮ್ ಬೀಗ ಹಾಕಿಕೊಂಡು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಈ ವೇಳೆ ಚಂದಾ ದೇವಿಯ ಇಬ್ಬರು ಹೆಣ್ಣುಮಕ್ಕಳು ಅಳುತ್ತಿರುವುದನ್ನು ಗಮನಿಸಿದ ಅತ್ತೆ ಕಿಟಕಿಯ ಕೋಣೆಯನ್ನು ಇಣುಕಿ ನೋಡಿದಾಗ ಸೀಲಿಂಗ್‍ನಲ್ಲಿ ಚಂದಾ ದೇವಿ ಶವ ನೇತಾಡುತ್ತಿರುವ ನೋಡಿದ್ದಾರೆ. ಇದನ್ನೂ ಓದಿ: ಪತ್ನಿ ಮೇಲೆ ಮೂತ್ರವಿಸರ್ಜನೆ ಮಾಡಿ ವಿಕೃತಿ ಮೆರೆದ ಪತಿ ವಿರುದ್ಧ ದೂರು

    ವರದಕ್ಷಿಣೆಗಾಗಿ ಚಂದಾಗೆ ಕಿರುಕುಳ ನೀಡುತ್ತಿದ್ದರು ಎಂದು ದಿಲೀಪ್ ಕುಟುಂಬ ಸದಸ್ಯರ ವಿರುದ್ಧ ಆಕೆಯ ಸಂಬಂಧಿಕರು ಪ್ರಕರಣ ದಾಖಲಿಸಿದ್ದಾರೆ. ಸಾಯುವ ಮುನ್ನ ಚಂದಾ ತನ್ನ ದುಪಟ್ಟಾ ಸಹಾಯದಿಂದ ತನ್ನ ಪುಟ್ಟ ಮಕ್ಕಳನ್ನು ಕಿಟಕಿಗೆ ಕಟ್ಟಿ ಹಾಕಿದ್ದಳು. ಮಕ್ಕಳು ಅಳುವ ಶಬ್ಧವನ್ನು ಕೇಳಿ ನಂತರ ನೆರೆಹೊರೆಯವರು ಕೋಣೆಗೆ ನುಗ್ಗಿ ಬಾಲಕಿಯರನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹತ್ಯೆಗೈದ ಆರೋಪಿಗಳ ಬಂಧನ- ಪೊಲೀಸ್ ಇಲಾಖೆಗೆ ಕುಟುಂಬಸ್ಥರು ಧನ್ಯವಾದ

    Live Tv
    [brid partner=56869869 player=32851 video=960834 autoplay=true]

  • ಅಕ್ರಮ ಸಂಬಂಧ ಪ್ರಶ್ನಿಸಿದ್ದ ಪತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತ್ನಿ

    ಅಕ್ರಮ ಸಂಬಂಧ ಪ್ರಶ್ನಿಸಿದ್ದ ಪತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತ್ನಿ

    ಲಕ್ನೋ: ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಪತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಆಗ್ರಾ ವಿಭಾಗದ ಮಥುರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ರೇಖಾ ತನ್ನ ಪತಿ ಚಮನ್ ಪ್ರಕಾಶ್‍ನನ್ನು ಹತ್ಯೆಗೈದಿದ್ದಾಳೆ.

    ರೇಖಾ ವಿವಾಹೇತರ ಸಂಬಂಧವನ್ನು ಹೊಂದಿದ್ದಳು. ಈ ಬಗ್ಗೆ ಆಕೆಯ ಪತಿ ಚಮನ್ ಪ್ರಕಾಶ್ ಅನುಮಾನಗೊಂಡು ಪ್ರಶ್ನಿಸಿದ್ದಾನೆ. ಇದರಿಂದ ಕೋಪಗೊಂಡ ರೇಖಾ, ಚಮನ್ ಪ್ರಕಾಶ್ ಗಾಢ ನಿದ್ದೆಯಲ್ಲಿದ್ದಾಗ ಆತನ ಮೇಲೆ ಪೆಟ್ರೋಲ್ ಸುರಿದ್ದು ಬೆಂಕಿಯನ್ನು ಹಚ್ಚಿದ್ದಾಳೆ. ಇದನ್ನೂ ಓದಿ: ಮಸೀದಿ, ಮದರಸಾದಲ್ಲಿ ಸಂವಿಧಾನ ಓದುವ ಅಭಿಯಾನ ಆರಂಭ!

    POLICE JEEP

    ಘಟನೆ ವೇಳೆ ಶೇ. 80ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಚಮನ್ ಪ್ರಕಾಶ್‍ನನ್ನು ನೆರೆಹೊರೆಯವರು ದೆಹಲಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧಿಸಿ ಚಮನ್ ಪ್ರಕಾಶ್‍ನ ಕುಟುಂಬಸ್ಥರು ಪತ್ನಿ ರೇಖಾ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ದೇವಸ್ಥಾನದ ಹಣ ಕದಿಯುವುದಕ್ಕೂ ಮುನ್ನ ದೇವಿ ವಿಗ್ರಹಕ್ಕೆ ನಮಸ್ಕರಿಸಿದ ಅರೆನಗ್ನ ಕಳ್ಳ

    Live Tv
    [brid partner=56869869 player=32851 video=960834 autoplay=true]

  • ಮೈಸೂರು ಉದ್ಯಮಿಯ ಕೊಲೆ ಕೇಸ್‍ಗೆ ಟ್ವಿಸ್ಟ್ – ತಂದೆಯನ್ನೇ ಬರ್ಬರ ಹತೈಗೈದ 16ರ ಮಗ!

    ಮೈಸೂರು ಉದ್ಯಮಿಯ ಕೊಲೆ ಕೇಸ್‍ಗೆ ಟ್ವಿಸ್ಟ್ – ತಂದೆಯನ್ನೇ ಬರ್ಬರ ಹತೈಗೈದ 16ರ ಮಗ!

    ಮೈಸೂರು: ಮನೆಯ ಒಳಗಿನ ಜಗಳ ಹದಿಹರೆಯದವರ ಮೇಲೆ ಎಂಥ ದುಷ್ಪರಿಣಾಮ ಬೀರಿ ಎಂಥಾ ಕೆಲಸಕ್ಕೆ ಕೈ ಹಾಕಿಸುತ್ತೆ ಎಂಬುದಕ್ಕೆ ಮೈಸೂರಿನ ಪ್ರಕರಣ ಸ್ಪಷ್ಟ ಸಾಕ್ಷಿ. ಜೀವನ ಏನೂ ಅಂತಾ ಅರಿಯಬೇಕಾದ ವಯಸ್ಸಿನಲ್ಲಿ ಈ ಹುಡುಗ ಜೈಲು ಪಾಲಾಗಿದ್ದಾನೆ. ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದ ಸಂಪತ್, ಕ್ಷುಲ್ಲಕ ವಿಚಾರಗಳಿಗೆ ಜಗಳ ಮಾಡಿ ಮಗನಿಂದನೇ ಕೊಲೆಯಾಗಿರೋದು ದುರಂತವಾಗಿದೆ.

    ಸೋಮವಾರ ಮೈಸೂರಿನ ಬೃಂದಾವನ ಬಡಾವಣೆಯ ನಿವಾಸಿ ರಿಯಲ್ ಎಸ್ಟೇಟ್ ಹಾಗೂ ಅಗರಬತ್ತಿ ವ್ಯಾಪಾರಿ ಸಂಪತ್ ಕುಮಾರ್‍ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. 16 ವರ್ಷದ ಮಗನ ಮುಂದೆಯೇ ತಂದೆಯನ್ನು ಕೊಲೆ ಮಾಡಲಾಗಿದೆ ಎಂಬ ಸುದ್ದಿ ಹರಡಿತ್ತು. ಇದನ್ನೂ ಓದಿ: 16 ವರ್ಷದ ಮಗನ ಮುಂದೆಯೇ ತಂದೆಯನ್ನು ಹತ್ಯೆ ಮಾಡಿದ ದುಷ್ಕರ್ಮಿ

    ಕೊಲೆಯಾದ ಸಂಪತ್ ಅವರ 16 ವರ್ಷದ ಮಗ, ತನ್ನ ಮುಂದೆಯೇ ರಾಡ್‍ಗಳಿಂದ ತನ್ನ ತಂದೆಯನ್ನು ಅಪರಿಚಿತರು ಹತ್ಯೆ ಮಾಡಿ ಓಡಿ ಹೋದರು ಎಂದು ಪೊಲೀಸರಿಗೆ ಹೇಳಿದ್ದ. ಈ ಕೊಲೆಗೆ ರಿಯಲ್ ಎಸ್ಟೇಟ್ ಉದ್ಯಮದ ವೈಷಮ್ಯ ಕಾರಣ ಇರಬಹುದು ಎಂದು ಮೇಲ್ನೋಟಕ್ಕೆ ಅನ್ನಿಸಿತ್ತು. ಆದರೆ ಕೊಲೆಯಾದ ವ್ಯಕ್ತಿಯ ಮಗ ಹೇಳಿಕೆಗಳಲ್ಲೂ ಅನುಮಾನಗಳು ಮೂಡಿದ್ದವು. ಹೀಗಾಗಿ ಪೊಲೀಸರು ಕೊಲೆಯಾದ ವ್ಯಕ್ತಿಯ ಮಗನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

    ರೋಚಕ ತಿರುವು
    ವಿಚಾರಣೆ ವೇಳೆ ಹದಿಹರೆಯದ ಮಗನೇ ತನ್ನ ತಂದೆಯನ್ನು ಬರ್ಬರವಾಗಿ ಕೊಂದ ಸತ್ಯ ಹೊರ ಬಿದ್ದಿದೆ. ಸಂಪತ್ ಕುಟುಂಬದಲ್ಲಿ ಬಹಳ ವೈಮನಸ್ಸು ಇತ್ತು. ಸಂಪತ್ ಪ್ರತಿ ನಿತ್ಯವೂ ತನ್ನ ಪತ್ನಿ – ಮಗನ ಜೊತೆ ಜಗಳವಾಡ್ತಿದ್ದ. ಇದರಿಂದ ಬೇಸತ್ತ ಮಗ, ತನ್ನ ತಾಯಿ ಮನೆಯಲ್ಲಿ ಇಲ್ಲದ ವೇಳೆ ಕಬ್ಬಿಣದ ರಾಡ್‍ನಿಂದ ತಂದೆಯನ್ನು ಕೊಲೆ ಮಾಡಿದ್ದಾನೆ.

    ಕೊಲೆ ಮಾಡಿದ ನಂತರ ಈ ಕೊಲೆಯನ್ನು ಅಪರಿಚಿತರು ಮಾಡಿ ಹೋದರು ಎಂದು ಬಿಂಬಿಸುವ ನಾಟಕವಾಡಿದ್ದಾನೆ. ಮನೆಯಿಂದ ಓಡಿ ಹೊರಗಡೆ ಬಂದು ಅರಚಿಕೊಂಡು ಯಾರೋ ಕೊಲೆ ಮಾಡಿ ಓಡಿ ಹೋದರು ಎಂದು ಸನ್ನಿವೇಶ ಸೃಷ್ಟಿಸಿದ್ದಾನೆ. ತನ್ನ ತಾಯಿಗೂ ಇದೇ ಕಥೆ ಹೇಳಿದ ಮಗ, ಅದರ ಆಧಾರದ ಮೇಲೆ ಕೇಸ್ ಕೂಡ ಕೊಡಿಸಿದ್ದ. ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ: ಈಶ್ವರ ಖಂಡ್ರೆ ವಾಗ್ದಾಳಿ

    ಪೆÇಲೀಸರಿಗೆ ಕೊಲೆ ನಡೆದ ವೇಳೆ, ಅಲ್ಲಿನ ಸನ್ನಿವೇಶ, ಸಿಸಿಟಿವಿ ದೃಶ್ಯಗಳು ಎಲ್ಲವನ್ನು ಗಮನಿಸಿದ ಮೇಲೆ ಯಾರು ಮನೆಗೆ ಬರದೆ ಇರೋದು ಸ್ಪಷ್ಟವಾಗಿದೆ. ಆಗ, ಮಗನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾಗ ಮಗ ತಾನೇ ತನ್ನ ತಂದೆಯನ್ನು ಕೊಂದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • 16 ವರ್ಷದ ಮಗನ ಮುಂದೆಯೇ ತಂದೆಯನ್ನು ಹತ್ಯೆ ಮಾಡಿದ ದುಷ್ಕರ್ಮಿ

    16 ವರ್ಷದ ಮಗನ ಮುಂದೆಯೇ ತಂದೆಯನ್ನು ಹತ್ಯೆ ಮಾಡಿದ ದುಷ್ಕರ್ಮಿ

    ಮೈಸೂರು: 16 ವರ್ಷದ ಮಗನ ಮುಂದೆಯೇ ತಂದೆಯನ್ನು ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಸಂಪತ್ ಕುಮಾರ್(60) ಕೊಲೆಯಾದ ದುರ್ದೈವಿ. ಸಂಪತ್ ಕುಮಾರ್ ರಿಯಲ್ ಎಸ್ಟೇಟ್ ಹಾಗೂ ಅಗರಬತ್ತಿ ವ್ಯಾಪಾರಿಯಾಗಿದ್ದರು. ಇವರ ಪತ್ನಿ ಗಾಯತ್ರಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಗಾಯತ್ರಿ ಅವರು ಮನೆಯಲ್ಲಿ ಇಲ್ಲದಿದ್ದಾಗ ಈ ಘಟನೆ ನಡೆದಿದೆ. ಇದನ್ನೂ ಓದಿ: ಶಿಕ್ಷಕಿ ಕೊಲೆ ಪ್ರಕರಣ- ನಗರಸಭೆ ಕೌನ್ಸಿಲರ್ ಸೇರಿ ನಾಲ್ವರ ಬಂಧನ

    ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಸಂಪತ್ ಅವರನ್ನು ದುಷ್ಕರ್ಮಿ ರಾಡ್‍ನಿಂದ ಹೊಡೆದು ಅವರ 16 ವರ್ಷದ ಮಗನ ಮುಂದೆಯೇ ಹತ್ಯೆ ಮಾಡಿದ್ದಾನೆ. ಮನೆಗೆ ಬಂದು ನೋಡಿದ ಮೇಲೆ ಗಾಯತ್ರಿ ಅವರಿಗೆ ವಿಷಯ ತಿಳಿದಿದ್ದು, ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

    ಪ್ರಸ್ತುತ ಪ್ರಕರಣ ವಿ.ವಿ.ಪುರಂನಲ್ಲಿ ದಾಖಲಾಗಿದೆ. ದುಷ್ಕರ್ಮಿ ಯಾರು, ಯಾವ ಉದ್ದೇಶಕ್ಕೆ ಈ ಕೆಲಸ ಮಾಡಿದ್ದಾನೆ ಎಂಬುದು ತಿಳಿದುಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಕೆಂಪು, ಬಿಳಿ, ಹಸಿರು ಎಂದು ಬಾವುಟದ ಬಣ್ಣ ತಪ್ಪಾಗಿ ಹೇಳಿದ ಸಿದ್ದರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • 10ರ ಮಗಳು, ತಾಯಿ ಪ್ರತ್ಯೇಕ ಕೋಣೆಯಲ್ಲಿ ನೇಣಿಗೆ ಶರಣು – ಪ್ರೀತಿಸಿ ಮದ್ವೆಯಾಗಿದ್ದ ವೈದ್ಯ ದಂಪತಿ

    10ರ ಮಗಳು, ತಾಯಿ ಪ್ರತ್ಯೇಕ ಕೋಣೆಯಲ್ಲಿ ನೇಣಿಗೆ ಶರಣು – ಪ್ರೀತಿಸಿ ಮದ್ವೆಯಾಗಿದ್ದ ವೈದ್ಯ ದಂಪತಿ

    ಬೆಂಗಳೂರು: ಕಳೆದ ವಾರ ನಗರದ ಒಂದು ಕಡೆ ಮಗುವನ್ನು ಮಹಡಿಯಿಂದ ತಳ್ಳಿ ತಾಯಿಯೊಬ್ಬಳು ಕೊಲೆ ಮಾಡಿದ್ದಳು. ಈಗ ಬನಶಂಕರಿಯಲ್ಲಿ ತಾಯಿಯೊಬ್ಬಳು ಮಗುವಿಗೆ ನೇಣು ಹಾಕಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸುದ್ದಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

    ಸೈಮಾ ನಾರಾಯಣ್ ಆತ್ಮಹತ್ಯೆ ಮಾಡಿಕೊಂಡ ದಂತ ವೈದ್ಯೆ. ತನ್ನ 10 ವರ್ಷದ ಮಗಳು ಆರಾಧನಾಗೆ ಮನೆಯಲ್ಲೇ ನೇಣು ಹಾಕಿ ಹತ್ಯೆ ಮಾಡಿದ ಬಳಿಕ ಸೈಮಾ ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಸ್ತುತ ಪೊಲೀಸರು ಸೈಮಾ ಪತಿ ನಾರಾಯಣ್ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣವಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗ್ರಾಮಕ್ಕೆ ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸಿ – ಡಿಸಿಗೆ ಮನವಿ ಮಾಡಿದ ಪುಟ್ಟ ಬಾಲಕಿ 

    ವಿರಾಜಪೇಟೆ ಮೂಲದ ಪತ್ನಿ ಸೈಮಾ ಮುತ್ತಪ್ಪ, ಕೋಲಾರ ಮೂಲದ ಪತಿ ನಾರಾಯಣ್ ಕಳೆದ 10 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿ ಡೆಂಟಲ್ ಡಾಕ್ಟರ್ ಆಗಿದ್ದರು. ನಾರಾಯಣ್ ಮತ್ತು ಸೈಮಾ ಇಬ್ಬರು ಒಟ್ಟಿಗೆ ಆಸ್ಪತ್ರೆಯನ್ನು ನಡೆಸುತ್ತಿದ್ದರು. ಎರಡು ದಿನಗಳ ಹಿಂದೆ ನಾರಾಯಣ್ ಮನೆಯಲ್ಲಿ ಇರಲಿಲ್ಲ. ಈ ವೇಳೆ ಸೈಮಾ ಮತ್ತು ಮಗಳು ಮನೆಯಲ್ಲಿನ ಪ್ರತ್ಯೇಕ ಕೋಣೆಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಎರಡು ದಿನಗಳ ಬಳಿಕ ನಾರಾಯಣ್ ಮನೆಗೆ ಬಂದು ನೋಡಿದ ಮೇಲೆ ಘಟನೆ ಬೆಳಕಿಗೆ ಬಂದಿದೆ. ಈ ದೃಶ್ಯವನ್ನು ನೋಡಿ ತಾಯಿಯೇ ಮಗಳನ್ನು ನೇಣಿಗೆ ಹಾಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇಬ್ಬರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ತನಿಖೆಯಾಗಬೇಕಿದೆ. ಇದನ್ನೂ ಓದಿ: ಮಗಳನ್ನು ನೇಣಿಗೆ ಹಾಕಿ ಆತ್ಮಹತ್ಯೆಗೆ ಶರಣಾದ ದಂತ ವೈದ್ಯೆ

    ವಿಷಯ ತಿಳಿದ ತಕ್ಷಣ ಆಸ್ಟ್ರೇಲಿಯಾದಲ್ಲಿದ್ದ ಸೈಮಾ ಸಹೋದರ ಬೆಂಗಳೂರಿಗೆ ಬಂದಿದ್ದಾರೆ. ಇಂದು ಪೊಲೀಸರಿಗೆ ದೂರು ನೀಡಿದ್ದು, ಇವರ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]