Tag: ಪಡ್ಡೆಹುಲಿ

  • ಪ್ರೇಮ ಲೋಕಕ್ಕೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಕೊಟ್ಟ ಪಡ್ಡೆಹುಲಿ ಚಿತ್ರ ತಂಡ

    ಪ್ರೇಮ ಲೋಕಕ್ಕೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಕೊಟ್ಟ ಪಡ್ಡೆಹುಲಿ ಚಿತ್ರ ತಂಡ

    ಬೆಂಗಳೂರು: ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಅಭಿನಯಿಸಿರುವ ಪಡ್ಡೆಹುಲಿ ಚಿತ್ರ ತಂಡ ಪ್ರೇಮ ಲೋಕಕ್ಕೆ ವ್ಯಾಲೆಂಟೆನ್ಸ್ ಡೇಗೆ ಹಾಡನ್ನು ಬಿಡುಗಡೆ ಮಾಡುವ ಮೂಲಕ ಭರ್ಜರಿ ಗಿಫ್ಟ್ ಕೊಟ್ಟಿದೆ.

    ‘ಒಂದು ಮಾತಲಿ ನೂರು ಹೇಳಲೇ’ ಎಂದಿರುವ ಶ್ರೇಯಸ್ ಹಾಗೂ ನಟಿ ನಿಶ್ವಿಕಾ ನಾಯ್ಡು ಜೋಡಿ ಮುದ್ದಾಗಿ ಹಾಡಿನಲ್ಲಿ ಕಾಣಿಸುತ್ತಿದ್ದು, ಪ್ರೇಮಿಗಳ ದಿನದ ಸಂಭ್ರಮಕ್ಕೆ ಯುವ ಜನತೆಗೆ ಅತ್ಯತ್ತಮ ಗಿಫ್ಟ್ ಎನ್ನಬಹುದು. ಕಾಲೇಜಿನಲ್ಲಿ ಹುಡುಗಿಯ ಹಿಂದೆ ಸುತ್ತುವ ಪ್ರೇಮಿಯ ದೃಶ್ಯಗಳಲ್ಲಿ ಶ್ರೇಯಸ್ ಇಷ್ಟವಾಗುತ್ತಾರೆ.

    ಹಾಡಿಗೆ ನಾಗರ್ಜುನ ಶರ್ಮಾ ಅವರು ಸಾಹಿತ್ಯ ಬರೆದಿದ್ದು, ಸರಿಗಮಪ ಖ್ಯಾತಿಯ ಸಂಜೀತ್ ಹೆಗ್ಡೆ ಧ್ವನಿ ಕೇಳುಗರಿಗೆ ಇಷ್ಟವಾಗಿದ್ದು, ಮತ್ತೆ ಕೇಳಬೇಕೆನಿಸುತ್ತದೆ. ಹಾಡು ಪೂರ್ಣಗೊಂಡರು ಕೂಡ ಕೇಳುಗ ಅದೇ ಗುಂಗಿನಲ್ಲಿ ಇರುವಂತೆ ಮಾಡಲು ಸಂಜೀತ್ ಹೆಗ್ಡೆ ಯಶಸ್ವಿಯಾಗಿದ್ದಾರೆ. ಇನ್ನು ಹಾಡಿನ ಆರಂಭದಲ್ಲಿ ಸ್ಯಾಂಡಲ್‍ವುಡ್ ನ ಹಲವು ನಟಿಯರು ಚಿತ್ರಕ್ಕೆ ಶುಭಕೋರಿದ್ದು, ಹಾಡನ್ನು ಕೇಳಿ ಭರ್ಜರಿ ಯಶಸ್ಸು ಕಾಣುತ್ತದೇ ಎಂದಿದ್ದಾರೆ. ಈ ಮೊದಲು ಹೇಳಿದಂತೆ ಪ್ರೇಮ ಪರೀಕ್ಷೆಯನ್ನ ಯಶಸ್ವಿಯಾಗಿ ಬೇಕಾದ ಅಮೂಲ್ಯ ಟಿಪ್ಸ್ ಗಳನ್ನೂ ನಟಿಯರ ಮೂಲಕ ನೀಡಿದ್ದಾರೆ.

    ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ನಿರ್ಮಾಪಕ ಕೆ.ಮಂಜುರವರ ಪುತ್ರನನ್ನು ನಾಯಕ ನಟನಾಗಿ ಸ್ಯಾಂಡಲ್‍ವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ತನ್ನದೇ ಆದ ವಿಭಿನ್ನ ಚಾಪನ್ನು ಸ್ಯಾಂಡಲ್‍ವುಡ್ ನಲ್ಲಿ ಮೂಡಿಸಿದು, ಈ ಹಿಂದೆ ಬಿಡುಗಡೆಯಾಗಿದ್ದ ಹುಲಿ ಹುಲಿ ಹಾಗೂ ಹಾಡು ಕೂಡ ಕೇಳುಗರ ಮನ ಗೆದ್ದಿತ್ತು.

    ವಿಭಿನ್ನ ಲುಕ್, ಪೋಸ್ಟರ್, ಹಾಡುಗಳ ಮೂಲಕ ಸಿನಿ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಹುಟ್ಟು ಹಾಕಲು ಚಿತ್ರ ತಂಡ ಯಶಸ್ವಿಯಾಗಿದ್ದು, ನೋಡುವರು ಸಿನಿಮಾ ಡಿಫರೆಂಟ್ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಚಿತ್ರಕ್ಕೆ ಎಂ.ರಮೇಶ್ ರೆಡ್ಡಿ(ನಂಗ್ಲಿ) ಬಂಡವಾಳ ಹೂಡಿದ್ದು, ಗುರು ದೇಶಪಾಂಡೆ ಅವರದ್ದೇ ನಿರ್ದೇಶನವಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪ್ರೇಮಪಾಠ ಹೇಳಲಿದೆ ಪಡ್ಡೆಹುಲಿ ಹಾಡು!

    ಪ್ರೇಮಪಾಠ ಹೇಳಲಿದೆ ಪಡ್ಡೆಹುಲಿ ಹಾಡು!

    ಬೆಂಗಳೂರು: ಇನ್ನೇನು ವಾರ ಕಳೆದರೆ ಪ್ರೇಮಿಗಳ ದಿನ ಬರುತ್ತೆ. ತುಸು ಕಂಪಿಸುತ್ತಲೇ ಅದೆಷ್ಟೋ ಯುವ ಮನಸುಗಳು ಆ ದಿನದ ಪ್ರೇಮ ಪರೀಕ್ಷೆಗೆ ತಯಾರಾಗುತ್ತಿವೆ. ಇಂಥಾ ಯಾವ ಭಯವೂ ಇಲ್ಲದೇ ಯಶಸ್ವಿಯಾಗಿ ಉತ್ತಮ ಶ್ರೇಣಿಯೊಂದಿಗೇ ಈ ಪರೀಕ್ಷೆ ಪಾಸು ಮಾಡಬಹುದಾದ ಸೂತ್ರವೊಂದನ್ನು ಪಡ್ಡೆಹುಲಿ ಹಾಡು ಹೊತ್ತು ತರುತ್ತಿದೆ. ಪ್ರೇಮಿಗಳಿಗೆಂದೇ ತಯಾರಾಗಿರೋ ಈ ಹಾಡಿನ ಮೂಲಕ ಪಡ್ಡೆಹುಲಿಯ ಪ್ರೇಮ ಪಾಂಡಿತ್ಯವೂ ಜಾಹೀರಾಗಲಿದೆ.

    ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಎಂಬಂಥಾ ಈ ಹಾಡನ್ನು ಇದೇ ಫೆಬ್ರವರಿ 11ರಂದು ಸಂಜೆ 7 ಘಂಟೆಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ವೀಡಿಯೋ ಸಾಂಗ್ ಪ್ರೇಮ ಪರೀಕ್ಷೆಯನ್ನ ಯಶಸ್ವಿಯಾಗಿ ಎದುರಿಸೋ ಸೂತ್ರಗಳು, ಅಮೂಲ್ಯವಾದ ಟಿಪ್ಸ್ ಗಳನ್ನೂ ಹೊಂದಿದೆಯಂತೆ.

    ಇದು ನಿರ್ದೇಶಕ ಗುರುದೇಶಪಾಂಡೆಯವರ ಬತ್ತಳಿಕೆಯಿಂದ ಹೊರ ಬರುತ್ತಿರುವ ಮತ್ತೊಂದು ಬಾಣ. ಇದೊಂಥರಾ ಪ್ರತೀ ಯುವ ಮನಸುಗಳನ್ನು ನೇರವಾಗಿ ತಲುಪುವಂಥಾ ಪ್ರೇಮ ಬಾಣವೂ ಹೌದು. ಈಗಾಗಲೇ ಹಾಡುಗಳ ಮೂಲಕ ಪಡ್ಡೆಹುಲಿ ಯುವ ಮನಸುಗಳನ್ನ ಆವರಿಸಿಕೊಂಡಿದೆ. ಈ ಕಾರಣದಿಂದಲೇ ಈ ವರೆಗೆ ಬಿಡುಗಡೆಯಾಗಿರೋ ಎರಡು ಹಾಡುಗಳು ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್‍ನಲ್ಲಿವೆ.

    ಪ್ರೇಮಿಗಳಿಗೆ ಗಿಫ್ಟ್ ಎಂಬಂತೆ ಬಿಡುಗಡೆಗೆ ರೆಡಿಯಾಗಿರೋ ಹಾಡೂ ಕೂಡಾ ಅಂಥಾದ್ದೇ ಕಮಾಲ್ ಸೃಷ್ಟಿಸೋ ಭರವಸೆ ಚಿತ್ರತಂಡದಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪಡ್ಡೆಹುಲಿ ಹಾಡು ಕೇಳಿ ಭೇಷ್ ಅಂದ್ರು ಡಿ ಬಾಸ್!

    ಪಡ್ಡೆಹುಲಿ ಹಾಡು ಕೇಳಿ ಭೇಷ್ ಅಂದ್ರು ಡಿ ಬಾಸ್!

    ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರದ ಹಾಡೀಗ ಎಲ್ಲೆಂದರಲ್ಲಿ ಹರಿದಾಡುತ್ತಾ ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿದೆ. ವಿಷ್ಣುವರ್ಧನ್ ಅವರಿಗೆ ಅರ್ಪಿಸಿರೋ ನಾ ತುಂಬಾ ಹೊಸಬ ಬಾಸು ಎಂಬ ಹಾಡು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಲಕ್ಷ ಲಕ್ಷ ವೀವ್ಸ್ ಪಡೆದುಕೊಂಡು ಟ್ರೆಂಡಿಂಗ್ ನಲ್ಲಿದೆ. ಇದೇ ಖುಷಿಯಲ್ಲಿ ಮಿಂದೇಳುತ್ತಿದ್ದ ಚಿತ್ರತಂಡಕ್ಕೆ ಮತ್ತೊಂದು ಸಂತಸವೂ ಕೈ ಹಿಡಿದಿದೆ. ಅದಕ್ಕೆ ಕಾರಣವಾಗಿರೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಈ ಹಾಡಿನ ಬಗ್ಗೆ ವ್ಯಕ್ತಪಡಿಸಿರೋ ಮೆಚ್ಚುಗೆ!

    ಅತ್ತ ಯೂಟ್ಯೂಬ್ ನಲ್ಲಿ ಸದರಿ ಹಾಡು ಟ್ರೆಂಡ್ ಕ್ರಿಯೇಟ್ ಮಾಡುತ್ತಲೇ ಇತ್ತ ದರ್ಶನ್ ಅವರು ಇದನ್ನು ಕೊಂಡಾಡಿದ್ದಾರೆ. ನಾಯಕನಾಗಿ ಶ್ರೇಯಸ್ ಹಾಕಿರೋ ಎಫರ್ಟ್ ಬಗ್ಗೆಯೂ ಮನದುಂಬಿ ಮೆಚ್ಚುಗೆ ಸೂಚಿಸಿದ್ದಾರೆ.

    ಈ ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಂದಿರೋ ದರ್ಶನ್, ಚಿತ್ರರಂಗಕ್ಕೆ ಅನೇಕರು ಬರುತ್ತಾರೆ. ಆದರೆ ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನೂ ಮಾಡಿಕೊಂಡು ಅಖಾಡಕ್ಕಿಳಿಯುವವರು ಕಡಿಮೆ. ಆದರೆ ಕೆ.ಮಂಜು ಅವರ ಪುತ್ರ ಶ್ರೇಯಸ್ ಸಂಪೂರ್ಣ ತಯಾರಿ ಮಾಡಿಕೊಂಡೇ ಬಂದಿದ್ದಾರೆ. ಅದು ಈಗಾಗಲೇ ಸ್ಪಷ್ಟವಾಗಿ ಕಾಣಿಸುತ್ತಿದೆ. ಶ್ರೇಯಸ್, ನಿರ್ದೇಶಕರಾದ ಗುರುದೇಶಪಾಂಡೆ ಸೇರಿ ಇಡೀ ಚಿತ್ರ ತಂಡಕ್ಕೆ ಒಳ್ಳೇದಾಗಲಿ. ಪಡ್ಡೆಹುಲಿ ಚಿತ್ರ ದೊಡ್ಡ ಮಟ್ಟದ ಯಶ ದಾಖಲಿಸಲಿ ಅಂತ ದರ್ಶನ್ ಹಾರೈಸಿದ್ದಾರೆ.

    ನಾ ತುಂಬಾ ಹೊಸಬ ಬಾಸು ಹಾಡಂತೂ ಈಗ ಎಲ್ಲ ಪ್ರೇಕ್ಷಕರನ್ನೂ ಮೋಡಿ ಮಾಡಿ ಮಾಡಿದೆ. ಯೂಟ್ಯೂಬ್‍ನಲ್ಲಂತೂ ಟ್ರೆಂಡಿಂಗ್ ಅನ್ನು ಈ ಕ್ಷಣದವರೆಗೂ ಕಾಯ್ದುಕೊಂಡಿದೆ. ಶ್ರೇಯಸ್ ಎನರ್ಜಿ, ಅಭಿನಯ ಮತ್ತು ಸಾಹಿತ್ಯದ ಖದರ್ ಸೇರಿದಂತೆ ಎಲ್ಲವೂ ಜನಮನ ಸೆಳೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾರ್ವಜನಿಕವಾಗಿ ಕಣ್ಣೀರಿಟ್ಟ ನಟ ದ್ವಾರಕೀಶ್

    ಸಾರ್ವಜನಿಕವಾಗಿ ಕಣ್ಣೀರಿಟ್ಟ ನಟ ದ್ವಾರಕೀಶ್

    ಬೆಂಗಳೂರು: ನಟ ಹಾಗೂ ನಿರ್ದೇಶಕ ದ್ವಾರಕೀಶ್ ತಮ್ಮ ಆತ್ಮೀಯ ಸ್ನೇಹಿತನನ್ನು ನೆನಪಿಸಿಕೊಂಡು ಸಾರ್ವಜನಿಕವಾಗಿ ಕಣ್ಣೀರಿಟ್ಟಿದ್ದಾರೆ.

    ಶನಿವಾರ ‘ಪಡ್ಡೆಹುಲಿ’ ಸಿನಿಮಾದ ಸಾಂಗ್ ಬಿಡುಗಡೆಯ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ನಟ ದ್ವಾರಕೀಶ್ ಆಗಮಿಸಿದ್ದು, ಈ ವೇಳೆ ಮಾತನಾಡವಾಗ ದಿವಂಗತ ಡಾ. ವಿಷ್ಣುವರ್ಧನ್ ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

    ಈ ವೇಳೆ ಮಾತನಾಡಿದ ದ್ವಾರಕೀಶ್ ಅವರು, ವಿಷ್ಣುವರ್ಧನ್ ಅಭಿಮಾನಿಗಳಿಗೆ ನನ್ನ ನಮಸ್ಕಾರಗಳು, ವಿಷ್ಣುವರ್ಧನ್ ಬಗ್ಗೆ ಕೊಂಡಾಡಿ, ಅವನ ಬಗ್ಗೆ ಹೇಳಿ, ಸೊಗಸಾಗಿ ಹಾಡನ್ನು ಪಡ್ಡೆಹುಲಿ ಚಿತ್ರತಂಡ ಮಾಡಿದೆ. ವಿಷ್ಣುವರ್ಧನ್ ಜೊತೆ ನಾನು ಸುಮಾರು 19 ಸಿನಿಮಾಗಳನ್ನು ಜೊತೆ ಮಾಡಿದ್ದೇನೆ. ಅವನನ್ನು ನಾನು ಮರೆಯಲು ಸಾಧ್ಯವೇ ಇಲ್ಲ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.

    ವಿಷ್ಣುವರ್ಧನ್ ಬಗ್ಗೆ ಮಾತನಾಡುವುದು ಎಂದರೆ ನನಗೆ ಬಹಳ ದುಃಖವಾಗುತ್ತದೆ. ಎಂದಿಗೂ ನಾನು ವಿಷ್ಣುವರ್ಧನ್ ಇಲ್ಲ ಅಂತ ತಿಳಿದುಕೊಂಡಿಲ್ಲ. ಇಲ್ಲೇ ನನ್ನ ಜೊತೆಯಲ್ಲೇ ಇದ್ದಾನೆ. ಈ ವೇದಿಕೆಯಲ್ಲಿ ಒಂದು ಸತ್ಯ ಹೇಳುತ್ತೇನೆ ಅಂತ ವಿಷ್ಣುವರ್ಧನ್ ನನ್ನು ನೆನಪಿಸಿಕೊಳ್ಳದ ಒಂದು ದಿನ ನನ್ನ ಜೀವನದಲ್ಲಿ ಇಲ್ಲ ಎಂದು ಹೇಳಿದ್ದಾರೆ. ಪ್ರತಿನಿತ್ಯವೂ ನೆನಪಿಸಿಕೊಳ್ಳುತ್ತೇನೆ. ವಾರಕ್ಕೆ ಒಮ್ಮೆ ನನ್ನ ಕನಸಲ್ಲಿ ಬರುತ್ತಾನೆ. ಅವನನ್ನು ಮರೆಯಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಸುಂದರ ನಟ ನನ್ನ ವಿಷ್ಣುವರ್ಧನ್ ಎಂದು ಭಾವುಕರಾಗಿ ಆನಂದದಿಂದ ದ್ವಾರಕೀಶ್ ಹೇಳಿದ್ದಾರೆ.

    ವಿಷ್ಣುವರ್ಧನ್ ನನ್ನ ಮನದಲ್ಲಿ ಸದಾ ಇರುತ್ತಾರೆ. ಕನ್ನಡ ಸಿನಿಮಾರಂಗದಲ್ಲಿ ಅದು ದ್ವಾರಕೀಶ್ 53 ಸಿನಿಮಾ ಮಾಡಿದ್ದೇನೆ ಎಂದರೆ ಅದಕ್ಕೆ ಕಾರಣ ವಿಷ್ಣುವರ್ಧನ್, ಅವನು ಯಾವತ್ತು ನನ್ನ ಬಳಿ ಬಂದು ಕಥೆ ಏನು ಅಂತ ಕೇಳುತ್ತಿರಲಿಲ್ಲ. ನಾನು ಹೇಳಿದರೆ ಸಾಕು ಅದೇ ವೇದವಾಕ್ಯ. ನಾನು ಕರೆದಾಗೆಲ್ಲ ಏನೇ ಕೆಲಸ ಇದ್ದರು ಬರುತ್ತಿದ್ದನು ಎಂದು ನೋವಿನಿಂದ ಹೇಳಿದ್ದಾರೆ.

    ಪಡ್ಡೆಹುಲಿ ಚಿತ್ರತಂಡ ಅವನಿಗಾಗಿ ಅರ್ಪಣೆ ಮಾಡಿ ಈ ಹಾಡನ್ನು ಮಾಡಿದ್ದಾರೆ. ಹಾಡು ಸೊಗಸಾಗಿ ಚೆನ್ನಾಗಿದೆ ಎಂದು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪಡ್ಡೆಹುಲಿಯಿಂದ ಬಂತು ಇಂಟ್ರಸ್ಟಿಂಗ್ ಸುದ್ದಿ- ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಿಚ್ಚ, ಅಪ್ಪು, ರಕ್ಷಿತ್ ಶೆಟ್ಟಿ!

    ಪಡ್ಡೆಹುಲಿಯಿಂದ ಬಂತು ಇಂಟ್ರಸ್ಟಿಂಗ್ ಸುದ್ದಿ- ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಿಚ್ಚ, ಅಪ್ಪು, ರಕ್ಷಿತ್ ಶೆಟ್ಟಿ!

    ಬೆಂಗಳೂರು: ಪಡ್ಡೆಹುಲಿ ಕೆ. ಮಂಜು ಪುತ್ರ ಶ್ರೇಯಸ್ ನಟನೆಯ ಚೊಚ್ಚಲ ಸಿನಿಮಾ. ರಾಜಾಹುಲಿ ಖ್ಯಾತಿಯ ಗುರುದೇಶ್‍ಪಾಂಡೆ ನಿರ್ದೇಶನದಲ್ಲಿ ಚಿತ್ರ ಅದ್ಧೂರಿಯಾಗಿ ಮೂಡಿಬರುತ್ತಿದೆ. ಇಂಟ್ರೆಸ್ಟಿಂಗ್ ಸುದ್ದಿ ಎಂದರೆ ಪಡ್ಡೆಹುಲಿಯನ್ನು ಪರಿಚಯ ಮಾಡಿಕೊಡೋದಕ್ಕೆ ಹೆಬ್ಬುಲಿ ಮನಸ್ಸು ಮಾಡಿದ್ದಾರೆ.

    ಶ್ರೇಯಸ್ ಪರಿಚಯದ ದೃಶ್ಯಕ್ಕೆ ಕಿಚ್ಚ ಸುದೀಪ್ ಧ್ವನಿಯಾಗಲಿದ್ದಾರೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಶೂಟಿಂಗ್‍ನಲ್ಲಿ ಪಾಲ್ಗೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೂಡ ಈ ಸಿನಿಮಾದಲ್ಲಿ ಇರುತ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

    ಪಡ್ಡೆಹುಲಿ ಮುಹೂರ್ತ ಸಮಾರಂಭದಲ್ಲಿ ಭಾಗಿಯಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ಕಿಚ್ಚ ಸುದೀಪ್ ಈ ಚಿತ್ರಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಕಿಚ್ಚ ಸುದೀಪ್ ಕ್ಲಾಪ್ ಮಾಡಿ ಶುಭಾಶಯ ತಿಳಿಸಿದರೆ, ಪುನೀತ್ ರಾಜ್‍ಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದ್ದರು.

    ಅದೆಷ್ಟೇ ಒತ್ತಡವಿದ್ದರೂ ಸುದೀಪ್ ಹೊಸ ಪ್ರಯತ್ನಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾರೆ. ಹಾಗೆಯೇ ಆಕರ್ಷಕವಾದ ಪಡ್ಡೆಹುಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ಬಿಡುಗಡೆಗೊಳಿಸಿದ್ದರು. ಪೋಸ್ಟರಿನಲ್ಲಿ ಹೊಸತನವನ್ನು ಹೊಮ್ಮಿಸುವಂತಿರೋ ಈ ಚಿತ್ರ ಅಂಥಾದ್ದೇ ಹೊಸತನದೊಂದಿಗೆ ಮೂಡಿ ಬಂದು ಗೆಲುವು ಕಾಣಲಿ ಅಂತ ಶುಭ ಹಾರೈಸಿದ್ದರು.

  • ಪಡ್ಡೆ ಹುಲಿ ಬರ್ತ್ ಡೇಗೆ ಸಾಂಗ್ ರಿಲೀಸ್

    ಪಡ್ಡೆ ಹುಲಿ ಬರ್ತ್ ಡೇಗೆ ಸಾಂಗ್ ರಿಲೀಸ್

    ಬೆಂಗಳೂರು: ನಟ ಶ್ರೇಯಸ್ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಬುಧವಾರ ಪಡ್ಡೆ ಹುಲಿ ಚಿತ್ರತಂಡ ಸಾಂಗ್ ರಿಲೀಸ್ ಮಾಡಿದೆ.

    ಹುಲಿ ಹುಲಿ ಎಂಬ ಹಾಡಿನಲ್ಲಿ ಆಕ್ಷನ್ ಸೀನ್‍ಗಳೇ ಹೊಂದಿದ್ದು, ವಿಭಿನ್ನ ರೀತಿಯಲ್ಲಿ ಚಿತ್ರಿಸಲಾಗಿದೆ. ಈ ಹಾಡು ನಟ ಶ್ರೇಯಸ್ ಇಂಟ್ರಡಕ್ಷನ್ ಹಾಡು ಆಗಿದ್ದು, ಹಾಡಿನಲ್ಲಿ ವಿಲನ್‍ಗಳ ಜೊತೆ ಸೆಣಸಾಡಿ ಜೊತೆಗೆ ಡ್ಯಾನ್ಸ್ ಕೂಡ ಹಾಡುತ್ತಿರುತ್ತಾರೆ. ಈ ಟೈಟಲ್ ಹಾಡಿಗಾಗಿ ಅದ್ಧೂರಿ ಸೆಟ್ ಹಾಕಿ ಈ ಹಾಡನ್ನು ಚಿತ್ರೀಕರಿಸಲಾಗಿದೆ.

    ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ನಿರ್ಮಾಪಕ ಕೆ.ಮಂಜುರವರ ಪುತ್ರ ಶ್ರೇಯಸ್ ನಾಯಕ ನಟನಾಗಿ ಸ್ಯಾಂಡಲ್ ವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇನ್ನೂ ಈ ಚಿತ್ರಕ್ಕೆ ಎಂ.ರಮೇಶ್ ರೆಡ್ಡಿ(ನಂಗ್ಲಿ) ಬಂಡವಾಳ ಹೂಡಿದ್ದು, ಗುರು ದೇಶಪಾಂಡೆ ನಿರ್ದೇಶನವಿದೆ.

    ಈ ಹಾಡಿಗೆ ಬಹದ್ದೂರ್ ಚೇತನ್ ಅವರ ಸಾಹಿತ್ಯವಿದ್ದು, ಅಜನೀಷ್ ಲೋಕನಾಥ್ ಸಂಗೀತ ನೀಡಿದ್ದಾರೆ. ಇತ್ತ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಕಂಠದಲ್ಲಿ ಹಾಡುಗಳು ಮೂಡಿಬಂದಿವೆ. ಸಿನಿಮಾದಲ್ಲಿ ಶ್ರೇಯಸ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಜೊತೆಯಾಗಿದ್ದಾರೆ.

    ಪಡ್ಡೆ ಹುಲಿ ಸಿನಿಮಾ ಸೆಟ್ಟೇರಿದಾಗಿನಿಂದಲೂ ತನ್ನದೇ ಆದ ವಿಭಿನ್ನ ಚಾಪನ್ನು ಸ್ಯಾಂಡಲ್‍ವುಡ್ ನಲ್ಲಿ ಮೂಡಿಸಿದೆ. ಸಿನಿಮಾದ ಫೋಟೋಶೂಟ್ ನಿಂದ ಹಿಡಿದು ಇಂದಿನವರೆಗೂ ಸಿನಿ ಪ್ರೇಕ್ಷಕರಲ್ಲಿ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಈ ಮೂಲಕ ಆರಂಭದಿಂದಲೂ ತಾನು ಎಲ್ಲರಗಿಂತ ಡಿಫರೆಂಟ್ ಎಂಬುದನ್ನು ಪಡ್ಡೆ ಹುಲಿ ತೋರಿಸುತ್ತಾ ಬರುತ್ತಿದೆ.

  • ಬಿಗ್‍ಬಾಸ್ ಶೋ ಗೆದ್ದು ಹೊರ ಬಂದ್ಮೇಲೆ ಮೊದಲು ಪಡ್ಡೆಹುಲಿಗೆ ಹಾಡು ಹಾಡಿದ ಚಂದನ್ ಶೆಟ್ಟಿ!

    ಬಿಗ್‍ಬಾಸ್ ಶೋ ಗೆದ್ದು ಹೊರ ಬಂದ್ಮೇಲೆ ಮೊದಲು ಪಡ್ಡೆಹುಲಿಗೆ ಹಾಡು ಹಾಡಿದ ಚಂದನ್ ಶೆಟ್ಟಿ!

    ಬೆಂಗಳೂರು: ಕನ್ನಡ ರ‍್ಯಾಪರ್ ಎಂದೇ ಖ್ಯಾತಿ ಪಡೆದಿರುವ ಚಂದನ್ ಶೆಟ್ಟಿ ಬಿಗ್‍ಬಾಸ್ ಶೋ ಗೆದ್ದು ಹೊರಗೆ ಬಂದ ನಂತರ ಮೊದಲು ಪಡ್ಡೆಹುಲಿ ಚಿತ್ರದ ಪ್ರೋಮೊ ಹಾಡನ್ನು ಹಾಡಿದ್ದಾರೆ.

    ಪಡ್ಡೆಹುಲಿ ಚಿತ್ರಕ್ಕೆ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಕ್ರೇಜ್ ಹುಟ್ಟಿಸಿರುವ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡುತ್ತಿದ್ದು, ಸದ್ಯ ಈ ಚಿತ್ರದ ಪ್ರೋಮೊ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಇದನ್ನೂ ಓದಿ: ಪುನೀತ್, ಸುದೀಪ್ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು ‘ಪಡ್ಡೆಹುಲಿ’ ಮುಹೂರ್ತ!

    ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಾದ ಕೆ.ಮಂಜು ಅವರ ಮಗ ಶ್ರೇಯಸ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಕನ್ನಡ ಭಾಷೆಯಲ್ಲಿ ಒಬ್ಬ ನಾಯಕನನ್ನು ಪರಿಚಯಿಸಲು 45 ರಿಂದ 50 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಪ್ರೋಮೊ ಶೂಟ್ ಮಾಡಲಾಗಿದೆ.

    ಈ ಹಿಂದೆ ಪಡ್ಡೆಹುಲಿ ಚಿತ್ರದ ಫಸ್ಟ್ ಲುಕ್ ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ವಿಟ್ಟರ್ ಮೂಲಕ ಅನಾವರಣಗೊಳಿಸಿದರು. ಪೋಸ್ಟರಿನಲ್ಲಿ ಹೊಸತನವನ್ನು ಹೊಮ್ಮಿಸುವಂತಿರೋ ಈ ಚಿತ್ರ ಅಂಥಾದ್ದೇ ಹೊಸತನದೊಂದಿಗೆ ಮೂಡಿ ಬಂದು ಗೆಲುವು ಕಾಣಲಿ ಎಂದು ಸುದೀಪ್ ಶುಭ ಹಾರೈಸಿದ್ದರು. ಇದನ್ನೂ ಓದಿ: ಪಡ್ಡೆ ಹುಲಿ ಹುಡುಗಿ ನಿಶ್ವಿಕಾ

    ಇತ್ತೀಚಿಗಷ್ಟೇ ಬೆಂಗಳೂರಿನ ಬನಶಂಕರಿ ಬಳಿಯ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ `ಪಡ್ಡೆಹುಲಿ’ ಚಿತ್ರದ ಶುಭ ಮುಹೂರ್ತ ನಡೆಯಿತು. `ರಾಜಹುಲಿ’, `ಜಾನ್ ಜಾನಿ ಜನಾರ್ದನ್’ ಹಾಗೂ `ಸಂಹಾರ’ ಖ್ಯಾತಿಯ ಗುರು ದೇಶ್‍ಪಾಂಡೆ ಕಲ್ಪನೆಯಲ್ಲಿ ಚಿತ್ರ ಮೂಡಿಬರಲಿದೆ. ಚಿತ್ರದಲ್ಲಿ ಶ್ರೇಯಸ್ ಗೆ ಜೊತೆಯಾಗಿ ನಿಶ್ವಿಕಾ ನಟಿಸಲಿದ್ದಾರೆ. ಇದನ್ನೂ ಓದಿ: ಕೆ. ಮಂಜು ಮಗ ಈಗ ‘ಪಡ್ಡೆ ಹುಲಿ’

    ಮುಹೂರ್ತ ಸಮಾರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ಕಿಚ್ಚ ಸುದೀಪ್ ಈ ಚಿತ್ರಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಕಿಚ್ಚ ಸುದೀಪ್ ಕ್ಲಾಪ್ ಮಾಡಿ ಶುಭಾಶಯ ತಿಳಿಸಿದರೆ, ಪುನೀತ್ ರಾಜ್‍ಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದ್ದರು. ಇದನ್ನೂ ಓದಿ: ‘ಪಡ್ಡೆಹುಲಿ’ಯ ಫಸ್ಟ್ ಲುಕ್ ರಿಲೀಸ್ ಮಾಡಿದ ಹೆಬ್ಬುಲಿ!

    ನಿರ್ಮಾಪಕ ಕೆ. ಮಂಜು ಅವರ ಆರಾಧ್ಯ ದೈವ ಸಾಹಸ ಸಿಂಹ ವಿಷ್ಣುವರ್ಧನ್ ಮಡದಿ ಭಾರತಿ ವಿಷ್ಣುವರ್ಧನ್ ದೀಪ ಹಚ್ಚಿ ಚಿತ್ರತಂಡಕ್ಕೆ ಶುಭಸಂದೇಶ ಕೊಟ್ಟರು. ಚಿತ್ರರಂಗದ ಅನೇಕ ಗಣ್ಯರು ಪಡ್ಡೆಹುಲಿ ಚಿತ್ರದ ಮುಹೂರ್ತಕ್ಕೆ ಸಾಕ್ಷಿಯಾಗಿದ್ದರು.

  • ಪುನೀತ್, ಸುದೀಪ್ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು ‘ಪಡ್ಡೆಹುಲಿ’ ಮುಹೂರ್ತ!

    ಪುನೀತ್, ಸುದೀಪ್ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು ‘ಪಡ್ಡೆಹುಲಿ’ ಮುಹೂರ್ತ!

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿರುವ `ಪಡ್ಡೆಹುಲಿ’ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ.

    ಬೆಂಗಳೂರಿನ ಬನಶಂಕರಿ ಬಳಿಯ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ `ಪಡ್ಡೆಹುಲಿ’ ಚಿತ್ರದ ಶುಭ ಮುಹೂರ್ತ ನಡೆಯಿತು. `ರಾಜಹುಲಿ’, `ಜಾನ್ ಜಾನಿ ಜನಾರ್ದನ್’ ಹಾಗೂ `ಸಂಹಾರ’ ಖ್ಯಾತಿಯ ಗುರು ದೇಶ್‍ಪಾಂಡೆ ಕಲ್ಪನೆಯಲ್ಲಿ ಚಿತ್ರ ಮೂಡಿಬರಲಿದೆ. ಚಿತ್ರದಲ್ಲಿ ಶ್ರೇಯಸ್ ಗೆ ಜೊತೆಯಾಗಿ ನಿಶ್ವಿಕಾ ನಟಿಸಲಿದ್ದಾರೆ. ಇದನ್ನೂ ಓದಿ: ಪಡ್ಡೆಹುಲಿ ನಾಯಕಿ ನಿಶ್ವಿಕಾ ಯಾರು ಗೊತ್ತೆ?

    ಮುಹೂರ್ತ ಸಮಾರಂಭದಲ್ಲಿ ಭಾಗಿಯಾದ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ಕಿಚ್ಚ ಸುದೀಪ್ ಈ ಚಿತ್ರಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಕಿಚ್ಚ ಸುದೀಪ್ ಕ್ಲಾಪ್ ಮಾಡಿ ಶುಭಾಶಯ ತಿಳಿಸಿದರೆ, ಪುನೀತ್ ರಾಜ್‍ಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದ್ರು. ಇದನ್ನೂ ಓದಿ: ಪಡ್ಡೆ ಹುಲಿಯ ಫಸ್ಟ್ ಲುಕ್ ರಿಲೀಸ್ ಮಾಡಿದ ಹೆಬ್ಬುಲಿ ಹೀಗಂದ್ರು! 

    ನಿರ್ಮಾಪಕ ಕೆ. ಮಂಜು ಅವರ ಆರಾಧ್ಯ ದೈವ ಸಾಹಸ ಸಿಂಹ ವಿಷ್ಣುವರ್ಧನ್ ಮಡದಿ ಭಾರತಿ ವಿಷ್ಣುವರ್ಧನ್ ದೀಪ ಹಚ್ಚಿ ಚಿತ್ರತಂಡಕ್ಕೆ ಶುಭಸಂದೇಶ ಕೊಟ್ಟರು. ಚಿತ್ರರಂಗದ ಅನೇಕ ಗಣ್ಯರು ಪಡ್ಡೆಹುಲಿ ಚಿತ್ರದ ಮುಹೂರ್ತಕ್ಕೆ ಸಾಕ್ಷಿಯಾದರು. ಇದನ್ನೂ ಓದಿ: ಡ್ಯೂಪ್ ಗಳಿಲ್ಲದೇ ಬೆಂಕಿಯಲ್ಲಿ ಫೋಟೋ ಶೂಟ್ ಮಾಡಿದ ಪಡ್ಡೆ ಹುಲಿ ಶ್ರೇಯಸ್! ಫೋಟೋಗಳಲ್ಲಿ ನೋಡಿ 

     

     

     

  • ‘ಪಡ್ಡೆಹುಲಿ’ಯ ಫಸ್ಟ್ ಲುಕ್ ರಿಲೀಸ್ ಮಾಡಿದ ಹೆಬ್ಬುಲಿ!

    ‘ಪಡ್ಡೆಹುಲಿ’ಯ ಫಸ್ಟ್ ಲುಕ್ ರಿಲೀಸ್ ಮಾಡಿದ ಹೆಬ್ಬುಲಿ!

    ಬೆಂಗಳೂರು: `ಪಡ್ಡೆಹುಲಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಾಯಕನಾಗಿರುವ ಪಡ್ಡೆಹುಲಿ ಫಸ್ಟ್ ಲುಕ್ ಟ್ವಿಟ್ಟರ್ ಮೂಲಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅನಾವರಣಗೊಳಿಸಿದರು.

    ಅದೆಷ್ಟೇ ಒತ್ತಡವಿದ್ದರೂ ಹೊಸ ಪ್ರಯತ್ನಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುವವರು ಸುದೀಪ್. ಅವರಿಂದು ಆಕರ್ಷಕವಾದ ಪಡ್ಡೆ ಹುಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ಬಿಡುಗಡೆಗೊಳಿಸಿದ್ದಾರೆ. ಪೋಸ್ಟರಿನಲ್ಲಿ ಹೊಸತನವನ್ನು ಹೊಮ್ಮಿಸುವಂತಿರೋ ಈ ಚಿತ್ರ ಅಂಥಾದ್ದೇ ಹೊಸತನದೊಂದಿಗೆ ಮೂಡಿ ಬಂದು ಗೆಲುವು ಕಾಣಲಿ ಅಂತ ಶುಭ ಹಾರೈಸಿದ್ದಾರೆ.

    ಎಂ ರಮೇಶ್ ರೆಡ್ಡಿ ನಿರ್ಮಾಣದ ಈ ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದಾರೆ. ಖ್ಯಾತ ನಿರ್ಮಾಪಕ ಕೆ.ಮಂಜು ಅವರ ಮಗನನ್ನು ಲಾಂಚ್ ಮಾಡುವ ಸಲುವಾಗಿ ಗುರು ದೇಶಪಾಂಡೆ ಚೇತೋಹಾರಿಯಾದ ಕಥೆಯನ್ನು ಸಿದ್ಧಪಡಿಸಿಕೊಂಡೇ ಅಖಾಡಕ್ಕಿಳಿದಿದ್ದಾರೆ. ಮಗನನ್ನು ಲಾಂಚ್ ಮಾಡೋ ವಿಚಾರದಲ್ಲಿ ಸಂಯಮದಿಂದಲೇ ವರ್ತಿಸಿ, ಅಳೆದೂ ತೂಗಿ ಈ ಪ್ರಾಜೆಕ್ಟಿಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಮಂಜು, ಈ ಚಿತ್ರದ ಮೂಲಕವೇ ಮಗನನ್ನು ನೆಲೆ ನಿಲ್ಲಿಸುವ ಪಣ ತೊಟ್ಟಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್ ಬಿಡುಗಡೆ ಮಾಡಿರುವ ಪಡ್ಡೆಹುಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಡ್ಡೆಹುಲಿಯ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ.