Tag: ಪತಿ

  • 50 ಲಕ್ಷ ರೂ, 1 ಕೆಜಿ ಚಿನ್ನ ಕೊಟ್ಟರೂ ಹಣ ಬೇಕೆಂದ – ಹೈದರಾಬಾದ್ ವೈದ್ಯೆಗೆ ವಂಚನೆ

    50 ಲಕ್ಷ ರೂ, 1 ಕೆಜಿ ಚಿನ್ನ ಕೊಟ್ಟರೂ ಹಣ ಬೇಕೆಂದ – ಹೈದರಾಬಾದ್ ವೈದ್ಯೆಗೆ ವಂಚನೆ

    ಬಳ್ಳಾರಿ: ಜಿಲ್ಲೆಯಲ್ಲಿ ಮತ್ತೊಂದು ಹೈಪ್ರೊಫೈಲ್ ವರದಕ್ಷಿಣೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಹೈದ್ರಾಬಾದ್ ಮೂಲದ ವೈದ್ಯೆಯನ್ನು ಮದುವೆಯಾಗಿ ಪ್ರತಿನಿತ್ಯ ವರದಕ್ಷಿಣೆ ಕಿರುಕುಳ ನೋಡುತ್ತಿದ್ದ ವ್ಯಕ್ತಿ ಇದೀಗ ಮತ್ತೊಂದು ವಿವಾಹವಾಗಿ ಮಹಿಳೆಗೆ ವಂಚಿಸಿದ್ದಾನೆ.

    ಬಳ್ಳಾರಿ ಮೂಲದ ರಘುರಾಮ ರೆಡ್ಡಿ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು ಹೈದರಾಬಾದ್ ಮೂಲದ ಡಾಕ್ಟರ್ ಮೌನಿಕಾರಿಗೆ ಅವರನ್ನು 2019ರಲ್ಲಿ ಮದುವೆಯಾಗಿದ್ದನು. ಮದುವೆ ವೇಳೆ ಐವತ್ತು ಲಕ್ಷ ರೂಪಾಯಿ ವರದಕ್ಷಿಣೆ, ಒಂದು ಕೆ.ಜಿ. ಬಂಗಾರವನ್ನು ನೀಡಲಾಗಿತ್ತು. ಆದರೆ ಎರಡು ತಿಂಗಳು ಕೂಡ ಸಂಸಾರ ಮಾಡದ ರಘುರಾಮ ರೆಡ್ಡಿ ಹಣಕ್ಕಾಗಿ ಹೆಂಡತಿಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದನು. ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಸಾಹಿತಿ ಕಾಹು ಇನ್ನಿಲ್ಲ

    ಆಸ್ಟ್ರೆಲಿಯಾದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ರಘುರಾಮ ರೆಡ್ಡಿಗೆ ನಿಜವಾಗಿಯೂ ಯಾವುದೇ ಕೆಲಸವಿಲ್ಲರಲಿಲ್ಲ. ಹೀಗಾಗಿ ನಿತ್ಯ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದನು. ಈ ಹಿನ್ನಲೆ ಮನೆಯಿಂದ ವೈದ್ಯೆ ಹೊರ ಬಂದಿದ್ದರು. ಆದರೆ ಇದೀಗ ಪತ್ನಿಯಿಂದ ವಿಚ್ಛೇದನ ಪಡೆಯದೇ ಮತ್ತೊಂದು ಮದುವೆಯಾಗಿದ್ದಾನೆ. ಈ ಬಗ್ಗೆ ಪ್ರಶ್ನಿಸಲು ಬಂದ ಮೊದಲ ಹೆಂಡತಿ, ಮತ್ತವರ ಮನೆಯವರ ಮೇಲೆ ಮಾರಾಕಾಸ್ತ್ರಗಳಿಂದ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾನೆ.

    ಈ ಬಗ್ಗೆ ವೈದ್ಯೆ ನೀಡಿದ್ದ ದೂರಿನ ಮೇರೆಗೆ ಗಂಡ ರಘುರಾಮ ರೆಡ್ಡಿ, ತಂದೆ ನಾಗೀರೆಡ್ಡಿ, ಸಹೋದರ ಹರೀಶ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಸೇರಿದಂತೆ ಕುಟುಂಬ ಏಳು ಜನರ ಮೇಲೆ ದೂರು ದಾಖಲಾಗಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಅಪಘಾತ – ಇನ್ಸ್‌ಪೆಕ್ಟರ್ ದಂಪತಿಯಿಂದ ಕಿರಿಕ್

    Live Tv
    [brid partner=56869869 player=32851 video=960834 autoplay=true]

  • ಆಮ್ ಆದ್ಮಿ ಪಕ್ಷದ ಶಾಸಕಿ ಮೇಲೆ ಎಲ್ಲರೆದುರು ಹಲ್ಲೆ ನಡೆಸಿದ ಪತಿ

    ಆಮ್ ಆದ್ಮಿ ಪಕ್ಷದ ಶಾಸಕಿ ಮೇಲೆ ಎಲ್ಲರೆದುರು ಹಲ್ಲೆ ನಡೆಸಿದ ಪತಿ

    ಚಂಡೀಗಢ: ದಿನೇ ದಿನೇ ದೇಶದಲ್ಲಿ ಮಹಿಳೆಯರ ಮೇಲೆ ಪುರುಷರ ದಬ್ಬಾಳಿಕೆ ಹೆಚ್ಚಾಗುತ್ತಿದೆ ಎಂಬುವುದಕ್ಕೆ ಸಾಕ್ಷಿ ಎಂಬಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕಿ ಬಲ್ಜಿಂದರ್ ಕೌರ್ ಅವರ ಮೇಲೆ ಪತಿ ಹಲ್ಲೆ ನಡೆಸಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಪಂಜಾಬ್ ನಿವಾಸದಲ್ಲಿ ಬಲ್ಜಿಂದರ್ ಕೌರ್ ಮೇಲೆ ಶಾಸಕರಾಗಿರುವ ಪತಿ ಹಲ್ಲೆ ನಡೆಸಿರುವುದನ್ನು ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ. ಇದೀಗ ಈ ವೀಡಿಯೋ ಹಲವು ಟೀಕೆಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ರಷ್ಯಾದ ತೈಲ ಸಂಸ್ಥೆ ಅಧ್ಯಕ್ಷ ಆಸ್ಪತ್ರೆಯ ಕಿಟಕಿಯಿಂದ ಬಿದ್ದು ಸಾವು

    ಪಂಜಾಬ್‍ನ ತಲ್ವಾಂಡಿ ಸಾಬೋ ಕ್ಷೇತ್ರದಿಂದ ಎರಡು ಸಲ ಶಾಸಕರಾಗಿ ಆಯ್ಕೆಯಾಗಿರುವ ಸುಖರಾಜ್ ಸಿಂಗ್ ಅವರೊಂದಿಗೆ ಪತ್ನಿ ಬಲ್ಜಿಂದರ್ ಕೌರ್ ವಾದ ಮಾಡುತ್ತಿರುತ್ತಾರೆ. ಈ ವೇಳೆ ಆಕ್ರೋಶಗೊಂಡ ಸುಖರಾಜ್ ಪತ್ನಿಗೆ ಎಲ್ಲರ ಮುಂದೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ವೇಳೆ ಕೆಲವರು ಮಧ್ಯಪ್ರವೇಶಿಸಿ ಇಬ್ಬರನ್ನು ದೂರ ತಳ್ಳಿದ್ದಾರೆ. ಇದನ್ನೂ ಓದಿ: ಪೋಕ್ಸೊ ಪ್ರಕರಣ – ಮುರುಘಾ ಶ್ರೀಗೆ 14 ದಿನ ನ್ಯಾಯಾಂಗ ಬಂಧನ

    ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನೀಶಾ ಅವರು, ನಾನು ಗಲಾಟೆಯ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೇನೆ. ಘಟನೆಯ ಬಗ್ಗೆ ನಾವು ಸ್ವಯಂ ಪ್ರೇರಿತ ನೋಟಿಸ್ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದೇವೆ. ಸಾರ್ವಜನಿಕ ಸಮಸ್ಯೆಗಳನ್ನು ಪ್ರಸ್ತಾಪಿಸುವ ಮಹಿಳೆಯೇ ಮನೆಯಲ್ಲಿ ಕಿರುಕುಳ ಎದುರಿಸುತ್ತಿರುವುದು ಬೇಸರ ತಂದಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆ ನಂತ್ರ ದಪ್ಪ ಆಗಿದ್ದಕ್ಕೆ ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಪತಿ

    ಮದುವೆ ನಂತ್ರ ದಪ್ಪ ಆಗಿದ್ದಕ್ಕೆ ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಪತಿ

    ಲಕ್ನೋ: ಮದುವೆಯ ನಂತರ ಪತ್ನಿ ತೂಕ ಹೆಚ್ಚಾಗಿದ್ದಕ್ಕೆ ಮೀರತ್ ಮೂಲದ ವ್ಯಕ್ತಿಯೋರ್ವ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಇದೀಗ ಪತಿ ವಿರುದ್ಧ ಪತ್ನಿ ನ್ಯಾಯಾಕ್ಕಾಗಿ ಮೀರತ್‍ನ ಲಿಸಾಡಿ ಗೇಟ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

    MARRIAGE

    ತನ್ನ ಪತಿ ಸಲ್ಮಾನ್ ತನ್ನನ್ನು ಒಂದು ತಿಂಗಳ ಹಿಂದೆ ಮನೆಯಿಂದ ಹೊರಹಾಕಿದ್ದಾರೆ ಮತ್ತು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪೊಲೀಸರ ಮುಂದೆ ಮಹಿಳೆ ತನ್ನ ಅಳಲನ್ನು ತೊಡಿಕೊಂಡಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀಗೆ ಸದ್ಯಕ್ಕಿಲ್ಲ ರಿಲೀಫ್‌ – ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

    7 ವರ್ಷದ ಮಗನನ್ನು ಹೊಂದಿರುವ ಈ ದಂಪತಿ ಆಗಾಗ ಜಗಳವಾಡುತ್ತಿದ್ದರು. ಅಲ್ಲದೇ ನಜ್ಮಾಳ ದೇಹದ ಬಗ್ಗೆ ಆಕೆಯ ಪತಿ ಅಸಹ್ಯಕರವಾಗಿ ಕಾಮೆಂಟ್ ಮಾಡುತ್ತಿದ್ದರು. ಅಲ್ಲದೇ ನನ್ನನ್ನು ಡುಮ್ಮಿ ಎಂದು ಕರೆಯುತ್ತಿದ್ದರು. ನಿನ್ನಂತೆ ಯಾರೂ ಇರಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು.

    ತಾನು ಸಲ್ಮಾನ್ ಜೊತೆ ಬಾಳಲು ಇಚ್ಛಿಸುತ್ತೇನೆ. ಆದರೆ ನನ್ನ ಪತಿ ವಿಚ್ಛೇದನ ಬೇಕು ಎಂದು ಕೇಳಿದ್ದಾರೆ. ಇದರಿಂದ ಈ ವಿಚಾರದಲ್ಲಿ ನಾನು ಅಸಹಾಯಕಳಾಗಿದ್ದೇನೆ. ನನಗೆ ನ್ಯಾಯ ಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮದುವೆಯಾಗುವಂತೆ ಕೋರಿ ಮಾರುಕಟ್ಟೆಯಲ್ಲಿ ಯುವಕನ ಹಿಂದೆ ಓಡಿದ ವಧು!

    Live Tv
    [brid partner=56869869 player=32851 video=960834 autoplay=true]

  • ಜಾಮೀನಿನ ಮೇಲೆ ಹೊರಬಂದವನು ಪತ್ನಿಯನ್ನು ಇರಿದು ಕೊಂದ

    ಜಾಮೀನಿನ ಮೇಲೆ ಹೊರಬಂದವನು ಪತ್ನಿಯನ್ನು ಇರಿದು ಕೊಂದ

    ಚೆನ್ನೈ: ಜಾಮೀನಿನ ಆಧಾರದ ಮೇಲೆ ಹೊರಗೆ ಬಂದಿದ್ದ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದು, ಇದೀಗ ಪರಾರಿಯಾಗಿದ್ದಾನೆ.

    ಆರೋಪಿಯನ್ನು ಸೆಲ್ವರಾಜ ಎಂದು ಗುರುತಿಸಲಾಗಿದ್ದು, ಈತ ಟಿಎನ್‍ನ ಕರೂರಿನಲ್ಲಿ ದಿನಗೂಲಿ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಈತ ಜಾಮೀನಿನ ಆಧಾರದ ಮೇಲೆ ಬಿಡುಗಡೆಯಾಗಿದ್ದನು. ಆದರೆ ಗುರುವಾರ ತಮ್ಮ ಪತ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

    ಮೃತ ಮಹಿಳೆಯನ್ನು ಸತ್ಯ ಎಂದು ಗುರುತಿಸಲಾಗಿದ್ದು, ಆರೋಪಿ ಸೆಲ್ವರಾಜ್ ಮತ್ತು ಸತ್ಯ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಪತ್ನಿಯ ನಡತೆಯ ಬಗ್ಗೆ ಆರೋಪಿ ಸದಾ ಸಂಶಯಪಡುತ್ತಿದ್ದನು. ಈ ವಿಚಾರವಾಗಿ ಅನೇಕ ಬಾರಿ ದಂಪತಿ ನಡುವೆ ಜಗಳವಾಗುತ್ತಿತ್ತು. ಇದನ್ನೂ ಓದಿ: ರೈಲ್ವೆ ಉದ್ಯೋಗದ ಆಸೆಗೆ ತನ್ನ ಹೆಬ್ಬೆರಳಿನ ಚರ್ಮ ತೆಗೆದು ಸ್ನೇಹಿತನಿಗೆ ಅಂಟಿಸಿ ಸಿಕ್ಕಿಬಿದ್ದ

    ಗುರುವಾರ ಕೆಲಸ ಮುಗಿಸಿ ಮನೆಗೆ ಬಂದ ಸತ್ಯ ಹಾಗೂ ಸೆಲ್ವರಾಜ್ ನಡುವೆ ಮತ್ತೆ ಜಗಳ ನಡೆದಿದೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಕೋಪಗೊಂಡ ಸೆಲ್ವರಾಜ್ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಸತ್ಯ ಅವರ ಹೊಟ್ಟೆಗೆ ಇರಿದಿದ್ದಾನೆ. ನಂತರ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಸತ್ಯರನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಸೆಲ್ವರಾಜ್ ತನ್ನ ಹಿರಿಯ ಮಗನಿಗೆ ತಿಳಿಸಿದ್ದಾನೆ. ನಂತರ ಕೂಡಲೇ ಆಕೆಯನ್ನು ಕರೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾಳೆ.

    ಬಳಿಕ ಘಟನೆ ಸಂಬಂಧ ಮಾಹಿತಿ ಪಡೆದ ಕರೂರು ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿ ಸೆಲ್ವರಾಜ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೇ ಆರೋಪಿ ಮೇಲೆ ಇನ್ನೂ ಅನೇಕ ಪ್ರಕರಣಗಳು ಬಾಕಿ ಇವೆ. ಇದನ್ನೂ ಓದಿ: ಕುಮಾರಣ್ಣನ ಜೊತೆ ನನ್ನನ್ನು ಜನ ಒಂದುಗೂಡಿಸಿದ್ದಾರೆ: ಜೆಡಿಎಸ್‌ನಲ್ಲೇ ಉಳಿಯುತ್ತಾರಾ ಜಿಟಿಡಿ?

    Live Tv
    [brid partner=56869869 player=32851 video=960834 autoplay=true]

  • ಅನಾರೋಗ್ಯದಿಂದ ಪತ್ನಿ ಸಾವು – ಮನನೊಂದು ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ

    ಅನಾರೋಗ್ಯದಿಂದ ಪತ್ನಿ ಸಾವು – ಮನನೊಂದು ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ

    ಚಿಕ್ಕೋಡಿ: ಅನಾರೋಗ್ಯದಿಂದಾಗಿ ಪತ್ನಿ ಸಾವನ್ನಪ್ಪಿದ ಹಿನ್ನೆಲೆ ಮನನೊಂದು ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಘಟನೆ ನಡೆದಿದೆ.

    ಮೃತ ವ್ಯಕ್ತಿಯನ್ನು ಸದಾಶಿವ ರಾಮಪ್ಪ ಕಾಂಬಳೆ (26) ಎಂದು ಗುರುತಿಸಲಾಗಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಘಟನೆ ನಡೆದಿದೆ. ಎರಡು ವರ್ಷದ ಹಿಂದೆಯಷ್ಟೇ ಸದಾಶಿವ ರಾಮಪ್ಪ ಕಾಂಬಳೆ, ರೂಪಾ ಅವರನ್ನು ವಿವಾಹವಾಗಿದ್ದರು. ಆದರೆ ಅನಾರೋಗ್ಯ ಕಾರಣ ರೂಪ ಅವರು ಕಳೆದ ಎರಡು ದಿನದ ಹಿಂದೆಯಷ್ಟೇ ನಿಧನರಾಗಿದ್ದರು. ಇದನ್ನೂ ಓದಿ: ದೆಹಲಿಗೆ ಹೊರಟ ಬಿಎಸ್‌ವೈ – ಇಂದು ಸಂಜೆ ಮೋದಿ ಭೇಟಿ

    crime

    ಇದರಿಂದ ಮನನೊಂದು ಸದಾಶಿವ ರಾಮಪ್ಪ ಕಾಂಬಳೆ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಕೂಡಲೇ ಅವರನ್ನು ವಿಜಯಪುರ ಜಿಲ್ಲೆ ಖಾಸಗಿ ಆಸ್ಪತ್ರೆಗೆ ಸದಾಶಿವ ದಾಖಲು ಮಾಡಲಾಗಿತ್ತು. ಆದರೆ ಅವರ ದೇಹ 80 ರಷ್ಟು ಪ್ರತಿಶತದಷ್ಟು ಬೆಂಕಿಯಿಂದ ಸುಟ್ಟುಹೋಗಿ ಗಂಭೀರವಾಗಿ ಗಾಯಗೊಂಡಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಆಸ್ಪತ್ರೆಯಲ್ಲಿಯೇ ಸದಾಶಿವ ರಾಮಪ್ಪ ಕಾಂಬಳೆ ಅವರು ಕೊನೆಯುಸಿರೆಳೆದಿದ್ದಾರೆ.

    ಒಟ್ಟಾರೆ ಎರಡು ವರ್ಷದ ಹಿಂದೆ ಸಪ್ತಪದಿ ತುಳಿದಿದ್ದ ಈ ಜೋಡಿ ಇದೀಗ ಸಾವಿನಲ್ಲೂ ಒಂದಾಗಿದ್ದಾರೆ. ಇನ್ನೂ ಐಗಳಿ ಪೊಲೀಸ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪುರುಷರೊಂದಿಗೆ ಸೆಕ್ಸ್ – ವ್ಯಕ್ತಿಗೆ ಒಂದೇ ಬಾರಿಗೆ ಕೊರೊನಾ, ಮಂಕಿಪಾಕ್ಸ್, HIV ಪಾಸಿಟಿವ್‌

    Live Tv
    [brid partner=56869869 player=32851 video=960834 autoplay=true]

  • ಮಾವನಿಂದಲೇ ಸೊಸೆಯ ಮೇಲೆ ಅತ್ಯಾಚಾರಕ್ಕೆ ಯತ್ನ- ಕುಟುಂಬಸ್ಥರಿಂದ ಕುಮ್ಮಕ್ಕು

    ಮಾವನಿಂದಲೇ ಸೊಸೆಯ ಮೇಲೆ ಅತ್ಯಾಚಾರಕ್ಕೆ ಯತ್ನ- ಕುಟುಂಬಸ್ಥರಿಂದ ಕುಮ್ಮಕ್ಕು

    ಮೈಸೂರು: ಮಾವನೇ ಸೊಸೆ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ ಘಟನೆ ಹುಣಸೂರಿನ ಗೋಕುಲ ರಸ್ತೆ ಎನ್.ಎಸ್ ಕ್ವಾಟ್ರರ್ಸ್‍ನಲ್ಲಿ ನಡೆದಿದೆ. ಎರಡು ಬಾರಿ ಅತ್ಯಾಚಾರಕ್ಕೆ ಯತ್ನಿಸಿದ ಮಾವ ಹಾಗೂ ಅದನ್ನು ತಡೆಯಲು ಪ್ರಯತ್ನಿಸದ ಪತಿಯ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ.

    ಹುಣಸೂರಿನ ಕಟ್ ನೋಟ್‍ವ್ಯಾಪಾರಿ ಇಕ್ಬಾಲ್ ಅಹ್ಮದ್, ತಾಲೂಕಿನ ಟ್ಯಾಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ರಾಸಾಯನ ಶಾಸ್ತ್ರ ಅತಿಥಿ ಉಪನ್ಯಾಸಕ ಹಾಗೂ ಜಮಾತೆ ಇಸ್ಲಾಂ ಹಿಂದ್ ಸಂಘಟನೆಯ ಸಕ್ರಿಯ ಸದಸ್ಯನಾಗಿರುವ ರಶೀದ್ ಅಹ್ಮದ್ ಸೇರಿದಂತೆ 8 ಮಂದಿಯ ವಿರುದ್ಧ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾಳೆ.

    STOP RAPE

    ಒಂದು ವರ್ಷದ ಹಿಂದೆ ಪಿರಿಯಾಪಟ್ಟಣ ತಾಲೂಕಿನ ಚಿಕ್ಕ ನೇರಳೆ ಗ್ರಾಮದ ಯುವತಿಯ ಜೊತೆಗೆ ರಶೀದ್ ಅಹ್ಮದ್ ಮದುವೆಯಾಗಿತ್ತು. ಮದುವೆಯ 6 ತಿಂಗಳ ಬಳಿಕ ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡಲಾಗುತ್ತಿದೆ ಮತ್ತು ಅತ್ಯಚಾರಕ್ಕೆ ಪ್ರಯತ್ನ ನಡೆಸಲಾಗಿದ್ದು, ಸಹಕರಿಸದ ಹಿನ್ನೆಲೆ ದೈಹಿಕ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಮುಖಂಡರು ಮನೆಯಲ್ಲಿ ಡ್ರಾಫ್ಟ್ ರೆಡಿ ಮಾಡಿ, ಮೋದಿಗೆ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ: ರೇಣುಕಾಚಾರ್ಯ

    ಮಾವ ಇಕ್ಬಾಲ್ ಅಹ್ಮದ್ 2 ಬಾರಿ ಅತ್ಯಾಚಾರಕ್ಕೆ ಪ್ರಯತ್ನಪಟ್ಟಿದ್ದಾನೆ. ಇದಕ್ಕೆ ಅತ್ತೆ ಪರ್ವಿನ್ ತಾಜ್, ನಾದಿನಿ ರಜಿಯಾ ಮತ್ತೊಬ್ಬ ನಾದಿನಿ ಹಸೀನಾ ಆಕೆಯ ಗಂಡ ಕುಶಾಲನಗರ ದನಿನಾ ಪೇಟೆ ಮುಸ್ಲಿಂ ಜಮಾತ್ ಮಸೀದಿ ಸೆಕ್ರೆಟರಿ ಇರ್ಫಾನ್, ಗಂಡನ ಅಣ್ಣಾ ಮೆಕ್ಯಾನಿಕ್ ಮುಕ್ತರ್, ವಾರಗಿತ್ತಿ ಹೂರ್ ಬಾನು ಕುಮ್ಮಕ್ಕು ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.

    ಮನೆಯವರ ಕುಮ್ಮಕ್ಕುನಿಂದ ಮಾವ ಇಕ್ಬಾಲ್ ಅಹ್ಮದ್ ಪದೇ ಪದೇ ಅತ್ಯಚಾರಕ್ಕೆ ಪ್ರಯತ್ನಿಸಿದ್ದಾನೆ. ಇದನ್ನು ಪತಿ ರಶೀದ್ ಅಹ್ಮದ್ ಮುಂದೆ ಹೇಳಿಕೊಂಡರು ಸ್ಪಂದಿಸಿಲ್ಲ. ಪತಿ ಮನೆಯವರ ನೀಚ ವರ್ತನೆ ಕಂಡು ಸಂತ್ರಸ್ತ ಮಹಿಳೆ ತವರು ಮನೆಗೆ ವಿಷಯ ತಿಳಿಸಿದ್ದಾಳೆ. ಇದಾದ ಬಳಿಕ ಟ್ಯಾಲೆಂಟ್ ಸಂಸ್ಥೆ ಮಾಲೀಕರಳ್ಳಿ ಒಬ್ಬರಾದ ನವೀನ್ ರೈ ನೇತೃತ್ವದಲ್ಲಿ ನ್ಯಾಯ ಪಂಚಾಯಿತಿ ಮಾಡಲಾಗಿತ್ತು. ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸುವ ಯೋಚನೆ ಮಾಡಿದರೆ ಬಡವರ ಹಸಿವಿನ ಬೆಂಕಿಯಲ್ಲಿ ಬೆಂದು ಹೋಗುತ್ತೀರಿ: ಸಿದ್ದು ಕಿಡಿ

    ಇದಕ್ಕೂ ಯಾವುದೇ ಕಿಮ್ಮತ್ತು ಕೊಡದೇ ಮತ್ತೊಮ್ಮೆ ಅತ್ಯಾಚಾರಕ್ಕೆ ಪ್ರಚೊದನೆ ನೀಡುವ ವರ್ತನೆ ಕುಟುಂಬಸ್ಥರು ನೀಡಿದ್ದಾರೆ. ಹಲ್ಲೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ಸದ್ಯ ಹುಣಸೂರು ಪಟ್ಟಣ ಠಾಣೆಯಲ್ಲಿ 498ಂ, 354, 504, 506, 323, 149 ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಎಫ್‍ಐಆರ್ ದಾಖಲಾಗುತ್ತಿದ್ದಂತೆ ಪ್ರಭಾವ ಬಳಸಿ ಇಡೀ ಕುಟುಂಬ ತಲೆಮರೆಸಿಕೊಂಡಿದ್ದು, ಹುರ್ ಬಾನು ಪ್ರಕರಣ ದಾಖಲಾಗುವ ಮುನ್ಸೂಚನೆ ಅರಿತು ದುಬೈಗೆ ಪರಾರಿಯಾಗಿದ್ದಾಳೆ. ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೆಣ್ಣು ಮಗು ಹೆತ್ತಿದ್ದಕ್ಕೆ ವರದಕ್ಷಿಣೆ ಕಿರುಕುಳ – ಆತ್ಮಹತ್ಯೆಗೆ ಶರಣಾದ ಮಹಿಳೆ

    ಹೆಣ್ಣು ಮಗು ಹೆತ್ತಿದ್ದಕ್ಕೆ ವರದಕ್ಷಿಣೆ ಕಿರುಕುಳ – ಆತ್ಮಹತ್ಯೆಗೆ ಶರಣಾದ ಮಹಿಳೆ

    ಚೆನ್ನೈ: ವರದಕ್ಷಿಣೆ ಮತ್ತು ಹೆಣ್ಣು ಮಗು ಹೆತ್ತಿದ್ದಕ್ಕೆ ಅತ್ತೆಯಂದಿರು ದಿನ ನಿತ್ಯ ನೀಡುತ್ತಿದ್ದ ಕಿರುಕುಳ ಸಹಿಸಲಾಗದೇ 27 ವರ್ಷದ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದಿದೆ.

     

    ಇದೀಗ ಮಹಿಳೆಯ ಪತಿ ಸೇರಿದಂತೆ 7 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತ ಮಹಿಳೆಯನ್ನು ಅಫ್ಸಾ ಎಂದು ಗುರುತಿಸಲಾಗಿದ್ದು, ಒಂದು ವರ್ಷದ ಹಿಂದೆ ತನ್ನ ಗೆಳೆಯ ದಸ್ತೇಕರ್ ಅನ್ನು ಮದುವೆಯಾಗಿದ್ದರು. ಎರಡು ಕುಟುಂಬದ ಒಪ್ಪಿಗೆ ಮೇರೆಗೆ ಈ ಮದುವೆ ನಡೆದಿತ್ತು. ಆದರೆ ವರದಕ್ಷಿಣೆಗಾಗಿ ತನ್ನ ಪತಿ ಮತ್ತು ಅತ್ತೆಯಂದಿರು ಪದೇ, ಪದೇ ಪೀಡಿಸುತ್ತಿದ್ದರು ಎಂದು ಅಫ್ಸಾ ಡೇತ್ ನೋಟ್ ಮೂಲಕ ಆರೋಪಿಸಿದ್ದಾರೆ. ಇದನ್ನೂ ಓದಿ: ಮಡಿಕೇರಿ ಚಲೋ ಕೈಬಿಟ್ಟ ಕಾಂಗ್ರೆಸ್ ನಿಲುವು ಸ್ವಾಗತಿಸಿದ ಮಾಜಿ ಸಿಎಂ ಬಿಎಸ್‍ವೈ

    ಮದುವೆಯಾದ ನಂತರ ಕೇವಲ ಒಂದು ವಾರ ಮಾತ್ರ ನಾನು ನನ್ನ ಪತಿಯೊಂದಿಗೆ ಇದ್ದೆ. ಆದರೆ ನಂತರದ ದಿನಗಳಲ್ಲಿ ವರದಕ್ಷಿಣೆಗಾಗಿ ನನ್ನ ಅತ್ತೆಯಂದರು ಹಲವು ಬಾರಿ ಥಳಿಸಿದ್ದಾರೆ. ಅಲ್ಲದೇ ಈಗಾಗಲೇ ನೀಡಬೇಕಾದ ಎಲ್ಲಾ ವರದಕ್ಷಿಣೆಯನ್ನು ನನ್ನ ಅತ್ತೆಯ ಕುಟುಂಬಕ್ಕೆ ನೀಡಲಾಗಿದೆ. ಆದರೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ 50 ಗ್ರಾಂ ಚಿನ್ನ, ರಾಯಲ್ ಎನ್‍ಫೀಲ್ಡ್ ಬೈಕ್ ಮತ್ತು 1 ಲಕ್ಷ ರೂ. ನಗದು ಈ ಎಲ್ಲ ವಸ್ತುಗಳನ್ನು ನನ್ನ ಅತ್ತೆಯ ಮನೆಯವರು ಕಿತ್ತುಕೊಂಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    ಅತ್ತೆಯ ಸೂಚನೆ ಮೇರೆಗೆ ನನ್ನ ಪತಿ ಪ್ರತಿನಿತ್ಯ ನನಗೆ ಹೊಡೆದು ಕಿರುಕುಳ ನೀಡಿದ್ದ. ಅಲ್ಲದೇ ಈ ಹಿಂದೆ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿಯೂ ಪತ್ರದಲ್ಲಿ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಎಲ್ಲರೂ ನೂಪುರ್‌ಗೆ ಕ್ಷಮೆ ಕೇಳುವಂತೆ ಹೇಳಿದರು, ಆದರೆ ನಾನು ಮಾತ್ರ ಬೆಂಬಲ ನೀಡಿದ್ದೇನೆ: ರಾಜ್ ಠಾಕ್ರೆ

    ಅಫ್ಸಾ ಇಲಿ  ಪಾಷಣವನ್ನು ಸೇವಿಸಿ ಅಸ್ವಸ್ಥಗೊಂಡಾಗ, ಆಕೆಯ ತಾಯಿಯ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಫ್ಸಾ ಮೃತಪಟ್ಟಿದ್ದಾಳೆ. ಕಳೆದ ಎರಡು ತಿಂಗಳಿಂದ ಅಫ್ಸಾ ತನ್ನ ತಾಯಿಯ ಮನೆಯಲ್ಲೇ ಇದ್ದರು.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಪ್ಲೇಸ್‍ನಲ್ಲಿ ಸ್ನಾನ ಮಾಡುವಂತೆ ಪತ್ನಿಗೆ ಕಿರುಕುಳ – ಪತಿ ವಿರುದ್ಧ ಕೇಸ್

    ಪಬ್ಲಿಕ್ ಪ್ಲೇಸ್‍ನಲ್ಲಿ ಸ್ನಾನ ಮಾಡುವಂತೆ ಪತ್ನಿಗೆ ಕಿರುಕುಳ – ಪತಿ ವಿರುದ್ಧ ಕೇಸ್

    ಮುಂಬೈ: ಸಾರ್ವಜನಿಕವಾಗಿ ಸ್ನಾನ ಮಾಡುವಂತೆ ಪತ್ನಿಗೆ ಕಿರುಕುಳ ನೀಡಿದ್ದ ಪತಿ ವಿರುದ್ಧ ಪುಣೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪತ್ನಿ ಗರ್ಭಧರಿಸಬೇಕಾದರೆ ಸಾರ್ವಜನಿಕವಾಗಿ ಸ್ನಾನ ಮಾಡಬೇಕೆಂದು ಮಾಂತ್ರಿಕನೋರ್ವ ಸಲಹೆ ನೀಡಿದ್ದರಿಂದ ವ್ಯಕ್ತಿಯೊರ್ವ ತನ್ನ ಪತ್ನಿಗೆ ಸಾರ್ವಜನಿಕವಾಗಿ ಎಲ್ಲರ ಮುಂದೆ ಸ್ನಾನ ಮಾಡುವಂತೆ ಕಿರುಕುಳ ನೀಡಿದ ಹಿನ್ನೆಲೆ ಆತ ಮತ್ತು ಆತನ ಪೋಷಕರ ವಿರುದ್ಧ  ಪ್ರಕರಣ ದಾಖಲಾಗಿದೆ.

    ಮಾಂತ್ರಿಕ ನೀಡಿದ ಸಲಹೆಯ ಮೇರೆಗೆ ಮಹಿಳೆಯನ್ನು ರಾಯಗಡ ಜಿಲ್ಲೆಯ ಜಲಪಾತಕ್ಕೆ ಕರೆದೊಯ್ದು ವ್ಯಕ್ತಿ ಎಲ್ಲರ ಮುಂದೆ ಸ್ನಾನ ಮಾಡುವಂತೆ ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಮಡಿಕೇರಿಯಲ್ಲಿ ನಡೆದ ಮೊಟ್ಟೆ ಎಸೆತ ಪ್ರಕರಣ ನನಗೆ ಗೊತ್ತಿಲ್ಲ: ಅಪ್ಪಚ್ಚು ರಂಜನ್

    ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 498 (ವಿವಾಹಿತ ಸ್ತ್ರೀಯನ್ನು ಆಪರಾಧಿಕ ಉದ್ದೇಶದಿಂದ ಪುಸಲಾಯಿಸುವುದು ಅಥವಾ ಕರೆದುಕೊಂಡುಹೋಗುವುದು) ಮತ್ತು ಮಾನವಬಲಿ, ಅಮಾನವೀಯ, ದುಷ್ಟ, ಅಘೋರಿ ಆಚರಣೆಗಳು ಸೇರಿದಂತೆ ಮಹಾರಾಷ್ಟ್ರದ 2013ರ ಬ್ಲ್ಯಾಕ್ ಮ್ಯಾಜಿಕ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಭಾರತಿ ವಿದ್ಯಾಪೀಠದ ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ತನಿಖೆ ನಡೆಸುವ ವೇಳೆ ದಂಪತಿಗೆ ಮಕ್ಕಳಿರಲಿಲ್ಲ. ಹಾಗಾಗಿ ಮಾಂತ್ರಿಕನ ಸಲಹೆಯ ಮೇರೆಗೆ ಮಹಿಳೆಯನ್ನು ರಾಯಗಡ ಜಿಲ್ಲೆಯ ಜಲಪಾತಕ್ಕೆ ಕರೆದೊಯ್ದು ನಂತರ ಎಲ್ಲರ ಮುಂದೆ ಸ್ನಾನ ಮಾಡುವಂತೆ ಹಿಂಸೆ ನೀಡಿದ್ದಾನೆ ಎಂದು ತಿಳಿದುಬಂದಿದೆ.  ಇದನ್ನೂ ಓದಿ: ಕೊಡಗಿನಲ್ಲಿ ನಾಳೆಯಿಂದ ಶನಿವಾರದವರೆಗೆ ನಿಷೇಧಾಜ್ಞೆ- ಮದ್ಯ ಮಾರಾಟ ನಿಷೇಧ

    Live Tv
    [brid partner=56869869 player=32851 video=960834 autoplay=true]

  • ಸೌದಿಯಲ್ಲಿ ಪತ್ನಿ ಮೋಜು – ತುಮಕೂರಿನಲ್ಲಿ ಮೂವರು ಮಕ್ಕಳೊಂದಿಗೆ ಪತಿ ಆತ್ಮಹತ್ಯೆ

    ಸೌದಿಯಲ್ಲಿ ಪತ್ನಿ ಮೋಜು – ತುಮಕೂರಿನಲ್ಲಿ ಮೂವರು ಮಕ್ಕಳೊಂದಿಗೆ ಪತಿ ಆತ್ಮಹತ್ಯೆ

    – ಸಮೀವುಲ್ಲಾ ಸಾವು, ಜೀವನ್ಮರಣ ಹೋರಾಟದಲ್ಲಿ ಮಕ್ಕಳು

    ತುಮಕೂರು: ಮೂರು ಮಕ್ಕಳ ತಾಯಿ ವಿದೇಶಕ್ಕೆ ಹಾರಿ ಮೋಜು-ಮಸ್ತಿ ಮಾಡುತ್ತಿದ್ದರಿಂದ ಇತ್ತ ಪತಿ ಹಾಗೂ ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದು, ಮಕ್ಕಳು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

    ಹೌದು. ಹೆಂಡತಿಯ ವರ್ತನೆಯಿಂದ ಬೇಸತ್ತು ಸಮೀವುಲ್ಲಾ ತನ್ನ ಮೂವರು ಮಕ್ಕಳ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಸಮೀವುಲ್ಲಾ ಅವರು ತುಮಕೂರಿನಲ್ಲಿ ಪೇಯಿಂಟ್ ಕೆಲಸ ಮಾಡಿಕೊಂಡಿದ್ದಾರೆ. ಇತ್ತ ಪತ್ನಿ ಮನೆಯಲ್ಲಿಯೇ ವಾಸವಿದ್ದಳು. ಆದರೆ ಅದೇಕೋ ಈಕೆಗೆ ದುಡಿಯುವ ಮನಸ್ಸಾಯ್ತೋ ಗೊತ್ತಿಲ್ಲ. ತನ್ನ ಅಕ್ಕನ ಜೊತೆ ಸೌದಿಗೆ ಹಾರಿದ್ದಾಳೆ.

    ತನ್ನ ಕುಟುಂಬಕ್ಕೆ ತಿಂಗಳಿಗೊಮ್ಮೆ 10 ಸಾವಿರ ಹಣವೂ ಕಳಿಸುತ್ತಿದ್ದಳಂತೆ. ಆದರೆ ಕ್ರಮೇಣ ಹಣ ಕಳುಹಿಸುವುದನ್ನು ನಿಲ್ಲಿಸಿದ್ದಾಳೆ. ದುಡಿಮೆಗೆಂದು ಹೋದ ಸಾಹೇರಾ ಬಾನು, ಹುಕ್ಕಾ ಬಾರ್ ಡ್ಯಾನ್ಸ್ ಅಂತಾ ಮೋಜು ಮಸ್ತಿಗೆ ಇಳಿದಿದ್ದಾಳೆ. ಈ ಬಗ್ಗೆ ಅಲ್ಲಿಂದಲೇ ತನ್ನ ಪತಿ ಸಮೀವುಲ್ಲಾಗೆ ವೀಡಿಯೋ ಕಾಲ್ ಮಾಡಿ ತೋರಿಸುತ್ತಿದ್ದಳಂತೆ. ಅಲ್ಲದೆ ನಾನು ವಾಪಸ್ ಬರಲ್ಲ ಇಲ್ಲೇ ಇರುತ್ತೇನೆ, ಇಲ್ಲೆ ಚೆನ್ನಾಗಿದೆ ಅಂತಾ ಹೇಳಿ ಪತಿಗೆ ರೇಗಿಸುತ್ತಿದ್ದಳಂತೆ. ಜೊತೆಗೆ ಪ್ರಿಯಕರನೊಂದಿಗೂ ಕೂಡ ವೀಡಿಯೋ ಕಾಲ್ ಮಾಡುತ್ತಿದ್ದಳು ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದ `ಸಿಎಂ ಬದಲಾವಣೆ’ ವರದಿ

    ಯಾವಾಗ ಸಾಹೇರಾ ಬಾನು ತನ್ನ ಮೋಜು-ಮಸ್ತಿಯಲ್ಲಿ ಬಿದ್ದು ಸೌದಿಯಲ್ಲಿ ಸೆಟ್ಲ್ ಆದ್ಲೋ, ಇತ್ತ ಸಮೀವುಲ್ಲಾ ಕುಟುಂಬ ನಲುಗಿದೆ. ತನ್ನ ಮೂವರು ಮಕ್ಕಳೊಂದಿಗೆ ಸಮೀವುಲ್ಲಾ ಪಡಬಾರದ ಕಷ್ಟ ಪಟ್ಟಿದ್ದಾರೆ. ತಾನೇ ದುಡಿದು ಮಕ್ಕಳನ್ನ ನೋಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಪ್ರತಿದಿನ ಕೂಡ ಸಮೀವುಲ್ಲಾ ಪತ್ನಿಗೆ ವೀಡಿಯೋ ಕಾಲ್ ಮಾಡಿದಾಗ ವಾಪಸ್ ತುಮಕೂರಿಗೆ ಬಂದು ಬಿಡು ಅಂತಾ ಗೋಗರೆದಿದ್ದಾರೆ. ಸಾಲದ್ದಕ್ಕೆ ಮಕ್ಕಳು ಕೂಡ ತಾಯಿಗೆ ಬಾ ಅಮ್ಮ ಅಂತಾ ಕರೆದಿದ್ದಾರೆ. ಆದರೂ ನವರಂಗಿ ನಾಟಕದ ಸಾಹೇರ ಬಾನು ಮನಸ್ಸು ಕರಗಿಲ್ಲ.

    ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳೊಂದಿಗೆ ಸಮೀವುಲ್ಲಾ ತುಮಕೂರಿನ ಪುರೋಸ್ ಕಾಲೋನಿಯಲ್ಲಿ ವಾಸವಿದ್ದರು. ಪತ್ನಿ ಸೌದಿಗೆ ಹೋದ ಕಾರಣಕ್ಕೆ ಕಳೆದ ಆಗಸ್ಟ್ 13 ರಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ಮಕ್ಕಳ ಸಮೇತ ಸಮೀವುಲ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದು, ತುಮಕೂರಿನ ಜಿಲ್ಲಾಸ್ಪತ್ರೆಗೆ ಸಂಬಂಧಿಕರು ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 15ಕ್ಕೆ ಸಮೀವುಲ್ಲಾ ಸಾವನ್ನಪ್ಪಿದ್ದು, ಸದ್ಯ ಮೂವರು ಮಕ್ಕಳು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

    ಮಕ್ಕಳು ವಿಷ ಕುಡಿಯುವ ಮುನ್ನ ತನ್ನ ತಾಯಿಗೆ ಕಳುಹಿಸಿರುವ ಆ ವಾಯ್ಸ್ ರೆಕಾರ್ಡ್‍ಗಳು ಎಂಥವರನ್ನೂ ಮೌನವಾಗಿಸುತ್ತೆ. ಇವತ್ತು ಒಂದು ದಿನ ಮಾತನಾಡು ಅಮ್ಮ ಇಂದು ಕೊನೆದಿನ, ನಾವು ನಾಲ್ಕು ಮಂದಿ ಸಾಯುತ್ತಿದ್ದೇವೆ ಎಂದು ಮಕ್ಕಳು ಹೇಳಿರುವುದನ್ನು ಕೇಳಿಸಿಕೊಂಡರೆ ಹೃದಯ ಚುರುಕ್ ಅನ್ನುತ್ತೆ. ಮಕ್ಕಳು ಅಳುವ ವಾಯ್ಸ್‍ಗೂ ತಾಯಿಯ ಹೃದಯ ಕರಗಲಿಲ್ಲ. ಅಲ್ಲದೆ ಗಂಡ ಸತ್ತು ಮಕ್ಕಳ ಸ್ಥಿತಿ ಚಿಂತಾಜನಕವಾಗಿದ್ರೂ ಕರಗದ ಸಾಹೇರಾ ಭಾನು ವಿರುದ್ಧ ಮೋಯಿದ್ದಿನ್ ಕುಟುಂಬಸ್ಥರು ಹರಿಹಾಯ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕ್ಯಾನ್ಸರ್ ಇದೆ ಎಂದು ತಿಳಿದು ಇಡೀ ಫ್ಯಾಮಿಲಿ ಆತ್ಮಹತ್ಯೆಗೆ ಶರಣು

    ಕ್ಯಾನ್ಸರ್ ಇದೆ ಎಂದು ತಿಳಿದು ಇಡೀ ಫ್ಯಾಮಿಲಿ ಆತ್ಮಹತ್ಯೆಗೆ ಶರಣು

    ಬೆಂಗಳೂರು: ಕ್ಯಾನ್ಸರ್ ಇದೆ ಎಂದು ತಿಳಿದು ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

    ಮಹೇಶ್ (44), ಪತ್ನಿ ಜ್ಯೋತಿ ಮತ್ತು ಮಗ ನಂದೀಶ್ ಗೌಡ (9) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಮಹೇಶ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಅಷ್ಟೇ ಅಲ್ಲದೇ ಪ್ರತಿದಿನ ಟ್ಯಾಬ್ಲೇಟ್ ತೆಗೆದುಕೊಂಡು ಸುಸ್ತಾಗಿ ಹೋಗಿದ್ದ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹೊಟ್ಟೆ ನೋವಿಗೆ ಕಾರಣವೇನು ಎಂದು ಖಾಸಗಿ ಆಸ್ಪತ್ರೆಯಲ್ಲಿ ಚೆಕ್ ಮಾಡಿಸಿಕೊಂಡಿದ್ದಾರೆ. ಈ ವೇಳೆ ಕ್ಯಾನ್ಸರ್ ಇದೆ ಎಂದು ಡಾಕ್ಟರ್ ತಿಳಿಸಿದ್ದಾರೆ.

    crime

    ಈ ವಿಷಯ ಗೊತ್ತಾದ ಮಹೇಶ್ ತಾನು ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ರೆ ತನ್ನ ಕುಟುಂಬ ಅನಾಥವಾಗುತ್ತದೆ. ಪತ್ನಿ, ಮಗು ಎಲ್ಲರೂ ಬೀದಿಗೆ ಬರುತ್ತಾರೆ. ತನ್ನ ಸಾವಿನ ನಂತರ ತನ್ನ ಹೆಂಡತಿ, ಮಕ್ಕಳ ಜೀವನ ಕಷ್ಟ ಎಂದು ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಾರೆ.

    ಮಹೇಶ್ ತಾನು ಮಾಡಿದ್ದ ನಿರ್ಧಾರದಂತೆ ಮನೆಯ ಒಂದು ರೂಂನಲ್ಲಿ ಫ್ಯಾನ್‍ಗೆ ನೇಣು ಬಿಗಿದುಕೊಂಡು ಮಹೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮತ್ತೊಂದು ರೂಂನ ಬೆಡ್ ಮೇಲೆ ಪತ್ನಿ ಹಾಗೂ ನಂದೀಶ್ ಶವವಾಗಿ ಪತ್ತೆ ಆಗಿದ್ದಾರೆ. ಘಟನೆಯಲ್ಲಿ ಪತ್ನಿ ಹಾಗೂ ಮಗು ವಿಷ ಸೇವಿಸಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಗರ್ಲ್ ಫ್ರೆಂಡ್ ಭೇಟಿಗಾಗಿ ಬುರ್ಕಾ ಧರಿಸಿದವ ಜೈಲು ಪಾಲು

    POLICE JEEP

    ಘಟನೆ ಕುರಿತು ಮಹೇಶ್ ಡೆತ್‍ನೋಟ್ ಬರೆದಿಟ್ಟಿದ್ದಾರೆ. ಮಹೇಶ್ ಬರೆದಿರುವ ಅರ್ಧ ಪುಟದ ಡೆತ್ ನೋಟ್‍ನಲ್ಲಿ ಆರೋಗ್ಯ ಸಮಸ್ಯೆ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: No Follow Up, ಯಾವುದೇ ಕಾರಿಡಾರ್‌ ಸುತ್ತಿಲ್ಲ, 30 ವರ್ಷದಲ್ಲಿ ಇದು ಫಸ್ಟ್‌ – ಕೇಂದ್ರವನ್ನು ಹೊಗಳಿದ ಸುನಿಲ್‌ ಮಿತ್ತಲ್‌

    Live Tv
    [brid partner=56869869 player=32851 video=960834 autoplay=true]