Tag: ಪತಿ

  • ಪ್ರಿಯಕರನೊಂದಿಗೆ 6 ವರ್ಷವಿದ್ದು ಮಗು ಮಾಡಿಕೊಂಡಿದ್ದ ಮಹಿಳೆ – ವಿಷಯ ತಿಳಿಯುತ್ತಲೇ ಪತಿಯಿಂದ ಪತ್ನಿ ಕೊಲೆ

    ಪ್ರಿಯಕರನೊಂದಿಗೆ 6 ವರ್ಷವಿದ್ದು ಮಗು ಮಾಡಿಕೊಂಡಿದ್ದ ಮಹಿಳೆ – ವಿಷಯ ತಿಳಿಯುತ್ತಲೇ ಪತಿಯಿಂದ ಪತ್ನಿ ಕೊಲೆ

    ಬೆಂಗಳೂರು: ಆಕೆಗೆ ಗಂಡನಿದ್ದರೂ ಮತ್ತೊಬ್ಬನ ಸಹವಾಸ ಮಾಡಿದ್ದಳು. ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಇದ್ದ ಮಹಿಳೆ (woman) ಒಂದು ಮಗುವನ್ನೂ ಮಾಡಿಕೊಂಡು ಸಂಸಾರ ಮಾಡಿಕೊಂಡಿದ್ದಳು. ಆದರೆ ಈ ವಿಚಾರ ತಿಳಿಯುತ್ತಲೇ ಮಹಿಳೆಯ ಪತಿ (Husband) ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

    ಪತಿಯೇ ತನ್ನ ಪತ್ನಿಯ (Wife) ಕತ್ತು ಕುಯ್ದು ಕೊಲೆ (Murder) ಮಾಡಿರುವ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯ ಸರೈಪಾಳ್ಯದಲ್ಲಿ ನಡೆದಿದೆ. 32 ವರ್ಷದ ತಬ್ಸಂಬಿಯ ಕತ್ತು ಕೊಯ್ದು ಆರೋಪಿ ಶೇಕ್ ಸುಹೇಲ್ ಕೊಲೆ ಮಾಡಿದ್ದಾನೆ. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಪ್ರಿಯಕರನ ಮನೆಯಲ್ಲಿದ್ದ ಪತ್ನಿಯ ಜೊತೆ ಜಗಳ ತೆಗೆದಿದ್ದ ಆರೋಪಿ ಚಾಕುವಿನಿಂದ ಆಕೆಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ.

     

    ಆರೋಪಿ ಶೇಕ್ ಸುಹೇಲ್ ಮತ್ತು ತಬ್ಸಂಬಿ ಇಬ್ಬರೂ ಕೂಡ ಕೋಲ್ಕತ್ತಾ ಮೂಲದವರು. 14 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ 2013ರಲ್ಲಿ ಬೆಂಗಳೂರಿಗೆ ಕೆಲಸಕ್ಕೆ ಎಂದು ಬಂದಿದ್ದರು. ಈ ವೇಳೆ ಬೆಂಗಳೂರಿನಲ್ಲಿದ್ದ ನದೀಮ್ ಜೊತೆ ತಬ್ಸಂಬಿಗೆ ಪರಿಚಯ ಆಗಿದ್ದು, ಇಬ್ಬರೂ ಸಂಬಂಧವನ್ನು ಶುರು ಮಾಡಿದ್ದರು. ಈ ವಿಚಾರ ತಿಳಿದಿದ್ದ ಸುಹೇಲ್ ಪತ್ನಿಯನ್ನು ಮತ್ತೆ ಕೋಲ್ಕತ್ತಾಗೆ ಕರೆದೊಯ್ದಿದ್ದ. ಇದನ್ನೂ ಓದಿ: ಒಂಟಿ ಮನೆಗೆ ನುಗ್ಗಿ ಡಕಾಯಿತಿ ಮಾಡಿದ್ದ ರೌಡಿ ಗ್ಯಾಂಗ್ ಅರೆಸ್ಟ್

    ಆದರೆ ಗಂಡನ ಜೊತೆ ಇರಲಾರದೇ ಪ್ರಿಯಕರ ನದೀಮ್ ಮೇಲೆಯೇ ಮನಸ್ಸಿಟ್ಟಿದ್ದ ತಬ್ಸಂಬಿ 6 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಪ್ರಿಯಕರನೊಂದಿಗೆ ವಾಸವಿದ್ದಳು. ಇಬ್ಬರಿಗೂ ಬಳಿಕ ಮಗುವಾಗಿದ್ದು, ಸರೈಪಾಳ್ಯದಲ್ಲಿ ಜೀವನ ನಡೆಸುತ್ತಿದ್ದರು. ಆದರೆ ಮಗುವಿನ ವಿಚಾರ ಗೊತ್ತಾಗಿದ್ದೇ ತಡ ಬೆಂಗಳೂರಿಗೆ ಬಂದಿದ್ದ ಸುಹೇಲ್ ನದೀಮ್ ಇಲ್ಲದ ವೇಳೆ ಮನೆಗೆ ಬಂದು ತನ್ನ ಪತ್ನಿಯನ್ನು ಕೊಲೆಗೈದಿದ್ದಾನೆ.

    ಸುಹೇಲ್ ಮನೆಯ ಕೋಣೆಯೊಳಗೆ ತಬ್ಸಂಬಿಯನ್ನು ಕೂಡಿ ಹಾಕಿ, ಜಗಳ ಶುರು ಮಾಡಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಅಲ್ಲೇ ಇದ್ದ ಚಾಕುವಿನಿಂದ ಸುಹೇಲ್ ತಬ್ಸಂಬಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ಮಾತ್ರವಲ್ಲದೇ ಅಲ್ಲೇ ಇದ್ದ 2 ವರ್ಷದ ಮಗುವಿಗೂ ಚಾಕುವಿನಿಂದ ಇರಿದು ಗಾಯ ಮಾಡಿದ್ದಾನೆ. ಇದನ್ನೂ ಓದಿ: ನಿಧಿಗಾಗಿ ಬಾಣಂತಿ ಸುಟ್ಟು ಕೊಲೆ?

    ಈ ಬಗ್ಗೆ ಮಾಹಿತಿ ಬಂದಿದ್ದೇ ತಡ ಘಟನಾ ಸ್ಥಳಕ್ಕೆ ಹೋಗಿದ್ದ ಹೆಣ್ಣೂರು ಪೊಲೀಸರು ಆರೋಪಿ ಸುಹೇಲ್‌ನನ್ನು ಬಂಧಿಸಿದ್ದಾರೆ. ಸದ್ಯ ಗಾಯಗೊಂಡಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • 2 ಮದುವೆಯಾದ ಟೆಕ್ಕಿ – ವಾರದಲ್ಲಿ 3 ದಿನ ಮೊದಲ ಪತ್ನಿಗೆ, 3 ದಿನ ಇನ್ನೊಬ್ಬಳಿಗೆ, ಸಂಡೇ ಫ್ರೀ

    2 ಮದುವೆಯಾದ ಟೆಕ್ಕಿ – ವಾರದಲ್ಲಿ 3 ದಿನ ಮೊದಲ ಪತ್ನಿಗೆ, 3 ದಿನ ಇನ್ನೊಬ್ಬಳಿಗೆ, ಸಂಡೇ ಫ್ರೀ

    ಭೋಪಾಲ್: ಸಾಫ್ಟ್‌ವೇರ್ ಇಂಜಿನಿಯರೊಬ್ಬ (Software Engineer) ಇಬ್ಬರನ್ನು ಮದುವೆಯಾಗಿದ್ದು, ಅವರಿಬ್ಬರೊಂದಿಗಿರಲು ಸಮಯವನ್ನು ನಿಗದಿ ಮಾಡಿ ಸುದ್ದಿಯಾಗಿದ್ದಾನೆ.

    ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರೊಬ್ಬ 2 ಮದುವೆಯಾಗಿದ್ದ. ಆದರೆ ಇನ್ನೊಂದು ಮದುವೆ ಆಗಿರುವುದು ಮೊದಲ ಪತ್ನಿಗೆ ತಿಳಿದಿರಲಿಲ್ಲ. ತಿಳಿದ ನಂತರ ಕೋರ್ಟ್‍ಗೆ ಹೋಗಿದ್ದಾಳೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ಲ್ಯಾನ್‍ವೊಂದನ್ನು ಹುಡುಕಿದ್ದಾನೆ.

    ಈ ಪ್ಲ್ಯಾನ್‍ನಂತೆ ತನ್ನ ಇಬ್ಬರು ಪತ್ನಿಯರನ್ನು ಒಟ್ಟಿಗೆ ಕೂರಿಸಿ ನಿರ್ಧಾರಕ್ಕೆ ಬಂದಿದ್ದಾನೆ. ಇದರ ಪ್ರಕಾರ ವಾರದಲ್ಲಿ 3 ದಿನ ಮೊದಲ ಪತ್ನಿಗಾದರೆ ಉಳಿದ ಮೂರು ದಿನ ಮತ್ತೋರ್ವ ಪತ್ನಿಯೊಂದಿಗೆ ಇರಲು ಸಮಯವನ್ನು ನಿಗದಿ ಮಾಡಿದ್ದಾನೆ. ಉಳಿದಂತೆ ಇನ್ನೊಂದು ದಿನ ಅಂದರೆ ಭಾನುವಾರ ತನ್ನಿಷ್ಟದಂತೆ ಸಮಯ ಕಳೆಯಲು ನಿರ್ಧರಿಸಿದ್ದು, ಇದಕ್ಕೆ ಆತನ ಪತ್ನಿಯರು ಒಪ್ಪಿಗೆ ಸೂಚಿಸಿದ್ದಾರೆ.

    ಏನಿದು ಪ್ರಕರಣ?: 2008ರಲ್ಲಿ ವ್ಯಕ್ತಿಯು 26 ವರ್ಷದ ಮಹಿಳೆಯನ್ನು ವಿವಾಹವಾಗಿದ್ದ. ಆ ವೇಳೆ ಆತ ಗುರುಗ್ರಾಮನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. 2 ವರ್ಷಗಳ ಕಾಲ ದಂಪತಿ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಅಷ್ಟೇ ಅಲ್ಲದೇ ಅವರಿಗೆ ಓರ್ವ ಮಗನು ಇದ್ದ. ಆದರೆ 2020ರಲ್ಲಿ ಕೊರೊನಾ ಪ್ರಾರಂಭವಾದಾಗಿನಿಂದ ದಂಪತಿ ವರ್ಕ್ ಫ್ರಂ ಹೋಮ್‍ನಿಂದಾಗಿ ಗ್ವಾಲಿಯರ್‍ಗೆ ಬಂದರು. ಅದಾದ ಕೆಲ ತಿಂಗಳ ನಂತರ ವ್ಯಕ್ತಿಯೊಬ್ಬನೇ ಗುರುಗ್ರಾಮ್‍ಗೆ ಹಿಂದಿರುಗಿದ.

    ಗ್ವಾಲಿಯರ್‌ನಿಂದ ಗುರುಗ್ರಾಮಕ್ಕೆ ಪತ್ನಿಯು ಬರುತ್ತಿರುವುದಾಗಿ ಹೇಳಿದ್ದಾಳೆ. ಆ ವೇಳೆ 2021ರಲ್ಲೇ ಆ ಪತಿಗೆ ಅದೇ ಕಂಪನಿಯ ತನ್ನ ಸಹೋದ್ಯೋಗಿಯೊಂದಿಗೆ ಮದುವೆಯಾಗಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲದೇ 2ನೇ ಪತ್ನಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದನ್ನೂ ಓದಿ: ಲೆದರ್ ಬೆಲ್ಟ್‌ನಲ್ಲಿ ಶ್ವಾನಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ- ಭಾರೀ ಆಕ್ರೋಶ

    ಈ ಹಿನ್ನೆಲೆಯಲ್ಲಿ ಮೊದಲ ಪತ್ನಿ ಜೀವನಾಂಶ ಕೋರಿ ಗ್ವಾಲಿಯರ್‍ನ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಈ ವೇಳೆ ವಕೀಲರೊಬ್ಬರು ಮೊದಲ ಪತ್ನಿ ವಿರೋಧಿಸಿದರೆ ಶಿಕ್ಷೆ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಆತ ತನ್ನ ಇಬ್ಬರು ಪತ್ನಿಯರನ್ನು ಸೇರಿಸಿ ಮಾತುಕತೆ ನಡೆಸಿದ್ದಾನೆ. ಈ ವೇಳೆ ಮೂವರು ಸೇರಿ ನ್ಯಾಯಾಲಯಕ್ಕೆ ಹೊಗದಿರಲು ಒಪ್ಪಂದವನ್ನು ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ಒಪ್ಪಂದದ ಪ್ರಕಾರ ವ್ಯಕ್ತಿಯು ವಾರದ ಮೂರು ದಿನಗಳನ್ನು ತನ್ನ ಹೆಂಡತಿಯರಲ್ಲಿ ಒಬ್ಬಳೊಂದಿಗೆ ಮತ್ತು ಮುಂದಿನ ಮೂರು ದಿನಗಳನ್ನು ಇನ್ನೊಬ್ಬಳೊಂದಿಗೆ ಕಳೆಯಬೇಕು. ಅವರು ಆಯ್ಕೆ ಮಾಡಿದವರ ಜೊತೆ ಭಾನುವಾರ ಕಳೆಯಬಹುದಾಗಿದೆ. ಒಂದು ವೇಳೆ ಈ ಒಪ್ಪಂದವನ್ನು ತಪ್ಪಿದರೆ ಒಪ್ಪಂದವನ್ನು ಉಲ್ಲಂಘಿಸಿದರೆ ಮೊದಲ ಪತ್ನಿ ನ್ಯಾಯಾಲಯಕ್ಕೆ ಹೋಗಬಹುದು ಎಂದು ನಿರ್ಧರಿಸಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಾಭಿಮಾನಿ ಅನ್ನೋ ಪದ ಬಳಸಬೇಡಿ: ಸುಮಲತಾ ವಿರುದ್ಧ ರವೀಂದ್ರ ವಾಗ್ದಾಳಿ

  • ತಂದೆ ಮನೆಯಿಂದ ಕಾಸ್ಟ್ಲಿ ವಾಚ್ ತರದಿದ್ದಕ್ಕೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ!

    ತಂದೆ ಮನೆಯಿಂದ ಕಾಸ್ಟ್ಲಿ ವಾಚ್ ತರದಿದ್ದಕ್ಕೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ!

    ಬೆಂಗಳೂರು: ತಂದೆ ಮನೆಯಿಂದ ಕಾಸ್ಟ್ಲಿ ವಾಚ್ ತರದಿದ್ದಕ್ಕೆ ಪತ್ನಿ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪವೊಂದು ಕೇಳಿಬಂದಿದೆ.

    ಆರ್.ಟಿ.ನಗರದ ವಜೀರ್ ಅಹಮದ್ ಮೇಲೆ ಈ ಆರೋಪ ಕೇಳಿಬಂದಿದೆ. ರ್ಯಾಡೋ ವಾಚ್ (Rado Watch) ತಂದಿಲ್ಲ ಅಂತ ವಜೀರ್ ತನ್ನ ಪತ್ನಿ ಮುಖಕ್ಕೆ ಡೆಡ್ಲಿ ಪಂಚ್ ಕೊಟ್ಟಿದ್ದಾನೆ. ಪತ್ನಿ ಮುಖಕ್ಕೆ ಕೈಯ್ಯಿಂದ ಗುದ್ದಿ ಮಧ್ಯರಾತ್ರಿ ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದಾನೆ. ಇದನ್ನೂ ಓದಿ: ಅತ್ಯಾಚಾರ ಆರೋಪಿ ಮನೆಗೆ ಬುಲ್ಡೋಜರ್‌ ನುಗ್ಗಿಸಿದ ಲೇಡಿ ಪೊಲೀಸ್‌

    ಕಳೆದ ಮೂರು ವರ್ಷಗಳ ಹಿಂದೆ ಸಂತ್ರಸ್ತೆಯನ್ನು ವಜೀರ್ ಮದುವೆಯಾಗಿದ್ದನು. ದುಬೈನಲ್ಲಿ ಕೆಲಸಕ್ಕೆ ಸೇರುತ್ತೇನೆ ಎಂದು ವಂಚಿಸಿ ಮದುವೆಯಾಗಿದ್ದ. ಆದರೆ ಮದುವೆ ನಂತರ ಯಾವುದೇ ಕೆಲಸಕ್ಕೆ ಸೇರಿಕೊಂಡಿಲ್ಲ. ಈ ಮಧ್ಯೆ ಪತ್ನಿಗೆ ತಂದೆ ಮನೆಯಿಂದ ರ್ಯಾಡೋ ವಾಚ್, ಹಣ ಸೇರಿ ಪ್ರತಿ ಹಬ್ಬಕ್ಕೆ ವರದಕ್ಷಿಣೆ (Dowry) ಗೆ ಡಿಮ್ಯಾಂಡ್ ಮಾಡುತ್ತಿದ್ದ. ಅಲ್ಲದೇ ಪತಿ ನನಗೆ ತಿಳಿಯದೇ ನಾಲ್ಕೈದು ಮದುವೆ ಆಗಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

    ಸದ್ಯ ಸಂತ್ರಸ್ತೆಯಿಂದ ಪತಿ ವಜೀರ್ ಹಾಗೂ ಕುಟುಂಬಸ್ಥರ ವಿರುದ್ಧ ಆರ್.ಟಿ.ನಗರ ಠಾಣೆ (R T Nagar Police Station) ಯಲ್ಲಿ ದೂರು ದಾಖಲಾಗಿದೆ. ದೂರಿನನ್ವಯ ಐಪಿಸಿ 498ಎ (ವರದಕ್ಷಿಣೆ ಕಿರುಕುಳ) 506 (ಜೀವ ಬೆದರಿಕೆ) 323 (ಮಾರಣಾಂತಿಕ ಹಲ್ಲೆ)ಯಡಿ ಪ್ರಕರಣ ದಾಖಲಿಸಲಾಗಿದೆ.

  • ಪತ್ನಿಯನ್ನು ಪೀಸ್ ಪೀಸ್ ಮಾಡಿ ನೀರಿನ ಟ್ಯಾಂಕಿನಲ್ಲಿ ತುಂಬಿಸಿಟ್ಟ!

    ಪತ್ನಿಯನ್ನು ಪೀಸ್ ಪೀಸ್ ಮಾಡಿ ನೀರಿನ ಟ್ಯಾಂಕಿನಲ್ಲಿ ತುಂಬಿಸಿಟ್ಟ!

    ರಾಯ್‍ಪುರ: ವ್ಯಕ್ತಿಯೊಬ್ಬ ತನ್ನ ಪತ್ನಿಯ ದೇಹವನ್ನು ಪೀಸ್ ಪೀಸ್ ಮಾಡಿ ಬಳಿಕ ಯಾರಿಗೂ ತಿಳಿಯದಂತೆ ನೀರಿನ ಟ್ಯಾಂಕ್‌ನಲ್ಲಿ  ತುಂಬಿಸಿಟ್ಟ ಘಟನೆ ಛತ್ತೀಸ್ ಗಡದಲ್ಲಿ ನಡೆದಿದೆ.

    ಪ್ರಕರಣ ಸಂಬಂಧಿಸಿದಂತೆ ಆರೋಪಿ ಪತಿ ಪವನ್ ಸಿಂಗ್ ಠಾಕೂರ್ ನನ್ನು ಬಿಲಾಸ್ಪುರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಸತಿ ಸಾಹು ಮೃತ ಪತ್ನಿ.

    ಪವನ್ ಹಾಗೂ ಸತಿ ಸಾಹು ಅವರದ್ದು ಲವ್ ಮ್ಯಾರೇಜ್ (Pavan Sati Sahu Love Marriage). ಇವರಿಬ್ಬರ ಪ್ರೀತಿಗೆ ಮನೆಯವರ ವಿರೋಧವಿದ್ದರೂ ಇಬ್ಬರೂ ಮದುವೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸತಿ ಸಾಹು ಮನೆಯವರು ಈಕೆಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದರು. ಇತ್ತ ನೆರೆಹೊರೆಯವರ ಜೊತೆನೂ ಸತಿ ಅಷ್ಟೊಂದು ಕ್ಲೋಸ್ ಇರಲಿಲ್ಲ. ಹೀಗಾಗಿ 2 ತಿಂಗಳ ಹಿಂದೆಯೇ ಸತಿ ಕೊಲೆಯಾದ್ರೂ ಯಾರೊಬ್ಬರ ಗಮನಕ್ಕೂ ಬಂದಿರಲಿಲ್ಲ. ಆದರೆ ನಕಲಿ ಕರೆನ್ಸಿ ದಂಧೆ (Fake Currency Racket) ಸಂಬಂಧ ತನಿಖೆ ನಡೆಸಲು ಪೊಲೀಸರು ಪವನ್ ಮನೆಗೆ ಬಂದ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

    ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದಾಗ ಹಾಸಿಗೆ ಕೆಳಗೆ, ನೀರು ತುಂಬಿಸುವ ಪ್ಲಾಸ್ಟಿಕ್ ಚೀಲ (Polythin Bags) ಗಳಲ್ಲಿ ತುಂಬಿಸಿಟ್ಟಿರುವುದು ಬಯಲಾಗಿದೆ. ಈ ಸಂಬಂಧ ಪೊಲೀಸರು ಪವನ್ ನನ್ನು ವಿಚಾರಣೆ ನಡೆಸಿದಾಗ, ದಾಂಪತ್ಯ ದ್ರೋಹ ಮಾಡುವ ಶಂಕೆಯಿಂದ ನಮ್ಮಿಬ್ಬರ ಮಧ್ಯೆ ಜಗಳವಾಯಿತು. ಮಾತಿಗೆ ಮಾತು ಬೆಳೆದಿದ್ದರಿಂದ ಸಿಟ್ಟಲ್ಲಿ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

    10 ವರ್ಷಗಳ ಹಿಂದೆ ದಂಪತಿ ಮದುವೆಯಾಗಿದ್ದು, ಬಿಲಾಸ್ಪುರದ ಉಸ್ಲಾ ಪ್ರದೇಶದಲ್ಲಿ ವಾಸವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಅವರು ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದಾರೆ. ನಕಲಿ ಕರೆನ್ಸಿ ದಂಧೆ ಸಂಬಂಧ ಮನೆ ಹುಡುಕಾಟ ನಡೆಸಿದಾಗ ಕೋಣೆಯಲ್ಲಿ ನೀರಿನ ಕ್ಯಾನ್ ಪೊಲೀಸರ ಕಣ್ಣಿಗೆ ಬಿದ್ದಿದೆ. ಕೂಡಲೇ ಅವರು ಕ್ಯಾನ್ ಮುಚ್ಚಳ ತೆರೆದು ನೋಡಿದಾಗ ಅದರಿಂದ ಗಬ್ಬು ವಾಸನೆ ಹೊರಬಂದಿದೆ. ಮತ್ತೆ ಮನೆ ಪರಿಶೀಲನೆ ನಡೆಸಿದಾಗ ದೇಹದ ಭಾಗಗಳು ಅಲ್ಲಲ್ಲಿ ಬಿದ್ದಿದ್ದವು. ಜೊತೆಗೆ ಸ್ಕ್ಯಾನರ್, ಪ್ರಿಂಟರ್ ಹಾಗೂ ನಕಲಿ ಕರೆನ್ಸಿ ಕೂಡ ಪತ್ತೆಯಾದವು.

    ಪೊಲೀಸರ ಪ್ರಕಾರ, ಜನವರಿ 6 ರಂದು ದಂಪತಿಗಳು ಜಗಳವಾಡಿದರು. ನಂತರ ಅವರು ಕೋಪದ ಭರದಲ್ಲಿ ಆಕೆಯ ಕತ್ತು ಹಿಸುಕಿ ಕೊಂದನು. ಬಳಿಕ ಗ್ರೈಂಡರ್-ಕಟರ್‍ನಿಂದ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿದನು. ನಂತರ ಹೊರಗೆ ಹೋಗಿ ಟೇಪ್, ಪ್ಲಾಸ್ಟಿಕ್ ಚೀಲಗಳು ಮತ್ತು ನೀರಿನ ಕ್ಯಾನ್ ಖರೀದಿಸಿದ್ದಾನೆ. ದೇಹದ ಭಾಗಗಳನ್ನು ಅದರೊಳಗೆ ತುಂಬಿಸಿ ಟೇಪ್ ಹಾಕಿದ್ದಾನೆ. ಪತ್ನಿಯನ್ನು ಯಾರೂ ಹುಡುಕಲು ಬರಲ್ಲ ಎಂದು ಅವನು ಚೆನ್ನಾಗಿ ತಿಳಿದಿದ್ದನು. ಆದರೆ ಕರೆನ್ಸಿ ಜಾಡು ಪೊಲೀಸರನ್ನು ಅವನ ಬಳಿಗೆ ಕರೆದೊಯ್ಯಿತು.

    ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ಜೈಲಿಗಟ್ಟಿದ್ದಾರೆ.

  • ಎಷ್ಟೇ ಪೌಡರ್ ಹಾಕಿದ್ರೂ ನೀನು ಬೆಳ್ಳಗಾಗಲ್ಲ – ಪತ್ನಿಯ ಕತ್ತು ಹಿಸುಕಿ ಕೊಂದ ಪತಿ

    ಎಷ್ಟೇ ಪೌಡರ್ ಹಾಕಿದ್ರೂ ನೀನು ಬೆಳ್ಳಗಾಗಲ್ಲ – ಪತ್ನಿಯ ಕತ್ತು ಹಿಸುಕಿ ಕೊಂದ ಪತಿ

    ಕಲಬುರಗಿ: ಎಷ್ಟೆ ಪೌಡರ್ ಹಾಕಿದ್ರು ಕೂಡ ನೀನು ವೈಟ್ ಆಗುವುದಿಲ್ಲ ಎಂದು ಪತ್ನಿಯನ್ನೇ (Wife) ಪತಿಯೊಬ್ಬ (Husband) ಕತ್ತು ಹಿಸುಕಿ ಹತ್ಯೆಗೈದ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ ತಾಲೂಕಿನ ಕೆಲ್ಲೂರ್ ಗ್ರಾಮದಲ್ಲಿ ನಡೆದಿದೆ.

    ಫರ್ಜಾನ ಬೇಗಂ(28) ಕೊಲೆಯಾದ ಮಹಿಳೆ. ಖಾಜಾ ಪಟೇಲ್ ಹಾಗೂ ಫರ್ಜಾನ ಬೇಗಂ 7 ವರ್ಷದ ಹಿಂದೆ ಮದುವೆಯಾಗಿದ್ದರು. ಆದರೆ ಮದುವೆಯಾದ (Wedding) ದಿನದಿಂದ ಖಾಜಾ ಪಟೇಲ್ ಹಾಗೂ ಆತನ ಕುಟುಂಬಸ್ಥರು ಫರ್ಜಾನ ಬೇಗಂಗೆ ನಿತ್ಯ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆಯ (Dowry) ಜೊತೆಗೆ ಆಕೆಗೆ ಕಪ್ಪಗಿದ್ದೀಯಾ ಎಂದು ಪತಿ ಖಾಜಾ ಪಟೇಲ್ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ. ಇದನ್ನೂ ಓದಿ: ಬೊಮ್ಮಾಯಿಯಿಂದ ಶಿವಾಜಿ ಪುತ್ಥಳಿ ಲೋಕಾರ್ಪಣೆ – ಲಕ್ಷ್ಮಿ ಹೆಬ್ಬಾಳ್ಕರ್ ಗೈರು

    ಈ ಹಿನ್ನೆಲೆಯಲ್ಲಿ ಫರ್ಜಾನ ಬೇಗಂ ಗಂಡ ಖಾಜಾ ಪಟೇಲ್ ಕತ್ತು ಹಿಸುಕಿ ಕೊಲೆ ಆರೋಪ ಕೇಳಿ ಬಂದಿದೆ. ಕೊಲೆ ಮಾಡಿದ ಬಳಿಕ ಖಾಜಾ ಪಟೇಲ್ ಮತ್ತು ಕುಟುಂಬ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜೆಡಿಎಸ್, ಬಿಜೆಪಿಗೆ ಕಾಂಗ್ರೆಸ್ ಗಾಳ- ಡಿ.ಕೆ.ಶಿವಕುಮಾರ್ ಸ್ಪಷ್ಟನೆ

  • ಉದ್ಯೋಗದಲ್ಲಿ ಬಡ್ತಿ ಪಡೆಯಲು ಬಾಸ್ ಜೊತೆ ಮಲಗಲು ಪತ್ನಿಯನ್ನು ಒತ್ತಾಯಿಸಿದ!

    ಉದ್ಯೋಗದಲ್ಲಿ ಬಡ್ತಿ ಪಡೆಯಲು ಬಾಸ್ ಜೊತೆ ಮಲಗಲು ಪತ್ನಿಯನ್ನು ಒತ್ತಾಯಿಸಿದ!

    ಮುಂಬೈ: ತ್ವರಿತ ಬಡ್ತಿ ಹಾಗೂ ಇತರೆ ಆರ್ಥಿಕ ಪ್ರಯೋಜನಗಳು ಸಿಗಲು ವ್ಯಕ್ತಿಯೊಬ್ಬ ಪತ್ನಿ (Wife) ಬಳಿ ಬಾಸ್ ಜೊತೆ ಮಲಗಲು ಒತ್ತಾಯಿಸಿದ ಘಟನೆ ಮಹಾರಾಷ್ಟ್ರದ (Maharashtra) ಪುಣೆಯಲ್ಲಿ (Pune) ನಡೆದಿದೆ.

    ಪುಣೆಯ ಅಮಿತ್ ಛಾಬ್ರಾ ಎಂಬ ವ್ಯಕ್ತಿಯನ್ನು ಮಹಿಳೆ ಮದುವೆ ಆಗಿದ್ದಳು. ಮದುವೆಯ ನಂತರ ಅಮಿತ್ ಛಾಬ್ರಾ ಕೆಟ್ಟ ಸಹವಾಸಗಳಿಗೆ ಸಿಲುಕಿ ಪತ್ನಿಯನ್ನು ಅನೈತಿಕ ಹಾಗೂ ಕಾನೂನುಬಾಹಿರ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ಎಂಬ ಆರೋಪಗಳು ಕೇಳಿಬಂದಿದೆ.

    ಅಷ್ಟೇ ಅಲ್ಲದೇ ಅಮಿತ್ ಸಹೋದರನು ಕೂಡ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದ. ಜೊತೆಗೆ ಆಕೆಯ ಮಾವ ಕೂಡ 12 ವರ್ಷದ ಮಗಳ ಎದುರೇ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದ. ಇದನ್ನು ವಿರೋಧಿಸಿದಾಗ ಆಕೆಗೆ ಥಳಿಸುತ್ತಿದ್ದ.

    ಈ ಹಿನ್ನೆಲೆಯಲ್ಲಿ ಆಕೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಆ ವೇಳೆ ಆಕೆಯ ಪತಿ ಇನ್ನೂ ಮುಂದೆ ಕಿರುಕುಳ ನೀಡುವುದಿಲ್ಲ ಎಂದು ಲಿಖಿತವಾಗಿ ತಿಳಿಸಿದ್ದ. ಆದರೆ ಕೆಲ ದಿನಗಳ ನಂತರ ಮತ್ತೆ ಕಿರುಕುಳ ಪ್ರಾರಂಭವಾಗಿತ್ತು. ಇದನ್ನೂ ಓದಿ: ಮಂಡ್ಯಕ್ಕೆ ಮೋದಿ ಭೇಟಿಗೂ ಮುನ್ನವೇ ಶಾಕ್- ನಾರಾಯಣ ಗೌಡರಿಂದ ಪಕ್ಷಾಂತರದ ಸುಳಿವು!

    ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಕೋರ್ಟ್ ಮೊರೆ ಹೋಗಿದ್ದಾಳೆ. ನಂತರ ನ್ಯಾಯಾಲಯವು ಮಹಿಳಾ ಕಲ್ಯಾಣ ಅಧಿಕಾರಿಯಿಂದ ತನಿಖೆಗೆ ಆದೇಶಿಸಿತು. ತನಿಖೆಯ ನಂತರ ಮಹಿಳೆಯ ಪತಿ, ಸೋದರ ಮಾವ, ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಜೆಎನ್‍ಯುನಲ್ಲಿ ಹೊಸ ರೂಲ್ಸ್ – ಹಿಂಸಾಚಾರ ನಡೆಸಿದ್ರೇ ವಿದ್ಯಾರ್ಥಿಗಳ ಪ್ರವೇಶ ರದ್ದು

  • ಗಂಡ, ಅತ್ತೆಯನ್ನು ಕೊಂದು ದೇಹಗಳನ್ನು ಪೀಸ್‌ ಮಾಡಿ ಫ್ರಿಡ್ಜ್‌ನಲ್ಲಿಟ್ಟ ಮಹಿಳೆ

    ಗಂಡ, ಅತ್ತೆಯನ್ನು ಕೊಂದು ದೇಹಗಳನ್ನು ಪೀಸ್‌ ಮಾಡಿ ಫ್ರಿಡ್ಜ್‌ನಲ್ಲಿಟ್ಟ ಮಹಿಳೆ

    ಗುವಾಹಟಿ: ಮಹಿಳೆಯೊಬ್ಬಳು ತನ್ನ ಪತಿ ಮತ್ತು ಅತ್ತೆಯನ್ನು ಕೊಂದು, ಅವರ ದೇಹಗಳನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿದ್ದ ಭಯಾನಕ ಘಟನೆ ಅಸ್ಸಾಂನ (Assam) ನೂನ್‌ಮತಿಯಲ್ಲಿ ಬೆಳಕಿಗೆ ಬಂದಿದೆ.

    ಕೊಲೆ ಮಾಡಿದ ವಂದನಾ ಕಲಿತಾ ಎಂಬ ಮಹಿಳೆ ವಿವಾಹೇತರ ಸಂಬಂಧ ಹೊಂದಿದ್ದಳು. ಪತಿ ಅಮರಜ್ಯೋತಿ ಡೇ ಮತ್ತು ಅತ್ತೆ ಶಂಕರಿ ಡೇ ಅವರನ್ನು ಹತ್ಯೆ ಮಾಡಿ ಮೂರು ದಿನಗಳ ನಂತರ ತನ್ನ ಪ್ರಿಯಕರನೊಂದಿಗೆ ಸೇರಿ, ಇಬ್ಬರ ದೇಹಗಳ ಭಾಗಗಳನ್ನು ಬೇರೆಡೆಗೆ ಸಾಗಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಇಡಿ ದಾಳಿ: ಕಾಂಗ್ರೆಸ್ ಮಹಾಧಿವೇಶನಕ್ಕೂ ಮುನ್ನ ನಾಯಕರಿಗೆ ಶಾಕ್

    ಗುವಾಹಟಿಯಿಂದ 150 ಕಿಮೀ ದೂರದಲ್ಲಿರುವ ಮೇಘಾಲಯ ರಾಜ್ಯದ ಚಿರಾಪುಂಜಿಗೆ ಕೊಂಡೊಯ್ದಿದ್ದರು. ಅಲ್ಲಿ ದೇಹದ ಭಾಗಗಳನ್ನು ಎಸೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ವಂದನಾ ತನ್ನ ಪತಿ ಹಾಗೂ ಅತ್ತೆಯನ್ನು ಹತ್ಯೆ ಮಾಡಿದ್ದಾಳೆ. ನಂತರ ಅವರ ದೇಹಗಳನ್ನು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದಳು. ಪ್ರಿಯಕರನೊಂದಿಗೆ ಸೇರಿಕೊಂಡು ದೇಹದ ಭಾಗಗಳನ್ನು ಬೇರೆಡೆಗೆ ಸಾಗಿಸಿ ಎಸೆದಿದ್ದಳು. ಈ ಪ್ರಕರಣವನ್ನು ನಮ್ಮ ಪೊಲೀಸ್‌ ಅಧಿಕಾರಿಗಳು ಯಶಸ್ವಿಯಾಗಿ ಭೇದಿಸಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ತಪಾಸಣೆ ಭಯಕ್ಕೆ ಮೊಬೈಲ್ ನುಂಗಿದ ಕೈದಿ

    ಕಳೆದ ವರ್ಷ ದೆಹಲಿಯಲ್ಲಿ ಲಿವಿಂಗ್‌ ರಿಲೇಷನ್‌ಶಿಪ್‌ನಲ್ಲಿದ್ದ ಆಫ್ತಾಬ್ ಪೂನಾವಾಲಾನಿಂದ (Aftab) ಶ್ರದ್ಧಾ ವಾಕರ್ (Shraddha Walkar) ಹತ್ಯೆ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಆ ಕೃತ್ಯದ ಮಾದರಿಯಲ್ಲೇ ಅಸ್ಸಾಂನಲ್ಲಿ ಮಹಿಳೆ ಕೊಲೆ ಮಾಡಿದ್ದಾಳೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶೀಲ ಶಂಕಿಸಿ ಪತ್ನಿಯನ್ನು ಭೀಕರವಾಗಿ ಕೊಂದ ಶಾಲೆ ಶಿಕ್ಷಕ

    ಶೀಲ ಶಂಕಿಸಿ ಪತ್ನಿಯನ್ನು ಭೀಕರವಾಗಿ ಕೊಂದ ಶಾಲೆ ಶಿಕ್ಷಕ

    ಕಲಬುರಗಿ: ಶೀಲವನ್ನು ಶಂಕಿಸಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ (Kalaburagi) ನಗರದ ಅಂಬಿಕಾ ಕಾಲೋನಿಯಲ್ಲಿ ನಡೆದಿದೆ.

    ನಗರದ ಅಂಬಿಕಾ ಕಾಲೋನಿಯ ಫರೀದಾ ಬೇಗಂ (39) ಪತಿ ಎಜಾಜ್ ಅಹ್ಮದ್‌ನಿಂದ ಕೊಲೆಯಾದ ದುರ್ದೈವಿ. ಕಳೆದ 13 ವರ್ಷದ ಹಿಂದೆ ಈಕೆಯ ಜೊತೆಗೆ ವಿವಾಹ ಆಗಿದ್ದ ಅಹ್ಮದ್‌, ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಸೇತುವೆ ತಡೆಗೋಡೆಗೆ ಕಾರು ಡಿಕ್ಕಿ – ನಾಲ್ವರು ಸ್ಥಳದಲ್ಲೇ ಸಾವು

    ಅನೈತಿಕ ಸಂಬಂಧ ಹಾಗೂ ವರದಕ್ಷಿಣೆ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ.

    ಪತಿ-ಪತ್ನಿ ಇಬ್ಬರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ನಿತ್ಯ ಶಾಲೆಗೆ ಹೋಗದಂತೆ ಪತಿ ಪೀಡಿಸುತ್ತಿದ್ದ ಎಂದು ಮಾಹಿತಿ ಬಂದಿದ್ದು, ಸ್ಟೇಶನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಲವ್ವರ್ ಹತ್ಯೆಗೂ ಮುನ್ನ ಗೆಳೆಯರ ಜೊತೆ ಎಂಗೇಜ್ಮೆಂಟ್ ಪಾರ್ಟಿ ಮಾಡಿದ್ದ ಕೊಲೆಗಡುಕ!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅನೈತಿಕ ಸಂಬಂಧಕ್ಕೆ ಅಡ್ಡಿ – ಪತಿಯನ್ನೇ ಕೊಲೆಗೈದ ಪತ್ನಿ

    ಅನೈತಿಕ ಸಂಬಂಧಕ್ಕೆ ಅಡ್ಡಿ – ಪತಿಯನ್ನೇ ಕೊಲೆಗೈದ ಪತ್ನಿ

    ಮೈಸೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ (Husband) ಪತ್ನಿ (Wife) ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆ ಮಾಡಿದ ಘಟನೆ ಮೈಸೂರು (Mysuru) ಜಿಲ್ಲೆಯಲ್ಲಿ ನಡೆದಿದೆ.

    ಮಂಜು ಮೃತ ವ್ಯಕ್ತಿ. ಮಂಜುಗೆ 12 ವರ್ಷದ ಹಿಂದೆ ಲಿಖಿತಾ ಎನ್ನುವವಳ ಜೊತೆ ಮದುವೆ ಆಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಕೆಳ ಮಧ್ಯಮ ಕುಟುಂಬವಾದರೂ ಮಂಜು, ತನ್ನ ಕುಟುಂಬವನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ, ಐದಾರು ವರ್ಷಗಳ ಹಿಂದೆ ಮಂಜು ಪತ್ನಿ ಲಿಖಿತಾಗೆ ಅನೈತಿಕ ಸಂಬಂಧ ಶುರುವಾಯಿತು. ಲಿಖಿತಾಳ ಊರಾದ ಬೋಗಾದಿಯಲ್ಲಿನ ಯುವಕನ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡು ಅವನ ಜೊತೆ ಮನೆ ಬಿಟ್ಟು ಹೋಗಿದ್ದಳು.

    ಪ್ರಿಯಕರನ ಜೊತೆ ಓಡಿ ಹೋಗಿದ್ದ ಪತ್ನಿಯನ್ನು ದೊಡ್ಡ ಮನಸ್ಸು ಮಾಡಿ ಮಂಜು ಕ್ಷಮಿಸಿದ್ದ. ಆಗ ಊರಿನವರು ಹಾಗೂ ಸಂಬಂಧಿಗಳು ಲಿಖಿತಾಗೆ ಬುದ್ಧಿ ಹೇಳಿ ಸಂಸಾರ ಸರಿ ಮಾಡಿದ್ದರು. ಆದರೂ ಈ ಬಗ್ಗೆ ಆಗಾಗ ಮನೆಯಲ್ಲಿ ಜಗಳ ನಡೆಯುತ್ತಲೇ ಇತ್ತು. ಇದನ್ನೂ ಓದಿ: ನನ್ನ ಹತ್ಯೆಗೆ ನೀವೇ ಕೋವಿ ಹಿಡಿದುಕೊಂಡು ಬನ್ನಿ – ಅಶ್ವಥ್‌ ನಾರಾಯಣ್‌ಗೆ ಸಿದ್ದು ತಿರುಗೇಟು

    ತನ್ನ ಪತ್ನಿಯ ನಡವಳಿಕೆ ಬಗ್ಗೆ ಮಂಜು ಆಗಾಗ ಪ್ರಶ್ನೆ ಮಾಡುತ್ತಿದ್ದ. ಇದರಿಂದ ಕೋಪಗೊಂಡಿದ್ದ ಲಿಖಿತಾ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದಿದ್ದಾಳೆ. ರಾತ್ರೋರಾತ್ರಿ ಪ್ರಿಯಕರನ ಜೊತೆ ಸೇರಿ ಲಿಖಿತಾ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಸದ್ಯ ವಿಜಯನಗರ ಪೊಲೀಸರು ಆರೋಪಿ ಲಿಖಿತಾಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕ್ಬೇಕು: ಅಶ್ವಥ್ ನಾರಾಯಣ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಳಗಾವಿಯಲ್ಲಿ ನೇಣು ಬಿಗಿದುಕೊಂಡು KAS ಅಧಿಕಾರಿ ಪತಿ ಆತ್ಮಹತ್ಯೆ

    ಬೆಳಗಾವಿಯಲ್ಲಿ ನೇಣು ಬಿಗಿದುಕೊಂಡು KAS ಅಧಿಕಾರಿ ಪತಿ ಆತ್ಮಹತ್ಯೆ

    ಬೆಳಗಾವಿ: ಕೆಎಎಸ್ (KAS) ಅಧಿಕಾರಿ ರೇಷ್ಮಾ ತಾಳಿಕೋಟಿ ಪತಿಯೊಬ್ಬರು‌ (Husband) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಜಂ ನಗರದಲ್ಲಿ ನಡೆದಿದೆ.

    ಜಾಫರ್ ಫೀರ್ಜಾದೆ (39) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇಂದು (ಸೋಮವಾರ) ಮಧ್ಯಾಹ್ನ ಅಜಂ ನಗರದ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬೀಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಜಾಫರ್ ಫೀರ್ಜಾದೆ ಮೃತದೇಹ ಸ್ಥಳಾಂತರ ಮಾಡಲಾಗಿದೆ. ಇದನ್ನೂ ಓದಿ: ಸವಾರರಿಗೆ ಗುಡ್ ನ್ಯೂಸ್ – ಟ್ರಾಫಿಕ್ ಫೈನ್ ಡಿಸ್ಕೌಂಟ್ ಸಮಯ ವಿಸ್ತರಣೆ

    crime

    ಡಿಟಿಐ‌ನಲ್ಲಿ ಎಫ್‌ಡಿಎ ತರಬೇತಿಯಲ್ಲಿದ್ದ ಜಾಫರ್ ಫಿರ್ಜಾದೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನೂ ಕಾರ್ಯ ನಿಮಿತ್ತ ಬೆಂಗಳೂರಿಗೆ (Bengaluru) ತೆರಳಿದ್ದ ಪತ್ನಿ ರೇಷ್ಮಾ ತಾಳಿಕೋಟಿ ಹಿಡಕಲ್ ಡ್ಯಾಂ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಬಿಜೆಪಿ ಗೆಲ್ಲಿಸುವ ಸುಪಾರಿ ಸಿದ್ದರಾಮಯ್ಯ ಪಡೆದಿದ್ರು: ಹೆಚ್‌ಡಿಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k