Tag: ಪತಿ

  • 12 ಪೀಸ್‌ಗಳಾಗಿ ಬುಡಕಟ್ಟು ಮಹಿಳೆ ಮೃತದೇಹ ಪತ್ತೆ – ಪತಿ ಅರೆಸ್ಟ್

    12 ಪೀಸ್‌ಗಳಾಗಿ ಬುಡಕಟ್ಟು ಮಹಿಳೆ ಮೃತದೇಹ ಪತ್ತೆ – ಪತಿ ಅರೆಸ್ಟ್

    ರಾಂಚಿ: ದೆಹಲಿಯಲ್ಲಿ ಅಫ್ತಾಬ್ ಪೂನಾವಾಲ ತನ್ನ ಗೆಳತಿ ಶ್ರದ್ಧಾ ವಾಕರ್‌ಳನ್ನು ಕೊಲೆ ಮಾಡಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿರುವ ಭೀಕರ ಕೃತ್ಯ ಬೆಳಕಿಗೆ ಬರುತ್ತಲೇ ಇಂತಹುದೇ ಹಲವು ಭೀಕರ ಹತ್ಯೆಗಳು (Murder) ದೇಶಾದ್ಯಂತ ವರದಿಯಾಗುತ್ತಿವೆ. ಇದೀಗ ಮತ್ತೊಂದು ಇಂತಹುದೇ ಅಪರಾಧ ಕೃತ್ಯ ಜಾರ್ಖಂಡ್‌ನಲ್ಲಿ (Jharkhand) ವರದಿಯಾಗಿದೆ.

    ಬುಡಕಟ್ಟು ಮಹಿಳೆಯ (Woman) ದೇಹವನ್ನು 50ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿರುವ ಆರೋಪದ ಮೇಲೆ ಪೊಲೀಸರು ಮಹಿಳೆಯ ಪತಿಯನ್ನು (Husband) ಬಂಧಿಸಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

    ಆರೋಪಿ ಹಾಗೂ ಕೊಲೆಯಾದ ಮಹಿಳೆ ಕಳೆದ 2 ವರ್ಷಗಳಿಂದ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದು, ಇತ್ತೀಚೆಗಷ್ಟೇ ಮದುವೆಯಾಗಿದ್ದರು ಎಂಬುದು ತಿಳಿದುಬಂದಿದೆ. ಆರೋಪಿ ಪತ್ನಿಯನ್ನು ಕೊಂದ ಬಳಿಕ ಬಂಧನದಿಂದ ತಪ್ಪಿಸಿಕೊಳ್ಳಲು ತನ್ನ ಪತ್ನಿ ನಾಪತ್ತೆಯಾಗಿರುವ ದೂರನ್ನು ಪೊಲೀಸರಿಗೆ ನೀಡಿದ್ದಾನೆ.

    ಶನಿವಾರ ಸಂಜೆ 6 ಗಂಟೆ ವೇಳೆಗೆ ಸಂತಾಲಿ ಮೊಮಿನ್ ಟೋಲಾ ಪ್ರದೇಶದ ಹಳೆಯ ಮನೆಯೊಂದರಲ್ಲಿ ಮಹಿಳೆಯ ಛಿದ್ರವಾದ ಶವ ಪತ್ತೆಯಾಗಿದೆ. ಬಳಿಕ ಭೀಕರ ಕೃತ್ಯ ಬೆಳಕಿಗೆ ಬಂದಿದೆ. ಭೀಕರವಾಗಿ ಹತ್ಯೆಯಾದ ಮಹಿಳೆಯನ್ನು ರೂಬಿಕಾ ಪಹಾಡಿನ್ (22) ಎಂದು ಗುರುತಿಸಲಾಗಿದೆ. ಆಕೆಯ ಪತಿ ದಿಲ್ದಾರ್ ಅನ್ಸಾರಿ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.

    ಘಟನೆ ಬೆಳಕಿಗೆ ಬರುವುದಕ್ಕೂ ಮುನ್ನ ಬೋರಿಯೋ ಅಂತಾಲಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಕೇಂದ್ರದ ಹಿಂಭಾಗದಲ್ಲಿ ಮಾನವನ ಕಾಲು ಹಾಗೂ ದೇಹದ ಕೆಲವು ಭಾಗಳು ಪತ್ತೆಯಾಗಿತ್ತು. ಮಾಹಿತಿ ಪಡೆದ ಎಸ್‌ಪಿ ಅನುರಂಜನ್ ಕಿಸ್ಪೊಟ್ಟ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ. ಶನಿವಾರ ಮಹಿಳೆಯ ಛಿದ್ರವಾದ ಮೃತದೇಹ ಹಳೆಯ ಮನೆಯೊಂದರಲ್ಲಿ ಪತ್ತೆಯಾದ ಬಳಿಕ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಕಾರ್ಯಕ್ರಮಕ್ಕೆ ಹೋಗ್ಬೇಡ ಎಂದಿದ್ದಕ್ಕೆ ಚಿಕ್ಕಮ್ಮನ ಹತ್ಯೆ- ಬಕೆಟ್‌ನಲ್ಲಿ ದೇಹದ ಪೀಸ್‌ಗಳನ್ನಿಟ್ಟು ಎಸೆದ

    ಮಹಿಳೆಯ ದೇಹದ 12 ತುಂಡರಿಸಿದ ಭಾಗಗಳು ಈಗ ಪತ್ತೆಯಾಗಿದ್ದು, ಇತರ ಭಾಗಗಳು ನಾಪತ್ತೆಯಾಗಿವೆ. ದೇಹದ ಉಳಿದ ಭಾಗಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಮಹಿಳೆಯನ್ನು ಕೊಲೆ ಮಾಡಿರುವ ಆರೋಪದ ಮೇಲೆ ಆಕೆಯ ಪತಿ ದಿಲ್ದಾರ್ ಅನ್ಸಾರಿಯನ್ನು ಬಂಧಿಸಲಾಗಿದೆ. ಹತ್ಯೆಯಾದ ಮಹಿಳೆ ಆತನಿಗೆ 2ನೇ ಪತ್ನಿ ಎನ್ನಲಾಗಿದೆ.

    KILLING CRIME

    ಹತ್ಯೆಯಲ್ಲಿ ದಿಲ್ದಾರ್ ಅನ್ಸಾರಿ ಜೊತೆ ಇತರರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ಎಲೆಕ್ಟ್ರಿಕ್ ಕಟರ್‌ನಂತಹ ಹರಿತವಾದ ವಸ್ತುಗಳನ್ನು ಬಳಸಿ ಮಹಿಳೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಿಚ್ಛೇದನ ಪಡೆಯಲು ಪತ್ನಿಗೆ HIV ಸೋಂಕಿತ ರಕ್ತದ ಇಂಜೆಕ್ಷನ್ ಕೊಡಿಸಿದ ಭೂಪ

    Live Tv
    [brid partner=56869869 player=32851 video=960834 autoplay=true]

  • ಪತ್ನಿಯೊಂದಿಗೆ ಜಗಳ- ಮಗುವನ್ನು 3ನೇ ಅಂತಸ್ತಿನಿಂದ ಬಿಸಾಕಿ ತಾನು ಜಿಗಿದ

    ಪತ್ನಿಯೊಂದಿಗೆ ಜಗಳ- ಮಗುವನ್ನು 3ನೇ ಅಂತಸ್ತಿನಿಂದ ಬಿಸಾಕಿ ತಾನು ಜಿಗಿದ

    ನವದೆಹಲಿ: ವ್ಯಕ್ತಿಯೊಬ್ಬ ಪತ್ನಿಯೊಂದಿಗೆ (Wife) ಜಗಳವಾಡಿದ ನಂತರ ಅಲ್ಲೇ ಇದ್ದ ತನ್ನ 2 ವರ್ಷದ ಮಗುವನ್ನು (Baby) ಮನೆಯ 3ನೇ ಅಂತಸ್ತಿನಿಂದ ಎಸೆದು ತಾನು ಅಲ್ಲಿಂದ ಜಿಗಿದಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (NewDelhi) ನಡೆದಿದೆ.

    ನವದೆಹಲಿಯ ಕಲ್ಕಾಜಿಯ ಕೊಳೆಗೇರಿಯ ಮನೆಯ ಮೂರನೇ ಅಂತಸ್ತಿನ ಬಾಲ್ಕನಿಯಲ್ಲಿ ಈ ಘಟನೆ ನಡೆದಿದೆ. ಮಾನ್‍ಸಿಂಗ್ ಕೆಳಗೆ ಜಿಗಿದ ವ್ಯಕ್ತಿ. ಈತ ತನ್ನ ಪತ್ನಿ ಪೂಜಾಳೊಂದಿಗೆ ಕಳೆದ ಕೆಲವು ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಪೂಜಾ ತನ್ನ ಇಬ್ಬರು ಮಕ್ಕಳೊಂದಿಗೆ ಕಲ್ಕಾಜಿಯಲ್ಲಿರುವ ತನ್ನ ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದಳು.

    ಕಳೆದ ರಾತ್ರಿ ಪೂಜಾಳನ್ನು ಭೇಟಿಯಾಗಲು ಮಾನ್ ಸಿಂಗ್ ಬಂದಿದ್ದ. ಈ ವೇಳೆ ಮತ್ತೆ ದಂಪತಿ ನಡುವೆ ತೀವ್ರ ಜಗಳ ನಡೆದಿತ್ತು. ಈ ವೇಳೆ ಮಾನ್ ಸಿಂಗ್ ಕೋಪದಲ್ಲಿ ಅಲ್ಲೇ ಇದ್ದ ತನ್ನ 2 ವರ್ಷದ ಮಗುವನ್ನು ಬಾಲ್ಕನಿಯಿಂದ ಕೆಳಗೆ ಎಸೆದಿದ್ದಾನೆ. ಅದಾದ ಬಳಿಕ ತಾನು ಅಲ್ಲಿಂದ ಹಾರಿದ್ದಾನೆ.

    ಘಟನೆಗೆ ಸಂಬಂಧಿಸಿದಂತೆ ತಂದೆ ಮತ್ತು ಮಗನಿಗೆ ಗಂಭೀರ ಗಾಯಗಳಾಗಿದ್ದು, ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಗೋಕಾಕ್‍ನಲ್ಲಿ 6ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದ ರಮೇಶ್ ಜಾರಕಿಹೊಳಿ

    ಮಾನ್ ಸಿಂಗ್ ಮದ್ಯದ ಅಮಲಿನಲ್ಲಿದ್ದ ಎಂದು ಪೂಜಾಳ ಅಜ್ಜಿ ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾನ್ ಸಿಂಗ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಮತ್ತೆ ಮುನ್ನೆಲೆಗೆ ಬಂದ ‘ಹಿಂದೂ’ ವರ್ಡ್ ವಾರ್

    Live Tv
    [brid partner=56869869 player=32851 video=960834 autoplay=true]

  • ಹನಿಮೂನ್‌ನಿಂದ ಬರುವಾಗ ಟೆಕ್ಕಿ ದಂಪತಿಗೆ ಅಪಘಾತ – ಪತಿಯನ್ನು ಕಳೆದುಕೊಂಡ ನವವಿವಾಹಿತೆ

    ಹನಿಮೂನ್‌ನಿಂದ ಬರುವಾಗ ಟೆಕ್ಕಿ ದಂಪತಿಗೆ ಅಪಘಾತ – ಪತಿಯನ್ನು ಕಳೆದುಕೊಂಡ ನವವಿವಾಹಿತೆ

    ದಾವಣಗೆರೆ: ನಿಂತಿದ್ದ ಟ್ರ್ಯಾಕ್ಟರ್‌ಗೆ (Tractor) ಬೈಕ್‌ ಡಿಕ್ಕಿ ಹೊಡೆದು, ಬೈಕ್‌ (Bike) ಸವಾರ ಸಾವನ್ನಪ್ಪಿದ ಘಟನೆ ಹಾವೇರಿ (Haveri) ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡದ ಬಳಿ ನಡೆದಿದೆ.

    ಮೃತರನ್ನು ಸಂಜಯ್‌ (28) ಎಂದು ಗುರುತಿಸಲಾಗಿದೆ. ಇವರು ಮೂಲತಃ ದಾವಣಗೆರೆ (Davanagere) ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮದ ಮಠದವರಾಗಿದ್ದರು. ನ. 28ರಂದು ಬೈಲಹೊಂಗಲದ ಪ್ರೀತಿ ಎಂಬವರನ್ನು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಸಮುದಾಯ ಭವನದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದರು. ಇವರಿಬ್ಬರು ಕೂಡ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದು, ಹನಿಮೂನ್‌ಗೆಂದು ಬೈಕ್‌ನಲ್ಲಿ ಡಿ. 10ಕ್ಕೆ ಹರಿಹರದ ಜಿಗಳಿಯಿಂದ ಧಾರ್ಮಿಕ ಕ್ಷೇತ್ರಗಳಿಗೆ ಬೈಕ್‌ನಲ್ಲಿ ಎರಡು ದಿನಗಳ ಕಾಲ ಹೋಗಿದ್ದರು.

    crime

    ಮೊದಲು ಸಾಗರ ತಾಲೂಕಿನ ಸಿಂಗಧೂರು ದೇವಿ ದರ್ಶನ ಪಡೆದಿದ್ದಾರೆ. ಬಳಿಕ ಮುರುಡೇಶ್ವರಕ್ಕೆ ಹೋಗಿ ರಾತ್ರಿ ತಂಗಿದ್ದಾರೆ. ಡಿಸೆಂಬರ್ 11ಕ್ಕೆ ಶಿರಸಿಗೆ ಬಂದು ಅಲ್ಲಿ ಮಾರಿಕಾಂಬಾ ದೇವಿ ದರ್ಶನ ಪಡೆದು ವಾಪಸ್ಸು ಜಿಗಳಿಗೆ ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡದ ಬಳಿ ಬರುವಾಗ ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ ಹೊಡೆದಿದೆ.

    ಪರಿಣಾಮ ಬೈಕ್‌ ಸವಾರ ಸಂಜಯ್‌ ತಲೆಗೆ ತೀವ್ರ ಪೆಟ್ಟಾಗಿದ್ದು, ಎರಡೂ ಕಿವಿಯಲ್ಲಿ ರಕ್ತಸ್ರಾವವಾಗಿದೆ. ಜೊತೆಗೆ ಬೈಕ್‌ನಲ್ಲಿದ್ದ ಪ್ರೀತಿಗೂ ಗಂಭೀರ ಗಾಯಗಳಾಗಿದೆ. ಘಟನೆ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಹಂಸಬಾವಿ ಪೊಲೀಸರು ಗಾಯಗೊಂಡ ದಂಪತಿಯನ್ನು ರಾಣೆಬೆನ್ನೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ, ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆ ದಾರಿ ಮಧ್ಯೆ ಸಂಜಯ್ ಮೃತಪಟ್ಟಿದ್ದಾರೆ. ಪತ್ನಿ ಪ್ರೀತಿಯ ಎರಡು ಕೈ ಹಾಗೂ ತಲೆಗೆ ಮತ್ತು ಸೊಂಟಕ್ಕೆ ತೀವ್ರ ಪೆಟ್ಟಾಗಿದೆ‌. ಸದ್ಯ ದಾವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌.

    ಇನ್ನು ಸಂಜಯ್ ಶವ ಪರೀಕ್ಷೆ ನಂತರ ತನ್ನ ಗಂಡ ಸಂಜಯ್ ನೋಡಲು ಪ್ರೀತಿ ಸ್ಟ್ರೆಚರ್​​ನಲ್ಲಿ ಶವಾಗಾರಕ್ಕೆ ಬಂದಿದ್ದರು. ಬಳಿಕ ಸ್ಟ್ರೆಚರ್ ನಲ್ಲಿದ್ದುಕೊಂಡೇ ತನ್ನ ಗಂಡನ ಮುಖ ಸವರಿ ದುಃಖಿಸಿದ ಕ್ಷಣ ಮನಕಲಕುವಂತಿತ್ತು.

    Live Tv
    [brid partner=56869869 player=32851 video=960834 autoplay=true]

  • ಪತ್ನಿಯಿಂದ ಕಿರುಕುಳ – ಮೂರು ತಿಂಗಳ ಹಿಂದೆ ಮದ್ವೆಯಾಗಿದ್ದ ವ್ಯಕ್ತಿ ಆತ್ಮಹತ್ಯೆ

    ಪತ್ನಿಯಿಂದ ಕಿರುಕುಳ – ಮೂರು ತಿಂಗಳ ಹಿಂದೆ ಮದ್ವೆಯಾಗಿದ್ದ ವ್ಯಕ್ತಿ ಆತ್ಮಹತ್ಯೆ

    ಬೆಂಗಳೂರು: ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ(Husband) ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ(Bengaluru) ಎಂವಿ ಲೇಔಟ್ ಉಲ್ಲಾಳದ ಬಳಿ ನಡೆದಿದೆ.

    ಮಹೇಶ್ವರ(24) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಆಗಸ್ಟ್‌ 21 ರಂದು ಮಹೇಶ್ವರ ಮತ್ತು ಕವನ(22) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದ್ವೆಯಾಗಿ ಮೂರು ತಿಂಗಳಿಗೆ ಪತ್ನಿಯಿಂದ(Wife) ಕಿರುಕುಳಕ್ಕೆ ಬೇಸತ್ತು ಬೆಂಗಳೂರಿನ ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ಬಂದಿದೆ. 5 ದಿನ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಮಹೇಶ್ವರನ ತಾಯಿ ರತ್ನಮ್ಮ ನೀಡಿದ ದೂರಿನ ಆಧಾರದಲ್ಲಿ ಜ್ಞಾನಭಾರತಿ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 34(ಏಕೋದ್ದೇಶವನ್ನು ಮುಂದುವರೆಸಲು ಅನೇಕ ವ್ಯಕ್ತಿಗಳೊಂದಿಗೆ ಎಸಗಿದ ಕೃತ್ಯ), 306(ಆತ್ಮಹತ್ಯೆಗೆ ಪ್ರಚೋದನೆ) ಅಡಿ ಕವನ ಮತ್ತು ಆಕೆಯ ಪೋಷಕರಾದ ಆತ್ಮಾನಂದ ಮತ್ತು ಪದ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    ಚನ್ನಪಟ್ಟಣ ತಾಲೂಕಿನ ಕೊಡರು ಗ್ರಾಮದಲ್ಲಿ ನಾನು ನೆಲೆಸಿದ್ದು ಆಗಸ್ಟ್‌ 21 ರಂದು ಮಗನ ಮದುವೆ ಮದ್ದೂರಿನ ಮದ್ದೂರಮ್ಮ ದೇವಸ್ಥಾನದ ಹಿಂಭಾಗದಲ್ಲಿ ನಡೆದಿದೆ. ವಿವಾಹ ಮಾಡಿದ ಕೆಲವೇ ದಿನಗಳ ನಂತರ ಹೊಂದಾಣಿಕ ಮನಸ್ಥಿತಿ ಇಲ್ಲದ ಕವನ ಪದೇ ಪದೇ ಜಗಳ ಮಾಡುತ್ತಿದ್ದಳು. ಇದನ್ನೂ ಓದಿ: ಪರಪುರುಷನನ್ನು ಮನೆಗೆ ಕರೆತರುತ್ತಿದ್ದರು, ಚಿತ್ರಹಿಂಸೆ ನೀಡುತ್ತಿದ್ದರು: ಖ್ಯಾತನಟಿ ಅಭಿನಯ ಅತ್ತಿಗೆ ಕಣ್ಣೀರು

    ದುರಹಂಕಾರದಿಂದ ವರ್ತಿಸಿ, ಹಿರಿಯರಿಗೆ ಗೌರವ ನೀಡದೇ ದುಬಾರಿ ಬೆಲೆಯ ವಸ್ತುಗಳು, ಆಭರಣ ನೀಡುವಂತೆ ಪೀಡಿಸುತ್ತಿದ್ದಳು. ಆಭರಣ ನೀಡದೇ ಇದ್ದಾಗ ಮಗನನ್ನು ಹೀಯಾಳಿಸುತ್ತಿದ್ದಳು ಅಷ್ಟೇ ಅಲ್ಲದೇ ಆಕೆಯ ತಂದೆಗೆ ಹಣ ನೀಡುವಂತೆ ಹಠ ಮಾಡುತ್ತಿದ್ದಳು.

    ಸುಮಾರು 4-5 ವರ್ಷದಿಂದ ಅವಳ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ನನ್ನ ಮಗನಾದ ಮಹೇಶ್ವರನೇ ಹೊತ್ತಿದ್ದ. ವಿವಾಹದ ನಂತರವು ಎಲ್ಲಾ ಜವಾಬ್ದಾರಿಗಳನ್ನು ಹೊರುವಂತೆ ಹಿಂಸೆ ಕೊಟ್ಟು ಬೇರೆ ಮನೆ ಮಾಡುವಂತೆ ಒತ್ತಾಯಿಸಿದ್ದಳು.

    ಒಬ್ಬನೇ ಮಗನ ಹಿತದೃಷ್ಟಿಯಿಂದ ಬೆಂಗಳೂರಿನಲ್ಲಿ ಬೇರೆ ಮನೆ ಮಾಡಲು ಮತ್ತು ಮನೆಗೆ ಬೇಕಾದ ಸಾಮಾಗ್ರಿಗಳನ್ನು ಕೊಟ್ಟು ಸಂತೋಷವಾಗಿರುವಂತೆ ಹೇಳಿದ್ದೆವು. ಆದರೆ ಆಕೆ ಅಲ್ಲಿಯೂ ತನ್ನ ಹಳೇಯ ವರ್ತನೆ ಮುಂದುವರಿಸಿದ್ದಳು. ಪ್ರತಿನಿತ್ಯ ಆಕೆಯ ಕಿರುಕುಳವನ್ನು ಸಹಿಸದೇ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ವೈದ್ಯನಿಂದ ಪತ್ನಿಯ ಬರ್ಬರ ಹತ್ಯೆ – ಸೂಟ್‍ಕೇಸ್‍ನಲ್ಲಿ ತುಂಬಿ 400 ಕಿ.ಮೀ ದೂರದಲ್ಲಿ ಸುಟ್ಟು ಹಾಕಿದ

    ವೈದ್ಯನಿಂದ ಪತ್ನಿಯ ಬರ್ಬರ ಹತ್ಯೆ – ಸೂಟ್‍ಕೇಸ್‍ನಲ್ಲಿ ತುಂಬಿ 400 ಕಿ.ಮೀ ದೂರದಲ್ಲಿ ಸುಟ್ಟು ಹಾಕಿದ

    ಲಕ್ನೋ: ವೈದ್ಯನೊಬ್ಬ (Doctor) ತನ್ನ ಪತ್ನಿಯನ್ನು (Wife) ಕೊಂದು, ಆಕೆಯ ದೇಹವನ್ನು ಸೂಟ್‍ಕೇಸ್‍ನಲ್ಲಿ ತುಂಬಿಕೊಂಡು ಸುಮಾರು 400 ಕಿ.ಮೀ ದೂರದಲ್ಲಿ ಸುಟ್ಟು ಹಾಕಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಉತ್ತರ ಪ್ರದೇಶದ ಲಖಿಂಪುರ ಖೇರಿಯ ವಂದನಾ ಅವಸ್ತಿ ಎಂದು ಗುರುತಿಸಲಾಗಿದೆ. ವಂದನಾ ಅವಸ್ತಿ ಪತಿ ಅಭಿಷೇಕ್ ಅವಸ್ತಿ ಆಯುರ್ವೇದದ ವೈದ್ಯನಾಗಿದ್ದ. ಈತ ತನ್ನ ತಂದೆ ಗೌರಿಶಂಕರ್ ಅವಸ್ತಿಯೊಂದಿಗೆ ಜಗಳ ಮಾಡುತ್ತಿದ್ದ ಸಂದರ್ಭದಲ್ಲಿ ಪತ್ನಿ ವಂದನಾಗೆ ಭಾರದ ವಸ್ತುವಿನಿಂದ ತಲೆಗೆ ಹೊಡೆದಿದ್ದಾನೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ವಂದನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

    ಇದಾದ ಬಳಿಕ ವಂದನಾಳ ಮೃತದೇಹವನ್ನು ಅಭಿಷೇಕ್ ಸೂಟ್‍ಕೇಸ್‍ನಲ್ಲಿ ಲಾಕ್ ಮಾಡಿ, ತನ್ನ ಆಸ್ಪತ್ರೆಯ ಅಂಬುಲೆನ್ಸ್‌ನಲ್ಲಿ ಶವವನ್ನು ಸುಮಾರು 400 ಕಿ.ಮೀ ದೂರದ ಗಢ್ ಮುಕ್ತೇಶ್ವರಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾನೆ.

    ಅದಾದ ಬಳಿಕ ನವೆಂಬರ್ 27ರಂದು ಕೊತ್ವಾಲಿ ಸದರ್ ಪೊಲೀಸ್ ಠಾಣೆಗೆ ಹೋಗಿರುವ ಅಭಿಷೇಕ್ ತನ್ನ ಪತ್ನಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದಾನೆ. ಅಷ್ಟೇ ಅಲ್ಲದೇ ವಂದನಾ ಕೆಲವು ಬೆಲೆಬಾಳುವ ವಸ್ತುಗಳೊಂದಿಗೆ ಮನೆಯಿಂದ ಬಿಟ್ಟು ಹೋಗಿದ್ದಾಳೆ ಎಂದು ದೂರಿನಲ್ಲಿ ದಾಖಲಿಸಲಾಗಿತ್ತು. ಇದನ್ನೂ ಓದಿ: ಕಸ್ಟಡಿಯಲ್ಲಿ ಆರೋಪಿ ಆತ್ಮಹತ್ಯೆ ಪ್ರಕರಣ – ಸಿಬಿಐ ಅಧಿಕಾರಿಗಳ ವಿರುದ್ಧ ಕೊಲೆ ಕೇಸ್‌ ದಾಖಲು

    ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ ದಂಪತಿ ಮಧ್ಯೆ ವೈವಾಹಿಕ ಸಮಸ್ಯೆ ಇರುವುದು ಬೆಳಕಿಗೆ ಬಂದಿದೆ. ಆರೋಪಿ ಅಭಿಷೇಕ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಭಿಷೇಕ್ ತನ್ನ ತಂದೆಯೊಂದಿಗೆ ಸೇರಿ ವಂದನಾಳನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. (Arrest) ಇದನ್ನೂ ಓದಿ: ಸಿಎಂ ಸ್ಟಾಲಿನ್ ಪುತ್ರ ತಮಿಳುನಾಡಿನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

    Live Tv
    [brid partner=56869869 player=32851 video=960834 autoplay=true]

  • ಪತ್ನಿ, ನಾಲ್ಕು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ

    ಪತ್ನಿ, ನಾಲ್ಕು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ

    ಚೆನ್ನೈ: ವ್ಯಕ್ತಿಯೊಬ್ಬ (Man) ತನ್ನ ಪತ್ನಿ (Wife) ಹಾಗೂ ನಾಲ್ಕು ಮಕ್ಕಳನ್ನು (Children) ಕೊಂದು ತಾನು ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನ (Tamil Nadu) ಚೆಂಗಂ ತಾಲೂಕಿನಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಪಳನಿಸ್ವಾಮಿ (45) ಎಂದು ಗುರುತಿಸಲಾಗಿದ್ದು, ಈತ ಚೆಂಗಂ ಸಮೀಪದ ಒರಂತವಾಡಿ ಗ್ರಾಮದ ರೈತನಾಗಿ ಕೆಲಸ ಮಾಡುತ್ತಿದ್ದ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಇಂದು ಮುಂಜಾನೆ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚೀನಾ ಸೈನಿಕರು ಗಡಿ ನುಸುಳುವುದನ್ನು ಭಾರತ ತಡೆದಿದೆ; ನಮ್ಮ ಯೋಧರ ಧೈರ್ಯಕ್ಕೆ ಸಲಾಂ – ರಾಜನಾಥ್‌ ಸಿಂಗ್‌

    crime

    ಪಳನಿಸ್ವಾಮಿ ಮನೆಯ ಛಾವಣಿಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದ್ದು, ಆತನ 37 ವರ್ಷದ ಪತ್ನಿ, ಮೂವರು ಪುತ್ರಿಯರು ಮತ್ತು ಓರ್ವ ಪುತ್ರ ಶವವಾಗಿ ಪತ್ತೆಯಾಗಿದ್ದಾರೆ. ಜೊತೆಗೆ ಸುಮಾರು 9 ವರ್ಷ ವಯಸ್ಸಿನ ಇನ್ನೊಂದು ಹೆಣ್ಣು ಮಗು ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಆಕೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ 13ರ ಬಾಲಕಿ ಗರ್ಭಿಣಿ – ಅತ್ಯಾಚಾರ ಎಸಗಿದ್ದ ಮೂವರು ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಪತ್ನಿಗೆ ಇಷ್ಟವೆಂದು ಕತ್ತೆಯನ್ನೇ ಗಿಫ್ಟ್ ಮಾಡಿದ ಪತಿ

    ಪತ್ನಿಗೆ ಇಷ್ಟವೆಂದು ಕತ್ತೆಯನ್ನೇ ಗಿಫ್ಟ್ ಮಾಡಿದ ಪತಿ

    ಇಸ್ಲಾಮಾಬಾದ್: ಪಾಕಿಸ್ತಾನದ ಯೂಟ್ಯೂಬರ್ (Pakistani Youtuber) ಒಬ್ಬರು ತಮ್ಮ ಮದುವೆಯ ದಿನದಂದು ತನ್ನ ಪತ್ನಿಗೆ (Wife) ಕತ್ತೆಯನ್ನು (Donkey) ಉಡುಗೊರೆಯಾಗಿ (Gift) ನೀಡಿದ್ದಾರೆ.

    ಕರಾಚಿಯ ಯೂಟ್ಯೂಬರ್ ಅಜ್ಲಾನ್ ಶಾ ಅವರು ಆರತಕ್ಷತೆಯಲ್ಲಿ ಕತ್ತೆ ಮರಿಯೊಂದನ್ನು ತಂದು, ತನ್ನ ಪತ್ನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ನೋಡಿದ ಪತ್ನಿ ವಾರಿಷಾ ಮೊದಲು ಆಶ್ಚರ್ಯ ಹಾಗೂ ಸಂತೋಷಗೊಂಡಿದ್ದಾರೆ.

     

    View this post on Instagram

     

    A post shared by Azlan Shah (@azlanshahofficial)

    ವಾರಿಷಾ ಕತ್ತೆ ಮರಿಗಳನ್ನು ಪ್ರೀತಿಸುತ್ತಾಳೆ ಎಂದು ನನಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಆಕೆಗೆ ಮದುವೆಯ ಉಡುಗೊರೆಯಾಗಿ ಕತ್ತೆ ಮರಿಯನ್ನು ತಂದಿದ್ದೇನೆ. ಜೊತೆಗೆ ಕತ್ತೆಯೂ ವಿಶ್ವದ ಅತ್ಯಂತ ಶ್ರಮಶೀಲ ಹಾಗೂ ಪ್ರೀತಿಯ ಪ್ರಾಣಿಯಾಗಿದೆ ಎಂದು ಅಜ್ಲಾನ್ ಶಾ ತಿಳಿಸಿದರು. ವಾರಿಷಾಗೆ ಕತ್ತೆ ಮರಿಯನ್ನು ಉಡುಗೊರೆಯಾಗಿ ನೀಡಿದ್ದ ವಿಡಿಯೋವನ್ನು ಶಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರಾತ್ರಿ 11 ಗಂಟೆ ನಂತ್ರ ಓಡಾಡಿದ್ದಕ್ಕೆ ದಂಪತಿಗೆ ದಂಡ ಹಾಕಿದ್ದ ಪೊಲೀಸರು ಸಸ್ಪೆಂಡ್‌

    ಈ ವೀಡಿಯೋದಲ್ಲಿ ಕತ್ತೆಯನ್ನು ಅಜ್ಲಾನ್ ಶಾ ವರಿಷಾಗೆ ನೀಡುತ್ತಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿರುವ ಫೋಟೋಕ್ಕೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬಾತ ಒಂದು ಕತ್ತೆಯ ಜೊತೆ ಇನ್ನೊಂದು ಕತ್ತೆ ಫ್ರೀ ಎಂದು ತಿಳಿಸಿದ್ದಾರೆ. ಕತ್ತೆ ಮುಗ್ಧ ಪ್ರಾಣಿ ಎಂದು ಇನ್ನೊಬ್ಬಾತ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್‌ಗೆ ಅಪಮಾನ – ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ ಮುಖಕ್ಕೆ ಮಸಿ ಬಳಿದು ಆಕ್ರೋಶ

    Live Tv
    [brid partner=56869869 player=32851 video=960834 autoplay=true]

  • ಪತ್ನಿಯನ್ನ ಗೆಳೆಯರೊಂದಿಗೆ ಮಲಗಿಸಿ ವೀಡಿಯೋ ಚಿತ್ರೀಕರಣ- ಬೆಂಗ್ಳೂರಲ್ಲೊಬ್ಬ ಸೈಕೋಪಾತ್ ಪತಿ!

    ಪತ್ನಿಯನ್ನ ಗೆಳೆಯರೊಂದಿಗೆ ಮಲಗಿಸಿ ವೀಡಿಯೋ ಚಿತ್ರೀಕರಣ- ಬೆಂಗ್ಳೂರಲ್ಲೊಬ್ಬ ಸೈಕೋಪಾತ್ ಪತಿ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೈಕೋಪಾತ್ ಮಾದಕವ್ಯಸನಿ ಪತಿಮಹಾಶಯನೊಬ್ಬ ತನ್ನ ಪತ್ನಿಯನ್ನ ಗೆಳೆಯರೊಂದಿಗೆ ಮಲಗಿಸಿ ವೀಡಿಯೋ (Video) ಚಿತ್ರೀಕರಿಸಿ ವಿಕೃತಿ ಮೆರೆದ ಪ್ರಸಂಗವೊಂದು ಬೆಳಕಿಗೆ ಬಂದಿದೆ.

    ಸೈಕೋವನ್ನು ಸಂಪಿಗೆಹಳ್ಳಿ (Sampigehalli) ನಿವಾಸಿ ಜಾನ್ ಪಾಲ್ ಎಂದು ಗುರುತಿಸಲಾಗಿದೆ. ಈತನನ್ನು ಮಹಿಳಾ ಟೆಕ್ಕಿ (Woman Techie) ಯೊಬ್ಬರು 2011ರ ಏಪ್ರಿಲ್‍ನಲ್ಲಿ ವಿವಾಹವಾಗಿದ್ದಾರೆ.

    2015 ರಿಂದ ತನ್ನ ವಿಕೃತಿ ಶುರು ಮಾಡಿದ್ದ ಆರೋಪಿ ಪತಿ ಜಾನ್‍ಪಾಲ್, ಮನೆಗೆ ತನ್ನ ಗೆಳೆಯರನ್ನ ಕರೆದು ಪಾರ್ಟಿ ಮಾಡಿ ನಂತರ ಗೆಳೆಯರೊಂದಿಗೆ ಬೆಡ್ ಶೇರ್ ಮಾಡು ಎಂದು ಒತ್ತಾಯಿಸುತ್ತಿದ್ದ. ಪತಿಯ ಹಲ್ಲೆಯಿಂದ ತಾಳಲಾರದೇ ಆತನ ಗೆಳೆಯರೊಂದಿಗೆ ಮಹಿಳಾ ಟೆಕ್ಕಿ ದೈಹಿಕ ಸಂಪರ್ಕಕ್ಕೆ ಒಪ್ಪಿಗೆ ಸೂಚಿಸುತ್ತಿದ್ದರು. ಇದನ್ನೂ ಓದಿ: ಹಾದಿ ಬೀದಿಯಲ್ಲಿ ಹುಡುಗಿಯರನ್ನ ರೇಗಿಸಿದ್ರೆ 2 ವರ್ಷ ಜೈಲು..!

    ತನ್ನ ಸ್ನೇಹಿತರಾದ ಸಜೀಶ್ ಹಾಗೂ ನಾಜಿ ಎಂಬವರ ಜೊತೆ ತನ್ನ ಪತ್ನಿಯನ್ನ ಮಲಗಿಸುತ್ತಿದ್ದನು. ಅಲ್ಲದೆ ಮಲಗಿದ ಫೋಟೋ ಹಾಗೂ ವೀಡಿಯೋಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸುವ ಮೂಲಕ ವಿಕೃತಿ ಮೆರೆಯುತ್ತಿದ್ದನು. ಪತ್ನಿಯ ಮೇಲೆ ವಿಕೃತಿ ಮೆರೆದಿದ್ದಲ್ಲದೇ ಪತ್ನಿಯ ತಂಗಿಯನ್ನು ತನ್ನೊಡನೆ ಮಲಗುವಂತೆ ಕಿರುಕುಳ ನೀಡಿದ್ದಾನೆ.

    ಗಂಡನ ಕಿರುಕುಳಕ್ಕೆ ಬೇಸತ್ತು ಇದೀಗ ಮಹಿಳಾ ಟೆಕ್ಕಿ ವಿಚ್ಛೇದನ ನೀಡಲು ಮುಂದಗಿದ್ದಾರೆ. ಈ ವೇಳೆ ಪತ್ನಿ ತನ್ನ ಗೆಳೆಯರೊಂದಿಗಿನ ಅಶ್ಲೀಲ ಫೋಟೋ ವೀಡಿಯೋ ವೈರಲ್ ಮಾಡೋದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ. ನೊಂದ ಪತ್ನಿ ಸಂಪಿಗೆಹಳ್ಳಿ ಠಾಣೆಯ ಪೊಲೀಸರಿಗೆ ದೂರು ನೀಡಿದ್ದು, ಸೈಕೋಪಾತ್ ಜಾನ್ ಪಾಲ್ ಗಾಂಜಾ ವ್ಯಸನಿಯಾಗಿದ್ದು, ಮನೆಯಲ್ಲಿಯೇ ಗಾಂಜಾ ಸಸಿಗಳನ್ನ ಫಾಟ್ ಗಳಲ್ಲಿ ಬೆಳೆದಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ.

    ದೂರಿನನ್ವಯ ಲೈಂಗಿಕ ಕಿರುಕುಳ, ಎನ್.ಡಿ.ಪಿ.ಎಸ್ ಹಾಗೂ ಐಟಿ ಆಕ್ಟ್ ಅಡಿ ಕೇಸ್ ದಾಖಲು ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ವರದಕ್ಷಿಣೆ ಕಿರುಕುಳ ಆರೋಪ- ಮದುವೆಯಾಗಿ ಒಂದೂವರೆ ವರ್ಷಕ್ಕೆ ಗೃಹಿಣಿ ಆತ್ಮಹತ್ಯೆ

    ವರದಕ್ಷಿಣೆ ಕಿರುಕುಳ ಆರೋಪ- ಮದುವೆಯಾಗಿ ಒಂದೂವರೆ ವರ್ಷಕ್ಕೆ ಗೃಹಿಣಿ ಆತ್ಮಹತ್ಯೆ

    ಶಿವಮೊಗ್ಗ: ಮದುವೆಯಾಗಿ (Marriage) ಒಂದೂವರೆ ವರ್ಷಕ್ಕೆ ವಿವಾಹಿತೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ನಡೆದಿದೆ.

    ಮೃತ ಗೃಹಿಣಿಯನ್ನು ಸಂಗೀತ (24) ಎಂದು ಗುರುತಿಸಲಾಗಿದೆ. ಶಿಕಾರಿಪುರ ತಾಲೂಕಿನ ಉಡುಗಣಿ ಗ್ರಾಮದ ಸಂಗೀತ ಹಾಗೂ ಶಿರಾಳಕೊಪ್ಪದ ಹರೀಶ್ ಕಳೆದ ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದರು. ವಿವಾಹದ ಸಂದರ್ಭದಲ್ಲಿ ಹುಡುಗಿಯ ತಂದೆ ಚಿನ್ನಾಭರಣ ಹಾಗೂ ಹಣವನ್ನು ವರದಕ್ಷಿಣೆಯಾಗಿ ನೀಡಿದ್ದರು. ಆದರೂ ಹೆಚ್ಚಿನ ವರದಕ್ಷಿಣೆ (Dowry) ತರುವಂತೆ ಗಂಡನ ಮನೆಯವರು ಆಗಾಗ ಮೃತ ಸಂಗೀತಾಳಿಗೆ ಕಿರುಕುಳ ನೀಡುತ್ತಿದ್ದರು. ಗಂಡನ (Husband) ಮನೆಯವರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂಗೀತ ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಮೈಸೂರು ರಿಂಗ್ ರಸ್ತೆ – ಬೀದಿ ದೀಪಗಳ MCBಯನ್ನೇ ಕದ್ದ ಕಳ್ಳರು

    ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಅನಿಸಿದರೂ, ಮೃತಳ ದೇಹದ ಮೇಲೆ ಗಾಯಗಳಾಗಿವೆ. ಹೀಗಾಗಿ ಪತಿ ಹಾಗೂ ಆತನ ಕುಟುಂಬಸ್ಥರೇ ಕೊಲೆ ಮಾಡಿ‌ ನೇಣು ಹಾಕಿದ್ದಾರೆ ಎಂಬುದು ಸಂಗೀತ ಪೋಷಕರ ಆರೋಪವಾಗಿದೆ. ಘಟನೆ ಕುರಿತು ಶಿರಾಳಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಂತರ ಆರೋಪಿ ಪತಿ ಹರೀಶ್ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರ ತನಿಖೆಯ ನಂತರವಷ್ಟೇ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಬಹಿರಂಗವಾಗಬೇಕಿದೆ. ಇದನ್ನೂ ಓದಿ: ಲೇಡಿ PSI ಕಿರುಕುಳ ಆರೋಪ- ಡೆತ್‌ನೋಟ್ ಬರೆದಿಟ್ಟು ಯುವಕ ನಾಪತ್ತೆ

    Live Tv
    [brid partner=56869869 player=32851 video=960834 autoplay=true]

  • ಲಾರಿ ಕೆಳಗೆ ಪತ್ನಿಯನ್ನು ತಳ್ಳಿ ಸಾಯಿಸಿದ ಪತಿ

    ಲಾರಿ ಕೆಳಗೆ ಪತ್ನಿಯನ್ನು ತಳ್ಳಿ ಸಾಯಿಸಿದ ಪತಿ

    ಚಿಕ್ಕಬಳ್ಳಾಪುರ: ಗಂಡ, ಹೆಂಡತಿಯ ಜಗಳ ಉಂಡು ಮಲಗುವ ತನಕ ಅಂತಾರೆ. ಆದರೆ ಇಲ್ಲೊಂದು ದಂಪತಿಯ ಜಗಳ ವಿಕೃತ ಕೊಲೆಯಲ್ಲಿ ಅಂತ್ಯವಾದ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಚಿಂತಾಮಣಿ ನಗರದಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮೂಲದ ಸುಮೈರಾ ಸುಲ್ತಾನ್ (40) ಹಾಗೂ ಶಿಡ್ಲಘಟ್ಟ ಮೂಲದ ಮುನಿಕೃಷ್ಣ ಇಬ್ಬರು ಕಳೆದ ಕೆಲವು ವರ್ಷಗಳಿಂದ ಲೀವ್‌ ಇನ್‌ ರಿಲೇಶನ್‌ ಶಿಪ್‌ನಲ್ಲಿದ್ದರು. ಆದರೆ ಇಬ್ಬರೂ ಸ್ಥಳೀಯರ ಬಳಿ ತಾವು ಪತಿ, ಪತ್ನಿಯರೆಂದೇ ಹೇಳಿಕೊಂಡು ಓಡಾಡುತ್ತಿದ್ದರು. ಆದರೆ  ಇಂದು ನಗರದ ಗ್ರಂಥಾಲಯ ಮುಂದೆ ನಡು ರಸ್ತೆಯಲ್ಲಿ ಜಗಳ ಮಾಡಿಕೊಂಡು ನೂಕಾಟ ತಳ್ಳಾಟ ಮಾಡುತ್ತಿದ್ದರು. ಆಗ ರಸ್ತೆಯಲ್ಲಿ ಲಾರಿಯೊಂದು ಬಂದಿದೆ. ಲಾರಿಯನ್ನು ನೋಡಿದ ಆಕೆಯ ಗಂಡ ಮುನಿಕೃಷ್ಣ, ಉದ್ದೇಶ ಪೂರ್ವಕವಾಗಿಯೇ ಸುಮೈರಾ ಸುಲ್ತಾನ್‌ಳನ್ನು ಲಾರಿ ಕೆಳಗೆ ತಳ್ಳಿದ್ದಾನೆ. ಇದರಿಂದ ಸುಮೈರಾ ಸುಲ್ತಾನ್‌ ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದಾಳೆ.

    ಅಲ್ಲೇ ಪಕ್ಕದಲ್ಲಿದ್ದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಆರೋಪಿ ಮುನಿಕೃಷ್ಣನನ್ನು ಬಂಧಿಸಿದ್ದಾರೆ.  ಒಟ್ಟಿಗೆ ಇರುವ ಮೊದಲೇ ಇಬ್ಬರಿಗೂ ಬೇರೆ ಬೇರೆ ವಿವಾಹವಾಗಿತ್ತು. ಆದರೆ 8 ವರ್ಷಗಳ ಹಿಂದೆ ತಮ್ಮ ತಮ್ಮ ಸಂಸಾರ ಬಿಟ್ಟು ಚಿಂತಾಮಣಿ ನಗರದದಲ್ಲಿ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದಂಪತಿಗೆ ಬಾಬಾಜಾನ್ ಎನ್ನುವ 4 ವರ್ಷದ ಮಗುವಿದೆ. ಇದನ್ನೂ ಓದಿ: ಮೈಸೂರು ರಿಂಗ್ ರಸ್ತೆ – ಬೀದಿ ದೀಪಗಳ MCBಯನ್ನೇ ಕದ್ದ ಕಳ್ಳರು

    ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷರಾದ ರಂಗಸ್ವಾಮಯ್ಯ ಮತ್ತು ಸಿಬ್ಬಂದಿ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಲಾರಿಯನ್ನು ವಶಕ್ಕೆ ಪಡೆದು ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಲೇಡಿ PSI ಕಿರುಕುಳ ಆರೋಪ- ಡೆತ್‌ನೋಟ್ ಬರೆದಿಟ್ಟು ಯುವಕ ನಾಪತ್ತೆ

    Live Tv
    [brid partner=56869869 player=32851 video=960834 autoplay=true]