ಬೆಂಗಳೂರು: ಪತ್ನಿ ಟಾರ್ಚರ್‍ನಿಂದ ಬೇಸತ್ತು ಇದೀಗ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ರಾಮನಗರ (Ramanagar) ಮೂಲದ ರಾಮಚಂದ್ರ (Ramachandra) ಬೆಂಗಳೂರಿನಲ್ಲಿ ಪೊಲೀಸ್ ಮಹಾನಿರ್ದೇಶಕರ ಕಚೇರಿ, ಮಾನವ ಹಕ್ಕುಗಳ ಆಯೋಗದ ಕದ ತಟ್ಟಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ರಾಮಚಂದ್ರ ಅವರು ಕಣ್ಣಲ್ಲಿ ನೀರು ತುಂಬಿಕೊಂಡು ಹೆಂಡ್ತಿ ಹೊಡೆಯುತ್ತಾಳೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.
ಐದು ಲಕ್ಷಕ್ಕಾಗಿ ಪತ್ನಿ ರಾಮಚಂದ್ರ ಅವರನ್ನು ಪೀಡಿಸುತ್ತಿದ್ದಾರಂತೆ. ದುಡ್ಡು ಕೊಡಲ್ಲ ಅಂತಾ ಹೇಳಿದ್ದಕ್ಕೆ ಸರಿಯಾಗಿ ಹೊಡೆಯುತ್ತಿದ್ದಾಳೆ, ಹೆಂಡ್ತಿ ಜೊತೆ ಮಗ ಹಾಗೂ ಹೆಂಡ್ತಿ ತಾಯಿ ಕೂಡ ಸಾಥ್ ಕೊಟ್ಟು ನನಗೆ ಹಲ್ಲೆ ಮಾಡುತ್ತಿದ್ದಾರೆ ಅಂತಾ ಆರೋಪಿಸಿದ್ದಾರೆ. ಇದನ್ನೂ ಓದಿ: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಮೂರು ಡೆತ್‍ನೋಟ್ ಪತ್ತೆ
ಡಿಜಿಗೆ ದೂರು ಕೊಟ್ಟಿರುವ ರಾಮಚಂದ್ರ, ಮಾನವ ಹಕ್ಕುಗಳ ಆಯೋಗಕ್ಕೂ ದೂರು ಕೊಟ್ಟಿದ್ದಾರೆ. ನ್ಯಾಯ ಸಿಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ತೀನಿ ಅಂತಾ ರಾಮಚಂದ್ರ ನೋವು ತೋಡಿಕೊಂಡಿದ್ದಾರೆ. ಊಟ ಕೊಡ್ತಿಲ್ಲ, ನಾನೇ ಕಟ್ಟಿದ ಮನೆಯಲ್ಲಿ ಜಾಗ ಕೊಡ್ತಿಲ್ಲ ಅಂತಾ ರಾಮಚಂದ್ರಪ್ಪ ಅಳಲು ತೋಡಿಕೊಂಡಿದ್ದಾರೆ. ಇದೀಗ ರಾಮಚಂದ್ರ ಅವರಿಗೆ ನ್ಯಾಯ ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಮುಂಬೈ: ತನ್ನ ಪತ್ನಿಯೊಂದಿಗೆ (Wife) ಜಗಳವಾಡಿ, ಕೋಪದ ಭರದಲ್ಲಿ ಪತಿಯೊಬ್ಬ ತನ್ನ ನವಜಾತ ಶಿಶುವನ್ನು (Newborn Baby) ಆಸ್ಪತ್ರೆಯ (Hospital) ನೆಲಕ್ಕೆ ಕೆಳಗೆ ಎಸೆದ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.
ಮಹಾರಾಷ್ಟ್ರದ ನಾಗ್ಪುರ ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಅಮರಾವತಿ ಮೂಲದ ವ್ಯಕ್ತಿಯು 2020ರಲ್ಲಿ ಮದುವೆಯಾಗಿದ್ದ. ಅಂದಿನಿಂದ ಆತ ಪತ್ನಿಯ ಚಾರಿತ್ರ್ಯದ ಮೇಲೆ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದ. ಆದರೆ ಡಿ. 30ರಂದು ಆಕೆ ಮಗುವಿಗೆ ಜನ್ಮ ನೀಡಿದ್ದಳು.
ಈ ಹಿನ್ನೆಲೆಯಲ್ಲಿ ಆಕೆಯನ್ನು ಭೇಟಿ ಮಾಡಲು ಆಸ್ಪತ್ರೆಗ ಬಂದಿದ್ದ ವ್ಯಕ್ತಿಯು ಅಲ್ಲಿಯೂ ಜಗಳವಾಡಿದ್ದಾನೆ. ನಂತರ ಕೋಪದ ಭರದಲ್ಲಿ ನವಜಾತ ಶಿಶುವನ್ನು ನೆಲಕ್ಕೆ ಎಸೆದಿದ್ದಾನೆ. ಇದನ್ನೂ ಓದಿ: ಹಳಿ ತಪ್ಪಿದ ಸೂರ್ಯನಗರಿ ಎಕ್ಸ್‌ಪ್ರೆಸ್ ರೈಲಿನ 8 ಬೋಗಿಗಳು!
ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಮಹಿಳೆ ಶವವಾಗಿ ಪತ್ತೆ
Live Tv
[brid partner=56869869 player=32851 video=960834 autoplay=true]
ನವದೆಹಲಿ: ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ (Live-In Partner) ಮಹಿಳೆಯೊಬ್ಬಳು (Woman) ಶವವಾಗಿ ಪತ್ತೆಯಾದ ಘಟನೆ ದೆಹಲಿಯ (Newdelhi) ಮಂಗೋಲ್‍ಪುರ ಕಲನ್ ಗ್ರಾಮದಲ್ಲಿ ನಡೆದಿದೆ.
ಮಂಗೋಲ್‍ಪುರ ಕಲನ್ ಗ್ರಾಮದ ಮನೆಯೊಂದರ 2ನೇ ಮಹಡಿಯಲ್ಲಿ 36 ವರ್ಷದ ಮಹಿಳೆಯ ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಹಿಳೆ ಉತ್ತರ ಪ್ರದೇಶದ ಆಗ್ರಾ ನಿವಾಸಿಯಾಗಿದ್ದು, ಆಕೆ ಆಗ್ರಾ ಮೂಲದ ವ್ಯಕ್ತಿಯೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದಳು.
ಈ ಇಬ್ಬರು ಒಟ್ಟಾಗಿ ಇರುವುದನ್ನು ಮನೆ ಮಾಲೀಕರು ಅನೇಕ ಬಾರಿ ನೋಡಿದ್ದರು. ಆದರೆ ನಿನ್ನೆ ಮನೆಯ ಬಾಗಿಲು ಅರ್ಧ ತೆಗೆದಿರುವುದನ್ನು ಗಮನಿಸಿದ ಮನೆ ಮಾಲೀಕ ಒಳಗೆ ಹೋಗಿ ನೋಡಿದ್ದಾರೆ. ಅಲ್ಲಿ ಮಹಿಳೆ ಶವವಾಗಿ ಬಿದ್ದಿದ್ದಳು. ಅಷ್ಟೇ ಅಲ್ಲದೇ ಲಿವ್ ಇನ್ ರಿಲೇಶನ್‍ನಲ್ಲಿದ್ದ ವ್ಯಕ್ತಿ ನಾಪತ್ತೆ ಆಗಿದ್ದ.
ಘಟನೆಗೆ ಸಂಬಂಧಿಸಿ ಕೂಡಲೇ ರೋಹಿಣಿ ದಕ್ಷಿಣ ಪೊಲೀಸ್ ಠಾಣೆಗೆ ಮನೆ ಮಾಲೀಕ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶವವನ್ನು ವಶಕ್ಕೆ ಪಡೆದು, ಪೋಸ್ಟ್ ಮಾರ್ಟಂಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಷ್ಟೇ ಅಲ್ಲದೇ ಮಹಿಳೆಯ ಶವದ ಮೇಲೆ ಯಾವುದೇ ಗಾಯದ ಗುರುತುಗಳಿರಲಿಲ್ಲ.
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಿವ್ ಇನ್ ರಿಲೇಶನ್‍ನಲ್ಲಿದ್ದ ವ್ಯಕ್ತಿಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಆತನ ಫೋನ್ ಸ್ವಿಚ್ ಆಫ್ ಆಗಿದ್ದು, ಮನೆಯಿಂದ ನಾಪತ್ತೆ ಆಗಿದ್ದಾನೆ.
ಮಹಿಳೆಯ ಪತಿ (Husband) ಪಂಜಾಬ್‍ನ ಜಿರಾಕ್‍ಪುರದಲ್ಲಿ ಕೆಲಸ ಮಾಡುತ್ತಿದ್ದು, ಆದರೆ ಆಕೆ ಚಿಕಿತ್ಸೆಗಾಗಿ ದೆಹಲಿಗೆ ತೆರಳಿದ್ದಳು. ಅಲ್ಲಿ ಓರ್ವ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನೂ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಹೆಲ್ಮೆಟ್ ಆಯ್ತು, ಈಗ ಜೆಡಿಎಸ್ ಮುಖಂಡ ಆರ್. ಉಗ್ರೇಶ್‍ರಿಂದ ಬಾಳೆ ಹಣ್ಣು ಭಾಗ್ಯ
Live Tv
[brid partner=56869869 player=32851 video=960834 autoplay=true]
ಲಕ್ನೋ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು (Wife) ಕೊಲೆ ಮಾಡಲು ಗೂಗಲ್‌ನಲ್ಲಿ ಕೊಲೆ ಮಾಡುವುದು ಹೇಗೆ ಎಂದು ಹುಡುಕಿದ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ.
ಗಾಜಿಯಾಬಾದ್‌ನ ಮೋದಿನಗರದ ನಿವಾಸಿ ವಿಕಾಸ್ ಬಂಧಿತ ಆರೋಪಿ. ಹಾಪುರ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತನ್ನ ಪತ್ನಿ ಸೋನಿಯಾಳನ್ನು ದರೋಡೆಕೋರರು ಕೊಲೆ ಮಾಡಿದ್ದ ಎಂದು ಪೊಲೀಸರಿಗೆ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸೋನಿಯಾ ಅವರ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಪೊಲೀಸರು ವಿಕಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಸೋನಿಯಾಳನ್ನು ವಿವಾಹವಾಗಿ ಕೆಲವು ವರ್ಷಗಳ ನಂತರ ವಿಕಾಸ್ ಅಕ್ರಮ ಸಂಬಂಧಗಳನ್ನು ಹೊಂದಿದ್ದ. ಇದರಿಂದಾಗಿ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಇದರಿಂದಾಗಿ ಸೋನಿಯಾಳನ್ನು ಕೊಲೆ ಮಾಡಲು ವಿಕಾಸ್ ಸಂಚು ರೂಪಿಸಿ ಹತ್ಯೆಗೈದಿದ್ದಾನೆ ಎನ್ನುವುದು ವಿಚಾರಣೆ ವೇಳೆ ಬಯಲಾಗಿದೆ. ಇದನ್ನೂ ಓದಿ: ಹೊಸವರ್ಷ ಸಂಭ್ರಮಾಚರಣೆಗೆ ರಂಗೇರಿದ ಬೆಂಗಳೂರು
ಅಷ್ಟೇ ಅಲ್ಲದೇ ಈ ವೇಳೆ ವಿಕಾಸ್‌ನ ಫೋನ್ (Phone) ಅನ್ನು ಪರಿಶೀಲಿಸಿದಾಗ ಅದರಲ್ಲಿ ಕೊಲೆ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಗೂಗಲ್‌ನಲ್ಲಿ ಹುಡುಕಿರುವುದಾಗಿ ಮಾಹಿತಿ ದೊರೆತಿದೆ. ಅಷ್ಟೇ ಅಲ್ಲದೇ ಇದರಿಂದಾಗಿಯೇ ಆನ್‌ಲೈನ್‌ನಲ್ಲಿ ವಿಷವನ್ನು ಖರೀದಿಸಲು ಪ್ರಯತ್ನಿಸಿದ್ದನು. ಅಷ್ಟೇ ಅಲ್ಲದೇ ಗನ್ ಅನ್ನು ಎಲ್ಲಿಂದ ಖರೀದಿಸಬಹುದು ಎನ್ನುವುದರ ಕುರಿತು ಗೂಗಲ್‌ನಲ್ಲಿ ಹುಡುಕಿದ್ದಾನೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ವಿಕಾಸ್‌ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಬಂಡೀಪುರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಅವಕಾಶವಿಲ್ಲ – ಪ್ರವಾಸಿಗರಿಗೆ ಕಾಟೇಜ್ ಕೊಡದಿರಲು ನಿರ್ಧಾರ
Live Tv
[brid partner=56869869 player=32851 video=960834 autoplay=true]
ಮಡಿಕೇರಿ: ಒಂಭತ್ತು ವರ್ಷದ ಹಿಂದೆ ಪತ್ನಿ (Wife) ಮೃತಪಟ್ಟಿದ್ದಾಳೆ ಎಂದುಕೊಂಡಿದ್ದ ಪತಿಗೆ ಆಕೆ ಬದುಕಿದ್ದಾಳೆ ಎಂದು ತಿಳಿದು ಆಕೆಗಾಗಿ ಸಾವಿರಾರು ಕಿ.ಮೀ ದೂರದಿಂದ ಹುಡುಕಿಕೊಂಡು ಬಂದು ಪತ್ನಿಯನ್ನು ಬಿಗಿದಪ್ಪಿಕೊಂಡ ಅಪೂರ್ವವಾದ ಸಂಗಮಕ್ಕೆ ಮಂಜಿನ ನಗರಿ ಮಡಿಕೇರಿ ಸಾಕ್ಷಿಯಾಗಿದೆ.
ಕೊಡಗು (Kodagu) ಜಿಲ್ಲೆಯ ಮಡಿಕೇರಿ (Madikeri) ತನಲ್ ಎಂಬ ಸಂಸ್ಥೆ ಇವರಿಬ್ಬರ ಅಪೂರ್ವ ಸಂಗಮಕ್ಕೆ ಕಾರಣವಾಗಿದೆ. ತನ್ನವರನ್ನ ಕಂಡು ಸಂತಸ ಪಡುತ್ತಿರುವವಳ ಹೆಸರು ದರ್ಶಿನಿ. ಈಕೆಯದ್ದು ಒಂದು ಸುಂದರ ಕುಟುಂಬ ಪತಿ ಹಾಗೂ 5 ಮಕ್ಕಳು. ಆದರೆ ದರ್ಶಿನಿ ಮಾತ್ರ ಕೊಂಚ ಮಾನಸಿಕ ಅಸ್ವಸ್ಥರಾಗಿದ್ದರು. ಹೀಗಾಗಿ ಈಕೆ 2013ರಲ್ಲಿ ದೆಹಲಿಯಿಂದ ನಾಪತ್ತೆ ಆಗಿದ್ದಳು. ದರ್ಶಿನಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಪತಿ ಕೆಹರ್ ಸಿಂಗ್ ಆಕೆಗಾಗಿ ಹುಡುಕಾಡಿದ ಊರುಗಳಿಲ್ಲ, ವಿಚಾರಿಸದ ಸಂಬಂಧಿಕರಿಲ್ಲ. ಆದರೂ ಕೂಡ ಎಲ್ಲೂ ಪತ್ನಿಯ ಸುಳಿವೇ ಇರಲಿಲ್ಲ. ಸಾಕಷ್ಟು ವರ್ಷ ಹುಡುಕಿದ ಕೆಹರ್ ಸಿಂಗ್ ಕೊನೆಗೆ ಆಕೆ ಪತ್ತೆ ಆಗದಿದ್ದರಿಂದ ಕೋವಿಡ್‌ಗೆ ಬಲಿಯಾಗಿದ್ದಾಳೆಂದುಕೊಂಡು ಹುಡುಕುವುದನ್ನು ಬಿಟ್ಟಿದ್ದರು.
ಆದರೆ 9 ವರ್ಷಗಳ ನಂತರ ದರ್ಶನಿ ಬದುಕಿರುವ ವಿಷಯವನ್ನು ಪತಿ ಕೆಹರ್ ಸಿಂಗ್‌ಗೆ ತಿಳಿಸಿದ್ದಾರೆ. ಈ ಸುದ್ದಿಯನ್ನು ಕೇಳಿದ ಕೆಹರ್ ಸಿಂಗ್ 3,000 ಕಿ.ಮೀ ದೂರದ ದೆಹಲಿಯಿಂದ ಕೊಡಗಿನತ್ತ ಬಂದಿದ್ದಾರೆ. ಈ ವೇಳೆ ಬಂದವರೇ ಕೆಹರ್ ಸಿಂಗ್ ತನ್ನ ಪತ್ನಿಯನ್ನು ಬಿಗಿದಪ್ಪಿ ಮುದ್ದಾಡಿದರು. 9 ವರ್ಷಗಳ ಬಳಿಕ ಭೇಟಿಯಾದ ಇಬ್ಬರು ಒಂದು ಕ್ಷಣ ಭಾವುಕರಾದರು. 9 ವರ್ಷಗಳ ಬಳಿಕ ಕಂಡ ಪತ್ನಿಗೆ ಸಿಹಿ ಕೊಟ್ಟು ಸಂಭ್ರಮಿಸಿದರು. ದೇವರು ಎಲ್ಲಿದ್ದಾನೆಂದು ಹುಡುಕುತ್ತಿದ್ದೆ ಆದ್ರೆ ಇಂದು ಕೊಡಗಿನಲ್ಲಿ ತನಲ್ ಸಂಸ್ಥೆಯಲ್ಲಿ ನನ್ನ ದೇವರನ್ನ ಕಂಡೆ ಅಂತ ಕೆಹರ್ ಸಿಂಗ್ ಹರ್ಷ ವ್ಯಕ್ತಪಡಿಸಿದರು.
ಘಟನೆಯೇನು?: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ದರ್ಶಿನಿ ಎಂಬ ಮಹಿಳೆ ಕಳೆದ 9 ವರ್ಷಗಳ ಹಿಂದೆ ದೂರದ ದೆಹಲಿಯಿಂದ (New Delhi) ನಾಪತ್ತೆಯಾಗಿದ್ದರು. 5 ವರ್ಷಗಳ ಕಾಲ ದೆಹಲಿಯಿಂದ ಸುದೀರ್ಘವಾಗಿ ಎಲ್ಲೆಲ್ಲೋ ಓಡಾಟ ಮಾಡಿಕೊಂಡು ಕಳೆದ 2018ರಲ್ಲಿ ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಈ ಮಹಿಳೆ ಆಗಮಿಸಿದ್ದಾಳೆ.
ಕುಶಾಲನಗರದಲ್ಲಿ ಹಲವು ದಿನಗಳಿಂದ ಅಲ್ಲಲ್ಲಿ ಹರಿದ ರವಿಕೆ ಸೀರೆ ಕೆದರಿದ ಕೂದಲು ಮಾನಸಿಕ ಅಸ್ವಸ್ಥೆಯಂತೆ ಏನನ್ನೋ ಬಡಬಡಿಸುತ್ತಾ ರಸ್ತೆ ಬದಿಗಳಲ್ಲಿ ತಿರುಗಾಡುತ್ತಿದ್ದ ಆಕೆಯನ್ನು ಅಲ್ಲಿನ ಪೋಲಿಸರು ವಿಚಾರಿಸಿದಾಗ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾರೆ. ಆದರೆ ಸರಿಯಾದ ಮಾಹಿತಿ ಸಿಗದೇ ಮಡಿಕೇರಿಯ ತನಲ್ ವ್ಯವಸ್ಥಾಪಕರಾದ ಮುಹಮ್ಮದ್ ಮುಸ್ತಾಫ ಅವರನ್ನು ಸಂಪರ್ಕಿಸಿ ಆಶ್ರಮಕ್ಕೆ ಸೇರಿಸಲಾಗಿತ್ತು.
ಮುಂದೆ ಅವರಿಗೆ ಚಿಕಿತ್ಸೆ ನೀಡಿ ಚೇತರಿಸಿಕೊಳ್ಳುವಂತೆ ಮಾಡಿದ್ದು ಈ ತನಲ್ ಆಶ್ರಮ. ನಂತರ ತನಲ್ ಆಶ್ರಮದಿಂದ ಮತ್ತೆ ಆ ಮಹಿಳೆಯ ಕುಟುಂಬದೊಂದಿಗೆ ಮರು ಸೇರಿಸುವ ಕುರಿತು ಚಿಂತನೆ ನಡೆದಿತ್ತು. ಕಳೆದ 6 ತಿಂಗಳಿನಿಂದ ಅವರ ವಿಳಾಸವನ್ನು ಹುಡುಕುತ್ತಾ ದೆಹಲಿ ಮತ್ತು ಹರಿಯಾಣ ಪೊಲೀಸರನ್ನು ಸಂಪರ್ಕಿಸಿ ಈಗ ಅವರ ಪತಿ (Husband) ಕೆ.ಆರ್ ಸಿಂಗ್‌ರೊಂದಿಗೆ ದರ್ಶಿನಿಯನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ:ಟಿಕೆಟ್ ವಿಚಾರದಲ್ಲಿ ಕಚ್ಚಾಟ – KPCC ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ
ಒಟ್ಟಿನಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿ ತನ್ನಿಂದ ದೂರವಿದ್ದ ಹೆಂಡತಿಯನ್ನು 9 ವರ್ಷಗಳ ಬಳಿಕ ಕಂಡ ಪತಿ ಕೆಹರ್ ಸಿಂಗ್ ಕಣ್ಣಿನಲ್ಲಿ ನೀರು ತುಂಬಿ ಕೊರಳು ಬಿಗಿದು ಹೋಗಿತ್ತು. ತಾನೇನು ಮಾತನಾಡಲಾರದೆ ಕೇವಲ ತನ್ನ ಪತ್ನಿಯ ತಲೆಯನ್ನು ಸವರಿ ಅಪ್ಪಿಕೊಂಡು ಮುದ್ದು ಮಾಡಿದರು. ತನ್ನ ಪತಿಯನ್ನು ಕಂಡ ದರ್ಶಿನಿ ಕೂಡ ಖುಷಿಯಿಂದಲೇ ತನ್ನ ಊರಿಗೆ ಹೊರಟಿದ್ದರು. ಅನಾಥಾಶ್ರಮದಲ್ಲಿದ್ದ ಇತರ ವೃದ್ಧೆಯರು, ಮಹಿಳೆಯರು ದರ್ಶಿನಿಗೆ ಕೈಬೀಸಿ ಹೋಗಿ ಬಾ ಚೆನ್ನಾಗಿರು ಎಂದು ಹಾರೈಸುತ್ತಿದ್ದ ದೃಶ್ಯವೂ ಹೃದಯಸ್ಪರ್ಶಿಯಾಗಿತ್ತು. ಇದನ್ನೂ ಓದಿ:ಪಾದಯಾತ್ರೆಯನ್ನು ಬುಲೆಟ್ ಪ್ರೂಫ್ ವಾಹನದಲ್ಲಿ ಮಾಡೋಕ್ಕಾಗಲ್ಲ: ನಿಯಮ ಉಲ್ಲಂಘನೆ ಆರೋಪಕ್ಕೆ ರಾಗಾ ತಿರುಗೇಟು
Live Tv
[brid partner=56869869 player=32851 video=960834 autoplay=true]
ಬ್ಯಾಂಕಾಕ್: ವ್ಯಕ್ತಿಯೊಬ್ಬ ಶೌಚಾಲಯಕ್ಕೆ ಹೋಗಿದ್ದ ತನ್ನ ಪತ್ನಿಯನ್ನು ಮರೆತು ಪ್ರವಾಸವನ್ನು ಮುಂದುವರಿಸಿದ ವಿಚಿತ್ರ ಘಟನೆ ಥೈಲ್ಯಾಂಡ್‍ನಲ್ಲಿ (Thailand) ನಡೆದಿದೆ.
ಬೂಂಟೊಮ್ ಚೈಮೂನ್ (55) ಮತ್ತು ಆತನ ಪತ್ನಿ (Wife) ಅಮ್ನುವೇ ಚೈಮೂನ್ (49) ರಜೆಯ ಮಜಾ ಕಳೆಯಲು ರೋಡ್ ಟ್ರಿಪ್ (Road Trip) ಕೈಗೊಂಡಿದ್ದರು. ಟ್ರಿಪ್ ಸಮಯದಲ್ಲಿ ಶೌಚಾಲಯಕ್ಕೆಂದು ಬೆಳಗಿನ ಜಾವ 2 ಗಂಟೆಗೆ ತಮ್ಮ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಆದರೆ ಅಲ್ಲಿ ಸುತ್ತಲೂ ಕಾಡುಗಳಿದ್ದರಿಂದ ಕಾರಿನಿಂದ ಇಳಿದು ಶೌಚಕ್ಕೆಂದು ಮಹಿಳೆ ಹತ್ತಿರದ ಕಾಡಿನೊಳಗೆ ಹೋಗಿದ್ದಾಳೆ. ಆದರೆ ಇತ್ತ ಆಕೆಯ ಪತಿ ಬೂಂಟೊಮ್ ತನ್ನ ಪತ್ನಿ ಅಮ್ನುವೇ ಚೈಮೂನ್ ವಾಹನದಿಂದ ಇಳಿದಿರುವುದನ್ನು ಗಮನಿಸಿರಲಿಲ್ಲ. ಇದರಿಂದಾಗಿ ಆತ ತನ್ನ ಪ್ರವಾಸವನ್ನು ಮುಂದುವರಿಸಿದ್ದಾನೆ.
ಇತ್ತ ಅಮ್ನುವೇ ಚೈಮೂನ್ ಕಾಡಿನಿಂದ ಹಿಂದಿರುಗಿ ಬಂದಿದ್ದಾಳೆ. ಆದರೆ ಆ ವೇಳೆ ಕಾರಾಗಲೀ, ಗಂಡನಾಗಲೀ ಕಾಣಿಸಲಿಲ್ಲ. ಇದರಿಂದಾಗಿ ಆಕೆ ತನ್ನನ್ನು ಬಿಟ್ಟು ಹೋಗಿದ್ದಾನೆ ಎಂದು ಬಹುಬೇಗನೇ ಅರಿತುಕೊಂಡಿದ್ದಾಳೆ. ಈ ವಿಷಯವನ್ನು ತನ್ನ ಪತಿಗೆ ತಿಳಿಸಬೇಕು ಎಂದುಕೊಂಡರೂ ಆಕೆ ಬಳಿ ಮೊಬೈಲ್ ಇರಲಿಲ್ಲ ಬದಲಿಗೆ ಕಾರಿನಲ್ಲೇ ಇರುವುದನ್ನು ನೆನಪಿಸಿಕೊಂಡಿದ್ದಾಳೆ. ಇತ್ತ ತುಂಬಾ ಕತ್ತಲಾಗಿದ್ದರಿಂದ ಭಯಭೀತಳಾಗಿದ್ದಳು.
ಆದರೂ ಆಕೆ ಸುಮಾರು 20 ಕಿ.ಮೀ ಸಂಚರಿಸಿ ಕಬಿನ್ ಬುರಿ ಜಿಲ್ಲೆಯನ್ನು ತಲುಪಿದ್ದಾಳೆ. ಅಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿದ್ದು, ತನ್ನ ಪತಿಗೆ ಈ ವಿಷಯವನ್ನು ತಿಳಿಸಲು ಕೇಳಿಕೊಂಡಿದ್ದಾಳೆ. ಆದರೆ ಆಕೆಗೆ ಪತಿಯ ನಂಬರ್ ನೆನಪಿಲ್ಲದ ಕಾರಣ 20 ಬಾರಿ ತನ್ನ ನಂಬರ್‌ಗೆ ಕರೆ ಮಾಡಿದ್ದಾಳೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಅದಾದ ಬಳಿಕ ಬೆಳಗ್ಗೆ 8ರ ಸುಮಾರಿಗೆ ಪೊಲೀಸರ ಸಹಾಯದಿಂದ ಪತಿಯನ್ನು ಸಂಪರ್ಕಿಸಿದ್ದಾಳೆ. ಆದರೆ ಆವರೆಗೂ ಆತನಿಗೆ ಪತ್ನಿ ಕಾರಿನಲ್ಲಿ ಇರಲಿಲ್ಲವೆಂಬ ಯಾವುದೇ ಸುಳಿವಿರಲಿಲ್ಲ. ಆತ ಕಾರಿನ ಹಿಂಬದಿ ಸೀಟಿಯಲ್ಲಿ ತನ್ನ ಪತ್ನಿ ಗಾಢ ನಿದ್ದೆಯಲ್ಲಿದ್ದಾಳೆ ಎಂದುಕೊಂಡಿದ್ದ. ಅಷ್ಟೇ ಅಲ್ಲದೇ ಆತ ಸುಮಾರು 159 ಕಿ.ಮೀ ದೂರದವರೆಗೆ ಹೋಗಿದ್ದ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಯುವಕನ ಮೇಲೆ ಗುಂಡೇಟು – ಕ್ಷಣಮಾತ್ರದಲ್ಲಿ ತಪ್ಪಿದ ಅನಾಹುತ
ತನ್ನ ಪತ್ನಿಯನ್ನು ಬಿಟ್ಟುಬಂದಿದ್ದೇನೆ ಎಂಬ ವಿಷಯ ತಿಳಿದಾಕ್ಷಣ ಆತ ತನ್ನ ಪತ್ನಿಯನ್ನು ಕರೆದುಕೊಂಡು ಬರಲು ವಾಪಸ್ ತೆರಳಿದ್ದಾನೆ. ಅಷ್ಟೇ ಅಲ್ಲದೇ ತಾನು ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದಾನೆ. ದಂಪತಿಗೆ 27 ವರ್ಷಗಳ ಹಿಂದೆ ಮದುವೆಯಾಗಿದ್ದು, 26 ವರ್ಷದ ಮಗನಿದ್ದಾನೆ. ಇದನ್ನೂ ಓದಿ: ಪಹಣಿ ತಿದ್ದುಪಡಿಗೆ 5,000 ಲಂಚ ಪಡೆದ ಅಧಿಕಾರಿ – ವೀಡಿಯೋ ಮಾಡಿ ಹರಿಬಿಟ್ಟ ರೈತರು
Live Tv
[brid partner=56869869 player=32851 video=960834 autoplay=true]
ಲಕ್ನೋ: ವ್ಯಕ್ತಿಯೊಬ್ಬ ವರದಕ್ಷಿಣೆಯಾಗಿ (Dowry) ಸ್ಪೋರ್ಟ್ಸ್ ಬೈಕ್ (Sports Bike) ನೀಡದ್ದಕ್ಕೆ ಪತ್ನಿಗೆ ವಿಚ್ಛೇದನ (Divorce) ನೀಡಿದ್ದಾನೆ. ಇದನ್ನು ನೋಡಿದ ವ್ಯಕ್ತಿಯ ಅತ್ತೆ (Mother In Law) ಆಘಾತದಿಂದ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಲಕ್ನೋದ (Lucknow) ಅಮೀನಾಬಾದ್ ಚಿಕಮಂಡಿ ಮಹಿಳೆಯೊಂದಿಗೆ ಸೀತಾಪುರದ ಮೊಹಮ್ಮದ್ ಯೂನಸ್ ಎಂಬಾತ 2021ರಲ್ಲಿ ವಿವಾಹವಾಗಿದ್ದ. ಮದುವೆಯಾದ (Marriage) ನಂತರ ಮಹಿಳೆಗೆ ಆಕೆಯ ಪತಿ ಮೊಹಮ್ಮದ್ ಹಾಗೂ ಅವನ ತಾಯಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ಆ ವೇಳೆ ಮೊಹಮ್ಮದ್‍ಗೆ ಆತನ ಪತ್ನಿಯ ಮನೆಯವರು 2 ಲಕ್ಷ ರೂ. ನೀಡಿದ್ದರು.
ಆದರೆ ಮೊಹಮ್ಮದ್ ಪುನಃ ಹಣಕ್ಕಾಗಿ ಬೇಡಿಕೆಯಿಡಲು ಪ್ರಾರಂಭಿಸಿದ್ದನು. ಆದರೆ ಪತ್ನಿಯ ಮನೆಯವರು ಹಣ ನೀಡಲು ವಿಫಲವಾದಾಗ ಮೊಹಮ್ಮದ್ ಆಕೆಯನ್ನು ಮನೆಯಿಂದ ಹೊರಹಾಕಿದ್ದಾನೆ. ಜೊತೆಗೆ ಮೊಬೈಲ್‌ನಲ್ಲಿಮೂರು ಬಾರಿ ತಲಾಕ್ ಹೇಳಿ ವಿಚ್ಛೇದನ ನೀಡಿದ್ದಾನೆ. ಇದನ್ನೂ ಓದಿ: ಪ್ರಧಾನಿ ಮೋದಿ ತಾಯಿ ಹೀರಾಬೆನ್ ಆಸ್ಪತ್ರೆಗೆ ದಾಖಲು
ಲಕ್ನೋ: ಮದುವೆಯಾಗಿ (Marriage) ವರ್ಷಗಳೇ ಕಳೆದರೂ ಮಗುವಾಗಿಲ್ಲ (Baby) ಎಂಬ ಕೋಪಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು (Wife) ಥಳಿಸಿ ಆಕೆಯ ಖಾಸಗಿ ಅಂಗಕ್ಕೆ ಚೂಪಾದ ಬ್ಲೇಡ್‍ನಿಂದ ಇರಿದು ಗಾಯಗೊಳಿಸಿರುವ ಘಟನೆ ಉತ್ತರಪ್ರದೇಶದ (Uttar Pradesh) ಲಕ್ನೋದಲ್ಲಿ (Lucknow) ನಡೆದಿದೆ.
ರವೀಂದ್ರ ಬಂಧಿತ ಆರೋಪಿ. ಮದುವೆಯಾಗಿ 6 ವರ್ಷಗಳಾದರೂ ಮಗುವಾಗಿಲ್ಲ ಎಂದು ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ. ಇದರಿಂದಾಗಿ ಆಕೆ ತನ್ನ ತಾಯಿಯ ಮನೆಗೆ ಹೋಗಿ ಕಳೆದ 8 ತಿಂಗಳಿಂದ ಅಲ್ಲಿಯೇ ಇದ್ದಳು.
ಆದರೆ ರವೀಂದ್ರ ಡಿ. 25ರಂದು ತನ್ನ ಪತ್ನಿಯನ್ನು ಮನವೊಲಿಸಿ ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದಾನೆ. ಅದಾದ ಬಳಿಕ ಆಕೆಯೊಂದಿಗೆ ಲೈಗಿಕಕ್ರಿಯೆ ನಡೆಸಲು ಪ್ರಯತ್ನಿಸಿದ್ದಾನೆ. ಆದರೆ ಪತ್ನಿ ಇದಕ್ಕೆ ವಿರೋಧಿಸಿದಾಗ ಆಕೆಯನ್ನು ಥಳಿಸಿ, ಆಕೆಯ ಖಾಸಗಿ ಅಂಗಗಳಿಗೆ ಬ್ಲೇಡ್‍ನಿಂದ ಇರಿದು ಗಾಯಗೊಳಿಸಿದ್ದಾನೆ. ಇದನ್ನೂ ಓದಿ: ಬಿಜೆಪಿಯ ಭದ್ರಕೋಟೆ ಮೇಲೆ ಕೈಪಡೆ ಕಣ್ಣು- 2 ಕ್ಷೇತ್ರಗಳನ್ನ ದಕ್ಕಿಸಿಕೊಳ್ಳಲು ರಣತಂತ್ರ
ರಾಯ್ಪುರ್: ರಾತ್ರಿ ಊಟ (Dinner) ನೀಡಲು ನಿರಾಕರಿಸಿದ ಪತ್ನಿಯನ್ನು (Wife) ಕೊಡಲಿಯಿಂದ ಕೊಂದ ಘಟನೆ ಛತ್ತಿಸ್‍ಗಢದಲ್ಲಿ (Chhattisgarh) ನಡೆದಿದೆ.
ಮಂಜೀತಾ ಶ್ರೀವಾಸ್ (32) ಮೃತ ಮಹಿಳೆ. ಈಕೆಯ ಪತಿ ಯೋಗೇಂದ್ರ ಶ್ರೀನಿವಾಸ್ (38) ಕೊರ್ಬಾದ ಖಾಸಗಿ ಕ್ಲಿನಿಕ್‍ನಲ್ಲಿ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಯೋಗೇಂದ್ರ ರಾತ್ರಿ ಕೆಲಸ ಮುಗಿಸಿ ಹಿಂತಿರುಗಿ ಪುಸ್ತಕ ಓದುತ್ತಿದ್ದಾಗ ಪತ್ನಿಗೆ ಊಟ ಬಡಿಸುವಂತೆ ಕೇಳಿದ್ದ. ಆದರೆ ಮಂಜೀತಾ ಊಟ ನೀಡಲು ನಿರಾಕರಿಸಿದ್ದಾಳೆ.
ಇದೇ ಕಾರಣಕ್ಕೆ ಯೋಗೇಂದ್ರ ಹಾಗೂ ಮಂಜೀತಾ ನಡುವೆ ಜಗಳವಾಗಿದೆ. ಈ ವೇಳೆ ಕೋಪದ ಭರದಲ್ಲಿ ಯೋಗೇಂದ್ರ ಪತ್ನಿ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಂಜೀತಾ ಜೋರಾಗಿ ಕಿರುಚಿದ್ದಾಳೆ. ತಾಯಿಯ ಕಿರುಚಾಟ ಕೇಳಿದ ಯೋಗೇಂದ್ರ ಹಾಗೂ ಮಂಜಿತಾ ಮಕ್ಕಳು ಸ್ಥಳಕ್ಕೆ ಓಡಿ ಹೋಗಿದ್ದಾರೆ. ಈ ವೇಳೆ ರಕ್ತದ ಮಡುವಿನಲ್ಲಿ ಬಿದ್ದಿರುವ ತಾಯಿಯನ್ನು ನೋಡಿದ್ದಾರೆ. ಇದನ್ನೂ ಓದಿ: ವಿವಾಹಿತೆಯೊಂದಿಗೆ ಪ್ರೇಮ- ಹೋಟೆಲ್‌ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಕೊಲೆ
ಕೂಡಲೇ ತಾಯಿ ಕೊಲೆಯಾದ ಬಗ್ಗೆ ಮಕ್ಕಳು ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಅದಾದ ಬಳಿಕ ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿ ಆರೋಪಿ ಯೋಗೇಂದ್ರನನ್ನು ಬಂಧಿಸಿದ್ದಾರೆ. ದಂಪತಿ ಆಗಾಗ್ಗೆ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುತ್ತಿದ್ದರು. ಆರೋಪಿಯು ತನ್ನ ಹೆಂಡತಿಯ ವಾದದ ಸ್ವಭಾವದಿಂದ ತೀವ್ರ ಸಮಸ್ಯೆ ಹೊಂದಿದ್ದನು ಪೊಲೀಸ್ ಮೂಲಗಳು ತಿಳಿಸಿದೆ. ಇದನ್ನೂ ಓದಿ:ಶೀಘ್ರವೇ 2ನೇ ಬೂಸ್ಟರ್ ಡೋಸ್? – ಕೇಂದ್ರ ಆರೋಗ್ಯ ಸಚಿವರಿಗೆ ವೈದ್ಯಾಧಿಕಾರಿಗಳ ಡಿಮಾಂಡ್
Live Tv
[brid partner=56869869 player=32851 video=960834 autoplay=true]
ಹಾಸನ: ವರದಕ್ಷಿಣೆ (Dowry) ಕಿರುಕುಳಕ್ಕೆ ಮೂರು ತಿಂಗಳ ಗರ್ಭಿಣಿ ಬಲಿಯಾಗಿರುವ ಘಟನೆ ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಮುದ್ರವಳ್ಳಿ ಬಳಿ ನಡೆದಿದೆ.
ಮೃತ ಗರ್ಭಿಣಿಯನ್ನು ರೋಹಿಣಿ (23) ಎಂದು ಗುರುತಿಸಲಾಗಿದೆ. ಮಗಳ ಸಾವಿಗೆ ಪತಿಯೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು (Mysuru) ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಪಶುಪತಿ ಗ್ರಾಮದ ಕುಮಾರ್-ಸುಧಾ ದಂಪತಿಯ ಮಗಳು ರೋಹಿಣಿಯನ್ನು ಅರಕಲಗೂಡು ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸುಮಂತ್ ಎಂಬಾತನಿಗೆ ಮೇ 28ರಂದು ಕೇರಾಳಪುರದ ಕಲ್ಯಾಣಮಂಟಪದಲ್ಲಿ ಅದ್ಧೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು. ಮದುವೆ ವೇಳೆ ಸುಮಂತ್‌ಗೆ 250 ಗ್ರಾಂ ಚಿನ್ನ ಇದರ ಜೊತೆಗೆ 20 ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿದ್ದರು. ಸುಮಂತ್‌ನ ತಂದೆ ಮೃತಪಟ್ಟಿದ್ದರಿಂದ, ತಾಯಿ ಮೀನಾಕ್ಷಿ ಜೊತೆ ಆತ ವಾಸವಿದ್ದನು.
ಮದುವೆಯಾದ ಎರಡು ತಿಂಗಳು ದಂಪತಿ ಇಬ್ಬರು ಅನ್ಯೋನ್ಯವಾಗಿದ್ದರು. ಆದರೆ 2 ತಿಂಗಳು ಕಳೆಯುತ್ತಿದ್ದಂತೆ ಸುಮಂತ್ ತಾಯಿ ಮೀನಾಕ್ಷಿ ವರದಕ್ಷಿಣೆ ಹಣ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದಳು. ಇದರ ಜೊತೆಗೆ ಸುಮಂತ್ ಮದುವೆ ವೇಳೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ ಎಂಬುದು ರೋಹಿಣಿಗೆ ಗೊತ್ತಾಗಿತ್ತು. ಇವರಿಬ್ಬರಲ್ಲದೇ ಸುಮಂತ್ ಅಕ್ಕ ಸುಶ್ಮಿತಾ ಹಾಗೂ ಭಾವ ಪ್ರಮೋದ್ ಕೂಡ ಮನೆಗೆ ಬಂದಾಗಲೆಲ್ಲಾ ರೋಹಿಣಿಗೆ ಚುಚ್ಚು ಮಾತನಾಡುತ್ತಿದ್ದರು.
ಆದರೆ ರೋಹಿಣಿ ಈ ಬಗ್ಗೆ ಎಂದೂ ತನ್ನ ಪೋಷಕರ ಬಳಿ ಹೇಳಿಕೊಂಡಿರಲಿಲ್ಲ. ಆದರೆ ತನ್ನ ಸಹೋದರನಿಗೆ ಮೆಸೇಜ್ ಮಾಡಿ ಪತಿ ಸುಮಂತ್ ನೀಡುತ್ತಿದ್ದ ಕಿರುಕುಳದ ಬಗ್ಗೆ ಹೇಳಿದ್ದಳು. ಸುಮಂತ್ ರೋಹಿಣಿಗೆ ಯಾವುದಾದರೂ ಫೋನ್ ಬಂದರೆ ಅನುಮಾನದಿಂದ ನೋಡುತ್ತಿದ್ದ. ಅಷ್ಟೇ ಅಲ್ಲದೇ ಪೋಷಕರಿಗೆ ಫೋನ್ ಮಾಡಿದರೆ ಹಲ್ಲೆ ಮಾಡುತ್ತಿದ್ದ ಎಂದು ಹೇಳಿಕೊಂಡಿದ್ದ ರೋಹಿಣಿಯು, ಸಹೋದರಿಗೆ ನಿನ್ನ ಜೊತೆ ಮಾತನಾಡಬೇಕು, ಇನ್ನೂ ಕೆಲವು ವಿಷಯಗಳನ್ನು ಹೇಳಬೇಕು ಎಂದು ಸಹೋದರನಿಗೆ ಮೆಸೇಜ್ ಹಾಕಿದ್ದಳು.
ಆದರೆ ಭಾನುವಾರ ರೋಹಿಣಿ ಹಾಗೂ ಸುಮಂತ್ ದಂಪತಿ, ಸುಶ್ಮಿತಾ ಸೀಮಂತ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ತೆರಳಿದ್ದರು. ಮಂಗಳವಾರ ಬೆಂಗಳೂರಿನಿಂದ ಇಬ್ಬರು ರೈಲಿನಲ್ಲಿ ಹೊರಟಿದ್ದಾರೆ. ಈ ವೇಳೆ ರೋಹಿಣಿ ತಂದೆಗೆ 2 ಬಾರಿ ಕರೆ ಮಾಡಿ ಚೆನ್ನಾಗಿಯೇ ಮಾತನಾಡಿದ್ದಾಳೆ. ದಂಪತಿ ಇಬ್ಬರು ಚನ್ನರಾಯಪಟ್ಟಣ ತಾಲೂಕಿನ ಸಮುದ್ರವಳ್ಳಿ ಬಳಿ ರೈಲಿನಿಂದ ಇಳಿದಿದ್ದಾರೆ. ಅದಾದ ಬಳಿಕ ಅಲ್ಲೇ ಸ್ವಲ್ಪ ದೂರದಲ್ಲಿದ್ದ ಕೆರೆಯ ಬಳಿ ನಡೆದುಕೊಂಡು ಬಂದಿದ್ದು, ಕೆರೆಯಲ್ಲಿ ಗ್ರಾಮದ ಮಹಿಳೆಯರು ಬಟ್ಟೆ ಒಗೆಯುತ್ತಿದ್ದನ್ನು ಕಂಡ ಸುಮಂತ್ ಪತ್ನಿಗೆ ಇಲ್ಲೇ ಇರು ಎಂದು ಹೇಳಿ ಮರೆಯಾಗಿದ್ದಾನೆ. ರೋಹಿಣಿ ಕೆರೆಯ ಬಳಿ ಒಬ್ಬಳೆ ನಿಂತಿದ್ದನ್ನು ಅಲ್ಲಿದ್ದ ಮಹಿಳೆಯರು ನೋಡಿದ್ದಾರೆ. ಇದಾದ ಬಳಿಕ ರೋಹಿಣಿ ನಾಪತ್ತೆಯಾಗಿದ್ದಾಳೆ. ತಂದೆ ಎಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಟವರ್ ಲೊಕೇಷನ್ ಮೂಲಕ ರೋಹಿಣಿ ಮೊಬೈಲ್ ಇರುವ ಜಾಗವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೆರೆಯ ಬಳಿ ಬಂದು ನೋಡಿದಾಗ ದಡದಲ್ಲಿ 1,760 ರೂ. ಹಣ, ಮೊಬೈಲ್ ಹಾಗೂ ಚಪ್ಪಲಿ ಕಂಡುಬಂದಿದೆ. ಅನುಮಾನಗೊಂಡು ಕೆರೆಯಲ್ಲಿ ಶೋಧಕಾರ್ಯ ನಡೆಸಿದಾಗ ರೋಹಿಣಿ ಶವ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಶ್ರದ್ಧಾ ಕೊಲೆ ಪ್ರಕರಣ – ಜಾಮೀನು ಅರ್ಜಿಯನ್ನು ವಾಪಸ್ ಪಡೆದ ಪೀಸ್ ಪೀಸ್ ಪ್ರೇಮಿ
ಈ ಬಗ್ಗೆ ರೋಹಿಣಿ ಪೋಷಕರು ಮಾತನಾಡಿ, ಸುಮಂತ್ ತನ್ನ ಮಗಳನ್ನು ಹೊಡೆದು ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಆಕೆಯ ಮೈಮೇಲೆ ಇರುವ ಗಾಯದ ಗುರುತುಗಳೇ ಇದಕ್ಕೆ ಸಾಕ್ಷಿ. ನಮ್ಮ ಮಗಳನ್ನು ಆಕೆಯ ಪತಿ ಸುಮಂತ್ ರೈಲಿನಲ್ಲಿ ಕರೆದುಕೊಂಡು ಬಂದು ಹೊಡೆದು ಕೊಲೆ ಮಾಡಿ ನಂತರ ಕೆರೆಗೆ ತಳ್ಳಿದ್ದಾನೆ ಎಂದು ರೋಹಿಣಿ ಪೋಷಕರು ಆರೋಪಿಸಿದ್ದಾರೆ. ನಮ್ಮ ಮಗಳ ಸಾವಿಗೆ ಸುಮಂತ್, ಮೀನಾಕ್ಷಿ, ಸುಶ್ಮಿತಾ ಹಾಗೂ ಪ್ರಮೋದ್ ಕಾರಣ ಇವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ:ಮಹಿಳೆಯರ ಶಿಕ್ಷಣಕ್ಕೆ ತಾಲಿಬಾನ್ ನಿಷೇಧ – ಪ್ರತಿಭಟನೆಗೆ ಪರೀಕ್ಷೆಯಿಂದಲೇ ಹೊರನಡೆದ ಅಫ್ಘನ್ ಯುವಕರು
Live Tv
[brid partner=56869869 player=32851 video=960834 autoplay=true]