Tag: ಪತಿ

  • ದೆಹಲಿಯಲ್ಲಿ ಮತ್ತೊಂದು ಪೀಸ್ ಪೀಸ್ ಕ್ರೈಂ ಸ್ಟೋರಿ- ಪತಿಯನ್ನು ತುಂಡರಿಸಿ ಫ್ರಿಜ್‌ನಲ್ಲಿಟ್ಟ ಪತ್ನಿ!

    ದೆಹಲಿಯಲ್ಲಿ ಮತ್ತೊಂದು ಪೀಸ್ ಪೀಸ್ ಕ್ರೈಂ ಸ್ಟೋರಿ- ಪತಿಯನ್ನು ತುಂಡರಿಸಿ ಫ್ರಿಜ್‌ನಲ್ಲಿಟ್ಟ ಪತ್ನಿ!

    ನವದೆಹಲಿ: ಇಡೀ ದೇಶವನ್ನೇ ನಡುಗಿಸಿದ ದೆಹಲಿಯ (Delhi) ಶ್ರದ್ಧಾ ವಾಕರ್ (Shraddha Walkar) ಕ್ರೂರ ಹತ್ಯೆಯ ಬೆನ್ನಲ್ಲೇ ಇನ್ನೊಂದು ಅಂತಹುದೇ ಭೀಕರ ಹತ್ಯೆ (Murder) ನಡೆದಿದೆ. ಪತಿಯನ್ನು (Husband) ಕೊಂದು, ಆತನ ದೇಹವನ್ನು ಕತ್ತರಿಸಿ, ಫ್ರಿಜ್‌ನಲ್ಲಿ ಸಂಗ್ರಹಿಸಿಟ್ಟಿದ್ದು ಮಾತ್ರವಲ್ಲದೇ ದೆಹಲಿ ನೆರೆಹೊರೆಯ ಪ್ರದೇಶಗಳಲ್ಲಿ ಹೂತು ಹಾಕಿದ ಆರೋಪದ ಮೇಲೆ ಮಹಿಳೆ (Wife) ಹಾಗೂ ಆಕೆಯ ಮಗನನ್ನು (Son) ಪೊಲೀಸರು ಬಂಧಿಸಿದ್ದಾರೆ.

    ವರದಿಗಳ ಪ್ರಕಾರ, ಜೂನ್‌ನಲ್ಲಿ ಪಾಂಡವ ನಗರದಲ್ಲಿ ಪೊಲೀಸರಿಗೆ ಮೊದಲ ಬಾರಿಗೆ ಮನುಷ್ಯನ ಕೆಲ ದೇಹದ ಭಾಗಗಳು ಸಿಕ್ಕಿದ್ದವು. ಅವು ಕೊಳೆತ ಸ್ಥಿತಿಯಲ್ಲಿದ್ದ ಕಾರಣ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಭೀಕರ ವಿವರಗಳು ಬೆಳಕಿಗೆ ಬರುತ್ತಲೇ ಈ ಅಪರಿಚಿತ ದೇಹದ ಭಾಗಗಳು ಆಕೆಯದೇ ಎಂಬ ಬಗ್ಗೆ ತನಿಖೆ ನಡೆಸಲಾಗಿದೆ. ಆದರೆ ಆ ದೇಹದ ಭಾಗಗಳು ಶ್ರದ್ಧಾ ವಾಕರ್‌ಗೆ ಸೇರಿದ್ದಲ್ಲ, ಬದಲಿಗೆ ಅವು ಪಾಂಡವ ನಗರ ನಿವಾಸಿ ಅಂಜನ್ ದಾಸ್ ಎಂಬವರದ್ದು ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

    ಆರೋಪಿಗಳಾದ ಪೂನಂ ಮತ್ತು ಆಕೆಯ ಮಗ ದೀಪಕ್ ಜೂನ್‌ನಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ದಾಸ್ ಅವರನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಸ್‌ಗೆ ಮೊದಲು ನಿದ್ರೆ ಮಾತ್ರೆಗಳನ್ನು ನೀಡಿ ನಂತರ ಕೊಲೆ ಮಾಡಲಾಗಿದೆ. ಬಳಿಕ ಅವರ ದೇಹವನ್ನು ಕತ್ತರಿಸಿ, ತುಂಡುಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಟ್ಟಿದ್ದು, ಪಾಂಡವ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೂತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರದ್ಧಾ ಭೀಕರ ಹತ್ಯೆ ಪ್ರಕರಣ – ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟ ಕಿರಾತಕ

    ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನೂ ಹುಡುಕಿದ್ದಾರೆ. ವೀಡಿಯೋದಲ್ಲಿ ದೀಪಕ್ ತಡರಾತ್ರಿ ಕೈಯಲ್ಲಿ ಚೀಲವೊಂದನ್ನು ಹಿಡಿದುಕೊಂಡು ಹೋಗಿದ್ದು, ಆತನ ತಾಯಿ ಪೂನಂ ದೀಪಕ್‌ನನ್ನು ಹಿಂಬಾಲಿಸುವುದು ಕಂಡುಬಂದಿದೆ. ಆರೋಪಿಗಳು ದಾಸ್ ಅವರ ತುಂಡರಿಸಿದ ದೇಹದ ಭಾಗಗಳನ್ನು ವಿಲೇವಾರಿ ಮಾಡಲು ಚೀಲದಲ್ಲಿ ಕೊಂಡೊಯ್ದಿದ್ದಾರೆ ಎಂದು ಶಂಕಿಸಲಾಗಿದೆ.

    6 ತಿಂಗಳ ಹಿಂದೆ ದೆಹಲಿಯಲ್ಲಿ ಅಫ್ತಾಬ್ ಪೂನಾವಾಲಾ ತನ್ನ ಲಿವ್‌ಇನ್ ಪಾರ್ಟ್‌ನರ್ ಶ್ರದ್ಧಾ ವಾಕರ್ ಕತ್ತು ಹಿಸುಕಿ ಹತ್ಯೆ ನಡೆಸಿದ್ದು, ಬಳಿಕ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ, ದಕ್ಷಿಣ ಮೆಹ್ರೌಲಿ ಅರಣ್ಯದಲ್ಲಿ ಹೂತಿದ್ದ. ಈ ಭೀಕರ ಹತ್ಯೆ ಕೆಲ ದಿನಗಳ ಹಿಂದೆಯಷ್ಟೇ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಶ್ರದ್ಧಾವಾಕರ್ ಹತ್ಯೆ ಪ್ರಕರಣ – ಪಾಲಿಗ್ರಾಫ್ ಪರೀಕ್ಷೆ ವೇಳೆ ಅಫ್ತಾಬ್‍ಗೆ ಕೇಳಿದ ಪ್ರಶ್ನೆಗಳೇನು?

    Live Tv
    [brid partner=56869869 player=32851 video=960834 autoplay=true]

  • ಪ್ರಿಯಕರನೊಂದಿಗೆ ಸರಸವಾಡಲು ಪತಿಯನ್ನೇ ಕೊಂದ್ಲು – 25 ಅಡಿ ಆಳದ ಶೌಚಾಲಯದ ಗುಂಡಿಯಲ್ಲಿ ಹೂತಿಟ್ಳು

    ಪ್ರಿಯಕರನೊಂದಿಗೆ ಸರಸವಾಡಲು ಪತಿಯನ್ನೇ ಕೊಂದ್ಲು – 25 ಅಡಿ ಆಳದ ಶೌಚಾಲಯದ ಗುಂಡಿಯಲ್ಲಿ ಹೂತಿಟ್ಳು

    ಚಂಡೀಗಢ: ಪ್ರಿಯಕರನ ಜೊತೆ ಸೇರಿ ಮಹಿಳೆಯೊಬ್ಬಳು ತನ್ನ ಪತಿಯ ಕತ್ತು ಹಿಸುಕಿ ಕೊಂದು 25 ಅಡಿ ಆಳದ ಶೌಚಾಲಯದ ಗುಂಡಿಯಲ್ಲಿ ಶವವನ್ನು ಹೂತು ಹಾಕಿರುವ ಘಟನೆ ಪಂಜಾಬ್‍ನ (Punjab) ಸಂಗ್ರೂರ್ (Sangrur) ಜಿಲ್ಲೆಯಲ್ಲಿ ನಡೆದಿದೆ.

    ಬಕ್ಷೀವಾಲಾ ನಿವಾಸಿ ಅಮ್ರಿಕ್ ಸಿಂಗ್ ಮೃತ ದುರ್ದೈವಿಯಾಗಿದ್ದು, ಸುಮಾರು ಒಂದು ತಿಂಗಳ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದ್ದು, ಶನಿವಾರ ಮೃತದೇಹವನ್ನು ಶೌಚಾಲಯದ ಗುಂಡಿಯಿಂದ ಹೊರ ತೆಗೆಯಲಾಗಿದೆ. ಇದನ್ನೂ ಓದಿ: ತುಂಗಾತೀರದಲ್ಲಿ ಮಾತ್ರವಲ್ಲ, ಚಾರ್ಮಾಡಿ ತಪ್ಪಲಿನಲ್ಲೂ ನಡೀತಾ ಟ್ರಯಲ್ ಬ್ಲಾಸ್ಟ್?

    ಆರೋಪಿಯನ್ನು 35 ವರ್ಷದ ರಜ್ಜಿ ಕೌರ್ ಅಲಿಯಾಸ್ ಜಸ್ವಿರ್ ಕೌರ್ ಎಂದು ಗುರುತಿಸಲಾಗಿದ್ದು, ತನ್ನ 13 ಮತ್ತು 11 ವರ್ಷದ ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ನವೆಂಬರ್ 20 ರಂದು ತನ್ನ ಪತಿ ನಾಪತ್ತೆಯಾಗಿರುವುದಾಗಿ ಪತಿಗೆ ದೂರು ನೀಡಿದ್ದಾಳೆ. ಪ್ರಕರಣ ಸಂಬಂಧ ತನಿಖೆ ವೇಳೆ ಕೌರ್ ಅದೇ ಪ್ರದೇಶದ ನಿವಾಸಿ ಸುರ್ಜಿತ್ ಸಿಂಗ್ ಬಗ್ಗಾ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಚಾರ ಬಯಲಾಗಿದೆ. ಪ್ರಿಯಕರ ಸುರ್ಜಿತ್ ಜೊತೆ ಸೇರಿ ತನ್ನ ಪತಿಯನ್ನು ಅಕ್ಟೋಬರ್ 27ರಂದು ಕೊಂದಿರುವುದಾಗಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಸಂಗ್ರೂರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಎಸ್‍ಪಿ) ಸುರೇಂದ್ರ ಲಂಬಾ ತಿಳಿಸಿದ್ದಾರೆ.

    ಅಕ್ಟೋಬರ್ 27ರ ಸಂಜೆ ತನ್ನ ಪತಿ ಅಮ್ರಿಕ್‍ಗೆ ಕೋಳಿ ಸಾಂಬಾರ್‍ನಲ್ಲಿ ನಿದ್ದೆ ಮಾತ್ರೆಗಳನ್ನು ಬೆರೆಸಿ ಊಟ ಮಾಡಿಸಿದ್ದಾಳೆ. ನಂತರ ಅಮ್ರಿಕ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಬಳಿಕ ಪ್ರಿಯಕರನನ್ನು ಮನೆಗೆ ಕರೆಸಿ ಇಬ್ಬರು ಸೇರಿ ಆತನ ಕತ್ತು ಹಿಸುಕಿ ಕೊಂದಿದ್ದಾರೆ. ಬಳಿಕ 25 ಅಡಿ ಆಳದ ಶೌಚಾಲಯದ ಗುಂಡಿಯಲ್ಲಿ ಶವವನ್ನು ಹೂತು ಹಾಕಿದ್ದಾರೆ. ಕೊನೆಗೆ ಯಾವುದೇ ಅನುಮಾನ ಬರದಂತೆ 20 ದಿನಗಳ ನಂತರ ನಾಪತ್ತೆ ದೂರು ನೀಡಿದ್ದಾಳೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಶನಿವಾರ ಶವವನ್ನು ಹೊರತೆಗೆಯಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಬುಲೆಟ್ ಸವಾರಿ – ವೀಡಿಯೋ ವೈರಲ್

    Live Tv
    [brid partner=56869869 player=32851 video=960834 autoplay=true]

  • ಊಟದಲ್ಲಿ ಇರುವೆ ಇದೆ ಎಂದು ರೇಗಿದ್ದಕ್ಕೆ ಪತಿ ಕತ್ತು ಹಿಸುಕಿ ಕೊಂದ ಪತ್ನಿ

    ಊಟದಲ್ಲಿ ಇರುವೆ ಇದೆ ಎಂದು ರೇಗಿದ್ದಕ್ಕೆ ಪತಿ ಕತ್ತು ಹಿಸುಕಿ ಕೊಂದ ಪತ್ನಿ

    ಭುವನೇಶ್ವರ್: ಊಟದಲ್ಲಿ ಇರುವೆ ಇದೆ ಎಂದು ರೇಗಿದ್ದಕ್ಕೆ ಪತಿಯನ್ನು ಕತ್ತು ಹಿಸುಕಿ ಪತ್ನಿ ಕೊಂದಿರುವ ಘಟನೆ ಒಡಿಶಾದ ಸುಂದರ್‌ಗಢ್ ಜಿಲ್ಲೆಯಲ್ಲಿ ನಡೆದಿದೆ.

    ಹೇಮಂತ ಬಾಗ್ (35) ಪತ್ನಿಯಿಂದ ಹತ್ಯೆಯಾದ ವ್ಯಕ್ತಿ. ಕೊಲೆ ಮಾಡಿದ ಆತನ ಪತ್ನಿ ಸರಿತಾಳನ್ನು ಪೊಲೀಸರು ಬಂಧಿಸಿದ್ದಾರೆ. ಈಕೆಯ ಮಾವ ಶಶಿ ಭೂಷಣ್‌ ಬಾಗ್‌ ನೀಡಿದ ದೂರಿನ ಮೇರೆಗೆ ಪೊಲೀಸರು ಸರಿತಾಳನ್ನು ಅರೆಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಸಂಬಳ ಕೇಳಿದ ದಲಿತ ವ್ಯಕ್ತಿಯನ್ನು ಥಳಿಸಿ, ಮೂತ್ರ ಕುಡಿಯುವಂತೆ ಒತ್ತಾಯಿಸಿ ವಿಕೃತಿ

    ಹೇಮಂತ ಊಟ ಮಾಡುವಾಗ ಅನ್ನದಲ್ಲಿ ಇರುವೆ ಸಿಕ್ಕಿದೆ. ಊಟದಲ್ಲಿ ಇರುವೆ ಇದೆ ಎಂದು ಆತ ಪತ್ನಿ ಮೇಲೆ ರೇಗಾಡಿದ್ದಾನೆ. ಪತಿ, ಪತ್ನಿ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಸರಿತಾ ಕತ್ತು ಹಿಸುಕಿ ಕೊಂದಿದ್ದಾಳೆ.

    ಹೇಮಂತ ಬಾಗ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪತ್ನಿ ಸರಿತಾ, ಪುತ್ರಿ ಹೇಮಲತಾ, ಪುತ್ರ ಸೌಮ್ಯ ಜೊತೆ ವಾಸವಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಬಕಾರಿ ಹಗರಣ – ಸಿಬಿಐ ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಮನೀಶ್ ಸಿಸೋಡಿಯಾ ಹೆಸರಿಲ್ಲ

    Live Tv
    [brid partner=56869869 player=32851 video=960834 autoplay=true]

  • ಪತ್ನಿಗೆ ಡೆಡ್ಲಿ ಡ್ರಗ್ಸ್ ನೀಡಿ ಕೊಂದ ಪತಿ – ಸೂಸೈಡ್ ಅಂತ ಬಿಂಬಿಸಲು ಹೋಗಿ ಸಿಕ್ಕಿಬಿದ್ದ

    ಪತ್ನಿಗೆ ಡೆಡ್ಲಿ ಡ್ರಗ್ಸ್ ನೀಡಿ ಕೊಂದ ಪತಿ – ಸೂಸೈಡ್ ಅಂತ ಬಿಂಬಿಸಲು ಹೋಗಿ ಸಿಕ್ಕಿಬಿದ್ದ

    ಮುಂಬೈ: ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ವ್ಯಕ್ತಿಯೋರ್ವ, ತನ್ನ ಪತ್ನಿಗೆ ಚುಚ್ಚುಮದ್ದಿನ ಮೂಲಕ ಡೆಡ್ಲಿ ಡ್ರಗ್ಸ್ ನೀಡಿ ಕೊದು ನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿರುವ ಘಟನೆ ಮಹಾರಾಷ್ಟ್ರದ (Maharashtra) ಪುಣೆ (Pune) ಜಿಲ್ಲೆಯಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಪ್ರಿಯಾಂಕಾ ಎಂದು ಗುರುತಿಸಲಾಗಿದ್ದು, ನವೆಂಬರ್ 14 ರಂದು ಈ ಘಟನೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಪ್ರಿಯಾಂಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಕದ್ರಿ ದೇವಸ್ಥಾನ ನಮ್ಮ ಟಾರ್ಗೆಟ್‌ – ಮಂಗಳೂರು ಸ್ಫೋಟದ ಹೊಣೆ ಹೊತ್ತುಕೊಂಡ ಉಗ್ರ ಸಂಘಟನೆ

    ಆರೋಪಿ ಸ್ವಪ್ನಿಲ್ ಸಾವಂತ್ ಐದು ತಿಂಗಳ ಹಿಂದೆಯಷ್ಟೇ ಪ್ರಿಯಾಂಕಾ ಅವರನ್ನು ಮದುವೆಯಾಗಿ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸ್ವಪ್ನಿಲ್ ಸಾವಂತ್ ತನ್ನ ಸಹೋದ್ಯೋಗಿ ನರ್ಸ್ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಆಕೆಯನ್ನು ಮದುವೆಯಾಗಲು ಪ್ಲ್ಯಾನ್ ಮಾಡಿಕೊಂಡಿದ್ದ ಹೀಗಾಗಿ ತನ್ನ ಪತ್ನಿಯನ್ನು ಹತ್ಯೆಗೈದಿದ್ದಾನೆ. ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಪೌಡ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಬೇರೆ ಜಾತಿಯ ವ್ಯಕ್ತಿಯನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಲೆ ಮಾಡಿದ ತಾಯಿ

    ಘಟನೆ ನಂತರ ಪ್ರಿಯಾಂಕಾ ಸಹಿ ಹಾಕಿರುವ ಸೂಸೈಡ್ ನೋಟ್ ಪತ್ತೆಯಾಗಿತ್ತು. ಆದರೆ ತನಿಖೆಯ ವೇಳೆ ಸಾವಂತ್ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಿಂದ ವೆಕುರೋನಿಯಂ ಬ್ರೋಮೈಡ್, ನೈಟ್ರೊಗ್ಲಿಸರಿನ್ ಮತ್ತು ಲಾಕ್ಸ್ 2% ಸೇರಿದಂತೆ ಕೆಲವು ಡ್ರಗ್ಸ್‌ಗಳಿರುವ ಚುಚ್ಚುಮದ್ದುಗಳನ್ನು ಕದ್ದು ಪತ್ನಿಯನ್ನು ಕೊಂದಿರುವ ವಿಚಾರ ಬೆಳಕಿಗೆ ಬಂದಿದೆ. ಇದೀಗ ಸಾವಂತ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ವಿವಿಧ ಸೆಕ್ಷನ್‍ಗಳ ಅಡಿಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಮನೋಜ್ ಯಾದವ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಿವಿಯೋಲೆಗಾಗಿ ಪತ್ನಿಯನ್ನೇ ಕೊಂದು ವಾರಣಾಸಿಗೆ ಪರಾರಿಯಾದ

    ಕಿವಿಯೋಲೆಗಾಗಿ ಪತ್ನಿಯನ್ನೇ ಕೊಂದು ವಾರಣಾಸಿಗೆ ಪರಾರಿಯಾದ

    ಮುಂಬೈ: ಚಿನ್ನದ ಕಿವಿಯೋಲೆಯನ್ನು (Gold Earring) ಕೊಟ್ಟಿಲ್ಲವೆಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಲಸೋಪಾರಾದಲ್ಲಿ ಪತ್ನಿಯನ್ನೇ (Wife) ಕೊಂದು ಪತಿಯೊಬ್ಬ (Husband) ಪರಾರಿಯಾಗಿದ್ದಾರೆ,

    32 ವರ್ಷದ ವ್ಯಕ್ತಿಯನ್ನು ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಇತ್ತೀಚೆಗೆ ಆತ ತನ್ನ ತಾಯಿಯ ಅಂತ್ಯಸಂಸ್ಕಾರದ ನಂತರದ ವಿಧಿವಿಧಾನಗಳನ್ನು ಮಾಡಲು ಹಣ ಕಡಿಮೆ ಇರುವುದರಿಂದ ಪತ್ನಿ ಬಳಿ ತನ್ನ ಚಿನ್ನದ ಕಿವಿಯೋಲೆಗಳನ್ನು ನೀಡಲು ಒತ್ತಾಯಿಸಿದ್ದಾನೆ. ಅದರೆ ಚಿನ್ನದ ಕಿವಿಯೋಲೆಯನ್ನು ನೀಡಲು ಆಕೆ ನಿರಾಕರಿಸಿದ್ದಾಳೆ. ಇದನ್ನೂ ಓದಿ: ಬೇರೆಯವಳು ಕಾಲ್ ಪಿಕ್ ಮಾಡಿದ್ದಕ್ಕೆ ಬಾಯ್‍ಫ್ರೆಂಡ್ ಮನೆಗೆ ಬೆಂಕಿ ಇಟ್ಲು

    ಇದರಿಂದ ಕೋಪಗೊಂಡ ಪತಿ ನ.19ರಂದು ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿ ಮಹಾರಾಷ್ಟç ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಈ ವೇಳೆ ಆರೋಪಿ ವಾರಣಾಸಿಗೆ ಪರಾರಿಯಾಗುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಮೀರಾ ಭಯಂದರ್ ವಸಾಯಿ ವಿರಾರ್ (ಎಂಬಿವಿವಿ) ಪೊಲೀಸರ ತಂಡವು ಲಲಿತ್‌ಪುರಕ್ಕೆ ಧಾವಿಸಿ ರೈಲಿನಲ್ಲಿ ಬಂಧಿಸಿದೆ. ಇದನ್ನೂ ಓದಿ: ಪತ್ನಿಯನ್ನು ಕೊಂದು ಆಕೆಯ ಶವವನ್ನು ತುಂಡರಿಸಿ ವಿಕೃತಿ ಮೆರೆದ ಪತಿ

    Live Tv
    [brid partner=56869869 player=32851 video=960834 autoplay=true]

  • ಪತ್ನಿಯನ್ನು ಕೊಂದು ಆಕೆಯ ಶವವನ್ನು ತುಂಡರಿಸಿ ವಿಕೃತಿ ಮೆರೆದ ಪತಿ

    ಪತ್ನಿಯನ್ನು ಕೊಂದು ಆಕೆಯ ಶವವನ್ನು ತುಂಡರಿಸಿ ವಿಕೃತಿ ಮೆರೆದ ಪತಿ

    ಲಕ್ನೋ: ಪತಿಯೊಬ್ಬ (Husband) ಪತ್ನಿಯ (Wife) ಶವವನ್ನು ತುಂಡರಿಸಿ ದೂರದ ಸ್ಥಳದಲ್ಲಿ ವಿಲೇವಾರಿ ಮಾಡಿರುವ ಪ್ರಕರಣ ಉತ್ತರಪ್ರದೇಶದ ಸೀತಾಪುರದಲ್ಲಿ ನಡೆದಿದೆ.

    ಉತ್ತರಪ್ರದೇಶದ ಸೀತಾಪುರ ಜಿಲ್ಲೆಯ ರಾಮ್‌ಪುರ ಕಲಾನ್ ಪ್ರದೇಶದ ನಿವಾಸಿ ಜ್ಯೋತಿ ಅಲಿಯಾಸ್ ಸ್ನೇಹಾ ಎಂಬಾಕೆ ಮೃತ ಮಹಿಳೆಯಾಗಿದ್ದು, ಆಕೆಯ ಪತಿ ಪಂಕಜ್ ಮೌರ್ಯ ಹಾಗೂ ಆತನ ಸ್ನೇಹಿತ ದುರ್ಜನ್ ಪಾಸಿ ಬಂಧಿತ (Arrest) ವ್ಯಕ್ತಿಗಳು.

    crime

    ಪಂಕಜ್ ಹತ್ತು ವರ್ಷದ ಹಿಂದೆ ಸ್ನೇಹಾಳನ್ನು ಮದುವೆಯಾಗಿದ್ದ. ಸ್ನೇಹಾ ಪ್ರತಿನಿತ್ಯ ಮದ್ಯ ಸೇವನೆ ಮಾಡುತ್ತಿದ್ದಳು. ಅಷ್ಟೇ ಅಲ್ಲದೇ ಹಲವು ದಿನಗಳಿಂದ ಆಕೆಗೆ ಬೇರೆಯವರ ಜೊತೆಗೂ ಸಂಬಂಧವಿದ್ದು, ಆಕೆ ಯಾರದ್ದೋ ಮನೆಯಲ್ಲಿ ಇರುತ್ತಿದ್ದಳು. ಇದರಿಂದಾಗಿ ಪ್ರತಿನಿತ್ಯ ಸ್ನೇಹಾ ಹಾಗೂ ಪಂಕಜ್ ಮಧ್ಯೆ ಜಗಳವಾಗುತ್ತಿತ್ತು. ಇದರಿಂದಾಗಿ ಪಂಕಜ್ ಸ್ನೇಹಾಳನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.

    ಇದಾದ ಬಳಿಕ ಯೋಜನೆಯನ್ನು ರೂಪಿಸಿ ತನ್ನ ಸ್ನೇಹಿತ ದುರ್ಜನ್ ಸಹಾಯದಿಂದ ಪತ್ನಿ ಸ್ನೇಹಾಳನ್ನು ಕೊಲೆ ಮಾಡಿದ್ದಾನೆ. ಅದಾದ ಬಳಿಕ ಯಾರಿಗೂ ಗೊತ್ತಾಗದಂತೆ ಸ್ನೇಹಾಳ ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ್ದಾನೆ. ಇದನ್ನೂ ಓದಿ: ಬುದ್ಧಿವಾದ ಹೇಳಿದ್ದಕ್ಕೆ ಶಾಲೆ ಬಿಟ್ಟ ಶಾರೀಕ್- ಕುಕ್ಕರ್ ಬಾಂಬರ್ ಹಿನ್ನೆಲೆಯೇ ರೋಚಕ

    ಘಟನೆಗೆ ಸಂಬಂಧಿಸಿ ಸೀತಾಪುರ ಪೊಲೀಸರು ನವೆಂಬರ್ 8 ರಂದು ಗುಲಾರಿಹಾ ಪ್ರದೇಶದಿಂದ ಸ್ನೇಹಾಳ ದೇಹದ ಭಾಗಗಳನ್ನು ವಶಪಡಿಸಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮತ್ತೆ ಧರ್ಮ ದಂಗಲ್ ಶುರು- ಕುಕ್ಕೆಯಲ್ಲಿ ಷಷ್ಠಿ ವೇಳೆ ಹಿಂದೂಯೇತರರ ವ್ಯಾಪಾರಕ್ಕೆ ನಿಷೇಧ

    Live Tv
    [brid partner=56869869 player=32851 video=960834 autoplay=true]

  • ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಮದುವೆಯಾದ ಒಂದೇ ವರ್ಷಕ್ಕೆ ಆತ್ಮಹತ್ಯೆಗೆ ಶರಣಾದ ಟೆಕ್ಕಿ

    ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಮದುವೆಯಾದ ಒಂದೇ ವರ್ಷಕ್ಕೆ ಆತ್ಮಹತ್ಯೆಗೆ ಶರಣಾದ ಟೆಕ್ಕಿ

    – ಸಾಯ್ತೀನಿ ಎಂದು ಮೇಸೆಜ್ ಮಾಡಿದ್ದ ಪತ್ನಿಗೆ ಗುಡ್ ಬೈ ಎಂದು ರಿಪ್ಲೈ ನೀಡಿದ ಪತಿ

    ಬೆಂಗಳೂರು: ಪತಿಯ (Husband) ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿಯೊಬ್ಬಳು (Wife) ಮದುವೆಯಾದ ಒಂದೇ ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ (Bengaluru) ರಾಮಮೂರ್ತಿ ನಗರದ ರಿಚರ್ಡ್ ಗಾರ್ಡನ್‍ನಲ್ಲಿ ನಡೆದಿದೆ.

    ಐಟಿ ಉದ್ಯಮಿ ಆಗಿರುವ ಶ್ವೇತಾ (27) ನ.10ರಂದು ನೇಣಿಗೆ ಶರಣಾಗಿದ್ದಾಳೆ. ಐಬಿಎಂ ಕಂಪನಿಯ ಉದ್ಯೋಗಿಯಾಗಿದ್ದ ಶ್ವೇತಾ 11 ತಿಂಗಳ ಹಿಂದಷ್ಟೇ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಆದರೆ ಮದುವೆಗೂ ಮುನ್ನ ಅಭಿಷೇಕ್‍ಗೆ ಯುವತಿಯೊಬ್ಬಳೊಂದಿಗೆ ಸಂಬಂಧವಿತ್ತು ಎನ್ನುವ ವಿಷಯವು ಶ್ವೇತಾಳಿಗೆ ಮದುವೆಯಾದ ಬಳಿಕ ತಿಳಿದಿದೆ. ಈ ವಿಚಾರ ಗೊತ್ತಾದ ಬಳಿಕ ಶ್ವೇತಾ ಹಾಗೂ ಅಭಿಷೇಕ್ ಮಧ್ಯೆ ಪ್ರತಿನಿತ್ಯ ಜಗಳವಾಗುತ್ತಿತ್ತು.

    ಅದಾದ ಬಳಿಕ ಪರಸ್ಪರ ರಾಜಿ ಪಂಚಾಯತಿ ನಡೆದಿತ್ತು. ಆ ನಂತರ ಅಭಿಷೇಕ್ ಹಾಗೂ ಶ್ವೇತಾ ಇಬ್ಬರೂ ಒಟ್ಟಿಗೆ ಜೀವನ ಸಾಗಿಸುತ್ತಿದ್ದರು. ಈ ನಡುವೆ ಅಭಿಷೇಕ್ ತನ್ನ ಹಳೆಯ ಚಾಳಿಯನ್ನೇ ಪುನಃ ಮುಯಂದುವರಿಸಿದ್ದಾನೆ. ಇದರಿಂದಾಗಿ ಬೇಸತ್ತ ಶ್ವೇತಾ ನೇಣಿಗೆ ಶರಣಾಗಿದ್ದಾಳೆ ಎಂಬ ಆರೋಪಗಳು ಮೃತ ಶ್ವೇತಾಳ ಕುಟುಂಬದಿಂದ ಕೇಳಿಬಂದಿದೆ.

    ಈ ಹಿನ್ನೆಲೆಯಲ್ಲಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಶ್ವೇತಾಳ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದರು. ಪತ್ನಿಯ ಅಂತ್ಯ ಸಂಸ್ಕಾರದ ಬಳಿಕ ಅಭಿಷೇಕ್ ಸತ್ಯ ಒಪ್ಪಿಕೊಂಡಿದ್ದು, ಮದುವೆಗೂ ಮುನ್ನ ಇನ್ನೋರ್ವ ಯುವತಿಯ ಜೊತೆ ಸಂಬಂಧ ಹೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

    ಶ್ವೇತಾಳೊಂದಿಗೆ ಮದುವೆ ನಿಶ್ಚಯವಾದ ನಂತರವೂ ಅದೇ ಯುವತಿಯೊಂದಿಗೆ ಟೂರ್ ಹೋಗಿದ್ದ. ಅಷ್ಟೇ ಅಲ್ಲದೇ ಮದುವೆಯ ನಂತರವೂ ಅನೈತಿಕ ಸಂಬಂಧ ಮುಂದುವರಿಸಿದ್ದ. ಈ ವಿಚಾರ ತಿಳಿದು ಶ್ವೇತಾ ಗಲಾಟೆ ಮಾಡಿದ್ದಳು. ಆ ಬಳಿಕ ಪತ್ನಿಯ ಬಳಿ ಕ್ಷಮೆಯಾಚಿಸಿ ಸುಮ್ಮನಾಗಿರುವ ಬಗ್ಗೆ ತಿಳಿಸಿದ್ದಾನೆ. ಇದನ್ನೂ ಓದಿ: 15 ವರ್ಷಗಳಿಂದ ಮಕ್ಕಳಿಲ್ಲದೇ ಹರಕೆ ಹೊತ್ತು ಹಿಂದಿರುಗುವಾಗಲೇ ದುರಂತ – ದಂಪತಿ ಸಾವು

    ಅಷ್ಟೇ ಅಲ್ಲದೇ ಇತ್ತೀಚಿಗೆ ಕೊಯಮತ್ತೂರು ಹೋಗುವುದಾಗಿ ಅಭಿಷೇಕ್ ದೆಹಲಿಗೆ ಹೋಗಿದ್ದ. ಆ ಯುವತಿಯನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದ ಎನ್ನುವ ವಿಚಾರ ತಿಳಿದು ಪತ್ನಿ ಶ್ವೇತಾ ಗಲಾಟೆ ಮಾಡಿದ್ದಳು. ಅದಾದ ಬಳಿಕ ಶ್ವೇತಾ ಸಾಯ್ತೀನಿ ಗುಡ್ ಬೈ ಎಂದು ಮೇಸೆಜ್ ಕಳಿಸಿದ್ದಳು. ಅದಕ್ಕೆ ಅಭಿಷೇಕ್ ಗುಡ್ ಬೈ ಎಂದು ರಿಪ್ಲೈ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿ ರಾಮಮೂರ್ತಿ ನಗರ ಪೊಲೀಸರು ಆರೋಪಿ ಅಭಿಷೇಕ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸದ್ಯಕ್ಕೆ ಡಿಕೆ ಶಿವಕುಮಾರ್ ಬಂಧಿಸಲ್ಲ: ಇಡಿ

    Live Tv
    [brid partner=56869869 player=32851 video=960834 autoplay=true]

  • ಕುಡಿದ ಮತ್ತಿನಲ್ಲಿ ದೊಣ್ಣೆಯಿಂದ ಹೊಡೆದು ನಾಲ್ಕನೇ ಪತ್ನಿಯ ಹತ್ಯೆ

    ಕುಡಿದ ಮತ್ತಿನಲ್ಲಿ ದೊಣ್ಣೆಯಿಂದ ಹೊಡೆದು ನಾಲ್ಕನೇ ಪತ್ನಿಯ ಹತ್ಯೆ

    ರಾಮನಗರ: ಕುಡಿದ ಅಮಲಿನಲ್ಲಿ ಪತ್ನಿಯನ್ನೇ (Wife) ಪತಿ (Husband) ಕಟ್ಟಿಗೆಯಿಂದ ಬಡಿದು ಕೊಲೆ ಮಾಡಿರುವ ಘಟನೆ ರಾಮನಗರ (Ramanagara) ಜಿಲ್ಲೆಯ ಅವೇರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಮಾವಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಬೋರಯ್ಯ ತಡರಾತ್ರಿ ಕುಡಿದು ಜಗಳವಾಡಿ ಪತ್ನಿ ಭದ್ರಮ್ಮನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಇಬ್ಬರೂ ಕೂಡಾ ಪಾನಮತ್ತರಾಗಿದ್ದರೆಂದು ಹೇಳಲಾಗಿದೆ. ಮೃತ ಭದ್ರಮ್ಮ ಬೋರಯ್ಯನ ನಾಲ್ಕನೇ ಪತ್ನಿಯಾಗಿದ್ದಳು. ಇದನ್ನೂ ಓದಿ: ಲೈಸೆನ್ಸ್ ರಿನ್ಯೂವಲ್ ಮಾಡಿಲ್ಲ- ಅಂಗಡಿ ವ್ಯಾಪಾರಿಗೆ ಜನಪ್ರತಿನಿಧಿಯಿಂದ ಹಲ್ಲೆ

    ಈ ಮೊದಲು ಬೋರಯ್ಯ ತನ್ನ ಎರಡನೇ ಪತ್ನಿಯನ್ನು ಸಹ 2014ರಲ್ಲಿ ಇದೇ ರೀತಿ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಬಳಿಕ 6 ವರ್ಷಗಳ ಕಾಲ ಶಿಕ್ಷೆ ಅನುಭವಿಸಿ ಹೊರಬಂದು ಭದ್ರಮ್ಮಳನ್ನು ಮದುವೆಯಾಗಿದ್ದನು. ಈ ಮಧ್ಯ ಎರಡನೇ ಪತ್ನಿ ಬದುಕಿರುವಾಗಲೇ ಇನ್ನೊಂದು ಮದುವೆ ಆಗಿದ್ದ. ಇದೀಗ ಪತ್ನಿಯನ್ನು ಹತ್ಯೆ ಮಾಡಿದ ಆರೋಪಿಯನ್ನು ರಾಮನಗರ ಗ್ರಾಮಾಂತರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಜಿಲ್ಲೆಗಳಲ್ಲಿ ಸರ್ಕಾರಿ ಗೋಶಾಲೆ ಆರಂಭಕ್ಕೆ ಡಿಸೆಂಬರ್ ಡೆಡ್‌ಲೈನ್: ಪ್ರಭು ಚೌಹಾಣ್

    Live Tv
    [brid partner=56869869 player=32851 video=960834 autoplay=true]

  • ಮಚ್ಚಿನಿಂದ ಹೊಡೆದು ಪತ್ನಿಯ ಕೊಲೆಗೈದ ಪಾಪಿ ಪತಿ!

    ಮಚ್ಚಿನಿಂದ ಹೊಡೆದು ಪತ್ನಿಯ ಕೊಲೆಗೈದ ಪಾಪಿ ಪತಿ!

    ನೆಲಮಂಗಲ: ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಘಟನೆ ನಡೆದಿದೆ.

    ನೆಲಮಂಗಲ (Nelamangala) ತಾಲೂಕಿನ ಭೂಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಶೃತಿ (24) ಕೊಲೆಯಾದ ಗೃಹಿಣಿ. ಈತ ಮದುವೆಯಾಗಿ ಒಂದೂವರೆ ವರ್ಷದಲ್ಲಿ ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿದ್ದಾನೆ.

    ತರಬನಹಳ್ಳಿ ನಿವಾಸಿಯಗಿರುವ ಶೃತಿಯನ್ನು ಪತಿ ಕೃಷ್ಣಮೂರ್ತಿ ಕೊಲೆಗೈದಿದ್ದಾನೆ. ಬಳಿಕ ಭೂಸಂದ್ರ ಗ್ರಾಮದ ತನ್ನ ನಿವಾಸದಿಂದ ನಾಪತ್ತೆಯಾಗಿದ್ದಾನೆ. ಇದನ್ನೂ ಓದಿ: ಸ್ವಂತ ಮಗಳನ್ನ ಗುಂಡಿಕ್ಕಿ ಕೊಂದು, ಸೂಟ್‌ಕೇಸ್‌ನಲ್ಲಿ ಬಿಸಾಡಿದ ತಂದೆ

    ಸದ್ಯ ಮೃತ ಶೃತಿ ಕುಟುಂಬದವರು ವರದಕ್ಷಿಣೆ ಕಿರುಕುಳ ಆರೋಪ ಮಾಡುತ್ತಿದ್ದಾರೆ. ಮೃತ ಶೃತಿ ದೇಹದ ತುಂಬಾ ಗಂಭೀರವಾದ ಗಾಯದ ಗುರುತುಗಳು ಪತ್ತೆಯಾಗಿವೆ.

    ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಕ್ಕಳನ್ನು ನೋಡಲು ಬಿಡದಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿದ ಪಾಪಿ ಪತಿ!

    ಮಕ್ಕಳನ್ನು ನೋಡಲು ಬಿಡದಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿದ ಪಾಪಿ ಪತಿ!

    – ಪತ್ನಿ, ಮಕ್ಕಳಿಗೆ ಗಂಭೀರ ಗಾಯ

    ಹಾಸನ: ಪಾಪಿ ಪತಿ ಮಹಾಶಯನೊಬ್ಬ ತನ್ನ ಮಕ್ಕಳನ್ನು ನೋಡಲು ಬಿಡದಿದ್ದಕ್ಕೆ ಮನೆಗೇ ಬೆಂಕಿಯಿಟ್ಟ ಘಟನೆ ಹಾಸನದಲ್ಲಿ ನಡೆದಿದೆ.

    ಹಾಸನ ತಾಲೂಕಿನ, ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದ ಮನೆಯೊಳಗಿದ್ದ ಪತ್ನಿ, ಇಬ್ಬರು ಗಂಡು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳಾದ ಗೀತಾ, ಚಿರಂತನ್ (7), ನಂದನ್ (5)ಗೆ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರಂಗಸ್ವಾಮಿ ಮನೆಗೆ ಬೆಂಕಿ (Fire) ಹಚ್ಚಿದ ಆರೋಪಿಯಾಗಿದ್ದು, ಜಮೀನು ವಿಚಾರಕ್ಕೆ ರಂಗಸ್ವಾಮಿ ಹಾಗೂ ಗೀತಾ ನಡುವೆ ಜಗಳವಾಗಿತ್ತು. ಈ ಸಂಬಂಧ ಗೊರೂರು ಪೊಲೀಸ್ ಠಾಣೆ (Geruru Police Station) ಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಹೀಗಾಗಿ ನಾಲ್ಕು ತಿಂಗಳಿನಿಂದ ಪತಿ ಹಾಗೂ ಪತ್ನಿ, ಮಕ್ಕಳು ಪ್ರತ್ಯೇಕವಾಗಿದ್ದರು. ಇದನ್ನೂ ಓದಿ: ಪೀಸ್ ಪೀಸ್ ಪ್ರೇಮಿಯ ಮತ್ತಷ್ಟು ಕ್ರೂರತೆ ಬಹಿರಂಗ- ದೆಹಲಿ ಮಾತ್ರವಲ್ಲ ಡೆಹ್ರಾಡೂನ್‍ನಲ್ಲೂ ದೇಹದ ತುಂಡು ಎಸೆತ

    ಇತ್ತ ರಂಗಸ್ವಾಮಿ ಆಗಾಗ ಬಂದು ಮಕ್ಕಳನ್ನು (Children) ನೋಡಿಕೊಂಡು ಹೋಗುತ್ತಿದ್ದ. ಆದರೆ ನಿನ್ನೆ ಮಕ್ಕಳನ್ನು ನೋಡಲು ಬಂದಾಗ ಪತ್ನಿ ಗೀತಾ ಬಿಡಲಿಲ್ಲ. ಇದರಿಂದ ಕೋಪಗೊಂಡ ರಂಗಸ್ವಾಮಿ, ಪೆಟ್ರೋಲ್ ಬಂಕ್‍ನಿಂದ ಪೆಟ್ರೋಲ್ (Petrol) ತಂದು ಮಧ್ಯರಾತ್ರಿ ಮನೆಗೆ ಸುರಿದು ಬೆಂಕಿ ಹಚ್ಚಿದ್ದಾನೆ.

    ಮನೆಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಸ್ಥಳೀಯರ ನೆರವಿನಿಂದ ಗೀತಾ ಹಾಗೂ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಆರೋಪಿ ರಂಗಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]