Tag: ಪತಿ

  • ಅಕ್ರಮ ಸಂಬಂಧ ಇಟ್ಟುಕೊಂಡು ಚಿತ್ರಹಿಂಸೆ ಕೊಟ್ಟ: ಪವಿತ್ರಾ ಬರೆದ ಡೆತ್‍ನೋಟ್‍ನಲ್ಲೇನಿದೆ?

    ಅಕ್ರಮ ಸಂಬಂಧ ಇಟ್ಟುಕೊಂಡು ಚಿತ್ರಹಿಂಸೆ ಕೊಟ್ಟ: ಪವಿತ್ರಾ ಬರೆದ ಡೆತ್‍ನೋಟ್‍ನಲ್ಲೇನಿದೆ?

    ಬೆಂಗಳೂರು: ಪತಿ ಹಾಗೂ ಆತನ ಗರ್ಲ್‍ಫ್ರೆಂಡ್ ವಿರುದ್ಧ ಆರೋಪ ಮಾಡಿ ಆತ್ಮಹತ್ಯೆ (Pavithra Suicide Case) ಪ್ರಕರಣ ಸಂಬಂಧ ಇದೀಗ ಪತ್ನಿ ಬರೆದಿರುವ ಡೆತ್‍ನೋಟ್ ಪೊಲೀಸರ ಕೈ ಸೇರಿದೆ.

    ಡೆತ್‍ನೋಟ್‍ನಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡು ಚಿತ್ರಹಿಂಸೆ ಕೊಟ್ಟ ಪತಿ ಚೇತನ್ ನನಗೆ ಚಿತ್ರಹಿಂಸೆ ಕೊಟ್ಟಿದ್ದಾನೆ. ಹೀಗಾಗಿ ಅವರಿಗೆ ಶಿಕ್ಷೆ ಆಗಬೇಕು ಎಂದು ಮೃತ ಪವಿತ್ರಾ ಆಗ್ರಹಿಸಿದ್ದಾರೆ.

    ಡೆತ್‍ನೋಟ್‍ನಲ್ಲೇನಿದೆ..?: ನನ್ನ ಸಾವಿಗೆ ಗಂಡನಾದ ಚೇತನ್ ಗೌಡ ಹಾಗೂ ಪೂಜಾ ಗೌಡ ಕಾರಣರಾಗಿರುತ್ತಾರೆ. 2019ರ ಮೇ 26ರಲ್ಲಿ ಚೇತನ್ ಗೌಡ ಜೊತೆ ಮದುವೆ ಆಗಿದ್ದೇನೆ. ಬಳಿಕ ಚೇತನ್ ಗೌಡ, ಪೂಜಾ ಗೌಡ ಎಂಬ ಯುವತಿಯ ಜೊತೆ ಅಕ್ರಮ ಸಂಬಂದ ಇಟ್ಟುಕೊಂಡಿರುತ್ತಾನೆ. ಅಕ್ರಮ ಸಂಬಂದ ಇಟ್ಟುಕೊಂಡ ಬಳಿಕ ನನಗೆ ಸಾಕಷ್ಟು ಕಿರುಳುಕುಳ ಕೊಟ್ಟಿದ್ದು ಸಾಕಷ್ಟು ಕಷ್ಟ ಅನುಭವಿಸಿದ್ದೇನೆ.

    ನನ್ನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಬೇಕು. ನನಗೆ ನ್ಯಾಯ ಸಿಗಬೇಕು. ಚೇತನ್ ಗೌಡನಿಗಾಗಿ ನನ್ನ ಅರ್ಧ ಜೀವನ ಮುಡುಪಾಗಿಟ್ಟಿದ್ದೆ. ಆದರೆ ಪೂಜಾ ಗೌಡ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ನನಗೆ ಚಿತ್ರಹಿಂಸೆ ಕೊಟ್ಟು ನನ್ನ ಸಾವಿಗೆ ಕಾರಣರಾಗಿದ್ದಾರೆ. ಹೀಗಾಗಿ ಪೂಜಾ ಗೌಡ ಹಾಗೂ ಚೇತನ್ ಗೌಡಗೆ ಶಿಕ್ಷೆಯಾಗಲೇ ಬೇಕು ಎಂದು ಪವಿತ್ರಾ ಡೆತ್‍ನೋಟ್‍ನಲ್ಲಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪಬ್‍ಜಿ ಗೆಳೆಯನ ಭೇಟಿಗೆ 4 ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್ ಮಹಿಳೆ!

    ಏನಿದು ಪ್ರಕರಣ..?: ಮೊದಲ ಪತಿಗೆ ವಿಚ್ಛೇದನ ನೀಡಿ ಚೇತನ್ ಗೌಡರನ್ನು ಪವಿತ್ರಾ ಎರಡನೇ ಮದುವೆಯಾಗಿದ್ದಳು. ಚೇತನ್ ಕೆಲಸ ಮಡುತ್ತಿದ್ದ ಖಾಸಗಿ ಕಂಪನಿಯೊಂದರಲ್ಲಿಯೇ ಪವಿತ್ರಾ ಕೂಡ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಳು. ಇತ್ತೀಚೆಗೆ ಮತ್ತೋರ್ವ ಯುವತಿಯ ವಿಚಾರವಾಗಿ ಪತಿ-ಪತ್ನಿ ಮಧ್ಯೆ ಜಗಳವಾಗುತ್ತಿತ್ತು. ಈ ಬಗ್ಗೆ ಪವಿತ್ರಾ ತನ್ನ ತಾಯಿ ಪದ್ಮಮ್ಮ ಬಳಿ ತಿಳಿಸಿದ್ದಳು. ಬಳಿಕ ಮನನೊಂದು ವಾಟ್ಸಾಪ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾಳೆ. ಮಗಳ ವಾಟ್ಸಾಪ್ ಸ್ಟೇಟಸ್ ನಲ್ಲಿ ಡೆತ್‍ನೋಟ್ ನೋಡಿ ತಾಯಿ, ಮಗಳ ಮನೆ ಬಳಿ ಬಂದಾಗ ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ.

    ಮೃತಳ ತಾಯಿ ಪದ್ಮಮ್ಮರ ದೂರಿನನ್ವಯ ಐಪಿಸಿ 306 ಆತ್ಮಹತ್ಯೆ ಪ್ರಚೋದನೆ ಅಡಿ ದೂರು ದಾಖಲಾಗಿದೆ. ಸದ್ಯ ಕೆಂಗೇರಿ ಠಾಣೆಯಲ್ಲಿ (Kengeri Police Station) ಚೇತನ್ ಗೌಡ ಹಾಗೂ ಮತ್ತೋರ್ವ ಯುವತಿ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತಿ ಅನೈತಿಕ ಸಂಬಂಧಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ

    ಪತಿ ಅನೈತಿಕ ಸಂಬಂಧಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಂದು ಪತ್ನಿಯ ಶವವನ್ನು ನೇಣಿಗೆ ಹಾಕಿ ಆತ್ಮಹತ್ಯೆಯೆಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದ!

    ಕೊಂದು ಪತ್ನಿಯ ಶವವನ್ನು ನೇಣಿಗೆ ಹಾಕಿ ಆತ್ಮಹತ್ಯೆಯೆಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದ!

    ಹಾಸನ: ಪತಿ ಮಹಾಶಯನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ಬಳಿಕ ಶವವನ್ನು ನೇಣಿಗೆ ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

    ಮೃತಳನ್ನು ಹೇಮಾವತಿ (28) ಎಂದು ಗುರುತಿಸಲಾಗಿದ್ದು, ಈಕೆಯನ್ನು ಪತಿ ಗುರುರಾಜ್ ಹತ್ಯೆ ಮಾಡಿದ್ದಾನೆ. ಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿ ಗುರುರಾಜ್ ಹತ್ತು ವರ್ಷಗಳ ಹಿಂದೆ ಚಿಕ್ಕಮಗಳೂರು ಮೂಲದ ಹೇಮಾವತಿ (28) ರನ್ನ ಮದುವೆಯಾಗಿದ್ದ.

    ಮದುವೆಯಾದ ವರ್ಷದಿಂದಲೂ ವರದಕ್ಷಿಣೆ ಹೆಸರಿನಲ್ಲಿ ಹೇಮಾವತಿಗೆ ಗುರುರಾಜ್ ಕಿರುಕುಳ ನೀಡುತ್ತಾ ಬಂದಿದ್ದಾನೆ. ಇದೀಗ ವಿನಾಕಾರಣ ಪತ್ನಿ ಮೇಲೆ ಅನುಮಾನದಿಂದ ಜಗಳ ಮಾಡಿ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಶೂಟೌಟ್‍ನಲ್ಲಿ ಗಾಯಗೊಂಡಿರುವ ಭೀಮ್ ಆರ್ಮಿ ಮುಖ್ಯಸ್ಥನಿಗೆ ಜೀವ ಬೆದರಿಕೆ – ಆರೋಪಿ ಅರೆಸ್ಟ್

    ಶುಕ್ರವಾರ ತನ್ನ ಇಬ್ಬರು ಮಕ್ಕಳನ್ನು ಸಂಬಂಧಿಕರ ಮನೆಗೆ ಕಳುಹಿಸಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೇಮಾವತಿಯನ್ನು ಗುರುರಾಜ್ ಹತ್ಯೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ನೇತು ಹಾಕಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಹತ್ಯೆ ಪ್ರಕರಣ ಬಯಲಾಗಿದೆ.

    ಕೊಲೆ ಕೇಸ್ ದಾಖಲಿಸಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ನೇಹಿತರ ಜೊತೆ ಸೇರಿ ಪತ್ನಿಯನ್ನೇ ಎಳೆದಾಡಿ ಅತ್ಯಾಚಾರಕ್ಕೆ ಯತ್ನಿಸಿದ ಭೂಪ!

    ಸ್ನೇಹಿತರ ಜೊತೆ ಸೇರಿ ಪತ್ನಿಯನ್ನೇ ಎಳೆದಾಡಿ ಅತ್ಯಾಚಾರಕ್ಕೆ ಯತ್ನಿಸಿದ ಭೂಪ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತರ ಜೊತೆ ಸೇರಿ ಪತ್ನಿಯನ್ನೇ ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ನಡೆದಿದೆ.

    ಈ ಘಟನೆ ಬೆಂಗಳೂರಿನ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡ್ರಗ್ ಸೇವಿಸಿರುವ ಪತಿ ಹಾಗೂ ಸ್ನೇಹಿತರು ಆತನ ಕಣ್ಮುಂದೆಯೇ ಎಳೆದಾಡಿ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಅಲ್ಲದೇ ಅತ್ಯಾಚಾರಕ್ಕೂ ಯತ್ನಿಸಿದ್ದಾರೆ ಎಂದು ಆಂಧ್ರದ ಕಾಕಿನಾಡ ಮೂಲದ ಮಹಿಳೆಯು ತನ್ನ ಪತಿ ವಿರುದ್ಧ 2022ರ ಅಕ್ಟೋಬರ್ 13 ರಂದು ಸುಬ್ರಮಣ್ಯಪುರ ಠಾಣೆಯಲ್ಲಿ (Subramanyapura Police Station) ಪ್ರಕರಣ ದಾಖಲಿಸಿದ್ದಾರೆ.

    ಮಹಿಳೆಯ ಆರೋಪವೇನು..?: ಮಹಿಳೆಯು ಕಾಕಿನಾಡ ಮೂಲದ ಅಖಿಲೇಷ್ ಧರ್ಮರಾಜ್ ಎಂಬಾತನನ್ನು ಪ್ರೀತಿಸಿ 2019ರಲ್ಲಿ ಮದುವೆಯಾಗಿದ್ದರು. ಬಳಿಕ ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ದಂಪತಿ ವಾಸವಿದ್ದರು. ಆದರೆ ಪತಿ ಅಖಿಲೇಶ್ ಮನೆಗೆ ಗಾಂಜಾ ತಂದು ಸೇವನೆ ಮಾಡುತ್ತಿದ್ದನು. ಈ ವೇಳೆ ಮತ್ತಿನಲ್ಲಿ ನಿತ್ಯ ಕಿರುಕುಳ ನೀಡುತ್ತಿದ್ದ. ಇದನ್ನೂ ಓದಿ: ರಾತ್ರಿ ಪಾರ್ಕ್‍ನಲ್ಲಿ ಗೆಳೆಯನ ಜೊತೆ ಕುಳಿತಿದ್ದ ಹುಡುಗಿ ಮೇಲೆ ಗ್ಯಾಂಗ್‍ರೇಪ್!

    ಕೊನೆಗೆ ಸ್ನೇಹಿತರ ಮನೆಗೆ ಕರೆತಂದು ಗಾಂಜಾ ಪಾರ್ಟಿ ಮಾಡ್ತಿದ್ದ. ಈ ವೇಳೆ ಆತನ ಸ್ನೇಹಿತರ ಜೊತೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಗ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದು, ವಾಪಸ್ ಮನೆಗೆ ಬರುವಂತೆ ಕಿರುಕುಳ ನೀಡಿದ್ದಾರೆ. ಅಲ್ಲದೆ ಈ ವಿಷಯ ಹೊರಗೆ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

    ಸದ್ಯ ಕೇಸ್ ವಾಪಸ್ ಪಡೆಯಲು ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆ ಠಾಣೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ. ನೊಂದು ಬಂದ ಮಹಿಳೆ ದೂರು ಕೊಟ್ಟರೂ ಆರೋಪಿಗಳನ್ನು ಪೊಲೀಸರು ಬಂಧಿಸಿರಲಿಲ್ಲ. ಸದ್ಯ ಆರೋಪಿಯ ಬಂಧಿಸಿ ಪೊಲೀಸರು ಕರೆ ತಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Shakthi Scheme Effect- ಟ್ರಿಪ್‍ಗೆ ಹೋದ ಪತ್ನಿ ಮನೆಗೆ ಬಂದಿಲ್ಲವೆಂದು ಬಸ್‌ ಚಕ್ರದಡಿ ತಲೆಯಿಟ್ಟ ಪತಿ!

    Shakthi Scheme Effect- ಟ್ರಿಪ್‍ಗೆ ಹೋದ ಪತ್ನಿ ಮನೆಗೆ ಬಂದಿಲ್ಲವೆಂದು ಬಸ್‌ ಚಕ್ರದಡಿ ತಲೆಯಿಟ್ಟ ಪತಿ!

    ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ (Shakthi Scheme) ಜಾರಿಗೆ ಬಂದಾಗಿನಿಂದ ಒಂದಲ್ಲ ಒಂದು ಅವಾಂತರಗಳು ಬಯಲಾಗ್ತಾನೇ ಇವೆ. ಇದೀಗ ಕುಡುಕ ಪತಿಯೊಬ್ಬ ಟ್ರಿಪ್‍ಗೆ ಹೋದ ತನ್ನ ಪತ್ನಿ (Wife) ಬಂದಿಲ್ಲವೆಂದು ಅವಾಂತರ ಸೃಷ್ಟಿಸಿದ್ದಾನೆ.

    ಹೊಸಕೋಟೆಯ ಬಸ್ ನಿಲ್ದಾಣದಲ್ಲಿ ಪತ್ನಿ ವಿರುದ್ಧ ಸಿಟ್ಟಿಗೆದ್ದ ಪತಿ ಬಸ್ ಟೈಯರ್‌ಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪರಿಣಾಮ ಹೊಸಕೋಟೆ (Hosakote) ಬಸ್ ನಿಲ್ದಾಣದಲ್ಲಿ ಅರ್ಧಗಂಟೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಕೆಲಕಾಲ ಪರದಾಟ ಅನುಭವಿಸಿದರು.

    ನನ್ನ ಹೆಂಡತಿ ಟ್ರಿಪ್ ಗೆ ಹೋದವಳು ಇನ್ನೂ ವಾಪಸ್ ಬಂದಿಲ್ಲ. ಸಿದ್ದರಾಮಯ್ಯ (Siddaramaiah) ಸರಿಯಿಲ್ಲ, ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ (Free Bus Ticket For Women) ರದ್ದುಗೊಳಿಸಿ. ಸರ್ಕಾರ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣವನ್ನು ತೆಗೆದು ವ್ಯಕ್ತಿ ಹಾಕಬೇಕೆಂದು ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಸ್ತ್ರೀ ಶಕ್ತಿ ಎಫೆಕ್ಟ್ – ಒಂದೇ ತಿಂಗಳಲ್ಲಿ ಹುಲಿಗೆಮ್ಮನ ಹುಂಡಿಯಲ್ಲಿ 1 ಕೋಟಿ ರೂ. ಕಾಣಿಕೆ ಸಂಗ್ರಹ

    ಕಂಠಪೂರ್ತಿ ಕುಡಿದಿರುವ ವ್ಯಕ್ತಿ ತೂರಾಡಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾನೆ. ಅಲ್ಲದೆ ಬಸ್ ಟೈಯರ್‍ಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ನೆರೆದ ಜನ ಆತನನ್ನು ರಕ್ಷಣೆ ಮಾಡಿದ್ದಾರೆ. ನಂತರ ಹೊಸಕೋಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಷ್ಟಪಟ್ಟು ದುಡಿದು ಸರ್ಕಾರಿ ಹುದ್ದೆ ಗಿಟ್ಟಿಸಿಕೊಟ್ಟ ಪತಿಯನ್ನೇ ಜೈಲಿಗೆ ಕಳುಹಿಸಿದ್ಳು!

    ಕಷ್ಟಪಟ್ಟು ದುಡಿದು ಸರ್ಕಾರಿ ಹುದ್ದೆ ಗಿಟ್ಟಿಸಿಕೊಟ್ಟ ಪತಿಯನ್ನೇ ಜೈಲಿಗೆ ಕಳುಹಿಸಿದ್ಳು!

    ಲಕ್ನೋ: ಅತಿಯಾದರೆ ಅಮೃತವೂ ವಿಷ ಅಂತಾರಲ್ವಾ ಹಂಗಾಯ್ತು ಇಲ್ಲೊಂದು ಕಥೆ. ತನ್ನ ಪತ್ನಿಯನ್ನು ಬೆಟ್ಟದಷ್ಟು ಪ್ರೀತಿಸುತ್ತಿದ್ದ ಪತಿ ಆಕೆಯ ಕನಸುಗಳನ್ನು ನನಸು ಮಾಡುವಲ್ಲಿ ಯಶಸ್ವಿಯೂ ಆದ. ಆದರೆ ಆಮೇಲೆ ಆಗಿದ್ದೆಲ್ಲಾ ದುರಂತವೇ ಸರಿ.

    ಹೌದು. ತಾನು ಓದದಿದ್ದರೂ ತನ್ನ ಪತ್ನಿಯನ್ನು ಕಷ್ಟಪಟ್ಟು ದುಡಿದು ಓದಿಸಿದ. ಪರಿಣಾಮ ಆಕೆಗೆ ಒಳ್ಳೆಯ ಕೆಲಸವೂ ದಕ್ಕಿತ್ತು. ಆದರೆ ಉಂಡ ಮನೆಗೆ ದ್ರೋಹ ಬಗೆದಂತೆ ಕೆಲಸ ಸಿಕ್ಕಿದ ಬಳಿಕ ಆಕೆಯೇ ಬದಲಾದಳು. ತನ್ನನ್ನು ಕಷ್ಟಪಟ್ಟು ಓದಿಸಿದ ಗಂಡನನ್ನೇ ಜೈಲಿಗೆ ಕಳುಹಿಸಿದಳು.

    ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನ ಅಲೋಕ್ ಮೌರ್ಯ (Alok Mourya) ಎಂಬಾತ ತಾನು ದುಡಿದ ಹಣವನ್ನೆಲ್ಲಾ ಪತ್ನಿ ಜ್ಯೋತಿ (Jyoti) ಯ ವಿದ್ಯಾಭ್ಯಾಸಕ್ಕೆ ಸುರಿದ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಬಂದ ಹಣವನ್ನು ಪತ್ನಿಯ ವಿದ್ಯಾಭ್ಯಾಸಕ್ಕೆ ಅಲೋಕ್ ಬಳಸಿದ್ದಾರೆ. ಅಲ್ಲದೆ ಸಾಲ ಪಡೆದು ಪ್ರಯಾಗ್‍ರಾಜ್‍ನಲ್ಲಿರುವ ಉತ್ತಮ ಕೋಚಿಂಗ್ ಸೆಂಟರ್ ಗೆ ಸೇರಿಸಿದ್ದಾರೆ. ಅಂತೆಯೇ ಜ್ಯೋತಿ ಚೆನ್ನಾಗಿ ಓದಿ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ (Sub-Divisional Magistrate) ಹುದ್ದೆಯನ್ನು ಅಲಂಕರಿಸಿದಳು.

    ಕೆಲಸ ಸಿಕ್ಕ ನಂತರ ಆಕೆಯ ವರ್ತನೆಯೇ ಬದಲಾಯಿತು. ಈ ವೇಳೆ ತನ್ನ ಜೊತೆ ಕೆಲಸ ಮಾಡುತ್ತಿದ್ದ ಅಧಿಕಾರಿಯೊಬ್ಬನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಇದನ್ನು ತಿಳಿದ ಅಲೋಕ್ ಪತ್ನಿಯನ್ನು ನಿಂದಿಸಿದ್ದಾನೆ. ಇದನ್ನೇ ನೆಪ ಮಾಡಿಕೊಂಡ ಜ್ಯೋತಿ ತನ್ನ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಳು. ಇತ್ತೀಚೆಗೆ ಅಲೋಕ್ ಜಾಮೀನಿನ ಮೇಲೆ ಹೊರಬಂದಿದ್ದರು. ಇದನ್ನೂ ಓದಿ: ಒಡಿಶಾದಲ್ಲಿ ಮತ್ತೊಂದು ಭೀಕರ ಅಪಘಾತ – ಮದುವೆ ಮುಗಿಸಿ ಮನೆಗೆ ತೆರಳುತ್ತಿದ್ದ 12 ಮಂದಿ ಮಸಣಕ್ಕೆ

    ಅಲೋಕ್ ಜೈಲಿಗೆ ಹೋದಾಗ ಇದ್ದ ತನ್ನ ಕೆಲಸವನ್ನು ಕೂಡ ಕಳೆದುಕೊಂಡರು. ಇದಲ್ಲದೆ ಜ್ಯೋತಿಯು ತನಗೆ ವಿಚ್ಛೇದನ ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡಲು ಶುರುಮಾಡಿದಳು. ಈ ಸಂಬಂಧ ಜ್ಯೋತಿ ವಿರುದ್ಧ ದೂರು ನೀಡಿದರೂ ಯಾರೂ ಕ್ಯಾರೇ ಎನ್ನುತ್ತಿಲ್ಲ ಎಂದು ಅಲೋಕ್ ಮಾಧ್ಯಮಗಳ ಮುಂದೆ ತನ್ನ ಅಳಲು ತೋಡಿಕೊಂಡು ಕಣ್ಣೀರು ಹಾಕಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ರಸ್ತೆಯಲ್ಲೆಲ್ಲಾ ಪತ್ನಿಯನ್ನು ಅಟ್ಟಾಡಿಸಿ ಮಚ್ಚಿನಿಂದ ಹಲ್ಲೆಗೈದ ಪಾಪಿ ಪತಿ!

    ರಸ್ತೆಯಲ್ಲೆಲ್ಲಾ ಪತ್ನಿಯನ್ನು ಅಟ್ಟಾಡಿಸಿ ಮಚ್ಚಿನಿಂದ ಹಲ್ಲೆಗೈದ ಪಾಪಿ ಪತಿ!

    ಹಾಸನ: ಗಂಡ-ಹೆಂಡತಿ (Husband- Wife Fight Hassan) ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತೇ ಇದೆ. ಆದರೆ ಇಲ್ಲೊಂದು ದಂಪತಿಯ ಕಲಹ ಬೀದಿಗೆ ಬಂದಿದೆ. ಈ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ತಿರುಮಲಾಪುರದಲ್ಲಿ ನಡೆದಿದೆ.

    ಹೌದು. ಪತಿ ಶ್ರೀನಿವಾಸ್ ತನ್ನ ಪತ್ನಿ ಸವಿತಾಳನ್ನು ಸಾರ್ವಜನಿಕರ ಮುಂದೆಯೇ ರಸ್ತೆ ತುಂಬಾ ಅಟ್ಟಾಡಿಸಿ ಮನಬಂದಂತೆ ರಾಡ್, ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಪತ್ನಿ ಮೇಲೆ ಪತಿ ಅಮಾನುಷವಾಗಿ ಹಲ್ಲೆ ಮಾಡುವ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮತ್ತೆ ಹೊಂದಾಣಿಕೆ ರಾಜಕೀಯ ಬಾಂಬ್- ಬಿಜೆಪಿ ಸಮಾವೇಶಗಳಲ್ಲೇ ಗದ್ದಲ, ಆಕ್ರೋಶ ಸ್ಫೋಟ

    ಹಲ್ಲೆಗೈದಿದ್ದು ಯಾಕೆ..?: 18 ವರ್ಷಗಳ ಹಿಂದೆ ವಿವಾಹವಾಗಿದ್ದ ಶ್ರೀನಿವಾಸ್ ಹಾಗೂ ಸವಿತಾ ಕಳೆದ ಎರಡು ವರ್ಷಗಳಿಂದ ಒಂದೇ ಮನೆಯಲ್ಲಿ ವಿಭಾಗ ಮಾಡಿಕೊಂಡು ವಾಸ ಮಾಡುತ್ತಿದ್ದರು. ಪತಿಯಿಂದ ವಿಚ್ಛೇದನಕ್ಕಾಗಿ ಕಾನೂನು ಹೋರಾಟ ನಡೆಸುತ್ತಿರುವ ಸವಿತಾ ಆಸ್ತಿ ವಿಭಾಗಕ್ಕೂ ಪತಿ ಮೇಲೆ ಕೇಸ್ ಹಾಕಿದ್ದಳು. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಭೀಕರ ಅಪಘಾತ- ಇಬ್ಬರ ದಾರುಣ ಸಾವು

    ಶನಿವಾರ ಸಂಜೆ ಸೈಟ್ ಸೇಲ್ ಸಂಬಂಧ ಸವಿತಾ ಜೊತೆ ಶ್ರೀನಿವಾಸ್ ಜಗಳ ಮಾಡಿದ್ದಾನೆ. ಈ ವೇಳೆ ಎದುರು ಮಾತನಾಡಿದ ಪತ್ನಿ ಮೇಲೆ ಮಚ್ಚು ಹಾಗೂ ರಾಡ್‍ನಿಂದ ಹಲ್ಲೆ ಮಾಡಿದ್ದಾನೆ. ಪತಿಯ ಹಲ್ಲೆಯಿಂದ ತಪ್ಪಿಸಿಕೊಂಡು ಓಡಿದರೂ ಬಿಡದೆ ಮಚ್ಚಿನಿಂದ ಅಮಾನುಷವಾಗಿ ಹಲ್ಲೆಗೈದಿದ್ದಾನೆ. ಅಲ್ಲದೆ ಪತ್ನಿ ಸವಿತಾ ತಂಗಿ ಅನಿತಾ ಕಾರಿನ ಮೇಲೂ ದಾಳಿ ಮಾಡಿ ಗ್ಲಾಸ್ ಅನ್ನ ಪುಡಿ ಪುಡಿ ಮಾಡಿದ್ದಾನೆ.

    ಸದ್ಯ ಗಾಯಾಳು ಸವಿತಾಗೆ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಇತ್ತ ಆರೋಪಿಗೆ ಮಚ್ಚು ನೀಡಿದ ಶ್ರೀನಿವಾಸ್ ಸಂಬಂಧಿಯನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿ ಶ್ರೀನಿವಾಸ್ ಬಂಧನಕ್ಕೆ ಎಸ್‍ಪಿ ಹರಿರಾಂ ಶಂಕರ್ ಎರಡು ತಂಡ ರಚಿಸಿದ್ದಾರೆ. ಘಟನೆ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪತ್ನಿಯನ್ನು ಅಟ್ಟಾಡಿಸಿ ಪತಿ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧ ಹರಿರಾಂ ಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೋಗ್ಯ ಸ್ಥಿತಿ ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಆರೋಪಿ ಶ್ರೀನಿವಾಸ್ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಕೈ ಹಾಗೂ ಹಲವು ಭಾಗಗಳಿಗೆ ಗಾಯಗಳಾಗಿವೆ. ಗಾಯಾಳು ಔಟ್ ಆಫ್ ಡೇಂಜರ್ ಸ್ಥಿತಿಯಲ್ಲಿದ್ದಾರೆ. ಶೀಘ್ರ ಆರೋಪಿಯನ್ನು ಬಂಧಿಸುತ್ತೇವೆ. ಈಗಾಗಲೇ ಶ್ರೀನಿವಾಸ್‍ಗೆ ಮಚ್ಚು ನೀಡಿದ ಆತನ ಅಣ್ಣನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಆತ್ಮೀಯ ಗೆಳೆಯನ ಜೊತೆಗೆ ತನ್ನ ಪತ್ನಿಯ ರಾಸಲೀಲೆ ನೋಡಿದ ಪತಿ ಮಟಾಶ್

    ಆತ್ಮೀಯ ಗೆಳೆಯನ ಜೊತೆಗೆ ತನ್ನ ಪತ್ನಿಯ ರಾಸಲೀಲೆ ನೋಡಿದ ಪತಿ ಮಟಾಶ್

    ವಿಜಯಪುರ: ಆತ್ಮೀಯ ಗೆಳೆಯ ಮತ್ತು ತನ್ನ ಪತ್ನಿಯ ರಾಸಲೀಲೆಗೆ ಪತಿ ಬಲಿಯಾದ ಘಟನೆ ನಡೆದಿದೆ.

    ವಿಜಯಪುರ (Vijayapura) ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಟ್ಟರಕಿ ಗ್ರಾಮದಲ್ಲಿ ಘಟನೆ ನಡೆದಿದೆ. ಆತ್ಮೀಯ ಗೆಳಯ ಅಬ್ಬಾಸ್ ಅಲಿ ಮತ್ತು ಪತ್ನಿ ರಾಜ್ಮಾಳ ರಾಸಲೀಲೆಯನ್ನ ಕಣ್ಣಾರೆ ಕಂಡ ಪತಿ ಸೈಫನ್ ಹತ್ಯೆಗೀಡಾಗಿದ್ದಾನೆ. ಇದನ್ನೂ ಓದಿ: ಕಾಣೆಯಾದ ಕವಿತಾ ಶವವಾಗಿ ಪತ್ತೆ- ಗೆಳೆಯ ಸಲೀಂನಿಂದಲೇ ಹತ್ಯೆ

    ಕಳೆದ ತಿಂಗಳ ವಿಧಾನಸಭೆ ಮತದಾನದ ದಿನ ಮೇ 10 ರಂದು ಸೈಫನ್ ಮನೆಯಲ್ಲಿ ಫ್ಯಾನ್ ನ ಕರೆಂಟ್ ಶಾಕ್ ನಿಂದ ಸಾವಿಗೀಡಾದ ಬಗ್ಗೆ ತಿಳಿದು ಕುಟುಂಬಸ್ಥರು ಸಹಜ ಸಾವು ಎಂದು ಸೈಫನ್ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಆದರೆ ನಂತರದ ದಿನಗಳಲ್ಲಿ ಸೈಫನ್ ಸಾವಿನ ಬಗ್ಗೆ ಅನುಮಾನ ಮೂಡಿ ಸೈಫನ್ ಸಾವು ಸಹಜ ಸಾವಲ್ಲ. ಇದು ಒಂದು ಹತ್ಯೆ. ಇದಕ್ಕೆ ಅಬ್ಬಾಸ್ ಅಲಿ ಮತ್ತು ಪತ್ನಿ ರಾಜ್ಮಾನೇ ಕಾರಣ ಅಂತಾ ಆರೋಪಿಸಿ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಕಾರಣ ಇದೀಗ ತಹಶೀಲ್ದಾರ್ ನೇತೃತ್ವದಲ್ಲಿ ಸೈಫನ್ ದೇಹ ಮರು ಪರೀಕ್ಷೆಗೆ ಮಣ್ಣಿನಡಿಯಿಂದ ಸೈಫನ್ ದೇಹವನ್ನ ಹೊರತಗೆಯಲಾಗಿದೆ. ಸೈಫನ್ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ಪಾರದರ್ಶಕ ತನಿಖೆ ನಡೆಸಿದ್ದಲ್ಲಿ ಸತ್ಯ ಹೊರಬೀಳುತ್ತಾ ಅಂತಾ ಕುಟುಂಬಸ್ಥರು ಸೇರಿದಂತೆ ಗ್ರಾಮಸ್ಥರು ಕಾದು ಕುಳಿತಿದ್ದಾರೆ.

  • ಮಲಗಿದ್ದ ಪತಿಯ ಗುಪ್ತಾಂಗಕ್ಕೆ ಮಧ್ಯರಾತ್ರಿ ಕಾದ ಎಣ್ಣೆ ಎರಚಿ ಪತ್ನಿ ಎಸ್ಕೇಪ್!

    ಮಲಗಿದ್ದ ಪತಿಯ ಗುಪ್ತಾಂಗಕ್ಕೆ ಮಧ್ಯರಾತ್ರಿ ಕಾದ ಎಣ್ಣೆ ಎರಚಿ ಪತ್ನಿ ಎಸ್ಕೇಪ್!

    ಭೋಪಾಲ್: ಇತ್ತೀಚಿನ ದಿನಗಳಲ್ಲಿ ಪತಿ ಹಾಗೂ ಪತ್ನಿ ನಡುವಿನ ಜಗಳ ವಿಕೋಪಕ್ಕೆ ತಿರುಗುತ್ತಿದೆ. ಅಂತೆಯೇ ಇಲ್ಲೊಬ್ಬಳು ಪತ್ನಿ ತನ್ನ ಪತಿಯ ಗುಪ್ತಾಂಗಕ್ಕೆ ಬಿಸಿ ಬಿಸಿ ಎಣ್ಣೆ ಎರಚಿ ಗಾಯಗೊಳಿಸಿದ ಘಟನೆ ಮಧ್ಯಪ್ರದೇಶ (Madhyapradesh) ದ ಗ್ವಾಲಿಯರ್ ನಲ್ಲಿ ನಡೆದಿದೆ.

    ಘಟನೆ ಸಂಬಂಧ ಪತ್ನಿಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇತ್ತ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ನಡೆದಿದ್ದೇನು?: ಪತ್ನಿ ಯುವಕನೊಬ್ಬನ ಜೊತೆ ಅಕ್ರಮ ಸಂಬಂಧ (Illicit Relationship)  ಇಟ್ಟುಕೊಂಡಿದ್ದಳು. ಆಗಾಗ ಪ್ರಿಯತಮನಿಗೆ ಕಾಲ್, ಮೆಸೇಜ್ ಮಾಡಿಕೊಂಡು ಇದ್ದಳು. ಹೀಗೆ ಒಂದು ದಿನ ಆಕೆ ಫೋನ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ತನ್ನ ಪತಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ.

    ಈ ಸಂಬಂಧ ಪತಿ ಹಾಗೂ ಪತ್ನಿ ನಡುವೆ ಜಗಳ ನಡೆದಿದೆ. ಅಲ್ಲದೆ ಪತಿಯು ತನ್ನ ಪತ್ನಿ ಅಕ್ರಮ ಸಂಬಂಧವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪತ್ನಿ, ಪತಿ ನಿದ್ದೆಗೆ ಜಾರಿದ ಬಳಿಕ ಮಧ್ಯರಾತ್ರಿ ಎಣ್ಣೆಯನ್ನು ಬಿಸಿ (Boiled Oil) ಮಾಡಿ ಪತಿಯ ಗುಪ್ತಾಂಗಕ್ಕೆ ಎರಚಿದ್ದಾಳೆ. ನಂತರ ಸ್ಥಳದಿಂದ ಕಾಲ್ಕಿತ್ತಿದ್ದಾಳೆ.

    ಇತ್ತ ಗಾಯಗೊಂಡ ಸುನಿಲ್ ದಾಕಡ್ (32) ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಬೃಹತ್‌ ಗಾತ್ರದ ಕಡಿದ ಮರ ತಬ್ಬಿಕೊಂಡು ಸೆಕ್ಸ್‌ – ವಿಕೃತಕಾಮಿ ಅರೆಸ್ಟ್‌

     

  • ಪತ್ನಿಯನ್ನು ಅಪ್ಪಿಕೊಂಡು ಹೊಡೆದ ಗುಂಡು ತನಗೂ ಮುಳುವಾಯ್ತು- ದಂಪತಿ ಸಾವು

    ಪತ್ನಿಯನ್ನು ಅಪ್ಪಿಕೊಂಡು ಹೊಡೆದ ಗುಂಡು ತನಗೂ ಮುಳುವಾಯ್ತು- ದಂಪತಿ ಸಾವು

    ಲಕ್ನೋ: ಪತ್ನಿಯ (Wife) ಮೇಲೆ ಹಾರಿಸಿದ ಗುಂಡು ತನಗೂ ತಗುಲಿ ದಂಪತಿ (Couple) ಸಾವನ್ನಪ್ಪಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

    ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ (Moradabad) ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತಬ್ಬಿಕೊಂಡು ಗುಂಡು ಹಾರಿಸಿದ್ದ. ಅದೇ ಗುಂಡು ತನಗೂ ತಗುಲಿ ಇಬ್ಬರೂ ಸಾವನ್ನಪ್ಪಿದ್ದಾರೆ.

    ಅನೇಕ್ ಪಾಲ್ (40) ಹಾಗೂ ಆತನ ಪತ್ನಿ ಸುಮನ್ ಪಾಲ್ (38) ಇಬ್ಬರೂ ಮೊಬೈಲ್ ಫೋನ್ ಕಳೆದು ಹೋಗಿದ್ದಕ್ಕಾಗಿ ಮಂಗಳವಾರ ಜಗಳವಾಡಿದ್ದರು. ಗಲಾಟೆ ತಿಳಿಯಾದ ಬಳಿಕ ಅನೇಕ್ ಪಾಲ್ ರಾತ್ರಿ ಪ್ರಾರ್ಥನೆ ಮುಗಿಸಿ ತನ್ನ ಪತ್ನಿಯ ಬಳಿಗೆ ಹೋಗಿದ್ದಾನೆ. ಏಕಾಏಕಿ ಪತ್ನಿಯನ್ನು ಅಪ್ಪಿಕೊಂಡು ಆಕೆಯ ಬೆನ್ನಿಗೆ ಗುಂಡು ಹಾರಿಸಿದ್ದಾನೆ. ಆದರೆ ಆತ ಪತ್ನಿಯನ್ನು ಅಪ್ಪಿಕೊಂಡಿದ್ದ ಕಾರಣ ಅದೇ ಗುಂಡು ಅನೇಕ್ ಪಾಲ್‌ನ ಎದೆಗೂ ತಗುಲಿದೆ. ಇದನ್ನೂ ಓದಿ: Biparjoy Cyclone ಅಬ್ಬರ ನಡುವೆ ಹೆಣ್ಣುಮಗುವಿಗೆ ‘ಬಿಪರ್‌ಜಾಯ್‌’ ಅಂತ ಹೆಸರಿಟ್ಟ ದಂಪತಿ

    ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾರೂ ಇಬ್ಬರೂ ಸಾವನ್ನಪ್ಪಿದ್ದಾರೆ. ಅನೇಕ್ ಪಾಲ್ ದೇಶೀಯ ನಿರ್ಮಿತ ಬಂದೂಕು ಬಳಸಿದ್ದು, ಅದನ್ನು ಆತ ಹೇಗೆ ಸಂಗ್ರಹಿಸಿದ್ದ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ದಂಪತಿಗೆ ಒಂದು ಹೆಣ್ಣು ಹಾಗೂ ಮೂವರು ಗಂಡು ಮಕ್ಕಳಿದ್ದಾರೆ. ಇದೀಗ ಹೆಚ್ಚಿನ ತನಿಖೆಗೆ ದಂಪತಿಯ ಕುಂಟುಂಬದವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇದನ್ನೂ ಓದಿ: ನಡುರಸ್ತೆಯಲ್ಲೇ ಯುವತಿ ಹತ್ಯೆಗೈದು ಕುತ್ತಿಗೆಯಲ್ಲಿ ಚಾಕು ಇಟ್ಟು ಸ್ಕೂಟಿ ಕೊಂಡೊಯ್ದರು!