Tag: ಪತಿ

  • ರಾಯಚೂರಿನಲ್ಲಿ ಪತ್ಯೇಕ ಎರಡು ಕೊಲೆ – ಬನ್ನಿ ಕೊಡುವ ನೆಪದಲ್ಲಿ ಪಿಡಿಓ ಹತ್ಯೆ

    ರಾಯಚೂರಿನಲ್ಲಿ ಪತ್ಯೇಕ ಎರಡು ಕೊಲೆ – ಬನ್ನಿ ಕೊಡುವ ನೆಪದಲ್ಲಿ ಪಿಡಿಓ ಹತ್ಯೆ

    ರಾಯಚೂರು: ಜಿಲ್ಲೆಯಲ್ಲಿ ಇಂದು ಎರಡು ಪ್ರತ್ಯೇಕ ಕೊಲೆ ಪ್ರಕರಣಗಳು ನಡೆದಿವೆ. ಜಿಲ್ಲೆಯ ಲಿಂಗಸುಗೂರಿನ ಹೊರವಲಯದ ಸೀಮೆ ಈರಣ್ಣ ದೇವಸ್ಥಾನದ ಬಳಿ ಬೆಳ್ಳಂಬೆಳಿಗ್ಗೆ ಬನ್ನಿ ಕೊಡುವ ನೆಪದಲ್ಲಿ ಬಂದು ಪಿಡಿಓ ಗಜದಂಡಯ್ಯ ಸ್ವಾಮಿಯನ್ನು ಕೊಲೆ ಮಾಡಲಾಗಿದೆ.

    ದಾರಿ ಮಧ್ಯದಲ್ಲಿ ಬೈಕ್ ನಿಲ್ಲಿಸಿ ಅದರ ಮೇಲೆ ಹೆಲ್ಮೆಟ್ ಇಟ್ಟು ಚಪ್ಪಲಿ ಬಿಟ್ಟಿರುವ ಪಿಡಿಓ ಶವ ದೂರದಲ್ಲಿ ಪತ್ತೆಯಾಗಿದೆ. ಕೋಠಾ ಗ್ರಾಮ ಪಂಚಾಯತಿ ಪಿಡಿಓ ಗಜದಂಡಯ್ಯ ಸ್ವಾಮಿ ಕೊಲೆಯಾಗಿದ್ದು, ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ವೈಯಕ್ತಿಕ ಕಾರಣಕ್ಕೆ ಕೊಲೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಲಿಂಗಸುಗೂರು ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಥಾಯ್ಲೆಂಡ್‌ ಡೇ ಕೇರ್‌ ಸೆಂಟರ್‌ನಲ್ಲಿ ಮಕ್ಕಳ ಮಾರಣಹೋಮ – 34 ಮಂದಿಯನ್ನು ಹತ್ಯೆಗೈದ ಪಾಪಿ

    CRIME 2

    ಮತ್ತೊಂದೆಡೆ ಸಿರವಾರ (Sirwar) ತಾಲೂಕಿನ ಮಲ್ಲಟ ಗ್ರಾಮದಲ್ಲಿ ರಾತ್ರಿ ಮಲಗಿದ್ದ ವೇಳೆ ವ್ಯಕ್ತಿಯೊಬ್ಬರ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತ ವ್ಯಕ್ತಿಯನ್ನು ಬಸವರಾಜ್ (34) ಎಂದು ಗುರುತಿಸಲಾಗಿದೆ. ಬಸವರಾಜ್‍ನ ಕುತ್ತಿಗೆ ಭಾಗಕ್ಕೆ ಚಾಕು ಇರಿದು ಕೊಲೆ ಮಾಡಲಾಗಿದೆ. ಪತ್ನಿಯ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

    ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿರವಾರ ಪೊಲೀಸರು ಕೊಲೆಯಾದ ಬಸವರಾಜ್‍ನ ಪತ್ನಿ ಲಕ್ಷ್ಮಿ ಹಾಗೂ ಸಂಬಂಧಿ ಶಿವರಾಜ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಣ್ಣನ ಜೊತೆಗೆ ಗಾಳಿಪಟ ಹಾರಿಸುವಾಗ ಬಿಲ್ಡಿಂಗ್ ಮೇಲಿಂದ ಬಿದ್ದು ತಮ್ಮ ಸಾವು

    Live Tv
    [brid partner=56869869 player=32851 video=960834 autoplay=true]

  • ತಾನು ಎರಡನೇ ಪತ್ನಿ ಅಂತಾ ಗೊತ್ತಾಗ್ತಿದ್ದಂತೆಯೇ ಮುಂಜಾನೆ ನೇಣಿಗೆ ಶರಣಾದ ನವವಧು!

    ತಾನು ಎರಡನೇ ಪತ್ನಿ ಅಂತಾ ಗೊತ್ತಾಗ್ತಿದ್ದಂತೆಯೇ ಮುಂಜಾನೆ ನೇಣಿಗೆ ಶರಣಾದ ನವವಧು!

    ಬೆಂಗಳೂರು: ಮದುವೆ ಅನ್ನೋದು ಒಂದು ಮಧುರ ಅನುಬಂಧ. ಅಲ್ಲದೆ ಇದು ಜೀವನದ ಒಂದು ಮುಖ್ಯವಾದ ಘಟ್ಟವೂ ಹೌದು. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ನೆಪದಲ್ಲಿ ಹಲವು ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತವೆ. ಅಂತೆಯೇ ಸಿಲಿಕಾನ್ ಸಿಟಿಯಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಪತಿಗೆ ತಾನು ಎರಡನೇ ಪತ್ನಿ ಎಂದು ಗೊತ್ತಾಗಿ ನವವಧು ನೇಣಿಗೆ ಕೊರಳೊಡ್ಡಿದ್ದಾಳೆ.

    ಈ ಘಟನೆ ಬೆಂಗಳೂರಿನ ಮಾತರಹಳ್ಳಿಯ ಕಾವೇರಿ ಲೇಔಟ್‍ (Kaveri Layout) ನಲ್ಲಿ ನಡೆದಿದೆ. ನವಧುವನ್ನು ಗೌತಮಿ (24) ಎಂದು ಗುರುತಿಸಲಾಗಿದೆ. ಮಂಗಳವಾರ ಮುಂಜಾನೆ 4 ಗಂಟೆಯ ಒಳಗಡೆ ಗೌತಮಿ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಾಢನಿದ್ರೆಯಲ್ಲಿದ್ದ ಪತಿ ಪ್ರಸಾದ್ ರೆಡ್ಡಿ ಬೆಳಗ್ಗಿನ ಜಾವ ಕಣ್ಣು ಬಿಟ್ಟಾಗ ಗೌತಮಿ ಫ್ಯಾನಿನಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ.

    ಘಟನೆ ಸಂಬಂಧ ಗೌತಮಿ ತಂದೆ ಬಾನು ನೀಡಿದ ದೂರಿನನ್ವಯ ಮಾರತಹಳ್ಳಿ ಪೊಲೀಸರು (Marathahalli Police Station) ಪತಿ ಪ್ರಸಾದ್ ಹಾಗೂ ಆತನ ಮೊದಲ ಪತ್ನಿ ಆಯಿಷಾ ಬಾನು ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೌತಮಿ ಬಿಕಾಂ (Bcom) ಓದಿದ್ದು, ಆಂಧ್ರಪ್ರದೇಶ (Andhrapradesh) ದ ಪುಂಗನೂರಿನಲ್ಲಿ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದಳು. ಈ ಸಂದರ್ಭದಲ್ಲಿ ಈಕೆಗೆ ಪ್ರಸಾದ್ ಮೇಲೆ ಲವ್ (Love) ಆಗಿದೆ. ಪರಿಣಾಮ ಆಕೆ ಅವನ ಜೊತೆ ಓಡಿ ಹೋಗಿದ್ದಾಳೆ. ಬಳಿಕ 2022ರ ಮಾರ್ಚ್ 19ರಂದು ಇಬ್ಬರೂ ದಾಂಪತ್ಯ ಜೀವನಕ್ಕೆ (Gouthami- Prasad Reddy)Marriage) ಕಾಲಿಟ್ಟಿದ್ದಾರೆ.

    ಇತ್ತ ಮಗಳು ಓಡಿ ಹೋದ ಸಂದರ್ಭದಲ್ಲಿ ಮಗಳು ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದರು. ಆದರೆ ಆಕೆ ಪೊಲೀಸರ ಮುಂದೆ ಹಾಜರಾಗಿ ತಾನು ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದಳು. ನಂತರ ದಂಪತಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ನೈತಿಕ ಪೊಲೀಸ್ ಗಿರಿ- ಹಿಂದೂ ಯುವಕನ ಜೊತೆಗಿದ್ದ ಅನ್ಯಧರ್ಮದ ಯುವತಿ ಮೇಲೆ ಹಲ್ಲೆ

    ಪ್ರಸಾದ್ ಹಾಗೂ ಬಾನುಗೆ ಈಗಾಗಲೇ ಓರ್ವ ಮಗಳಿರುವುದಾಗಿ ಗೌತಮಿಗೆ ಗೊತ್ತಾಗಿದೆ. ಮಂಗಳವಾರ ತಂದೆ ಬಾಬುಗೆ ಕರೆ ಮಾಡಿದ ಗೌತಮಿ, ಬಾನು ಮನೆಗೆ ಬಂದಿರುವುದಾಗಿ ತಿಳಿಸಿದ್ದಾಳೆ. ಅಲ್ಲದೆ ತಾನು ಬಾನು ಯಾಕೆ ಮನೆಗೆ ಬರುವುದು ಎಂದು ಪ್ರಶ್ನೆ ಮಾಡಿದೆ. ಈ ವೇಳೆ ಇಬ್ಬರೂ ಸೇರಿ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಕಿರುಕುಳ ನೀಡಿದ್ದಾರೆ ಎಂದು ಗೌತಮಿ ಹೇಳಿಕೊಂಡಿರುವುದಾಗಿ ಬಾಬು ಪೊಲೀಸರಿಗೆ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೀನು ಕಪ್ಪಗಿದ್ದೀಯಾ ಅಂತ ರೇಗಿಸಿದ್ದಕ್ಕೆ ಪತಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಪತ್ನಿ

    ನೀನು ಕಪ್ಪಗಿದ್ದೀಯಾ ಅಂತ ರೇಗಿಸಿದ್ದಕ್ಕೆ ಪತಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಪತ್ನಿ

    ಚಂಡೀಗಢ: ನೀನು ನೋಡಲು ಕಪ್ಪಾಗಿದ್ಯಾ, ನಿನ್ನ ಮೈ ಬಣ್ಣ ಕಪ್ಪು ಎಂದು ಪ್ರತಿನಿತ್ಯ ಹೀಯಾಳಿಸುತ್ತಿದ್ದ ಪತಿಯನ್ನು ಪತ್ನಿ ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿರುವ ಘಟನೆ ಛತ್ತೀಸ್‍ಗಢದ (Chhattisgarh) ದುರ್ಗ್ (Durg) ಜಿಲ್ಲೆಯಲ್ಲಿ ನಡೆದಿದೆ.

    ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಅನಂತ್ ಸೋನ್ವಾನಿ ಮೃತ ವ್ಯಕ್ತಿಯಾಗಿದ್ದಾರೆ ಮತ್ತು ಆರೋಪಿ ಪತ್ನಿಯನ್ನು ಸಂಗೀತಾ ಸೋನ್ವಾನಿ ಎಂದು ಗುರುತಿಸಲಾಗಿದೆ. ಸೋಮವಾರ ಸಂಗೀತಾಳನ್ನು ಬಂಧಿಸಿರುವುದಾಗಿ ಪೊಲೀಸ್ ಉಪವಿಭಾಗಾಧಿಕಾರಿ (ಪಟಾನ್ ಪ್ರದೇಶ) ದೇವಾಂಶ್ ರಾಥೋಡ್ ತಿಳಿಸಿದ್ದಾರೆ. ಇದನ್ನೂ ಓದಿ : ಪ್ರಧಾನಿ ಭೇಟಿ ಬಚಾವೋ ಅಂದ್ರೆ, ಬಿಜೆಪಿಯವರು ರೇಪಿಸ್ಟ್‌ಗಳನ್ನು ಬಚಾವ್ ಮಾಡ್ತಿದ್ದಾರೆ: ರಾಹುಲ್ ಗಾಂಧಿ

    ಈ ಸಂಬಂಧ ವಿಚಾರಣೆ ವೇಳೆ ಅನಂತ್ ನನ್ನನ್ನು ಯಾವಾಗಲೂ ಕೊಳಕಿ ಎಂದು ರೇಗಿಸುತ್ತಿದ್ದ ಮತ್ತು ಕಪ್ಪು ಮೈ ಬಣ್ಣ ಹೊಂದಿರುವ ಕಾರಣ ಆಗಾಗ ನಿಂದಿಸುತ್ತಿದ್ದ. ಇದೇ ವಿಚಾರವಾಗಿ ಹಲವಾರು ಬಾರಿ ನಮ್ಮಿಬ್ಬರ ನಡುವೆ ಜಗಳ ಕೂಡ ನಡೆದಿತ್ತು. ಭಾನುವಾರ ರಾತ್ರಿ ಮತ್ತೆ ಇದೇ ವಿಚಾರವಾಗಿ ಜಗಳ ನಡೆದಿತ್ತು. ಈ ವೇಳೆ ಕೋಪದಿಂದ ಮನೆಯಲ್ಲಿದ್ದ ಕೊಡಲಿಯಿಂದ ನನ್ನ ಪತಿಯ ಮೇಲೆ ಹಲ್ಲೆ ನಡೆಸಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ನನ್ನ ಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದರು ಎಂದು ಆರೋಪಿ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.

    ಮರುದಿನ ಬೆಳಗ್ಗೆ ತನ್ನ ಪತಿಯನ್ನು ಯಾರೋ ಕೊಂದಿದ್ದಾರೆ ಎಂದು ಗ್ರಾಮಸ್ಥರ ಮುಂದೆ ಹೈಡ್ರಾಮಾ ಮಾಡಿದ್ದಾಳೆ. ಆದರೆ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾಳೆ. ಅಲ್ಲದೇ ಪತಿಯ ಗುಪ್ತಾಂಗವನ್ನು ಸಹ ಕತ್ತರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ : ಶಾಂತಿ ಭಂಗ, ಅಕ್ರಮಕೂಟ ಆರೋಪದಡಿ 7 ಮಂದಿ PFI ಮುಖಂಡರು ಅರೆಸ್ಟ್ – 14 ದಿನ ನ್ಯಾಯಾಂಗ ಬಂಧನ

    ಅನಂತ್ ಸೋನ್ವಾನಿ ತನ್ನ ಮೊದಲ ಪತ್ನಿ ಸಾವಿನ ನಂತರ ಸಂಗೀತಾ ಸೋನ್ವಾನಿಯನ್ನು ಮದುವೆಯಾಗಿದ್ದನು. ಇದೀಗ ಮಹಿಳೆಯ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು ಇತರ ಸಂಬಂಧಿತ ಕಾಯಿದೆಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಮತ್ತು ಈ ಘಟನೆ ಸಂಬಂಧ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತಿಯ ಅನುಮತಿಯಿಲ್ಲದೇ ಪತ್ನಿ ಗರ್ಭಪಾತ ಮಾಡಿಸಿಕೊಳ್ಳಬಹುದು – ಕೇರಳ ಹೈಕೋರ್ಟ್

    ಪತಿಯ ಅನುಮತಿಯಿಲ್ಲದೇ ಪತ್ನಿ ಗರ್ಭಪಾತ ಮಾಡಿಸಿಕೊಳ್ಳಬಹುದು – ಕೇರಳ ಹೈಕೋರ್ಟ್

    ತಿರುವನಂತಪುರಂ: ವಿವಾಹಿತ ಮಹಿಳೆ ಗರ್ಭಪಾತ ಮಾಡಿಸಲು ಪತಿಯ ಅನುಮತಿಯನ್ನು ಪಡೆಯುವ ಅಗತ್ಯವಿಲ್ಲ ಎಂದು ಕೇರಳ ಹೈಕೋರ್ಟ್ (Kerala High Court) ಸೋಮವಾರ ತಿಳಿಸಿದೆ.

    ಕೇರಳ ಹೈಕೋರ್ಟ್‍ನಲ್ಲಿ ನ್ಯಾಯಮೂರ್ತಿ ವಿಜಿ ಅರುಣ್ ಅವರಿದ್ದ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿತು. 21 ವರ್ಷ ವಯಸ್ಸಿನ ಗರ್ಭಿಣಿಯೊಬ್ಬರು (Pregnancy) 21 ವಾರಗಳ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ (Medical Termination of Pregnancy Act) ಮುಕ್ತಾಯಗೊಳಿಸಲು ಅನುಮತಿ ಕೋರಿ ಸಲ್ಲಿಸಿದ ಮನವಿಯ ಮೇರೆಗೆ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಈ ವೇಳೆ ಗರ್ಭಿಣಿ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿರುವುದಿಲ್ಲ ಅಥವಾ ವಿಧವೆಯಾಗಿರುವುದಿಲ್ಲ.

    ಗರ್ಭಾವಸ್ಥೆಯ ಮತ್ತು ಹೆರಿಗೆಯ ಸಮಯದಲ್ಲಿ ಒತ್ತಡ ಮತ್ತು ನೋವು ಅನುಭವಿಸುವುದು ಮಹಿಳೆಯರು ಎಂಬ ಕಾರಣವನ್ನು ಉಲ್ಲೇಖಿಸಿ, ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸಲು ಮಹಿಳೆ ತನ್ನ ಪತಿಯ ಅನುಮತಿಯನ್ನು ಪಡೆಯುವ ಯಾವುದೇ ಅಗತ್ಯವಿರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಎಕ್ಸಾಂ ನಡೆಯುತ್ತಿದ್ದ ಸ್ಕೂಲ್‍ಗೆ ನುಗ್ಗಿದ ಹಿಂದೂ ಮುನ್ನನ್ನಿ ಸದಸ್ಯರು – ಶಾಲೆ ಮುಚ್ಚುವಂತೆ ಒತ್ತಾಯ

    court order law

    ಮಹಿಳೆ ತಾನು ಪ್ರೀತಿ ಮಾಡುತ್ತಿದ್ದ ವ್ಯಕ್ತಿ ಜೊತೆಗೆ ಕೆಲವು ತಿಂಗಳ ಹಿಂದೆಯಷ್ಟೇ ಓಡಿ ಹೋಗಿ ಮದುವೆಯಾಗಿದ್ದಳು. ಆದರೆ ಮದುವೆಯ ನಂತರ ಆತ ಮತ್ತು ಆತನ ತಾಯಿ ಇಬ್ಬರು ಆಕೆಯನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ಅಲ್ಲದೇ ಮಹಿಳೆ ಗರ್ಭಿಣಿಯಾದ ವೇಳೆ ಆಕೆಯನ್ನು ಅನುಮಾನದಿಂದ ಕಾಣಲು ಆರಂಭಿಸಿದ. ಆಕೆಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಆಕೆಯ ಭಾವನೆಗಳಿಗೆ ಸ್ಪಂದಿಸುತ್ತಿರಲಿಲ್ಲ. ದಿನೇ ದಿನೆ ಆಕೆಯ ಪತಿ ಮತ್ತು ಅತ್ತೆ ಚಿತ್ರಹಿಂಸೆ ನೀಡಲಾರಂಭಿಸಿದರು. ಕೊನೆಗೆ ಗಂಡನ ಮನೆ ಬಿಟ್ಟು ಮಹಿಳೆ ತವರು ಸೇರಬೇಕಾಯಿತು.

    ನಂತರ ಮಹಿಳೆ ತನ್ನ ಗರ್ಭಾವಸ್ಥೆಯನ್ನು ಮುಕ್ತಾಯಗೊಳಿಸಲು ನಿರ್ಧರಿಸಿ, ಕ್ಲಿನಿಕ್ ಅನ್ನು ಸಂಪರ್ಕಿಸಿದರು. ಆದರೆ ಕ್ಲಿನಿಕ್‍ನವರು ನೀವು ಪತಿಯಿಂದ ಬೇರ್ಪಟ್ಟಿರುವುದು ಸಾಬೀತಾಗಿದೆ ಎನ್ನಲು ಯಾವುದಾದರೂ ದಾಖಲೆ ನೀಡುವಂತೆ ತಿಳಿಸಿತು. ಈ ವೇಳೆ ಯಾವುದೇ ಕಾನೂನು ದಾಖಲೆ ಇಲ್ಲದ ಕಾರಣ ಮಹಿಳೆ ಈ ಕುರಿತಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಇದನ್ನೂ ಓದಿ: ಕಟೀಲ್ ಒಬ್ಬ ವಿದೂಷಕ, ಪಾಪ ಇನ್ನೂ ಮೆಚ್ಯೂರಿಟಿ ಇಲ್ಲ: ಸಿದ್ದರಾಮಯ್ಯ

    ಮಹಿಳೆ ತನ್ನ ಪತಿಯ ಮೇಲೆ ಕ್ರಿಮಿನಲ್ ದೂರು ದಾಖಲಿಸಿದ್ದು, ಪತಿ ತನ್ನೊಂದಿಗೆ ಜೀವನ ನಡೆಸಲು ಇಚ್ಛಿಸುತ್ತಿಲ್ಲ ಎಂಬ ಅಂಶವನ್ನು ಕೋರ್ಟ್ ವಿಚಾರಣೆ ವೇಳೆ ಗಮನಿಸಿದೆ. ಆಕೆಯ ವೈವಾಹಿಕ ಜೀವನದಲ್ಲಿ ತೀವ್ರ ಬದಲಾವಣೆಯಾಗಿರುವುದನ್ನು ನ್ಯಾಯಾಲಯ ಗಮನದಲ್ಲಿಟ್ಟುಕೊಂಡು, ಅರ್ಜಿದಾರರಿಗೆ ಕೊಟ್ಟಾಯಂನ ವೈದ್ಯಕೀಯ ಕಾಲೇಜು ಅಥವಾ ಇತರ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆ ಗರ್ಭಧಾರಣೆಯನ್ನು ಮುಕ್ತಾಯಗೊಳಿಸಲು ಅನುಮತಿ ನೀಡಿ ಆದೇಶವನ್ನು ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಪತಿಯ ಎದುರೇ, ಮಹಿಳೆ ಮೇಲೆ ಗ್ಯಾಂಗ್ ರೇಪ್

    ರಾಂಚಿ: ಪತಿಯ (Husband) ಎದುರೇ ಮಹಿಳೆಯ (Woman) ಮೇಲೆ 6 ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಜಾರ್ಖಂಡ್‍ದಲ್ಲಿ ನಡೆದಿದೆ.

    ಜಾರ್ಖಂಡ್‍ನ (Jharkhand) ಪಲಾಮು ಜಿಲ್ಲೆಯಲ್ಲಿ 22 ವರ್ಷದ ಮಹಿಳೆಯು ತನ್ನ ಅತ್ತೆಯ ಮನೆಯಲ್ಲಿ ಜಗಳವಾಡಿ ಕಾಲ್ನಡಿಗೆ ಮೂಲಕ ಪಕ್ಕದ ಊರಲ್ಲಿರುವ ತಂದೆ ಮನೆಗೆ ಹೋಗುತ್ತಿದ್ದಳು. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಹುಡುಕುತ್ತಾ ಆಕೆಯ ಪತಿ ಹಾಗೂ ಅವರ ಸಂಬಂಧಿ ಬೈಕ್‍ನಲ್ಲಿ (Bike) ಹೊರಟರು. ಈ ವೇಳೆ ಆ ಮಹಿಳೆ ರಸ್ತೆಯಲ್ಲಿ ಸಿಕ್ಕಿದ್ದಾಳೆ.

    ಇದರಿಂದಾಗಿ ಆಕೆಯ ಪತಿ ಮನವೊಲಿಸಿ ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಅದೇ ವೇಳೆ ಬಂದ 6 ಜನರು ಮಹಿಳೆಯ ಪತಿ ಹಾಗೂ ಆಕೆಯ ಸಂಬಂಧಿಯನ್ನು ಥಳಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿದರು. ಇದನ್ನೂ ಓದಿ: ಹೊಟ್ಟೆ ಕ್ಯಾನ್ಸರ್‌ ರೋಗದಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆಗೆ ಶರಣು

    ಜೊತೆಗೆ ತೀವ್ರ ಗಾಯಗೊಂಡ ಸಂಬಂಧಿಯನ್ನು ಹಾಗೂ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಮಹಿಳೆಯ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಒಬ್ಬೊಬ್ಬರ ಜಾತಕ ತೆಗೆದರೆ ತಿಹಾರ್ ಜೈಲಿಗೆ ಲಾಯಕ್ ಆಗಿರೋರೇ ಕಾಂಗ್ರೆಸ್‌ನಲ್ಲಿರೋರು: ಸಿ.ಟಿ ರವಿ

    Live Tv
    [brid partner=56869869 player=32851 video=960834 autoplay=true]

  • ಪತಿ ಇಷ್ಟಪಟ್ಟವಳೊಂದಿಗೆ ಮದುವೆ ಮಾಡಿಸಿ ಒಂದೇ ಮನೆಯಲ್ಲಿ ಸಂಸಾರ ನಡೆಸಲು ಮುಂದಾದ ಪತ್ನಿ

    ಪತಿ ಇಷ್ಟಪಟ್ಟವಳೊಂದಿಗೆ ಮದುವೆ ಮಾಡಿಸಿ ಒಂದೇ ಮನೆಯಲ್ಲಿ ಸಂಸಾರ ನಡೆಸಲು ಮುಂದಾದ ಪತ್ನಿ

    ಹೈದರಾಬಾದ್: ಮಹಿಳೆಯೊಬ್ಬಳು ತನ್ನ ಪತಿ ಇಷ್ಟಪಟ್ಟ ಹುಡುಗಿಯೊಂದಿಗೆ ಸಾಂಪ್ರದಾಯಿಕವಾಗಿ ಆಂಧ್ರಪ್ರದೇಶದ (Andhra Pradesh) ತಿರುಪತಿಯಲ್ಲಿ (Tirupati) ಮದುವೆ ಮಾಡಿದ್ದಾರೆ.

    ತಿರುಪತಿಯ (Tirupati) ದಕ್ಕಿಲಿಯ (Dakkili ) ಅಂಬೇಡ್ಕರ್ ನಗರದ (Ambedkar Nagar) ನಿವಾಸಿ ಕಲ್ಯಾಣ್ ಯೂಟ್ಯೂಬ್ ಮತ್ತು ಶೇರ್ ಚಾಟ್‍ನಲ್ಲಿ ರೀಲ್ಸ್ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಈ ವೇಳೆ ಅವರಿಗೆ ಕಡಪಾ ಮೂಲದ ವಿಮಲಾ ಅವರು ಪರಿಚಯವಾಗಿ ಇಬ್ಬರ ನಡುವೆ ಸ್ನೇಹ ಬೆಳೆದು ನಂತರ ಪ್ರೀತಿ ಚಿಲುಮಿದೆ. ಕೆಲವು ವರ್ಷಗಳ ಹಿಂದೆ ಇಬ್ಬರೂ ವಿವಾಹ ಕೂಡ ಆದರು. ನಂತರ ಇಬ್ಬರೂ ಜೊತೆಗೂಡಿ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾ (Social Media) ಫ್ಲಾಟ್‍ಫಾರ್ಮ್‍ಗಳಲ್ಲಿ ಶೇರ್ ಮಾಡಿಕೊಳ್ಳುವುದರ ಮೂಲಕ ಫೇಮಸ್ ಆಗಿದ್ದರು. ಜೊತೆಗೆ ಈ ಜೋಡಿಗೆ ಸಾಕಷ್ಟು ಫಾಲೋವರ್ಸ್ ಕೂಡ ಇದ್ದಾರೆ. ಇದನ್ನೂ ಓದಿ: IND Vs AUS: 3ನೇ T20 ಇಂದು – ಸರಣಿ ಗೆಲ್ಲುವ ತವಕದಲ್ಲಿ ಭಾರತ!

    ಹೀಗಿದ್ದರೂ ಗಂಡನ ನಡವಳಿಕೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಲಾರಂಭಿಸಿದ ವಿಮಲಾಗೆ, ಕಲ್ಯಾಣ್ ವಿಶಾಖಪಟ್ಟಣಂನ (Visakhapatnam) ಯುವತಿಯನ್ನು ಇಷ್ಟಪಟ್ಟಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಇಬ್ಬರೂ ಬೇರೆಯಾಗಿದ್ದರು. ಅಂದಿನಿಂದ ಇಬ್ಬರ ನಡುವೆ ಯಾವುದೇ ಸಂಪರ್ಕ ಇರಲಿಲ್ಲ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: ಪಹಣಿ ಬದಲಾವಣೆಗೆ 50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಲೆಕ್ಕಿಗ!

    ಮತ್ತೊಂದೆಡೆ ಕಲ್ಯಾಣ್ ಮದುವೆಯಾಗಿರುವ ಸುದ್ದಿಯನ್ನು ಕೇಳಿದ ನಿತ್ಯಾ, ನಂತರ ಕಲ್ಯಾಣ್‍ನನ್ನು ಮದುವೆಯಾಗಲು (Marriage) ಅನುಮತಿ ನೀಡುವಂತೆ ವಿಮಲಾರನ್ನು ಬೇಡಿಕೊಂಡಿದ್ದಾಳೆ. ಅಲ್ಲದೇ ಕಲ್ಯಾಣ್ ಮತ್ತು ನನ್ನ ಮದುವೆಯಾದ ಬಳಿಕ ಎಲ್ಲರೂ ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸೋಣ ಎಂದು ವಿಮಾಲಾರಿಗೆ ಕೇಳಿಕೊಂಡಿದ್ದಾಳೆ. ಇದನ್ನೂ ಓದಿ: ಪಾಲಿಕೆಯ ಹೊಸ ಪಾರ್ಕಿಂಗ್ ರೂಲ್ಸ್ – ಲೂಟಿ ಯೋಜನೆಯೆಂದು ಜನಾಕ್ರೋಶ

    ಇದರಿಂದ ಒಂದು ಕ್ಷಣ ತಬ್ಬಿಬ್ಬಾದ ವಿಮಲಾ ಆಲೋಚಿಸಲು ಕೊಂಚ ಸಮಯ ತೆಗೆದುಕೊಂಡು ನಂತರ ಮದುವೆಗೆ ಗ್ರೀನ್ ಸಿಗ್ನಿಲ್ ನೀಡಿದ್ದಾರೆ. ಅಲ್ಲದೇ ತಾವೇ ಮುಂದೆ ನಿಂತು ಪತಿ ಕಲ್ಯಾಣ್ ಹಾಗೂ ನಿತ್ಯ ಮದುವೆಯನ್ನು ಸಾಂಪ್ರದಾಯಿಕವಾಗಿ ಮಾಡಿದ್ದಾರೆ. ಬಳಿಕ ಮೂವರು ಒಟ್ಟಿಗೆ ನಿಂತುಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಚರ್ಚೆಗೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹೋಟೆಲ್‍ನಲ್ಲಿ ಬೇರೊಬ್ಬಳ ಜೊತೆಗೆ ಚಕ್ಕಂದ – ರೆಡ್‍ಹ್ಯಾಂಡ್ ಆಗಿ ಸಿಕ್ಕ ಪತಿಗೆ ಚಪ್ಪಲಿಯಿಂದ ಗ್ರಹಚಾರ ಬಿಡಿಸಿದ್ಲು

    ಹೋಟೆಲ್‍ನಲ್ಲಿ ಬೇರೊಬ್ಬಳ ಜೊತೆಗೆ ಚಕ್ಕಂದ – ರೆಡ್‍ಹ್ಯಾಂಡ್ ಆಗಿ ಸಿಕ್ಕ ಪತಿಗೆ ಚಪ್ಪಲಿಯಿಂದ ಗ್ರಹಚಾರ ಬಿಡಿಸಿದ್ಲು

    ಲಕ್ನೋ: ಆಗ್ರಾದ(Agra) ಹೋಟೆಲ್ ಒಂದರಲ್ಲಿ ಗೆಳತಿಯ ಜೊತೆಗೆ ಸರಸದಲ್ಲಿ ಮುಳುಗಿದ್ದ ಪತಿರಾಯನಿಗೆ ಚಪ್ಪಲಿಯಲ್ಲಿ (Slipper) ಹೊಡೆಯುವ ಮೂಲಕ ಪತ್ನಿ ಗ್ರಹಚಾರ ಬಿಡಿಸಿದ್ದಾಳೆ. ಇದೀಗ ಈ ಗಲಾಟೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಠಾಣಾ ಹರಿ ಪರ್ವತ (Thana Hari Parvata) ಪ್ರದೇಶದ ಹೋಟೆಲ್‍ನಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ತನ್ನ ಗೆಳತಿಯೊಂದಿಗೆ ಹೋಟೆಲ್‍ಗೆ ತಲುಪಿದ್ದಾನೆ. ಈ ವಿಚಾರ ತಿಳಿದ ಪತ್ನಿ ಮತ್ತು ಆಕೆಯ ಸಹೋದರ ಆತನನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ನಂತರ ಹೋಟೆಲ್ ಕೊಠಡಿಯಲ್ಲಿ (Hotel Room) ರೆಡ್ ಹ್ಯಾಂಡ್ ಆಗಿ ಗೆಳತಿ ಜೊತೆಗೆ ಸಿಕ್ಕ ಪರಿ ಜೊತೆಗೆ ಗಲಾಟೆ ಶುರು ಮಾಡಿದ್ದಾಳೆ. ಈ ಘಟನೆಯ ಸಂಪೂರ್ಣ ವೀಡಿಯೋವನ್ನು ಮಹಿಳೆಯ ಸಹೋದರ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ವೀಡಿಯೋದಲ್ಲಿ ಚಪ್ಪಲಿಯಿಂದ ಪತ್ನಿ ತನ್ನ ಪತಿ ಮತ್ತು ಆಕೆಯ ಗೆಳತಿಗೆ ಥಳಿಸಿದ್ದಾಳೆ.

    ವೀಡಿಯೋದಲ್ಲಿ ಮಹಿಳೆ ಇಬ್ಬರಿಗೂ ಕಪಾಳಮೋಕ್ಷ ಮಾಡಿ, ತನ್ನ ಚಪ್ಪಲಿಯಲ್ಲಿ ಒಟ್ಟಿಗೆ ಥಳಿಸಿದ್ದಾಳೆ. ಈ ವೇಳೆ ವ್ಯಕ್ತಿ ಕ್ಷಮಿಸು ಎಂದು ಬೇಡಿಕೊಳ್ಳುತ್ತಿರುತ್ತಾನೆ. ಆದರೆ ರೊಚ್ಚಿಗೆದ್ದ ಮಹಿಳೆ ಆತನನ್ನ ಬಿಡದಂತೆ ಹಿಗ್ಗಾಮುಗ್ಗಾ ಹೊಡೆದು, ಪೊಲೀಸರಿಗೆ ಕರೆ ಮಾಡಿ ಎಂದು ಕೂಗಾಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಇನ್‍ಸ್ಟಾಗ್ರಾಮ್ ಸರ್ವರ್ ಡೌನ್ – ಫೋಟೋ, ವೀಡಿಯೋ ಅಪ್‍ಲೋಡ್ ಮಾಡಲಾಗದೇ ಜನರ ಪರದಾಟ

    ಮಹಿಳೆಯ ಪತಿ ನರ್ಸಿಂಗ್ ಹೋಂನಲ್ಲಿ (Nursing Home) ಕೆಲಸ ಮಾಡುತ್ತಿದ್ದಾನೆ. ಅತನಿಗೆ 16 ವರ್ಷದ ಮಗಳು ಹಾಗೂ 9 ವರ್ಷದ ಮಗನಿದ್ದಾನೆ. ಗಂಡನ ಈ ಚಾಳಿ ಮಕ್ಕಳಿಬ್ಬರಿಗೂ ತಿಳಿದಿದೆ. ಗಂಡನ ಈ ಕೃತ್ಯಗಳಿಂದ ಬೇಸತ್ತು ಮಹಿಳೆ ತವರು ಮನೆ ಸೇರಿದ್ದಳು. ಆದರೆ ಮುಂದೆ ತನ್ನ ಮಕ್ಕಳಿಗೂ ಇದೇ ಚಾಳಿ ಎಲ್ಲಿ ಬರುತ್ತದೆಯೋ ಎಂದು ರೆಡ್ ಹ್ಯಾಂಡ್ ಆಗಿ ಸಿಕ್ಕ ಪತಿಗೆ ಹಿಗ್ಗಾಮುಗ್ಗ ಬಾರಿಸಿದ್ದಾಳೆ. ಇದನ್ನೂ ಓದಿ: NIA ಮಿಡ್‌ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ

    ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ

    ಬೆಳಗಾವಿ: ಪ್ರಿಯಕರನ ಜೊತೆ ಸೇರಿಕೊಂಡ ತನ್ನ ಗಂಡನನ್ನು (Husband) ಪತ್ನಿಯೇ(Wife) ಕೊಲೆ ಮಾಡಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ಪಾಂಡಪ್ಪ ಜಟಕನ್ನವರ(35) ಮೃತ ವ್ಯಕ್ತಿ. ಈತನ ಪತ್ನಿ ಲಕ್ಷ್ಮಿ ಜಟಕನ್ನವರ ಹೊಸೂರ ಗ್ರಾಮದ ರಮೇಶ್ ಬಡಿಗೇರ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದೇ ಕಾರಣಕ್ಕೆ ಆಗಾಗ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಕಳೆದ ರಾತ್ರಿ ಪಾಂಡಪ್ಪ ಹಾಗೂ ಲಕ್ಷ್ಮೀ ನಡುವೆ ಇದೇ ವಿಷಯಕ್ಕೆ ಜಗಳವಾಡಿದ್ದು, ಈ ವಿಷಯ ರಮೇಶ್(36)ಗೆ ಲಕ್ಷ್ಮಿ ತಿಳಿಸಿ, ಬಳಿಕ ಗಂಡನನ್ನು ಕೊಲೆ ಮಾಡಲು ತಂತ್ರ ರೂಪಿಸಿದ್ದಾಳೆ.

    ಈ ಪ್ರಕಾರವಾಗಿಯೇ ರಮೇಶ್ ಬಡಿಗೇರ ಲಕ್ಷ್ಮಿ ಮನೆಗೆ ಬಂದಿದ್ದ. ಈ ವೇಳೆ ರಮೇಶ್ ಹಾಗೂ ಪಾಂಡಪ್ಪ ಮಧ್ಯೆ ನಡೆದಿದ್ದ ಜಗಳ ವಿಕೋಪಕ್ಕೆ ತಿರುಗಿತ್ತು. ಆಗ ಪಾಂಡಪ್ಪನ ತಲೆಗೆ ಲಕ್ಷ್ಮಿ ಕೃಷಿ ಉಪಕರಣದಿಂದ ಹೊಡೆದಿದ್ದಾಳೆ. ಇದರಿಂದಾಗಿ ಪಾಂಡಪ್ಪನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದಾದ ಬಳಿಕ ಲಕ್ಷ್ಮಿ ತನ್ನ ಪ್ರಿಯಕರನ ಜೊತೆ ಸೇರಿ ಪಾಂಡಪ್ಪ ಜಕ್ಕನವರ ಶವವನ್ನು ಬೈಕ್ ಮೇಲೆ ಹೊತ್ತೊಯ್ದು, ರಾಮದುರ್ಗ ತಾಲೂಕಿನ ಹೊಸೂರು ಹೊರವಲಯದ ಕಿರುಸೇತುವೆ ಬಳಿ ಎಸೆಯಲಾಗಿತ್ತು. ಇದನ್ನೂ ಓದಿ: ಹನೂರಿನಲ್ಲಿ 20 ಅಡಿ ಆಳದ ಹಳ್ಳಕ್ಕೆ ಬಿದ್ದ ಬೆಂಗಳೂರಿನ ಕಾರು

    POLICE JEEP

    ಈ ಹಿನ್ನೆಲೆಯಲ್ಲಿ ಪಾಂಡಪ್ಪ ಅಪಘಾತದಿಂದ ಮೃತ ಪಟ್ಟಿದ್ದಾನೆ ಎಂದು ಬಿಂಬಿಸಬೇಕು ಎಂಬ ಕಾರಣಕ್ಕೆ ಲಕ್ಷ್ಮಿ ತನಗೆ ಏನೂ ಗೊತ್ತೆ ಇಲ್ಲದ ರೀತಿಯಲ್ಲಿ ಮನೆಗೆ ಹೋಗಿ ಮರುದಿನ ತನ್ನ ಗಂಡ ಮನೆಗೆ ಮರಳಿ ಬಂದಿಲ್ಲ ಎಂದು ನಾಟಕವಾಡಿದ್ದಾಳೆ. ಇದನ್ನೂ ಓದಿ: ಪಟಾಕಿ ಬ್ಲಾಸ್ಟ್‌ ನೆಪದಲ್ಲಿ ಸ್ಫೋಟಕ ಸ್ಫೋಟ – ಇದು ಶಿವಮೊಗ್ಗ ಶಂಕಿತ ಉಗ್ರನ ಟ್ರಯಲ್‌ ಬ್ಲ್ಯಾಸ್ಟ್‌ ಕಥೆ

    ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಕಟಕೋಳ ಪೊಲೀಸರು 24 ಗಂಟೆಯೊಳಗಾಗಿಯೇ ಪ್ರಕರಣವನ್ನು ಭೇದಿಸಿದ್ದಾರೆ. ಲಕ್ಷ್ಮಿ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಘಟನೆ ಕುರಿತು ಲಕ್ಷ್ಮಿ ಹಾಗೂ ಆಕೆಯ ಪ್ರಿಯಕರ ರಮೇಶ್ ಬಡಿಗೇರನನ್ನು ಬಂಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪತ್ನಿಯನ್ನು ಕೊಲೆ ಮಾಡಿದ್ದ ಪತಿ 10 ದಿನಗಳ ಬಳಿಕ ಶವವಾಗಿ ಪತ್ತೆ

    ಪತ್ನಿಯನ್ನು ಕೊಲೆ ಮಾಡಿದ್ದ ಪತಿ 10 ದಿನಗಳ ಬಳಿಕ ಶವವಾಗಿ ಪತ್ತೆ

    ಹಾಸನ: ಪತ್ನಿಯನ್ನು(Wife) ಕೊಲೆ ಮಾಡಿದ್ದ ಪತಿ(Husband) ಹತ್ತು ದಿನಗಳ ಬಳಿಕ ಶವವಾಗಿ ಪತ್ತೆಯಾದ ಘಟನೆ ಹಾಸನ (Hassan) ಜಿಲ್ಲೆಯಲ್ಲಿ ನಡೆದಿದೆ.

    ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ನಂತರ ಎಸ್ಕೇಪ್ ಆಗಿದ್ದ ಪತಿ 10 ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ. ಸೆ.6ರಂದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ಕೇಶವಮೂರ್ತಿ ಮೂರ್ತಿ ಎಂಬುವವರ ತೋಟದ ಕೆಲಸಕ್ಕೆ ತೆರಳುತ್ತಿದ್ದ ಪತ್ನಿ ಇಂದ್ರಮ್ಮನನ್ನು ಪತಿ ಚಂದ್ರಯ್ಯ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ. ಕೊಲೆ ಮಾಡಿದ ಬಳಿಕ ಚಂದ್ರಯ್ಯ ಕಾಣಿಯಾಗಿದ್ದನು.

    ಪತ್ನಿ ಹತ್ಯೆ ಮಾಡಿದ ದಿನದಂದೇ ಕೊಲೆಯಾದ ಜಾಗದಿಂದ ಒಂದು ಕಿ.ಮೀ ದೂರದಲ್ಲಿರುವ ಚಕ್ರವರ್ತಿ ಎಂಬುವವರ ತೋಟದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಚಂದ್ರಯ್ಯ ಆತ್ಮಹತ್ಯೆ ಶರಣಾಗಿದ್ದಾನೆ. ಇತ್ತ ಕೊಲೆ ಆರೋಪಿ ಚಂದ್ರಯ್ಯನಿಗಾಗಿ ಅರೇಹಳ್ಳಿ ಪೊಲೀಸರು ಹುಡುಕಾಟ ನಡೆಸಿದ್ದರು. ಇಂದು ತೋಟದ ಕೆಲಸಕ್ಕೆ ಕಾರ್ಮಿಕರು ತೆರಳಿದಾಗ ದುರ್ವಾಸನೆ ಬಂದಿದ್ದು, ಸ್ಥಳಕ್ಕೆ ಹೋಗಿ ನೋಡಿದಾಗ ಮರದಲ್ಲಿ ನೇತಾಡುತ್ತಿದ್ದ ಸಂಪೂರ್ಣ ಕೊಳೆತು ಹೋಗಿರುವ ಚಂದ್ರಯ್ಯನ ಶವ ಪತ್ತೆಯಾಗಿದೆ. ಇದನ್ನೂ ಓದಿ: ಮೋದಿ ಹುಟ್ಟುಹಬ್ಬ- 25ಕ್ಕೂ ಹೆಚ್ಚು ಮಕ್ಕಳಿಗೆ ಚಿನ್ನದ ಉಂಗುರ ಉಡುಗೊರೆ ನೀಡಿದ ಮುಸ್ಲಿಂ ಮುಖಂಡ

    ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶವವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಶಾಲೆಯ ಲಿಫ್ಟ್‌ನಲ್ಲಿ ಸಿಲುಕಿ ಶಿಕ್ಷಕಿ ಸಾವು

    Live Tv
    [brid partner=56869869 player=32851 video=960834 autoplay=true]

  • ಕೋಟ್ಯಧಿಪತಿ ಗಂಡನ ಮನೆ ಮುಂದೆ ಪತ್ನಿ ಧರಣಿ

    ಕೋಟ್ಯಧಿಪತಿ ಗಂಡನ ಮನೆ ಮುಂದೆ ಪತ್ನಿ ಧರಣಿ

    ತುಮಕೂರು: ಪ್ರೀತಿಸಿ ಮದುವೆಯಾದ(Love Marriage) ಪತ್ನಿಯೊಬ್ಬಳು ತನ್ನ ಕೋಟ್ಯಧಿಪತಿ ಪತಿಯ(Husband) ಮನೆ ಮುಂದೆ ಧರಣಿ(Protest) ಕುಳಿತ ಘಟನೆ ತುಮಕೂರು(Tumkuru) ನಗರದ ವಿದ್ಯಾ ನಗರದಲ್ಲಿ(Vidya Nagar) ನಡೆದಿದೆ.

    ವಿದ್ಯಾ ನಗರದ ನಾಲ್ಕನೇ ಕ್ರಾಸಿನಲ್ಲಿರುವ ಪತಿ ಜಿತೇಂದ್ರ ಕುಮಾರ್(Jitendra Kumar) ಅವರ ಬೃಹತ್ ಬಂಗಲೆ ಮುಂದೆ ಪತ್ನಿ ಮಂಜುಳಾ(Manjula) ಧರಣಿ ಕುಳಿತಿದ್ದಾರೆ. ಕಳೆದ ನಾಲ್ಕು ವರ್ಷದ ಹಿಂದೆ ರೈಸ್ ಮಿಲ್ (Rice Mill) ಮಾಲೀಕ ಜಿತೇಂದ್ರ ಕುಮಾರ್ ಹಾಗೂ ಮಂಜುಳಾ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಅಂತರ್ ಜಾತಿ ವಿವಾಹ(Inter Caste Marriage) ಆಗಿದ್ದರು. ಇದನ್ನೂ ಓದಿ: ಮೊಬೈಲ್ ಕದಿಯಲು ಹೋಗಿ ಕಳ್ಳನ ಫಜೀತಿ – 10 ಕಿ.ಮೀ ಕಿಟಕಿಯಲ್ಲಿ ಜೋತಾಡ್ಕೊಂಡು ಬಂದ

    ಕುಡಿತಕ್ಕೆ ದಾಸನಾಗಿದ್ದ ಜಿತೇಂದ್ರ ಕುಮಾರ್ ಲಿವರ್ ಜಾಂಡಿಸ್‍ನಿಂದ (Liver Jaundice) ಜುಲೈ 2 ರಂದು ನಿಧನರಾಗಿದ್ದಾರೆ. ಅತ್ತ ಜಿತೇಂದ್ರ ಕುಮಾರ್ ನಿಧನವಾಗುತ್ತಿದ್ದಂತೆ ಇತ್ತ ಜಿತೇಂದ್ರ ಕುಮಾರ್ ಮನೆಯವರು ಮಂಜುಳಾರನ್ನು ತಮ್ಮ ಮನೆಯೊಳಗೆ ಸೇರಿಸಿಕೊಳ್ಳುತ್ತಿಲ್ಲ. ಕಳೆದ ಎರಡೂವರೆ ತಿಂಗಳಿನಿಂದ ಮಂಜುಳಾ ಪತಿಯ ಮನೆಗೆ ಬಂದು ಹೋಗುತ್ತಿದ್ದಾರೆ. ಮನೆಯೊಳಗೆ ಪ್ರವೇಶ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಜಿತೇಂದ್ರ ಕುಟುಂಬದವರು ಪ್ರವೇಶ ನಿಷೇಧಿಸಿದ್ದಾರೆ. ಇದರಿಂದ ಘಾಸಿಗೊಂಡ ಮಂಜುಳಾ ತನ್ನ ಎರಡೂವರೆ ವರ್ಷದ ಮಗಳೊಂದಿಗೆ ಪತಿ ಮನೆ ಮುಂದೆ ಧರಣಿ ಕುಳಿತಿದ್ದಾರೆ. ಇದನ್ನೂ ಓದಿ: 8 ವರ್ಷದ ಬಳಿಕ ಗೊತ್ತಾಯ್ತು ತನ್ನ ಪತಿ ಅವನಲ್ಲ ಅವಳು – ಗಂಡನ ಲಿಂಗ ಬದಲಾವಣೆ ತಿಳಿದು ಮಹಿಳೆ ಶಾಕ್

    Live Tv
    [brid partner=56869869 player=32851 video=960834 autoplay=true]