Tag: ಪಠ್ಯ ಪರಿಷ್ಕರಣೆ

  • ಇತಿಹಾಸ ಹೇಳಿದ್ರೆ ಕಾಂಗ್ರೆಸ್‌ನವ್ರಿಗೆ ಮೈಯೆಲ್ಲಾ ಉರಿಯುತ್ತೆ, ಜನಕ್ಕೆ ಮೊದಲು ಗ್ಯಾರಂಟಿ ಕೊಡಿ – ಸೂಲಿಬೆಲೆ ತಿರುಗೇಟು

    ಇತಿಹಾಸ ಹೇಳಿದ್ರೆ ಕಾಂಗ್ರೆಸ್‌ನವ್ರಿಗೆ ಮೈಯೆಲ್ಲಾ ಉರಿಯುತ್ತೆ, ಜನಕ್ಕೆ ಮೊದಲು ಗ್ಯಾರಂಟಿ ಕೊಡಿ – ಸೂಲಿಬೆಲೆ ತಿರುಗೇಟು

    ಬೆಂಗಳೂರು: ಕಾಂಗ್ರೆಸ್‌ನವ್ರಿಗೆ (Congress) ರಾಷ್ಟ್ರೀಯವಾದಿಗಳ ಇತಿಹಾಸ ಹೇಳಿದ್ರೆ ಮೈಯೆಲ್ಲಾ ಉರಿಯುತ್ತೆ. ಭಗತ್ ಸಿಂಗ್, ರಾಜ್‌ಗುರು, ಸಾವರ್ಕರ್ ಇತಿಹಾಸ ಕೇಳೋದಿಲ್ಲ. ರಾಷ್ಟ್ರೀಯತೆಯನ್ನ ಕಂಡರೆ ಅವರಿಗೆ ಕೋಪ, ಎಲ್ಲರೂ ಒಂದುಗೂಡುವುದು ಅವರಿಗೆ ಇಷ್ಟವಿಲ್ಲ ಎಂದು ಯುವಬ್ರಿಗೆಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ವಾಗ್ದಾಳಿ ನಡೆಸಿದ್ದಾರೆ.

    ಚಕ್ರವರ್ತಿ ಸೂಲಿಬೆಲೆ ಬರೆದಿರೋ ಪಠ್ಯ ತೆಗೆಯುತ್ತೇವೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರ ಹೇಳಿಕೆಗೆ ಸೂಲಿಬೆಲೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಬರೆದಿರೋ ಪಠ್ಯ ತೆಗೆಯುತ್ತೇವೆ: ಪ್ರಿಯಾಂಕ್ ಖರ್ಗೆ

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರಕ್ಕೆ ಪಠ್ಯಪುಸ್ತಕದ ಕೆಲಸವೇ ಆದ್ಯತೆಯ ಕೆಲಸ ಅನ್ನೋದು ಅಚ್ಚರಿಯಾಗಿಬಿಟ್ಟಿದೆ. ಪ್ರಿಯಾಂಕ್ ಖರ್ಗೆ ಅವರು ನನ್ನ ವಿದ್ಯಾರ್ಹತೆಯನ್ನ ಪ್ರಶ್ನೆ ಮಾಡಿದ್ದಾರೆ. ಜನ ಏನಾದ್ರೂ ಅವರ ವಿದ್ಯಾರ್ಹತೆ ಪ್ರಶ್ನೆ ಮಾಡಿದ್ರೆ ಕಷ್ಟ ಆಗೋದು ಅವರಿಗೇನೆ. ನನ್ನ ಬಗ್ಗೆ ಮಾತನಾಡದೇ ಇದ್ದರೆ ಒಳ್ಳೆಯದು ಎಂದು ಕುಟುಕಿದ್ದಾರೆ.

    ಪಠ್ಯಪುಸ್ತಕ ಬದಲಾವಣೆ ಮಾಡ್ತಾರೆ ಅನ್ನೋದು ಮುಂಚೆಯೇ ಗೊತ್ತಿತ್ತು. ದೇಶದ ಇತಿಹಾಸ ಮುಚ್ಚಿಡೋದು ಅವರಿಗೆ ಅಭ್ಯಾಸ ಆಗಿದೆ. ಸಿಖ್ಖರ ಹತ್ಯಾಕಾಂಡ, ತುರ್ತು ಪರಿಸ್ಥಿತಿ ಸಮಯದಲ್ಲಿ ಏನಾಯ್ತು? ಅದೆಲ್ಲವನ್ನ ಮುಚ್ಚಿಟ್ಟಿದ್ದಾರೆ. ಇತಿಹಾಸವನ್ನ ಮುಚ್ಚಿಟ್ಟು ಅದರ ಮೇಲೆ ಕೂತಿದ್ದಾರೆ. ರಾಷ್ಟ್ರೀಯವಾದಿಗಳ ಇತಿಹಾಸ ಹೇಳಿದ್ರೆ ಅವರಿಗೆ ಮೈಯೆಲ್ಲಾ ಉರಿಯುತ್ತೆ. ರಾಷ್ಟ್ರೀಯತೆ ಕಂಡರೆ ಅವರಿಗೆ ಕೋಪ, ಎಲ್ಲರೂ ಒಂದುಗೂಡುವುದು ಅವರಿಗೆ ಇಷ್ಟವಿಲ್ಲ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ವಿದ್ಯುತ್ ಸಂಪರ್ಕ ನೀಡಲು 2 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಎಇಇ

    ಮುಂದುವರಿದು, ನೀವು ಪಠ್ಯವನ್ನಾದರೂ ಬದಲಾವಣೆ ಮಾಡಿ ಪಾಠವನ್ನಾದರೂ ಮಾಡಿ, ಆದ್ರೆ ಮೊದಲು ಹೇಳಿರುವ ಗ್ಯಾರಂಟಿಗಳನ್ನ ಕೊಡಿ. ಮಕ್ಕಳು ಓದಲು 200 ಯೂನಿಟ್ ಕರೆಂಟ್ ಫ್ರೀ ಕೊಡಿ, ಮಗುವಿನ ತಾಯಿಗೆ 2,000 ಸಾವಿರ ರೂ. ಕೊಡಿ, ಮಗುವಿನ ಟೀಚರ್‌ಗೆ ಬಸ್ ಫ್ರೀ ಮಾಡಿ, ನೀವು ಹೇಳಿದ್ದ ಗ್ಯಾರೆಂಟಿಗಳನ್ನ ಯಾವುದೇ ಕಂಡಿಷನ್ ಇಲ್ಲದೇ ಜಾರಿಗೆ ತನ್ನಿ ಎಂದು ಒತ್ತಾಯಿಸಿದ್ದಾರೆ.

  • ಚಕ್ರವರ್ತಿ ಸೂಲಿಬೆಲೆ ಬರೆದಿರೋ ಪಠ್ಯ ತೆಗೆಯುತ್ತೇವೆ: ಪ್ರಿಯಾಂಕ್ ಖರ್ಗೆ

    ಚಕ್ರವರ್ತಿ ಸೂಲಿಬೆಲೆ ಬರೆದಿರೋ ಪಠ್ಯ ತೆಗೆಯುತ್ತೇವೆ: ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಚಕ್ರವರ್ತಿ ಸೂಲಿಬೆಲೆ (Chakravarti Sulibele) ಬರೆದಿರುವ ಪಠ್ಯ ತೆಗೆಯುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸ್ಪಷ್ಟನೆ ನೀಡಿದ್ದಾರೆ.

    ಬಿಜೆಪಿ (BJP) ಅವಧಿಯ ಪಠ್ಯ ಪರಿಷ್ಕರಣೆ (Text Book Revision) ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚಕ್ರವರ್ತಿ ಸೂಲಿಬೆಲೆ ಬರೆದಿರುವ ಪಠ್ಯ ಓದಿಲ್ಲ. ಆದರೂ ಅವರು ಬರೆದಿರುವ ಪಠ್ಯ ನಮ್ಮ ಮಕ್ಕಳು ಓದುವುದು ಬೇಡ. ಯಾವ ಆಧಾರದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಪಾಠ ಪುಸ್ತಕದಲ್ಲಿ ಸೇರ್ಪಡೆ ಮಾಡಿದ್ದಾರೆ? ಅವರು ಪಿಹೆಚ್‌ಡಿ ಮಾಡಿದ್ದಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವಿದ್ಯುತ್ ಸಂಪರ್ಕ ನೀಡಲು 2 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಎಇಇ

    ಬಾಡಿಗೆ ಭಾಷಣಕಾರರನ್ನೆಲ್ಲ ನೀವು ಲೇಖಕರು, ಸಾಹಿತಿಗಳು ಮಾಡಿದ್ದೀರಿ. ಅದನ್ನು ನಮ್ಮ ಮಕ್ಕಳು ಓದಬೇಕಾ? ಕರ್ನಾಟಕ ಸಾಹಿತ್ಯಕ್ಕೆ ಅಷ್ಟು ಬರ ಬಂದಿದೆಯಾ? ಯಾರು ಇವರೆಲ್ಲಾ? ವಾಟ್ಸಪ್ ಯೂನಿವರ್ಸಿಟಿಯಲ್ಲಿ ಓದೋರುವವರು ಇವರು. ಅವರೆಲ್ಲಾ ಪಠ್ಯ ರಚನೆ ಮಾಡಲು ಪ್ರಾರಂಭಿಸಿದ್ದಾರೆ. ಅಂತಹ ಪಾಠ ನಮ್ಮ ಮಕ್ಕಳು ಕಲಿತರೆ ನಮ್ಮ ಮಕ್ಕಳ ಭವಿಷ್ಯ ಏನಾಗಬೇಕು ಎಂದು ಸೂಲಿಬೆಲೆ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಸಿದ್ದು ಪ್ರಮಾಣವಚನ ವೇಳೆ ವೇದಿಕೆಯಲ್ಲಿ ಕ್ರಿಮಿನಲ್‌ ಹಿನ್ನಲೆಯುಳ್ಳ ವ್ಯಕ್ತಿ – ತನಿಖೆಗೆ ರಾಜ್ಯಪಾಲರ ಪತ್ರ

    ಚಕ್ರವರ್ತಿ ಸೂಲಿಬೆಲೆಯವರು ಭಗತ್‌ಸಿಂಗ್, ಸುಖದೇವ್ ಅವರ ಬಗ್ಗೆ ಬರೆದಿರುವುದು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭಗತ್ ಸಿಂಗ್ ಬಗ್ಗೆ ಅಪಾರವಾದ ಗೌರವವಿದೆ. ಅವರ ನಿಜವಾದ ಇತಿಹಾಸ ನಾವು ಹೇಳುತ್ತೇವೆ. ನಾನು ನಾಸ್ತಿಕ ಏಕೆ ಆಗಿದ್ದೇನೆ ಎಂಬ ಭಗತ್ ಸಿಂಗ್ ಪುಸ್ತಕವಿದೆ. ಅದನ್ನು ಚಕ್ರವರ್ತಿ ಸೂಲಿಬೆಲೆ ಓದಲಿ ಸಾಕು. ಇತಿಹಾಸ ತಿರುಚಿಲ್ಲದ ಪಾಠ ನಾವು ಇಡುತ್ತೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅತ್ತೆ, ಸೊಸೆ ಇಬ್ಬರಿಗೂ ಎರಡು ಸಾವಿರ ಹಣ ನೀಡಿ: ರೇಣುಕಾಚಾರ್ಯ

    ಚಕ್ರವರ್ತಿಗಿಂತ ಒಳ್ಳೆಯ ಸಾಹಿತಿಗಳು ನಮ್ಮಲ್ಲಿ ಇಲ್ಲವಾ? ಚಕ್ರವರ್ತಿ ಸೂಲಿಬೆಲೆ ವಾಸ್ತವ ಹೇಳುವ ವ್ಯಕ್ತಿ ಅಲ್ಲ. ಅವರು ಬರೆದಿರುವ ಪಠ್ಯ ನಾನು ಯಾಕೆ ಓದಲಿ? ನನಗೆ ಓದೋಕೆ ಸಾಕಷ್ಟಿದೆ. ಅವರು ಬರೆದಿರುವ ಪಠ್ಯ ನಾನು ಓದಿಲ್ಲ. ಚಕ್ರವರ್ತಿ ಸೂಲಿಬೆಲೆ ಪಾಠ ನಮ್ಮ ಜನರಿಗೆ, ಮಕ್ಕಳಿಗೆ ಅಗತ್ಯವಿಲ್ಲ. ಯಾವುದು ಕೇಸರೀಕರಣವಿದೆ. ಯಾವುದು ಸತ್ಯ ಅಲ್ಲ ಅದೆಲ್ಲವನ್ನೂ ತೆಗೆಯುತ್ತೇವೆ ಎಂದರು.  ಇದನ್ನೂ ಓದಿ: ಲಂಚ ತೆಗೆದುಕೊಳ್ಳುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸರು – ತಪ್ಪಾಯ್ತು ಬಿಟ್ಬಿಡಿ ಅಣ್ಣಾ ಎಂದು ಸಾರ್ವಜನಿಕರಲ್ಲಿ ಕ್ಷಮೆ

    ಸಾಹಿತಿಗಳ ಹಿನ್ನೆಲೆ ಇಲ್ಲದೇ ಬರೆದವರ ಪಠ್ಯ ಯಾಕೆ ಓದಬೇಕು? ಆಡಳಿತ ಪಕ್ಷಕ್ಕೆ ಹತ್ತಿರದವರಾಗಿದ್ದೆ ಎಂದು ಪಠ್ಯ ಹಾಕುವುದು ಸರಿನಾ? ನಾವು ಅದರ ವಿರುದ್ಧ ಇದ್ದೇವೆ. ನಮ್ಮ ಮಕ್ಕಳು ವಾಟ್ಸಪ್ ಯೂನಿವರ್ಸಿಟಿ ಓದಬೇಕಾ ಅಥವಾ ಒಳ್ಳೆಯ ಯೂನಿವರ್ಸಿಟಿ ಓದಬೇಕಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಟಿಕೆಟ್.. ಟಿಕೆಟ್.. ಟಿಕೆಟ್.. – ಸರ್ಕಾರಿ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದು!

    ಗೃಹಲಕ್ಷ್ಮೀ (Gruhalakshmi) ವಿಚಾರದಲ್ಲಿ ಮಕ್ಕಳು ತೆರಿಗೆ ಕಟ್ಟಿದರೆ ಯೋಜನೆ ಅನ್ವಯ ಆಗಲ್ಲ ಎಂಬ ನಿಯಮ ಕುರಿತು ಮಾತನಾಡಿದ ಅವರು, ಮಾರ್ಗಸೂಚಿಗಳು ಈಗ ಕ್ಲಿಯರ್ ಆಗಿವೆ. ಟ್ಯಾಕ್ಸ್ ಕಟ್ಟೋರು, ಜಿಎಸ್‌ಟಿ ಕಟ್ಟುವವರಿಗೆ ಯೋಜನೆ ಅನ್ವಯ ಆಗಲ್ಲ ಎಂದು ಹೇಳಿದ್ದೇವೆ. ಆ ನಿಯಮ ಸರಿಯಾಗಿಯೇ ಇದೆ. ಮುಂಚೆಯೂ ನಾವು ಹೇಳಿದ್ದೆವು. ಸಮಾಜದ ಕಟ್ಟ ಕಡೆಯ ಮನುಷ್ಯನನ್ನು ಸಮಾಜದ ಮುಖ್ಯವಾಹಿನಿಗೆ ತರೋದು ನಮ್ಮ ಸರ್ಕಾರದ ಮೂಲ ಉದ್ದೇಶ. ಫೇಸ್ 1ರಲ್ಲಿ ಈಗ ಇರುವ ನಿಯಮವೇ ಅಂತಿಮ. ಫೇಸ್ 2ರಲ್ಲಿ ಇದೆಲ್ಲವನ್ನೂ ಮುಂದೆ ನೋಡೋಣ ಎಂದು ಕಾಂಗ್ರೆಸ್ (Congress) ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಗಳಿಂದಲೇ ನಮಗೆ ಸೋಲು – ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಏನಾಯ್ತು?

  • ವಿವಾದಿತ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಿದ ಸರ್ಕಾರ

    ವಿವಾದಿತ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಿದ ಸರ್ಕಾರ

    ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾಗಿದ್ದ, 2022ರ ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಪುಸ್ತಕ ಪರಿಷ್ಕರಣೆಯ ವಿವಾದಿತ ಪಠ್ಯಗಳನ್ನು ಸರ್ಕಾರ ಹೊಸದಾಗಿ ಪರಿಷ್ಕರಣೆ ಮಾಡಿದೆ. ಸರ್ಕಾರ ಆದೇಶದಂತೆ ಎಂಟು ಪಠ್ಯಗಳನ್ನು ಹೊಸದಾಗಿ ಪರಿಷ್ಕರಣೆ ಮಾಡಿ ಇಲಾಖೆ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿದೆ.

    text book bjp

    ಕನ್ನಡ ಮತ್ತು ಇಂಗ್ಲೀಷ್ ಆವೃತ್ತಿಯ 59 ಪುಟಗಳ ಪರಿಷ್ಕೃತ ಪಠ್ಯ ಬಿಡುಗಡೆ ಮಾಡಲಾಗಿದೆ. 6,7,9ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಗಳು, 7ನೇ ತರಗತಿಯ ಕನ್ನಡ ಭಾಷೆಯ ಪದ್ಯ ಮತ್ತು 4ನೇ ತರಗತಿಯ ಪರಿಸರ ಅಧ್ಯಯನ ಒಂದು ಪಠ್ಯ ಪರಿಷ್ಕರಣೆ ಮಾಡಲಾಗಿದೆ.

    ನಮ್ಮ ಸಂವಿಧಾನ, ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ, ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ, ಮೈಸೂರು ಮತ್ತು ಇತರ ಸಂಸ್ಥಾನಗಳು, ಭಾರತದ ಮತ ಪ್ರವರ್ತಕರು, ಕರ್ನಾಟಕ ರಾಜ್ಯ ಏಕೀಕರಣ ಮತ್ತು ಗಡಿ ವಿವಾದಗಳು, ಪ್ರತಿಯೊಬ್ಬರ ವಿಶಿಷ್ಟ, ಗೊಂಬೆ ಕಲಿಸುವ ನೀತಿ ಪಠ್ಯಗಳನ್ನು ಪರಿಷ್ಕರಣೆ ಮಾಡಲಾಗಿದೆ. ಶೀಘ್ರವೇ ಶಾಲೆಗಳಿಗೆ ಹೊಸ ಪರಿಷ್ಕರಣೆ ಪಠ್ಯ ರವಾನೆ ಮಾಡಲಾಗುತ್ತದೆ. ಹೊಸ ಪರಿಷ್ಕೃತ ಪಠ್ಯವನ್ನೇ ಬೋಧನೆ ಮಾಡುವಂತೆ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಲಾಗಿದೆ.

    ಏನೇನು ಪರಿಷ್ಕರಣೆ ಆಗಿದೆ?
    ನಮ್ಮ ಸಂವಿಧಾನ (9ನೇ ತರಗತಿ ಸಮಾಜ ವಿಜ್ಞಾನ)
    * 2022ರ ಪರಿಷ್ಕರಣೆಯಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಎಂಬ ವಾಕ್ಯ ಬಿಟ್ಟು ಹೋಗಿತ್ತು. ಹೊಸ ಪರಿಷ್ಕರಣೆಯಲ್ಲಿ ಸಂವಿಧಾನ ಶಿಲ್ಪಿ ಅನ್ನೋ ವಾಕ್ಯ ಮರು ಸೇರ್ಪಡೆ ಮಾಡಲಾಗಿದೆ.

    ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ (7ನೇ ತರಗತಿ ಸಮಾಜ ವಿಜ್ಞಾನ)
    * 2022ರ ಪರಿಷ್ಕರಣೆಯಲ್ಲಿ ಈ ಪಠ್ಯ ಇರಲಿಲ್ಲ. ಹೊಸದಾಗಿ ಪರಿಷ್ಕರಣೆ ಮಾಡಿರುವ ಪಠ್ಯದಲ್ಲಿ ಹೊಸ ಪಠ್ಯ ಸೇರ್ಪಡೆ ಮಾಡಲಾಗಿದೆ.
    * ಅಕ್ಕಮಹಾದೇವಿ, ಕನಕದಾಸ, ಪುರಂದರದಾಸರು ಶರೀಫರು ಸೇರಿದಂತೆ ಅನೇಕ ದಾರ್ಶನಿಕರು ವಿಚಾರಧಾರೆಗಳು ಇರುವ ಪಠ್ಯ ಸೇರ್ಪಡೆ.

    ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ (6ನೇ ತರಗತಿ ಸಮಾಜ ವಿಜ್ಞಾನ)
    * 2022ರ ಪರಿಷ್ಕರಣೆಯಲ್ಲಿ ಸಿದ್ದಗಂಗಾ ಮಠವೂ ಸಾವಿರಾರು ಮಕ್ಕಳಿಗೆ ಅಕ್ಷರ, ಅನ್ನ ದಾಸೋಹ ಮಾಡುತ್ತಿದೆ ಎಂಬ ವಾಕ್ಯ ಬಿಟ್ಟು ಹೋಗಿತ್ತು. ಹೊಸ ಪರಿಷ್ಕರಣೆಯಲ್ಲಿ ಆ ವಾಕ್ಯವನ್ನು ಸೇರ್ಪಡೆ ಮಾಡಲಾಗಿದೆ.

    ಮೈಸೂರು ಮತ್ತು ಇತರ ಸಂಸ್ಥಾನಗಳು (7ನೇ ತರಗತಿ ಸಮಾಜ ವಿಜ್ಞಾನ)
    * 2022ರ ಪರಿಷ್ಕರಣೆಯಲ್ಲಿ ಸುರಪುರದ ನಾಯಕರ ಇತಿಹಾಸ ಕೈ ಬಿಡಲಾಗಿತ್ತು. ಹೊಸ ಪರಿಷ್ಕರಣೆಯಲ್ಲಿ ಸುರಪುರ ನಾಯಕರ ಇತಿಹಾಸ ಪಠ್ಯ ಸೇರ್ಪಡೆ ಮಾಡಲಾಗಿದೆ.

    ಭಾರತದ ಮತ ಪ್ರವರ್ತಕರು (9ನೇ ತರಗತಿ ಸಮಾಜ ವಿಜ್ಞಾನ)
    * 2022ರ ಪರಷ್ಕರಣೆಯಲ್ಲಿ ಬಸವಣ್ಣರ ಕುರಿತಾದ ಪಠ್ಯ ಭಾರೀ ವಿರೋಧಕ್ಕೆ ಕಾರಣವಾಗಿತ್ತು.
    * ಹೊಸ ಪರಿಷ್ಕರಣೆಯಲ್ಲಿ ಬಸವಣ್ಣನವರ ವಿವಾದಿತ ಪಠ್ಯ ತೆಗೆದು ಹೊಸ ಪಠ್ಯವನ್ನ ಸೇರ್ಪಡೆ ಮಾಡಲಾಗಿದೆ.

    ಕರ್ನಾಟಕ ರಾಜ್ಯ ಏಕೀಕರಣ ಮತ್ತು ಗಡಿವಿವಾದಗಳು (7ನೇ ತರಗತಿ ಸಮಾಜ ವಿಜ್ಞಾನ)
    * 2022 ರ ಪರಿಷ್ಕರಣೆಯಲ್ಲಿ ಆಲೂರು ವೆಂಕಟರಾಯರು, ರಾಷ್ಟ್ರಕವಿ ಗೋವಿಂದ ಪೈ ಭಾವ ಚಿತ್ರ ಮಾತ್ರ ನೀಡಲಾಗಿತ್ತು. ಕುವೆಂಪು ಭಾವ ಚಿತ್ರ ಕೈ ಬಿಡಲಾಗಿದೆ ಅಂತ ಆರೋಪ ಇತ್ತು.
    * ಹೊಸ ಪರಿಷ್ಕರಣೆಯಲ್ಲಿ ಕುವೆಂಪು, ಹುಯಿಲಗೋಳ ನಾರಾಯಣರಾವ್‍ರ ಭಾವಚಿತ್ರ ಸೇರ್ಪಡೆ ಮಾಡಲಾಗಿದೆ.

    ಪ್ರತಿಯೊಬ್ಬರು ವಿಶಿಷ್ಟ (4ನೇ ತರಗತಿ ಪರಿಸರ ಅಧ್ಯಯನ)
    * ಕಾಂಗ್ರೆಸ್ ಸರ್ಕಾರದ ಪರಿಷ್ಕರಣೆಯಲ್ಲಿ ಅನೇಕರ ಪ್ರೋತ್ಸಾಹದಿಂದ ಕುವೆಂಪು ಪ್ರಖ್ಯಾತ ಕವಿ ಎನಿಸಿಕೊಂಡಿದ್ದರು ಎಂಬ ವಿವಾದಿತ ಅಂಶ ಸೇರ್ಪಡೆ ಮಾಡಲಾಗಿತ್ತು.
    * ಹೊಸ ಪರಿಷ್ಕರಣೆಯಲ್ಲಿ ಈ ವಿವಾದಿತ ಅಂಶವನ್ನು ಕೈ ಬಿಡಲಾಗಿದೆ.

    ಗೊಂಬೆ ಕಲಿಸುವ ನೀತಿ (7ನೇ ತರಗತಿ ಕನ್ನಡ ಭಾಷೆ)
    * 2022ರ ಪರಿಷ್ಕರಣೆಯಲ್ಲಿ ಆಡಿಸಿ ನೋಡಿ ಬೀಳಿಸಿ ನೋಡು ಪದ್ಯದ ಸಾಹಿತ್ಯ ಬರೆದವರು ಆರ್.ಎನ್. ಜಯಗೋಪಾಲ್ ಅಂತ ತಪ್ಪಾಗಿ ಮುದ್ರಣ ಮಾಡಲಾಗಿತ್ತು.
    * ಹೊಸ ಪರಿಷ್ಕರಣೆಯಲ್ಲಿ ಅದನ್ನು ಸರಿ ಮಾಡಿ ಸಾಹಿತಿ ಚಿ.ಉದಯ್ ಶಂಕರ್ ಅವರ ಪರಿಚಯ ಸೇರ್ಪಡೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ: ಮುತಾಲಿಕ್

    30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ: ಮುತಾಲಿಕ್

    – ನಮ್ಮ ಕವನ ಬೇಡಾ ಎಂದವರಿಗೆ ನಾಚಿಕೆಯಾಗಬೇಕು
    – ಕೇಸರಿ ಎಂದರೆ ತ್ಯಾಗ, ಭಕ್ತಿಯ ಪ್ರತೀಕ

    ಬೆಳಗಾವಿ: 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಾಗ್ದಾಳಿ ಮಾಡಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ. ಕಾನೂನುಬದ್ಧವಾಗಿ ಹೋರಾಟ ಮಾಡಿ ವಾಪಸ್ ಪಡೆಯುತ್ತೇವೆ. ನಾವು, ನೀವು ಒಟ್ಟಾಗಿ ಇರಬೇಕು ಅದ್ರೆ ವಾಪಸ್ ಕೊಡಬೇಕು. ದೇವಾಲಯ ಅಂತ ಗೊತ್ತಾದ ಮೇಲೆ ಬಿಟ್ಟು ಕೊಡಬೇಕು. ಶಾಸಕ ಅಭಯ್ ಪಾಟೀಲ್‍ಗೂ ನಮ್ಮ ಬೆಂಬಲ ಇದೆ. ಮಾಜಿ ಶಾಸಕ ಫಿರೋಜ್ ಸೇಠ್ ಅಕ್ರಮವಾಗಿ ಜಾಗ ಕಬಳಿಕೆ ಮಾಡಿದ್ದಾರೆ. ಮೊದಲು ಅದನ್ನು ವಾಪಸ್ ಕೊಡಲಿ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ಆ ಮನುಷ್ಯನಿಗೆ ಮಾನ, ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ: ಶ್ರೀನಿವಾಸ್ ಗೌಡ ವಿರುದ್ಧ ಹೆಚ್‌ಡಿಕೆ ಕಿಡಿ

    ರೋಹಿತ್ ಚಕ್ರತೀರ್ಥ ಅವರನ್ನ ಪಠ್ಯ ಪರಿಷ್ಕರಣಾ ಸಮಿತಿಯಿಂದ ತೆಗೆದ ವಿಚಾರವಾಗಿ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ಅವರನ್ನು ಸಮಿತಿಯಿಂದ ಕೈಬಿಟ್ಟಿದ್ದು ಸರಿಯಲ್ಲ. ನಿಜವಾದ ರಾಷ್ಟ್ರೀಯತೆ, ದೇಶಭಕ್ತಿಯ ಪಠ್ಯದಲ್ಲಿ ಹಾಕಿದ್ರೆ ಇವರಿಗೆ ಯಾಕೆ ಉರಿಯುತ್ತಿದೆ. ಕೆಲವು ಲೇಖಕರು ನಮ್ಮ ಕವನ ಪಠ್ಯದಲ್ಲಿ ಬೇಡಾ ಎಂದಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರಹಾಕಿದರು.

    ಹೆಡ್ಗೆವಾರ್ ಅವರ ಭಾಷಣ ಪಠ್ಯದಲ್ಲಿ ಹಾಕಿದ್ದೆ ಇವರಿಗೆ ಉರಿ. ಆರ್‌ಎಸ್‍ಎಸ್ ಸಂಸ್ಥಾಪಕನ ಹೆಸರು ಹಾಕಿದ್ರೇ ಕೋಮುವಾದ, ಜಾತಿವಾದ ಅಂತಾರೆ. ಕೇಸರಿ ಎಂದರೆ ತ್ಯಾಗ, ಭಕ್ತಿಯ ಪ್ರತೀಕ. ಇದನ್ನ ಕೆಟ್ಟದ್ದು ಅಂತಾ ಬೆಂಬಲಿಸುವ ಬುದ್ಧಿ ಜೀವಿಗಳನ್ನ, ಕಾಂಗ್ರೆಸ್ ಅವರನ್ನ ಧಿಕ್ಕರಿಸಬೇಕು. ಬರಗೂರ ಅವರ ಅಧ್ಯಕ್ಷತೆಯಲ್ಲಿ ಸಾಕಷ್ಟು ಲೋಪಗಳಿದ್ದರೂ ಬಾಯಿ ಮುಚ್ಚಿಕೊಂಡಿದ್ರು. ನೂರು ಸಲ ಸುಳ್ಳನ್ನು ಹೇಳಿ ಸತ್ಯ ಮಾಡುವ ಪ್ರಯತ್ನ ಮಾಡ್ತಿದ್ದಾರೆ ಎಂದು ಟೀಕಿಸಿದರು.

    ಕೆಲವು ಸ್ವಾಮೀಜಿಗಳು ಇವರಿಗೆ ಸಾಥ್ ಕೊಡುವ ಕೆಲಸ ಮಾಡ್ತಿದ್ದಾರೆ. ಸಿಎಂ, ಶಿಕ್ಷಣ ಸಚಿವರು ಚರ್ಚೆ ಮಾಡೋಣ ಬನ್ನಿ ಅದ್ರೆ ಯಾರು ಬರಲಿಲ್ಲ. ಪಠ್ಯದಲ್ಲಿ ಕೆಲವು ಸಣ್ಣಪುಟ್ಟ ತಪ್ಪುಗಳು ಆಗಿರುತ್ತವೆ. ಇದರಲ್ಲಿ ಕೋಮುವಾದವಿಲ್ಲ, ರಾಷ್ಟ್ರೀಯವಾದ ದೇಶಭಕ್ತಿ ಇದೆ. ಮುಸ್ಲಿಂ ದಾಳಿಕೋರರನ್ನ ಪಠ್ಯದಲ್ಲಿ ಕಾಂಗ್ರೆಸ್‍ನವರು ವೈಭವೀಕರಣ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡಮತದಾನ

    ಕಾಂಗ್ರೆಸ್ ಅವರಿಗೆ ಪಠ್ಯಪುಸ್ತಕದ ಬಗ್ಗೆ ಮಾತನಾಡಲು ನೈತಿಕತೆಯಿಲ್ಲ. ದೇಶಭಕ್ತಿ, ಹಿಂದುತ್ವವನ್ನ, ಆರ್‌ಎಸ್‍ಎಸ್ ನ ಕಾಂಗ್ರೆಸ್ ವಿರೋಧ ಮಾಡ್ತಿದೆ. ಹೋರಾಟ ಮಾಡುವ ಸ್ವಾಮೀಜಿಗಳಿಗೆ ಕೈ ಮುಗಿದು ಮನವಿ ಮಾಡುತ್ತೇನೆ. ನಾವೆಲ್ಲಾ ಒಟ್ಟಾಗಿ ದೇಶ ಉಳಿಸಬೇಕಿದೆ ಎಂದು ಕರೆ ಕೊಟ್ಟರು.

  • ಪಠ್ಯದಲ್ಲಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪಾಠವನ್ನು ಕಾಂಗ್ರೆಸ್ ಸರ್ಕಾರ ತೆಗೆದುಹಾಕಿತ್ತು: ಬಿಜೆಪಿ

    ಪಠ್ಯದಲ್ಲಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪಾಠವನ್ನು ಕಾಂಗ್ರೆಸ್ ಸರ್ಕಾರ ತೆಗೆದುಹಾಕಿತ್ತು: ಬಿಜೆಪಿ

    ಬೆಂಗಳೂರು: ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪಾಠವನ್ನು ಮುಡಂಬಡಿತ್ತಾಯ ಸಮಿತಿ ಪಠ್ಯದಲ್ಲಿ ಸೇರಿಸಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಈ ಪಠ್ಯವನ್ನು ಕಿತ್ತು ಹಾಕಿತ್ತು. ಇದನ್ನು ಸಮರ್ಥಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆಯೇ? ಎಂದು ಪಠ್ಯ ಪರಿಷ್ಕರಣೆ ವಾಪಸ್‍ಗೆ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯನ್ನು ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.

    bjP

     

    ಟ್ವೀಟ್‍ನಲ್ಲಿ ಏನಿದೆ?
    ಹಿಂದಿನ ಪಠ್ಯಕ್ರಮ ಮುಂದುವರಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಹತ್ತನೇ ತರಗತಿಯ ಪಠ್ಯಪುಸ್ತಕದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಇದ್ದ ಪಾಠವನ್ನು ಕಾಂಗ್ರೆಸ್ ಸರ್ಕಾರ ನೇಮಿಸಿದ ಸಮಿತಿ ತೆಗೆದುಹಾಕಿತ್ತು. ಇದನ್ನು ಸಮರ್ಥಿಸಿ ಪ್ರತಿಭಟನೆ ಮಾಡುತ್ತಿದ್ದೀರಾ? ಮುಡಂಬಡಿತ್ತಾಯ ಸಮಿತಿ ಪರಿಷ್ಕರಿಸಿದ ಪಠ್ಯಗಳಲ್ಲಿ, ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ 8 ಪಾಠಗಳಿದ್ದವು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅದಕ್ಕೂ ಕತ್ತರಿ ಹಾಕಲಾಯಿತು. ಆದರೆ ಬಿಜೆಪಿ ಸರ್ಕಾರ ನೇಮಿಸಿದ ಸಮಿತಿ ಕುವೆಂಪು ಅವರ 10 ಪಠ್ಯ ಅಳವಡಿಸಿದೆ. ಇದನ್ನೂ ಓದಿ: 3 ನಂಬರ್‌ನಿಂದ ನನಗೆ ಕಿರಿಕಿರಿ, ಧಮ್ಕಿ, ಬೆದರಿಕೆ ಕರೆ ಬರುತ್ತಿದೆ: ಮುತಾಲಿಕ್

    ಕಾಂಗ್ರೆಸ್ ಪ್ರತಿಭಟನೆ ಕುವೆಂಪು ವಿರುದ್ಧವೇ? ನವ ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಅವರ ಬಗ್ಗೆ ಇದ್ದ ಪಠ್ಯವನ್ನು ಕಾಂಗ್ರೆಸ್ ಸರ್ಕಾರ ತೆಗೆದುಹಾಕಿತ್ತು. ಈಗ ಅದೇ ಹಿಂದಿನ ಪಠ್ಯ ಮುಂದುವರಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದೆ. ಅಂದರೆ ಪಠ್ಯಪುಸ್ತಕದಲ್ಲಿ ಕೆಂಪೇಗೌಡರ ಚರಿತ್ರೆ ಇರಬಾರದೇ? ಭೂಕಂದಾಯದ ಪತ್ರಗಳಲ್ಲಿದ್ದ ಕನ್ನಡವನ್ನು ತೆಗೆದು ಪರ್ಷಿಯನ್ ಭಾಷೆ ಹೇರಿದ ಟಿಪ್ಪು ಬಗ್ಗೆ ಕನ್ನಡ ಭಾಷಾಭಿಮಾನಿ ಎಂದು ಬರಗೂರು ಸಮಿತಿ ವೈಭವೀಕರಿಸಿತ್ತು. ಇದನ್ನು ಸಮರ್ಥಿಸುವ ಸಲುವಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆಯೇ? ಮಾನ್ಯ ಡಿಕೆಶಿ ಹಾಗೂ ಸಿದ್ದರಾಮಯ್ಯನವರೇ ನಾಡಿನ ಹೆಮ್ಮೆಯ ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವನ ಪಾಠಗಳನ್ನು ನಿಮ್ಮದೇ ಸರ್ಕಾರ ನೇಮಿಸಿದ್ದ ಸಮಿತಿ ಪಠ್ಯದಿಂದ ತೆಗೆದುಹಾಕಿತ್ತು. ಇದನ್ನು ಬೆಂಬಲಿಸಿ ಇಂದು ಪ್ರತಿಭಟನೆ ಮಾಡುತ್ತಿದ್ದೀರಾ? ಇದನ್ನೂ ಓದಿ: ರಾಜ್ಯಸಭೆ ಫೈಟ್‍ನಲ್ಲಿ ಟ್ವಿಸ್ಟ್ – ಕಾಂಗ್ರೆಸ್, ಜೆಡಿಎಸ್ ಮಧ್ಯೆ ‘ಆತ್ಮಸಾಕ್ಷಿ’ ಫೈಟ್

    ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪಾಠವನ್ನು ಮುಡಂಬಡಿತ್ತಾಯ ಸಮಿತಿ ಪಠ್ಯದಲ್ಲಿ ಸೇರಿಸಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಈ ಪಠ್ಯವನ್ನು ಕಿತ್ತು ಹಾಕಿತ್ತು. ಇದನ್ನು ಸಮರ್ಥಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆಯೇ? ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

  • ಸಿಲಬಸ್ ವಾರ್: ಸಿದ್ದಗಂಗಾ ಮಠದ ಬಗ್ಗೆಯೂ ಕತ್ತರಿ, ಅನ್ನ ದಾಸೋಹ-ಅಕ್ಷರ ದಾಸೋಹ ವಾಕ್ಯ ಕಟ್‌

    ಸಿಲಬಸ್ ವಾರ್: ಸಿದ್ದಗಂಗಾ ಮಠದ ಬಗ್ಗೆಯೂ ಕತ್ತರಿ, ಅನ್ನ ದಾಸೋಹ-ಅಕ್ಷರ ದಾಸೋಹ ವಾಕ್ಯ ಕಟ್‌

    ಬೆಂಗಳೂರು: ಇತ್ತೀಚೆಗೆ ಹೆಚ್ಚು ಚರ್ಚೆಯಾಗುತ್ತಿರುವ ಪಠ್ಯ ವಿವಾದಕ್ಕೆ ಮುಕ್ತಿ ಸಿಗುತ್ತಿಲ್ಲ. ಈಗ ಮತ್ತೊಂದು ವಿವಾದದಲ್ಲಿ ಪಠ್ಯ ಪರಿಷ್ಕರಣೆ ಸಮಿತಿ ಸಿಲುಕಿದೆ. ಆರನೇ ತರಗತಿಯ ಸಮಾಜ ಪಠ್ಯದಲ್ಲಿ ಸಿದ್ಧಗಂಗಾ ಮಠದ ಅನ್ನ ದಾಸೋಹ ಮತ್ತು ಅಕ್ಷರ ದಾಸೋಹ ನಡೆಸುತ್ತಿದೆ ಅನ್ನೋ ವಾಕ್ಯಕ್ಕೆ ರೋಹಿತ್ ಚಕ್ರತೀರ್ಥ ಸಮಿತಿ ಕತ್ತರಿ ಹಾಕಿದೆ ಎನ್ನಲಾಗಿದೆ.

    ಸುರಪುರ ನಾಯಕರ ಪಠ್ಯ ಕಡಿತಕ್ಕೆ ಶಾಸಕ ರಾಜೂಗೌಡ ಅಸಮಾಧಾನ ವ್ಯಕ್ತಪಡಿಸಿ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಈ ಹಿಂದಿನಂತೆಯೇ ಪಠ್ಯ ಮುಂದುವರಿಸಲು ಒತ್ತಾಯಿಸಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿ, ಪಠ್ಯದಲ್ಲಿ ಆಗಿರುವ ತಪ್ಪುಗಳನ್ನು ಸರಿ ಮಾಡ್ತಿದ್ದೇವೆ ಎಂದಿದ್ದಾರೆ. ಸಚಿವ ಸುನೀಲ್ ಕುಮಾರ್, ಕಾಂಗ್ರೆಸ್ ಬೇಕಂತಲೇ ವಿವಾದ ಹುಟ್ಟು ಹಾಕುತ್ತಿದೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಟೆಕ್ ಸಮ್ಮಿಟ್ ಬೆಳ್ಳಿ ಹಬ್ಬ – ಉದ್ಘಾಟನೆಗೆ ಪ್ರಧಾನಿ ಆಹ್ವಾನ: ಅಶ್ವಥ್ ನಾರಾಯಣ 

    ಈ ಮಧ್ಯೆ, ಅಂಬೇಡ್ಕರ್ ಮುಂದೆ ಸಂವಿಧಾನ ಶಿಲ್ಪಿ ಎಂಬ ಪದನಾಮವನ್ನು ಮತ್ತೆ ಸೇರಿಸಲು ಮುಂದಾಗಿರೋದನ್ನು ಶಾಸಕ ಎಂ.ಪಿ.ಕುಮಾರಸ್ವಾಮಿ ಸ್ವಾಗತಿಸಿದ್ದಾರೆ. ಅತ್ತ ಕೊಪ್ಪಳದಲ್ಲಿ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಪಠ್ಯ ಪುಸ್ತಕ ವಿತರಣೆ ಆಗದಿದ್ರೂ, ಆಗಿದೆ ಎಂದು ನಮೂದು ಮಾಡುವಂತೆ ಶಿಕ್ಷಕರ ಮೇಲೆ ಮೇಲಾಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

  • ಬಸವಣ್ಣನ ಪಠ್ಯವನ್ನೇ ತಿರುಚಲಾಗಿದೆ: ಲಿಂಗಾಯತ ಸ್ವಾಮೀಜಿಗಳು ಅಸಮಾಧಾನ

    ಬಸವಣ್ಣನ ಪಠ್ಯವನ್ನೇ ತಿರುಚಲಾಗಿದೆ: ಲಿಂಗಾಯತ ಸ್ವಾಮೀಜಿಗಳು ಅಸಮಾಧಾನ

    ಬೀದರ್/ಬೆಂಗಳೂರು: ಪರಿಷ್ಕೃತ ಪಠ್ಯದಲ್ಲಿ ಬಸವಣ್ಣ ಇತಿಹಾಸ ತಿರುಚಲಾಗಿದೆ ಎಂದು ಲಿಂಗಾಯತ ಮಠಾಧೀಶರ ಒಕ್ಕೂಟ ಆಕ್ರೋಶ ಹೊರಹಾಕಿದೆ. 100ಕ್ಕೂ ಹೆಚ್ಚು ಲಿಂಗಾಯತ ಮಠಾಧೀಶರು ಇರುವ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವಣ್ಣನವರ ಪಠ್ಯವನ್ನು ತಿರುಚಲಾಗಿದೆ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.

    ಬಸವಣ್ಣನವರ ತಿರುಚಿರುವ ಪಠ್ಯವನ್ನು ಸರಿಪಡಿಸದೇ ಹೋದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತೇವೆ ಎಂದು ಲಿಂಗಾಯತ ಮಠಾಧೀಶರ ಒಕ್ಕೂಟ ಎಚ್ಚರಿಕೆ ನೀಡಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಪಠ್ಯದಲ್ಲಿರುವ ತಮ್ಮ ಕವಿತೆ ವಾಪಸ್ ಪಡೆದ ಮತ್ತೊಬ್ಬ ಸಾಹಿತಿ

    9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬಸವಣ್ಣ ಕುರಿತಾಗಿ ತಪ್ಪಾಗಿ ಉಲ್ಲೇಖಿಸಲಾಗಿದೆ. ಉಪನಯನ ಆದ ನಂತರ ಕೂಡಲ ಸಂಗಮಕ್ಕೆ ನಡೆದರು ಎಂದು ಪಠ್ಯದಲ್ಲಿ ತಪ್ಪಾಗಿ ಬರೆಯಲಾಗಿದೆ. ಆದರೆ ಬಸವಣ್ಣನವರು ತಮ್ಮ ಅಕ್ಕ ನಾಗಾಯಿಗೆ ಇಲ್ಲದ ಉಪನಯನ ನನಗೇಕೆ ಎಂದು ಧಿಕ್ಕರಿಸಿದ್ದರು. ಇದು ಐತಿಹಾಸಿಕ ಸಂಗತಿ ಎಂದು ಮಠಾಧೀಶರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗ ದೀಕ್ಷೆಯನ್ನು ಪಡೆದರು ಎಂದು ಬರೆಯಲಾಗಿದೆ. ಆದರೆ ಬಸವಣ್ಣನವರೇ ಇಷ್ಟಲಿಂಗದ ಜನಕರು. ಈ ಬಗ್ಗೆ ಅಲ್ಲಮ್ಮಪ್ರಭು ಆದಿಯಾಗಿ ಎಲ್ಲಾ ಶರಣರು ತಮ್ಮ ವಚನದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪಿಯುಸಿ ಪಠ್ಯ ಪರಿಷ್ಕರಣೆ ಮುಕ್ತಾಯ

    ಬಸವಣ್ಣನವರು ವೀರ ಶೈವ ಮತವನ್ನು ಅಭಿವೃದ್ಧಿ ಪಡಿಸಿದರು ಎಂದು ಪಠ್ಯದಲ್ಲಿ ಸೇರಿಸಿದ್ದಾರೆ. ಇದು ಕೂಡ ತಪ್ಪು. ವಾಸ್ತವದಲ್ಲಿ ವೀರ ಶೈವ, ಶೈವ ಪಂಥದ ಶಾಖೆ. ಅದು ಲಿಂಗಾಯತ ಧರ್ಮದ ಒಂದು ಪಂಗಡ ಎಂದು ಇತಿಹಾಸ ಹೇಳುತ್ತದೆ. ಸರ್ಕಾರದ ದಾಖಲೆಯಲ್ಲೂ ಹೀಗೆಯೇ ಇದೆ ಎಂದು ಹೇಳಿದ್ದಾರೆ.

    ಶೈವರಲ್ಲಿ ವರ್ಣಾಶ್ರಮದ ಆಚರಣೆಯಿದೆ. ಲಿಂಗಾಯತರಲ್ಲಿ ವರ್ಣಾಶ್ರಮ ಪದ್ಧತಿ ಇಲ್ಲ. ಹೀಗಾಗಿ ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ಧಿ ಪಡಿಸಿದರು ಎಂಬುವುದು ಸುಳ್ಳು ಎಂದು ಪತ್ರದಲ್ಲಿ ಉಲ್ಲೇಖಿಸಿ, ಪಠ್ಯ ಪರಿಷ್ಕರಣೆ ಬಗ್ಗೆ ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  • ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪಿಯುಸಿ ಪಠ್ಯ ಪರಿಷ್ಕರಣೆ ಮುಕ್ತಾಯ

    ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪಿಯುಸಿ ಪಠ್ಯ ಪರಿಷ್ಕರಣೆ ಮುಕ್ತಾಯ

    ಬೆಂಗಳೂರು: ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪಿಯುಸಿ ಪಠ್ಯದ ಪರಿಷ್ಕರಣೆ ಕಾರ್ಯ ಮುಕ್ತಾಯವಾಗಿದೆ.

    ಇತಿಹಾಸದ ಒಂದು ಪಠ್ಯ ಪರಿಷ್ಕರಣೆಗೆ ಸರ್ಕಾರ ಸಮಿತಿ ನೇಮಿಸಿತ್ತು. ದ್ವಿತೀಯ ಇತಿಹಾಸದ ಹೊಸ ಧರ್ಮಗಳ ವಿವಾದ ಪಠ್ಯ ಪರಿಷ್ಕರಣೆಗೆ ಸಮಿತಿ ರಚನೆ ಮಾಡಿತ್ತು. ಒಂದು ಸಮುದಾಯದ ಭಾವನೆಗೆ ಧಕ್ಕೆ ಆಗಿದೆ ಎನ್ನುವ ಹಿನ್ನಲೆಯಲ್ಲಿ ಪಠ್ಯ ಪರಿಷ್ಕರಣೆ ಜವಾಬ್ದಾರಿಯನ್ನು ರೋಹಿತ್ ಚಕ್ರತೀರ್ಥರಿಗೆ ಕೊಡಲಾಗಿತ್ತು. ಈಗ ಸಮಿತಿಯೂ ಪರಿಷ್ಕರಣೆ ಕೆಲಸ ಮುಕ್ತಾಯ ಮಾಡಿದೆ. ಶೀಘ್ರವೇ ಪರಿಷ್ಕರಣೆ ಪಠ್ಯವನ್ನು ಶಿಕ್ಷಣ ಇಲಾಖೆಗೆ ಸಮಿತಿ ನೀಡಲಿದೆ. ಸಮಿತಿ ವರದಿ ಒಪ್ಪಿಕೊಂಡ ಬಳಿಕ ಪರಿಷ್ಕೃತ ಪಠ್ಯ ಅಳವಡಿಕೆ ಆಗುತ್ತದೆ.

    TEXTBOOK

    ಏನು ಪರಿಷ್ಕರಣೆಯಾಗಿದೆ?
    ಪಿಯುಸಿ ಇತಿಹಾಸ ಪಠ್ಯದಲ್ಲಿ ಹೊಸ ಧರ್ಮಗಳ ಉದಯ ಅಧ್ಯಾಯದಲ್ಲಿ ಯಜ್ಞ, ಯಾಗದಿಗಳ ಬಗ್ಗೆ ವಿವಾದಿತ ಅಂಶ ಉಲ್ಲೇಖ ಮಾಡಲಾಗಿತ್ತು. ಯಜ್ಞ-ಯಾಗದಿಗಳಿಗೆ ಕೃಷಿಗೆ ಬಳಸುತ್ತಿದ್ದ ಪ್ರಾಣಿಗಳನ್ನು ಬಲಿ ಕೊಡುತ್ತಿದ್ದರು ಎಂಬ ಅಂಶ ಸೇರ್ಪಡೆ ಮಾಡಲಾಗಿತ್ತು. ಇದರ ಜೊತೆಗೆ ಬ್ರಾಹ್ಮಣ ಸಮುದಾಯಕ್ಕೆ ಅಪಮಾನ ಮಾಡಿರುವ ಅಂಶಗಳನ್ನು ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿತ್ತು. ಈಗ ಆಕ್ಷೇಪಾರ್ಹ ಅಂಶಗಳನ್ನು ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕೃತ ಪಠ್ಯದಿಂದ ಕೈಬಿಡಲಾಗಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

    TET EXAM 2

    ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಪಠ್ಯ ಇತ್ತು. ಇದನ್ನ ಸರಿ ಮಾಡಲು ಅನೇಕ ಜನ ಶ್ರೀಗಳು ಒತ್ತಾಯ ಮಾಡಿದ್ದರು. ಈ ಹಿನ್ನಲೆಯಲ್ಲಿ ಈಗ ಈ ಒಂದು ಪಠ್ಯವನ್ನ ಪರಿಷ್ಕರಣೆ ಮಾಡಲಾಗಿದೆ. ರೋಹಿತ್ ಚಕ್ರತೀರ್ಥ ಸಮಿತಿಯೂ ಬ್ರಾಹ್ಮಣರಿಗೆ ಮಾಡಿದ್ದ ಅಪಮಾನವನ್ನು ಪಠ್ಯದಲ್ಲಿ ತೆಗೆಯಲಾಗಿದೆ.

    ಪಠ್ಯದಲ್ಲಿ ಏನಿತ್ತು?
    ಹೊಸ ಧರ್ಮಗಳ ಉದಯಕ್ಕೆ ಕಾರಣವಾದ ಅಂಶಗಳು ಎಂಬ ಶೀರ್ಷಿಕೆಯಡಿ, ವೈದಿಕ ಧರ್ಮದಲ್ಲಿನ ಗೊಂದಲಗಳು ಹೊಸ ಧರ್ಮದ ಉದಯಕ್ಕೆ ಕಾರಣವಾಗಿತ್ತು. ಆರಂಭದಲ್ಲಿ ವೈದಿಕ ಧರ್ಮ ಯಾವುದೇ ಜಟಿಲತೆಗಳಿಲ್ಲದೆ ಸರಳವಾಗಿತ್ತು. ನಂತರ ಪುರೋಹಿತರ ಪ್ರಭಾವದಿಂದಾಗಿ ಬಹಳಷ್ಟು ಕಠೋರತೆಗಳು ಧರ್ಮದೊಳಗೆ ನುಸುಳಿದವು.

    EXAM

    ಜನರು ಅಸಂತುಷ್ಟರಾದರು ಮತ್ತು ಬದಲಾವಣೆಯನ್ನು ಬಯಸಿದ್ದ ಅವರು ಅದನ್ನು ಹೊಸ ಧರ್ಮಗಳಲ್ಲಿ ಕಂಡುಕೊಂಡರು. ಪುರೋಹಿತ ವರ್ಗದ ಪರಮಾಧಿಕಾರ ನೀತಿ ಅನುಸರಿದರು. ಬ್ರಾಹ್ಮಣರು ಇತರ ಜಾತಿಗಳ ಮೇಲೆ ಪರಮಾಧಿಕಾರ ಸ್ಥಾಪಿಸಿದರು. ಜನರಿಗೆ ಪುರೋಹಿತರಿಲ್ಲದೆ ಯಜ್ಞಗಳನ್ನು ಮಾಡುವುದು ಅಸಾಧ್ಯವಾಗಿತ್ತು. ಬ್ರಾಹ್ಮಣರು ಅನೇಕ ವಿಶೇಷ ಸೌಲಭ್ಯಗಳನ್ನು ಅನುಭವಿಸುತ್ತಿದ್ದರು ಮತ್ತು ತಮ್ಮನ್ನು ಎಲ್ಲರಿಗಿಂತ ಶ್ರೇಷ್ಠರೆಂದು ತಿಳಿದಿದ್ದರು.

    ಪ್ರಾಣಿ ಬಲಿ, ಶಾಸ್ತ್ರ ವಿಧಿಗಳ ಒಂದು ಭಾಗವಾಗಿತ್ತು ಮತ್ತು ಇವುಗಳ ಆಚರಣೆ ದುಬಾರಿಯಾಯಿತು. ಹೀಗಾಗಿ ಜನರು ಅಸ್ತಿತ್ವದಲ್ಲಿದ್ದ ಧರ್ಮದಲ್ಲಿನ ನಂಬಿಕೆ ಕಳೆದುಕೊಂಡರು. ಋಗ್ವೇದದ ಕಾಲದ ಧಾರ್ಮಿಕ ವಿಧಿ ಮತ್ತು ಧರ್ಮಾಚರಣೆ ಉತ್ತರ ವೇದ ಕಾಲದಲ್ಲಿ ಸಂಕೀರ್ಣವಾದವು, ಲೌಕಿಕ ಪಾಪ್ತಿಗಳಾದ, ಮಕ್ಕಳನ್ನು ಪಡೆಯಲು, ಯುದ್ಧದಲ್ಲಿ ಜಯಗಳಿಸಲು, ರೋಗ ಗುಣಪಡಿಸಲು ಮತ್ತು ಮುಕ್ತಿಯನ್ನು ಪಡೆಯಲು ಯಾಗ ಮತ್ತು ಶಾಸ್ತ್ರೋಕ್ತ ವಿಧಿಗಳನ್ನು ಮಾಡಲು ಸಲಹೆ ಮಾಡುತ್ತಿದ್ದರು. ವಿಚಾರವಾದಿಗಳು ಅವುಗಳನ್ನು ವ್ಯರ್ಥ ಎಂದು ಭಾವಿಸಿದರು. ಇದನ್ನೂ ಓದಿ: ರಾಜ್ಯಕ್ಕೆ ಮುಂಗಾರು ಪ್ರವೇಶ – ಮುಂದಿನ 3, 4 ದಿನ ಭಾರೀ ಮಳೆ ಸಾಧ್ಯತೆ

    ಮಂತ್ರಗಳ ಪಠಣ (ಸಂಸ್ಕೃತ ಶ್ಲೋಕಗಳು) ಸಂಸ್ಕೃತದಲ್ಲಿದ್ದ ವೈದಿಕ ಸಾಹಿತ್ಯದ ಮೇಲೆ ಪುರೋಹಿತರ ಪ್ರಭುತ್ವವಿತ್ತು. ಜನಸಾಮಾನ್ಯರಿಗೆ ಅವುಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿರಲಿಲ್ಲ. ಸ್ಪಷ್ಟ ತಿಳುವಳಿಕೆಯ ಕೊರತೆಯಿಂದ ಜನರು ಮಂತ್ರ ಪಠಣೆಯಲ್ಲಿ ನಂಬಿಕೆ ಕಳೆದುಕೊಂಡರು.

    ಜಾತಿ ಪದ್ಧತಿ ಸಾಮಾಜಿಕ ವ್ಯವಸ್ಥೆ ಜಟಿಲವಾಗಿತ್ತು. ಬೇರೆ ಬೇರೆ ಜಾತಿಗಳ ಮಧ್ಯೆ ಭೇದಭಾವವಿತ್ತು. ಬ್ರಾಹ್ಮಣರು ಉನ್ನತ ಸ್ಥಾನವನ್ನು ಹೊಂದಿದ್ದರು. ಸಮಾಜದಲ್ಲಿನ ಅಸಮಾನತೆಯಿಂದಾಗಿ ಜನರು ಅತೃಪ್ತರಾಗಿದ್ದರು. ಶೂದ್ರರು ಹೇಳಿಕೊಳ್ಳಲಾಗದ ಸಂಕಷ್ಟಗಳಿಗೆ ಗುರಿಯಾದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಗರ್ಭಗುಡಿಗೆ ಇಂದು ಯೋಗಿ ಶಂಕುಸ್ಥಾಪನೆ