ಬಸ್ ಚಾಲಕ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿ ಎದುರುಗಡೆ ಬರುತ್ತಿದ್ದ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಚೊಚ್ಚಲ ಮಗುವಿನ ಆಗಮನಕ್ಕಾಗಿ ಎದುರು ನೋಡ್ತಿದ್ದಾರೆ. ತಾಯ್ತನದ ಖುಷಿಯಲ್ಲಿರುವ ನಟಿ ಈ ನಡುವೆ ಅಂಬಾನಿ ಮನೆ ಮಗನ ಕಾರ್ಯಕ್ರಮದಲ್ಲಿ ದುಬಾರಿ ಸೀರೆಯುಟ್ಟು ಕಂಗೊಳಿಸಿದ್ದಾರೆ.
ಗರ್ಭಿಣಿ ದೀಪಿಕಾ ಪಡುಕೋಣೆ ಅನಂತ್ ಅಂಬಾನಿಯ (Ananth Ambani) ಮದುವೆ ಕಾರ್ಯಕ್ರಮದಲ್ಲಿ ಪರ್ಪಲ್ ಕಲರ್ ಸೀರೆ ಧರಿಸಿ ಮಿರಮಿರ ಮಿಂಚಿದ್ದಾರೆ. ಇದೇ ಸೀರೆಯಲ್ಲಿ ದೀಪಿಕಾ ಪಡುಕೋಣೆ ಬೇಬಿ ಬಂಪ್ (Baby Bump) ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ದೀಪಿಕಾ ಧರಿಸಿದ್ದ ಈ ಸೀರೆಯ ಬೆಲೆ 1 ಲಕ್ಷದ 92 ಸಾವಿರ ರೂ. ಮೌಲ್ಯದಾಗಿದೆ. ಸದ್ಯ ಈ ಸೀರೆಯ ರೇಟ್ ಕೇಳಿ ಫ್ಯಾನ್ಸ್ ದಂಗಾಗಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್ (Sharukh Khan) ಕೆರಿಯರ್‌ಗೆ ಮರುಜೀವ ಕೊಟ್ಟ ಸಿನಿಮಾ ಪಠಾಣ್. ಗಲ್ಲಾಪೆಟ್ಟಿಗೆ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಇದೀಗ ಇದರ ಸೀಕ್ವೆಲ್‌ಗಾಗಿ ಸಿದ್ಧತೆ ನಡೆಯುತ್ತಿದೆ. ಈ ಚಿತ್ರಕ್ಕೆ ಸಕ್ಸಸ್ ತಂದು ಕೊಟ್ಟ ಡೈರೆಕ್ಟರ್ ಸಿದ್ಧಾರ್ಥ್ ಆನಂದ್‌ಗೆ ನಿರ್ಮಾಪಕ ಗೇಟ್ ಪಾಸ್ ನೀಡಿದ್ದಾರೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ (Pathaan) ಸಿನಿಮಾವನ್ನು ಆದಿತ್ಯಾ ಚೋಪ್ರಾ ನಿರ್ಮಾಣ ಮಾಡಿದ್ದರು. ಶಾರುಖ್ ಖಾನ್- ದೀಪಿಕಾ ಪಡುಕೋಣೆ (Deepika Padukone) ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಇದೀಗ ಪಠಾಣ್ ಪಾರ್ಟ್ 2ಗೆ ಸಿದ್ಧತೆ ಮಾಡಲಾಗುತ್ತಿದೆ. ಈ ವರ್ಷದ ಅಂತ್ಯದಲ್ಲಿ ಶೂಟಿಂಗ್ ಶುರುವಾಗಲಿದ್ದು, ಶಾರುಖ್ ಭಾಗಿಯಾಗಲಿದ್ದಾರೆ.
ಆದರೆ ಈಗ ‘ಪಠಾಣ್’ ತಂಡ ಸಿನಿಮಾ ಬಗ್ಗೆ ಸುದ್ದಿಯಾಗುವ ಬದಲು ಡೈರೆಕ್ಟರ್ ವಿಚಾರವಾಗಿ ಹೈಲೈಟ್ ಆಗುತ್ತಿದೆ. ಸಿದ್ಧಾರ್ಥ್ ಆನಂದ್ ಬದಲು ಬೇರೆ ನಿರ್ದೇಶಕನಿಗೆ ಮಣೆ ಹಾಕಲು ನಿರ್ಮಾಪಕ ಆದಿತ್ಯಾ ಚೋಪ್ರಾ ಯೋಚಿಸಿದ್ದಾರೆ. ಈ ಹಿಂದೆ ತಮ್ಮ ನಿರ್ಮಾಣದ ‘ಟೈಗರ್’ ಮತ್ತು ‘ವಾರ್’ ಸಿನಿಮಾದ ಸೀಕ್ವೆಲ್‌ನಲ್ಲೂ ನಿರ್ದೇಶಕರನ್ನು ಆದಿತ್ಯಾ ಬದಲಿಸಿದ್ದರು. ಅದೇ ಫಾರ್ಮುಲಾ ಇಲ್ಲಿಯೂ ಬಳಸಲು ಮುಂದಾಗಿದ್ದಾರೆ.
ಇತ್ತ ಪಠಾಣ್ ಸಕ್ಸಸ್ ನಂತರ ‘ಫೈಟರ್’ ಸಿನಿಮಾಗೆ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದರು. ಆದರೆ ಆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಹಾಗಾಗಿ ನಿರ್ಮಾಪಕ ಆದಿತ್ಯಾ ನಿರ್ದೇಶಕರನ್ನು ಬದಲಿಸೋದೇ ಸೂಕ್ತ ಎಂದು ನಿರ್ಧರಿಸಿದ್ದಾರೆ. ಬೇರೇ ನಿರ್ದೇಶಕನ ಕಲ್ಪನೆಯಲ್ಲಿ ‘ಪಠಾಣ್ 2’ ಮೂಡಿ ಬಂದರೆ ಉತ್ತಮ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಅದಕ್ಕಾಗಿ ಆದಿತ್ಯಾ ಹೊಸ ನಿರ್ದೇಶಕನ ಹುಡುಕಾಟಕ್ಕೆ ಇಳಿದಿದ್ದಾರೆ.
‘ಪಠಾಣ್’ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಬಾಲಿವುಡ್‌ನಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ವೈವಾಹಿಕ ಬದುಕು ಮತ್ತು ಸಿನಿಮಾ ಕೆರಿಯರ್ ಎರಡನ್ನೂ ಉತ್ತಮವಾಗಿ ಬ್ಯಾಲೆನ್ಸ್ ಮಾಡುತ್ತಾ ಮುನ್ನುಗ್ಗುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಮಕ್ಕಳನ್ನು (Childrens) ಹೊಂದುವ ಬಗ್ಗೆ ವೈಯಕ್ತಿಕ ಪ್ರಶ್ನೆಯೊಂದನ್ನ ನಿರೂಪಕಿ ಕೇಳಿದ್ದಾರೆ.
ಮಕ್ಕಳ ಬಗ್ಗೆ ದೀಪಿಕಾ ಅವರಿಗೆ ಆ ಕುರಿತು ಪ್ರಶ್ನೆ ಮಾಡಲಾಗಿದೆ. ಕುಟುಂಬದ ಬಗ್ಗೆ ಏನಾದರೂ ಯೋಚಿಸಿದ್ದೀರಾ ಎಂದು ಕೇಳಲಾಗಿದೆ. ನನಗೆ ಹಾಗೂ ರಣವೀರ್ ಸಿಂಗ್‌ಗೆ (Ranveer Singh) ಮಕ್ಕಳು ಎಂದರೆ ಇಷ್ಟ. ಮುಂದಿನ ದಿನಗಳಲ್ಲಿ ಆ ಬಗ್ಗೆ ಯೋಚಿಸುತ್ತೇವೆ. ನಾವು ನಮ್ಮ ಸ್ವಂತ ಕುಟುಂಬವನ್ನು ಪ್ರಾರಂಭಿಸಲು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ. ಈ ಮೂಲಕ ಶೀಘ್ರವೇ ಸಿಹಿ ಸುದ್ದಿ ನೀಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
‘ಪಠಾಣ್’ ಮತ್ತು ‘ಜವಾನ್’ ಸಿನಿಮಾದ ಸಕ್ಸಸ್ ನಂತರ ಹೃತಿಕ್ ರೋಷನ್ (Hrithik Roshan) ಜೊತೆ ‘ಫೈಟರ್’, ರೋಹಿತ್ ಶೆಟ್ಟಿ (Rohit Shetty) ನಿರ್ಮಾಣದ ಸಿನಿಮಾವೊಂದರಲ್ಲಿ ದೀಪಿಕಾ ಪೊಲೀಸ್ ಆಗಿ ಕಾಣಿಸಿಕೊಳ್ತಿದ್ದಾರೆ.
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ (Sharukh Khan) ಪುತ್ರಿ ಸುಹಾನಾ ಖಾನ್ (Suhana Khan) ಹೊಸ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಸುಹಾನಾ ಸೌಂದರ್ಯಕ್ಕೆ ಕಿಂಗ್ ಖಾನ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ ಸುಹಾನಾ ನಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಕೆಂಪು ಬಣ್ಣದ ಗೌನ್‌ನಲ್ಲಿ ಸಖತ್ ಹಾಟ್ ಆಗಿ ನಟಿ ಸುಹಾನಾ ಖಾನ್ ಪೋಸ್ ಕೊಟ್ಟಿದ್ದಾರೆ. ನಟಿಯ ಅಂದವನ್ನ ಪಡ್ಡೆಹುಡುಗರು ಹಾಡಿ ಹೊಗಳುತ್ತಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಗ್ಲ್ಯಾಮರಸ್ ಆಗಿ ನಟಿ ಪೋಸ್ ನೀಡಿದ್ದಾರೆ.
ಇದೀಗ ಸುಹಾನಾ ಖಾನ್ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಲು ಸಕಲ ತಯಾರಿ ಮಾಡಿಕೊಳ್ತಿದ್ದಾರೆ. ಸುಜೋಯ್ ಘೋಷ್ ನಿರ್ದೇಶನದ ಸಿನಿಮಾದಲ್ಲಿ ಸುಹಾನಾ ಲೀಡ್ ಹೀರೋಯಿನ್ ಆಗಿ ಬಣ್ಣ ಹಚ್ಚಲಿದ್ದಾರೆ. ವಿಶೇಷ ಅಂದರೆ ಇದೇ ಸಿನಿಮಾದಲ್ಲಿ ಶಾರುಖ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಿಯಲ್ ಅಪ್ಪ- ಮಗಳು, ರೀಲ್‌ನಲ್ಲೂ ಅಪ್ಪ ಮತ್ತು ಮಗಳಾಗಿ ಕಾಣಿಸಿಕೊಳ್ತಿದ್ದಾರೆ. ಸದ್ಯ ಈ ಗುಡ್ ನ್ಯೂಸ್ ಕೇಳಿರೋ ಫ್ಯಾನ್ಸ್, ಇಬ್ಬರಿಗಾಗಿ ಯಾವ ರೀತಿಯ ಕಥೆ ಎಳೆಯನ್ನ ಹಣೆದಿರಬಹುದು ಎಂದು ಕ್ಯೂರಿಯಸ್ ಆಗಿದ್ದಾರೆ. ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಯಶಸ್ಸು ಕಂಡು ಬಾಲಿವುಡ್ (Bollywood) ಅನ್ನು ಸೋಲಿನ ಗಡಿಯಿಂದ ಆಚೆ ತಂದಿತ್ತು ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ. ಸ್ವತಃ ಸಿನಿಮಾ ತಂಡವೇ ಘೋಷಿಸಿಕೊಂಡಂತೆ ಅದು ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಹಲವು ವರ್ಷಗಳ ಸೋಲಿನ ನಂತರ ಶಾರುಖ್ ಮತ್ತೆ ಪುಟಿದೆದ್ದಿರು. ಅಭಿಮಾನಿಗಳು ಕೂಡ ಸಂಭ್ರಮಿಸಿದ್ದರು. ಸದ್ಯ ಶಾರುಖ್ ಮತ್ತೊಂದು ಸಿನಿಮಾದ ರಿಲೀಸ್ ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಕಲೆಕ್ಷನ್ ಬಗ್ಗೆ ಖ್ಯಾತ ಬಾಲಿವುಡ್ ನಟಿ ಕಾಜೋಲ್ (Kajol) ಅನುಮಾನ ವ್ಯಕ್ತ ಪಡಿಸಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ನಿರೂಪಕರು ‘ಶಾರುಖ್ ಖಾನ್ ಅವರಿಗೆ ಏನಾದರೂ ಕೇಳಬೇಕು ಅಂತ ನಿಮಗೆ ಅನಿಸ್ತಿದ್ಯಾ?’ ಎಂದು ಪ್ರಶ್ನೆ ಮಾಡುತ್ತಾರೆ. ಕೊಂಚ ಯೋಚನೆ ಮಾಡುವ ಕಾಜೋಲ್, ‘ಈವರೆಗೂ ಅವರ ಬಗ್ಗೆ ಎಲ್ಲವೂ ಇಂಟರ್ ನೆಟ್ ನಲ್ಲಿ ಇದೆ. ಒಂದೇ ಒಂದು ಪ್ರಶ್ನೆ ಕೇಳುವುದಾದರೆ, ಪಠಾಣ್ ಸಿನಿಮಾ ನಿಜವಾಗಿಯೂ ಕಲೆಕ್ಷನ್ (Collection) ಎಷ್ಟು ಮಾಡಿತು? ಎನ್ನುತ್ತಾರೆ. ನಂತರ ವ್ಯಂಗ್ಯವಾಗಿ ಅವರು ನಗುತ್ತಾರೆ.
ಕಾಜೋಲ್ ಕೇಳಿದ ಈ ಪ್ರಶ್ನೆಗೆ ಶಾರುಖ್ ಅಭಿಮಾನಿಗಳು ಗರಂ ಆಗಿದ್ದಾರೆ. ಶಾರುಖ್ ಬಗ್ಗೆ ಕಾಜೋಲ್ ಗೆ ಏಕೆ ಅನುಮಾನ? ಅವರು ಸುಳ್ಳು ಹೇಳಿದ್ದಾರೆ ಅಂತಾನಾ? ಏನು ಅವರ ಮಾತಿನ ಧಾಟಿ ಎಂದು ಹರಿಹಾಯ್ದಿದ್ದಾರೆ. ಕಾಜೋಲ್ ಈ ರೀತಿ ಮಾತನಾಡಬಾರದು ಎಂದು ತಾಕೀತು ಮಾಡಿದ್ದಾರೆ. ಬಾಲಿವುಡ್ ನಟಿಯಾಗಿ ಸುಮ್ಮನಿರಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಕಡಿಮೆ ದಿನದಲ್ಲೇ ಸಾವಿರ ಕೋಟಿ ದಾಟಿದ ಪಠಾಣ್
ಶಾರುಖ್ ಖಾನ್ ನಟನೆಯ ಪಠಾಣ್ (Pathan) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿತ್ತು. ಸಿನಿಮಾ ರಿಲೀಸ್ ಆಗಿ 27ನೇ ದಿನಕ್ಕೆ ಸಾವಿರ ಕೋಟಿ (Thousand Crore) ಕ್ಲಬ್ (Club) ಸೇರಿತ್ತು. ಈ ವರ್ಷದಲ್ಲಿ ರಿಲೀಸ್ ಆದ ಬಾಲಿವುಡ್ ಸಿನಿಮಾಗಳಲ್ಲಿ ಅತೀ ಹೆಚ್ಚು ಹಣ ಮಾಡಿದ ಚಿತ್ರ ಎನ್ನುವ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿತ್ತು. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ಗೆ ಅಭಿಮಾನಿಗಳು ಫಿದಾ ಆಗಿದ್ದರು.
ಪಠಾಣ್ ಸಿನಿಮಾದ ಹಾಡೊಂದು ವಿವಾದಕ್ಕೀಡಾದಾಗ ಈ ಸಿನಿಮಾವನ್ನು ಗೆಲ್ಲಿಸಲೇಬಾರದು ಎಂದು ಹಲವರು ಕರೆ ನೀಡಿದರು. ಪ್ರತಿಭಟನೆಗಳು ನಡೆದವು, ಬಾಯ್ಕಾಟ್ ಪಠಾಣ್ ಅಭಿಯಾನ ಶುರುವಾಯಿತು. ಚಿತ್ರಮಂದಿರಗಳ ಮೇಲೆ ದಾಳಿ ನಡೆದವು. ಸಿನಿಮಾದ ಪೋಸ್ಟರ್ ಹರಿದು ಹಾಕಲಾಯಿತು. ಪೋಸ್ಟರ್ ಸುಡಲಾಯಿತು. ಏನೆಲ್ಲ ಸಂಕಷ್ಟಗಳು ಎದುರಾದರೂ, ಪಠಾಣ್ ಮಾತ್ರ ಗೆಲುವು ಸಾಧಿಸಿದೆ.
ಪಠಾಣ್ ಒಂದೊಳ್ಳೆ ಸಿನಿಮಾ. ಎಲ್ಲರ ಮೆಚ್ಚುಗೆಗೂ ಅದು ಪಾತ್ರವಾಗಲಿದೆ. ದೇಶಭಕ್ತಿ ಸಾರುವಂತಹ ಕಥೆಯನ್ನು ಇದು ಒಳಗೊಂಡಿದೆ ಎಂದು ಶಾರುಖ್ ಹೇಳಿದರೂ, ವಿರೋಧಿಗಳು ಮಾತ್ರ ಕೇಳಲಿಲ್ಲ. ಕೆಲವು ರಾಜ್ಯಗಳಲ್ಲಿ ಸಿನಿಮಾವನ್ನು ನಿಷೇಧ ಮಾಡುವಂತೆ ಒತ್ತಡ ತರಲಾಯಿತು. ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಿದರು. ಆದರೂ, ಪ್ರತಿಭಟನೆ ಮಾತ್ರ ನಿಲ್ಲಲಿಲ್ಲ.
ಪಠಾಣ್ ಸಿನಿಮಾಗಾಗಿ ಇಡೀ ಬಾಲಿವುಡ್ ಒಂದಾಯಿತು. ಈ ಸಿನಿಮಾವನ್ನು ಗೆಲ್ಲಿಸುವ ಮೂಲಕ ಬಾಲಿವುಡ್ ಗೆಲ್ಲಿಸೋಣ ಎನ್ನುವ ಮಾತು ಕೇಳಿ ಬಂತು. ಹಾಗಾಗಿ ಶಾರುಖ್ ವಿರೋಧಿಗಳು ಕೂಡ ಈ ಸಿನಿಮಾವನ್ನು ಮೆಚ್ಚಿ ಮಾತನಾಡಿದರು. ಮೊದ ಮೊದಲು ತೆಗಳುತ್ತಿದ್ದವರು, ಆ ಮೇಲೆ ಸಿನಿಮಾ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದರು. ಇದೆಲ್ಲದರ ಪರಿಣಾಮ ಇದೀಗ ಪಠಾಣ್ ಸಾವಿರ ಕೋಟಿ ಬಾಚಿದೆ.
ಬಾಲಿವುಡ್ (Bollywood) ಕಿಂಗ್ ಖಾನ್ ಶಾರುಖ್ (Sharukh Khan), ಅವರ ಅಭಿಮಾನಿಗಳು ಬೆಚ್ಚಿ ಬೀಳುವ ಸುದ್ದಿವೊಂದು ಹರಿದಾಡಿತ್ತು. ಶೂಟಿಂಗ್ ವೇಳೆ ಅವರ ಮೂಗಿಗೆ ಬಲವಾದ ಪೆಟ್ಟು ಬಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೆ, ಇದು ಫೇಕ್ ನ್ಯೂಸ್ ಎಂಬುದು ಸಾಬೀತಾಗಿದೆ. ಶಾರುಖ್ ಖಾನ್ ಅವರು ಫಿಟ್ & ಫೈನ್ ಆಗಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಶಾರುಖ್ ಎಂಟ್ರಿ ಕೊಟ್ಟಾಗ ಸರ್ಜರಿಗೆ ಒಳಗಾದ ಯಾವುದೇ ಗುರುತು ಅವರ ದೇಹದ ಮೇಲೆ ಇರಲಿಲ್ಲ. ಹೀಗಾಗಿ, ಆಕ್ಸಿಡೆಂಟ್ ಸುದ್ದಿ ಸುಳ್ಳಾ ಎನ್ನುವ ಪ್ರಶ್ನೆ ಮೂಡಿದೆ.
ಶಾರುಖ್ ಖಾನ್ ಸಿನಿಮಾ ಒಂದರ ಶೂಟಿಂಗ್‌ಗೆ ಲಾಸ್ ಏಂಜಲೀಸ್‌ಗೆ ತೆರಳಿದ್ದರು. ಶೂಟಿಂಗ್ ವೇಳೆ ಸಂಭವಿಸಿದ ಅವಘಡದಿಂದ ಶಾರುಖ್ ಮೂಗಿಗೆ ಬಲವಾದ ಏಟು ಬಿದ್ದಿದೆ ಎಂದು ಸುದ್ದಿ ಹಬ್ಬಿತ್ತು. ಕೂಡಲೇ ಶಾರುಖ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಸರ್ಜರಿ ಮಾಡಲಾಗಿದೆ ಎಂದು ಹೇಳಲಾಗಿತ್ತು. ಈಗ ಈ ಬಗ್ಗೆ ಅಪ್‌ಡೇಟ್ ಸಿಕ್ಕಿದೆ. ಶಾರುಖ್ ಆರೋಗ್ಯವಾಗಿದ್ದಾರೆ. ಇದನ್ನೂ ಓದಿ:‘ಕಾಂತಾರ’ ಹೀರೋ ಕಡೆಯಿಂದ ಫ್ಯಾನ್ಸ್‌ಗೆ ಸಿಹಿಸುದ್ದಿ- ರಿಷಬ್ ಬರ್ತ್‌ಡೇಗೆ ಬಿಗ್ ಸರ್ಪ್ರೈಸ್
ಜುಲೈ 4ರ ರಾತ್ರಿ ಶಾರುಖ್ ಖಾನ್ ಅವರು ಮುಂಬೈ ವಿಮಾನ ನಿಲ್ದಾಣದಿಂದ ಹೊರ ಬರುವಾಗ ಕಾಣಿಸಿಕೊಂಡಿದ್ದಾರೆ. ಅವರ ಮೂಗು ಸರಿಯಾಗಿಯೇ ಇದೆ. ಹೀಗಾಗಿ ಅವರಿಗೆ ಅಪಘಾತ ಆಗಿತ್ತು ಎಂಬ ಸುದ್ದಿ ಎಷ್ಟು ಸತ್ಯ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಿದೆ. ಇನ್ನೂ ಕೆಲವರು ಮೂಗಿನ ಒಳಭಾಗದಲ್ಲಿ ಗಾಯ ಉಂಟಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಾರುಖ್ ಖಾನ್ (Sharukh Khan) ಅವರ ಮುಂಬರುವ ಸಿನಿಮಾ ಶೂಟಿಂಗ್‌ವೊಂದಕ್ಕಾಗಿ ನಟ ಭಾಗಿಯಾಗಿದ್ದರು. ಲಾಸ್ ಏಂಜಲೀಸ್‌ನಲ್ಲಿ ಶಾರುಖ್ ಚಿತ್ರೀಕರಣದಲ್ಲಿದ್ದಾಗ ಅವರ ಮೂಗಿಗೆ ಏಟಾಗಿ ರಕ್ತ ಸುರಿದಿದೆ. ಕೂಡಲೇ ನಟನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿತ್ತು. ಆಸ್ಪತ್ರೆಯಲ್ಲಿ ರಕ್ತ ನಿಲ್ಲಲು ಸರ್ಜರಿ ಕೂಡ ಮಾಡಿದ್ದಾರೆ. ಯಾವುದೇ ಹೆದರುವ ಅವಶ್ಯಕತೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಬ್ಯಾಂಡೇಜ್‌ವೊಂದನ್ನ ಮೂಗಿಗೆ ಸುತ್ತಿ ಕಳುಹಿಸಿದ್ದಾರೆ ಎಂದು ಹೇಳಲಾಗಿತ್ತು. ಈಗ ಕಿಂಗ್ ಖಾನ್ ಫಿಟ್ ಆಗಿರೋದನ್ನ ನೋಡಿ ಎಲ್ಲಾ ಊಹಾಪೋಹಗಳಿಗೂ ಬ್ರೇಕ್ ಬಿದ್ದಿದೆ. ನೆಚ್ಚಿನ ನಟ ಕ್ಷೇಮವಾಗಿರೋದನ್ನ ನೋಡಿ ಖುಷಿಪಟ್ಟಿದ್ದಾರೆ.
ಶಾರುಖ್ ಖಾನ್ (Shah Rukh Khan) ಅಭಿನಯದ ‘ಜವಾನ್’ (Jawan) ಚಿತ್ರವು ಸೆಪ್ಟೆಂಬರ್ ನಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಬಿಡುಗಡೆಗೆ ಇನ್ನು ಎರಡೂವರೆ ತಿಂಗಳಿದ್ದರೂ, ಶಾರುಖ್ ಖಾನ್ ಆಗಲಿ, ಚಿತ್ರತಂಡದವರಾಗಲಿ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಈಗ ಖುದ್ದು ಶಾರುಖ್ ಚಿತ್ರದ ಕುರಿತು ಒಂದು ಮಹತ್ವದ ಸುಳಿವನ್ನು ನೀಡಿದ್ದಾರೆ.
ತಮ್ಮ ಅಭಿಮಾನಿಗಳೊಂದಿಗೆ ಆಗಾಗ ಟ್ವಿಟರ್ ನಲ್ಲಿ #AskSRK ಎಂಬ ಪ್ರಶ್ನೋತ್ತರ ಸೆಷನ್ ನಲ್ಲಿ ಭಾಗವಹಿಸುವ ಶಾರುಖ್ ಖಾನ್, ಇತ್ತೀಚೆಗೆ ಮತ್ತೆ ಅಂಥದೊಂದು ಸಂವಾದ ನಡೆಸಿದರು. ಅದಕ್ಕೆ ಕಾರಣವೂ ಇದೆ. ಶಾರುಖ್ ಖಾನ್ ಚಿತ್ರರಂಗಕ್ಕೆ ಕಾಲಿಟ್ಟು ಇತ್ತೀಚೆಗೆ 31 ವರ್ಷಗಳಾಗಿವೆ. ಈ ಸಂಭ್ರಮವನ್ನು ಅವರು ಅಭಿಮಾನಿಗಳೊಂದಿಗೆ ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ:ಶಾನುಭೋಗರ ಮಗಳಾದ ನಟ ಪ್ರಜ್ವಲ್ ಪತ್ನಿ ರಾಗಿಣಿ ಪ್ರಜ್ವಲ್
ಈ 31 ವರ್ಷಗಳಲ್ಲಿ ನೀವು ನಿರಂತರವಾಗಿ ಪಾಲಿಸುತ್ತಿರುವ ಒಂದು ವಿಷಯ ಏನು ಎಂಬ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಕಿಂಗ್ ಖಾನ್, ‘ಒಂದು ಚಿತ್ರವನ್ನು ಒಪ್ಪಿಕೊಂಡ ನಂತರ ನನ್ನ ಪಾತ್ರದ ಹಿಂದಿನ ಕಥೆ ಮತ್ತು ಸಿದ್ಧಾಂತಗಳನ್ನು ಅಂದಾಜು ಮಾಡಿ ಬರೆದಿಟ್ಟುಕೊಳ್ಳುತ್ತೇನೆ. ಕೆಲವೊಮ್ಮೆ ಅದನ್ನು ನಿರ್ದೇಶಕರ ಜೊತೆಗೆ ಹಂಚಿಕೊಳ್ಳುತ್ತೇನೆ. ಅದು ಕಥೆಯ ರೂಪದಲ್ಲಿರಬಹುದು ಅಥವಾ ಕಾವ್ಯದ ರೂಪದಲ್ಲೂ ಇರಬಹುದು. ಕೆಲವೊಮ್ಮೆ ಯಾರಿಗೂ ತೋರಿಸದೆ ಎತ್ತಿಟ್ಟುಕೊಂಡಿದ್ದೂ ಇದೆ ಎಂದು ಹೇಳಿದ್ದಾರೆ ಶಾರುಖ್ ಖಾನ್.
ಸದ್ಯದಲ್ಲೇ ಹುಟ್ಟಲಿರುವ ತಮ್ಮ ಅವಳಿ ಗಂಡು ಮಕ್ಕಳಿಗೆ ‘ಪಠಾಣ್ ಮತ್ತು ‘ಜವಾನ್’ (Pathan) ಎಂಬ ಹೆಸರಿಡಬೇಕೆಂದುಕೊಂಡಿದ್ದೇನೆ ಎಂದು ಅಭಿಮಾನಿಯೊಬ್ಬರ (Fan) ತಮಾಷೆ ಪ್ರಶ್ನೆಗೆ, ‘ಹೆಸರು ಅದ್ಭುತವಾಗಿದೆ. ಆದರೆ, ಅದಕ್ಕೂ ಮಿಗಿಲಾದ ಇನ್ನೂ ಒಳ್ಳೆಯ ಹೆಸರನ್ನು ಇಡಿ ಎಂದು ಸಲಹೆ ನೀಡಿದ್ದಾರೆ. ‘ಜವಾನ್ ಚಿತ್ರ ನೋಡುವುದಕ್ಕೆ ಜೋಶ್ ನಲ್ಲಿ ಚಿತ್ರಮಂದಿರಕ್ಕೆ ಹೋಗಿ ಎಂದು ಕರೆ ನೀಡಿದ ಶಾರುಖ್ ಖಾನ್, ಸದ್ಯದಲ್ಲೇ ಟೀಸರ್ ಬಿಡುಗಡೆಯಾಗುತ್ತಿದೆ. ಟೀಸರ್ ಚೆನ್ನಾಗಿ ಮೂಡಿಬರುತ್ತಿದ್ದು, ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತದೆ ಎಂಬ ನಂಬಿಕೆ ತಮಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಈ ವರ್ಷದ ಅತೀ ನಿರೀಕ್ಷಿತ ಮತ್ತು ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಜವಾನ್ ಚಿತ್ರವನ್ನು ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ಮಿಸುತ್ತಿದ್ದು, ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಅಭಿನಯಿಸಿದ್ದಾರೆ. ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್, ಈ ಚಿತ್ರದ ಮೂಲಕ ಬಾಲಿವುಡ್ (Bollywood) ಗೆ ಎಂಟ್ರಿ ಕೊಟ್ಟಿದ್ದಾರೆ.
ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ(Deepika Padukone) ಬಾಲಿವುಡ್‌ನ ಸ್ಟಾರ್ ನಟಿಯಾಗಿ ಮೋಡಿ ಮಾಡ್ತಿದ್ದಾರೆ. ‘ಪಠಾಣ್’ (Pathaan) ಸಿನಿಮಾದ ಸೂಪರ್ ಸಕ್ಸಸ್ ನಂತರ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
‘ಪಠಾಣ್’ ಚಿತ್ರದ ಸಕ್ಸಸ್ ನಂತರ ದೀಪಿಕಾ ಲಕ್ಕೂ ಲುಕ್ಕೂ ಎರಡು ಬದಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ನಟಿ ದೀಪಿಕಾ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ಕನ್ನಡದ ‘ಐಶ್ವರ್ಯ’ (Aishwarya) ಚಿತ್ರದ ಮೂಲಕ ನಟನೆಗೆ ವಾಲಿದ ನಟಿ ಇದೀಗ ಬಾಲಿವುಡ್‌ನ ಬಹುಬೇಡಿಕೆಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.
ಸಾಲು ಸಾಲು ಸಿನಿಮಾ ಅವಕಾಶಗಳನ್ನ ಬಾಚಿಕೊಳ್ತಿರುವ ದೀಪಿಕಾ, ಪ್ರತಿಷ್ಠಿತ ಟೈಮ್ ಮ್ಯಾಗಜೀನ್ ಕವರ್ ಪೇಜ್ ಅಲಂಕರಿಸಿದ್ದಾರೆ. ಈ ಮೂಲಕ ಇಡೀ ಜಗತ್ತನ್ನೇ ತಲುಪುವ ಅವಕಾಶವನ್ನು ದೀಪಿಕಾ ಪಡುಕೋಣೆ ಪಡೆದುಕೊಂಡಿದ್ದಾರೆ. ಲೈಟ್ ಬಣ್ಣದ ಸೂಟ್‌ನಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ, ವೀಡಿಯೋ ಎಲ್ಲೆಡೆ ಸದ್ದು ಮಾಡ್ತಿದೆ. ಇದನ್ನೂ ಓದಿ:ಕಾಲು ಒರೆಸುವ ಬಟ್ಟೆಯಂತೆ ಬಳಸಿಕೊಂಡಿದ್ದರು- ಮಾಜಿ ಬಾಯ್‌ಫ್ರೆಂಡ್‌ಗಳ ಬಗ್ಗೆ ಪ್ರಿಯಾಂಕಾ ಮಾತು
ಪಠಾಣ್ ಸಿನಿಮಾದ ಸಕ್ಸಸ್ ನಂತರ ದೀಪಿಕಾ, ಹೃತಿಕ್ ರೋಷನ್ (Hrithik Roshan) ಜೊತೆ ‘ಫೈಟರ್’ ಚಿತ್ರ, ಪ್ರಶಾಂತ್ ನೀಲ್ ನಿರ್ದೇಶನದ ಎನ್‌ಟಿಆರ್ 31ಗೆ ನಾಯಕಿಯಾಗಿ ಅವಕಾಶ ಬಾಚಿಕೊಂಡಿದ್ದಾರೆ.
ಬಾಲಿವುಡ್ (Bollywood) ಬ್ಯೂಟಿ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ (Deepika Padukone) ತಮ್ಮರೂ ಬೆಂಗಳೂರಿಗೆ (Bengaluru) ಬಂದಿದ್ದರು. ಜಯ್ ಶೆಟ್ಟಿ (Jay Shetty) ಅವರ ಲವ್ ರೂಲ್ಸ್ ಟೂರ್ ಶೋನಲ್ಲಿ ಸಹೋದರಿ ಅನಿಶಾ ಪಡುಕೋಣೆ – ಕುಟುಂಬದ ಜೊತೆ ದೀಪಿಕಾ ಆಗಮಿಸಿದ್ದರು. ಇದನ್ನೂ ಓದಿ:ಹೈದರಾಬಾದ್‌ನಲ್ಲಿ ಐಷಾರಾಮಿ ಮನೆ ಖರೀದಿಸಿದ ನಟಿ ಸಮಂತಾ
‘ಪಠಾಣ್’ (Pathaan) ಚಿತ್ರದ ಸೂಪರ್ ಡೂಪರ್ ಸಕ್ಸಸ್ ನಂತರ ಮೊದಲ ಬಾರಿಗೆ ತಮ್ಮರೂ ಬೆಂಗಳೂರಿಗೆ ದೀಪಿಕಾ ಭೇಟಿ ನೀಡಿದ್ದಾರೆ. ಶಾರುಖ್ ಖಾನ್ (Sharukh Khan) ಜೊತೆ ನಟಿಸಿದ ಪಠಾಣ್ ಚಿತ್ರ ಕೋಟಿ ಕೋಟಿ ಲೂಟಿ ಮಾಡಿದ ಬೆನ್ನಲ್ಲೇ ನಟಿ ಬೆಂಗಳೂರಿಗೆ ಬಂದಿದ್ದಾರೆ. ಜಯ್ ಶೆಟ್ಟಿ ಶೋಗೆ ದೀಪಿಕಾ ಆಗಮಿಸುತ್ತಿದ್ದಂತೆ ಅಭಿಮಾನಿಗಳು ನಟಿಯ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದಿದ್ದಾರೆ.
Deepika attended Jay Shetty’s Love Rules Tour show in Bangalore with her family yesterday
ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡ್ತಿರುವ ದೀಪಿಕಾ ಪಡುಕೋಣೆ ‘ಪಠಾಣ್’ ಸಕ್ಸಸ್ ನಂತರ ಫೈಟರ್ ಸಿನಿಮಾದಲ್ಲಿ ಹೃತಿಕ್ ರೋಷನ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಿಗ್ ಆಫರ್ಸ್ ನಟಿಗೆ ಅರಸಿ ಬರುತ್ತಿದೆ. ಕನ್ನಡದ ‘ಐಶ್ವರ್ಯ’ (Aishwarya) ಚಿತ್ರದ ಮೂಲಕ ಶುರುವಾದ ಸಿನಿ ಬದುಕು, ಬಾಲಿವುಡ್- ಹಾಲಿವುಡ್ ಅಂಗಳದಲ್ಲಿ ಜನಪ್ರಿಯ ನಟಿಯಾಗಿ ಸದ್ದು ಮಾಡ್ತಿದ್ದಾರೆ.