Tag: ಪತನ

  • ಇಟಲಿಯಲ್ಲಿ ಹೆಲಿಕಾಪ್ಟರ್ ಪತನ – 7 ಮೃತದೇಹ ಪತ್ತೆ

    ಇಟಲಿಯಲ್ಲಿ ಹೆಲಿಕಾಪ್ಟರ್ ಪತನ – 7 ಮೃತದೇಹ ಪತ್ತೆ

    ರೋಮ್: ಇಟಲಿಯಲ್ಲಿ ಹೆಲಿಕಾಪ್ಟರ್ ಒಂದು 2 ದಿನಗಳ ಹಿಂದೆ ರಾಡಾರ್‌ನಿಂದ ಕಣ್ಮರೆಯಾಗಿತ್ತು. ಪತನವಾಗಿದ್ದ ಹೆಲಿಕಾಪ್ಟರ್‌ನಿಂದ ಇದೀಗ 7 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹೆಲಿಕಾಪ್ಟರ್ ಗುರುವಾರ ಟಸ್ಕನಿಯ ಲುಕ್ಕಾದಿಂದ ಟೇಕ್ ಆಫ್ ಆಗಿದ್ದು, ಟ್ರೆವಿಸೊ ನಗರದ ಕಡೆಗೆ ಹೋಗುತ್ತಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ ಪತನವಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಎನ್‍ಕೌಂಟರ್ – ಮೂವರು ಲಷ್ಕರ್ ಉಗ್ರರ ಹತ್ಯೆ

    ಹೆಲಿಕಾಪ್ಟರ್‌ನಲ್ಲಿದ್ದ 7 ಪ್ರಯಾಣಿಕರು ಮೃತಪಟ್ಟಿದ್ದಾರೆ. ಅದರಲ್ಲಿ ನಾಲ್ವರು ಟರ್ಕಿ ಮೂಲದವರು ಹಾಗೂ ಇಬ್ಬರು ಲೆಬನಾನಿಯವರು ಇದ್ದು, ಒಬ್ಬ ಇಟಲಿ ಮೂಲದ ಪೈಲಟ್ ಸೇರಿದಂತೆ ಎಲ್ಲರೂ ಮೃತಪಟ್ಟಿದ್ದಾರೆ. ಪ್ರಯಾಣಿಕರು ಇಟಲಿಗೆ ವ್ಯಾಪಾರದ ಹಿನ್ನೆಲೆ ಪ್ರಯಾಣಿಸುತ್ತಿದ್ದರು ಎಂದು ಮೊಡೆನಾ ನಗರದ ಪ್ರಿಫೆಕ್ಟ್ ಕಚೇರಿ ತಿಳಿಸಿದೆ. ಇದನ್ನೂ ಓದಿ: ಬೂದಿಮುಚ್ಚಿದ ಕೆಂಡದಂತೆ ಭಾರತ – ಯುಪಿಯಲ್ಲಿ 250ಕ್ಕೂ ಗಲಭೆಕೋರರು ಅರೆಸ್ಟ್

    ಟಸ್ಕನಿ ಹಾಗೂ ಎಮಿಲಿಯಾ ರೋಮ್ಯಾಗ್ನಾ ಪ್ರದೇಶದ ಗಡಿಯಲ್ಲಿರುವ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತ್ತೆಯಾಗಿದೆ. ಹೆಲಿಕಾಪ್ಟರ್ ಸಂಪೂರ್ಣವಾಗಿ ಸುಟ್ಟು ಹೋಗಿರುವುದರಿಂದ ಎಲ್ಲರೂ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಯುಎಸ್ ಮಿಲಿಟರಿ ವಿಮಾನ ಪತನ- ನಾಲ್ವರ ದುರ್ಮರಣ

    ಯುಎಸ್ ಮಿಲಿಟರಿ ವಿಮಾನ ಪತನ- ನಾಲ್ವರ ದುರ್ಮರಣ

    ಕ್ಯಾಲಿಫೋರ್ನಿಯಾ: ಸೇನಾ ವಿಮಾನವೊಂದು ಪತನಗೊಂಡು ನಾಲ್ವರು ಮೃತಪಟ್ಟ ಘಟನೆ ದಕ್ಷಿಣ ಕ್ಯಾಲಿಫೋರ್ನಿಯಾದ ಇಂಪೀರಿಯಲ್ ಕೌಂಟಿಯಲ್ಲಿ ನಡೆದಿದೆ.

    3ಡಿ ಮೆರೈನ್ ಏರ್‌ಕ್ರಾಫ್ಟ್ ವಿಂಗ್‍ಗೆ ಸೇರಿದ ವಿಮಾನವು ಗ್ಲಾಮಿಸ್ ಬಳಿ ಪತನಗೊಂಡಿದೆ. ಈ ವಿಮಾನದಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಅದರಲ್ಲಿ ನಾಲ್ವರು ಮೃತಪಟ್ಟಿದ್ದು, ಮತ್ತೊಬ್ಬರಿಗಾಗಿ ಹುಡುಕಾಡುತ್ತಿದ್ದಾರೆ. ಮೆಕ್ಸಿಕನ್ ಗಡಿಯಿಂದ ಕೇವಲ 35 ಕಿ.ಮೀ ದೂರದಲ್ಲಿರುವ ಗ್ಲಾಮಿಸ್ ಬಳಿ ವಿಮಾನವು ಪತನಕ್ಕಿಡಾಗಿದ್ದು, ಅದರಲ್ಲಿ ಯಾವುದೇ ಹಾನಿಕಾರಕ ವಸ್ತುಗಳಿರಲಿಲ್ಲ ಎಂದು ಮಿಲಿಟರಿ ಸ್ಪಷ್ಟಪಡಿಸಿದೆ.

    ವಿಮಾನ ಪತನಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಮಾನದಲ್ಲಿ ಪರಮಾಣುವಿನಂತಹ ವಸ್ತಗಳನ್ನು ಹೊಂದಿದ್ದವು ಎಂಬ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಮೆರೈನ್ ಕಾರ್ಪ್ಸ್ ಏರ್ ಸ್ಟೇಷನ್ ಯುಮಾದ ಕ್ಯಾಪ್ಟನ್ ಬ್ರೆಟ್ ವ್ಯಾನಿಯರ್ ಸ್ಪಷ್ಟನೆ ನೀಡಿದ್ದು, ವದಂತಿಗಳನ್ನು ನಿರಾಕರಿಸಿದ್ದಾರೆ. ಇದರ ಜೊತೆಗೆ ಪತನದ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: 105 ಗಂಟೆಯಲ್ಲಿ 75 ಕಿ.ಮೀ ಹೆದ್ದಾರಿ ನಿರ್ಮಿಸಿ ಗಿನ್ನಿಸ್ ದಾಖಲೆ ಬರೆದ NHAI

    ಕಳೆದ ವಾರ ಕ್ಯಾಲಿಫೋರ್ನಿಯಾದ ಟ್ರೋನಾದಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿ ನೌಕಾಪಡೆಯ ಪೈಲಟ್ ಸಾವನ್ನಪ್ಪಿದರು. ಇದಾದ ಬಳಿಕ ಇಂದು ಈ ಎರಡನೇ ಮಿಲಿಟರಿ ವಿಮಾನ ಪತನಗೊಂಡಿದೆ. ಇದನ್ನೂ ಓದಿ: ಬಿಜೆಪಿ ಶಾಸಕಾಂಗ ಸಭೆಯಲ್ಲಿ ಶಾಸಕರ ಸಮಸ್ಯೆ ಆಲಿಸದ ಸಿಎಂ

  • ವಿಮಾನ ಪತನದ ಸ್ಥಳದಲ್ಲಿ 16 ಮೃತದೇಹ ಪತ್ತೆ- ಪ್ರಯಾಣಿಕರೆಲ್ಲರೂ ಮೃತಪಟ್ಟಿರುವ ಶಂಕೆ

    ವಿಮಾನ ಪತನದ ಸ್ಥಳದಲ್ಲಿ 16 ಮೃತದೇಹ ಪತ್ತೆ- ಪ್ರಯಾಣಿಕರೆಲ್ಲರೂ ಮೃತಪಟ್ಟಿರುವ ಶಂಕೆ

    ಕಠ್ಮಂಡು: ನೇಪಾಳ ವಿಮಾನ ಪತನಗೊಡ ಸ್ಥಳದಲ್ಲಿ ಇದುವರೆಗೂ 16 ಮೃತದೇಹ ಪತ್ತೆಯಾಗಿದ್ದು, ಉಳಿದ 6 ಶವಗಳಿಗಾಗಿ ಪೊಲೀಸರು ಮತ್ತು ಸೇನಾ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

    ಮುಸ್ತಾಂಗ್ ಜಿಲ್ಲೆಯ ಕೋವಾಂಗ್ ಗ್ರಾಮದ ಲಾಮ್ಷೆ ನದಿಯ ಸಮೀಪ 14,500 ಅಡಿ ಎತ್ತರದಲ್ಲಿ ಪರ್ವತದ ತುದಿಗೆ ಡಿಕ್ಕಿ ಹೊಡೆದು ವಿಮಾನ ಪತನಗೊಂಡಿದೆ. ಮೃತದೇಹಗಳನ್ನು ಹೊರತೆಗೆಯಲು 15 ನೇಪಾಳ ಸೇನೆಯ ಸೈನಿಕರ ತಂಡವು ಸ್ಥಳದಲ್ಲಿ ಕಾರ್ಯನಿರತರಾಗಿದ್ದಾರೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

    ನೇಪಾಳದ ಗೃಹ ಸಚಿವಾಲಯದ ವಕ್ತಾರ ಫಡಿಂದ್ರ ಮಣಿ ಪೋಖ್ರೆಲ್ ಮಾತನಾಡಿ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಥಮಿಕ ಮೌಲ್ಯಮಾಪನದ ಪ್ರಕಾರ ವಿಮಾನ ಅಪಘಾತದಲ್ಲಿ ಯಾರೂ ಬದುಕುಳಿಯಲು ಸಾಧ್ಯವಿಲ್ಲ. ಆದರೆ ಅಧಿಕೃತ ಹೇಳಿಕೆ ಬರಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾಪತ್ತೆಯಾದ ವಿಮಾನ 6 ಗಂಟೆಗಳಲ್ಲಿ ಪತ್ತೆ – ಸಾವು ನೋವಿನ ಬಗ್ಗೆ ತನಿಖೆ

    ಅಪಘಾತದ ಸ್ಥಳದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮೃತದೇಹಗಳನ್ನು ತರಲು ಹೋದ ಹೆಲಿಕಾಪ್ಟರ್ ಅಲ್ಲಿಗೆ ಇಳಿಯಲು ಸಾಧ್ಯವಾಗಲಿಲ್ಲ. ಆದರೂ ಎಲ್ಲಾ ಮೃತ ದೇಹಗಳನ್ನು ನೇರವಾಗಿ ಕಠ್ಮಂಡುವಿಗೆ ತರಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕೇವಲ ಮತ ಬ್ಯಾಂಕ್‍ಗೋಸ್ಕರ ಸಿದ್ದರಾಮಯ್ಯ ಭಯೋತ್ಪಾದಕರ ಕಾಲು ನೆಕ್ಕುತ್ತಿದ್ದಾರೆ: ಕಟೀಲ್

  • ಬೀಚ್‌ಗೆ ಅಪ್ಪಳಿಸಿದ ಹೆಲಿಕಾಪ್ಟರ್

    ವಾಷಿಂಗ್ಟನ್: ಹೆಲಿಕಾಪ್ಟರ್ ಒಂದು ಸಮುದ್ರಕ್ಕೆ ಅಪ್ಪಳಿಸಿರುವ ಘಟನೆ ಫ್ಲೋರಿಡಾದ ಮಿಯಾಮಿ ಬೀಚ್‌ನಲ್ಲಿ ನಡೆದಿದೆ.

    ಭಾರೀ ಜನಸಂದಣಿಯಿದ್ದ ಕಡಲ ತೀರದ ಸಮೀಪ ಸಮುದ್ರಕ್ಕೆ ರಾಬಿನ್ಸ್ ಆರ್44 ಹೆಲಿಕಾಪ್ಟರ್ ಅಪ್ಪಳಿಸಿದೆ. ಹೆಲಿಕಾಫ್ಟರ್‌ನಲ್ಲಿ ಮೂವರು ಪ್ರಯಾಣಿಕರಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ. ಇದನ್ನೂ ಓದಿ: ಗೌಪ್ಯತೆ ಕಾಪಾಡಲು ಕನ್ನಡಕ ಧರಿಸಿ ಮತ ಚಲಾಯಿಸಿದ ಟ್ವಿನ್ಸ್!

    ಹೆಲಿಕಾಪ್ಟರ್ ಸಮುದ್ರಕ್ಕೆ ಅಪ್ಪಳಿಸುವ ದೃಶ್ಯವನ್ನು ಸೆರೆಹಿಡಿದಿದ್ದು, ಅದನ್ನು ಮಿಯಾಮಿ ಬೀಚ್ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹೆಲಿಕಾಪ್ಟರ್ ಪತನದ ಬಗ್ಗೆ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯೊಂದಿಗೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ಬಾಲಿವುಡ್ ಅಪಹಾಸ್ಯ – ಕೆಆರ್‌ಕೆ, ಅಭಿಷೇಕ್ ಬಚ್ಚನ್ ರೋಚಕ ಟ್ವೀಟ್ ಸಮರ!

  • ಸೇನಾ ವಿಮಾನ ಪತನ – ಅಪಾಯದಿಂದ ಪಾರಾದ ಪೈಲಟ್‌ಗಳು

    ಪಾಟ್ನಾ: ಬಿಹಾರದ ಗಯಾದಲ್ಲಿರುವ ಭಾರತೀಯ ಸೇನಾ ಅಧಿಕಾರಿಗಳ ತರಬೇತಿ ಅಕಾಡೆಮಿಯ ವಿಮಾನವೊಂದು ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಪೈಲಟ್‌ಗಳು ಅಪಾಯದಿಂದ ಪಾರಾಗಿದ್ದಾರೆ.

    ಪೈಲಟ್‌ಗಳು ತುರ್ತು ಭೂಸ್ಪರ್ಶ ಮಾಡಲು ಯತ್ನಿಸಿದಾಗ ಭೋದಗಯಾ ಬ್ಲಾಕ್‌ಗೆ ಹೊಂದಿಕೊಂಡಿರುವ ಹೊಲದಲ್ಲಿ ಅಪಘಾತ ಸಂಭವಿಸಿದೆ. ಸೇನಾ ವಿಮಾನದಲ್ಲಿ ತರಬೇತಿ ಪಡೆಯುತ್ತಿದ್ದ ಇಬ್ಬರು ಪೈಲಟ್‌ಗಳು ಸುರಕ್ಷಿತರಾಗಿದ್ದಾರೆ ಎಂದು ಗಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಬಂಗಜೀತ್ ಸಾಹಾ ತಿಳಿಸಿದ್ದಾರೆ. ಇದನ್ನೂ ಓದಿ: ಮೂಗಿನ ಮೂಲಕ ನೀಡಲಾಗುವ ಕೋವ್ಯಾಕ್ಸಿನ್‌ನ ಬೂಸ್ಟರ್ ಡೋಸ್ ಪ್ರಯೋಗಕ್ಕೆ ಒಪ್ಪಿಗೆ

    ತರಬೇತಿ ಪಡೆಯುತ್ತಿದ್ದ ಪೈಲಟ್‌ಗಳ ವಿಮಾನ ಕೆಳಗೆ ಬೀಳುವುದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ ಕೆಡೆಟ್‌ಗಳನ್ನು ಹೊರ ತೆಗೆದಿದ್ದಾರೆ. ಕೂಡಲೆ ಸೇನಾ ಸಿಬ್ಬಂದಿ ಅವರನ್ನು ಚಿಕಿತ್ಸೆಗೆ ಕರೆದೊಯ್ದಿದ್ದು, ಅಪಘಾತಕ್ಕೀಡಾದ ವಿಮಾನದ ಅವಶೇಷಗಳನ್ನು ಸಂಗ್ರಹಿಸಿದ್ದಾರೆ. ಇದನ್ನೂ ಓದಿ: 500 ರೂಪಾಯಿಗೆ ಖರೀದಿಸಿದ್ದ ಕುರ್ಚಿ 16 ಲಕ್ಷಕ್ಕೆ ಹರಾಜು

    ವಿಮಾನ ಅಪಘಾತಕ್ಕೆ ಕಾರಣ ಏನು ಎಂಬುದು ತಾಂತ್ರಿಕ ತಜ್ಞರ ಪರೀಕ್ಷೆಯ ಬಳಿಕವೇ ತಿಳಿಯಲಿದೆ ಎಂದು ಬಂಗಜೀತ್ ತಿಳಿಸಿದ್ದಾರೆ.

  • ಭಾರತೀಯ ವಾಯುಸೇನೆಯ ಮಿಗ್-21 ಪತನ – ಪೈಲಟ್ ದುರ್ಮರಣ

    ಭಾರತೀಯ ವಾಯುಸೇನೆಯ ಮಿಗ್-21 ಪತನ – ಪೈಲಟ್ ದುರ್ಮರಣ

    ನವದೆಹಲಿ: ಭಾರತೀಯ ವಾಯುಸೇನೆಯ ಮಿಗ್- 21 ವಿಮಾನವು ಪಂಜಾಬ್ ಮೊಗಾ ಬಳಿ ಪತನಗೊಂಡಿದ್ದು, ಪೈಲಟ್ ದುರ್ಮರಣಕ್ಕೀಡಾಗಿದ್ದಾರೆ ಎಂದು ವಾಯುಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಅವಘಡ ಮೊಗಾದ ಬಘುಪುರಾನಾ ವ್ಯಾಪ್ತಿಯಲ್ಲಿ ಬರು ಲ್ಯಾಂಗಿಯಾನಾ ಖುರ್ದ್ ಗ್ರಾಮದಲ್ಲಿ ನಸುಕಿನ ಜಾವ 1 ಗಂಟೆಯ ಸುಮಾರಿಗೆ ಜರುಗಿದೆ. ಎಂದಿನಂತೆ ತರಬೇತಿಯಲ್ಲಿರುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಪಾಶ್ಚಿಮಾತ್ಯ ವಲಯದಲ್ಲಿ ಐಎಎಫ್ ವಿಮಾನ ಪತನಗೊಂಡಿದೆ. ಪೈಲಟ್ ಅಭಿನವ್ ಚೌಧರಿ ಅವರಿಗೆ ಮಾರಣಾಂತಿಕ ಗಾಯಗಳಾಗಿದ್ದು, ಮೃತಪಟ್ಟಿದ್ದಾರೆ. ಅಭಿನವ್ ದುರಂತ ಸಾವಿನಿಂದ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಇಂಡಿಯನ್ ಏರ್ ಫೋರ್ಸ್ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದೆ.

    ಈ ವರ್ಷದಲ್ಲಿ ಇದು ಮೂರನೇಯ ಘಟನೆಯಾಗಿದ್ದು, ಈ ಅವಘಡಕ್ಕೆ ನಿಖರ ಕಾರಣ ಏನು ಎಂಬುದು ತನಿಖೆಯ ಬಳಿಕಷ್ಟೇ ತಿಳಿದುಬರಬೇಕಿದೆ.

  • ಟೇಕಾಫ್ ಆದ ಕೆಲವೇ ಕ್ಷಣದಲ್ಲಿ 100 ಪ್ರಯಾಣಿಕರಿದ್ದ ವಿಮಾನ ಪತನ

    ಟೇಕಾಫ್ ಆದ ಕೆಲವೇ ಕ್ಷಣದಲ್ಲಿ 100 ಪ್ರಯಾಣಿಕರಿದ್ದ ವಿಮಾನ ಪತನ

    ನೂರ್ ಸುಲ್ತಾನ್: ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನವೊಂದು ಕಟ್ಟಡಕ್ಕೆ ಡಿಕ್ಕಿ ಹೊಡೆದು 14 ಸಾವನ್ನಪ್ಪಿದ ದುರಂತ ಕಝಾಕಿಸ್ತಾನದ ಅಲ್ಮಾಟಿ ಪ್ರದೇಶದಲ್ಲಿ ಸಂಭವಿಸಿದೆ.

    ಸುಮಾರು 100 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಕಝಾಕಿಸ್ತಾನದ ಅಲ್ಮಾಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೂರ್ ಸುಲ್ತಾನ್‍ಗೆ ಹೊರಟಿತ್ತು. 95 ಪ್ರಯಾಣಿಕರು ಹಾಗೂ 5 ಮಂದಿ ವಿಮಾನ ಸಿಬ್ಬಂದಿಯನ್ನು ಹೊತ್ತು ಈ ವಿಮಾನ ನೂರ್ ಸುಲ್ತಾನ್‍ಗೆ ಹೊರಟಿತ್ತು. ಆದರೆ ಏರ್‌ಪೋರ್ಟ್‌ನಿಂದ ವಿಮಾನ ಟೇಕಾಪ್ ಆದ ಕೆಲವೇ ಕ್ಷಣದಲ್ಲಿ ಈ ದುರ್ಘಟನೆ ಘಟಿಸಿದೆ.

    ಏರ್‌ಪೋರ್ಟ್‌ ಸಮೀಪವಿದ್ದ ಎರಡು ಅಂತಸ್ತಿನ ಕಟ್ಟಡಕ್ಕೆ ವಿಮಾನ ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜೊತೆಗೆ 22ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಗಾಯಗೊಂಡವರನ್ನು ವಿಮಾನ ನಿಲ್ದಾಣದ ಆಸ್ಪತ್ರೆಗೆ ರವಾನಿಸಲಾಗಿದೆ.

    ಪೈಲೆಟ್ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಆದರೆ ವಿಮಾನ ಪತನಕ್ಕೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಸದ್ಯ ಸ್ಥಳಕ್ಕೆ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.

    ಈ ಅಪಘಾತದಲ್ಲಿ ವಿಮಾನವು ಎರಡು ಭಾಗವಾಗಿದದ್ದು, ಅರ್ಧದಷ್ಟು ಕಟ್ಟಡ ನೆಲಸಮವಾಗಿದೆ. ಈ ಬಗ್ಗೆ ಕಝಾಕಿಸ್ತಾನ ಅಧ್ಯಕ್ಷ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಈ ಅಪಘಾತಕ್ಕೆ ಕಾರಣರಾದ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ಆಗುತ್ತದೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

  • ಚಿತ್ರದುರ್ಗದಲ್ಲಿ  ಡಿಆರ್‌ಡಿಒ ಡ್ರೋನ್  ಪತನ

    ಚಿತ್ರದುರ್ಗದಲ್ಲಿ ಡಿಆರ್‌ಡಿಒ ಡ್ರೋನ್ ಪತನ

    ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜೋಡಿ ಚಿಕ್ಕೇನಹಳ್ಳಿ ಬಳಿಯ ಜಮೀನೊಂದರಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಪರೀಕ್ಷಾರ್ಥ ಹಾರಿಸಿದ್ದ  ರುಸ್ತುಂ-2 ಹೆಸರಿನ ಡ್ರೋನ್ ಪತನಗೊಂಡಿದೆ.

    ರುಸ್ತುಂ -2 ಮಾನವರಹಿತ ವೈಮಾನಿಕ ವಾಹನ (ಯುಎವಿ) ಆಗಿದ್ದು  ಜಿಲ್ಲೆಯ ಕುದಾಪುರ ಬಳಿ ಡಿಆರ್‌ಡಿಒ ಸಂಸ್ಥೆ ಪರೀಕ್ಷಾರ್ಥವಾಗಿ ಹಾರಿಸಿತ್ತು. ಆದರೆ ನಿಯಂತ್ರಣ ಕಳೆದುಕೊಂಡ ಡ್ರೋನ್ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಜೋಡಿ ಚಿಕ್ಕೇನಹಳ್ಳಿ ಬಳಿಯ ಜಮೀನಿನಲ್ಲಿ ನೆಲಕ್ಕಪ್ಪಳಿಸಿದೆ.

    ಡಿಆರ್‌ಡಿಒ ಚಳ್ಳಕೆರೆ ಏರೋನಾಟಿಕಲ್ ಟೆಸ್ಟ್ ರೇಂಜ್‍ನಲ್ಲಿ(ಎಟಿಆರ್) ರುಸ್ತುಂ 2  ಹೊರಾಂಗಣ ಪರೀಕ್ಷೆ ಮತ್ತು ಮೌಲ್ಯಮಾಪನ ನಡೆಯುತಿತ್ತು.

    ಈ ಬಗ್ಗೆ ಚಿತ್ರದುರ್ಗ ಎಸ್‍ಪಿ ಅವರು ಮಾತನಾಡಿ, ಡಿಆರ್‌ಡಿಒ  ಪರೀಕ್ಷೆ ಮಾಡಲು ಯುಎವಿಯನ್ನು ಹಾರಿಸಿತ್ತು. ಆದರೆ ನಿಯಂತ್ರಣ ಕಳೆದುಕೊಂಡು ಅದು ಜಮೀನಿನಲ್ಲಿ ಪತನಗೊಂಡಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ, ಡ್ರೋನ್ ನೆಲಕ್ಕಪ್ಪಳಿಸಿದ ಬಳಿಕ ಜನರು ಅದನ್ನು ಕೂತುಹಲದಿಂದ ನೋಡಲು ಬಂದಿದ್ದರು ಎಂದರು.

    ಸದ್ಯ ಸ್ಥಳಕ್ಕೆ ಪೊಲೀಸರು ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಅಲ್ಲದೆ ನೆರೆದಿದ್ದ ಜನರನ್ನು ಅಲ್ಲಿಂದ ಕಳುಹಿಸಿದ್ದಾರೆ ಎಂದು ಹೇಳಿದರು.

  • ಖಾಸಗಿ ತರಬೇತಿ ವಿಮಾನ ಪತನ – ಆರು ಮಂದಿ ಬಚಾವ್

    ಖಾಸಗಿ ತರಬೇತಿ ವಿಮಾನ ಪತನ – ಆರು ಮಂದಿ ಬಚಾವ್

    ಲಕ್ನೋ: ಲ್ಯಾಂಡಿಂಗ್ ಸಮಯದಲ್ಲಿ ಚಕ್ರಕ್ಕೆ ವಿದ್ಯುತ್ ವಯರ್ ಸಿಕ್ಕಿಹಾಕಿಕೊಂಡ ಪರಿಣಾಮ ಖಾಸಗಿ ತರಬೇತಿ ವಿಮಾನ ಪತನಗೊಂಡಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ 6 ಮಂದಿ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಧಾನಿಪುರ ವಾಯುನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ. ಇಂದು ಬೆಳಗ್ಗೆ ವಾಯುನೆಲೆಯಲ್ಲಿ ವಿಟಿ-ಎವಿವಿ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಚಕ್ರಗಳಿಗೆ ವಿದ್ಯುತ್ ವಯರ್‌ಗಳು ಸಿಕ್ಕಿಹಾಕಿಕೊಂಡ ಪರಿಣಾಮ ವಿಮಾನ ಪತನವಾಗಿದೆ.

    ನಿರ್ವಹಣೆ ಸಂಬಂಧ ವಿಮಾನವನ್ನು ಧಾನಿಪುರದಲ್ಲಿ ಲ್ಯಾಂಡಿಂಗ್ ಮಾಡಲಾಗುತ್ತಿತ್ತು. ವಿಮಾನ ಪತನಗೊಂಡ ಬಳಿಕ ಅದರಲ್ಲಿ ಇದ್ದವರು ವಿಮಾನದಿಂದ ಹೇಗೋ ಹೊರಬಂದಿದ್ದಾರೆ. ನಂತರ ಕೆಲ ನಿಮಿಷಗಳಲ್ಲಿಯೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಸುಟ್ಟುಹೋಗಿದೆ. ಈ ಬಗ್ಗೆ ತಿಳಿದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

  • ಕಾಂಗ್ರೆಸ್ ನಾಯಕರೇ ನಮ್ಮನ್ನು ಪ್ರಚೋದಿಸಿ ರಾಜೀನಾಮೆ ಕೊಡಿಸಿದ್ದು: ಮುನಿರತ್ನ

    ಕಾಂಗ್ರೆಸ್ ನಾಯಕರೇ ನಮ್ಮನ್ನು ಪ್ರಚೋದಿಸಿ ರಾಜೀನಾಮೆ ಕೊಡಿಸಿದ್ದು: ಮುನಿರತ್ನ

    ಬೆಂಗಳೂರು: ಅನರ್ಹತೆ ನಮಗೆ ತಿಳಿದಿರುವ ವಿಷಯವೇ, ಕಾಂಗ್ರೆಸ್ ನಾಯಕರು ನಮಗೆ ಮೊದಲೇ ಈ ಬಗ್ಗೆ ತಿಳಿಸಿದ್ದರು. ಅನರ್ಹತೆಯ ಶಿಕ್ಷಯನ್ನೇ ನೀಡುತ್ತೇವೆಂದು ಮೊದಲೇ ಬರೆದು ಬಿಟ್ಟಿದ್ದರು. ಅದು ಇವತ್ತು ಆಗಿದೆ ಅಷ್ಟೇ, ಹೀಗಾಗಿ ನಮಗೆ ಸ್ಪೀಕರ್ ಅನರ್ಹತೆ ನಿರ್ಧಾರ ಆಶ್ಚರ್ಯ ಎನ್ನಿಸುತ್ತಿಲ್ಲ ಎಂದು ರೆಬೆಲ್ ಶಾಸಕ ಮುನಿರತ್ನ ಹೇಳಿದ್ದಾರೆ.

    ಸ್ಪೀಕರ್ ಅನರ್ಹತೆ ನಿರ್ಧಾರದ ಕುರಿತು ಪಬ್ಲಿಕ್ ಟಿವಿ ಜೊತೆ ಮುಂಬೈನಿಂದ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಕೇವಲ ಮೇಲ್ನೋಟಕ್ಕೆ ನೀವು ರಾಜೀನಾಮೆ ನೀಡಿ ಹೋದರೆ, ಅನರ್ಹ ಮಾಡುತ್ತೇವೆ. ನಿಮ್ಮನ್ನು ಬಿಡಲ್ಲ ಎಂದು ಹೇಳಿದ್ದಾರೆ. ಇದು ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ, ದೇವೇಗೌಡರನ್ನು ಮೆಚ್ಚಿಸಲು ಮಾಡಿದ ಕೆಲಸ. ಮೈತ್ರಿ ಸರ್ಕಾರ ರಚನೆಯಾದ ಮೂರು ತಿಂಗಳಿಂದಲೇ ಬೀಳಿಸುವ ಕೆಲಸ ಪ್ರಾರಂಭವಾಗಿತ್ತು. ಈ ಹಿಂದೆ ದೇವೇಗೌಡರು ರಾಹುಲ್ ಗಾಂಧಿ ಅವರಿಗೆ ಯಾಕೆ ದೂರು ನೀಡಿದ್ದು, ಕುಮಾರಸ್ವಾಮಿ ಅವರು ನೆಮ್ಮದಿಯಿಂದ ಆಡಳಿತ ನಡೆಸಲು ಬಿಟ್ಟಿಲ್ಲ. ಒಂದೆಡೆ ಬಳ್ಳಾರಿಯವರು. ಇನ್ನೊಂದೆಡೆ ಕೋಲಾರದವರು ಓಡಿ ಹೋಗುತ್ತಾರೆ. ಹೀಗೆ ಬರೀ ಓಡಿ ಹೋಗುವವರನ್ನು ಹಿಡಿದು ತಂದು ಸಮಾಧಾನ ಮಾಡುವುದೇ ಕುಮಾರಸ್ವಾಮಿಯವರ ಕೆಲಸವಾಗಿತ್ತು ಎಂದು ಹರಿಹಾಯ್ದರು.

    ಮೊದಲನೇಯದು ಇವರಿಬ್ಬರು ಮೈತ್ರಿ ಸರ್ಕಾರ ರಚಿಸಿದ್ದೇ ತಪ್ಪು. ಐದು ವರ್ಷ ಮುಖ್ಯಮಂತ್ರಿ ನೀವೆ ಎಂದು ಹೇಳಿದಾಗ ಕಾಂಗ್ರೆಸ್‍ನವರು ವಿಶ್ವಾಸದಿಂದ ಈ ಮಾತನ್ನು ಹೇಳುತ್ತಿದ್ದಾರಾ ಎಂದು ಜೆಡಿಎಸ್‍ನವರು ಯೋಚಿಸಬೆಕಿತ್ತು. ಕಾಂಗ್ರೆಸ್‍ನವರು ಬಂದರೆಂದು ಇವರು ಆತುರದಿಂದ ನಿರ್ಧಾರ ತೆಗೆದುಕೊಂಡರು. ಸರಿ ಎಂದು ಇವರು ಸುಮ್ಮನಾದರು. ಆದರೆ, ಮೂರು ತಿಂಗಳ ನಂತರ ಸರ್ಕಾರ ಕೆಡವಲು ಪ್ರಯತ್ನ ಶುರುವಾಗಿತ್ತು ಎಂದು ಗುಟ್ಟನ್ನು ಬಿಚ್ಚಿಟ್ಟರು.

    ಸುದ್ದಿಗೋಷ್ಠಿ ನಡೆಸ್ತೀವಿ: ಈ ಪ್ರಯತ್ನವನ್ನು ಎಳೆದುಕೊಂಡು ಬಂದು ಲೋಕಸಭಾ ಚುನಾವಣೆಯವರೆಗೆ ತಂದರು. ಲೋಕಸಭಾ ಚುನಾವಣೆ ನಂತರ ಸರ್ಕಾರ ಕೆಡವಲೇಬೇಕೆಂದು ಸಾಕಷ್ಟು ಸಾರಿ ಕಾಂಗ್ರೆಸ್ ನಾಯಕರೇ ಸಭೆ ನಡೆಸಿದ್ದಾರೆ. ಕುಮಾರಸ್ವಾಮಿಯವರನ್ನು ತೆಗೆಯಬೇಕೆಂದು ಪ್ರಯತ್ನ ಮಾಡಿದವರೇ ಕಾಂಗ್ರೆಸ್ ನಾಯಕರು. ಇದೀಗ ಕುಮಾರಸ್ವಾಮಿಯವರ ಮೇಲೆ ಪ್ರೀತಿ, ಅಭಿಮಾನ ಉಕ್ಕಿ ಹರಿಯುತ್ತಿದೆ. ಯಾವ ನಾಯಕರು ಕೆಡವಲು ಪ್ರಯತ್ನಿಸಿದ್ದಾರೆ ಎಂಬುದನ್ನು ಬೆಂಗಳೂರಿಗೆ ಆಗಮಿಸಿದಾಗ ಎಲ್ಲ ಅತೃಪ್ತ ಶಾಸಕರು ಸೇರಿ ಸುದ್ದಿಗೋಷ್ಠಿ ನಡೆಸಿ ಹೇಳುತ್ತೇವೆ ಎಂದರು.

    ಮಾಧ್ಯಮಗಳ ಮುಂದೆ ಪ್ರೀತಿ: ನಾವು ರಾಜೀನಾಮೆ ನೀಡಲು ಪ್ರಚೋದಿಸಿದವು ಯಾರು, ನಾವು ತೆರಳಲು ಪ್ರಚೋದನೆ ನೀಡಿದ್ದೇ ಕಾಂಗ್ರೆಸ್ ನಾಯಕರು. ಇಲ್ಲವೆ ನಮಗೇನು ಹುಚ್ಚು ಹಿಡಿದಿತ್ತಾ, ನಮಗೆ ಸರ್ಕಾರದಲ್ಲಿ ಕೆಲಸ ಮಾಡಿ ಕೊಟ್ಟಿಲ್ಲ ಎಂಬ ಅಸಮಾಧಾನ ಇದ್ದದ್ದು ನಿಜ. ಇಲ್ಲೂ ನೆಮ್ಮದಿ ಇಲ್ಲ, ಅಲ್ಲೂ ಕೆಲಸ ಆಗುತ್ತಿರಲಿಲ್ಲ ಹೀಗಾಗಿ ಶಾಸಕರು ಬೇಸತ್ತಿದ್ದರು. ಅಲ್ಲದೆ, ಏನೇ ಮಾಡಿದ್ದರೂ ಸರ್ಕಾರ ಇನ್ನು ಎರಡು ತಿಂಗಳು ಸಹ ಇರುತ್ತಿರಲಿಲ್ಲ. ಇವರಿಬ್ಬರ ಮಧ್ಯದಲ್ಲಿ ನಾವೇಕೆ ಹಾಳಾಗಬೇಕಿತ್ತು. ಕನಿಷ್ಟ ಪಕ್ಷ ಸರ್ಕಾರ ರಚನೆಯಾಗಿದೆ ಎಂದು ಹೇಗೋ ಕೆಲಸ ಮಾಡಬಹದಿತ್ತು. ಆದರೆ, ದಿನವೂ ಇವರ ಜಗಳ, ಮುಸುಕಿನ ಗುದ್ದಾಟ. ಒಳಗಡೆ ಇಬ್ಬರಿಗೂ ದ್ವೇಷ ಇತ್ತು ಕೇವಲ ಮಾಧ್ಯಮದವರ ಮುಂದೆ ಪ್ರೀತಿ ತೋರಿಸುತ್ತಿದ್ದರು. ಇಬ್ಬರ ನಡುವೆ ಬೆಂಕಿ ಕಡ್ಡಿ ಗೀರಿದ್ದರೆ ಬೆಂಕಿ ಹೊತ್ತಿಕೊಳ್ಳುತ್ತಿತ್ತು ಅಷ್ಟು ದ್ವೇಷವಿತ್ತು. ಹೊರಗಡೆ ಮಾತ್ರ ಪ್ರೀತಿ ತೋರಿಸುತ್ತಿದ್ದರು ಎಂದು ಮೈತ್ರಿ ಸರ್ಕಾರದ ಮುಸುಕಿನ ಗುದ್ದಾಟದ ಕಹಾನಿಯನ್ನು ಬಿಚ್ಚಿಟ್ಟರು.

    ಒಳಗೊಳಗೆ ಖುಷಿ: ಕಾಂಗ್ರೆಸ್ ನಾಯಕರು ಮೈತ್ರಿ ಸರ್ಕಾರವನ್ನು ತೆಗೆಯಬೇಕಿತ್ತು. ತಗೆದಾಗಿದೆ. ಇದನ್ನು ಈಗ ನಮ್ಮ ತಲೆಗೆ ಕಟ್ಟುತ್ತಿದ್ದಾರೆ. ಒಳಗೊಳಗೆ ಅವರಿಗೆ ಖುಷಿ ಇದೆ. ಈಗ ನಮ್ಮ ಮೇಲೆ ಕ್ರಮ ಜರುಗಿಸದಿದ್ದರೆ ಜನ ಬೇರೆ ರೀತಿ ಅರ್ಥೈಸುತ್ತಾರೆ. ಪ್ರಚೋದನೆ ಮಾಡಿ ಕಳುಹಿಸಿ, ನಮ್ಮ ಮೇಲೆ ಕ್ರಮ ಜರುಗಿಸಿ, ಅವರ ಮೇಲೆ ತಪ್ಪು ಬರದಂತೆ ನಾಟವಾಡಿದ್ದಾರೆ ಎಂದು ಹರಿಹಾಯ್ದರು.

    ದೇವರ ಮೇಲೆ ನಂಬಿಕೆ ಇಟ್ಟಿದ್ದೇವೆ. ಕ್ಷೇತ್ರದಲ್ಲಿ ಕೆಲಸ ಮಾಡಿ ನಾವೆಲ್ಲ ಶಾಸಕರಾಗಿದ್ದೇವೆ. ಹೀಗಾಗಿ ಯಾರು ಕರೆದರೂ ಹೋಗುತ್ತೇವೆ. ನಾವು ರಾಜೀನಾಮೆ ನೀಡಲು ಕಾರಣಗಳೇನು? ಪ್ರಚೋದನೆ ನೀಡಿದವರರು ಯಾರು? ಬೆಳಗಾವಿಯಲ್ಲಿ ಮೊದಲು ಗಲಾಟೆ ಶುರುವಾಗಿತ್ತು. ಅದನ್ನು ಆಗಲೇ ಸ್ವಚ್ಛಗೊಳಿಸಿದ್ದರೆ ಎಲ್ಲವೂ ಸರಿ ಹೋಗುತಿತ್ತು. ಅಲ್ಲಿನ ಕಿಡಿ ಬೆಂಗಳೂರಿಗೆ ಆವರಿಸಿ ನಮ್ಮನ್ನು ಹೊರ ಹೋಗುವಂತೆ ಮಾಡಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮನ್ನು ಈಗ ಕೇಳುವವರು ಯಾರೂ ಇಲ್ಲ. ಆದರೂ ನಾವು ಸದ್ಯದಲ್ಲೇ ಬೆಂಗಳೂರಿಗೆ ಬರುತ್ತೇವೆ. ಬಂದು ನಮ್ಮ ಈ ಸ್ಥಿತಿಗೆ ಕಾರಣ ಯಾರು ಎಂಬುದನ್ನು ತಿಳಿಸುತ್ತೇವೆ ಎಂದರು.