Tag: ಪತಿ

  • 8 ವರ್ಷದ ಬಳಿಕ ಗೊತ್ತಾಯ್ತು ತನ್ನ ಪತಿ ಅವನಲ್ಲ ಅವಳು – ಗಂಡನ ಲಿಂಗ ಬದಲಾವಣೆ ತಿಳಿದು ಮಹಿಳೆ ಶಾಕ್

    8 ವರ್ಷದ ಬಳಿಕ ಗೊತ್ತಾಯ್ತು ತನ್ನ ಪತಿ ಅವನಲ್ಲ ಅವಳು – ಗಂಡನ ಲಿಂಗ ಬದಲಾವಣೆ ತಿಳಿದು ಮಹಿಳೆ ಶಾಕ್

    ಗಾಂಧಿನಗರ: ಮದುವೆಯಾಗಿ 8 ವರ್ಷ ಕಳೆದ ನಂತರ ತನ್ನ ಪತಿ (Husband) ಮೊದಲು ಮಹಿಳೆಯಾಗಿದ್ದಳು ಎಂಬ ಸತ್ಯ ತಿಳಿದುಬಂದಿದ್ದು, ಗುಜರಾತ್‍ನ ವಡೋದರಾದಲ್ಲಿ (Gujarat Vadodara) ಮಹಿಳೆಯೊಬ್ಬರು ಶಾಕ್ ಆಗಿದ್ದಾಳೆ.

    40 ವರ್ಷದ ಮಹಿಳೆಯೊಬ್ಬರು 2014ರಲ್ಲಿ ಮದುವೆಯಾದ ವ್ಯಕ್ತಿ ಪುರುಷನಾಗಲು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ(Sex Change Operation) ಒಳಗಾಗಿದ್ದು, ಈ ವಿಚಾರವನ್ನು ತನ್ನಿಂದ ಮುಚ್ಚಿಟ್ಟಿರುವುದು ತಿಳಿದು ಕಂಗಲಾಗಿದ್ದಾಳೆ. ಇದನ್ನೂ ಓದಿ: ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಗುಡ್‍ನ್ಯೂಸ್ – ಮೊದಲ ಬಾರಿಗೆ ಮಿನಿ ಎಲೆಕ್ಟ್ರಿಕ್ ಬಸ್ ಸೇವೆ

    ಈ ಸಂಬಂಧ ಮಹಿಳೆ ಬುಧವಾರ ಗೋತ್ರಿ ಪೊಲೀಸ್‍ನಲ್ಲಿ(Gotri Police) ದೂರು ದಾಖಲಿಸಿದ್ದು, ತನ್ನ ಪತಿ ವಿರಾಜ್ ವರ್ಧನ್ ವಂಚನೆ ಮತ್ತು ಅಸ್ವಾಭಾವಿಕ ಲೈಂಗಿಕತೆಗೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಎಫ್‍ಐಆರ್‌ನಲ್ಲಿ ಅವರ ಕುಟುಂಬಸ್ಥರ ಹೆಸರನ್ನು ಉಲ್ಲೇಖಿಸಿದ್ದಾಳೆ. ಇದನ್ನೂ ಓದಿ: ಸಿವಿಲ್ ವರ್ಕ್‍ಗೆ ಇನ್ಮುಂದೆ ಕ್ವಾಲಿಟಿ ಚೆಕ್ ಕಡ್ಡಾಯ – ಆದೇಶ ಹೊರಡಿಸಿದ BBMP

    ಹಿಂದೆ ವಿಜೈತಾ(Vijaita) ಎಂದು ಗುರುತಿಸಿಕೊಂಡಿದ್ದ ವಿರಾಜ್ ವರ್ಧನ್ (Viraj Vardhan) ಅವರನ್ನು ಒಂಬತ್ತು ವರ್ಷಗಳ ಹಿಂದೆ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಭೇಟಿಯಾಗಿದ್ದೆ. ನನ್ನ ಮೊದಲ ಪತಿ 2011ರಲ್ಲಿ ರಸ್ತೆ ಅಪಘಾತದಲ್ಲಿ (Road Accident) ನಿಧನರಾದರು ಮತ್ತು ನಮಗೆ 14 ವರ್ಷದ ಮಗಳಿದ್ದಳು (Daughter) ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

    ಫೆಬ್ರವರಿ (February) 2014 ರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ವಿರಾಜ್ ವರ್ಧನ್ ಮಹಿಳೆ ಮದುವೆಯಾಗಿದ್ದು, ನಂತರ ಹನಿಮೂನ್‍ಗಾಗಿ ಕಾಶ್ಮೀರಕ್ಕೆ(Kashmir) ತೆರಳಿದ್ದರು. ಆದರೆ ವ್ಯಕ್ತಿ ಈ ವೇಳೆ ವಿಚಿತ್ರವಾಗಿ ವರ್ತಿಸುತ್ತಿದ್ದರು. ಸದಾ ಮುನಿಸಿಕೊಳ್ಳುವ ಮೂಲಕ ನನ್ನಿಂದ ದೂರ ಉಳಿದಿದ್ದರು. ನಂತರ ಮಹಿಳೆ ಆತನ ಮೇಲೆ ಒತ್ತಡ ಹೇರಿದಾಗ, ಕೆಲವು ವರ್ಷಗಳ ಹಿಂದೆ ರಷ್ಯಾದಲ್ಲಿ(Russia) ಸಂಭವಿಸಿದ ಅಪಘಾತದಿಂದ ತಾನು ಲೈಂಗಿಕ ಕ್ರಿಯೆ ಹೊಂದಲು ಅಸಮರ್ಥನಾಗಿದ್ದೇನೆ (Incapable of Having Sex) ಎಂದು ವ್ಯಕ್ತಿ ಪತ್ನಿ ಬಳಿ ಹೇಳಿಕೊಂಡಿದ್ದು, ಸಣ್ಣ ಶಸ್ತ್ರ ಚಿಕಿತ್ಸೆ(Minor Surgery) ಮಾಡಿಸಿದರೆ ಸರಿಯಾಗಲಿದೆ ಎಂದು ಆರೋಪಿ ಹೇಳಿ ನಂಬಿಸಿದ್ದನು.

    ಜನವರಿ 2020ರಲ್ಲಿ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದಾಗಿ ತಿಳಿಸಿ ಕೋಲ್ಕತ್ತಾಗೆ ಹೋಗಿದ್ದರು. ಆದಾದ ಬಳಿಕ ಪುರುಷನಾಗಲು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ. ಆದರೆ ಶಸ್ತ್ರಚಿಕಿತ್ಸೆಯ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ. ಅಲ್ಲದೇ ತನ್ನೊಂದಿಗೆ “ಅಸ್ವಾಭಾವಿಕ ಲೈಂಗಿಕತೆ” (Unnatural Sex) ನಡೆಸಲು ಪ್ರಾರಂಭಿಸಿದನು. ಈ ಬಗ್ಗೆ ಎಲ್ಲದರೂ ಹೇಳಿದರೆ ಭಯಾನಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿರುವುದಾಗಿ ಮಹಿಳೆ ಪೊಲೀಸರಿಗೆ ಹೇಳಿದ್ದಾಳೆ.

    ಇದೀಗ ದೆಹಲಿಯ (Delhi) ನಿವಾಸಿಯಾಗಿರುವ ಆರೋಪಿಯನ್ನು ಬಂಧಿಸಿ ವಡೋದರಾಕ್ಕೆ ಕರೆತರಲಾಗಿದೆ ಎಂದು ಗೋತ್ರಿ ಪೊಲೀಸ್ ಇನ್ಸ್‌ಪೆಕ್ಟರ್ (Gotri police inspector) ಎಂಕೆ ಗುರ್ಜರ್(MK Gurjar) ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲವರ್ ಜೊತೆ ಪತ್ನಿಯ ಜಾಲಿ ರೈಡ್ – ಸ್ಕೂಟಿಯನ್ನು ಚೇಸ್ ಮಾಡಿ ಪ್ರಿಯಕರನಿಗೆ ಕಪಾಳಮೋಕ್ಷ ಮಾಡಿದ ಪತಿ

    ಲವರ್ ಜೊತೆ ಪತ್ನಿಯ ಜಾಲಿ ರೈಡ್ – ಸ್ಕೂಟಿಯನ್ನು ಚೇಸ್ ಮಾಡಿ ಪ್ರಿಯಕರನಿಗೆ ಕಪಾಳಮೋಕ್ಷ ಮಾಡಿದ ಪತಿ

    ಲಕ್ನೋ: ಪ್ರಿಯಕರನೊಂದಿಗೆ (Lover) ಓಡಾಡುತ್ತಿದ್ದ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪತಿಯೊಬ್ಬ (Husband) ನಡುರಸ್ತೆಯಲ್ಲಿ ಥಳಿಸಿರುವ ಘಟನೆ ಆಗ್ರಾದಲ್ಲಿ (Agra) ನಡೆದಿದೆ.

    ದಂಪತಿಗೆ ಮದುವೆಯಾಗಿ 10 ವರ್ಷಗಳಾಗಿದ್ದು, ಓರ್ವ ಮಗಳಿದ್ದಾಳೆ(Daughter). ಉದ್ಯಮಿಯೊಂದಿಗೆ(Businessman) ತನ್ನ ಹೆಂಡತಿ (Wife) ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ವಿಚಾರ ವ್ಯಕ್ತಿಗೆ ಮೊದಲೇ ತಿಳಿದಿತ್ತು. ಹೀಗಾಗಿ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಹೀಗಿದ್ದರೂ ಭಾನುವಾರ ಪತ್ನಿ ಯಾರಿಗೂ ತಿಳಿಸದೇ ಮನೆಯಿಂದ ಹೊರಗೆ ಹೋಗಿದ್ದಾಳೆ. ಅವಳನ್ನು ಹೇಗಾದರೂ ಕಂಡು ಹಿಡಿಯಲೇ ಬೇಕೆಂದು ನಿರ್ಧರಿಸಿ ವ್ಯಕ್ತಿ ತನ್ನ ಪುತ್ರಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹುಡುಕಾಟ ನಡೆಸಲು ಆರಂಭಿಸಿದ್ದಾನೆ.

    ಈ ವೇಳೆ ಕೈಲಾಸ ಮಂದಿರ ರಸ್ತೆಯ (Kailash Mandir Road) ಬಳಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಸ್ಕೂಟಿಯಲ್ಲಿ ತನ್ನ ಪತ್ನಿ ಹೋಗುತ್ತಿರುವುದನ್ನು ನೋಡಿ, ಗಾಡಿಯನ್ನು ಫಾಲೋವ್ ಮಾಡಿಕೊಂಡು ಹೋಗಿದ್ದಾನೆ. ಇನ್ನೂ ಈ ವೀಡಿಯೋವನ್ನು ವ್ಯಕ್ತಿ ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದುಕೊಂಡಿದ್ದಾನೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮೇಲ್ಜಾತಿಯ ಜನರಿಗೆ ಸೇರಿದ ಮಡಿಕೆಯಿಂದ ನೀರು ಕುಡಿದ ದಲಿತನ ಮೇಲೆ ಹಲ್ಲೆ

    ಈ ಪ್ರಕರಣದ ಮಧ್ಯೆ ಪೊಲೀಸರು ಎಂಟ್ರಿ ನೀಡುವುದಕ್ಕೂ ಮುನ್ನವೇ ವ್ಯಕ್ತಿ ಪತ್ನಿಯ ಪ್ರಿಯಕರನಿಗೆ(Lover) ಅಡ್ಡಹಾಕಿ ಕಪಾಳಮೋಕ್ಷ(Slapped) ಮಾಡಿದ್ದಾನೆ. ಇದೀಗ ಸಾರ್ವಜನಿಕ ಶಾಂತಿ (Public Peace) ಕದಡಿದ ಕಾರಣಕ್ಕಾಗಿ ಇಬ್ಬರಿಗೂ ದಂಡ ವಿಧಿಸಲಾಗಿದೆ. ಆದರೆ ಮಹಿಳೆ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನೂ ಓದಿ: ಸೆಮಿಕಂಡಕ್ಟರ್‌ ಘಟಕ ಸ್ಥಾಪನೆಗೆ ಕರ್ನಾಟಕವನ್ನು ಬಿಟ್ಟು ಗುಜರಾತ್‌ ಆಯ್ಕೆ ಮಾಡಿದ್ದು ಯಾಕೆ – ಪ್ರಶ್ನೆಗೆ ಉತ್ತರ ಕೊಟ್ಟ ವೇದಾಂತ ಕಂಪನಿ

    Live Tv
    [brid partner=56869869 player=32851 video=960834 autoplay=true]

  • ಮೂಲಂಗಿ ಮಾರಿ ಜೀವನ ನಡೆಸುತಿದ್ದ ಪತ್ನಿಯನ್ನ ಕುಡಿದ ಅಮಲಿನಲ್ಲಿ ಕೊಲೆ ಮಾಡಿದ ಪತಿ

    ಮೂಲಂಗಿ ಮಾರಿ ಜೀವನ ನಡೆಸುತಿದ್ದ ಪತ್ನಿಯನ್ನ ಕುಡಿದ ಅಮಲಿನಲ್ಲಿ ಕೊಲೆ ಮಾಡಿದ ಪತಿ

    ಧಾರವಾಡ: ಮೂಲಂಗಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಪತ್ನಿಯನ್ನು ಪತಿಯೇ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಧಾರವಾಡದಲ್ಲಿ(Dharwad) ನಡೆದಿದೆ.

    ನಗರದ ಕೋಳಿಕೇರಿ ತೋಟದಲ್ಲಿ ಈ ಕೊಲೆ ನಡೆದಿದ್ದು, ಮಂಜವ್ವ ಪಠಾದ್ (42) ಅವಳನ್ನು ಆಕೆಯ ಪತಿ ಗದಿಗೆಪ್ಪ ಕೊಲೆ ಮಾಡಿದ್ದಾನೆ. ಗದಿಗೆಪ್ಪ ಕುಡಿತದ ಚಟಕ್ಕೆ ಬಿದ್ದಿದ್ದ. ಈ ಹಿನ್ನೆಲೆ ಪತಿ(Husband) ಹಾಗೂ ಪತ್ನಿಯ(Wife) ನಡುವೆ ಆಗಾಗ ಜಗಳ ಆಗುತಿತ್ತು. ಕಳೆದ ರಾತ್ರಿ ಕೂಡಾ ಪತಿ, ಪತ್ನಿ ನಡುವೆ ಜಗಳ ಆಗಿತ್ತು. ಆದರೆ ಇಂದು ಮಂಜವ್ವ ಹೊಲದಲ್ಲಿ ಮೂಲಂಗಿ ತೊಳೆಯುವಾಗ ಗದಿಗೆಪ್ಪ ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಎಷ್ಟೇ ದೊಡ್ಡ ಹುಲಿ ಆದ್ರೂ, ಕಾನೂನಿಗೆ ಒಂದೇ – ಬಿಎಸ್‌ವೈಗೆ ಟಾಂಗ್ ನೀಡಿದ ಯತ್ನಾಳ್

    crime

    ಮಂಜವ್ವ ಪತಿ ಗದಿಗೆಪ್ಪ ಈ ಹಿಂದೆ ಕೂಡಾ ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಹೊಲದ ವಿಚಾರವಾಗಿ ಒಂದು ಕೊಲೆ ಮಾಡಿ ಜೈಲು ಸೇರಿದ್ದ. ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೇ ಈತ ಸೆರೆವಾಸ ಮುಗಿಸಿ ಜೈಲಿನಿಂದ ಹೊರ ಬಂದಿದ್ದ. ಅಲ್ಲದೇ ಮಂಜವ್ವಳ ಸಹೋದರಿ ಕೂಡಾ ಕೆಲ ವರ್ಷಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಸದ್ಯ ಶಹರ ಪೊಲೀಸ್ ಠಾಣೆ ಪೊಲೀಸರು ಮಂಜವ್ವಳ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ:  ಮುರುಘಾ ಮಠದಿಂದ ಇಬ್ಬರು ಬಾಲಕರು ನಾಪತ್ತೆ

    Live Tv
    [brid partner=56869869 player=32851 video=960834 autoplay=true]

  • ವಾಪಸ್ ಮನೆಗೆ ಬರ್ತಿಯೋ, ಇಲ್ಲವೋ ಅಂತ ತವರು ಸೇರಿದ ಪತ್ನಿ ಮೇಲೆ ಪತಿ ಫೈರಿಂಗ್!

    ವಾಪಸ್ ಮನೆಗೆ ಬರ್ತಿಯೋ, ಇಲ್ಲವೋ ಅಂತ ತವರು ಸೇರಿದ ಪತ್ನಿ ಮೇಲೆ ಪತಿ ಫೈರಿಂಗ್!

    ಚಿಕ್ಕೋಡಿ(ಬೆಳಗಾವಿ): ಗಂಡನ ಅನೈತಿಕ ಸಂಬಂಧ ಹಿನ್ನೆಲೆ ತವರು ಸೇರಿದ ಹೆಂಡತಿಗೆ ವಾಪಸ್ ಮನೆಗೆ ಬರ್ತಿಯೋ ಇಲ್ವೋ ಅಂತ ಕೇಳಿ ಗಂಡ (Husband) ರಿವಾಲ್ವರ್‍ನಿಂದ ಫೈರಿಂಗ್ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ (Athani) ಪಟ್ಟಣದಲ್ಲಿ ನಡೆದಿದೆ.

    ತವರು ಮನೆಗೆ ಬಂದು ಹೆಂಡತಿಯ ಮೇಲೆ ಗುಂಡು ಹಾರಿಸಿ ಕೊಲ್ಲುವುದಾಗಿ ಧಮ್ಕಿ ಹಾಕಿ ರಿವಾಲ್ವರ್‍ನಿಂದ ಫೈರಿಂಗ್ ಮಾಡಿದ ಶಿವಾನಂದ ಕಾಗಲೇ(40) ಈಗ ಅರೆಸ್ಟ್ (Arrest) ಆಗಿದ್ದಾನೆ. ಶಿವಾನಂದನ ಫೈರಿಂಗ್ ತಪ್ಪಿಸಿಕೊಂಡು ಪತ್ನಿ (Wife) ಪ್ರೀತಿ ಪ್ರಾಣ ಉಳಿಸಿಕೊಂಡಿದ್ದಾಳೆ.

    ಶಿವಾನಂದ್ ಹಾಗೂ ಪ್ರೀತಿ ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇದೀಗ ಶಿವಾನಂದ್ ಪರಸ್ತ್ರೀ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದನ್ನು ಪ್ರಶ್ನೆ ಮಾಡಿ ಪ್ರೀತಿ ತವರು ಮನೆ ಸೇರಿದ್ದಳು. ಬೆಳಗಾವಿ ಜಿಲ್ಲೆಯ ಅಥಣಿಗೆ ಬಂದು ತನ್ನ ತಾಯಿಯೊಂದಿಗೆ ವಾಸವಿದ್ದಳು.  ಇದನ್ನೂ ಓದಿ: ಪಾಕ್‌ ಜೈಲಿನಲ್ಲಿ ಮೃತಪಟ್ಟಿದ್ದ ಸರಬ್ಜಿತ್‌ ಸಿಂಗ್‌ ಪತ್ನಿ ರಸ್ತೆ ಅಪಘಾತದಲ್ಲಿ ಸಾವು

    POLICE JEEP

    ನೀನು ಮನೆಗೆ ಬರಲೇಬೇಕು ಅಂತ ಲೈಸೆನ್ಸ್ ಡ್ ರಿವಾಲ್ವಾರ್ ಜೊತೆಗೆ ಮನೆಗೆ ಬಂದಿದ್ದ ಶಿವಾನಂದ್, ಎರಡು ಬಾರಿ ಗುಂಡು ಹಾರಿಸಿ ನಾಲ್ಕು ಗುಂಡು ಬಾಕಿ ಇಟ್ಟುಕೊಂಡಿದ್ದ. ಮನೆಗೆ ಬರಲಿಲ್ಲವೆಂದರೆ ಎರಡು ಗುಂಡು ನಿನಗೆ ಹಾರಿಸಿ ಎರಡು ಗುಂಡು ನಾನು ಹಾರಿಸಿಕೊಳ್ತೀನಿ ಅಂತ ಧಮ್ಕಿ ಹಾಕಿದ್ದ. ಇಬ್ಬರೂ ಸೇರಿ ಸತ್ತು ಹೋಗೊಣ ಎಂದು ಹೆಂಡತಿಗೆ ಧಮ್ಕಿ ಹಾಕಿದ್ದ ಭೂಪನ ವಿರುದ್ಧ ಪತ್ನಿ ನೀಡಿದ್ದಾರೆ. ಇದೀಗ ಈ ದೂರಿನನ್ವಯ ಶಿವಾನಂದ್ ನನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.

    ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಗಂಡ- ಹೆಂಡತಿ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯ!

    ಗಂಡ- ಹೆಂಡತಿ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯ!

    ಶಿವಮೊಗ್ಗ: ಗಂಡ- ಹೆಂಡತಿ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಮೃತಳನ್ನು ಮಂಜುಳಾ (30) ಎಂದು ಗುರುತಿಸಲಾಗಿದೆ. ಶಿವಮೊಗ್ಗ(Shivamogga) ದ ಪ್ರಿಯಾಂಕ ಲೇಔಟ್ (Priyanka Layout) ನಲ್ಲಿ ಈ ಘಟನೆ ನಡೆದಿದ್ದು, ಚಾಕುವಿನಿಂದ ಕತ್ತು ಕೊಯ್ದ ಸ್ಥಿತಿಯಲ್ಲಿ ಮಂಜುಳಾ ಮೃತದೇಹ ಪತ್ತೆಯಾಗಿದೆ.

    ಇತ್ತ ಪತ್ನಿ ಕೊಲೆ ಬಳಿಕ ಪತಿ ದಿನೇಶ್ ಕೂಡ ಚಾಕುವಿನಿಂದ ತನ್ನ ಕೈ ಕೊಯ್ದುಕೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಸಂಬಂಧ ಸ್ಥಳೀಯರು, ಮಂಗಳವಾರ ರಾತ್ರಿ ಗಂಡ-ಹೆಂಡತಿ ನಡುವೆ ಜಗಳ ನಡೆದಿದೆ ಎಂದು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಸದ್ಯ ಪ್ರಕರಣ ಸಂಬಂಧ ಮಹಿಳೆಯೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ್ರಾ..? ಅಥವಾ ಕೊಲೆಯೇ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ. ಸ್ಥಳಕ್ಕೆ ತುಂಗಾನಗರ ಠಾಣೆ (TungaNagar Police Station) ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಈ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಊಟಕ್ಕೆ ಬಿರಿಯಾನಿ ಮಾಡಿಲ್ಲ ಅಂತ ಪತ್ನಿಯನ್ನೇ ಇರಿದ ಪತಿ

    ಊಟಕ್ಕೆ ಬಿರಿಯಾನಿ ಮಾಡಿಲ್ಲ ಅಂತ ಪತ್ನಿಯನ್ನೇ ಇರಿದ ಪತಿ

    ಮುಂಬೈ: ರಾತ್ರಿ ಊಟಕ್ಕೆ ಬಿರಿಯಾನಿ ಮಾಡಿಲ್ಲ ಎಂಬ ಕಾರಣಕ್ಕೆ ಕುಡಿದ ನಶೆಯಲ್ಲಿದ್ದ ಪತಿರಾಯ ಪತ್ನಿಯನ್ನೇ ಚಾಕುವಿನಿಂದ ಇರಿದಿರುವ ಘಟನೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ನಡೆದಿದೆ.

    ಆಗಸ್ಟ್ 31ರಂದು ರಾತ್ರಿ ವ್ಯಕ್ತಿ ಕುಡಿದ ಅಮಲಿನಲ್ಲಿ ಮನೆಗೆ ಬಂದು, ಊಟಕ್ಕೆ ಬಿರಿಯಾನಿ ಮಾಡದೇ ಇದ್ದುದಕ್ಕೆ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಬಳಿಕ ಕುಟುಂಬದ ಇತರ ಸದಸ್ಯರು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗಲೂ ಆತ ತನ್ನ ಹೆಂಡತಿಗೆ ಥಳಿಸಿದ್ದಾನೆ. ಬಳಿಕ ಚಾಕು ತೆಗೆದುಕೊಂಡು ಆಕೆಗೆ ಇರಿದಿದ್ದಾನೆ. ಇದನ್ನೂ ಓದಿ: ಚೀನಾ ಭೂಕಂಪ – ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ವೀಡಿಯೋಗಳು

    POLICE JEEP

    ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಆರೋಪಿ ವಿಕ್ರಂ ವಿನಾಯಕ್ ದೇಡೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಇದುವರೆಗೂ ಆತನನ್ನು ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭೀಮಾತೀರದಲ್ಲಿ ಮತ್ತೆ ರಕ್ತಪಾತ – ಅಣ್ಣನನ್ನೇ ಬರ್ಬರವಾಗಿ ಹತ್ಯೆಗೈದ ತಮ್ಮ

    Live Tv
    [brid partner=56869869 player=32851 video=960834 autoplay=true]

  • ಮಿಮ್ಸ್ ಸಿಬ್ಬಂದಿ ಎಡವಟ್ಟು- ಗ್ಯಾಂಗ್ರಿನ್ ರೋಗಿಯ ಕಾಲು ಕತ್ತರಿಸಿ ಪತ್ನಿ ಕೈಗಿಟ್ಟ ಸಿಬ್ಬಂದಿ

    ಮಿಮ್ಸ್ ಸಿಬ್ಬಂದಿ ಎಡವಟ್ಟು- ಗ್ಯಾಂಗ್ರಿನ್ ರೋಗಿಯ ಕಾಲು ಕತ್ತರಿಸಿ ಪತ್ನಿ ಕೈಗಿಟ್ಟ ಸಿಬ್ಬಂದಿ

    ಮಂಡ್ಯ: ಮಂಡ್ಯದ ಆಸ್ಪತ್ರೆ ಸಿಬ್ಬಂದಿಯಿಂದ ಮತ್ತೊಂದು ಎಡವಟ್ಟಾಗಿದ್ದು, ಗ್ಯಾಂಗ್ರಿನ್ ರೋಗಿಗೆ ಶಸ್ತ್ರ ಚಿಕಿತ್ಸೆ ಮಾಡಿದ ನಂತರ ಕತ್ತರಿಸಿದ ಕಾಲನ್ನು ಪತ್ನಿಗೆ ಹಸ್ತಾಂತರ ಮಾಡಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

    ಪದೇ ಪದೇ ವಿವಾದಗಳ ಕೇಂದ್ರ ಬಿಂದು ಆಗುತ್ತಿರುವ ಮಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಈ ಎಡವಟ್ಟು ಮಾಡಿದ್ದಾರೆ. ಮಂಡ್ಯದ ಕೀಲಾರ ಗ್ರಾಮದ ಭಾಗ್ಯಮ್ಮನ ಪತಿ ಪ್ರಕಾಶ್ ಗ್ಯಾಂಗ್ರಿನ್ ಖಾಯಿಲೆಗೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಕಾಶ್ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪ್ರಕಾಶ್‍ಗೆ ಆಸ್ಪತ್ರೆಯವರು ಕಳೆದ ಮೂರು, ನಾಲ್ಕು ದಿನಗಳಿಂದ ಚಿಕಿತ್ಸೆ ನೀಡುತ್ತಿದ್ದು, ಇಂದು ಶಸ್ತ್ರಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಪ್ರಕಾಶನ ಕಾಲು ಕತ್ತರಿಸಿದ್ದಾರೆ.

    ಶಸ್ತ್ರ ಚಿಕಿತ್ಸೆ ಮುಗಿದ ಬಳಿಕ ಸಿಬ್ಬಂದಿಯು ಕತ್ತರಿಸಿದ ಕಾಲನ್ನು ಪತ್ನಿ ಭಾಗ್ಯಮ್ಮನ ಕೈಗೆ ನೀಡಿ ಎಡವಟ್ಟು ಮಾಡಿದ್ದಾರೆ. ಅಷ್ಟೇ ಅಲ್ಲದೇ ಕತ್ತರಿಸಿದ ಕಾಲನ್ನು ಎಲ್ಲಾದರೂ ಮಣ್ಣು ಮಾಡುವಂತೆ ಭಾಗ್ಯಮ್ಮನಿಗೆ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದಾಗಿ ದಿಕ್ಕು ತೋಚದೆ ತಬ್ಬಿಬ್ಬಾದ ಭಾಗ್ಯಮ್ಮ, ಗಂಡನ ಕಾಲನ್ನು ಹಿಡಿದು ಆಸ್ಪತ್ರೆ ಬಳಿ ಅಳುತ್ತಾ ನಿಂತಿದ್ದರು. ಇದನ್ನೂ ಓದಿ: ರಸ್ತೆ ಕಾಂಕ್ರೀಟಿಕರಣ ತಡೆದ ಮಹಿಳೆ – ಛತ್ರಿಯ ಹಿಡಿಯಲ್ಲಿ ತಲೆ ಒಡೆದ ಪಂಚಾಯಿತಿ ಸದಸ್ಯ

    ಘಟನೆಗೆ ಸಂಬಂಧಿಸಿ ಭಾಗ್ಯಮ್ಮ ಮಾತನಾಡಿ, ತಾವೇ ಮಣ್ಣು ಮಾಡಲು ಮಿಮ್ಸ್ ಆಸ್ಪತ್ರೆಯವರು ಸಾವಿರಾರು ರೂಪಾಯಿ ಹಣ ಕೇಳಿದ್ದಾರೆ ಆರೋಪಿಸಿದ್ದಾರೆ. ಒಟ್ಟಾರೆಯಾಗಿ ಮಿಮ್ಸ್ ಸಿಬ್ಬಂದಿ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: SC-ST ಗ್ರಾಹಕರಿಗೆ ಉಚಿತ ವಿದ್ಯುತ್‌ ಅನುಷ್ಠಾನಕ್ಕೆ ಹೊಸ ಆ್ಯಪ್‌

    Live Tv
    [brid partner=56869869 player=32851 video=960834 autoplay=true]

  • ಪತ್ನಿಯನ್ನೇ ಬರ್ಬರವಾಗಿ ಕೊಚ್ಚಿ ಕೊಂದ ಪತಿರಾಯ – ಕಾರಣ ಮಾತ್ರ ಸಸ್ಪೆನ್ಸ್

    ಪತ್ನಿಯನ್ನೇ ಬರ್ಬರವಾಗಿ ಕೊಚ್ಚಿ ಕೊಂದ ಪತಿರಾಯ – ಕಾರಣ ಮಾತ್ರ ಸಸ್ಪೆನ್ಸ್

    ಹಾಸನ: ಪತಿಯೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಇಂದ್ರಮ್ಮ (48) ಕೊಲೆಯಾದ ಮಹಿಳೆಯಾಗಿದ್ದು, ಚಂದ್ರಯ್ಯ ಪತ್ನಿಯನ್ನೇ ಕೊಲೆ ಮಾಡಿ ಎಸ್ಕೇಪ್ ಆಗಿರುವ ಆರೋಪಿ. ಇಂದು ಬೆಳಗ್ಗೆ ಇಂದ್ರಮ್ಮ ನಾಲ್ವರ ಜೊತೆ ಕೇಶವಮೂರ್ತಿ ಅವರ ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಮಾರಕಾಸ್ತ್ರ ಹಿಡಿದು ಏಕಾಏಕಿ ದಾಳಿ ಮಾಡಿದ ಚಂದ್ರಯ್ಯ ತನ್ನ ಪತ್ನಿಯನ್ನು ಮನಸ್ಸೋ ಇಚ್ಚೆ ಕೊಚ್ಚಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: 10 ಕೋಟಿಗೆ ಒಂದು ವಿಲ್ಲಾ – ಮಳೆಗೆ ನಿವಾಸಿಗಳು ವಿಲವಿಲ

    POLICE JEEP

    ಈ ವೇಳೆ ಇಂದ್ರಮ್ಮನ ಜೊತೆಗಿದ್ದ ಮಹಿಳೆಯೊಬ್ಬರು ಕಾಪಾಡಲು ಮುಂದಾದಾಗ ಆ ಮಹಿಳೆಯ ಮೇಲು ಚಂದ್ರಯ್ಯ ಹಲ್ಲೆ ಮಾಡಿದ್ದಾನೆ. ಚಂದ್ರಯ್ಯ-ಇಂದ್ರಮ್ಮನ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಆರು ತಿಂಗಳ ಹಿಂದೆಯು ಇಂದ್ರಮ್ಮನನ್ನು ನೇಣು ಹಾಕಿ ಕೊಲ್ಲಲು ಚಂದ್ರಯ್ಯ ಯತ್ನಿಸಿದ್ದ ಎನ್ನಲಾಗಿದೆ. ಇದನ್ನೂ ಓದಿ: ನಿಮ್ಮ ಸರ್ಕಾರದಲ್ಲಿ ದಿಂಬು, ಚೆಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರ ನೆನಪಿಸಿಕೊಳ್ಳಿ- ಸಿದ್ದುಗೆ ಸುನಿಲ್ ತಿರುಗೇಟು

    ಕಳೆದ ರಾತ್ರಿ ಕಂಠಪೂರ್ತಿ ಕುಡಿದು ಬಂದಿದ್ದ ಚಂದ್ರಯ್ಯ ಪತ್ನಿ ಜೊತೆ ಜಗಳವಾಡಿದ್ದ. ಈ ವೇಳೆ ಚಂದ್ರೇಗೌಡ-ಇಂದ್ರಮ್ಮ ಪುತ್ರ ಚೀಕನಹಳ್ಳಿ ಗ್ರಾ.ಪಂ. ಸದಸ್ಯ ಪ್ರದೀಪ್ ಜಗಳ ಬಿಡಿಸಿ ಇಬ್ಬರಿಗೂ ಬುದ್ದಿ ಹೇಳಿದ್ದರು. ಇದೀಗ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ಈ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಯುವಕ ಮರ್ಡರ್

    ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಯುವಕ ಮರ್ಡರ್

    ಯಾದಗಿರಿ: ಪತ್ನಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಯಾದಗಿರಿ ತಾಲೂಕಿನ ಕಡೇಚೂರ್ ಬಳಿ ನಡೆದಿದೆ.

    ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗ್ರಾಮದ ಯಲಸತ್ತಿ ಗ್ರಾಮದ ಸಿದ್ದಪ್ಪ (25) ಕೊಲೆಯಾದ ಯುವಕನಾಗಿದ್ದು, ಆರೋಪಿಯನ್ನು ನಾಗರಾಜ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಪತ್ನಿ ಜೊತೆ ಕಳೆದ ಎರಡು ವರ್ಷಗಳಿಂದ ಸಿದ್ದಪ್ಪ ಅನೈತಿಕ ಸಂಬಂಧ ಹೊಂದಿದ್ದನು. ಇದನ್ನೂ ಓದಿ: ಸಿಇಟಿ ರ್‍ಯಾಂಕ್ ರದ್ದು- ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ

    ಈ ವಿಚಾರ ತಿಳಿದು ನಾಗರಾಜ್ ಬಡಿಗೆಯಿಂದ ಹೊಡೆದು ಸಿದ್ದಪ್ಪನನ್ನ ಕೊಲೆ ಮಾಡಿದ್ದಾನೆ. ಇದೀಗ ಈ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುಂದೂಡಲಾಗಿದ್ದ ಜನೋತ್ಸವ ಕಾರ್ಯಕ್ರಮ ಇದೇ 8 ರಂದು ನಡೆಯಲಿದೆ: ವೇಣುಗೋಪಾಲ್

    Live Tv
    [brid partner=56869869 player=32851 video=960834 autoplay=true]

  • ಗಂಡನನ್ನೇ ಹತ್ಯೆಗೈದು ನವರಂಗಿ ಆಟವಾಡಿದ್ದ ಪತ್ನಿ, ಪ್ರಿಯಕರ ಅರೆಸ್ಟ್

    ಗಂಡನನ್ನೇ ಹತ್ಯೆಗೈದು ನವರಂಗಿ ಆಟವಾಡಿದ್ದ ಪತ್ನಿ, ಪ್ರಿಯಕರ ಅರೆಸ್ಟ್

    ಬೆಂಗಳೂರು: ತಾಳಿ ಕಟ್ಟಿದ ಪತಿಯನ್ನೇ ಹತ್ಯೆಗೈದು ಮೂರ್ಛೆರೋಗದ ಕಥೆ ಕಟ್ಟಿದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತ ವ್ಯಕ್ತಿಯನ್ನು ಮಹೇಶ್ ಎಂದು ಗುರುತಿಸಲಾಗಿದ್ದು, ಹೆಂಡತಿ ಶಿಲ್ಪಾ ಹಾಗೂ ಆಕೆಯ ಪ್ರಿಯಕರ ಆರೋಪಿಗಳಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಮಹೇಶ್ ಅನ್ನು ಆರೋಪಿಗಳು ಕೊಲೆ ಮಾಡಿದ್ದರು. ನಂತರ ಮಂಡ್ಯಕ್ಕೆ ಮಹೇಶ್ ಶವವನ್ನು ತೆಗೆದುಕೊಂಡು ಹೋಗಿ ಮೂರ್ಛೆರೋಗ ಬಂದು ಸಾವನ್ನಪ್ಪಿದ್ದಾರೆ ಎಂದು ಪತ್ನಿ ಶಿಲ್ಪಾ ಕಥೆ ಕಟ್ಟಿದ್ದಳು. ಈ ಬಗ್ಗೆ ಅನುಮಾನಗೊಂಡು ಪೋಷಕರು ಮಹೇಶ್ ಮೃತ ದೇಹವನ್ನು ಪರಿಶೀಲನೆ ನಡೆಸಿದಾಗ ದೇಹದಲ್ಲಿ ಗಾಯಗಳು ಗುರುತು ಪತ್ತೆಯಾಗಿದೆ. ಈ ಕುರಿತಂತೆ ಕೂಡಲೇ ಮಂಡ್ಯ ಪೊಲೀಸರಿಗೆ ಪೋಷಕರು ಮಾಹಿತಿ ನೀಡಿದ್ದರು. ಇದನ್ನೂ ಓದಿ: ಅನ್ಯಧರ್ಮದ ಹುಡುಗಿಯೊಂದಿಗೆ ಪ್ರೇಮ – ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

    ನಂತರ ಮಂಡ್ಯ ಪೊಲೀಸರು ಮರಣೋತ್ತರ ಪರೀಕ್ಷೆಯನ್ನು ಮಾಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಹೇಶ್ ಕೊಲೆಯಾಗಿರುವುದು ದೃಢಪಟ್ಟಿದೆ. ನಂತರ ಈ ಸಂಬಂಧ ಮಂಡ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಕೋಣಗುಂಟೆ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಸದ್ಯ ಕೋಣನಕುಂಟೆ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೈಕೋರ್ಟ್‌ನಿಂದ ಸಿಇಟಿ ರ‍್ಯಾಂಕ್‌ ರದ್ದು- ಮೇಲ್ಮನವಿ ಸಲ್ಲಿಸುತ್ತಾ ಸರ್ಕಾರ?

    ಬೆಂಗಳೂರಿನ ಶಿಲ್ಪಾಳನ್ನು ಮಹೇಶ್ ಅವರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ಬಳಿಕ ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಮಹೇಶ್ ದಂಪತಿ ವಾಸವಾಗಿದ್ದರು.

    Live Tv
    [brid partner=56869869 player=32851 video=960834 autoplay=true]