ಬೆಂಗಳೂರು: ಹೆಂಡತಿಯ (Wife) ಕಿರುಕುಳಕ್ಕೆ ಬೇಸತ್ತು ಪತಿ (Husband) ಹಾಗೂ ಆತನ ತಾಯಿ (Mother) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಬೆಂಗಳೂರಿನ ರಾಜಗೋಪಾಲನಗರದ ಶ್ರೀಗಂಧ ನಗರದಲ್ಲಿ ಘಟನೆ ನಡೆದಿದ್ದು, ಮೃತರನ್ನು ಭಾಗ್ಯಮ್ಮ (57) ಹಾಗೂ ಶ್ರೀನಿವಾಸ್ (33) ಎಂದು ಗುರುತಿಸಲಾಗಿದೆ. ಮೃತ ಶ್ರೀನಿವಾಸ್ ಪೋಷಕರಿಗೆ ವಯಸ್ಸಾಗಿತ್ತು. ಹಾಗಾಗಿ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಶ್ರೀನಿವಾಸ್ ಮಡಿಕೇರಿಯಲ್ಲಿದ್ದ ತನ್ನ ತಂದೆ, ತಾಯಿಯನ್ನು ಬೆಂಗಳೂರಿನ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಆದರೆ ಶ್ರೀನಿವಾಸ್ ಪತ್ನಿ ಸಂಧ್ಯಾಳಿಗೆ ಇದು ಇಷ್ಟವಿರಲಿಲ್ಲ.
ತನ್ನ ತಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ಹೀಗಾಗಿ ವಯಸ್ಸಾದ ಅತ್ತೆ – ಮಾವನನ್ನು ನೋಡಿಕೊಳ್ಳೋರು ಯಾರು? ತನಗೆ ಅತ್ತೆ, ಮಾವನನ್ನು ನೋಡಿಕೊಳ್ಳೋಕೆ ಕಷ್ಟವಾಗಲಿದೆ ಎಂದು ಸಂಧ್ಯಾ ಗಲಾಟೆ ತೆಗೆದಿದ್ದಳು. ಇದೇ ವಿಚಾರವಾಗಿ ಮಧ್ಯರಾತ್ರಿ ಮೂರು ಗಂಟೆಗೆ ಗಲಾಟೆ ನಡೆದಿತ್ತು ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಅಯೋಧ್ಯೆ ಮಸೀದಿ ನಿರ್ಮಾಣ ಕಾರ್ಯ 2023ಕ್ಕೆ ಪೂರ್ಣ ಸಾಧ್ಯತೆ – ಟ್ರಸ್ಟ್
ಅದಾದ ಬಳಿಕ ಮೊದಲಿಗೆ ತಾಯಿ ಭಾಗ್ಯಮ್ಮ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಂತರ ಶ್ರೀನಿವಾಸ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಧ್ಯಾಹ್ನದ ತನಕ ಬಾಗಿಲು ತೆಗೆಯದಿದ್ದಾಗ ಅನುಮಾನಗೊಂಡು ನೋಡಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಗಲಾಟೆಯಿಂದ ಬೇಸತ್ತು ತಾಯಿ- ಮಗ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿ ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಶಸ್ತ್ರಾಸ್ತ್ರ ನಿಯಂತ್ರಣ ಬಿಗಿ – ಹಿಂಸೆ ವೈಭವೀಕರಿಸುವ ಹಾಡುಗಳು ಬ್ಯಾನ್
Live Tv
[brid partner=56869869 player=32851 video=960834 autoplay=true]
ತಿರುವನಂತಪುರಂ: ಇತ್ತೀಚೆಗೆ ಮದುವೆ (Marriage) ಯ ಬಳಿಕ ಅಥವಾ ಮುವೆಗೂ ಮುನ್ನ ಪತಿ ಹಾಗೂ ಪತ್ನಿ ಕೆಲವೊಂದು ಒಪ್ಪಂದಗಳನ್ನು ಮಾಡಿಕೊಂಡು ಬಳಿಕ ಪತ್ರಕ್ಕೆ ಸಹಿ ಹಾಕುತ್ತಿರುವುದು ಟ್ರೆಂಡ್ ಆಗಿದೆ. ಅಂತೆಯೇ ಕೇರಳ (Kerala) ದಲ್ಲಿ ಪತ್ನಿಯೊಬ್ಬಳು ತನ್ನ ಪತಿ ಜೊತೆಗೆ ಮಾಡಿಕೊಂಡಿರುವ ಒಪ್ಪಂದದ ಪತ್ರವೊಂದು ಸಾಕಷ್ಟು ಸದ್ದು ಮಾಡುತ್ತಿದೆ.
ಎಸ್. ಅರ್ಚನಾ ಹಾಗೂ ರಘು ಎಸ್ ಕೆಡಿಆರ್ ದಂಪತಿಯ ಒಪ್ಪಂದದ ಪತ್ರ ವೈರಲ್ ಆಗಿದೆ. ಮದುವೆಗೂ ಮುನ್ನ ಈ ಜೋಡಿ ಒಪ್ಪಂದವನ್ನು ಮಾಡಿಕೊಂಡು ಸಹಿ ಹಾಕಿದೆ. ಅದರಲ್ಲಿ ಮದುವೆಯ ನಂತರ ರಾತ್ರಿ 9 ಗಂಟೆಯವರೆಗೆ ನಾನು ಪತಿಗೆ ಯಾವುದೇ ರೀತಿಯ ತೊಂದರೆ ಕೊಡಲ್ಲ. ಹೀಗಾಗಿ ಅಲ್ಲಿಯವರೆಗೆ ಪತಿ ತನ್ನ ಗೆಳೆಯರ ಜೊತೆ ಸಮಯ ಕಳೆಯಲು ಅವಕಾಶ ನೀಡುತ್ತೇನೆಂದು ಬರೆಯಲಾಗಿದೆ. ಅಲ್ಲದೆ ಇದಕ್ಕೆ ಅರ್ಚನಾ ಸಹಿ ಕೂಡ ಹಾಕಿದ್ದಾರೆ.
ರಘು ಅವರು ಬ್ಯಾಡ್ಮಿಂಟನ್ ಆಟಗಾರರಾಗಿದ್ದು, ವಾಟ್ಸಪ್ ಗ್ರೂಪ್‍ನಲ್ಲಿಯೂ ಇದ್ದಾರೆ. ಈ ಗ್ರೂಪ್ ನಲ್ಲಿ ತಮ್ಮ ಮದುವೆಗಳಲ್ಲಿ ನಡೆದಿರುವ ಅಚ್ಚರಿಯ ಘಟನೆಗಳು ನಡೆದಿರುವುದನ್ನು ಹಂಚಿಕೊಳ್ಳುತ್ತಾರೆ. ಅಂತೆಯೇ ರಘು ಅವರು ತಮ್ಮ ಮದುವೆಯ ಮುನ್ನ ನಡೆದಿರುವ ಒಪ್ಪಂದದ ಕುರಿತು ಮಾತನಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಧಾರವಾಡ: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಇದೆ. ಆದರೆ ಧಾರವಾಡದ ನ್ಯಾಯಾಲಯದಲ್ಲಿ ಇಂದು ವಿಚ್ಛೇದನಕ್ಕೆ ಬಂದಿದ್ದ ಕೇಸ್ ನೋಡಿದರೆನೇ ವಿಚಿತ್ರ ಎನಿಸುತ್ತದೆ. ಏಕೆಂದರೆ ಪತ್ನಿ ತನ್ನ ಪತಿಗೆ ಬಾರೋ ಎಂದಿದ್ದಕ್ಕೆ ಪತಿರಾಯ ನ್ಯಾಯಾಲಯದ ಮೇಟ್ಟಿಲು ಏರಿದರೆ, ಮತ್ತೊಂದು ಪ್ರಕರಣದಲ್ಲಿ ಪತ್ನಿ ಪತಿಯ ಪೆನ್ ಡ್ರೈವ್ ತೆಗೆದುಕೊಂಡಿದ್ದಕ್ಕೆ ವಿಚ್ಛೇದನಕ್ಕೆ ಅರ್ಜಿ ಬಂದಿತ್ತು. ಇದೀಗ ಈ ಪ್ರಕರಣಗಳನ್ನು ನ್ಯಾಯಾಲಯ ಲೋಕ್ ಅದಾಲತ್‍ನಲ್ಲಿ (Lok Adalat) ತೆಗೆದುಕೊಂಡು ಇತ್ಯರ್ಥ ಮಾಡಿದೆ.
ಧಾರವಾಡ (Dharwad) ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‍ನಲ್ಲಿ ಇಂದು ವಿಚ್ಛೇದನಕ್ಕೆ ಬಂದಿದ್ದ ಪ್ರಕರಣಗಳನ್ನು ತೆಗೆದುಕೊಂಡಿದ್ದರು. ಈ ವೇಳೆ ಕೆಲ ಗಂಡ ಹೆಂಡತಿಯರು ವಿಚ್ಛೇದನ ಬೇಡ ಎಂದು ಒಪ್ಪಿಕೊಂಡರೆ, ಕೆಲವರು ನ್ಯಾಯಾಲಯದ ಮುಂದೆ ತಮ್ಮ ಒಪ್ಪಿಗೆ ಸೂಚಿಸಲೇ ಇಲ್ಲ. ಅದರಲ್ಲೂ ಒಂದು ಜೋಡಿಯಂತೂ ಪೆನ್ ಡ್ರೈವ್ ವಿಚಾರಕ್ಕೆ ವಿಚ್ಛೇದನ ಹಾಕಿಕೊಂಡಿದ್ದರು. ಪತ್ನಿ ತನ್ನ ಪತಿಯ ಪೆನ್ ಡ್ರೈವ್ ತೆಗೆದುಕೊಂಡಿದ್ದಾಳಂತೆ. ಅದಕ್ಕೆ ಪತಿ ಅದನ್ನು ಕೊಟ್ಟರೆ ಮಾತ್ರ ನಾನು ರಾಜಿಯಾಗುತ್ತೇನೆ ಅಂತ ನಿಂತಿದ್ದ. ಇದನ್ನೂ ಓದಿ: ಮೃತ ತಂದೆಯನ್ನು ಬದುಕಿಸಲು ಮಗುವನ್ನು ಅಪಹರಿಸಿ ನರ ಬಲಿ ಕೊಡಲು ಸಿದ್ಧವಾದ್ಲು
ಮತ್ತೊಂದು ಜೋಡಿ ಪ್ರಕರಣದಲ್ಲಿ ಪತ್ನಿ ತನ್ನ ಪತಿಗೆ ಬಾರೋ ಎಂದು ಕರೆದ್ದಾಳಂತೆ. ಅದಕ್ಕೆ ಇಬ್ಬರೂ ವಿಚ್ಛೇದನಕ್ಕೆ ಬಂದಿದ್ದರು. ನ್ಯಾಯಾಧೀಶರು ಇವತ್ತು ಇಂತಹ 37 ಕೇಸ್‍ಗಳನ್ನು ಲೋಕ ಅದಾಲತ್‍ನಲ್ಲಿ ತೆಗೆದುಕೊಂಡು 17 ಕೇಸ್ ಇತ್ಯರ್ಥ ಮಾಡಿದೆ. ಇನ್ನು ಕೆಲ ಪತಿ ಹಾಗೂ ಪತ್ನಿ ನ್ಯಾಯಾಲಯದ ಮಾತು ಕೇಳದೇ ಇರುವುದರಿಂದ ಅವರಿಗೆ ಮತ್ತೆ ಮುಂದಿನ ದಿನಾಂಕಕ್ಕೆ ಹಾಜರಾಗಲು ಹೇಳಲಾಗಿದೆ. ಮತ್ತೆ ಕೆಲವರಿಗೆ ಸ್ವಲ್ಪ ದಿನ ಒಂದೇ ಕಡೆ ಇರುವಂತೆ ಸೂಚನೆ ಕೊಟ್ಟು ಕಳುಹಿಸಲಾಗಿದೆ. ಇದನ್ನೂ ಓದಿ: ಬೆಳಗಾವಿ ಲಾಕಪ್‌ಡೆತ್ ಕೇಸ್: ಪೊಲೀಸರಿಂದ್ಲೇ ಚಿತ್ರಹಿಂಸೆ – ಮೃತನ ಪುತ್ರಿ ಆರೋಪ
ಇಬ್ಬರು ಸ್ವಲ್ಪ ದಿನಗಳಲ್ಲಿ ಒಂದಾಗಿ ಬಾಳಿದರೆ ಮುಂದೆ ನ್ಯಾಯಾಲಯ ಇವರ ಮದ್ಯದಲ್ಲಿ ಪ್ರವೇಶ ಮಾಡಲ್ಲ. ಹೊಂದಾಣಿಕೆ ಆಗದೇ ಇದ್ದರೆ ಮಾತ್ರ ನ್ಯಾಯಾಲಯ ಮತ್ತೊಂದು ಚಾನ್ಸ್ ಕೊಡಲಿದೆ. ಸದ್ಯ ಒಂದಾದ ಗಂಡ ಹೆಂಡತಿ ಕೂಡ ನ್ಯಾಯಾಲಯದ ಈ ಅದಾಲತ್‍ದಿಂದ ಒಂದಾಗಿ ಸಂತಸ ವ್ಯಕ್ತಪಡಿಸಿದೆ.
Live Tv
[brid partner=56869869 player=32851 video=960834 autoplay=true]
ಲಕ್ನೋ: ಪತ್ನಿಯನ್ನು ಹತ್ಯೆಗೈದು ಶವವನ್ನು ಗಾಜಿಯಾಬಾದ್‍ನ (Ghaziabad) ಟ್ರೋನಿಕಾ ನಗರದಲ್ಲಿ (Tronica city) ಎಸೆದು ಪತಿಯೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ನಾನು ನನ್ನ ಹೆಂಡತಿಯನ್ನು ಕೊಂದಿದ್ದೇನೆ. ಶವವನ್ನು ಟ್ರೋನಿಕಾ ನಗರ ಪ್ರದೇಶದಲ್ಲಿ ಎಸೆದಿದ್ದೇನೆ ಎಂದು ಆರೋಪಿ ಪೊಲೀಸ್ ಠಾಣೆಗೆ ತೆರಳಿ ಸತ್ಯ ಹೇಳಿದ್ದಾನೆ. ನಂತರ ಈ ಘಟನೆ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು, ನಂತರ ಘಟನಾ ಸ್ಥಳಕ್ಕೆ ತಲುಪಿ ಮಹಿಳೆಯ ಶವವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ನಾವೇನಾದರೂ ಸಿಡಿದೆದ್ದರೆ ನೀವು ಉಳಿಯುವುದಿಲ್ಲ – ಕಾಂಗ್ರೆಸ್‍ಗೆ ಮುತಾಲಿಕ್ ವಾರ್ನಿಂಗ್
ಆರೋಪಿಯನ್ನು ಸದ್ದಾಂ ಎಂದು ಗುರುತಿಸಲಾಗಿದ್ದು, ತನ್ನ ಪತ್ನಿ ಮೇಲೆ ಅನುಮಾನ ಹೊಂದಿದ್ದರಿಂದ ಈ ಕೃತ್ಯವೆಸಗಿರುವುದಾಗಿ ಹೇಳಿದ್ದಾನೆ. ಗುರುವಾರ ಸದ್ದಾಂ ತನ್ನ ಪತ್ನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯನ್ನು ಕೊಲೆ ಮಾಡಿ, ನಂತರ ದೇಹವನ್ನು ಟ್ರೋನಿಕಾ ನಗರದಲ್ಲಿ ಪೊದೆಯೊಂದರಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ ಕೊಂದ ಬಳಿಕ, ಪೊಲೀಸ್ ಠಾಣೆಗೆ ಬಂದು ಸದ್ದಾಂ ತಪ್ಪೊಪ್ಪಿಕೊಂಡಿದ್ದಾನೆ. ಮೃತ ಮಹಿಳೆಗೆ ಸುಮಾರು 28 ವರ್ಷ ವಯಸ್ಸಾಗಿದ್ದು, ಕೊಲೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರಾ ಎಂಬುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಕಿನ್ನಾಳ ಕಲೆಯ ಕಾಮಧೇನು ಉಡುಗೊರೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ
Live Tv
[brid partner=56869869 player=32851 video=960834 autoplay=true]
ಹಾಸನ: ಪತ್ನಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಂದು ಮನೆಗೆ ಬೀಗ ಹಾಕಿ ಪತಿ ಪರಾರಿಯಾಗಿರುವ ಘಟನೆ ಹಾಸನ (Hassan) ಜಿಲ್ಲೆಯ ಸಕಲೇಶಪುರ (Sakleshpura) ತಾಲೂಕಿನ ತಂಬ್ಲಿಗೇರಿ ಗ್ರಾಮದಲ್ಲಿ ನಡೆದಿದೆ.
ರತ್ನಮ್ಮ (58) ಕೊಲೆಯಾದ ಮಹಿಳೆಯಾಗಿದ್ದು, ಆರೋಪಿ ಪತಿಯನ್ನು 65 ವರ್ಷದ ಪರಮೇಶ್ ಎಂದು ಗುರುತಿಸಲಾಗಿದೆ. ಸಂಬಂಧಿಕರು ಮನೆಗೆ ಆಮಂತ್ರಣ ಕೊಡಲು ಬಂದಾಗ ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಪುತ್ರನಿಗೆ ಫೋನ್ ಮಾಡಿ ತಿಳಿಸಿದ್ದು ಮನೆಯ ಬೀಗ ಒಡೆದು ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ಯಾಂಟ್ ಜಿಪ್ ತೆಗೆದು ಬಸ್‍ನಲ್ಲಿ ವೈದ್ಯೆ ಜೊತೆ ಅಸಭ್ಯ ದುರ್ವತನೆ – ಕ್ಲೀನರ್ ಅರೆಸ್ಟ್
ಹೌದು, ಮೂವತ್ತು ವರ್ಷಗಳ ಹಿಂದೆ ರತ್ನಮ್ಮ ಹಾಗೂ ಪರಮೇಶ್ ವಿವಾಹವಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಇಬ್ಬರಿಗೂ ಮದುವೆ ಮಾಡಿದ್ದರು. ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇದ್ದರು. ನಾಲ್ಕು ಎಕರೆ ಕಾಫಿ ತೋಟವಿದ್ದು, ದಂಪತಿ ಕಷ್ಟಪಟ್ಟು ದುಡಿಯುತ್ತಿದ್ದರು. ರತ್ನಮ ಹೊಸ ಮನೆ ಕಟ್ಟಬೇಕೆಂಬ ಮಹಾದಾಸೆ ಇಟ್ಟುಕೊಂಡಿದ್ದರು. ಕಾಫಿಯಲ್ಲಿ ಬಂದ ಹಣದಲ್ಲಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದರು. ಮದುವೆಯಾದಗಿನಿಂದಲೂ ಪರಮೇಶ್ ಸಣ್ಣಪುಟ್ಟ ವಿಚಾರಕ್ಕೆ ಜಗಳ ತೆಗೆದು ಪತ್ನಿಗೆ ಮನಸ್ಸೋ ಇಚ್ಛೆ ಹಲ್ಲೆ ಮಾಡುತ್ತಿದ್ದ. ಮಗ ಬೆಳಗಾವಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಮಕ್ಕಳಿಬ್ಬರು ಪ್ರತಿನಿತ್ಯ ಅಮ್ಮನಿಗೆ ಫೋನ್ ಮಾಡಿ ಮಾತನಾಡುತ್ತಿದ್ದರು.
ಪರಮೇಶ್ ತೋಟದ ಕೆಲಸ ಬಿಟ್ಟರೆ ಮನೆ, ಮನೆ ಬಿಟ್ಟರೆ ತೋಟದ ಕೆಲಸ ಮಾಡಿಕೊಂಡಿದ್ದ. ಆದರೆ ಪದೇ ಪದೇ ಹಣಕಾಸು ಸೇರಿ ಸಣ್ಣ ವಿಚಾರಗಳಿಗೆ ಪತ್ನಿ ಜೊತೆ ಜಗಳವಾಡಿ ಹಲ್ಲೆ ಮಾಡುತ್ತಿದ್ದ. ಪರಮೇಶ್ ಈ ಹಿಂದೆ ರತ್ನಮ್ಮ ತಲೆಗೆ ಬಲವಾಗಿ ಹೊಡೆದಿದ್ದ, ಇನ್ನೊಮ್ಮೆ ಬೆರಳು ತುಂಡು ಮಾಡಿದ್ದ. ಗಂಡ ಹೆಂಡತಿ ಜಗಳವಾಡಿದ ಸಂದರ್ಭದಲ್ಲಿ ಸಂಬಂಧಿಕರ ಮನೆಗೆ ಹೋಗಿ ಕೆಲ ದಿನಗಳು ಇದ್ದು ವಾಪಾಸ್ ಬರುತ್ತಿದ್ದ. ಅಳಿಯ, ಸಂಬಂಧಿಕರು ಪಂಚಾಯತಿ ಮಾಡಿ ಹೊಂದಿಕೊಂಡು ಹೋಗುವಂತೆ ತಿಳಿ ಹೇಳಿದ್ದರು. ಪರಮೇಶ್ ಜಗಳವಾಡುವುದನ್ನು ನಿಲ್ಲಿಸಿರಲಿಲ್ಲ. ಆದರೆ ಯಾವಾಗಲೂ ಪತ್ನಿಯನ್ನು ಕಡಿಯುತ್ತೇನೆ ಎನ್ನುತ್ತಿದ್ದ. ಇದನ್ನೂ ಓದಿ: ಗುಜರಾತಿನಲ್ಲಿ ನಡೆದಿರುವುದು ಕರ್ನಾಟಕಕ್ಕೂ ಮಾದರಿಯಾಗಬೇಕು: ಲೆಹರ್ ಸಿಂಗ್
ಶುಕ್ರವಾರ ಕಾಫಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ ವಿಚಾರಕ್ಕೆ ದಂಪತಿ ನಡುವೆ ಜಗಳ ಶುರುವಾಗಿದೆ. ಇದು ಅತಿರೇಕಕ್ಕೆ ಹೋಗಿ ಮಾರಕಾಸ್ತ್ರದಿಂದ ನಾಲ್ಕೈದು ಬಾರಿ ಪತ್ನಿ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ಮನೆಯಲ್ಲಿಯೇ ಶವವನ್ನು ಬಿಟ್ಟು ಬೀಗ ಹಾಕಿಕೊಂಡು, ಪ್ರತಿದಿನ ಜಾನುವಾರುಗಳೊಂದಿಗೆ ತೋಟಕ್ಕೆ ಹೋಗಿ ಬರುತ್ತಿದ್ದ. ಶವ ದುರ್ವಾಸನೆ ಬರಲು ಆರಂಭವಾದಾಗ ಎಸ್ಕೇಪ್ ಆಗಿದ್ದಾನೆ. ಸಂಬಂಧಿಕರು ಮದುವೆ ಆಮಂತ್ರಣ ನೀಡಲು ಮನೆ ಬಳಿ ಬಂದಾಗ ಮನೆಗೆ ಬೀಗ ಹಾಕಿದೆ. ಆಮಂತ್ರಣ ಎಸೆಯಲು ಕಿಟಕಿ ತೆರೆದಾಗ ದುರ್ವಾಸನೆ ಬಂದಿದ್ದು ಮಗನಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಅಷ್ಟರಲ್ಲಾಗಲೇ ಅಮ್ಮನ ಫೋನ್ ಸ್ವಿಚ್ ಆಫ್ ಬರುತ್ತಿದ್ದ ಕಾರಣ ಬೆಳಗಾವಿಯಿಂದ ಹೊರಟಿದ್ದ ಮಗ, ದೊಡ್ಡಪ್ಪನ ಮಗನಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾನೆ. ಕೂಡಲೇ ಮನೆ ಬಳಿ ಬಂದು ಬೀಗ ಒಡೆದು ನೋಡಿದಾಗ ರತ್ನಮ್ಮ ಶವ ಕೊಳೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಶ್ವಾನದಳ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಪದೇ ಪದೇ ದಂಪತಿ ನಡುವೆ ನಡೆಯುತ್ತಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
Live Tv
[brid partner=56869869 player=32851 video=960834 autoplay=true]
ವಾಷಿಂಗ್ಟನ್: ಅಮೆರಿಕದ (America) ಹೌಸ್ ಆಫ್ ಸ್ಪೀಕರ್ ನ್ಯಾನ್ಸಿ ಪೆಲೋಸಿ (Nancy Pelosi) ಅವರ ಪತಿ (Husband) ಮೇಲೆ ಇತ್ತೀಚೆಗೆ ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದ. ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಪೆಲೋಸಿ, ಇಂತಹ ಆಘಾತಕಾರಿ ಬೆಳವಣಿಗೆ ತನ್ನ ರಾಜಕೀಯ ನಿರ್ಧಾರಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿಕೆ ನೀಡಿದ್ದಾರೆ.
ತನ್ನ ಗಟ್ಟಿ ನಿರ್ಧಾರಗಳಿಗೆ ಹೆಸರುವಾಸಿಯಾಗಿರುವ ಪೆಲೋಸಿ ಇತ್ತೀಚೆಗೆ ತಮ್ಮ ಪತಿಯ ಮೇಲೆ ನಡೆದಿರುವ ಹಲ್ಲೆಯ ಬಳಿಕ ಆಘಾತಕ್ಕೊಳಗಾಗಿದ್ದಾರೆ ಎನ್ನಲಾಗುತ್ತಿದ್ದು, ರಾಜಕೀಯ ಕ್ಷೇತ್ರದಲ್ಲೂ ಹಿಂದೆ ಸರಿಯುವ ಬಗ್ಗೆ ಚರ್ಚೆಯಾಗುತ್ತಿದೆ.
ತನ್ನ ಪತಿಯ ಮೇಲೆ ದಾಳಿ ನಡೆದ ಬಳಿಕ ಮೊದಲ ಬಾರಿ ಮಾತನಾಡಿರುವ ಪೆಲೋಸಿ, ಕೆಲ ದಿನಗಳ ಹಿಂದೆ ನನ್ನ ಪತಿಯ ಮೇಲೆ ನಡೆದಿರುವ ಹಲ್ಲೆ ಮುಂದೆ ನನ್ನ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತವೆ. ನನ್ನ ಪತಿಯ ಮೇಲೆ ನಡೆದಿರುವ ಹಲ್ಲೆಯಿಂದ ದುಃಖಿತಳಾಗಿದ್ದೇನೆ, ದೇಶದ ಬಗ್ಗೆಯೂ ನನಗೆ ದುಃಖವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ತಿಂಗಳಿಗೆ 655 ರೂ. ಪಾವತಿಸಿ ಟ್ವಿಟ್ಟರ್ ಬ್ಲೂಟಿಕ್ ಪಡೆದ ಭಾರತದ ಮೊದಲ ಮಹಿಳೆ
ನೆಲಮಂಗಲ: ಪತಿಯ (Husband) ಕುಡಿತದ ಚಟಕ್ಕೆ ಬೇಸತ್ತು ತುಂಬು ಗರ್ಭಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ (Bengaluru) ನೆಲಮಂಗಲದಲ್ಲಿ (Nelamangala) ನಡೆದಿದೆ.
ಸೌಂದರ್ಯ(20) ಮೃತ ಯುವತಿ. ಈಕೆ ಒಂದು ವರ್ಷದ ಹಿಂದೆ ಸಂತೋಷ್ ಎಂಬ ಯುವಕನನ್ನು ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದಳು. ಅಷ್ಟೇ ಅಲ್ಲದೇ ಸಂತೋಷ್ ಮತ್ತು ಸೌಂದರ್ಯ ಒಂದೇ ಕಂಪನಿಯಲ್ಲಿ ಅನ್ಯೋನ್ಯದಿಂದ ಕೆಲಸ ಮಾಡುತ್ತಾ, ನೆಲಮಂಗಲ ಸಮೀಪದ ಶಿವನಪುರದಲ್ಲಿ ವಾಸವಾಗಿದ್ದರು. ಇವರ ಪ್ರೀತಿಯ ಫಲವಾಗಿ ಸೌಂದರ್ಯ 8 ತಿಂಗಳ ತುಂಬು ಗರ್ಭಿಣಿಯಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಸಂಪತ್ ಇತ್ತೀಚೆಗೆ ಆ ಕೆಲಸವನ್ನು ಬಿಟ್ಟು ಮನೆಯಲ್ಲೇ ಇದ್ದ.
ಕೆಲಸ ಇಲ್ಲದ ಹಿನ್ನೆಲೆಯಲ್ಲಿ ಸಂತೋಷ್ ಕುಡಿತದ ಚಟಕ್ಕೆ ಒಳಗಾಗಿದ್ದ. ಅಷ್ಟೇ ಅಲ್ಲದೇ ಪ್ರತಿನಿತ್ಯ ಕುಡಿದು ಬಂದು ಸೌಂದರ್ಯ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದ. ಇದರಿಂದಾಗಿ ಸಂತೋಷ್‍ನ ಹಿಂಸೆ ತಾಳಲಾರದೇ ಮನನೊಂದು ಸೌಂದರ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಆನ್‍ಲೈನ್ ಎಡವಟ್ಟು- ಟಿಇಟಿ ಪರೀಕ್ಷೆಗೆ ಬಂದ ಅಭ್ಯರ್ಥಿ ಪರೀಕ್ಷೆಯಿಂದ ವಂಚಿತ
ಘಟನೆಗೆ ಸಂಬಂಧಿಸಿ ಮಾದನಾಯಕನಹಳ್ಳಿ ಪೊಲೀಸರು ಸೌಂದರ್ಯನ ಕುಟುಂಬಸ್ಥರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಸಂತೋಷ್‍ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 42 ಜನರನ್ನು ಹೊತ್ತಿದ್ದ ವಿಮಾನ ಸರೋವರದಲ್ಲಿ ಪತನ
Live Tv
[brid partner=56869869 player=32851 video=960834 autoplay=true]
ಅಂಕಾರಾ: ಖುಷಿಯಿಂದ ತನ್ನ ಗರ್ಭಿಣಿ (Pregnant) ಪತ್ನಿಯೊಂದಿಗೆ (Wife) ಸೆಲ್ಫಿ ತೆಗೆದುಕೊಂಡ ಸ್ವಲ್ಪ ಸಮಯದ ನಂತರ ಆಕೆಯನ್ನು ತಳ್ಳಿದ್ದ ವ್ಯಕ್ತಿಗೆ ಟರ್ಕಿ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
2018ರ ಜೂನ್‍ನಲ್ಲಿ ಟರ್ಕಿಯ ಪ್ರಾಂತ್ಯದ ಮುಗ್ಲಾದ ಬಟರ್ ಫ್ಲೈ ವ್ಯಾಲಿಯಲ್ಲಿ ಈ ಘಟನೆ ನಡೆದಿದೆ. ಸೆಮ್ರಾ ಐಸಲ್‍ಳನ್ನು 1,000 ಅಡಿ ಎತ್ತರ ಬಂಡೆಯಿಂದ ಆಕೆಯ ಪತಿ ಹಕನ್ ಐಸಲ್ ತಳ್ಳಿದ್ದನು. ಈ ವೇಳೆ ಸೆಮ್ರಾ ಐಸಲ್ 7 ತಿಂಗಳ ಗರ್ಭಿಣಿಯಾಗಿದ್ದಳು.
ಹಕನ್ ಪತ್ನಿ ಸತ್ತರೆ ಜೀವ ವಿಮೆಯ ಹಣವನ್ನು (Money) ಪಡೆದುಕೊಳ್ಳಬಹುದು ಎಂದು ಯೋಜನೆ ಹಾಕಿದ್ದ. ಅದರಂತೆ ಹಕನ್ ತನ್ನ ಪತ್ನಿಯನ್ನು ಎತ್ತರದ ಸ್ಥಳಕ್ಕೆ ಕರೆದೊಯ್ದಿದ್ದನು. ಈ ವೇಳೆ ಸೆಮ್ರಾ ಎತ್ತರದ ಸ್ಥಳವನ್ನು ನೋಡಿ ಹೆದರುತ್ತಿದ್ದಳು. ಅಲ್ಲಿ ಖುಷಿಯಿಂದ ಆಕೆಯ ಜೊತೆ ಸೆಲ್ಫಿ ತೆಗೆದುಕೊಂಡು ಸಮಯ ಕಳೆದಿದ್ದಾನೆ. ನಂತರ ಸೆಮ್ರಾಳನ್ನು ಅಲ್ಲಿಂದ ತಳ್ಳಿ ಹತ್ಯೆ ಮಾಡಿದ್ದಾನೆ.
ಆ ನಂತರ ಹಕನ್ ತನ್ ಪತ್ನಿ ಬಂಡೆಯಿಂದ ಕಾಲು ಜಾರಿ ಬಿದ್ದಿದ್ದಾಳೆ ಎಂದು ಕಥೆ ಹೇಳಿ 25,000 ಡಾಲರ್ ಮೌಲ್ಯದ ಜೀವ ವಿಮೆಯನ್ನು ಪಡೆದುಕೊಂಡ. ಆದರೆ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಈ ಭಯಾನಕ ವಿಷಯ ತಿಳಿದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಡಿಗೆ ಮನೆ ದರ ಹೆಚ್ಚಳ- ಬಾಡಿಗೆದಾರರು ಕಂಗಾಲು
ಚೆನ್ನೈ: ಆಸ್ತಿ ವಿವಾದಕ್ಕೆ ಸಂಬಂಧಿಸಿ ಮಹಿಳೆಯೊಬ್ಬಳನ್ನು ಆಕೆಯ ಮಗ (Son) ಹಾಗೂ ಸೊಸೆ (Daughter In Law) ಸೇರಿ ಹತ್ಯೆಗೈದ ಘಟನೆ ತಮಿಳುನಾಡಿನ (Tamil Nadu) ತಿರುನೆಲ್ವೇಲಿಯಲ್ಲಿ ನಡೆದಿದೆ.
ಎಸ್. ಅಣ್ಣಾಮಲೈ (47) ಮತ್ತು ಪತ್ನಿ ಎ. ಅನಿತಾ (42) ಸೇರಿ ಎಸ್. ಅರಸಮ್ಮಲ್ (70) ಅನ್ನು ಹತ್ಯೆ ಮಾಡಿದ್ದಾರೆ. ಅರಸಮ್ಮಲ್ ತನ್ನ ಪತಿ ತೀರಿಕೊಂಡ ನಂತರ ತಿರುನಲ್ವೇಲಿಯ ಕೆಟಿಸಿ ನಗರದಲ್ಲಿನ ಮನೆಯಲ್ಲಿ ತನ್ನ ಮಗ ಹಾಗೂ ಸೊಸೆಯೊಂದಿಗೆ ವಾಸವಿದ್ದಳು. ಆದರೆ ಅರಸಮ್ಮಲ್ ಹಾಗೂ ಆಕೆಯ ಸೊಸೆ ಅನಿತಾ ನಡುವಿನ ಸಂಬಂಧ ಚೆನ್ನಾಗಿರಲಿಲ್ಲ. ಆಗಾಗ ಇವರಿಬ್ಬರ ಮಧ್ಯೆ ಜಗಳವಾಗುತ್ತಿತ್ತು.
ಅಷ್ಟೇ ಅಲ್ಲದೇ ಅರಸಮ್ಮಲ್‌ನ ಜೊತೆ ಆಕೆಯ ಮಗ ಅಣ್ಣಾಮಲೈ ಕೂಡ ಆಸ್ತಿಯನ್ನು (Property) ತನ್ನ ಹೆಸರಿಗೆ ನೋಂದಣಿ ಮಾಡಬೇಕೆಂದು ಜಗಳವಾಡುತ್ತಿದ್ದನು. ಆದರೆ ಅರಸಮ್ಮಲ್‌ಳಿಗೆ ಹಾಗೆ ಮಾಡಲು ಮನಸಿರಲಿಲ್ಲ. ಇದೇ ವಿಷಯಕ್ಕೆ ಅನಿತಾ ಹಾಗೂ ಅರಸಮ್ಮಲ್ ನಡುವೆ ಜಗಳವಾಗಿತ್ತು. ಈ ವೇಳೆ ಅರಸಮ್ಮಲ್ ಅನ್ನು ಅನಿತಾ ತಳ್ಳಿದ್ದಾಳೆ. ಈ ವೇಳೆ ಅರಸಮ್ಮಲ್ ಪ್ರಜ್ಞೆ ತಪ್ಪಿದ್ದಾಳೆ. ಇದನ್ನೂ ಓದಿ: ಚಿಕ್ಕಮಗಳೂರು, ಉಡುಪಿಯಲ್ಲಿ ಡೇಂಜರ್ ಸೇತುವೆ – ನಿರ್ವಹಣೆ ಇಲ್ಲದೇ ಬೀಳುವ ಸ್ಥಿತಿ
ಇದಾದ ನಂತರ ಅನಿತಾ ಹಾಗೂ ಅಣ್ಣಾಮಲೈ ಸೇರಿ ಅರಸಮ್ಮಳಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಅದಾದ ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ್ದಾರೆ. ಆದರೆ ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರ ನಡೆಸಿದಾಗ ಘಟನೆಗೆ ನಿಜವಾದ ಕಾರಣ ತಿಳಿದುಬಂದಿದೆ. ಇದನ್ನೂ ಓದಿ:ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು – ಬಸ್ ಚಾಲಕನಿಗೆ ಸಾರ್ವಜನಿಕರಿಂದ ಥಳಿತ
Live Tv
[brid partner=56869869 player=32851 video=960834 autoplay=true]
ಜಕಾರ್ತ: ಇಂಡೋನೇಷ್ಯಾದ (Indonesia) ಪಶ್ಚಿಮ ಜಾವಾದ ಮಜಲೆಂಗ್ಕಾದ ವ್ಯಕ್ತಿಯೊಬ್ಬ (man) 88ನೇ ಬಾರಿಗೆ ಮಾಜಿ ಪತ್ನಿಯನ್ನು (Ex-Wife) ಮದುವೆಯಾಗಲು (Wedding) ಸಿದ್ಧನಾಗಿರುವ ವಿಚಿತ್ರ ಘಟನೆ ನಡೆದಿದೆ.
ಕಾನ್ (61) ಎಂದು ಎಂಬಾತ 88ನೇ ಬಾರಿಗೆ ತನ್ನ ಮಾಜಿ ಪತ್ನಿಯನ್ನು ಮದುವೆಯಾಗಲು ಸಿದ್ಧನಾಗಿದ್ದಾನೆ. ಅನೇಕ ಬಾರಿ ಈತ ಬೇರೆ ಬೇರೆ ಮಹಿಳೆಯನ್ನು ಈತ ಮದುವೆಯಾಗಿದ್ದಕ್ಕಾಗಿ ಪ್ಲೇಬಾಯ್ ಕಿಂಗ್ ಎಂದು ಅಡ್ಡಹೆಸರು ನೀಡಲಾಗಿದೆ. ಈಗ ಮದುವೆಯಾಗುತ್ತಿರುವ ಮಹಿಳೆ ಕಾನ್‌ನ 86ನೇ ಪತ್ನಿಯಾಗಿದ್ದಳು. ಕಾನ್ ಆಕೆಯೊಂದಿಗೆ ಮದುವೆಯಾದಾಗ ಅವಳ ಜೊತೆ ಹೆಚ್ಚು ದಿನಗಳ ಕಾಲ ವಾಸಿಸಿರಲಿಲ್ಲ. ಕೇವಲ ಒಂದು ತಿಂಗಳಷ್ಟೇ ಜೊತೆಯಲ್ಲಿದ್ದರೂ ಅವರ ಪ್ರೀತಿ ಹಾಗೇ ಗಟ್ಟಿ ಆಗಿತ್ತು. ಅಷ್ಟೇ ಅಲ್ಲದೇ 86ನೇ ಪತ್ನಿ ಕಾನ್‍ನನ್ನು ಇನ್ನು ಪ್ರೀತಿಸುತ್ತಿದ್ದಳು. ಇದರಿಂದಾಗಿ ಆಕೆ ಕಾನ್‍ನನ್ನು ಮತ್ತೆ ಮದುವೆಯಾಗುವುದಾಗಿ ಕೇಳಿದ್ದಾಳೆ. ಇದಕ್ಕೆ ಕಾನ್ ಕೂಡಾ ಸಮ್ಮತಿಯನ್ನು ನೀಡಿದ್ದಾನೆ.
ಕಾನ್ ಕೇವಲ 14 ವರ್ಷವಿದ್ದಾಗ ಮೊದಲ ಬಾರಿಗೆ ವಿವಾಹವಾಗಿದ್ದನು. ಆ ಮೊದಲ ಪತ್ನಿ ಕಾನ್‍ಗಿಂತ 2 ವರ್ಷ ಹಿರಿಯವಳಾಗಿದ್ದಳು. ಆದರೆ ಆತನ ವರ್ತನೆಯಿಂದಾಗಿ ಮದುವೆಯಾದ 2 ವರ್ಷಗಳ ನಮತರ ವಿಚ್ಛೇದನವನ್ನು ಪಡೆದುಕೊಂಡಿದ್ದಳು. ಇದನ್ನೂ ಓದಿ:ಅಧಿಕಾರಿಗಳ ವಿರುದ್ಧ ಸಚಿವ ಶ್ರೀರಾಮುಲು ಪ್ರತಿಭಟನೆ
ಈ ಬಗ್ಗೆ ಮಾತನಾಡಿದ ಅವರು, ಮಹಿಳೆಯರಿಗೆ ಒಳ್ಳೆಯದಲ್ಲದ ಕೆಲಸಗಳನ್ನು ಮಾಡಲು ನಾನು ಬಯಸುವುದಿಲ್ಲ, ಅವರ ಭಾವನೆಗಳೊಂದಿಗೆ ಆಟವಾಡಲು ನಾನು ನಿರಾಕರಿಸುತ್ತೇನೆ. ಅನೈತಿಕತೆ ಮಾಡುವ ಬದಲು ನಾನು ಮದುವೆಯಾಗುವುದು ಒಳ್ಳೆಯದು. ಮಹಿಳೆಯರು ಯಾರೇ ವಾಪಸ್ ಬಂದರೂ ನಾನು ನಿರಾಕರಿಸುವುದಿಲ್ಲ ಎಂದು ತಿಳಿಸಿದ್ದಾನೆ. ಇದನ್ನೂ ಓದಿ:ಶಾಸಕ ಸುರೇಶ್ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ- ಹಣ ಕೇಳಿದ ಕಿಡಿಗೇಡಿಗಳು
Live Tv
[brid partner=56869869 player=32851 video=960834 autoplay=true]