– ನಂಗೆ 19 ಮಹಿಳೆಯರ ಜೊತೆ ಅಕ್ರಮ ಸಂಬಂಧವಿದೆ, ನೀನು 2ನೇ ಹೆಂಡತಿ ಎಂದು ಕಿರುಕುಳ
ಬೆಂಗಳೂರು: ಬೆಡ್‌ರೂಂನಲ್ಲಿನ ಖಾಸಗಿ ಕ್ಷಣಗಳನ್ನು ಸೀಕ್ರೆಟ್ ಕ್ಯಾಮರಾದಲ್ಲಿ ಸೆರೆ ಹಿಡಿದ ಪತಿ, ತನ್ನ ವಿದೇಶಿ ಸ್ನೇಹಿತರೊಂದಿಗೆ ಮಲಗುವಂತೆ ಪತ್ನಿಯನ್ನು ಬ್ಲ್ಯಾಕ್‌ಮೇಲ್ ಮಾಡ್ತಿದ್ದ ಘಟನೆ ಬೆಂಗಳೂರಿನ (Bengaluru) ಪುಟ್ಟೇನಹಳ್ಳಿಯಲ್ಲಿ ನಡೆದಿದೆ.
ಕಾಮುಕ ಪತಿ ಸೈಯದ್ ಇನಾಮ್ ವಿರುದ್ಧ ಪತ್ನಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮನೆಯ ಬೆಡ್‌ರೂಂನಲ್ಲಿ ಸೀಕ್ರೆಟ್ ಕ್ಯಾಮರಾ ಫಿಕ್ಸ್ ಮಾಡಿ, ನನ್ನ ಜೊತೆಗಿನ ಲೈಂಗಿಕ ಕ್ರಿಯೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ. ಖಾಸಗಿ ವಿಡಿಯೋಗಳನ್ನಿಟ್ಟುಕೊಂಡು ವಿದೇಶಿ ಸ್ನೇಹಿತರ ಜೊತೆ ಮಲಗುವಂತೆ ಒತ್ತಾಯಿಸಿದ್ದಾನೆ. ಅಲ್ಲದೇ ಈ ವಿಡಿಯೋಗಳನ್ನು ಸ್ನೇಹಿತರಿಗೆ ಶೇರ್ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: 5.20 ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಕೊಲೆ – ಅಪಘಾತವೆಂದು ಬಿಂಬಿಸಲು ಯತ್ನಿಸಿ ಸಿಕ್ಕಿಬಿದ್ದ ಗ್ಯಾಂಗ್
ಈಗಾಗಲೇ ನನಗೆ ಮತ್ತೊಂದು ಮದುವೆಯಾಗಿದೆ. ಇದು ಎರಡನೇ ಮದುವೆ. ಅಲ್ಲದೇ ನನಗೆ 19 ಹೆಂಗಸರ ಜೊತೆ ಸಂಬಂಧವಿದೆ ಎಂದು ಕಿರುಕುಳ ಕೊಡುತ್ತಿದ್ದಾನೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರು: ಫಸ್ಟ್‌ನೈಟ್‌ನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದಕ್ಕೆ ಪತ್ನಿ ಹಾಗೂ ಕುಟುಂಬದವರು 2 ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆಂದು ಆರೋಪಿಸಿ ಗಂಡ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ನೊಂದ ಪತಿ ಪ್ರವೀಣ್ ಎಂಬಾತ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪತ್ನಿ ಹಾಗೂ ಪತ್ನಿ ಸಂಬಂಧಿಕರ ವಿರುದ್ಧ ದೂರು ನೀಡಿದ್ದಾರೆ. ದೂರಿನಲ್ಲಿ ಜೀವನಾಂಶಕ್ಕೆ ಪತ್ನಿ ಬರೋಬ್ಬರಿ ಎರಡು ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಡಿಕೇರಿ | ನೇಣು ಬಿಗಿದು 20ರ ಯುವತಿ ಆತ್ಮಹತ್ಯೆ
ಪ್ರವೀಣ್ ಕಳೆದ ಮೇ ತಿಂಗಳಲ್ಲಿ ಚಿಕ್ಕಮಗಳೂರು ಮೂಲದ ಯುವತಿಯನ್ನ ವಿವಾಹವಾಗಿದ್ದ. ಮದುವೆಯಾಗಿ ಫಸ್ಟ್‌ನೈಟ್ ವೇಳೆ ಪತ್ನಿಯನ್ನು ಮುಟ್ಟಲು ಗಂಡ ಪ್ರವೀಣ್ ಹಿಂದೇಟು ಹಾಕಿದ್ದಾರೆಂದು ಆರೋಪ ಮಾಡಲಾಗಿದೆ. ಮದುವೆ ಆದ ಗಂಡ ನಪುಂಸಕ ಎಂದು ಪತ್ನಿಯಿಂದ ಗಲಾಟೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಗಂಡನ ಬಗ್ಗೆ ಅನುಮಾನಗೊಂಡು ಪತ್ನಿ ಕುಟುಂಬಸ್ಥರು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದರು. ಪರೀಕ್ಷೆಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಸಮರ್ಥನಾಗಿದ್ದಾನೆಂದು ವೈದ್ಯರು ದೃಢಪಡಿಸಿದ್ದರು. ಆದರೆ, ‘ಮಾನಸಿಕ ಒತ್ತಡದಿಂದ ಸ್ಬಲ್ಪ ಹಿಂದೇಟು ಹಾಕಿರಬಹುದು. ಸ್ವಲ್ಪ ತಾಳ್ಮೆಯಿಂದಿರುವಂತೆ’ ವೈದ್ಯರು ಸಲಹೆ ನೀಡಿದ್ದರು. ತಾಳ್ಮೆ ಕಳೆದುಕೊಂಡ ಪತ್ನಿ ಹಾಗೂ ಕುಟುಂಬಸ್ಥರಿಂದ ದಾಂದಲೆ ನಡೆಸಲಾಗಿದೆ. ಆ.17 ರಂದು ಪ್ರವೀನ್‌ನ ಗೋವಿಂದರಾಜನಗರ ಮನೆಗೆ ನುಗ್ಗಿ ಪತ್ನಿ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆಂಬ ಆರೋಪವಿದೆ. ಇದನ್ನೂ ಓದಿ: ಕಾರವಾರ| ಸಿಲಿಂಡರ್ ಸ್ಫೋಟಗೊಂಡು ಯುವತಿ ಸಾವು
ಬಂದು ಗಲಾಟೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇತ್ತ ಘಟನೆ ಸಂಬಂಧ ಗಂಡ ಹಾಗೂ ಸಂಬಂಧಿಕರ ವಿರುದ್ಧ ಪಶ್ಚಿಮ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿಯಿಂದ ವರದಕ್ಷಿಣೆ ಕಿರುಕುಳ ಕೇಸ್ ಕೂಡ ದಾಖಲಾಗಿದೆ.
ದಿಸ್ಪುರ: ಅಸ್ಸಾಂ ಮಹಿಳೆಯೊಬ್ಬರು ತನ್ನ ಪುತ್ರಿ ಮತ್ತು ಆಕೆಯ ಸ್ನೇಹಿತರ ಜೊತೆ ಸೇರಿಕೊಂಡು ಪತಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಉತ್ತಮ್ ಗೊಗೊಯ್ ಕೊಲೆಯಾದ ವ್ಯಕ್ತಿ. ಆತನ ಪತ್ನಿ ಸೋನೋವಾಲ್ ಗೊಗೊಯ್ ಹತ್ಯೆ ಮಾಡಿದ ಪತ್ನಿ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮಹಿಳೆಯ 9ನೇ ತರಗತಿ ಓದುತ್ತಿರುವ ಪುತ್ರಿ ಮತ್ತು ಆಕೆಯ ಸ್ನೇಹಿತರು ಕೂಡ ಆರೋಪಿಗಳಾಗಿದ್ದಾರೆ.
ಜು.25 ರಂದು ದಿಬ್ರುಗಢದ ಲಹೋನ್ ಗಾಂವ್‌ನಲ್ಲಿರುವ ಬೊರ್ಬರುವಾ ಪ್ರದೇಶದ ನಿವಾಸದಲ್ಲಿ ಉತ್ತಮ್ ಗೊಗೊಯ್ ಶವವಾಗಿ ಪತ್ತೆಯಾಗಿದ್ದರು. ತನ್ನ ಗಂಡ ಪಾರ್ಶ್ವವಾಯುವಿನಿಂದ ಮೃತಪಟ್ಟಿದ್ದಾರೆಂದು ಸೋನೋವಾಲ್ ನಂಬಿಸಲು ಯತ್ನಿಸಿದ್ದಳು. ಆದರೆ, ವಿಚಾರಣೆ ವೇಳೆ ಈಕೆಯ ನಿಜಬಣ್ಣ ಬಯಲಾಗಿದೆ.
ಉತ್ತಮ್ ಅವರ ಸಹೋದರ ಪ್ರತಿಕ್ರಿಯಿಸಿ, ನನ್ನ ಅಣ್ಣ ಪಾರ್ಶ್ವವಾಯುವಿನಿಂದ ಮೃತಪಟ್ಟಿದ್ದಾನೆಂದು ಆತನ ಪತ್ನಿ ಹಾಗೂ ಪುತ್ರಿ ನನಗೆ ಕರೆ ಮಾಡಿ ತಿಳಿಸಿದರು. ನಾನು ತಕ್ಷಣ ಮನೆಗೆ ದೌಡಾಯಿಸಿದೆ. ಆಗ ಮನೆಯಲ್ಲಿ ದರೋಡೆಯಾಗಿದೆ. ನಿಮ್ಮ ಅಣ್ಣನಿಗೆ ಪಾರ್ಶ್ವವಾಯು ಆಯಿತು ಎಂದು ಹೇಳಿದರು. ಆದರೆ, ಅಣ್ಣನ ಕಿವಿ ಕತ್ತರಿಸಿರುವುದು ಕಂಡುಬಂತು. ನನಗೆ ಅನುಮಾನ ಬಂದು ಪೊಲೀಸ್ ಠಾಣೆಗೆ ದೂರು ನೀಡಿದೆ ಎಂದು ತಿಳಿಸಿದ್ದಾರೆ.
ನಾವು ಪೊಲೀಸರನ್ನು ಸಂಪರ್ಕಿಸಿದೆವು. ಇಂದು ಅವರ ಪತ್ನಿ, ಮಗಳು ಮತ್ತು ಇತರ ಇಬ್ಬರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ನಮಗೆ ತಿಳಿದುಬಂದಿದೆ. ಈ ಇಬ್ಬರು ಹುಡುಗರು ನನ್ನ ಅತ್ತಿಗೆ ಮತ್ತು ಅವರ ಮಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆಂದು ವರದಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಗಾಂಧಿನಗರ: ಪತ್ನಿ ಇನ್ನೊಬ್ಬನೊಂದಿಗೆ ಅಕ್ರಮ ಸಂಬಂಧ (Affair) ಹೊಂದಿದ್ದ ಹಿನ್ನೆಲೆ ಗಂಡ ತನ್ನ ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೂರತ್‌ನಲ್ಲಿ (Surat) ನಡೆದಿದೆ.
ಪತ್ನಿ ಫಲ್ಗುಣಿ ಭಾಯಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಗುಮಾಸ್ತಳಾಗಿದ್ದಳು. ಫಲ್ಗುಣಿ ಪತಿಗೆ ಫೋನ್ ಮಾಡಿದ ವೇಳೆ ಅಲ್ಪೇಶ್ ಉತ್ತರಿಸಿರಲಿಲ್ಲ. ಈ ಹಿನ್ನೆಲೆ ಮನೆಗೆ ಬಂದು ನೋಡಿದಾಗ ಬಾಗಿಲುಗಳು ಲಾಕ್ ಆಗಿತ್ತು. ನಂತರ ಪತ್ನಿ ಸಂಬಂಧಿಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ. ಮನೆಗೆ ಬಂದ ಸಂಬಂಧಿಕರು ಮನೆಯ ಬಾಗಿಲು ಒಡೆದು ಒಳಗೆ ಹೋದಾಗ ಹಾಸಿಗೆಯ ಮೇಲೆ ಇಬ್ಬರು ಮಕ್ಕಳು ಹಾಗೂ ಪಕ್ಕದಲ್ಲೇ ಪತಿ ಕೂಡ ಶವವಾಗಿ ಬಿದ್ದಿದ್ದರು ಎಂದು ಎಂದು ಸೂರತ್‌ನ ಉಪ ಪೊಲೀಸ್ ಆಯುಕ್ತ (ಡಿಸಿಪಿ) ವಿಜಯ್ ಸಿಂಗ್ ಗುರ್ಜರ್ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕೇಸಲ್ಲಿ ತೀರ್ಪು ವಿಳಂಬಕ್ಕೆ ಶತಪ್ರಯತ್ನ ನಡೆದಿತ್ತು: ಎಸ್‌ಐಟಿ ಮುಖ್ಯಸ್ಥ ಬಿಕೆ ಸಿಂಗ್
ಮೃತ ಅಲ್ಪೇಶ್ ಮೊಬೈಲ್‌ನಲ್ಲಿ ಡೆತ್ ನೋಟ್ ಹಾಗೂ ಕೆಲವು ವೀಡಿಯೋಗಳು ಲಭಿಸಿವೆ. ಅಲ್ಲದೇ ರೂಮ್‌ನಲ್ಲಿ ಎರಡು ಡೈರಿಗಳು ಕೂಡ ಸಿಕ್ಕಿದೆ. ಘಟನೆ ಸಂಬಂಧ ಅಲ್ಪೇಶ್ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ಅಲ್ಪೇಶ್ ಪತ್ನಿ ಫಲ್ಗುಣಿ ಭಾಯಿ, ನರೇಶ್ ಕುಮಾರ್ ರಾಥೋಡ್ ಎಂಬ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧದಿಂದಾಗಿ ಅಲ್ಪೇಶ್ ತೀವ್ರ ಒತ್ತಡದಲ್ಲಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ಹೇಳಿದ್ದಾರೆ. ಇದನ್ನೂ ಓದಿ: ದೊಡ್ಡಗಾಜನೂರಿನಲ್ಲಿ ಈಡಿಗ ಸಂಪ್ರದಾಯದಂತೆ ನೆರವೇರಿದ ಡಾ.ರಾಜ್ ಸಹೋದರಿ ಅಂತ್ಯಕ್ರಿಯೆ
ಡೈರಿಯಲ್ಲಿ ಅಕ್ರಮ ಸಂಬಂಧದಿಂದ ಮನನೊಂದಿರುವುದಾಗಿ ತಿಳಿದುಬಂದಿದೆ. ಹೆಚ್ಚಿನ ತನಿಖೆಗಾಗಿ ಡೈರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಕಸಿತ ಭಾರತ್ @ 2047: ಹೂಡಿಕೆದಾರರ ದುಂಡುಮೇಜಿನ ಸಮ್ಮೇಳನ
ಚೆನ್ನೈ: ಪತಿಯೊಂದಿಗೆ (Husband) ನಡೆದ ಜಗಳದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿಯನ್ನು (Wife) ಪತಿ ಇರಿದು ಕೊಂದ ಘಟನೆ ತಮಿಳುನಾಡಿನ (Tamil Nadu) ಕರೂರ್ (Karur) ಜಿಲ್ಲೆಯಲ್ಲಿ ನಡೆದಿದೆ.
ಭಾನುವಾರ ಬೆಳಗ್ಗೆ ಆಸ್ಪತ್ರೆಗೆ ಬಂದ ಪತಿ ವಿಶ್ರುತ್, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪತ್ನಿಗೆ ಮೂರು ಬಾರಿ ಇರಿದು ಹತ್ಯೆಮಾಡಿದ್ದಾನೆ. ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಘಟನೆ ಸಂಬಂಧ ಕುಳಿತಲೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕರೆಂಟ್ ಶಾಕ್ ನೀಡಿ ಮಾವನ ಕೊಲೆ – ಗಾಯ ಮರೆಮಾಚಲು ರೋಸ್ ವಾಟರ್, ಅರಶಿಣ ಪುಡಿ ಹಚ್ಚಿದ ಸೊಸೆ
ರಾಮನಗರ: ಅಡುಗೆ (Cooking) ಮಾಡುವ ವಿಚಾರಕ್ಕೆ ಪತಿ- ಪತ್ನಿಯ (Husband-Wife) ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಮಾಗಡಿ (Magadi) ತಾಲೂಕಿನ ಮತ್ತಿಕೆರೆ ಗ್ರಾಮದಲ್ಲಿ ನಡೆದಿದೆ.
ತಿಮ್ಮಮ್ಮ (65) ಮೃತ ಮಹಿಳೆ. ಪತಿ ರಂಗಯ್ಯ (75) ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕಾಯಿ ತುರಿಯುವ ಮಣೆಯಿಂದ ಹೊಡೆದು ರಂಗಯ್ಯ ಪತ್ನಿ ತಿಮ್ಮಮ್ಮಳನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಪತ್ನಿ ಹತ್ಯೆ ಮಾಡಿದ ನಂತರ ತಿರುಪತಿಗೆ ಎಸ್ಕೇಪ್ ಆಗಲು ರಂಗಯ್ಯ ಮುಂದಾಗಿದ್ದ ಎನ್ನಲಾಗಿದೆ. ತಕ್ಷಣವೇ ಮಾಹಿತಿ ಪಡೆದ ಪೊಲೀಸರು ರಾಮನಗರದಲ್ಲಿ ರಂಗಯ್ಯನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: NASA Axiom-4 Mission | ಸ್ಪೇಸ್ ಎಕ್ಸ್ ಡ್ರ್ಯಾಗನ್ ನೌಕೆ ಡಾಕಿಂಗ್ ಯಶಸ್ವಿ
ಹಾಸನ: ಕೌಟುಂಬಿಕ ಕಲಹದಿಂದ (Family Feud) ಮನನೊಂದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ (Hassan) ಜಿಲ್ಲೆ ಬೇಲೂರು (Belur) ತಾಲೂಕಿನ ಲಿಂಗಾಪುರ (Lingapura) ಗ್ರಾಮದಲ್ಲಿ ನಡೆದಿದೆ.
ಹರಿಣಾಕ್ಷಿ (40) ಆತ್ಮಹತ್ಯೆಗೆ ಶರಣಾದ ಮಹಿಳೆ. ಹರಿಣಾಕ್ಷಿ 16 ವರ್ಷಗಳ ಹಿಂದೆ ಲಿಂಗಾಪುರ ಗ್ರಾಮದ ಶೇಖರ್ ಜೊತೆ ವಿವಾಹವಾಗಿದ್ದರು. ಪತಿ ತನ್ನ ಪತ್ನಿಯನ್ನು ಸದಾ ಅನುಮಾನದಿಂದ ನೋಡುತ್ತಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಎರಡೂ ಕುಟುಂಬಗಳ ಹಿರಿಯರು ಹಲವು ಬಾರಿ ರಾಜಿ ಸಂಧಾನ ಕೂಡ ಮಾಡಿದ್ದರು. ಆದರೂ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಲೇ ಇತ್ತು. ಇದನ್ನೂ ಓದಿ: ಸರ್ಕಾರಿ ಬಸ್, ಆಟೋರಿಕ್ಷಾ ನಡುವೆ ಭೀಕರ ಅಪಘಾತ – 6 ಮಂದಿ ದುರ್ಮರಣ
ಅಮರಾವತಿ: ಗಂಡ-ಹೆಂಡತಿಯ ನಡುವೆ ಜಗಳ ನಡೆದು, ಪತಿ 8 ತಿಂಗಳ ಗರ್ಭಿಣಿ ಪತ್ನಿಯನ್ನು (Preganant Wife) ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣದಲ್ಲಿ ಸೋಮವಾರ ನಡೆದಿದೆ.
ಅನುಷಾ (27) ಮೃತ ಪತ್ನಿ. ಪತಿ ಜ್ಞಾನೇಶ್ವರ್ ಹಾಗೂ ಪತ್ನಿ ಅನುಷಾ ಸೋಮವಾರ ಬೆಳಗ್ಗೆ ಜಗಳವಾಡಿದ್ದು, ಈ ಜಗಳ ತಾರಕಕ್ಕೇರಿ ಜ್ಞಾನೇಶ್ವರ್ ತನ್ನ ಪತ್ನಿಯ ಕತ್ತು ಹಿಸುಕಿದ್ದಾನೆ. ಈ ಸಂದರ್ಭ ಅನುಷಾ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೂಡಲೇ ಪತಿ, ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಅಷ್ಟರಲ್ಲಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಇದನ್ನೂ ಓದಿ: ತುಮಕೂರು | ಬೀದಿ ದೀಪ ಆರಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಶಿಕ್ಷಕ ಸಾವು
ವಿಶಾಖಪಟ್ಟಣಂನ (Visakhapatnam) ಪಿಎಂ ಪಾಲೆಂನ ಉಡಾ ಕಾಲೋನಿಯಲ್ಲಿ ಘಟನೆ ನಡೆದಿದೆ. ಆರೋಪಿ ಪತಿ ನಗರದ ಸ್ಕೌಟ್ಸ್ ಮತ್ತು ಸಾಗರ್‌ನಗರ ವೀಕ್ಷಣಾ ಕೇಂದ್ರದ ಬಳಿ ಫಾಸ್ಟ್ ಫುಡ್ ಸೆಂಟರ್ ನಡೆಸುತ್ತಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಅನುಷಾಳೊಂದಿಗೆ ಪ್ರೇಮ ವಿವಾಹವಾಗಿದ್ದರು. ಬಳಿಕ ಹಲವಾರು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ದಂಪತಿ ಆಗಾಗ ಜಗಳವಾಡುತ್ತಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸೆಂಚುರಿ ಬಾರಿಸಿದ್ದಕ್ಕೆ ಪಾಕ್ ಸೂಪರ್ ಲೀಗಲ್ಲಿ ಸಿಕ್ಕಿದ್ದು ಹೇರ್ ಡ್ರೈಯರ್!
ಬೆಂಗಳೂರು: ನಡುರಸ್ತೆಯಲ್ಲೇ ಪತ್ನಿಯನ್ನು ಬರ್ಬರ ಹತ್ಯೆಗೈದು ಪತಿ ಪರಾರಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ (Electronic City) ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿ ನಗರದಲ್ಲಿ ನಡೆದಿದೆ.
ಬಾಗೇಪಲ್ಲಿ (Bagepalli) ಮೂಲದ ಶಾರದ (35) ಮೃತ ಪತ್ನಿ. ಕೃಷ್ಣ ಪತ್ನಿಯನ್ನು ಕೊಂದ ಪಾಪಿ ಪತಿ. ಅಕ್ರಮ ಸಂಬಂಧ ಹಿನ್ನೆಲೆ ಕೊಲೆ ಶಂಕೆ ವ್ಯಕ್ತವಾಗಿದೆ. ನಡು ರಸ್ತೆಯಲ್ಲಿ ಪತ್ನಿಗೆ ಚಾಕುವಿನಿಂದ ಕುತ್ತಿಗೆ ಕುಯ್ದು ಪತಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಆಗ್ನೇಯ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಸೋಕೋ ಟೀಂ ಆಗಮಿಸಿದೆ. ಮೃತದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಯಾವುದೇ ಮಸೀದಿ, ಕಬ್ರಸ್ತಾನ್ ಮುಟ್ಟಲ್ಲ: ವಕ್ಫ್ ಮಸೂದೆ ಬಗ್ಗೆ ಬಿಜೆಪಿ ಸಂಸದ ಪ್ರತಿಕ್ರಿಯೆ
ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಪತ್ನಿ ಕೆಲಸ ಮುಗಿಸಿ ನಿರ್ಜನ ರಸ್ತೆಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಪತಿ ದಾಳಿ ನಡೆಸಿದ್ದಾನೆ. ಆರೋಪಿ ಪತ್ನಿಯನ್ನು ಕೊಲ್ಲಲು ಎರಡು ಚಾಕು ತಂದಿದ್ದ. ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಎಸ್ಕೇಪ್ ಆಗುತ್ತಿದ್ದ ಆರೋಪಿ ಪತಿಯನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಕೇಸ್ – ಶಾಸಕ ಪೊನ್ನಣ್ಣ & ವಿನಯ್ ಸೋಮಯ್ಯ ವಾಟ್ಸಪ್ ಚಾಟ್‌ನಲ್ಲೇನಿದೆ?
ಘಟನೆ ಸಂಬಂಧ ಆಗ್ನೇಯ ವಿಭಾಗದ ಡಿಸಿಪಿ ಸಾರ ಫಾತಿಮಾ ಮಾಧ್ಯಮದವರೊಂದಿಗೆ ಮಾತನಾಡಿ, ಸುಮಾರು 8 ಗಂಟೆಯ ಸಮಯದಲ್ಲಿ ನಮ್ಮ ಕಂಟ್ರೋಲ್ ರೂಮಿಗೆ ಮಾಹಿತಿ ಬಂತು. ನಮ್ಮ ಎಲೆಕ್ಟ್ರಾನಿಕ್ ಸಿಟಿ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದಾರೆ. ಶಾರದಾ ಎಂಬ ಮಹಿಳೆಯ ಕೊಲೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ನಮ್ಮ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯಾವ ವಿಚಾರಕ್ಕೆ ಕೊಲೆಯಾಗಿದೆ ಎಂದು ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ಬಂದ ನಂತರ ಸಂಪೂರ್ಣ ವಿಚಾರ ಗೊತ್ತಾಗಬೇಕಾಗಿದೆ. ಇದನ್ನೂ ಓದಿ: Bengaluru | ಅನಾರೋಗ್ಯಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ
ಮಡಿಕೇರಿ: ಪತ್ನಿ (Wife) ನಾಪತ್ತೆಯಾಗಿದ್ದಾಳೆ ಪತಿಯಿಂದ ದೂರು. ಮೃತ ಪತ್ನಿಯ ಶವಕ್ಕೆ ಪತಿಯಿಂದ ಅಂತ್ಯಸಂಸ್ಕಾರ. ಪತ್ನಿಯನ್ನು ಕೊಲೆಗೈದ ಆರೋಪದ ಅಡಿ ಪತಿ (Husband) ಜೈಲುಪಾಲು. ಜೈಲು ಶಿಕ್ಷೆಯಿಂದ ಹೇಗೋ ಪಾರಾಗಿ ಬಂದಿದ್ದ ಪತಿಗೆ 4 ವರ್ಷದ ನಂತರ ʼಮೃತ ಪತ್ನಿʼಯನ್ನು ನೋಡಿ ಶಾಕ್!
ಇದು ಯಾವುದೋ ಸಿನಿಮಾ ಕಥೆಯಲ್ಲ. ಕೊಡಗಿನ ಕುಶಾಲನಗರ (Kushalnagar) ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದ ನೈಜ ಘಟನೆ. ಪತಿಯಿಂದ ʼಕೊಲೆʼಯಾಗಿದ್ದ ಪತ್ನಿ 4 ವರ್ಷದ ಬಳಿಕ ದಿಢೀರ್ ಪ್ರತ್ಯಕ್ಷವಾಗುವ ಮೂಲಕ ನಾಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.
ಪತಿಯಿಂದ ದೂರು:
ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಗ್ರಾಮದ ಆದಿವಾಸಿ ಜನಾಂಗದ ಸುರೇಶ್ ಮತ್ತು ಮಲ್ಲಿಗೆಯ ಸಂಸಾರ ಚೆನ್ನಾಗಿ ಸಾಗುತ್ತಿತ್ತು. ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. ಈ ಮಧ್ಯೆ ಒಂದು ದಿನ ಮಲ್ಲಿಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಸುರೇಶ್ ಅವರು ಕುಟುಂಬದ ಸಂಬಂಧಿಕರಲ್ಲಿ ವಿಚಾರಿಸಿದಾಗ ಆಕೆಗೆ ಅಕ್ರಮ ಸಂಬಂಧ ಇರುವುದು ಬೆಳಕಿಗೆ ಬಂದಿದೆ. ದೂರವಾಣಿ ಮೂಲಕ ಸುರೇಶ್ ಕರೆ ಮಾಡಿ ತನ್ನೊಂದಿಗೆ ಜೀವನ ಮಾಡದೇ ಇದ್ದರೂ ಪರವಾಗಿಲ್ಲ ತನ್ನ ಮಕ್ಕಳಿಗೆ ತಾಯಿಯಾಗಿ ಇರು ಎಂದು ಪರಿ ಪರಿಯಾಗಿ ಮನವಿ ಮಾಡಿದ್ದರೂ ಆಕೆ ಮಾತ್ರ ಬರಲೇ ಇಲ್ಲ.
ಮುಂದೆ ನನ್ನ ಮೇಲೆ ಯಾವುದೇ ಆರೋಪ ಬರಬಾರದು ಎಂದು ಸುರೇಶ್ ಅವರು 2021 ರಲ್ಲಿ ಕುಶಾಲನಗರ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿ ಪೊಲೀಸರ ಬಳಿ ನಡೆದ ಎಲ್ಲಾ ವಿಚಾರವನ್ನು ತಿಳಿಸುತ್ತಾರೆ. ಹೀಗಾಗಿ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಕಾಣೆಯಾಗಿದ್ದ ಸುರೇಶ್ ಪತ್ನಿ ಮಲ್ಲಿಗೆಯನ್ನು ಪತ್ತೆ ಮಾಡಲು ಹೋಗಲಿಲ್ಲ.
ಮೃತದೇಹಕ್ಕೆ ಅಂತ್ಯಸಂಸ್ಕಾರ
ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು 2022 ರಲ್ಲಿ ಸುರೇಶ್ ಗೆ ಕರೆ ಮಾಡಿ ನಿಮ್ಮ ಪತ್ನಿಯ ಶವ ಪತ್ತೆಯಾಗಿದೆ ಎಂದು ಹೇಳಿ ಠಾಣೆಗೆ ಬರಲು ಹೇಳಿದ್ದರು. ಈ ವೇಳೆ ಠಾಣೆಗೆ ಬಂದಿದ್ದ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಪೊಲೀಸರು ಸುರೇಶ್ ಮತ್ತು ಆತನ ಅತ್ತೆ ಗೌರಿಯನ್ನು ಜೀಪಿನಲ್ಲಿ ಕರೆದುಕೊಂಡು ಹೋಗಿದ್ದರು. ಇದನ್ನೂ ಓದಿ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ ಶಿಕ್ಷಕಿ ಬಲಿ
ಬೆಟ್ಟದಪುರದಲ್ಲಿ ಸುರೇಶ್ ಅವರಿಗೆ ಒಂದು ಅಸ್ಥಿಪಂಜರ ತೋರಿಸಿ,”ಇದು ನಿಮ್ಮ ಪತ್ನಿಯ ಅಸ್ಥಿಪಂಜರ. ಅಂತ್ಯ ಸಂಸ್ಕಾರ ಮಾಡಿ” ಎಂದು ಅಲ್ಲೇ ಅರಣ್ಯದಲ್ಲಿ ಶವ ಸಂಸ್ಕಾರ ಮಾಡಿಸಿದ್ದರು. ನಂತರ ಸುರೇಶ್ ಅವರೇ ಪತ್ನಿ ಮಲ್ಲಿಗೆಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಜೈಲಿಗೆ ಅಟ್ಟಿದ್ದರು. ಈ ವೇಳೆ ಸುರೇಶ್ ಅವರು ನಾನು ಪತ್ನಿಯನ್ನು ಕೊಲೆ ಮಾಡಿಲ್ಲ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಪೊಲೀಸರು ನೀನೇ ಕೃತ್ಯ ಎಸಗಿದ್ಯಾ ಎಂದು ಹೇಳಿ ಬಲವಂತವಾಗಿ ಜೈಲಿಗೆ ಕಳುಹಿಸಿದ್ದರು.
ಪ್ರಿಯತಮನೊಂದಿಗೆ ಸಿಕ್ಕಿಬಿದ್ಳು:
4 ವರ್ಷದಿಂದ ನಾಪತ್ತೆಯಾಗಿದ್ದ ಮಲ್ಲಿಗೆ ಏ.1 ರಂದು ಮಡಿಕೇರಿಯ ಹೋಟೆಲಿಗೆ ಪ್ರಿಯಕರನೊಂದಿಗೆ ಬಂದಿದ್ದಾಳೆ. ಈ ವೇಳೆ ಅಲ್ಲಿ ಸುರೇಶ್ ಅವರ ಸ್ನೇಹಿತರು ಆಕೆಯ ಫೋಟೋವನ್ನು ತೆಗೆದು ಸುರೇಶ್ ಅವರಿಗೆ ಮತ್ತು ಪೊಲೀಸರಿಗೆ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅಲರ್ಟ್ ಆಗಿ ಮಲ್ಲಿಗೆ ನೆಲೆಸಿರುವ ಜಾಗವವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಮೈಸೂರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಮೃತದೇಹ ಯಾರದ್ದು?
ಅಂದು ಸುರೇಶ್ ಅಂತ್ಯ ಸಂಸ್ಕಾರ ಮಾಡಿದ ಆ ಅಸ್ಥಿಪಂಜರ ಯಾರದ್ದು? ಯಾವುದೇ ಸಾಕ್ಷ್ಯಗಳು ಇಲ್ಲದೇ ಇದ್ದರೂ ಪೊಲೀಸರು ಉದ್ದೇಶಪೂರ್ವಕವಾಗಿ ಸುರೇಶ್ ಅವರನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಿದ್ದು ಹೇಗೆ ಎಂಬ ಗಂಭೀರ ಪ್ರಶ್ನೆ ಎದ್ದಿದೆ.