Tag: ಪಠ್ಯಪುಸ್ತಕ ವಿವಾದ

  • ಬಿಜೆಪಿಗೆ ನಾಡಿನ ಮಠಾಧೀಶರಿಗಿಂತ ಸಂಘದ ಆದೇಶವೇ ಮೇಲು: ಕಾಂಗ್ರೆಸ್‌ ಟೀಕೆ

    ಬಿಜೆಪಿಗೆ ನಾಡಿನ ಮಠಾಧೀಶರಿಗಿಂತ ಸಂಘದ ಆದೇಶವೇ ಮೇಲು: ಕಾಂಗ್ರೆಸ್‌ ಟೀಕೆ

    ಬೆಂಗಳೂರು: ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ. ಬಿಜೆಪಿಗೆ ನಾಡಿನ ಮಠಾಧೀಶರಿಗಿಂತ ಸಂಘದ ಆದೇಶವೇ ಮೇಲು ಎಂದು ಟ್ವೀಟ್‌ ಮಾಡಿ ಕಾಂಗ್ರೆಸ್‌ ಕಾಲೆಳೆದಿದೆ.

    ಟ್ವೀಟ್‌ನಲ್ಲೇನಿದೆ?
    ನಾಡಿನ ಗೌರವಾನ್ವಿತ ಮಠಾಧೀಶರು, ಸಾಹಿತಿಗಳು ಹಲವು ಪತ್ರ ಬರೆದರೂ ಸ್ಪಂದಿಸದ ಶಿಕ್ಷಣ ಸಚಿವರು ಸುನಿಲ್‌ ಕುಮಾರ್‌ ಅವರ ಪತ್ರಕ್ಕೆ ಒಂದೇ ದಿನದಲ್ಲಿ ಸ್ಪಂದಿಸಿದ್ದಾರೆ. ಸರ್ಕಾರಕ್ಕೆ ಮಠಾಧೀಶರ ಮೇಲೆ ಗೌರವವಿಲ್ಲ, ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇಲ್ಲ ಎಂಬುದಕ್ಕೆ ಈ ಘಟನೆಯೇ ನಿದರ್ಶನ. ಬಿಜೆಪಿಗೆ ನಾಡಿನ ಮಠಾಧೀಶರಿಗಿಂತ ಸಂಘದ ಅದೇಶವೇ ಮೇಲು ಎಂದು ವ್ಯಂಗ್ಯವಾಡಿದೆ. ಇದನ್ನೂ ಓದಿ: ನನಗೆ ಯಾವ ಉತ್ಸವವು ಬೇಡ: ಡಿಕೆಶಿ

    ಪಠ್ಯ ಪರಿಷ್ಕರಣೆ ವಿರೋಧಿಸಿದ ಆದಿಚುಂಚನಗಿರಿ ಶ್ರೀಗಳು, ಪಂಡಿತಾರಾಧ್ಯ ಶ್ರೀಗಳು, ಜಯಮೃತ್ಯುಂಜಯ ಶ್ರೀಗಳು, ಲಿಂಗಾಯತ ಮಠಾಧೀಶರು, ನಾಡಿನ ಹಲವು ಸಾಹಿತಿಗಳು ಪತ್ರ ಬರೆದರೂ ಉತ್ತರಿಸದ ಶಿಕ್ಷಣ ಸಚಿವರು, ಸಚಿವ ಸುನಿಲ್ ಕುಮಾರ್‌ರ ಪತ್ರಕ್ಕೆ ಒಂದೇ ದಿನದಲ್ಲಿ ಸ್ಪಂದಿಸಿದ್ದಾರೆ. ಬಿಜೆಪಿಯ ಗೌರವ ಯಾರ ಮೇಲೆ? ಆದ್ಯತೆ ಯಾವುದಕ್ಕೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

    ಬ್ರಹ್ಮಶ್ರೀ ನಾರಾಯಣ ಗುರು ಅವರ ಪಠ್ಯವನ್ನು ಕನ್ನಡ ಭಾಷಾ ವಿಷಯದ ಬದಲಾಗಿ ಸಮಾಜ ವಿಜ್ಞಾನ ವಿಷಯದಲ್ಲಿ ಅಳವಡಿಸುವಂತೆ ಕೋರಿ ಸಚಿವ ಸುನಿಲ್‌ ಕುಮಾರ್‌ ಅವರು ಪತ್ರ ಬರೆದಿದ್ದರು. ಅದಕ್ಕೆ ತಕ್ಷಣ ಸ್ಪಂದಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಸರ್ಕಾರಿ ಆದೇಶ ಕೂಡ ಹೊರಡಿಸಿದ್ದರು. ಈ ಕ್ರಮವನ್ನು ಕಾಂಗ್ರೆಸ್‌ ಟೀಕಿಸಿದೆ. ಇದನ್ನೂ ಓದಿ: ಕುಮಾರಸ್ವಾಮಿ ಹೊಸ ಹೀರೋಯಿನ್: ಸಿಎಂ ಇಬ್ರಾಹಿಂ

    Live Tv
    [brid partner=56869869 player=32851 video=960834 autoplay=true]

  • ಗೌರವಾನ್ವಿತ ಮುಠ್ಠಾಳರನ್ನು ಪಠ್ಯ ಸಮಿತಿಗೆ ನೇಮಕ ಮಾಡಿದ್ದೇ ತಪ್ಪು: ಕುಂ.ವೀರಭದ್ರಪ್ಪ ಆಕ್ರೋಶ

    ಗೌರವಾನ್ವಿತ ಮುಠ್ಠಾಳರನ್ನು ಪಠ್ಯ ಸಮಿತಿಗೆ ನೇಮಕ ಮಾಡಿದ್ದೇ ತಪ್ಪು: ಕುಂ.ವೀರಭದ್ರಪ್ಪ ಆಕ್ರೋಶ

    ರಾಯಚೂರು: ಪರಿಷ್ಕೃತ ಪಠ್ಯದ ಬಗ್ಗೆ ಲೇಖಕ, ಚಿಂತಕ ಕುಂ.ವೀರಭದ್ರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರನ್ನ ಕೂಡಲೇ ಬಂಧಿಸಬೇಕು, ಶಿಕ್ಷಣ ಸಚಿವ ನಾಗೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಗೌರವಾನ್ವಿತ ಮುಠ್ಠಾಳರನ್ನ ಪಠ್ಯ ಸಮಿತಿಗೆ ನೇಮಕ ಮಾಡಿರುವುದೇ ತಪ್ಪು. ಸರ್ಕಾರದ ಅಧಿಕೃತ ಆದೇಶವಿಲ್ಲದೆ ಟ್ಯೂಟೋರಿಯಲ್ ನಡೆಸುವಂತವರಿಗೆ ಪಠ್ಯ ರಚನೆ‌ ನೀಡಿರುವುದು ಸರಿಯಲ್ಲ. ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನೇ ತಿರುಚುವಂತ ಹೀನ ವ್ಯಕ್ತಿ ಪಠ್ಯ ರಚನೆ ಮಾಡುವುದು ಸರಿಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಬಗ್ಗೆ ಆಸಕ್ತಿ ಇದ್ದವರು ದೇಶ ಸೇವೆ ಮಾಡಿ ಅಂದ್ರೆ ಇವರಿಗ್ಯಾಕೆ ಇಷ್ಟೊಂದು ಉರಿತಿದೆ:  ಬಿ.ಶ್ರೀರಾಮುಲು

    ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ರೋಹಿತ್ ಚಕ್ರತೀರ್ಥ ಅಪಮಾನ ಮಾಡಿದ್ದಾರೆ. ಬಸವಣ್ಣ ಸೇರಿ ಅನೇಕ ದಾರ್ಶನಿಕರಿಗೆ ಅವಹೇಳನ ಮಾಡಿದ್ದಾರೆ. ಕೂಡಲೇ ರೋಹಿತ್ ಚಕ್ರತೀರ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

    ಸಿಎಂ ಬಸವರಾಜ ಬೊಮ್ಮಾಯಿ ʼ777 ಚಾರ್ಲಿʼ ಸಿನಿಮಾದ ನಾಯಿಯ ನಟನೆ ಮೆಚ್ಚಿ ಕಣ್ಣೀರಿಟ್ಟು, ತೆರಿಗೆ ವಿನಾಯಿತಿ ನೀಡಿದ್ದಾರೆ. ಇಷ್ಟೊಂದು ಹೃದಯ ವೈಶಾಲ್ಯತೆ ಮೆರೆಯುವ ಸಿಎಂ ಅವರಿಗೆ ಪರಿಷ್ಕೃತ ಪಠ್ಯ ಪುಸ್ತಕದ ಅವಾಂತರಗಳು‌ ಕಾಣಿಸುತ್ತಿಲ್ಲವೆ? ಕೂಡಲೇ ಶಿಕ್ಷಣ ಸಚಿವ ನಾಗೇಶರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಇಲ್ಲಿ ಕೈದಿಗಳನ್ನ ನೋಡಬೇಕಂದ್ರೂ ಜೈಲರ್‌ಗಳಿಗೆ ಲಂಚ ಕೊಡಬೇಕು – ವೀಡಿಯೋ ವೈರಲ್

    Live Tv