ಬೀದರ್: ಕೌಟುಂಬಿಕ ಕಲಹ ಹಿನ್ನೆಲೆ ರಸ್ತೆಯಲ್ಲಿ ಹಾಕಿದ್ದ ಪತಿ ಹಾಗೂ ಬಿಜೆಪಿ (BJP) ಮುಖಂಡ ಮಲ್ಲೇಶ್ ಬ್ಯಾನರ್ (Banner) ಹರಿದು ಹಾಕಿ ಪತ್ನಿ ರಂಪಾಟ ಮಾಡಿದ ಘಟನೆ ಬೀದರ್ (Bidar) ನಗರದ ಮೈಲೂರು ಕ್ರಾಸ್ ಬಳಿ ನಡೆದಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಪತಿಯ ಅನೈತಿಕ ಸಂಬಂಧದ ಬಗ್ಗೆ ಠಾಣೆಗೆ ದೂರು ನೀಡಿದ್ರು. ಪೊಲೀಸರು ಎಫ್‍ಐಆರ್ (FIR) ದಾಖಲಿಸದ ಕಾರಣ ಇಂದು ಸಾವಿರ ಮೀಟರ್ ಉದ್ದದ ಕನ್ನಡ ಬಾವುಟ ಮೆರವಣಿಗೆ ವೇಳೆ ಪತಿಯ ಬ್ಯಾನರ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಮಹಿಳೆಯ ನಡುವೆ ಮಾತಿನ ಚಕಮಕಿಯಾಗಿದ್ದು, ಮಹಿಳೆಯ ಸಮಾಧಾನ ಪಡಿಸಲು ಪೊಲೀಸರು ಹರಸಾಹಸ ಪಟ್ಟರು.
ಬಿಜೆಪಿ ಮುಖಂಡ ಸೂರ್ಯಕಾಂತ್ ನಾಗಮಾರಪ್ಪಳ್ಳಿ ಹಾಗೂ ಶಿವಶರಣಪ್ಪ ವಾಲಿ ಮುಂದೆ ನ್ಯಾಯಕ್ಕಾಗಿ ಮಹಿಳೆ ಕಣ್ಣೀರು ಹಾಕಿದ ಪ್ರಸಂಗವು ಈ ವೇಳೆ ನಡೆಯಿತು.
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ಹೆಂಡತಿಯನ್ನು (Wife) ಚುಡಾಯಿಸುತ್ತಿದ್ದ ನೆರೆಮನೆಯವನನ್ನು (Neighbor) ಪತಿ (Husband) ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಕೋಪಗೊಂಡ ನೆರೆಮನೆಯಾತ ಪತಿಯನ್ನು ಕಟ್ಟಿಗೆಯಿಂದ ಹೊಡೆದು, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಖಾನಾಪೂರದಲ್ಲಿ ನಡೆದಿದೆ.
ಕಳೆದ ಕೆಲ ದಿನಗಳಿಂದ ಮಾರುತಿಯ ಪತ್ನಿಯನ್ನು ಪ್ರಶಾಂತ್ ಚುಡಾಯಿಸುತ್ತಿದ್ದ. ಈ ಬಗ್ಗೆ ಮಾರುತಿ ಪ್ರಶಾಂತ್‌ನನ್ನು ಪ್ರಶ್ನೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಪ್ರಶಾಂತ್ ಭಾನುವಾರ ರಾತ್ರಿ ಮಾರುತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದಾನೆ. ಘಟನೆ ಬಗ್ಗೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಯರಿಗೆ ಎರಡು ಬೆರಳಿನ ಪರೀಕ್ಷೆ – ಸುಪ್ರೀಂಕೋರ್ಟ್ ಅಸಮಾಧಾನ
Live Tv
[brid partner=56869869 player=32851 video=960834 autoplay=true]
ಚಿತ್ರದುರ್ಗ: ಮದ್ಯಪಾನ (Alcohol) ಕ್ಕೆ ದಾಸನಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಗಂಡನ ಟಾರ್ಚರ್ ತಾಳಲಾರದೆ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಚೆಕ್ ಡ್ಯಾಂ (Check Dam) ಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿಜಾನಕಲ್ ಲಂಬಾಣಿ ಹಟ್ಟಿಯ ಅರ್ಪಿತಾ(28), ಮಗಳು ಮಾನಸ(6), ಮಗ ಮದನ್(4) ಮೃತ ದುರ್ದೈವಿಗಳು. ಕಳೆದ 8ವರ್ಷದ ಹಿಂದೆ ಹೊಸದುರ್ಗ ತಾಲೂಕಿನ ಜಾನಕಲ್ ಲಂಬಾಣಿಹಟ್ಟಿಯ ಅರ್ಪಿತಾಳನ್ನು ಕೊಂಡಜ್ಜಿ ಲಂಬಾಣಿಹಟ್ಟಿಯ ಮಂಜಾನಾಯ್ಕ್ ಮದುವೆಯಾಗಿದ್ದು, ಪತ್ನಿ ಮೇಲೆ ಅನುಮಾನ ಪಡುತ್ತಿದ್ದನು. ಇದನ್ನೂ ಓದಿ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು – ಕಣ್ಣುಗಳನ್ನು ದಾನ ಮಾಡಿದ ಪೋಷಕರು
ಅಲ್ಲದೇ ನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ಟಾರ್ಚರ್ (Torcher) ನೀಡುತ್ತಾ ಹಲ್ಲೆ ನಡೆಸುತ್ತಿದ್ದನಂತೆ. ಈ ಕಿರುಕುಳದಿಂದ ಮನನೊಂದ ಅರ್ಪಿತಾ ತನ್ನ ಇಬ್ಬರು ಮಕ್ಕಳೊಂದಿಗೆ ಚೆಕ್ ಡ್ಯಾಂಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಅರ್ಪಿತಾ, ಮೊಬೈಲ್ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೆಲ್ಫಿ ವೀಡಿಯೋ ವೇಳೆ ಅಪ್ಪ ಎಂದು ಕೂಗಿರುವ ಪುಟ್ಟ ಬಾಲಕ ಮದನ್‍ನ ಮನಕಲಕುವ ಸೆಲ್ಫಿ ವೀಡಿಯೋ ವೈರಲ್ ಆಗಿದೆ.
ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
ಹಾಸನ: ಮಹಿಳೆಗೆ ಮೆಸೇಜ್ ಮಾಡಿದ ಕಾರಣಕ್ಕೆ ಟೈಲರ್ (Tailor) ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದ ಪ್ರಕರಣಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 13 ರಂದು ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ (Channarayapattana) ತಾಲೂಕಿನ ಜನಿವಾರ ಬಳಿ ಈ ಘಟನೆ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಊಪಿನಹಳ್ಳಿಯ ಟೈಲರ್ ಗಂಗಾಧರ್ ಮೃತದುರ್ದೈವಿ. ತನ್ನ ಪತ್ನಿಗೆ ಮಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಮಹಿಳೆ ಪತಿ ಭರತ್ ಆತನ ನಾಲ್ವರು ಸ್ನೇಹಿತರೊಂದಿಗೆ ಸೇರಿಕೊಂಡು ದೊಣ್ಣೆಯಿಂದ ಹಲ್ಲೆ ನಡೆಸಿ ಗಂಗಾಧರ್ ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ಮೊದಲ ವಿವಾಹ ಮುಚ್ಚಿಟ್ಟು ಎರಡನೇ ಮದುವೆ – ತಾಳಿಕಟ್ಟೋ ಮುನ್ನವೇ ನಯವಂಚಕನ ಬಣ್ಣ ಕಳಚಿಟ್ಟ ಪತ್ನಿ
ಬಂಧಿತ ಆರೋಪಿಗಳನ್ನು ಭರತ್, ಅಭಿಷೇಕ, ಕುಮಾರ್, ಚಿರಂಜೀವಿ ಮತ್ತು ಅಭಿ ಎಂದು ಗುರುತಿಸಲಾಗಿದ್ದು, ಗಂಗಾಧರ್ ಟೈಲರ್ ಶಾಪ್ ಬಳಿ ಬಂದು ಆತನನ್ನು ಎಳೆದೊಯ್ದು ಜನಿವಾರ ಗ್ರಾಮದ ಬಳಿ ಹಲ್ಲೆ ನಡೆಸಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಗಂಗಾಧರ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದರು. ಇದನ್ನೂ ಓದಿ: ಒಬ್ಬಳ ಹಿಂದೆ ಬಿದ್ದ ಇಬ್ಬರು ಹುಡುಗ್ರು – ಪ್ರೀತಿ ವಿಚಾರಕ್ಕೆ ನಡೀತು ಎರಡು ಗ್ಯಾಂಗ್ ಮಧ್ಯೆ ಗುದ್ದಾಟ
ತನ್ನ ಪತ್ನಿಗೆ ಮೆಸೇಜ್, ಫೋನ್ ಮಾಡುತ್ತಾನೆ ಎನ್ನುವ ಕಾರಣಕ್ಕೆ ಗಂಗಾಧರ್ ಜೊತೆಗೆ ಜಗಳ ಮಾಡಿದ್ದ ಭರತ್, ಇದೇ ಕಾರಣಕ್ಕೆ ತನ್ನ ನಾಲ್ವರು ಸ್ನೇಹಿತರ ಜೊತೆ ಸೇರಿ ಹತ್ಯೆ ಮಾಡಿದ್ದು ವಿಪರ್ಯಾಸ ಎಂದೇ ಹೇಳಬಹುದು. ಈ ಘಟನೆ ಚನ್ನರಾಯಪಟ್ಟಣ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.
Live Tv
[brid partner=56869869 player=32851 video=960834 autoplay=true]
ಹೌದು, ಬೆಂಗಳೂರು ಚಿಕ್ಕಸಂದ್ರದ (Chikkasandra) ಇಂದ್ರೇಶ್-ಅನಿತ ದಂಪತಿ ಪುತ್ರ ಮಧುಸೂದನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಾಲ್ಕು ವರ್ಷದ ಹಿಂದೆ ವಸುಧ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದ. ಆದರೂ ಮತ್ತೊಂದು ಮದುವೆ ಆಗಲು ಸ್ಕೆಚ್ ಹಾಕಿ ಹಾಸನ (Hassan) ಮೂಲದ ಯುವತಿಯನ್ನು ಬಂದು ನೋಡಿಕೊಂಡು ಹೋಗಿದ್ದ. ಹುಡುಗಿ ಮನೆಯವರಿಗೆ ಇನ್ನಿಲ್ಲದ ಸುಳ್ಳು ಹೇಳಿ ನಂಬಿಸಿದ್ದ. ಈತನ ಮಾತಿಗೆ ಮರುಳಾದ ಯುವತಿ ಪೋಷಕರು ಮದುವೆ ಮಾಡಲು ಒಪ್ಪಿಕೊಂಡು ನಿಶ್ಚಿತಾರ್ಥ ಮಾಡಿದ್ದರು. ನಿನ್ನೆ ಬೆಂಗಳೂರಿನಲ್ಲಿ ರಿಸೆಪ್ಷನ್ ಇಟ್ಟುಕೊಂಡಿದ್ದರು. ಮಧುಸೂದನ್ ಪೋಷಕರು, ಇಬ್ಬರು ಅಕ್ಕಂದಿರು ಹಾಗೂ ಅವರ ಗಂಡಂದಿರು ಮಾತ್ರ ರಿಸಪ್ಷನ್‍ನಲ್ಲಿ ಭಾಗವಹಿಸಿದ್ದರು.
ಇಂದು ಹಾಸನದ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಮದುವೆಗೂ ಕೂಡ ವರನ ಕಡೆಯಿಂದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾಗವಹಿಸಿದ್ದರು. ಇನ್ನೇನು ತಾಳಿ ಕಟ್ಟಲು ಕೆಲ ಸಮಯ ಮಾತ್ರ ಉಳಿದಿತ್ತು. ಅಷ್ಟರಲ್ಲಿ ಕಲ್ಯಾಣಮಂಟಪದ ಮಾಲೀಕರಿಗೆ ಮೊದಲನೇ ಪತ್ನಿ ವಸುಧ ಕರೆ ಮಾಡಿ ನಿಜಾಂಶ ತಿಳಿಸಿದ್ದಾರೆ. ಕೂಡಲೇ ಓಡಿ ಬಂದ ಮಾಲೀಕರು ವಧುವಿನ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಮದುವೆಯನ್ನು ನಿಲ್ಲಿಸಿದ್ದಾರೆ. ಇಷ್ಟಾದರೂ ಮಧುಸೂದನ್ ಮಾತ್ರ ತನಗೇನು ಗೊತ್ತಿಲ್ಲದಂತೆ ನಾಟವಾಡಲು ಶುರುಮಾಡಿದ್ದ. ಕೊನೆಗೆ ವಧುವಿನ ಸಂಬಂಧಿಕರು ಆತನನ್ನು ಹಿಡಿದುಕೊಂಡು ಕೇಳಿದಾಗ ನಿಜಾಂಶ ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: ನಿಮ್ಮ ಮುಖ್ಯಮಂತ್ರಿಯನ್ನು ನೀವೇ ಆರಿಸಿ – ಗುಜರಾತ್‍ನಲ್ಲಿ ಕೇಜ್ರಿವಾಲ್ ಅಭಿಯಾನ
ಮಧುಸೂದನ್ ಎರಡನೇ ಮದುವೆಯಾಗಲು ಮೆಗಾಪ್ಲಾನ್ ಮಾಡಿದ್ದ. ಇಂದು ಬೆಳಿಗ್ಗೆಯಿಂದಲೂ ಬೇಗ ತಾಳಿ ಕಟ್ಟಿಸಿ ಒಂದು ಗಂಟೆಯೊಳಗೆ ಹೋಗಬೇಕು ಎಂದು ಪದೇ ಪದೇ ಒತ್ತಾಯಿಸುತ್ತಿದ್ದ. ಅಲ್ಲದೇ ಹನಿಮೂನ್‍ಗೆ ಮಾಲ್ಡೀವ್ಸ್‌ಗೆ ಎರಡು ಟಿಕೆಟ್ ಬುಕ್ ಮಾಡಿದ್ದ. ನಾಳೆ ಬೆಳಗ್ಗೆ ಆರು ಗಂಟೆಗೆ ವಧು-ವರರಿಬ್ಬರು ಮಾಲ್ಡೀವ್ಸ್‌ಗೆ ಹಾರಬೇಕಿತ್ತು. ಅಷ್ಟರಲ್ಲಿ ಮೊದಲನೇ ಪತ್ನಿಯ ಸಮಯಪ್ರಜ್ಞೆಯಿಂದ ಅಮಾಯಕ ಯುವತಿಗೆ ಆಗುತ್ತಿದ್ದ ವಂಚನೆ ತಪ್ಪಿದಂತಾಗಿದೆ.
ಮಧುಸೂದನ್‍ನನ್ನು ಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದು ಮೊದಲನೇ ಪತ್ನಿ ವಸುಧ ಬೆಂಗಳೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಇತ್ತ ಸಂಭ್ರಮದಲ್ಲಿದ್ದ ವಧುವಿನ ಮನೆಯವರು ಮಗಳ ಜೀವನ ಹಾಳುಗುತ್ತಿದ್ದು ತಪ್ಪಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]
ರಾಂಚಿ: ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ತಾಯಿ ಹಾಗೂ ಅಪ್ರಾಪ್ತ ಮಗಳ (Daughter) ಶವ ಬಾವಿಯಲ್ಲಿ (Well) ಪತ್ತೆಯಾದ ಘಟನೆ ಜಾರ್ಖಂಡ್‍ನ ಹಜಾರಿಬಾಗ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಕೆಡ್ಲಿ ಗ್ರಾಮದ ಚುಂಚನ್ ದೇವಿ (35), ಹಾಗೂ ಆಕೆಯ ಮಗಳು ರಾಧಿಕಾ ಕುಮಾರಿ (12) ಶವವನ್ನು ಪೊಲೀಸರು ಹೊರತೆಗೆದರು. ಘಟನೆಗೂ ಮುನ್ನ ಹರಿಶ್ಚಂದ್ರ ಯಾದವ್ ಅಲಿಯಾಸ್ ಚಿಂತನ್ ತನ್ನ ಪತ್ನಿ ಚುಂಚನ್ ದೇವಿ ಜೊತೆಗೆ ಬೇರೆ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಜಗಳವಾಡಿದ್ದ. ಅಷ್ಟೇ ಅಲ್ಲದೇ ಆಗಾಗ ಹರಿಶ್ಚಂದ್ರ, ಚುಂಚನ್ ದೇವಿ ಮೇಲೆ ಹಲ್ಲೆ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಚುಂಚನ್ ದೇವಿ ಹಾಗೂ ಆಕೆಯ ಮಗಳು ರಾಧಿಕಾ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕಿಸಲಾಗಿದೆ. ಇದನ್ನೂ ಓದಿ: ಅಪ್ಪು `ಗಂಧದಗುಡಿ’ ತೊರೆದು 1 ವರ್ಷ- ನೋವು, ಕಣ್ಣೀರಿನ ಮಧ್ಯೆ ಪುಣ್ಯಸ್ಮರಣೆ
ಘಟನೆಗೆ ಸಂಬಂಧಿಸಿ ಚುಂಚನ್ ದೇವಿ ಹಾಗೂ ರಾಧಿಕಾ ಮೃತದೇಹವನ್ನು ಹಜಾರಿಬಾಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಚುಂಚನ್ ದೇವಿಯ ತಂದೆ ಸಲ್ಲಿಸಿದ ಎಫ್‍ಐಆರ್ ಆಧಾರದ ಮೇಲೆ ಹರಿಶ್ಚಂದ್ರ ಯಾದವ್‍ನನ್ನು ಪೊಲೀಸರು ಬಂಧಿಸಿ (Arrest) ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಸೋರಿಕೆಯಾಗಿ ಬೆಂಕಿ- ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿ ಸಾವು
Live Tv
[brid partner=56869869 player=32851 video=960834 autoplay=true]
ವಾಷಿಂಗ್ಟನ್: ಅಮೆರಿಕ (America) ಹೌಸ್ ಆಫ್ ಸ್ಪೀಕರ್ ನ್ಯಾನ್ಸಿ ಪೆಲೋಸಿ (Nancy Pelosi) ಅವರ ಪತಿ ಪೌಲ್ ಪೆಲೋಸಿ (Paul Pelosi) ಅವರ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ (Assault) ನಡೆಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿಯಾಗಿದೆ.
ಶುಕ್ರವಾರ ಮುಂಜಾನೆ ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಪಾಲ್ ಅವರ ಮನೆಗೆ ಕೆಲ ದುಷ್ಕರ್ಮಿಗಳು ನುಗ್ಗಿದ್ದು, ಅವರ ಮೇಲೆ ಹಿಂಸಾತ್ಮಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಏರಿಕೆ – ಚೀನಾದಲ್ಲಿ ಮತ್ತೆ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿ
ಕಾರವಾರ: ಗಂಧದಗುಡಿ (Gandhadagudi) ಸಿನಿಮಾ ವೀಕ್ಷಣೆಗಾಗಿ ಚಿತ್ರಮಂದಿರಕ್ಕೆ ತೆರಳಿದ್ದ ಅಪ್ಪು (Appu) ಅಭಿಮಾನಿಗಳು ಚಿತ್ರಮಂದಿರದ ದಿನಗೂಲಿ ನೌಕರನ ಪತ್ನಿಯ ಮೃತದೇಹ ತರಲು ಆಸ್ಪತ್ರೆಗೆ ಹಣ ಪಾವತಿಸಿ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಉತ್ತರ ಕನ್ನಡ (Uttar Kannada) ಜಿಲ್ಲೆಯ ಶಿರಸಿಯ (Sirsi) ನಟರಾಜ ಚಿತ್ರಮಂದಿರದ ದಿನಗೂಲಿ ನೌಕರನಾಗಿರುವ ಪರಶುರಾಮ ಛಲವಾದಿಯ ಗರ್ಭಿಣಿ ಪತ್ನಿ ವನಜಾ ಅವರ ಹೊಟ್ಟೆಯಲ್ಲೇ ಮಗು ಸತ್ತು ಸೋಂಕಾಗಿತ್ತು. ಶಿರಸಿಯ ಟಿಎಸ್‍ಎಸ್ ಆಸ್ಪತ್ರೆಯಲ್ಲಿ ಮೃತ ಮಗುವನ್ನು ಹೊರತೆಗೆದು ಮಹಿಳೆಗೆ ಚಿಕಿತ್ಸೆ ನೀಡುವಾಗ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸಾವನ್ನಪ್ಪಿದ್ದರು.
ಮಹಿಳೆಯ ಮೃತದೇಹ ಕೊಂಡೊಯ್ಯುವ ಮುನ್ನ ಶಿರಸಿಯ ಟಿಎಸ್‍ಎಸ್ ಆಸ್ಪತ್ರೆಯವರು 24,000ರೂ. ಚಾರ್ಜ್ ಮಾಡಿದ್ದರು, ಪತ್ನಿಯ ಮೃತದೇಹ ಬಿಡಿಸಿಕೊಳ್ಳಲು ಹಣವಿಲ್ಲದೇ ಪರದಾಡಿದ್ದ ಪರಶುರಾಮ ಛಲವಾದಿ ಇಂದು ತನ್ನ ನೋವನ್ನು ಚಿತ್ರಮಂದಿರಕ್ಕೆ ಆಗಮಿಸಿದ್ದ ಪುನೀತ್ ರಾಜ್‍ಕುಮಾರ್ (Puneeth Rajkumar) ಅಭಿಮಾನಿಗಳ ಜೊತೆ ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಟೀ ನಿರಾಕರಿಸಿದ ಡಿಸಿಗೆ ಮದ್ಯ ಕುಡಿತೀರಾ ಅಂದ ಮಹಾರಾಷ್ಟ್ರ ಕೃಷಿ ಸಚಿವ – ವೀಡಿಯೋ ವೈರಲ್
ನಂತರ ವಿಷಯ ತಿಳಿದ ಅಪ್ಪು ಅಭಿಮಾನಿಗಳ ಬಳಗದಲ್ಲೇ 100 – 200 ರೂಪಾಯಿಯಂತೆ ಹಣವನ್ನು ಒಟ್ಟು ಸೇರಿಸಿ ಟಿಎಸ್‍ಎಸ್ ಆಸ್ಪತ್ರೆಗೆ ತೆರಳಿತ್ತು. ಈ ವೇಳೆ ಆಸ್ಪತ್ರೆಯವರು ಸಹ ಅಪ್ಪು ಅಭಿಮಾನಿಗಳ ಮನವಿಗೆ ಸ್ಪಂದಿಸಿ ವೆಚ್ಚವನ್ನು ಕಡಿತಗೊಳಿಸಿ ಮೃತದೇಹ ಬಿಟ್ಟುಕೊಟ್ಟಿದ್ದು, ನಂತರ ಅಭಿಮಾನಿಗಳು ಮಹಿಳೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: IPC, CRPC ಸುಧಾರಣೆಗೆ ಶೀಘ್ರದಲ್ಲೇ ನೂತನ ಕರಡು ಮಂಡನೆ – ಶಾ ಹೇಳಿಕೆ
Live Tv
[brid partner=56869869 player=32851 video=960834 autoplay=true]
ಲಕ್ನೋ: ಮಹಿಳೆಯೊಬ್ಬಳು ಸೀಲಿಂಗ್ ಫ್ಯಾನ್‍ಗೆ ನೇಣು ಹಾಕಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ನೋಡಿದ ಪತಿ (Husband) ಆಕೆಯನ್ನು ಉಳಿಸುವ ಬದಲು ಅದನ್ನು ವೀಡಿಯೋ ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ.
ಉತ್ತರ ಪ್ರದೇಶದ ಗುಲ್ಮೊಹರ್ ನಗರದಲ್ಲಿ ಈ ಘಟನೆ ನಡೆದಿದೆ. ಶೋಭಿತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಹಾಗೂ ಸಂಜೀವ್ ಗುಪ್ತಾ ವೀಡಿಯೋ ಮಾಡಿದ ಆಕೆ ಪತಿ. ಶೋಭೀತಾ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ಆಕೆಯನ್ನು ಉಳಿಸುವ ಯಾವುದೇ ಪ್ರಯತ್ನವನ್ನು ಮಾಡಿರಲಿಲ್ಲ. ಬದಲಿಗೆ ವೀಡಿಯೋ ಮಾಡುತ್ತಾ ನಿಂತಿದ್ದ. ಈ ವೇಳೆ ಶೋಭಿತಾ ತನ್ನ ಮೊದಲ ಪ್ರಯತ್ನದಲ್ಲಿ ವಿಫಲಳಾದರೂ ಎರಡನೇ ಪ್ರಯತ್ನದಲ್ಲಿ ನೇಣು ಹಾಕಿಕೊಳ್ಳುವಲ್ಲಿ ಆಕೆ ಯಶಸ್ವಿಯಾಗುತ್ತಾಳೆ.
ಶೋಭೀತಾ ನೇಣು ಬಿಗಿದುಕೊಂಡು ಎಷ್ಟೇ ಒದ್ದಾಡುತ್ತಿದ್ದರೂ ಇದನ್ನು ವೀಡಿಯೋ (Video) ಮಾಡಿಕೊಳ್ಳುತ್ತಿದ್ದ ಸಂಜೀವ್ ಗುಪ್ತಾ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರಲಿಲ್ಲ. ಅದಾದ ಬಳಿಕ ಸಂಜೀವ್ ಗುಪ್ತಾ ಘಟನೆಗೆ ಸಂಬಂಧಿಸಿ ಶೋಭಿತಾಳ ತಂದೆ ರಾಜ್ ಕಿಶೋರ್ ಗುಪ್ತಾಗೆ ಕರೆ ಮಾಡಿ, ಶೋಭೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದ.
ಈ ಹಿನ್ನೆಲೆಯಲ್ಲಿ ಕಿಶೋರ್ ಗುಪ್ತಾ ಗುಲ್ಮೊಹರ್ ನಗರದಲ್ಲಿರುವ ಶೋಭಿತಾಳ ಮನೆಗೆ ಹೋಗಿದ್ದಾರೆ. ಈ ವೇಳೆ ಹಾಸಿಗೆಯ ಮೇಲೆ ಆಕೆಯ ಶವವನ್ನು ಕಂಡಿದ್ದಾರೆ. ಅಷ್ಟೇ ಅಲ್ಲದೇ ಸಂಜೀವ್ ಅವಳು ಬದುಕಿಸಲು ಪ್ರಯತ್ನಿಸುತ್ತಿದ್ದ. ಆದರೆ ಅದಾಗಲೇ ಶೋಭಿತಾ ಶವವಾಗಿದ್ದಳು. ಘಟನೆಗೆ ಸಂಬಂಧಿಸಿ ರಾಜ್ ಕಿಶೋರ್ ಸಂಜೀವ್‍ನನ್ನು ವಿಚಾರಿಸಿದ್ದಾನೆ. ಆ ವೇಳೆ ಸಂಜೀವ್ ವೀಡಿಯೋವನ್ನು ರಾಜ್ ಕಿಶೋರ್‍ಗೆ ತೋರಿಸಿದ್ದಾನೆ. ಇದನ್ನೂ ಓದಿ: ತೆಲಂಗಾಣದಲ್ಲಿ TRS ಶಾಸಕರ ಖರೀದಿಗೆ ಯತ್ನ- 15 ಕೋಟಿ ಜೊತೆ ನಾಲ್ವರು ವಶಕ್ಕೆ
ಶೋಭಿತಾಳ ಕುಟುಂಬದವರು ಘಟನೆಗೆ ಸಂಬಂಧಿಸಿ ಹನುಮಂತ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಂಜೀವ್ ಗುಪ್ತಾನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಜೋಡಿ 4 ವರ್ಷಗಳ ಹಿಂದೆ ಮದುವೆಯಾಗಿತ್ತು. ಇದನ್ನೂ ಓದಿ:ಡೀಲ್ ಮುಗಿಯುವ ಮುನ್ನವೇ ಟ್ವಿಟ್ಟರ್ ಚೀಫ್ ಎಂದು ಘೋಷಿಸಿಕೊಂಡ ಮಸ್ಕ್
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಪತಿ-ಪತ್ನಿ ಕಲಹ, ವರದಕ್ಷಿಣೆ ಕಿರುಕುಳ, ಮದುವೆಯಾಗೋದಾಗಿ ನಂಬಿಸಿ ಮೋಸ ಹೀಗೆ ನಾನಾ ಕೇಸ್‍ಗಳನ್ನು ಆಟೆಂಡ್ ಮಾಡ್ತಿರುವ ಮಹಿಳಾ ಆಯೋಗಕ್ಕೆ ಈಗ ಹೊಸ ತಲೆನೋವು ಶುರುವಾಗಿದೆ ಅದೇ ಲಿವಿಂಗ್ ಟುಗೆದರ್ (Living Together) ಕಂಟಕ.
ಬೆಂಗಳೂರಿನಲ್ಲಿ ಈಗ ಲಿವಿಂಗ್ ಟುಗೆದರ್ ಕಲಹ ಹೆಚ್ಚಾಗ್ತಿದೆಯಂತೆ. ಅದರಲ್ಲೂ ಲಿವಿಂಗ್ ಟುಗೆದರ್ ಜೋಡಿಗಳಲ್ಲಿ ಕಲಹ ಉಂಟಾಗಿ ಅನೇಕ ಹೆಣ್ಣುಮಕ್ಕಳು ಮಹಿಳಾ ಆಯೋಗ (Women Commission) ದ ಮೆಟ್ಟಿಲೇರುತ್ತಿದ್ದಾರಂತೆ. ಕಾಲೇಜ್, ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾಗಿ ಲಿವಿಂಗ್ ಟುಗೆದರ್ ನಿರ್ಧಾರವನ್ನು ತೆಗೆದುಕೊಂಡು ಒಟ್ಟಾಗಿ ಒಂದೇ ಮನೆಯಲ್ಲಿ ಜೀವನ ಸಾಗಿಸ್ತಾರೆ. ಆದರೆ ವರ್ಷ ಕಳೆಯೋದ್ರೊಳಗೆ ಗಲಾಟೆ ಶುರುವಾಗಿ ಹೆಣ್ಣುಮಕ್ಕಳು ನ್ಯಾಯ ಕೊಡಿಸಿ ಅಂತಾ ಆಯೋಗದ ಮೆಟ್ಟಿಲೇರುತ್ತಿದ್ದಾರಂತೆ. ಲಿವಿಂಗ್ ಟುಗೆದರ್ ಚಾಳಿಯಿಂದ ಹೆಣ್ಣುಮಕ್ಕಳು ತಮ್ಮ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದ್ದಾರೆ. ಇನ್ನು ಇಂತಹ ಕೇಸ್‍ನಲ್ಲಿ ನ್ಯಾಯ ಒದಗಿಸೋದು ಕೂಡ ಕಷ್ಟ ಅಂತ ಆಯೋಗದ ಅಧ್ಯಕ್ಷರು ಹೇಳುತ್ತಾರೆ.
ಇನ್ನು ಪ್ರಮುಖವಾಗಿ ವಿದ್ಯಾರ್ಥಿನಿಯರಲ್ಲಿ, ಮಹಿಳೆಯರು ಕಾರ್ಯನಿರ್ವಹಿಸುವ ಸ್ಥಳದಲ್ಲಿ ಈಗಾಗಲೇ ಲಿವಿಂಗ್ ಟುಗೆದರ್ ಮೋಸದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಹಿಳಾ ಆಯೋಗ ಮಾಡಲು ನಿರ್ಧರಿಸಿದ್ದು ಹಲವಡೆ ಪ್ರಾಯೋಗಿಕವಾಗಿ ಆರಂಭಿಸಿದೆ. ಲಿವಿಂಗ್ ಟುಗೆದರ್ ಚಾಳಿಯಿಂದಾಗಿ ಮಹಿಳೆಯರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕೂಡ ಸಮಸ್ಯೆಯಾಗುತ್ತಿದೆ. ಖಿನ್ನತೆಯಂತಹ ಸಮಸ್ಯೆ ಕೂಡ ಎದುರಿಸಬೇಕಾಗಿದ್ದು ಆತಂಕಕ್ಕೆ ಕಾರಣವಾಗ್ತಿದೆ.
ಮೋಸ ಹೋದ ಬಳಿಕ ನ್ಯಾಯಕ್ಕಾಗಿ ಮೊರೆ ಹೋಗುವ ಬದಲು, ಮೋಸ ಹೋಗದಂತೆ ಎಚ್ಚರ ವಹಿಸಬೇಕಾಗಿದೆ. ಬದುಕು ರೂಪಿಸಿಕೊಳ್ಳವ ಹಂತದಲ್ಲಿ ಮಹಿಳೆಯರು ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.
Live Tv
[brid partner=56869869 player=32851 video=960834 autoplay=true]