ಹಾವೇರಿ: ಹೆಂಡತಿಯನ್ನು (Wife) ಬರ್ಬರವಾಗಿ ಕೊಲೆ (Murder) ಮಾಡಿದ ಪತಿ (Husband) ತಾನೂ ನೇಣಿಗೆ ಶರಣಾಗಿ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.
ಹಾವೇರಿ ತಾಲೂಕಿನ ಸಂಗೂರು (Sangur) ಗ್ರಾಮದಲ್ಲಿ ಘಟನೆ ನಡೆದಿದ್ದು, ದ್ರಾಕ್ಷಾಣೆವ್ವ (45) ಎಂಬಾಕೆಯನ್ನು ಆಕೆಯ ಪತಿ ಪ್ರಭು ವಾರತಿ (52) ಎಂಬಾತ ಕೊಲೆ ಮಾಡಿ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ತನ್ನ ಹೆಂಡತಿಯ ಮೇಲೆ ಅನುಮಾನ ಪಡುತ್ತಿದ್ದ ಕಾರಣ ಪ್ರತಿದಿನ ಮನೆಯಲ್ಲಿ ಜಗಳ (Fight) ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯ, ಹೊಟ್ಟೆಯಲ್ಲೇ ಮಗು ಸಾವು – ಗ್ರಾಮಸ್ಥರಿಂದ ವೈದ್ಯರ ತರಾಟೆ
ಮಂಗಳವಾರ ಇದೇ ರೀತಿ ಜಗಳ ಆಡುತ್ತಿದ್ದ ಸಂದರ್ಭ ಇವರ ಜಗಳ ಅತಿರೇಕಕ್ಕೆ ಹೋಗಿ ಇಬ್ಬರ ನಡುವೆ ಹೊಡೆದಾಟ ಪ್ರಾರಂಭವಾಗಿದೆ. ಈ ವೇಳೆ ಗಂಡ ಮಚ್ಚಿನಿಂದ ಹೆಂಡತಿಯನ್ನು ಹತ್ಯೆ ಮಾಡಿದ್ದು, ಬಳಿಕ ತಾನೂ ಮನೆಯ ಮುಂದೆ ನೇಣಿಗೆ ಶರಣಾಗಿದ್ದಾನೆ. ಸತಿ-ಪತಿಯ ಸಾವಿನಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಹಾವೇರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಎಸ್ಪಿ ಶಿವಕುಮಾರ್ ಗುಣಾರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸ್ಲೀಪರ್ ಕೋಚ್ ಬಸ್‍ನಲ್ಲಿ ವಿಷ ಕುಡಿದು ಮಲಗಿದ ಪ್ರೇಮಿಗಳು- ಯುವತಿ ಸಾವು
ಬೆಂಗಳೂರು: ಗಂಡನೇ ಹೆಂಡ್ತಿ (Wife Murdered By Husband) ಯನ್ನು ಬರ್ಬರವಾಗಿ ಕೊಲೆಗೈದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ನಾಗರತ್ನ (32) ಕೊಲೆಯಾದ ಮಹಿಳೆ. ಪತಿ ಅಯ್ಯಪ್ಪ ಈ ಕೃತ್ಯ ಎಸಗಿದ್ದು, ಬಸವೇಶ್ವರ ನಗರದ ಮಂಜುನಾಥ ನಗರದಲ್ಲಿ ಈ ಘಟನೆ ನಡೆದಿದೆ. ಅನೈತಿಕ ಸಂಬಂಧದ ಅನುಮಾನ ಹಿನ್ನೆಲೆ ಕೊಲೆ ನಡೆದಿರೋ ಶಂಕೆ ವ್ಯಕ್ತವಾಗಿದೆ.
ಅಪ್ಪ-ಅಮ್ಮ ಇಲ್ಲದೇ ಅನಾಥಾಶ್ರಮದಲ್ಲಿದ್ದ ನಾಗರತ್ನಳನ್ನು 12 ವರ್ಷಗಳ ಹಿಂದೆ ಅಯ್ಯಪ್ಪ ಮದುವೆಯಾಗಿದ್ದ. ದಂಪತಿಗೆ 11 ವರ್ಷದ ಮಗ ಹಾಗೂ 7 ವರ್ಷದ ಮಗಳು ಇದ್ದಳು. ಅಯ್ಯಪ್ಪ, ತನ್ನ ಅಕ್ಕನ ಮನೆಯಲ್ಲಿ ಮಕ್ಕಳನ್ನು ಬಿಟ್ಟಿದ್ದ. ಇತ್ತೀಚೆಗೆ ಹೆಂಡತಿ ಮೇಲೆ ಅನುಮಾನ ಪಟ್ಟಿದ್ದ ಅಯ್ಯಪ್ಪ, ಮೂರು ದಿನಗಳಿಂದ ದಂಪತಿ ಮಧ್ಯೆ ಗಲಾಟೆ ನಡೆದಿತ್ತು. ಇದನ್ನೂ ಓದಿ: ಒಡಿಶಾ ರೈಲು ದುರಂತ ವಿಧ್ವಂಸಕ ಕೃತ್ಯವೇ? – ಪ್ರಾಥಮಿಕ ತನಿಖೆಯ ಬೆನ್ನಲ್ಲೇ ಎದ್ದಿವೆ ಹಲವು ಪ್ರಶ್ನೆಗಳು
ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಬಸವೇಶ್ವರ ನಗರ ಪೊಲೀಸರಿಂದ ಘಟನಾ ಸ್ಥಳದ ಪರಿಶೀಲನೆ ನಡೆಸಿದ್ದು, ಬಸವೇಶ್ವರ ನಗರ ಪೊಲೀಸ್ ಠಾಣೆ (Basaveshwar nagar Police Station) ಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ: ಪತ್ನಿಯನ್ನು ಪತಿಯೇ ಕೊಂದು ಮನೆಗೆ ಬೀಗ ಜಡಿದು ನಾಪತ್ತೆಯಾಗಿರುವ ಅನುಮಾನಸ್ಪದ ಪ್ರಕರಣ ಚಿಕ್ಕಬಳ್ಳಾಪುರ (Wife Murder In Chikkaballapur) ಜಿಲ್ಲೆಯ ಗೌರಿಬಿದನೂರಿನ ಗಂಗಾನಗರದಲ್ಲಿ ಬೆಳಕಿಗೆ ಬಂದಿದೆ.
ಲಕ್ಷ್ಮಿದೇವಿ (40) ಕೊಲೆಯಾದ ಮಹಿಳೆ. ಈಕೆಯ ಪತಿ (Husband) ಕೃಷ್ಣಪ್ಪ (50) ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಲಕ್ಷ್ಮಿದೇವಿ ಹಾಗೂ ಕೃಷ್ಣಪ್ಪ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳಿಗೆ ಮದುವೆಯಾಗಿದೆ. ಕಿರಿಯ ಮಗಳು ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಗಂಡ-ಹೆಂಡತಿ ಇಬ್ಬರೇ ಮನೆಯಲ್ಲಿದ್ದು ಸದಾ ಸಣ್ಣ-ಪುಟ್ಟ ವಿಚಾರಕ್ಕೂ ಕಿರಿಕ್ ಗಲಾಟೆ ಮಾಮೂಲಿಯಾಗಿತ್ತಂತೆ.
ಇದೇ ರೀತಿ ಮೇ 19 ರಂದು ಸಹ ಮನೆಯಲ್ಲಿ ಒಡವೆಗಳ ವಿಚಾರವಾಗಿ ಗಂಡ-ಹೆಂಡತಿ ನಡುವೆ ದೊಡ್ಡ ಜಗಳವೇ ನಡೆದಿತ್ತು. ಮಕ್ಕಳ ಮುಂದೆಯೆ ಶಿಕ್ಷಕ ಕೃಷ್ಣಪ್ಪ ಮಚ್ಚಿನಿಂದ ಪತ್ನಿ ಹತ್ಯೆಗೆ ಮುಂದಾಗಿದ್ದ ಎನ್ನಲಾಗಿದೆ. ಆಗ ಮಕ್ಕಳು, ಬಂಧು-ಬಳಗ ಎಲ್ಲರೂ ಬುದ್ಧಿ ಹೇಳಿ ತಮ್ಮ ಪಾಡಿಗೆ ತಾವು ಹೊರಟು ಹೋಗಿದ್ದಾರೆ. ಆದರೆ ಎಲ್ಲರೂ ಹೋದ ನಂತರವೂ ಜಗಳ ದೊಡ್ಡದಾಗಿ ಕೃಷ್ಣಪ್ಪ ಮಚ್ಚಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿರಬಹುದು ಅಂತ ಶಂಕಿಸಲಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ..?: ಮೇ 19 ರಂದು ಮನೆಯಲ್ಲಿ ಗಲಾಟೆ ಆದ ನಂತರ ಬುದ್ಧಿವಾದ ಹೇಳಿ ಸಮಾಧಾನ ಮಾಡಿ ಮಕ್ಕಳು ಹೊರಟು ಹೋಗಿದ್ದರು. ಆದರೆ ಅದಾದ ನಂತರ ಏನಾಯ್ತು ಎಂಬುದು ಯಾರಿಗೂ ಗೊತ್ತಿಲ್ಲ. 3 ದಿನಗಳ ನಂತರ ಮನೆಯಿಂದ ಅಕ್ಕಪಕ್ಕದ ನಿವಾಸಿಗಳಿಗೆ ಕೆಟ್ಟ ವಾಸನೆ ಬರಲಾರಂಭಿಸಿದೆ. ಮಕ್ಕಳು ಸಹ ಮೂರು ದಿನದಿಂದ ಫೋನ್ ಮಾಡಿದ್ರೂ ಸ್ವಿಚ್‍ಆಫ್ ಅಂತಲೇ ಬಂದಿದೆ. ಹೀಗಾಗಿ ಅನುಮಾನಗೊಂಡು ಅಕ್ಕ-ಪಕ್ಕದ ಮನೆಯವರನ್ನ ಮನೆ ಬಳಿ ಕಳುಹಿಸಿ ನೋಡಲು ತಿಳಿಸಿದ್ದಾರೆ. ಆಗ ಪರಿಚಯಸ್ಥರು ಮನೆ ಬಳಿ ಬಂದಾಗ ಮನೆಗೆ ಬೀಗ ಹಾಕಲಾಗಿದೆ. ಆದರೆ ಮನೆಯ ಒಳಭಾಗದಲ್ಲಿ ಕಿಟಕಿಗಳಲ್ಲಿ ನೊಣಗಳು ಮುತ್ತಿಕೊಂಡಿವೆ. ಇದನ್ನೂ ಓದಿ: ನಂಬಿದ್ರೆ ನಂಬಿ… ಒಂದು ವರ್ಷಕ್ಕೆ 8.26 ಕೋಟಿ ಸಂಪಾದಿಸುತ್ತೆ ಈ ನಾಯಿ
ಕೆಟ್ಟ ದುರ್ವಾಸನೆ ಮೂಗಿಗೆ ಬಡಿದಿದೆ. ಹಾಗಾಗಿ ನಡೆಯಬಾರದ್ದು ಏನೋ ನಡೆದಿದೆ ಅಂತ ಕಿಟಕಿ ಬಾಗಿಲು ತೆಗೆದು ನೋಡಿದಾಗ ಮನೆಯ ರೂಂನಲ್ಲಿ ರಕ್ತ ಸಿಕ್ತವಾಗಿ ಕೊಳೆತು ಗಬ್ಬು ನಾರುವ ಸ್ಥಿತಿಯಲ್ಲಿ ಲಕ್ಷ್ಮಿದೇವಿ ಮೃತದೇಹ ಕಂಡಿದೆ. ಇದರಿಂದ ಕೂಡಲೇ ಮಕ್ಕಳು ಹಾಗೂ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಪೊಲೀಸರು ಬಂದು ಬಾಗಿಲು ಒಡೆದು ಒಳ ಹೋಗಿದ್ದಾರೆ. ಮನೆಯಲ್ಲಿ ಕೃಷ್ಣಪ್ಪನ ಮೊಬೈಲ್ ಅಲ್ಲೇ ಇದೆ ಅದ್ರೆ ಆತ ಮಾತ್ರ ಇಲ್ಲ. ಮಂಚದ ಬಳಿ ಲಕ್ಷ್ಮಿದೇವಿಯ ಶವ ಬಿದ್ದಿದ್ದು, ತಲೆಗೆ ಬಲವಾದ ಆಯುಧದಿಂದ ಹೊಡೆಯಲಾಗಿದೆ. ಮತ್ತೊಂದೆಡೆ ಮೃತಳ ಗಂಡ ಕೃಷ್ಣಪ್ಪನ ಫೋನ್ ಮಂಚದ ಮೇಲೆ ಇದ್ದು, ಆತ ನಾಪತ್ತೆಯಾಗಿದ್ದಾನೆ.
ಇದರಿಂದ ಗಂಡ-ಹೆಂಡತಿಯ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಅನುಮಾನ ವ್ಯಕ್ತವಾಗಿದೆ. ಶಿಕ್ಷಕ ಕೃಷ್ಣಪ್ಪ ಜಿಪುಣನಾಗಿದ್ದು, ಹೆಂಡತಿ ಮಕ್ಕಳ ಖರ್ಚಿಗೂ ಹಣ ಕೊಡ್ತಿರಲಿಲ್ಲ. ಹೆಂಡತಿ ಹಾಗೂ ಮಕ್ಕಳಿಗೆ ಮಾಡಿಸಿದ್ದ ಚಿನ್ನಾಭರಣಗಳನ್ನು ತಾನೇ ತನ್ನ ಬೀರುವಿನಲ್ಲಿ ಲಾಕ್ ಮಾಡಿಕೊಳ್ತಿದ್ದ, ಹಣವನ್ನಂತೂ ಕೊಡ್ತಿರಲಿಲ್ಲ. ಇದರಿಂದ ಮನೆಯಲ್ಲಿದ್ದ ಒಡೆವೆಗಳ ವಿಚಾರದಲ್ಲಿ ಗಂಡ ಹೆಂಡಿರ ಮಧ್ಯೆ ಜಗಳ ವಿಕೋಪಕ್ಕೆ ಹೋಗಿ, ಕೊಲೆಯಲ್ಲಿ ಅಂತ್ಯವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಸ್ವತಃ ಶಿಕ್ಷಕ ಕೃಷ್ಣಪ್ಪನ ಮಗಳು ಲೀಲಾ ಪೆÇಲೀಸರಿಗೆ ತಂದೆಯ ವಿರುದ್ಧ ದೂರು ನೀಡಿದ್ದು, ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ತಿರುವನಂತಪುರಂ: ಕೋಣೆಯೊಳಗೆ ಕೂಡಿ ಹಾಕಿದ್ದ ಪತ್ನಿಯನ್ನು ರಕ್ಷಿಸಲು ಬಂದ ಪೊಲೀಸ್ ಅಧಿಕಾರಿಯ ಮೂಗನ್ನೇ ಮುರಿದ ಪ್ರಸಂಗವೊಂದು ಕೇರಳದ ಕೊಟ್ಟಾಯಂ (Kottayam Kerala) ನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಮೇ 14 ರಂದು ರಾತ್ರಿ 10.15ರ ಸುಮಾರಿಗೆ ಪಂಪಾಡಿಯ ವೆಲ್ಲೂರು 8ನೇ ಮೈಲಿನಲ್ಲಿ ಈ ಘಟನೆ ನಡೆದಿದೆ. ಜಿಬಿನ್ ಲೋಬೋ (Jibin Lobo) ಹಲ್ಲೆಗೊಳಗಾದ ಪೊಲೀಸ್ ಅಧಿಕಾರಿ. ಇವರು ಪಾಪಂಡಿ ಪೊಲೀಸ್ ಠಾಣೆಯ ಸೀನಿಯರ್ ಆಫೀಸರ್ ಆಗಿದ್ದಾರೆ. ಸ್ಯಾಮ್ ಝಕರಿಯಾ ( Sam Zakariya) (42) ಹಲ್ಲೆ ಮಾಡಿದ ವ್ಯಕ್ತಿಯಾಗಿದ್ದು, ಈತ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದನು. ಹಲ್ಲೆಯಿಂದಾಗಿ ಅಧಿಕಾರಿಯ ಮೂಗು ಮುರಿದು ಹೋಗಿದೆ. ಅಲ್ಲದೆ ಕಣ್ಣಿಗೂ ಗಾಯಗಳಾಗಿವೆ.
ನಡೆದಿದ್ದೇನು..?: ಆರೋಪಿ ಸ್ಯಾಮ್ ಅವರ ಪತ್ನಿ ಬಿನಿ, ಪಂಪಾಡಿ ಪೊಲೀಸ್ ಠಾಣೆಗೆ ಕರೆ ಮಾಡಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನನ್ನನ್ನು ರೂಮಿನಲ್ಲಿ ಕೂಡಿ ಹಾಕಿ ಬೀಗ ಹಾಕಲಾಗಿದೆ ಎಂದು ದೂರು ನೀಡಿದ್ದರು. ಕೂಡಲೇ ಗ್ರೇಡ್ ಎಸ್‍ಐ ರಾಜೇಶ್, ಎಸ್‍ಸಿಪಿಒ ಜಿಬಿನ್ ಮತ್ತು ಹೋಂಗಾರ್ಡ್ ಜಯಕುಮಾರ್ ಸ್ಥಳಕ್ಕೆ ದೌಡಾಯಿಸಿದರು. ಇದನ್ನೂ ಓದಿ: ಹಾಡಹಗಲೇ ಡ್ರ್ಯಾಗರ್ ಹಿಡಿದು ಯುವತಿಗೆ ಕಿರುಕುಳ ನೀಡಿದ ದುಷ್ಕರ್ಮಿ – ಮತ್ತೊಬ್ಬ ಮಹಿಳೆಯಿಂದ ರಕ್ಷಣೆ
ಅಲ್ಲದೆ ಮಹಿಳೆಯನ್ನು ಕೂಡಿ ಹಾಕಿದ್ದ ಕೊಠಡಿಯ ಬಾಗಿಲು ತೆರೆಯಲು ಪೊಲೀಸ್ ಅಧಿಕಾರಿ ಯತ್ನಿಸುತ್ತಿದ್ದಾಗ ಸ್ಯಾಮ್, ಜಿಬಿನ್ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಆರೋಪಿ, ರಾಜೇಶ್ ಮತ್ತು ಜಯಕುಮಾರ್ ಅವರನ್ನು ತಳ್ಳಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಂತುರುತಿಯ ಚಂಪಕ್ಕರ ಮೂಲದ ಪೊಲೀಸ್ ಅಧಿಕಾರಿ ಜಿಬಿನ್ ಅವರ ಕಣ್ಣಿನ ರೆಪ್ಪೆಯ ಮೇಲೆ ಗಾಯವಾಗಿದ್ದು, ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ.
ಬಿನಿ ತನ್ನ ಮೊದಲ ಪತಿಯಿಂದ ವಿಚ್ಛೇದನ ಪಡೆದ ನಂತರ ಎರಡು ವರ್ಷಗಳ ಹಿಂದೆ ಸ್ಯಾಮ್‍ನನ್ನು ವಿವಾಹವಾದಳು. ಆಕೆಗೆ ಮೊದಲ ಪತಿಯಿಂದ ಮೂವರು ಮಕ್ಕಳಿದ್ದಾರೆ. ಆದರೆ ಮಕ್ಕಳನ್ನು ಮನೆಗೆ ಕರೆತರುವುದಿಲ್ಲ ಎಂಬ ಷರತ್ತಿನ ಮೇಲೆ ಬಿನಿಯನ್ನು ಸ್ಯಾಮ್ ಮದುವೆಯಾಗಿದ್ದನು.
ತಿರುವನಂತಪುರಂ: ಬೇರೆ ಮಹಿಳೆಯೊಂದಿಗೆ ಸುತ್ತಾಡಿದ್ದ ವ್ಯಕ್ತಿಯೊಬ್ಬ ನಿಯಮ ಉಲ್ಲಂಘಿಸಿ, ಟ್ರಾಫಿಕ್ ಕ್ಯಾಮೆರಾ (Traffic Camera) ಕಣ್ಣಿಗೆ ಸೆರೆಯಾಗಿ ಪತ್ನಿಯ (Wife) ಕೈಗೆ ಸಿಕ್ಕಿಬಿದ್ದ ಘಟನೆ ಕೇರಳದಲ್ಲಿ (Kerala) ನಡೆದಿದೆ.
ಇತ್ತೀಚೆಗೆ ಟ್ರಾಫಿಕ್ ಕ್ಯಾಮೆರಾಗಳು ಕ್ಯಾಮರಾಮ್ಯಾನ್‍ಗಿಂತ ಚೆನ್ನಾಗಿ ಫೋಟೋ ಕ್ಲಿಕ್ಕಿಸುತ್ತಿದ್ದು, ಇದನ್ನು ನೋಡಿದ ವಾಹನ ಸವಾರರು ದಂಡ ಕಟ್ಟಿದ್ರು ಪರ್ವಾಗಿಲ್ಲ ಫೋಟೋ ಚೆನ್ನಾಗಿದೆಯಲ್ಲ ಎಂದು ಹೇಳಿಕೊಳ್ಳುವಷ್ಟು ಚೆನ್ನಾಗಿರುತ್ತವೆ. ಆದರೆ ಈ ಕ್ಯಾಮೆರಾದ ಸ್ಪಷ್ಟತೆಯಿಂದ ಈಗ ಪತಿಯೊಬ್ಬ ಪತ್ನಿ ಕೈಗೆ ಸಿಕ್ಕಿಬಿದ್ದಿದ್ದಾನೆ.
ಇಡುಕ್ಕಿ ಮೂಲದ ವ್ಯಕ್ತಿ ತನ್ನ ಮಹಿಳಾ ಸ್ನೇಹಿತೆಗೆ ಡ್ರಾಪ್ ಕೊಟ್ಟಿದ್ದ. ಆದರೆ ಈ ವೇಳೆ ಮಹಿಳಾ ಸ್ನೇಹಿತೆ ಹೆಲ್ಮೆಟ್ ಧರಿಸದೇ ಪ್ರಯಾಣಿಸಿದ್ದಾಳೆ. ಇದರಿಂದಾಗಿ ಸಂಚಾರ ನಿಯಮದ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಬೈಕ್ ಸವಾರ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದುರಾದೃಷ್ಟಕ್ಕೆ ಪತಿ ಓಡಿಸುತ್ತಿದ್ದ ಸ್ಕೂಟರ್‌ನ ನೋಂದಣಿ ಪ್ರಮಾಣ ಪತ್ರದ ಪ್ರಕಾರ ಪತ್ನಿಯೇ ವಾಹನದ ಮಾಲೀಕರಾಗಿದ್ದಳು. ಇದರಿಂದಾಗಿ ನಿಯಮ ಉಲ್ಲಂಘನೆಯ ವಿವರ ಹಾಗೂ ಪಾವತಿಸಬೇಕಾದ ದಂಡದ ವಿವರದ ಸಂದೇಶವು ಆಕೆಯ ಮೊಬೈಲ್ ಫೋನ್‍ಗೆ ಬಂದಿದೆ.
ಈ ಮೊಬೈಲ್ ಸಂದೇಶವನ್ನು ನೋಡಿದ ಮಹಿಳೆಯು, ಫೋಟೋದಲ್ಲಿ ಕಾಣುವ ಮಹಿಳೆ ಯಾರು ಎಂದು ಪತಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆ ವ್ಯಕ್ತಿಯು ಬೈಕ್‍ನಲ್ಲಿದ್ದ ಮಹಿಳೆಗೂ ನನಗೂ ಯಾವುದೇ ಸಂಬಂಧವಿಲ್ಲ. ಬದಲಿಗೆ ಲಿಫ್ಟ್ ನೀಡಿದ್ದೇನೆ ಎಂದು ಹೇಳಿದ್ದಾನೆ. ಈ ಮಾತನ್ನು ನಂಬಂದ ಪತ್ನಿಯ ಕೋಪಗೊಂಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದನ್ನೂ ಓದಿ: ಸಲಿಂಗ ವಿವಾಹ ಕಾನೂನು ಮಾನ್ಯತೆ ವಿಚಾರಣೆ – ಸಿಜೆಐ ಹಿಂದೆ ಸರಿಯುವಂತೆ ಸಲ್ಲಿಸಿದ್ದ ಮನವಿ ತಿರಸ್ಕೃತ
ಘಟನೆಗೆ ಸಂಬಂಧಿಸಿ ಮಹಿಳೆಯು ಕರಮಾನ ಪೊಲೀಸರಿಗೆ ವ್ಯಕ್ತಿಯ ವಿರುದ್ಧ ದೂರು ನೀಡಿದ್ದಾಳೆ. ದೂರಿನಲ್ಲಿ ತನಗೂ, ತನ್ನ 3 ವರ್ಷದ ಮಗಳ ಮೇಲೆ ಪತಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ:ಧರ್ಮಸ್ಥಳದಲ್ಲಿ ಮದುವೆಯಾಗಿ ಹಾಸನಕ್ಕೆ ಬಂದು ಮತ ಚಲಾಯಿಸಿದ ವರ
ಭೋಪಾಲ್: ಬ್ಯೂಟಿ ಪಾರ್ಲರ್‌ಗೆ (Beauty Parlour) ಹೋಗುವುದನ್ನು ಪತಿ (Husband) ತಡೆದಿದ್ದಕ್ಕೆ ಮಹಿಳೆಯೊಬ್ಬಳು (Woman) ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ರೀನಾ ಯಾದವ್ (34) ಮೃತ ಮಹಿಳೆ. ರೀನಾ ಬ್ಯೂಟಿ ಪಾರ್ಲರ್‌ಗೆ ಹೋಗಲು ಸಿದ್ಧಳಾಗುತ್ತಿದ್ದಳು. ಈ ವೇಳೆ ಆಕೆಯ ಪತಿ ಬಲರಾಮ್ ಪಾರ್ಲರ್‌ಗೆ ಹೋಗುವುದು ಬೇಡ ಎಂದು ತಡೆದಿದ್ದಾನೆ. ಇದರಿಂದ ಕೋಪಗೊಂಡ ರೀನಾ ತನ್ನ ರೂಮ್‍ಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆ ಬಳಿಕ ಆಕೆಯ ಪತಿ ಬಲರಾಮ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಮದುವೆಯಾಗಿ 15 ವರ್ಷಗಳಾಗಿದ್ದು, ಬಲರಾಮ್ ಹಾಗೂ ರೀನಾ ನಡುವೆ ನಿರಂತರ ಜಗಳ ನಡೆಯುತ್ತಿತ್ತು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳು ನಾನಾರೀತಿಯ ನಾಟಕಗಳನ್ನು ಮಾಡುತ್ತಿದೆ: ಮುನಿರತ್ನ
ಪಾಟ್ನಾ: ಬಿಹಾರದ (Bihar) ಅರ್ವಾಲ್ ಜಿಲ್ಲೆಯ ವ್ಯಕ್ತಿಯೊಬ್ಬ ಬರೋಬ್ಬರಿ 40 ಪತ್ನಿಯರನ್ನು ಹೊಂದುವ ಮೂಲಕ ಸುದ್ದಿಯಾಗಿದ್ದಾನೆ.
ಬಿಹಾರದ ಅಗರ್ವಾಲ್ ಜಿಲ್ಲೆಯ ರೆಡ್‍ಲೈಟ್ ಏರಿಯಾದಲ್ಲಿ ಜಾತಿ ಗಣತಿ ನಡೆಸಲಾಗಿತ್ತು. ಈ ವೇಳೆ 40 ಮಹಿಳೆಯರು (Women) ಹೇಳಿದ ಉತ್ತರ ಕೇಳಿ ಅಧಿಕಾರಿಗಳು ಒಮ್ಮೆಲೇ ಶಾಕ್ ಆಗಿದ್ದಾರೆ. 40 ಮಹಿಳೆಯರು ರೂಪಚಂದ್ ಎಂಬಾತನನ್ನು ತಮ್ಮ ಪತಿ (Husband) ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರ ಮಕ್ಕಳು ಕೂಡ ರೂಪಚಂದ್ ಹೆಸರನ್ನು ತಮ್ಮ ತಂದೆಯ ಹೆಸರಾಗಿ ಬರೆದಿದ್ದಾರೆ.
ವರದಿಗಳ ಪ್ರಕಾರ, ವಾರ್ಡ್ ಸಂಖ್ಯೆ 7ರ ರೆಡ್‍ಲೈಟ್ ಏರಿಯಾದಲ್ಲಿ ವಾಸಿಸುವ ಜನರು ಜೀವನಕ್ಕಾಗಿ ಹಾಡುತ್ತಾರೆ ಹಾಗೂ ನೃತ್ಯ ಮಾಡುತ್ತಾರೆ. ಆದರೆ ಇವರ್ಯಾರಿಗೂ ಸ್ಥಿರ ವಿಳಾಸವಿಲ್ಲ. ಇದರಿಂದಾಗಿ ಈ ಮಹಿಳೆಯರು ತಮ್ಮ ಪತಿಗೆ ರೂಪಚಂದ್ ಎಂದು ಹೆಸರಿಸಿದ್ದಾರೆ. ಈ ಘಟನೆ ಸುತ್ತಮುತ್ತಲ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಡಿಕೆಶಿಗೆ ಸೋಲಿನ ಭಯ ಕಾಡ್ತಿದೆ, ಅದಕ್ಕಾಗಿ ಮಾಟ-ಮಂತ್ರ ಮಾಡಿಸ್ತಿದ್ದಾರೆ: ಆರ್.ಅಶೋಕ್
ನಿತೀಶ್ ಕುಮಾರ್ ಸರ್ಕಾರವು ಜನವರಿ 7ರಂದು ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿಯನ್ನು ಪ್ರಾರಂಭಿಸಿತು. ಎಣಿಕೆ ಯೋಜನೆಗೆ 500 ಕೋಟಿ ವೆಚ್ಚವಾಗಲಿದೆ. ಬಿಹಾರ ಸರ್ಕಾರ ಎರಡು ಹಂತಗಳಲ್ಲಿ ಈ ಎಣಿಕೆಯನ್ನು ನಡೆಸುತ್ತಿದೆ. ಮೊದಲ ಹಂತದಲ್ಲಿ, ಎಲ್ಲಾ ಮನೆಗಳ ಸಂಖ್ಯೆಯನ್ನು ಎಣಿಕೆ ಮಾಡಬೇಕಾಗಿತ್ತು. ಎರಡನೇ ಹಂತದಲ್ಲಿ ಎಲ್ಲ ಜಾತಿ, ಉಪಜಾತಿ ಮತ್ತು ಧರ್ಮದ ಜನರಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಬೇಕಿತ್ತು. ಇದನ್ನೂ ಓದಿ: ಉತ್ತರ ಪ್ರದೇಶ ಅಂದ್ರೆ ಗೂಂಡಾ ರಾಜ್ಯ ಅನ್ನೋ ವಾತಾವರಣವಿತ್ತು – ಸುಮಲತಾ
ಯಾದಗಿರಿ: ಹೆಂಡತಿಯನ್ನು (Wife) ಆರೋಗ್ಯ ತಪಾಸಣೆಗಾಗಿ ಸ್ಕ್ಯಾನಿಂಗ್ ಸೆಂಟರ್‌ಗೆ (Scanning Center) ಕರೆದುಕೊಂಡು ಹೋಗಿದ್ದಾಗ ಅಲ್ಲಿನ ಸಿಬ್ಬಂದಿ ಮೇಲೆ ಸಂಶಯಪಟ್ಟ ಪತಿ (Husband) ಆತನ ಹತ್ಯೆಗೆ ಸುಪಾರಿ ನೀಡಿದ್ದ. ಆದರೆ ಹತ್ಯೆಗೂ ಮುನ್ನವೇ ಸುಪಾರಿ ಪಡೆದಿದ್ದಾತನೊಂದಿಗೆ ಪತಿಯೂ ಸಹ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಯಾದಗಿರಿ (Yadgiri) ನಗರ ಪೊಲೀಸ್ ಠಾಣೆಯ ಪೊಲೀಸರು ಎಚ್ಚೆತ್ತುಕೊಂಡು ಕೊಲೆಗೆ ಹೊಂಚು ಹಾಕಿ ಕುಳಿತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಇದರಿಂದ ಯಾದಗಿರಿ ನಗರ ಪೊಲೀಸ್ ಠಾಣೆ ಪಿಎಸ್‌ಐ ದೇವೇಂದ್ರ ರೆಡ್ಡಿ ಹಾಗೂ ನೇತೃತ್ವದ ತಂಡ ಓರ್ವನ ಪ್ರಾಣ ಕಾಪಾಡಿದಂತಾಗಿದೆ.
ಯಾದಗಿರಿ ತಾಲೂಕಿನ ಮುದ್ನಾಳ್ ತಾಂಡಾ ಗ್ರಾಮದ ನಾನ್ಯಾ ನಾಯಕ್ ಕಳೆದ 8 ತಿಂಗಳ ಹಿಂದೆ ತನ್ನ ಹೆಂಡತಿಯನ್ನು ತಪಾಸಣೆಗಾಗಿ ಯಾದಗಿರಿ ನಗರದ ಶಿವಸಾಯಿ ಸ್ಕ್ಯಾನ್ ಸೆಂಟರ್‌ಗೆ ಕರೆದುಕೊಂಡು ಹೋಗಿದ್ದ. ಸ್ಕ್ಯಾನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್, ನಾನ್ಯಾ ನಾಯಕನ ಹೆಂಡತಿಯನ್ನು 15 ನಿಮಿಷಗಳ ಕಾಲ ತಪಾಸಣೆ ಮಾಡಿದ್ದಾನೆ. ಇದರಿಂದ ನಾಯಕ್ ತನ್ನ ಹೆಂಡತಿ ಇಷ್ಟು ಸಮಯ ಒಳಗಡೆ ಇರುವುದಕ್ಕೆ ಸುರೇಶ್‌ನ ಮೇಲೆ ಸಂಶಯ ಪಟ್ಟಿದ್ದಾನೆ. ಇದೇ ಕಾರಣಕ್ಕೆ ಸುರೇಶ್‌ನನ್ನು ಕೊಲ್ಲಲು ಕಳೆದ 8 ತಿಂಗಳಿಂದ ಪರಿತಪಿಸುತ್ತಿದ್ದ.
ನಾನ್ಯಾ ನಾಯಕ್ ಬೆಂಗಳೂರಿನಲ್ಲಿದ್ದ ತನ್ನ ಪರಿಚಯಸ್ಥನಿಗೆ ಸ್ಕ್ಯಾನ್ ಸೆಂಟರ್‌ನಲ್ಲಿ ಕೆಲಸ ಮಾಡುವ ಸುರೇಶ್‌ನ ಹತ್ಯೆಗೆ 50 ಸಾವಿರ ರೂ. ಹಣ ಹಾಗೂ ಬಂಗಾರದ ಉಂಗುರ ನೀಡಿದ್ದ. ಅದರಂತೆ ಸುಪಾರಿ ಪಡೆದಿದ್ದಾತ ಪುಣೆಯಲ್ಲಿ ಕಂಟ್ರಿ ಪಿಸ್ತೂಲ್, ಚಾಕು, ಪಂಚ್ ಖರೀದಿಸಿ ಸುರೇಶ್‌ನನ್ನು ಹತ್ಯೆ ಮಾಡಲು ಏಪ್ರಿಲ್ 20ರಂದು ಯಾದಗಿರಿ ನಗರದ ಲಾಡ್ಜ್ ಒಂದರಲ್ಲಿ ಹೊಂಚು ಹಾಕಿ ಕುಳಿತಿದ್ದ. ಇದನ್ನೂ ಓದಿ: ‘ಅಗ್ನಿಸಾಕ್ಷಿ’ ಸೀರಿಯಲ್ ನಟ ಸಂಪತ್ ಜಯರಾಮ್ ಆತ್ಮಹತ್ಯೆ
ಚುನಾವಣೆ ಹಿನ್ನೆಲೆ ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ವೇಳೆ ಯಾದಗಿರಿ ಗ್ರಾಮೀಣ ಠಾಣೆ ಪಿಎಸ್‌ಐ ದೇವೇಂದ್ರ ರೆಡ್ಡಿ ಹಾಗೂ ಸಿಬ್ಬಂದಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಬೆಂಗಳೂರಿನ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆತ ತೊದಲುತ್ತಿದ್ದುದನ್ನು ಗಮನಿಸಿದ ಪಿಎಸ್‌ಐ ಆತ ಉಳಿದುಕೊಂಡಿದ್ದ ಲಾಡ್ಜ್‌ಗೆ ತೆರಳಿ ತಪಾಸಣೆ ನಡೆಸಿದ್ದಾರೆ.
ಈ ವೇಳೆ ಆತನ ರೂಮ್‌ನಲ್ಲಿ ಕಂಟ್ರಿ ಪಿಸ್ತೂಲ್, 3 ಜೀವಂತ ಗುಂಡುಗಳು, ಬಟನ್ ಚಾಕು, ಪಂಚ್ ಪತ್ತೆಯಾಗಿವೆ. ಇದನ್ನು ವಶಪಡಿಸಿಕೊಂಡು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹತ್ಯೆಗೆ ಸುಪಾರಿ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ನಂತರ ಸುಪಾರಿ ನೀಡಿದ ನಾನ್ಯಾ ನಾಯಕ್‌ನನ್ನು ಹಾಗೂ ಹತ್ಯೆಗೆ ಸುಪಾರಿ ಪಡೆದವನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಇದನ್ನೂ ಓದಿ: 2 ಲಾರಿಗಳ ಮುಖಾಮುಖಿ ಡಿಕ್ಕಿ – ಓರ್ವ ಸಾವು, ಮೂವರಿಗೆ ಗಂಭೀರ ಗಾಯ
ಯಾದಗಿರಿ ವಿಭಾಗದ ಡಿವೈಎಸ್‌ಪಿ ಬಸವೇಶ್ವರ, ನಗರ ಠಾಣೆ ಸಿಪಿಐ ಸುನೀಲ್ ಮೂಲಿಮನಿ, ಪಿಎಸ್‌ಐ ದೇವಿಂದ್ರ ರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡದಕ್ಕೆ ಯಾದಗಿರಿ ಎಸ್‌ಪಿ ಡಾ. ಸಿಬಿ ವೇದಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.
ಚಿಕ್ಕಬಳ್ಳಾಪುರ: ಚುನಾವಣೆಯಲ್ಲಿ (Election) ವೋಟ್ ಹಾಕಬೇಕು ಎಂದರೆ ಅದಕ್ಕೆ ವೋಟರ್ ಐಡಿ (Voter ID) ಕಡ್ಡಾಯವಾಗಿದೆ. ಹಾಗಾಗಿ ಮನೆಯಲ್ಲಿದ್ದ ವೋಟರ್ ಐಡಿ ಕಾರ್ಡ್ ತೆಗೆದುಕೊಳ್ಳಲೆಂದು 9 ತಿಂಗಳ ನಂತರ ಮನೆಗೆ ಬಂದ ಪತಿಯನ್ನು ಪತ್ನಿ ಕೂಡಿ ಹಾಕಿ ಬೀಗ ಹಾಕಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿ (Bagepalli) ತಾಲೂಕಿನ ಏಟಿಗಡ್ಡಪಲ್ಲಿಯಲ್ಲಿ ನಡೆದಿದೆ.
ಬಾಗೇಪಲ್ಲಿ ತಾಲೂಕಿನ ಏಟಿಗಡ್ಡಪಲ್ಲಿಯ ಗಂಗರಾಜೇಶ್ವರಿ ಎಂಬಾಕೆ ತನ್ನ ಪತಿ ವೈ.ಎಸ್. ಮಹೇಶ್ ಎಂಬಾತನನ್ನು ಕೂಡಿ ಹಾಕಿದ್ದಾಳೆ. ಮಹೇಶ್ ಕೆ.ಎಸ್.ಆರ್.ಟಿ.ಸಿಯಲ್ಲಿ ಕಂಡಕ್ಟರ್ ಕಂ ಡ್ರೈವರ್ (Driver) ಆಗಿ ಕೆಲಸ ಮಾಡುತ್ತಿದ್ದ. ಇವರಿಬ್ಬರಿಗೂ ಮದುವೆಯಾಗಿ 20 ವರ್ಷಗಳು ಕಳೆದಿವೆ. ಆದರೆ ಇಬ್ಬರು ಮಧ್ಯೆ ಅನುಮಾನ ಸಂಶಯ ಮೂಡಿದ್ದು, ಒಬ್ಬರಿಗೊಬ್ಬರು ಅಕ್ರಮ ಸಂಬಂಧದ ಬಗ್ಗೆ ಆರೋಪ ಪ್ರತ್ಯಾರೋಪ ಮಾಡಿಕೊಂಡು ಕೊನೆಗೆ ಸುಖ, ಸಂಸಾರ ಹಾಳು ಮಾಡಿಕೊಂಡಿದ್ದಾರೆ.
ಬಾಗೇಪಲ್ಲಿ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಮಹೇಶ್ ಕೆಲಸ ಮಾಡುತ್ತಿದ್ದು, ಕೆಲವು ತಿಂಗಳುಗಳಿಂದ ಪತ್ನಿ ಇರುವ ಮನೆಗೆ ಹೋಗದೆ ಮಕ್ಕಳ ಮುಖವನ್ನು ನೋಡದೆ, ಚಿಕ್ಕಬಳ್ಳಾಪುರದಲ್ಲಿ ಬೇರೊಂದು ಮನೆ ಮಾಡಿಕೊಂಡು ಇನ್ನೊಬ್ಬಳ ಜೊತೆ ಸಂಸಾರ ಮಾಡ್ತಿದ್ದಾನಂತೆ. ಆದರೆ ಗಂಗರಾಜೇಶ್ವರಿ 9 ತಿಂಗಳ ನಂತರ ಮನೆಗೆ ಬಂದ ಗಂಡನನ್ನು ರೂಮ್‌ನಲ್ಲಿ ಕೂಡಿ ಹಾಕಿ ಜೋರು ಗಲಾಟೆ ಮಾಡಿದ್ದಾಳೆ. ನಂತರ ಪೊಲೀಸರು ಆಗಮಿಸಿ ಮಹೇಶ್‌ನನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸವದಿ ರಾಜೀನಾಮೆ
ಪತ್ನಿ ಆರೋಪಕ್ಕೆ ತಿರುಗೇಟು ನೀಡಿರುವ ಮಹೇಶ್, ನನ್ನ ಪತ್ನಿಯೇ ಸರಿ ಇಲ್ಲ, ಈ ಹಿನ್ನೆಲೆಯಲ್ಲಿ ತನ್ನ ನೆಮ್ಮದಿ ಹಾಳು ಆಗಿದೆ. ಅಷ್ಟೇ ಅಲ್ಲದೇ ವಿಚ್ಛೇದನಕ್ಕಾಗಿ ನ್ಯಾಯಾಲಯ ಮೊರೆ ಹೋಗಿದ್ದಾನೆ. ಜೊತೆಗೆ ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ:ರಾಜಕೀಯ ನಿವೃತ್ತಿ ಹೇಳಿಕೆ ಹಿಂಪಡೆದ ಶಾಸಕ ಎಸ್.ಅಂಗಾರ
ಚಿಕ್ಕಬಳ್ಳಾಪುರ: ಮದುವೆಯಾಗಿ 8 ತಿಂಗಳು ಕಳೆಯೋದ್ರೊಳಗೆ ಪತಿ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪು (Doddaballapur) ರದ ಶ್ರೀನಗರದಲ್ಲಿ ನಡೆದಿದೆ.
ಮೃತಳನ್ನು ಜೆನಿಲಾ ಜೋಬಿಯಾ ಎಂದು ಗುರುತಿಸಲಾಗಿದ್ದು, ಈಕೆಯನ್ನು ಪತಿ ಸ್ಯಾಮ್ ಕೊಲೆ ಮಾಡಿದ್ದಾನೆ. ಸ್ಯಾಮ್ ದೊಡ್ಡಬಳ್ಳಾಪುರದ ನಿವಾಸಿಯಾಗಿದ್ದು, ಜನಿಲಾ ಜೋಬಿಯಾ ಮೂಲತಃ ತಮಿಳುನಾಡಿನ ಕನ್ಯಾಕುಮಾರಿ (Kanyakumari) ಮೂಲದವಳು. ಇವರಿಬ್ಬರಿಗೂ ಕಳೆದ 8 ತಿಂಗಳ ಹಿಂದೆಯಷ್ಟೇ ಮನೆ ಮಂದಿಯೆಲ್ಲಾ ಸೇರಿ ಸಂಭ್ರಮದಿಂದ ಮದುವೆ ಮಾಡಿದರು. ಆದರೆ ಮದುವೆಯಾಗಿ ಕೇವಲ 8 ತಿಂಗಳು ಆಗುವುದರೊಳಗೆ ತಾಳಿ ಕಟ್ಟಿದ ಗಂಡನ ಕೈಯಿಂದಲೇ ಹೆಂಡತಿ ಸಾವನ್ನಪ್ಪಿದ್ದಾಳೆ.
ಸ್ಯಾಮ್ ಹಾಗೂ ಜೋಬಿಯಾ ನಡುವೆ ಮಧ್ಯರಾತ್ರಿ ರೂಂನಲ್ಲಿ ಜೋರು ಜಗಳವಾಗಿದ್ದು, ಜಗಳದ ವೇಳೆ ಸ್ಯಾಮ್ ಚಾಕುವಿನಿಂದ ಜೋಬಿಯಾಳಿಗೆ ಮನಸ್ಸೋ ಇಚ್ಚೆ ಇರಿದಿದ್ದಾನೆ. ಈ ವೇಳೆ ಮನೆಯಲ್ಲೇ ಇದ್ದ ಸ್ಯಾಮ್ ಅಪ್ಪ-ಅಮ್ಮ ಹಾಗೂ ಅಕ್ಕಪಕ್ಕದ ಮನೆಯವರು ಏನಾಗ್ತಿದೆ ಯಾಕೆ ಗಲಾಟೆ ಅಂತ ರೂಂ ಬಾಗಿಲು ಬಡಿದು ಒಳಗೆ ಹೋದಾಗ ಸ್ಯಾಮ್ ಮಾಡಿರೋ ಕೃತ್ಯ ಬೆಳಕಿಗೆ ಬಂದಿದೆ. ಸೊಸೆ ಜೋಬಿಯಾ ರಕ್ಷಣೆಗೆ ಮುಂದಾದ ತಂದೆ-ತಾಯಿಯೂ ಮೇಲೂ ಸ್ಯಾಮ್ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ನಂತರ ಸ್ಯಾಮ್ ಸೇರಿ ಎಲ್ಲರೂ ಜೋಬಿಯಾಳನ್ನ ಖಾಸಗಿ ಆಸ್ಪತ್ರೆಗೆ ಕೆರೆದುಕೊಂಡು ಹೋಗಿದ್ರೂ ಜೋಬಿಯಾ ಬದುಕುಳಿದಿಲ್ಲ. ಇದನ್ನೂ ಓದಿ: ಬಟಿಂಡಾ ಸೇನಾ ಠಾಣೆಯೊಳಗೆ ಗುಂಡಿನ ದಾಳಿ – ನಾಲ್ವರು ಸಾವು
ಸ್ಯಾಮ್ ಬೇರೋಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದು ಚಾಟಿಂಗ್ ಮಾಡ್ತಿದ್ದ ಎನ್ನಲಾಗಿದೆ. ಇಲ್ಲ ಹೆಂಡತಿಯೇ ಸ್ಯಾಮ್ ಗೆ ಮೋಸ ಮಾಡಿ ಬೇರೆಯವರ ಜೊತೆ ಚಾಟಿಂಗ್ ಮಾಡ್ತಿದ್ಲಾ ಎಂಬ ಅನುಮಾನವೂ ಮೂಡಿದೆ. ಈ ವಿಚಾರಗಳಿಗೆ ಗಲಾಟೆ ನಡೆದಿರಬಹುದು ಎನ್ನಲಾಗಿದ್ದು, ಇದೇ ಗಲಾಟೆ ಜೋರಾಗಿ ಸ್ಯಾಮ್ ಮೊದಲೇ ಪ್ಲಾನ್ ಮಾಡಿದಂತೆ ಹೆಂಡತಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಸ್ಯಾಮ್ ನನ್ನ ದೊಡ್ಡಬಳ್ಳಾಪುರ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಸ್ಯಾಮ್ ಮಾತ್ರ ಯಾಕೆ ಕೊಲೆ ಮಾಡಿದ ಅಂತ ಬಾಯಿ ಬಿಡ್ತಿಲ್ಲ. ಬದಲಾಗಿ ಅರೆ ಹುಚ್ಚನ ತರ ಪೊಲೀಸರ ದಿಕ್ಕು ತಪ್ಪಿಸೋ ಕೆಲಸ ಮಾಡ್ತಿದ್ದಾನೆ. ಜೆನಿಲಾ ಜೋಬಿಯಾ ಪೋಷಕರು ತಮಿಳುನಾಡಿನಿಂದ ಆಗಮಿಸುತ್ತಿದ್ದು, ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.